ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.365/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 15/10/2021 ರಂದು ರಾತ್ರಿ 8-45 ಗಂಟೆಗೆ     ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 15/10/2021 ರಂದು ಸಂಜೆ 7-15 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ಬಳಿ ಹಾದು ಹೋಗಿರುವ ಎನ್ ಹೆಚ್-44 ಹೈವೆ  ರಸ್ತೆಯಲ್ಲಿರುವ ಗೋಲ್ಡನ್ ಡಾಬಾ ಬಳಿ  ಯಾರೋ ಆಸಾಮಿಗಳು  ಈ ದಿನ ನಡೆಯುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ಯೆ ಸೂಪರ್ ಕಿಂಗ್ಸ್ ಕ್ರಿಕೆಟ್  ಟೀಮ್ ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಕ್ರಿಕೆಟ್  ಬೆಟ್ಟಿಂಗ್ ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-280 ಮುರಳಿ, ಪಿಸಿ-214 ಅಶೋಕ, ಪಿಸಿ-237 ವಿನಯ್  ರವರು ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೇಪಲ್ಲಿ  ಎಸ್.ಬಿ.ಎಂ ಸರ್ಕಲ್ ಬಳಿ ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು 500/- ರೂ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುತ್ತದೆ ಎಂದು  ಮತ್ತು 500/- ರೂ ಚೆನೈ ಸೂಪರ್ ಕಿಂಗ್ಸ್  ಟೀಮ್  ಗೆಲ್ಲುತ್ತದೆ ಎಂದು  ಹಣವನ್ನು  ಪಣಕ್ಕೆ ಕಟ್ಟಿಕೊಂಡು   ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ರಮೇಶ್ ಬಿನ್ ಗೋವಿಂದಪ್ಪ, 27 ವರ್ಷ, ವಡ್ಡಿ ಜನಾಂಗ, ಖಾಸಗಿ ಕೆಲಸ, ವಾಸ ಬೂದಲಿ ಗ್ರಾಮ, ಗೋರೆಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, 2] ಹರೀಶ್ ಬಿನ್ ವೆಂಕಟೇಶ್ , 26 ವರ್ಷ, ವಡ್ಡಿ ಜನಾಂಗ, ಸಾಫ್ಟ ವೇರ್ ಇಂಜಿನಿಯರ್, ( ಶಾಬ್ ಜೆಮಿನಿ ಕಂಪೆನಿ ), ವಾಸ ಬೂದಲಿ ಗ್ರಾಮ, ಗೋರೆಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, 3] ಸುರೇಶ್ ಬಿನ್ ಶ್ರೀರಾಮಪ್ಪ, 31 ವರ್ಷ, ವಡ್ಡಿ ಜನಾಂಗ, ಸೇಲ್ಸ್ ಮೆನ್ ಕೆಲಸ, ವಾಸ ಬೂದಲಿ ಗ್ರಾಮ, ಗೋರೆಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, 4] ಆನಂದ ಬಿನ್ ಶ್ರೀರಾಮಪ್ಪ, 25 ವರ್ಷ, ವಡ್ಡಿ ಜನಾಂಗ, ಮಗ್ಗದ ಕೆಲಸ, ವಾಸ ಬೂದಲಿ ಗ್ರಾಮ, ಗೋರೆಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು,  ತಿಳಿಸಿರುತ್ತಾರೆ. ನಂತರ ಕ್ರಿಕೆಟ್ ಬೆಟ್ಟಿಂಗ್  ಗೆ ಪಣವಾಗಿ ಕಟ್ಟಿದ್ದ 5,300/- ರೂ ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 8-45 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು  ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ವಶಕ್ಕೆ ನೀಡುತ್ತಿದ್ದು  ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.366/2021 ಕಲಂ. 379 ಐ.ಪಿ.ಸಿ:-

     ದಿನಾಂಕ 16/10/2021 ರಂದು ಬೆಳಿಗ್ಗೆ 11-50 ಗಂಟೆಗೆ  ಪಿರ್ಯಾದಿದಾರರಾದ ಗಂಗಾದ್ರಿ ಬಿನ್ ವೆಂಕಟರಾಮಪ್ಪ, 33 ವರ್ಷ, ದೋಬಿ ಜನಾಂಗ, ವ್ಯವಸಾಯ, ವಾಸ ಗುಟ್ಟಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 11/10/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನನ್ನ ಬಾಬತ್ತು KA-40 EE-3610 HERO PASSION PRO ದ್ವಿ ಚಕ್ರವಾಹನ CHASSIE NO- MBLHA016KHJ01088 ENGINE NO-HA10ACKHJ20723 ನಂಬರಿನ ದ್ವಿ ಚಕ್ರ ವಾಹನವನ್ನು  ಡಿವಿಜಿ ರಸ್ತೆ ತಾಲ್ಲೂಕು ಕಛೇರಿ ಮುಂಬಾಗದಲ್ಲಿ ನಿಲ್ಲಿಸಿ ತಾಲ್ಲೂಕು ಕಛೇರಿ ಒಳಗೆ ನನ್ನ ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ಸಂಜೆ  05-00 ಗಂಟೆಗೆ ಬಂದು ನೋಡಲಾಗಿ ಸುಮಾರು 50,000/- ರೂ ಬೆಲೆ ಬಾಳುವ ನನ್ನ ದ್ವಿಚಕ್ರ ವಾಹನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಅಕ್ಕಪಕ್ಕ ಮತ್ತು ಎಲ್ಲಾ ಕಡೆಗಳಲ್ಲಿ  ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ದ್ವಿಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮಜರುಗಿಸಲು ಕೋರಿ ನೀಡಿದ ದೂರು.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.367/2021 ಕಲಂ. 379 ಐ.ಪಿ.ಸಿ:-

