ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್ ಠಾಣೆ, ಮೊ.ಸಂ. 103/2021, ಕಲಂ. 279, 337 ಐ.ಪಿ.ಸಿ:-

            ದಿನಾಂಕ 25-10-2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ:15/10/2021 ರಂದು ಮದ್ಯಾಹ್ನ  ನಾನು ಮತ್ತು ನನ್ನ ಭಾವಮೈದನಾದ ಶ್ರೀನಾಥ ರವರು ಕೆಎ-40 ಇಡಿ-0265 ನೊಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ಮತ್ತು ನನ್ನ ಬಾಬತ್ತು ಕೆಎ40 ಇಇ-9245 ನೊಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ದ್ವಿಚಕ್ರವಾಹದನಲ್ಲಿ ನನ್ನ ತಂಗಿಯ ಗಂಡನಾದ ವೈ.ಪ್ರಸಾದ್ ಬಿನ್ ವೈ. ನರಸಿಂಹಲು  ರವರು ಕಂದುಕೂರು ಕೆರೆಯು ತುಂಬಿ ಕೋಡಿ ಹರಿಯುತ್ತಿರುವುದನ್ನು ನೋಡಿಕೊಂಡು ಬರಲು ಹೋಗಿ, ಕಂದುಕೂರು ಕೆರೆಯ ಕೋಡಿಯನ್ನು ನೋಡಿಕೊಂಡು ಪುನಃ ನಮ್ಮ ಗ್ರಾಮ ಪುಲಿಗಲ್ ಗ್ರಾಮಕ್ಕೆ ಹೋಗುತ್ತಿದ್ದಾಗ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಊದವಾರಿಪಲ್ಲಿ ಗ್ರಾಮದಿಂದ ಪುಲಿಗಲ್ ಕ್ರಾಸ್ ಮದ್ಯದಲ್ಲಿ ನನ್ನ ಬಾವಮೈದನಾದ ವೈ.ಪ್ರಸಾದ್ ರವರು ಕೆಎ-40 ಇಇ-9245 ನೊಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ದ್ವಿಚಕ್ರವಾಹನವನ್ನು ಅವರೇ ಅತೀ ವೇಗ ಮತ್ತು ಅಜಾಗುರೂಕತೆಯಿಂದ ವಿ.ಸುಬ್ಬಪ್ಪ ರವರ ಜಮೀನನ ಬಳಿ ಇರುವ ಟಾರ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಸ್ಕೀಡ್ ಆಗಿ ಚಾಲನೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಕೆಳಗೆ ಬಿದ್ದು ವೈ.ಪ್ರಸಾದ್ ರವರ ಎಡಭುಜ ಮತ್ತು ತಲೆಗೆ ತೀರ್ವವಾದ ಪೆಟ್ಟು ಆಗಿ ಪ್ರಜ್ಞಾಹೀನನಾಗಿ ಬಿದ್ದಿದ್ದು, ಹಿಂದೆಯೇ ಹೋಗುತ್ತಿದ್ದ ನಾವುಗಳು ಕೂಡಲೇ ನಮ್ಮ ದ್ವಿಚಕ್ರವಾಹವನ್ನು ನಿಲ್ಲಿಸಿ ನೋಡಲಾಗಿ ವೈ.ಪ್ರಸಾದ್ ರವರು ಪ್ರಜ್ಞೆ ತಪ್ಪಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು, ವೈ.ಪ್ರಸಾದ್ ರವರು ಸವಾರಿ ಮಾಡುತ್ತಿದ್ದ ದ್ವಿಚಕ್ರವಾಹನವು ರಸ್ತೆಯ ಪಕ್ಕದಲ್ಲಿ ಹುಲ್ಲಿನಲ್ಲಿ ಬಿದ್ದಿದ್ದು ದ್ವಿಚಕ್ರವಾಹನವು ಯಾವುದೇ ಜಕ್ಕಂಗೊಂಡಿರುವುದಿಲ್ಲ. ಕೂಡಲೇ ನಾನು ಪೋನ್ ಮಾಡಿ ನನ್ನ ಬಾಬತ್ತು ಹೆರ್ಟಿಗಾ ಕಾರನ್ನು ಕರೆಸಿಕೊಂಡು ಸದರಿ ಕಾರಿನಲ್ಲಿ ನನ್ನ ಬಾವಮೈದನಾದ ವೈ.ಪ್ರಸಾದ್ ರವರನ್ನು ಚಿಕಿತ್ಸೆಗಾಗಿ ಚಿಂತಾಮಣಿಯ ಡೆಕ್ಕೆನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಪಡೆಸಿ ವೈಧ್ಯರ ಸಲಹೆ ಮೇರೆಗೆ ಅಲ್ಲಿಂದ ಆಂದ್ರಪ್ರಧೇಶದ ಮದನಪಲ್ಲಿಯಲ್ಲಿ ಸಂಜೀವರಾಯುಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆಸಲು ನೋಡಿಸಿದಾಗ ಅಲ್ಲಿನ ವೈದ್ಯರು ಸಲಹೆಯಂತೆ ತಿರುಪತಿಯಲ್ಲಿನ ಶ್ರೀ.ರಮಾದೇವಿ ಮಲ್ಟಿಸ್ಪೆಷಾಲೆಟಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗಿ ದಾಖಲಿಸಿ ಚಕಿತ್ಸೆ ಕೊಡಿಸುತ್ತಿದ್ದು, ಇಲ್ಲಿಯವರೆಗೂ ಪ್ರಜ್ಞೆ ಬರದ ಕಾರಣ ಅಲ್ಲಿನ ವೈಧ್ಯರು ವೈ.ಪ್ರಸಾದ್ ರವರ ತಲೆಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದರ ಮೇರೆಗೆ ದಿನಾಂಕ:24-10-2021 ರಂದು ಬೆಂಗಳೂರಿನ ASTER CMI ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿರುತ್ತೇವೆ. ಇದುವರೆವಿಗೂ ಗಾಯಾಳುವಿನ ಹಾರೈಕೆ ಮತ್ತು ಚಿಕಿತ್ಸೆಗಾಗಿ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ದಿನಾಂಕ:25-10-2021 ರಂದು ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ, ಮೊ.ಸಂ. 54/2021, ಕಲಂ. 279, 337 ಐ.ಪಿ.ಸಿ ಮತ್ತು ಕಲಂ. 187 ಐ.ಎಂ.ವಿ ಆಕ್ಟ್:-

            ದಿನಾಂಕ;-25-10-2021 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ  ಕಂಪ್ಯೂಟರ್ ಮುದ್ರಿತ ದೂರಿನ  ಸಾರಾಂಶವೇನೆಂದರೆ ನಮ್ಮ ತಂದೆ ಲಿಂಗಪ್ಪ ತಾಯಿ ರಾಮಲಕ್ಷಮ್ಮ ನಮ್ಮ ತಂದೆ ತಾಯಿಗೆ ಇಬ್ಬರು ಮಕ್ಕಳು 1ನೆ  ವಿಜಯಲಕ್ಷ್ಮಿ  2 ನೆ ನಾನು  ನನಗೆ ರಾಮಕೃಷ್ಣ ಎಂಬುವರೊಂದಿಗೆ ಮದುವೆಯಾಗಿದ್ದು ನಮ್ಮ ತಂದೆ ನನ್ನ ಜೊತೆಯಲ್ಲಿಯೇ ಇರುತ್ತಾರೆ. ನಮ್ಮ ತಾಯಿ ಯಲಹಂಕದಲ್ಲಿ  ವಾಸವಾಗಿರುತ್ತಾರೆ, ನಮ್ಮ ತಂದೆಯವರು ಚಿಕ್ಕಬಳ್ಳಾಪುರ ನಗರದಲ್ಲಿನ ಪೋಸ್ಟ್ ಆಪೀಸಿನ ಪಕ್ಕದಲ್ಲಿರುವ ತೃಪ್ತಿ  ಹೋಟಲಿನಲ್ಲಿ ಅಡುಗೆ ಬಟ್ಟರಾಗಿ  ಕೆಲಸ ಮಾಡುತ್ತಿದ್ದು  ಪ್ರತಿದಿನ  ಮನೆಯಿಂದ ಕೆಲಸಕ್ಕೆ ಹೋಗಿ ರಾತ್ರಿ ಮನಗೆ ಬರುತ್ತಿದ್ದರು, ಎಂದಿನಂತೆ ನಮ್ಮ ತಂದೆಯವರು  ದಿನಾಂಕ;22-10-2021 ರಂದು ಕೆಲಸಕ್ಕೆ ಹೋಗಿದ್ದರು, ನಾನು ಮನೆಯಲ್ಲಿ ಇದ್ದೆನು,  ಅದೇ ದಿನ ರಾತ್ರಿ  ಸುಮಾರು 8-30 ಗಂಟೆಯ ಸಮಯದಲ್ಲಿ ನಾನು ಮನೆಯ ಲ್ಲಿದ್ದಾಗ ನಮ್ಮ ತಾಯಿ ನನ್ನ ಮೊಬೈಲಿಗೆ ಪೋನ್ ಮಾಡಿ ತಿಳಿಸಿದ ವಿಚಾರವೇನೆಂದರೆ ನಿಮ್ಮ ತಂದೆಯವರು ಕೆಲಸವನ್ನು ಮುಗಿಸಿಕೊಂಡು ಮನಗೆ ನಡೆದುಕೊಂಡು ಬರುತ್ತಿದ್ದಾಗ  ಪೆಟ್ರೋಲ್ ಬಂಕಿನ ಸಮೀಪ  ಇರುವ  ಚರ್ಚ ಮುಂದೆ   ಹಿಂದಿನಿಂದ ಯಾವುದೋ ಒಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿಸಿರುತ್ತಾರೆಂದು  ನನಗೆ ಹೋಟ ಲಿನ ಮಾಲೀಕ ಶ್ರೀನಾಥ ರವರು ಪೋನ್ ಮಾಡಿ ವಿಚಾರ ತಿಳಿಸಿರುವುದಾಗಿ  ಬೇಗನೆ ಆಸ್ಪತ್ರೆಯ ಬಳಿ ಹೋಗುವಂತೆ ತಿಳಿಸಿದಳು,  ನಾನು ತಕ್ಷಣ ನಮ್ಮ ತಂದೆಯವರನ್ನು ನೋಡಲು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಬಂದಾಗ  ಹೋಟಲಿನ  ಮಾಲೀಕ ಶ್ರೀನಾಥ ರವರು ಇದ್ದರು ನಮ್ಮ ತಂದೆಯವರಿಗೆ ಅಪಘಾತವಾಗಿದ್ದವಿಚಾರ ನಿಜವಾಗಿತ್ತು, ನಮ್ಮ ತಂದೆಯವರಿಗೆ  ತಲೆಯ  ಹಿಂಬಾಗ ರಕ್ತ ಗಾಯ . ಹಾಗೂ ಎರಡೂ ಕೈಗಳಿಗೆ ತರಚಿದ ಗಾಯಗಳು ಮತ್ತು ಎರಡೂ ಕಾಲುಗಳಿಗೆ ತರಚಿದ ಗಾಯವಾಗಿತ್ತು, ಆಸ್ಪತ್ರೆಯಲ್ಲಿ ನಮ್ಮ ತಂದೆಯವರಿಗೆ  ವೈದ್ಯರು ಪ್ರಥಮ ಚಿಕಿತ್ಸೆಯನ್ನು  ನೀಡಿ ಹೆಚ್ಚಿನ  ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ ನಮ್ಮ ತಂದೆಯವರನ್ನು ನಾನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಿಂದ ಯಲಹಂಕದ ಅಪೂರ್ವ ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಅಲ್ಲಿ ನಮ್ಮ ತಂದೆಯವರಿಗೆ ಚಿಕಿತ್ಸೆಯನ್ನುಕೊಡಿಸಿಕೊಂಡಿದ್ದರಿಂದ ಈದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು  ನಮ್ಮ ತಂದೆಯವರಿಗೆ ಅಪಘಾತ ಪಡಿಸಿ ಹೊರಟು ಹೋಗಿರುವ ದ್ವಿಚಕ್ರ ವಾಹನವನ್ನು ಮತ್ತು ಚಾಲಕನನ್ನು  ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 465/2021, ಕಲಂ. 279, 304(A) ಐ.ಪಿ.ಸಿ ಮತ್ತು ಕಲಂ. 134(A&B) ಐ.ಎಂ.ವಿ ಆಕ್ಟ್:-

            ದಿನಾಂಕ: 25/10/2021 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾಧಿದಾರರಾದ ಮುರಳಿ.ಸಿ.ವಿ ಬಿನ್ ಲೇಟ್ ವೆಂಕಟರೆಡ್ಡಿ, 40 ವರ್ಷ, ವಕ್ಕಲಿಗರು, ವ್ಯಾಪಾರ, ಚೀಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ ನಗರದಲ್ಲಿ ದಿನಸಿ ಅಂಗಡಿಯನ್ನು ಇಟ್ಟುಕೊಂಡಿದ್ದು, ಪ್ರತಿ ದಿನ ಬೆಳಿಗ್ಗೆ 06.00 ಗಂಟೆಗೆ ಅಂಗಡಿಗೆ ಬಂದು ಸಂಜೆ 6.00 ಗಂಟೆವರೆಗೆ ಅಂಗಡಿಯಲ್ಲಿದ್ದು, ನಂತರ ವಾಪಸ್ ಮನೆಗೆ ತೆರಳುತ್ತೇನೆ. ದಿನಾಂಕ: 24/10/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ನಂಧಿಗಾನಹಳ್ಳಿ ಗ್ರಾಮದ ತಮ್ಮ ಚಿಕ್ಕಪ್ಪ ಕೃಷ್ಣಾರೆಡ್ಡಿ.ಎನ್.ಎಸ್ ಬಂದು ತಮ್ಮ ಅಂಗಡಿಯಲ್ಲಿ ಮಾತನಾಡಿಕೊಂಡು ಬೂರಗಮಾಕಲಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಮದುವೆ ಇದ್ದ ಪ್ರಯುಕ್ತ ಮದುವೆಗೆ ಹೋಗಲು ಸಂಜೆ 6.15 ಗಂಟೆಗೆ ತಮ್ಮ ಅಂಗಡಿಯಿಂದ ಹೊರಟರು. ಅವರ ಹಿಂದೆಯೇ ತಾನು, ತಮ್ಮ ಪಕ್ಕದ ಗ್ರಾಮದ ನಂಧಿಗಾನಹಳ್ಳಿ ಗ್ರಾಮದ ಚಂದ್ರಾರೆಡ್ಡಿ ರವರೊಂದಿಗೆ ತನ್ನ ಬೈಕಿನಲ್ಲಿ ಬೂರಗಮಾಕಲಹಳ್ಳಿ ಗ್ರಾಮದಲ್ಲಿ ಮದುವೆಗೆ ತಾವು ಹೊರೆಟೆವು. ಸಂಜೆ ಸುಮಾರು 6.40 ಗಂಟೆಯಾಗಿತ್ತು. ತನ್ನ ಚಿಕ್ಕಪ್ಪ ಕೃಷ್ಣಾರೆಡ್ಡಿ ತನಗಿಂತ ಸ್ವಲ್ಪ ಮುಂಭಾಗದಲ್ಲಿ ಗೋಪಸಂದ್ರ - ಬೂರಗಮಾಕಲಹಳ್ಳಿ ಗ್ರಾಮದ ಮದ್ಯೆ ಆತನ ಬೈಕಿನಲ್ಲಿ ಹೋಗುತ್ತಿದ್ದರು. ಆಗ ತಮ್ಮ ಹಿಂಭಾಗದ ಚಿಂತಾಮಣಿ ರಸ್ತೆಯ ಕಡೆಯಿಂದ ಯಾವುದೋ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಚಿಕ್ಕಪ್ಪ ಕೃಷ್ಣಾರೆಡ್ಡಿಯ ಬೈಕಿಗೆ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ವಾಹನವನ್ನು ತಿರುಗಿಸಿಕೊಂಡು ಮುಂದಕ್ಕೆ ಹೋಗುತ್ತಿದ್ದಂತೆಯೇ ಅಲ್ಲಿ ಬರುತ್ತಿದ್ದ ಗೋಪಸಂದ್ರ ಹಾಗೂ ಇತರೆ ಸಾರ್ವಜನಿಕರು ಜೋರಾಗಿ ಕೂಗುತ್ತಾ ಕಾರಿನ ಹಿಂದೆ ಹಿಂಬಾಲಿಸಿದ್ದು, ಇದನ್ನು ಕಂಡ ಕಾರಿನ ಚಾಲಕ ಕಾರನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ನಂತರ ಆತ ಪರಾರಿಯಾದ. ತಾನು ಮತ್ತು ಚಂದ್ರಾರೆಡ್ಡಿ ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಚಿಕ್ಕಪ್ಪ ವಾಹನ ಸಮೇತ ಬಿದ್ದು ಹೋಗಿದ್ದು ಅವರಿಗೆ ತಲೆಗೆ ಮತ್ತು ಕೈಗಳಿಗೆ ತೀವ್ರವಾದ ಗಾಯಗಳಾಗಿತ್ತು. ಆತನನ್ನು ಉಪಚರಿಸಿ ತಾನು, ಚಂದ್ರಾರೆಡ್ಡಿ ಮತ್ತು ಇತರರು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ಆದರೆ ಚಿಕಿತ್ಸೆ ಫಲಿಸದೆ ತನ್ನ ಚಿಕ್ಕಪ್ಪ ಮೃತಪಟ್ಟಿರುತ್ತಾರೆ. ತನ್ನ ಚಿಕ್ಕಪ್ಪನ ಮೋಟರ್ ಬೈಕ್ ಕೆಎ-40 ಇಬಿ-5982 ಪ್ಯಾಷನ್ ಪ್ರೋ ಆಗಿರುತ್ತೆ. ಅಪಘಾತವೆಸಗಿದ ವಾಹನ ಎಪಿ-05 ಬಿಎಲ್-3989 ಆಲ್ಟೋ ಕಾರಾಗಿರುತ್ತೆ. ಆದ್ದರಿಂದ ಅಪಘಾತಕ್ಕೆ ಕಾರಣವಾದ ಮೇಲ್ಕಂಡ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 287/2021, ಕಲಂ. 279, 337 ಐ.ಪಿ.ಸಿ:-

            ದಿನಾಂಕ 24-10-2021 ರಂದು 20-00 ಗಂಟೆಗೆ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ, ಕೋಡಿಗಾನಹಳ್ಳಿ ಗ್ರಾಮದ ವಾಸಿಯಾದ ರಾಮಕೃಷ್ಣಪ್ಪ ಬಿನ್ ಲೇಟ್ ದುರ್ಗಪ್ಪ, 60 ವರ್ಷ,ಆದಿಕರ್ನಾಟಕ, ಕೂಲಿ ಕೆಲಸ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನಗೆ ಇಬ್ಬರು ಮಕ್ಕಳಿದ್ದು, 1 ನೇ ಹರೀಶ, 2 ನೇ ಶ್ರೀಧರ ಆಗಿರುತ್ತಾರೆ.  ತನ್ನ 2 ನೇ ಮಗನಾಧ ಶ್ರೀಧರ ಬಿನ್ ರಾಮಕೃಷ್ಣಪ್ಪ, 20 ವರ್ಷ, ರವರು ಗಾರೆ ಕೆಲಸವನ್ನು ಮಾಡಿಕೊಂಡಿದ್ದು,. ದಿನಾಂಕ 24-10-2021 ರಂದು ಮಧ್ಯಾಹ್ನ 02-00 ಗಂಟೆಯಲ್ಲಿ ನಮ್ಮ ಗ್ರಾಮದ ವಾಸಿಯಾದ  ಗಂಗಾಧರ ಬಿನ್ ವೆಂಕಟೇಶಪ್ಪ, ಸುಮಾರು 24 ವರ್ಷ, ರವರು ಬಂದಿದ್ದು  ಶ್ರೀಧರನನ್ನು ಕರೆದು  ಪೇಮೆಂಟ್ ತೆಗೆದುಕೊಂಡು ಬರೋಣ ಬಾ ಎಂದು ಕರೆದನು. ಶ್ರೀಧರ  ಗಂಗಾಧರನ ಜೊತೆಯಲ್ಲಿ ಕೆ.ಎ.-40- ಎಸ್. 2786 ಹಿರೋ ಫ್ಯಾಷನ್ ಪ್ರೋ ಬೈಕಿನಲ್ಲಿ ಹೋದರು.   ಬೈಕನ್ನು ಶ್ರೀಧರ ಓಡಿಸುತ್ತಿದ್ದನು.  ಸಂಜೆ ಸುಮಾರು 03-45 ಗಂಟೆಯಲ್ಲಿ ನನ್ನ 1 ನೇ ಮಗ ಹರೀಶ ಗೌರಿಬಿದನೂರಿನಿಂದ ಪೋನ್ ಮಾಡಿ ಆಕ್ಸಿಡೆಂಟ್ ಆಗಿದೆ ಎಂದು ಹೇಳಿ ನನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದನು.  ಆಸ್ಪತ್ರೆಯಲ್ಲಿ  ನೋಡಿದಾಗ ನನ್ನ ಮಗ ಶ್ರೀಧರನಿಗೆ ಬಲ ತಲೆಯಲ್ಲಿ ಮತ್ತು ಬಲಗಾಲಿಗೆ ರಕ್ತಗಾಯವಾಗಿತ್ತು. ಗಂಗಾಧರನಿಗೆ ಬಲಗಾಲಿಗೆ ರಕ್ತಗಾಯವಾಗಿತ್ತು. ನಂತರ ವಿಚಾರ ತಿಳಿಯಲಾಗಿ ಮಧ್ಯಾಹ್ನ ಸುಮಾರು 03-15 ಗಂಟೆಯಲ್ಲಿ ನನ್ನ ಮಗ ಶ್ರೀಧರ ಮತ್ತು ಗಂಗಾಧರರವರು  ಬಂಬೂ ಡಾಬಾ  ಮುಂದೆ ಎಂ.ಜಿ.ಪಿ. ಹೋಟೇಲ್ ಹತ್ತಿರ  ಗೌರಿಬಿದನೂರು ಟೌನ್ ಕಡೆಗೆ ಬೆಂಗಳೂರು-ಹಿಂದೂಪುರ ರಸ್ತೆಯಲ್ಲಿ  ಹೋಗುತ್ತಿದ್ದಾಗ  ಎದರುಗಡೆಯಿಂದ  ಕೆ.ಎ.-51-ಎಂ.ಪಿ.-7216 ರ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ  ರಕ್ತಗಾಯಗಳಾಗಿದ್ದು  ಯಾರೋ ಸಾರ್ವಜನಿಕರು ಗೌರಿಬಿದನೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು  ಹೆಚ್ಚಿನ ಚಿಕಿತ್ಸೆಗಾಗಿ  ವೈದ್ಯರು  ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಶ್ರೀಧರನನ್ನು ಬೆಂಗಳೂರಿನ ಪ್ರೋ ಲೈಫ್ ಆಸ್ಪತ್ರೆಗೆ ಮತ್ತು ಗಂಗಾಧರನನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತಪಡಿಸಿದ ಮೇಲ್ಕಂಡ ಕಾರು ಮತ್ತು ಚಾಲಕನ ವಿರುದ್ದ  ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

5. ಗೌರಿಬಿದನೂರು ನಗರ ಪೊಲೀಸ್ ಠಾಣೆ, ಮೊ.ಸಂ. 168/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ: 25/10/2021 ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಪಿಸಿ 318 ರವರು ನ್ಯಾಯಾಲಯದಿಂದ ಪ್ರಕರಣವನ್ನು ದಾಖಲು ಮಾಡಲು ಅನುಮತಿ ಪತ್ರ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:07-10-2021  ರಂದು ಸಂಜೆ 6-30  ಗಂಟೆಯಲ್ಲಿ ಪಿ.ಎಸ್.ಐ. ಮತ್ತು ಸಿಬ್ಬಂದಿಯಾದ ಹೆಚ್ ಸಿ-226 ಲಿಂಗಪ್ಪ, ಹಾಗೂ ಪಿಸಿ 201  ರವರೊಂದಿಗೆ  ಸರ್ಕಾರಿ     ಜೀಪ್ ಸಂಖ್ಯೆ ಕೆ.ಎ-40 ಜಿ-92 ರಲ್ಲಿ ರೈಲ್ವೈಸ್ಟೇಷನ್ ರಸ್ತೆಗೆ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರೊಂದಿಗೆ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ  ಮಾಯಕೊಂಡ್ಲ ದಾಮೋದರ್ ಬಿನ್ ಮಾಯಕೊಂಡ್ಲ ಹರಿದಾಸ್, 32 ವರ್ಷ, ಮಗ್ಗದ ಕೆಲಸ, ರೈಲ್ವೈ ಸ್ಟೇಷನ್ ಬಳಿ, ಕೊತ್ತಪೇಟೆ, ಮನೆ ನಂಬರ್ 30#461 ಧರ್ಮವರಂ, ಆನಂತರ ಪುರ ಜಿಲ್ಲೆ. ಪೋ.ನಂ. 97010933921, 81429670401  ಎಂದು ತಿಳಿಸಿದನು. ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಸಿಲಿವರ್ ಕಪ್ ಕೇರ್ ಇಂಡಿಯನ್  ಕಂಪನಿಯ 10 ಟೆಟ್ರಾ ಪಾಕೆಟ್ ಗಳು 2)  90 ಸಿಲಿವರ್ ಕಪ್ ಕೇರ್ ಇಂಡಿಯನ್  ಕಂಪನಿಯ 02 ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4) ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ ಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 27.98 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 279.8  ರೂ ಗಳಾಗಿರುತ್ತೆ.ಮತ್ತು ಇದರ ಒಟ್ಟು ಮಧ್ಯೆ ದ ದ್ರವ್ಯ  ಪ್ರಮಾಣ  ಆಸಾಮಿ ಮತ್ತು ಮಾಲುಗಳನ್ನು ರಾತ್ರಿ 6-45  ಗಂಟೆಯವರೆಗೆ  7-30 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್. ನ್ನು ದಾಖಲು ಮಾಡಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಈ ದಿನ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 

6. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 245/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ:24/10/2021 ರಂದು ಸಂಜೆ 6-10 ಗಂಟೆಯಲ್ಲಿ ನ್ಯಾಯಾಲಯದ ಪಿಸಿ-198 ರವರು ಠಾಣಾ NCR NO-307/2021 ರಲ್ಲಿ ಕ್ರೀಮಿನಲ್ ಪ್ರಕರಣ ದಾಖಲಿಸಿಕೊಳ್ಳು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ: ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ ಐ ಗಂಗಾಧರಪ್ಪ ಆದ ನಾನು ಈ ದಿನ ದಿ:23.10.2021 ರಂದು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಠಾನೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಪಿ.ಸಿ. 421 ಲೋಕೇಶ್ ಕುಮಾರ್ ರವರು ನನಗೆ ಪೋನ್ ಮಾಡಿ ಗುಡಿಬಂಢೆ ಟೌನಿನ ಸಾರ್ವಜನಿಕ ಆಸ್ಪತ್ರೆ ಮುಂಬಾಗದಲ್ಲಿರುವ ಸಾರ್ವಜನಿಕ ರಸ್ತೆಯ ಪುಟ್ ಪಾತ್ ನಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆ ಎಂದು ನೀಡಿದ ಮಾಹಿತಿ ಮೇರೆಗೆ ನಾನು ದ್ವಿಚಕ್ರ ವಾಹನದಲ್ಲಿ ಮದ್ಯಾಹ್ನ 3-20 ಗಂಟೆ ಸಮಯಕ್ಕೆ ಸರ್ಕಾರಿ ಆಸ್ಪತ್ರೆಯ ಬಳಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ಥಾರೆ. ನಂತರ ನನಗೆ ಮಾಹಿತಿ ನೀಡಿದ ಬೀಟ್ ಕರ್ತವ್ಯದ ಪಿ.ಸಿ. 421 ಲೋಕೇಶ್ ಕುಮಾರ್ ರವರನ್ನು ಕರೆದುಕೊಂಡು ಪಂಚರೊಂದಿಗೆ ಸರ್ಕಾರಿ ಆಸ್ಪತ್ರೆಯ ಬಳಿಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಮುಂದೆನೋಡಲಾಗಿ ಯಾರೋ ಒಬ್ಬ ವ್ಯಕ್ತಿಯು ಕಾನುನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುಮತಿ ನೀಡಿರುವುದು ಕಂಡುಬಂದಿರುತ್ತೆ. ನಾವು ಸದರಿ ಮದ್ಯಪಾನ್ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಾಸಾಮಿ ಸ್ಥಳದಲ್ಲಿಯೇ ಇದ್ದು ಸದರಿ ಆಸಾಮಿಯನ್ನು ಹಿಡಿದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸದಾಶಿವ ಬಿನ್ ಪೋತುಲಪ್ಪ, 35 ವರ್ಷ, ಬೋವಿ ಜನಾಂಗ, ಅಲಾಸ್ ತಿಮ್ಮನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ ಗೌರೀಬಿದನೂರು ತಾಲ್ಲೂಕು ಮೊಬೈಲ್ ನಂ: 8431559001 ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಸಾರ್ವಜನಿಕ್ ಸ್ಥಳದಲ್ಲಿ ಮದ್ಯ ಸೇವನೆಗೆ ಸ್ಥಳಾವಕಾಶ ನೀಡಲಿಕ್ಕೆ ನಿನ್ನ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಆರೋಪಿಯು ಯಾವುದೇ ಪರಾವನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವೆನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈವಾರ್ಡ್ ಕಂಪನಿಯ 90 ಎಂ.ಎಂ, ಮದ್ಯವಿರುವಂತಹ 10 ಟೆಟ್ರಾ ಪಾಕೇಟ್ ಗಳು. 2) ಮದ್ಯವನ್ನು ಕುಡಿದು ಬಿಸಾಡಿರುವಂತಹ ಮೂರು ಪ್ಲಾಸ್ಟೀಕ್ ಗ್ಲಾಸ್ ಗಳು, 3) ಒಂದು ಲೀಟರ್ ಸಾಮರ್ತ್ಯದ ಒಂದು ವಾಟರ್ ಬಾಟಲ್ ಇದ್ದವು. ಮದ್ಯವಿರುವ ಪಾಕೇಟ್ ಗಳ ದ್ರವವನ್ನು ಪತ್ತೆ ಮಾಡಲಾಗಿ ಒಟ್ಟು 900 ಎಂ ಎಲ್ ಆಗಿದ್ದು ಆಪಾಕೇಟ್ ಗಳ ಧರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10= 351. 3/- ರೂ ಆಗಿರುತ್ತೆ. ಸದರಿ ಮಾಲನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 3-20 ಗಂಟೆಯಿಂದ ಮದ್ಯಾಹ್ನ 4-20 ಗಂಟೆಯವರಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಢಿರುತ್ತೆ. ಮೇಲ್ಕಂಡ ಮಾಲು, ಅಸಲು ಪಂಚನಾಮೆ ಮತ್ತು ಆರೊಪಿಯೊಂದಿಗೆ ಮದ್ಯಾಹ್ನ 4-30 ಗಂಟೆಗೆ ಠಾಣೆಗೆ ಬಂದು ವರದಿಯನ್ನ ಸಿದ್ದ ಪಡಿಸಿ ಸಂಜೆ 5-00 ಗಂಟೆಗೆ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡುತ್ತಿದ್ದ ಸದರಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

7. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 246/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ:24/10/2021 ರಂದು ಸಂಜೆ 6-45 ಗಂಟೆಯಲ್ಲಿ ನ್ಯಾಯಾಲಯದ ಪಿಸಿ-198 ರವರು ಠಾಣಾ NCR NO-309/2021 ರಲ್ಲಿ ಕ್ರೀಮಿನಲ್ ಪ್ರಕರಣ ದಾಖಲಿಸಿಕೊಳ್ಳಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ: ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ. 102, ಆನಂದ ಆದ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇ ಈ ದಿನ ದಿನಾಂಕ:23.10.2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಾನು ಮತ್ತು ಪಿ.ಸಿ. 198, ನಾಗೇಶ್ ರವರು ಗುಡಿಬಂಡೆ ಟೌನ್ ನಲ್ಲಿ ಸಂಜೆ ಗಸ್ತು ಮಾಡುತ್ತಿದ್ದಾಗ ಗುಡಿಬಂಡೆ ಟೌನಿನ ಅಂಬೇಡ್ಕರ್ ನಗರದಲ್ಲಿ ನಾರಾಯಣಸ್ವಾಮಿಯವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ಬಂದ ಬಾತ್ಮಿ ಮೇರೆಗೆ ನಾನು ಮತ್ತು ಪಿ.ಸಿ.198, ನಾಗೇಶ್ ರವರು ಅಂಬೇಡ್ಕರ್ ನಗರಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು, ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ನಂತರ ನಾವು ಮತ್ತು ಪಂಚರು ನಾರಾಯಣಸ್ವಾಮಿಯ ಮನೆಯ ಕಡೆಗೆ ಹೋಗಿ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ನಂತರ ಸಂಜೆ 4-15 ಗಂಟೆ ಸಮಯದಲ್ಲಿ  ಪಂಚರೊಂದಿಗೆ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿ ಸ್ಥಳದಲ್ಲಿಯೇ ಇದ್ದು, ಸದರಿ ಆಸಾಮಿಯನ್ನು ಹಿಡಿದು ಹೆಸರು & ವಿಳಾಸವನ್ನು ಕೇಳಿ ತಿಳಿಯಲಾಗಿ ರವಿ ಎನ್. ಬಿನ್ ನಾರಾಯಣಸ್ವಾಮಿ, 33 ವರ್ಷ, ಆದಿಕನರ್ಾಟಕ ಜನಾಂಗ, ಕೂಲಿ ಕೆಲಸ, 4 ನೇ ವಾರ್ಡ, ಅಂಬೇಡ್ಕರ್ ನಗರ, ಗುಡಿಬಂಡೆ ಟೌನ್. ಚಿಕ್ಕಬಳ್ಳಾಪುರ ಜಿಲ್ಲೆ ಮೊಬೈಲ್ ನಂ:7760642760 ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಸ್ಥಳಾವಕಾಶ ನೀಡಲಿಕ್ಕೆ ನಿನ್ನ ಬಳಿ ಪರವಾನಗಿ ಇದೆಯೇ ಎಂದು  ಕೇಳಲಾಗಿ, ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ.  ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ  1) ಹೈ ವಾಡ್ರ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು 2) ಹೈ ವಾಡ್ರ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಖಾಲಿ 4 ಟೆಟ್ರಾ ಪಾಕೆಟ್ಗಳು, 3) ಮದ್ಯವನ್ನು ಕುಡಿದು  ಬಿಸಾಡಿರುವಂತಹ 04 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು, 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದವು.  ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1080 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*12=421.56/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 4-15 ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-20 ಗಂಟೆಗೆ  ಠಾಣಾಧಿಕಾರಿಗಳಿಗೆ ವರದಿ ನೀಡುತ್ತಿದ್ದು ಸದರಿ ಆರೋಪಿ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

8. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 247/2021, ಕಲಂ. 279, 337 ಐ.ಪಿ.ಸಿ:-

          ದಿನಾಂಕ: 25.10.2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಪಿರ್ಯಾದಿಧಾರರಾದ ಕೃಷ್ಣಮೋಹನ್ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ   ನಾನು ಈಗ್ಗೆ ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುತ್ತೇನೆ. ದಿನಾಂಕ 25.10.2021 ರಂದು ನಾನು ಮತ್ತು ನನ್ನ ಹೆಂಡತಿ ಕೆ.ಪುಷ್ಪಲತರವರು ಬೆಂಗಳೂರಿನಿಂದ ಹೈದರಬಾದಿಗೆ ಹೋಗಲು ನಮ್ಮ ಬಾಬತ್ತು ಕೆ.ಎ.05.ಎಂ.ಜಡ್,6100 ನೊಂದಣಿ ಸಂಖ್ಯೆಯ ಕಾರಿನಲ್ಲಿ ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಬೆಂಗಳೂರನ್ನು ಬಿಟ್ಟು ಹೈದರಾಬಾದಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಚೆಂಡೂರ್ ಕ್ರಾಸ್ ನಲ್ಲಿ ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ  ನಮ್ಮ ಹಿಂದೆ ಬರುತ್ತಿದ್ದ ಕೆ.ಎ.08.ಎ.1604 ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಹಿಂದಿನಿಂದ ನನ್ನ ಬಾಬತ್ತು ಕೆ.ಎ.05.ಎಮ್.