Feedback / Suggestions

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 141/2021 ಕಲಂ. 279,337,304(A) ಐಪಿಸಿ :-

    ಈ ದಿನ ದಿನಾಂಕ 17/10/2021 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ ಶ್ರೀರಾಮ ಬಿನ್ ಲೇಟ್ ಈರಪ್ಪ, 38ವರ್ಷ, ನಾಯಕರು, ಕೂಲಿ ಕೆಲಸ, ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಈ ದಿನ ದಿನಾಂಕ 17/10/2021 ರಂದು ಬೆಳಿಗ್ಗೆ ತನ್ನ ಭಾವ ಮೈದುನನಾದ ನರಸಿಂಹಪ್ಪ ಬಿನ್ ಲೇಟ್ ಕೃಷ್ಣಪ್ಪ @ ಕಾವಲಿ ವೆಂಕಟರವಣಪ್ಪ, 30 ವರ್ಷ, ನಾಯಕರು, ಗಾರೆಕೆಲಸ, ಮುದ್ದಲಹಳ್ಳಿ ಗ್ರಾಮ ಮತ್ತು ತಮ್ಮ ಗ್ರಾಮದ ವಾಸಿ ನರಸಿಂಹ ಬಿನ್ ಲೇಟ್ ವೆಂಕಟರವಣಪ್ಪ, 34ವರ್ಷ, ನಾಯಕರು, ಗಾರೆಕೆಲಸ, ನಾಯಕರು ರವರು ಕೆಲಸಕ್ಕೆ ಹೋಗಲು ನರಸಿಂಹ ಬಿನ್ ಲೇಟ್ ವೆಂಕಟರವಣಪ್ಪ ರವರ ಬಾಬತ್ತು ನಂ ಕೆಎ 02 ಹೆಚ್ ಪಿ 3972 ದ್ವಿಚಕ್ರ ವಾಹನದಲ್ಲಿ ಹೋಗಿದ್ದು ಅವರು ಹೋಗಿದ ಸ್ವಲ್ಪ ಸಮಯಕ್ಕೆ ತಮ್ಮ ಗ್ರಾಮದ ವಾಸಿಯಾದ ಕೇಶವರೆಡ್ಡಿ ರವರು ತನಗೆ ಪೋನ್ ಮಾಡಿ ಮುದ್ದಲಹಳ್ಳಿ ದಿಗವಪಲ್ಲಿ ಗ್ರಾಮಗಳ ಮಾರ್ಗ ಮಧ್ಯದಲ್ಲಿ ವೆಂಕಟಸ್ವಾಮಿ ರವರ ಜಮೀನಿನ ಬಳಿ ನರಸಿಂಹಪ್ಪ ಮತ್ತು ನರಸಿಂಹ ರವರಿಗೆ ಅಪಘಾತವಾಗಿರುವುದಾಗಿ ವಿಚಾರ ತಿಳಿಸಿದ್ದರ ಮೇರೆಗೆ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಭಾವಮೈದುನ ನರಸಿಂಹಪ್ಪ ಬಿನ್ ಲೇಟ್ ಕೃಷ್ಣಪ್ಪ @ ಕಾವಲಿ ವೆಂಕಟರವಣಪ್ಪ ರವರಿಗೆ ತಲೆಗೆ, ಬಲ ಕಾಲಿಗೆ, ಮುಖಕ್ಕೆ ಗಾಯಗಳಾಗಿದ್ದು ನರಸಿಂಹ ಬಿನ್ ವೆಂಕಟರವಣಪ್ಪ ರವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ನಂತರ ವಿಚಾರವನ್ನು ತಿಳಿಯಲಾಗಿ ತನ್ನ ಭಾವಮೈದುನ ನರಸಿಂಹಪ್ಪ ಬಿನ್ ಲೇಟ್ ಕೃಷ್ಣಪ್ಪ @ ಕಾವಲಿ ವೆಂಕಟರವಣಪ್ಪ ಮತ್ತು ನರಸಿಂಹ ಬಿನ್ ಲೇಟ್ ವೆಂಕಟರವಣಪ್ಪ ರವರು ಬೆಳಿಗ್ಗೆ 7-45 ಗಂಟೆ ಸಮಯದಲ್ಲಿ ಪೆದ್ದೂರು ಕಡೆಗೆ ಹೋಗಲು ಹೋಗುತ್ತಿದ್ದಾಗ ದ್ವಿಚಕ್ರ ವಾಹನವನ್ನು ಚಾಲನೆಮಾಡುತ್ತಿದ್ದ ನರಸಿಂಹ ಬಿನ್ ಲೇಟ್ ವೆಂಕಟರವಣಪ್ಪ ರವರು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿ ರಸ್ತೆಯ ಬದಿಯಲ್ಲಿದ್ದ ಕಲ್ಲಿಗೆ ಡಿಕ್ಕಿಹೊಡೆಯಿಸಿ ಅಪಘಾತವನ್ನು ಉಂಟುಮಾಡಿದ್ದರಿಂದ ನರಸಿಂಹಪ್ಪ ಬಿನ್ ಕೃಷ್ಣಪ್ಪ @ ಕಾವಲಿ ವೆಂಕಟರವಣಪ್ಪ ರವರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ವಿಚಾರ ತಿಳಿಯಿತು ಅಪಘಾತಕ್ಕೀಡಾಗಿದ್ದ ನಂ ಕೆಎ 02 ಹೆಚ್.ಪಿ 3972 ಪ್ಯಾಷನ್ ಪ್ರೋ ದ್ವಿಚಕ್ರ ವಾಹನವು ಸ್ಥಳದಲ್ಲಿಯೇ ಬಿದ್ದಿದ್ದು ನಂತರ ಗಾಯಗೊಂಡಿದ್ದ ತಮ್ಮ ಭಾವಮೈದುನ ನರಸಿಂಹಪ್ಪ ಬಿನ್ ಲೇಟ್ ಕೃಷ್ಣಪ್ಪ @ ಕಾವಲಿ ವೆಂಕಟರವಣಪ್ಪ ರವರನ್ನು ಚಿಕಿತ್ಸೆಗಾಗಿ ತಮ್ಮ ಸಂಬಂಧಿಯ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಸುಗಟೂರು ಗ್ರಾಮದ ಬಳಿ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನರಸಿಂಹಪ್ಪ ಬಿನ್ ಕೃಷ್ಣಪ್ಪ @ ಕಾವಲಿ ವೆಂಕಟರವಣಪ್ಪ ರವರು ಅವರಿಗೆ ಅಪಘಾತದಲ್ಲಿ ಉಂಟಾಗಿದ್ದ ಗಾಯಗಳಿಂದ ಮೃತಪಟ್ಟಿದ್ದು ಮೃತ ದೇಹವನ್ನು ವಾಪಸ್ ತೆಗೆದುಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುತ್ತೆ. ಮೇಲ್ಕಂಡಂತೆ ಅಪಘಾತವನ್ನು ಉಂಟುಮಾಡಿದ ದ್ವಿಚಕ್ರ ವಾಹನ ಸವಾರ ಮತ್ತು ದ್ವಿಚಕ್ರ ವಾಹನದ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ. 98/2021 ಕಲಂ. 323,324,504,506 ರೆ/ವಿ 34 ಐಪಿಸಿ :-

