ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 372/2021, ಕಲಂ. 379 ಐಪಿಸಿ:-

                ದಿನಾಂಕ 22/10/2021 ರಂದು ಸಂಜೆ 5-00 ಗಂಟೆಗೆ ಫಿರ್ಯಾಧಿದಾರರಾದ ಸುಜಾನ್ ರಾಮ್ ಬಿನ್ ಲುಂಬಾ ರಾಮ್ , 31 ವರ್ಷ, ದೇವಾಸಿ ಜನಾಂಗ, ವ್ಯಾಪಾರ,ವಾಸ ಸೆವೆನ್ ಹಿಲ್ಸ್ ರಸ್ತೆ, 9 ವಾರ್ಡ, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ. 19/07/2021 ರಂದು ನಾನು   ಎಂದಿನಂತೆ  ನನ್ನ    ಬಾಬತ್ತು     ಕೆ.ಎ-02-.ಜೆ.ಕ್ಯೂ-4736  ನೊಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್ ಎಲ್  ದ್ವಿ ಚಕ್ರ ವಾಹನದಲ್ಲಿ ಅಂಗಡಿಗೆ ಹೋಗಿ ರಾತ್ರಿ ಸುಮಾರು 8-30 ಗಂಟೆಗೆ ವಾಪಸ್ ಮನೆಯ ಬಂದು ನಮ್ಮ ಮನೆಯ ಮುಂದೆ ದ್ವಿ ಚಕ್ರ ವಾಹನವನ್ನು ನಿಲ್ಲಿಸಿರುತ್ತೇನೆ. ನಂತರ ದಿನಾಂಕ 20/07/2021 ರಂದು ಬೆಳಿಗಿನ ಜಾವ 6-00 ಗಂಟೆ ಎದ್ದು ನೋಡಲಾಗಿ ನಾನು ನಿಲ್ಲಿಸಿದ್ದ ದ್ವಿ ಚಕ್ರ ವಾಹನ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಎಲ್ಲ ಕಡೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ನನ್ನ ಬಾಬತ್ತು ನನ್ನ ಬಾಬತ್ತು ಕೆ.ಎ-02-.ಜೆ.ಕ್ಯೂ-4736  ನೊಂದಣಿ ಸಂಖ್ಯೆ ಟಿ.ವಿ.ಎಸ್ ಎಕ್ಸ್.ಎಲ್ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 373/2021, ಕಲಂ. 15(A), 32(3) ಕೆ.ಇ. ಆಕ್ಟ್:-

                ದಿನಾಂಕ: 21/10/2021 ರಂದು ರಾತ್ರಿ 9-10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಿಹೆಚ್ ಸಿ-71 ಸುಬ್ರಮಣಿ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ನನಗೆ ಮತ್ತು  ಮಂಜುನಾಥ ಸಿಪಿಸಿ-531 ರವರಿಗೆ  ಈ ದಿನ ದಿನಾಂಕ:21.10.2021 ರಂದು ನಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ಮಂಜು ಬಿ.