Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.320/2021 ಕಲಂ. 380,457 ಐ.ಪಿ.ಸಿ:-

     ದಿನಾಂಕ: 29.09.2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರಾದ ಈರಪ್ಪ ಬಿನ್ ಲೇಟ್ ಪೆದ್ದವೆಂಕಟರಾಯಪ್ಪ, 48 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ವಾಸ:ಶಾರದ ಶಾಲೆಯ ಪಕ್ಕದಲ್ಲಿ, 1 ನೇ ವಾರ್ಡ, ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ತರಕಾರಿ ವ್ಯಾಪಾರ ಮಾಡಿಕೊಂಡು, ನಾನು ನನ್ನ ಹೆಂಡತಿ ನರಸಮ್ಮ, 1ನೇ ವಾರ್ಡಿನಲ್ಲಿರುವ ತರಕಾರಿ ಮೂರ್ತಿ ರವರ ಬಾಬತ್ತು ವಾಸದ ಮನೆಯಲ್ಲಿ ಸುಮಾರು 8 ತಿಂಗಳಿನಿಂದ ಬಾಡಿಗೆಗೆ  ವಾಸವಾಗಿರುತ್ತೇವೆ. ದಿನಾಂಕ 28/09/2021 ರಂದು  ನಾನು ನನ್ನ ಹೆಂಡತಿ ವ್ಯಾಪಾರ ಮುಗಿಸಿಕೊಂಡು ರಾತ್ರಿ ಸುಮಾರು 10-00 ಗಂಟೆಗೆ ನನ್ನ ಬಾಮೈದನಾದ ವೆಂಕಟೇಶ ರವರು ತನ್ನ ಮಗನಿಗೆ ಆರೋಗ್ಯ ಸರಿಯಿಲ್ಲವೆಂದು ಪೋನ್ ಮಾಡಿದ್ದು ನಾನು ನನ್ನ ಹೆಂಡತಿ 5 ನೇ ವಾರ್ಡನಲ್ಲಿ ವಾಸವಾಗಿರುವ ನನ್ನ ಬಾಮೈದನ ಮನೆಗೆ ಹೋಗಿರುತ್ತೇನೆ. ನಂತರ ದಿನಾಂಕ 29/09/2021 ರಂದು ಬೆಳಿಗ್ಗೆ  ಸುಮಾರು 5-30 ಗಂಟೆಗೆ ನಾನು ಮನೆಗೆ ಹೋದಾಗ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದಿದ್ದು  ಗಾಬರಿಯಾಗಿ ಮನೆಯೊಳಗೆ ಹೋಗಿ ನೋಡಲಾಗಿ ಬೀರುವಿನ ಬಾಗಿಲು ತೆಗೆದಿದ್ದು ಬೀರುವಿನಲ್ಲಿದ್ದ 36,000/-  ನಗದು ಹಣ, 10 ಗ್ರಾಂ ತೂಕದ 2 ಜೊತೆ ಬಂಗಾರದ ಹ್ಯಾಂಗಿಂಗ್ಸ್, ಬೆಲೆ  40,000/- ರೂ, 2 ಜೊತೆ ಬೆಳ್ಳಿ ಕಾಲು ಚೈನುಗಳು , ಬೆಲೆ 8,000/-, 4 ಬೆಳ್ಳಿ ಕಡಗಳು,  ಬೆಲೆ 4,000/- ರೂ , 50 ಗ್ರಾಂ ತೂಕದ 2 ಬೆಳ್ಳಿಯ ಕುಂಕುಮ ಬಟ್ಟಲು 5,000/- ರೂ , 10 ರೇಷ್ಮೇ ಸೀರೆಗಳು, ಬೆಲೆ  25,000/- ರೂ , 10 ಮಾಮುಲಿ ಸೀರೆಗಳು ಬೆಲೆ 4,000/- ರೂ ಗಳಾಗಿರುತ್ತವೆ. ಆದ್ದರಿಂದ ದಿನಾಂಕ 28/09/2021 ರಂದು ರಾತ್ರಿ ನಮ್ಮ  ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿಟ್ಟಿದ್ದ ಸುಮಾರು 1 ಲಕ್ಷ 22 ಸಾವಿರ ಬೆಲೆ ಬಾಳುವ  ಚಿನ್ನ ಮತ್ತು  ಬೆಳ್ಳಿಯ ವಡವೆಗಳು ಹಾಗೂ ಸೀರೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಾಲನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.168/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 30-09-2021 ರಂದು  ಬೆಳಗ್ಗೆ  08-30  ಗಂಟೆಯಲ್ಲಿ  ಪಿರ್ಯಾದಿ   ಸಿ. ಸೆಟ್ಟು ಬಿನ್ ಚಿನ್ನಯ್ಯರ್  33ವರ್ಷ   ವನ್ನೀಯಾರ್  ಗೌಡ  ಜನಾಂಗ ಬಂಡೆ ಕೆಲಸ   ಮನೆ ನಂಬರ್: 3/31-ಇ.  ರಾಯನಮ್ ಪಟ್ಟಿ ಗ್ರಾಮ ಕೊರೆನಮ್ ಪಟ್ಟಿ ಪೋಸ್ಟ್  ಎಡಪಾಡಿ ತಾಲ್ಲೂಕು  ಸೇಲಂ  ಜಿಲ್ಲೆ.  ತಮಿಳುನಾಡು.  ಹಾಲಿ ವಾಸ:  ಗುವ್ವಲಖಾನಹಳ್ಳಿ  ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. ರವರು  ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು  ಈಗ್ಗೆ ಸುಮಾರು 02 ವರ್ಷಗಳಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಗುವ್ವಲಖಾನಹಳ್ಳಿ ಗ್ರಾಮದ ಸಮೀಪ ಬಂಡೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.  ತನ್ನ ಜೊತೆಯಲ್ಲಿ  ಭೂಪತಿ  ಸೆಂಗೊಟ್ಟಿಯನ್  ಬಿನ್ ಸೆಂಗೊಟ್ಟಿಯನ್   26ವರ್ಷ ವನ್ನಿಯಾರ್ ಗೌಡ ಜನಾಂಗ ರವರು ಸಹ ಬಂಡೆ ಕೆಲಸ ,ಮಾಡಿಕೊಂಡು  ಗುವ್ವಲಖಾನಹಳ್ಳಿ ಗ್ರಾಮದಲ್ಲಿ  ವಾಸವಾಗಿದ್ದನು. ಆಗಾಗ್ಗೆ ಸ್ವಂತ ಊರು ರಾಯನಮ್ ಪಟ್ಟಿ ಗ್ರಾಮಕ್ಕೆ  ಹೋಗಿ ಬರುತ್ತಿದ್ದನು. ಈಗ್ಗೆ ಒಂದು ವಾರದ ಹಿಂದೆ  ಊರಿಗೆ ಹೋಗಿದ್ದವನು ದಿನಾಂಕ: 29-09-2021 ರಂದು ಊರಿನಿಂದ ಗುವ್ವಲಖಾನಹಳ್ಳಿ ಗ್ರಾಮಕ್ಕೆ ಬಂದಿದ್ದನು. ನಂತರ ದಿನಾಂಕ: 29-09-2021 ರಂದು ಸಂಜೆ 7-00  ಗಂಟೆಯ ಸಮಯದಲ್ಲಿ ಬಂಡೆ ಕೆಲಸ ಮಾಡುವ  ಫಳನಿ ಬಿನ್ ಸೆಲ್ಲಪ್ಪನ್ ಎಂಬುವವರ  ಬಳಿ 100/-ರೂಪಾಯಿಗಳನ್ನು  ಪಡೆದುಕೊಂಡು  ಕೊಯಿರಾ  ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದನು.  ದಿನಾಂಕ: 30-09-2021 ರಂದು ಬೆಳಗ್ಗೆ  ಚಿಕ್ಕಬಳ್ಳಾಪುರ    ಪೊಲೀಸರು  ಗುವ್ವಲಖಾನಹಳ್ಳಿ  ಗ್ರಾಮಕ್ಕೆ ಬಂದು  ಒಬ್ಬ  ಮೃತನ  ಪೋಟೋವನ್ನು  ತೋರಿಸಿ ದಿನಾಂಕ: 29-09-2021 ರಂದು ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು  ಗುವ್ವಲಖಾನಹಳ್ಳಿ ಗ್ರಾಮದ ಗೇಟ್ ಸಮೀಪ ಎನ್.ಹೆಚ್. 