     ದಿನಾಂಕ 16/10/2021 ರಂದು ಮದ್ಯಾಹ್ನ 12.30 ಗಂಟೆಗೆ  ಪಿರ್ಯಾದಿದಾರರಾದ ಸುರೇಶ್ ಕುಮಾರ್  ಬಿನ್ ನಾರಾಯಣಸ್ವಾಮಿ,25ವರ್ಷ,ಖಾಸಗಿ ಕಂಪನಿಯಲ್ಲಿ ಕೆಲಸ,ಬೋವಿ ಜನಾಂಗ, ವಾಸ: ಮೊರಂಪಲ್ಲಿ ಗ್ರಾಮ ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 15/10/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತಮ್ಮ ಬಾಬತ್ತು ಎಪಿ 39 ಹೆಚ್ ಡಿ5764 ನೋಂದಣಿ ಸಂಖ್ಯೆಯ ಟಿವಿಎಸ್ ಅಪಾಚೆ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ನನ್ನ ಮಗಳಿಗೆ  ಆಸ್ಪತ್ರೆಯಲ್ಲಿ ತೋರಿಸಲು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನಿಲ್ಲಿಸಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ನಂತರ ವಾಪಸ್ಸು ರಾತ್ರಿ 9-30 ಗಂಟೆಗೆ ಬಂದು ನೋಡಲಾಗಿ  ಸುಮಾರು 1.30,000/- ರೂ ಬೆಲೆ ಬಾಳುವ ನನ್ನ ದ್ವಿಚಕ್ರ ವಾಹನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಅಕ್ಕಪಕ್ಕ ಮತ್ತು ಎಲ್ಲಾ ಕಡೆಗಳಲ್ಲಿ  ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ದ್ವಿಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮಜರುಗಿಸಲು ಕೋರಿ ನೀಡಿದ ದೂರು.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.178/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:15-10-2021  ರಂದು  ಮದ್ಯಾಹ್ನ  3-00 ಗಂಟೆಯ ಸಮಯಕ್ಕೆ  ಪಿರ್ಯಾದಿ  ಸಿ. ಆನಂದಕುಮಾರ್  ಬಿನ್ ಲೇಟ್ ಚಂದ್ರಪ್ಪ 35ವರ್ಷ  ವಕ್ಕಲಿಗರು  ಕೂಲಿ ಕೆಲಸ ವಾಸ: ರಾಮಚಂದ್ರಹೊಸೂರು ಗ್ರಾಮ  ನಂದಿ ಹೋಬಳಿ. ಚಿಕ್ಕಬಳ್ಳಾಪುರ  ತಾಲ್ಲೂಕು  ರವರು  ಠಾಣೆಗೆ  ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ,  ತನ್ನ ಅಣ್ಣನಾದ  ಎಲ್. ಸತೀಶ್ ಬಿನ್  ಲಕ್ಷ್ಮಯ್ಯ  ದೇವಸ್ಥಾನದ ಹೊಸಹಳ್ಳಿ ಗ್ರಾಮ ರವರು  ಚಿಕ್ಕಬಳ್ಳಾಪುರ  ತಾಲ್ಲೂಕು  ಸೇಟ್ ದಿನ್ನೆಯ ಸಮೀಪ ಇರುವ ಕ್ಯೂಬ್ ಸ್ಟಾಪ್  ಹೋಟೆಲ್ ನಲ್ಲಿ  ಈಗ್ಗೆ ಒಂದು ವರ್ಷದಿಂದ  ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 14-10-2021 ರಂದು ಮದ್ಯಾಹ್ನ ಕೆಲಸದ ನಿಮಿತ್ತ  ದೇವಸ್ಥಾನಹೊಸಹಳ್ಳಿ ಗ್ರಾಮಕ್ಕೆ  ಹೋಗಲು   KA-51-U-4137  ನಂಬರಿನ  TVS  ದ್ವಿ ಚಕ್ರ ವಾಹನದಲ್ಲಿ  ಮದ್ಯಾಹ್ನ 12-40  ಗಂಟೆಯ ಸಮಯದಲ್ಲಿ  ಗುವ್ವಲಖಾನಹಳ್ಳಿ  ಗ್ರಾಮದ  ಗೇಟ್ ಬಳಿ  ಹೋಗುತ್ತಿದ್ದಾಗ   ಚಿಕ್ಕಬಳ್ಳಾಪುರ ಕಡೆಯಿಂದ   KA-51-B-7840  ನಂಬರಿನ ಕಾರಿನ  ಚಾಲಕ  ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ರಸ್ತೆಯಲ್ಲಿ  ಹೋಗುತ್ತಿದ್ದ   ಬಸ್ಸನ್ನು  ಓವರ್ ಟೇಕ್ ಮಾಡಿಕೊಂಡು ಬಂದು ಎಲ್.ಸತೀಶ ರವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿರುವುದಾಗಿ  ತನಗೆ ಗಾಯಗಳಾಗಿರುತ್ತೆಂತ ತನ್ನನ್ನು ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರಕ್ಕೆ  ಕರೆದುಕೊಂಡು ಬರುತ್ತಿರುವುದಾಗಿ ವಿಚಾರ ತಿಳಿಸಿದನು.  ತಕ್ಷಣ  ತಾನು ಚಿಕ್ಕಬಳ್ಳಾಪುರ  ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ತನ್ನ ಅಣ್ಣ ಎಲ್. ಸತೀಶ ರವರಿಗೆ ಎಡಕಾಲು ಪಾದದ ಮೇಲೆ ರಕ್ತಗಾಯವಾಗಿತ್ತು. ತಲೆಗೆ ಮತ್ತು ತುಟಿಯ ಮೇಲೆ ತರಚಿದ ಗಾಯವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಬೆಂಗಳೂರಿಗೆ ಕಳುಹಿಸಿದರು. ಅದರಂತೆ ತಾನು ಗಾಯಾಗಳಾಗಿದ್ದ ಎಲ್.ಸತೀಶ ರವರನ್ನು  ಬೆಂಗಳೂರಿಗೆ ಕರೆದುಕೊಂಡು ಹೋಗಿ  ಪ್ರೋಲೈಪ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತೇನೆಂತ   ಈ ಅಪಘಾತಕ್ಕೆ  KA-51-B-7840 ನಂಬರಿನ ಕಾರು ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತೆಂತ ತಾನು ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸುತ್ತಿದ್ದರಿಂದ  ದೂರು ನೀಡಲು  ತಡವಾಗಿರುತ್ತೆಂತ  ಈ ಅಪಘಾತಕ್ಕೆ  ಕಾರಣವಾದ ಮೇಲ್ಕಂಡ  ಕಾರು ಚಾಲಕನ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ  ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 302,114,34 ಐ.ಪಿ.ಸಿ:-

