ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 143/2021, ಕಲಂ. 15(A), 32(3) ಕೆ.ಇ. ಆಕ್ಟ್:-

                ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:21/10/2021 ರಂದು ಮದ್ಯಾಹ್ನ 2-30  ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮುದ್ದಲಹಳ್ಳಿ ಗ್ರಾಮದ ಶ್ರೀನಿವಾಸ ಬಿನ್ ವೆಂಕಟರವಣಪ್ಪ ರವರು ಅವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಯ ಹೆಚ್.ಸಿ-98 ಶ್ರೀ.ವಿಶ್ವನಾಥ ಎನ್, ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಮುದ್ದಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮದ್ಯಾಹ್ನ 3-00 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಮುದ್ದಲಹಳ್ಳಿ ಗ್ರಾಮದ ವಾಸಿಯಾದ ಶ್ರೀನಿವಾಸ ಬಿನ್ ವೆಂಕಟರವಣಪ್ಪ, 45ವರ್ಷ, ದೋಬಿ ಜನಾಂಗ ರವರ  ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಅವರಿಗೆ ಮದ್ಯವನ್ನು ನೀಡುತ್ತಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀನಿವಾಸ ಬಿನ್ ವೆಂಕಟರವಣಪ್ಪ, 45ವರ್ಷ, ದೋಬಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಮುದ್ದಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಯಾವುದೇ ಪರವಾನಿಗೆಯನ್ನು ಹೊಂದದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದು ಕಂಡು ಬಂದಿದ್ದರ ಮೇರೆಗೆ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 12 ಹೈವಾರ್ಡ್ಸ್ ಚಿರ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳು ಇದ್ದು ಒಟ್ಟು 1.080 ಲೀಟರ್  ನ 421 ರೂಗಳು ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 3:15 ಗಂಟೆಯಿಂದ 4:00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಅಮಾನತ್ತುಪಡಿಸಿಕೊಂಡ ಮಾಲಿನೊಂದಿಗೆ ಮಧ್ಯಾಹ್ನ 4-30 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ,ಸಂಖ್ಯೆ:143/2021 ಕಲಂ:15(A) ,32(3) K.E  ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 144/2021, ಕಲಂ. 15(A), 32(3) ಕೆ.ಇ. ಆಕ್ಟ್:-

          ದಿನಾಂಕ: 21/10/2021 ರಂದು ಸಂಜೆ 4:30 ಗಂಟೆಗೆ ಚಿಕ್ಕಬಳ್ಳಾಪುರ ಡಿ.ಸಿ .ಬಿ /ಸಿ ಇ ಎನ್ ಪೊಲೀಸ್ ಠಾಣೆಯ ಸಿ ಹೆಚ್ ಸಿ 110 ವೇಣು ರವರು ಠಾಣೆಗೆ ಮಾಲು ಮತ್ತು  ಪಂಚನಾಮೆಯೊಂದಿಗೆ  ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ತಮ್ಮ ಠಾಣೆಯ ಶ್ರೀ ಮಂಜು, ಪಿ.ಐ ರವರು ತನಗೆ ಮತ್ತು ಹೆಚ್ ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆಕಾರ್ಯಕ್ಕೆ ನೇಮಿಸಿದ್ದು ಅದರಂತೆ ಈ ದಿನ ದಿ: 21/10/2021 ರಂದು ಮದ್ಯಾಹ್ನ 3:30 ಗಂಟೆ ಸಮಯದಲ್ಲಿ ಸುನಪಗುಟ್ಟ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿಯಂತೆ ಪಂಚರೊಂದಿಗೆ ಸುನಪಗುಟ್ಟ ಗ್ರಾಮದಲ್ಲಿ ಶಂಕರಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ನಾವುಗಳು ಮೇಲ್ಕಂಡ ಸ್ಥಳದಲ್ಲಿ ಪಂಚರೊಂದಿಗೆ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿಹೋಗಿದ್ದು ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ವಿಚಾರಿಸಲಾಗಿ ಶಂಕರಪ್ಪ ಬಿನ್ ಸಿದ್ದಾರೆಡ್ಡಿ, 40 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಸುನ್ನಪಗುಟ್ಟ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಹೈವಾರ್ಡ್ಸ್ ವಿಸ್ಕಿಯ 90 .ಎಂ.ಎಲ್ ಮದ್ಯ ತುಂಬಿದ 18 ಟೆಟ್ರಾ ಪ್ಯಾಕೆಟ್ ಗಳು 2) 2 ಖಾಲಿ ಪ್ಲಾಸ್ಟೀಕ್ ಗ್ಲಾಸುಗಳು 3) 2 90 ಎಂ.ಎಲ್ ನ ಖಾಲಿ ಚಿಯರ್ಸ್ ವಿಸ್ಕಿ ಪ್ಯಾಕೆಟ್ 4) ಖಾಲಿ ವಾಟರ್ ಬಾಟೆಲ್ ಇದ್ದು ವಶಪಡಿಸಿಕೊಂಡ ಟ್ಟು ಮದ್ಯವು 1 ಲೀಟರ್ 620 ಎಂ.ಎಲ್ ಇದ್ದು ಇದರ  ಒಟ್ಟು ಬೆಲೆ 632 ರೂ ಗಳಾಗಿರುತ್ತೆ. ಸ್ಥಳಾವಕಾಶ ಮಾಡಿಕೊಟ್ಟ ಯಾವುದೇ ಪರವಾನಿಗೆ ಪಡೆಯದೆ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟ ಅಸಾಮಿಯು ಓಡಿಹೋಗಿದ್ದು ಸದರಿ ಅಸಾಮಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಮೊ.ಸಂ 144/2021 ಕಲಂ  15(ಎ) , 32(3)  ಕೆ ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಚೇಳೂರು ಪೊಲೀಸ್ ಠಾಣೆ, ಮೊ.ಸಂ. 101/2021, ಕಲಂ. 143, 147, 148, 323, 324, 504, 506 ರೆ/ವಿ 149 ಐಪಿಸಿ:-

          ದಿನಾಂಕ 21-10-2021 ರಂದು ಸಿಹೆಚ್ ಸಿ 20 ರವರು ಬಾಗೇಪಲ್ಲಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳುವಿನ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ 20-10-2021 ರಂಧು ಬೆಳಿಗ್ಗೆ ನಮ್ಮ ಜಮೀನಿನ ಬಳಿ ನಮ್ಮ ಮಗನಾದ ಶಿವ ಮತ್ತು ವೆಂಕಟರವಣಪ್ಪ ರವರ ಕಡೆಯವರಿಗೂ ಜಗಳ  ನಡೆದಿರುತ್ತದೆ ಈ ವಿಚಾರವಾಗಿ ವೆಂಕಟರವಣಪ್ಪ ಕಡೆಯವರು ಆಕ್ರಮ ಗುಂಪು ಕಟ್ಟುಕೊಂಡು ಸುಮಾರು 9:30 ಗಂಟೆ ಸಮಯದಲ್ಲಿ ನಮ್ಮ ಮನೆಯ ಬಳಿ ಬಂದು ಬಾರೇ ಮುಂಡೆ ಎಂದು ಆವಾಚ್ಯ ಶಬ್ಧಗಳಿಂದ ಬೈದು ನಾನು ಆಚೆ ಬಂದಾಗ ನೀಲಗಿರಿ ದೊಣ್ಣೆಯಿಂದ ವೆಂಕಟರವಣಪ್ಪ ಕೈಗೆ ಹೊಡೆದಿರುತ್ತಾನೆ ಕದಿರಮ್ಮ , ವೆಂಕಟಲಕ್ಷ್ಮಮ್ಮ ಕೂದಲು ಹಿಡಿದು ಎಳೆದಾಡಿರುತ್ತಾರೆ ನನ್ನ ಮಗ ಅಡ್ಡಬಂದಾಗ ಚಿನ್ನ ವೆಂಕಟರವಣ , ಆದಿ ಮೂರ್ತಿ , ನರಸಿಂಹ @ ವೈ. ನರಸಿಂಹ ಕೈಗಳಿಂದ ಹೊಡೆದಿರುತ್ತಾರೆ ಶ್ರೀನಿವಾಸ  ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿರುತ್ತಾನೆ ಗಂಗುಲಪ್ಪ ಈ ನನ್ನ ಮಕ್ಕಳನ್ನು ಸಾಯಿಸಿಬಿಡಬೇಕು ಎಂದು ಪ್ರಾಣ ಬೆದರಿಕೆ ಹಾಕಿ ಅವಾಚ್ಯ ಶಬ್ಧಗಳೀಂದ ಬೈದಿರುತ್ತಾನೆ ನಾವು ಕೆಳ್ಳಕ್ಕೆ ಬಿದ್ದು ಹೋದಾಗ ಕೃಷ್ಣಪ್ಪ ಬಿನ್ ವೆಂಕಟರವಣಪ್ಪ , ಸುಜಾತಮ್ಮ ರವರು ಜಗಳವನ್ನು ಬಿಡಿಸಿ ನಮ್ಮನ್ನು ಉಪಚರಿಸಿರುತ್ತಾರೆ ನಮಗೆ ಮೂಗೆಟು ಜಾಸ್ತಿಯಾಗಿರುವುದರಿಂದ ಮತ್ತು ಸುಸ್ತು ಆಗಿರುವುದರಿಂದ ಚಲಪತಿ ಎಂಬುವವರು ಯಾವುದೋ ದ್ವೀಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆಪಡೆದಿರುತ್ತೆವೆ  ಆದ್ದರಿಂದ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ.