ಪಿ ರವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ನೇಮಿಸಿದ್ದು, ಅದರಂತೆ ಬಾಗೇಪಲ್ಲಿ ಪುರ ಮತ್ತು ನಲ್ಲಪ್ಪರೆಡ್ಡಿಪಲ್ಲಿ, ಗೂಳೂರು ಗ್ರಾಮಗಳ ಕಡೆ ಗಸ್ತಿನಲ್ಲಿದ್ದಾಗ ಸಂಜೆ 6.30 ಗಂಟೆಯ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಗೂಳೂರು ಹೋಬಳಿ ಚನ್ನರಾಯನಪಲ್ಲಿ ಗ್ರಾಮದಲ್ಲಿ ಅಶ್ವತ್ಥ ಬಿನ್ ವೆಂಕಟಸ್ವಾಮಿರವರು ಅವರ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರು ಮದ್ಯಪಾನ ಸೇವನೆಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಸಂಜೆ 6.45 ಗಂಟೆಗೆ ಸದರಿ ಗ್ರಾಮಕ್ಕೆ ಹೋಗಿ ಪಂಚಾಯಿತಿದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಪಂಚರೊಂದಿಗೆ  ದಾಳಿಮಾಡಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ನಮ್ಮನ್ನು ನೋಡಿ ಅಲ್ಲಿಂದ ಓಡಿಹೋದರು. ನಂತರ ಸ್ಥಳದಲ್ಲಿದ್ದ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಅಶ್ವತ್ಥ ಬಿನ್ ವೆಂಕಟಸ್ವಾಮಿ, 35ವರ್ಷ, ಬೋವಿ ಜನಾಂಗ, ಚನ್ನರಾಯನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಸ್ಥಳದಲ್ಲಿ ಬಿದ್ದಿದ್ದ 1) 90 ಎಂ.ಎಲ್ ನ ಮದ್ಯತುಂಬಿರುವ 23 HAYWARDS CHEERS WHISKY ಕಂಪನಿಯ ಟೆಟ್ರಾ ಪಾಕೆಟ್ ಗಳು, 2) ಮದ್ಯಸೇವನೆಮಾಡಿ ಖಾಲಿಯಾಗಿರುವ 90 ಎಂ.ಎಲ್ ನ ಖಾಲಿ 2 HAYWARDS CHEERS WHISKY ಕಂಪನಿಯ ಟೆಟ್ರಾ ಪಾಕೆಟ್ ಗಳು, 3) ಒಂದು ಲೀಟರ್ ವಾಟರ್ ಬಾಟಲ್ 4) ಎರಡು ಪ್ಲಾಸ್ಟಿಕ್ ನೀರಿನ ಲೋಟಗಳು ಇದ್ದು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮದ್ಯತುಂಬಿರುವ 90 ಎಂ.ಎಲ್ 23 ಟೆಟ್ರಾ ಪಾಕೆಟ್ ಗಳ ಒಟ್ಟು ಮದ್ಯವು 2 ಲೀಟರ್ 70 ಎಂ.ಎಲ್ ಇದ್ದು, ಇವುಗಳ ಒಟ್ಟು ಬೆಲೆ 807/-ರೂ ಬೆಲೆಬಾಳುವುದಾಗಿರುತ್ತೆ. ಸದರಿ ಮೇಲ್ಕಂಡ ಆಸಾಮಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿರುತ್ತೆ. ಆದ್ದರಿಂದ ಮುಂದಿನ ಕ್ರಮಕ್ಕಾಗಿ ಸದರಿ ಆಸಾಮಿಯನ್ನು ನಮ್ಮ ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ, ಆರೋಪಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿಆರ್ ನಂ-328/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿನಾಂಕ: 22/10/2021 ರಂದು ಸಂಜೆ 6-00 ಗಂಟೆಗೆ ಪಿಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 374/2021, ಕಲಂ. 406, 420 ಐಪಿಸಿ:-