     ದಿನಾಂಕ; 15-10-2021 ರಂದು ರಾತ್ರಿ 10.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಮ್ @ ಶ್ರೀರಾಮ್ ಗೌಡ, ಬಿನ್ ಲೇಟ್ ಈರಪ್ಪ, 35 ವರ್ಷ, ಒಕ್ಕಲಿಗರು, ವ್ಯಾಪಾರ, ವಾಸ: ಧರ್ಮಛತ್ರ ರಸ್ತೆ, ವಾರ್ಡ್ ನಂ: 19, ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು 3 ವರ್ಷಗಳಿಂದ ಚಿಕ್ಕಬಳ್ಳಾಪುರ ಧರ್ಮಚತ್ರ ರಸ್ತೆಯಲ್ಲಿರುವ ಶ್ರೀಮತಿ ನಳಿನಾ ಕೋಂ ಲೇಟ್ ರಾಮಕೃಷ್ಣ ರವರ ಮಹಡಿ ಮನೆಯಲ್ಲಿ ಬಾಡಿಗೆಗೆ ತನ್ನ ಹೆಂಡತಿಯೊಂದಿಗೆ ವಾಸವಾಗಿದ್ದು, ತಾನು ಕ.ರ.ವೇ ಯುವಸೇನೆ ಜಿಲ್ಲಾದ್ಯಕ್ಷನಾಗಿದ್ದು, ನಮ್ಮ ಮನೆಯ ಮಾಲೀಕರಾದ ಶ್ರೀಮತಿ ನಳಿನಾ ರವರು ಒಬ್ಬಂಟಿಯಾಗಿದ್ದು, ಅವರ ಗಂಡ ಮೃತಪಟ್ಟಿರುತ್ತಾನೆ. ಆಕೆಯ ಮಗ ಬದ್ರಿನಾಥ ಎಂಬುವರು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಟಾಕೀಸ್ ಮುಂಭಾಗದಲ್ಲಿ ಅಂಗಡಿಯನ್ನು ಇಟ್ಟುಕೊಂಡು ಅಲ್ಲಿಯೇ ವಾಸವಾಗಿರುತ್ತಾನೆ. ಈಗಿರುವಾಗ ಈ ದಿನ ದಿನಾಂಕ; 15-10-2021 ರಂದು ತಾನು ಗಾಂಧಿಕೋಳಾಯಿ ಬಳಿ ಇರುವ ಅಂಗಡಿ ಬಳಿ ಹೋಗಿದ್ದವನು. ರಾತ್ರಿ 8.00 ಗಂಟೆಗೆ ಮನೆಗೆ ಬಂದಿದ್ದು, ನಂತರ ತಾನು ಮತ್ತು ತನ್ನ ಹೆಂಡತಿ ತನ್ನ ಅಣ್ಣನ ಮನೆಗೆ ಊಟಕ್ಕೆ ಹೋಗೋಣ ಎಂದು ಮಾತನಾಡಿಕೊಂಡು ತನ್ನ ಹೆಂಡತಿ ತನ್ನ ಅಣ್ಣನ ಮನೆ ಕಡೆ ಹೊರಟರು. ತಾನು ಕೆಲಸದ ನಿಮಿತ್ತ ಬರುತ್ತೇನೆಂದು ಬಜಾರ್ ರಸ್ತೆ ಕಡೆಗೆ ಹೋಗಿದ್ದು, ತಾನು ಹೋಗುವಾಗ ನಮ್ಮ ಮನೆಯ ಕಾಂಪೌಂಡ್ ಒಳಗಿನಿಂದ ಇಬ್ಬರು ವ್ಯಕ್ತಿಗಳು ಹೊರಗೆ ಹೋಗುವುದನ್ನು ನೋಡಿದ್ದು, ಮತ್ತೆ ತಾನು ಬಜಾರ್ ರಸ್ತೆ ಕಡೆಗೆ ಹೋಗಿದ್ದವನು. ನಮ್ಮ ಮನೆಯ ಮುಂಭಾಗದ ಕಡೆಯಿಂದ ನಮ್ಮ ಅಣ್ಣನ ಮನೆಗೆ ಹೋಗಲು ನಮ್ಮ ಮನೆಯ ಹತ್ತಿರ ಬರುತ್ತಿದ್ದಾಗ ನಮ್ಮ ಮನೆಯ ಕಾಂಪೌಂಡ್ ನ ಒಳಗೆ ಕೂಗಾಟದ ಶಬ್ದ ಕೇಳಿ ಅಲ್ಲಿಗೆ ಹೋದಾಗ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡು ಹೊಡೆಯುತ್ತಿದ್ದರು. ತಾನು ಹೋದವನು ಯಾಕೆ ಎಂದು ಕೇಳಿದಾಗ ನಳಿನಾ ರವರನ್ನು ಕುತ್ತಿಗೆ ಕೊಯ್ದು ಕೊಲೆ ಮಾಡಿರುತ್ತಾರೆ ಎಂದು ತಿಳಿಸಿದ್ದು, ತಾನು ನೋಡಿದಾಗ ವಿಚಾರ ನಿಜವಾಗಿದ್ದು, ಮನೆಯಲ್ಲೆಲ್ಲಾ ರಕ್ತವಾಗಿ ನಳಿನಾ ರವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜನರು ಕೊಲೆ ಮಾಡಿರುವವರನ್ನು ಹೆಸರುಗಳನ್ನು ಕೇಳುತ್ತಿದ್ದು, ಹರಿ ಮತ್ತು ಮುಕೇಶ್ ಎಂದು ತಿಳಿಸುತ್ತಿದ್ದು, ಯಾಕೆ ನಳಿನಾ ರವರನ್ನು ಕೊಲೆ ಮಾಡಿದ್ದು, ಎಂದು ಕೇಳಿದ್ದಕ್ಕೆ ಅವರ ಮಗನು ಹೇಳಿದ್ದನೆಂದು ತಿಳಿಸುತ್ತಿದ್ದರು. ಒಬ್ಬಂಟಿಯಾಗಿದ್ದ ನಳಿನಾ ರವರನ್ನು ಮೇಲ್ಕಂಡ ಹರಿ ಮತ್ತು ಮುಕೇಶ್ ರವರು ಯಾವುದೋ ಕಾರಣದಿಂದ ರಾತ್ರಿ ಸುಮಾರು 8.45 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯ ಕತ್ತು ಕೊಯ್ದು ಕೊಲೆ ಮಾಡಿರುತ್ತಾರೆ. ಇವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.194/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ: 15/10/2021 ರಂದು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್. ನಾರಾಯಣಸ್ವಾಮಿ ರವರು ಮಾಲು ಅಮಾನತ್ತು ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ತಂದು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 15/10/2021 ರಂದು ಮದ್ಯಾಹ್ನ 2.00 ಗಂಟೆಯ ಸಮಯದಲ್ಲಿ ತಾನು ಸಿಬ್ಬಂದಿಯವರಾದ ವೆಂಕಟರವಣಪ್ಪ ಹೆಚ್.ಸಿ. 