ಅಭಿಪ್ರಾಯ / ಸಲಹೆಗಳು

ಜಿಲ್ಲೆಯ ಮಾಹಿತಿ

ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ

      ಚಿಕ್ಕಬಳ್ಳಾಪುರ ಪಟ್ಟಣದ ಹೆಸರು ಮೂಲವಾಗಿ ಚಿನ್ನ ಬಳ್ಳಾಪುರಂ ಆಗಿದ್ದು, ಇದು ತಮಿಳು ಅಥವಾ ತೆಲುಗು ಮೂಲದಿಂದ ಹುಟ್ಟಿಬಂದಿರುತ್ತದೆ. ಚಿನ್ನ ಎಂದರೆ “ಚಿಕ್ಕದು” ಎಂದು ಮತ್ತು ಬಲ್ಲಾ ಎಂದರೆ ಆಹಾರ ಧಾನ್ಯಗಳನ್ನು ಅಳೆಯುವ ಸಾಧನ ಎಂದು ಮತ್ತು ಪುರ ಎಂದರೆ “ಪಟ್ಟಣ” ಎಂಬ  ಅರ್ಥಗಳಿವೆ. ಜನಜನಿತವಾಗಿರುವ ಪುರಾಣದ ಪ್ರಕಾರ,  ಆವತಿಯ ಮಲ್ಲ ಬೈರೇಗೌಡರ ಪುತ್ರನಾದ ಮರಿಗೌಡರು ಒಂದು ದಿನ ಕೋಡಿ ಮಂಚೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಒಂದು ಅಪೂರ್ವ ದೃಶ್ಯವನ್ನು ನೋಡುತ್ತಾನೆ. ಸುಂದರ ಮೊಲವೂಂದು ಬೇಟೆಯಾಡುವ ನಾಯಿಗಳ ಮುಂದೆ ಭಯವಿಲ್ಲದೆ ನಿಂತಿರುವುದು ಕಂಡು ಬಂದಿತು. ಈ ದೃಶ್ಯವನ್ನು ನೋಡಿ ಆವೇಶಭರಿತರಾದ ರಾಜನು ಈ ಜಾಗ ಧೈರ್ಯವಂತರ ಪ್ರದೇಶವಾಗಿದೆ ಎಂದು ತಿಳಿಯುತ್ತಾನೆ. ಇದರಿಂದಾಗಿ ವಿಜಯನಗರ ಅರಸರ ಅನುಮತಿಯನ್ನು ಪಡೆದು ಈ ಸ್ಥಳದಲ್ಲಿ ಒಂದು ಕೋಟೆ ಮತ್ತು ನಗರವನ್ನು ನಿರ್ಮಾಣ ಮಾಡುತ್ತಾನೆ.  ಕಾಲಕ್ರಮೇಣ ಈ ನಗರ ಚಿಕ್ಕಬಳ್ಳಾಪುರವೆಂಬ ದೂಡ್ಡನಗರವಾಗಿ ಬೆಳೆಯುತ್ತದೆ.ಬಚ್ಚೇಗೌಡರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ರಾಜರು ನಂದಿ ದುರ್ಗದ ಕೋಟೆಯ ಮೇಲೆ ಅಕ್ರಮಣ ನಡೆಸುತ್ತಾರೆ. ಆದರೆ ಮರಾಠರ ಮದ್ಯೆ ಪ್ರವೇಶದಿಂದ ಅಕ್ರಮಣವನ್ನು ಕೈಬಿಡುತ್ತಾರೆ. ಬಚ್ಚೇಗೌಡರ ನಂತರ ಅಧಿಕಾರಕ್ಕೆ ಬಂದ ದೂಡ್ಡಬೈರೇಗೌಡರು ಮೈಸೂರು ರಾಜರು ಈ ಮೊದಲೇ ವಶಪಡಿಸಿಕೊಂಡಿದ್ದ ಕೋಟೆಗಳ ವಲಯವನ್ನು ಪುನಃ ಅವರಿಂದ ಕಸಿದು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.  1762 ರಲ್ಲಿ ಚಿಕ್ಕಪ್ಪನಾಯಕನ ಆಳ್ವಿಕೆಯ ಸಮಯದಲ್ಲಿ, ಹೈದರ್ ಅಲಿಯು ಮೂರು ತಿಂಗಳ ಕಾಲ ಅಕ್ರಮಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಚಿಕ್ಕಪ್ಪನಾಯಕನು ಹೈದರಾಲಿಗೆ  5 ಲಕ್ಷ ಪಗೋಡಗಳನ್ನು ಪಾವತಿಸಲು ಒಪ್ಪಿಕೊಂಡಾಗ ಹೈದರಾಲಿಯ ಸೇನೆಯನ್ನು ಹಿಂಪಡೆಯ ಲಾಯಿತು. ಆ ನಂತರ, ಆಂಧ್ರಪ್ರದೇಶದ ಗುತ್ತಿಯ ಮುರಾರಿರಾಯನ ಸಹಾಯದಿಂದ ಚಿಕ್ಕಪ್ಪ ನಾಯಕ ತನ್ನ ಅಧಿಕಾರವನ್ನು ಮರಳಿ ಪಡೆಯುತ್ತಾನೆ. ಈ ಸಂದರ್ಭದಲ್ಲಿ ಮುರಾರಿರಾಯನು ಅವರ ಚಿಕ್ಕಪ್ಪ ನಾಯಕ ಜೊತೆಗೆ ನಂದಿಬೆಟ್ಟದಲ್ಲಿ ಅಡಗಿಸಿಡುತ್ತಾನೆ. ತಕ್ಷಣವೇ ಹೈದರ್ ಅಲಿ ಚಿಕ್ಕಬಳ್ಳಾಪುರ ಮತ್ತು ಸುತ್ತಲ ಪ್ರದೇಶಗಳನ್ನು ಕೈವಶ ಮಾಡಿಕೊಂಡು ಚಿಕ್ಕನಾಯಕನನ್ನು ಬಂಧಿಸುತ್ತಾನೆ. ನಂತರ ಬ್ರಿಟೀಷ್ ನ ಲಾರ್ಡಕಾರ್ನ ವಾಲಿಸ್ ನ ಮಧ್ಯಪ್ರವೇಶದಿಂದಾಗಿ ಚಿಕ್ಕಬಳ್ಳಾಪುರವನ್ನು ನಾರಾಯಣಗೌಡನ ವಶಕ್ಕೆ ಕೂಡಲಾಗಿದೆ. ಕೆಲವು ಮೂಲಾಧಾರಗಳಂತೆ ಲಾರ್ಡಕಾರ್ನ ವಾಲಿಸ್ ನು ಚಿಕ್ಕಬಳ್ಳಾಪುರದಿಂದ 18 ಕಿ.ಮೀ. ದೂರದಲ್ಲಿರುವ ಪೆರೇಸಂದ್ರದ ಶಿವದೇವಾಲಯಕ್ಕೆ ಭೇಟಿ ನೀಡುತ್ತಾನೆ. ಬ್ರಿಟಿಷ್ ಆಧಾರಗಳಂತೆ ಪೆರೇಸಂದ್ರವು ಒಂದು ಅದ್ಭುತವಾದ  ಐತಿಹಾಸಿಕ ಹಿನ್ನೆಲೆಯನ್ನು ಹೂಂದಿದೆ ಎಂದ ರಹಸ್ಯವನ್ನು ತಿಳಿದ ಟಿಪ್ಪುಸುಲ್ತಾನ್ ಚಿಕ್ಕಬಳ್ಳಾಪುರವನ್ನು ಅಕ್ರಮಿಸಿಕೊಳ್ಳುತ್ತಾನೆ. 1791 ರಲ್ಲಿ ಬ್ರಿಟಿಷ್ ಆಡಳಿತಾಧಿಕಾರಿಗಳು ನಂದಿಯನ್ನು ಅಕ್ರಮಿಸಿಕೊಂಡು ಅದರ ನಿರ್ವಹಣೆಯನ್ನು ನಾರಾಯಣಗೌಡರಿಗೆ ವಹಿಸುತ್ತಾರೆ. ಇದರಿಂದಾಗಿ ಬ್ರಿಟಿಷ್ ರು ಮತ್ತು ಟಿಪ್ಪುಸುಲ್ತಾನರ ನಡುವೆ ಹೋರಾಟ  ಆರಂಭವಾಗುತ್ತವೆ. ಈ ಸಂದರ್ಭದಲ್ಲಿ ನಾರಾಯಣಗೌಡನು  ಅಧಿಕಾರವನ್ನು ಕಳೆದುಕೊಳ್ಳುತ್ತಾನೆ, ನಂತರ ಬ್ರಿಟಿಷ್ ರು ಟಿಪ್ಪುಸುಲ್ತಾನನ್ನು ಸೋಲಿಸುತ್ತಾರೆ. ಚಿಕ್ಕಬಳ್ಳಾಪುರವು ಸಹ ಈಗ ಕರ್ನಾಟಕದ ಒಂದು ಭಾಗವಾಗಿರುವ  ಮೈಸೂರು ಒಡೆಯರ ಆಡಳಿತಕ್ಕೆ ಒಳಪಡುತ್ತದೆ.  ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯು 6 ತಾಲ್ಲೂಕುಗಳಾಗಿ ವಿಂಗಡಿಸಲಾಗಿದ್ದು, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳು ಈ ಜಿಲ್ಲೆಯ ವ್ಯಾಪ್ತಿಗೆ ಒಳಗೂಂಡಿವೆ. ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಹೊಸದಾಗಿ ರಚಿಸಲಾದ ಜಿಲ್ಲೆಯಾಗಿದೆ. ಇದು ಅವಿಭಜಿತ ಕೋಲಾರ ಜಿಲ್ಲೆಯಿಂದ ದಿನಾಂಕ: 23.08.2007 ರಂದು ಸ್ವತಂತ್ರ ಜಿಲ್ಲೆಯಾಗಿ ರೂಪುಗೂಂಡಿರುತ್ತದೆ