                ದಿನಾಂಕ 23/10/2021 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾಧಿದಾರರಾದ ವೆಂಕಟೇಶ್ ಆರ್ ವಿ ಬಿನ್ ಲೇಟ್ ವೆಂಕಟರವಣಪ್ಪ, 40 ವರ್ಷ, ನಾಯಕ ಜನಾಂಗ, ಖಾಸಗಿ ಕೆಲಸ, ವಾಸ ಹೊಸಕೋಟೆ ಟೌನ, ಬೆಂಗಳೂರು (ಗ್ರಾ) ಜಿಲ್ಲೆ, ಸ್ವಂತ ಗ್ರಾಮ ರಾಚವಾರಪಲ್ಲಿ ಗ್ರಾಮ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನನ್ನ ಸ್ವಂತ ಗ್ರಾಮ ಪಾತಪಾಳ್ಯ ಹೋಬಳಿ ರಾಚವಾರಪಲ್ಲಿ ಗ್ರಾಮವಾಗಿದ್ದು ಹಾಲಿ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಹೊಸಕೋಟೆ ಟೌನ್ ನಲ್ಲಿ ವಾಸವಾಗಿರುತ್ತೇನೆ. ನನ್ನ ಸ್ನೇಹಿತನಾದ ಚೇಳೂರು ಹೋಬಳಿ ಕೊತ್ತಕೋಟೆ ವಾಂಡ್ಲಪಲ್ಲಿ ಗ್ರಾಮದ ವಾಸಿಯಾದ ವೆಂಕಟರೆಡ್ಡಿ ಕೆ.ಎನ್  ಬಿನ್ ಲೇಟ್ ನಾರಾಯಣಪ್ಪ ರವರು ಸಹ ಹೊಸಕೋಟೆ ತಾಲ್ಲೂಕು ಚೊಕ್ಕಳ್ಳಿಯಲ್ಲಿ ವಾಸವಾಗಿದ್ದು ನಾವಿಬ್ಬರು ಹೊಸಕೋಟೆಯಲ್ಲಿ ಬೇಟಿಯಾಗುತ್ತಿದ್ದೆವು. ದಿನಾಂಕ25/06/2018 ರಂದು ನನ್ನ ಸ್ನೇಹಿತನಾದ ವೆಂಕಟರೆಡ್ಡಿ ರವರು ತನಗೆ ಪರಿಚಯವಿರುವ ಬಾಗೇಪಲ್ಲಿ ಟೌನ್ ಬಾಬು.ಎಂ.ಜಿ ಬಿನ್ ಗುರುಮೂರ್ತಿ, ಬೋವಿ ಜನಾಂಗ ರವರನ್ನು ಹೊಸಕೋಟೆಯಲ್ಲಿ ಬೇಟಿ ಮಾಡಿ ಬಾಬು ರವರು ನನ್ನ ಹೆಂಡತಿ ಕುಸುಮ ಮತ್ತು ಬಾಬು ರವರ ಹೆಂಡತಿ ಲಕ್ಷ್ಮಿ ದೇವಿ ಇಬ್ಬರು ಸ್ನೇಹಿತರಾಗಿದ್ದು ಬಾಬು ರವರು ವಿಧಾನಸೌಧದಲ್ಲಿ ಕೆಲಸ ಕೊಡಿಸುತ್ತಾರೆಂದು ತಿಳಿಸಿದರು. ನಂತರ ಬಾಬು ರವರು ಪರಿಚಯವಾಗಿದ್ದು ನನ್ನ ಹಂಡತಿ ಸುನೀತ. ಜಿ ರವರಿಗೆ ಕೆಲಸ ಕೊಡಿಸುವುದಾಗಿ ತಿಳಿಸಿದರು. ಹಾಗೂ 5,00,000/- ಹಣ ನೀಡಿದರೆ ವಿಧಾನ ಸೌಧದಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿರುತ್ತಾರೆ. ಅದಕ್ಕೆ ನಾನು ವೆಂಕಟರೆಡ್ಡಿ ರವರಿಗೆ ವಿಚಾರ ಮಾಡಲಾಗಿ ವೆಂಕಟರೆಡ್ಡಿ ರವರಿಗೆ ನಾನು ಸಹ ನನ್ನ ಹೆಂಡತಿ ಕುಸುಮ ರವರಿ ಕೆಲಸವನ್ನು ಕೊಡಿಸುವುದಾಗಿ ಬಾಬು ತಿಳಿಸಿದ್ದು 5,00,000/- ರೂ ನಗದು ಹಣವನ್ನು ಬಾಬು ರವರಿಗೆ ನೀಡಿರುವುದಾಗಿ ತಿಳಿಸಿದರು. ವೆಂಕಟರೆಡ್ಡಿ ನನ್ನ ಸ್ನೇಹಿತನಾಗಿದ್ದರಿಂದ ಪುನಃ ಬಾಬು ರವರಿಗೆ ವಿಚಾರಿಸಿದಾಗ 5,00,000/- ರೂ ಹಣವನ್ನು ನೀಡಿದರೆ ನನಗೆ ಪರಿಚಯವಿರುವ ಶಿವಕುಮಾರ್ ಎಂಬುವವರು ಪರಿಚಯವಿದ್ದು ಅವರ ಮೂಲಕ  ನಿಮ್ಮ ಹೆಂಡತಿಗೂ ಸಹ ಉದ್ಯೂಗ ಕೊಡಿಸುವುದಾಗಿ ನನಗೆ ನಂಬಿಸಿದ್ದು ನಾನು ಒಪ್ಪಿಕೊಂಡಿರುತ್ತೇನೆ. ನಂತರ ನಾನು ಹೆಚ್.ಡಿ.ಎಫ್.ಸಿ ಬ್ಯಾಂಕಿನ 2,50,000/- ರೂ ನ ಚೆಕ್ ಅನ್ನು ಬಾಗೇಪಲ್ಲಿ ಕೋರ್ಟ ಬಳಿ ಬಾಬು ಗೆ ನೀಡಿದ್ದು ಅವರು ಹೆಸರು ಬರೆಯಬೇಡಿ, ಎಂದು ತಿಳಿಸಿದ್ದು ನಂತರ ಆತನೇ ಸದರಿ ಚೆಕ್ ಮೇಲೆ ಸೆಲ್ವಾರಾಜ್ ಎಂದು ಹೆಸರು ಬರೆದಿರುತ್ತಾರೆ. ನಂತರ  ಪಂಜಾಬ್ ನ್ಯಾಷನಲ್ ಬ್ಯಾಂಕಿನ 29,000/- ರೂ ನ ಮತ್ತು 1,50,000/- ರೂ ನ  ಚೆಕ್ ಗಳ ಮುಖಾಂತರ ಬಾಬುಗೆ ನೀಡಿರುತ್ತೆನೆ. ವೆಂಕಟರೆಡ್ಡಿ ಮುಖಾಂತರ 50,000/- ರೂ ಚೆಕ್ ಅನ್ನು ನೀಡಿದ್ದು ಒಟ್ಟು 4,79,000/- ರೂ ಹಣವನ್ನು ನೀಡಿರುತ್ತೇನೆ. ತದನಂತರ ವೆಂಕಟರೆಡ್ಡಿ ರವರ ಸ್ನೇಹಿತರಾದ ಈಶ್ವರರೆಡ್ಡಿ, ಚಾಣಕ್ಯ , ನವೀನ್ ಚಂದ್ರಶೇಖರ ರವರು ಸಹ ಹಣವನ್ನು ವೆಂಕಟರೆಡ್ಡಿ ರವರ ಮುಖಾಂತರ ಈಶ್ವರರೆಡ್ಡಿ ರವರು 7,50,000/- ರೂ , ಚಾಣಕ್ಯ, ನವೀನ್ , ಚಂದ್ರಶೇಖರ್ ರವರು ತಲಾ 3,70,000/- ರೂಗಳನ್ನು  ಬಾಬು ರವರಿಗೆ ನೀಡಿರುತ್ತಾರೆ. ನಂತರ ಬಾಬು ರವರಿಗೆ ಕೆಲಸ ಬಗ್ಗೆ ಕೇಳಿದಾಗ ಇನ್ನೂ  2 ತಿಂಗಳಿನಲ್ಲಿ ನಿಮ್ಮ ಮನೆಗೆ ಆರ್ಡರ್ ಕಾಫಿ ಬರುತ್ತದೆ, ಎಂದು ಹೇಳುತ್ತಿದ್ದನು, ನಂತರ ಪುನಃ ಕೇಳಿದರೆ ಒಂದು ತಿಂಗಳಿನಲ್ಲಿ ಆರ್ಡರ್ ಕಾಫಿ ಬರುತ್ತದೆ ಎಂದು ತಿಳಿಸುತ್ತಿದ್ದನು. ಹಾಗೇ  ಕಾಲವನ್ನು ಮುಂದೂಡುತ್ತಿದ್ದನು. ಪುನಃ ಕೇಳಿದಾಗ ಕೊರೋನಾ ಕಾಯಿಲೆ ಇರುವುದರಿಂದ ತಡವಾಗುತ್ತದೆ. ಎಂದು ಹೇಳುತ್ತಿದ್ದನು, ನಾನು ನನ್ನ ಸ್ನೇಹಿತನಾದ ವೆಂಕಟರೆಡಿ ರವರು ಕೇಳಿದಾಗ ಅವರು ಸಹ ಸಮಂಜಸವಾಗಿ ಯಾವುದೇ ಉತ್ತರ ನೀಡಿರುವುದಿಲ್ಲ. ಬಾಬು ರವರು ನಮಗೆಲ್ಲಾ  