54, ಪವನ್ ಕುಮಾರ್ ಸಿಪಿಸಿ 194, ಅಶೋಕ ಸಿಪಿಸಿ 78 ಹಾಗೂ ಜೀಪ್ ಚಾಲಕ ಚೌಡಪ್ಪ ಎಪಿಸಿ-64 ರವರು ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-138 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ, ಚೇಳೂರು ವೃತ್ತದಲ್ಲಿರುವ ಅಮೃತ ವೈನ್ಸ್ ಪಕ್ಕದಲ್ಲಿರುವ ರಾಮಚಂದ್ರ ಮಿಲ್ಟ್ರಿ ಹೋಟೆಲ್ ನಲ್ಲಿ ಅಮೃತ ವೈನ್ಸ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿರುವ ನರಸಿಂಹ ಬಿನ್ ಬಲರಾಮಯ್ಯ ರವರು ಕಾನೂನು ಬಾಹಿರವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸದರಿ ಹೋಟೆಲ್ ನಲ್ಲಿ ದಾಳಿ ಮಾಡಲು ಚೇಳೂರು ವೃತ್ತದಿಂದ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಮೇಲ್ಕಂಡ ವಾಹನದಲ್ಲಿ ಅಮೃತ ವೈನ್ಸ್ ಮುಂಭಾಗದಲ್ಲಿ ಬಂದು ಜೀಪನ್ನು ನಿಲ್ಲಿಸಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಅಮೃತ ವೈನ್ಸ್ ಪಕ್ಕದಲ್ಲಿರುವ ರಾಮಚಂದ್ರ ಮಿಲ್ಟ್ರಿ ಹೋಟೆಲ್ ಒಳಗೆ ಹೋಗಿ ನೋಡಲಾಗಿ ಹೋಟೆಲ್ ನ ಒಂದು ಮೂಲೆಯಲ್ಲಿ ಒಂದು ರಟ್ಟಿನ ಪೆಟ್ಟಿಗೆ ಇದ್ದು, ಸದರಿ ಪೆಟ್ಟಿಗೆಯಲ್ಲಿ ಮದ್ಯದ ಟೆಟ್ರಾಪಾಕೆಟ್ ಗಳು ಇರುವುದು ಕಂಡು ಬಂದಿದ್ದು, ಪರಿಶೀಲಿಸಲಾಗಿ1) 90 ಎಂ.ಎಲ್ ನ HAYWARDS CHEERS WHISKEY ಕಂಪನಿಯ 47 ಟೆಟ್ರಾಪಾಕೆಟ್ ಗಳು, 2) 180 ಎಂ.ಎಲ್. ನ 8 PM WHISKY ಕಂಪನಿಯ 2 ಟೆಟ್ರಾಪಾಕೆಟ್ ಗಳು, 3) 180 ಎಂ.ಎಲ್ ನ OLD TAVERN WHISKY ಕಂಪನಿಯ5 ಟೆಟ್ರಾಪಾಕೆಟ್ಗಳು 4) 180 ಎಂ.ಎಲ್ ನ BANGALORE WHISKY ಕಂಪನಿಯ5 ಟೆಟ್ರಾಪಾಕೆಟ್ ಗಳು 5)180 ಎಂ.ಎಲ್ ನ BAGPIPER WHISKY ಕಂಪನಿಯ4 ಟೆಟ್ರಾಪಾಕೆಟ್ ಗಳು 6)90 ಎಂ.ಎಲ್ ನ MCDOWELLS WHISKY 2 ಟೆಟ್ರಾಪಾಕೆಟ್ ಗಳು 7) 90 ಎಂ.ಎಲ್ ನ ORIGINAL CHOICE WHISKY ಕಂಪನಿಯ 9 ಟೆಟ್ರಾಪಾಕೆಟ್ ಗಳು 8) 90 ಎಂ.ಎಲ್ ನ AMRUTS SILVER CUP BRANDY ಕಂಪನಿಯ 21 ಟೆಟ್ರಾಪಾಕೆಟ್ ಗಳು ಇದ್ದು, ಹೋಟೆಲ್ ನಲ್ಲಿದ್ದ ಬಾರ್ ಸಪ್ಲೈಯರ್ ರವರನ್ನು ಆತನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಬಿ. ನರಸಿಂಹ ಬಿನ್ ಬಲರಾಮಯ್ಯ, 41 ವರ್ಷ, ಬಲಜಿಗರು, ಅಮೃತ ವೈನ್ಸ್ ನಲ್ಲಿ ಸಪ್ಲೈಯರ್ ಕೆಲಸ, ಪೆದ್ದ ಮಂಡ್ಯಂ, ಚಿತ್ತೂರು ಜಿಲ್ಲೆ, ಆಂದ್ರ ಪ್ರದೇಶ ಹಾಲಿ ವಾಸ ಅಮೃತ ವೈನ್ಸ್ ಹೊಟೆಲ್, ಚಿಂತಾಮಣಿ ನಗರ ಎಂದು ತಿಳಿಸಿದ್ದು, ಸದರಿ ಮದ್ಯವನ್ನು ಹೋಟೆಲ್ ನಲ್ಲಿ ಮಾರಾಟ ಮಾಡಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ಸದರಿ ಮದ್ಯವು ಒಟ್ಟು 9 ಲೀಟರ್ 990 ಎಂ.ಎಲ್ ಇದ್ದು, ಸದರಿ ಮಧ್ಯದ ಒಟ್ಟು ಬೆಲೆ 4055/- ರೂಗಳಾಗಿರುತ್ತೆ. ಸದರಿ ಮಧ್ಯವನ್ನು ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಮೇಲ್ಕಂಡ ಮದ್ಯದ ಟೆಟ್ರಾಪಾಕೆಟ್ ಗಳ ಪೈಕಿ ಒಂದೊಂದು ಟೆಟ್ರಾಪ್ಯಾಕೆಟ್ ಗಳನ್ನು ಮಾದರಿಗಾಗಿ ತೆಗೆದು ಮದ್ಯಾಹ್ನ 2.15 ಗಂಟೆಯಿಂದ 3.15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ ಆರೋಪಿ ನರಸಿಂಹ ಬಿನ್ ಬಲರಾಮಯ್ಯ ರವರನ್ನು ವಶಕ್ಕೆ ಪಡೆದು ಆರೋಪಿ, ಅಮಾನತ್ತುಪಡಿಸಿಕೊಂಡ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದು, ಯಾವುದೇ ಪರವಾನಿಗೆ ಇ್ಲಲದೆ ಕಾನೂನು ಬಾಹಿರವಾಗಿ ಹೋಟೆಲ್ ನಲ್ಲಿ ಮಧ್ಯವನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಮೇಲ್ಕಂಡ ನರಸಿಂಹ ಮತ್ತು ಆತನಿಗೆ ಮದ್ಯವನ್ನು ಮಾರಾಟ ಮಾಡಲು ನೀಡಿದ ಬಾರ್ ನ ಕ್ಯಾಷಿಯರ್ ಹಾಗೂ ಮಾಲೀಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.149/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 15/10/2021 ರಂದು ಸಂಜೆ 17.00 ಗಂಟೆಗೆ ಪಿ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಸ್ವತಃ ದಾಖಲಿಸಿಕೊಂಡ ದೂರಿನ ಸಾರಾಂಶವೇನೆಂದರೆ,  ದಿನಾಂಕ:15/10/2021 ರಂದು ಮದ್ಯಾಹ್ನ 15.00 ಗಂಟೆಯಲ್ಲಿ ತಾನು ಠಾಣಾ ಸರಹದ್ದಿನ ಗಸ್ತಿಗಾಗಿ  ಠಾಣಾ ಸಿಬ್ಬಂಧಿ ಹೆಚ್.ಸಿ-159 ಸೈಯದ್ ಮೊಹಮದ್ ಹಾಗೂ ಹೆಚ್.ಸಿ-53 ಜಿ.ಎಂ ಲೋಕೇಶ್ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ಕೊಂಡಪ್ಪಗಾರಹಳ್ಳಿ, ಇರಗಪ್ಪನಹಳ್ಳಿ, ಸಾದಲಿ, ಪೂಸಗಾನದೊಡ್ಡಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 15.30 ಗಂಟೆಗೆ ಎಸ್.ಗೊಲ್ಲಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿದಾಗ ಯಾರೋ ಬಾತ್ಮಿದಾರರು ಎಸ್.ಗೊಲ್ಲಹಳ್ಳಿ ಗ್ರಾಮದ ರಮೇಶ ಬಿನ್ ಮುನಿಯಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ್ದು, ಅವರು ಒಪ್ಪಿ ತಮ್ಮೊಂದಿಗೆ ಎಸ್.