 

4. ಚೇಳೂರು ಪೊಲೀಸ್ ಠಾಣೆ, ಮೊ.ಸಂ. 102/2021, ಕಲಂ. 323, 504 ರೆ/ವಿ 34 ಐಪಿಸಿ:-

                ದಿನಾಂಕ 21-10-2021 ರಂದು ಸಂಜೆ 18:30 ಗಂಟೆಗೆ ಹೆಚ್.ಸಿ 20  ರವರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಅನುಮತಿ ಪಡೆದು ಠಾಣೆಯಲ್ಲಿ ಹಾಜರುಪಡಿಸಿದರ ಸಾರಾಂಶವೆನೆಂಧರೆ  ದಿನಾಂಕ 10-10-2021 ರಂದು ಬೆಳಿಗ್ಗೆ 8:00 ಗಂಟೆ ಸಮಯಲ್ಲಿ ಪಿರ್ಯಾದಿ  ಮನೆಯ ಮುಂಬಾಗದಲ್ಲಿ ಇದ್ದಾಗ ಜಮೀನಿನ ವಿಚಾರವಾಗಿ ಕುರುಬವಾಂಡ್ಲಪಲ್ಲಿ ಗ್ರಾಮದ ವಾಸಿಗಳಾದ ಕೃಷ್ಣಪ್ಪ ಬಿನ್ ಲೇಟ್ ಬಜ್ಜಪ್ಪ ,ಅಶ್ವತಪ್ಪ ಬಿನ್ ಲೇಟ್ ಏನಿಗದೆಲೆ ನಾಗಪ್ಪ ಮತ್ತು ಲಕ್ಷೀ ದೇವಿ ಕೊಂ ಕೃಷ್ಣಪ್ಪ ರವರು  ಬಂದು ಜಾಗದ ವಿಚಾರವಾಗಿ ವಿನಾಕಾರಣ  ಜಗಳ ತೆಗೆದು ನನಗೆ ಕೈಗಳಿಂದ  ಹೊಡೆದು ಆಶ್ಲೀಲ ಮಾತುಗಳಿಂದ ಬೈದಿರುತ್ತಾರೆ  ಎಂದು ಠಾಣೆಗೆ ದೂರು ನೀಡದ್ದರ ಮೇರೆಗೆ ಎನ್.ಸಿ.ಆರ್ ದಾಖಲು ಮಾಡಿದ್ದು ಸದರಿ ಪ್ರಕರಣವು ಅಸಂಜ್ಞೇಯ ಪ್ರಕರಣವಾದ್ದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ.102/2021 ಕಲಂ: 323, 504 ರೆ/ವಿ 34 ಐಪಿಸಿ ರೀತ್ಯ ಪ್ರಕರಣವನ್ನು ದಾಖಲಿಸಿರುತ್ತೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 179/2021, ಕಲಂ. 279, 337 ಐಪಿಸಿ:-

                ದಿನಾಂಕ: 21-10-2021 ರಂದು ಸಂಜೆ 4-15 ಗಂಟೆಯ ಸಮಯಕ್ಕೆ ಪಿರ್ಯಾದಿ ಕಾಂತ ಸುರೇಶ ಚಂದ್ರ ಗಿರಿಧರಬಾಯ್  ಬಿನ್  ಲೇಟ್ ಗಿರಿಧರ ಬಾಯ್ 52ವರ್ಷ  ಕಡವಪಟೇಲ್  ಜನಾಂಗ.  ಕಂಟ್ರಾಕ್ಟರ್ ಕೆಲಸ. ವಾಸ:  ತಿರುಪತಿ ಸೊಸೈಟಿ ಮಿನಿ ಬಸ್ ಸ್ಟಾಪ್ ಪೇಸ್. ಜಾಮ್ ಜೋದ್ ಪುರ  ಜಾಮ್  ನಗರ್  ಜಿಲ್ಲೆ ಗುಜರಾತ್ ಹಾಲಿ ವಾಸ:  ಪ್ರಶಾಂತ್ ಕುಮಾರ್ ಬಿಲ್ಡಿಂಗ್. ಪೆರೆಸಂದ್ರ  ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು. ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು  ಕಂಟ್ರಾಕ್ಟರ್ ಕೆಲಸ ಮಾಡಿಕೊಂಡಿರುತ್ತೇನೆ.  ನನಗೆ  ಪರಿಚಯವಿರುವ  ಜಿಗ್ನೇಶ್ ಕನ್ಸಾಗ್ರರವರು ಗೌರಿಬಿದನೂರು  ತಾಲ್ಲೂಕು  ನಗರಗೆರೆ ಸಮೀಪ ಗೋಡೌನ್  ಕಟ್ಟಡ ನಿರ್ಮಾಣ ಮಾಡಿಸುತ್ತಿದ್ದು ತಾನು ಉಸ್ತುವಾರಿ ನೋಡಿಕೊಳ್ಳುತ್ತಿರುತ್ತೇನೆ.  ದಿನಾಂಕ: 19-10-2021 ರಂದು  ತಾನು ,  ಮಾಧವ್ ಹಾಗೂ  ಜಿಗ್ನೇಶ್ ಕನ್ಸಾಗ್ರ ರವರು ಗೌರಿಬಿದನೂರು ತಾಲ್ಲೂಕು ನಗರಗೆರೆ ಸಮೀಪ ಹೊಸದಾಗಿ ನಿರ್ಮಾಣ ಮಾಡುತ್ತಿರುವ  ಗೋಡೌನ್ ಕೆಲಸ ಮಾಡಿಕೊಂಡಿದ್ದು ಸಂಜೆ  ಕ್ರಾಸ್ ಗೆ ಬಂದೆವು. ಅಲ್ಲಿ ತಾನು  ಇಳಿದುಕೊಂಡಿದ್ದು  ಜಿಗ್ನೇಶ್ ಕನ್ಸಾಗ್ರ ರವರು ಕಾರನ್ನು  ಚಾಲನೆ ಮಾಡಿಕೊಂಡು  ಮಾಧವ್ ರವರೊಂದಿಗೆ ಹೋದರು. ಅದೇ ದಿನ ರಾತ್ರಿ ಸುಮಾರು 9-00 ಗಂಟೆಯ ಸಮಯದಲ್ಲಿ  ಜಿಗ್ನೇಶ್ ಕನ್ಸಾಗ್ರ ರವರು ತನಗೆ ಪೋನು ಮಾಡಿ ಚಿಕ್ಕಬಳ್ಳಾಪುರ  ತಾಲ್ಲೂಕು ಮರಸನಹಳ್ಳಿ  ಗ್ರಾಮದ ಸಮೀಪ ಎನ್.ಹೆಚ್.44 ರಸ್ತೆಯಲ್ಲಿ  ಹೋಗುತ್ತಿದ್ದಾಗ ಮರಸನಹಳ್ಳಿ  ಗ್ರಾಮದ ಸಮೀಪ  KA-40-TA-0671 ಟ್ರಾಕ್ಟರ್ ಮತ್ತು ಟ್ರ್ಯಾಲಿಯಲ್ಲಿ ದೇವರನ್ನು  ಕುಳ್ಳರಿಸಿಕೊಂಡು  ರಸ್ತೆಯ ಡಿವೈಡರ್ ಮೇಲೆ ಹತ್ತಿಸಿಕೊಂಡು  ಟ್ರಾಕ್ಟರ್ ಚಾಲಕ  ಅತಿವೇಗ ಅಜಾಗರೂಕತೆ ಮತ್ತು  ನಿರ್ಲಕ್ಷ್ಯತೆಯಿಂದ  ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ತನ್ನ ಕಾರಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದು ಅದರ ಪರಿಣಾಮ ಕಾರಿನ ಮುಂಭಾಗ, ಬಂಪರ್,  ರೇಡಿಯೇಟರ್.  ಬಾನೆಟ್. ಮುಂದಿನ ಗಾಜು.  ಮುಂದಿನ ಎರಡು ಡೋರ್ ಗಳು  ಜಖಂಗೊಂಡಿರುತ್ತವೆ. ಕಾರಿನಲ್ಲಿ ಜಿಗ್ನೇಶ್ ಕನ್ಸಾಗ್ರ  ಮಾಧವ್ ರವರಿಗೆ ಗಾಯಗಳಾಗಿರುವುದಾಗಿ ಹಾಗೂ ಟ್ರಾಕ್ಟರ್ ಟ್ರ್ಯಾಲಿಯಲ್ಲಿದ್ದವರಿಗೂ ಸಹ ಗಾಯಗಳಾಗಿರುತ್ತೆಂತ, ತಕ್ಷಣ ತಾನು ಅಪಘಾತದ ಸ್ಥಳಕ್ಕೆ ಬಂದು ನೋಡಿದ್ದು ವಿಚಾರ  ನಿಜವಾಗಿತ್ತು. ಚಿಕ್ಕಬಳ್ಳಾಪುರ  ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಂಗಳೂರಿಗೆ ಕಳುಹಿಸಿದ್ದು ಗಾಯಾಳುಗಳನ್ನು  ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದೂರು ನೀಡಲು ತಡವಾಗಿರುತ್ತದೆ. ಈ ಅಪಘಾತಕ್ಕೆ KA-40-TA-0671 ಟ್ರಾಕ್ಟರ್ ಮತ್ತು ಟ್ರ್ಯಾಲಿಯ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯತೆಯ ಚಾಲನೆಯೇ  ಕಾರಣವಾಗಿದ್ದು  ಸದರಿ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ದೂರು. ಆದ್ದರಿಂದ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ, ಮೊ.ಸಂ. 86/2021, ಕಲಂ. 307, 114, 504, 506 ರೆ/ವಿ 34 ಐಪಿಸಿ:-

