ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 368/2021, ಕಲಂ. 279, 337 ಐಪಿಸಿ:-

    ದಿನಾಂಕ 17/10/2021 ರಂದು ಸಂಜೆ 6-05 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀಮತಿ ಶ್ಯಾಮಲ ಕೋಂ ವೆಂಕಟರವಣ ನಾಯಕ,35 ವರ್ಷ,ನಾಯಕರು,ಗೃಹಿಣಿ 2ನೇ ವಾರ್ಡ್ ಬಾಗೇಪಲ್ಲಿ ಟೌನ್ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ 17/10/2021 ರಂದು ಸಂಜೆ 4-00 ಗಂಟೆಗೆ ನಾನು ಮತ್ತು ನನ್ನ ಗಂಡ ವೆಂಕಟರಮಣ ನಾಯಕ ರವರು ನಮ್ಮ ಬಾಬತ್ತು KA 40 S 2381 ಟಿವಿಎಸ್ ಫೀಗೊ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಪರಗೋಡು ಡ್ಯಾಂ ಗೆ ಹೋಗಿ ನೋಡಿಕೊಂಡು ನಂತರ ಗ್ರಾಮಕ್ಕೆ ವಾಪಸ್ಸು ಬರಲು ನನ್ನ ಗಂಡ ಸ್ಕೂಟಿ ವಾಹನವನ್ನು ಚಾಲನೆ ಮಾಡಿಕೊಂಡು ನಾನು ಹಿಂಬದಿಯಲ್ಲಿ ಕುಳಿತುಕೊಂಡು ಗ್ರಾಮಕ್ಕೆ ಬರಲು ಪರಗೋಡು ಸಮೀಪ  ಸಂಜೆ 5-00 ಗಂಟೆ ಸಮಯದಲ್ಲಿ ಬರುತ್ತಿದ್ದಾಗ  ಹಿಂಬದಿಯಿಂದ ಬೆಂಗಳೂರು ಕಡೆಯಿಂದ AP 39 FY 6187 ಕಿಯಾ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರ ವಾಹನಕ್ಕೆ ತಗುಲಿಸಿ ಅಪಘಾತ ಪಡಿಸಿದ ಪರಿಣಾಮ ನಾನು,ನನ್ನ ಗಂಡ ದ್ವಿಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದುಹೋಗಿ ನನಗೆ ಎಡಗೈಗೆ,ಎಡಕಾಲಿಗೆ ಮತ್ತು ಮೈಮೇಲೆ ಗಾಯಗಳಾಗಿದ್ದು ನನ್ನ ಗಂಡ ವೆಂಕಟರಮಣಪ್ಪ ರವರಿಗೆ ಎಡಕಣ್ಣಿನ ಮೇಲೆ,ಎಡಗೈಗೆ ರಕ್ತಗಾಯಗಳಾಗಿದ್ದು ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ನಮ್ಮನ್ನು ಉಪಚರಿಸಿ ಯಾವುದೊ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಆದ್ದರಿಂದ AP 39 FY 6187 ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಸಂಜೆ 6-45 ಗಂಟೆಗೆ ವಾಪಸ್ಸಾಗಿ ದೂರನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 455/2021, ಕಲಂ. 279, 304(A)ಐಪಿಸಿ ಮತ್ತು ಕಲಂ. 187 ಐಎಂವಿ ಆಕ್ಟ್:-

    ದಿನಾಂಕ: 17/10/2021 ರಂದು ರಾತ್ರಿ 11.00 ಗಂಟೆಗೆ ಪಿರ್ಯಾಧಿದಾರರಾದ ವೆಂಕಟಶಿವ ಬಿನ್ ನಾರಾಯಣಸ್ವಾಮಿ, 32 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ:ನಾಗದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ-ತಾಯಿಗೆ ತಾವು ಮೂರು ಜನ ಮಕ್ಕಳಿದ್ದು 1ನೇ ರತ್ನಮ್ಮ, 2ನೇ ತಾನು, 3ನೇ ಸುಬ್ರಮಣಿ ರವರಾಗಿರುತ್ತೇವೆ. ತಮ್ಮ ತಂದೆ ನಾರಾಯಣಸ್ವಾಮಿ ಬಿನ್ ಲೇಟ್ ದಾಸಪ್ಪ, 65 ವರ್ಷ, ರವರು ತಮ್ಮ ಗ್ರಾಮದಲ್ಲಿ ಮತ್ತು ಸುತ್ತ-ಮುತ್ತ ಗ್ರಾಮಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿತ್ತಾರೆ. ಹೀಗಿರುವಾಗ ದಿನಾಂಕ: 17/10/2021 ರಂದು ಬೆಳಿಗ್ಗೆ 09.00 ಗಂಟೆಗೆ ಎಂದಿನಂತೆ ತಮ್ಮ ತಂದೆ ರವರು ಚಿನ್ನಸಂದ್ರ ಗ್ರಾಮದಲ್ಲಿ ಕೂಲಿ ಕೆಲಸ ಇದೆ ಎಂತ ಮನೆಯಲ್ಲಿ ಹೇಳಿ ಹೋಗಿರುತ್ತಾರೆ. ನಂತರ ತಾನು ಮತ್ತು ತಮ್ಮ ಮಾವ ಎಂ.ಗುರ್ರಪ್ಪ ರವರು ಚಿಂತಾಮಣಿ ನಗರದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಸ್ಸು ಹೋಗಲು ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸಂಜೆ ಸುಮಾರು 7.00 ಗಂಟೆ ಸಮಯದಲ್ಲಿ ಕಡಪ-ಬೆಂಗಳೂರು ರಾಜ್ಯ ಹೆದ್ದಾರಿಯ ಚಿನ್ನಸಂದ್ರ ಗ್ರಾಮ ಬಿಟ್ಟು ಸ್ಚಲ್ಪ ಮುಂದೆ ಅಂದರೆ ಚಿನ್ನಸಂದ-ಕೆಂದನಹಳ್ಳಿ ಮಾರ್ಗ ಮದ್ಯೆ ರಸ್ತೆಯ ಎಡಗಡೆ ಪುಟ್ ಪಾತ್ ಪಕ್ಕ ಯಾರೋ ಒಬ್ಬ ವ್ಯಕ್ತಿಯು ರಸ್ತೆಯ ಮೇಲೆ ಬಿದ್ದು ಹೋಗಿದ್ದು ತಾನು ಮತ್ತು ತಮ್ಮ ಮಾವ ಗುರ್ರಪ್ಪರವರು ಸ್ಥಳಕ್ಕೆ ಹೋಗಿ ನೋಡಲಾಗಿ ಅದು ತಮ್ಮ ತಂದೆ ನಾರಾಯಣಸ್ವಾಮಿರವರಾಗಿದ್ದು ತಮ್ಮ ತಂದೆಯ ತಲೆಯ ಹಿಂದೆ ರಕ್ತಗಾಯವಾಗಿ, ಹೊಟ್ಟೆಯಿಂದ ಕರಳು ಆಚೆ ಬಂದಿದ್ದು, ಮೈ-ಕೈ ಮೇಲೆ ಮೂಳೆ ಮುರಿತದ ರಕ್ತಗಾಯಗಳಾಗಿರುವುದು ಕಂಡು ಬಂದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ತಮ್ಮ ತಂದೆ ಈ ದಿನ ಚಿನ್ನಸಂದ್ರ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ ಪುನಃ ತಮ್ಮ ಗ್ರಾಮಕ್ಕೆ ಬರಲು ಚಿನ್ನಸಂದ್ರ ಗ್ರಾಮ ಬಿಟ್ಟು ಕಡಪ-ಬೆಂಗಳೂರು ರಸ್ತೆಯ ಪುಟ್ ಪಾತ್ ಮಾರ್ಗವಾಗಿ ಚಿನ್ನಸಂದ-ಕೆಂದನಹಳ್ಳಿ ಮಾರ್ಗ ಮದ್ಯೆ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ಅಪರಿಚಿತ ವಾಹನದ ಚಾಲಕನು ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಂದೆಗೆ ಡಿಕ್ಕಿ ಹೊಡೆಸಿ, ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಪರಿಣಾಮ ತಮ್ಮ ತಂದೆಗೆ ತೀವ್ರಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಂತರ ತಾವು ತಮ್ಮ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿಯನ್ನು ನೀಡಿ ಅವರು ಸ್ಥಳಕ್ಕೆ ಬಂದ ನಂತರ ಮೃತಪಟ್ಟಿದ್ದ ತಮ್ಮ ತಂದೆ ನಾರಾಯಣಸ್ವಾಮಿರವರ ಮೃತ ದೇಹವನ್ನು ಯಾವುದೋ ಟಾಟಾ ಏಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ಆದ್ದರಿಂದ ತಮ್ಮ ತಂದೆಗೆ ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಅಪರಿಚಿತ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