ಚಿಕ್ಕಬಳ್ಳಾಪುರ :- ಚಿಕ್ಕಬಳ್ಳಾಪುರ ನಗರವು ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ರಚಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯಸ್ಥಾನವಾಗಿದೆ. ಈ ನಗರಕ್ಕೆ 3 ಕಿ.ಮೀ.ದೂರದಲ್ಲಿ ಮುದ್ದೇನಹಳ್ಳಿ ಗ್ರಾಮ ಇದ್ದು, ಈ ಗ್ರಾಮವು ಖ್ಯಾತ ಎಂಜಿನಿಯರ್ ಮತ್ತು ಮುತ್ಸದ್ದಿ ಸರ್ ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಜನ್ಮಸ್ಥಳವಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಆಧುನಿಕ ಕೃಷಿಯ ಪ್ರದೇಶವಾಗಿದ್ದು, ರೇಷ್ಮೆ, ದ್ರಾಕ್ಷಿ ಮತ್ತು ತರಕಾರಿಗಳ ಉತ್ಪಾದನಾ ತಾಣವಾಗಿದೆ. ಈ ಪ್ರದೇಶವು ಉತ್ತಮ ಸಾರಿಗೆ ಸಂಪರ್ಕ ಹಾಗೂ ಹಲವಾರು ಶೈಕ್ಷಣಿಕ ಕೇಂದ್ರಗಳು ಹೂಂದಿದೆ. ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೂಂದುತ್ತಿರುವ ಚಿಕ್ಕಬಳ್ಳಾಪುರ ನಗರವು ಭವಿಷ್ಯದಲ್ಲಿ ಬೃಹತ್ ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುವ ಸಾಧ್ಯತೆಗಳು ಇವೆ. ಈ ಭಾಗವು ಎಲ್ಲಾ ಕಾಲದಲ್ಲಿಯೂ ಒಂದು ಆಧುನಿಕ ಕೃಷಿ ಕೇಂದ್ರ ಎಂಬ ಹೆಸರಿಗೆ ಪಾತ್ರವಾಗಿದೆ.

