ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.363/2021 ಕಲಂ. 78(3) ಕೆ.ಪಿ ಆಕ್ಟ್:-

   ದಿನಾಂಕ: 13/10/2021 ರಂದು ರಾತ್ರಿ 9-00 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13/10/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೆಮರಿ ಗ್ರಾಮದ ಮಂಜು ಪೋಟೋ ಸ್ಟುಡೀಯೋ ಬಳಿ ಯಾರೋ ಆಸಾಮಿಗಳು  ಈ ದಿನ ನಡೆಯುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಕ್ರಿಕೆಟ್  ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ-257 ನರಸಿಂಹಮೂರ್ತಿ, ಹೆಚ್.ಸಿ-156 ನಟರಾಜ್ ರವರು ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಮಿಟ್ಟೆಮರಿ ಗ್ರಾಮಕ್ಕೆ ಹೋಗಿ ಮಿಟ್ಟೆಮರಿ ಬಸ್ ನಿಲ್ದಾಣದ ಬಳಿ ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು ಕೊಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುತ್ತದೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಟೀಮ್  ಗೆಲ್ಲುತ್ತದೆ ಎಂದು  ಮೊಬೈಲ್ ಮುಖಾಂತರ ಹಣವನ್ನು ಪೋನ್ ಪೇ ಮುಖಾಂತರ ಪಣಕ್ಕೆ ಹಾಕಿ  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಮಂಜುನಾಥ ಬಿನ್ ನರಸಿಂಹಯ್ಯ, 34 ವರ್ಷ, ನಾಯಕ ಜನಾಂಗ, ಗೊಬ್ಬರ ಅಂಗಡಿಯಲ್ಲಿ ಕೆಲಸ, ವಾಸ ಮಿಟ್ಟೆಮರಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊಬೈಲ್ ನಂ 9964696861, 2] ಮಂಜುನಾಥ ಬಿನ್ ಉಗ್ಗಲಪ್ಪ, 34 ವರ್ಷ, ಬಲಜಿಗ ಜನಾಂಗ, ಪೋಟೋ ಗ್ರಾಫರ್ , ವಾಸ ಮಿಟ್ಟೆಮರಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಪೋನ್ ನಂ 9901528428 ಎಂದು ತಿಳಿಸಿರುತ್ತಾರೆ. ಬೆಟ್ಟಿಂಗ್ ಆ್ಯಪ್ ಬಗ್ಗೆ ವಿಚಾರಿಸಲಾಗಿ  ಅಪ್ಪುಸ್ವಾಮಿಕುಂಟೆ ತಾಂಡದ ವೆಂಕಟರಾಮನಾಯ್ಕ ಬಿನ್ ನಾರಾಯಣನಾಯ್ಕ ರವರು ಬೆಟ್ಟಿಂಗ್ ಆ್ಯಪ್ ಅನ್ನು ನೀಡಿರುವುದಾಗಿ ತಿಳಿಸಿರುತ್ತಾರೆ.  ನಂತರ ಆಸಾಮಿಗಳ ಬಳಿ ಇದ್ದ  ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ  ಮಂಜುನಾಥ ಬಿನ್ ನರಸಿಂಹಯ್ಯನು ಗೂಗಲ್ ಕ್ರೋಮ್ ನಲ್ಲಿ  EXCH333 ಕ್ರಿಕೆಟ್ ಆಪ್ ಮುಖಾಂತರ  ಹಾಗೂ ಮಂಜುನಾಥ ಬಿನ್ ಉಗ್ಗಲಪ್ಪನು ಪೋನ್ ಪೇ  ಮೂಲಕ   ಹಣವನ್ನು ಬೆಟ್ಟಿಂಗ್ ಕಟ್ಟಿರುತ್ತಾರೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಪಣವಾಗಿ ಕಟ್ಟಿದ್ದ 2,000/- ರೂ ನಗದು ಹಾಗೂ  ಕ್ರಿಕೆಟ್ ಬೆಟ್ಟಿಂಗ್ ಉಪಯೋಗಿಸಿದ್ದ 1) ರಿಯಲ್ ಮೀ ಕಂಪೆನಿಯ ಟಚ್  ಸ್ಕ್ರೀನ್ ಮೊಬೈಲ್, 2] ಓಪ್ಪೋ ಕಂಪೆನಿಯ ಟಚ್  ಸ್ಕ್ರೀನ್ ಮೊಬೈಲ್ ಪೋನ್ , ಅನ್ನು ಪ್ಲೈಟ್ ಮೂಡ್ ಗೆ ಹಾಕಿ  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-00 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿಮೇಲ್ಕಂಡ ಮಾಲನ್ನು  ಅಸಲು ಪಂಚನಾಮೆ ಹಾಗೂ ಆರೋಪಿಗಳಾದ ಮಂಜುನಾಥ ಬಿನ್ ನರಸಿಂಹಯ್ಯ, ಮಂಜುನಾಥ ಬಿನ್ ಉಗ್ಗಲಪ್ಪರವರನ್ನು ವಶಕ್ಕೆ ನೀಡುತ್ತಿದ್ದು  ಆರೋಪಿಗಳಾದ ಮಂಜುನಾಥ ಬಿನ್ ನರಸಿಂಹಯ್ಯ, ಮಂಜುನಾಥ ಬಿನ್ ಉಗ್ಗಲಪ್ಪ ವೆಂಕಟರಾಮನಾಯ್ಕ ಬಿನ್ ನಾರಾಯಣನಾಯ್ಕ ರವರ  ವಿರುದ್ದ ಕಾನೂನು ಕ್ರಮ ಜರುಗಿಸಲು ಸುಚಿಸುದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.177/2021 ಕಲಂ. 15(A),32(3) ಕೆ.ಇ ಆಕ್ಟ್:-