ಜಡ್.6100 ನೊಂದಣಿ ಸಂಖ್ಯೆಯ ಕಾರ್ಗೆ ಡಿಕ್ಕಿ ಹೊಡೆಸಿ ರಸ್ತೆ ಅಪಘಾತವನ್ನುಂಟು ಮಾಡಿದ ಪರಿಣಾಮ ನಾನು ಓಡಿಸುತ್ತಿದ್ದ ಕಾರು ರಸ್ತೆಯ ಮದ್ಯದಲ್ಲಿದ್ದ ಡೈವೈಡರ್ ಡಿಕ್ಕಿ ಹೊಡೆದು ಡಿವೈಡರ್ ನ್ನು ದಾಟಿ ಹೈದರಾಬಾದ್ ಕಡೆಯಿಂದ ಬರುವ ಠಾರ್ ರಸ್ತೆಗೆ ಹೋಗಿ ಪಲ್ಟಿಯಾಗಿ ಬಿದ್ದಿರುತ್ತೆ. ನಾನು ಮತ್ತು ನನ್ನ ಹೆಂಡತಿ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ರಸ್ತೆಯ ಪಕ್ಕದಲ್ಲಿದ್ದ ಅಂಗಡಿಯವರು ಬಂದು ನಮ್ಮನ್ನು ಕಾರಿನಿಂದ ಹೊರಗೆ ಎಳೆದು ಉಪಚರಿಸಿರುತ್ತಾರೆ. ನಮಗೆ ಡಿಕ್ಕಿ ಹೊಡೆದ ಲಾರಿಯು ಸಹ ಡಿವೈಡರ್ ಮೇಲೆ ಹತ್ತಿ ನಿಂತಿರುತ್ತೆ. ನಮಗೆ ರಸ್ತೆ ಅಪಘಾತವನ್ನು ಮಾಡಿರುವ ಲಾರಿಯ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ನನಗೆ ಮತ್ತು ನನ್ನ ಹೆಂಡತಿ ಕೆ.ಪುಷ್ಪಲತರವರಿಗೆ ಕೈಗಳಿಗೆ ಮತ್ತು ಕಾಲುಗಳಿಗೆ ತರಚಿದ ಮತ್ತು ರಕ್ತ ಗಾಯಗಳಾಗಿರುತ್ತೆ. ನಾವು ಗುಡಿಬಂಡೆ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ನಮಗೆ ರಸ್ತೆ ಅಪಘಾತವನ್ನುಂಟು ಮಾಡಿರುವ ಕೆ.ಎ.08.ಎ.1604 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 205/2021, ಕಲಂ. 279, 304(A) ಐ.ಪಿ.ಸಿ:-

          ದಿನಾಂಕ:25/10/2021 ರಂದು ಬೆಳಗ್ಗೆ 9.30 ಗಂಟೆಗೆ ಪಿರ್ಯಾದಿದಾರರಾದ ಬಾಬುಲ್ ಅಲಿ ಬಿನ್ ರಂಜನ್ ಅಲಿ, 23 ವರ್ಷ, ಕೂಲಿಕೆಲಸ, ವಾಸ:ಮೊಹಮಾರಿ ಗ್ರಾಮ, ಕರುಪೆಟಿಯಾ ಪೊಲೀಸ್ ಠಾಣಾ ವ್ಯಾಪ್ತಿ, ನಗಷರ್ ಪಂಚಾಯಿತಿ, ಮಂಗಲೋಡಿ ಜಿಲ್ಲೆ ಅಸ್ಸಾಂ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಸುಮಾರು 4 ವರ್ಷಗಳ ಹಿಂದೆ ರಫಿಕುಲ್ಲಾ ರವರ ಅಕ್ಕಳನ್ನು ಮದುವೆ ಮಾಡಿಕೊಂಡು ಅಸ್ಸಾಂನಿಂದ ಚಿಕ್ಕಮಗಳೂರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ. ನನ್ನ ಬಾಮೈದನಾದ ರಫೀಕುಲ್ಲಾ ರವರು ಗೌರಿಬಿದನೂರು ತಾಲ್ಲೂಕು ಕರ್ಣಕುಮಾರ್ ರವರ ಕೋಳಿ ಫಾರಂ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ದಿನಾಂಕ:24/10/2021 ರಂದು ಕರ್ಣಕುಮಾರ್ ರವರು ನನಗೆ ಫೋನ್ ಮಾಡಿ ನಿನ್ನ ಬಾಮೈದನು ಅಪಘಾತದಲ್ಲಿ ಮೃತಪಟ್ಟಿದ್ದು ಶವವನ್ನು ಗೌರಿಬಿದನೂರು ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿಸಿದ್ದು ದಿನಾಂಕ:25/10/2021 ರಂದು ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಶವಗಾರದ ಬಳಿಯೇ ಇದ್ದ ನಾಚಕುಂಟೆ ನಾಗೇಶ್ ರವರನ್ನು ವಿಚಾರಿಸಲಾಗಿ ತಾನು ದಿನಾಂಕ:24/10/2021 ರಂದು ರಾತ್ರಿ 7.30 ಗಂಟೆಗೆ ಹಸುಗಳನ್ನು ಹೊಡೆದುಕೊಂಡು ನಾಚಕುಂಟೆ ಗ್ರಾಮಕ್ಕೆ ರಸ್ತೆಯಲ್ಲಿ ಹೊಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಹಿಂಬದಿ ಅಲ್ಲೀಪುರ ಕಡೆಯಿಂದ ಆರೂಡಿಗೆ ಹೋಗಲು ರಫೀಕುಲ್ಲಾ ರವರು ಕೆಎ-43-ಆರ್-4369  ಆಕ್ಟೀವಾ ಹೋಂಡಾ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಇದ್ದಕ್ಕಿಂದ್ದಂತೆ ಬ್ರೇಕ್ ಹಾಕಿ ಹಸುಗಳ ಮೇಲೆ ಬಂದು ಬಿದ್ದಿದ್ದು ತಾನು ರಫೀಕುಲ್ಲಾ ರವರನ್ನು ಉಪಚರಿಸಿ ಕೋಳಿ ಫಾರಂನ ಮಾಲೀಕ ಕರ್ಣ ರವರಿಗೆ ಫೋನ್ ಮಾಡಿ ತಿಳಿಸಿದ್ದು ಸ್ವಲ್ಪ ಸಮಯದ ನಂತರ ಕರ್ಣ ರವರು ಅವರ ಟಾಟಾ ಸುಮೋ ವಾಹನದಲ್ಲಿ ಬಂದು ರಫೀಕುಲ್ಲಾ ರವರನ್ನು ಅಲ್ಲೀಪುರದ  ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ರಫೀಕುಲ್ಲಾ ರವರನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತಕ್ಕೆ ತನ್ನ ಬಾಮೈದನಾದ ರಫೀಕುಲ್ಲಾ ರವರು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯೇ ಕಾರಣವಾಗಿರುತ್ತದೆ. ನಾನು ಚಿಕ್ಕಮಗಳೂರಿನಿಂದ ಬಂದು ಈ ದಿನ ತಡವಾಗಿ ಠಾಣೆಯಲ್ಲಿ ದೂರನ್ನು ನೀಡಿರುತ್ತೆ. ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಸೂರನ್ನು ಟೈಪ್ ಮಾಡಿಸಿ ನೀಡಿರುತ್ತೇನೆ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 206/2021, ಕಲಂ. 32, 34, 38A ಕೆ.ಇ. ಆಕ್ಟ್:-

          ಈ ದಿನ ದಿನಾಂಕ:25/10/2021 ರಂದು ಮದ್ಯಾಹ್ನ 14.30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸರಸ್ವತಮ್ಮ ರವರು ಮಾಲು, ವಾಹನ, ಪಂಚನಾಮೆ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:25/10/2021 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-50 ನರಸಿಂಹಮೂರ್ತಿ, ಪಿಸಿ-152 ಜಯಣ್ಣ ಹಾಗೂ ಜೀಪ್ ಚಾಲಕರಾದ ಎ.ಹೆಚ್.ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-58 ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗೌರಿಬಿದನೂರು ತಾಲ್ಲೂಕು ಕದಿರದೇವರಹಳ್ಳಿ ಬಳಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ 12-30 ಗಂಟೆಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಯಾರೋ ಒಬ್ಬ ಆಸಾಮಿ ದ್ವಿಚಕ್ರ ವಾಹನದಲ್ಲಿ ಒಂದು ಚೀಲದಲ್ಲಿ ಮದ್ಯವನ್ನು ಎತ್ತಿಕೊಂಡು ತೊಂಡೇಬಾವಿ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿರುವುದಾಗಿ ಮಾಹಿತಿ ಬಂದಿದ್ದು ಅಲ್ಲಿಪುರ ಕ್ರಾಸ್ ಬಳಿ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ತೊಂಡೇಬಾವಿ ರೈಲ್ವೆಸ್ಟೇಷನ್ ಕಡೆಯಿಂದ ಬೆಂಗಳೂರು ಕಡೆ ರಸ್ತೆಯಲ್ಲಿ ಕಾಂತರಾಜುರವರ ಫಾರಂ ಬಳಿ ಕಾಯುತ್ತಿದ್ದಾಗ ಮದ್ಯಾಹ್ನ 12-45 ಗಂಟೆಗೆ ಒಬ್ಬ ಆಸಾಮಿ ದ್ವಿಚಕ್ರ ವಾಹನದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು, ಸದರಿ ಆಸಾಮಿಯನ್ನು ನಿಲ್ಲಿಸಲಾಗಿ ಆತ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದು, ಪಂಚರ ಸಮಕ್ಷಮ ದ್ವಿಚಕ್ರ ವಾಹನವನ್ನು ಮತ್ತು ಅದರಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ ನ ಮದ್ಯ ತುಂಬಿದ HAYWARDS CHEERS WHISKY ಯ 96 ಟೆಟ್ರಾ ಪ್ಯಾಕೇಟ್ ಗಳಿದ್ದು, ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ KA-06, EE-9894 TVS XL SUPER HEAVYDUTY ಆಗಿರುತ್ತೆ. ಆತನನ್ನು ಮದ್ಯವನ್ನು ಸಾಗಾಣಿಕೆ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ನಾರಾಯಣಗೌಡ ಬಿನ್ ರಂಗಪ್ಪ, 60 ವರ್ಷ, ಗೊಲ್ಲ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಬಂದಾರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸದರಿ ಮದ್ಯವನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿರುವುದಾಗಿ ಕೇಳಲಾಗಿ ತೊಂಡೇಬಾವಿ ರೈಲ್ವೇ ನಿಲ್ದಾಣದಲ್ಲಿರುವ ತೊಂಡೇಬಾವಿ ವೈನ್ಸ್ ನ ಕ್ಯಾಷಿಯರ್ ನಿಂದ ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾನೆ. ಸ್ಥಳದಲ್ಲಿ ದೊರೆತ ಮಧ್ಯವು 8,640 [ಎಂಟು ಲೀಟರ್ ಆರು ನೂರಾ ನಲವತ್ತು] ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 3372.48 /- ರೂಗಳಾಗಿರುತ್ತೆ. ಸದರಿ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳ ಪೈಕಿ ಒಂದು 90 ಎಂ.ಎಲ್ ನ ಮದ್ಯದ ಟೆಟ್ರಾ ಪ್ಯಾಕೇಟ್ ನ್ನು ಎಪ್.ಎಸ್.ಎಲ್ ತಜ್ಞರಿಗೆ ಕಳುಹಿಸಿಕೊಟ್ಟು ವರದಿ ಪಡೆದುಕೊಳ್ಳುವ ಸಲುವಾಗಿ ಒಂದು ಬಿಳಿಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅರಗು ಮಾಡಿ P  ಎಂಬ ಇಂಗ್ಲೀಷ್ ಅಕ್ಷರದಿಂದ ಸೀಲುಮಾಡಿರುತ್ತೆ. ಸ್ಥಳದಲ್ಲಿದ್ದ ಮಾಲುಗಳನ್ನು ಮದ್ಯಾಹ್ನ 12-45 ರಿಂದ 1-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಸದರಿ ಮಾಲು, ದ್ವಿಚಕ್ರವಾಹನ ಮತ್ತು ಆರೋಪಿಯನ್ನು ತಮ್ಮಲ್ಲಿ ಹಾಜರುಪಡಿಸುತ್ತಿದ್ದು, ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮಧ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಮೇಲ್ಕಂಡ ಆಸಾಮಿ, ತೊಂಡೇಬಾವಿ ವೈನ್ಸ್ ನ ಕ್ಯಾಷಿಯರ್ ಮತ್ತು ಮಾಲೀಕರ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೆ.

 

11. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ, ಮೊ.ಸಂ. 134/2021, ಕಲಂ. 78(1)(a)(vi), 87 ಕೆ.ಪಿ. ಆಕ್ಟ್:-

          ದಿನಾಂಕ.24.10.2021 ರಂದು ರಾತ್ರಿ 11.45 ಗಂಟೆಗೆ  ಕೆ.ಸತೀಶ್ ಪಿ.ಎಸ್.ಐ (ಕಾ&ಸು) ರವರು ಅರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳನ್ನು ಹಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:24-10-2021 ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ತಾನು ಠಾಣಾ ಕರ್ತವ್ಯದಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ನಗರದ ಆಶೋಕ ರಸ್ತೆಯ ಮಯೂರ ಸರ್ಕಲ್ ಸಮೀಪ ಎಸ್.ವಿ.ಎಸ್ ಪ್ರಾವೀಜನ್ ಸ್ಟೋರ್ ಅಂಗಡಿ ಮುಂದೆ ಯಾರೋ ಅಸಾಮಿಗಳು ಗುಂಪು ಸೇರಿಕೊಂಡು ಈ ದಿನ ದುಬೈನಲ್ಲಿ ನಡೆಯುತ್ತಿರುವ 20-20 ಕ್ರಿಕೆಟ್ ವರ್ಲ್ಡ್ ಕಪ್-2021 ಗೆ ಸಂಬಂದಿಸಿದಂತೆ ಭಾರತ ಮತ್ತು ಪಾಕೀಸ್ತಾನ ಟೀಮ್ ಗಳ ಮದ್ಯೆ ನಡೆಯುತ್ತಿರುವ 20-20 ಕ್ರಿಕೆಟ್ ಪಂದ್ಯಕ್ಕೆ ಸಂಬಂದಪಟ್ಟಂತೆ ಎರಡು ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಒಬ್ಬರಿಗೊಬ್ಬರು ಬೆಟ್ಟಿಂಗ್ ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ  ದಾಳಿ ಮಾಡಿ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿ ಪಡೆದುಕೊಂಡು ನಂತರ ಪಂಚಾಯ್ತಿದಾರರು ಠಾಣೆಯ ಸಿಬ್ಬಂದಿಯವರಾದ ಪಿ.