ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 378/2021, ಕಲಂ. 457, 380 ಐ.ಪಿ.ಸಿ:-

          ದಿನಾಂಕ: 26/10/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಮಧೂಸೂಧನ್ ಬಿನ್ ವೆಂಕಟೇಶ 27ವರ್ಷ, ಬುಡುಗಜಂಗಮ ಜನಾಂಗ, ವ್ಯಾಪಾರ, ವಾಸ: ಘಂಟಂವಾರಿಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಬಾಗೇಪಲ್ಲಿ ಟೌನ್ ಡಿವಿಜಿ ರಸ್ತೆಯಲ್ಲಿರುವ ಹಳೆ ಕೆನರಾಬ್ಯಾಂಕ್ ಹತ್ತಿರ ಮಧು ಮೊಬೈಲ್ಸ್ ಹೆಸರಿನಲ್ಲಿ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡು 8ವರ್ಷದಿಂದ ವ್ಯಾಪಾರ ಮಾಡಿಕೊಂಡಿರುತ್ತೇನೆ. ಹೀಗಿರುವಲ್ಲಿ ದಿನಾಂಕ: 25/10/2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಅಂಗಡಿಯ ಶೆಟರ್ ಡೋರ್ ಬೀಗ ಹಾಕಿಕೊಂಡು ಮನೆಗೆ ಹೋಗಿರುತ್ತೇನೆ. ದಿನಾಂಕ: 26/10/2021 ರಂದು ಬೆಳಿಗ್ಗೆ 7-00 ಗಂಟೆಗೆ ನಾನು ಅಂಗಡಿಯ ಬಳಿಗೆ ಬಂದಿದ್ದು ಅಂಗಡಿಯ ಶೆಟರ್ ಬಾಗಿಲು ನೋಡಲಾಗಿ ಅರ್ಧ ಭಾಗವನ್ನು ಯಾರೋ ಕಿತ್ತು ಮೇಲಕ್ಕೆ ಎತ್ತಿದಂತಿದ್ದು ಗಮನಿಸಿ ನೋಡಲಾಗಿ ಯಾರೋ ಕಳ್ಳರು ಬಲವಂತವಾಗಿ ಬಾಗಿಲು ಕಿತ್ತಿರುವುದನ್ನು ಗಮನಿಸಿರುತ್ತೇನೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ 7 ಸ್ಮಾರ್ಟ್ ಪೋನ್ ಮೊಬೈಲ್ ಗಳು, ಬ್ಲೂಟೂತ್ಸ್, ಬ್ಯಾಟರಿಗಳು, ಬೇಸಿಕ್ ಮೊಬೈಲ್ ಗಳು, ಪವರ್ ಬ್ಯಾಂಕ್ ಗಳು, ಪೆನ್ ಡ್ರೈವ್ ಗಳು, ಹೆಡ್ ಪೋನ್ಸ್, ಸ್ಮಾರ್ಟ್ ವಾಚ್ ಗಳು, ಬ್ಲೂಟೂತ್ಸ್ ಸ್ಪೀಕರ್ ಗಳು, ಕ್ಯಾಮರಾ ಡಿವಿಆರ್, ಚಾರ್ಜರ್ಸ್, 2 ಸಿಸ್ಟ್ಂ ಗಳು, ಮತ್ತು ಗ್ರಾಹಕರು ರಿಪೇರಿಗೆ ಕೊಟ್ಟಿರುವ ಹಳೆ ಮೊಬೈಲ್ ಗಳು ಮತ್ತು ಇತರೆ ಸುಮಾರು 1,37,850/- ರೂಗಳು ಬೆಬಾಳುವ ವಸ್ತುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ತಾವುಗಳು ದಯಮಾಡಿ ಕಳ್ಳರನ್ನು ಪತ್ತೆಮಾಡಿ ಕಳ್ಳತನವಾಗಿರುವ ನಮ್ಮ ವಸ್ತುಗಳನ್ನು ಪತ್ತೆಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯ ಕ್ರಮಜರುಗಿಸಲು ಕೋರಿ ನಿಡಿದ ದೂರು.

 

2. ದಿಬ್ಬೂರಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 154/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ:26-10-2021 ರಂದು ಸಂಜೆ 17-00 ಗಂಟೆಗೆ  ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ -27 ರವರು  ಆಸಾಮಿ, ಮಾಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ:26/10/2021 ರಂದು ಪಿ.ಎಸ್.ಐ ಸಾಹೇಬರು  ಸಿ,ಹೆಚ್,ಸಿ 27 ರಾಮಾಂಜನೇಯ ಜಿ ಮತ್ತು ಸಿ.ಪಿ.ಸಿ-196 ದೇವರಾಜ ಬಡಿಗೇರ  ಆದ ತಮಗೆ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಆದರಂತೆ ನಾವು ಮಧ್ಯಾಹ್ನ 15-00 ಗಂಟೆಯ ಸಮಯದಲ್ಲಿ ದಿಬ್ಬೂರಹಳ್ಳಿ, ವಡ್ಡಹಳ್ಳಿ, ಬಚ್ಚನಹಳ್ಳಿ, ಟಿ.ವೆಂಕಟಾಪುರ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಒಬ್ಬ  ಆಸಾಮಿಯೂ ತಲಕಾಯಲಬೆಟ್ಟ ಗ್ರಾಮದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಆಗುವ ರೀತಿಯಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು  ಮಧ್ಯಫಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು,  ಸದರಿ ವಿಚಾರವನ್ನು ಪಿ.ಎಸ್.ಐ ರವರ ಗಮನಕ್ಕೆ ತಂದು ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ಪಿ.ಎಸ್.ಐ ರವರಿಂದ ಮೌಖಿಕ ಆದೇಶವನ್ನು ಪಡೆದುಕೊಂಡು ನಂತರ ತಲಕಾಯಲಬೆಟ್ಟ ಗ್ರಾಮದಲ್ಲಿ  ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದರ ಮೇರೆಗೆ  ಅವರು ಒಪ್ಪಿಕೊಂಡಿರುತ್ತಾರೆ.  ನಂತರ ನಾವು ಪಂಚರೊಂದಿಗೆ ನಡೆದುಕೊಂಡು ತಲಕಾಯಲಬೆಟ್ಟ ಗ್ರಾಮದ ಅಂಗಡಿ ಬಳಿ ಹೋಗಿ ಮರೆಯಲ್ಲಿ  ನಿಂತು ನೋಡಲಾಗಿ  ಮಾರಪ್ಪ ರವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಆಗುವ ರೀತಿಯಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ನಿಮ್ಮ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾವೆಂದು ತಿಳಿಸಿದ್ದು. ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಸದರಿ ಆಸಾಮಿಯ ಹೆಸರು ಮಾರಪ್ಪ ಬಿನ್ ಹನುಮಂತಪ್ಪ, 48 ವರ್ಷ, ಆದಿಕರ್ನಾಟಕ, ಅಂಗಡಿ ವ್ಯಾಪಾರ, ತಲಕಾಯಲಬೆಟ್ಟ ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು, ಪೋನ್ ನಂಬರ್:9481310748 ಎಂದು ತಿಳಿಸಿದ್ದು ,ನಂತರ  ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ 90 ಎಂ,ಎಲ್ ನ original choice deluxe whisky ಯ 16 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 1.440 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 562.08 ರೂ ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ ಲ್ ನ original choice deluxe whisky ಯ  ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಖಾಲಿ ವಾಟರ್ ಬಾಟೆಲ್ ನ್ನು ಸಾಯಂಕಾಲ 16-00 ಗಂಟೆಯಿಂದ ಸಂಜೆ 16-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆ , ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ವರಧಿಯಾಗಿರುತ್ತೆ.