   ದಿನಾಂಕ: 13-10-2021 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ  ಶ್ರೀ. ರೂಪನಾಥ ಪ್ರಸಾದ್  ಹೆಚ್.ಸಿ. 124 ಚಿಕ್ಕಬಳ್ಳಾಪುರ  ನಗರ  ಪೊಲೀಸ್ ಠಾಣೆ ರವರು ಠಾಣೆಯಲ್ಲಿ  ನೀಡಿದ  ದೂರಿನ  ಸಾರಾಂಶವೇನೆಂದರೆ, ದಿನಾಂಕ: 13-10-2021 ರಂದು  ತನಗೆ ಮತ್ತು  ಗ್ರಾಮಾಂತರ  ಪೊಲೀಸ್ ಠಾಣೆಯ ಶ್ರೀ.ಸಾದೀಕ್ ವುಲ್ಲಾ ಸಿಪಿಸಿ 150 ರವರಿಗೆ  ಮದ್ಯಾಹ್ನ 2-00 ಗಂಟೆಯಿಂದ  ರಾತ್ರಿ 8-00 ಗಂಟೆಯವರೆವಿಗೆ ERSS -112   ವಾಹನಕ್ಕೆ  ಕರ್ತವ್ಯಕ್ಕೆ  ನೇಮಕ ಮಾಡಿದ್ದರು. ಅದರಂತೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಂಜೆ 6-20 ಗಂಟೆಯಲ್ಲಿ  ತಮಗೆ  ಕಂಟ್ರೋಲ್ ರೂಮ್ ನಿಂದ EVENT No.216119 ರಂತೆ ಚಿಕ್ಕಬಳ್ಳಾಪುರ ತಾಲ್ಲೂಕು  ತಿಪ್ಪೇನಹಳ್ಳಿ ಗ್ರಾಮದಲ್ಲಿ  ಶ್ರೀಮತಿ ರಾಮಕ್ಕ ಕೋಂ ನಾರಾಯಣಪ್ಪ 39ವರ್ಷ ಆದಿ ಕರ್ನಾಟಕ  ಜನಾಂಗ ಚಿಲ್ಲರೆ ಅಂಗಡಿಯಲ್ಲಿ ಸಮುದಾಯ ಭವನದ ಮುಂಬಾಗ ರವರು ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ  ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ. ಆದ್ದರಿಂದ ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  

3. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 15(A),32(3) ಕೆ.ಇ ಆಕ್ಟ್:-

   ದಿನಾಂಕ:-14/10/2021 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಹೊನ್ನೇಗೌಡ ಎಂ.ಪಿ ಪಿ.ಎಸ್.ಐ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಮಾಲು, ಆರೋಪಿತರು, ಪಂಚನಾಮೆ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ, ದಿನಾಂಕ; 14-10-2021 ರಂದು ತಾನು ಮತ್ತು ಸಿಬ್ಬಂದಿಯವರಾದ ಸಿ.ಪಿ.ಸಿ-275 ಶ್ರೀ. ಬೀರಪ್ಪ ಏವೂರ, ಸಿ.ಪಿ.ಸಿ-428 ಶ್ರೀ ಹರೀಶ್ ಎಂ ಮತ್ತು ಕೆಎ-40-ಜಿ-279 ರ ಜೀಪ್ ಚಾಲಕರಾದ ಎ.ಪಿ.ಸಿ-40 ನಂದೀಶ್ ರವರೊಂದಿಗೆ ಕೆಎ-40-ಜಿ-279 ರ ಸರ್ಕಾರಿ ಜೀಪಿನಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆ, ಸರ್.ಎಂ.ವಿ ವೃತ್ತದ ಬಳಿ ವಾಪಸಂದ್ರ ಬಳಿ ಗಸ್ತುಮಾಡಿಕೊಂಡು ಬೆಳಿಗ್ಗೆ 10-15 ಗಂಟೆಗೆ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಇದ್ದಾಗ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಯಾರೋ ಆಸಾಮಿಗಳು ಚಿಕ್ಕಬಳ್ಳಾಪುರ ನಗರದ ನಿಮ್ಮಾಕಲಕುಂಟೆಯ ಶ್ರೀ ಶನೇಶ್ವರ ದೇವಸ್ಥಾನದ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಯಾವುದೇ ಅನುಮತಿಯನ್ನು ಪಡೆಯದೇ ಮಧ್ಯವನ್ನು ಸೇವಿಸಲು ಸ್ಥಳವಕಾಶ ಮಾಡಿಕೊಟ್ಟು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಮಾಹಿತಿಯ ಸಾರಾಂಶವನ್ನು ತಿಳಿಸಿ ಬೆಳಿಗ್ಗೆ 10-30 ಗಂಟೆಗೆ ಚಿಕ್ಕಬಳ್ಳಾಪುರ ನಗರದ ನಿಮ್ಮಾಕಲಕುಂಟೆಯ ಶ್ರೀ ಶನೇಶ್ವರ ದೇವಸ್ಥಾನದ ಬಳಿ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿ ಇಬ್ಬರೂ ಆಸಾಮಿಗಳನ್ನು ಹಿಡಿದುಕೊಂಡಿದ್ದು,  ಸದರಿ ಆಸಾಮಿಗಳನ್ನು ಮಧ್ಯಮಾರಾಟ ಮಾಡಲು ಯಾವುದಾದದರೂ ಪರವಾನಿಗೆ ಇದೇಯೇ? ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದರು ನಂತರ ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಶ್ರೀನಾಥ ಬಿನ್ ವೆಂಕಟೇಶಪ್ಪ 28  ವರ್ಷ, ಈಡಿಗರು, ವಿನಾಯಕ ಬಾರ್ ನಲ್ಲಿ ಸಪ್ಲೈಯರ್ ವೃತ್ತಿ, ಕನಕನಕೊಪ್ಪ ಗ್ರಾಮ, ಕಸಭಾ ಹೋಬಳಿ, ಗೌಡಗೆರೆ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಗೂ ಇನ್ನೊಬ್ಬ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಅಹ್ಮಜದ್ ಬಿನ್ ನೂರೂಲ್ಲಾ 32 ವರ್ಷ, ಮುಸ್ಲಿಂ ಜನಾಂಗ, ವಿನಾಯಕ ಬಾರ್ ನಲ್ಲಿ ಕೆಲಸ, ವಾರ್ಡ್ ನಂ-06, ಪ್ರಶಾಂತ ನಗರ, ಚಿಕ್ಕಬಳ್ಳಾಪುರ ಟೌನ್ ಎಂತ ತಿಳಿಸಿದ್ದು, ನಂತರ ಸದರಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಇದ್ದ 632/- ರೂ ಬೆಲೆ ಬಾಳುವ 18 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳಿದ್ದು, ಇದರ ಒಟ್ಟು ಮಧ್ಯವು 01 ಲೀಟರ್ 620 ಎಂ.ಎಲ್ ಆಗಿರುತ್ತೆ ನಂತರ ಸ್ಥಳದಲ್ಲಿ ಬಿದ್ದಿದ್ದ 1 ಲೀಟರ್ ನ ಖಾಲಿ ವಾಟರ್ ಬಾಟೆಲ್ ಹಾಗೂ 02 ಖಾಲಿ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳನ್ನು ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮಾಲುನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು, ಮಾಲನ್ನು, ಅಸಲು ಪಂಚನಾಮೆಯನ್ನು ವರದಿಯೊಂದಿಗೆ ನೀಡುತ್ತಿದ್ದು ಸದರಿ ಮೇಲ್ಕಂಡ ಆಸಾಮಿಗಳ ವಿರುದ್ಧ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.52/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

