ಅಭಿಪ್ರಾಯ / ಸಲಹೆಗಳು

1. ಚೇಳೂರು ಪೊಲೀಸ್ ಠಾಣೆ, ಮೊ.ಸಂ. 100/2021, ಕಲಂ. 143, 147, 148, 323, 324, 504, 506, 341 ರೆ/ವಿ 149 ಐಪಿಸಿ:-

    ದಿನಾಂಕ 20/10/2021 ರಂದು ಹೆಚ್ ಸಿ, 180 ರವರು ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು,ಆರ್ ವಿ ವೆಂಕಟೇಶ್ ಬಿನ್ ಲೇಟ್ ವೆಂಕರವಣಪ್ಪ 23 ವರ್ಷ, ಜಿರಾಯ್ತಿ, ಆದಿಕರ್ನಾಟಕ ಜನಾಂಗ. ರಾಮೋಜಿಪಲ್ಲಿ ಗ್ರಾಮ, ಚೇಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರಿಂದ ಹೇಳಿಕೆಯನ್ನು  ಪಡೆದುಕೊಂಡು ಬಂದು  ಠಾಣೆಯಲ್ಲಿ  ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಮೇಲ್ಕಂಡ ವಿಳಾಸದಲ್ಲಿ ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ, ನಮ್ಮ ಜಮೀನಿನಲ್ಲಿ ಸುಮಾರು ಒಂದು ವರ್ಷದಿಂದ  ನಮ್ಮ ಗ್ರಾಮದ ವಾಸಿಗಳಾದ ಶಿವ ಮತ್ತು ರವಿ  ರವರು ಆಕ್ರಮವಾಗಿ ಮರಳು  ತೆಗೆದು ಸಾಗಾಣೆ ಮಾಡುತ್ತಿದ್ದು  ಈ ವಿಚಾರವಾಗಿ  ನಾನು ಈ ಹಿಂದೆ ಹಲವಾರು ಬಾರಿ ಅವರಿಗೆ ಎಚ್ಚರಿಕೆಯನ್ನು ನೀಡಿರುತ್ತೇನೆ, ಆದರೂ  ಸಹ ಈ ದಿನ  ದಿನಾಂಕ 20/10/2021 ರಂದು  ಬೆಳಗ್ಗೆ  07-00 ಗಂಟೆ ಸಮಯದಲ್ಲಿ ನಮ್ಮ ಜಮೀನಿನಲ್ಲಿ ಮರಳು ತೆಗೆಯುತ್ತಿರುವ ವಿಚಾರ ತಿಳಿದು ನಾನು ಅಲ್ಲಿಗೆ ಹೋಗಿ ಶಿವ ಮತ್ತು ರವಿ ರವರಿಗೆ ಮರಳು ತೆಗೆಯುತ್ತಿರುವ ವಿಚಾರ ಕೇಳಲಾಗಿ  ತನ್ನನ್ನು ಆವಾಚ್ಯ ಶಬ್ದಗಳಿಂದ ಬೈದು ಶಿವ ರವರು ತನ್ನ ಕೈಯಲ್ಲಿದ್ದ ಚೆನಿಕೆಯಿಂದ ತನ್ನ ಎಡಭಾಗದ ತಲೆಗೆ ಹೋಡೆದು ರಕ್ತ ಗಾಯ ಪಡಿಸಿ, ರವಿ ರವರು ತನ್ನನು ಹಿಂದಗಡೆಯಿಂದ ಹಿಡಿದುಕೊಂಡು ಇಲ್ಲಿಯೇ ಸಾಯಿಸಿ ಬಿಡೋಣ  ಎಂದು ಹೇಳಿದಾಗ ಶಿವ ರವರು ಗಡಾರೆಯಿಂದ ತನಗೆ ಹಾಕಲು ಬಂದಾಗ ತಾನು ತಪ್ಪಿಸಿಕೊಂಡಿರುತ್ತೇನೆ, ನಂತರ ಕೃಷ್ಣಪ್ಪ ಮತ್ತು ಗಂಗುಲಮ್ಮ ರವರು ಆವಾಚ್ಯ ಶಬ್ದಗಳಿಂದ ಬೈದು,ಕೈಗಳಿಂದ ಹೊಡೆದು   ಬಟ್ಟೆಗಳನ್ನು ಹರಿದು ಹಾಕಿರುತ್ತಾರೆ, ನಮ್ಮ ಗ್ರಾಮದ ಆದಿಮೂರ್ತಿ ಮತ್ತು ತನ್ನ ತಾಯಿ ಲಕ್ಷ್ಮೀದೇವಮ್ಮ ರವರು ಅಲ್ಲಿಗೆ ಬಂದು ಗಲಾಟೆಯನ್ನು ಬಿಡಿಸಿ ಚಿಕಿತ್ಸೆಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ನಮ್ಮ ಗ್ರಾಮದಲ್ಲಿ ಪವನ್ ಮತ್ತು ಗಂಗರಾಜ ರವರು ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಮುಂದಿನ ಕ್ರಮ ಜರಗಿಸಲು ಕೋರಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ, ಮೊ.ಸಂ. 100/2021, ಕಲಂ. 00MP (ಮನುಷ್ಯ ಕಾಣೆ) ಐಪಿಸಿ:-