44 ರಸ್ತೆಯಲ್ಲಿ ಯಾವುದೋ ವಾಹನದ  ಚಾಲಕ  ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ರಸ್ತೆಯ  ಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಅಪರಿಚಿತನಿಗೆ ಡಿಕ್ಕಿ  ಹೊಡೆಯಿಸಿ ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ  ಹೊರಟು  ಹೋಗಿದ್ದು ಅಪರಿಚಿತನಿಗೆ  ತಲೆಗೆ ತೀವ್ರತರವಾದ  ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ  ಮೃತ ದೇಹವನ್ನು  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುವುದಾಗಿ ವಿಷಯ ತಿಳಿಸಿದರು. ನಾನು ಮತ್ತು ಇತರರು ಮೃತನ ಪೋಟೋವನ್ನು ನೋಡಿದ್ದು, ಮೃತನು ಭೂಪತಿ  ಸೆಂಗೊಟ್ಟಿಯನ್  ರಾಯನಮ್ ಪಟ್ಟಿ ಗ್ರಾಮ ಆಗಿತ್ತು. ನಾವು  ಶವಾಗಾರದಲ್ಲಿದ್ದ  ಮೃತ ದೇಹವನ್ನು ನೋಡಿದ್ದು  ಮೃತನು ಭೂಪತಿ ಸೆಂಗೊಟ್ಟಿಯನ್ ಆಗಿದ್ದನು. ದಿನಾಂಕ: 29-09-2021 ರಂದು ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಭೂಪತಿ ಸೆಂಗೊಟ್ಟಿಯನ್ ರವರು ಗುವ್ವಲಖಾನಹಳ್ಳಿ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ  ಚಿಕಬಳ್ಳಾಪುರ  ಬಾಗೇಪಲ್ಲಿ ರಸ್ತೆಯಲ್ಲಿ ಯಾವುದೋ ವಾಹನದ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭೂಪತಿ ರವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಆರೋಪಿ  ಚಾಲಕ ಮತ್ತು  ವಾಹನವನ್ನು  ಪತ್ತೆ ಮಾಡಿ  ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ  ಮೇರೆಗೆ  ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.50/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ;- 30-09-2021 ರಂದು ಬೆಳಗ್ಗೆ 9-30 ಗಂಟೆಗೆ ಪಿರ್ಯಾದುದಾರರಾದ  ಶ್ರೀ ಮುರಳಿ ಬಿನ್ ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ  ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರ ತಂದೆ ತಾಯಿಗೆ ಇಬ್ಬರು ಮಕ್ಕಳು 1 ಪಿರ್ಯಾದಿ 2.