   ದಿನಾಂಕ;14-10-2021 ರಂದು ಮದ್ಯಾಹ್ನ 13-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯವರ ತಂದೆ ತಾಯಿಗೆ 4 ಜನ ಮಕ್ಕಳು  1 ನೆ  ಜನೀಫರ್ 2ನೆ ¦ನಾನು  3ನೆ ರೋಷಿ 4 ನೆ ತಮ್ಮ ರಾಜಶೇಖರ ರವರಿದ್ದು ನಮ್ಮ ಅಕ್ಕನಿಗೆ ಆಂದ್ರ ಪ್ರದೇಶದ ಅನಂತ ಪುರದ ಸಂಜಯ್ ಎಂಬುವರಿಗೆ ಕೊಟ್ಟು ಮದುವೆಯನ್ನು ಮಾಡಿದ್ದು ನಾನು ಕಾರ್ಪೆಂಟರ್ ಕೆಲಸ ಮಾಡುತ್ತಿರುತ್ತೇನೆ, ನಮ್ಮ ತಂದೆಯವರು ಬೆಂಗಳೂರು ನಗರದ  ಬಿಬಿಎಂಪಿ  ನೌಕರನಾಗಿ  ವಾರ್ಡ ನಂ 44 ರಲ್ಲಿ  ಗ್ಯಾಂಗ್ ಮೆನ್ ಆಗಿ ಕೆಲಸ ಮಾಡುತ್ತಿದ್ದನು, ನಮ್ಮ ತಾಯಿ ಮಂಜು ರವರು ದಿನಾಂಕ;-13-10-2021 ರಂದು ಬೆಳಗ್ಗೆ ನನ್ನ ಅಕ್ಕನ ಮನೆಗೆ ಹೋಗಿದ್ದರು, ನಮ್ಮ ತಂದೆಯವರು ಸಂಜೆ 5-00 ಗಂಟೆಯ ಸಮ ಯದಲ್ಲಿ ಅನಂತಪುರಕ್ಕೆ ಹೋಗುವುದಾಗಿ ನನಗೆ ತಿಳಿಸಿ ಹೋದನು, ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ನಾನು ನಮ್ಮ ತಂದೆಯವರು ನನಗೆ ಪೋನ್ ಮಾಡಿ ಅನಂತಪುರಕ್ಕೆ ಹೋಗುವ ಬಸ್ ಕೆಟ್ಟು ಹೋಗಿದೆ, ಚಿಕ್ಕಬಳ್ಳಾಪುರದಲ್ಲಿರುವುದಾಗಿ ಹೇಳಿದ್ದು ನಾನು ಬೇರೆ ಬಸ್ಸಿಗೆ ಹೋಗುವಂತೆ ತಿಳಿಸಿ  ನಾನು ಮಲಗಿಕೊಂಡೆನು. ದಿನಾಂಕ;14-10-2021 ರಂದು ಬೆಳಗ್ಗೆ 8-30 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ  ನನಗೆ ಪರಿಚಯವಿರುವ  ರಾಜು ಬಿನ್ ಓಬಯ್ಯ 48 ವರ್ಷ ಪ ಜಾತಿ ರವರು ನನಗೆ ಬಂದು ತಿಳಿಸಿದ ವಿಚಾರವೇನೆಂದರೆ ನಿಮ್ಮ ತಂದೆಯವರಿಗೆ ಚಿಕ್ಕಬಳ್ಳಾಪುರ ಸಮೀಪದ ಹೊನ್ನೇನಹಳ್ಳಿ ಗ್ರಾಮದ ಗೇಟಿನಲ್ಲಿ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ  ಅಪಘಾತವಾಗಿ ಅಪಘಾತದಲ್ಲಿ  ಗಾಯಗಳುಂಟಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ  ಮೃತಪಟ್ಟಿರುತ್ತಾನೆಂದು ವಿಚಾರ ತಿಳಿಸಿದನು,  ನಾನು ತಕ್ಷಣ  ನಮ್ಮ ಸಂಭಂದಿಕರೊಂದಿಗೆ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನಮ್ಮ ತಂದೆಯ ಮೃತ ದೇಹವನ್ನು.,ಶವಗಾರದಲ್ಲಿ ಇಟ್ಟಿರುತ್ತಾರೆ, ನಮ್ಮ ತಂದೆಯವರಿಗೆ ಎಡಕೈಗೆ, ತಲೆಯ ಮುಂಭಾಗ ಮತ್ತು ತಲೆಯ ಹಿಂಬಾಗ ಎಡ ದವಡೆಯ ಬಳಿ ರಕ್ತಗಾಯಗಳಾಗಿರುತ್ತವೆ,                ನಮ್ಮ ತಂದಯವರು ದಿನಾಂಕ;13-10-2021 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ  ಅನಂತಪುರಕ್ಕೆ ಹೋಗಲು ಬಂದಿದ್ದು ಬಸ್ ಕೆಟ್ಟ ಕಾರೆಣ ಚಿಕ್ಕಬಳ್ಳಾಪುರ ದಲ್ಲಿಯೇ ರಾತ್ರಿ 11-00 ಗಂಟೆಯವರೆವಿಗೂ ಉಳಿದುಕೊಂಡು ಪುನಃ ಬೆಂಗಳೂರಿಗೆ ಬರುವ ಸಲುವಾಗಿ ಇದೇ ದಿನ ಮುಂಜಾನೆ 3-00 ಗಂಟೆಯ ಸಮಯದಲ್ಲಿ  ಹೊನ್ನೇನಹಳ್ಳಿ ಗೇಟಿನ ಬಳಿ ಬಸ್ಸಿಗೆ ಕಾಯುತ್ತಿದ್ದಾಗ  ಬಾಗೇಪಲ್ಲಿ ಕಡೆಯಿಂದ ಬಂಧಂತಹ ಯಾವುದೋ ಒಂದು ವಾಹನ ನಮ್ಮ ತಂದೆ  ಯವರಿಗೆ ಡಿಕ್ಕಿ ಹೊಡೆಯಿಸಿ ನಿಲ್ಲಿಸದೆ ಹೊರಟುಹೋಗಿದ್ದು  ನಮ್ಮ ತಂದಯವರು ಅಪಘಾತ ದಲ್ಲುಂಟಾದ ಗಾಯಗಳ ದೆಸೆಯಿಂದ ಗುಣಮುಖನಾಗದೆ ಮೃತಪಟ್ಟಿರುತ್ತಾನೆ, ನಮ್ಮ ತಂದೆಯ ವರಿಗೆ ಅಪಘಾತಪಡಿಸಿ ಹೊರಟು ಹೋಗಿರುವ  ವಾಹನವನ್ನು ಮತ್ತು ಅದರ ಚಾಲಕ ನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ  ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