                ದಿನಾಂಕ:-21/10/2021 ರಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಸ್ವೀಕರಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ.ಮನೋಜ್ ಕುಮಾರ್ ಬಿನ್ ಗಂಗಾಧರಪ್ಪ 17 ವರ್ಷ, ನಾಯಕರು, ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ, ವಾಸ;- ಅಂಗಟ್ಟ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಲೀ ವಾಸ:-ಮಾರೇಗಾನಹಳ್ಳಿ (ಆವಲಹಳ್ಳಿ) ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ತಮ್ಮ ತಂದೆ-ತಾಯಿಗೆ 1 ನೇ ತಾನು, 2 ನೇ ಮೋಹನ್ ಆಗಿದ್ದು, ತಾನು ಚಿಕ್ಕಬಳ್ಳಾಪುರ ನಗರದಲ್ಲಿರುವ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಧ್ಯಾಬ್ಯಾಸ ಮಾಡುತ್ತಿದ್ದು, ತಮ್ಮ ಕಾಲೇಜಿನಲ್ಲಿ ತಾನು ಕಲಾ ವಿಭಾಗದಲ್ಲಿ ಇದ್ದು, ತಮ್ಮ ತರಗತಿಯಲ್ಲಿ ಅರೂರು ಗ್ರಾಮದಿಂದ ಶ್ರೀನಿವಾಸ ಎಂಬುವನು ಕಾಲೇಜಿಗೆ ಬರುತ್ತಿದ್ದು, ಶ್ರೀನಿವಾಸನು ಪ್ರತಿ ದಿನ ಕುಡಿದು ಬಂದು ಕಾಲೇಜಿಗೆ ಬರುವ ಹುಡುಗರಿಗೆ ಹೊಡೆಯುವುದು, ತೊಂದರೆ ಕೊಡುವುದು ಮಾಡುತ್ತಿದ್ದು, ಇದರಿಂದ ಎಲ್ಲಾ ವಿಧ್ಯಾರ್ಥಿಗಳಿಗೆ ಕಿರಿ-ಕಿರಿ ಉಂಟಾಗುತ್ತಿರುತ್ತೆ. ಯಾರಿಗಾದರೂ ಈ ವಿಚಾರ ಹೇಳಿದರೆ ಒಬ್ಬೊಬ್ಬರನ್ನು ಸುಮ್ಮನೇ ಬಿಡುವುದಿಲ್ಲವೆಂದು ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದು, ಈಗ್ಗೆ ಸುಮಾರು ಒಂದು ವಾರದ ಹಿಂದೆ ತನಗೆ ಹಿಂದಿನಿಂದ ಡೆಸ್ಟರ್ ನಲ್ಲಿ ತಲೆಗೆ ಹೊಡೆದಿದ್ದು ನಂತರ ತಾನು ನೋವನ್ನು ತಾಳಲಾರದೇ “ಯಾಕೋ ನನಗೆ ತಲೆಗೆ ಹೊಡೆದಿದ್ದು ಎಂದು ಕೇಳದ್ದಕ್ಕೆ ಏಯ್ ನನ್ನ ಮಗನೇ ನಿಮ್ಮಮ್ಮನ್ ನನಗೆ ಎದುರು ಮಾತನಾಡುತ್ತೀಯಾ ? ನಿನ್ನನ್ನು ಇಲ್ಲ ಅನ್ನಿಸಿ ಬಿಡುತ್ತೇನೆ” ಎಂದು ಅವಾಜ್ ಹಾಕಿ ಹೋಗಿದ್ದು, ನಂತರ ಶ್ರೀನಿವಾಸನ ಸ್ನೇಹಿತ ಜಂಗ್ಲಿ ಮಂಜುನಾಥ ಎಂಬುವವನು ರಾಜಿ ಮಾಡಿಸುವುದಾಗಿ ತನ್ನನ್ನು ಯಾವುದೋ ಆಟೋದಲ್ಲಿ ಸ್ಟೇಡಿಯಂ ಬಳಿ ಕರೆದುಕೊಂಡು ಹೋಗಿ ನಂತರ ಅಲ್ಲಿ ಶ್ರೀನಿವಾಸ, ರಾಮಕೃಷ್ಣ @ ಹೆಗಡೆ ಹಾಗೂ ಇತರರು ಬಂದು ತನ್ನ ಮೇಲೆ ಗಲಾಟೆ ಮಾಡಿ ಜಂಗ್ಲಿ ಮಂಜುನಾಥನು ತನಗೆ ತಲೆಗೆ ಹೊಡೆದಿದ್ದು, ಇದರಿಂದ ಗಾಯವಾಗಿರುತ್ತೆ, ನಂತರ ಅಲ್ಲಿದ್ದವರು ಎಲ್ಲಾ ಸೇರಿಕೊಂಡು ದೂರು ಕೊಡುವುದು ಬೇಡ ಇಲ್ಲಿಯೇ ರಾಜಿ ಮಾಡಿಕೊಳ್ಳೋಣ ಇನ್ನೂ ಮುಂದೆ ಎಲ್ಲರೂ ಸ್ನೇಹಿತರಾಗಿರೋಣ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಿದ್ದು, ಹೋಗುವಾಗ ಶ್ರೀನಿವಾಸ “ಏಕಾ-ಏಕಿ ಏಯ್ ನನ್ನ ಮಗನೇ ನನ್ನ ಸ್ನೇಹಿತರು ಮುಂದೆ ನನಗೆ ಅವಮಾನ ಮಾಡಿದ್ದೀಯಾ ನಿನಗೆ ಏನೋ ಒಂದು ಗತಿ ಕಾಣಿಸಿ ಸಾಯಿಸದೇ ಬಿಡುವುದಿಲ್ಲವೆಂದು” ಹೊರಟು ಹೋಗಿದ್ದು, ಈ ದಿನ ದಿನಾಂಕ:-21/10/2021 ರಂದು ಬೆಳಿಗ್ಗೆ ಸುಮಾರು 09-30 ಗಂಟೆಯ ಸಮಯದಲ್ಲಿ ತಾನು ಜೂನಿಯರ್ ಕಾಲೇಜಿನ ಬಳಿ ಇದ್ದಾಗ ಶ್ರೀನಿವಾಸ ಏಕಾ-ಏಕಿ ಬಂದು ತನ್ನನ್ನು ಕೆಟ್ಟ ಮಾತುಗಳಿಂದ ಬೈದು “ನಿನ್ನಮ್ಮನ್ ನಿನ್ನ ಇವತ್ತು ಇಲ್ಲ ಅನ್ನಿಸಿಬಿಡುತ್ತೇನೆ ಇಲ್ಲಿಯೇ ನಿನ್ನ ಕಥೆ ಮುಗಿಸಿ ಬಿಡುತ್ತೇನೆ” ಎಂದು ಚಾಕುವನ್ನು ತೆಗೆದು ತನ್ನನ್ನು ಕೊಲ್ಲುವ ಉದ್ದೇಶದಿಂದ ಏಕಾ-ಏಕಿ ಹೊಟ್ಟೆಗೆ ತಿವಿಯಲು ಬಂದಿದ್ದು ತಾನು ತಕ್ಷಣ ತಪ್ಪಿಸಿಕೊಳ್ಳಲು ಕೈಯನ್ನು ಅಡ್ಡ-ಇಟ್ಟಾಗ ರಭಸದಿಂದ ಎಡ ಕೈನ ಎಡ ತೋಳಿಗೆ ಹಾಗೂ ಮೊಣ ಕೈ ಮುಂಭಾಗದಲ್ಲಿ ತಿವಿದಿರದ್ದು, ನಂತರ ತಾನು ಜೋರಾಗಿ ಕಿರುಚಿಕೊಂಡಾಗ ಅಲ್ಲಿದ್ದ ತನ್ನ ಸ್ನೇಹಿತರಾದ ಗಗನ್, ಪವನ್, ವಿಜಯ್ ಹಾಗೂ ಇತರರು ತಕ್ಷಣ ಬಂದು ನೋಡಿದಾಗ ತನಗೆ ತೀವ್ರತರವಾದ ರಕ್ತ ಗಾಯವಾಗಿ ರಕ್ತ ಸೋರುತ್ತಿದ್ದು ಶ್ರೀನಿವಾಸನು ಗಾಬರಿಯಲ್ಲಿ ಚಾಕುವನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿರುತ್ತಾನೆ ನಂತರ ತಮ್ಮ ಸ್ನೇಹಿತರು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ ತಾನು ಚಿಕಿತ್ಸೆ ಪಡೆಯುತ್ತಿದ್ದು, ಶ್ರೀನಿವಾಸ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಯಿಸುವ ಉದ್ದೇಶದಿಂದ ತನ್ನ ಎಡಕೈಗೆ ಚಾಕುವಿನಿಂದ ತಿವಿದು ರಕ್ತಗಾಯ ಪಡಿಸಿದ್ದು ಇದಕ್ಕೆ ಜಂಗ್ಲಿ ಮಂಜುನಾಥ ಮತ್ತು ರಾಮಕೃಷ್ಣ @ ಹೆಗಡೆ ರವರು ಕುಮ್ಮಕ್ಕು ನೀಡಿರುತ್ತಾರೆ ಆದ್ದರಿಂದ ಮೇಲ್ಕಂಡ ಆರೋಪಿತರು ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಠಾಣೆಗೆ ವಾಪಸ್ಸು ಬಂದು ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಅನುಮತಿಯನ್ನು ಪಡೆದುಕೊಂಡು ಈ ದಿನ ಮಧ್ಯಾಹ್ನ 1-30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 459/2021, ಕಲಂ. 317 ಐಪಿಸಿ:-

                ದಿನಾಂಕ:21/10/2021 ರಂದು ಮದ್ಯಾಹ್ನ 2.00 ಗಂಟೆಗೆ ಪಿರ್ಯಾಧಿದಾರರಾದ ಅಂಬಿಕ.ಎ.ವಿ, 32 ವರ್ಷ, ಮೇಲ್ವಿಚಾರಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಚಿಂತಾಮಣಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 21/10/2021 ರಂದು ಬೆಳಿಗ್ಗೆ 10.00 ಗಂಟೆಗೆ ಚಿಂತಾಮಣಿ ತಾಲ್ಲೂಕು, ಉಪ್ಪಾರಪೇಟೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾದ ಶಹನಾಜ್ ಬಾನು ರವರು ತನಗೆ ಕರೆ ಮಾಡಿ ತಮ್ಮ ಗ್ರಾಮದ ಮಸೀದ ಮುಂಭಾಗ ಇರುವ ವೆಂಕಟರವಣಸ್ವಾಮಿ ದೇವಾಲಯದ ಬಳಿ ಒಂದು ನವಜಾತ ಹೆಣ್ಣು ಶಿಶು ಬಿದ್ದಿದ್ದು, ತಮ್ಮ ಗ್ರಾಮದ ಸಾಜಿದ್ ಉನ್ನೀಸಾ ಕೋಂ ಗೌಸ್ ಮತ್ತು ಸೈಯದ್ ಚಾಂದ್ ಬಿನ್ ಸೈಯದ್ ಇಸ್ಮಾಯಿಲ್ ರವರುಗಳು ಆ ಮಗುವನ್ನು ನೋಡಿ ಮಗುವಿಗೆ ಹಾರೈಕೆ ಮಾಡಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತಾರೆಂದು ತಿಳಿಸದರು. ನಂತರ ಅದೇ ಸಮಯಕ್ಕೆ ಸೈಯದ್ ಚಾಂದ್ ರವರೂ ಸಹ ತನಗೆ ಕರೆ ಮಾಡಿ ಮೇಲ್ಕಂಡಂತೆ ವಿಷಯ ತಿಳಿಸಿದರು. ನಂತರ ತಾನು ಸದರಿ ವಿಚಾರವನ್ನು ತಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ, ಆಸ್ಪತ್ರೆಗೆ ಬೇಟಿ ನೀಡಿ ಮಗುವಿಗೆ ಚಿಕಿತ್ಸೆಯನ್ನು ಕೊಡಿಸಿ ನಂತರ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಕ್ಕಳ ಹೆಲ್ಪ್ ಲೈನ್ ಸಿಬ್ಬಂದಿಯವರಾದ ಅರುಣಾ ಮತ್ತು ಜಯಶ್ರೀ ರವರ ಸಹಯೋಗದೊಂದಿಗೆ ಕಳುಹಿಸಿಕೊಟ್ಟಿರುತ್ತೇನೆ. ಆದ್ದರಿಂದ ನವಜಾತ ಹೆಣ್ಣು ಶಿಶುವನ್ನು ಹೆತ್ತು/ಹಡಿದು ದೇವಸ್ಥಾನದ ಬಳಿ ಬಿಸಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 460/2021, ಕಲಂ. 87 ಕೆ.ಪಿ. ಆಕ್ಟ್:-