3. ದಿಬ್ಬೂರಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 151/2021, ಕಲಂ. 143, 144, 147, 148, 323, 324, 504, 506 ರೆ/ವಿ 149 ಐಪಿಸಿ:-

    ದಿನಾಂಕ:17-10-2021 ರಂದು ಸಂಜೆ 18-30 ಗಂಟೆಗೆ ಎ.ಎಸ್.ಐ ಸೋಮಪ್ಪ ರವರು ಠಾಣೆಗೆ ಹಾಜರಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಪಾರ್ವತಮ್ಮ  ಕೊಂ ವೆಂಕಟರವಣಪ್ಪ, 48 ವರ್ಷ, ತೊಗಟರು, ಜಿರಾಯ್ತಿ, ವಾಸ: ಮಾದೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದರ ಸಾರಾಂಶವೆನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:16-10-2021 ರಂದು ಸಂಜೆ 5-30 ಗಂಟೆಯ ಸಮಯದಲ್ಲಿ  ನಮ್ಮ ಗ್ರಾಮದಲ್ಲಿ  ನಮ್ಮ ಮನೆಯ ಮುಂಭಾಗದಲ್ಲಿ ಪಾತ್ರೆಗಳನ್ನು ತೊಳೆದಿರುತ್ತೇನೆ. ನಾನು ಪಾತ್ರಗಳನ್ನು ತೊಳೆದ ನೀರು ನಮ್ಮ  ಮನೆಯ ಪಕ್ಕದಲ್ಲಿ ವಾಸಿಯಾಗಿರುವ ನಮ್ಮ ಜನಾಂಗದವರೇ ಆದ ವೆಂಕಟೇಶ್ ಬಿನ್ ಲೇಟ್ ದೊಡ್ಡ ವೆಂಕಟರಾಯಪ್ಪ ರವರ ಮನೆಯ ಮುಂದೆ ಹೋಗಿದೆ ಎಂತ  ನಮ್ಮ ಗ್ರಾಮದ ವಾಸಿಗಳಾದ  ವೆಂಕಟೇಶ್  ಮತ್ತು  ಅವರ ಅಣ್ಣನಾದ  ತಿಮ್ಮಣ್ಣ ರವರು ನಿನಗೆ ಎಷ್ಟುಸಾರಿ ಹೇಳುವುದು ಇಲ್ಲಿ ಪಾತ್ರೆಗಳನ್ನು ತೊಳೆಯಬೇಡ ಎಂತ ಹೇಳಿದರೂ ನೀನು ಕೇಳುವುದಿಲ್ಲ ಲೋಫರ್ ಮುಂಡೆ  ಎಂತ ಹೇಳಿ ಅವಾಚ್ಯ ಶಬ್ದಗಳಿಂದ  ಬೈದು ತನ್ನ ಕೈಯಲ್ಲಿದ್ದ  ಕಟ್ಟಿಗೆಯಿಂದ ತಿಮ್ಮಣ್ಣ ನನ್ನ ಎಡಭಾಗದ ಹಣೆಯ ಮೇಲ್ಭಾಗದಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾರೆ. ವೆಂಕಟೇಶಪ್ಪ ರವರು ತನ್ನ ಕಲ್ಲಿನಿಂದ  ನನ್ನ ಬಲಗೈ ಮೊಣಕೈ ಮೇಲ್ಬಾಗದಲ್ಲಿ ಹೊಡೆದು ಮುಗು ಗಾಯವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ಸ್ಥಳದಲ್ಲಿದ್ದ ನಂದನಿ ಕೊಂ ಚಂದ್ರ, ವಂದನ, ಸುಶೀಲಮ್ಮ ಕೊಂ ವೆಂಕಟೇಶ್ . ಸುವರ್ಣಮ್ಮ ಕೊಂ ತಿಮ್ಮಣ್ಣ. ಪವಿತ್ರ ಕೊಂ ವೆಂಕಟೇಶ್ , ಪ್ರೇಮ ಬಿನ್  ವೆಂಕಟೇಶ್  ರವರು ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ  ಬೈದು  ಈ ಪೈಕಿ ವಂದನ, ನಂದಿನಿ ರವರು  ನನ್ನ ತಲೆಯ ಕೂದಲನ್ನು ಹಿಡಿದು ಎಳೆದಾಡಿ ನನ್ನ ಬೆನ್ನಿನ  ಮೇಲೆ  ಗುದ್ದಿ ಮೈ ಕೈ ನೋವು ಉಂಟು ಮಾಡಿರುತ್ತಾರೆ. ಸುಶೀಲಮ್ಮ, ಸುರ್ವಣಮ್ಮ,  ಪವಿತ್ರ, ಪ್ರೇಮ ರವರು  ಸಹ ನನ್ನನ್ನು ಹಿಡಿದುಕೊಂಡು ಕೈಗಳಿಂದ  ಹೊಡೆಯುತ್ತಿದ್ದಾಗ ನಾನು ಕೂಗಿಕೊಂಡಾಗ ನನ್ನ ಗಂಡ ವೆಂಕಟರವಣಪ್ಪ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ. ಮೈದನಾದ ಚಿಕ್ಕವೆಂಕಟರವಣಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ, ಹಾಗೂ ನಮ್ಮ  ಮಗ  ವೆಂಕಟಾಚಲಪತಿ ರವರುಗಳು ಗಲಾಟೆಯನ್ನು ಬಡಿಸಲು ಬಂದಾಗ  ಸ್ಥಳದಲ್ಲಿದ್ದ ವಂದನ ರವರು ತನ್ನ  ಕೈಯಲ್ಲಿದ್ದ  ಕುಡುಗೊಲುನಿಂದ  ಚಿಕ್ಕವೆಂಕಟರವಣಮ್ಮ ರವರು ತಲೆಯ ಎಡಭಾಗಕ್ಕೆ  ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಸುಶೀಲಮ್ಮ ರವರು ತನ್ನ ಕೈಯಲ್ಲಿದ್ದ  ಕೋಲಿನಿಂದ  ಚಿಕ್ಕವೆಂಕಟರವಣಪ್ಪ ರವರ  ಬಲಭಾಗದ ಹಣೆಯ ಭಾಗಕ್ಕೆ  ಹೊಡೆದು ರಕ್ತಗಾಯ ಉಂಟು ಮಾಡಿರುತ್ತಾರೆ ಹಾಗೂ ತಿಮ್ಮಣ್ಣ ಮತ್ತು ವೆಂಕಟೇಶಪ್ಪ ರವರು ಕೈಗಳಿಂದ  ನನ್ನ ಮೈದನ ಬೆನ್ನಿಗೆ ಮೇಲ್ಬಾಗಕ್ಕೆ  ಹೊಡೆದು ಮೂಗು ಗಾಯ ಉಂಟು ಮಾಡಿರುತ್ತಾರೆ ಹಾಗೂ  ಅಡ್ಡ ಬಂದ  ನನ್ನ ಗಂಡನಾದ  ವೆಂಕಟರವಣಪ್ಪ ರವರಿಗೆ  ಸ್ಥಳದಲ್ಲಿ ಬಿದಿದ್ದ  ಕಲ್ಲಿನಿಂದ  ವೆಂಕಟೇಶ್  ರವರು  ತಲೆಯ ಹಿಂಭಾಗಕ್ಕೆ ಹೊಡೆದು  ರಕ್ತಗಾಯಪಡಿಸಿರುತ್ತಾರೆ. ತಿಮ್ಮಣ್ಣ ರವರು ನನ್ನ ಗಂಡನ ಎಡ ಕಾಲಿಗೆ ಹೊಡೆದಿರುತ್ತಾರೆ. ಪವಿತ್ರರವರು ಸಹ ತನ್ನ ಗಂಡನಿಗೆ ಸ್ಥಳದಲ್ಲಿ ಬಿದಿದ್ದ  ಕಟ್ಟಿಗೆಯಿಂದ ಎಡ ಕೈ  ಮಣಿ ಕಟ್ಟಿನ ಮೇಲೆ  ಹೊಡೆದು ಊತಗಾಯ ಉಂಟು ಮಾಡಿರುತ್ತಾರೆ. ಪ್ರೇಮ ರವರು  ತನ್ನ  ಗಂಡನಿಗೆ  ಬಲಕೈ ಮಣಿಕಟ್ಟಿನ ಮೇಲ್ಭಾಗಕ್ಕೆ  ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ನಂದನಿ ರವರು ಕೈಗಳಿಂದ  ಗಂಡನ ಗಂಡನ ಬೆನ್ನಿನ ಮೇಲೆ  ಹೊಡೆದಿರುತ್ತಾರೆ. ಹಾಗೂ ಗಲಾಟೆಯ ಬಿಡಿಸಲು ಬಂದ  ನನ್ನ ಮಗನಿಗೆ ತಿಮ್ಮಣ್ಣ ರವರು ಸ್ಥಳದಲ್ಲಿದ್ದ ಕಲ್ಲಿನಿಂದ  ಎಡಕೈ ಮೊಣಕೈ ಕೆಳಭಾಗಕ್ಕೆ  ಹೊಡೆದು ರಕ್ತಗಾಯಪಡಿಸಿರುತ್ತಾರೆ. ಹಾಗೂ  ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂತ ಪ್ರಾಣ  ಬೆದರಿಕೆಯನ್ನು  ಹಾಕಿರುತ್ತಾರೆ ಸ್ಥಳದಲ್ಲಿದ್ದ  ಲಕ್ಷ್ಮೀ ನಾರಾಯಣ ಬಿನ್ ನರಸಿಂಹಪ್ಪ ಮಾದೇನಹಳ್ಳಿ,ಕೃಷ್ಣಮೂರ್ತಿ ಬಿನ್ ಮುಸಲಪ್ಪ ಮಾದೇನಹಳ್ಳಿ ರವರು ಗಲಾಟೆಯನ್ನು ಬಿಡಿಸಿ ಕಾರಿನಲ್ಲಿ ನಮ್ಮಗಳನ್ನು ಕರೆದುಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಮೇಲ್ಕಂಡವರವಿರುದ್ದ ಕಾನುನು ಕ್ರಮ ಜರುಗಿಸಲು ಕೋರಿ ದೂರು.

 

4. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 112/2021, ಕಲಂ. 379 ಐಪಿಸಿ:-