ಗೊಲ್ಲಹಳ್ಳಿ ಗ್ರಾಮದ ರಮೇಶ ಬಿನ್ ಮುನಿಯಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಮದ್ಯಾಹ್ನ 15.45 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ನಂತರ ಸದರಿ ಅಂಗಡಿಯ ಮುಂದೆ ನಿಂತಿದ್ದ ಅಂಗಡಿ ಮಾಲೀಕನನ್ನು ಕರೆಯಲಾಗಿ ಸದರಿ ಅಂಗಡಿಯ ಮಾಲೀಕ ಸ್ಥಳದಿಂದ ಪರಾರಿಯಾಗಿರುತ್ತಾನೆ. ನಾವು ಹಿಂಬಾಲಿಸಿದರೂ ನಮ್ಮ ಕೈಗೆ ಸಿಕ್ಕಿರುವುದಿಲ್ಲ. ನಂತರ ಸ್ಥಳದಲ್ಲಿದ್ದವರನ್ನು ಸದರಿ ಚಿಲ್ಲರೆ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ರಮೇಶ ಬಿನ್ ಮುನಿಯಪ್ಪ, 45 ವರ್ಷ, ವಕ್ಕಲಿಗರು,  ಚಿಲ್ಲರೆ ಅಂಗಡಿ ವ್ಯಾಪಾರ, ಎಸ್.ಗೊಲ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂ 9036694550 ಎಂದು ತಿಳಿದು ಬಂದಿರುತ್ತೆ. ನಂತರ  ಸದರಿ ಸ್ಥಳದಲ್ಲಿ ಪಂಚರ ಸಮಕ್ಷಮ  ಪಂಚನಾಮೆ ಕ್ರಮ ಕೈಗೊಂಡು, ಪಂಚನಾಮೆಯ ಕಾಲದಲ್ಲಿ ಒಟ್ಟು 1 ಲೀಟರ್ 800 ಎಂ.ಎಲ್ ಸಾಮರ್ಥ್ಯದ,  735.58/- ರೂಗಳು ಬೆಲೆ ಬಾಳುವ ಮಧ್ಯ ತುಂಬಿದ ಒರಿಜಿನಲ್ ಚಾಯ್ಸ್ ವಿಸ್ಕಿಯ 90 ಎಂ.ಎಲ್ ನ 16 ಟೆಟ್ರಾ ಪ್ಯಾಕೇಟ್ಗಳು, ಇವುಗಳ ಒಂದರ ಬೆಲೆ 35.13/-ರೂಗಳಾಗಿರುತ್ತೆ. ನಂತರ ಓಲ್ಡ್ ಟವರೆನ್ ವಿಸ್ಕಿಯ 180 ಎಂ.ಎಲ್ ನ 2 ಟೆಟ್ರಾ ಪಾಕೆಟ್ ಗಳು, ಇವುಗಳ ಒಂದರ ಬೆಲೆ 86.75/-ರೂಗಳಾಗಿರುತ್ತೆ. ಸದರಿಯವುಗಳನ್ನು  ಹಾಗೂ ಒರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಮತ್ತು 1 ಖಾಲಿ ಪ್ಲಾಸ್ಟಿಕ್ ವಾಟರ್ ಬಾಟೆಲನ್ನು ಮದ್ಯಾಹ್ನ 16.00 ಗಂಟೆಯಿಂದ ಸಂಜೆ 16.45 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆಸಾಮಿಯು ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೆ,  ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದು ಮುಂದಿನ ಕ್ರಮಕ್ಕಾಗಿ ಸ್ವತಃ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.280/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 15/10/2021 ರಂದು ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ-205 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 03/10/2021 ರಂದು  ಮದ್ಯಾಹ್ನ 3-00 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ವಿದುರಾಶ್ವತ್ಥ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-10 ಶ್ರೀರಾಮಯ್ಯ ಪಿ.ಸಿ.302 ಕುಮಾರ ನಾಯ್ಕ, ಸಿ.ಪಿ.ಸಿ-179 ಶಿವ ಶೇಖರ್ ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-538  ರಲ್ಲಿ  ವಿಧುರಾಶ್ವತ್ಥ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 3-30 ಗಂಟೆಗೆ ಹೋಗಿ   ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರ ಸ್ಥಳದಲ್ಲಿ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ.  ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಗಣೇಶ್ ಬಿನ್ ಚನ್ನಕೇಶವುಲು, 24 ವರ್ಷ, ಎಸ್.ಸಿ ಜನಾಂಗ, ಅಮಾಲಿ ಕೆಲಸ, ನಾಗೇಪಲ್ಲಿ, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಎಂದು ತಿಳಿಸಿದ್ದು,  ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 12  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 80 ಎಂ.ಎಲ್. ಆಗಿರುತ್ತೆ ಇವುಗಳ ಒಟ್ಟು ಬೆಲೆ 421.56  ರೂ.