    ದಿನಾಂಕ; 19-10-2021 ರಂದು ಸಂಜೆ ಸುಮಾರು 4.30 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ನೀಲಮ್ಮ ಕೋಂ ಮುನಿರಾಜು, 30 ವರ್ಷ, ಕೂಲಿ ಕೆಲಸ, ದೋಬಿ ಜನಾಂಗ, ವಾಸ: ವಾರ್ಡ್ 05, ಭಗತ್ ಸಿಂಗ್ ನಗರ, ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಾನು, ಈಗ್ಗೆ ಸುಮಾರು 12 ವರ್ಷಗಳ ಹಿಂದೆ ಚಿಂತಾಮಣಿ ತಾಲ್ಲೂಕಿನ ಮೂಗಲಮರ್ರಿ ಗ್ರಾಮದ ವಾಸಿ ವೆಂಕಟರಾಯಪ್ಪ ರವರ 2 ನೇ ಮಗನಾದ ಮುನಿರಾಜು ರವರನ್ನು ಮದುವೆ ಮಾಡಿಕೊಂಡಿದ್ದು, ನಂತರ ನಾವುಗಳು ಕೆಲಸವನ್ನು ಹುಡುಕಿಕೊಳ್ಳುತ್ತಾ ಚಿಕ್ಕಬಳ್ಳಾಪುರ ನಗರಕ್ಕೆ ಬಂದಿದ್ದು, ಅಂದಿನಿಂದ ಮೇಲ್ಕಂಡ ವಿಳಾಸದಲ್ಲಿ ಬಾಡಿಗೆಗೆ ವಾಸವಿದ್ದು, ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿದ್ದು, ನಮಗೆ ಇಬ್ಬರು ಮಕ್ಕಳಿದ್ದು, 1 ನೇ ಮಾಲ 11 ವರ್ಷ, 2 ನೇ ರುತ್ವಿಕ್ 6 ವರ್ಷ, ಆಗಿರುತ್ತಾರೆ. ನನ್ನ ಗಂಡ ಮುನಿರಾಜು 34 ವರ್ಷ, ರವರು ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ತನ್ನ ಗಂಡ ಮುನಿರಾಜು ರವರು ಗಾರೆ ಕೆಲಸದಿಂದ ಬಂದ ಹಣದಲ್ಲಿ ಸಂಸಾರವನ್ನು ನಿಭಾಯಿಸಲು ಮನೆ ಬಾಡಿಗೆಯನ್ನು ಕಟ್ಟಿ ಮಕ್ಕಳನ್ನು ಹಾಗೂ ನನ್ನನ್ನು ಸಾಕಲು ಹಣ ಸಾಕಾಗುತ್ತಿರಲಿಲ್ಲ. ಆಗಾಗ ತನ್ನ ಗಂಡ ಮುನಿರಾಜು ರವರು ಮನಸ್ಸಿಗೆ ಬೇಜಾರು ಮಾಡಿಕೊಂಡು ಎಲ್ಲಿಯಾದರೂ ಹೊರಟು ಹೋಗಿ ಸುಮಾರು 4-5 ದಿನಗಳಿಗೆ ವಾಪಸ್ಸು ಬರುತ್ತಿದ್ದು. ಆದರೆ ದಿನಾಂಕ; 11-10-2021 ರಂದು ಬೆಳಗ್ಗೆ ಸುಮಾರು 7.30 ಗಂಟೆ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಇದುವರೆವಿಗೂ ಮೆನೆಗೆ ಬಂದಿರುವುದಿಲ್ಲ. ನಮಗೆ ಗೊತ್ತಿರುವ ಸ್ನೇಹಿತರು, ನೆಂಟರು, ಪರಚಯಸ್ಥರು, ಇತರೆ ಕಡೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಮಾಹಿತಿ ಲಭ್ಯವಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಕೊಟ್ಟಿದ್ದು, ಕಾಣೆಯಾಗಿರುವ ನನ್ನ ಗಂಡನನ್ನು ಹುಡಿಕಿಕೊಡಬೇಕೆಂದು ಕೋರಿ ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ, ಮೊ.ಸಂ. 53/2021, ಕಲಂ. 279, 337 ಐಪಿಸಿ:-