    ದಿನಾಂಕ 17/10/2021 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ G V ಚಂದ್ರಶೇಖರ್ರೆಡ್ಡಿ ಬಿನ್ ಲೇಟ್ ವೆಂಕಟರಾಮರೆಡ್ಡಿ, 43 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಗೌಡನಹಳ್ಳಿ ಗ್ರಾಮ,ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಗೌಡನಹಳ್ಳಿ ಗ್ರಾಮದ ಸರ್ವೆ ನಂ 6 ರಲ್ಲಿನ 1.15 ಗುಂಟೆ ಜಮೀನು ತಮ್ಮ ತಂದೆಯ ಹೆಸರಿನಲ್ಲಿದ್ದು, ಸದರಿ ಜಮೀನಿನಲ್ಲಿ ಕೊತ್ತಂಬರಿ ಬೆಳೆ ಬೆಳೆದು ಮುಗಿದಿದ್ದರಿಂದ ಸದರಿ ಜಮೀನಿಗೆ ಅಳವಡಿಸಿದ್ದ ಸುಮಾರು 80000/- ರೂ ಬೆಲೆಬಾಳುವ ಪ್ಲಾಸ್ಟಿಕ್ ಪೈಪ್ ಮತ್ತು  ಸ್ಲೀಂಕ್ಲರ್ಸ್ ನ್ನು ಜಮೀನಿನ ಶೆಡ್ ಬಳಿ ಇಟ್ಟಿದ್ದೆನು. ಆದರೆ ಸದರಿ ಜಮೀನಿನಲ್ಲಿ ಇಟ್ಟಿದ್ದ ಪ್ಲಾಸ್ಟಿಕ್ ಪೈಪ್ ಗಳು ಇದ್ದ ಸ್ಥಳದಲ್ಲಿಯೇ ಕಡಿಮೆ ಆಗುತ್ತಿರುವುದನ್ನು ನೋಡಿ ಸದರಿ ಪ್ಲಾಸ್ಟಿಕ್ ಪೈಪ್ ಗಳನ್ನು ಯಾರೋ ಕಳ್ಳರು ಕಳವು ಮಾಡುತ್ತಿರಬಹುದೆಂದು ಸದರಿಯವರನ್ನು ಸ್ಥಳದಲ್ಲಿಯೇ ಹಿಡಿಯುವ ಸಲುವಾಗಿ ದಿನಾಂಕ 17/10/2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಮಬ್ಬುಗತ್ತಲು ಆವರಿಸುತ್ತಿದ್ದಾಗ ತನ್ನ ತಮ್ಮನಾದ ಭಾರ್ಗವ ಮತ್ತು ತಾನು ತಮ್ಮ ಜಮೀನಿನ ಪಕ್ಕದಲ್ಲಿ ಬೇಲಿಯಲ್ಲಿ ಅವಿತು ಕುಳಿತಿದ್ದಾಗ ತಮ್ಮ ಗ್ರಾಮದ ನಾರೆಪ್ಪನ ಮಗನಾದ ಚಲಪತಿ ಹಾಗೂ ಗೌರಮ್ಮನ ಮಗನಾದ ನಾಗರಾಜ ರವರು ಬಂದು ತಾವು ಇಟ್ಟಿದ್ದ ಪ್ಲಾಸ್ಟಿಕ್ ಪೈಪ್ ಗಳ ಬಳಿ ಬಂದು ಅದರಲ್ಲಿನ ಅಂದಾಜು 50 ಪೈಪ್ ಗಳನ್ನು  ತುಂಡು ಮಾಡಿ 3 ಹೊರೆ ಕಟ್ಟಿ  ಕಳ್ಳತನದಿಂದ ಎತ್ತಿಕೊಂಡು ಹೋಗಲು ಮುಂದಾದಾಗ ತಾವು ಕೂಗಿಕೊಂಡು ಅವರನ್ನು ಹಿಡಿಯಲು ಮುಂದಾದಾಗ ಇಬ್ಬರು ಸ್ಥಳದಲ್ಲಿಯೇ ಮುರಿದ ಪೈಪ್ ನ ಕಟ್ಟುಗಳನ್ನು ಬಿಟ್ಟು ಓಡಿದ್ದು, ಅವರ ಪೈಕಿ ನಾಗರಾಜ ರವರನ್ನು ಹಿಂಬಾಲಿಸಿ ಹಿಡಿದುಕೊಂಡಿರುತ್ತೇವೆ. ಆದರೆ ಚಲಪತಿ ಓಡಿಹೋಗಿರುತ್ತಾನೆ. ಸ್ಥಳದಲ್ಲಿ ಸದರಿಯವರು ಕಳ್ಳತನ ಮಾಡಿದ ಸುಮಾರು 20000/- ಬೆಲೆಬಾಳುವ ತುಂಡು ಮಾಡಿದ ಪೈಪ್ ಗಳ ಕಟ್ಟುಗಳು ಇರುತ್ತವೆ.  ನಾಗರಾಜ ಓಡುವಾಗ ಕೆಳಗೆ ಬಿದ್ದು ಮೂಗೇಟುಗಳು ಸಹ ಆಗಿರುತ್ತವೆ. ಸದರಿ ನಾಗರಾಜ ನನ್ನು ತಮ್ಮ ಮುಂದೆ ಹಾಜರುಪಡಿಸುತ್ತಿದ್ದು, ಸದರಿಯಾತನನ್ನು ವಿಚಾರಣೆಗೊಳಪಡಿಸಿ ಚಲಪತಿ ಹಾಗೂ ಸ್ಥಳದಲ್ಲಿಯೇ ಸಿಕ್ಕಿದ ನಾಗರಾಜ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

 

5. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 198/2021, ಕಲಂ. 143, 147, 148, 323, 324, 504, 506 ರೆ/ವಿ 149 ಐಪಿಸಿ:-