ಗಳಾಗಿರುತ್ತೆ ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 3-45  ಗಂಟೆಯಿಂದ  4-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 12  ಟೆಟ್ರಾ ಪಾಕೆಟ್ ಗಳು ಹಾಗೂ ಒಂದು ಪ್ಲಾಸ್ಟಿಕ್ ಚೀಲ, 4 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, 4 ಖಾಲಿ HAY WARDS CHEERS  WHISKY ಯ ಟೆಟ್ರಾ ಪಾಕೆಟ್ ಗಳು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ 5-15 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು  ಈ ಮೆಮೋನೊಂದಿಗೆ  ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ  ವಿರುದ್ಧ  15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.281/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 15/10/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ-205 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:09/10/2021 ರಂದು ರಾತ್ರಿ 21-45 ಗಂಟೆಗೆ ಡಿ.ಸಿ.ಬಿ ಸಿ.ಎನ್. ಪೊಲೀಸ್ ಠಾಣೆಯ ಸಿ.ಹೆಚ್.ಸಿ-80 ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ: 09-10-2021 ರಂದು ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ ಪಿ ಮಂಜು ಪಿ.ಐ ರವರು ಸಿ.ಹೆಚ್.ಸಿ-80 ಕೃಷ್ಣಪ್ಪ ಎಸ್ ಆದ ನನಗೆ, ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ ವರದಿ ಮಾಡುವಂತೆ ನೇಮಿಸಿ ಕಳುಹಿಸಿಕೊಟ್ಟಿದ್ದು, ಅದರಂತೆ ನಾನು ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ, ಉಚ್ಚೊದನಹಳ್ಳಿ, ರಾತ್ರಿ 7-30 ಗಂಟೆಗೆ ಮೇಳ್ಯಾ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಮೇಳ್ಯಾ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ  ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡುತ್ತಿರುತ್ತಾರೆ ಎಂತ ಖಚಿತ ಮಾಹಿತಿ ಬಂದಿದ್ದು, ಅದರಂತೆ ನಾನು ಸದರಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಬಂದ ಖಚಿತ ಮಾಹಿತಿಯನ್ನು ಪಂಚರಿಗೆ ತಿಳಿಸಿ ನಮ್ಮೊಂದಿಗೆ ಪಂಚರನ್ನು ಕರೆದುಕೊಂಡು ಕಾಲ್ನಡಿಗೆಯಲ್ಲಿ ಸದರಿ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 4 ಜನ ಆಸಾಮಿಗಳು ಮದ್ಯಪಾನ ಮಾಡುತ್ತಿದ್ದರು. ನಂತರ ನಾನು ಮತ್ತು ಪಂಚರು ಸದರಿ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಮದ್ಯಪಾನ ಮಾಡುತ್ತಿದ್ದ 3 ಆಸಾಮಿಗಳು ಸ್ಥಳದಿಂದ ಓಡಿ ಹೋದರು. ಸದರಿ ಸ್ಥಳದಲ್ಲಿ ಒಬ್ಬಆಸಾಮಿ ಸಿಕ್ಕಿ ಬಿದ್ದಿದ್ದು ಹೆಸರು ವಿಳಾಸ ಕೆಳಲಾಗಿ ಕೆ.ಜಿ ನಾಗರಾಜಪ್ಪ ಬಿನ್ ಲೇಟ್ ಗಂಗಾಧರಪ್ಪ 56 ವರ್ಷ ವ್ಯವಸಾಯ ಈಡಿಗ ಜನಾಂಗ ವಾಸ ಕೊನಾಪುರ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು ಸ್ಥಳವನ್ನು ಪರಿಶೀಲನೆ ಮಾಡಿದಾಗ ಸ್ಥಳದಲ್ಲಿ 90 ML ಸಾಮರ್ಥ್ಯದ HAYWARD CHEERS WHISKY 23 ಮದ್ಯ ತುಂಬಿದ TETRA PACKET ಗಳು ಇದ್ದು, ಒಟ್ಟು ಇದರ ಸಾಮರ್ಥ್ಯ 2 ಲೀಟರ್ 70 ML ಆಗಿದ್ದು, ಇದರ ಬೆಲೆ 807/- ರೂಗಳಾಗಿರುತ್ತೆ. ನಂತರ ಸ್ಥಳದಲ್ಲಿ 2 ಪ್ಲಾಸ್ಟಿಕ್ ಗ್ಲಾಸ್, 4 ಖಾಲಿ ನೀರಿನ ಪ್ಲಾಸ್ಟಿಕ್ ಪಾಕೆಟ್ ಹಾಗೂ 90 ML ಸಾಮರ್ಥ್ಯದ HAYWARD CHEERS WHISKY  ಖಾಲಿ 2 ಮದ್ಯದ TETRA PACKET ಗಳಿರುತ್ತೆ. ನಂತರ ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಗಿ ಇದೆಯೇ? ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಪಂಚರ ಸಮಕ್ಷಮ ಸಂಜೆ 7-45 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿಯನ್ನು ಮತ್ತು ಮೇಲ್ಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿದ್ದು, ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಸದರಿ ಆಸಾಮಿ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ನೀಡಿದ ದೂರಾಗಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.282/2021 ಕಲಂ. 279,337,304A ಐ.ಪಿ.ಸಿ:-