ಗೌರಿಬಿದನೂರು :- ಗೌರಿಬಿದನೂರು ಎಂಬ ಹೆಸರು ಘೋರಿ ಮತ್ತು ಬಿದನೂರು ಎಂಬ ಪದಗಳಿಂದ ಹುಟ್ಟಿಕೊಂಡಿದೆ- ಇದು ಹಳೆಯ ಮೈಸೂರು ರಾಜ್ಯದ ಪಟ್ಟಣಗಳಿಗೆ ಸಾಮಾನ್ಯ ಹೆಸರು. ಟಿಪ್ಪು ಸುಲ್ತಾನ್ ಅವರ ಕೆಲವು ಸೈನಿಕರು ಇಲ್ಲಿ ಸಮಾಧಿ ಮಾಡಿದ್ದಾರೆಂದು ಹೇಳಲಾಗಿದೆ. ಇವತ್ತು ಅವನಿಗೆ ನಿರ್ಮಿಸಿದ ಮಸೀದಿಯು ಕೆಲವು ಹಳೆಯ ಸಮಾಧಿಯೊಂದಿಗೆ ನಿಂತಿದೆ. ಗೌರಿಬಿದನೂರು ಎಂಬ ಹೆಸರು ಗೌರಿ ಎಂದರೆ ಹಿಂದೂ ದೇವತೆ ಮತ್ತು ಬಿದಾನೂರಿನಿಂದ ಬಂದಿದೆ ಎಂದು ಕೆಲವು ಇತರ ಮೂಲಗಳು ಸೂಚಿಸುತ್ತವೆ. ಬಹಳ ಹಿಂದೆಯೇ ಈ ಪಟ್ಟಣವು ಬಹಳಷ್ಟು ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡೆಗಳ ಕೇಂದ್ರವಾಗಿದೆ. ಅತ್ಯಂತ ಹೆಚ್ಚು ಕಾಲದ ಪರಂಪರೆಯುಳ್ಳ ಆಚಾರ್ಯ ಪ್ರೌಢಶಾಲೆಯು ಅಸಂಖ್ಯಾತ ಪ್ರತಿಭಾವಂತ ವ್ಯಕ್ತಿಗಳನ್ನು ರೂಪಿಸಿದೆ. ಹೋಮಿ ಭಾಭಾ ಮತ್ತು ಮಹಾತ್ಮ ಗಾಂಧಿ ಅವರು ತಮ್ಮ ಬಾಲ್ಯದಲ್ಲಿ ಈ ಶಾಲೆಯನ್ನು ಭೇಟಿ ಮಾಡಿದ್ದು, ದೇಶದಲ್ಲಿ ಇದು ಒಂದು ಮಾದರಿ ಶಾಲೆ ಎಂದು ಹೆಸರಿಸಿದರು. ಡಾ|| ಎಚ್.ನರಸಿಂಹಯ್ಯ ಅವರು ಈ ತಾಲ್ಲೂಕಿನ ಹೂಸ್ಸೂರು ಎಂಬ ಹಳ್ಳಿಯಲ್ಲಿ ಜನಿಸಿದ್ದು, ವಿಶಿಷ್ಟ ಸಾಧನೆ ಮಾಡಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಅಕ್ಷರ ಕಲಿಯಲು ಹೆಣಗಾಡಿದರು, ಇವರು ಪರಿಶ್ರಮದಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾದರು. ಶಿಕ್ಷಣದ ಕಡೆಗೆ ಜನರನ್ನು ಕರೆದೊಯ್ಯುವ ಅವರ ಕನಸು ಅವರ ಸ್ವಂತ ಊರಿನ ಬಗ್ಗೆ ಇದ್ದು, ಅವರ ಪ್ರಯತ್ನಗಳಿಂದಾಗಿ ಇಂದು ಹೂಸ್ಸೂರಿನಲ್ಲಿ ಮಹಾತ್ಮಗಾಂಧಿ ಆದರ್ಶಗಳ ಒಂದು ಉತ್ತಮ ಪ್ರೌಢಶಾಲೆ ಹಾಗೂ “ಇನ್ಫೋಸಿಸ್ ಸೈನ್ಸ್ ಸೆಂಟರ್” ಅಸ್ತಿತ್ವದಲ್ಲಿರಲು ಕಾರಣವಾಗಿದೆ. ಇದರ ಜೂತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯವು ಈ ಗ್ರಾಮದಲ್ಲಿದ್ದು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಈ ಗ್ರಾಮಕ್ಕೆ ಭೇಟಿ ನೀಡಿ ಶೈಕ್ಷಣಿಕ ಲಾಭ ಪಡೆಯುತ್ತಿದ್ದಾರೆ. ವಿಜ್ಞಾನ ಕೇಂದ್ರವು ಹೂಸೂರಿನ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿದೆ. ಹೂಸೂರು ಕರ್ನಾಟಕದಲ್ಲಿ ಪ್ರಥಮ ಸ್ವಸ್ಥ ಗ್ರಾಮವಾಗಿದ್ದು, ಈ ಯೋಜನೆಯಡಿ ರೂ. 1 ಕೋಟಿ ಹಣವನ್ನು ವೆಚ್ಚ ಮಾಡಿ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