    ದಿನಾಂಕ 16/10/2021 ರಂದು ಹೆಚ್ ಸಿ, 180 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಕೃಷ್ಣಪ್ಪ ಬಿನ್ ಲೇಟ್ ರಾಮಪ್ಪ, 42 ವರ್ಷ, ನಾಯಕ ಜನಾಂಗ, ಟೈಲರ್ ಕೆಲಸ, ಬುರುಡಗುಂಟೆ  ಗ್ರಾಮ, ಚಿಂತಾಮಣಿ ತಾಲ್ಲೂಕು, ರವರಿಂದ ಹೇಳಿಕೆಯನ್ನು  ಪಡೆದುಕೊಂಡು ಬಂದು  ಠಾಣೆಯಲ್ಲಿ  ಹಾಜರುಪಡಿಸಿದ್ದರ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 15/10/2021 ರಂದು ನಾನು ಕೆಲಸದ ನಿಮಿತ್ತ ಚೇಳೂರು ಗ್ರಾಮಕ್ಕ ಬಂದಿದ್ದು ರಾತ್ರಿ ನನ್ನ ಅಣ್ಣನ ಮಗನಾದ ರಾಮುರವರ ಮನೆಗೆ ಹೋಗಿದ್ದ, ನಾನು ನರಸಿಂಹನಿಗೆ ಪೋನ್ ಮಾಡಿದಾಗ ಪೋನ್ ಕಟ್ ಮಾಡಿರುತ್ತಾನೆ. ನಾನು ಏಕೆ ಪೋನ್ ಕಟ್ ಮಾಡಿದಿಯಾ ನನ್ನ ಮಗನೆ ಎಂದು ಅವರ ಬಳಿ ಹೋಗಿ ಕೇಳಲಾಗಿ ಬಾಯಿ ಮಾತಿನ ಜಗಳ ನಡೆಯಿತು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ನನ್ನ ಬಲಗೈಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಅಲ್ಲಿಗೆ ಬಂದ ನನ್ನ ಅಣ್ಣನ  ಮಗನಾದ ರಾಮನಿಗೆ ಕೈಗಳಿಂದ ಹೊಡೆದಿರುತ್ತಾನೆ ನನ್ನ ಮಗನೆ ನಿನ್ನನ್ನು ಸಾಯಿಸಿಬಿಡುತ್ತೇನೆ ಅಂತಾ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಶ್ರೀದೇವಿ ಕೈಗಳಿಂದ ಹೊಡೆದಿರುತ್ತಾಳೆ . ಈ ಘಟನೆ ನಡೆದಾಗ ರಾತ್ರಿ ಸುಮಾರು 8-30 ಗಂಟೆಯಾಗಿರುತ್ತದೆ. ನನಗೆ ಮತ್ತು ರಾಮುನಿಗೆ ಕೈ ನೋವು ಜಾಸ್ತಿಯಾಗಿದ್ದರಿಂದ  ಯಾವುದೋ ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಆದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ ಸೂಕ್ತ  ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ. 99/2021 ಕಲಂ. 323,324,504,506 ರೆ/ವಿ 34 ಐಪಿಸಿ :-

    ದಿನಾಂಕ 16/10/2021 ರಂದು ಹೆಚ್ ಸಿ, 180 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶ್ರೀಮತಿ ಶ್ರೀದೇವಿ ಕೊಂ ನರಸಿಂಹಪ್ಪ, 30ವರ್ಷ, ನಾಯಕ ಜನಾಂಗ, ಕೂಲಿ ಕೆಲಸ ಗೆರಿಗಿರೆಡ್ಡಿ ಪಾಳ್ಯ ಚೇಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು, ರವರಿಂದ ಹೇಳಿಕೆಯನ್ನು  ಪಡೆದುಕೊಂಡು ಬಂದು  ಠಾಣೆಯಲ್ಲಿ  ಹಾಜರುಪಡಿಸಿದ್ದರ ಹೇಳಿಕೆಯ ಸಾರಾಂಶವೇನೆಂದರೆ, ಗಾಯಾಳವು ಮೇಲ್ಕಂಡ ವಿಳಾಸದಲ್ಲಿ ಕೂಲಿಕೆಲಸದಿಂದ ಜೀವನ ಮಾಡಿಕೊಂಡು ವಾಸವಾಗಿದ್ದು, ತಮಗೂ ಮತ್ತು ತಮ್ಮ ಮನೆಯ ಪಕ್ಕದ ಸಂಬಂದಿಗಳಿಗೂ ಹಳೆಯ ವೈಶಮ್ಯವಿದ್ದು ಆಗಾಗ್ಗೆ ಬಾಯಿ ಮಾತಿನ  ಜಗಳಗಳು ನಡೆಯುತ್ತಿರುತ್ತದೆ,  ದಿನಾಂಕ: 15/10/2021 ರಂದು ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿ ಇದ್ದಾಗ ನಮ್ಮ ಮಾವನಾದ ಕೃಷ್ಣಪ್ಪ ಪೋನ್ ಮಾಡಿದರು ನಾನು ಪೋನ್ ಎತ್ತಲಿಲ್ಲ  ನಂತರ   ನಮ್ಮ ಮನೆಯ ಬಳಿ ಬಂದು ಆವಾಚ್ಯ ಶಬ್ದಗಳಿಂದ ಬೈದು ನನ್ನ ಗಂಡನಿಗೆ ಹೊಡೆಯುತ್ತಿದ್ದನು, ರಾಮು ಎಂಬುವವನು  ಇಟ್ಟಿಗೆಯಿಂದ ನನ್ನ ಎಡಗೈಗೆ ಹೊಡೆದು ರಕ್ತ ಗಾಯ ಪಡೆಸಿದನು ಮತ್ತು ಈ ನನ್ನ ಮಕ್ಕಳನ್ನು ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೇದರಿಕೆ ಹಾಕಿದನು ಮತ್ತು ಭಾಗ್ಯಮ್ಮ ನನ್ನ ಕೂದಲು ಹಿಡಿದು ಏಳೆದಾಡಿರುತ್ತಾಳೆ ,ಯರ್ರಪ್ಪ ಮತ್ತು ಅಂಜಿನಮ್ಮ ರವರು ಜಗಳವನನ್ನು ನೋಡಿರುತ್ತಾರೆ , ನಂತರ ನನಗೆ ಕೈ ನೋವು ಜಾಸ್ತಿಯಾಗಿರುವುದರಿಂದ 108 ಅಂಬುಲೇನ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ, ಆದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ ಸೂಕ್ತ   ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ.