  

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ323,324,504,506,34 ಐ.ಪಿ.ಸಿ:-

     ದಿನಾಂಕ:14-10-2021 ರಂದು  ಸಾಯಂಕಾಲ 16-00ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ,ಹೆಚ್.ಸಿ 53 ರವರು ಶಿಡ್ಲಘಟ್ಟ  ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಅಂಬರೀಶ್ ಬಿನ್ ಶ್ರೀನಿವಾಸ ,24 ವರ್ಷ, ಬೋವಿ ಜನಾಂಗ, ವಾಸ: ದಾಸಾರ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ಸಾರಾಂಶವೆನೆಂದರೆ , ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ, ನಾನು ಈಗ್ಗೆ ಎರಡು ವರ್ಷದ ಹಿಂದೆ ಶೆಟ್ಟಿಕೆರೆ ಗ್ರಾಮದ  ನಾಗಶ್ರೀ ರವರನ್ನು ಮಧುವೆಯಾಗಿದ್ದು ನನಗೆ 1 ವರ್ಷದ ಕೃತಿಕ ಎಂಬ ಹೆಣ್ಣು ಮಗು ಇರುತ್ತೆ. ನಮ್ಮ ಮನೆಯ ಮುಂದೆ ಇರುವ ತೆಂಗಿನ ಮರದಲ್ಲಿ 1 ತಿಂಗಳ ಹಿಂದೆ ನಮ್ಮ ಗ್ರಾಮದ ವಿನೋದ್ ಕುಮಾರ್  ಬಿನ್ ರಾಮಚಂದ್ರಪ್ಪ ರವರು ಯಾರೂ ಇಲ್ಲದ ವೇಳೆಯಲ್ಲಿ  ನಮ್ಮನ್ನು ಕೇಳದೆ ತೆಂಗಿನ ಮರಕ್ಕೆ  ಹತ್ತಿ ತೆಂಗಿನಕಾಯಿಗಳನ್ನು ಕಿತ್ತುಕೊಂಡು ಹೋಗಿದ್ದು ಸದರಿ ವಿಚಾರವಾಗಿ ಕೇಳಿದ್ದಕ್ಕೆ  ನಮ್ಮಗಳ ನಡುವೆ ಮಾತಿನ ಜಗಳ ನಡೆದಿರುತ್ತದೆ. ಈಗಿರುವಾಗ ದಿನಾಂಕ:12-10-2021 ರಂದು ಬೆಳಗ್ಗೆ 7-00 ಗಂಟೆಯ ಸಮಯದಲ್ಲಿ  ನಮ್ಮ ತೆಂಗಿನಮರದ ಕೆಳಗೆ  ಮಳೆ ಗಾಳಿಗೆ ಬಿದ್ದ ತೆಂಗಿನಕಾಯಿಗಳನ್ನು  ರಾಮಚಂದ್ರಪ್ಪ ಬಿನ್ ನಾಗಪ್ಪ ರವರು ಎತ್ತಿಕೊಳ್ಳುತ್ತಿದ್ದು ನಮ್ಮ ಮರದ  ತೆಂಗಿನ ಕಾಯಿಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದೀಯಾ ಎಂದು ಕೇಳಿದಾಗ  ರಾಮಚಂದ್ರಪ್ಪ ರವರು ಕೆಳಗೆ ಬಿದ್ದಿರುವ ಕಾಯಿಗಳು ಮಾತ್ರವಲ್ಲ ಮರದಲ್ಲಿರುವ ಎಲ್ಲಾಕಾಯಿಗಳನ್ನು ಕಿತ್ತುಕೊಳ್ಳುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ  ಬೈಯುತ್ತಿರುವಾಗ  ವಿನೋದ್ ಕುಮಾರ್ ಬಿನ್ ರಾಮಚಂದ್ರಪ್ಪ ರವರು ನನಗೆ ಹಿಂದಿನಿಂದ  ತಲೆಯ ಹಿಂಭಾಗಕ್ಕೆ  ದೊಣ್ಣೆಯಿಂದ  ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಗಾಯಗೊಂಡು ಕೆಳಗೆ ಬಿದ್ದಾಗ ರಾಮಚಂದ್ರಪ್ಪ ಮತ್ತು ಇವರ ಮಗ ವಿನೋದ್ ಕುಮಾರ್  ರವರು ಕೈಗಳಿಂದ ಹೊಡೆದು ಕಾಲಿನಿಂದ ಒದ್ದು  ನೋವುಂಟು ಮಾಡಿರುತ್ತಾರೆ. ಸದರಿ ಗಲಾಟೆಯನ್ನು  ನಮ್ಮ ಗ್ರಾಮದ ದೇವರಾಜ್ ಮತ್ತು ಸುನೀಲ್  ರವರು  ಬಿಡಿಸಿ ನನ್ನನ್ನು ಯಾವುದೋ ಆಟೋ ವಾಹನದಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ, ನನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿ ರಕ್ತಗಾಯಪಡಿಸಿರುವ  ಮೇಲ್ಕಂಡವರ  ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿ ಹೇಳಿಕೆಯ  ಮೇರೆಗೆ ಠಾಣಾ ಮೊ.ಸಂಖ್ಯೆ:147/2021 ಕಲಂ:323,324,504,506 ರೆ-ವಿ 34 ಐ.ಪಿ.ಸಿ  ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.278/2021 ಕಲಂ. 379 ಐ.ಪಿ.ಸಿ:-

     ದಿನಾಂಕ:13/10/2021 ರಂದು ಮದ್ಯಾಹ್ನ 3-15 ಗಂಟೆಗೆ ಪಿರ್ಯಾದಿ  ನರಸಿಂಹಮೂರ್ತಿ  ಬಿ.ಆರ್ ಬಿನ್  ರಾಮಾಂಜಿನಪ್ಪ, 29 ವರ್ಷ, ಒಕ್ಕಲಿಗರು, ಬಳುವನಹಳ್ಳಿ ಗ್ರಾಮ, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಪಿರ್ಯಾದಿದಾರರು ಸುಮಾರು 5 ವರ್ಷಗಳಿಂದ ಪೆಟ್ರೋಲಿಂಗ್ ಸೂಪರ್ ವೈಸರ್ ಆಗಿ ನಿಸಾ ಗ್ರೂಪ್ ಆಫ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪಿರ್ಯಾದಿದಾರರು ಗೌರಿಬಿದನೂರು ಕಡೆಗಳಲ್ಲಿ ಇಂಡಸ್ ಕಂಪನಿಗೆ ಸೇರಿದ ಟವರ್ ಗಳನ್ನು ನೋಡಿಕೊಳ್ಳುತ್ತಿದ್ದು, ಅದರಿಂದ ಗೌರಿಬಿದನೂರು ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ನಿರ್ಮಿಸಿರುವ ಇಂಡೋಸ್ ಟವರ್ ನಲ್ಲಿ ದಿನಾಂಕ:06/10/2021 ರಂದು ಐಡಿ ನಂ.1284458 ಟವರ್ ಐಡಿಯ ಟವರ್ ನಲ್ಲಿ ಯಾರೋ ಕಳ್ಳರು ರಾತ್ರಿ ವೇಳೆ ಗೇಟ್ ಬೀಗವನ್ನು ಮುರಿದು ಟವರ್ ಒಳಗಡೆ ಅಳವಡಿಸಿದ್ದ ಬ್ಯಾಟರಿ, ಬಂಕ್, ಕ್ಯಾಬಿನ್ ಡೋರ್ ಮುರಿದು ಅದರಲ್ಲಿ ಅಳವಡಿಸಿದ್ದ 24 ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇದರ ಬೆಲೆ ಸುಮಾರು 40,000/- ರೂಗಳಾಗಿರುತ್ತದೆ, ಈ ವಿಷಯ ತಿಳಿದ ಕೂಡಲೆ ಅಲ್ಲಿ ಕೆಲಸ ಮಾಡುವ ಟೆಕ್ನೀಷಿಯನ್ ರಾಜೇಶ ನನಗೆ ಪೋನ್ ಮಾಡಿ ವಿಚಾರ ತಿಳಿಸಿದಾಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕಳ್ಳತನವಾಗಿರುವುದು ಕಂಡುಬಂದಿದ್ದು ಅಕ್ಕ ಪಕ್ಕ ವಿಚಾರಿಸಿ ನೋಡಲಾಗಿ  ಕಂಪನಿಯ ಎಲ್ಲ ಮೇಲಾಧಿಕಾರಿಗಳಿಗೆ ತಿಳಿಸಿ ಎಲ್ಲು ಸಿಗದಿರುವ ಕಾರಣ ತಡವಾಗಿ ಬಂದು ಠಾಣೆಗೆ ದೂರನ್ನು ನೀಡುತ್ತಿದ್ದು, ನಮ್ಮ ಟವರ್ ನಲ್ಲಿ ಕಳ್ಳತನ ವಾಗಿರುವ ಬ್ಯಾಟರಿಗಳನ್ನು ಮತ್ತು ಕಳ್ಳರನ್ನು ಹಿಡಿದು ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.166/2021 ಕಲಂ. 324,504,34 ಐ.ಪಿ.ಸಿ:-

   ದಿನಾಂಕ:14/10/2021 ರಂದು ಬೆಳಗಿನ ಜಾವ 2:15 ಗಂಟೆಯಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಎನ್. ನಾಗೇಶ್ ಬಿನ್ ಲೇಟ್ ನಾರಾಯಣಪ್ಪ, 33 ವರ್ಷ, ಎಸ್.ಟಿ ಜನಾಂಗ, ಆಟೋ ಚಾಲಕ, ನದಿಗಡ್ಡೆ, ಗೌರಿಬಿದನೂರು ಟೌನ್ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ:13/10/2021 ರಂದು ರಾತ್ರಿ 9:00 ಗಂಟೆಯಲ್ಲಿ ನಾನು  ನಮ್ಮ ಮನೆಯವರೊಂದಿಗೆ  ಮನೆಯಲ್ಲಿ ಹೂವನ್ನು ಕಟ್ಟುತ್ತಿರುವಾಗ,  ನಮ್ಮ ಮನೆಯ ಮೇಲ್ಬಾಗದಲ್ಲಿರುವ ದೀಪು ಮತ್ತು ಪಂಕಜ್ ಎಂಬುವವರು ಕುಡಿದ ಮತ್ತಿನಲ್ಲಿ ಮೇಲಿಂದ ಕೆಳಕ್ಕೆ ಮತ್ತು ಮೇಲಕ್ಕೆ ಜೋರಾಗಿ ಕೂಗಾಡಿಕೊಂಡು ಓಡಾಡುತ್ತಿದ್ದರು. ನಾನು ಈ ರೀತಿ ಮಾಡುವುದು ತಪ್ಪು ಎಂದು ಹೇಳಿರುತ್ತೇನೆ. ಪ್ರತಿದಿನ ಇದೇ ರೀತಿ ಮಾಡುತ್ತಿರುತ್ತಾರೆ. ನಾನು ಅವರಿಗೆ ಬುದ್ದಿವಾದ ಹೇಳಿ ಮನೆಗೆ ಹೋದಾಗ, ಅವರು ನನಗೆ ಮತ್ತು ನನ್ನ ಕುಟುಂಬದವರಿಗೆ ಬಯ್ಯುತ್ತಿದ್ದರು. ನಂತರ ನನ್ನನ್ನು ನೀನು ಗಂಡಸಾದರೆ, ಮೇಲಕ್ಕೆ ಬಾ ಎಂದು ಹಿಂದಿ ಭಾಷೆಯಲ್ಲಿ ಹೇಳಿದರು. ನಾನು ಮೇಲಕ್ಕೆ ಹೋದಾಗ ಪಂಕಜ್ ಎಂಬುವವನು ಕುಡುಗೋಲಿನಿಂದ ನನ್ನ ತಲೆಗೆ ಮತ್ತು ದೀಪು ಎಂಬುವನು ನನ್ನ ಬಲಭುಜಕ್ಕೆ ಚಾಕುವಿನಿಂದ ತಿವಿದಿರುತ್ತಾರೆ. ನಂತರ ನಾನು ಕಿರುಚುತ್ತಿದ್ದಾಗ ನನ್ನ ಹೆಂಡತಿ ರಾಣಿ ಮತ್ತು ನನ್ನ ಭಾವ ಗೋಪಾಲಕೃಷ್ಣ ರವರು ಗಲಾಟೆ ಬಿಡಿಸಿ ನನ್ನನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ.  ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿ ತಲೆ ಮತ್ತು ಬಲಭುಜಕ್ಕೆ ರಕ್ತಗಾಯಪಡಿಸಿರುವ ದೀಪು ಮತ್ತು ಪಂಕಜ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ಹೇಳಿಕೆಯ ದೂರನ್ನು ಪಡೆದು ಠಾಣೆಗೆ ಬೆಳಗಿನ ಜಾವ 3;30 ಗಂಟೆಗೆ ವಾಪಸ್ಸಾಗಿ ಪ್ರಕರಣವನ್ನು ದಾಖಲಿಸಿರುವುದಾಗಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.239/2021 ಕಲಂ. 380,457 ಐ.ಪಿ.ಸಿ :-

