ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 375/2021 ಕಲಂ. 32,34 KARNATAKA EXCISE ACT, 1965 :-

     ದಿನಾಂಕ: 25/10/2021 ರಂದು ಸಂಜೆ 5-30 ಗಂಟೆಗೆ ಮಂಜು ಬಿ.ಪಿ ಪೊಲೀಸ್ ಇನ್ಸ್ ಪೇಕ್ಟರ್ ಸಿ.ಇ,ಎನ್ ಪೊಲೀಸ್ ಠಾಣೆ ರವರು ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ನಾನು ಮತ್ತು ನನ್ನೊಂದಿಗೆ ನನ್ನ ಸಿಬ್ಬಂದಿಯವರಾದ ಹೆಚ್ ಸಿ 171 ಸುಬ್ರಮಣಿ,ಹೆಚ್ ಸಿ 195 ಹೆಚ್ ಮುರಳಿಧರ ಹಾಗೂ ಪಿಸಿ 527 ಮಧು ರವರೊಂದಿಗೆ ಕೆ,ಎ 40 ಜಿ 270  ರಲ್ಲಿ ಬಾಗೇಪ ಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಬಂದಿದ್ದು  ಅದರಂತೆ ಬಾಗೇಪಲ್ಲಿ ಪುರ ಮತ್ತು ನಲ್ಲಪ್ಪರೆಡ್ಡಿಪಲ್ಲಿ, ಗೂಳೂರು ಗ್ರಾಮಗಳ ಕಡೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ3.30 ಗಂಟೆಯ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಗೂಳೂರು ಹೋಬಳಿ ಜಿಲ್ಲಾಜಿರ್ಲಾ ಗ್ರಾಮದಲ್ಲಿ ನಾರಾಯಣಮ್ಮ ಕೋಂ ಕೃಷ್ಣಪ್ಪ   ಅವರ  ಜಮೀನಿನಲ್ಲಿ ಕಟ್ಟಿರುವ ಜಿಂಕ್ ಶೀಟ್ ಶೆಡ್ ಸಮೀಪ ಮದ್ಯಪಾನ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸಂಜೆ 4.15 ಗಂಟೆಗೆ ಸದರಿ ಗ್ರಾಮಕ್ಕೆ ಹೋಗಿ ಪಂಚಾಯಿತಿದಾರರರೊಂದಿಗೆ ದಾಳಿಮಾಡಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಸಂಜೀವಪ್ಪ ಬಿನ್ ಲೇಟ್ ಕೃಷ್ಣಪ್ಪ , 22ವರ್ಷ,ಗೊಲ್ಲರು, ಬಸ್ ಕ್ಲೀನರ್ ಕೆಲಸ ದಾಸರಮ್ಮನ ಹಳ್ಳಿ ಪಾವಗಡ ತಾಲ್ಲೂಕು, ಹಾಲಿ ವಾಸ ಜಿಲ್ಲಾಜಿರ್ಲಾ ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಸ್ಥಳದಲ್ಲಿ ಮದ್ಯದ ಪಾಕೇಟ್ ಗಳು ಇರುವ ಪ್ಲಾಸ್ಟಿಕ್ ಚೀಲ ದೊರೆತ್ತಿದ್ದು ಆಸಾಮಿಯನ್ನು ಮದ್ಯಪಾನ ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ  ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಮದ್ಯದ ಪಾಕೇಟ್ ಗಳನ್ನು ಪರಿಶೀಲಿಸಿ ನೋಡಲಾಗಿ  90 ಎಂ.ಎಲ್ ನ ಮದ್ಯತುಂಬಿರುವ 75 HAYWARDS CHEERS WHISKY ಕಂಪನಿಯ ಟೆಟ್ರಾ ಪಾಕೆಟ್ ಗಳು,  ಮದ್ಯಸೇವನೆಮಾಡಿ ಖಾಲಿಯಾಗಿರುವ 90 ಎಂ.ಎಲ್ ನ ಖಾಲಿ 2 HAYWARDS CHEERS WHISKY ಕಂಪನಿಯ ಟೆಟ್ರಾ ಪಾಕೆಟ್ ಗಳು, ಇದ್ದು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮದ್ಯತುಂಬಿರುವ 90 ಎಂ.ಎಲ್ 75 ಟೆಟ್ರಾ ಪಾಕೆಟ್ ಗಳ ಒಟ್ಟು ಮದ್ಯವು 6 ಲೀಟರ್ 750 ಎಂ.ಎಲ್ ಇದ್ದು, ಇವುಗಳ ಒಟ್ಟು ಬೆಲೆ 2634/-ರೂ ಬೆಲೆಬಾಳುವುದಾಗಿರುತ್ತೆ. ಸದರಿ ಮೇಲ್ಕಂಡ ಆಸಾಮಿಯು ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಮುಂದಿನ ಕ್ರಮಕ್ಕಾಗಿ ಸದರಿ ಆಸಾಮಿಯನ್ನು ನಮ್ಮ ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿ ಸಂಜೆ 4.15 ರಿಂದ 5.15 ಗಂಟೆಯವರೆಗೆ ಪಂಚನಾಮೆ ಕ್ರಮವನ್ನು ಜರುಗಿಸಿ, ಆರೋಪಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 376/2021 ಕಲಂ. 78(3) ) KARNATAKA POLICE ACT, 1963 :-

     ದಿನಾಂಕ: 25/10/2021 ರಂದು ಸಂಜೆ 7-15 ಗಂಟೆಗೆ ಮಂಜು ಬಿ.ಪಿ ಪೊಲೀಸ್ ಇನ್ಸ್ ಪೇಕ್ಟರ್ ಸಿ.ಇ,ಎನ್ ಪೊಲೀಸ್ ಠಾಣೆ ರವರು ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 25-10-2021 ರಂದು ಸಂಜೆ 04-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪಾತ ಬಾಗೇಪಲ್ಲಿ ಗ್ರಾಮದ ವಾಸಿಯಾದ ರಘುನಾಥರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ, 34 ವರ್ಷ, ವಕ್ಕಲಿಗರು, ಮೊಬೈಲ್ ಅಂಗಡಿ ವ್ಯಾಪಾರ ರವರು ಇತ್ತಿಚೇಗೆ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ ಹಾಗೂ ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿರುವುದಾಗಿ ಖಚಿತಿ ಮಾಹಿತಿ ಬಂದಿದ್ದು, ಮಾಹಿತಿಯಂತೆ ನಾನು ಹಾಗೂ ಸಿಬ್ಬಂದಿಯಾದ ಮಧು.ಹೆಚ್.ಕೆ, ಸಿಪಿಸಿ-527 ಮತ್ತು ಸುಬ್ರಮಣಿ, ಸಿ.ಹೆಚ್.ಸಿ-71 ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಚಿಕ್ಕಬಳ್ಳಾಪುರದಿಂದ ಹೊರಟು ಸಂಜೆ 5-35 ಗಂಟೆಗೆ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದು ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ನಂತರ ನಾವು ಮತ್ತು ಪಂಚರು ಬಾಗೇಪಲ್ಲಿ ಪಟ್ಟಣದ ಡಿವಿಜಿ ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬಳಿ ಇರುವ ರಘು ಎಲೆಕ್ಟ್ರಿಕಲ್ಸ್ ಅಂಗಡಿ ಬಳಿಗೆ ಸಂಜೆ 5-45 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಆಸಾಮಿಯು ಜನರನ್ನು ಗುಂಪಾಗಿ ಸೇರಿಸಿಕೊಂಡು ತನ್ನ ಮೊಬೈಲ್ ನಿಂದ ಇತ್ತಿಚೇಗೆ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ ಹಾಗೂ ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಟವನ್ನು ಆಡುತ್ತಿದ್ದವನನ್ನು ಖಚಿತ ಪಡಿಸಿಕೊಂಡು ನಾನು, ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯವರೊಂದಿಗೆ ಅಂಗಡಿಗೆ ಹೋಗಿ ಸುತ್ತುವರೆಯುವಷ್ಟರಲ್ಲಿ ಅಂಗಡಿಯ ಬಳಿ ಇದ್ದ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಆಸಾಮಿಯನ್ನು ವಿಚಾರ ಮಾಡಿದ್ದು, ಆಸಾಮಿಯು ಇತ್ತಿಚೇಗೆ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ ಹಾಗೂ ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಟವನ್ನು ಆಡುತ್ತಿರುವುದಾಗಿ ತಿಳಿಸಿದನು. ನಂತರ ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ರಘುನಾಥರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ, 34 ವರ್ಷ, ವಕ್ಕಲಿಗರು, ಮೊಬೈಲ್ ಅಂಗಡಿ ವ್ಯಾಪಾರ, ಪಾತ ಬಾಗೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದನು. ಆಸಾಮಿಯ ಅಂಗಶೋದನೆಯನ್ನು ಮಾಡಲಾಗಿ ಆತನ ಬಳಿ 2100/- ರೂ ನಗದು ಹಣವಿದ್ದು, ಸದರಿ ಹಣದ ಬಗ್ಗೆ ಕೇಳಲಾಗಿ ಕ್ರಿಕೆಟ್ ಬೆಟ್ಟಿಂಗ್ ಆಡಿದ್ದರಿಂದ ಬಂದಿರುವ ಹಣವೆಂದು ತಿಳಿಸಿದನು. ನಂತರ ಸದರಿ ಆಸಾಮಿಯ ಬಳಿ 02 ಮೊಬೈಲ್ ಗಳಿದ್ದು, ಒಂದು ಸ್ಯಾಮಸಂಗ್ ಎ10 ಎಸ್ ಆಂಡ್ರಾಯ್ಡ್ ಮೊಬೈಲ್ ಮತ್ತೊಂದು ಲಾವಾ ಎಲ್ ಬಿ 027 ಕೀ ಪ್ಯಾಡ್ ಮೊಬೈಲ್ ಇರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 6-00 ಗಂಟೆಯಿಂದ 7-00 ಗಂಟೆಯವರೆಗೆ ಮಹಜರ್ ಕ್ರಮವನ್ನು ಜರುಗಿಸಿ ಆರೋಪಿ, ಮಾಲುಗಳನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಸದರಿ ಆಸಾಮಿಯ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 377/2021 ಕಲಂ. 78(3) ) KARNATAKA POLICE ACT, 1963 :-