                ದಿನಾಂಕ: 21/10/2021 ರಂದು ಸಂಜೆ 5.30 ಗಂಟೆಗೆ ಠಾಣೆಯ ಶ್ರೀ.ನಾರಾಯಣಸ್ವಾಮಿ.ಸಿ, ಪಿ.ಎಸ್.ಐ ರವರು ಆರೋಪಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 21/10/2021 ರಂದು ಮಧ್ಯಾಹ್ನ 3.15 ಗಂಟೆಯಲ್ಲಿ ತಾನು ಠಾಣಾ ಸರಹದ್ದಿನ ಮಾಡಿಕೆರೆ ಕ್ರಾಸ್ ಬಳಿ ಗಸ್ತಿನಲ್ಲಿದ್ದಾಗ ಠಾಣಾ ಸರಹದ್ದಿಗೆ ಸೇರಿದ ಆನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಇಸ್ಪೇಟು ಜೂಜಾಟ ಆಡುತ್ತಿರುವುದಾಗಿ ಬೀಟ್ ಸಿಬ್ಬಂದಿಯಾದ ಸಿ.ಪಿ.ಸಿ-185 ಶ್ರೀನಿವಾಸಮೂರ್ತಿರವರು ನೀಡಿದ ಖಚಿತ ಮಾಹಿತಿ ಮೇರೆಗೆ  ಸದರಿ ಜೂಜಾಟ ವಾಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಮತ್ತು  ಸಿಬ್ಬಂದಿಯವರಾದ  ಶ್ರೀ ಆಕಾಶ್ ಪ್ರೋ.ಪಿ.ಎಸ್.ಐ ಸಿಬ್ಬಂದಿಯವರಾದ ಹೆಚ್.ಸಿ 126 ನಾಗಭೂಷಣ ಮತ್ತು ಸುರೇಶ್ ಸಿ.ಹೆಚ್.ಸಿ-57 ರವರೊಂದಿಗೆ KA-40 G-326 ನಂಬರಿನ ಸರ್ಕಾರಿ ಜೀಪಿನಲ್ಲಿ ಆನೂರು ಗ್ರಾಮಕ್ಕೆ ಹೋಗಿದ್ದು, ಗ್ರಾಮದ ಸರ್ಕಾರಿ ಪ್ರೌಡಶಾಲೆಯಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಶಾಲೆಯ ಹಿಂಭಾಗದಲ್ಲಿರುವ ಖಾಲಿಜಾಗದಲ್ಲಿರುವ ಮರಗಳ ಕೆಳಗೆ ಯಾರೋ 5-6 ಜನರು ಗುಂಪುಕಟ್ಟಿಕೊಂಡು ಇಸ್ಪೇಟ್ ಜೂಜಾಟ ಆಡುತ್ತಿದ್ದವರನ್ನು ಪೊಲೀಸರು ಸುತ್ತುವರಿದು ಹಿಡಿದು ಕೊಳ್ಳುವಷ್ಟರಲ್ಲಿ ಅಲ್ಲಿಂದ ಕೆಲವರು ಓಡಿಹೋಗಿದ್ದು, ಸ್ಥಳದಲ್ಲಿದ್ದವರ ಹೆಸರು ಮತ್ತು ವಿಳಾಸ ತಿಳಿಯಲಾಗಿ 1).ಮಂಜುನಾಥ ಬಿನ್ ಲೇಟ್ ಮುನಿಯಪ್ಪ, 32 ವರ್ಷ, ನಾಯಕರು, ಕೂಲಿ ಕೆಲಸ ವಾಸ: ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 2).ವಿಜಯರಾಘವರೆಡ್ಡಿ ಬಿನ್ ಲೇಟ್ ರೆಡ್ಡಪ್ಪ, 33 ವರ್ಷ, ಜಿರಾಯ್ತಿ, ವಕ್ಕಲಿಗರು, ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು. ಓಡಿ ಹೋದವರ ಹೆಸರು ಮತ್ತು ವಿಳಾಸ ತಿಳಿಯಲಾಗಿ ತಮ್ಮ ಗ್ರಾಮದ ಮಂಜುನಾಥ ಬಿನ್ ಮುನಿರಾಮಪ್ಪ, ಆದಿ ಕರ್ನಾಟಕ ಜನಾಂಗ, ಸಂಜಯ್ ಬಿನ್ ವೆಂಕಟರಾಯಪ್ಪ, ಬಲಜಿಗರು ಎಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ 250 ರೂ ನಗದು ಹಣ ಮತ್ತು 52 ಇಸ್ಪೇಟ್ ಎಲೆಗಳು ಹಾಗೂ ಒಂದು ಗೋಣಿ ಚೀಲವಿದ್ದು, ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಮಹಜರ್ ಮೂಲಕ ಮಾಲು ಅಮಾನತ್ತು ಪಡಿಸಿಕೊಂಡು ಅಸಾಮಿಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು ಮೇಲ್ಕಂಡಂತೆ ಕಾನೂನು ಬಾಹಿರವಾಗಿ ಇಸ್ಪೇಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 462/2021, ಕಲಂ. 279, 337, 304(A) ಐಪಿಸಿ:-

                ದಿನಾಂಕ: 22/10/2021 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾಧಿದಾರರಾದ ಅಯಾಜ್ ಬಿನ್ ರಫೀಕ್, 30 ವರ್ಷ, ಮುಸ್ಲಿಂರು, ಗುಜರಿ ವ್ಯಾಪಾರ, ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಗೆ ಇಬ್ಬರು ಮಕ್ಕಳು 1ನೇ ನಯಾಜ್, 2ನೇ ತಾನಾಗಿರುತ್ತೇವೆ. ತನ್ನ ಅಣ್ಣ ನಯಾಜ್ ಕ್ಯಾಲನೂರಿನಲ್ಲಿ ವಾಸವಾಗಿರುತ್ತಾರೆ. ದಿನಾಂಕ; 21/10/2021 ರಂದು ಸಂಜೆ ಸುಮಾರು 7.30 ಗಂಟೆ ಆಗಿತ್ತು ತಾನು ತಮ್ಮ ಮನೆಯಲ್ಲಿರುವಾಗ್ಗೆ ಯಾರೋ ಸಾರ್ವಜರಿಕರು ತನ್ನ ಅಣ್ಣನ ಮೊಬೈಲ್ ಪೋನ್ ನಿಂದ ತನಗೆ ಪೋನ್ ಮಾಡಿ ನಿಮ್ಮ ಅಣ್ಣ ಹಾಗೂ ಸಂಬಂದಿಕರು ಬರುತ್ತಿದ್ದ ಆಟೋ ನಾಯಿಂದ್ರಹಳ್ಳಿ ಗೇಟ್ - ಕೊಂಗನಹಳ್ಳಿ ಗ್ರಾಮಗಳ ಮದ್ಯೆ ಅಪಘಾತವಾಗಿದ್ದು ಅಪಘಾತದಲ್ಲಿ ನಿಮ್ಮ ಅಣ್ಣನಿಗೆ ಹಾಗೂ ಇನ್ನೂ ಕೆಲವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಯಾವುದೋ ವಾಹನದಲ್ಲಿ ಚಿಂತಾಮಣಿಯ ಮೈಸೂರು ಕ್ಲಿನಿಕ್ ಗೆ ಹಾಕಿಕೊಂಡು ಬಂದಿರುವುದಾಗಿ ವಿಷಯ ತಿಳಿಸಿದರು. ಕೂಡಲೇ ತಾನು ತನ್ನ ತಾಯಿ ಮುಮ್ತಾಜ್ ರವರುಗಳು ಮೈಸೂರು ಕ್ಲಿನಿಕ್ ಬಳಿ ಹೋದೆವು. ತನ್ನ ಅಣ್ಣ ತಲೆಗೆ ಎದೆಗೆ ಗಾಯಗಳಾಗಿದ್ದು ತನ್ನ ಅತ್ತಿಗೆ ಶಾಹತಾಜ್ ಮತ್ತು ಈಕೆಯ ತಂಗಿ ಶಾಹಿನಾ ರವರಿಗೂ ಗಾಯಗಳಾಗಿತ್ತು. ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ವತ್ರೆಗೆ  ಕರೆದುಕೊಂಡು ಹೋಗುವಷ್ಟರಲ್ಲಿ ತನ್ನ ಅಣ್ಣ ನಯಾಜ್ ಮಾರ್ಗ ಮದ್ಯೆ ಮೃತಪಟ್ಟಿದ್ದು. ಆರ್.ಎಲ್ ಜಾಲಪ್ಪ ಆಸ್ವತ್ರೆಯ ವೈಧ್ಯಾಧೀಕಾರಿಗಳು ತನ್ನ ಅಣ್ಣನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ತನ್ನ ಅತ್ತಿಗೆಯನ್ನು ವಿಚಾರ ಮಾಡಲಾಗಿ ತಾನು ತನ್ನ ಗಂಡ ನಯಾಜ್ ಹಾಗೂ ತನ್ನ ತಂಗಿ ಶಾಹಿನಾ ರವರುಗಳು ಉಪ್ಪಾರಪೇಟೆಗೆ ತಮ್ಮ ಸಂಬಂದಿಕರ 40 ದಿನದ ತಿಥಿ ಕಾರ್ಯ ಇದ್ದ ಕಾರಣ ಸದರಿ ದಿನ ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ಉಪ್ಪಾರಪೇಟೆಗೆ ಹೋಗಲು ಆಟೋ ರಿಕ್ಷಾ ಸಂಖ್ಯೆ ಕೆ.ಎ-04 ಬಿ-749 ರಲ್ಲಿ ಬರುತ್ತಿದ್ದಾಗ ಸಂಜೆ ಸುಮಾರು 7.00 ಗಂಟೆ ಸಮಯದಲ್ಲಿ ಚಿಂತಾಮಣಿ - ಬೆಂಗಳೂರು ರಸ್ತೆಯ ಕೊಂಗನಹಳ್ಳಿ - ನಾಯಿಂದ್ರಹಳ್ಳಿ ಗ್ರಾಮಗಳ ಮಧ್ಯೆ ಬರುತ್ತಿದ್ದಾಗ ಹಿಂಭಾಗದ ಬೆಂಗಳೂರು ರಸ್ತೆ ಕಡೆಯಿಂದ ನೊಂದಣಿ ಸಂಖ್ಯೆ ಕೆ.ಎ-07 ಎಂ-2471 ಮಾರುತಿ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಆಟೋ ಹಿಂಭಾಗಕ್ಕೆ  ಡಿಕ್ಕಿ ಹೊಡೆಸಿದ್ದು ಇದರ ಪರಿಣಾಮ ಆಟೋ ಫಲ್ಟಿ ಹೊಡೆದು ತಾವು ಮೂರು ಜನರಿಗೆ ತೀವ್ರವಾದ ಗಾಯಗಳಾಗಿದ್ದು, ರಸ್ತೆಯಲ್ಲಿ ಬಂದ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಂತಾಮಣಿಗೆ ಆಸ್ವತ್ರೆಗೆ ಸಾಗಿಸಿರುತ್ತಾರೆಂತ ವಿಷಯ ತಿಳಿಸಿದರು. ತನ್ನ ಅತ್ತಿಗೆಯ ತಂಗಿ ಶಾಹಿನ ಆರ್.ಎಲ್ ಜಾಲಪ್ಪ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ತನ್ನ ಅಣ್ಣ ನಯಾಜ್ ನ ಶವ ಆರ್.ಎಲ್ ಜಾಲಪ್ಪ ಆಸ್ವತ್ರೆಯ ಶವಗಾರದಲ್ಲಿರುತ್ತೆ. ತಾನು ಇದುವರೆಗೂ ಗಾಯಾಳುಗಳಿಗೆ ಚಿಕಿತ್ಸೆ ಪಡಿಸುತ್ತಿದ್ದು ಅವರನ್ನು ನೋಡಿಕೊಂಡಿದ್ದ ಕಾರಣ ದೂರು ನೀಡಲು ವಿಳಂಭವಾಗಿರುತ್ತೆ. ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಮಾರುತಿ ವ್ಯಾನ್ ಸಂಖ್ಯೆ ಕೆ.ಎ-07 ಎಂ-2471 ರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 463/2021, ಕಲಂ. 87 ಕೆ.ಪಿ. ಆಕ್ಟ್:-