     ದಿನಾಂಕ 16/10/2021 ರಂದು ಬೆಳಿಗ್ಗೆ 8-45 ಗಂಟೆಗೆ ಪಿರ್ಯಾಧಿದಾರರಾದ  ಮೇಘನ ಕೋಂ ನರಸಿಂಹಮೂರ್ತಿ , 20 ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ ಜನಾಂಗ, ಚಂದನದೂರು ಗ್ರಾಮ, ಗೌಇಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ-ನಾನು ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ನನಗೆ ಸುಮಾರು 3 ವರ್ಷಗಳ ಹಿಂದೆ ಚಂದನದೂರು ಗ್ರಾಮದ ನರಸಿಂಹಮೂರ್ತಿ ಬಿನ್ ಲಕ್ಷ್ಮಿ ನರಸಪ್ಪ ,31 ವರ್ಷ, ಕಂಬಿ ಕೆಲಸ, ಆದಿಕರ್ನಾಟಕ ಜನಾಂಗ, ಎಂಬುವರ ಜೊತೆಯಲ್ಲಿ ಮದುವೆ ಆಗಿರುತ್ತೇನೆ. ನನ್ನ ಗಂಡ ಪ್ರತಿ ದಿನ ಕಂಬಿ ಕೆಲಸಕ್ಕಾಗಿ ಹೋಗಿ ಸಂಜೆ ಮನೆಗೆ ವಾಪಸ್ಸು ಬರುತ್ತಿದ್ದರು. ಹೀಗಿರುವಾಗ್ಗೆ ದಿನಾಂಕ:15/10/2021 ರಂದು ರಾತ್ರಿ ಸುಮಾರು 7-15 ಗಂಟೆ ಸಮಯದಲ್ಲಿ ನನ್ನ ಗಂಡ ನರಸಿಂಹಮೂರ್ತಿ ರವರು ಊಟ ಮುಗಿಸಿಕೊಂಡು ಹೊರಗೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿರುತ್ತಾರೆ. ನಂತರ ರಾತ್ರಿ  ಸುಮಾರು 7-45 ಗಂಟೆ ಸಮಯದಲ್ಲಿ ನಮ್ಮ  ಸಂಬಂಧಿಯಾದ ನರಸಿಂಹಮೂರ್ತಿ ಬಿನ್ ಕದಿರಪ್ಪ  ಎಂಬುವರು ಮನೆಯ ಬಳಿ ಬಂದು ನಿನ್ನ ಗಂಡನಿಗೆ ಚಂದನದೂರು ಗ್ರಾಮದ ವಿಧುರಾಶ್ವತ್ಥ-ಚಂದನದೂರು ರಸ್ತೆಯ ಬಳಿ ಇರುವ ಹೊಸಮನೆಗಳ ಶಿವಲಿಂಗಪ್ಪ ರವರ ಮನೆಯ ಬಳಿ ಅಪಘಾತವಾಗಿರುವುದಾಗಿ ತಿಳಿಸಿದ್ದು ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ನನ್ನ ಗಂಡ ನರಸಿಂಹಮೂರ್ತಿಯನ್ನು ಮಾತನಾಡಿಸಿದ್ದು ಇವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವಿಷಯ ತಿಳಿಯಲಾಗಿ ನನ್ನ ಗಂಡ ಬಹಿರ್ದೆಸೆಗಾಗಿ ಹೋಗಿ ಮತ್ತೆ ವಾಪಸ್ಸು ಮನೆಗೆ ಬರಲು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ ನನ್ನ ಗಂಡನ ಹಿಂಭಾಗದಿಂದ ಅಂದರೆ ವಿಧುರಾಶ್ವತ್ಥ ಕಡೆಯಿಂದ ಬಂದ AP-39 AD-4220 TVS XL HEAVY DUTY ದ್ವಿಚಕ್ರ ವಾಹನದ ಸವಾರ ತಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡ ನರಸಿಂಹಮೂರ್ತಿ ರವರಿಗೆ ಹಿಂಭಾಗದಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಕಾರಣ ನನ್ನ ಗಂಡನಿಗೆ ಬಲ ಕಾಲಿಗೆ ,ಎರಡು ಕೈಗಳಿಗೆ ರಕ್ತಗಾಯವಾಗಿರುತ್ತೆ ಹಾಗೂ ತಲೆಯ ಹಿಂಭಾಗಕ್ಕೆ ರಕ್ತಗಾಯ ವಾಗಿ ಬಾಯಿ ಮತ್ತು ಮೂಗಿನಲ್ಲಿ ರಕ್ತ ಬಂದಿರುತ್ತೆ. ಹಾಗೂ ಹಣೆಯ ಮೇಲೆ ಬಲಭಾಗದಲ್ಲಿ ರಕ್ತ ಗಾಯ ವಾಗಿರುತ್ತೆ. ಸದರಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಬರುತ್ತಿದ್ದು  ಅದರಲ್ಲಿ ದ್ವಿಚಕ್ರ ವಾಹನದ ಸವಾರನಿಗೆ ಮುಖದ ಮೇಲೆ ತರಚಿದ ಗಾಯಗಳಾಗಿರುತ್ತೆ. ಅಲ್ಲಿಂದ ಯಾವುದೋ ವಾಹನದಲ್ಲಿ ನನ್ನ ಗಂಡನಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಕರೆದುಕೊಂಡು ಬಂದಿದ್ದು ಅಲ್ಲಿನ ವೈಧ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನನ್ನ ಗಂಡನನ್ನು ಆಂಬುಲೆನ್ಸ್ ನಲ್ಲಿ  ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ನನ್ನ ಗಂಡ ಉಸಿರಾಡುತ್ತಿರಲಿಲ್ಲ ಅನುಮಾನಗೊಂಡು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ರಾತ್ರಿ 9-00 ಗಂಟೆಗೆ ಕರೆದುಕೊಂಡು ಹೋಗಿ ವೈಧ್ಯರ ಬಳಿ ಪರಿಕ್ಷಿಸಿಲಾಗಿ ಅಲ್ಲಿನ ವೈಧ್ಯಾಧಿಕಾರಿಗಳು  ನನ್ನ ಗಂಡನನ್ನು ಪರಿಕ್ಷಿಸಿ ನನ್ನ ಗಂಡ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ನನ್ನ ಗಂಡನ ಮೃತದೇಹವನ್ನು ರಾತ್ರಿ 1-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು  ಶವಾಗಾರದಲ್ಲಿ ಇಟ್ಟಿದ್ದು ನನ್ನ ಗಂಡನಿಗೆ ಚಿಕಿತ್ಸೆಕೊಡಿಸಲು ಓಡಾಡುತ್ತಿದ್ದರಿಂದ ಈ ದಿನ ಠಾಣೆಗೆ ತಡವಾಗಿ ಬಂದು ನನ್ನ ಗಂಡನಿಗೆ ಅಪಘಾತ ಪಡಿಸಿ ನನ್ನ ಗಂಡನ ಸಾವಿಗೆ ಕಾರಣನಾದ AP-39 AD-4220 TVS XL HEAVY DUTY ದ್ವಿಚಕ್ರ ವಾಹನ ಮತ್ತು ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.129/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:15/10/2021 ರಂದು ಬೆಳಿಗ್ಗೆ10.15ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರತ್ನಮ್ಮ ಕೋಂ ವಿರಸೊಣ್ಣಪ್ಪ, 55 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಕೊಳವನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಗಂಡನಿಗೆ ವಯಸ್ಸಾಗಿದ್ದು ಕೆಲಸ ಮಾಡಲು ಆಗುತ್ತಿಲ್ಲ ತಾನು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವು. ತನ್ನ ಗಂಡ ಓಡಾಡಲು ಕೆ.ಎ-40 ಎಸ್-0590 ಟಿ.ವಿ.ಎಸ್ ಎಕ್ಸ.