     ದಿನಾಂಕ: 25/10/2021 ರಂದು ರಾತ್ರಿ 8-30 ಗಂಟೆಗೆ  ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 25-10-2021 ರಂದು ಸಂಜೆ 7-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ, ಬಾಗೇಪಲ್ಲಿ ಪುರದ ಕೊಡಿಕೊಂಡ ಸರ್ಕಲ್ ನಲ್ಲಿ ಬಾಗೇಪಲ್ಲಿ ಪುರದ 22 ನೇ ವಾರ್ಡನ ಮಕ್ಸೂದ್ ಅಹಮದ್ ಖಾನ್ ಬಿನ್ ಲೇಟ್ ಅಬ್ದುಲ್ ಲತೀಫ್ ಖಾನ್, 32 ವರ್ಷ, ಮುಸ್ಲಿಂ ಜನಾಂಗ, ಹೋಟೆಲ್ ವ್ಯಾಪಾರ ರವರು ಈ ದಿನ  ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್ ನ ಅಪಘಾನಿಸ್ಥಾನ ಮತ್ತು ಸ್ಕಾಟ್ ಲ್ಯಾಂಡ್ ನಡುವಿನ ಪಂದ್ಯದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಮಾಹಿತಿಯಂತೆ ನಾನು ಹಾಗೂ ಸಿಬ್ಬಂದಿಯಾದ ಸಿಹೆಚ್ ಸಿ-156 ನಟರಾಜ್ ಸಿಪಿಸಿ-387 ಮೋಹನ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-1444 ರಲ್ಲಿ ಹೊರಟು ಸಂಜೆ 7-10 ಗಂಟೆಗೆ ಗಂಗಮ್ಮ ಗುಡಿಯ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ನಂತರ ನಾವು ಮತ್ತು ಪಂಚರು ಬಾಗೇಪಲ್ಲಿ ಪುರದ ಕೊಡಿಕೊಂಡ ಸರ್ಕಲ್  ಬಳಿಗೆ ಸಂಜೆ 7-15 ಗಂಟೆಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಆಸಾಮಿಯು ಜನರನ್ನು ಗುಂಪಾಗಿ ಸೇರಿಸಿಕೊಂಡು ಅದರಲ್ಲಿ ಯಾರೋ ಒಬ್ಬ  500 ರೂ ಅಪಘಾನಿಸ್ಥಾನ ಗೆಲ್ಲುತ್ತೆ, ಇನ್ನೊಬ್ಬ 500 ರೂ ಸ್ಕಾಟ್ ಲ್ಯಾಂಡ್ ಗೆಲ್ಲುತ್ತೆ ಎಂದು ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಆಡುತ್ತಿದುದ್ದನ್ನು ಖಚಿತ ಪಡಿಸಿಕೊಂಡು ನಾನು, ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸುತ್ತುವರೆಯುವಷ್ಟರಲ್ಲಿ ಸ್ಥಳದಲ್ಲಿದ್ದವರು ಅಲ್ಲಿಂದ ಓಡಿ ಹೋಗಿದ್ದು ಒಬ್ಬ ಆಸಾಮಿಯನ್ನು ಹಿಡಿದುಕೊಂಡು ವಿಚಾರ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಟವನ್ನು ಆಡುತ್ತಿರುವುದಾಗಿ ತಿಳಿಸಿದನು. ನಂತರ ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಮಕ್ಸೂದ್ ಅಹಮದ್ ಖಾನ್ ಬಿನ್ ಲೇಟ್ ಅಬ್ದುಲ್ ಲತೀಫ್ ಖಾನ್, 32 ವರ್ಷ, ಮುಸ್ಲಿಂ ಜನಾಂಗ, ಹೋಟೆಲ್ ವ್ಯಾಪಾರ, ವಾಸ: ಗಂಗಮ್ಮ ಗುಡಿ ರಸ್ತೆ, 22 ನೇ ವಾರ್ಡ, ಬಾಗೇಪಲ್ಲಿ ಪುರ ಎಂತ ತಿಳಿಸಿದನು. ಆಸಾಮಿಯ ಅಂಗಶೋದನೆಯನ್ನು ಮಾಡಲಾಗಿ ಆತನ ಬಳಿ 1500/- ರೂ ನಗದು ಹಣವಿದ್ದು, ಸದರಿ ಹಣದ ಬಗ್ಗೆ ಕೇಳಲಾಗಿ ಕ್ರಿಕೆಟ್ ಬೆಟ್ಟಿಂಗ್ ಆಡಿದ್ದರಿಂದ ಬಂದಿರುವ ಹಣವೆಂದು ತಿಳಿಸಿದನು. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 7-15 ಗಂಟೆಯಿಂದ 8-15 ಗಂಟೆಯವರೆಗೆ ಮಹಜರ್ ಕ್ರಮವನ್ನು ಜರುಗಿಸಿ ಆರೋಪಿ, ಮಾಲನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಸದರಿ ಆಸಾಮಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಮೊ.ಸಂ. 43/2021 ಕಲಂ. 419,420 ಐಪಿಸಿ & 66(D) INFORMATION TECHNOLOGY ACT 2008 :-

     ದಿನಾಂಕ:26/10/2021 ರಂದು ಪಿರ್ಯಾಧಿ  ಕೆ ವಿ ರವಿಕುಮಾರ್  ಬಿನ್ ವೆಂಕಟೇಶ್,ಎಂ, 24 ವರ್ಷ, ದೋಬಿ ಜನಾಂಗ, ಜಿರಾಯ್ತಿ ಕೆಲಸ, ವಾಸ ಕೊಂಡೇನಹಳ್ಳಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು,ಮೊ ಸಂಖ್ಯೆ: 9900819299  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ  ಜಿರಾಯ್ತಿ ಕೆಲಸವನ್ನು ಮಾಡಿಕೊಂಡು ನಮ್ಮ ತಂದೆ ತಾಯಿಯೊಂದಿಗೆ ಜೀವನ ಮಾಡಿಕೊಂಡಿರುತ್ತೇನೆ. ನಾನು ಚಿಕ್ಕಬಳ್ಳಾಪುರ  ನಗರದಲ್ಲಿನ ಹೆಚ್ ಡಿ ಎಪ್ ಸಿ ಬ್ಯಾಂಕ್ ನಲ್ಲಿ ಎಸ್ ಬಿ ಅಕೌಂಟ್ ನಂ:50100314893505 ರಂತೆ ಖಾತೆಯನ್ನು ಹೊಂದಿದ್ದು, ಈ ಖಾತೆಗೆ ಎ ಟಿ ಎಂ ಕಾರ್ಢನ್ನು ಮತ್ತು  ನನ್ನ ಮೇಲ್ಕಂಡ ಮೊಬೈಲ್ ನಂಬರ್ ನ್ನು ಲಿಂಕ್  ಮಾಡಿಕೊಂಡು ಗೂಗಲ್ ಫೇ & ಪೋನ್ ಫೇ ವ್ಯಾಲೆಟ್ ಗಳನ್ನು ಮೊಬೈಲ್ ನಲ್ಲಿ ಇನ್ಸಾಟಾಲ್ ಮಾಡಿಕೊಂಡು ಅದರಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ ತಾನು ದಿನಾಂಕ;26/07/2021 ರಂದು ಸುಮಾರು ಬೆಳಿಗ್ಗೆ 10-00 ಗಂಟೆಗೆ ನಮ್ಮ ಮನೆಯಲ್ಲಿ ಇದ್ದಾಗ ತನ್ನ  ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು ನೋಡಲಾಗಿ ನಿಮ್ಮ ಜಮೀನಿನಲ್ಲಿ ರಿಲಿಯನ್ಸ್ ಜೀಯೋ ಕಂಪನಿಯ 4 ಜಿ, ಡಿಜಿಟಲ್  ಮೊಬೈಲ್ ಟವರ್ ನ್ನು ಹಾಕುತ್ತೇವೆ. ಅದಕ್ಕೆ ನಾವು ನಿಮಗೆ ಅಡ್ವಾನ್ಸ್ 6000000/- ರೂಗಳನ್ನು & ತಿಂಗಳಿಗೆ  50,000/- ರೂಗಳ ಭಾಡಿಗೆ  ನೀಡುವುದಾಗಿ ಸಂದೇಶದಲ್ಲಿ ಇತ್ತು. & ಅವರ ಮೊಬೈಲ್ ನಂಭರ್: 8098643167 ಸಹ ಆ ಸಂದೇಶದಲ್ಲಿ ಇತ್ತು. ನಂತರ ನಾವು ನಮ್ಮ ಜಾಗದಲ್ಲಿ ಮೊಬೈಲ್ ಟವರ್ ಹಾಕಿಸೂಣವೆಂತ ಸದರಿ ನಂಬರ್ ಗೆ ಕರೆ ಮಾಡಿ ಮಾತಾಡಲಾಗಿ ಸದರಿಯವರು ವ್ಯಾಟ್ಸಾಪ್ ನಂ:7092108339 ನಂಬರಗೆ ನಿಮ್ಮ ವಿಳಾಸ, ಜಮೀನಿನ ದಾಖಲೆಗಳನ್ನು, ಆಧಾರ್ ಕಾರ್ಢ,ಗಳನ್ನು ಪೋಟೋ ಮಾಡಿ ಕಳುಹಿಸಿ. ನಿಮ್ಮ ವಿಳಾಸಕ್ಕೆ ನಾವು ಅಪ್ಲಿಕೇಷನ್ ಫಾರಂ & ಇತರೆ ದಾಖಲೆಗಳನ್ನು ಕಳುಹಿಸುತ್ತೇವೆಂತ ತಿಳಿಸಿದರು. ನಂತರ ಸುಮಾರು 15 ದಿನಗಳ ನಂತರ ನಮಗೆ ಅಂಚೆಯ ಮೂಲಕ ಒಂದು ಕವರ್ ಬಂದಿದ್ದು ತೆರೆದು ನೋಡಲಾಗಿ ಅದರಲ್ಲಿ ನಮ್ಮ ತಂದೆ ವೆಂಕಟೇಶ್ ರವರ ಹೆಸರಿನಲ್ಲಿ ಸದರಿ ಜಾಗಕ್ಕೆ 60 ಲಕ್ಷ ಮುಂಗಡ ಹಣ, ಜಾಗಕ್ಕೆ ಬಾಡಿಗೆ 50 ಸಾವಿರ, 10 ವರ್ಷಗಳ ಅಗ್ರಿಮೆಂಟ್ & ಟಲಿಕಾಂ ಲೈಸನ್ಸ್ ಪೀ 36,900/- ಕಟ್ಟಬೇಕು  ಅಂತ ಮಾಹಿತಿಗಳಿರುವ  ಜಿಯೋ ಲೆಟರ್ ಹೆಡ್ ಇರುವ ಸೂಚನಾ ಪತ್ರ & ಅಪ್ಲಿಕೇಷನ್ ಫಾರಂ, ಜಿಯೋ ಲೈಸನ್ಸ್ ದಾಖಲೆಗಳು ಇದ್ದವು. ನಂತರ ದಿನಾಂಕ:23/9/2021 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ನಂ:1664001700051836 ಖಾತೆಗೆ ಹಣ ಕಳುಹಿಸಲು ನಮಗೆ ವ್ಯಾಟ್ಸಾಪ್ ನಲ್ಲಿ ತಿಳಿಸಿದ. ಅದರಂತೆ ನಾನು ಅದೇ ದಿನ 36,900/- ರೂಗಳನ್ನು ಆಕಾಶ್ ಕುಮಾರ್  ಎಂಬ ಹೆಸರಿನ ಮೇಲ್ಕಂಡ ಅವನು ಕಳುಹಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಚಲನ್ ಮೂಲಕ ಜಮೇ ಮಾಡಿರುತ್ತೇನೆ. ನಂತರ ದಿನಾಂಕ:24/08/2021 ರಂದು ಮೊಬೈಲ್ ಸಂಖ್ಯೆ: 7092108339 ನಿಂದ  ಕರೆ ಮಾಡಿ ಅಗ್ರಿಮೆಂಟ್ ಪೀ 76,000/- ರೂಗಳನ್ನು ಮೇಲ್ಕಂಡ ಆಕಾಶ್ ಕುಮಾರ್ ರವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ನಂ:1664001700051836  ಕ್ಕೆ ಕಳುಹಿಸಲು ತಿಳಿಸಿದ. ನಂತರ ನಾನು ಅದೇ ದಿನ ಮೇಲ್ಕಂಡ ಖಾತೆಗೆ 76000/- ರೂಗಳನ್ನು  ಪಂಜಾಬ್ ನ್ಯಾಷನಲ್ ಬ್ಯಾಂಕ್ ಚಿಕ್ಕಬಳ್ಳಾಪುರ ಶಾಖೆಯಲ್ಲಿ ನಗದು ಕೊಟ್ಟು ಚಲನ್ ಮೂಲಕ ಹಣ ಕಳುಹಿಸಿದೆ. ನಂತರ ಪುನಃ ದಿನಾಂಕ:25/8/2021 ರಂದು ಕರೆ ಮಾಡಿ ಜಿ ಎಸ್ ಟಿ  ರೂ 1,20,000/- ರೂಗಳನ್ನು ಕಳುಹಿಸಲು ತಿಳಿಸಿದ, ನಂತರ ನಾನು ದಿನಾಂಕ:25/08/2021 ರಂದೇ ಮೇಲ್ಕಂಡ ಖಾತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಚಿಕ್ಕಬಳ್ಳಾಪುರ ಶಾಖೆಯಲ್ಲಿ  1.20.000/- ರೂಗಳ ನಗದು ಕೊಟ್ಟು ಚಲನ್ ಮೂಲಕ ಕಳುಹಿಸಿರುತ್ತೇವೆ. ನಂತರ ಪುನಃ ಮೇಲ್ಕಂಡ ಮೊ ಸಂಖ್ಯೆ: 7478469958 ಸಂಖ್ಯೆಯಿಂದ  ದಿನಾಂಕ:26/8/2021 ರಂಧು ಕರೆ ಮಾಡಿ ಸ್ಟೇಟ್ ಜಿ ಎಸ್ ಟಿ 1,20,000/- ರೂಗಳನ್ನು ಕಟ್ಟ ಬೇಕು ಅಂತ ಹೇಳಿದ.ಆಗ ನನಗೆ ಅನುಮಾನ ಬಂದು ಇವರು ನನಗೆ ಏನೋ ವಂಚನೆ ಮಾಡುತ್ತಿದ್ದಾರೇನೋ ಅಂತ ಅನುಮಾನ ಬಂತು. ಆದರೆ ನೊಡೋಣವೆಂತ ಟವರ್ ಹಾಕುತ್ತಾರೆನೋ ನೊಡೋಣಾ ಅಂತ ಈ ತನಕ ಕಾದೆ. ಅವರು ಆಗಾಗ  ಕಾಲ್ ಮಾಡಿ ಸ್ಟೇಟ್ ಜಿ ಎಸ್ ಟಿ 1,20,000/- ರೂಗಳನ್ನು ಕಟ್ಟಿಬಿಡಿ, ನಿಮ್ಮ ಮುಂಗಡ ಹಣ 60 ಲಕ್ಷಗಳು ನಿಮ್ಮ ಖಾತೆಗೆ ಜಮೇ ಮಾಡುತ್ತೇವೆಂತ ಹೇಳಿದರು. ಆದರೆ ಇದು ವಂಚನೆ ಅಂತ ನನಗೆ ತಿಳಿಯಿತು. ಅದರಿಂದ ನಾನು ಹಣ  ಹಾಕಲಿಲ್ಲ. ಈಗೆ ನಮ್ಮ ಜಮೀನಿನಲ್ಲಿ ಜಿಯೋ ಕಂಪನಿಯ ಟವರ್ ಹಾಕುವುದಾಗಿ ನಂಬಿಸಿ ನಮ್ಮಿಂದ ವಿವಿಧ ಚಾರ್ಜಗಳಿಗೆ ಅಂತ  ಒಟ್ಟು 2,32,900/- ರೂಗಳನ್ನು ಚಲನ್  ಮೂಲಕ ಆಪಾಧಿತನು ಮೇಲ್ಕಂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ಗೆ ಪಡೆದು ಮೊಬೈಲ್ ಟವರ್ ನ್ನು ಹಾಕದೆ & ಹಣವನ್ನು ವಾಪಸ್ಸು ನೀಡದೆ ಜಿಯೋ ಕಂಪನಿಯ ಹೆಸರನ್ನು ಹೇಳಿ ವಂಚಿಸಿರುವ ಮೇಲ್ಕಂಡ ಮೊಬೈಲ್ ಸಂಖ್ಯೆಗಳ & ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್  ಬಳಕೆದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ಮತ್ತು ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಲು ಕೋರಿ  ದೂರು.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 87/2021 ಕಲಂ. 15(A),32(3) KARNATAKA EXCISE ACT, 1965:-