          ದಿನಾಂಕ: 22/10/2021 ರಂದು ಮದ್ಯಾಹ್ನ 12.30 ಗಂಟೆಗೆ ಠಾಣೆಯ ಶ್ರೀ ನಾರಾಯಣಸ್ವಾಮಿ.ಸಿ, ಪಿ.ಎಸ್.ಐ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 22/10/2021 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಠಾಣಾ ಸರಹದ್ದಿನ ಉಪ್ಪಾರಪೇಟೆ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಠಾಣಾ ಸರಹದ್ದಿಗೆ ಸೇರಿದ ಭಕ್ತರಹಳ್ಳಿ ಗ್ರಾಮದಲ್ಲಿರುವ ಬೆಟ್ಟದ ತಪ್ಪಲಿನ ಬಳಿ ಇರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಇಸ್ಪೇಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು, ಠಾಣಾ ಸಿಬ್ಬಂದಿಯಾದ ಶ್ರೀ ಆಕಾಶ್, ಪ್ರೋ.ಪಿ.ಎಸ್.ಐ, ಸಿ.ಹೆಚ್.ಸಿ-03 ರಾಜಣ್ಣ, ಸಿ.ಹೆಚ್.ಸಿ-57 ಸುರೇಶ್ ಮತ್ತು ಪಂಚರೊಂದಿಗೆ ಸದರಿ ಜೂಜಾಟ ವಾಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ KA-40 G-326 ನಂಬರಿನ ಸರ್ಕಾರಿ ಜೀಪಿನಲ್ಲಿ  ಭಕ್ತರಹಳ್ಳಿ ಗ್ರಾಮಕ್ಕೆ ಹೋಗಿದ್ದು ಗ್ರಾಮದ ಬೆಟ್ಟದ ಬಳಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಇರುವ ಹೊಂಗೆ ಮರದ ಕೆಳಗೆ ಯಾರೋ 2-3 ಜನರು ಗುಂಪುಕಟ್ಟಿ ಕೊಂಡು ಇಸ್ಪೇಟು ಜೂಜಾಟ ಆಡುತ್ತಿದ್ದವರನ್ನು ಪೊಲೀಸರು ಸುತ್ತುವರಿದು ಹಿಡಿದುಕೊಳ್ಳುವಷ್ಟರಲ್ಲಿ ಅಲ್ಲಿಂದ ಇಬ್ಬರು ಓಡಿಹೋಗಿದ್ದು, ಸ್ಥಳದಲ್ಲಿ ಸಿಕ್ಕಿ ಬಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ 1).ವೆಂಕಟರೆಡ್ಡಿ ಬಿನ್ ನರಸಿಂಹಪ್ಪ, 29 ವರ್ಷ, ನಾಯಕರು, ಕೂಲಿ ಕೆಲಸ, ರಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸಿಕ್ಕಿ ಬಿದ್ದ ಆಸಾಮಿಯನ್ನು ಓಡಿ ಹೋದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 2).ಅಶೋಕ ಬಿನ್ ಶಿವಣ್ಣ, 27 ವರ್ಷ, ಚಾಲಕ ವೃತ್ತಿ, ಭಕ್ತರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 3).ಯರ್ರಪ್ಪ (ತಂದೆಯ ಹೆಸರು ಗೊತ್ತಿಲ್ಲ), 30 ವರ್ಷ, ನಾಯಕರು, ಕೂಲಿ ಕೆಲಸ, ಉಲ್ಲಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು. ಆರೋಪಿತರು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ 2540/- ರೂ ನಗದು ಹಣ ಮತ್ತು 52 ಇಸ್ಪೇಟ್ ಎಲೆಗಳು ಹಾಗೂ ಒಂದು ಪ್ಲಾಸ್ಟಿಕ್ ಚೀಲವಿದ್ದು, ನಂತರ ಮೇಲ್ಕಂಡ ಆರೋಪಿಯನ್ನು ವಶಕ್ಕೆ ಪಡೆದು ಬೆಳಿಗ್ಗೆ 11-00 ಗಂಟೆಯಿಂದ 11-45 ಗಂಟೆಯವರೆಗೆ ಮಹಜರ್ ಮೂಲಕ ಮಾಲು ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 285/2021, ಕಲಂ. 380, 457 ಐಪಿಸಿ:-

                ದಿನಾಂಕ 21-10-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ  ಆರ್.ಇ.ರಾಮಕೃಷ್ಣ ಬಿನ್ ಈರಣ್ಣ, , 66 ವರ್ಷ, ಒಕ್ಕಲಿಗರು, ಕಾರ್ಯದರ್ಶಿ, ಶ್ರೀ ಕ್ಷೇತ್ರ ವರಮಹಾಲಕ್ಷ್ಮಿ ದೇವಸ್ಥಾನ, ವಾಸ ರಮಾಪುರ  ಗ್ರಾಮ ಹೊಸೂರು ಹೊಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶವೇನೆಂದರೆ   ದಿನಾಮಕ 21-10-2021 ರಂದು  ಬೆಳಿಗ್ಗೆ ಸುಮಾರು 07-00 ಗಂಟೆಗೆ  ದೇವಸ್ಥಾನದ ಪೂಜಾರಿ  ಲೋಕೇಶರವರು  ತನಗೆ ಪೋನ್ ಮಾಡಿ  ಬುಧುವಾರ  ಪೂಜೆ ಮಾಡಿ ದೇವಸ್ಥಾನದ  ಬಾಗಿಲು ಹಾಕಿಕೊಂಡು  ಹೋಗಿದ್ದು  ಗುರುವಾರ  ಬೆಳಿಗ್ಗೆ 06-00 ಗಂಟೆಯಲ್ಲಿ  ದೇವಸ್ಥಾನದ ಪೂಜೆ ಮಾಡಲು ಬಂದಾಗ  ದೇವಸ್ಥಾನದ ಬಾಗಿಲು ಬೀಗ ಮುರಿದಿದ್ದು  ಬಾಗಿಲು ತೆರೆದಿರುತ್ತೆ ಎಂದು ಹೇಳಿದರು. ನಾನು  08-00 ಗಂಟೆಯಲ್ಲಿ ನಮ್ಮ ಗ್ರಾಮದ ವಾಸಿ  ಗಂಗಾಧರ ಬಿನ್  ಬೊಮ್ಮಣ್ಣ, ರವರೊಂದಿಗೆ ಹೋದಾಗ  ವಿಷಯ ನಿಜವಾಗಿದ್ದು  ನಾವು ಒಳಗಡೆ ಹೋಗಿ ನೋಡಿದಾಗ  ಬಾಗಿಲು ಬೀಗ ಹುಂಡಿಯ ಬೀಗ  ಯಾವುದೋ ಆಯುಧದಿಂದ  ತೆರೆದು ಹುಂಡಿಯಲ್ಲಿಇದ್ದ ಸುಮಾರು 1,00,000/- ರೂ.ಗಳನ್ನು ಕಳ್ಳತನ ಮಾಡಿದ್ದು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

12. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 242/2021, ಕಲಂ. 380, 457 ಐಪಿಸಿ:-