 

3. ದಿಬ್ಬೂರಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 155/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ: 26/10/2021 ರಂದು ಸಂಜೆ 18-00 ಗಂಟೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ 217 ಗೋಪಾಲ್ ರವರು ಮಾಲು ಆಸಾಮಿ,ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:-26/10/2021  ರಂದು ಸಿ.ಹೆಚ್.ಸಿ 217 ಗೋಪಾಲ್ ಆದ ನನಗೆ ಮತ್ತು ಸಿ.ಪಿ.ಸಿ 461 ಸಂತೋಷ್ ಕುಮಾರ್ ರವರಿಗೆ  ಪಿ.ಎಸ್.ಐ ರವರು ಹಗಲು ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಆದರಂತೆ ನಾವು ಯಲಗಲಹಳ್ಳಿ, ಚಿಕ್ಕ ದಿಬ್ಬೂರಹಳ್ಳಿ, ದಿಬ್ಬೂರಹಳ್ಳಿ, ವಡ್ಡಹಳ್ಳಿಗಳ ಕಡೆ ಗಸ್ತು ಮಾಡಿಕೊಂಡು ಬೈಯಪ್ಪನಹಳ್ಳಿ ಗ್ರಾಮದ ಕಡೆಗೆ ಸಂಜೆ 16-15 ಗಂಟೆಗೆ ಹೋದಾಗ ಸದರಿ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಆಗುವ ರೀತಿಯಲ್ಲಿ ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ವಿಚಾರವನ್ನು ಪಿ.ಎಸ್.ಐ ರವರ ಗಮನಕ್ಕೆ ತಂದು ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ಪಿ.ಎಸ್.ಐ ರವರಿಂದ ಮೌಖಿಕ ಆದೇಶವನ್ನು ಪಡೆದುಕೊಂಡ ನಂತರ ಅದೇ ಗ್ರಾಮದಲ್ಲಿ  ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದರ ಮೇರೆಗೆ  ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಬೈಯಪ್ಪನಹಳ್ಳಿ ಗ್ರಾಮದ  ಶಂಕರ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಶಂಕರ ರವರು ತನ್ನ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿದ್ದು ಸದರಿ ಆಸಾಮಿಯ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಮನೆಯ ಮಾಲೀಕನಾದ  ಶಂಕರ್ ರವರನ್ನು ವಶಕ್ಕೆ ಪಡೆದು  ಆತನ ಹೆಸರು ಮತ್ತು ಪೂರ್ಣ ವಿಳಾಸವನ್ನು ತಿಳಿಯಲಾಗಿ ಶಂಕರ್ ಬಿನ್ ಗಂಗುಲಪ್ಪ, 40 ವರ್ಷ, ಕೂಲಿ ಕೆಲಸ, ಆದಿ ದ್ರಾವಿಡ ಜನಾಂಗ ವಾಸ:ಬೈಯಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಎಂತ ಹೇಳಿದ್ದು ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸದರಿ ಸ್ಥಳದ್ದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ HAYWARDS CHEERS WHISKYಯ  12 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1080 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 421.56 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ 1 ಖಾಲಿ 90 ಎಂ,ಲ್, ನ  HAYWARDS CHEERS WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-30  ಗಂಟೆಯಿಂದ ಸಂಜೆ 17-30  ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿ, ಮಾಲು, ಪಂಚನಾಮೆಯೊಂದಿಗೆ ಸಂಜೆ 18-00 ಗಂಟೆಗೆ  ಠಾಣೆಗೆ ಹಾಜರಾಗಿ ಆಸಾಮಿ, ಮಾಲು ಮತ್ತು ಪಂಚನಾಮೆಯನ್ನು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ  ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:155/2021 ಕಲಂ:15(ಎ),32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 289/2021, ಕಲಂ. 279, 337 ಐ.ಪಿ.ಸಿ:-

          ದಿನಾಂಕ:26/10/2021 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದುದಾರರಾದ ಶ್ರೀನಿವಾಸ್ ಬಿ.ಕೆ. ಬಿನ್ ಕೃಷ್ಣಪ್ಪ, ಬೋವಿ ಜನಾಂಗ, ಜಿರಾಯ್ತಿ, 42 ವರ್ಷ, ಜಿ.ಬೊಮ್ಮಸಂದ್ರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ; ದಿನಾಂಕ:25/10/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತಮ್ಮ ಮಾವ ಅಶ್ವತ್ಥಪ್ಪ ಬಿನ್ ನರಸಿಂಹಪ್ಪ, 55 ವರ್ಷ,ದೋಬಿ ಜನಾಂಗ ವೆಳಪಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಜಗರೆಡ್ಡಿಹಳ್ಳಿಯಿಂದ ವೆಳಪಿ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ವೆಳಪಿ ಗ್ರಾಮದ ಬಳಿ ಇರುವ  ಮಹೇಶ್ವರಮ್ಮ ದೇವಸ್ಥಾನದ ಹತ್ತಿರ ಕೆಎ-04 ಹೆಚ್.ಪಿ-4290 ಹೋಂಡಾ ಕಂಪನಿಯ ಶೈನ್ ದ್ವಿ ಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆಮಾಡಿಕೊಂಡು ಬಂದು ತಮ್ಮ ಮಾವನವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಲ್ಲಿದ್ದ ಸಾರ್ವಜನಿಕರು ಆಂಬುಲೆನ್ಸ್ ನಲ್ಲಿ ತಮ್ಮ ಮಾವ ಅಶ್ವತ್ಥಪ್ಪ ರವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಕಳುಹಿಸಿರುತ್ತಾರೆ. ನನಗೆ ದೂರವಾಣಿ ಕರೆಯನ್ನು ಮಾಡಿ ವಿಚಾರ ತಿಳಿಸಿದ್ದು ತಾನು ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ತನ್ನ ಮಾವ ರವರಿಗೆ ಎರಡು ಕಾಲುಗಳಿಗೆ ಏಟಾಗಿದ್ದು ಮಂಡಿಗಳಿಗೆ ರಕ್ತಗಾಯವಾಗಿರುತ್ತೆ. ಗೌರಿಬಿದನೂರು ಆಸ್ಪತ್ರೆಯ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕದ ಅಪೂರ್ವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ದಾಖಲು ಮಾಡಿ ಈ ದಿನ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣವಾದ ಕೆಎ-04 ಹೆಚ್.ಪಿ-4290 ಹೋಂಡಾ ಕಂಪನಿಯ ಶೈನ್ ದ್ವಿ ಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

5. ಗೌರಿಬಿದನೂರು ನಗರ ಪೊಲೀಸ್ ಠಾಣೆ, ಮೊ.ಸಂ. 170/2021, ಕಲಂ. 323, 325, 504 ಐ.ಪಿ.ಸಿ:-

          ದಿನಾಂಕ 26/10/2021 ರಂದು ಬೆಳಿಗ್ಗೆ 10:45 ಗಂಟೆಯಲ್ಲಿ ಗಾಯಾಳು ಶ್ರೀಮತಿ ರತ್ನಮ್ಮ ಎ ಕೋಂ ಶ್ರೀನಿವಾಸ ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನನ್ನು ಮುದಲೋಡು ಗ್ರಾಮದ ನಾರಾಯಣಪ್ಪನ ಮಗನಾದ ಶ್ರೀನಿವಾಸ ರವರಿಗೆ 11 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ. ನಮಗೆ ತಿಮ್ಮರಾಜು ಎಂಬುವರು ಪರಿಚಯವಿರುತ್ತಾರೆ. ತಿಮ್ಮರಾಜು ರವರು ನನ್ನ ಗಂಡನೊಂದಿಗೆ ಆಗ್ಗಾಗ್ಗೆ ಮಾತನಾಡುತ್ತಿದ್ದರು. ದಿನಾಂಕ 25/10/2021 ರಂದು ನಾನು ಕೆಲಸ ಮುಗಿಸಿಕೊಂಡು ಸಂಜೆ 6:00 ಗಂಟೆಯಲ್ಲಿ ಮನೆಗೆ ವಾಪಸ್ಸು ಬಂದಿರುತ್ತೇನೆ. ನಂತರ ನಾನು ತಿಮ್ಮರಾಜು ರವರನ್ನು ಮನೆಗೆ ಕರೆಸಿಕೊಂಡಿರುತ್ತೇನೆ. ನಾನು ಮತ್ತು ತಿಮ್ಮರಾಜು ರವರು ಮನೆಯಲ್ಲಿರುವಾಗ ಸಂಜೆ 6:15 ಗಂಟೆಯಲ್ಲಿ ನನ್ನ ಗಂಡ ಶ್ರೀನಿವಾಸ ರವರು ಮನೆಗೆ ಬಂದಿರುತ್ತಾರೆ. ಮನೆಯಲ್ಲಿ ನಾವಿಬ್ಬರು ಇದ್ದದ್ದನ್ನ ಕಂಡು ನನ್ನ ಗಂಡ ಶ್ರೀನಿವಾಸ ರವರು ಅವಾಚ್ಯ ಶಬ್ದಗಳಿಂದ ಬೈದು ನನ್ನ ತಲೆಯನ್ನು ಮನೆಯ ಗೋಡೆಗೆ ಚಚ್ಚಿರುತ್ತಾನೆ. ನಂತರ ಕೈಗಳಿಂದ ನನ್ನ ಎದೆಯ ಭಾಗಕ್ಕೆ ಗುದ್ದಿರುತ್ತಾರೆ. ನಂತರ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುತ್ತೇನೆ. ನನಗೆ ಪ್ರಜ್ಞೆ ಬಂದಾಗ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ನಂತರ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಚಿಕಿತ್ಸೆ ನೀಡಿದ ವೈದ್ಯರು ಎದೆಮೂಳೆ ಮುರಿದಿರುತ್ತದೆ ಮೂಳೆ ವೈದ್ಯರಿಗೆ ತೋರಿಸುವಂತೆ ತಿಳಿಸಿದರು. ನಂತರ ನನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ಆದ್ದರಿಂದ ನನ್ನ ತಲೆ ಮತ್ತು ಮುಖಕ್ಕೆ ರಕ್ತಗಾಯಪಡಿಸಿ ಎದೆ ಭಾಗಕ್ಕೆ ಗುದ್ದಿರುವ ನನ್ನ ಗಂಡ ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 116/2021, ಕಲಂ. 379 ಐ.ಪಿ.ಸಿ:-