     ದಿನಾಂಕ:26-10-2021 ರಂದು ಪಿರ್ಯಾಧಿ ಶ್ರೀ ನರಸಿಂಹಮೂರ್ತಿ ಸಿ.ಹೆಚ್.ಸಿ-50 ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಮಧ್ಯಾಹ್ನ 12-45 ಗಂಟೆಯಲ್ಲಿ ಠಾಣೆಗೆ ಹಾಜರಾಗಿಕೊಟ್ಟ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:-26/10/2021 ರಂದು ತಾನು ಹಾಗೂ ತಮ್ಮ ಠಾಣೆಯ ಸಿಬ್ಬಂದಿ ಸಿ.ಪಿ.ಸಿ-152 ಶ್ರೀ ಜಯಣ್ಣ ರವರು ತಮ್ಮ ಠಾಣೆಯ ಸಿ.ಪಿ.ಐ ಶ್ರೀ ಬಿ.ಪಿ ಮಂಜು ರವರ ಆದೇಶದಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಬಿ.ಬಿ ರಸ್ತೆ, ಬಜಾರ್ ರಸ್ತೆ ಕಡೆಗೆ ಗಸ್ತು ಮಾಡಿಕೊಂಡು ಬೆಳಿಗ್ಗೆ 11-00 ಗಂಟೆಗೆ ನಗರದ ಸಂತೆ ಮಾರಿಕಟ್ಟೆಯ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಧ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಬಂದ ಮಾಹಿತಿಯನ್ನು ತಿಳಿಸಿ  ನಂತರ ತಾವು ಮತ್ತು ಪಂಚರು ದ್ವಿಚಕ್ರವಾಹನಗಳಲ್ಲಿ ಮೇಲ್ಕಂಡ ಸ್ಥಳಕ್ಕೆ 11-15 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಸೇವನೆ ಮಾಡುತ್ತಿದ್ದು, ತಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಹನುಮಂತಪ್ಪ ಬಿನ್ ಲೇಟ್ ಮರಿಯಪ್ಪ 45 ವರ್ಷ, ಕೂಲಿ ಕೆಲಸ, ನಾಯಕ ಜನಾಂಗ, ಕಾಡದಿಬ್ಬೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಸ್ಥಳದಲ್ಲಿ 15 ಮಧ್ಯತುಂಬಿರುವ 90 ಎಂ.ಎಲ್ ನ HAYWARDS CHEERS WHISKY TETRA ಪಾಕೆಟ್ ಗಳು, ಒಂದು ಖಾಲಿ ವಾಟರ್ ಬಾಟೆಲ್, 02 ಪ್ಲಾಸ್ಟಿಕ್ ಗ್ಲಾಸ್ ಗಳು, 02 ಖಾಲಿಯಾಗಿರುವ 90 ಎಂ.ಎಲ್ ನ  HAYWARDS CHEERS WHISKY TETRA ಪಾಕೆಟ್ ಗಳಿದ್ದು, ಮದ್ಯ ತುಂಬಿರುವ ಪ್ರತಿಯೊಂದರ ಬೆಲೆ 35.13 ರೂಗಳಂತೆ ಒಟ್ಟು 527/- ರೂ ಗಳಾಗಿದ್ದು, ಒಟ್ಟು ಮಧ್ಯವು 01 ಲೀಟರ್ 350 ಎಂ.ಎಲ್ ಆಗಿರುತ್ತೆ ನಂತರ ಮೇಲ್ಕಂಡ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲುಗಳು, ಅಸಲು ಪಂಚನಾಮೆ ಹಾಗೂ ವರದಿಯೊಂದಿಯನ್ನು ನೀಡಿದ್ದರ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 468/2021 ಕಲಂ. 379 ಐಪಿಸಿ :-

     ದಿನಾಂಕ 26-10-2021 ರಂದು ಬೆಳಗ್ಗೆ 10-00 ಗಂಟೆಗೆ ಬಿ.ಪ್ರಸಾದ್ ಬಿನ್ ಬಚ್ಚಿರೆಡ್ಡಿ ಎಂ.ಪಿ. 40 ವರ್ಷ, ಕಿರಿಯ ಅಬಿಯಂತರರು, ನಗರ ಸಭೆ, ಚಿಂತಾಮಣಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಮದರೆ ತಾನು ಚಿಂತಾಮಣಿ ನಗರ ಸಭೆಯಲ್ಲಿ ಸುಮಾರು 08 ತಿಂಗಳಿನಿಂದ ಕಿರಿಯ ಅಬಿಯಂತರನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ತಮ್ಮ ನಗರಸಭೆಗೆ ಸೇರಿದ ವಾರ್ಡ್ ನಂ 31 ರ ತಿಮ್ಮಸಂದ್ರದಲ್ಲಿ ಆಂಜನೇಯಸ್ವಾಮಿ ದೇವಾಲಯದ ಬಳಿ ಕೊಳವೆ ಬಾವಿ ಇರುತ್ತೆ. ಹೀಗಿರುವಾಗ ದಿನಾಂಕ 15-10-2021 ರಂದು ಕೊಳವೆ ಬಾವಿ ದುರಸ್ಥಿಯಾಗಿದ್ದು ರಿಪೇರಿ ಮಾಡುವ ಸಲುವಾಗಿ ಪಂಪ್, ಮೋಟಾರ್, ಕೇಬಲ್, ಜಿಐ ಪೈಪ್ ಅನ್ನು ಹೊರತೆಗೆದಿರುತ್ತೇವೆ. ಕೇಬಲ್ ಮತ್ತು ಪೈಪ್ ಅನ್ನು ಕೊಳವೆ ಬಾವಿಯ ಬಳಿ ಬಿಟ್ಟಿರುತ್ತೇವೆ. ಸದರಿ ಸಾಮಾಗ್ರಿಗಳನ್ನು ನೋಡಿಕೊಳ್ಳುವ ಸಲುವಾಗಿ ತಮ್ಮ ಕಚೇರಿಯ ವಾಟರ್ ಮೆನ್ ಆದ ರಮೇಶ್ ರವರಿಗೆ ಸೂಚಿಸಿರುತ್ತೆ. ಹೀಗಿರುವಾಗ ದಿನಾಂಕ 16-10-2021 ರಂದು ಬೆಳಗ್ಗೆ 7-00 ಗಂಟೆ ಸಮಯದಲ್ಲಿ ಮೇಲ್ಕಂಡ ರಮೇಶ್ ರವರು ತನಗೆ ಕರೆ ಮಾಡಿ ತಮ್ಮ ಕೊಳವೆ ಬಾವಿ ಬಳಿ ಇದ್ದ ಕೇಬಲ್ ಕಳುವಾಗಿರುವುದಾಗಿ ತಿಳಿಸಿದನು. ತಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 500 ಮೀಟರ್ ಕೇಬಲ್ ವೈರನ್ನು ಯಾರೋ ಕಳ್ಳರು ದಿನಾಂಕ 15-10-2021 ರಂದು ರಾತ್ರಿ 9-00 ಗಂಟೆಯಿಂದ 16-10-2021 ರ ಬೆಳಗ್ಗೆ 7-00 ಗಂಟೆ ಮದ್ಯೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ಕೇಬಲ್ ಮೌಲ್ಯ ಸುಮಾರು 40,000/-ರೂ ಆಗಿರುತ್ತೆ. ಸದರಿ ಕಳ್ಳತನದ ವಿಚಾರವನ್ನು ತಮ್ಮ ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡ ತಮ್ಮ ಬಾಬತ್ತು ಕೇಬಲ್ ವೈರ್ ಅನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ಕೋರಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 198/2021 ಕಲಂ. 78(3) KARNATAKA POLICE ACT, 1963 :-

