ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.369/2021 ಕಲಂ.429 ಐ.ಪಿ.ಸಿ & KARNTAKA PREVENTION OF COW SLANGHTER & CATTLE PREVENTION ACT-1964 U/s 11,8,9 ; INDIAN MOTOR VEHICLES ACT, 1988 U/s 192(A),177 ; PREVENTION OF CRUELTY TO ANIMALS ACT, 1960 U/s 11):-

     ದಿನಾಂಕ 18/10/2021 ರಂದು ಬೆಳಿಗ್ಗೆ 6-30 ಗಂಟೆಗೆ ಶ್ರೀ.ನಾಗರಾಜ್ ಡಿ.ಆರ್ ಪೊಲೀಸ್ ಇನ್ಸ್ ಪೆಕ್ಟರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ.18/10/2021 ರಂದು ಬೆಳಗಿನ ಜಾವ 5-30 ಗಂಟೆಯಲ್ಲಿ  ನಾನು ಠಾಣೆಯಲ್ಲಿರುವಾಗ ಯಾರೋ ಆಸಾಮಿಗಳು ಹೈದ್ರಾಬಾದ್ ಕಡೆಯಿಂದ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಎಎಸ್ಐ, ನಾರಾಯಣಸ್ವಾಮಿ.ವಿ. ಮತ್ತು ಪಿಸಿ-418 ಸತ್ಯಪ್ಪ ರವರನ್ನು ಜೊತೆಗೆ ಕರೆದುಕೊಂಡು ಹೋಗಿ ಬಾಗೇಪಲ್ಲಿ ಟೋಲ್ ಪ್ಲಾಜಾ  ಬಳಿ  ಕಾಯುತ್ತಿದ್ದಾಗ ಬೆಳಗಿನ ಜಾವ ಸುಮಾರು 6-00 ಗಂಟೆ ಸಮಯದಲ್ಲಿ ಹೈದ್ರಾಬಾದ್ ಕಡೆಯಿಂದ KA-51-A.F-5389 ನೊಂದಣೀ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ದೋಸ್ತ ಗೂಡ್ಸ್ ವಾಹನ ಬರುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಮತ್ತು ಪೊಲೀಸ್ ಜೀಪನ್ನು ನೋಡಿದ ವಾಹನ ಚಾಲಕನು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿಹೋಗಲು ಪ್ರಯತ್ನಿಸಿದವನನ್ನು ಪೊಲೀಸ್ ಸಿಬ್ಬಂದಿಯವರಾದ ಪಿಸಿ-418 ಸತ್ಯಪ್ಪ ರವರು ಹಿಂಬಾಲಿಸಿ ಹಿಡಿದುಕೊಂಡು ಬಂದು ಹಾಜರುಪಡಿಸಿದವರನ್ನು ವಿಚಾರಿಸಲಾಗಿ ಅಬ್ರಾರ್ ಬೇಗ್ ಬಿನ್ ಫಾರೂಕ್ ಬೇಗ್, 19 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ವಾಸ ತಮ್ಮರಸನಹಳ್ಳಿ,  ಸೂಲಿಬೆಲೆ ಹೋಬಳಿ,  ಹೊಸಕೋಟೆ ತಾಲ್ಲೂಕು, ಬೆಂಗಳೂರು (ಗ್ರಾ) ಜಿಲ್ಲೆ, ಎಂದು ತಿಳಿಸಿರುತ್ತಾನೆ, ಜಾನುವಾರುಗಳನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ  ವಾಹನವನ್ನು  ಪರಿಶೀಲಿಸಲಾಗಿ 6 ಎತ್ತುಗಳು ( ಜಾನುವಾರುಗಳು )ಇದ್ದು, ಅವುಗಳನ್ನು ಇಕ್ಕಟಿನಲ್ಲಿ  ಕಟ್ಟಿಕೊಂಡು ಅಮಾನವೀಯ ರೀತಿಯಲ್ಲಿ ಕ್ರೂರತನದಿಂದ ಸಾಗಾಣಿಕೆ ಮಾಡಿಕೊಂಡು, ಅವುಗಳಿಗೆ ಆಹಾರ ಮತ್ತು ನೀರಿಲ್ಲದೆ ಅಕ್ರಮವಾಗಿ ಯಾವುಧೇ ಪರವಾನಗಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಜಾನುವಾರುಗಳನ್ನು ತುಂಬಿರುವ KA-51-A.F-5389 ನೊಂದಣೀ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಹಾಜರುಪಡಿಸುತ್ತಿದ್ದು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಜಾನುವಾರುಗಳನ್ನು KA-51-A.F-5389 ನೊಂದಣೀ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ದೋಸ್ತ  ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವ ಮೇಲ್ಕಂಡ    ಆಸಾಮಿಯ ವಿರುದ್ದ ಕಲಂ 429 IPC, ಕಲಂ 11 PREVENTION OF CRUELTY TO ANIMAL ACT 1960, U/S  8, 9, 11  KARNATAKA PREVENTION OF COW SLANGHTER AND CATTLE PREVENTION ACT-1860 AND  U/S 177, 192(A) INDIAN MOTOR VEHICLE ACT  ರೀತ್ಯಾ ಪ್ರಕರಣ ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.370/2021 ಕಲಂ.279 ಐ.ಪಿ.ಸಿ:-