                ದಿನಾಂಕ:21/10/2021 ರಂದು ಸಂಜೆ 5-30 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ-430  ರವರು ಠಾಣಾ NCR NO-299/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ ಪಿರ್ಯಾಧಿದಾರರು ಈ ದಿನಾಂಕ:18/10/2021 ರಂದು ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿರುವಾಗ ತನಗೆ ಠಾಣಾ ಹೆಚ್.ಸಿ. 35 ಶ್ರೀ ನಾರಾಯಣಸ್ವಾಮಿ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಅಶ್ವತ್ಥಕಟ್ಟೆಯ ಬಳಿ ಒಬ್ಬ ಆಸಾಮಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಮತ್ತು ಹೆಚ್.ಸಿ 103 ಶಂಕರರೆಡ್ಡಿ ರವರೊಂದಿಗೆ ಕೆಎ40-ಜಿ-64 ರ ಸಕರ್ಾರಿ ಪೊಲಿಸ್ ಜೀಪಿನಲ್ಲಿ ಲಕ್ಕೇನಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಸಂಜೆ 9-30 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಅಶ್ವತ್ಥಕಟ್ಟೆಯ ಬಳಿಯಿಂದ  ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಅಶ್ವತ್ಥಕಟ್ಟೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತಬ್ರೇಜ್  ಬಿನ್ ಬಾಬು,31 ವರ್ಷ, ಮುಸ್ಲಿಂ ಜನಾಂಗ ಕೂಲಿಕೆಲಸ, ವಾಸ 20ನೇ ವಾಡರ್್, ಬಾಗೇಪಲ್ಲಿ ಟೌನ್ ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀಯರ್ಸ್ ವಿಸ್ಕಿಯ 90 ಎಂ.ಎಲ್ ನ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದವು. 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ನ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*11 = 386 ರೂಗಳು (990 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 9-45 ಗಂಟೆಯಿಂದ ಬೆಳಿಗ್ಗೆ 10-45 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ತಬ್ರೇಜ್  ಬಿನ್ ಬಾಬು ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-15 ಘಂಟೆಗೆ ಠಾಣೆಗೆ ಬಂದು ಬೆಳಿಗ್ಗೆ 11-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 202/2021, ಕಲಂ. 15(A), 32(3) ಕೆ.ಇ. ಆಕ್ಟ್:-

                ದಿನಾಮಕ:21/10/2021 ರಂದು ಠಾಣಾ ಎ.ಎಸ್.ಐ ಶ್ರೀ ಮುನಾವರ್ ಪಾಷ ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:21/10/2021 ರಂದು  ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಪಿ.ಸಿ 483 ರಮೇಶ್ ಬಾಬು, ಪಿಸಿ 283 ಅರವಿಂದ ರವರು ದ್ವಿಚಕ್ರ ವಾಹನಗಳಲ್ಲಿ ಮಂಚೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ ಮಿಣಕನಗುರ್ಕಿ ಗ್ರಾಮದ, ಅಶ್ವತ್ಥಪ್ಪ ಬಿನ್ ನಾಗಪ್ಪ  ಎಂಬುವರು ಅವರ ಮನೆಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ  ಮದ್ಯಾಹ್ನ 3-30 ಗಂಟೆಯ ಸಮಯಕ್ಕೆ ಮಿಣಕನಗುರ್ಕಿ ಗ್ರಾಮದ ಅಶ್ವತ್ಥಪ್ಪ ಬಿನ್ ನಾಗಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋಗಿದ್ದು, ಅವರ ಜೊತೆಯಲ್ಲಿ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಅಶ್ವತ್ಥಪ್ಪ ರವರು ಸಹ ಓಡಿ ಹೋಗಿದ್ದು, ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಮಧ್ಯ ತುಂಬಿರುವ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ಅಶ್ವತ್ಥಪ್ಪ ಬಿನ್ ನಾಗಪ್ಪ, 32 ವರ್ಷ, ಆದಿ ಕರ್ನಾಟಕ, ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದುಬಂದಿದ್ದು, ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಸ್ಥಳದಲ್ಲಿ ಇದ್ದ ಮಧ್ಯ ತುಂಬಿರುವ ಟೆಟ್ರಾ ಪಾಕೇಟ್ ಗಳನ್ನು ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಮದ್ಯಾಹ್ನ 3-45 ಗಂಟೆಯಿಂದ 4-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 380/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಅಶ್ವತ್ಥಪ್ಪ ಬಿನ್ ನಾಗಪ್ಪ ರವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

14. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 203/2021, ಕಲಂ. 78(1)(A)(iv)(vi) ಕೆ.ಪಿ. ಆಕ್ಟ್:-

                ಘನ ನ್ಯಾಯಾಲಯದಲ್ಲಿ ಲಕ್ಷ್ಮೀನಾರಾಯಣ, ಪಿ.ಎಸ್.ಐ ಆದ ನಾನು ನಿವೇದಿಸಿಕೊಳ್ಳುವುದೇನೆಂದೆ ದಿನಾಂಕ: 22/10/2021 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಮಂಚೇನಹಳ್ಳಿ ಗ್ರಾಮದ ಕೆಳಗಿನ ಪೇಟೆಯ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಅಂಕಿಗಳನ್ನು ಬರೆದು ಜುಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರಾದ ಪಿ.ಸಿ-483 ರಮೇಶ್ ಬಾಬು, ಪಿ.ಸಿ-283 ಅರವಿಂದ ಮತ್ತು ಪಂಚರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳವಾದ ಆಂಜನೇಯಸ್ವಾಮಿ ದೇವಸ್ಥಾನದ ಬಳಿಗೆ ನಡೆದುಕೊಂಡು ಹೋಗಿ ಮನೆಗಳ ಮರೆಯಲ್ಲಿ ನಿಂತು ನೋಡಿದಾಗ ದೇವಸ್ಥಾನದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ನಿಂತಿದ್ದು, ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಬನ್ನಿ ಬನ್ನಿ 1/- ರೂ. ಗೆ 70/- ರೂ. ಗಳನ್ನು ಕೊಡುತ್ತೇನೆಂದು ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಜೇಬಿನಲ್ಲಿಟ್ಟು ಕೊಂಡು ಪೆನ್ನಿನಿಂದ ಒಂದು ಚೀಟಿಯಲ್ಲಿ ಮಟ್ಕಾ ಅಂಕಿಗಳನ್ನು ಬರೆದುಕೊಂಡು ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಫರಾಜ್ ಬಿನ್ ರಹೀಂ, 27 ವರ್ಷ, ಮುಸ್ಲಿಂ ಜನಾಂಗ, ಪೇಂಟಿಂಗ್ ಕೆಲಸ, ವಾಸ ಕೆಳಗಿನಪೇಟೆ ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಪರಿಶೀಲಿಸಲಾಗಿ ಆತನ ಕೈಯಲ್ಲಿ ಒಂದು ಮಟ್ಕಾ ಅಂಕಿಗಳನ್ನು ಬರೆದಿರುವ ಚೀಟಿ ಹಾಗೂ ಒಂದು ಪೆನ್ನು ಇದ್ದು, ಜೇಬಿನಲ್ಲಿ ಮಟ್ಕಾ ಜೂಜಾಟದಿಂದ ಸಂಗ್ರಹಣೆ ಮಾಡಿದ್ದ ವಿವಿಧ ಮುಖ ಬೆಲೆಯ 1000/- ರೂ ನಗದು ಹಣವಿರುತ್ತೆ. ಫರಾಜ್ ರವರನ್ನು ವಿಚಾರಣೆ ಮಾಡಲಾಗಿ ಸದರಿ ಮಟ್ಕಾಜೂಜಾಟದ ಹಣ ಮತ್ತು ಮಟ್ಕಾ ಚೀಟಿಯನ್ನು ಮಂಜುನಾಥ @ ಶಾಸ್ತ್ರಿ ಬಿನ್ ರಂಗನಾಥಪ್ಪ, 30 ವರ್ಷ, ಬಲಜಿಗರು, ವ್ಯಾಪಾರ, ಕೆಳಗಿನಪೇಟೆ, ಮಂಚೇನಹಳ್ಳಿ ಗ್ರಾಮ,  ರವರಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿತ ಫರಾಜ್ ರವರನ್ನು ವಶಕ್ಕೆ ಪಡೆದುಕೊಂಡು 1000/- ರೂ. ನಗದು ಹಣ, 2) ಮಟ್ಕಾ ಚೀಟಿ, 3) ಒಂದು ಬಾಲ್ ಪಾಯಿಂಟ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 09-00 ಗಂಟೆಯಿಂದ 10-00 ಗಂಟೆಯವರೆವಿಗೂ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಬೆಳಿಗ್ಗೆ 10-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿತರ ಮೇಲೆ ಠಾಣಾ ಮೊ.ಸಂ.203/2021 ಕಲಂ 78(1)(A)(iv)(vi) KP Act ರೀತ್ಯ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