ಸಿ.126 ವೆಂಕಟೇಶ್, ಪಿ.ಸಿ.308 ಚಂದಪ್ಪ ಯಲಿಗಾರ್, ಪಿ.ಸಿ.471 ಆನಂದ, ಪಿ.ಸಿ.132 ವಿನಯ್ ರವರೊಂದಿಗೆ ರಾತ್ರಿ 10-10 ಗಂಟೆಗೆ ಎಸ್.ವಿ.ಎಸ್ ಪ್ರಾವೀಜನ್ ಸ್ಟೋರ್ ಮುಂದೆ ಮೊಬೈಲ್ ಮೂಲಕ ಸ್ಕೋರ್ ನೋಡಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಅಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 4 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ಮನೋಜ್ ಬಿನ್ ಶ್ರೀನಿವಾಸ.ಎಸ್.ವಿ, 29 ವರ್ಷ, ಬಲಜಿಗರು, ಎಸ್.ವಿ.ಎಸ್. ಪ್ರಾವೀಜನ್ ಸ್ಟೋರ್ ವ್ಯಾಪಾರ, ಅಶೋಕ ರಸ್ತೆ, ಉಲ್ಲೂರುಪೇಟೆ, ಶಿಡ್ಲಘಟ್ಟ ಟೌನ್ ಇವರ ಬಳಿ ಓನ್ ಪ್ಲಸ್ ಕಂಪನಿಯ ಮೊಬೈಲ್ ಪೋನ್ (ನಂ.7760506143) ಆಗಿದ್ದು, ವಿಚಾರಿಸಲಾಗಿ CBTF 247.com ಆಪ್ ನಲ್ಲಿ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿರುತ್ತಾನೆ. ಇವರ ಬಳಿ ಪಂದ್ಯಕ್ಕೆ ಬಳಿಸಿದ 7,710/-ರೂ ನಗದು ಹಣ ಇರುತ್ತೆ. 2] ಇಸ್ಮಾಯಿಲ್ ಬಿನ್ ಮಹಬೂಬ್ ಸಾಬಿ, 36 ವರ್ಷ, ಮುಸ್ಲಿಂ, ಪ್ರೂಟ್ ವ್ಯಾಪಾರ, 2ನೇ ಟಿ.ಎಂ.ಸಿ ಲೇಔಟ್, ಶಿಡ್ಲಘಟ್ಟ ಟೌನ್ ಇವರ ಬಳಿ ವಿವೋ ಕಂಪನಿಯ ಮೊಬೈಲ್ ಪೋನ್ (ನಂ.99452870564) ಆಗಿದ್ದು, ವಿಚಾರಿಸಲಾಗಿ Fresh ಆಪ್ ನಲ್ಲಿ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿರುತ್ತಾನೆ. 3] ಆಸೀಫ್ ಬಿನ್ ಅಮಾನುಲ್ಲಾ, 25 ವರ್ಷ, ಮುಸ್ಲಿಂ, ಮಟನ್ ಹೋಟೆಲ್ ವ್ಯಾಪಾರ, ಇಲಾಹಿನಗರ, ಶಿಡ್ಲಘಟ್ಟ ಟೌನ್, ಇವರ ಬಳಿ ರಿಯಲ್ ಮೀ ಎಕ್ಸ್ ಕಂಪನಿಯ ಮೊಬೈಲ್ ಪೋನ್ (ನಂ.8722742572) ಆಗಿದ್ದು, ವಿಚಾರಿಸಲಾಗಿ ತನ್ನ ಮೊಬೈಲ್ ನಿಂದ ಇಸ್ಮಾಯಿಲ್ ರವರ ಮೊಬೈಲ್ ಗೆ 1000/-ರೂ ಹಣ ಕಳುಹಿಸಿ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿರುತ್ತಾನೆ. 4] ಲಕ್ಷ್ಮೀಪತಿ ಬಿನ್ ಲೇಟ್ ನಾರಾಯಣಸ್ವಾಮಿ, 38 ವರ್ಷ, ಗೊಲ್ಲರು, ಕಾಂಡಿಮೆಂಡ್ಸ್ ಕೆಲಸ, ವಾಸ ಜೋಗುಪೇಟೆ, ಶಿಡ್ಲಘಟ್ಟ ನಗರ, ಇವರ ಬಳಿ ಓಪೋ ಕಂಪನಿಯ ಮೊಬೈಲ್ ಪೋನ್ (97313973873) CRICKET BET-9.com ವೆಬ್ ನಲ್ಲಿ ಅನ್ ಲೈನ್ ಮೂಲಕ ಆಡುತ್ತಿರುವುದಾಗಿ ತಿಳಿಸಿರುತ್ತಾರೆ. ಕೆಲವರು ಓಡಿ ಹೋಗಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 5] ಅತೀಕ್ 2ನೇ ಕಾರ್ಮಿಕನಗರ, 6] ಸಾಬೀರ್ 2ನೇ ಟಿ.ಎಂ.ಸಿ ಲೇಔಟ್ 7] ಜಹಂಗೀರ್ 2ನೇ ಟಿ.ಎಂ.ಸಿ ಲೇಔಟ್ 8] ಪೈರೋಜ್, 2ನೇ ಟಿ.ಎಂ.ಸಿ ಲೇಔಟ್ 9] ಕಿರಣ್, ಮಯೂರ ಸರ್ಕಲ್ 10] ಶ್ರೀಕಾಂತ್ ಮಯೂರ ಸರ್ಕಲ್ 11] ಅದಿಲ್ 12] ಬಾಬು, ಕೋಟೆ 13] ಗೌತಮ್ ಉಲ್ಲೂರುಪೇಟೆ ಎಲ್ಲರೂ ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇವರು ಮನೋಜ್ ರವರ ಬಳಿ ಇರುವ ಮೊಬೈಲ್ ಪೋನ್ ಮೂಲಕ ದುಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಟೀಂಗಳ ಮದ್ಯೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಇಂಡಿಯಾ ಟೀಂ ಗೆಲ್ಲುತ್ತೆ 1000/-ರೂ ಎಂತಲೂ ಮತ್ತೊಬ್ಬರು ಪಾಕೀಸ್ತಾನ್ ಟೀಂ ಗೆಲ್ಲುತ್ತೆ 1000/-ರೂ ಎಂದು ಮಾತನಾಡಿಕೊಂಡು ಹಣವನ್ನು ಪಣಕ್ಕೆ ಕಟ್ಟಿ ಮನೋಜ್ ರವರ ಮೊಬೈಲ್ ಪೋನ್ ನಲ್ಲಿ ಕ್ರಿಕೆಟ್ ಸ್ಕೋರ್ ನೋಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿರುವುದಾಗಿ ಮನೋಜ್ ರವರು ತಿಳಿಸಿರುತ್ತಾರೆ. ಇವರು ಮನೋಜ್ ರವರ ಬಳಿ ಪಣಕ್ಕೆ ಕಟ್ಟಿದ್ದ ಹಣವನ್ನು ಎಣಿಕೆ ಮಾಡಲಾಗಿ ಒಟ್ಟು 7,710/-ರೂ ನಗದು ಹಣ ಇರುತ್ತೆ. ಮನೋಜ್ ರವರ ಬಳಿ ಸ್ಕೋರ್ ನೋಡಲು ಇಟ್ಟುಕೊಂಡಿದ್ದ ಓನ್ ಪ್ಲಸ್ ಕಂಪನಿಯ ಮೊಬೈಲ್ ಪೋನ್ ಉಳಿದವರ ಬಳಿ ಇದ್ದ 3 ಮೊಬೈಲ್ ಪೋನ್ ಗಳು ಒಟ್ಟು 4 ಮೊಬೈಲ್ ಪೋನ್ ಮತ್ತು ಪಂದ್ಯಕ್ಕೆ ಬಳಸಿದ್ದ 7,710/-ರೂ ನಗದು ಹಣವನ್ನು ರಾತ್ರಿ 10-15 ರಿಂದ 11-15 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ವಶಕ್ಕೆ ಪಡೆದ 4-ಜನ ಆರೋಪಿಗಳನ್ನು ಮತ್ತು ಅಮಾನತ್ತು ಪಡಿಸಿದ ಮಾಲುಗಳನ್ನು ಒಪ್ಪಿಸುತ್ತಿದ್ದು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಮೇಲ್ಕಂಡವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 25-10-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080