    ದಿನಾಂಕ;-19-10-2021 ರಂದು ರಾತ್ರಿ 7-30 ಗಂಟೆಗೆ  ಜಿಲ್ಲಾಸ್ಪತ್ರೆಯಿಂದ ಬಂದಂತಹ ಮೆಮೋವನ್ನು ಪಡೆದುಕೊಂಡು  ಜಿಲ್ಲಾಸ್ಪತ್ರಗೆ ಬೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು  ವೆಂಕಟೇಶ ಬಿನ್ ಲೇಟ್ ರಾಮಚಂದ್ರಪ್ಪ ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆದುಕೊಂಡ ಸಾರಾಂಶವೇನೆಂದರೆ   ಗಾಯಾಳು ಗಾರೆ ಕೆಲಸವನ್ನು  ಮಾಡುತ್ತಿದ್ದು ಈ ದಿನ ಕೆಲಸಕ್ಕಾಗಿ  ಗಾಯಾಳು ಬಾಬತ್ತು KA-40-HJ-6408 ನೊಂದಣಿಯ ಸ್ಕೂಟಿಯಲ್ಲಿ ಹೋಗಿದ್ದು  ಸಂಜೆ 4-30 ಗಂಟೆಯ ಸಮಯ ದಲ್ಲಿ ಕೆಲಸವನ್ನು ಮುಗಿಸಿಕೊಂಡು ಮನಗೆ ವಾಪಸ್ಸು ಬರಲು  ಪೆಟ್ರೋಲ್ ಬಂಕ್ ಸಮೀಪ  ನನ್ನ ಸ್ಕೂಟಿಯಲ್ಲಿ NH-7 ರಸ್ತೆಯಲ್ಲಿ ಬರುತ್ತಿದ್ದಾಗ  ಬಾಗೇಪಲ್ಲಿ ಕಡೆಯಿಂದ  KA-40-A-9689 ನೊಂದಣಿಯ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ  ನಾನು ಸ್ಕೂಟಿ ಸಮೇತ ಟಾರ್ ರಸ್ತೆಯ  ಮೇಲೆ ಬಿದ್ದು ಹೋಗಿ  ಸ್ಕೂಟಿ ಜಖಂಗೊಂಡು  ಪಿರ್ಯಾದಿಗೆ ಬಲಬದಿಯ ತಲೆಯ ಹಣೆಗೆ . ಎಡ ಮತ್ತು ನಬಲ ತೋಳುಗಳಿಗೆ  ಗಾಯ, ಮೂಗಿನ ಬಳಿ ತರಚಿದ ಗಾಯ, ಎಡಕೆನ್ನೆಗೆ  ತರಚಿದ ಗಾಯ, ಬಲ ಮೊಣಕಾಲಿಗೆ ತರಚಿದ ಗಾಯ. ಹಾಗೂ ಸೊಂಟದ ಬಳಿ ಒತ್ತಡದ ಗಾಯವಾಗಿದ್ದು ಅಷ್ಟರಲ್ಲಿ ಪಿರ್ಯಾದಿಯ ತಮ್ಮಅಪಘಾತದ ವಿಚಾರವನ್ನು ತಿಳಿದು ಸ್ಥ:ಳಕ್ಕೆ ಬಂದು 108 ಆಂಬ್ಯುಲೆನ್ಸ್ ನಲ್ಲಿ ಗಾಯಾಳುವನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಕರೆದುಕೊಂಡು ಬಂದು ದಾಖಲಿಸಿರು ತ್ತಾನೆಂದು ಪಿರ್ಯಾಧಿಗೆ  ಅಪಘಾತಪಡಿಸಿದ KA-40-A-9689 ನೊಂದಣಿಯ ಟಿಪ್ಪರ್ ಲಾರಿಯ ಚಾಲಕನ ವಿರುದ್ದಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಕೊಂಡು ಠಾಣೆಗೆ 8-15 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 456/2021, ಕಲಂ. 279, 337 ಐಪಿಸಿ ಮತ್ತು ಕಲಂ. 134(A&B) ಐಎಂವಿ ಆಕ್ಟ್:-

ದಿನಾಂಕ: 19/10/2021 ರಂದು ರಾತ್ರಿ 10.30 ಗಂಟೆಗೆ ಸುರೇಶ್ ಬಾಬು ಬಿನ್ ರಾಮಕೃಷ್ಣಪ್ಪ, 50 ವರ್ಷ, ದೋಬಿ ಜನಾಂಗ, ಕೂಲಿ ಕೆಲಸ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಳಿಯನಾದ ಜಯಚಂದ್ರ ಬಿನ್ ಈಶ್ವರಪ್ಪ, 25 ವರ್ಷ ವಯಸ್ಸಾಗಿದ್ದು ಅವರ ಸ್ವಂತ ಊರು ಆಂದ್ರ ಪ್ರದೇಶದ ಕದಿರಿ ಟೌನ್, ನಲ್ಲಗುಟ್ಟ ವೀದಿ ಆಗಿದ್ದು, ಅವರು ಈಗ್ಗೆ ಸುಮಾರು 10 ವರ್ಷಗಳಿಂದ ಬೆಂಗಳೂರಿನ ಇಸ್ಲಾಂಪುರದಲ್ಲಿ ಬಟ್ಟೆ ಇಸ್ರೀ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ:19/10/2021 ರಂದು ಸಂಜೆ 4.30 ಗಂಟೆ ಸಮಯದಲ್ಲಿ ತನ್ನ ಅಳಿಯನಾದ ಜಯಚಂದ್ರ ಹಾಗೂ ಪುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿರುವ ಆತನ ಬಾಮೈದನಾದ ರವಿ ಬಿನ್ ಗಂಗಪ್ಪ, 28 ವರ್ಷ ರವರು ಕೆಎ 03 ಕೆಸಿ-3640 ನೊಂದಣಿ ಸಂಖ್ಯೆಯ ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಚಿಂತಾಮಣಿ ನಗರಕ್ಕೆ ಬಂದಿದ್ದು ತನ್ನನ್ನು ಮಾತನಾಡಿಕೊಂಡು ಕೆಲಸ ಮುಗಿದ ನಂತರ ವಾಪಸ್ಸು ಬೆಂಗಳೂರಿಗೆ ಹೋಗುತ್ತೇವೆಂದು ಹೇಳಿ ಇಬ್ಬರೂ ಹೊರಟಿರುತ್ತಾರೆ. ನಂತರ ಇದೇ ದಿನ ಸಂಜೆ 7.15 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನ್ನ ಅಳಿಯ ಜಯಚಂದ್ರರವರ ಪೋನಿನಿಂದ ತನಗೆ ಕರೆ ಮಾಡಿ ನಿಮ್ಮ ಅಳಿಯ ಜಯಚಂದ್ರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ರವಿರವರಿಗೆ ಕಡಪ-ಬೆಂಗಳೂರು ರಸ್ತೆ ಟಿ.ಹೊಸಹಳ್ಳಿ ಮತ್ತು ವೈಜಕೂರು ಗ್ರಾಮದ ನಡುವೆ ಇರುವ ಮೋರಿಯ ಬಳಿ ಅಪಘಾತವಾಗಿದ್ದು, ಗಾಯಗೊಂಡಿದ್ದವರನ್ನು ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿದ್ದು ನಂತರ ತಾನು ಮತ್ತು ತನ್ನ ಮಗನಾದ ಸಾಗರ್ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಜಯಚಂದ್ರ ರವರ ಬಲಕೈ ಮೂಳೆ ಮುರಿತ ರಕ್ತ ಗಾಯವಾಗಿ ತಲೆಗೆ ರಕ್ತಗಾಯವಾಗಿರುತ್ತದೆ. ರವಿರವರ ಎಡ ಮೊಣಕಾಲು ಮೂಳೆ ಮುರಿತದ ರಕ್ತಗಾಯವಾಗಿ ಮೈ ಕೈ ಮೇಲೆ ತರಚಿದ ರಕ್ತ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಜಯಚಂದ್ರರವರಿಗೆ ವಿಚಾರ ಮಾಡಲಾಗಿ ಈ ದಿನ ಸಂಜೆ ಚಿಂತಾಮಣಿ ನಗರದಲ್ಲಿ ಕೆಲಸ ಮುಗಿಸಕೊಂಡು ವಾಪಸ್ಸು ನಾನು ಮತ್ತು ರವಿರವರು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ನಾನು ಸದರಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ ರವಿರವರನ್ನು ಕೂರಿಸಿಕೊಂಡು ಕಡಪ-ಬೆಂಗಳೂರು ರಸ್ತೆ ಟಿ.ಹೊಸಹಳ್ಳಿ ಮತ್ತು ವೈಜಕೂರು ಗ್ರಾಮದ ನಡುವೆ ಇರುವ ಮೋರಿಯ ಬಳಿ ಸಂಜೆ ಸುಮಾರು 6.45 ಗಂಟೆ ಸಮಯದಲ್ಲಿ ಬೆಂಗಳೂರಿನ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ಎದುರುಗಡೆ ಅಂದರೆ ಬೆಂಗಳೂರಿನ ಕಡೆಯಿಂದ ಬಂದ ಕೆಎ-04 ಎಂ.