     ದಿನಾಂಕ: 18/10/2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಅಜ್ಮಲ್ ಬಿನ್ ಅಬ್ದುಲ್ ಸಲಾಂ, 36 ವರ್ಷ, ಮುಸ್ಲಿಂ ಜನಾಂಗ, ಅಕೌಂಟೆಂಟ್, ವಾಸ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ, ಪೆನುಗೊಂಡ ಟೌನ್,  ಮತ್ತು ತಾಲ್ಲೂಕು, ಅನಂತಪುರ ಜಿಲ್ಲೆ.  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಪೆನುಗೊಂಡ ಬಳಿ ಇರುವ ಐಟೆಕ್ಕೋ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿರುತ್ತೆನೆ. ನನಗೆ ಪರಿಚಯ ವಿರುವ ಕಿಯಾ ಕಂಪೆನಿಯಲ್ಲಿ ಕೆಲಸ ಮಾಡುವ ಕಿಮ್ ಮಿನ್ ಹು ರವರು ದಿನಾಂಕ 18/10/2021 ರಂದು ಬೆಳಿಗ್ಗೆ ತಮ್ಮ ಬಾಬತ್ತು  ಕೆ.ಎ-05-ಎಂ.ಟಿ-4290 ಹೊಡ್ಯಾ ಐ-20 ಕಾರಿನಲ್ಲಿ ಯಲಹಂಕದಿಂದ ಹೊರಟಿದ್ದು, ಕಾರನ್ನು ಚಾಲಕ  ಅನಿಲ್ ಕುಮಾರ ಜಾಧವ್ ರವರು ಚಾಲನೆ ಮಾಡುತ್ತಿದ್ದು,  ಪೆನುಗೊಂಡಕ್ಕೆ ಬರಲು ಬೆಂಗಳೂರು-ಹೈದ್ರಾಬಾದ್ ಎನ್ ಹೆಚ್-44 ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 6-45 ಗಂಟೆಯಲ್ಲಿ ಬಾಗೇಪಲ್ಲಿ ತಾಲ್ಲೂಕು, ಸುಂಕಲಮ್ಮ ದೇವಾಸ್ಥಾನದ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿ ಬರುವಾಗ ಚಾಲಕನು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಆದ್ದರಿಂದ ಕೆ.ಎ-05-ಎಂ.ಟಿ-4290 ಹೊಡ್ಯಾ ಐ-20 ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕ ಅನಿಲ್ ಕುಮಾರ ಜಾಧವ್ ಬಿನ್ ಜಗನ್ನಾಥ ಜಾಧವ್, 31 ವರ್ಷ, ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೊರಿ ನೀಡಿದ ದೂರು.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.283/2021 ಕಲಂ.279,337 ಐ.ಪಿ.ಸಿ:-

     ದಿನಾಂಕ 18/10/2021 ರಂದು  ಮಧ್ಯಾಹ್ನ4-00 ಗಂಟೆಗೆ  ಪಿರ್ಯಾಧಿದಾರರಾದ ನವಾಜ್ ಪಾಶ ಬಿನ್  ಲೇಟ್ ಮೊಹಮ್ಮದ್ ಗೌಸ್ ಸಾಬ್ , 62 ವರ್ಷ, ಮುಸ್ಲಿಂ ಜನಾಂಗ,ನಿವೃತ್ತ ಸರ್ಕಾರಿ ನೌಕರರು , ನಂ-202, 2 ನೇ ಮಹಡಿ , ವಿ2 ಅಪಾರ್ಟ್ ಮೆಂಟ್,ಹೆಚ್.ಬಿ ಆರ್ 4 ನೇ ಬ್ಲಾಕ್  , ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ನನ್ನ ಸ್ನೇಹಿತರಾದ ಬಸವರಾಜ್ .ಎಸ್  ನಂದಿನಿ ಲೇಔಟ್ ರವರ ಬಾಬತ್ತು RITZ ಕಾರ್ ನಂ KA 51 Z 1644 ಚಾರ್ಸಿ ನಂ 115416 , ಇಂಜಿನ್ ನಂ 1004285 ವಾಹನದಲ್ಲಿ ನನ್ನ ತಮ್ಮನಾದ ಅಮೀರ್ ಜಾನ್  ರವರ ಮಗನ ಮಧುವೆಗೆ ನಾನು ಮತ್ತು ನನ್ನ ಹೆಂಡತಿ ನಸೀಮಾ ಖಾನಂ ಹಾಗೂ ನನ್ನಅಳಿಯ ಉಜೇರ್ ಅಹಮದ್  ರವರೊಂದಿಗೆ ದಿನಾಂಕ-16/10/2021 ರಂದು ನನ್ನ ಸ್ವಂತ ಗ್ರಾಮವಾದ ಅರಸಾಪುರ ಗ್ರಾಮದಿಂದ ಕೊರಟಗೆರೆಗೆ ಮಧುವೆಗೆ  ಹೋಗಿ ಬರುವಾಗ ರಾತ್ರಿ ಸುಮಾರು 8-40 ಸಮಯದಲ್ಲಿ ನನ್ನ ಅಳಿಯ ಕಾರನ್ನು ಚಾಲನೆ ಮಾಡುತ್ತಿದ್ದು ಗೌರಿಬಿದನೂರು ತಾಲ್ಲೂಕು ರಂಗನಹಳ್ಳಿ ಗ್ರಾಮದ ರಸ್ತೆಯ ತಿರುವಿನಲ್ಲಿ ನನ್ನ ಅಳಿಯ ಉಜೇರ್ ಅಹಮದ್  ರವರು ಕಾರನ್ನು ಅತಿವೇಗ ಮತ್ತು ಅಜಾಗರು ಕತೆಯಿಂದ ಚಾಲನೆ ಮಾಡಿಕೊಂಡು ನಿಯಂತ್ರಣಕ್ಕೆ ಬಾರದೆ ತಿರುವಿನಲ್ಲಿ ಮೋರಿ(ಬ್ರಿಡ್ಜ್) ಗೆ ಡಿಕ್ಕಿ ಹೊಡಿಸಿದ ಪರಿಣಾಮ ಸದರಿ ಕಾರಿನ ಮುಂಭಾಗ ಇಂಜಿನ್ ಪೂರ್ತಿ ಜಖಂ ಆಗಿದ್ದು ಕಾರಿನ ಮುಂಭಾಗದಲ್ಲಿ ಕುಳಿತಿದ್ದ ನನ್ನ ಹೆಂಡತಿ ನಸೀಮಾ ಖಾನುಂ , 55 ವರ್ಷ, ರವರಿಗೆ ತಲೆಗೆ ಮತ್ತು ಎಡಕೈಗೆ ರಕ್ತ ಗಾಯವಾಗಿರುತ್ತೆ. ನಾವು ಕೂಡಲೇ ನನ್ನ ಹೆಂಡತಿಯನ್ನು ಗೌರಿಬಿದನೂರು ಮಾನಸ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಲಂಬಿಯಾ ಏಶಿಯಾ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ.ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ನನ್ನ ಅಳಿಯ ಕಾರಿನ ಚಾಲಕ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

 

4. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ.279,337,304(ಎ) ಐ.ಪಿ.ಸಿ:-

     ದಿನಾಂಕ 19/10/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಪಿರ್ಯಾದಿದಾರಾದ ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕಬೀರಪ್ಪ, 35 ವರ್ಷ, ಕುರುಬ ಜನಾಂಗ, ಜಿರಾಯ್ತಿ, ವಾಸ ಕಾಚೂರು ಗ್ರಾಮ,ಯಾಲಗೆರೆ ಪೋಸ್ಟ್, ದೊಡ್ಡಪೈಲಗುರ್ಕಿ ಪಂಚಾಯ್ತಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾವು ತಮ್ಮ ತಂದೆ ತಾಯಿಗೆ 4 ಗಂಡು ಮತ್ತು 2 ಹೆಣ್ಣು ಮಕ್ಕಳಿರುತ್ತೇವೆ. ಆ ಪೈಕಿ ತಾನು 4 ನೇಯವನಾಗಿದ್ದು, ತನ್ನ ತಮ್ಮ 32 ವರ್ಷ ವಯ್ಯಸಿನ ಆನಂದ.ಬಿ ಎಂಬುವನು 5 ನೇಯವನಾಗಿರುತ್ತಾನೆ. ತನ್ನ ತಮ್ಮನಿಗೆ ಮದುವೆಯಾಗಿ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿರುತ್ತಾರೆ. ತನ್ನ ತಮ್ಮ ಗ್ರಾಮದಲ್ಲಿ ಜಿರಾಯ್ತಿ ಮಾಡಿಕೊಂಡಿರುತ್ತಾನೆ. ತನ್ನ ತಮ್ಮ ದಿನಾಂಕ 17/10/2021 ರಂದು ಮದ್ಯಾಹ್ನ ಸುಮಾರು 02.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದಿಂದ ಆತನ ಬಾಬತ್ತು ಕೆಎ-40-ಡಬ್ಲ್ಯೂ-6173 ನೋಂದಣಿ ಸಂಖ್ಯೆಯ ಬಜಾಜ್ ಸಿಟಿ-100 ದ್ವಿಚಕ್ರವಾಹನದಲ್ಲಿ ಚಿಂತಾಮಣಿ ತಾಲ್ಲೂಕು ಮಿಂಡಿಗಲ್ ಗ್ರಾಮದಲ್ಲಿ ಆತನ ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದು, ನಂತರ ಸಂಜೆ 7.45 ಗಂಟೆಯಲ್ಲಿ ಮಿಂಡಿಗಲ್ ಗ್ರಾಮದ ಮಂಜುನಾಥ ಎಂಬುವರು ತನಗೆ ಪೋನ್ ಮಾಡಿ ಆನಂದನಿಗೆ ಇದೇ ದಿನ ಸಂಜೆ 6.30 ಗಂಟೆ ಸಮಯದಲ್ಲಿ ಚಿಂತಾಮಣಿ-ಚೇಳುರು ಮುಖ್ಯ ರಸ್ತೆಯಿಂದ ನಲ್ಲರಾಳ್ಳಹಳ್ಳಿ-ಮಿಂಡಿಗಲ್ ಗ್ರಾಮಕ್ಕೆ ಹೋಗುವ ಟಾರ್ ರಸ್ತೆಯ ಬಳಿ ಅಪಘಾತವಾಗಿ ತಲೆಗೆ ತೀವ್ರ ರಕ್ತ ಗಾಯವಾಗಿ ಕಿವಿಯ ಬಳಿ ರಕ್ತ ಬರುತ್ತಿದ್ದು 108 ಆಂಬ್ಯುಲೆನ್ಸ್ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿಸಿದ್ದು, ನಂತರ ತಾನು ತನ್ನ ಅಣ್ಣ ನಾರಾಯಣಸ್ವಾಮಿ, ಮತ್ತು ಇತರರು ಆಸ್ಪತ್ರೆಗೆ ಹೋಗಿ ನೋಡಲಾಗಿ ತನ್ನ ತಮ್ಮನ ತಲೆಗೆ ತೀವ್ರ ರಕ್ತ ಗಾಯವಾಗಿತ್ತು, ನಂತರ ವಿಚಾರ ಮಾಡಲಾಗಿ ತನ್ನ ತಮ್ಮ ಆತನ ದ್ವಿಚಕ್ರವಾಹನದಲ್ಲಿ ಆತನ ಸ್ನೇಹಿತ ಮಿಂಡಿಗಲ್ ಗ್ರಾಮದ ಮಂಜುನಾಥ ಬಿನ್ ಚೌಡಪ್ಪ ಎಂಬುವರನ್ನು ಕರೆದುಕೊಂಡು ಚಿಂತಾಮಣಿಯಿಂದ ಮಿಂಡಿಗಲ್ ಗ್ರಾಮಕ್ಕೆ ಹೋಗಲು ಸಂಜೆ 6.30 ಗಂಟೆ ಸಮಯದಲ್ಲಿ ಚಿಂತಾಮಣಿ-ಚೇಳುರು ಮುಖ್ಯ ರಸ್ತೆಯಿಂದ ನಲ್ಲರಾಳ್ಳಹಳ್ಳಿ-ಮಿಂಡಿಗಲ್ ಗ್ರಾಮಕ್ಕೆ ಹೋಗುವ ಟಾರ್ ರಸ್ತೆಯ ಬಳಿ ಹೋಗುತ್ತಿದ್ದಾಗ ತನ್ನ ತಮ್ಮ ಆನಂದ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ತಿರುವಿನಲ್ಲಿ ಕಲ್ಲನ್ನು ತಪ್ಪಿಸಲು ಹೋಗಿ ದ್ವಿಚಕ್ರವಾಹನ ಸಮೇತ ಹಳ್ಳಕ್ಕೆ ಬಿದ್ದಿದ್ದು, ಹಳ್ಳದಲ್ಲಿ ಕಲ್ಲಿಗೆ ಬಿದ್ದಾಗ ತನ್ನ ತಮ್ಮನ ತಲೆಗೆ ತೀವ್ರತರದ ರಕ್ತಗಾಯವಾಗಿ ಹಿಂಬದಿಯಲ್ಲಿ ಕುಳಿತಿದ್ದ ಮಂಜುನಾಥ ಬಿನ್ ಚೌಡಪ್ಪ ಎಂಬುವರಿಗೂ ಸಹಾ ತಲೆಗೆ, ಎಡಭುಜಕ್ಕೆ ಗಾಯಗಳಾಗಿ ದ್ವಿಚಕ್ರವಾಹನ ಜಖಂಗೊಂಡಿರುವುದಾಗಿ ತಿಳಿಯಿತು. ನಂತರ ತನ್ನ ತಮ್ಮನನ್ನು ದಿನಾಂಕ 18/10/2021 ರಂದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ದಿನಾಂಕ 18/10/2021 ರಂದು ರಾತ್ರಿ ಸುಮಾರು 11.00 ಗಂಟೆಯ ಸಮಯದಲ್ಲಿ ತನ್ನ ತಮ್ಮ ಆನಂದನಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗರುತ್ತದೆ.