ನೆ ಮೋಹನ್ ಎಂಬುವರಿದ್ದು ನಮ್ಮ ತಾಯಿ ಲಕ್ಷ್ಮಮ್ಮಳು ಈಗ್ಗೆ 10 ವರ್ಷಧ ಹಿಂದೆ ಮರಣಹೊಂದಿರುತ್ತಾಳೆ. ನಮ್ಮ ತಂದೆ  ಮೊದಲು ಗಾರೆ ಕೆಲಸಮಾಡುತ್ತಿದ್ದು ಈಗ್ಗೆ ಸುಮಾರು 9 ವರ್ಷಧ ಹಿಂದೆ ನಮ್ಮ ತಂದೆಯವರಿಗೆ ಮನೆಯಲ್ಲಿ ಮಲಗಿದ್ದಾಗ  ಬೆಂಕಿ ತಗುಲಿ  ಎಡಗಾಲು  ತೊಂದರೆಗೀಡಾಗಿದ್ದು  ನಡೆಯಲು ಆಗುತ್ತಿರಲಿಲ್ಲಾ, ಆಗಿನಿಂದ ಪ್ರತಿದಿನ ನಮ್ಮೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದು ಚಿಕ್ಕಬಳ್ಳಾ ಪುರದಲ್ಲಿ ಬಿಕ್ಷೆಯನ್ನು  ಬೇಡಿಕೊಂಡು ರಾತ್ರಿ ಮನಗೆ ಬಂದು ಮಲಗುತ್ತಿದ್ದನು, ದಿನಾಂಕ 29-09-2021 ರಂದು ರಾತ್ರಿ ಸುಮಾರು 7-00 ಗಂಟೆಯ ಸಮಯದಲ್ಲಿ ನಾನು ಮನೆಯ ಬಳಿ ಇದ್ದಾಗ ನಮ್ಮ ಮಾವನಾದ ನಮ್ಮೂರಿನ ನಾಗರಾಜು ಬಿನ್ ಅಕ್ಕಲಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದ ವಿಚಾರವೇ ನೆಂದರೆ ನಿಮ್ಮ ತಂದೆ ನರಸಿಂಹಪ್ಪನಿಗೆ ಚಿಕ್ಕಬಳ್ಳಾಪುರ ನಗರದಲ್ಲಿನ ಎಂವಿ ವೃತ್ತದ ಬಳಿ ಬಿಕ್ಷೆ ಯನ್ನು ಬೇಡುತ್ತಿದ್ದಾಗ ಸಂಜೆ ಸುಮಾರು 6-55 ಗಂಟೆಯ ಸಮಯದಲ್ಲಿ  ಯಾವುದೋ ಒಂದು ವಾಹನ ಡಿಕ್ಕಿ ಹೊಡೆಯಿಸಿಕೊಂಡು ಹೊರಟುಹೋಗಿದ್ದು ಗಾಯಗಳಾಗಿದ್ದ ನಿಮ್ಮ ತಂದೆಯ ವರನ್ನು ಚಿಕ್ಕಬಳ್ಳಾಪುರ ಸಕರ್ಾರಿ ಆಸ್ಪತ್ರಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಮರಣ ಹೊಂದಿ ರುವುದಾಗಿ ತಿಳಿಸಿರುತ್ತಾರೆಂದು ಬೇಗನೆ ಆಸ್ಪತ್ರೆಯ ಬಳಿ ಬರುವಂತೆ ನನಗೆ ತಿಳಿಸಿದನು, ನಾನು ತಕ್ಷಣ ನನ್ನ ತಮ್ಮ ಮೋಹನನೊಂದಿಗೆ ಜಿಲ್ಲಾಸ್ಪತ್ರೆಯ ಬಳಿ ಬಂದಾಗ ವಿಚಾರ ನಿಜವಾಗಿದ್ದು  ನಮ್ಮ ತಂದೆ ನರಸಿಂಹಪ್ಪನಿಗೆ ತಲೆಯ ಹಿಂದೆ ರಕ್ತಗಾಯ ಎಡಗಾಲಿಗೆ  ಗಾಯಗಳಾಗಿ ಬಾಯಲ್ಲಿ ಮತ್ತು ಮೂಗಿ ನಲ್ಲಿ ರಕ್ತ ಸೋರುತ್ತಿತ್ತು, ನಮ್ಮ ತಂದೆಯ ವರ ಮೃತ ದೇಹವನ್ನು ಶವಗಾರಕ್ಕೆ ಸಾಗಿಸಿ ಮನಗೆ ಹೋಗಿದ್ದು ನಮ್ಮ ಸಂಭಂದಿಕರಿಗೆ ಸಾವಿನ ವಿಚಾರವನ್ನು ತಿಳಿಸಿ ಈ ದಿನ ದಿನಾಂಕ;-30-09-2021 ರಂದು ತಡವಾಗಿ ಬಂದು ದೂರನ್ನು ನೀಡುತ್ತಿದ್ದು ನಮ್ಮ ತಂದೆಯವರಿಗೆಅಪಘಾತಪಡಿಸಿ ಸ್ಥಳದಿಂದ ಹೊರಟು ಹೋಗಿರುವ  ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವರವದಿ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.181/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ: 29/09/2021 ರಂದು ಪಿರ್ಯಾದಿದಾರರಾದ ಶ್ರೀ ಅರುಣ ಕುಮಾರ್ ಬಿನ್ ಕೃಷ್ಣಸ್ವಾಮಿ, 48 ವರ್ಷ, ಬಲಜಿಗರು, ಕೇಬಲ್ ಆಪರೇಟರ್ , ವಾಸ: ವಾಸವಿ ಕಲ್ಯಾಣ ಮಂಟಪದ ಪಕ್ಕ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಮ್ಮನಾದ ವೆಂಕಟೇಶ್ ರವರು ಪೈನಾನ್ಸ್ ಕೆಲಸ ಮಾಡಿಕೊಂಡು ಅಂಜನಿ ಬಡಾವಣೆ ಕೆ.