ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.97/2021 ಕಲಂ. 87 ಕೆ.ಪಿ ಆಕ್ಟ್:-

    ದಿನಾಂಕ: 14-10-2021 ರಂದು ರಾತ್ರಿ 12.30  ಗಂಟೆಗೆ  ಪಿ.ಎಸ್ .ಐ  ರವರಾದ ವೆಂಕಟರವಣಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ,  ದಿನಾಂಕ 13-10-2021 ರಂದು ರಾತ್ರಿ ರೌಂಡ್ಸ್ ಕರ್ತವ್ಯಕ್ಕಾಗಿ ಠಾಣೆಗೆ ಬಂದಿದ್ದು  ಇದೇ ದಿನ ರಾತ್ರಿ ಸುಮಾರು 20-30 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂಧರೆ ರಾಮಸ್ವಾಮಿಪಲ್ಲಿ ಗ್ರಾಮದಲ್ಲಿ ಶ್ರೀನಿವಾಸಲು  ಬಿನ್ ಚಿನ್ನವೆಂಕಟಪ್ಪ ರವರ  ಮನೆಯ ಮುಂಭಾಗ ಬೀದಿಯಲ್ಲಿ ಇರುವ ವಿದ್ಯೂತ್ ಕಂಬದ ದ್ವೀಪದ ಕೆಳಗೆ ಯಾರೋ ಕೆಲವರು ಗುಂಪುಕಟ್ಟಿಕೊಂಡು ವೃತ್ತಾಕಾರದಲ್ಲಿ ಕುಳಿತು ಅಂದರ್-ಬಾಹರ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ  ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ  ಹೆಚ್ ಸಿ 129 ರವಣಪ್ಪ, ಹೆಚ್ ಸಿ 47 ಪ್ರಭಾಕರ್, ಹೆಚ್ ಸಿ  180 ಚೌಡಪ್ಪ ,  ಪಿಸಿ 437 ಸತೀಶ ಮತ್ತು ಸಿಪಿಸಿ 468 ಆಂಜಿನಪ್ಪ    ರವರುಗಳು  ಸರ್ಕಾರಿ ಜೀಪ್ ಸಂಖ್ಯೆ  ಕೆಎ 42 ಜಿ 61 ವಾಹನದಲ್ಲಿ ಮತ್ತು ದ್ವಿಚಕ್ರವಾಹನಗಳಲ್ಲಿ  ರಾತ್ರಿ 9-30 ಗಂಟೆಗೆ ರಾಮಸ್ವಾಮಪಲ್ಲಿ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿದ್ದ  ಪಂಚರನ್ನು ಬರಮಾಡಿಕೊಂಡು ಪಂಚರಾಗಿ ಬಂದು ಸಹಕರಿಸುವಂತೆ ಕೋರಿದ್ದು ಅದರಂತೆ ಅವರು ಒಪ್ಪಿಕೊಂಡು  ಪಂಚರು ಮತ್ತು ನಾವು ರಾಮಸ್ವಾಮಪಲ್ಲಿ ಗ್ರಾಮದ ಶ್ರೀನಿವಾಸಲು ಬಿನ್ ಚಿನ್ನ ವೆಂಕಟಪ್ಪ  ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು  ನೋಡಲಾಗಿ  ಬೀದಿಯಲ್ಲಿ ಇರುವ ವಿದ್ಯೂತ್ ಕಂಬದ ದ್ವೀಪದ ಕೆಳಗೆ ಯಾರೋ ಕೆಲವರು ಗುಂಪುಕಟ್ಟಿಕೊಂಡು ವೃತ್ತಾಕಾರದಲ್ಲಿ ಕುಳಿತು ಅಂದರ್-ಬಾಹರ್ ಅಂದರ್ 100 ಬಾಹರ್ 100 ಎಂದು ಕೂಗುತ್ತಾ  ಇಸ್ಪಿಟ್ ಜೂಜಾಟ ಆಡುತ್ತಿದ್ದವರ ಮೇಲೆ  ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1)  ಶ್ರೀನಿವಾಸಲು ಬಿನ್ ಚಿನ್ನವೆಂಕಟರವಣಪ್ಪ,54ವರ್ಷ, ಬಲಿಜಿಗರು ಹೂವಿ ವ್ಯಾಪಾರ ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 2)ರವಣಪ್ಪ ಬಿನ್ ನಾರೆಪ್ಪ,43ವರ್ಷ, ಬಲಿಜಿಗರು,ಪೈಂಟಿಂಗ್ ಕೆಲಸ,  ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 3)ಈಶ್ವರಪ್ಪ ಬಿನ್ ಲೇಟ್ ನಾರೆಪ್ಪ, 45ವರ್ಷ, ಬಲಿಜಿಗರು,ಕೂಲಿ ಕೆಲಸ,  ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 4) ಮುತ್ತುರಾಯಪ್ಪ ಬಿನ್ ಗಂಗಯ್ಯ, 43ವರ್ಷ, ನಾಯಕರು ,ಕೂಲಿ ಕೆಲಸ,  ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 5)ರಾಮಸ್ವಾಮಿ ಬಿನ್ ಲೇಟ್ ಸುಬ್ಬಯ್ಯ, 50ವರ್ಷ,ಕುಂಬಾರ ಜನಾಂಗ,  ,ಕೂಲಿ ಕೆಲಸ,  ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 6) ಮಂಜುನಾಥ್ ಬಿನ್ ಗಂಗುಲಪ್ಪ, 36ವರ್ಷ, ಬಲಿಜಿಗರು,  ,ಕೂಲಿ ಕೆಲಸ,  ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 7)ಆಂಜಿನೇಯ ರೆಡ್ಡಿ ಬಿನ್ ಲೇಟ್ ಮಾಕಿರೆಡ್ಡಿ , 48ವರ್ಷ, ವಕ್ಕಲಿಗರು , ಜಿರಾಯ್ತಿ ಕೆಲಸ,  ರಾಮಸ್ವಾಮಿಪಲ್ಲಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು  ಎಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಜೂಜಾಟಕ್ಕೆ ಬಳಿಸಿದಂತಹ 52 ಇಸ್ವೀಟು ಎಲೆ , ಬಂದು ಹಳೆ ನ್ಯೂಸ್ ಪೇಪರ್  ಹಾಗೂ ಪಣಕ್ಕೆ ಇಟ್ಟಿದ್ದ ಒಟ್ಟು 3650/- ನಗದು ಹಣ ಅನ್ನು ಪಂಚರ ಸಮಕ್ಷಮ  ಪಂಚನಾಮೆಯ ಮುಖಾಂತರ ಅಮಾನತುಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ರಾತ್ರಿ 12:30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ NCR 110/2021 ರಂತೆ ದಾಖಲಿಸಿಕೊಂಡಿದ್ದು ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ 97/2021 ಕಲಂ 87 ಕೆ ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.450/2021 ಕಲಂ. 143,147,148,323,324,504,506,149 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

    ದಿನಾಂಕ: 14/10/2021 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮಿದೇವಮ್ಮ ಕೋಂ ಈರಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಧನಮನಗಡ್ಡ (ನಲ್ಲರಾಳ್ಳಹಳ್ಳಿ ಕ್ರಾಸ್) ಬೋಡನಮರಿ ಮಜರಾ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.50 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಮನೆಯ ಪಕ್ಕದಲ್ಲಿ ತನ್ನ ಗಂಡ ಈರಪ್ಪ ರವರ ಹೆಸರಿನಲ್ಲಿ ಖಾಲಿ ನಿವೇಶನ ಇದ್ದು, ಸದರಿ ಖಾಲಿ ನಿವೇಶನದ ಬಗ್ಗೆ ತಮಗೂ ಹಾಗೂ ಬೋಡನಮರಿ ಗ್ರಾಮದ ಈಡಿಗ ಗೌಡ್ರು ಜನಾಂಗದ ಸೀನಪ್ಪ ಬಿನ್ ವೆಂಕಟರಾಮಪ್ಪರವರಿಗೆ ತಕರಾರು ಇದ್ದು ಈ ಬಗ್ಗೆ ತಾವು ಚಿಂತಾಮಣಿ ಘನ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದು ವಿಚಾರಣೆಯ ಹಂತದಲ್ಲಿರುತ್ತೆ. ಹೀಗಿರುವಾಗ ದಿನಾಂಕ: 05/10/2021 ರಂದು ಬೆಳಿಗ್ಗೆ 08.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಮುಂದೆ ಇದ್ದಾಗ ಮೇಲ್ಕಂಡ ಸೀನಪ್ಪ ಮತ್ತು ಅವರ ಕಡೆಯವರಾದ ವೆಂಕಟಸ್ವಾಮಿ @ ಪೈಂಟರ್ ವೆಂಕಟಸ್ವಾಮಿ, ಸುಧಾ ಬಿನ್ ನಾರಾಯಣಸ್ವಾಮಿ, ದಿವ್ಯ ಬಿನ್ ನಾರಾಯಣಸ್ವಾಮಿ, ಸುಭಾಶಿನಿ ಬಿನ್ ನಾರಾಯಣಸ್ವಾಮಿ, ಮಂಜುಳ ಕೋಂ ನಾರಾಯಣಸ್ವಾಮಿ, ವೆಂಕಟೇಶ ಬಿನ್ ಫಕೀರಪ್ಪ ಮತ್ತು ತಮ್ಮ ಜನಾಂಗದ ಗಂಗುಲಪ್ಪ, ಅಂಗಡಿ ವೆಂಕಟಸ್ವಾಮಿ (ತಂದೆಯ ಹೆಸರು ಗೊತ್ತಿಲ್ಲ), ಬಚ್ಚಿನಾಯಪ್ಪ ನಾರಾಯಣಸ್ವಾಮಿ ಮತ್ತು ಜಯಮ್ಮ ಕೋಂ ವೆಂಕಟೇಶಪ್ಪ ರವರು ಅಕ್ರಮ ಗುಂಪುಕಟ್ಟಿಕೊಂಡು ತಮ್ಮ ಬಳಿ ಬಂದು ತನ್ನನ್ನು ಕುರಿತು “ಏನೇ ನೀಯಮ್ಮಾ, ಮಾದಿಗ ಲಂಜಾ ಮುಂಡಾ, ನೀಯಮ್ಮಾ ಜಾತಿನೇ ದೆಂಗಾ” ಎಂದು ತೆಲುಗು ಬಾಷೆಯಲ್ಲಿ ತನಗೆ ಬೈದು, ತನ್ನ ಜಾತಿಯ ಬಗ್ಗೆ ಅವಮಾನ ಮಾಡಿ, ತನಗೆ ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ಸೀನಪ್ಪ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಮೂತಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ ತನಗೆ “ನೀಯಮ್ಮಾ ಮಾದಿಗ ಪೂಕನ ದೆಂಗಾ” ಎಂದು ಬೈದಿರುತ್ತಾರೆ. ಉಳಿದ ವೆಂಕಟಸ್ವಾಮಿ @ ಪೈಂಟರ್ ವೆಂಕಟಸ್ವಾಮಿ, ಸುಧಾ, ದಿವ್ಯಾ, ಸುಭಾಶಿನಿ, ಮಂಜುಳ, ವೆಂಕಟೇಶ್ ಮತ್ತು ತಮ್ಮ ಜನಾಂಗದ ಗಂಗುಲಪ್ಪ, ಅಂಗಡಿ ವೆಂಕಟಸ್ವಾಮಿ, ಬಚ್ಚಿನಾಯಪ್ಪ ನಾರಾಯಣಸ್ವಾಮಿ ಮತ್ತು ಜಯಮ್ಮ ರವರು ತನಗೆ ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿ, ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿದರು. ವೆಂಕಟಸ್ವಾಮಿ @ ಪೈಂಟರ್ ವೆಂಕಟಸ್ವಾಮಿ ಮತ್ತು ವೆಂಕಟೇಶ್ ರವರು ತಮ್ಮ ಕೈಯಲ್ಲಿ ಕಲ್ಲುಗಳಿಂದ ತನ್ನ ತಲೆಗೆ ಮತ್ತು ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ಉಳಿದ ಸುಧಾ, ದಿವ್ಯಾ, ಸುಬಾಶಿನಿ, ಮಂಜುಳ ಮತ್ತು ಜಯಮ್ಮ ರವರು ತನ್ನ ತಲೆ ಕೋದಲನ್ನು ಹಿಡಿದು ಎಳೆದಾಡಿ, ಕೈಗಳಿಂದ ಹೊಡೆದು ನೋವನ್ನುಂಟು ಮಾಡಿದರು. ನಂತರ ಸೀನಪ್ಪ ರವರು ತನ್ನನ್ನು ಕುರಿತು ಈ ಜಾಗ ನನಗೆ ಸೇರಿದ್ದು, ನೀವು ಇಲ್ಲಿ ಇರಬಾರದು, ಇನ್ನೋಂದು ಸಲ ಈ ಜಾಗದ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಇಲ್ಲಿಯೇ ಊತು ಬಿಡುತ್ತೇನೆ ಎಂದು ಪ್ರಾಣಬೆದರಿಕೆ ಹಾಕಿದರು. ಅಷ್ಠರಲ್ಲಿ ತಮ್ಮ ಗ್ರಾಮದ ಗಂಗುಲಮ್ಮ ಕೋಂ ಚಿಕ್ಕ ತಿರುಮಲಪ್ಪ, ವೆಂಕಟರವಣಪ್ಪ ಮತ್ತು ತನ್ನ ಗಂಡ ಈರಪ್ಪ ರವರು ಅಡ್ಡ ಬಂದು ಗಲಾಟೆ ಬಿಡಿಸಿದರು. ನಂತರ ಗಾಯಗೊಂಡಿದ್ದ ತನ್ನನ್ನು ತನ್ನ ಮಗಳಾದ ವಾಣಿ ಮತ್ತು ಮಗ ಗಂಗಾಧರ್ ರವರು ಆಂಬುಲೆನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ವೈದ್ಯರು ಪರೀಕ್ಷಿಸಿ ತನಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ತಾನು ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ತಮ್ಮ ಹಿರಿಯರು ರಾಜಿ ಪಂಚಾಯ್ತಿ ಮಾಡೋಣವೆಂದು ತಿಳಿಸಿದ್ದು, ಮೇಲ್ಕಂಡವರು ರಾಜಿಗೆ ಬಾರದ ಕಾರಣ ಈ ದಿನ ತಡವಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು ತನ್ನ ಜಾತಿಯ ಬಗ್ಗೆ ಬೈದು, ತನ್ನನ್ನು ಹೊಡೆದು, ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.450/2021 ಕಲಂ. 454,457,380 ಐ.ಪಿ.ಸಿ:-