          ದಿನಾಂಕ 27/10/2021 ರಂದು ಮದ್ಯಾಹ್ನ 01.30 ಗಂಟೆಗೆ ಅನಾನ್ ಇಬ್ರಾಹೀಂ ಬಿನ್ ಆರೀಪ್ವುಲ್ಲಾ ಇಬ್ರಾಹೀಂ, 22 ವರ್ಷ, ಸೀಟ್ ಕವರ್ ಪಿಟ್ಟಿಂಗ್ ಕೆಲಸ, ಮುಸ್ಲೀಂ ಜನಾಂಗ ವಾಸ ನಂ 17/5 13(ಎ) ಕ್ರಾಸ್ ಜೆ.ಜೆ.ಆರ್ ನಗರ, ಪಾದರಾಯನಪುರ, ಬೆಂಗಳೂರು ನಗರ-56026 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮುರಗಮಲ್ಲ ಗ್ರಾಮದಲ್ಲಿ ಉರುಸ್ ಇರುವ ಪ್ರಯುಕ್ತ ದಿನಾಂಕ 18/10/2021 ರಂದು ತಾನು ತಮ್ಮ ಮಾವನ ಮನೆ ಮುರಗಮಲ್ಲ ಗ್ರಾಮಕ್ಕೆ ಬಂದಿದ್ದು ಅದರಂತೆ ತಾನು ಉರುಸ್ ಮುಗಿಸಿ ಬೆಂಗಳೂರಿಗೆ ಹೋಗೋಣವೆಂತ ದಿನಾಂಕ 22/10/2021 ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ತನ್ನ ಬಾಬತ್ತು KA-02-KH-8362 ಆಕ್ಸ್ಸ್-125; ಬಿಎಸ್-6(GREENISH BLUE) ಇಂಜಿನ್ ನಂ-216599412 ದ್ವಿಚಕ್ರವಾಹನವನ್ನು ಮುರಗಮಲ್ಲ ಗ್ರಾಮದ ವಾಸಿಯಾದ ತಮ್ಮ ಮಾವನಾದ ಆಸೀಪ್ ಪಾಷ ಎಸ್.ಎಂ ರವರ ಮನೆಯ ಮುಂದೆ ದ್ವಿಚಕ್ರವಾಹನವನ್ನು ಹ್ಯಾಂಡ್ ಲಾಕ್ಕ್ ಮಾಡಿ  ನಿಲ್ಲಿಸಿದ್ದು ನಂತರ  ದಿನಾಂಕ 23/10/2021 ರಂದು  ಬೆಳಿಗ್ಗೆ 05.30 ಗಂಟೆ ಸಮಯದಲ್ಲಿ ಪ್ರಾಥನೆಗೆ ಮಸೀದಿಗೆ ಹೋಗುವ ಸಲುವಾಗಿ ಮನೆಯಿಂದ ಹೊರಗೆ ಬಂದು ನೋಡಲಾಗಿ ತನ್ನ ಬಾಬತ್ತು KA-02-KH-8362 ಆಕ್ಸ್ಸ್-125 ಬಿಎಸ್-6 ಇಂಜಿನ್ ನಂ-216599412 ದ್ವಿಚಕ್ರವಾಹನವು ಇರುವುದಿಲ್ಲ. ತಮ್ಮ ಮಾವನ ಮನೆಯ ಕೆಳಗಡೆ ರೂಮ್ ಬಾಡಿಗೆ ಇದ್ದವರನ್ನು ವಿಚಾರಿಸಿದರೆ ಸದರಿಯವರು ಮುಂಜಾನೆ 4-30 ಗಂಟೆ ಸಮಯದಲ್ಲಿ ಸದರಿ ದ್ವಿಚಕ್ರವಾಹನ ಇರುವಂತೆ ತಿಳಿಸಿರುತ್ತಾರೆ. ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಮುಂಜಾನೆ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ  ಮುರಗಮಲ್ಲ ಗ್ರಾಮದಲ್ಲಿ  ಹುಡುಕಾಡಲಾಗಿ ಪತ್ತೆಯಾಗದೇ ಇರುವುದರಿಂದ ಈ ದಿನ ದಿನಾಂಕ 27-10-2021 ರಂದು ತಡವಾಗಿ ದೂರನ್ನು ನೀಡುತ್ತಿದ್ದು ಕಳುವಾದ 75000 ರೂ ಮೌಲ್ಯದ ತನ್ನ ಬಾಬತ್ತು ದ್ವಿ ಚಕ್ರವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ದುರನ ಸಾರಾಂಶವಾಗಿರುತ್ತದೆ.

 

7. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 207/2021, ಕಲಂ. 279, 304(A) ಐ.ಪಿ.ಸಿ:-

          ದಿನಾಂಕ: 26/10/2021 ರಂದು ಬೆಳಿಗ್ಗೆ 10-30 ಗಂಟೆ ಪಿರ್ಯಾದುದಾರರಾದ ಗೌರಬಿದನೂರು ತಾಲ್ಲೂಕು ಮಿಣಕಿನಗುರ್ಕಿ ಗ್ರಾಮದ ವಾಸಿ ವರದರಾಜು ಬಿನ್ ಲೇಟ್ ಹೂವಿನ ನರಸಿಂಹಪ್ಪ, 35 ವರ್ಷರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಮ್ಮ ತಾಯಿಯ ದೊಡ್ಡಪ್ಪ ಚಿಕ್ಕಗಂಗಪ್ಪ ಮತ್ತು ಅವರ ಹೆಂಡತಿ ಶ್ರೀಮತಿ ಗಂಗಮ್ಮರವರಿಗೆ ಮಕ್ಕಳಿರುವುದಿಲ್ಲ. ನಮ್ಮ ತಾತ ಚಿಕ್ಕಗಂಗಪ್ಪರವರು ಈಗ್ಗೆ 5 ತಿಂಗಳ ಹಿಂದೆ ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ನಮ್ಮ ಅಜ್ಜಿ ಗಂಗಮ್ಮರವರು ನಮ್ಮ ಗ್ರಾಮದಲ್ಲಿಯೇ ವಾಸವಾಗಿದ್ದು, ಅವರ ಕಷ್ಟ ಸುಖಗಳನ್ನು ಅವರಿಗೆ ಮಕ್ಕಳಿಲ್ಲದ್ದರಿಂದ ನಾವೇ ನೋಡಿಕೊಳ್ಳುತ್ತಿದ್ದೆವು. ನೆನ್ನೆ ದಿನ ದಿನಾಂಕ: 25/10/2021 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನರಸಿಂಹಪ್ಪ @ ನರಸಿಂಹಮೂರ್ತಿ ಬಿನ್ ಮುನಿನರಸಪ್ಪರವರು ನಮ್ಮ ಅಜ್ಜಿ ಗಂಗಮ್ಮರವರನ್ನು ವೃದ್ದಾಪ್ಯ ವೇತನವನ್ನು ತೆಗೆದು ಕೊಂಡು ಬರಲು KA-05, EY-6843 TVS STAR CITY ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ಮಂಚೇನಹಳ್ಳಿಗೆ ಬರುತ್ತಿದ್ದಾಗ ಮಂಚೇನಹಳ್ಳಿಯ ಸಂತೇಬೀದಿ ಹತ್ತಿರ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬಳಿ ಮಂಚೇನಹಳ್ಳಿ-ಡಿ.ಪಾಳ್ಯ ರಸ್ತೆಯಲ್ಲಿ ನರಸಿಂಹಪ್ಪ @ ನರಸಿಂಹಮೂರ್ತಿ ರವರು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರವಾಹನವನ್ನು ಬ್ರೇಕ್ ಹಾಕಿದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ನಮ್ಮ ಅಜ್ಜಿ ಗಂಗಮ್ಮರವರು ರಸ್ತೆಯಲ್ಲಿ ಬಿದ್ದು ಹೋಗಿ ತಲೆಗೆ ಪೆಟ್ಟಾಗಿ ಮೂಗಿನಲ್ಲಿ ರಕ್ತಬಂದಿದ್ದು, ತಕ್ಷಣ ನರಸಿಂಹಮೂರ್ತಿ ಮತ್ತು ಅದೇ ರಸ್ತೆಯಲ್ಲಿ ಬಂದ ನಮ್ಮ ಅಣ್ಣ ಬಾಲಪ್ಪ ರವರು ನಮ್ಮ ಅಜ್ಜಿಯನ್ನು ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನನಗೆ ವಿಚಾರ ತಿಳಿಸಿದರು. ನಾನು ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ವಾಹನದಲ್ಲಿ ನಮ್ಮ ಅಜ್ಜಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದೆವು. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ನಮ್ಮ ಅಜ್ಜಿ ಗಂಗಮ್ಮರವರು ಅಪಘಾತದಿಂದ ಆದ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25/10/2021 ರಂದು ಸಂಜೆ 5-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿದ್ದು, ಈ ಅಪಘಾತಕ್ಕೆ ಕಾರಣವಾದ  KA-05, EY-6843 TVS STARCITY ದ್ವಿಚಕ್ರವಾಹನ ಮತ್ತು ಅದರ ಸವಾರ ನರಸಿಂಹಪ್ಪ @ ನರಸಿಂಹಮೂರ್ತಿ ಬಿನ್ ಮುನಿನರಸಪ್ಪರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ

 

8. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 208/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ಮಂಚೇನಹಳ್ಳಿ ಪೊಲೀಸ್ ಠಾಣೆಯ ಶ್ರೀ ಮನೋಹರ್ ಬಾಬು ಎ.ಎಸ್.ಐ ಆದ ನಾನು ನಿಮಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 26/10/2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಕನಗಾನಕೊಪ್ಪ ಗ್ರಾಮದಲ್ಲಿ ನಾರಾಯಣಸ್ವಾಮಿ ಬಿನ್ ಲೇಟ್ ಮುರುವಪ್ಪ ಎಂಬುವವರು ತನ್ನ ಚಿಲ್ಲರೆ  ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಸಿಬ್ಬಂದಿಯವರಾದ ಪಿ.ಸಿ-483 ರಮೇಶ್, ಪಿ.ಸಿ-283 ಅರವಿಂದ, ಪಿ.ಸಿ-311 ಗೂಳಪ್ಪ ಮತ್ತು ಪಂಚರೊಂದಿಗೆ ಎರಡು ದ್ವಿ ಚಕ್ರ ವಾಹನಗಳಲ್ಲಿ ಕನಗಾನಕೊಪ್ಪ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು  ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ಮುರುವಪ್ಪ ಚಿಲ್ಲರೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ ಇಬ್ಬರು ಗಂಡಸರು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದ ಇಬ್ಬರು ಗಂಡಸರು ಓಡಿ ಹೋಗಿದ್ದು, ಚಿಲ್ಲರೆ ಅಂಗಡಿಯ ಮುಂದೆ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಆತ ತನ್ನ ಹೆಸರು ನಾರಾಯಣಸ್ವಾಮಿ ಬಿನ್ ಲೇಟ್ ಮುರುವಪ್ಪ, 55 ವರ್ಷ, ಪರಿಶಿಷ್ಟ ಜಾತಿ, ಚಿಲ್ಲರೆ  ಅಂಗಡಿ ವ್ಯಾಪಾರ, ಕನಗಾನಕೊಪ್ಪ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ ಇದ್ದ ಪ್ಲಾಸ್ಟಿಕ್ ಕವರ್ ನ್ನು ಪರಿಶೀಲಿಸಿದಾಗ, ಅದರಲ್ಲಿ ಮದ್ಯ ತುಂಬಿದ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 15 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 1350 ಲೀಟರ್ ಆಗಿರುತ್ತೆ. ಇವುಗಳ ಬೆಲೆ 526.95 ರೂ.ಗಳಾಗಿದ್ದು, ಮದ್ಯಪಾನ ಮಾಡುತ್ತಿದ್ದ ಸ್ಥಳದಲ್ಲಿ 2 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 2 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಯನ್ನು ಮದ್ಯದ ಪ್ಯಾಕೇಟ್ ಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಸಂಜೆ 5.30 30 ಗಂಟೆಯಿಂದ 6.00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಹಾಗು 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 15 ಟೆಟ್ರಾ ಪಾಕೆಟ್ ಗಳು, 2 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKYಯ 2 ಖಾಲಿ ಟೆಟ್ರಾ ಪಾಕೆಟ್ ಗಳು ಮತ್ತು ಪ್ಲಾಸ್ಟಿಕ್ ಕವರನ್ನು ವಶಪಡಿಸಿ ಕೊಂಡು, ಠಾಣೆಗೆ ಸಂಜೆ 6.30 ಗಂಟೆಗೆ ವಾಪಸ್ಸು ಬಂದು, ವಶಪಡಿಸಿಕೊಂಡಿರುವ ಮಾಲನ್ನು ಮತ್ತು ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಕೋರಿದೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 210/2021, ಕಲಂ. 504, 307 ಐ.ಪಿ.ಸಿ.:-