ಎಸ್-4050 ನೊಂದಣಿ ಸಂಖ್ಯೆಯ ಟಯೋಟಾ ಇನ್ನೋವಾ ಕಾರಿನ ಚಾಲಕನು ಆತನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರ ಪರಿಣಾಮ ತಾವುಗಳು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿ ತನಗೂ ಮತ್ತು ರವಿರವರಿಗೆ ಗಾಯಗಳಾಗಿರುವುದಾಗಿ ಹಾಗೂ ಅಪಘಾತಗೊಂಡ ತಮ್ಮ ದ್ವಿಚಕ್ರ ವಾಹನ ಮತ್ತು ಅಪಘಾತಪಡಿಸಿದ ಕಾರು ಸ್ಥಳದಲ್ಲಿಯೇ ಇರುವುದಾಗಿ ತಿಳಿಸಿರುತ್ತಾರೆ. ನಂತರ ಗಾಯಗೊಂಡಿದ್ದ ಜಯಚಂದ್ರ ಮತ್ತು ರವಿರವರನ್ನು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತನ್ನ ಮಗನಾದ ಸಾಗರ್ ರವರು ಅಂಬುಲೆನ್ಸ್ ನಲ್ಲಿ ಬೆಂಗಳೂರಿನ ನಿಮಾಹ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಅಪಘಾತಕ್ಕೆ ಕಾರಣನಾದ ಕೆಎ-04 ಎಂ.ಎಸ್-4050 ನೊಂದಣಿ ಸಂಖ್ಯೆಯ ಕಾರಿನ ಚಾಲಕನು ಗಾಯಳುಗಳನ್ನು ಉಪಚರಿಸದೆ ಹಾಗೂ ಪೊಲೀಸರಿಗೂ ಸಹ ಮಾಹಿತಿಯನು ನೀಡದೇ ಸ್ಥಳದಲ್ಲಿಯೇ ವಾಹವನ್ನು ಬಿಟ್ಟು ಹೋಗಿರುವ ಮೇಲ್ಕಂಡ ಕೆಎ-04 ಎಂ.ಎಸ್-4050 ನೊಂದಣಿ ಸಂಖ್ಯೆಯ ಟಯೋಟಾ ಇನ್ನೋವಾ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 457/2021, ಕಲಂ. 279, 337 ಐಪಿಸಿ ಮತ್ತು ಕಲಂ. 134(A&B) ಐಎಂವಿ ಆಕ್ಟ್:-

    ದಿನಾಂಕ: 20/10/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ವಿಜಯಕುಮಾರ್ ಬಿನ್ ಲೇಟ್ ನಾರಾಯಣಪ್ಪ, 58 ವರ್ಷ, ತೊಗಟರು, ಸೆಕ್ಯುರಿಟಿ ಗಾರ್ಡ್ ಕೆಲಸ, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೆನೆಂದರೆ, ದಿನಾಂಕ: 18/10/2021 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ಪ್ರೀತಿ ಪಬ್ಲಿಕ್ ಶಾಲೆಯಲ್ಲಿ ಗಾರ್ಡ್ ಕೆಲಸ ಮಾಡುವ ರವಿಶಂಕರ್ ರವರು ತನ್ನನ್ನು ಮಾತನಾಡಬೇಕೆಂದು ಕರೆದಿದ್ದು, ಅದರಂತೆ ತಾನು ಅಟ್ಲಾಸ್ ಸೈಕಲ್ ನಲ್ಲಿ ತಿಮ್ಮಸಂದ್ರ ಗ್ರಾಮದಿಂದ ಶಾಲೆಯ ಕಡೆಗೆ ಬರಲು ವಿಜಯಲಕ್ಷ್ಮಿ ಸಿಲ್ಕ್ ಹೌಸ್ ಸೆಂಟರ್ ಬಳಿ ಬರುತ್ತಿದ್ದಾಗ ತನ್ನ ಹಿಂಬದಿಯಿಂದ KA-67 E-7636 ನೊಂದಣಿ ಸಂಖ್ಯೆ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಸೈಕಲ್ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಹೋಗಿದ್ದು, ತನ್ನ ಬೆನ್ನಿನ ಹಿಂಬದಿಯಲ್ಲಿ ಮೂಗೇಟುಗಳಾಗಿರುತ್ತೆ ಮತ್ತು ಎಡಗೈ ಮೊಣಕೈ ಬಳಿ ತರಚಿದ ಗಾಯಗಳಾಗಿರುತ್ತೆ. ಕೆಳಗೆ ಬಿದ್ದಿದ್ದ ತನ್ನನ್ನು ಚಿಕಿತ್ಸೆಗಾಗಿ ಶ್ರೀಕಾಂತ್ ಹಾಗೂ ತನ್ನ ಹೆಂಡತಿ ನಾಗಮ್ಮ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು. ತನಗೆ ಅಪಘಾತಪಡಿಸಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸದೆ, ಪೊಲೀಸರಿಗೂ ಮಾಹಿತಿಯನ್ನು ನೀಡದೆ ಇರುವ ಮೇಲ್ಕಂಡ KA-67 E-7636 ನೊಂದಣಿ ಸಂಖ್ಯೆ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 284/2021, ಕಲಂ. 279, 337 ಐಪಿಸಿ:-