     ದಿನಾಂಕ:- 25/10/2021 ರಂದು ಮದ್ಯಾಹ್ನ 13-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೇಣು ಹೆಚ್.ಸಿ 110 ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:-25/10/2021 ರಂದು ಪಿ.ಐ ಸಾಹೇಬರ ಆದೇಶದಂತೆ ತನಗೆ ಹಾಗೂ ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ನೇಮಿಸಿದ್ದು, ಅದರಂತೆ ತಾವು ಚಿಂತಾಮಣಿ ನಗರದ ಆದರ್ಶ ಟಾಕೀಸ್, ಊರಮುಂದೆ ಕಡೆ ಗಸ್ತು ಮಾಡುತ್ತಿದ್ದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಗರದ ಮೇಹಬೂಬ್ ಸರ್ಕಲ್ ನಲ್ಲಿರುವ ಅಮ್ಜಾದ್ ಟೀ ಅಂಗಡಿಯಲ್ಲಿ ಒಬ್ಬ ಆಸಾಮಿಯು ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಮತ್ತು ಚಿಂತಾಮಣಿ ನಗರ ಠಾಣೆಯ ಹೆಚ್.ಸಿ 177 ಸರ್ವೇಶ್ ರವರು ನಮ್ಮ ಜೊತೆಯಲ್ಲಿ ಪಂಚರಿಗೆ ವಿಚಾರ ತಿಳಿಸಿ ಪಂಚರೊಂದಿಗೆ ಮೆಹಬೂಬ್ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಟೀ ಅಂಗಡಿಯ ಒಳಗೆ ಯಾರೋ ಒಬ್ಬ ಆಸಾಮಿಯು ಒಂದು ಪೆನ್ ,ಪೇಪರ್ ಹಿಡಿದುಕೊಂಡು 1 ರೂಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಬರೆಯುತ್ತಿದ್ದು ತಾವು ದಾಳಿ ಮಾಡಿದಾಗ ತಮ್ಮನ್ನು ನೋಡಿ ಮಟ್ಕಾ ಚೀಟಿ ಬರೆಯುತ್ತಿದ್ದ ಆಸಾಮಿಯು ತನ್ನ ಬಳಿ ಇದ್ದ ಪೆನ್, ಮಟ್ಕಾ ಚೀಟಿ ಮತ್ತು ಹಣವನ್ನು ಅಲ್ಲಿಯೇ ಬಿಸಾಕಿ ಓಡಿ ಹೋಗಿರುತ್ತಾನೆ. ಬಾತ್ಮಿದಾರರಿಂದ ಆತನ ಹೆಸರು, ವಿಳಾಸ ಕೇಳಲಾಗಿ ಅಮ್ಜಾದ್ ಖಾನ್ ಬಿನ್ ಲೇಟ್ ಪ್ಯಾರೇಜಾನ್, 35 ವರ್ಷ, ಮುಸ್ಲಿಂ ಜನಾಂಗ, ಟೀ ಅಂಗಡಿ ವ್ಯಾಪಾರ, ವಾಸ: ಹೈದರಾಲಿ ನಗರ,ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸದರಿ ಮಾಲುಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗಿ, ಒಂದು ಬಾಲ್ ಮಾಯಿಂಟ್ ಪೆನ್, ಒಂದು ಮಟ್ಕಾ ಚೀಟಿ ಮತ್ತು 880 ರೂ ನಗರದು ಹಣ ಇದ್ದು, ಸದರಿ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಮೇಲ್ಕಂಡ ಆಸಾಮಿಯ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 152/2021 ಕಲಂ. 341,323,324,504,506 ರೆ/ವಿ 34 ಐಪಿಸಿ :-

     ದಿನಾಂಕ:25/10/2021 ರಂದು ರಾತ್ರಿ 21-30 ಗಂಟೆಗೆ ಪಿರ್ಯಾದಿದಾರರಾದ ಮಾದುರಿಯಾ @ ಮಾಧುರಿ ಕೊಂ ಶಿವಣ್ಣ ,22 ವರ್ಷ, ಹಕ್ಕಿ ಪಿಕ್ಕಿ ಜನಾಂಗ, ಗೃಹಿಣಿ ,ವಾಸ:ಬಾಳೆಗೌಡನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ರವರು ಠಾಣೆಗೆ ಹಾಝರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೆನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.  ನಮ್ಮ ಮನೆಯಲ್ಲಿ ನನ್ನ ಗಂಡ ಶಿವಣ್ಣ ಹಾಗೂ ಮಕ್ಕಳು ಇರುತ್ತಾರೆ. ನನಗೆ ನಮ್ಮ ಗ್ರಾಮದ ರಾಜು ಬಿನ್ ಬಾಬ್ ಜಾನ್, 35 ವರ್ಷ, ಮತ್ತು  ಭುಜ್ಜಿ ಕೊಂ ರಾಜು ರವರು  ಪರಿಚಯದವರಾಗಿರುತ್ತಾರೆ. ಈಗ್ಗೆ 5 ತಿಂಗಳ ಹಿಂದೆ ರಾಜು ರವರ ನಮ್ಮ ಮನೆಯ ಬಳಿ ಬಂದು ತಾನು ವ್ಯಾಪಾರ ಮಾಡಲು ಸಾಲವಾಗಿ  ಹಣ ಕೇಳಿದ್ದು ಅದಕ್ಕೆ ನಾವು  ನಮ್ಮ ಬಳಿ ಹಣವಿಲ್ಲ  ನಾವು ಎಲ್ಲಿಯಾದರೂ ಸಾಲ ಪಡೆದುಕೊಂಡು ಕೊಡುತ್ತೇವೆಂದು  ಹೇಳಿ ನಮ್ಮ ಅಣ್ಣನಾದ ನರಸಿಂಹ ರವರಿಂದ ನಾವು ಹಣವನ್ನು ಸಾಲವಾಗಿ ಪಡೆದು 75 ಸಾವಿರ ರೂಗಳನ್ನು ರಾಜು ರವರಿಗೆ ನೀಡಿರುತ್ತೇವೆ. ಅಂದಿನಿಂದ ರಾಜು ರವರ ನಮ್ಮ ಮನೆಯ ಕಡೆಗೆ ಬಾರದೆ ಇದ್ದರು. ದಿನಾಂಕ:25/10/2021 ರಂದು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ರಾಜು ರವರ ಮನೆಯ ಬಳಿ ಹೋಗಿ ರಾಜು ರವರಿಗೆ ನೀವು ನಮ್ಮಿಂದ ಹಣವನ್ನು ಸಾಲವಾಗಿ ಪಡೆದು ಈಗ್ಗೆ4-5 ತಿಂಗಳುಗಳು ಆಗುತ್ತಿದೆ ಆದರೆ ಇದುವರೆವಿಗೂ ಸಾಲವನ್ನು ವಾಪಸ್ಸು ಮಾಡಿರುವುದಿಲ್ಲವೆಂದು ಕೇಳಿದೆನು. ಅಗ ರಾಜು ರವರ ನಮ್ಮ ಬಳಿ ಸಧ್ಯ ಪರಿಸ್ಥಿತಿಯಲ್ಲಿ ಯಾವುದೇ ಹಣವಿಲ್ಲ ನಿಮ್ಮ ಹಣವನ್ನು ಆದಷ್ಟು ಬೇಗ  ವಾಪಸ್ಸು ಕೊಡುತ್ತೇನೆಂದು ಹೇಳಿದರು ಆಗ ನಾನು ಅವರ ಮನೆಯ ಬಳಿಯಿಂದ  ನಮ್ಮ ಮನೆಯ ಬಳಿಗೆ ಬರಲು ವಾಪಸ್ಸು ಬರುತ್ತಿದ್ದಾಗ ರಾಜು ರವರ ಹೆಂಡತಿಯಾದ ಭುಜ್ಜಿ ರವರು ಏಕಾಏಕಿ  ನನ್ನ ಬಳಿ ಬಂದು ನನ್ನನ್ನು ಮುಂದಕ್ಕೆ ಹೋಗದಂತೆ  ಅಡ್ಡಗಟ್ಟಿ ತಡೆದು ಲಂಜಾ ಮುಂಡಾ  ಕಾಸು ಕೇಳಲು ನಮ್ಮ ಮನೆಯ ಬಳಿಗೆ ಬಂದಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ತೆಗೆದು ಅಲ್ಲಿಯೇ ಇದ್ದ ದೊಣ್ಣೆಯನ್ನು ತೆಗೆದುಕೊಂಡು ನನ್ನ ಬೆನ್ನಿನ ಮೇಲೆ ಹೊಡೆದು ಮೂಗೇಟು ಮಾಡಿ ನನ್ನ ಜುಟ್ಟು ಎರಡು ಕೈಗಳಿಂದ ಹಿಡಿದುಕೊಂಡು  ಕೈಗಳಿಂದ ಮೈಮೇಲೆ ಹೊಡೆದಳು ಆಗ ನಾನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಭುಜ್ಜಿರವರು ನನ್ನ ಬಲ ಮೊಣ ಕೈನ  ಮೇಲೆ ಕಚ್ಚಿ ರಕ್ತಗಾಯಪಡಿಸಿದಳು. ನಾನು ಜೋರಾಗಿ ಕಿರುಚಿಕೊಂಡಾಗ  ಗಲಾಟೆ ಶಬ್ದವನ್ನು ಕೇಳಿ ನನ್ನ  ಗಂಡ ಗಲಾಟೆಯನ್ನು ಬಿಡಿಸಲು ಅಲ್ಲಿಗೆ ಬಂದಾಗ ರಾಜು ರವರು ನನ್ನ ಗಂಡ ಶಿವಣ್ಣ ರವರನ್ನು ಕುರಿತು ಈನಾ ಕೊಡಕು ವಚ್ಚಾ ಲೋಫರ್ ನಾಕೊಡಕು ಎಂದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಗಂಡನ ಮೇಲೆ  ಗಲಾಟೆ ತೆಗೆದು ಕೈಗಳಿಂದ ಹೊಡೆದಿರುತ್ತಾನೆ. ನಂತರ ರಾಜು ಮತ್ತು ಭುಜ್ಜಿ ರವರು ಇವರನ್ನು ಇಲ್ಲಿಯೇ ಸಾಯಿಸಿಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿದರು ಅಷ್ಟರಲ್ಲಿ ಅಲ್ಲಿಗೆ ಬಂದ ಗೋಪಿನಾಥ  ಬಿನ್ ಬನ್ನಿಸ್ ,50 ವರ್ಷ,  ರವರು ಗಲಾಟೆಯನ್ನು ಬಿಡಿಸಿ ನಮ್ಮನ್ನು ಮನೆಗೆ ಕಳುಹಿಸಿರುತ್ತಾರೆ.ನನಗೆ ಮೊಣಕೈ ನೋವು ಜಾಸ್ತಿಯಾದ ಕಾರಣ ನಾನು ಗಂಜಿಗುಂಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು  ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ನಮ್ಮ ಮೇಲೆ ಗಲಾಟೆ ಮಾಡಿರುವ ರಾಜು ಮತ್ತು ಭುಜ್ಜಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ  ಮೇರೆಗೆ  ಮೊ.ಸಂಖ್ಯೆ:152/2021 ಕಲಂ:341,323,324,504,506 ರೆ-ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 288/2021 ಕಲಂ. 454,380 ಐಪಿಸಿ :-