 

5. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.200/2021 ಕಲಂ.279, 304(ಎ) ಐ.ಪಿ.ಸಿ:-

     ದಿನಾಂಕ:18/10/2021 ರಂದು ಪಿರ್ಯಾದಿದಾರರಾದ ಶ್ರೀ ಗಂಗಾಧರಪ್ಪ ಬಿನ್ ರಾಮಲಿಂಗಪ್ಪ, 60 ವರ್ಷ, ಗೊಲ್ಲರು, ಬಂದಾರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಭಾವ ಮೈದುನನಾದ ಎ ಹನುಮಂತರಾಯಪ್ಪ 65 ವರ್ಷ, ರವರು CAR ಮುಖ್ಯ ಕೆಂದ್ರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದು, ಸದರಿ ಬೆಂಗಳೂರು ನಗರದ ಟಿ.ಸಿ.ಪಾಳ್ಯದಲ್ಲಿ ವಾಸವಾಗಿರುತ್ತಾರೆ. ದಿನಾಂಕ:18/10/2021 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ನಮ್ಮ ಊರಿನ ಗ್ರಾಮ ದೇವತೆ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಬಳಿಸಲು ಬಂದಿದ್ದು, ಕೆಲಸ ಮುಗಿದ ನಂತರ ಪುನಃ ವಾಪಾಸ್ ತೆರಳಲು ಬಂದಾರ್ಲಹಳ್ಳಿಯಿಂದ ಬೆಂಗಳೂರು ಕಡೆಗೆ KA-03, HM-6803 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಬರುತ್ತಿದ್ದ KA-25, MA-7684 ನೊಂದಣಿ ಸಂಖ್ಯೆಯ ಮಾರುತಿ ಸ್ವೀಪ್ಟ್ ಡಿಸೈರ್ ಕಾರು ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಮಾರು ಸಂಜೆ 4-00 ಗಂಟೆಗೆ ನಮ್ಮ ಭಾವ ಮೈದುನ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಭಾಗದಿಂದ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ್ದು, ನಮಗೆ ತಿಳಿದ ತಕ್ಷಣ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ತಲೆಗೆ ತೀವ್ರವಾದ ಪೆಟ್ಟು ಬಿದ್ದು, ರಕ್ತಸ್ರಾವವಾಗಿರುವುದನ್ನು ಕಂಡು ತಕ್ಷಣ 108 ಅಂಬ್ಯೂಲೇನ್ಸ್ ಗೆ ಕರೆ ಮಾಡಿ ನಾನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ವೈದ್ಯರು ಮೃತ ಪಟ್ಟಿರುವುದಾಗಿ ಧೃಢಿಕರಿಸಿರುತ್ತಾರೆ. ತದ ನಂತರ ನಾನು ನನ್ನ ಭಾವ ಮೈದುನನ ಮಗನಾದ ಹೆಚ್.ರಾಘವೇಂದ್ರ ರವರಿಗೆ ಕರೆ ಮಾಡಿ ತಿಳಿಸಿದ್ದು, ಅದ್ದರಿಂದ ಅಪಘಾತ ಪಡಿಸಿದ KA-25, MA-7684 ನೊಂದಣಿ ಸಂಖ್ಯೆಯ ಮಾರುತಿ ಸ್ವೀಪ್ಟ್ ಡಿಸೈರ್ ಕಾರು ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

6. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:18/10/2021 ರಂದು ಸಂಜೆ 5-20  ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:18-10-2021 ರಂದು ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್ ಸಿ-32 ಕೇಶವಮೂರ್ತಿ, ಪಿಸಿ-435 ವೆಂಕಟಶಿವ್ ಮತ್ತು ಸಿಪಿಸಿ-314 ಜವಾರಪ್ಪ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಮುದ್ದೇನಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕಂಗಾನಹಳ್ಳಿ ಗ್ರಾಮದ ನಾಗಪ್ಪ ಬಿನ್ ಲೇಟ್ ಪೊತಲಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕಂಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 4-15 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ನಾಗಪ್ಪ ಬಿನ್ ಲೇಟ್ ಪೊತಲಪ್ಪ, 52 ವರ್ಷ, ಪ.ಜಾತಿ, ಅಂಗಡಿ ವ್ಯಾಪಾರ, ಕಂಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 4-20 ಗಂಟೆಯಿಂದ ಸಂಜೆ 4-50 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಸಂಜೆ 5-10 ಗಂಟೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 120B,182,191,192,194,195,196,198,416,417,420,504,506,149 ಐ.ಪಿ.ಸಿ:-