ಎಲ್ ದ್ವಿಚಕ್ರ ವಾಹನವನ್ನು ಕೊಂಡುಕೊಂಡಿದ್ದು  ನೆಂಟರ ಮನೆಗಳಿಗೆ ಹೋಗಿ ಬರುತ್ತಿದ್ದನು. ದಿನಾಂಕ:14/10/2021 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ತನಗೆ ನಕ್ಕನಹಳ್ಳಿ ನೆಂಟರ ಮನೆಗೆ ಹೋಗಿ ಬರುವುದಾಗಿ ಹೇಳಿ ಸದರಿ ವಾಹನದಲ್ಲಿ ಹೋಗಿರುತ್ತಾರೆ. ನಂತರ ಸುಮಾರು 10 ನಿಮಿಷಗಳಲ್ಲಿ ಯಾರೋ ತನಗೆ ಪೋನ್ ಮಾಡಿ ನಕ್ಕನಹಳ್ಳಿ ಗ್ರಾಮದ ಸೋಮು ರವರ ಮನೆಯ ಬಳಿ ವೀರಸೊಣ್ಣಪ್ಪ ರವರು ವಾಹನದಿಂದ ಬಿದ್ದು ಹೋಗಿದ್ದಾರೆಂದು ತಿಳಿಸಿದ್ದು ತಕ್ಷಣ ತಾನು ಮತ್ತು ತನ್ನ ಮೊಮ್ಮಗ ಮನೋಹರ ಮತ್ತು ತಮ್ಮ ಗ್ರಾಮದ ನಾಗೇಶ(ನಾರಾಯಣಪ್ಪ) ರವರ ಕಾರಿನಲ್ಲಿ ತನ್ನ ಗಂಡ ವೀರಸೊಣ್ಣಪ್ಪ ರವರು ಬಿದ್ದಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಗಂಡನ ತಲೆ, ಮುಖ ಎಡ ಭಾಗಕ್ಕೆ ಮೂಗೇಟು ಆಗಿದ್ದು ನಂತರದಲ್ಲಿ ಅಲ್ಲಿನ ಜನರನ್ನು ವಿಚಾರಿಸಲಾಗಿ ವೀರಸೊಣ್ಣಪ್ಪ ರವರು ಕೆ.ಎ-40 ಎಸ್-0590  ಟಿ.ವಿ.ಎಸ್ ಎಕ್ಸ.ಎಲ್ ವಾಹನವನ್ನು ಜೋರಾಗಿ ಓಡಿಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಗಾಯಗಳಾಗು ಆಗಿರುವುದಾಗಿಯು ತನ್ನ ಗಂಡನನ್ನು ಕೇಳಿದಾಗ ವಾಹನ ನಿಯಂತ್ರಣ ತಪ್ಪಿ ಬಿದ್ದಿದ್ದಾಗಿ ಹೇಳಿದ್ದು ತಕ್ಷಣ ತಾವು ತನ್ನ ಗಂಡನನ್ನು ಕಾರಿನಲ್ಲಿ ಚಿಕ್ಕಬಳ್ಳಾಪುರ ಕೆ.ವಿ ಕ್ಯಾಂಪಸ್ ಬಳಿ ಇರುವ ಜೈನ್ ಮಿಷನ್ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿ ನಂತರ ತನ್ನ ಗಂಡ ಚೆನ್ನಾಗಿ ಇದ್ದುದ್ದರಿಂದ ಮನೆಗೆ ವಾಪಸ್ಸು ಬಂದು ಮನೆಯಲ್ಲಿ ಸಂಜೆ ಸುಮಾರು 6:00 ಗಂಟೆಯಲ್ಲಿ ತನ್ನ ಗಂಡ ವಾಂತಿ ಮಾಡಿಕೊಂಡಾಗ ಮತ್ತೇ ನಾಗೇಶ ರವರ ಕಾರಿನಲ್ಲಿ ಜೈನ್ ಮಿಷನ್ ಆಸ್ಪತ್ರೆಯಲ್ಲಿ ತೋರಿಸಿ ಸಿಟಿ ಸ್ಕ್ಯಾನಿಂಗ್ ತೆಗೆಸಿ ವೈದ್ಯರ ಸಲಹೆಯ ಮೇರೆಗೆ ನಾಗೇಶ ರವರ ಕಾರಿನಲ್ಲಿ ಮನೋಹರ ರವರ ಜೊತೆ ಬೆಂಗಳೂರು ನಿಮಾನ್ಸ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಪಡಿಸುತ್ತಿದ್ದು ಚಿಕಿತ್ಸೆ ಪಲಕಾರಿಯಾಗದೇ ಈ ದಿನ ಬೆಳಿಗ್ಗೆ 06:00 ಗಂಟೆಗೆ ಮೃತಪಟ್ಟಿರುತ್ತಾರೆ. ತನ್ನ ಗಂಡ ತನ್ನಷ್ಟಕ್ಕೆ ತಾನೇ ಕೆ.ಎ-40 ಎಸ್-0590 ಟಿ.ವಿ.ಎಸ್ ದ್ವಿಚಕ್ರ ವಾಹನವನ್ನು ಅತೀ ವೇಗವಾಗಿ ಹೊಡಿಸಿ ಬದ್ದಿದ್ದು ತನ್ನ ಗಂಡನ ಮೃತದೇಹವು ಬೆಂಗಳೂರು ನಿಮಾನ್ಸ ಆಸ್ಪತ್ರೆಯಲ್ಲಿದ್ದು ತನ್ನ ಗಂಡನ ಮೃತದೇಹದ ಮೇಲೆ ಮುಂದಿನ ಕ್ರಮ ಜರುಗಿಸಕೊಡಬೇಕೆಂದು ಕೋರುತ್ತೇನೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.130/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:15/10/2021 ರಂದು ಮದ್ಯಾಹ್ನ 2:50 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:15-10-2021 ರಂದು ಮದ್ಯಾಹ್ನ 1:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವಮೂರ್ತಿ ಮತ್ತಯ ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಮುದ್ದೇನಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಗೌಚೇನಹಳ್ಳಿ ಗ್ರಾಮದ ಮುದ್ದುಗಂಗ ಬಿನ್ ಮುನಿನರಸಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕಂಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 1:25 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮುದ್ದುಗಂಗ ಬಿನ್ ಮುನಿನರಸಪ್ಪ, 35 ವರ್ಷ, ಪ.ಜಾತಿ, ಅಂಗಡಿ ವ್ಯಾಪಾರ, ಗೌಚೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 16 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 16 ಟೆಟ್ರಾ ಪ್ಯಾಕೇಟುಗಳ ಬೆಲೆ 562 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 440 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 1:30 ಗಂಟೆಯಿಂದ ಬೆಳಿಗ್ಗೆ 02:15 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಮದ್ಯಾಹ್ನ 2:45 ಗಂಟೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 16-10-2021 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080