     ದಿನಾಂಕ:26/10/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ರಾಮಚಂದ್ರಪ್ಪ ಬಿನ್ ವೆಂಕಟರವಣಪ್ಪ, 50 ವರ್ಷ, ಜಿರಾಯ್ತಿ, ವಾಸ ಹುದುಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:20/10/2021 ರಂದು ಬೆಳಿಗ್ಗೆ 6-00 ಗಂಟೆಗೆ ನನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಜಮೀನಿನ ಕೆಲಸಕ್ಕೆ ದಿನ್ನೆಗೆ ಹೋಗಿರುತ್ತೇವೆ. ಮನೆಗೆ ಬೀಗವನ್ನು ಹಾಕಿರುತ್ತೇವೆ. ಜಮೀನಿನ ಕೆಲಸ ಮುಗಿಸಿಕೊಂಡು ಸುಮಾರು 2-00 ಗಂಟೆಗೆ ಮನೆಗೆ ವಾಪಸ್ಸು ಬಂದಾಗ ನಮ್ಮ ಮನೆಯ ಬೀಗವನ್ನು ಯಾರೋ ಕಳ್ಳರು ಹೊಡೆದು ಹಾಕಿ ಯಾಂಗಿಗ್ಸ್ ಸುಮಾರು 04 ಗ್ರಾಂ, 10 ಗ್ರಾಂ ಬಂಗಾರದ ಚೈನ್ ಹಾಗೂ 35,000/- ರೂ ಹಣವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ. ನಾವು ನಮ್ಮ ಬಾವಮೈದನಿಗೆ ವಿಷಯ ತಿಳಿಸಿದಾಗ ನಾನು ಸಹ ಬರುತ್ತೇನೆ. ಪೊಲೀಸ್  ಠಾಣೆಗೆ ದೂರು ನೀಡಲು ಎಂದು ಹೇಳುತ್ತಾನೆ. ಅವರು ಬರಲು ಸ್ವಲ್ಪ ತಡವಾದ್ದರಿಂದ  ದೂರು ನೀಡಲು ತಡವಾಗಿರುತ್ತದೆ.  ಆದ್ದರಿಂದ ಅವನು ಬಂದ ಮೇಲೆ ಬಂದು ದೂರು ನೀಡಿರುತ್ತೇವೆ. ಕಳುವಾಗಿರುವ ಒಡವೆ ಮತ್ತು ಹಣದ ಒಟ್ಟು ಮೌಲ್ಯ 1,00,000/- (ಒಂದು ಲಕ್ಷ) ರೂಗಳಾಗಿರುತ್ತದೆ. ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ವಿನಂತಿ.

 

10. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 168/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 25/10/2021 ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಪಿಸಿ 318 ರವರು ನ್ಯಾಯಾಲಯದಿಂದ ಪ್ರಕರಣವನ್ನು ದಾಖಲು ಮಾಡಲು ಅನುಮತಿ ಪತ್ರ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:07-10-2021  ರಂದು ಸಂಜೆ 6-30  ಗಂಟೆಯಲ್ಲಿ ಪಿ.ಎಸ್.ಐ. ಮತ್ತು ಸಿಬ್ಬಂದಿಯಾದ ಹೆಚ್ ಸಿ-226 ಲಿಂಗಪ್ಪ, ಹಾಗೂ ಪಿಸಿ 201  ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-92 ರಲ್ಲಿ ರೈಲ್ವೈಸ್ಟೇಷನ್ ರಸ್ತೆಗೆ ಹೋಗಿ ಅಲ್ಲಿ ಪಂಚರನ್ನು ಬರಮಾಡಿ ಕೊಂಡು ಅವರೊಂದಿಗೆ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ  ಮಾಯಕೊಂಡ್ಲ ದಾಮೋದರ್ ಬಿನ್ ಮಾಯಕೊಂಡ್ಲ ಹರಿದಾಸ್, 32 ವರ್ಷ, ಮಗ್ಗದ ಕೆಲಸ, ರೈಲ್ವೈ ಸ್ಟೇಷನ್ ಬಳಿ, ಕೊತ್ತಪೇಟೆ, ಮನೆ ನಂಬರ್ 30#461 ಧರ್ಮವರಂ, ಆನಂತರ ಪುರ ಜಿಲ್ಲೆ. ಪೋ.ನಂ. 97010933921, 81429670401  ಎಂದು ತಿಳಿಸಿದನು. ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಸಿಲಿವರ್ ಕಪ್ ಕೇರ್ ಇಂಡಿಯನ್  ಕಂಪನಿಯ 10 ಟೆಟ್ರಾ ಪಾಕೆಟ್ ಗಳು 2)  2 ಖಾಲಿ 90 ಸಿಲಿವರ್ ಕಪ್ ಕೇರ್ ಇಂಡಿಯನ್  ಕಂಪನಿಯ 02 ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4) ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ ಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 27.98 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 279.8  ರೂ ಗಳಾಗಿರುತ್ತೆ.ಮತ್ತು ಇದರ ಒಟ್ಟು ಮಧ್ಯೆ ದ ದ್ರವ್ಯ  ಪ್ರಮಾಣ  ಆಸಾಮಿ ಮತ್ತು ಮಾಲುಗಳನ್ನು ರಾತ್ರಿ 6-45  ಗಂಟೆಯವರೆಗೆ  7-30 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್. ನ್ನು ದಾಖಲು ಮಾಡಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಈ ದಿನ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 

11. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 169/2021 ಕಲಂ. 279,337 ಐಪಿಸಿ :-

     ದಿನಾಂಕ;25/10/2021 ರಂದು ರಾತ್ರಿ 23-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ ಮಹಮದ್ ಅರುನ್ ಬಿನ್ ಹಬಿಸಾಬಿ ಆದ ತಾನು ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಾಸಿಯಾಗಿದ್ದು ನಿನ್ನೆ ರಾತ್ರಿ 24/10/2021 ರಂದು ರಾತ್ರಿ ಹಿರೇಬಿದನೂರಿನ ಬಳಿ ತನ್ನ ಜೊತೆ ಕೆಲಸ ಮಾಡಿದ ಕೂಲಿಯವರೆಗೆ ಕೂಲಿಯನ್ನು ಪಾವತಿ ಮಾರುತ್ತಿರುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಕಡೆಯಿಂದ ವೇಗವಾಗಿ ಬಂದ ಆಟೋ ಬಂದು ತನ್ನನ್ನು ಗುದ್ದಿಕೊಂಡು ಹೋಗಿರುತ್ತದೆ ಆಟೋ ನಂಬರ್ ಕೆಎ-40 ಎ-6937 ತಾನು ಪ್ರಜ್ಙನೆ ತಪ್ಪಿ ಸ್ಥಳದಲ್ಲೆ ಬಿದ್ದಿದ್ದು ತಲೆಗೆ ಪೆಟ್ಟಾಗಿದ್ದರಿಂದ ತೀವ್ರ ರಕ್ತ ಸ್ರಾವ ಆಗಿದ್ದರಿಂದ ತನ್ನ ಸ್ನೇಹಿತರು ಸಮಯ ಸುಮಾರು 8;40 ರಲ್ಲಿ ಆಗಿರುತ್ತದೆ. ತನ್ನನ್ನು ಆಸ್ಪತ್ರೆಗೆ ದಾಖಲಿಸಿ ಕೆಲವರು ಸ್ನೇಹಿತರು  ಆಟೋವನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿರುತ್ತಾರೆ ತನಗೆ ತಲೆಗೆ 5 ಹೊಲಿಗೆ ಬಿದ್ದಿದ್ದು ಕಾಲಿಗೆ ಪ್ರಾಕ್ಚರ್ ಆಗಿದೆ ದೇಹದಲ್ಲಿ ಗಾಯಗಳಾಗಿವೆ ಆದ್ದರಿಂದ ತಾವುಗಳು ತನಗೆ ಅಪಘಾತ ಮಾಡಿದ ಆರೋಪಿಯ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

12. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 170/2021 ಕಲಂ. 323,325,504 ಐಪಿಸಿ :-