     ದಿನಾಂಕ:28/09/2021 ರಂದು ಸಂಜೆ 6:00 ಗಂಟೆಯಲ್ಲಿ ಘನ ನ್ಯಾಯಾಲಯದ ಕರ್ತವ್ಯದ ಪಿಸಿ-06 ಶ್ರೀ ರಾಮಕೃಷ್ಣ ರವರು ಘನ ನ್ಯಾಯಾಲಯದಿಂದ ತಂದು ಹಾಜರ್ಪಡಿಸಿದ ಪಿಸಿಆರ್ ನಂ:393/2021 ರ ಸಾದರಾದ ದೂರಿನ ಸಾರಾಂಶವೇನೆಂದರೆ ಮೀನಾ ಗೋಯಿಂಕಾ ರವರು ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ ಸುಲ್ತಾನಪೇಟೆ ಗ್ರಾಮದ ಸರ್ವೆ ನಂ:163 ರಲ್ಲಿ 1 ಎಕರೆ 15 1/2 ಜಮೀನನ್ನು ಆರೋಪಿ-1 ರಿಂದ 11 (1. ಟಿ ನಾಗರಾಜು, 2. ಟಿ ವೆಂಕಟಕೃಷ್ಣಪ್ಪ, 3. ಮಂಜುನಾಥ, 4. ಪವನ್ ಕುಮಾರ್, 5. ಶ್ರೀಮತಿ ಪವಿತ್ರ, 6. ಶಿವರಾಜು, 7. ಶ್ರೀಮತಿ ಅಶ್ವಿನಿ, 8. ಟಿ ರವಿಕುಮಾರ್, 9. ಶ್ರೀಮತಿ ನಾಗವೇಣಿ, 10.  ಶ್ರೀಮತಿ ಮಂಜುಳ, 11. ಶ್ರೀಮತಿ ಅಶ್ವಿನಿ, ಸುಲ್ತಾನಪೇಟೆ, ಚಿಕ್ಕಬಳ್ಳಾಪುರ ತಾಲ್ಲೂಕು) ರವರುಗಳ ಬಳಿಯಿಂದ ದಿನಾಂಕ:27/10/2005 ರಂದು ದಸ್ತಾವೇಜು ಸಂಖ್ಯೆ: 1498/2005-06 ರೀತ್ಯ ರಿಜಿಸ್ಟರ್ ಮಾಡಿಕೊಂಡಿರುತ್ತಾರೆ. ಅದರ ಎಂ.ಆರ್ ನಂ:10/2005-06 ರೀತ್ಯ ದಾಖಲಾಗಿರುತ್ತೆ. ಈಗಿದ್ದಾಗ ಆರೋಪಿ-1 ರಿಂದ 11 ರವರುಗಳು ಸದರಿ ಸರ್ವೆ ನಂಬರಿನ ಜಮೀನು ಮೇಲೆ ಅಪರ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ರವರಲ್ಲಿ ಸದರಿ ಜಮೀನು ಪಿ.ಟಿ.ಸಿ.ಎಲ್ ಅಡಿಯಲ್ಲಿ ಬರುತ್ತೆಂದು ಪಿ.ಟಿ.ಸಿ.ಎಲ್ ನಂ-59/2012-13 ರೀತ್ಯ ದಾವೆ ಹೂಡಿ ಮೀನಾ ಗೋಯಿಂಕಾ ರವರ ತಪ್ಪಾದ ವಿಳಾಸವನ್ನು ನೀಡಿ ಅದಕ್ಕೆ ನೋಟೀಸ್ ಕಳುಯಿಸಿ ಸದರಿ ಜಮೀನನ್ನು ಲಪಟಾಯಿಸುವ ಉದ್ದೇಶದಿಂದ ಸರ್ವೆ ಅಧಿಕಾರಿಗಳೊಂದಿಗೆ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಶಾಮಿಲಾಗಿ ನೋಟೀಸ್ ಜಾರಿ ಮಾಡಿರುತ್ತೇವೆಂದು ವರದಿಯನ್ನು ನೀಡಿ ಹಾಗೂ ಕೆಲ ಸುಳ್ಳು ಮತ್ತು ಕೃತಕ ದಾಖಲೆಗಳನ್ನು ಸೃಷ್ಠಿಸಿಕೊಂಡು ಜಮೀನನ್ನು ಅಕ್ರಮವಾಗಿ ವಾಪಸ್ಸು ಪಡೆದು ಆರೋಪಿ-12 ರವರಿಗೆ ನಕಲಿ ದಾಖಲೆಗೊಂದಿಗೆ ಸದರಿ ಜಮೀನನ್ನು ಆರೋಪಿ-12 ಶ್ರೀಮತಿ ಪುಷ್ಪ ರವರಿಗೆ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ. ನಂತರ ದಿನಾಂಕ:05/11/2018 ರಂದು ದಸ್ತಾವೇಜು ಸಂ:3485/2018-19 ರೀತ್ಯ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ. ಇದಕ್ಕೆ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ, ಕಾಲುಗಳಿಂದ ಹಲ್ಲೆ ಮಾಡಿ  ನಿಂದಿಸಿರುತ್ತಾರೆ. ಈ ಕೃತ್ಯ ವೆಸಗಿದ್ದವರ ವಿರುದ್ದ ಕ್ರಮ ಜರುಗಿಸಲು ಸಲ್ಲಿಸಿಕೊಂಡ ಸಾದರಾದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

8. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. INDIAN MOTOR VEHICLES ACT, 1988 U/s 177,192 ; THE KARNATAKA PREVENTION OF SLAUGHTER AND PRESERVATION OF CATTLE ACT-2020 U/s 4,5,12:-