ಎಂ ಕೃಷ್ಣಾರೆಡ್ಡಿ ರವರ ಮುಂಭಾಗದ ಮನೆಯಲ್ಲಿ ಸಂಸಾರ ಸಮೇತ ವಾಸವಾಗಿರುತ್ತಾರೆ. ಅವರಿಗೆ 1ನೇ ಸೋಹಾನ್ 8 ವರ್ಷ ಮತ್ತು 2ನೇ ಗೀತಿಕ್ 4 ವರ್ಷ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಈ ದಿನ ದಿನಾಂಕ: 29/092021 ರಂದು ಸಂಜೆ ತಾನು ತನ್ನ ತಮ್ಮನನ್ನು ಮಾತನಾಡಿಸಿಕೊಂಡು ಬರಲು ಅವರ ಮನೆಗೆ ಹೋಗಿ ತನ್ನ ತಮ್ಮ ವೆಂಕಟೇಶ್ ರವರನ್ನು ಮಾತನಾಡಿಸುತ್ತಿದ್ದಾಗ, ತನ್ನ ತಮ್ಮನ 2ನೇ ಮಗನಾದ 4 ವರ್ಷದ ಗೀತಿಕ್ ಎಂಬ ಹುಡುಗನು ಮನೆಯ ಮುಂದೆ ಖಾಲಿ ನಿವೇಶನ ಹಾಗೂ ರಸ್ತೆಯ ಪಕ್ಕದಲ್ಲಿ ಕುಳಿತು ಆಟವಾಡುತ್ತಿದ್ದು, ಸಂಜೆ ಸುಮಾರು 4-40 ಗಂಟೆ ಸಮಯದಲ್ಲಿ ಟ್ಯಾಂಕ್ ಬಂಡ್ ರಸ್ತೆಯ ಕಡೆಯಿಂದ ಬಂದ ಕಾರಿನ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತರಯಿಂದ ಚಾಲನೆ ಮಾಡಿಕೊಂಡು ಬಂದು ಆಟವಾಡುತ್ತಿದ್ದ ಗೀತಿಕ್ ರವರ ಮೇಲೆ ಹತ್ತಿಸಿಕೊಂಡು ಹೋಗಿದ್ದು, ಕೂಡಲೇ ತಾನು ತನ್ನ ತಮ್ಮ ಮತ್ತು ಇತರರು ಬಂದು ನೋಡಲಾಗಿ ಗೀತಿಕ್ ನಿಗೆ  ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಕೂಡಲೇ ಯಾವುದೋ ವಾಹನದಲ್ಲಿ ಕರೆದುಕೊಂಡು ಬಂದು ಚಿಂತಾಮಣಿ ಡೆಕ್ಕನ್ ಆಸ್ಪತ್ರೆಗೆ ಬರುವಷ್ಟರಲ್ಲಿ ಗೀತಿಕ್ ಮೃತ ಪಟ್ಟಿರುತ್ತಾರೆ. ನಂತರ ಸದರಿ ಅಫಘಾತ ಉಂಟು ಮಾಡಿದ ಕಾರಿನ ನಂಬರ್ ತಿಳಿಯದೇ ಇದ್ದು ಡಸ್ಕ್ ಗ್ರೇ ಕಲರ್ ನಿಂದ ಕೂಡಿರುತ್ತೇ. ಆದ್ದರಿಂದ ತನ್ನ ತಮ್ಮನ ಮಗನಿಗೆ ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕನ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.267/2021 ಕಲಂ. 78(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂಧರೆ ಗೌರಿಬಿದನೂರು ಗ್ರಾಮಾಂತರ ಠಾಣೆ ಯಲ್ಲಿ ಪಿ.ಎಸ್.ಐ. ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ವಿಜಯಕುಮಾರ್ ಕೆ.ಸಿ. ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ 29-06-2021 ರಂದು ರಾತ್ರಿ 07-30 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದಲ್ಲಿ  ವಿಧುರಾಶ್ವಥ  ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ  ರಾಜೇಶ ಬಿನ್ ಸದಾಶಿವಯ್ಯರವರ ದಿನಸಿ ಅಂಗಡಿಯಲ್ಲಿ  ರಾಜೇಶ, ದಿನೇಶ್ ಬಿನ್ ಸಿದ್ದಪ್ಪ ರವರು ಮೊಬೈಲ್ ನಲ್ಲಿ ಈ ದಿನ ನಡೆಯುತ್ತಿರುವ  ಐ.