   ದಿನಾಂಕ 14/10/2021 ರಂದು ಮದ್ಯಾಹ್ನ 12-45 ಗಂಟೆಗೆ ಪಿರ್ಯಾಧಿ ಹೆಚ್.ಎನ್ ಮುನಿಸ್ವಾಮಿ ಪುರೋಹಿತರು ಗುಡಿಬಂಡೆ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ  ಮುದ್ರಿತ ದೂರಿನ ಸಾರಾಂಶವೇನೆಂದರೆ,  ಗುಡಿಬಂಡೆ ಟೌನ್ ನ ತಿರುಮಲನಗರದ ಬಳಿ ಇರುವ ಏಡುಗರ ಅಕ್ಕಮ್ಮ ದೇವಾಲಯದಲ್ಲಿ ಬಂಗಾರದ ತಾಳಿ ಎರಡು ಲಕ್ಷ್ಮಿಕಾಸು, ಇವುಗಳು ಒಟ್ಟು ಆರು ಗ್ರಾಂ ಹಾಗೂ ನಾಲ್ಕು ಬೆಳ್ಳಿಯ ಛತ್ರಿಗಳು, ಹಾಗೂ ಅಲ್ಲಿಯೇ ಪಕ್ಕದಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಹುಂಡಿಯಲ್ಲಿದ್ದ ಸುಮಾರು 3 ಸಾವಿರ ಹಣ, ಎರಡು ಬೆಳ್ಳಿ ಮಾಂಗಲ್ಯ ಹಾಗೂ 200 ಗ್ರಾಂನ ಬೆಳ್ಳಿ ಚೈನ್, ಸುಮಾರು 2000/- ರೂ ಬೆಲೆ ಬಾಳುವ ಉಮಾಗೋಲ್ಡ್ ಸೆಟ್ ದಿನಾಂಕ 13/10/2021 ರಂದು ರಾತ್ರಿ ಸಮಯದಲ್ಲಿ ಕಳ್ಳತನವಾಗಿದ್ದು, ದಿನಾಂಕ 14/10/2021 ರ ಬೆಳಿಗ್ಗೆ ಕಳ್ಳತನವಾಗಿರುವುದು ಕಂಡು ಬಂದಿರುತ್ತೆ. ಒಟ್ಟು ಎರಡೂ ದೇವಸ್ಥಾನದಿಂದ ಸುಮಾರು 45000/- ರೂಗಳಿಂದ 48000/- ಗಳ ತನಕ ಬೆಲೆ ಬಾಳುವ ಸಾಮಾಗ್ರಿಗಳು ಕಳ್ಳತನವಾಗಿರುತ್ತೆ. ಆದ್ದರಿಂದ ಕಳವಾಗಿರುವ ವಸ್ತುಗಳನ್ನು ಹುಡುಕಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.239/2021 ಕಲಂ. 279 ಐ.ಪಿ.ಸಿ:-

   ದಿನಾಂಕ 14/10/2021 ರಂದು ಮದ್ಯಾಹ್ನ 02.00  ಗಂಟೆ ಸಮಯದಲ್ಲಿ ಜಿ.ಸುನಿಲ್ ಕುಮಾರ್ ರೆಡ್ಡಿ ಬಿನ್ ವಾಸುದೇವರೆಡ್ಡಿ, 31 ವರ್ಷ, ರೆಡ್ಡಿ ಜನಾಂಗ, ಅಕೌಂಟೆಂಟ್ ಕೆಲಸ, ವಾಸ ನಂ 1411, ಕುರುಬರಹಳ್ಳಿ ಗ್ರಾಮ, ಕೋಡಿಗೇನಹಳ್ಳಿ ಗ್ರಾಮ ಪಂಚಾಯ್ತಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-561203, ಸ್ವಂತ ಸ್ಥಳ ನಂ5-32, ಯತ್ತವಾಂಡ್ಲಪಲ್ಲಿ ಗ್ರಾಮ, ಗಂಡಬೋಯನಪಲ್ಲಿ ಪೋಸ್ಟ್, ವಾಯಲ್ಪಾಡು ಮಂಡಲ್, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13/10/2021 ರಂದು ಮದ್ಯಾಹ್ನ ತಾನು ತನ್ನ ಬಾಬತ್ತು KA-50-MA-7623 ನೋಂದಣಿ ಸಂಖ್ಯೆಯ ಮಾರುತಿ ಎರ್ಟಿಗಾ ಕಾರಿನಲ್ಲಿ ಬೆಂಗಳೂರಿನಿಂದ ತಮ್ಮ ಸ್ವಂತ ಗ್ರಾಮಕ್ಕೆ ಹೋಗಲು ಬೆಂಗಳೂರು ಬಿಟ್ಟು ಸಂಜೆ 04.45 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ದಂಡುಪಾಳ್ಯ ಕ್ರಾಸ್ ಬಳಿ ಚಿಂತಾಮಣಿ -ಮದನಪಲ್ಲಿ ಟಾರ್ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ ಮದನಪಲ್ಲಿ ಕಡೆಯಿಂದ ಬಂದ AP-04-TU-4604 ನೋಂದಣಿ ಸಂಖ್ಯೆ ಬೊಲೆರೋ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಹೋಗುತ್ತಿದ್ದ ಕಾರಿನ ಬಲಭಾಗಕ್ಕೆ ಡಿಕಿ ಹೊಡೆಸಿ ಅಪಘಾತಪಡೆಸಿದ ಪರಿಣಾಮ ತನ್ನ ಕಾರಿನ ಬಲಭಾಗದಲ್ಲಿನ ಎರಡು ಡೋರ್ ಗಳು, ಬಲಭಾಗ ಜಖಂಗೊಂಡು ಮುಂದಿನ  ಡೋರ್ ನ  ಗ್ಲಾಸ್ ಒಡೆದಿರುತ್ತದೆ. ಹಾಗೂ ಬಲಭಾಗದ ಮುಂದಿನ ಟೈರ್ ಜಖಂ ಆಗಿರುತ್ತದೆ. ಆದರೆ ಕಾರಿನಲ್ಲಿದ್ದ ತನಗೆ ಯಾವುದೇ ಗಾಯಗಳಾಗಿರುವುದಿಲ್ಲ.ಹಾಗೂ ಅಪಘಾತಪಡೆಸಿದ ವಾಹನ ನಿಯಂತ್ರಣ ತಪ್ಪಿ ರಸ್ತೆ ಅಂಚಿನ ಜಮೀನೊಳಗೆ ನುಗ್ಗಿರುತ್ತದೆ. ತಾನು ಗಾಬರಿಯಲ್ಲಿ ಮತ್ತೊಂದು ವಾಹನದಲ್ಲಿ ಊರಿಗೆ ಹೋಗಿ ಮನೆಯಲ್ಲಿ ವಿಚಾರ ತಿಳಿಸಿ ತಡವಾಗಿ ದೂರು ನೀಡುತ್ತಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ಬಾಬತ್ತು KA-50-MA-7623 ನೋಂದಣಿ ಸಂಖ್ಯೆಯ ಮಾರುತಿ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆಸಿದ AP-04-TU-4604 ನೋಂದಣಿ ಸಂಖ್ಯೆಯ ಬೊಲೆರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರಿನ ಸಾರಾಂಶವಾಗಿರುತ್ತೆ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ143,147,323,447,504,506,149 ಐ.ಪಿ.ಸಿ & 3(1)(f),3(1)(r),3(1)(s),3(1)(w) ) The SC & ST (Prevention of Atrocities) Amendment Act 2015 :-