     ದಿನಾಂಕ: 18-10-2021 ರಂದು ರಾತ್ರಿ 8-00 ಗಂಟೆಗೆ ಹೆಚ್ ಸಿ-157 ಶಿವಪ್ಪ ಬ್ಯಾಕೋಡ್ ರವರು   ಕೆಎ-40-ಎ-9508 ಅಶೋಕ ಲೈಲ್ಯಾಂಡ್ ಟೆಂಪೊ ಮತ್ತು 3 ಹಸುಗಳು, 3 ಎತ್ತುಗಳು ಸಮೇತ  ಆರೋಪಿಯನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರಧಿಯ  ಸಾರಾಂಶವೇನಂದರೆ, ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕರವರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ಪ.ಎನ್.ಬ್ಯಾಕೋಡ, ಹೆಚ್.ಸಿ-157 ಆದ ನಾನು ತಮ್ಮಲ್ಲಿ ವರದಿ ಸಲ್ಲಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 18/10/2021 ರಂದು ಡಿವೈ.ಎಸ್.ಪಿ ಸಾಹೇಬರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಕಡೆಯಿಂದ ಎನ್.ಹೆಚ್-7 ರಸ್ತೆಯಲ್ಲಿ ಒಂದು ಅಶೋಕ ಲೈಲ್ಯಾಂಡ್ ವಾಹನದಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು ಮಾನ್ಯ ಡಿವೈ.ಎಸ್.ಪಿ ಸಾಹೇಬರಿಗೆ ಬಾತ್ಮೀ ಬಂದಿದ್ದು, ಕೂಡಲೇ ಅವರು ನನ್ನನ್ನು ಹೆದ್ದಾರಿಗೆ ಹೋಗಿ ಪರಿಶೀಲಿಸುವಂತೆ ತಿಳಿಸಿದರು. ಅದರಂತೆ ನಾನು ಬೆಂಗಳೂರು ಹೈದ್ರಾಬಾದ್ ಎನ್.ಹೆಚ್-7 ರಸ್ತೆಯ ಚದಲಪುರ ಕ್ರಾಸ್ನ ಹಂಪ್ಸ್ ಬಳಿ ಬಂದು ನಿಂತುಕೊಂಡು ಕಾಯುತ್ತಿದ್ದಾಗ ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ಎನ್.ಹೆಚ್-7 ರಸ್ತೆಯ ಬಾಗೇಪಲ್ಲಿ ಕಡೆಯಿಂದ   ಕೆಎ-40-ಎ-9508 ಅಶೋಕ ಲೈಲ್ಯಾಂಡ್ ವಾಹನದಲ್ಲಿ ದನಗಳನ್ನು ತುಂಬಿಕೊಂಡು ಬರುತ್ತಿದ್ದು, ಸದರಿ ವಾಹವನ್ನು ನಿಲ್ಲಿಸಿ ಚೆಕ್ ಮಾಡಲಾಗಿ ಅದರಲ್ಲಿ ಒಟ್ಟು 06 ದನಗಳು ಇದ್ದವು. ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ಸಂಬಂಧ ವಾಹನದ ಚಾಲಕನ ಹೆಸರು ವಿಳಾಸ  ಕೇಳಲಾಗಿ ಆದಿನಾರಾಯಣ ಬಿನ್ ಚಲಪತಿ, 41ವರ್ಷ, ನಾಯಕರು, ಗೋರೆಂಟ್ಲ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ ಎಂಬುದಾಗಿ ತಿಳಿಸಿದ್ದು, ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ದಾಖಲೆಗಳನ್ನು ಕೇಳಲಾಗಿ ಯಾವುದೇ ದಾಖಲೆಗಳು ತನ್ನ ಬಳಿ ಇಲ್ಲವೆಂತಲೂ, ಸದರಿ ದನಗಳನ್ನು ಈದ್ಮಿಲಾದ ಹಬ್ಬದ ಸಂಬಂಧ ಕಟಾವು ಮಾಡುವ ಸಲುವಾಗಿ ನಮ್ಮ ಮಾಲೀಕರಾದ ಶಬ್ಬೀರ್  ಬಾಗೇಪಲ್ಲಿ ರವರು ತಿಳಿಸಿದ್ದರ ಮೇರೆಗೆ ಗೋರೆಂಟ್ಲ ಸಂತೆಯಿಂದ ಜಂಗಮಕೋಟೆ ಸಮೀಪದ ತಾಮಸನಹಳ್ಳಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಯಾವುದೇ ದಾಖಲೆ ವಗೈರೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ.   ಸದರಿ ಕೆಎ-40-ಎ-9508 ಅಶೋಕ ಲೈಲ್ಯಾಂಡ್ ವಾಹನದ ಚಾಲಕ ಆದಿನಾರಾಯಣ ರವರಿಗೆ ದನಗಳನ್ನು ಕಟಾವು ಸಲುವಾಗಿ ಅಕ್ರಮವಾಗಿ ಸಾಗಾಣಿಕೆ ಮಾಡಬಾರದೆಂದು ಗೊತ್ತಿದ್ದು ಹಾಗೂ ಸದರಿ ದನಗಳನ್ನು ಸಾಗಾಣಿಕೆ ಮಾಡಲು ಯಾವುದೇ ರೀತಿ ಪರವಾನಿಗೆ /ದಾಖಲೆಗಳು ಇಲ್ಲವೆಂದು ತಿಳಿದು ತನ್ನ ಮಾಲೀಕರಾದ ಶಬ್ಬೀರ್ ರವರು ತಿಳಿಸಿದಂತೆ ದನಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದರಿಂದ ಸದರಿ ಆದಿನಾರಾಯಣ, ಕೆಎ-40-ಎ-9508 ಅಶೋಕ ಲೈಲ್ಯಾಂಡ್ ವಾಹನ ಮತ್ತು ಅದರಲ್ಲಿರುವ 06 ದನಗಳನ್ನು ವಶಕ್ಕೆ ಪಡೆದು ಠಾಣೆಯ ಬಳಿ ಕರೆತಂದು ಹಾಜರುಪಡಿಸುತ್ತಿದ್ದು, ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರಧಿ.