     ದಿನಾಂಕ 26/10/2021 ರಂದು ಬೆಳಿಗ್ಗೆ 10:45 ಗಂಟೆಯಲ್ಲಿ ಗಾಯಾಳು ಶ್ರೀಮತಿ ರತ್ನಮ್ಮ ಎ ಕೋಂ ಶ್ರೀನಿವಾಸ ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನನ್ನು ಮುದಲೋಡು ಗ್ರಾಮದ ನಾರಾಯಣಪ್ಪನ ಮಗನಾದ ಶ್ರೀನಿವಾಸ ರವರಿಗೆ 11 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ. ನಮಗೆ ತಿಮ್ಮರಾಜು ಎಂಬುವರು ಪರಿಚಯವಿರುತ್ತಾರೆ. ತಿಮ್ಮರಾಜು ರವರು ನನ್ನ ಗಂಡನೊಂದಿಗೆ ಆಗ್ಗಾಗ್ಗೆ ಮಾತನಾಡುತ್ತಿದ್ದರು. ದಿನಾಂಕ 25/10/2021 ರಂದು ನಾನು ಕೆಲಸ ಮುಗಿಸಿಕೊಂಡು ಸಂಜೆ 6:00 ಗಂಟೆಯಲ್ಲಿ ಮನೆಗೆ ವಾಪಸ್ಸು ಬಂದಿರುತ್ತೇನೆ. ನಂತರ ನಾನು ತಿಮ್ಮರಾಜು ರವರನ್ನು ಮನೆಗೆ ಕರೆಸಿಕೊಂಡಿರುತ್ತೇನೆ. ನಾನು ಮತ್ತು ತಿಮ್ಮರಾಜು ರವರು ಮನೆಯಲ್ಲಿರುವಾಗ ಸಂಜೆ 6:15 ಗಂಟೆಯಲ್ಲಿ ನನ್ನ ಗಂಡ ಶ್ರೀನಿವಾಸ ರವರು ಮನೆಗೆ ಬಂದಿರುತ್ತಾರೆ. ಮನೆಯಲ್ಲಿ ನಾವಿಬ್ಬರು ಇದ್ದದ್ದನ್ನ ಕಂಡು ನನ್ನ ಗಂಡ ಶ್ರೀನಿವಾಸ ರವರು ಅವಾಚ್ಯ ಶಬ್ದಗಳಿಂದ ಬೈದು ನನ್ನ ತಲೆಯನ್ನು ಮನೆಯ ಗೋಡೆಗೆ ಚಚ್ಚಿರುತ್ತಾನೆ. ನಂತರ ಕೈಗಳಿಂದ ನನ್ನ ಎದೆಯ ಭಾಗಕ್ಕೆ ಗುದ್ದಿರುತ್ತಾರೆ. ನಂತರ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುತ್ತೇನೆ. ನನಗೆ ಪ್ರಜ್ಞೆ ಬಂದಾಗ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ನಂತರ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಚಿಕಿತ್ಸೆ ನೀಡಿದ ವೈದ್ಯರು ಎದೆಮೂಳೆ ಮುರಿದಿರುತ್ತದೆ ಮೂಳೆ ವೈದ್ಯರಿಗೆ ತೋರಿಸುವಂತೆ ತಿಳಿಸಿದರು. ನಂತರ ನನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ಆದ್ದರಿಂದ ನನ್ನ ತಲೆ ಮತ್ತು ಮುಖಕ್ಕೆ ರಕ್ತಗಾಯಪಡಿಸಿ ಎದೆ ಭಾಗಕ್ಕೆ ಗುದ್ದಿರುವ ನನ್ನ ಗಂಡ ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

13. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 248/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ: 26.10.2021 ರಂದು ಮದ್ಯಾಹ್ನ 1-50 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀನಾರಾಯಣಸ್ವಾಮಿ ಬಿನ್ ನಾರಾಯಣಪ್ಪ. 53 ವರ್ಷ, ವ್ಯಾಪಾರ ಬಲಜಿಗರು. ಬಾಲೇನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಮೊಬೈಲ್ ನಂ: 6360779101 ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ನನ್ನ ಮಗನಾಧ ಪ್ರಶಾಂತ, 23 ವರ್ಷ ರವರು ಅವನ ಸ್ನೇಹಿತನ ದ್ವಿಚಕ್ರ ವಾಹನವನ್ನು ತಂದು ದಿ:19.10.2021 ರಂದು ರಾತ್ರಿ 10-30 ಗಂಟೆಗೆ ಅವನ ಸ್ನೇಹಿತರಾದ ವೆಂಕಟೇಶ್, ಸೀನಪ್ಪ, ವೇಣು, ಮನೋಹರ ಎಂಬುವರೊಂದಿಗೆ ಹೋಗಿ  ಚಿನ್ನಪ್ಪನಹಳ್ಳಿ ಗ್ರಾಮದ ಸಿ.ಎಲ್. ಅಶ್ವತ್ಥಪ್ಪ ಎಂಬುವರಿಗೆ ದ್ವಿಚಕ್ರ ವಾಹನವನ್ನು 10.000/- ರೂಗಳಿಗೆ ಅಡವಿಟ್ಟು, ಬಾಲೇನಹಳ್ಳಿ ಗ್ರಾಮದ ರಾಮು ಎಂಬುವರ ಮನೆಯಲ್ಲಿ ಎಣ್ಣೆ ಪಾರ್ಟಿಯನ್ನು ಮಾಡಿ 10.000/- ರೂ ಹಣವನ್ನು ಮುಗಿಸಿ. ಆ ದಿನ ರಾತ್ರಿ ಬಾಲೇನಹಳ್ಳಿಯಿಂದ ಜಯಂತಿ ಗ್ರಾಮಕ್ಕೆ ಹೋಗಿರುತ್ತಾರೆ. ನಂತರ ದಿನಾಂಕ:20.10.2021 ರಂದು ಬೆಳಿಗ್ಗೆ ನನ್ನ ಮಗ ಮನೆಗೆ ಬರದೇ ಇದ್ದುದ್ದರಿಂದ ನಾನು ಅವನ ಸ್ನೇಹಿತರನ್ನು ವಿಚಾರ ಮಾಡಿ ತಿಳಿಯಲಾಗಿ ಮೇಲ್ಕಂಡ ಎಲ್ಲಾ ವಿಚಾರಗಳು ತಿಳಿದು ಬಂದಿರುತ್ತೆ. ನಾನು ಎಲ್ಲ ಕಡೆಗಳಲ್ಲಿ ಹುಡುಕಾಡಿದರೂ ನನ್ನ ಮಗ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ಮನವಿ.  ಕಾಣೆಯಾಗಿರುವ ಹುಡುಗನ ಚಹರೆ 1) ಹೆಸರು: ಪ್ರಶಾಂತ. 23 ವರ್ಷ, 2)ಬಣ್ಣ: ಎಣ್ಣೆಗೆಂಪುಮೈಬಣ್ಣ 3) ಎತ್ತರ: 5’4”ಅಡಿ 4) ಧರಿಸಿರುವ ಬಟ್ಟೆ: ನೀಲಿ ಬಣ್ಣದ ಶರ್ಟ್. ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

14. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 141/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 25-10-2021 ರಂದು ಸಂಜೆ 6:10 ಗಂಟೆ ಸಮಯದಲ್ಲಿ ಮಾನ್ಯ ಪಿಎಸ್ಐ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಮತ್ತು ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 25-10-2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ತಾನು ಮತ್ತು ಠಾಣಾ ಸಿಬ್ಬಂದಿಯಾದ ಸಿಪಿಸಿ-240 ಮಧುಸೂದನ್, ಮತ್ತು ಪಿಸಿ-559 ವೆಂಕಟೇಶ್ ಮೂರ್ತಿ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಕಣಿವೆನಾರಾಯಣಪುರ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ತೂಬಗೆರೆ ಗ್ರಾಮದ ಶಿವರಾಮ್ ಬಿನ್ ಚಂದ್ರಶೇಖರ್ ಆಚಾರ್ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಗುಂಗಿರ್ಲಹಳ್ಳಿ ಗ್ರಾಮದ ಹಾಲಿನ ಡೈರಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಗುಂಗಿರ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 4-55 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಶಿವರಾಮ್ ಬಿನ್ ಚಂದ್ರಶೇಖರ್ ಆಚಾರ್ , 42 ವರ್ಷ, ಬಾರ್ ನಲ್ಲಿ ಕೆಲಸ, ವಿಶ್ವಕರ್ಮ ಜನಾಂಗ, ತೂಬಗೆರೆ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS PUNCH WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಒಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS PUNCH WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 5-00 ಗಂಟೆಯಿಂದ ಸಂಜೆ 5-40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಸಂಜೆ 6-00 ಗಂಟೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದರ ಮೇರೆಗೆ ಈ ಪ್ರ.ವ.ವರದಿ.

 

15. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 142/2021 ಕಲಂ. 279,304(A) ಐಪಿಸಿ :-

