ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.142/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:21/10/2021 ರಂದು ಮದ್ಯಾಹ್ನ 12:30  ಗಂಟೆ ಸಮಯದಲ್ಲಿ  ಠಾಣಾ ಸಿಬ್ಬಂದಿ ಹೆಚ್.ಸಿ-36 ವಿಜಯ್ ಕುಮಾರ್, ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಎಸ್.ರಾಗುಟ್ಟಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಬೈರಾಬಂಡ ಗ್ರಾಮದ ವಾಸಿಯಾದ ಶ್ರೀಮತಿ.ನರಸಮ್ಮ ಕೋಂ ಶ್ರೀರಾಮಪ್ಪ ರವರು ಅವರ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ-36 ವಿಜಯ್ ಕುಮಾರ್ ರವರೊಂದಿಗೆ ಬೈರಾಬಂಡ  ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮದ್ಯಾಹ್ನ 12:45 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಶ್ರೀಮತಿ.ನರಸಮ್ಮ ಕೋಂ ಶ್ರೀರಾಮಪ್ಪ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಅವರಿಗೆ ಮದ್ಯವನ್ನು ನೀಡುತ್ತಿದ್ದ ಒಬ್ಬ ಮಹಿಳೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸದರಿ ಮಹಿಳೆಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶ್ರೀಮತಿ ನರಸಮ್ಮ ಕೋಂ ಶ್ರೀರಾಮಪ್ಪ 50 ವರ್ಷ ,ನಾಯಕ ಜನಾಂಗ, ಕೂಲಿಕೆಲಸ ವಾಸ-ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಮಹಿಳೆಯು ಯಾವುದೇ ಪರವಾನಿಗೆಯನ್ನು ಹೊಂದದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದು ಕಂಡು ಬಂದಿದ್ದರ ಮೇರೆಗೆ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 12 ಹೈವಾರ್ಡ್ಸ್ ಚಿರ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳು ಇದ್ದು ಒಟ್ಟು 1080 ಎಂ.ಎಲ್ ನ 421.56  ಪೈಸೆ  ರೂಗಳು ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 1:00 ಗಂಟೆಯಿಂದ 2:00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಅಮಾನತ್ತುಪಡಿಸಿಕೊಂಡ ಮಾಲಿನೊಂದಿಗೆ ಮಧ್ಯಾಹ್ನ 2-15 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ,ಸಂಖ್ಯೆ:142/2021 ಕಲಂ:15(A) ,32(3) K.E  ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ; 20-10-2021 ರಂದು ಸಂಜೆ 6.40 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ-195 ಶ್ರೀ ಮುರಳೀಧರ ಹೆಚ್. ರವರು ಠಾಣೆಗೆ ಹಾಜರುಪಡಿಸಿದ  ಹಾಜರುಪಡಿಸಿದ ಮಾಲು, ಆರೋಪಿತ, ಪಂಚನಾಮೆ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 20-10-2021 ರಂದು ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ.ಪಿ. ಮಂಜು ಸಾಹೇಬರವರು ತನಗೆ,ಮತ್ತು ಸಿಬ್ಬಂದಿಯವರಾದ ಸಿ.