    ದಿನಾಂಕ: 14/10/2021 ರಂದು ಪಿರ್ಯಾದಿದಾರರಾದ ಶ್ರೀ ಸಂತೋಷಷ್ ಕುಮಾರ್ ಕೆ.ಎ ಬಿನ್ ಕೆ ಅನಂತಯ್ಯ, ವಾಸ: ಬಿಸಿಎಂ ಹಾಸ್ಟೆಲ್ ಹಿಂಭಾಗ, ವಾರ್ಡ್ ನಂ: 17, 4ನೇಕ್ರಾಸ್, ಚೌಡರೆಡ್ಡಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 08/10/2021 ರಂದು ಶುಕ್ರವಾರ ಬೆಳಿಗ್ಗೆ 8-30 ಗಂಟೆಗೆ ಮನೆಗೆ ಬೀಗ ಹಾಕಿ ತಾನು ಮತ್ತು ತನ್ನ ತಾಯಿ ಚಂದ್ರಕಳಾ ಕೆ.ಹೆಚ್ ರವರು ತುಮಕೂರಿನ ತಮ್ಮ ಬಾವನವರ ಮನೆಯಲ್ಲಿನ ಪೂಜೆಗೆ ಹೋಗಿದ್ದೆವು ದಿನಾಂಕ: 08/10/2021 ರಂದು ಶುಕ್ರವಾರ ಊರಿಗೆ ಹೋಗಿದ್ದ ತಾವು ದಿನಾಂಕ: 13/10/2021 ರಂದು ಗುರುವಾರ ಸಂಜೆ 4:30 ಗಂಟೆಗೆ ಚಿಂತಾಮಣಿಯ 04ನೇ ಕ್ರಾಸ್ ಚೌಡರೆಡ್ಡಿ ಪಾಳ್ಯದಲ್ಲಿರುವ ತಮ್ಮ ಮನೆಗೆ ವಾಪಸ್ಸಾಗಿದ್ದು ಆ ಸಂಧರ್ಭದಲ್ಲಿ ಮನೆಯ ಬಾಗಿಲನ್ನು ತೆಗೆಯಲು ಹೋದಾಗ ಮನೆ ಡೋರ್ ಲಾಕ್ ಓಪನ್ ಮಾಡಲಾಗಿದ್ದು, ಡೋರ್ ಲಾಕ್ ಮುರಿದು ಹೋಗಿತ್ತು ಮನೆಯ ಓಳಗೆ ಹೋದಾಗ ರೂಂ ನಲ್ಲಿರುವ ಅಲಮಾರು (ಬೀರುವ) ಗಳನ್ನು ಅವುಗಳ ಕೀಗಳನ್ನು ಬಳಸಿಕೊಂಡು ಒಪನ್ ಮಾಡಿ ಅದರಲ್ಲಿರುವ ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು ಈ ವಸ್ತುಗಳ ಜೊತೆಗೆ ಅಂದಾಜು 50,000/- ನಗದು ಹಣ ಕಳ್ಳತನ ಮಾಡಲಾಗಿದೆ. ಕಳ್ಳತನ ಮಾಡಲಾದ ಬೆಳ್ಳಿ ವಸ್ತುಗಳ ಅಂದಾಜು ಮೊತ್ತ 50,000/- ರೂಗಳಾಗಿದ್ದು ಚಿನ್ನದ ವಸ್ತುಗಳ ಅಂದಾಜು ಮೊತ್ತ 1,40,000/- ರೂಗಳಾಗಿರುತ್ತೆ. ಈ ಚಿನ್ನ ಮತ್ತು ಬೆಳ್ಳಿ ವಸ್ತುಗಳ ವಿವರ ನೆಕ್ ಲೇಸ್ (02 ಎಳೆ ಮುತ್ತಿನ ಸರ) 15 ಗ್ರಾಂ, ಕಿವಿ ಓಲೆ 03 ಜೊತೆ 20 ಗ್ರಾಂ, ಚೈನ್ 20 ಗ್ರಾಂ, 15 ಗ್ರಾಂ ಉಂಗುರುಗಳು ಓಟ್ಟು 70 ಗ್ರಾಂ ಚಿನ್ನದ ಒಡವೆಗಳಾಗಿದ್ದು ಅಂದಾಜು ಮೊತ್ತ 1,40,000/- ರೂಗಳಾಗಿರುತ್ತೆ, ಬೆಳ್ಳಿ ತಟ್ಟೆ, ದೀಪ ಸ್ಥಂಭಗಳು 02 ಜೊತೆ 02 ಬೆಳ್ಳಿ ಚೊಂಬು , ದೀಪಗಳು 03 ಜೊತೆ , ಬಟ್ಟಲುಗಳು 20, ಲೋಟಗಳು 04 ಲಕ್ಷ್ಮೀ ಮುಖವಾಡ, ಮಂಗಳಾರತಿ-ಏಕಾರತಿ, ತ್ರಿಯಾರತಿ ಮತ್ತು ಪಂಚಾರತಿ 1.800 ಗ್ರಾಂ ಬೆಳ್ಳಿ ವಸ್ತುಗಳು ಇದರ ಅಂದಾಜು ಬೆಲೆ 50,000/-  ಮೇಲ್ಕಂಡ ಹಣ ಮತ್ತು ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಮ್ಮ ತಾಯಿಯವರು ಮನೆಯಲ್ಲಿ ಇಲ್ಲದ ಕಾರಣ ಕಳ್ಳತನ ವಾಗಿರುವ ಓಡವೆಗಳ ಬಗ್ಗೆ ತಮ್ಮ ತಾಯಿಯವರ ಬಳಿ ತಿಳಿದುಕೊಂಡು ದೂರನ್ನು ತಡವಾಗಿ ದೂರು ನೀಡಿರುತ್ತೆ. ಆದ್ದರಿಂದ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.148/2021 ಕಲಂ. 323,324,504,506,34 ಐ.ಪಿ.ಸಿ:-

    ದಿನಾಂಕ:14-10-2021 ರಂದು ಸಂಜೆ 18-00 ಗಂಟೆಗೆ ಪಿರ್ಯಾದಿದಾರರಾದ ರಾಮಚಂದ್ರಪ್ಪ ಬಿನ್ ಲೇಟ್ ನಾಗಪ್ಪ, 50 ವರ್ಷ, ಕೂಲಿ ಕೆಲಸ, ಕೊರಚರು,ವಾಸ: ದಾಸಾರ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ರವರು ತಡವಾಗಿ ಠಾಣೆಗೆ ಹಾಜರಾಗಿ ನೀಡಿದ  ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೆನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:12/10/2021 ರಂದು ಬೆಳಗ್ಗೆ 7-30 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯಿಂದ ಕಾಲೋನಿಗೆ ಹೋಗಿ ಬರಲು ನಮ್ಮ ಮನೆಯ ಹಿಂದೆ ಇರುವ ಬಜಾರಿನಲ್ಲಿ ಹೋಗುತ್ತಿದ್ದಾಗ ನಮ್ಮ ಗ್ರಾಮದ ಸರಸ್ವತಮ್ಮ ರವರ ಮನೆಯ ಮುಂದೆ ಇರುವ  ತೆಂಗಿನ ಮರದಿಂದ ತೆಂಗಿನ ಕಾಯಿ ಉದುರಿ ರಸ್ತೆಯಲ್ಲಿ ಬಿದಿದ್ದು ನಾನು ತೆಂಗಿನಕಾಯಿಯನ್ನು  ಎತ್ತಿಕೊಳ್ಳುತ್ತಿದ್ದಾಗ  ಸರಸ್ವತಮ್ಮ ರವರು ಆ ತೆಂಗಿನಕಾಯಿ ನಮ್ಮದು ಎಂದು ಹೇಳಿದ್ದಕ್ಕೆ ನಾನು ಸರಸ್ವತಮ್ಮ ರವರಿಗೆ  ತೆಂಗಿನಕಾಯಿಯನ್ನು ಕೊಟ್ಟು  ಕಾಲೋನಿಯ ಕಡೆಗೆ ಹೋಗಿ ಸುಮಾರು 8-00 ಗಂಟೆಯ ಸಮಯದಲ್ಲಿ ನಾನು ಕಾಲೋನಿಂದ ಸರಸ್ವತಮ್ಮ ರವರ ಮನೆಯ ಮುಂದೆ ಬಂದಾಗ ಸರಸ್ವತಮ್ಮ ರವರ ಗಂಡ ಶ್ರೀನಿವಾಸ ಬಿನ್ ಹನುಮಪ್ಪ ಅವರ ಮಕ್ಕಳಾದ ಅಂಬರೀಶ್ ಬಿನ್ ಶ್ರೀನಿವಾಸ ಮತ್ತು ಚಲಪತಿ ಬಿನ್ ಶ್ರೀನಿವಾಸ ರವರು ಗುಂಪು ಕಟ್ಟಿಕೊಂಡು ಬಂದು ನಿಮ್ಮಪ್ಪನದು ತೆಂಗಿನಮರ ಅದಕ್ಕೆ ತೆಂಗಿನ ಕಾಯಿ ಎತ್ತಿಕೊಂಡುಕೊಂಡು ಹೋಗತೀಯಾ ಎಂದು ಏಕಾಏಕಿ ನಿಯಮ್ಮ, ನಿಯಕ್ಕ ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಶ್ರೀನಿವಾಸ ರವರು ನನ್ನ ಗಲ್ಲಾ ಪಟ್ಟಿಯನ್ನು ಹಿಡಿದುಕೊಂಡು ಒಂದು ಕಲ್ಲನ್ನು ತೆಗೆದುಕೊಂಡು ನನ್ನ  ಬಲಕಿವಿಯ ಬಳಿ ಹಾಗೂ  ಬೆನ್ನಿನ ಬಳಿ ಹೊಡೆದು ಮೂಗೇಟನ್ನುಂಟು ಮಾಡಿದನು ಅಂಬರೀಶ್ ರವರು ಅಲ್ಲಿಯೇ ಇದ್ದ ದೊಣ್ಣೆಯನ್ನು ತೆಗೆದುಕೊಂಡು  ಬಲಭಾಗದ ಹಣೆಯ ಬಳಿ ಹೊಡೆದು ಮೂಗೇಟನ್ನುಂಟು ಮಾಡಿದನು ಚಲಪತಿ ರವರು ನನ್ನ ಎಡ ಕೈನ ತೋರು ಬೆರಳನ್ನು ಹಿಡಿದು ಬಾಯಿಯಿಂದ ಕಚ್ಚಿದನು ಅಲ್ಲಿಯೇ ಇದ್ದ ಸರಸ್ವತಮ್ಮ ರವರು ನನ್ನ ಜುಟ್ಟು ಹಿಡಿದುಕೊಂಡು ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನನ್ನ ಮಗ  ವಿನೋದ್ ಕುಮಾರ್  ರವರ ನಮ್ಮ ಮನೆಯ ಬಳಿಯಿಂದ ಗಲಾಟೆ ಬಿಡಿಸಲು ಅಲ್ಲಿಗೆ ಬಂದಾಗ ಶ್ರೀನಿವಾಸರವರು ನಮ್ಮ ಮಗನ ಗಲ್ಲಾಪಟ್ಟಿ ಹಿಡಿದು ರಸ್ತೆಯಲ್ಲಿ ಬಿಳಿಸಿದ್ದು ನನ್ನ ಮಗ ವಿನೋದ್ ರವರ ಮೂಗಿನಿಂದ ರಕ್ತ ಬಂದಿರುತ್ತೆ. ಅಲ್ಲಿಯೇ ಇದ್ದ ಅಂಬರೀಶ್ ರವರು ನನ್ನ ಮಗನ ಎಡಭಾಗದ ದವಡೆಗೆ ಅಪರೇಷನ್ ಆಗಿದ್ದು ಎಡಭಾಗದ ದವಡೆಗೆ ಕಲ್ಲಿನಿಂದ ಹೊಡೆದು ಗಾಯವನ್ನುಂಟು ಮಾಡಿರುತ್ತಾನೆ. ಅಷ್ಟರಲ್ಲಿ ನನ್ನ ಹೆಂಡತಿಯಾದ ರಾಜಮ್ಮ ಮತ್ತು ನನ್ನ ಸೊಸೆ ಸುಮ ರವರುಗಳು ಅಲ್ಲಿಗೆ ಬಂದು ಗಲಾಟೆಯನ್ನು ಬಿಡಿಸಿ ನಮ್ಮಿಬ್ಬರನ್ನು ಮನೆಗೆ ಕರೆದುಕೊಂಡು ಹೋದರು, ನಮ್ಮ ಮನೆಯ ಬಳಿಗೂ ಅಂಬರೀಶ್ ರವರು ಬಂದು ನಮ್ಮ ಮನೆಯ ಮುಂಭಾಗ ನನ್ನ ಮಗ ವಿನೋದ್ ರವರ ಹೊಟ್ಟೆಗೆ ಕಾಲಿನಿಂದ ಹೊದ್ದು ಈ ದಿನ ನಿನ್ನನ್ನು ಸಾಯಿಸುತ್ತೇನೆಂದು ವಿನೋದ್ ರವರಿಗೆ ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಮ್ಮ ಗ್ರಾಮದವರು ಗಲಾಟೆಯನ್ನು ಬಿಡಿಸಿದರು ನಾವು ಮನೆಯಲ್ಲಿ ಸುಧಾರಿಸಿಕೊಂಡು ನನಗೆ ಮತ್ತು ನನ್ನ ಮಗನಿಗೆ ನೋವುಗಳು ಜಾಸ್ತಿಯಾದ ಕಾರಣ ದಿನಾಂಕ:12-10-2021 ರಂದುಮಧ್ಯಾಹ್ನ 2-00 ಗಂಟೆಗೆ ನಮ್ಮ ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತೇವೆ. ನಂತರ ಆಸ್ಪತ್ರೆಯಿಂದ ದಿನಾಂಕ:14-10-2021 ರಂದು ಸಂಜೆ ತಡವಾಗಿ ಠಾಣೆಗೆ ಹಾಜರಾಗಿ ನಮ್ಮ ಮೇಲೆ ಗಾಲಾಟೆ ಮಾಡಿರುವ ನಮ್ಮ ಗ್ರಾಮದ ಶ್ರೀನಿವಾಸ, ಅಂಬರೀಶ್ ಚಲಪತಿ, ಸರಸ್ವತಮ್ಮ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ  ಠಾಣಾ ಮೊಸಂಖ್ಯೆ:148/2021 ಕಲಂ:323,324,504,506 ರೆ-ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.279/2021 ಕಲಂ. 279,304(A) ಐ.ಪಿ.ಸಿ:-

    ದಿನಾಂಕ 15-10-2021 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಪಧ್ಮಾವತಿ ಕೋಂ ಎಸ್. ಮಂಜುನಾಥ, 32 ವರ್ಷ, ನಾಯಕರು, ಕೂಲಿ ಕೆಲಸ, ವಾಸ ಪೊಲೀಸ್ ಸ್ಟೇಷನ್ ಹತ್ತಿರ, ಕೊಡಿಗೇನಹಳ್ಳಿ ಗ್ರಾಮ. ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ   ತಾನು ಸುಮಾರು 17 ವರ್ಷಗಳ ಹಿಂದೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಗ್ರಾಮದ ವಾಸಿ ಎಸ್. ಮಂಜುನಾಥ ಬಿನ್ ಲೇಟ್ ಎನ್. ಸಿದ್ದರಾಮಯ್ಯ ಎಂಬುವರನ್ನು ಮದುವೆಯಾಗಿದ್ದು  ನಮಗೆ 3 ಜನ ಹೆಣ್ಣು ಮಕ್ಕಳಿರುತ್ತಾರೆ. 1 ನೇ ಮಾನಸ, 2 ನೇ ಲಹರಿ, 3 ನೇ ಅಮೂಲ್ಯ ಆಗಿರುತ್ತಾರೆ. ತನ್ನ ಗಂಡ ಮಂಜುನಾಥ ಬಿನ್ ಲೇಟ್ ಎನ್. ಸಿದ್ದರಾಮಯ್ಯ, 42 ವರ್ಷ, ರವರು ಕೂಲಿ ಕೆಲಸವನ್ನು ಮಾಡಿಕೊಂಡಿದ್ದು ದಿನಾಂಕ 14-10-2021 ರಂದು  ಬೆಳಿಗ್ಗೆ ಸುಮಾರು 10-00 ಗಂಟೆಗೆ ಮನೆಗೆ ಬಂದಿದ್ದು ನೀರು ಕಾಯಿಸಲು ಹೇಳಿ ಈಗ ಬರುತ್ತೇನೆಂದು ಹೇಳಿ ತನ್ನ ಗಂಡನ ಬಾಬತ್ತು ಕೆ.ಎ.-64-ಆರ್.-5242 ಹಿರೋ ಸ್ಪ್ಲೆಂಡರ್ ಬೈಕಿನಲ್ಲಿ ಹೋದರು. ಸಂಜೆ 06-00 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ ತನ್ನ ಗಂಡನ ಸ್ನೇಹಿತರಾದ ಪತಿ ಎಂಬುವರು  ಮನೆಯ ಹತ್ತಿರ ಬಂದು  ಗೌರಿಬಿದನೂರಿನಿಂದ  ಯಾರೋ ಪೋನ್ ಮಾಡಿ ಮಂಜುಗೆ ಅಪಘಾತವಾಗಿದ್ದು ಗೌರಿಬಿದನೂರು ಆಸ್ಪತ್ರೆಯಲ್ಲಿರುವುದಾಗಿ ಹೇಳಿದರು. ತಾನು ಬಂದು ನೋಡಿದೆ ತನ್ನ ಗಂಡ ಮಂಜುನಾಥರವರಿಗೆ ಅಪಘಾತವಾಗಿ ತಲೆಯ ಹಿಂಭಾಗ ಮತ್ತು ಎಡಗಾಲಿಗೆ ರಕ್ತಗಾಯವಾಗಿದ್ದು  ಬಲಕಿವಿಯಲ್ಲಿ ರಕ್ತ ಬಂದಿದ್ದು ಮೃತಪಟ್ಟಿದ್ದರು. ನಂತರ ವಿಚಾರ ತಿಳಿಯಲಾಗಿ ಈ ದಿನ ತನ್ನ ಗಂಡ ಹೊರಗೆ ಹೋಗಿಬರುತ್ತೇನೆಂದು ಹೇಳಿ  ಗಂಗಸಂದ್ರ ಗ್ರಾಮಕ್ಕೆ  ಸಂಜೆ ಸುಮಾರು 05-45 ಗಂಟೆಯಲ್ಲಿ  ನಾಲ್ಕು ಮೋರಿ ಬಳಿ ರಸ್ತೆಯಲ್ಲಿ  ಎಡಗಡೆ ಹೋಗುವಾಗ ರದುರುನಿಂದ ಅಂದರೆ ಗಂಗಸಂದ್ರ ಕಡೆಯಿಂದ ಕೆ.ಎ.-40-ಯು-1341 ಹಿರೋ ಸ್ಪ್ಲೆಂಡರ್ ದ್ವಿಚಕ್ರವಾಹನ ಸವಾರ ತನ್ನ ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತವನ್ನು ಮಾಡಿದ್ದರಿಂದ ತನ್ನ ಗಂಡನಿಗೆ ರಕ್ತಗಾಯವಾಗಿದ್ದು ಸಾರ್ವಜನಿಕರು ಯಾವುದೋ ಆಂಬ್ಯೂಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತವನ್ನು ಮಾಡಿ ಮೇಲ್ಕಂಡ ದ್ವಿಚಕ್ರವಾಹನ ಮತ್ತು ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.280/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ: 15/10/2021 ರಂದು ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ-205 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 03/10/2021 ರಂದು  ಮದ್ಯಾಹ್ನ 3-00 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ವಿದುರಾಶ್ವತ್ಥ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-10 ಶ್ರೀರಾಮಯ್ಯ ಪಿ.ಸಿ.302 ಕುಮಾರ ನಾಯ್ಕ, ಸಿ.ಪಿ.ಸಿ-179 ಶಿವ ಶೇಖರ್ ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-538  ರಲ್ಲಿ  ವಿಧುರಾಶ್ವತ್ಥ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 3-30 ಗಂಟೆಗೆ ಹೋಗಿ   ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರ ಸ್ಥಳದಲ್ಲಿ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ.  ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಗಣೇಶ್ ಬಿನ್ ಚನ್ನಕೇಶವುಲು, 24 ವರ್ಷ, ಎಸ್.ಸಿ ಜನಾಂಗ, ಅಮಾಲಿ ಕೆಲಸ, ನಾಗೇಪಲ್ಲಿ, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಎಂದು ತಿಳಿಸಿದ್ದು,  ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 12  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 80 ಎಂ.ಎಲ್. ಆಗಿರುತ್ತೆ ಇವುಗಳ ಒಟ್ಟು ಬೆಲೆ 421.56  ರೂ.ಗಳಾಗಿರುತ್ತೆ ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 3-45  ಗಂಟೆಯಿಂದ  4-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 12  ಟೆಟ್ರಾ ಪಾಕೆಟ್ ಗಳು ಹಾಗೂ ಒಂದು ಪ್ಲಾಸ್ಟಿಕ್ ಚೀಲ, 4 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, 4 ಖಾಲಿ HAY WARDS CHEERS  WHISKY ಯ ಟೆಟ್ರಾ ಪಾಕೆಟ್ ಗಳು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ 5-15 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು  ಈ ಮೆಮೋನೊಂದಿಗೆ  ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ  ವಿರುದ್ಧ  15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.281/2021 ಕಲಂ. 15(A) ಕೆ.ಇ ಆಕ್ಟ್:-

    ದಿನಾಂಕ: 15/10/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ-205 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:09/10/2021 ರಂದು ರಾತ್ರಿ 21-45 ಗಂಟೆಗೆ ಡಿ.ಸಿ.ಬಿ ಸಿ.ಎನ್. ಪೊಲೀಸ್ ಠಾಣೆಯ ಸಿ.ಹೆಚ್.ಸಿ-80 ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ: 09-10-2021 ರಂದು ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ ಪಿ ಮಂಜು ಪಿ.