    ದಿನಾಂಕ:17/10/2021 ರಂದು ಪಿರ್ಯಾದಿದಾರರಾದ ಪಿ.ವಿ.ಕೃಷ್ಣಪ್ಪ ಬಿನ್ ವೆಂಕಟಶಾಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಮಕ:17/10/2021 ರಂದು ಮದ್ಯಾಹ್ನ 12-30 ಗಂಟೆಗೆ ನಮ್ಮ ಮನೆಯ ಪಕ್ಕದಲ್ಲಿರುವ ಲೇಟ್ ಫಕೀರಪ್ಪನ ಮಗನಾದ ನಾರಾಯಣಪ್ಪ ಮತ್ತು ರೂಪ ಎಂಬುವರಿಗೆ ಜಗಳ ಆಗಿದ್ದು, ಇಬ್ಬರಿಗೂ ಸಮಾಧಾನ ಮಾಡಿ ಕಳುಹಿಸಿದೆವು, ಆ ಸಮಯದಲ್ಲಿ ನಮ್ಮ ಹೆಂಗಸರು ಮನೆಯಲ್ಲಿ ಮಲಗಿದ್ದರು ಅವರಿಗೆ ವಿಪರೀತ ನಗಡಿ ಕೆಮ್ಮು ಇದ್ದು, ಅವರು ಕೆಮ್ಮು ಬಂದು ಮನೆಯ ಪಕ್ಕದಲ್ಲಿ ಉಗಳಿದರು ಇದನ್ನು ನೋಡಿದ ಮುನಿಯಮ್ಮನ ಮಗನಾದ ಗಂಗಾಧರನು ನಾಗರಾಜು ಎಂಬುವರಿಗೆ ಹೇಳಿ ಇವರು ನಮ್ಮನ್ನು ನೋಡಿ ಸುಮಿತ್ರಮ್ಮ ಉಗುಳಿದರು ಎಂದು ಅವರು ಬೈದುಕೊಳ್ಳುತ್ತಿದ್ದು, ಆಗ ನರಸಿಂಹಪ್ಪನ ಮಗನಾದ ವೆಂಕಟೇಶ ಎಂಬುವರು ಯಾಕಪ್ಪ ನಮ್ಮ ಚಿಕ್ಕಮ್ಮನಿಗೆ ಬೈಯುತ್ತಿರುವುದು ಎಂದು ಕೇಳಿದ್ದಕ್ಕೆ ಮೇಲ್ಕಂಡ ಆರೋಪಿತರು ಕೈಯಲ್ಲಿ ಕಾರದ ಪುಡಿಯನ್ನು, ಮಚ್ಚು, ದೊಣ್ಣೆ, ಮತ್ತು ಕಬ್ಬಿಣದ ಸಾಲಾಕೆಯನ್ನು ಹಿಡಿದುಕೊಂಡು ಬಂದು ವೆಂಕಟೇಶನಿಗೆ ಅವಾಚ್ಯ ಶಬ್ದಗಳಿಂದ ಬೈದು ರೂಪ ಕೈಯಲ್ಲಿದ್ದ ಕಾರದ ಪುಡಿಯನ್ನು ಎರಚಿದಳುಮಚ್ಚಿನಿಂದ ರಮೇಶ ತಲೆಗೆ ಹೊಡೆದು ರಕ್ತಗಾಯಪಡಿಸಿ ನಂತರ ಎಲ್ಲಾರೂ ಕೆಳಗೆ ದಬ್ಬಿ ಕೈಯಲ್ಲಿದ್ದ ದೊಣ್ಣೆ ಮತ್ತು ಮಚ್ಚಿನಿಂದ ಹೊಡೆದು ಕಾಲುಗಳಿಂದ ಒದ್ದು, ಎದೆಗೆ ಮತ್ತು ಹೊಟ್ಟೆಗೆ ಚೆನ್ನಾಗಿ ತುಳಿದಿರುತ್ತಾರೆ. ಇದನ್ನು ನೋಡಿ ಅಲ್ಲೆ ಇದ್ದ ನಾಗರಾಜು ಬಿನ್ ನರಸಪ್ಪ,  ನರಸಿಂಹಪ್ಪ ಬಿನ್ ವೆಂಕಟಶಾಮಪ್ಪ ಇವರು ಬಿಡಿಸಲು ಹೋದರೆ ನರಸಿಂಹಪ್ಪನಿಗೆ ಖಾರದ ಪುಡಿ ಚೆಲ್ಲಿ ನಿನಗೆ ಮುಗಿಸಿ ಬಿಡುವವರೆಗೂ ಬಿಡುವುದಿಲ್ಲ ಎಂದು ಸುರೇಶ ಎಂಬುವರಿಗೆ ಸೇರಿದ KA-40, A-4531 ನೊಂದಣಿ ಸಂಖ್ಯೆಯ ಆಟೋ ವಾಹನದಿಂದ ಮುಖಕ್ಕೆ ಗುದ್ದಿ, ನರಸಿಂಹಪ್ಪನಿಗೆ ಎರಡು ತುಟಿಗಳು ಸೀಳಿ ಹೋಗಿ ರಕ್ತಗಾಯವಾಗಿದ್ದು, 2 ಹಲ್ಲುಗಳು ಮುರಿದು ಹೋಗಿರುತ್ತೆ. ಇದನ್ನು ನೋಡಿ ಸಂಜೀವಮ್ಮ ಕೊಂ ಲೇಟ್ ಅಶ್ವತ್ಥಪ್ಪ ಮತ್ತು ಆಕೆಯ ಮಗನಾದ ಮಧು ರವರು ಬಿಡಿಸಲು ಹೋದರೆ ಅವರಿಗೂ ಸಹ ಹೊಡೆದು ಹಾಯಪಡಿಸಿದ್ದು, ಆಗ ಅಲ್ಲೇ ಇದ್ದ ನಾರಾಯಣಸ್ವಾಮಿ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಅದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

6. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 199/2021, ಕಲಂ. 143, 147, 148, 341, 448, 323, 324, 504, 506 ರೆ/ವಿ 149 ಐಪಿಸಿ:-

    ದಿನಾಂಕ:17/10/2021 ರಂದು ಪಿರ್ಯಾದಿದಾರರಾದ ಶ್ರೀ ಲಕ್ಷ್ಮೀನಾರಾಯಣ ಬಿನ್ ಲೇಟ್ ಗಂಗಾಧರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:17/10/2021 ರಂದು ಮದ್ಯಾಹ್ನ 12-00 ಗಂಟೆಗೆ ತನ್ನ ತಮ್ಮಂದಿರಾದ ನಾಗರಾಜು ಮತ್ತು ರಮೇಶ ಇಬ್ಬರೂ ಚಿಕ್ಕಪ್ಪನಾದ ಗಂಗಪ್ಪ ರವರು ಹೊಸದಾಗಿ ಮನೆ ಕಟ್ಟುತ್ತಿರುವ ಸ್ಥಳಕ್ಕೆ ಹೋಗುತ್ತಿದ್ದರೆ ನಮ್ಮ ಗ್ರಾಮದ ವಾಸಿಯಾದ ನರಸಿಂಹಪ್ಪನ ಮಗನಾದ ವೆಂಕಟೇಶ, ಗಿರೀಶ, ನವತೇಜ ಮತ್ತು ಪದ್ಮಮ್ಮ ರವರು ನಮ್ಮ ತಮ್ಮಂದಿರಿಗೆ ಬೈದುಕೊಂಡು ಇವರ ಮುಖ ನೋಡಿ ಉಗುಳಿದರಂತೆ ಆಗ ಇವರು ಮೇಲ್ಕಂಡವರಿಗೆ ಯಾಕೆ ನಮ್ಮ ಮುಖ ನೋಡಿ ಉಗುಳಿದ್ದು, ಎಂದು ಕೇಳಿದ್ದಕ್ಕೆ ನಮ್ಮ ಮನೆಯವರೆಗೂ ಓಡಿಸಿಕೊಂಡು ಬಂದು ಅವರು ಮನೆಯಲ್ಲಿದ್ದರೆ ಅವರನ್ನು ಹೊರಗೆ ಎಳೆದುಕೊಂಡು ಬಂದು ಅವಾಚ್ಯ ಶಬ್ಗದಳಿಂದ ಬೈದಿರುತ್ತಾರೆ. ಆಗ ನಮ್ಮ ಹೆಂಡತಿ ಮಂಜುಳ ರವರು ಮನೆಯಿಂದ ಹೊರಗೆ ಬಂದು ಕಿರುಚಿಕೊಂಡಿದ್ದು, ಆಗ ಅಲ್ಲೇ ಇದ್ದ ರಮೇಶ ಮತ್ತು ಸುರೇಶ ಬಿಡಿಸಲು ಬಂದಾಗ ಅಲ್ಲೇ ಇದ್ದ ವೆಂಕಟಲಕ್ಷ್ಮಮ್ಮ ಮಂಜುಳ, ಸುಮಿತ್ರಮ್ಮ ವರಲಕ್ಷ್ಮಮ್ಮ ಖಾರದ ಪುಡಿಯನ್ನು ಚೆಲ್ಲಿ ಅವರು ಬಿದ್ದು ಹೋದ ಮೇಲೆ ನರಸಿಂಹಪ್ಪ, ನಾಗರಾಜು, ಕೃಷ್ಣಪ್ಪ ರವರು ಕೈಯಲ್ಲಿ ಮಚ್ಚು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಮಂಜುಳಮ್ಮ, ರಮೇಶ, ನಾಗರಾಜ ಸುರೇಶ, ಮತ್ತು ನಾನು ಹೋದಾಗ ನಾಗೇಶ ಎಂಬುವರು ಮನೆಯ ಮೇಲಿಂದ ದೊಡ್ಡ ತುಂಡನ್ನು ಎತ್ತಿ ರಮೇಶನ ಮೇಲೆ ಹಾಕಿದಾಗ ರಮೇಶನಿಗೆ ಏಟು ಬಿದ್ದು ಕೆಳಗೆ ಬಿದ್ದು, ಹೋಗಿರುತ್ತಾನೆ. ಆಗ ಉಳಿದವರು ಬಂದು ಹಲ್ಲೇ ಮಾಡಿರುತ್ತಾರೆ. ಆಗ ನಾನು ಆಟೋದಲ್ಲಿ ಇವರನ್ನು ಮಂಚೇನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆಟೋವನ್ನು ಅಡ್ಡ ಹಾಕಿ ಇಲ್ಲೇ ಸಾಯಿಸಿ ಬಿಡುತ್ತೇವೆ ಎಂದು ಆಟೋದಿಂದ ಕೆಳಗೆ ಎಳೆದು ಮತ್ತೆ ಹಲ್ಲೇ ಮಾಡಿದ್ದು, ಆಗ 108 ಅಂಬ್ಯೂಲೇನ್ಸ್ ಗೆ ಕರೆ ಮಾಡಿ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಹಲ್ಲೇ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