ಪಿ.ಸಿ-527 ಮತ್ತು ಜಯಣ್ಣ ಸಿ.ಪಿ.ಸಿ-152 ರವರುಗಳಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಗಂಗಮ್ಮ ಗುಡಿ ರಸ್ತೆ ಕಡೆ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಗೆ ಪೊಲೀಸ್ ಸರ್ಕಲ್ ಕಡೆ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಯಾರೋ ಒಬ್ಬ ಆಸಾಮಿ ಚಿಕ್ಕಬಳ್ಳಾಪುರ ನಗರದ ಸಿ.ಎಸ್.ಐ ಆಸ್ಪತ್ರೆಯ ಮುಂಭಾಗದ ಆಟೋ ನಿಲ್ದಾಣದ ಬಳಿ ಸಾರ್ವಜನಿಕ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾದ ಮಟ್ಕಾ ಚೀಟಿಯನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಬಂದ ಮಾಹಿತಿಯನ್ನು ತಿಳಿಸಿ ಪಂಚರೊಂದಿಗೆ ಸಂಜೆ 4.15 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರನ್ನು ಜೋರಾಗಿ ಕೂಗುತ್ತಾ ಬನ್ನಿ ಬನ್ನಿ ಮಟ್ಕಾ ಚೀಟಿಗಳನ್ನು ಬರೆಯಿಸಿಕೊಂಡು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದವನನ್ನು ಪಂಚರ ಸಮಕ್ಷಮ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಲಿಯಾಕತ್ ಅಲಿ ಬಿನ್ ಲೇಟ್ ಮಹಮದ್ ಅಲಿ, 21 ವರ್ಷ, ಮುಸ್ಲಿಂ, ಕೂಲಿಕೆಲಸ, ಮಂಜುನಾಥ ಆಸ್ಪತ್ರೆಯ ಬಳಿ, ಡಿ.ಸಿ.ಎಂ. ರಸ್ತೆ, ವಾರ್ಡ್ ನಂ: 27, ಚಿಕ್ಕಬಳ್ಳಾಪುರ ನಗರ  ಎಂತ ತಿಳಿಸಿದನು. ನಂತರ ಸದರಿ ಆಸಾಮಿಯನ್ನು ಪರಿಶೀಲನೆ ಮಾಡಲಾಗಿ ಒಂದು ಮಟ್ಕಾ ಚೀಟಿ ಇದ್ದು, 550/- ರೂ ನಗದು ಹಣವಿರುತ್ತೆ. ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಟ್ಟಿದ್ದರಿಂದ ಬಂದಿರುವ ಹಣವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯಿಂದ ಒಂದು ಮಟ್ಕಾ ಚೀಟಿ, ನಗದು ಹಣ ಮತ್ತು ಒಂದು ಬಾಲ್ ಪಾಯಿಂಟ್ ಪೆನನ್ನು ಅಮಾನತ್ತುಪಡಿಸಿಕೊಂಡಿದ್ದು,  ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ, ಮಾಲುಗಳು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಸದರಿ ಆಸಾಮಿಯ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.457/2021 ಕಲಂ. 279,337 ಐ.ಪಿ.ಸಿ & 134(A&B) INDIAN MOTOR VEHICLES ACT, 1988 :-

     ದಿನಾಂಕ: 20/10/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ವಿಜಯಕುಮಾರ್ ಬಿನ್ ಲೇಟ್ ನಾರಾಯಣಪ್ಪ, 58 ವರ್ಷ, ತೊಗಟರು, ಸೆಕ್ಯುರಿಟಿ ಗಾರ್ಡ್ ಕೆಲಸ, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೆನೆಂದರೆ, ದಿನಾಂಕ: 18/10/2021 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ಪ್ರೀತಿ ಪಬ್ಲಿಕ್ ಶಾಲೆಯಲ್ಲಿ ಗಾರ್ಡ್ ಕೆಲಸ ಮಾಡುವ ರವಿಶಂಕರ್ ರವರು ತನ್ನನ್ನು ಮಾತನಾಡಬೇಕೆಂದು ಕರೆದಿದ್ದು, ಅದರಂತೆ ತಾನು