          ದಿನಾಂಕ:26/10/2021 ರಂದು ಪಿರ್ಯಾಧಿದಾರರು ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಕುಟುಂಬಕ್ಕು ನಮ್ಮ ಗ್ರಾಮದ ನರಸಿಂಹರೆಡ್ಡಿರವರು ಮಗನಾದ ನವೀನ್ ಕುಮಾರ್ ರವರಿಗೂ ನಮ್ಮ ಗ್ರಾಮದಲ್ಲಿನ ಜಮೀನು ವಿಚಾರವಾಗಿ ಆಗಾಗ್ಗೆ ಗಲಾಟೆಯಾಗಿ ನ್ಯಾಯಾಲಯದಲ್ಲಿ ದಾವೆ ಊಡಿದ್ದು  ವಿಚಾರಣೆಯಲ್ಲಿರುತ್ತದೆ. ಆದ್ದಾಗ್ಯೂ ಈ ದಿನಾಂಕ: 26/10/2021 ರ ರಾತ್ರಿ ಸುಮಾರು 7.00 ಗಂಟೆ ಸಮಯದಲ್ಲಿ ನಮ್ಮ ತಂದೆ ಮತ್ತು ಮನೆಯವರು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ನವೀನ್ ಕುಮಾರ್ ಬಿನ್ ನರಸಿಂಹರೆಡ್ಡಿರವರು ನಮ್ಮ ಮನೆಯ ಬಳಿ ಬಂದು ನಮ್ಮ ತಂದೆಯನ್ನು ಜಮೀನು ವಿಚಾರವಾಗಿ ಮಾತಾನಾಡಬೇಕೆಂದು ಹೊರಗಡೆ ಬರುವಂತೆ ಕರೆದಿದ್ದು ನಮ್ಮ ತಂದೆ ಮನೆಯಿಂದ ಹೊರಗೆ ಹೋದಾಗ ನಮ್ಮ ಮನೆಯ ಮುಂದೆ ಗೇಟ್ ಬಳಿ ಇದ್ದ ನವೀನ್ ಕುಮಾರ್ ಏನೋ ಲೋಫರ್ ನನ್ನ ಮಗನ ನನ್ನ ಮೇಲೆ ಇಲ್ಲ ಸಲ್ಲದ ಜಮೀನ್ ಕೇಸ್ ಗಳನ್ನು ಹಾಕಿ ಕೋರ್ಟಗೆ ಅಲೆಯುಸುತ್ತಿಯೆ ಎಂದು ಬಾಯಿಗೆ ಬಂದಂತೆ ಬೈದು ತಾನು ತಂದಿದ್ದ ಚಾಕುವಿನಿಂದ ನಮ್ಮ ತಂದೆಯನ್ನು ಕೊಲೆ ಮಾಡುವ ಉದ್ದೇಶದಿಂದ ಹೊಟ್ಟೆಗೆ ತಿವಿದು ಈ ದಿನ ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಕೂಗಾಡಿದನು. ನಮ್ಮ ತಂದೆ ನೋವಿನಿಂದ ಕಿರಿಚಿಕೊಂಡಾಗ ನಾನು ನಮ್ಮ ತಾಯಿ ತಾಯಿಯಾದ ಅನಿತ ನಮ್ಮ ದೊಡ್ಡಪ್ಪನ ಮಗ ಶಶಿಕುಮಾರ್ ಬಿನ್ ಸೋಮಣ್ಣ ಮತ್ತು ಇತರರು ಆರೋಪಿತನಿಂದ ನಮ್ಮ ತಂದೆಯನ್ನು ಬಿಡಿಸಿಕೊಂಡು ನೋಡಿದಾಗ ಹೊಟ್ಟೆಯ ಬಳಿ ನಮ್ಮ ತಂದೆಗೆ ರಕ್ತಗಾಯವಾಗಿ ಕರುಳು ಕಾಣಿಸುವಂತೆ ಇರುತ್ತೆ ಚಾಕು ಸ್ಥಳದಲ್ಲಿ ಬಿದ್ದಿತ್ತು ತಕ್ಷಣ ನಮ್ಮ ತಂದೆಯನ್ನು ಆಟೋದಲ್ಲಿ ಗೌರಿಬಿದನೂರು ಮಾನಸ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತೇವೆ. ನಮ್ಮ ತಂದೆಯನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಅಲ್ಲೆ ಮಾಡಿದ ನವೀನ್ ಕುಮಾರ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರು.