7. ಪಾತಪಾಳ್ಯ ಪೊಲೀಸ್ ಠಾಣೆ, ಮೊ.ಸಂ. 110/2021, ಕಲಂ. 324, 504, 506 ರೆ/ವಿ 149 ಐಪಿಸಿ:-

    ದಿನಾಂಕ: 17-10-2021 ರಂದು ಹೆಚ್ ಸಿ-66 ರವರು ಸರ್ಕಾರಿ ಆಸ್ಪತ್ರೆ ಬಾಗೇಪಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಿನ ಹೇಳಿಕೆಯನ್ನು ಪಡೆದು ಮಧ್ಯಾಹ್ನ 02-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಹಾಜರು ಪಡಿಸಿದ ಹೇಳಿಕೆಯ ದೂರಿನ ಸಾರಾಂಶವೆನೆಂದರೆ, ಈಗ್ಗೆ ಸುಮಾರು ಮೂರು ದಿನಗಳ ಹಿಂದೆ ತಮ್ಮ ಗ್ರಾಮದಲ್ಲಿ ಜಾತ್ರೆ ಮಾಡುವ ವಿಚಾರವಾಗಿ ಗ್ರಾಮದಲ್ಲಿ ಹಿರಿಯರು ಸೇರಿ ಮಾತುಕತೆ ಮಾಡುತ್ತಿದ್ದಾಗ, ಮಾತಿಗೆ ಮಾತು ಬೆಳೆದು ತಮ್ಮ ಗ್ರಾಮದ ವಾಸಿ ಕದಿರಮ್ಮ ಕೋಂ ಲೇಟ್ ವೆಂಕಟರಾಮಪ್ಪ ರವರು ತಮ್ಮ ತಂದೆ ವೆಂಕಟೇಶಪ್ಪ ರವರನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ, ಈ ವಿಚಾರ ತಿಳಿದ ತಾನು ಆ ದಿನ ಗ್ರಾಮದಲ್ಲಿ ಹೋಗಿ ಕೇಳಿರುವ ವಿಚಾರದಲ್ಲಿ ದಿನಾಂಕ:16-10-2021 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಮೂರ್ತಿ ಬಿನ್ ಲೇಟ್ ವೆಂಕಟರಾಮಪ್ಪರವರು ನ್ಯಾಯ ಪಂಚಾಯ್ತಿ ಮಾಡುವುದಾಗಿ ತನ್ನನ್ನು ಮತ್ತು ತಮ್ಮ ತಂದೆಯನ್ನು ಮುತ್ತುರಾಯನಸ್ವಾಮಿ ದೇವಾಲಯದ ಬಳಿಗೆ ಕರೆಯಿಸಿದ್ದು, ತಾವು ಅಲ್ಲಿಗೆ ಹೋದಾಗ  ಮೂರ್ತಿ ರವರು ಅವರ ಸಂಬಂಧಿಕರನ್ನು ಜಿ.ಚೇರ್ಲೋಪಲ್ಲಿ ಗ್ರಾಮದಿಂದ ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಕರೆಯಿಸಿದ್ದು ತಾವು ಅಲ್ಲಿಗೆ ಹೋದ ತಕ್ಷಣ ತನ್ನನ್ನು ಮತ್ತು ತಮ್ಮ ತಂದೆಯನ್ನು ಮೇಲ್ಕಂಡ ಮೂರ್ತಿ ಹಾಗೂ ಅವರ ಸಂಬಂಧಿಕರು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅಕ್ರಮ ಗುಂಪು ಕಟ್ಟಿಕೊಂಡು ಬಂದು ತಮ್ಮನ್ನು ಹಿಡಿದುಕೊಂಡು ಕಲ್ಲು ಮತ್ತು ಕಟ್ಟಿಗೆಯಿಂದ ತನ್ನ ಮತ್ತು ತಮ್ಮ ತಂದೆಯ ಮೈಕೈ ಮೇಲೆ ಹೋಡೆದು ಮುಗೇಟು ಉಂಟು ಮಾಡಿದ್ದು ಕಲ್ಲಿನಿಂದ ತನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯವನ್ನುಂಟು ಮಾಡಿರುವುದಾಗಿ, ತಮ್ಮ ತಂದೆ 108 ಅಂಬುಲೇನ್ಸನಲ್ಲಿ  ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಮೇಲ್ಕಂಡವರ ತನ್ನನ್ನು ಮತ್ತು ತಮ್ಮ ತಂದೆಯನ್ನು ಹೊಡೆದು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೇದರಿಕೆಯನ್ನು ಹಾಕಿರುವುದಾಗಿ ಮೇಲ್ಕಂಡ ಮೂರ್ತಿ ಮತ್ತು ಅವರ ಸಂಬಂಧಿಕರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 320/2021, ಕಲಂ.(ಮನುಷ್ಯ ಕಾಣೆ) 00MP ಐಪಿಸಿ:-

