ಅಭಿಪ್ರಾಯ / ಸಲಹೆಗಳು

 

1. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 243/2021, ಕಲಂ. 15(A), 32(3) ಕೆ.ಇ. ಆಕ್ಟ್:-

            ಘನ ನ್ಯಾಯಾಲಯದ ಪಿ.ಸಿ. 198 ನಾಗೇಶ್ ರವರು ಠಾಣೆಯ ಎನ್ ಸಿ ಆರ್ ನಂ: 305/2021 ರಲ್ಲಿ ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ  ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ  ಶ್ರೀ ಗಂಗಾಧರಪ್ಪ ಎ.ಎಸ್.ಐ, ಗುಡಿಬಂಡೆ ಠಾಣೆರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:23.10.2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಸಾರ್ವಜನಿಕರು ನನಗೆ ಪೋನ್ ಮಾಡಿ, ಗುಡಿಬಂಡೆ ಟೌನಿನ ಎಸ್ ಬಿ ಎಂ ಸರ್ಕಲ್ಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಸಿಬ್ಬಂದಿಯಾದ ಪಿಸಿ.421. ಲೋಕೇಶ್ ಕುಮಾರ್ ರವರನ್ನು ಕರೆದುಕೊಂಡು ಎಸ್ ಬಿ ಎಂ ಸರ್ಕಲ್ ಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ ಬೆಳಿಗ್ಗೆ 10-00 ಗಂಟೆಯಲ್ಲಿ ಪಂಚರೊಂದಿಗೆ ಹೋಗಿ ಮರೆಯಲ್ಲಿ ನಿಂತು ಎಸ್ ಬಿ ಎಂ ಸರ್ಕಲ್ ನಲ್ಲಿ ನೋಡಲಾಗಿ ರಸ್ತೆಯ ಉತ್ತರದ ಕಡೆಯ ಪುಟ್ ಪಾತ್ನ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು. ಆ ಪೈಕಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದವನು ಸ್ಥಳದಲ್ಲಿಯೇ ಇದ್ದು ಅವನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ಗಂಗಪ್ಪ ಬಿನ್ ಚೆಂಗಪ್ಪ, 55 ವರ್ಷ, ಆದಿಕನರ್ಾಟಕ ಜನಾಂಗ, ಜಿರಾಯ್ತಿ, ಆರ್.ಚೊಕ್ಕನಹಳ್ಳಿ ಗ್ರಾಮ, ಮಂಡಿಕಲ್ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದನು. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾಡ್ರ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 3 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಡಿರುವಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಒಂದು ಖಾಲಿ ವಾಟರ್ ಬಾಟಲ್ ಇದ್ದವು. ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 351/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-15 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಿಗ್ಗೆ 11-20  ಗಂಟೆಗೆ ಠಾಣೆಗೆ ಹಾಜರಾಗಿ, ಬೆಳಿಗ್ಗೆ 11-45 ಗಂಟೆಗೆ ವರದಿಯನ್ನು ಸಿದ್ದ ಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿದೆ. ಎಂದು ನೀಡಿದ ದೂರಾಗಿರುತ್ತೆ.

 

2. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 244/2021, ಕಲಂ. 15(A), 32(3) ಕೆ.ಇ. ಆಕ್ಟ್:-

            ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಎಸ್,ಐ ಗಂಗಾಧರಪ್ಪನವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ದಿನಾಂಕ:23.10.2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಗುಡಿಬಂಢೆ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಹೆಚ್.ಸಿ. 102 ಆನಂದರ ರವರು ನನಗೆ ಪೋನ್ ಮಾಡಿ ಯರ್ರಲ್ಲಕ್ಕೇನಹಳ್ಳಿಯಲ್ಲಿ ಗೋಪಾಲಪ್ಪ ಎಂಬುವರ ಮನೆಯ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು, ಹೆಚ್.ಸಿ.73, ಹನುಮಂತರಾಯಪ್ಪನವರನ್ನು ಜೊತೆಯಲ್ಲಿ ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಮದ್ಯಾಹ್ನ12-30 ಗಂಟೆ ಸಮಯಕ್ಕೆ ಯರ್ರಲಕ್ಕೇನಹಳ್ಳಿ ಗ್ರಾಮದ ಬಳಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು, ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನನಗೆ ಮಾಹಿತಿಯನ್ನು ನೀಡಿದ ಬೀಟ್ ಕರ್ತವ್ಯದ ಹೆಚ್.ಸಿ.102 ಆನಂದರವರನ್ನು ಕರೆದುಕೊಂಡು, ಪಂಚರೊಂದಿಗೆ ಯರ್ರಲಕ್ಕೇನಹಳ್ಳಿ ಗ್ರಾಮದ ಗೋಪಾಲಪ್ಪ ರವರ ಮನೆಯ ಕಡೆಗೆ ಹೋಗಿ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 12-45 ಗಂಟೆಗೆ ಪಂಚರೊಂದಿಗೆ ನಾವು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿ ಸ್ಥಳದಲ್ಲಿಯೇ ಇದ್ದು, ಸದರಿ ಆಸಾಮಿಯನ್ನು ಹಿಡಿದು ಹೆಸರು & ವಿಳಾಸವನ್ನು ಕೇಳಿ ತಿಳಿಯಲಾಗಿ ಗೋಪಾಲಪ್ಪ ಬಿನ್ ಚಿನ್ನಪ್ಪಯ್ಯ, 55 ವರ್ಷ, ಪಟ್ರ ಜನಾಂಗ, ವ್ಯಾಪಾರ. ಯರ್ರಲಕ್ಕೇನಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ, ಮೊಬೈಲ್ ನಂ: 9741324909 ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಸ್ಥಳಾವಕಾಶ ನೀಡಲಿಕ್ಕೆ ನಿನ್ನ ಬಳಿ ಪರವಾನಗಿ ಇದೆಯೇ ಎಂದು  ಕೇಳಲಾಗಿ, ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ.  ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ  1) ಹೈ ವಾಡ್ರ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 9 ಟೆಟ್ರಾ ಪಾಕೆಟ್ಗಳು ಇದ್ದು, 2) ಮದ್ಯವನ್ನು ಕುಡಿದು  ಬಿಸಾಡಿರುವಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದವು.  ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 810 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*9=316.17/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 1-00 ಗಂಟೆಯಿಂದ ಮದ್ಯಾಹ್ನ 2-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 2-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 3-00 ಗಂಟೆಗೆ ಠಾಣಾಧಿಕಾರಿಗಳಿಗೆ ವರದಿ ನೀಡುತ್ತಿದ್ದು ಸದರಿ ಆರೋಪಿ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಎಂದು ನೀಡಿದ ದೂರಿನ ಮೇರೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

3. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 204/2021, ಕಲಂ. 15(A), 32(3) ಕೆ.ಇ. ಆಕ್ಟ್:-