     ದಿನಾಂಕ:26/10/2021 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿದಾರರಾದ ನರಸಿಂಹಯ್ಯ ಬಿನ್ ಲೇಟ್ ದೊಡ್ಡಮುನಿಯಪ್ಪ, 55 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಗುರುಕುಲನಾಗೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ 4 ಜನ ಮಕ್ಕಳಿದ್ದು 1 ನೇ ಶಿಲ್ಪ, 2ನೇ ಗಣೇಶ, 3 ನೇ ಅಶ್ವಿನಿ, 4 ನೇ ಪುಷ್ಪ ಎಂಬುವರಾಗಿರುತ್ತಾರೆ. ಗಣೇಶ ರವರಿಗೆ ತಮ್ಮ ಗ್ರಾಮದ ನರಸಿಂಹಮೂರ್ತಿ ಜಿ.ಕೆ ರವರ ಮಗಳಾದ ಹರ್ಷ ಎಂಬುವರೊಂದಿಗೆ ಒಂದು ವರ್ಷದ ಹಿಂದೆ ಮದುವೆಮಾಡಿದ್ದು ಇವರು ದೇವನಹಳ್ಳಿಯಲ್ಲಿ ವಾಸವಾಗಿರುದ್ದರು. ತನ್ನ ಮಗ ಗಣೇಶ ನಂದಿ ಕ್ರಾಸಿನಲ್ಲಿರುವ ಮೇಘಾ ಡೈರಿಗೆ ಕೆಲಸಕ್ಕೆ ಪ್ರತಿ ದಿನ ಬಂದು ಹೋಗುತ್ತಿರುತ್ತಾನೆ. ಅದರಂತೆ ದಿನಾಂಕ:25/10/2021 ರಂದು ರಾತ್ರಿ ಸುಮಾರು 11:30 ಗಂಟೆಗೆ ತಮ್ಮ ಗ್ರಾಮದ ದೇವರಾಜ್ ರವರು ತಮಗೆ ಕರೆ ಮಾಡಿ ನಿನ್ನ ಮಗ ಗಣೇಶ ರವರಿಗೆ ನಂದಿ ಕ್ರಾಸಿನಲ್ಲಿ ಅಪಘಾತವಾಗಿರುತ್ತದೆಂದು ತಿಳಿಸಿದಾಗ ತಾನು ಮತ್ತು ತಮ್ಮ ಗ್ರಾಮದ ಮಂಜುನಾಥ, ಮುನಿಕೃಷ್ಣ, ನರಸಿಂಹಯ್ಯ, ಮೂರ್ತಿ, ನಾವೆಲ್ಲರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತವಾಗಿರುವ ಬಗ್ಗೆ ತಮ್ಮ ಗ್ರಾಮದ ದೇವರಾಜ್ ರವರನ್ನು ಕುರಿತು ಕೇಳಲಾಗಿ ಅವರು ಗಣೇಶ ರವರು ಮೇಘಾ ಡೈರಿಯಲ್ಲಿ 2 ನೇ ಪಾಳಿ ಕರ್ತವ್ಯ ಮುಗಿಸಿಕೊಂಡು ದೇವನಹಳ್ಳಿಗೆ ಹೋಗಲು ಆತನ ದ್ವಿಚಕ್ರ ವಾಹನ ಸಂಖ್ಯೆ KA-40 EE-4269 ರಲ್ಲಿ ಮೇಘಾ ಡೈರಿಯಿಂದ ಚಾಲನೆ ಮಾಡಿಕೊಂಡು ನಂದಿ ಕ್ರಾಸಿನ ಸರ್ವಿಸ್ ರಸ್ತೆಯಲ್ಲಿ ದೇವನಹಳ್ಳಿ ಕಡೆ ಹೋಗಲು ಸುಮಾರು ರಾತ್ರಿ 11:15 ಗಂಟೆಗೆ ನಂದಿ ಕ್ರಾಸ್ ಅಂಡರ್ ಪಾಸ್ ಮುಂಭಾಗದ ರಸ್ತೆಯ ಬಳಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಕೋಲಾರದ ರಸ್ತೆಯ ಕಡೆಯಿಂದ ನಂದಿ ಕ್ರಾಸಿನ ಅಂಡರ್ ಪಾಸ್ ಕಡೆಗೆ KA-04 AB-4487 ಟಾಟಾ ಇಎಕ್ಸ1109 ಕ್ಯಾಂಟರ್ ಗೂಡ್ಸ ವಾಹನವನ್ನು ಅದರ ಚಾಲಕ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಣೇಶ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನದ ಎಡ ಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಗಣೇಶ ರವರು ರಸ್ತೆಯಲ್ಲಿ ಬಿದ್ದು ಆತನಿಗೆ ತಲೆಗೆ, ಸೊಂಟಕ್ಕೆ, ಕೈಕಾಲುಗಳಿಗೆ ರಕ್ತಗಾಯಗಳಾಗಿದ್ದಾಗ ತಾನು ಮತ್ತು ತಮ್ಮ ಗ್ರಾಮದ ಗಿರೀಶ್ ಹಾಗೂ  ಸಾರ್ವಜನಿಕರು ಉಪಚರಿಸಿ ಆಂಬ್ಯೂಲೇನ್ಸನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ವೈದ್ಯಾಧಿಕಾರಿಗಳು ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆಂದು ತಿಳಿಸಿದರು ಎಂದು ದೇವರಾಜ್ ರವರು ತನಗೆ ತಿಳಿಸಿದ ವಾಹನವನ್ನು ಮೇಘಾ ಡೈರಿ ಬಳಿಯಿಂದ ಚಾಲನೆ ಮಾಡಿಕೊಂಡು ನಂದಿ ಕ್ರಾಸ್ ಕಡೆಯ ರಸ್ತೆ ಕಡೆಯಿಂದ KA-04 AB-4487 ಕ್ಯಾಂಟರ್ ಚಾಲಕನು ಕ್ಯಾಂಟರ್ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ಗಣೇಶ ರವರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಗಾಯಗಳ ದೆಸೆಯಿಂದ ಮೃತಪಟ್ಟಿರುತ್ತಾನೆ. ತನ್ನ  ಮಗನ ಮೃತ ದೇಹವನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುತ್ತಾರೆ. ನಂತರ ತಡವಾಗಿ ಠಾಣೆಗೆ ತಡವಾಗಿ ಬಂದಿರುತ್ತೇನೆ. ತನ್ನ ಮಗನಿಗೆ ಅಪಘಾತ ಪಡಿಸಿದ ಕ್ಯಾಂಟರ್ ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ, ತನ್ನ ಮಗ ಮೃತಪಟ್ಟಿದ್ದು ಅಪಘಾತ ಪಡಿಸಿದ ಚಾಲಕ KA-04 AB-4487  ಕ್ಯಾಂಟರ್ ಗೂಡ್ಸ್ ವಾಹನದ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿಕೊಟ್ಟ ದೂರು.

 

16. ಪೆರೇಸಂದ್ರ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:25-10-2021 ರಂದು ಸಂಜೆ 5-00 ಗಂಟೆಯ ಸುಮಯದಲ್ಲಿ  ನ್ಯಾಯಾಲದ ಪಿ ಸಿ 89 ರವರು ಠಾಣಾ ಎನ್ ಸಿ ಆರ್ ನಂ-18/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ತಂದು ಹಾಜರುಪಡಿಸದ್ದ ದೂರಿನ ಸಾರಾಂಶವೇನೆಂದರೆ, ದಿನಾಂಕ:23/10/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಪೆರೇಸಂದ್ರ ಠಾಣೆಯಲ್ಲಿದ್ದಾಗ ಠಾಣಾ ಸಿಬ್ಬಂದಿ ಮಂಜುನಾಯಕ  ಸಿ.ಪಿ.ಸಿ-203  ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ   ತಾಲ್ಲೂಕು ದಿಗೂರು  ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ನಾರಾಯಣಸ್ವಾಮಿ   ರವರ ಮನೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಮತ್ತು ಶ್ರೀನಿವಾಸ ಸಿ.ಪಿ.ಸಿ-272    ರವರು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 10-15 ಗಂಟೆ ಸಮಯಕ್ಕೆ ದಿಗೂರು ಕ್ರಾಸ್ ಗೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ದಿಗೂರು ಕ್ರಾ್ ನ  ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ  ಮರದ ಕೆಳಗೆ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 10-30  ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ಪ್ರಕಾಶ್ ಕೆ ಬಿನ್ ವಿ.ಎ ಕೃಷ್ಣಂ ನಾಯುಡು , 47 ವರ್ಷ, ಕಮ್ಮನಾಯುಡು, ಜಿರಾಯ್ತಿ, ವಾಸ ಮರಸನಹಳ್ಳಿ ಗ್ರಾಮ,  ಚಿಕ್ಕಬಳ್ಳಾಪುರ  ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 20 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*20=702.6/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ ಮದ್ಯಾಹ್ನ 12-15  ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 12-30  ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿ ಘನ ನ್ಯಾಯಾಲದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತನೆ.

 

17. ಪೆರೇಸಂದ್ರ ಪೊಲೀಸ್ ಠಾಣೆ ಮೊ.ಸಂ. 16/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:25-10-2021 ರಂದು ಸಂಜೆ 5-30 ಗಂಟೆಯ ಸುಮಯದಲ್ಲಿ  ನ್ಯಾಯಾಲದ ಪಿ ಸಿ 89 ರವರು ಠಾಣಾ ಎನ್ ಸಿ ಆರ್ ನಂ-20/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ತಂದು ಹಾಜರುಪಡಿಸದ್ದ ದೂರಿನ  ಸಾರಾಂಶವೇನೆಂದರೆ, ದಿನಾಂಕ:25/10/2021 ರಂದು ಎ,ಎಸ್,ಐ ಗಂಗಾಧರಪ್ಪ.ಆರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:25/10/2021 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ಪೆರೇಸಂದ್ರ ಠಾಣೆಯಲ್ಲಿದ್ದಾಗ ಠಾಣಾ   ಸಿಬ್ಬಂದಿ ಶ್ರೀನಿವಾಸ ಸಿ.ಪಿ.ಸಿ-272    ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ   ತಾಲ್ಲೂಕು ಸಿದ್ದಗಾನಹಳ್ಳಿ   ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ರಾಮಕೃಷ್ಣಪ್ಪ    ರವರ ಮನೆಯ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಮತ್ತು ಮಂಜುನಾಯಕ  ಸಿ.ಪಿ.ಸಿ-203  ರವರು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 7-30 ಗಂಟೆ ಸಮಯಕ್ಕೆ ಸಿದ್ದಗಾನಹಳ್ಳಿ ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಸಿದ್ದಗಾನಹಳ್ಳಿ ಗ್ರಾಮದ ಮಾಹಿತಿ ಇದ್ದ   ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ  ಮರದ ಕೆಳಗೆ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 8-00  ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ರಾಮಕೃಷ್ಣಪ್ಪ ಬಿನ್ ಚಿಕ್ಕನಂಜುಂಡಪ್ಪ , 50 ವರ್ಷ, ನಾಯಕರು, , ಜಿರಾಯ್ತಿ, ವಾಸ ಸಿದ್ದಗಾನಹಳ್ಳಿ  ಗ್ರಾಮ,  ಚಿಕ್ಕಬಳ್ಳಾಪುರ  ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 16 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 440 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*16=562.8/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 8-00 ಗಂಟೆಯಿಂದ 9-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ ಬೆಳಿಗ್ಗೆ 9-30  ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಬೆಳಿಗ್ಗೆ 9-45  ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿ ಘನ ನ್ಯಾಯಾಲದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತನೆ.

 

18. ಪೆರೇಸಂದ್ರ ಪೊಲೀಸ್ ಠಾಣೆ ಮೊ.ಸಂ. 17/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:25-10-2021 ರಂದು ಸಂಜೆ 6-00 ಗಂಟೆಯ ಸುಮಯದಲ್ಲಿ  ನ್ಯಾಯಾಲದ ಪಿ ಸಿ 89 ರವರು ಠಾಣಾ ಎನ್ ಸಿ ಆರ್ ನಂ-21/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ತಂದು ಹಾಜರುಪಡಿಸದ್ದ ದೂರಿನ  ಸಾರಾಂಶವೇನೆಂದರೆ, ದಿನಾಂಕ:25/10/2021 ರಂದು ಪಿ.ಎಸ್.ಐ ಮಂಜುನಾಥ ಡಿ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:25/10/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಪೆರೇಸಂದ್ರ ಠಾಣೆಯಲ್ಲಿದ್ದಾಗ ಠಾಣಾ   ಸಿಬ್ಬಂದಿ ಶ್ರೀನಿವಾಸ ಸಿ.ಪಿ.ಸಿ-272  ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ   ತಾಲ್ಲೂಕು ಆದೆಗಾರಹಳ್ಳಿ    ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ಆದೆಗಾರಹಳ್ಳಿ  ಗ್ರಾಮದ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಮರದ ಕೆಳಗೆ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ.  ನಾನು ಮತ್ತು ಸಿಬ್ಬಂದಿ  ಮಂಜುನಾಥ ನಾಯಕ  ಸಿ.ಪಿ.ಸಿ-203  ರವರು ಬೆಳಿಗ್ಗೆ 10-15 ಗಂಟೆ ಸಮಯಕ್ಕೆ ಸಕರ್ಾರಿ ಜೀಪ್ ಸಂಖ್ಯೆ ಕೆ.ಎ40-ಜಿ-1777 ರಲ್ಲಿ ಆದೆಗಾರಹಳ್ಳಿ  ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ  ಗ್ರಾಮದ ಆಚೆ ರಸ್ತೆಯಲ್ಲಿ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ಅನ್ನು  ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗೆ  ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 10-30 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಆಸಾಮಿಯ  ಹೆಸರು & ವಿಳಾಸ ತಿಳಿಯಲಾಗಿ ರಾಜೇಶ ಬಿನ್ ಆನಂದ,  20 ವರ್ಷ, ಬಲಜಿಗರು, ಸವಿತಾ ಬಾರ್ ನಲ್ಲಿ ಸಪ್ಲಯರ್ ಕೆಲಸ,  ವಾಸ ಮಂಡಿಕಲ್ಲು   ಗ್ರಾಮ, ಚಿಕ್ಕಬಳ್ಳಾಪುರ  ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 21  ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ  ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 890 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*21=737.73/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-00 ಗಂಟೆಯಿಂದ 12-00   ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 12-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 12-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು  ಸೂಚಿಸಿದ ಮೇರೆಗೆ  ಎನ್.ಸಿ.ಆರ್ ದಾಖಲಿಸಿ ಘನ ನ್ಯಾಯಾಲದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತನೆ.