15. ನಂದಿಗಿರಿಧಾಮ ಪೊಲೀಸ್ ಠಾಣೆ, ಮೊ.ಸಂ. 137/2021, ಕಲಂ. 379 ಐಪಿಸಿ:-

                ದಿನಾಂಕ: 21-10-2021 ರಂದು ಸಂಜೆ 16-30 ಗಂಟೆಗೆ ದೂರುದಾರರಾದ ಶ್ರೀ ಪ್ರಕಾಶ್ ಡಿ.ಎನ್. ಬಿನ್ ನಾರಾಯಣಸ್ವಾಮಿ , ದೊಡ್ಡೇಗಾನಹಳ್ಳಿ ಗ್ರಾಂ, ಪೊಶೇಟ್ಟಿಹಳ್ಳಿ ಪಂಚಾಯ್ತಿ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಚಿಕ್ಕಬಳ್ಳಾಪುರ ಖಾಸಗಿ ಕಂಪನಿ ಟೈಟಾನ್ ಕಂಪನಿ ಲಿಮಿಟೇಡ್ ಪ್ಯಾಕ್ಟರಿಯಲ್ಲಿ AGENCY ACTION SUPPLY LTD ಎಂಬ ಒಂದು AGENCY ಯಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಂದಿನಂತೆ ದಿನಾಂಕ: 16-10-2021 ರಂದು ತನ್ನದೆ ಆದಂತಹ ಹೀರೋ ಪ್ಯಾಶನ್ ಪ್ರೋ KA-40-ED-6681 ದ್ವಿಚಕ್ರ ವಾಹನದಲ್ಲಿ ಸೆಕೆಂಡ್ ಶಿಪ್ಟ್ ಕೆಲಸಕ್ಕೆ ಬಂದಿರುತ್ತೇನೆ. ಮತ್ತು ಕಂಪನಿಯ ಆವರಣದಲ್ಲಿ ಭದ್ರತಾ ಗೇಟ್ ಬಳಿ ಹೊರಗಡೆ ಜಾಗ ವಿಲ್ಲದ ಕಾರಣದಿಂದಾಗಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿರುತ್ತೇನೆ ಮತ್ತು (ಸೆಕೆಂಡ್ ಶಿಪ್ಟ್ ) ಮಧ್ಯಾಹ್ನ 2-30 ರಿಂದ ರಾತ್ರಿ 11-00 ಗಂಟೆ ವರೆಗೂ ಇರುವ ಕಾರಣದಿಂದಾಗಿ ತಾನು ತನ್ನ ಕೆಲಸ ಸಮಯವು ಮುಗಿದ ನಂತರ ಹೊರಗಡೆ ಬಂದು ನೋಡಲಾಗಿ ತನ್ನ ದ್ವಿಚಕ್ರ ವಾಹನ ತಾನು ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ ತನಗೆ ತುಂಬಾ ದುಖಃವಾಯಿತು ತನ್ನ ಸ್ನೇಹಿತರ ಜೊತೆ 2  ಗಂಟೆಗಳ ಕಾಲ ಹುಡುಕಿದೆವು ಆದರೂ ಸಿಗಲಿಲ್ಲ ಇದೊಂದು ವಾಹನವನ್ನು ತೆಗೆದುಕೊಳ್ಳಲು ಮನೆಯಲ್ಲಿ ಇರುವಂತಹ ಸಾಕು ಮೇಕೆಗಳನ್ನು ಮಾರಿ ತೆಗೆದುಕೊಂಡಿರುತ್ತೇನೆ. ತದನಂತರ ಭದ್ರತಾ ಗೇಟ್ ನ ಸೆಕ್ಯೂರಿಟಿ ಮೇಲ್ವಿಚಾರಕರಾದ ಶ್ರೀ ತಿಮ್ಮರೆಡ್ಡಿ ರವರನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಿದಾಗ ಅವರು ಸಹ ಬಂದು ಸುಮಾರು ರಾತ್ರಿ 11-00 ಗಂಟೆಯಿಂದ ರಾತ್ರಿ 1-00 ಗಂಟೆವರೆಗೂ ಹುಡುಕಿದರು ಆದರೆ ಎಲ್ಲಿಯೂ ಸಹ ಇರಲಿಲ್ಲ ತನ್ನ ಸ್ನೇಹಿತರಾದವರು ಯಾರಾದರೂ ಆಕಸ್ಮಿಕವಾಗಿ ತೆಗೆದುಕೊಂಡು ಹೋಗಿರಬಹುದು ಎಂದು ವಿಚಾರ ಮಾಡಿ ಒಂದು ದಿನ ಕಾಲ ನೋಡಿದೇವು ಆದರೆ ಯಾವುದೇ ಮಾಹಿತಿ ಗೊತ್ತಾಗಲಿಲ್ಲ ಆದ್ದರಿಂದ ಎಫ್ ಐ ಆರ್ ಕೊಡಲು ಬೇಗ ಬರಲಿಲ್ಲ 3 ದಿನಗಳ ಕಳೆದರು ಸಿಗಲಿಲ್ಲ, ತನ್ನ ದ್ವಿಚಕ್ರ ವಾಹನದ ಬೆಲೆ ಸರಿ ಸುಮಾರು 48000 ರೂಗಳಾಗಿರುತ್ತೆ. ಸದರಿ ತನ್ನ ದ್ವಿಚಕ್ರ ವಾಹನವನ್ನು ಹುಡುಕಿ ಕೋಡಬೇಕಾಗಿ ಕೋರಿದ್ದರ ಮೇರೆಗೆ ಈ ಪ್ರ.ವ.ವರಿಧಿ

 

16. ನಂದಿಗಿರಿಧಾಮ ಪೊಲೀಸ್ ಠಾಣೆ, ಮೊ.ಸಂ. 138/2021, ಕಲಂ. 379 ಐಪಿಸಿ:-

                ದಿನಾಂಕ:21/10/2021 ರಂದು ಸಂಜೆ 5:00 ಗಂಟೆಗೆ  ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ಪಿರ್ಯಾಧಿದಾರರು ಅಡವಿಗೊಲ್ಲವಾರಹಳ್ಳಿ ಗ್ರಾಮದ ವಾಸಿಯಾಗಿದ್ದು  ಸದರಿಯವರು ತಮ್ಮ ಮಾವನವರಾದ ಜಿಬಿ ಮುನೇಗೌಡ ಬಿನ್  ಬಾಲಕೃಷ್ಣಪ್ಪ ರವರ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಹಿರೋ ಸುಹಾಸ್ ಮೋಟಾರ್ಸ್ ನಲ್ಲಿ  ದಿನಾಂಕ:07/10/2013 ರಂದು ಸ್ಪ್ಲೆಂಡರ್ ಪ್ಲಸ್  ದ್ವಿಚಕ್ರ ವಾಹನವನ್ನು ಖರೀದಿಸಿದ್ದು  ಸದರಿ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ : ಕೆಎ 40 ಯು 4091 ಆಗಿದ್ದು ,  ಚಾಸಿಸ್ ನಂ: MBLHA10ALD9H03562 , ಇಂಜಿನ್ ನಂ: HA10EJD9H13299 ಅಗಿದ್ದು viol black ಬಣ್ಣದ ದ್ವಿಚಕ್ರ ವಾಹವವಾಗಿರುತ್ತೆ. ಸದರಿ ವಾಹನವನ್ನು  ಹೂವಿನ  ವ್ಯಾಪಾರದ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದು , ದಿನಾಂಕ:19/10/2021 ರಂದು ಬೆಳಗ್ಗೆ 7:00 ಗಂಟೆ ಸಮಯದಲ್ಲಿ   ಕೆವಿ ಕ್ಯಾಂಪಸ್ ಬಳಿಯಿರುವ ಹೂವಿನ ಮಾರುಕಟ್ಟೆ ಬಳಿ ತನ್ನ  ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದು ವ್ಯಾಪಾರವನ್ನು ಮುಗಿಸಿಕೊಂಡು  ವಾಪಸ್ಸು ಬಂದು ನೋಡಲಾಗಿ ತನ್ನ ದ್ವಿಚಕ್ರ ವಾಹನವು ಸ್ಥಳದಲ್ಲಿರುವುದಿಲ್ಲ,  ತಾನು ಸುತ್ತಮುತ್ತಲಿನ ಸ್ಥಳದಲ್ಲಿ ಹಾಗೂ ಸ್ಥಳೀಯರಲ್ಲಿ ವಿಚಾರಿಸಿದ್ದು  ಯಾವುದೇ ಸುಳಿವಿರುವುದಿಲ್ಲ , ಸದರಿ ದ್ವಿಚಕ್ರ ವಾಹನದ ಅಂದಾಜು ಬೆಲೆ 26000 ರೂಗಳಾಗಿರುತ್ತೆ. ಆದ್ದರಿಂದ ತನ್ನ ದ್ವಿಚಕ್ರವಾಹನವನ್ನು ಕಳುವುಮಾಡಿಕೊಂಡು ಹೋಗಿರುವ  ಕಳ್ಳರನ್ನು  ಮತ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ  ಕಾನೂನು ರೀತ್ಯ  ಕ್ರಮವನ್ನು ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:138/2021 ಕಲಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ

 

17. ನಂದಿಗಿರಿಧಾಮ ಪೊಲೀಸ್ ಠಾಣೆ, ಮೊ.ಸಂ. 139/2021, ಕಲಂ. 379 ಐಪಿಸಿ:-

                ದಿನಾಂಕ: 22-10-2021 ರಂದು ಮಧ್ಯಾಹ್ನ 1-15 ಗಂಟೆಗೆ ಪಿರ್ಯಾದಿ ಚಂದ್ರ ಶೇಖರ್ ಬಾಬು ಎನ್. ಅಣಕನೂರು ಗ್ರಾಮ, ರವರು  ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನಂದರೆ, ತಾನು 3 ವರ್ಷಗಳಿಂದ ನಂದಿ ಕ್ರಾಸ್ ಬಳಿ ಇರುವ ಮೆಗಾ ಡೈರಿಯಲ್ಲಿ ಮಿಷಿನ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು ತನ್ನ ಸ್ವಂತ ಉಪಯೋಗಕ್ಕಾಗಿ ನಂ: ಕೆಎ-40-ಇಬಿ-0333 ನೊಂದಣಿ ಸಂಖ್ಯೆಯ ಹೊಂಡಾ ಡೀಯೋ ದ್ವಿಚಕ್ರ ವಾಹನವನ್ನು ಇಟ್ಟುಕೊಂಡಿದ್ದು ಪ್ರತಿ ದಿನ ಕೆಲಸಕ್ಕೆ ಸದರಿ ದ್ವಿಚಕ್ರವಾಹನದಲ್ಲಿ ಬಂದು ಹೋಗುತ್ತಿದ್ದು ದಿನಾಂಕ: 21-10-2021 ರಂದು ಬೆಳಿಗ್ಗೆ 11-30 ಗಂಟೆಗೆ ಎಂದಿನಂತೆ ಮನೆಯಿಂದ ಕೆಲಸಕ್ಕೆ ಬಂದು ದ್ವಿಚಕ್ರ ವಾಹನವನ್ನು ಮೆಗಾ ಡೈರಿಯ ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ದ್ವಿಚಕ್ರ ವಾಹನ ಕಂಡು ಬಾರದೆ ಇದ್ದು ಅಕ್ಕ ಪಕ್ಕ ಹಾಗೂ ಇತರೆ ಸ್ಥಳಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೆ ಇದ್ದು ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು 25000/ ರೂಗಳಾಗಿದ್ದು ಆರೋಪಿಗಳು ಮತ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ. ಇದರೊಂದಿಗೆ ದೂರಿನ ಪ್ರತಿ ಲಗತ್ತಿಸಿರುತ್ತೆ.