 

9. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ.457,380 ಐ.ಪಿ.ಸಿ:-

     ದಿನಾಂಕ:18-10-2021 ರಂದು ರಾತ್ರಿ 19-00 ಗಂಟೆಗೆ ಪಿರ್ಯಾದುದಾರರಾದ ಶ್ರೀ.ಮಹಮ್ಮದ್ ತಮೀಮ್ ಅನ್ಸಾರಿ, ಆಜಾದ್ ನಗರ, ಶಿಡ್ಲಘಟ್ಟ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬತ್ತು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ ಹೊಸಹುಡ್ಯ ಗ್ರಾಮದ ಸ.ನಂ.49 ಮತ್ತು 50 ರಲ್ಲಿ ತೋಟದ ಮನೆಯಿದ್ದು, ಅದರಲ್ಲಿ ಬೋರ್ ವೇಲ್ ಮೋಟಾರ್, ಬೆಳೆ ಕೋಯ್ಲ ಮಾಡುವ ಯಂತ್ರ, ಟಾರ್ಪಲು, ಔಷಧಿ ಸಿಂಪಡಿಸುವ ಪಂಪು ಮತ್ತು ಮೋಟಾರ್ ಚಾರ್ಜಿಂಗ್ ಮಾಡುವ ಯಂತ್ರ ಇಟ್ಟಿದ್ದು, ದಿನಾಂಕ:16-10-2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ತೋಟದ ಮನೆಯ ಬೀಗ ಹೊಡೆದು ಬಾಗಿಲು ತೆರೆದು ಅಂದಾಜು ಬೆಲೆ ಸುಮಾರು 1,50,000/- ರೂಪಾಯಿಗಳ ಮೌಲ್ಯದ ಮೇಲ್ಕಂಡ ಎಲ್ಲಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.129/2021 ಕಲಂ.457,380 ಐ.ಪಿ.ಸಿ:-

     ದಿನಾಂಕ:19.10.2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಶ್ರೀಮತಿ. ಗಾಯಿತ್ರಿ ಕೊಂ ರಮೇಶ್, ಪಟೇರಬೀದಿ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ತನ್ನ ಮಗನಾದ ಮದನ್ ಕುಮಾರ್ ರವರು ದಿನಾಂಕ.15.101.2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ತವರು ಮನೆಯಾದ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹತ್ತಿರ ಿರುವ ಚೆನ್ನಾಪುರಕ್ಕೆ ಗ್ರಾಮಕ್ಕೆ ಹೋಗಿದ್ದು, ಮಾರನೇ ದಿನ ದಿನಾಂಕ.16.10.2021 ರಂದು ಸಂಜೆ ನಮ್ಮ ಪಕ್ಕದ ಮನೆಯವರು ಪೋನ್ ಮಾಡಿ ನಿಮ್ಮ ಮನೆಯ ಬೀಗ ಯಾರೋ ಕಿತ್ತು ಹಾಕಿರುತ್ತಾರೆಂದು ತಿಳಿಸಿದಾಗ ಮನೆಗೆ ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗ ಕಿತ್ತು ಹಾಕಿ ಒಳಗಡೆ ಅಡುಗೆ ರೂಂನಲ್ಲಿ ಹೋಗಿ ಬೀರುವಿನ ಡೋರ್ ಗಳನ್ನು ತೆಗೆದು ಬೀರುವಿನಲ್ಲಿದ್ದ 1] 2 ಜೊತೆ ಬಂಗಾರದ ಓಲೆ ಸು.45 ಗ್ರಾಂ, 2] ಒಂದು ಉಂಗುರ ಸುಮಾರು 2.5 ಗ್ರಾಂ, 3] ಬಂಗಾರದ ಗುಂಡು 30 ಸುಮಾರು 3 ಗ್ರಾಂ, 4] ಬೆಳ್ಳಿಯ 2 ಜೊತೆ ಕಾಲು ಚೈನ್ 5] ಬೆಳ್ಳಿ ಕುಚ್ಚು ಮತ್ತು ಮಗುವಿನ 2 ಜೊತೆ ಗೊಳಸುಗಳು ಮತ್ತು ಉಡುದಾರ ಹಾಗೂ ನಗದು 5000/-ರೂಗಳನ್ನು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾವು ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಸಿಗದ ಕಾರಣ ಕಳುವಾದ ವಸ್ತುಗಳನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.    

ಇತ್ತೀಚಿನ ನವೀಕರಣ​ : 19-10-2021 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080