            ದಿನಾಂಕ:23/10/2021 ರಂದು ಠಾಣಾ ಎ.ಎಸ್.ಐ ಶ್ರೀ ಮುನಾವರ್ ಪಾಷ ರವರು ಮಾಲು, ಮಹಜರ್ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:23/10/2021 ರಂದು  ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಪಿ.ಸಿ 483 ರಮೇಶ್ ಬಾಬು, ಪಿಸಿ 311 ಗೂಳಪ್ಪ ಶ್ರೀಶೈಲ ನಿಂಗನೂರು ರವರು ದ್ವಿಚಕ್ರ ವಾಹನಗಳಲ್ಲಿ ಮಂಚೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ ಜರಬಂಡಹಳ್ಳಿ ಗ್ರಾಮದ  ಲಕ್ಷ್ಮೀನರಸಿಂಹಪ್ಪ ಬಿನ್ ಲೇಟ್ ರಾಮಯ್ಯ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಪಿ.ಸಿ.311 ಗೂಳಪ್ಪ ಶ್ರೀಶೈಲ ನಿಂಗನೂರು ಮತ್ತು ಪಂಚರೊಂದಿಗೆ  ರಲ್ಲಿ ಮದ್ಯಾಹ್ನ 3-30  ಗಂಟೆಯ ಸಮಯಕ್ಕೆ  ಜರಬಂಡಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹಪ್ಪ ಬಿನ್ ಲೇಟ್ ರಾಮಯ್ಯ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಲಕ್ಷ್ಮೀನರಸಿಂಹಪ್ಪ ಬಿನ್ ಲೇಟ್ ರಾಮಯ್ಯ, 50 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಜರಬಂಡಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 18  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಮದ್ಯಾಹ್ನ 4-00 ಗಂಟೆಯಿಂದ 5-00 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 648/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಲಕ್ಷ್ಮೀನರಸಿಂಹಪ್ಪ ಬಿನ್ ಲೇಟ್ ರಾಮಯ್ಯ ರವರನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ವಶಕ್ಕೆ ನೀಡುತ್ತಿದ್ದು, ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