 

18. ಪಾತಪಾಳ್ಯ ಪೊಲೀಸ್ ಠಾಣೆ, ಮೊ.ಸಂ. 114/2021, ಕಲಂ. 7, 25, 1A ARMS ACT, 1959:-

                ದಿನಾಂಕ:21-10-2021 ರಂದು ಪಿರ್ಯಾದಿದಾರರಾದ ಶ್ರೀ ರತ್ನಯ್ಯ ಎನ್. ಪಿ.ಎಸ್.ಐ ಪಾತಪಾಳ್ಯ ಪೊಲಿಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ  ಈ ದಿನ ದಿನಾಂಕ:21-10-2021 ರಂದು ನಾನು ಸಿಬ್ಬಂದಿಯವರಾದ ಸಿ.ಹೆಚ್.ಸಿ-179 ರಾಜೇಶ, ಸಿ.ಪಿ.ಸಿ-234 ಸುರೇಶ ಕೊಂಡಗೂಳಿ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ  ಕೆಎ-40-ಜಿ-59 ರಲ್ಲಿ ಜೀಫ್ ಚಾಲಕ ಎಪಿಸಿ-98 ಶ್ರೀನಾಥ ರವರೊಂದಿಗೆ ಪಾತಕೋಟೆ, ಗುಜ್ಜೇಪಲ್ಲಿ, ಪೈಪಾಳ್ಯ ಗ್ರಾಮಗಳ ಕಡೆ ಹಗಲು ಗ್ರಾಮ ಗಸ್ತಿನಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ವಡಿಗೆರೆ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಕದಿರಪ್ಪ ಎಂಬುವವರು ತಮ್ಮ ಬಾಬತ್ತು ತೋಟದ ಮನೆಯಲ್ಲಿ ಅಕ್ರಮವಾಗಿ ಬಂದೂಕು ತಯಾರು ಮಾಡುತ್ತಿರುವುದಾಗಿ ಬಂದ ಭಾತ್ಮ ಮೇರೆಗೆ ಪಂಚಾಯ್ತಿದಾರರಾಗಿ 1) ಶ್ರೀ.ಬಿ.ವಿ.ನರಸಿಂಹರೆಡ್ಡಿ ಬಿನ್ ವೆಂಕಟರೆಡ್ಡಿ 2) ಶ್ರೀ.ಶ್ರೀನಿವಾಸ ಬಿನ್ ನರಸಿಂಹಪ್ಪ 3) ಶ್ರೀ.ಮಧುಸೂಧನರೆಡ್ಡಿ ಬಿನ್ ಚಿನ್ನಮದ್ದನ್ನ ರವರನ್ನು ಕರೆದುಕೊಂಡು ನಾನು ಮೇಲ್ಕಂಡ ಸಿಬ್ಬಂದಿಯೊಂದಿಗೆ ಬಾಗೇಪಲ್ಲಿ ತಾಲ್ಲೂಕು ವಡಿಗೆರೆ ಗ್ರಾಮದ ಸ.ನಂ.83 ರ ಜಮೀನಿನಲ್ಲಿ ನಿರ್ಮಾಣ ಮಾಡಿರುವ ತೋಟದ ಮನೆಯ ಬಳಿಗೆ ಹೋಗುತ್ತಿದ್ದಂತೆ ನಮ್ಮನ್ನು ಕಂಡು ಒಬ್ಬ ಆಸಾಮಿಯು ಸದರಿ ಸ್ಥಳದಿಂದ ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿ ಒಬ್ಬ ಆಸಾಮಿಯು ಕೊಲಿಮೆ ಹಾಗೂ ಮರದ ಕೆಲಸ ಮಾಡುವ ಸಾಮಾಗ್ರಿಗಳನ್ನು ಇಟ್ಟುಕೊಂಡು ಬಂದೂಕನ್ನು ತಯಾರು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 1)ಹೊಸದಾಗಿ ತಯಾರು ಮಾಡುತ್ತಿರುವ ಬಟ್ & ಎರಡು ನಳಿಕೆಗಳ (ಬ್ಯಾರೆಲ್) ಇರುವ ಡಿ.ಬಿ.ಬಿ.ಎಲ್ ಮಾದರಿಯ ಬಂದೂಕು 2)ಸಾಣೇ ಹಿಡಿಯುವ ಕಲ್ಲು 3)ಗರಗಸ 4)ಬಫೀಂಗ್ ಮಿಷನ್ 5)ಆಕ್ಸೆಲ್ ಬ್ಲೇಡ್ ಇರುವ ಆಕ್ಸೆಲ್ ಪ್ರೇಮ್ 6)ಮರವನ್ನು ಟೈಟ್ ಮಾಡುವ ಚಿಕ್ಕ ಕ್ಲಾಂಪ್ 7)ಸುತ್ತಿಗೆ 8)ಡ್ರಿಲ್ಲಿಂಗ್ ಮಿಷನ್ 9)ಮರವನ್ನು ಟೈಟ್ ಮಾಡುವ ದೊಡ್ಡ ಕ್ಲಾಂಪ್ 10)ಕೊಲಿಮಿ ಮಿಷನ್  ಇರುತ್ತವೆ. ಸದರಿ ಸ್ಥಳದಲ್ಲಿದ್ದ ಆಸಾಮಿಯ ಹೆಸರು & ವಿಳಾಸ ಕೇಳಿ ತಿಳಿಯಲಾಗಿ ನರಸಿಂಹಪ್ಪ.ಕೆ ಬಿನ್ ಲೇಟ್ ಕದಿರಪ್ಪ, 63 ವರ್ಷ, ನಾಯಕರು, ನಿವೃತ್ತ ಶಿಕ್ಷಕರು, ವಾಸ: ವಡಿಗೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಓಡಿ ಹೋದ ಆಸಾಮಿಯ ಹೆಸರು & ವಿಳಾಸ ಕೇಳಿ ತಿಳಿಯಲಾಗಿ ನರಸಿಂಹಪ್ಪ, ಬಂದಾರ್ಲಹಳ್ಳಿ ಎಂತ ತಿಳಿಸಿದ್ದು, ಆಯುಧಗಳನ್ನು ತಯಾರು ಮಾಡಲು ಲೈಸನ್ಸ್ ಇದೆಯೇ ಎಂದು ಕೇಳಿದ್ದು ಸದರಿಯವರು ತನ್ನ ಬಳಿ ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ.  ಸದರಿ ಸ್ಥಳದಲ್ಲಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 1-30 ಗಂಟೆಯಿಂದ 2-45 ಗಂಟೆಯವರೆಗೆ ಪಂಚನಾಮೆ ಮೂಲಕ ಮೇಲ್ಕಂಡ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಅಮಾನತ್ತುಪಡಿಸಿಕೊಂಡಿದ್ದು, ಅವುಗಳ ಪೈಕಿ ಕ್ರ.ಸಂ.1 ರ ಮಾಲನ್ನು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಮೂತಿಯನ್ನು ಕಟ್ಟಿ K ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿರುತ್ತದೆ. ನಂತರ ಮೇಲ್ಕಂಡ ಮಾಲುಗಳು, ಆರೋಪಿ ಹಾಗೂ ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಮದ್ಯಾಹ್ನ 3-30 ಗಂಟೆಗೆ ಬಂದು ವರದಿಯನ್ನು ತಯಾರು ಮಾಡಿ ಮದ್ಯಾಹ್ನ 4-00 ಗಂಟೆಗೆ ವರದಿಯನ್ನು ನೀಡುತ್ತಿದ್ದು, ಅಕ್ರಮವಾಗಿ ಡಿ.ಬಿ.ಬಿ.ಎಲ್ ಬಂದೂಕನ್ನು ತಯಾರು ಮಾಡುತ್ತಿದ್ದ ಮೇಲ್ಕಂಡ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

19. ಪೆರೇಸಂದ್ರ ಪೊಲೀಸ್ ಠಾಣೆ, ಮೊ.ಸಂ. 12/2021, ಕಲಂ. 279, 337 ಐಪಿಸಿ:-

                ದಿನಾಂಕ:21-10-2021 ರಂದು ಪಿರ್ಯಾದಿದಾರರಾದ ಅಕ್ರಂ ಬಿನ್ ಫಕೃದ್ದೀನ್ ಸಾಬ್ 27 ವರ್ಷ ಮುಸ್ಲಿಂ ಜನಾಂಗ , ಕೂಲಿ ಕೆಲಸ, ಪೆರೇಸಂದ್ರ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. ಮೊ.ನಂ-8139915592. ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ, ತಾನು ದಿನಾಂಕ 20-10-2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ಸ್ವಂತ ಕೆಲಸದ ನಿಮಿತ್ತ ವರ್ಲಕೊಂಡ ಗ್ರಾಮಕ್ಕೆ ಹೋಗಲು ಭತ್ತಲಹಳ್ಳಿ ಕ್ರಾಸ್ ಬಳಿ ಎನ್.ಹೆಚ್.-44 ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಹೈದರಾಬಾದ್ ಕಡೆಗಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಭತ್ತಲಹಳ್ಳಿ ಕ್ರಾಸ್ ಬಳಿ ಮುಂದೆ ಹೋಗುತ್ತಿದ್ದ ಕೆ.ಎ-50-ಕ್ಯೂ-4244 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ನಿಯಂತ್ರಣ ತಪ್ಪಿ ತನ್ನಷ್ಟಕ್ಕೆ ತಾನೇ  ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ದ್ವಿಚಕ್ರ ವಾಹನದ  ಸವಾರನಿಗೆ ತಲೆಗೆ ರಕ್ತಗಾಯವಾಗಿದ್ದು  ಮೈ ಮೇಲೆ ತರಚಿದ ಗಾಯಗಳಾಗಿರುತ್ತೆ. ದ್ವಿಚಕ್ರ ವಾಹನದ ಸವಾರ ಪ್ರಜ್ಞೆತಪ್ಪಿ ಬಿದ್ದಿರುತ್ತಾನೆ. ಕೂಡಲೇ ತಾನು ಮತ್ತು ಅಲ್ಲಿಗೆ ಬಂದ ಹೈ ಪೆಟ್ರೋಲಿಂಗ್  ರವರು  ಅಂಬುಲೇನ್ಸ್ ಅನ್ನು ಕರೆಯಿಸಿಕೊಂಡು ಗಾಯಳುವನ್ನು  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂದು ಹೋಗಲು ಕಳುಹಿಸಿಕೊಟ್ಟೆವು. ದ್ವಿಚಕ್ರ ವಾಹನದ ಸವಾರ ಹೆಸರು ಮತ್ತು ವಿಳಾಸ ತಿಳಿದುಬಂದಿರುವುದಿಲ್ಲ.ಈ ಅಪಘಾತಕ್ಕೆ ಕೆ.ಎ-50-ಕ್ಯೂ-4244 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರನ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯೇ ಕಾರಣವಾಗಿದ್ದು ಈ ಬಗ್ಗೆ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರುತ್ತೇನೆ. ತಾನು ಕೂಲಿ ಕೆಲಸಕ್ಕೆ ಹೋಗಿದ್ದರಿಂದ ದೂರು ನೀಡಲು ತಡವಾಗಿರುತ್ತೆ.

ಇತ್ತೀಚಿನ ನವೀಕರಣ​ : 22-10-2021 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080