 

10. ನಂದಿಗಿರಿಧಾಮ ಪೊಲೀಸ್ ಠಾಣೆ, ಮೊ.ಸಂ. 143/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ:26/10/2021 ರಂದು ಸಂಜೆ 5:40 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:26-10-2021 ರಂದು ಸಂಜೆ 4:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಪಿಸಿ-435 ವೆಂಕಟಶಿವ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಮುದ್ದೇನಹಳ್ಳಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಚೀಗಟೇನಹಳ್ಳಿ ಗ್ರಾಮದ ಮುನೇಗೌಡ @ ಮಧು ಬಿನ್ ಲೇಟ್ ಕೃಷ್ಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಮುದ್ದೇನಹಳ್ಳಿ ಗ್ರಾಮದ ಡೈರಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಬಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 4:20 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಕೃಷ್ಣಮೂರ್ತಿ ಬಿನ್ ನಂಜಪ್ಪ, 40 ವರ್ಷ, ಪ.ಜಾತಿ, ಅಂಗಡಿ ವ್ಯಾಪಾರ, ವಾಸ: ಚೀಗಟೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 10 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 10 ಟೆಟ್ರಾ ಪ್ಯಾಕೇಟುಗಳ ಬೆಲೆ 351 ರೂಪಾಯಿ ಆಗಿದ್ದು ಓಟ್ಟು ಮದ್ಯ 900 ಮೀಲಿ ಮದ್ಯವಿರುತ್ತೆ.  2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 4:25 ಗಂಟೆಯಿಂದ ಸಂಜೆ 5:10 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಸಂಜೆ 5:30 ಗಂಟೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 324/2021, ಕಲಂ. 447, 323, 324, 504, 506 ಐ.ಪಿ.ಸಿ.:-

          ದಿನಾಂಕ: 26/10/2021 ರಂದು ಸಂಜೆ 5-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯದಿಂದ ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ವಾಸದ ಮನೆಯ ಪಕ್ಕದಲ್ಲಿ ವಿಶ್ವ ವೈನ್ಸ್ ಸ್ಟೋರ್ ಎಂಬ ಅಂಗಡಿ ಇರುತ್ತೆ. ತಮ್ಮ ಗ್ರಾಮದ ವಾಸಿಯಾದ ಪ್ರತಾಪ್ @ ಚಿನ್ನಿ ಬಿನ್ ಕೆ.ಎಮ್ ಶ್ರೀನಿವಾಸ ಎಂಬುವವರು ಸದರಿ ಬಾರ್ ನಲ್ಲಿ ಮದ್ಯವನ್ನು ಪಡೆದುಕೊಂಡು ಬಂದು ತಮ್ಮ ಮನೆಯ ಹಿಂಭಾಗದಲ್ಲಿ ತಮಗೆ ಸೇರಿದ ಮನೆ ಜಾಗದಲ್ಲಿ ಕುಳಿತುಕೊಂಡು ಮದ್ಯಸೇವನೆ ಮಾಡುತ್ತಾ ಕೂಗುಗಳು ಹಾಕುತ್ತಾ ತೊಂದರೆ ನೀಡುತ್ತಿದ್ದು, ತಾವು ಸುಮಾರು ಸಲ ನಮ್ಮ ಮನೆ ಬಳಿ ಮದ್ಯಸೇವನೆ ಮಾಡಬೇಡ ಎಂದು ಬುದ್ದಿವಾದ ಹೇಳಿದರೂ ಸಹ ನಮ್ಮನ್ನೇ ಅವಾಚ್ಯವಾಗಿ ಬೈಯುತ್ತಿದ್ದನು. ದಿನಾಂಕ: 24/10/2021 ರಂದು ರಾತ್ರಿ ಸುಮಾರು 11-30 ಗಂಟೆಯಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿ ತಮ್ಮ ಮನೆಗೆ ಸೇರಿದ ಜಾಗದಲ್ಲಿ ಪ್ರತಾಪ್ @ ಚಿನ್ನಿ ಬಿನ್ ಕೆ.ಎಮ್ ಶ್ರೀನಿವಾಸ ಅತಿಕ್ರಮ ಪ್ರವೇಶ ಮಾಡಿ ಮದ್ಯ ಸೇವನೆ ಮಾಡುತ್ತಿದ್ದಾಗ, ತಾನು ಹೋಗಿ ಯಾಕಪ್ಪಾ, ಇಲ್ಲಿ ಬಂದು ಕುಡಿಯುತ್ತೀಯಾ, ಎಷ್ಠು ಸಾರಿ ಹೇಳುವುದು ನಿನಗೆ ಎಂದು ಕೇಳಿದ್ದಕ್ಕೆ, ಪ್ರತಾಪ ತನ್ನನ್ನು  ನಿನ್ನಮ್ಮನ್ನೇ ಕ್ಯಾಯ, ನೀನು ಯಾವನು ನನಗೆ ಹೇಳುವುದಕ್ಕೆ, ನಾನು ಎಲ್ಲಿಯಾದರೂ ಕುಡಿಯುತ್ತೀನಿ, ಇತ್ಯಾಧಿಯಾಗಿ ಅವಾಚ್ಯವಾಗಿ ಬೈದು ಜಗಳ ತೆಗೆದು ಕೈಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಇದ್ದ ಒಂದು ದೊಣ್ಣೆ ತೆಗೆದುಕೊಂಡು ತನ್ನ ಕಾಲುಗಳಿಗೆ ಹೊಡೆದು ನೋವುಂಟು ಮಾಡಿ, ಇನ್ನೊಂದು ಸಲ ನನಗೆ ಬುದ್ದಿ ಹೇಳಲು ಬಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಕೂಗಾಡುತ್ತಿದ್ದಾಗ ತಮ್ಮ ಬಾವಮೈದನಾದ ಎ.ದಿನೇಶ್, ತಮ್ಮ ಗ್ರಾಮದ ವಾಸಿಗಳಾದ ಬಿ.ಎಮ್ ವೆಂಕಟರೆಡ್ಡಿ ಹಾಗೂ ಅಶೋಕ್ ರವರು ತಮ್ಮ ಮನೆಯ ಬಳಿ  ಬಂದಿದ್ದು, ಪ್ರತಾಪ್ @ ಚಿನ್ನಿ ಅಲ್ಲಿಂದ ಓಡಿಹೋಗಿರುತ್ತಾನೆ. ಈ ಬಗ್ಗೆ ಗ್ರಾಮದಲ್ಲಿ ಕೆಲ ಹಿರಿಯರು ಪ್ರತಾಪ್ ನಿಗೆ ಬುದ್ಧಿವಾದ ಹೇಳೋಣ ಎಂದು ಹೇಳಿದ್ದು, ಇದುವರೆವಿಗೂ ಪ್ರತಾಪ್ ಬಾರದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡ ಪ್ರತಾಪ್ @ ಚಿನ್ನಿ ಬಿನ್ ಕೆ.ಎಮ್ ಶ್ರೀನಿವಾಸ ರವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

12.ಮಹಿಳಾ ಪೊಲೀಸ್ ಠಾಣೆ, ಮೊ.ಸಂ. 124/2021, ಕಲಂ. ಮನುಷ್ಯ ಕಾಣೆ:-

          ದಿನಾಂಕ-27/10/2021  ರಂದು  ಮದ್ಯಾಹ್ನ 01.00  ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸಂದ್ಯಾ ಕೊಂ   ಭವಾನಿ ಪ್ರಸಾದ್ 31 ವರ್ಷ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಈಗ್ಗೆ   ಸುಮಾರು ಆರು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೂಸೇಪಾಳ್ಯ ಗ್ರಾಮದ  ಮಹೇಂದ್ರ ರವರ ಮಗನಾದ  ಭವಾನಿ ಪ್ರಸಾದ್ ರವರನ್ನು ನಮ್ಮ ಸಂಪ್ರದಾಯದಂತೆ ಮದುವೆಯಾಗಿರುತ್ತೇನೆ. ನಮ್ಮ ಸಂಸಾರದಲ್ಲಿ ಇಬ್ಬರು  ಗಂಟು  ಮಕ್ಕಳಿದ್ದು  1 ನೇ ಮಗ ಸನ್ವತ್ ,2 ಈಶಾ ರವರಾಗಿರುತ್ತಾರೆ. ಈಗಿರುವಲ್ಲಿ ನಾನು ಸುಮಾರು ಎರಡು  ವರ್ಷಗಳ   ಹಿಂದೆ ಸಂಸಾರದ  ವಿಚಾರದಲ್ಲಿ ಗಲಾಟೆ ಮಾಡಿಕೊಂಡು  ನನ್ನ ಮಕ್ಕಳೊಂದಿಗೆ ನನ್ನ ತವರು ಮನೆಗೆ ಹೋಗಿ ತವರು ಮನೆಯಲ್ಲಿಯೇ  ಮಕ್ಕಳೊಂದಿಗೆ  ವಾಸವಾಗಿರುತ್ತೇನೆ ಈಗಿರುವಲ್ಲಿ  ನಾನು ಆಗಾಗ ನನ್ನ ಗಂಡನ ಮನೆಗೆ ಬರುತ್ತಿದ್ದು ಆಗ ನನ್ನ ಗಂಡ ಮತ್ತು ಅತ್ತೆ ಯಾದ   ಮಂಜುಳ ರವರು ನನ್ನನ್ನು ಮನೆಯ ಒಳಗೆ ಕರೆಯಿಸಿಕೊಳ್ಳುತ್ತಿರಲಿಲ್ಲ,ನಂತರ ನಾನು ನನ್ನ ತವರು ಮನೆಗೆ ಹೋಗಿ ವಾಸವಾಗಿದ್ದೆ.ಈಗಿರುವಲ್ಲಿ ನಾನು ದಿನಾಂಕ:20/09/2021  ರಂದು ನನ್ನ ಗಂಡನ ಮನೆಯ ಬಳಿಗೆ  ಮದ್ಯಾಹ್ನ 02.00  ಗಂಟೆಯಲ್ಲಿ ಹೋದಾಗ ನಮ್ಮ  ಅತ್ತೆಯಾದ  ಮಂಜುಳ ರವರು  ನಿನ್ನ ಗಂಡನಾದ  ಭವಾನಿ ಪ್ರಸಾದ್ ರವರು ದಿನಾಂಕ:16/09/2021ರಂದು ಮನೆಯನ್ನು ಬಿಟ್ಟು ಎಲ್ಲಿಗೋ ಹೊರಟು ಹೋಗಿರುತ್ತಾರೆಂದು ತಿಳಿಸಿದರು ನಂತರ ನನ್ನ ಗಂಡನ ಮೊಬೈಲ್ ನಂಬರ್ 9036569834 ಗೆ ಪೋನ್ ಮಾಡಿದರೆ  ಪೋನ್   ಸ್ವಿಚ್ ಆಪ್  ಬಂದಿರುತ್ತದೆ.ನಂತರ ನಾನು ನನ್ನ ಗಂಡನನ್ನು ನಮ್ಮ ನೆಂಟರ  ಮನೆಗಳಲ್ಲಿ ನನ್ನ  ಗಂಡನ ಸ್ನೇಹಿತರ ಮನೆಗಲಲ್ಲಿ ಹುಡುಕಾಡಿರುತ್ತೇನೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ನನ್ನ ಗಂಡನಾದ ಭವಾನಿ ಪ್ರಸಾದ್ 34  ವರ್ಷ ರವರನ್ನು ಎಲ್ಲಾ ಕಡೆ ಹುಡುಕಾಡಿಕೊಂಡಿದ್ದರಿಂದ ಈ  ದಿನ ತಡವಾಗಿ ಬಂದು ದೂರು  ನೀಡುತ್ತಿರುತ್ತೇನೆ ಕಾಣೆಯಾದ ನನ್ನ ಗಂಡನಾದ ಭವಾನಿ ಪ್ರಸಾದ್ 34  ವರ್ಷ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

ಇತ್ತೀಚಿನ ನವೀಕರಣ​ : 27-10-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080