4. ನಂದಿಗಿರಿಧಾಮ ಪೊಲೀಸ್ ಠಾಣೆ, ಮೊ.ಸಂ. 140/2021, ಕಲಂ. 87 ಕೆ.ಪಿ. ಆಕ್ಟ್:-

            ದಿನಾಂಕ23-10-2021 ರಂದು  15:40 ಗಂಟೆಗೆ ಪಿಎಸ್.ಐ ರವರು ದಾಳಿ ನಡೆಸಿ ವಶಕ್ಕೆ ಪಡೆದಿದ್ದ 5  ಜನ ಅಸಾಮಿಗಳನ್ನು, ಮಾಲು ಮತ್ತು ಪಂಚನಾಮೆಯನ್ನು ಹಾಜರ್ಪಡಿಸಿ ಅಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:23/10/2021 ರಂದು ಮದ್ಯಾಹ್ನ 1:30 ಸಮಯದಲ್ಲಿ ಸಿಬ್ಬಂದಿಯಾದ ಪಿಸಿ-240 ಮಧುಸೂಧನ್, ಪಿಸಿ-314 ಜವರಪ್ಪ, ಪಿಸಿ-183 ಶಿವಲಿಂಗ, ಪಿಸಿ-550 ನಾಗಾಜರ್ುನ ಹಾಗೂ ಜೀಪ್ ಚಾಲಕ ಪಾರುಕ್ ರವರೊಂದಿಗೆ ಠಾಣಾ ಸರಹದ್ದು ಹಗಲು ಗಸ್ತಿನಲ್ಲಿದ್ದಾಗ ನನಗೆ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ ಕಣಿತಹಳ್ಳಿ ಗ್ರಾಮದ ಮುತ್ತೂರು ಕಡೆಗೆ ಹೋಗುವ ರಸ್ತೆಯಿಂದ ಬಲ ಭಾಗದ ಕಡೆಗೆ ತೋಟಗಳ ಕಡೆಗೆ ಹೋಗುವ ರಸ್ತೆಯ ಮದ್ಯ ಭಾಗದಲ್ಲಿ ಜನರು ಗುಂಪು ಗುಂಪಾಗಿ ಸೇರಿಕೊಂಡು ಅಂದರ್-ಬಾಹರ್ ಇಸ್ಟೀಟ್ ಜೂಜಾಟವಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದಿದ್ದು ಆ ಮೇರೆಗೆ ಸದರಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಮೇಲೆ ದಾಳಿ ನಡೆಸಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ನಕ್ಕನಹಳ್ಳಿಗೆ ಮದ್ಯಾಹ್ನ 1:45 ಹೋಗಿ ಅಲ್ಲಿ ಪಂಚರನ್ನಾಗಿ ಇಬ್ಬರನ್ನು ಬರಮಾಡಿಕೊಂಡು ಅವರ ಜೊತೆಯಲ್ಲಿ ಅಲ್ಲಿಂದ ಕಣಿತಹಳ್ಳಿಗೆ ಹೋಗಿ ಅಲ್ಲಿಂದ ಮುತ್ತೂರು ಗ್ರಾಮದ ಕಡೆಗೆ ಹೋಗುವ ರಸ್ತೆಯ ಬಲ ಬದಿಯ ಕಡೆಗೆ ಇರುವ ತೋಟಗಳ ಕಡೆಗೆ ಹೋಗುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮೊರೆಯಲ್ಲಿ ನಿಂತು ನೋಡಲಾಗಿ ರಸ್ತೆಯ ಮದ್ಯ ಭಾಗದಲ್ಲಿ ಸುಮಾರು ಜನರು ಗುಂಪಾನಿ ಕುಳಿತುಕೊಂಡು ಅದರಲ್ಲಿ ಒಬ್ಬ ಅಸಾಮಿ ಅಂದರ್ಗೆ 200/- ರೂಗಳೆಂದು ಬಾಹರ್ಗೆ 200 ರೂಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಮದ್ಯಾಹ್ನ 1:55 ಗಂಟೆಗೆ ದಾಳಿ ಮಾಡಿದಾಗ ಅವರೆಲ್ಲರು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿ 5 ಜನ ಅಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಬಂದಿದ್ದವರನ್ನು ಹೆಸರು ವಿಳಾಸ ಕೇಳಲಾಗಿ 1) ಶ್ರೀನಿವಾಸ ಬಿನ್ ಲೇಟ್ ರಾಮಾಂಜಿನಪ್ಪ, 31 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಕಣಿತಹಳ್ಳಿ ಗ್ರಾಮ, 2) ಪ್ರವೀಣ್ ಬಿನ್ ಮುನಿಯಪ್ಪ, 27 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಕಣಿತಹಳ್ಳಿ ಗ್ರಾಮ, 3) ರಮೇಶ್ ಬಿನ್ ವೆಂಕಟೇಶಪ್ಪ, 31 ವರ್ಷ, ಪ.ಜಾತಿ ಕೂಲಿ ಕೆಲಸ, ವಾಸ: ಕಣಿತಹಳ್ಳಿ ಗ್ರಾಮ, 4) ಅಂಬರೀಷ ಬಿನ್ ನಾರಾಯಣಸ್ವಾಮಿ, 24 ವರ್ಷ, ಕೂಲಿ ಕೆಲಸ, ವಾಸ: ಕಣಿತಹಳ್ಳಿ ಗ್ರಾಮ, 5) ಶಿವಕುಮಾರ್ ಬಿನ್ ಸಲ್ಲಪ್ಪ, 32 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಕಣಿತಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು ಇವರ ಮುಂದೆ ಅಂದರ್-ಬಾಹರ್ ಇಸ್ಟೀಟ್ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಟೀಟ್ ಎಲೆಗಳು ಮತ್ತು ಹಣವಾಗಿ ಕಟ್ಟುತ್ತಿದ್ದ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸದರಿ ಇಸ್ಟೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಟೀಟ್ ಎಲೆಗಳು ಇರುತ್ತವೆ. ಹಣವನ್ನು ಎಣಿಕೆ ಮಾಡಲಾಗಿ 2800 ರೂಗಳಿರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 2800/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 2:00 ಗಂಟೆಯಿಂದ ಮದ್ಯಾಹ್ನ 3:00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮದ್ಯಾಹ್ನ 3:30 ಗಂಟೆಗೆ ಠಾಣೆಗೆ ಬಂದಿರುತ್ತೆವೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 24-10-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080