ಅಟ್ಲಾಸ್ ಸೈಕಲ್ ನಲ್ಲಿ ತಿಮ್ಮಸಂದ್ರ ಗ್ರಾಮದಿಂದ ಶಾಲೆಯ ಕಡೆಗೆ ಬರಲು ವಿಜಯಲಕ್ಷ್ಮಿ ಸಿಲ್ಕ್ ಹೌಸ್ ಸೆಂಟರ್ ಬಳಿ ಬರುತ್ತಿದ್ದಾಗ ತನ್ನ ಹಿಂಬದಿಯಿಂದ KA-67 E-7636 ನೊಂದಣಿ ಸಂಖ್ಯೆ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಸೈಕಲ್ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಹೋಗಿದ್ದು, ತನ್ನ ಬೆನ್ನಿನ ಹಿಂಬದಿಯಲ್ಲಿ ಮೂಗೇಟುಗಳಾಗಿರುತ್ತೆ ಮತ್ತು ಎಡಗೈ ಮೊಣಕೈ ಬಳಿ ತರಚಿದ ಗಾಯಗಳಾಗಿರುತ್ತೆ. ಕೆಳಗೆ ಬಿದ್ದಿದ್ದ ತನ್ನನ್ನು ಚಿಕಿತ್ಸೆಗಾಗಿ ಶ್ರೀಕಾಂತ್ ಹಾಗೂ ತನ್ನ ಹೆಂಡತಿ ನಾಗಮ್ಮ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು. ತನಗೆ ಅಪಘಾತಪಡಿಸಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸದೆ, ಪೊಲೀಸರಿಗೂ ಮಾಹಿತಿಯನ್ನು ನೀಡದೆ ಇರುವ ಮೇಲ್ಕಂಡ KA-67 E-7636 ನೊಂದಣಿ ಸಂಖ್ಯೆ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.458/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ: 21/10/2021 ರಂದು ಮದ್ಯಾಹ್ನ 12.00 ಗಂಟೆಗೆ ಪಿರ್ಯಾಧಿದಾರರಾದ ಜಿಯಾವುಲ್ಲಾಬೇಗ್ ಬಿನ್ ಲೇಟ್ ಹೈದರ್ ಬೇಗ್, 41 ವರ್ಷ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಗೆ 5 ಜನ ಮಕ್ಕಳಿದ್ದು, ಆ ಪೈಕಿ 3 ಗಂಡು ಮತ್ತು ಇಬ್ಬರು ಮಕ್ಕಳಿದ್ದು, ಆ ಪೈಕಿ ತನ್ನ ಅಕ್ಕ ಮಲ್ಲಿಕಾಬೇಗಂ ರವರನ್ನು ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ವಾಸಿಯಾದ ಅತಾವುಲ್ಲಾರವರಿಗೆ ಕೊಟ್ಟು ಮದುವೆ ಮಾಡಿದ್ದೆವು. ಅವರಿಗೆ ಇಬ್ಬರು ಮಕ್ಕಳಿದ್ದು, ಸಮೀರಾ ಎಂಬ ಹೆಣ್ಣು ಮಗು ಮತ್ತು ಸುಹೇಲ್ ಪಾಷ ಎಂಬ ಗಂಡು ಮಗುವಿತ್ತು. ಈ ಮಕ್ಕಳು ಚಿಕ್ಕವರುವಾಗಲೇ ತನ್ನ ಅಕ್ಕ ಅನಾರೋಗ್ಯದ ನಿಮಿತ್ತ ಮೃತಪಟ್ಟರು. ಅವರ ಇಬ್ಬರು ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಸಾಕಿಕೋಂಡೆವು. ಸಮೀರಾರವರಿಗೆ ಮದುವೆ ಮಾಡಿರುತ್ತೇವೆ. ಸುಹೇಲ್ ಪಾಷಾ ರವರಿಗೆ ಶಿಡ್ಲಘಟ್ಟದಲ್ಲಿ ಹೆಣ್ಣು ನೋಡಿದ್ದು ಇದೇ ತಿಂಗಳ 23 ನೇ ತಾರೀಖು ಮದುವೆ ನಿಶ್ಚಯವಾಗಿತ್ತು. ಹೀಗಿರುವಾಗ ಸುಹೇಲ್ ಪಾಷಾ ರವರು ದಿನಾಂಕ: 20/10/2021 ರಂದು ಬೆಳಿಗ್ಗೆ 08-00 ಗಂಟೆಗೆ ಚಿಂತಾಮಣಿಯಲ್ಲಿ ತನ್ನ ಸ್ನೇಹಿತನ ಬಳಿ ಹಣ ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ವಾಪಸ್ಸು ಬಂದಿರುವುದಿಲ್ಲ. ಆತನ ಮೊಬೈಲ್ ನಂ 6361502617 ಆಗಿದ್ದು ಸ್ವೀಚ್ ಆಫ್ ಆಗಿರುತ್ತೆ. ಇದೂವರೆವಿಗೂ ತನ್ನ ನೆಂಟರ ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು. ಕಾಣೆಯಾದ ತನ್ನ ಅಕ್ಕನ ಮಗನಾದ  ಸುಹೇಲ್ ಪಾಷ ಬಿನ್ ಅತಾವುಲ್ಲಾರವರನ್ನು ಪತ್ತೆ ಮಾಡಿಕೊಡಲಲು ಕೋರಿ ನೀಡಿದ ದೂರಾಗಿರುತ್ತೆ.