 ಗುಡಿಬಂಡೆ :- ಗುಡಿಬಂಡೆ ಪಟ್ಟಣವು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪಟ್ಟಣ ಪಂಚಾಯತಿ ಆಗಿದೆ. 2001 ಭಾರತದ ಜನಗಣತಿ ಪ್ರಕಾರ ಗುಡಿಬಂಡೆಯು 8794 ಜನಸಂಖ್ಯೆ ಹೂಂದಿತ್ತು. ತಾಲ್ಲೂಕಿನ ಸಾಕ್ಷರತಾ ಪ್ರಮಾಣವು ಶೇ. 62 ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಸಾಕ್ಷರತಾ ಪ್ರಮಾಣ 59.5 ಕ್ಕಿಂತ ಹೆಚ್ಚಾಗಿತ್ತು. ಗುಡಿಬಂಡೆ ಪಟ್ಟಣದ ಸಮೀಪ ಇರುವ ಆದೇಗಾರಹಳ್ಳಿಯು ಅತ್ಯಂತ ಸುಂದರ ಗ್ರಾಮವೆನಿಸಿದ್ದು, ಪೆರೇಸಂದ್ರ ಗ್ರಾಮಕ್ಕೆ ಸಮೀಪದಲ್ಲಿರುತ್ತದೆ. ಪೆರೇಸಂದ್ರ ಗ್ರಾಮವು ಚಕ್ಕುಲಿಗೆ ಹೆಸರುವಾಸಿಯಾಗಿದೆ. ಇದು ಒಂದು ಸಣ್ಣ ನದಿ ಮತ್ತು ನಾಗವಲ್ಲಿ ಬೆಟ್ಟ ಎಂಬ ದೊಡ್ಡ ಬೆಟ್ಟದ ಗುಹೆಗಳು ಹೊಂದಿರುವ ಮತ್ತು ಬೆಟ್ಟದ ಮೇಲಿನ ಒಂದು ದೇವಾಲಯವಿದೆ.

ಬಾಗೇಪಲ್ಲಿ :- ಬಾಗೇಪಲ್ಲಿ ಪಟ್ಟಣವು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಟೌನ್ ಮುನಿಸಿಫಲ್ ಕೌನ್ಸಿಲ್ ಹೂಂದಿರುತ್ತದೆ. ಬಾಗೇಪಲ್ಲಿಯು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಬೆಂಗಳೂರಿನ ಉತ್ತರ ದಿಕ್ಕಿಗೆ 100 ಕಿ.ಮೀ. ಅಂತರದಲ್ಲಿದೆ. ಈ ಭಾಗವು ದಕ್ಷಿಣ ಭಾರತದ ಅಂಧ್ರಪದೇಶದ ರಾಯಲಸೀಮಾ ರಾಜ್ಯದ ದಕ್ಷಿಣ ಭಾಗದಲ್ಲಿ ಇರುತ್ತದೆ. ಈ ಭಾಗದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ 550 ಮಿ.ಮೀ. ಮಳೆಯಾಗುತ್ತಿದ್ದು, ನಿರಂತರ ಬರಗಾಲಕ್ಕೆ ತುತ್ತಾಗುವ ತಾಲ್ಲೂಕಾಗಿದೆ.