    ದಿನಾಂಕ;19/10/2021 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದುದಾರರಾದ ಶ್ರೀಧರ ನಾಯ್ಕ ಬಿನ್ ದೀಪ್ಲ ನಾಯ್ಕ, 26 ವರ್ಷ, ಲಂಬಾಣಿ ಜನಾಂಗ, ಬಂಡೆ ಮೇಲಿನ ತಾಂಡ ಗ್ರಾಮ, ನಗರಗೆರೆ ಹೋಬಳಿ, ಜಿ.ಕೊತ್ತೋರು ಪಂಚಾಯ್ತಿ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ;12/10/2021 ರಂದು ತಾನು ತಮ್ಮ ಗ್ರಾಮ ಬಂಡೆಮೇಲಿನ ತಾಂಡ ರಲ್ಲಿ ಮನೆಯಲ್ಲಿದ್ದಾಗ ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ತನಗೆ ಪರಿಚಯ ವಿರುವ ಅಪ್ಪಿ ಎಂಬುವರು ತನಗೆ ದೂರವಾಣಿ ಕರೆಯನ್ನು ಮಾಡಿ ನಿಮ್ಮ ದೊಡ್ಡಪ್ಪನ ಮಗನಿಗೆ ಜಿಂಕವಾರಪಲ್ಲಿ ಗ್ರಾಮದ ಕ್ರಾಸ್ ಬಳಿ ಸುಮಾರು 600 ಮೀಟರ್ ದೂರದಲ್ಲಿ ಬಾಗೇಪಲ್ಲಿ  ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಅಪಘಾತವಾಗಿ ಬಿದ್ದಿರುವುದಾಗಿ ತಿಳಿಸಿದ್ದು ಕೂಡಲೇ ತಾನು ತಮ್ಮ ಗ್ರಾಮದ ಇಬ್ಬರು ಹುಡುಗರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತಮ್ಮ ದೊಡ್ಡಪ್ಪನ ಮಗನಾದ ಸೋಮಶೇಖರ್ ಬಿನ್ ಲೇಟ್ ನಾನೆನಾಯ್ಕ, 28ವರ್ಷ, ಲಂಬಾಣಿ ಜನಾಂಗ, ಎಂ.ಪಿ.ಎಡ್ ವಿದ್ಯಾರ್ಥಿ ರವರು ರಸ್ತೆಯ ಪಕ್ಕದಲ್ಲಿ ಮಲಗಿದ್ದು ನಾವು ಎಬ್ಬೇಳಿಸಿ ಕೇಳಲಾಗಿ ಎದ್ದೇಳಲು ಆಗುತ್ತಿಲ್ಲ ಎಂದು ಸೋಮಶೇಖರ್ ತಿಳಿಸಿದ್ದು ವಿಷಯ ಕೇಳಲಾಗಿ ಸೋಮಶೇಖರನು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಟಮಾಟೋ ಬೆಳೆಯನ್ನು ಬಾಗೇಪಲ್ಲಿ ಆರ್.ಎಂ.ಸಿ ಮಾರುಕಟ್ಟೆಗೆ ಹಾಕಿಕೊಂಡು ಕೆಎ-40 ಎಲ್-8889 ಸೂಪರ್ ಸ್ಪ್ಲೆಂಡರ್ ದ್ವಿ ಚಕ್ರ ವಾಹನದಲ್ಲಿ ಹೋಗಿ ಕೆಲಸ ಮುಗಿದ ಮೇಲೆ ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ವಾಪಸ್ಸು ತಮ್ಮ ಗ್ರಾಮಕ್ಕೆ ಬರುತ್ತಿರುವಾಗ ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಗೌರಿಬಿದನೂರು – ಬಾಗೇಪಲ್ಲಿ ರಸ್ತೆಯಲ್ಲಿ ಬರುತ್ತಿರುವಾಗ ಸೋಮಶೇಖರ್ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಢು ಬರುತ್ತಿದ್ದರಿಂದ  ದ್ವಿ ಚಕ್ರ ವಾನಹ ನಿಯಂತ್ರಣ ತಪ್ಪಿ ರಸ್ತೆಯ ಎಡ ಭಾಗದಲ್ಲಿದ್ದ  ಮರಕ್ಕೆ ಡಿಕ್ಕಿಹೊಡೆದು ಕೆಎ-40 ಎಲ್-8889 ದ್ವಿ ಚಕ್ರ ವಾಹನ ಸಮೇತ ರಸ್ತೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದಿದ್ದು ಮುಖದ ಮೇಲೆ ತರಚಿದ ಗಾಯ ಹಾಗೂ ಬೆನ್ನಿಗೆ ಮೂಗೇಟ್ ಗಳಾಗಿರುತ್ತೆಂದು ತಿಳಿಸಿರುತ್ತಾನೆ. ಕೂಡಲೇ ಸೋಮಶೇಖರ್ ನನ್ನು ಕಾರಿನಲ್ಲಿ ಬಾಗೇಪಲ್ಲಿ ಮಾನಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ಅಲ್ಲಿನಿಂದ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಸೋಮಶೇಖರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸರಳಯ  ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತೆ. ಸೋಮಶೇಖರ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ಠಾಣೆಗೆ ತಡವಾಗಿ ಬಂದು ಈ ಅಪಘಾತಕ್ಕೆ ಕಾರಣನಾದ ಸೋಮಶೇಖರ್ ನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 114/2021, ಕಲಂ. 15(A), 32(3) ಕೆ.ಇ. ಆಕ್ಟ್:-

    ದಿನಾಂಕ 20/10/2021 ರಂದು ಮದ್ಯಾಹ್ನ 02.15 ಗಂಟೆಗೆ  ಹೆಚ್.ಸಿ 110 ವೇಣು ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು  ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಪಿ.ಐ ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ:20/10/2021 ರಂದು ತನಗೆ ಮತ್ತು ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ದಿನಾಂಕ:20/10/2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ಕೊಮ್ಮೇಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಕೊಮ್ಮೇಪಲ್ಲಿ ಗ್ರಾಮದ ತಿಪ್ಪಣ್ಣ ರವರ ಚಿಲ್ಲರೆ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಪಾನ ಮಾಡುತ್ತಿದ್ದು,ತಾವುಗಳು ಪಂಚರೊಂದಿಗೆ ದಾಳಿ ಮಾಡಲಾಗಿ ಸ್ಥಳದಲ್ಲಿ ಇದ್ದವರು ಮತ್ತು ಆರೋಪಿ ಸ್ಥಳದಿಂದ ಓಡಿಹೋಗಿದ್ದು,ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತಿಪ್ಪಣ್ಣ ಬಿನ್ ಲೇಟ್ ಪೆದ್ದಣ್ಣ, 35 ವರ್ಷ, ಆದಿ ಕರ್ನಾಟಕ, ಚಿಲ್ಲರೆ ಅಂಗಡಿ ವ್ಯಾಪಾರ ಕೊಮ್ಮೇಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ ಮದ್ಯ ತುಂಬಿದ 90 ML ನ 16 ಟೆಟ್ರಾ ಪಾಕೇಟ್ ಗಳು ಒಟ್ಟು 1440 ಎಂಎಲ್ ಇದ್ದು ಬೆಲೆ 562/- ರೂ  2) OLD TAVREN WISKEY ಯ ಮದ್ಯ ತುಂಬಿದ 180 ML ನ 04  ಟೆಟ್ರಾ ಪಾಕೇಟ್ ಗಳು ಒಟ್ಟು 720 ಎಂಎಲ್ ಇದ್ದು ಬೆಲೆ 347/- ರೂ  3) 2 ಪ್ಲಾಸ್ಟಿಕ್ ಗ್ಲಾಸ್ ಗಳು 3) 02 ಖಾಲಿ ಇದ್ದ ಎರಡು HAYWARDS