 

5. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 20/10/2021 ರಂದು ಮದ್ಯಾಹ್ನ 02.15 ಗಂಟೆಗೆ  ಹೆಚ್.ಸಿ 110 ವೇಣು ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು  ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಪಿ.ಐ ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ:20/10/2021 ರಂದು ತನಗೆ ಮತ್ತು ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ದಿನಾಂಕ:20/10/2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ಕೊಮ್ಮೇಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಕೊಮ್ಮೇಪಲ್ಲಿ ಗ್ರಾಮದ ತಿಪ್ಪಣ್ಣ ರವರ ಚಿಲ್ಲರೆ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಪಾನ ಮಾಡುತ್ತಿದ್ದು,ತಾವುಗಳು ಪಂಚರೊಂದಿಗೆ ದಾಳಿ ಮಾಡಲಾಗಿ ಸ್ಥಳದಲ್ಲಿ ಇದ್ದವರು ಮತ್ತು ಆರೋಪಿ ಸ್ಥಳದಿಂದ ಓಡಿಹೋಗಿದ್ದು,ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತಿಪ್ಪಣ್ಣ ಬಿನ್ ಲೇಟ್ ಪೆದ್ದಣ್ಣ, 35 ವರ್ಷ, ಆದಿ ಕರ್ನಾಟಕ, ಚಿಲ್ಲರೆ ಅಂಗಡಿ ವ್ಯಾಪಾರ ಕೊಮ್ಮೇಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ ಮದ್ಯ ತುಂಬಿದ 90 ML ನ 16 ಟೆಟ್ರಾ ಪಾಕೇಟ್ ಗಳು ಒಟ್ಟು 1440 ಎಂಎಲ್ ಇದ್ದು ಬೆಲೆ 562/- ರೂ  2) OLD TAVREN WISKEY ಯ ಮದ್ಯ ತುಂಬಿದ 180 ML ನ 04  ಟೆಟ್ರಾ ಪಾಕೇಟ್ ಗಳು ಒಟ್ಟು 720 ಎಂಎಲ್ ಇದ್ದು ಬೆಲೆ 347/- ರೂ  3) 2 ಪ್ಲಾಸ್ಟಿಕ್ ಗ್ಲಾಸ್ ಗಳು 3) 02 ಖಾಲಿ ಇದ್ದ ಎರಡು HAYWARDS CHEERS WHISKY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳು 4) ಖಾಲಿ ಒಂದು ಲೀಟರ್ ನೀರಿನ ಬಾಟಲ್ ಇದ್ದು ವಶಪಡೆಸಿಕೊಂಡು ಒಟ್ಟು 2.160 ಎಂ ಎಲ್ ಇದ್ದು ಇದರ ಬೆಲೆ 909/- ರೂಗಳಾಗಿರುತ್ತದೆ. ಮಾಲನ್ನು ಪಂಚನಾಮೆ ಮೂಲಕ ಅಮಾನತ್ತು ಪಡೆಸಿಕೊಂಡಿರುತ್ತದೆ. ಯಾವುದೇ ಪರವಾನಿಗೆ ಪಡೆಯದೇ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ  ಮಾಡಿಕೊಟ್ಟಿರುವ ಆಸಾಮಿಯಾದ ತಿಪ್ಪಣ್ಣ ಬಿನ್ ಲೇಟ್ ಪೆದ್ದಣ್ಣ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

6. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 323,324,504,34 ಐ.ಪಿ.ಸಿ:-

     ದಿನಾಂಕ:20-10-2021 ರಂದು ಸಂಜೆ 18-30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ.ನಾಗಮಣಿ ಕೋಂ ಎನ್.ರಮೇಶ, ಮಂಗಳಮಡುಗುವಾರಿಪಲ್ಲಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:28-08-2021 ರಂದು ಸಾಯಂಕಾಲ 5-00 ಗಂಟೆಯಲ್ಲಿ ತಮ್ಮ ಗ್ರಾಮದ ಚಿಂತಚೆಟ್ಲು ರವಣ ಬಿನ್ ವೆಂಕಟರವಣಪ್ಪ ಮತ್ತು ಆತನ ಹೆಂಡತಿ ಸುಜಾತ ಇಬ್ಬರೂ ಮೇಕೆಗಳನ್ನು ಮೇಯಿಸಿಕೊಳ್ಳುತ್ತಾ ತಮ್ಮ ಹುಣಸೇಮರದ ಹತ್ತಿರ ಬಂದು ಮರವನ್ನು ಏರುತ್ತಿದ್ದಾಗ ತಾನು ಮೇಕೆಗಳನ್ನು ಮೇಯಿಸಬೇಡಿ ಮೆಣಸಿನ ಗಿಡಗಳು ಅಂದಿದ್ದಕ್ಕೆ ಅವರು ಇಬ್ಬರು ತನ್ನನ್ನು ಲಂಜ ಮುಂಡ ಎಂದು ಕೆಟ್ಟದಾಗಿ ಬೈಯ್ದು ರವಣ ರವರು ಕಟ್ಟಿಗೆಯಿಂದ ತನ್ನ ಬಲಗೈ ಮುಂಗೈಗೆ ಹೊಡೆದಿದ್ದು, ನಂತರ ಇಬ್ಬರೂ ಕೈಗಳಿಂದ ತನ್ನ ಮೈಮೇಲೆ ಹೊಡೆದು ಗಾಯಗಳನ್ನು ಉಂಟು ಮಾಡಿರುವುದಾಗಿ, ತಮ್ಮ ಗ್ರಾಮದ ರೆಡ್ಡಪ್ಪ ಬಿನ್ ಚಿನ್ನಾಯಪ್ಪ, ಲಲಿತಮ್ಮ ಬಿನ್ ಶ್ರೀರಾಮಪ್ಪ ರವರು ಬಂದು ಜಗಳ ಬಿಡಿಸಿ ಉಪಚರಿಸಿರುವುದಾಗಿ,ತಾನು ಚೇಳೂರು ಪ್ರೈವೇಟ್ ಆಸ್ಪತ್ರೆಯಲ್ಲಿ ತೋರಿಸಿಕೊಂಡು, ನಾಟಿ ಕಟ್ಟುಗಳನ್ನು ಹಾಕಿಸಿ, ನಂತರ ಗುಡಿಬಂಡೆ ಸರ್ಕಾರಿ ಆಸ್ಪತ್ರೆ, ಚಿಂತಾಮಣಿ ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ಬಂದು ತಡವಾಗಿ ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ.

ಇತ್ತೀಚಿನ ನವೀಕರಣ​ : 21-10-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080