   ದಿನಾಂಕ:13/10/2021 ರಂದು ಸಂಜೆ 19:50 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಾಧಮಣಿ ಕೆ.ಆರ್ ಕೋಂ ಎಂ.ಎನ್ ಕೃಷ್ಣಪ್ಪ, ನಾಯಕ ಜನಾಂಗ, ವಾಸ: 17, 1 ನೇ ಮೈನ್, 4 ನೇ ಕ್ರಾಸ್, ದೊಡ್ಡಯ್ಯ ಬಡಾವಣೆ, ಬಾಬುಸಪಾಳ್ಯ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾವು ಪರಿಶಿಷ್ಟ ಪಂಗಡದ(ಎಸ್.ಟಿ) ನಾಯಕ ಜಾತಿಗೆ ಸೇರಿದ್ದು, ತನ್ನ ಹೆಸರಿಗೆ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿ ಚಿಕ್ಕಮುದ್ದೇನಹಳ್ಳಿ ಗ್ರಾಮದ ಸರ್ವೆ ನಂಬರ್:5/1 ಮತ್ತು 5/2 ರಲ್ಲಿ 27 ಗುಂಟೆ ಮತ್ತು 16 ಗುಂಟೆ ಜಮೀನಿನ ಖಾತೆ ಮತ್ತು ಪಹಣಿ ದಾಖಲಾಗಿದೆ, ತಾನೇ ಸಾಗುವಳಿ ಮಾಡಿಕೊಂಡು ಬರುತ್ತಿರುತ್ತೇನೆ. ದಿನಾಂಕ:10/10/2021 ರಂದು ಮದ್ಯಾಹ್ನ 12:30 ಗಂಟೆಯಲ್ಲಿ ತಮ್ಮ ಜಮೀನಿನ ಹತ್ತಿರ ಹೋದಾಗ ಬಂಡಹಳ್ಳಿ ಗ್ರಾಮದ ವಾಸಿಗಳಾದ 1) ವೆಂಕಟೇಶ್ ಬಿನ್ ಮೂರ್ತಿ, 2) ವೆಂಕಟೇಶ್ ಬಿನ್ ಬೈರಪ್ಪ, 3) ಸವಿತಮ್ಮ ಕೋಂ ಮೂರ್ತಿ, 4) ಶಿವರಾಜು ಬಿನ್ ಸುಬ್ಬನಾರಾಯಣಪ್ಪ, 5) ಗೋಪಾಲಕೃಷ್ಣ ಬಿನ್ ಪಾಪಣ್ಣ ರವರುಗಳು ಏಕಾಏಕಿ ಅತಿಕ್ರಮ ಪ್ರವೇಶ ಮಾಡಿ ನಾಯಕ, ಬೋಯನನ್ನ ಮಕ್ಕಳು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ತನ್ನನ್ನು ಮತ್ತು ತನ್ನ ಗಂಡನಾದ ಎಂ.ಎನ್ ಕೃಷ್ಣಪ್ಪ ರವರನ್ನು ಬೈಯುತ್ತಾ ಬಂದು ತನ್ನನ್ನು ಸೂಳೆಮುಂಡೆ ಎಂದು ಕಮ್ಮಿ ಜಾತಿಯವರೆಂದು ನಿಮಗೇ ಇಷ್ಟು ದೈರ್ಯ ಇರಬೇಕಾದರೆ ತಾವು ಮೇಲ್ಜಾತಿ ಒಕ್ಕಲಿಗ ಜನಾಂಗದವರು ನಮಗೆ ಎಷ್ಟು ಇರಬೇಕೆಂದು ತನ್ನ ಕೈ ಹಿಡಿದು ಏಳೆದು ವಿನಯ್ ಎಂಬುವವನು ತನ್ನ ಎಡ ಬುಜಕ್ಕೆ ಜೋರಾಗಿ ಹೊಡೆದಿದ್ದು ತನ್ನ ಹತ್ತಿರ ಅಸಭ್ಯ ವರ್ತನೆ ಮಾಡಿರುತ್ತಾನೆ. ತನಗೆ ಇದರಿಂದ ಮುಜುಗರವಾಗಿರುತ್ತದೆ ಹಾಗೂ  ದಿನಾಂಕ:13/10/2021 ರಂದು ಬೆಳಿಗ್ಗೆ 10:00 ಗಂಟೆಗೆ ಜಮೀನಿನ ಬಳಿ ಹೋದಾಗ ಮತ್ತೆ ಅವಾಚ್ಯವಾಗಿ ಬೈದು ಇನ್ನೊಂದು ಬಾರಿ ಜಮೀನಿಗೆ ಕಾಲಿಟ್ಟರೆ ತಲೆ ತೆಗೆಯುತ್ತೇನೆಂದು ತನಗೂ ಮತ್ತು ತನ್ನ ಗಂಡನಿಗೆ ಬೆದರಿಕೆ ಹಾಕಿರುತ್ತಾರೆ. ಮನೆಯವರೊಂದಿಗೆ ವಿಚಾರ ಮಾಡಿ ಬಂದು ನಂತರ ದೂರನ್ನು ನೀಡುತ್ತಿದ್ದು ದಯವಿಟ್ಟು ಈ ಪಿರ್ಯಾದನ್ನು ದಾಖಲಿಸಿ ಎಫ್.ಐ.ಆರ್ ಕೊಡಬೇಕೆಂದು ತಮ್ಮಲ್ಲಿ ಕೋರಿ ಕೊಟ್ಟ ದೂರು.