CHEERS WHISKY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳು 4) ಖಾಲಿ ಒಂದು ಲೀಟರ್ ನೀರಿನ ಬಾಟಲ್ ಇದ್ದು ವಶಪಡೆಸಿಕೊಂಡು ಒಟ್ಟು 2.160 ಎಂ ಎಲ್ ಇದ್ದು ಇದರ ಬೆಲೆ 909/- ರೂಗಳಾಗಿರುತ್ತದೆ. ಮಾಲನ್ನು ಪಂಚನಾಮೆ ಮೂಲಕ ಅಮಾನತ್ತು ಪಡೆಸಿಕೊಂಡಿರುತ್ತದೆ. ಯಾವುದೇ ಪರವಾನಿಗೆ ಪಡೆಯದೇ ಚಿಲ್ಲರೆ ಅಂಗಡಿಯ ಮುಂದೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ  ಮಾಡಿಕೊಟ್ಟಿರುವ ಆಸಾಮಿಯಾದ ತಿಪ್ಪಣ್ಣ ಬಿನ್ ಲೇಟ್ ಪೆದ್ದಣ್ಣ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

8. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ, ಮೊ.ಸಂ. 129/2021, ಕಲಂ. 457, 380 ಐಪಿಸಿ:-

    ದಿನಾಂಕ:19.10.2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಶ್ರೀಮತಿ. ಗಾಯಿತ್ರಿ ಕೊಂ ರಮೇಶ್, ಪಟೇರಬೀದಿ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ತನ್ನ ಮಗನಾದ ಮದನ್ ಕುಮಾರ್ ರವರು ದಿನಾಂಕ.15.101.2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ತವರು ಮನೆಯಾದ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹತ್ತಿರ ಿರುವ ಚೆನ್ನಾಪುರಕ್ಕೆ ಗ್ರಾಮಕ್ಕೆ ಹೋಗಿದ್ದು, ಮಾರನೇ ದಿನ ದಿನಾಂಕ.16.10.2021 ರಂದು ಸಂಜೆ ನಮ್ಮ ಪಕ್ಕದ ಮನೆಯವರು ಪೋನ್ ಮಾಡಿ ನಿಮ್ಮ ಮನೆಯ ಬೀಗ ಯಾರೋ ಕಿತ್ತು ಹಾಕಿರುತ್ತಾರೆಂದು ತಿಳಿಸಿದಾಗ ಮನೆಗೆ ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗ ಕಿತ್ತು ಹಾಕಿ ಒಳಗಡೆ ಅಡುಗೆ ರೂಂನಲ್ಲಿ ಹೋಗಿ ಬೀರುವಿನ ಡೋರ್ ಗಳನ್ನು ತೆಗೆದು ಬೀರುವಿನಲ್ಲಿದ್ದ 1] 2 ಜೊತೆ ಬಂಗಾರದ ಓಲೆ ಸು.45 ಗ್ರಾಂ, 2] ಒಂದು ಉಂಗುರ ಸುಮಾರು 2.5 ಗ್ರಾಂ, 3] ಬಂಗಾರದ ಗುಂಡು 30 ಸುಮಾರು 3 ಗ್ರಾಂ, 4] ಬೆಳ್ಳಿಯ 2 ಜೊತೆ ಕಾಲು ಚೈನ್ 5] ಬೆಳ್ಳಿ ಕುಚ್ಚು ಮತ್ತು ಮಗುವಿನ 2 ಜೊತೆ ಗೊಳಸುಗಳು ಮತ್ತು ಉಡುದಾರ ಹಾಗೂ ನಗದು 5000/-ರೂಗಳನ್ನು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾವು ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಸಿಗದ ಕಾರಣ ಕಳುವಾದ ವಸ್ತುಗಳನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 20-10-2021 08:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080