 

4. ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಮೊ.ಸಂ. 42/2021 ಕಲಂ. 419,420 ಐಪಿಸಿ & ಸೆಕ್ಷನ್ 66(ಡಿ) INFORMATION TECHNOLOGY ACT 2008 :-

    ದಿನಾಂಕ:17/10/2021 ರಂಧು ಪಿರ್ಯಾಧಿ ಶ್ರೀ ಫವನ್ ಕಲ್ಯಾಣ್ ಡಿ ಬಿನ್ ದೇವರಾಜ್ ನಾಯಕ,22 ವರ್ಷ, ನಾಯಕರು, ವ್ಯಾಸಂಗ, ವಾಸ ಲಾಲ್ ಬಹುದ್ದೂರ್ ಶಾಸ್ತ್ರೀ ರೋಡ್, ಕುವೆಂಪು ನಗರ, ಕರೇಕಲ್ಲಹಳ್ಳಿ, ಗೌರೀಬಿದನೂರು ಟೌನ್. ಮೊ ಸಂಖ್ಯೆ:9606468403 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದೆರೆ ತಾನು ಮೇಲ್ಕಂಡ ವಿಳಾಸದಲ್ಲಿ  ಪೋಷಕರೊಂದಿಗೆ ವಾಸವಿದ್ದು, ಕುಡುಮಲಕುಂಟೆಯ ಪಾಲಿಟೆಕ್ನಿಕ್ ನಲ್ಲಿ ಅಂತಿಮ ವರ್ಷದ ಡಿಪ್ಲಮೋ ವ್ಯಾಸಂಗವನ್ನು ಮಾಡುತ್ತಿರುತ್ತೇನೆ.ನಾನು ಗೌರೀಬಿದನೂರು ಪಟ್ಟಣದಲ್ಲಿನ ಕೆನರಾ ಬ್ಯಾಂಕ್ ಹಿರೇಬಿದನೂರು ಶಾಖೆಯಲ್ಲಿ ಅಕೌಂಟ್ ನಂ:4449108000686 ಮತ್ತು ಗೌರೀಬಿದನೂರು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಅಕೌಂಟ್ ನಂ:-2692500102005101. ರಂತೆ ಉಳಿತಾಯ ಖಾತೆಗಳನ್ನು ಹೊಂದಿರುತ್ತೆನೆ.ಸದರಿ ಖಾತೆಗಳ ಫೈಕಿ ಕೆನರಾ ಬ್ಯಾಂಕ್ ಖಾತೆಗೆ ನನ್ನ ಮೇಲ್ಕಂಡ ಮೊಬೈಲ್ ನಂಬರ್ ನ್ನು ಲಿಂಕ್ ಮಾಡಿಕೊಂಡು ಗೂಗಲ್ ಫೇ ವ್ಯಾಲೆಟ್ ನ್ನು ಇನ್ಸಟಾಲ್ ಮಾಡಿಕೊಂಡು ಇದರಲ್ಲಿ ನನ್ನ ಹಣಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ ದಿನಾಂಕ:24/9/2021 ರಂದು ನಾನು ನಮ್ಮ ಮನೆಯಲ್ಲಿ ಇದ್ದಾಗ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು, ಸದರಿ ಸಂದೇಶದಲ್ಲಿ ನಿಮಗೆ ಕೆವಿಸಿ ವಿನ್ನರ್ 25,00000/- ಅಂತ ಇತ್ತು. ನಂತರ ಸ್ವಲ್ಪ ಸಮಯಕ್ಕೆ ಮೊ ಸಂಕ್ಯೆ: 9589980436 ರಿಂದ ನನ್ನ ಮೊಬೈಲ್ ಸಂಖ್ಯೆಗೆ  ಅದೇ ದಿನ ಕರೆ ಮಾಡಿ ನಿಮ್ಮ ಪೋನ್ ನಂಬರ್ (ಕೌನ್ ಬನೇಗಾ ಕೊರೋಡ್ ಪತಿ) ಕೆ ಬಿ ಸಿ ಕಂಪನಿಯಲ್ಲಿ ಸೆಲೆಕ್ಟ್ ಆಗಿದೆ. ನೀವು 25 ಲಕ್ಷಗಳು ವಿನ್ ಆಗಿದ್ದೀರಿ ಅಂತ  ಹಿಂದಿ ಭಾಷೆಯಲ್ಲಿ ತಿಳಿಸಿದರು.ಇದನ್ನು ಪಡೆಯಲು ಮೊದಲು FEDERAL TAX  15,200/- ರೂಗಳನ್ನು ಕಟ್ಟಬೇಕು ಅಂತ ತಿಳಿಸಿದರು,  ನಾನು ನಿಜ ಇರಬಹೆದೆಂತ ನಂಬಿ ನಗದನ್ನು ತೆಗೆದುಕೊಂಡು ಹೋಗಿ ಎಸ್ ಬಿ ಐ ಬ್ಯಾಂಕ್ ನಲ್ಲಿನ ಹಣ ವರ್ಗಾವಣೆ ಮಾಡುವವರ ಬಳಿ ಮತ್ತು ಮನುಕುಮಾರ್ ಎಂಬುವರ  SRV ENTERPRICESS ರವರ ಮೂಲಕ (ಕೌನ್ ಬನೇಗಾ ಬನೇಗಾ ಕರೋಡ್ ಪತಿ)  KBC COMPANI  ಯವರು ಕಳುಹಿದ್ದ ಎಸ್ ಬಿ ಐ ಅಕೌಂಟ್ ನಂಬರ್:39880432288 ಖಾತೆಗೆ ದಿನಾಂಕ:24/9/2021 ರಂದು  3000+12000 ಒಟ್ಟು  15,000/- ರೂಗಳನ್ನು & ದಿನಾಂಕ:27/9/2021 ರಂದು ನಿಮ್ಮ ಅಕೌಂಟ್ ಲಿಮಿಟೇಶನ್ ಜಾಸ್ತಿ ಮಾಡಿಸಲು ಅಂತ 40,000/- ರೂಗಳನ್ನು  ಈ ಖಾತೆಗೆ ಒಟ್ಟು 55,000/- ರೂಗಳನ್ನು ಜಮೇ ಮಾಡಿದೆ. ಅದೇ ರೀತಿ ವಿವಿದ ತೆರಿಗೆಗಳಿಗೆ ಅಂತ    KBC COMPANI (ಕೌನ್ ಬನೇಗಾ ಕೊರೋಡ್ ಪತಿ) ಯವರು ನನ್ನ ಬಳಿ ಎಸ್ ಬಿ ಐ ಅಕೌಂಟ್ ನಂಬರ್ :38958210928 ಖಾತೆಗೆ 65,000/- ರೂಗಳನ್ನು ಮತ್ತು ಎಸ್ ಬಿ ಐ ಅಕೌಂಟ್  ನಂ:33398595487 ಖಾತೆಗೆ ದಿನಾಂಕ:27/9/2021 ರಂದು 35,000/- ರೂಗಳನ್ನು , ಎಸ್ ಬಿ ಐ ಅಕೌಂಟ್  ನಂ:11701265846 ಖಾತೆಗೆ ದಿನಾಂಕ:30/9/2021 ರಂದು 90,000/- ರೂಗಳನ್ನು, ಎಸ್ ಬಿ ಐ ಅಕೌಂಟ್ ನಂ:39051210443 ಖಾತೆಗೆ 2,00,000/- ರೂಗಳನ್ನು , ದಿನಾಂಕ;29/9/2021 ರಿಂದ 30/9/2021 ವರಿಗೆ ಎಸ್ ಬಿ ಐ ಅಕೌಂಟ್ ನಂ:33868497385 ಖಾತೆಗೆ 4,49,000/-ರೂಗಳನ್ನು, ಎಸ್ ಬಿ ಐ ಅಕೌಂಟ್ ನಂ:40374326439 ಖಾತೆಗೆ 2,00,000/- ರೂಗಳನ್ನು  ಮತ್ತು ದಿನಾಂಕ:5/10/2021 ರಂದು ಕೆನರಾ ಬ್ಯಾಂಕ್ ಖಾತೆ ನಂ:110008326360 ಖಾತೆಗೆ 50,000/- ರೂಗಳನ್ನು ನೇರವಾಗಿ ಮೇಲ್ಕಂಡ ಕಂಪನಿಯವರು ನೀಡಿದ್ದ  ಬ್ಯಾಂಕ್ ಖಾತೆಗೆಳಿಗೆ ಒಟ್ಟು 11,44,000/- ರೂಗಳನ್ನು   ಹಾಗೂ ನೆಟ್ ಬ್ಯಾಂಕಿಂಗ್ ಮತ್ತು ಗೂಗಲ್ ಫೇ & ನೆಟ್ ಬ್ಯಾಂಕಿಂಗ್ ಮೂಲಕ ಮೇಲ್ಕಂಡ ಮನಕುಮಾರ್ ರಿಂದ ದಿನಾಂಕ: 25/9/2021 ರಿಂದ 05/10/2021 ವರಿಗೆ  ವಿವಿಧ ಟ್ಯಾಕ್ಸ್ ಗಳಿಗೆ ಅಂತ ಮೇಲ್ಕಂಡ ಕಂಪನಿಯವರು ಕಳುಹಿಸಿದ್ದ  ಗೂಗಲ್ ಫೇ  ಅಕೌಂಟ್ ನಂ:9162047224 ಖಾತೆಗೆ 2,30,000/- ರೂಗಳನ್ನು ಮತ್ತು  ದಿನಾಂಕ:26/9/2021 