ಪಿ.ಎಲ್. ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ  ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದಿರುತ್ತೆ. ಸದರಿ ಮಾಹಿತಿಯ ಮೇರೆಗೆ  ದಾಳಿ ಮಾಡಲು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಠಾಣಾ ಎನ್.ಸಿ.ಆರ್. ನಂ. 451/2021 ರಂತೆ ಸ್ವತಃ ಎನ್.ಸಿ.ಆರ್. ಅನ್ನು ದಾಖಲಿಸಿಕೊಂಡಿರುತ್ತೇನೆ. ಸದರಿ ಅಕ್ರಮ ಕ್ರಿಕೇಟ್  ಬೆಟ್ಟಿಂಗ್ ಆಡುತ್ತಿರುವವರ ಮೇಲೆ ದಾಳಿ ಮಾಡಿ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆಯನ್ನು ಕೈಗೊಳ್ಳಲು  ಘನ ನ್ಯಾಯಾಲಯದಲ್ಲಿ ಕಲಂ 78(3) ಕೆ.ಪಿ.ಆಕ್ಟ್  ಅಸಂಜ್ಞೇಯ ಅಪರಾಧವಾಗಿದ್ದು ಠಾಣಾ ಎನ್,ಸಿ.ಆರ್. 451/2021 ರಲ್ಲಿ ಅನುಮತಿಯನ್ನು ಪಡೆದುಕೊಂಡು 21-45 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ. 205 ಮೋಹನ್ ರವರು ಹಾಜರುಪಡಿಸಿದ್ದು  ಠಾಣಾ ಮೊ.ಸಂಖ್ಯೆ 267/2021 ಕಲಂ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.235/2021 ಕಲಂ. 379 ಐ.ಪಿ.ಸಿ:-

     ದಿನಾಂಕ:29/09/2021 ರಂದು ಸಾಯಂಕಾಲ 7-30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:  ತಾನು ಮೇಲ್ಕಂಡ ವಿಳಾಸದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ. ತನ್ನ  ಬಾಮೈದ ಸುಮಾರು ಒಂದು ತಿಂಗಳ ಹಿಂದೆ ಬಾಗೇಪಲ್ಲಿ  ತಾಲ್ಲೂಕು, ಗಡಿದಂ ಗ್ರಾಮದ ಮಂಜುನಾಂಥ ರವರ ಬಳಿ  20 ಸಾವಿರ ರೂಗಳಿಗೆ ಕೆ,ಎ-07 ಎಲ್-6490 ನೊಂದಣಿ ಸಂಖ್ಯೆಯ ಹಿರೋ ಸ್ಪ್ಪ್ಲೆಂಡರ್ ಪ್ಲಸ್ ದ್ವಿ ಚಕ್ರವನ್ನು  ಕೊಂಡು ಕೊಂಡಿರುತ್ತಾನೆ. ದಿನಾಂಕ:02/09/2021 ರಂಧು ತಾನು  ಬೀಚಗಾನಹಳ್ಳಿ ಗ್ರಾಮದ ಕೆನರಾಬ್ಯಾಂಕ್ ನಲ್ಲಿ ಹಣವನ್ನು ತೆಗೆದುಕೊಂಡು ಬರಲು  ತನ್ನ ಬಾಮೈದನಾದ ನಾಗರಾಜು ಬಿನ್ ಲೇಟ್ ಗಂಗಪ್ಪ  ರವರ ಬಳಿ ದ್ವಿ ಚಕ್ರ ವಾಹನವನ್ನು ಪಡೆದುಕೊಂಡು ರಾಷ್ಟ್ರೀಯ ಹೆದ್ದಾರಿ-44ರಸ್ತೆಯ ಬದಿಯಲ್ಲಿ ನಿಲ್ಲಿಸಿ ತಮ್ಮ ಜಮೀನಿನ ಬಳಿ ಹೋಗಿ  ರಸ್ತೆಯ ಬದಿಯಲ್ಲಿ ದ್ವಿ ಚಕ್ರ ವಾಹನ ನಿಲ್ಲಿಸಿ ಹೋಗಿ ಮದ್ಯಾಹ್ನ-2-00ಗಂಟೆಯ ಸಮಯದಲ್ಲಿ  ಬಂದು  ಜಾಗದಲ್ಲಿ ದ್ವಿ ಚಕ್ರ ವಾಹನ ಇರುವುದಿಲ್ಲ.