ಮೋಸ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡುತ್ತಿರುವುದಾಗಿ ತಿಳಿದಿದ್ದು, ನಾವು ನೀಡಿರುವ ಹಣದಿಂದ ಬಾಬು ಬಾಗೇಪಲ್ಲಿ ಟೌನ್ ಗೂಳೂರು ರಸ್ತೆಯಲ್ಲಿ 3 ನೇ ವಾರ್ಡನಲ್ಲಿ ಹಾಸ್ಟಲ್ ಹಿಂಬಾಗದಲ್ಲಿ ಮನೆಯನ್ನು ಕಟ್ಟಿಕೊಂಡಿರುವುದಾಗಿ ಹಾಗೂ ಜಮೀನು ಖರೀದಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.  ಆದ್ದರಿಂದ ನನ್ನ ಹೆಂಡತಿ ಹಾಗೂ ನನ್ನ ಸ್ನೇಹಿತರಿಗೆ ಸರ್ಕಾರಿ ಉದ್ಯೋಗವನ್ನು ಕೊಡಿಸುವುದಾಗಿ ನಂಬಿಸಿ, ನಮ್ಮಿಂದ ಸುಮಾರು 26,29,000/- ರೂ ಹಣವನ್ನು ಪಡೆದುಕೊಂಡು ಮೋಸ ಮಾಡಿರುವ ಬಾಬು ಮತ್ತು ಆತನ ಹೆಂಡತಿ ಲಕ್ಷ್ಮಿದೇವಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿರುತ್ತದೆ.

 

4. ಪಾತಪಾಳ್ಯ ಪೊಲೀಸ್ ಠಾಣೆ, ಮೊ.ಸಂ. 115/2021, ಕಲಂ. 323, 324, 341, 504, 506 ರೆ/ವಿ 34 ಐಪಿಸಿ:-

                ದಿನಾಂಕ:22-10-2021 ರಂದು ಸಂಜೆ 18-30 ಗಂಟೆಗೆ ಪಿರ್ಯಾದುದಾರರಾದ ಶ್ರೀ.ನರಸಿಂಹಮೂರ್ತಿ ಬಿನ್ ಲೇಟ್  ವೆಂಕಟರಾಮಪ್ಪ, ಗುಂಡಮಾರಪಲ್ಲಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ16-10-2021 ರಂದು ರಾತ್ರಿ 8-00 ಗಂಟೆಯಲ್ಲಿ ತಮ್ಮ ಗ್ರಾಮದ 1)ವೆಂಕಟೇಶಪ್ಪ 2)ಲಕ್ಷ್ಮೀದೇವಮ್ಮ 3)ಭಾಸ್ಕರ್ 4)ಚೌಡಮ್ಮ ರವರು ಅವಾಚ್ಯ ಶಬ್ದಗಳಿಂದ ಬೈದು ಎ ನನ್ನ ಮಗನೇ ನಿನ್ನನ್ನು ಸಾಯಿಸುತ್ತೇವೆ 3-4 ದಿನಗಳ ಒಳಗಡೆ ನಿನ್ನನ್ನು ಟೆಂಪೋ ಅಥವಾ ಕಾರಿನ ಮೂಲಕ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ, ಇದರಿಂದಾಗಿ ತಮಗೆ ಪ್ರಾಣಭಯವಿರುವುದಾಗಿ ಕೈ ಕಾಲುಗಳಿಂದ ಒದ್ದು ಕಟ್ಟಿಗೆಯಿಂದ ತಲೆಗೆ ಹೊಡೆದು ಜಮೀನು ತಂಟೆಗೆ ಬಂದರೆ ನಿನ್ನನ್ನು ಮುಗಿಸುತ್ತೇವೆಂದು ಬೆದರಿಕೆ ಹಾಕಿರುವುದಾಗಿ ದಿನಾಂಕ:19-10-2021 ರಂದು ತಾನು ಗಾಡಿಯಲ್ಲಿ  ಬರುವಾಗ ಭಾಸ್ಕರ್ & ವೆಂಕಟೇಶಪ್ಪ  ರವರು ಅಡ್ಡಹಾಕಿ ಬೆದರಿಕೆ ಹಾಕಿರುವುದಾಗಿ ಸೂಕ್ತ ಕ್ರಮ ಜರುಗಿಸಲು ಕೋರಿ ಪಿರ್ಯಾದು.

ಇತ್ತೀಚಿನ ನವೀಕರಣ​ : 23-10-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080