ರಂದು ಅಕೌಂಟ್ ನಂ:9163646216 ಖಾತೆಗೆ 90,000/- ರೂಗಳನ್ನು ,ದಿನಾಂಕ:27/9/2021 ರಂಧು 918448679822 ಖಾತೆಗೆ 80,000/- ರೂಗಳನ್ನು , 918409367752 ಖಾತೆಗೆ 81,000/- ರೂಗಳನ್ನು, 9708791248 ಖಾತೆಗೆ 80,000/- ರೂಗಳನ್ನು 917836058109 ಖಾತೆಗೆ 15,000/- ರೂಗಳನ್ನು ಹಾಗೂ ಗೂಗಲ್ ಫೇ ಅಕೌಂಟ್ ನಂ:918002297487 ಖಾತೆಗೆ 25,000/- ರೂಗಳು ಒಟ್ಟು 6,01000/- ರೂಗಳನ್ನು ನೆಟ್ ಬ್ಯಾಂಕಿಂಗ್ & ಗೂಗಲ್ ಫೇ ಮೂಲಕ ಮೇಲ್ಕಂಡ KBC COMPANI  (ಕೌನ್ ಬನೇಗಾ ಕೊರೋಡ್ ಪತಿ) ಹೆಸರಿನ ಕಂಪನಿಯವರ ಮೇಲ್ಕಂಡ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ  ಒಟ್ಟು- 17,45,000/-  ರೂಗಳನ್ನು ಪಡೆದು ಕೊಂಡಿರುತ್ತಾನೆ. ಆದರೆ ಪುನಃ ಅವನು ಕರೆ ಮಾಡಿ ಎಸ್ ಬಿ ಐ ಅಕೌಂಟ್ ನಂ-40487169555 ನ್ನು ಕಳುಹಿಸಿ 2,62,000/- ರೂಗಳನ್ನು ಕಳುಹಿಸಿದರೆ ನಿಮ್ಮ ವಿನಿಂಗ್ ಹಣ ಪೂರ್ತಿ ಬರುವುದಾಗಿ ತಿಳಿಸಿ ವ್ಯಾಟ್ಸಾಪ್ ಮೂಲಕ ಕಳುಹಿಸಿರುತ್ತಾನೆ. ಸದರಿ ಕೆಬಿಸಿ (ಕೌನ್ ಬನೇಗಾ ಕೊಟೋಡ್ ಪತಿ) ಕಂಪನಿಯಲ್ಲಿ ನೀವು  ಸೆಲೆಕ್ಟ್ ಆಗಿದ್ದು, ನೀವು 25 ಲಕ್ಷಗಳು ವಿನ್ ಆಗಿದ್ದೀರಿ ಅಂತ  ಹಿಂದಿ ಭಾಷೆಯಲ್ಲಿ ತಿಳಿಸಿ ವಿವಿದ ತೆರಿಗೆಗಳಿಗೆ ಅಂತ ಮೇಲ್ಕಂಡ ಹಣವನ್ನು ಜಮೇ ಮಾಡಿಸಿ ಕೊಂಡು  ವಿನ್ ಆಗಿರುವ ಹಣ 25 ಲಕ್ಷ ರೂಗಳನ್ನು ನೀಡದೆ ಮತ್ತು ನಮ್ಮ ಹಣವನ್ನು ವಾಪಸ್ಸು ನೀಡದೆ ವಂಚಿಸಿರುವ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿಕೊಡಲು ಕೋರಿ ನೀಡಿದ ದೂರು.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 452/2021 ಕಲಂ. 143,144,147,148,323,324,307, 354,354(B),504 ರೆ/ವಿ 149 ಐಪಿಸಿ :-

    ದಿನಾಂಕ: 16/10/2021 ರಂದು ಸಂಜೆ 4.00 ಗಂಟೆಗೆ ಶ್ರೀಮತಿ ಯಶೋದಮ್ಮ ಕೊಂ ನಾರಾಯಣಸ್ವಾಮಿ, 48 ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡ ನಾರಾಯಣಸ್ವಾಮಿ ರವರು ಆಟೋವನ್ನು ಬಾಡಿಗೆಗೆ ಚಾಲನೆ ಮಾಡಿಕೊಂಡು ಜೀವನ ಮಾಡುತ್ತಿರುತ್ತಾನೆ. ತಮಗೂ ಮತ್ತು ತಮ್ಮ ಪಕ್ಕದ ಮನೆಯ ವಾಸಿಯಾದ ವೆಂಕಟೇಶ್ ಮತ್ತು ಅವರ ಕುಟುಂಬದವರಿಗೂ ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಹಲವಾರು ಬಾರಿ ಗಲಾಟೆಗಳು ಆಗಿರುತ್ತೆ. ದಿನಾಂಕ: 15/10/2021 ರಂದು ಮದ್ಯಾಹ್ನ 15-00 ಗಂಟೆಯಲ್ಲಿ ತನ್ನ ಗಂಡ ಆಟೋವನ್ನು ಬಾಡಿಗೆಗೆ ಹಾಕಿಕೊಂಡು ಹೋದನು. ನಂತರ ಅದೇ ದಿನ ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ತನ್ನ ಗಂಡ ಆಟೋದಲ್ಲಿ ಮನೆಗೆ ವಾಪಸ್ಸು ಬರಲು ತಮ್ಮ ಮನೆಯ ಪಕ್ಕದಲ್ಲಿರುವ ಸಿಮೆಂಟ್ ರಸ್ತೆಯಲ್ಲಿ ಆಟೋ ಚಾಲನೆ ಮಾಡಿಕೊಂಡು ಬಂದಾಗ ತಮ್ಮ ಪಕ್ಕದ ಮನೆಯ ವಾಸಿ ವೆಂಕಟೇಶಪ್ಪ ಬಿನ್ ವೆಂಕಟರಾಮಪ್ಪ ರವರು ಆಟೋ ಮುಂದಕ್ಕೆ ಬರದಂತೆ ರಸ್ತೆಗೆ ಅಡ್ಡವಾಗಿ ಕಲ್ಲನ್ನು ಹಾಕಿದ್ದು, ಅದನ್ನು ಕಂಡ ತನ್ನ ಗಂಡ ವೆಂಕಟೇಶಪ್ಪ ರವರನ್ನು ಕುರಿತು ಯಾಕೆ ರಸ್ತೆಗೆ ಅಡ್ಡವಾಗಿ ಕಲ್ಲನ್ನು ಹಾಕಿರುವುದು ನಾನು ಹೇಗೆ ಆಟೋದಲ್ಲಿ ಬರುವುದು ಎಂದು ಕೇಳಿದ್ದಕ್ಕೆ ಅಲ್ಲಿಯೇ ಇದ್ದ ನವೀನ್ ಬಿನ್ ನರಸಿಂಹಪ್ಪ, 25 ವರ್ಷ, ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ, 35 ವರ್ಷ, ವೆಂಕಟೇಶ್ ಬಿನ್ ವೆಂಕಟರಾಯಪ್ಪ, 45 ವರ್ಷ, ಪವನ್ ಬಿನ್ ವೆಂಕಟೇಶ್, 22 ವರ್ಷ, ವೆಂಕಟೇಶ್ ವಿ ಬಿನ್ ಮುನಿಶಾಮಪ್ಪ, 54 ವರ್ಷ, ರೋಜಾ ಕೋಂ ನಾರಾಯಣಸ್ವಾಮಿ, 25 ವರ್ಷ, ಶ್ವೇತ ಕೊಂ ನವೀನ್ 23 ವರ್ಷ ರವರುಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಕೈಗಳಲ್ಲಿ ಮಚ್ಚು ಮತ್ತು ರಾಡ್ ನ್ನು ಹಿಡಿದುಕೊಂಡು ಬಂದು ಆ ಪೈಕಿ ವೆಂಕಟೇಶ್ ರವರು ಬೋಳಿ ಮಗನೇ ನೀನು ಯಾರೋ ಕೇಳುವುದಕ್ಕೆ ರಸ್ತೆ ನಿಮ್ಮಪ್ಪನದಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮೈಮೇಲೆ ಹೊಡೆದನು. ತಾನು ಅಡ್ಡ ಬಂದಿದ್ದಕ್ಕೆ ವೆಂಕಟೇಶ್ ತನ್ನ ಸೀರೆಯನ್ನು ಹಿಡಿದು ಎಳೆದಾಡಿ ತನ್ನನ್ನು ಕೆಳಗೆ ಬೀಳಿಸಿದಾಗ ತನ್ನ ಗಂಡ ಬಿಡಿಸಲು ಅಡ್ಡ ಬಂದಾಗ ನವೀನ್ ರವರು ತನ್ನ ಗಂಡನನ್ನು ಕುರಿತು ನನ್ನ ಮಗನೇ ನಿನ್ನದು  ಜಾಸ್ತಿಯಾಯಿತು ಈ ದಿನ ನಿನ್ನನ್ನು ಮುಗಿಸುತೇನೆಂದು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ತನ್ನ ಗಂಡನ ಎಡ ಭುಜದ ಮೇಲೆ ಹೊಡೆದು ರಕ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದನು, ನವೀನ ಅದೇ ಮಚ್ಚಿನಿಂದ ತನ್ನ ಎಡ ಕೈಗೆ ಹೊಡೆದು ರಕ್ತಗಾಪಡಿಸಿರುತ್ತಾನೆ. ಅಲ್ಲಿಯೇ ಇದ್ದ ನಾರಾಯಣಸ್ವಾಮಿ ರವರು  ಕೊಲೆ ಮಾಡುವ ಉದ್ದೇಶದಿಂದ ರಾಡ್ ನಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ ಕೊಲೆಮಾಡಲು ಪ್ರಯತ್ನಿಸಿರುತ್ತಾನೆ. ವೆಂಕಟೇಶ್ ವಿ ರವರು ಕಾಲುಗಳಿಂದ ತನ್ನ ಮೈಮೇಲೆ ಒದ್ದಿರುತ್ತಾನೆ. ಪವನ್ ಬಿನ್ ವೆಂಕಟೇಶ್, ರೋಜಾ ಕೊಂ ನಾರಾಯಣಸ್ವಾಮಿ, ಶ್ವೇತ ಕೊಂ ನವೀನ್ ರವರುಗಳು ತನ್ನ ಗಂಡನ ಮೈಮೇಲೆ ಕೈಗಳಿಂದ ಹೊಡೆದು ರಸ್ತೆಯ ಮೇಲೆ ತಳ್ಳಿ ಕಾಲುಗಳಿಂದ ಒದ್ದು ನೋವುಂಟುಮಾಡಿರುತ್ತಾರೆ. ಹಾಗೂ ಪವನ್, ರೋಜಾ ಮತ್ತು ಶ್ವೆತ ರವರುಗಳು ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ ರಸ್ತೆಯ ಮೇಲೆ ಬೀಳಿಸಿ ಕಾಲುಗಳಿಂದ ಒದ್ದು ಮೂಗೇಟುಂಟು ಮಾಡಿ ಈ ದಿನ ನಿಮ್ಮಿಬ್ಬರನ್ನು ಮುಗಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿದಾಗ ತಾನು ಮತ್ತು ತನ್ನ ಗಂಡ ನೋವಿನಿಂದ ಜೋರಾಗಿ ಕಿರುಚಿಕೊಂಡಾಗ ತನ್ನ ಮಗಳು ಸುಶ್ಮಿತಾ, ತನ್ನ ಅಳಿಯ ಮಣಿಕುಮಾರ್, ತಮ್ಮ ಗ್ರಾಮದ ಶಂಕರಪ್ಪ ಬಿನ್ ಲೆಟ್ ಕದಿರಪ್ಪ, ಜಯಂತ್ ಬಿನ್ ಶಂಕರಪ್ಪ ರವರುಗಳು ಬಂದು ತಮ್ಮನ್ನು ಮೇಲ್ಕಂಡವರಿಂದ ಪಾರು ಮಾಡಿ ಯಾವುದೋ ಟಾಟಾ ಎಸಿಇ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಟಮಕ ಬಳಿಯಿರುವ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ತನ್ನ ಗಂಡ ಚಿಕಿತ್ಸೆ ಪಡೆಯುತ್ತಿರುತ್ತಾನೆ. ತಾನು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಈ ದಿನ ತಾನು ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 453/2021 ಕಲಂ. 143,147,148,323,324,307,427,504,506 ರೆ/ವಿ 149 ಐಪಿಸಿ :-

    ದಿನಾಂಕ: 16/10/2021 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನವೀನ್ ಬಿನ್ ನರಸಿಂಹಪ್ಪ, 30 ವರ್ಷ, ಕೂಲಿಕೆಲಸ, ಆದಿ ಕರ್ನಾಟಕ ಜನಾಂಗ, ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 5.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮಗೂ ಮತ್ತು ತಮ್ಮ ಜನಾಂಗದ ನಾರಾಯಣಸ್ವಾಮಿ ಬಿನ್ ಕದಿರಪ್ಪ ರವರಿಗೂ ಹಳೆಯ ವೈಷಮ್ಯದಿಂದ ಆಗಾಗ್ಗೆ ಜಗಳ ಮಾಡುತ್ತಿರುತ್ತಾರೆ. ಹೀಗಿರುವಾಗ ನಿನ್ನೆ ದಿನ ದಿನಾಂಕ: 15/10/2021 ರಂದು ಸಂಜೆ 5.30 ಗಂಟೆ ಸಮಯದಲ್ಲಿ ತನ್ನ ತಾಯಿ ನರಸಮ್ಮ, 60 ವರ್ಷ, ಕೂಲಿಕೆಲಸ ರವರು ತೋಟದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ಮನೆಗೆ ಬರಲು ಮೇಲ್ಕಂಡ ನಾರಾಯಣಸ್ವಾಮಿ ರವರ ಮನೆಯ ಮುಂದೆ ಬರುತ್ತಿದ್ದಾಗ ಮೇಲ್ಕಂಡ ನಾರಾಯಣಸ್ವಾಮಿ ರವರು ಹಳೆಯ ದ್ವೇಷದ ಹಿನ್ನಲೆಯಲ್ಲಿ ತನ್ನ ತಾಯಿಯ ಮೇಲೆ ಗಲಾಟೆ ಮಾಡಿ, ಅವಾಚ್ಯಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಾಯಿಯ ಬಲಗೈಯ ಮುಂಗೈಗೆ ಹಾಕಿ ರಕ್ತಗಾಯವನ್ನುಂಟು ಮಾಡಿದನು. ಅಷ್ಠರಲ್ಲಿ ಗಲಾಟೆಯ ಶಬ್ದಗಳನ್ನು ಕೇಳಿ ತಾನು ಮತ್ತು ತನ್ನ ಅಣ್ಣ ನಾರಾಯಣಸ್ವಾಮಿ, 35 ವರ್ಷ, ಕೂಲಿಕೆಲಸ ರವರು ಜಗಳ ಬಿಡಿಸಲು ಹೋದಾಗ ನಾರಾಯಣಸ್ವಾಮಿ ರವರು ಅದೇ ಮಚ್ಚಿನಿಂದ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಅಷ್ಠರಲ್ಲಿ ಸದರಿ ನಾರಾಯಣಸ್ವಾಮಿ ರವರ ಕಡೆಯವರಾದ ಚರಣ್ ಬಿನ್ ನಾರಾಯಣಸ್ವಾಮಿ, 27 ವರ್ಷ, ಖಾಸಗಿ ಕಂಪನಿಯಲ್ಲಿ ಕೆಲಸ, ಸುಶ್ಮಿತಾ ಕೋಂ ಮಣಿ, 28 ವರ್ಷ, ಗೃಹಣಿ, ಚರಣ್ ಬಿನ್ ಚಂದ್ರಪ್ಪ, 29 ವರ್ಷ, ಖಾಸಗಿ ಕಂಪನಿಯಲ್ಲಿ ಕೆಲಸ, ಜೆಜೆ ಕಾಲೋನಿ, ಚಿಂತಾಮಣಿ ನಗರ ಮತ್ತು ಕುಮಾರ್ ಬಿನ್ ಚಂದ್ರಪ್ಪ, 31 ವರ್ಷ, ಖಾಸಗಿ ಕಂಪನಿಯಲ್ಲಿ ಕೆಲಸ, ಜೆಜೆ ಕಾಲೋನಿ, ಚಿಂತಾಮಣಿ ನಗರ ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಚರಣ್ ಬಿನ್ ನಾರಾಯಣಸ್ವಾಮಿ ರವರು ಕೈಗಳಿಂದ ತನಗೆ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿ, ನಂತರ ಚರಣ್ ಬನ್ ಚಂದ್ರಪ್ಪ ರವರು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತನ್ನ ಅಣ್ಣ ನಾರಾಯಣಸ್ವಾಮಿ ರವರ ಹೊಟ್ಟೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಉಳಿದ ಕುಮಾರ್ ಬಿನ್ ಚಂದ್ರಪ್ಪ ಮತ್ತು ಸುಶ್ಮಿತಾ ಕೋಂ ಮಣಿ ರವರು ಕೈಗಳಿಂದ ತನ್ನ ತಾಯಿಯ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ನಂತರ ಮೇಲ್ಕಂಡವರು ತಮ್ಮನ್ನು ಕುರಿತು ಈ ದಿನ ಉಳಿದುಕೊಂಡಿದ್ದೀರಾ, ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿದರು. ಅಷ್ಠರಲ್ಲಿ ತಮ್ಮ ಗ್ರಾಮದ ಕೃಷ್ಣಮೂರ್ತಿ ಬಿನ್ ಲೇಟ್ ನಾರಾಯಣಪ್ಪ, ವೆಂಕಟೇಶಪ್ಪ ಬಿನ್ ವೆಂಕಟರವಣಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿ ಗಾಯಗೊಂಡಿದ್ದ ತಮ್ಮನ್ನು ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ತಾವುಗಳು ಹಾಲಿ ಸದರಿ ಆಸ್ಪತ್ರೆಯಲ್ಲಿ ಓಳರೋಗಿಗಳಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ನಿನ್ನೆ ರಾತ್ರಿ ಹೇಳಿಕೆಯನ್ನು ನೀಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಈ ದಿನ ತಡವಾಗಿ ಹೇಳಿಕೆಯನ್ನು ನೀಡುತ್ತಿದ್ದು, ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ ಹಾಗೂ ಮೇಲ್ಕಂಡವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ KA-40 V-7075 ನೊಂದಣಿ ಸಂಖ್ಯೆಯ TVS XL, KA-40 EC-0992 ನೊಂದಣಿ ಸಂಖ್ಯೆಯ TVS VICTOR ಮತ್ತು KA-53 EK-0101 ನೊಂದಣಿ ಸಂಖ್ಯೆಯ HERO HONDA SPLENDOR PLUS ದ್ವಿಚಕ್ರ ವಾಹನಗಳನ್ನು ಕಲ್ಲುಗಳಿಂದ ಹೊಡೆದು ಜಖಂ ಗೊಳಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 195/2021 ಕಲಂ. 96 KARNATAKA POLICE ACT, 1963 :-

    ದಿನಾಂಕ: 16/10/2021 ರಂದು ಪಿರ್ಯಾದಿದಾರರಾದ ಕೃಷ್ಣಮೂರ್ತಿ-326 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ 16/10/2021 ರಂದು ರಾತ್ರಿ ಪಿಐ ಸಾಹೇಬರು ಸಿಪಿಸಿ 326 ಕೃಷ್ಣಮೂರ್ತಿ ಆದ ನನಗೆ ಮತ್ತು ಹೋಂಗಾರ್ಡ್ 114 ಆಂಜಪ್ಪ ರವರಿಗೆ 3 ಮತ್ತು 7 ನೇ ಬೀಟ್ ರಾತ್ರಿಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ರಾತ್ರಿ 8.30 ಗಂಟೆಗೆ ಗಸ್ತು ಪ್ರಾರಂಬಿಸಿ ಮೇಲ್ಕಂಡ ಬೀಟ್ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಗಸ್ತು ನಿರ್ವಹಿಸಿಕೊಂಡು ಈ ದಿನ ದಿನಾಂಕ 17/10/2021 ರಂದು ಬೆಳಗಿನ ಜಾವ 05.15 ಗಂಟೆ ಸಮಯದಲ್ಲಿ ನಾವು ಬೆಂಗಳೂರು ರಸ್ತೆಯ ಅಂಜನಿ ಟಾಕೀಸ್ ಪಕ್ಕದಲ್ಲಿರುವ ಕೆನರಾ ಬ್ಯಾಂಕ್ ಕಡೆ ಗಸ್ತು ಮಾಡುತ್ತಿದ್ದಾಗ, ಸದರಿ ಬ್ಯಾಂಕಿನ ಎಟಿಎಂ ಪಕ್ಕದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಸಮವಸ್ರ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದು, ನಾವು ಸದರಿ ಆಸಾಮಿಯನ್ನು ಬೆನ್ನಟ್ಟಿ ಹಿಡಿದು ಆತನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಆತನು ಗಾಬರಿಯಲ್ಲಿ ತೊದಲುತ್ತಾ ತನ್ನ ಹೆಸರು ಸೀನ ಎಂತ ಮತ್ತೊಂದು ಸಲ ಶ್ರೀನಿವಾಸ ಎಂದು ಸರಿಯಾದ ಹೆಸರನ್ನು ಹೇಳದೆ ಇದ್ದಾಗ, ನಾವು ಅವನಿಗೆ ನಿನ್ನ ಸರಿಯಾದ ಹೆಸರು ವಿಳಾಸವನ್ನು ತಿಳಿಸುವಂತೆ ಕೇಳಿದಾಗ ಅವನು ತನ್ನ ಹೆಸರು ಶ್ರೀನಿವಾಸ @ ಸೀನ ಬಿನ್ ನಾರಾಯಣಪ್ಪ, 34 ವರ್ಷ, ಆದಿ ಕನರ್ಾಟಕ ಜನಾಂಗ, ಕೂಲಿಕೆಲಸ, ಬಶೆಟ್ಟಹಳ್ಳಿ ಗ್ರಾಮ ಮತ್ತು ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಆತನನ್ನು ಅವೇಳೆಯಲ್ಲಿ ತನ್ನ ಇರುವಿಕೆಯ ಬಗ್ಗೆ ಪ್ರಶ್ನಿಸಿದಾಗ ಆತನು ಸಮಂಜಸವಾದ ಉತ್ತರವನ್ನು ನೀಡದೆ ಇದ್ದಾಗ, ಆತನು ಅವೇಳೆಯಲ್ಲಿ ಮೇಲ್ಕಂಡ ಸ್ಥಳದಲ್ಲಿ ಯಾವುದೋ ಸಂಜ್ಞೆಯ ಅಪರಾಧವನ್ನು ಮಾಡುವ ಉದ್ದೇಶದಿಂದ ಹೊಂಚು ಹಾಕಿಕೊಂಡು ಇರುತ್ತಾನೆಂಬ ಸಂಶಯದ ಮೇರೆಗೆ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಬೆಳಿಗ್ಗೆ 05.30 ಗಂಟೆಗೆ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬಂದುಹಾಜರುಪಡಿಸಿದ್ದು ಸದರಿ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 150/2021 ಕಲಂ. 143,144,147,148,323,324,504,506 ರೆ/ವಿ 149 ಐಪಿಸಿ :-