ಈ ವಾಹನವನ್ನು  ಯಾರೋ ಕಳ್ಳರು ತಾನು ತೆಗೆದುಕೊಂಡು ಹೋಗಿದ್ದ ಕೆ,ಎ-07 ಎಲ್-6490 ನೊಂದಣಿ ಸಂಖ್ಯೆಯ ಹಿರೋ ಸ್ಪ್ಪ್ಲೆಂಡರ್ ಪ್ಲಸ್ ದ್ವಿ ಚಕ್ರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ತಾನು ಮತ್ತು ತನ್ನ ಬಾಮೈದ ನಾಗರಾಜು ಬಿನ್ ಲೇಟ್ ಗಂಗಪ್ಪ ಸುತ್ತಮುತ್ತಲೂ ಗ್ರಾಮಗಳಲ್ಲಿ ಹುಡುಕಿದರು ಎಲ್ಲಿಯೂ ಪತ್ತೆಯಾಗ ಕಾರಣ ಈ ದಿನ ಠಾಣೆಗೆ ಬಂದು  ಮೇಲ್ಕಂಡ ದ್ವಿ ಚಕ್ರ ವಾಹನವನ್ನು ಪತ್ತೆಮಾಡಿ ಹಾಗೂ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು   ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 78(A)(vi),87 ಕೆ.ಪಿ ಆಕ್ಟ್:-

     ದಿನಾಂಕ:29-09-2021 ರಂದು ರಾತ್ರಿ 7.45 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರು ಠಾಣಾ ಕರ್ತವ್ಯದಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ನಗರದ ರಹಮತ್  ನಗರದಲ್ಲಿರುವ ಅಶ್ರಫ್ ಪಾಷ ರವರ ಚಿಲ್ಲರೆ ಅಂಗಡಿ ಮುಂದೆ ಯಾರೋ ಅಸಾಮಿಗಳೂ ಸೇರಿಕೊಂಡು ಈ ದಿನ ದುಬೈನಲ್ಲಿ ನಡೆಯುತ್ತಿರುವ ರಾಜಸ್ತಾನ್ ಮತ್ತು ಬೆಂಗಳೂರು ಕ್ರಿಕೆಟ್ ಟೀಮ್ ಗಳ ಮದ್ಯೆ ನಡೆಯುತ್ತಿರುವ ಐಪಿಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂದಪಟ್ಟಂತೆ ಎರಡು ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಒಬ್ಬರಿಗೊಬ್ಬರು ಬೆಟ್ಟಿಂಗ್ ಹಣವನ್ನು ಪಣವಾಗಿ ಕಟ್ಟಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದಿದ್ದು, ಸದರಿ ಸ್ಥಳದ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿ ಪಡೆದುಕೊಂಡು ನಂತರ ಪಂಚಾಯ್ತಿದಾರರು ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ರಾತ್ರಿ 8.55 ಗಂಟೆಗೆ ಅಶ್ರಫ್ ಪಾಷ ರವರ ಕಾಂಡಿಮೆಂಟ್ ಮುಂದೆ ಕ್ರಿಕೆಟ್ ಬೆಟ್ಟಿಂಗ್ ಅಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ಅಶ್ರಫ್ ಪಾಷ ಬಿನ್ ಸಮೀರ್ ವುಲ್ಲಾ, 21ವರ್ಷ, ಮುಸ್ಲೀಂ, ಚಿಲ್ಲರೆ ಅಂಗಡಿ ವ್ಯಾಪಾರ, ರಹಮತ್ ನಗರ, ವಾಸ ಮಹಬೂಬ್ ನಗರ, ಶಿಡ್ಲಘಟ್ಟ ಟೌನ್ ಇವರ ಬಳಿ ವಿವೋ ಕಂಪನಿಯ ಮೊಬೈಲ್ ಪೋನ್ (ನಂ.9902938404) ಆಗಿರುವುದಾಗಿ ತಿಳಿಸಿರುತ್ತಾನೆ. 