 

19. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 135/2021 ಕಲಂ. 417,419,420,423,424,468,504,506 ಐಪಿಸಿ :-

     ದಿನಾಂಕ.26.10.2021 ರಂದು ಬೆಳಿಗ್ಗೆ 10.30 ಗಂಟೆಗೆ ನ್ಯಾಯಾಲಯದ ಪಿ.ಸಿ.20 ರವರ ಮೂಲಕ ಪಿ.ಸಿ.ಆರ್.94/2021 ರ ದೂರನ್ನು ಪಡೆದಿದ್ದರ ಸಾರಾಂವೇನಂದರೆ, ಪಿರ್ಯಾದಿ ಶಿವಣ್ಣ ಬಿನ್ ನಾರಾಯಣಸ್ವಾಮಿ ರವರು ಹಿರಿಯಲಚೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ವಾಸಿಯಾಗಿದ್ದು ಇವರು ಅದೇ ಹಿರಿಯಲಚೇನಹಳ್ಳಿ ಗ್ರಾಮದ ವಾಸಿಯಾದ ಗೋಪಾಲಕೃಷ್ಣ ಬಿನ್ ಸೊಣ್ಣಪ್ಪ ರವರು ಅವರ ಹೆಸರಿನಲ್ಲಿರುವ ಶಿಢ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿ ಹಿರಿಯಲಚೇನಹಳ್ಳಿ ಗ್ರಾಮಕ್ಕೆ ಸೇರಿದ  ಸರ್ವೆ ನಂ. 68 ರಲ್ಲಿ 3 ಎಕರೆ 01 ಗುಂಟೆ ಜಮೀನಿನ ಪೈಕಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ದಿನಾಂಕ:03/03/2017 ರಂದು ಆಗಿನ ಮಾರುಕಟ್ಟೆ ಬೆಲೆ 2,00,000/-ರೂಗಳಿಗೆ ವ್ಯವಹಾರ ಮಾಡಿಕೊಂಡು ಶಿಡ್ಲಘಟ್ಟ ಉಪ ನೊಂದಣಾಧಿಕರಿಗಳ ಕಚೇರಿಯಲ್ಲಿ ಕ್ರಯಕ್ಕೆ ಪಡೆದು ಕ್ರಯದ ಪೂರ್ತಿ ಮೊಬಲಗನ್ನು ಸಹ ಅದೇ ದಿನವೇ ಮೇಲ್ಕಂಡ ಗೋಪಾಲಕೃಷ್ಣ ರವರಿಗೆ ನೀಡಿದ್ದು. ಅದೇ ದಿನ ಇವರ ಹೆಸರಿಗೆ ಋಣಭಾರ ಪತ್ರ ಬಂದಿರುತ್ತೆ. ಸದರಿಯವರು ಅದೇ ದಿನ ಜಮೀನು ಶಿವಣ್ಣ ರವರ ಸ್ವಾದೀನಕ್ಕೆ ಬಿಟ್ಟುಕೊಡುವುದಾಗಿ ಜನರಲ್ ಪವರ್ ಆಫ್ ಅಟಾರ್ನಿಯನ್ನು ಸಹ ನೊಂದಾಯಿಸಿ ಕೊಟ್ಟಿರುತ್ತಾರೆ. ಅಂದಿನಿಂದ ಸದರಿ ಜಮೀನಿನಲ್ಲಿ ತಾನೇ ಬೆಳೆಗಳನ್ನು ಇಟ್ಟುಕೊಂಡು ಅನುಭವದಲ್ಲಿರುತ್ತಾರೆ. ಸದರಿ ಜಮೀನನ್ನು ಪೋಡಿ ಮಾಡಿಸಿದ ನಂತರ ಹೊಸ ಸರ್ವೇ ನಂ.68/1 ರಲ್ಲಿ 2-00 ಎಕರೆ ಪೋಡಿ ಮಾಡಿಸಿ ಗೋಪಾಲಕೃಷ್ಣ ರವರು ಈ ಹಿಂದೆ ಮಾಡಿಕೊಟ್ಟಿದ್ದ ಜಮೀನಿನ ಕ್ರಯದ ಕರಾರು ಪತ್ರ ಮತ್ತು ಜಿ.ಪಿ.ಎ ಅಧಾರದ ಮೇಲೆ ದಿನಾಂಕ:21/10/2020 ರಂದು ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದು ನನ್ನ ಹೆಸರಿಗೆ ಜಮೀನಿನ ಖಾತೆಯು ಸಹಾ MR H1/2020-21 ದಿನಾಂಕ.28.11.2020 ರಂದು ರಂತೆ ಖಾತೆ ಬದಲಾವಣೆಯಾಗಿ ಸದರಿ ಜಮೀನಿನ ಸಂಪೂರ್ಣ ಮಾಲೀಕನಾಗಿ ಸ್ವಾದೀನದಲ್ಲಿದ್ದು ಮುಂದುವರೆದಿರುತ್ತಾರೆ. ಆ ಸಮಯದಲ್ಲಿ ತನ್ನ ಹೆಸರಿಗೆ ಪಹಣಿ ಖಾತೆಯಾದ ನಂತರ ಪಹಣಿ ಪತ್ರವನ್ನು ಪಡೆದು ಪರಿಶೀಲಿಸಿದಾಗ MR T9/2019-20  MR 2/2008-2009 ರಂತೆ ಮ್ಯಾನೇಜರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಹಕರ ಕೇಂದ್ರ ಬ್ಯಾಂಕ್ 'ನಿ' ಶಿಡ್ಲಘಟ್ಟ ಶಾಖೆ ಗೆ ಅಧಾರ ಮಾಡಿಸಿ 25,00,000/-ರೂ ಸಾಲ ಪಡೆದುಕೊಂಡಿರುವುದು ನಮೂದಾಗಿರುತ್ತೆ. ಕೂಡಲೇ ತಾನು ಶಿಡ್ಲಘಟ್ಟದಲ್ಲಿರುವ ಕೆಸಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ರವರನ್ನು ಸಂಪರ್ಕಿಸಿದಾಗ ಗೋಪಾಲಕೃಷ್ಣ ರವರು ಪಾಲಿ ಹೌಸ್ ಘಟಕ ಮಾಡಿಕೊಳ್ಳುವ ಸಲುವಾಗಿ ಸಾಲ ನೀಡಿರುತ್ತೇನೆಂದು ತಿಳಿಸಿರುತ್ತಾರೆ. ಅದರೆ ಗೋಪಾಲಕೃಷ್ಣ ರವರು ಸದರಿ ಜಮೀನಿನಲ್ಲಿ 2019-20ನೇ ಸಾಲಿನಲ್ಲಿ ಯಾವುದೇ ಪಾಲಿ ಹೌಸ್ ಸಹ ನಿರ್ಮಾಣ ಮಾಡಿರುವುದಿಲ್ಲ. ಅದರೆ ಗೋಪಾಲಕೃಷ್ಣ ರವರು ಪಿರ್ಯಾದಿಗೆ ದಿನಾಂಕ.03/03/2017 ರಂದು ಅವರ ಜಮೀನು ಪರಿಶುದ್ದ ಕ್ರಯ ಮತ್ತು ಜಿಪಿಎ ಮಾಡಿಕೊಟ್ಟು ಸ್ವಾದೀನಕ್ಕೆ ಬಿಟ್ಟುಕೊಟ್ಟಿದ್ದರೂ ಸಹ ಇವರಿಗೆ ಮೋಸ ಮಾಡುವ ಉದ್ದೇಶದಿಂದ ಹಾಗೂ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಇವರಿಗೆ ಮರಾಟ ಮಾಡಿದ ಜಮೀನಿನ ಮೇಲೆ ಗೋಪಾಲಕೃಷ್ಣ ಮತ್ತು ಈತನ ಮಕ್ಕಳಾದ ರಮೇಶ್, ಗಿರೀಶ್ ರವರು ಶಿಢ್ಲಘಟ್ಟ ಶಾಖೆಯ ಕೋಲಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮ್ಯಾನೇಜರ್ ರವರೊಂದಿಗೆ ಶಾಮೀಲಾಗಿ ಪಾಲಿಹೌಸ್ ನಿರ್ಮಿಸಿರುವುದಾಗಿ ಖೊಟ್ಟ ದಾಖಲೆಯನ್ನು ಸೃಷ್ಟಿಮಾಡಿ ದಿನಾಂಕ.03/12/2019 ರಂದು ಶಿಡ್ಲಘಟ್ಟ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಧ್ಯಮಾವದಿ ಸಾಲದ ಪತ್ರ (ಸಿಂಫಲ್ ರಿಜಿಸ್ಟರ್ ಮಾರ್ಟೀಗೇಜ್) ಕಾನೂನು ಬಾಹಿರವಾಗಿ (ಅಡಮಾನ ಪತ್ರ) ಮಾಡಿಕೊಂಡು ಸಾಲ ಪಡೆದುಕೊಂಡಿ ಮೋಸ ಮಾಡಿರುತ್ತಾರೆ. ಸಾಲ ಕ್ಲೀಯರ್ ಮಾಡಿಕೊಡಲು ಗೋಪಾಲಕೃಷ್ಣ ರವರಿಗೆ ಕೇಳಿದಾಗ ಪಹಣಿ ನಿನ್ನ ಹೆಸರಿನಲ್ಲಿದೆ ನೀನೇ ಸಾಲ ಕಟ್ಟಿಕೊ ಹೋಗು ಈಗ ನೀನು ಏನೂ ಮಾಡುವುದಕ್ಕೆ ಆಗುವುದಿಲ್ಲ ನಿನ್ನ ಕೈಯಲ್ಲಿ ಏನಾಗುತ್ತೆ ಮಾಡಿಕೋ ಹೋಗೋ ಎಂದು ಅವಾಚ್ಯ ಶಬ್ದಗಳಿಂದ ಬೈದು ವಾಪಸ್ಸು ಕಳುಹಿಸಿರುತ್ತಾರೆ. ಸದರಿಯುವರ ಮೇಲೆ ಕಲಂ.,417,419,420,423,424,468,504,506 ಐಪಿಸಿ ರೀತ್ಯಾ ಕಾನೂನು ಕ್ರಮ ಜರುಗಿಸಲು ಸಲ್ಲಿಕೊಂಡಿರುವ ದೂರಿನ ಸಾರಾಂಶವಾಗಿರುತ್ತೆ.

ಇತ್ತೀಚಿನ ನವೀಕರಣ​ : 26-10-2021 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080