ಶಿಡ್ಲಘಟ್ಟ :- ಶಿಡ್ಲಘಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿದ್ದು, ಈಡೀ ರಾಜ್ಯದಲ್ಲಿ ರೇಷ್ಮೆ ಕೃಷಿ ಮತ್ತು ಉದ್ದಿಮೆಗೆ ಹೆಸರಾಗಿದೆ. ಇಲ್ಲಿನ ಜನರ ಮುಖ್ಯ ಆದಾಯ ರೇಷ್ಮೆ, ಗೃಹ ಕೈಗಾರಿಕೆಗಳನ್ನೇ ಆಧರಿಸಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 243 ಗ್ರಾಮಗಳಿದ್ದು, ಶಿಡ್ಲಘಟ್ಟ ನಗರವು ತಾಲ್ಲೂಕಿನ ಪ್ರಧಾನ ಕೇಂದ್ರವಾಗಿದೆ. ನಗರದಲ್ಲಿ ಹೆಚ್ಚು ಪ್ರಮಾಣದಲ್ಲಿ ರೇಷ್ಮೆ ಕೃಷಿ ಆಧಾರಿತ ನೂಲು ತೆಗೆಯುವ ಗೃಹ ಕೈಗಾರಿಕೆಗಳಿದ್ದು, ತಮಿಳುನಾಡು, ಅಂಧ್ರಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಿಗೆ ರೇಷ್ಮೆ.

ಚಿಂತಾಮಣಿ :- ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪಟ್ಟಣ ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ೨೦೦೭ರಲ್ಲಿ ಕೋಲಾರ ಜಿಲ್ಲೆಯ ವಿಭಜನೆ ನಡೆದಾಗ ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಭಾಗವಾಯಿತು. ಇಲ್ಲಿನ ಜನರು ಕನ್ನಡ ಮತ್ತು ತೆಲಗು ಭಾಷೆಗಳನ್ನು ಮಾತನಾಡುತ್ತಾರೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವ್ಯಾಪಾರಕೇಂದ್ರ. ಚಿಂತಾಮಣಿ ನಾಯಕನೆಂಬ ಮರಾಠ ನಾಯಕ,' ನಿರ್ಮಿಸಿದ ಕಾರಣಕ್ಕಾಗಿ 'ಚಿಂತಾಮಣಿ,' ಹೆಸರು ಬಂದಿದೆ. 'ಅಂಬಾಜಿದುರ್ಗ' ಈ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ನಂತರ ಕಾಲಾನುಕ್ರಮದಲ್ಲಿ ಸ್ಥಾನಾಂತರಗೊಂಡಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಮಾನ ದೂರದಲ್ಲಿರುವ ಚಿಂತಾಮಣಿ ಪ್ರಮುಖ ವ್ಯಾಪಾರಿ ಸ್ಥಳವೆಂದು ಗುರುತಿಸಿಕೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮ ಕೃಷಿ ಮಾರುಕಟ್ಟೆ ಆರಂಭಗೊಂಡಿದ್ದು ಇಲ್ಲೇ. ಕಾಲಜ್ಞಾನ ಬರೆದ ನಾರಾಯಣ ತಾತನವರ ದೇವಾಲಯ ಕೈವಾರ ಕ್ಷೇತ್ರದ ಹತ್ತಿರದಲ್ಲೇ ಇದೆ. ಕೈಲಾಸಗಿರಿಯೆಂಬಲ್ಲಿ ಗುಹಾಂತರ ದೇವಾಲಯಗಳಿವೆ. ಅವು ಇನ್ನೂ ನಿರ್ಮಾಣದ ಹಂತದಲ್ಲಿವೆ. ಮುಸ್ಲಿಂ ಸಮುದಾಯದ ಯಾತ್ರಾಸ್ಥಳ 'ಮುರುಗಮಲ್ಲಾ ಕ್ಷೇತ್ರ' ವಿದೆ. ಅಲಂಬಗಿರಿಯಿದೆ.ಈ ತಾಲೂಕಿನ ಸುಕ್ಷೇತ್ರ ದೊಡ್ಡಬೊಮ್ಮನಹಳ್ಳಿಯಲ್ಲಿ ಇತಿಹಾಸ ಕಾಲದ ಶ್ರೀ ವೀರಭದ್ರ್ರ ಸ್ವಾಮಿ ದೇವಾಲಯವಿದೆ.

chikkaballapura map.jpg

ಇತ್ತೀಚಿನ ನವೀಕರಣ​ : 26-10-2020 05:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080