2] ಷಬ್ಬೀರ್ ಬಿನ್ ಅಮೀರ್ ಸಾಬ್, 49ವರ್ಷ, ಮುಸ್ಲೀಂ, ಗುಜರಿ ವ್ಯಾಪಾರ, ರಹಮತ್ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು 5 ಜನರು ಓಡಿ ಹೋಗಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 3] ಚೋಟುದಾ, ರಹಮತ್ ನಗರ 4] ಮುನಾವರ್ @ ಘಾಟಿ, ಖಾಸಿಂಪಾಳ್ಯ 5] ಇಸ್ಮಾಯಿಲ್, ತೈಬಾನಗರ 6] ನಿಜಾಮ್, ಅಮೀರ್ ಬಾಬಾದರ್ಗಾ ಬಳಿ, 7] ಜಮೀರ್, ರಹಮತ್ನಗರ, ಶಿಡ್ಲಘಟ್ಟ ಟೌನ್ ಎಂದು ಅಶ್ರಫ್ ಪಾಷ ರವರು ತಿಳಸಿರುತ್ತಾರೆ. ಇವರು ಅಶ್ರಫ್ ಪಾಷ ರವರ ಬಳಿ ಇರುವ ಮೊಬೈಲ್ ಪೋನ್ ಮೂಲಕ ದುಬೈನಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೀಂಗಳ ಮದ್ಯೆ ನಡೆಯುತ್ತಿರುವ ರಾಜಸ್ತಾನ್ ಮತ್ತು ಬೆಂಗಳೂರು ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ರಾಜಸ್ತಾನ್ ಗೆಲ್ಲುತ್ತೆ 1000/-ರೂ ಎಂತಲೂ ಮತ್ತೊಬ್ಬರು ಬೆಂಗಳೂರು ಟೀಂ ಗೆಲ್ಲುತ್ತೆ 1000/-ರೂ ಎಂದು ಹಣವನ್ನು ಪಣಕ್ಕೆ ಕಟ್ಟಿ ಮಾತನಾಡಿಕೊಂಡು ಅಶ್ರಫ್ ಪಾಷ ರವರ ಮೊಬೈಲ್ ಪೋನ್ ನಲ್ಲಿ ಕ್ರಿಕೆಟ್ ಸ್ಕೋರ್ ನೋಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿರುವುದಾಗಿ ಅಶ್ರಫ್ ಪಾಷ ತಿಳಿಸಿರುತ್ತಾರೆ. ಇವರು ಅಶ್ರಫ್ ಪಾಷ ರವರ ಬಳಿ ಪಣಕ್ಕೆ ಕಟ್ಟಿದ್ದ ಹಣವನ್ನು ಎಣಿಕೆ ಮಾಡಲಾಗಿ ಒಟ್ಟು 5,000/-ರೂ ನಗದು ಹಣ ಇರುತ್ತೆ. ಅಶ್ರಫ್ ಪಾಷ ರವರ ಬಳಿ ಸ್ಕೋರ್ ನೋಡಲು ಇಟ್ಟುಕೊಂಡಿದ್ದ ವಿವೋ ಕಂಪನಿಯ ಮೊಬೈಲ್ ಪೋನ್ ಮತ್ತು ಪಂದ್ಯಕ್ಕೆ ಕಟ್ಟಿದ್ದ 5000/-ರೂ ನಗದು ಹಣವನ್ನು ರಾತ್ರಿ 9-00 ರಿಂದ 9-30 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ಮತ್ತು ಅಮಾನತ್ತು ಪಡಿಸಿದ ಮಾಲುಗಳನ್ನು ಒಪ್ಪಿಸುತ್ತಿದ್ದು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಮೇಲ್ಕಂಡವರ ಮೇಲೆ ಪ್ರಕರಣ ದಾಖಲಿಸಲು ರಾತ್ರಿ 10-10 ಗಂಟೆಗೆ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

Last Updated: 30-09-2021 05:11 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080