    ದಿನಾಂಕ 17/10/2021 ರಂದು ಬೆಳಗ್ಗೆ 10.30 ಗಂಟೆಗೆ ಠಾಣಾ ಸಿಬ್ಬಂಧಿ ಹೆಚ್,ಸಿ-53 ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ದಾಖಲಾಗಿದ್ದ ಗಾಯಳುವಿನ ಹೇಳಿಕೆಯನ್ನು ಪಡೆದುಕೊಂಡು ಬಂದ ಸಾರಾಂಶವೇನಂದರೆ ತಾನು ದಿನಾಂಕ 16/10/2021 ರಂದು ಬೆಳಗ್ಗೆ ಹಸುಗಳನ್ನು ಹೋಗಿದ್ದು, ಸಂಜೆ ಸುಮಾರು 5.00 ಗಂಟೆಗೆ ತನ್ನ ಮಗಳು ಪವಿತ್ರ ತನಗೆ ಪೋನ್ ಮಾಡಿ ತಮ್ಮ ಪಕ್ಕದ ಮನೆಯವರಾದ ವೆಂಕಟಸ್ವಾಮಿ ಬಿನ್ ಚಿಕ್ಕ ವೆಂಕಟರಾಯಪ್ಪ,  ದೊಡ್ಡ ವೆಂಕಟರವಣಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ, ಚಿಕ್ಕ ವೆಂಕಟರವಣಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ, ಚಲಪತಿ ಬಿನ್ ದೊಡ್ಡ ವೆಂಕಟರವನಪ್ಪ, ಪಾರ್ವತಮ್ಮ ಕೊಂ ವೆಂಕಟರಮಣಪ್ಪ ಮತ್ತು ಚೌಡಮ್ಮ ಕೋಂ ಚಿಕ್ಕ ವೆಂಕಟರವಣಪ್ಪರವರುಗಳು ನನ್ನ ಹಾಗೂ ನನ್ನ ತಾಯಿಯ ಮೇಲೆ ಗಲಾಟೆ ಮಾಡುತ್ತಿದ್ದಾರೆ ಬಾ ಎನ್ನಲಾಗಿ ತಾನು ಹೋಗಿ ಏಕೆ ಅವರ ಮೇಲೆ ಗಲಾಟೆ ಮಾಡುತ್ತಿರುವುದು ಎಂದು ಕೇಳಲಾಗಿ ತನ್ನ ಹೆಂಡತಿ ಸುಶೀಲ ರವರು ಸಾರಾಯಿ ಕುಡಿದು ತಮ್ಮ ಮನೆಯ ಮುಂದೆ ಹಾಕಿದ್ದಕ್ಕೆ ಕೇಳಲಾಗಿ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ್ದು, ಆಗ ತಾನು ದೊಡ್ಡ ವೆಂಕಟರವಣಪ್ಪರವರನ್ನು ಕುಡಿದಿ ಪಾಕೆಟ್ ಗಳನ್ನು ನಮ್ಮ ಮನೆಯ ಮುಂದೆ ಹಾಕಿದರೆ ಗಲೀಜು ಆಗುವುದಿಲ್ಲವೇ ಎಂದು ಕೇಳಲಾಗಿ ಮೇಲ್ಕಂಡವರು ತಮ್ಮನ್ನು ಬೈದು, ಆ ಪೈಕಿ ಚಲಪತಿ ರವರು ತನ್ನ ಮೈ ಮೇಲೆ ಗುದ್ದಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆಗ ದೊಡ್ಡ ವೆಂಕಟರವಣಪ್ಪರವರು ದೊಣ್ಣೆಯಿಂದ ತನ್ನ ತಲೆಯ ಮದ್ಯದಲ್ಲಿ ಹೊಡೆದು ರಕ್ತ ಗಾಯಪಡಿಸಿದ್ದು, ಆಗ ತನ್ನ ಹೆಂಡತಿ ಅಡ್ಡ ಬರಲಾಗಿ ಅದೇ ದೊಣ್ಣೆಯಿಂದ ಆಕೆಯ ಎಡಗಯ ಮುಂಗೈಗೆ ಹೊಡೆದು ಊತದ ಗಾಯವನ್ನುಂಟುಮಾಡಿದ್ದು, ಆಗ ತನ್ನ ಅಣ್ಣ ತಿಮ್ಮಯ್ಯ ಮತ್ತು ಅತ್ತಿಗೆ ಸುವರ್ಣಮ್ಮರವರುಗಳು ಅಡ್ಡ ಬಂದು ಗಲಾಟೆ ಬಿಡಿಸಲು ಬಂದಾಗ ತಿಮ್ಮಯ್ಯರವರನ್ನು ಚಿಕ್ಕ ವೆಂಕಟರವಣಪ್ಪರವರು ಕೈಗಳಿಂದ ಹೊಡೆದಿದ್ದು, ಪಾರ್ವತಮ್ಮ ಮತ್ತು ಚೌಡಮ್ಮ ರವರು ತನ್ನ ಅತ್ತಿಗೆಯನ್ನು ಕೈಗಳಿಂದ ಹೊಡೆದು, ಸೊಂಟದ ಮೇಲೆ ಕಾಲಿನಿಂದ ಒದ್ದು ಮೂಗೇಟುಗಳುಂಟು ಮಾಡಿದ್ದು, ವೆಂಕಟಸ್ವಾಮಿರವರು ಈ ನನ್ನ ಮಕ್ಕಳದು ಜಾಸ್ತಿಯಾಯ್ತು ಇವರನ್ನು ಸಾಯಿಸಿದರೆ ಆಸ್ತಿ ಎಲ್ಲಾ ನಮಗೆ ಸಿಗುತ್ತದೆಂದು ಪ್ರಾಣ ಬೆದರಿಕೆ ಹಾಕಿದ್ದು,  ಈ ಹಿಂದೆಯೂ ಸಹ ತಮಗೂ ಹಾಗೂ ಮೇಲ್ಕಂಡವರಿಗೂ ಜಮೀನುಗಳ ವಿಚಾರದಲ್ಲಿ ಗಲಾಟೆಗಳಾಗಿದ್ದು, ತಮ್ಮ ಗ್ರಾಮದ ಆಂಜಿನಪ್ಪ ಬಿನ್ ನರಸಿಂಹಪ್ಪ ಮತ್ತು ನರಸಿಂಹಪ್ಪ ಬಿನ್ ಚಿಕ್ಕ ನರಸಿಂಹಪ್ಪರವರುಗಳು ಅಡ್ಡ ಬಂದು ಗಲಾಟೆಯನ್ನು ಬಿಡಿಸಿದ್ದು, ನಂತರ ತವೆಲ್ಲರೂ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಗೆ ದಾಖಲಾಗಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 131/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:16/10/2021 ರಂದು ಸಂಜೆ 5:40 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:16-10-2021 ರಂದು ಸಂಜೆ 4:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವಮೂರ್ತಿ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಜಡಲತಿಮ್ಮನಹಳ್ಳಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮುದ್ದೇನಹಳ್ಳಿ ಗ್ರಾಮದ ಮುನೇಗೌಡ @ ಮಧು ಬಿನ್ ಲೇಟ್ ಕೃಷ್ಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಮುದ್ದೇನಹಳ್ಳಿ ಗ್ರಾಮದ ಡೈರಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಬಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 4:20 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮುನೇಗೌಡ @ ಮಧು ಬಿನ್ ಲೇಟ್ ಕೃಷ್ಣಪ್ಪ, 36 ವರ್ಷ, ಒಕ್ಕಲಿಗರು, ಚಾಲಕ ವೃತ್ತಿ, ಮುದ್ದೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 16 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 16 ಟೆಟ್ರಾ ಪ್ಯಾಕೇಟುಗಳ ಬೆಲೆ 562 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 440 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 4:25 ಗಂಟೆಯಿಂದ ಸಂಜೆ 5:10 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಸಂಜೆ 5:30 ಗಂಟೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ .132/2021 ಕಲಂ. 87 KARNATAKA POLICE ACT, 1963 :-