    ದಿನಾಂಕ:18.10.2021 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶಪ್ಪ ಬಿನ್ ರಾಮಯ್ಯ, 52 ವರ್ಷ, ತಿಗಳ ಜನಾಂಗ, ಕೂಲಿ ಕೆಲಸ, ಜಂಗಮಕೋಟೆ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನಗೆ 3 ಜನ ಮಕ್ಕಳಿದ್ದು 1 ನೇ ಹರೀಶ್, 2 ನೇ ಉಮೇಶ್, 3 ನೇ ಮಂಜುನಾಥ ರವರು ಆಗಿದ್ದು ಯಾರಿಗೂ ಸಹ ಮದುವೆಗಳು ಆಗಿರುವುದಿಲ್ಲ. ಹರೀಶ್ ಮತ್ತು ಉಮೇಶ್ ರವರು ಶಿಡ್ಲಘಟ್ಟ ನಗರದಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು ಮಂಜುನಾಥ ರವರು ಹೊಸಕೋಟೆಯ ಬಳಿ ಮಿಂತ್ರ ಕಂಪನಿಯಲ್ಲಿ ಪ್ರತಿದಿನ ಕೆಲಸಕ್ಕೆ ಹೋಗಿ ವಾಪಸ್ಸು ಮನೆಗೆ ಬರುತ್ತಿದ್ದರು. ದಿನಾಂಕ: 16-10-2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತನ್ನ ಮಗನಾದ ಮಂಜುನಾಥ ರವರು ಮನೆಯಿಂದ ಹೊರಗಡೆ ಹೋಗಿದ್ದು ಅ ಸಮಯದಲ್ಲಿ ಆತನ ಮೊಬೈಲ್ ಪೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾನೆ. ಆತನ ಮೊಬೈಲ್ ನಂಬರ್ಗಳು 1) 8431248835 ಮತ್ತು 8088210898 ಆಗಿರುತ್ತೆ. ಆ ಸಮಯದಲ್ಲಿ ಮನೆಯಲ್ಲಿದ್ದ ತಾನು ಹಾಗೂ ತನ್ನ ಹೆಂಡತಿ ಶ್ರೀಮತಿ ನಂಜಮ್ಮ ರವರು ತನ್ನ ಮಗ ಮಂಜುನಾಥ ರವರು ಗ್ರಾಮದಲ್ಲಿ ಸ್ನೇಹಿತರ ಬಳಿ ಹೋಗಿರುತ್ತನೆಂದು ಸುಮ್ಮನಾಗಿರುತ್ತೇವೆ. ಸಂಜೆ ಎಷ್ಟು ಹೊತ್ತದರೂ ಸಹ ಮನೆಗೆ ವಾಪಸ್ಸು ಬಾರದೇ ಇದ್ದು ತಾನು ತಮ್ಮ ಗ್ರಾಮದಲ್ಲಿ ಆತನ ಸ್ನೇಹಿತರಿಗೆ, ತಮ್ಮ ಸಂಭಂದಿಕರಿಗೆ ಪೋನ್ ಮಾಡಿ ವಿಚಾರ ಮಾಡಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ನಂತರ ತನ್ನ ಮಕ್ಕಳಿಗೆ ವಿಚಾರ ತಿಳಿಸಿದ್ದು ತಾನು ಹಾಗೂ ತನ್ನ ಮಕ್ಕಳು ತನ್ನ ಮಗ ಮಂಜುನಾಥ ರವರನ್ನು ತಮ್ಮ ಗ್ರಾಮ, ತಮ್ಮ ಸಂಭಂಧಿಕರ ಮನೆಗಳು ಹಾಗೂ ಆತನ ಸ್ನೇಹಿತರ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಸಹ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಮಂಜುನಾಥ ರವರನ್ನು ಹಲವಾರು ಕಡೆಗಳಲ್ಲಿ ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾಣೆಯಾದ ಮಂಜುನಾಥ ರವರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 321/2021, ಕಲಂ. 323, 324, 447, 504, 506 ರೆ/ವಿ 34 ಐಪಿಸಿ:-

    ದಿನಾಂಕ:18.10.2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರಾದ ನಾರಾಯಣಸ್ವಾಮಿ ಬಿನ್ ಮುನಿಯಪ್ಪ, 40 ವರ್ಷ, ಗೊಲ್ಲರು, ಕೂಲಿ ಕೆಲಸ, ಕದಿರಿನಾಯಕನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ವಾಸದ ಮನೆಯ ಪಕ್ಕದಲ್ಲಿ ತಮ್ಮ ಗ್ರಾಮದ ಹೌಸ್ ಲಿಸ್ಟ್ ನಂಬರ್ 142/1 ರಲ್ಲಿ 60*45 ಅಡಿಗಳ ಖಾಲಿ ನಿವೇಶನ ತನ್ನ ತಂದೆಯವರಾದ ಮುನಿಯಪ್ಪ ರವರ ಹೆಸರಿನಲ್ಲಿ ಇರುತ್ತದೆ. ಸದರಿ ನಿವೇಶನದ ಬಗ್ಗೆ ನಮಗೂ ಮತ್ತು ತಮ್ಮ ಗ್ರಾಮದ ವಾಸಿ ಮುನಿಯಪ್ಪ ರವರಿಗೂ ತಕರಾರುಗಳು ಇರುತ್ತದೆ. ಹೀಗಿರುವಾಗ ದಿನಾಂಕ 14/10/2021 ರಂದು ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಮಳೆ ಬಂದು ತಮ್ಮ ಮನೆಯ ಬಳಿ ಗಲೀಜು ಆಗಿದ್ದ ಕಾರಣ ತನ್ನ ಹೆಂಡತಿಯಾದ ನಾಗವೇಣಿ ರವರು ತಮ್ಮ ಮನೆಯ ಬಳಿ ಸ್ವಚ್ಚ ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಮುನಿಯಪ್ಪ ಬಿನ್ ದೊಡ್ಡ ವೆಂಕಟೇಶಪ್ಪ, ವೆಂಕಟಲಕ್ಷ್ಮಮ್ಮ ಕೋಂ ಮುನಿಯಪ್ಪ, ಜಗದೀಶ್ ಬಿನ್ ಮುನಿಯಪ್ಪ, ಗಾಯಿತ್ರಿ ಬಿನ್ ಮುನಿಯಪ್ಪ ರವರು ಸದರಿ ಖಾಲಿ ನಿವೇಶನ ತಮಗೆ ಸೇರಿದ್ದು ಎಂದು ತನ್ನ ಹೆಂಡತಿಯ ಮೇಲೆ ಗಲಾಟೆಯನ್ನು ಮಾಡಿ ಕೈಗಳಿಂದ ಮೈ ಮೇಲೆ ಹೊಡೆದು ಕೆಳಗೆ ತಳ್ಳಿ ಬೆನ್ನಿಗೆ ಪರಚಿ ಗಲಾಟೆಯನ್ನು ಮಾಡುತ್ತಿದ್ದಾಗ ಜಗಳವನ್ನು ಬಿಡಿಸಲು ಅಡ್ಡ ಬಂದ ತನ್ನ ತಂದೆ ಮುನಿಯಪ್ಪ ರವರಿಗೂ ಸಹ ಹೊಡೆದು ತನ್ನ ಹೆಂಡತಿಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದು, ಆ ಸಮಯದಲ್ಲಿ ತನ್ನ ಹೆಂಡತಿಯು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ಬಂದೋ ಬಸ್ತ್ ಮಾಡ ಬೇಕಾಗಿ ಹೇಳಿಕೆಯನ್ನು ನೀಡಿರುತ್ತಾಳೆ. ಅದೇ ದಿನ ದಿನಾಂಕ 14/10/2021 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ತನ್ನ ಹೆಂಡತಿಯಾದ ನಾಗವೇಣಿ ರವರು ಆಸ್ಪತ್ರೆಯಿಂದ ಮನೆಯ ಬಳಿ ಬಂದು ತಮ್ಮ ಬಾಬತ್ತು ಖಾಲಿ ನಿವೇಶನದಲ್ಲಿದ್ದಾಗ ಮೇಲ್ಕಂಡ ಮುನಿಯಪ್ಪ ಬಿನ್ ದೊಡ್ಡ ವೆಂಕಟೇಶಪ್ಪ, ವೆಂಕಟಲಕ್ಷ್ಮಮ್ಮ ಕೋಂ ಮುನಿಯಪ್ಪ, ಜಗದೀಶ್ ಬಿನ್ ಮುನಿಯಪ್ಪ, ಗಾಯಿತ್ರಿ ಬಿನ್ ಮುನಿಯಪ್ಪ ರವರು ತಮ್ಮ ಬಾಬತ್ತು ಖಾಲಿ ನಿವೇಶನದಲ್ಲಿ ಅಕ್ರಮ ಪ್ರವೇಶ ಮಾಡಿ, ಸದರಿ ನಿವೇಶನದ ವಿಚಾರದಲ್ಲಿ ಮತ್ತೆ ತನ್ನ ಹೆಂಡತಿಯ ಮೇಲೆ ಗಲಾಟೆಯನ್ನು ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ನೀನು ನಮ್ಮ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ಕೊಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಜಗದೀಶ್ ರವರು ದೊಣ್ಣೆಯಿಂದ ಬಲ ಕಾಲಿಗೆ ಹೊಡೆದಾಗ, ಮುನಿಯಪ್ಪ ರವರು ಕಲ್ಲಿನಿಂದ ತನ್ನ ಹೆಂಡತಿಯ ಬೆನ್ನಿನ ಹಿಂಭಾಗ ಮತ್ತು ಕೈ ಬೆರಳುಗಳಿಗೆ ಹೊಡೆದಿದಾಗ ಗಾಯಿತ್ರಿ ಮತ್ತು ವೆಂಕಟಲಕ್ಷ್ಮಮ್ಮ ರವರು ಕೆಳಗೆ ತಳ್ಳಿ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ತನ್ನ ತಾಯಿ ರತ್ನಮ್ಮ ರವರು ಜಗಳವನ್ನು ಬಿಡಿಸಲು ಅಡ್ಡ ಬಂದಾಗ ಮುನಿಯಪ್ಪ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಎಡ ಕೈಗೆ ಹೊಡೆದು ಊತಗಾಯವನ್ನುಂಟು ಮಾಡಿ, ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ಶಂಕರ ಬಿನ್ ಶ್ರೀನಿವಾಸ್, ವಾಟರ್ ಮೆನ್ ಮುನಿಶಾಮಿ ರವರು ಅಡ್ಡ ಬಂದು ಜಗಳವನ್ನು ಬಿಡಿಸಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ವಿಷಯದ ಬಗ್ಗೆ ತಮ್ಮ ಗ್ರಾಮದ ಹಿರಿಯರು ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಮಾಡೋಣವೆಂದು ತಿಳಿಸಿ ಇದುವರೆವಿಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡವರು ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 322/2021, ಕಲಂ. 379 ಐಪಿಸಿ:-

    ದಿನಾಂಕ:18.10.2021 ರಂದು ಮದ್ಯಾಹ್ನ 3.30 ಗಂಟೆಗೆ ಪಿರ್ಯಾದಿದಾರರಾದ ಭರತ್ ಬಿನ್ ನಾಗರಾಜ ಕೆ.ಬಿ, 28 ವರ್ಷ, ಲಿಂಗಾಯಿತ, ಕಾಮಾಂಡಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ನರಸಾಪುರದ ಲುಮೇಕ್ಸ್ ಕಂಪನಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ನಾನು ನನ್ನ ಉಪಯೋಗಕ್ಕಾಗಿ 2014 ನೇ ಸಾಲಿನಲ್ಲಿ ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನವನ್ನು ಖರೀದಿಸಿ ಉಪಯೋಗಿಸುತ್ತಿರುತ್ತೇನೆ. ಹೀಗಿರುವಲ್ಲಿ ದಿನಾಂಕ:14.10.2021 ರಂದು ಹೆಚ್.ಕ್ರಾಸ್ ನಲ್ಲಿರುವ ಶ್ರೀವೆಂಕಟೇಶ್ವರ ಚಿತ್ರಮಂದಿರದಲ್ಲಿ ಸಲಗ ಚಲನಚಿತ್ರವನ್ನು ನೋಡಿಕೊಂಡು ಬರಲು ರಾತ್ರಿ 8.00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದಿಂದ ಶ್ರೀ ವೆಂಕಟೇಶ್ವರ ಚಿತ್ರಂದಿರದ ಬಳಿಗೆ ನನ್ನ ಬಾಬತ್ತು ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನದಲ್ಲಿ ಹೋಗಿ ಚಿತ್ರಮಂದಿರದ ಮುಂಭಾಗದಲ್ಲಿ ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹವನ್ನು ನಿಲ್ಲಿಸಿ ಚಿತ್ರಮಂದಿರದ ಹೊಳಗಡೆಗೆ ಹೋಗಿ ಚಲನ ಚಿತ್ರವನ್ನು ನೋಡಿಕೊಂಡು ರಾತ್ರಿ 10.20 ಗಂಟೆಗೆ ಚಿತ್ರಮಂದಿರದ ಹೊಳಗಡೆಯಿಂದ ಬಂದು ನೋಡಲಾಗಿ ನನ್ನ ಬಾಬತ್ತು ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನ ಕಾಣಿಸದೇ ಇದ್ದು ನಾನು ಚಿತ್ರ ಮಂದಿರದ ಅಕ್ಕಪಕ್ಕ, ಹೆಚ್.ಕ್ರಾಸ್ ನಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ನಾನು ನನ್ನ ಬಾಬತ್ತು ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹವನ್ನು ಶ್ರೀವೆಂಕಟೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ನಿಲ್ಲಿಸಿ ಚಿತ್ರಮಂದಿರದಲ್ಲಿ ಚಲನ ಚಿತ್ರವನ್ನು ನೋಡಿಕೊಂಡು ಬರುವಷ್ಟರಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಕಳುವಾದ ನನ್ನ ಬಾಬತ್ತು ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನವನ್ನು ಎಲ್ಲಾ ಕಡೆ ಹುಡಿಕಾಡಿದರೂ ಸಹ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ನನ್ನ ಬಾಬತ್ತು ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನದ ಮೌಲ್ಯ 40000 ರೂಗಳಾಗಿರುತ್ತೆ.  ಆದ್ದರಿಂದ ಕಳುವಾಗಿರುವ ನನ್ನ ಬಾಬತ್ತು ಕೆಎ.07.ವಿ.9475 ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನವನ್ನು ಹಾಗೂ ಕಳುವು ಮಾಡಿಕೊಂಡು ಹೋಗಿರುವ ಅಸಾಮಿಗಳನ್ನು ಪತ್ತೆಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 18-10-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080