ಐ ರವರು ಸಿ.ಹೆಚ್.ಸಿ-80 ಕೃಷ್ಣಪ್ಪ ಎಸ್ ಆದ ನನಗೆ, ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ ವರದಿ ಮಾಡುವಂತೆ ನೇಮಿಸಿ ಕಳುಹಿಸಿಕೊಟ್ಟಿದ್ದು, ಅದರಂತೆ ನಾನು ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ, ಉಚ್ಚೊದನಹಳ್ಳಿ, ರಾತ್ರಿ 7-30 ಗಂಟೆಗೆ ಮೇಳ್ಯಾ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಮೇಳ್ಯಾ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ  ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡುತ್ತಿರುತ್ತಾರೆ ಎಂತ ಖಚಿತ ಮಾಹಿತಿ ಬಂದಿದ್ದು, ಅದರಂತೆ ನಾನು ಸದರಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಬಂದ ಖಚಿತ ಮಾಹಿತಿಯನ್ನು ಪಂಚರಿಗೆ ತಿಳಿಸಿ ನಮ್ಮೊಂದಿಗೆ ಪಂಚರನ್ನು ಕರೆದುಕೊಂಡು ಕಾಲ್ನಡಿಗೆಯಲ್ಲಿ ಸದರಿ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 4 ಜನ ಆಸಾಮಿಗಳು ಮದ್ಯಪಾನ ಮಾಡುತ್ತಿದ್ದರು. ನಂತರ ನಾನು ಮತ್ತು ಪಂಚರು ಸದರಿ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಮದ್ಯಪಾನ ಮಾಡುತ್ತಿದ್ದ 3 ಆಸಾಮಿಗಳು ಸ್ಥಳದಿಂದ ಓಡಿ ಹೋದರು. ಸದರಿ ಸ್ಥಳದಲ್ಲಿ ಒಬ್ಬಆಸಾಮಿ ಸಿಕ್ಕಿ ಬಿದ್ದಿದ್ದು ಹೆಸರು ವಿಳಾಸ ಕೆಳಲಾಗಿ ಕೆ.ಜಿ ನಾಗರಾಜಪ್ಪ ಬಿನ್ ಲೇಟ್ ಗಂಗಾಧರಪ್ಪ 56 ವರ್ಷ ವ್ಯವಸಾಯ ಈಡಿಗ ಜನಾಂಗ ವಾಸ ಕೊನಾಪುರ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು ಸ್ಥಳವನ್ನು ಪರಿಶೀಲನೆ ಮಾಡಿದಾಗ ಸ್ಥಳದಲ್ಲಿ 90 ML ಸಾಮರ್ಥ್ಯದ HAYWARD CHEERS WHISKY 23 ಮದ್ಯ ತುಂಬಿದ TETRA PACKET ಗಳು ಇದ್ದು, ಒಟ್ಟು ಇದರ ಸಾಮರ್ಥ್ಯ 2 ಲೀಟರ್ 70 ML ಆಗಿದ್ದು, ಇದರ ಬೆಲೆ 807/- ರೂಗಳಾಗಿರುತ್ತೆ. ನಂತರ ಸ್ಥಳದಲ್ಲಿ 2 ಪ್ಲಾಸ್ಟಿಕ್ ಗ್ಲಾಸ್, 4 ಖಾಲಿ ನೀರಿನ ಪ್ಲಾಸ್ಟಿಕ್ ಪಾಕೆಟ್ ಹಾಗೂ 90 ML ಸಾಮರ್ಥ್ಯದ HAYWARD CHEERS WHISKY  ಖಾಲಿ 2 ಮದ್ಯದ TETRA PACKET ಗಳಿರುತ್ತೆ. ನಂತರ ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಗಿ ಇದೆಯೇ? ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಪಂಚರ ಸಮಕ್ಷಮ ಸಂಜೆ 7-45 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿಯನ್ನು ಮತ್ತು ಮೇಲ್ಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿದ್ದು, ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಸದರಿ ಆಸಾಮಿ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ನೀಡಿದ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 15-10-2021 09:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080