    ದಿನಾಂಕ:16/10/2021 ರಂದು ಸಂಜೆ 7:00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ.ಪಿ ಮಂಜು ರವರು ಆರೋಪಿತರನ್ನು, ದಾಳಿ ಪಂಚನಾಮೆ ಮತ್ತು ಮಾಲನ್ನು ಹಾಜರ್ಪಡಿಸಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ, ಚಿಕ್ಕಬಳ್ಳಾಪುರ ತಾಲ್ಲೂಕಿನ ನಶಿಕುಂಟೆ ಹೊಸೂರು, ಕಂಗಾನಹಳ್ಳಿ, ಮಧುರೇನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆಗೆ ಗೌಚೇನಹಳ್ಳಿ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಮಾಹಿತಿಯೇನೆಂದರೆ ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಜಕ್ಕಲುಮಡಗು ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಆಂಜಿನೇಯ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಕಾಲುವೆಯಲ್ಲಿ ಯಾರೋ ಕೆಲವರು ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಕಾನೂನು ಬಾಹಿರವಾದ ಅಂದರ್-ಬಾಹರ್ ಇಸ್ಪೀಟು ಜೂಜಾಟಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ ದಾಳಿಮಾಡಿದ್ದು, ದಾಳಿಯಲ್ಲಿ 8 ಜನ ಆರೋಪಿತರು ಸಿಕ್ಕಿಬಿದ್ದಿರುತ್ತಾರೆ ಹಾಗೂ ಸ್ಥಳದಿಂದ 2 ಜನ ಆರೋಪಿತರು ಪರಾರಿಯಾಗಿರುತ್ತಾರೆ. ಅವರ ಹೆಸರು ವಿಳಾಸ (1) ಶಶಿಕುಮಾರ್ ಬಿನ್ ಆರ್.ವಿ ನಾಗರಾಜ, 32 ವರ್ಷ, ಬಲಜಿಗರು, ಆಟೋ ಚಾಲಕ, ವಾಸ: ಡಿವಿಟಿ ಪೇಟೆ, ಚಿಕ್ಕಬಳ್ಳಾಪುರ ನಗರ, 2) ಎಸ್ ಮಂಜುನಾಥ ಬಿನ್ ಲೇಟ್ ಶಂಕರಪ್ಪ, 33 ವರ್ಷ, ಒಕ್ಕಲಿಗರು, ಪೈಟಿಂಗ್ ಕೆಲಸ, ವಾಸ: ಭಗತ್ ಸಿಂಗ ನಗರ, ವಾರ್ಡ ನಂಬರ್:2, ಚಿಕ್ಕಬಳ್ಳಾಪುರ ನಗರ, 3) ಹರೀಶ್ ಬಿನ್ ನಂಜುಂಡಪ್ಪ, 44 ವರ್ಷ, ಬಲಜಿಗರು, ವ್ಯಾಪಾರ, ವಾಸ: ಹೆಚ್.ಎಸ್ ಗಾರ್ಡನ್, ಚಿಕ್ಕಬಳ್ಳಾಪುರ ನಗರ, 4) ದೇವರಾಜ್ ಬಿನ್ ಜೈ ಪ್ರಕಾಶ್, 35 ವರ್ಷ, ಬೆಸ್ತರು, ಜಿರಾಯ್ತಿ, ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 5) ಕುಬೇರ ಬಿನ್ ವೆಂಕಟೇಶಪ್ಪ, 41 ವರ್ಷ, ಪ.ಜಾತಿ, ಅಂಬೇಡ್ಕರ್ ನಗರ, ಚಿಕ್ಕಬಳ್ಳಾಪುರ ನಗರ, 6) ವೆಂಕಟೇಶಪ್ಪ ಬಿನ್ ಕೃಷ್ಣಪ್ಪ, 41 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ: ಗುಂತಪ್ಪನಹಳ್ಳೀ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 7) ಅಂಬರೀಶ ಬಿನ್ ಲೇಟ್ ಕೃಷ್ಣಪ್ಪ, 40 ವರ್ಷ, ಬಲಜಿಗರು, ದ್ರಾಕ್ಷಿ ವ್ಯಾಪಾರ, ಅಂಚೆ ಕಛೇರಿ ಹತ್ತಿರ, ವೆಂಕಟಗಿರಿಕೋಟೆ, ದೇವನಹಳ್ಳೀ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, 8) ರಾಜೇಶ್ ಬಿನ್ ಬಸವರಾಜ್, 28 ವರ್ಷ, ಭೋವಿ ಜನಾಂಗ, ಚಾಲಕ, ವಾಸ: 417/2 ಹೊರಮಾವು, ಅಗರ, ಬೆಂಗಳೂರು ಪೂರ್ವ ತಾಲ್ಲೂಕು, ಪರಾರಿಯಾದ ಅಸಾಮಿಗಳು 9) ಸುನೀಲ್ ಬಿನ್ ಗೋಪಿ, 24 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ವೆಂಕಟಗಿರಿಕೋಟೆ,  ದೇವನಹಳ್ಳಿ ತಾಲ್ಲೂಕು, 10) ಪ್ರಕಾಶ್ ಬಿನ್ ಕೆಂಪಣ್ಣ, 38 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಅಡವಿಗೊಲ್ಲವಾರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು) ನಂತರ ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ್ದ 1) 52 ಇಸ್ಪೀಟು ಎಲೆಗಳು 2) ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್, 3) ಹಾಗೂ ಪಣಕ್ಕೆ ಹಾಕಿದ್ದ 37,300/-ರೂಪಾಯಿಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಜೂಜಾಟದ ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತರನ್ನು ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿ ನೀಡಿದ್ದನ್ನು ಪಡೆದುಕೊಂಡು ಠಾಣಾ ಮೊ.ಸಂಖ್ಯೆ:132/2021 ಕಲಂ: 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

Last Updated: 17-10-2021 07:09 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080