 

11. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.10/2021 ಕಲಂ. 427,447 ಐ.ಪಿ.ಸಿ:-

     ದಿನಾಂಕ 13/10/2021 ರಂದು  ಸಂಜೆ 7-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ,.ಅಶ್ವತ್ಥನಾರಾಯಣಪ್ಪ ಬಿನ್ ನಾರೆಪ್ಪ, 52 ವರ್ಷ, ಸಹ ಶಿಕ್ಷಕಜರು, ಸರ್ಕಾರಿ ಪ್ರೌಢ ಶಾಲೆ, ವರ್ಲಕೊಂಡ ಗ್ರಾಮ, ವಾಸ ಕೊಪ್ಪಕಾಟೇನಹಳ್ಳಿ ಗ್ರಾಮ, ಗುಡಿಬಡೆ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ   ತಾನು ವರ್ಲಕೊಂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ  08 ವರ್ಷದಿಂದ ಸಹಶಿಕ್ಷಕನಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ.  ವರ್ಲಕೊಂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು  ಮಾನ್ಯ ಪ್ರೊ. ಎ.ಲಕ್ಷ್ಮಿಸಾಗರ್ , ಮಾಜಿ ರಾಜ್ಯ  ಸಚಿವರು, ಇವರ ಅನುದಾನದಲ್ಲಿ  ಶಾಲಾ ಕಟ್ಟಡವನ್ನು 2007 ನೇ ಸಾಲಿನಲ್ಲಿ ನಿರ್ಮಿಸಿರುತ್ತಾರೆ. ಈ ನಿಮಿತ್ತ ಪ್ರೊ. ಎ.ಲಕ್ಷ್ಮಿಸಾಗರ್ , ಮಾಜಿ ರಾಜ್ಯ  ಸಚಿವರ ಪುತ್ಥಳಿಯನ್ನು ಇವರ ಸಮಾಧಿಯ ಮೇಲೆ ಶಾಲಾ ಆವರಣದಲ್ಲಿ  ನಿರ್ಮಿಸಿರುತ್ತಾರೆ. ದಿನಾಂಕ 13/10/2021 ರಂದು ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ  ತಾನು ತಮ್ಮ ಶಾಲೆಯ ಬಳಿ ನೋಡಿಕೊಂಡು ಬರೋಣವೆಂದು ಹೋಗಿದ್ದು ಶಾಲೆಯ ಆವರಣದಲ್ಲಿ  ಮಾನ್ಯ ಪ್ರೊ. ಎ.ಲಕ್ಷ್ಮಿಸಾಗರ್ , ಮಾಜಿ ರಾಜ್ಯ  ಸಚಿವರು, ಸಮಾಧಿಯ ಬಳಿ ಇವರ ಹೋಗಿ ನೋಡಲಾಗಿ ಮಾನ್ಯ ಪ್ರೊ. ಎ.ಲಕ್ಷ್ಮಿಸಾಗರ್ ರ ಸಮಾಧಿಯ ಮೇಲೆ ಇರುವ ಪುತ್ಥಳಿಯನ್ನು ದಿನಾಂಕ 12/10/2021 ರಂದು ರಾತ್ರಿ ವೇಳೆ ಯಾರೋ ಆಸಾಮಿಗಳು ಅತಿಕ್ರಮ ಪ್ರವೇಶ ಮಾಡಿ ವಿರೂಪಗೊಳಿಸಿರುತ್ತಾರೆ. ಈ ವಿಚಾರವನ್ನು ತಮ್ಮ ಶಾಲೆಯ ಮುಖ್ಯೋಪಾಧ್ಯರಿಗೆ ತಿಳಿಸಿ ಅವರ ಅನುಮತಿ ಮೇರೆಗೆ  ದೂರು ನೀಡುತ್ತಿದ್ದು , ಈ ಬಗ್ಗೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.317/2021 ಕಲಂ. 447,427,34 ಐ.ಪಿ.ಸಿ:-

     ದಿನಾಂಕ: 13-10-2021 ರಂದು ಸಂಜೆ 5.30 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ. ಡಿ.ವೆಂಕಟೇಶಪ್ಪ ಬಿನ್ ದ್ಯಾವಪ್ಪ, 67 ವರ್ಷ, ಗೊಲ್ಲರು, ನಿವೃತ್ತ ಪೊಲೀಸ್ ಉಪಾಧೀಕ್ಷಕರು, ಜಿರಾಯ್ತಿ, ಅಂಬಿಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಪೊಲೀಸ್ ಉಪಾಧೀಕ್ಷಕರು ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ತಮ್ಮ ಸ್ವಂತ ಗ್ರಾಮವಾದ ಶಿಡ್ಲಘಟ್ಟ ತಾಲ್ಲೂಕು ಅಂಬಿಗಾನಹಳ್ಳಿ ಗ್ರಾಮದಲ್ಲಿ ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಾನು ಇದೇ ಗ್ರಾಮದ ಸರ್ವೆ ನಂ. 26/03 ರಲ್ಲಿ 1 ಎಕರೆ 28 ಗುಂಟೆ ಜಮೀನಿದ್ದು, ಸದರಿ ಜಮೀನಿನಲ್ಲಿ ಹಿಪ್ಪುನೇರಳೆ ಮತ್ತು ಮಹಾಗಣಿ ಗಿಡಗಳನ್ನು ನಾಟಿ ಮಾಡಿದ್ದು, ಇದಕ್ಕೆ ನೀರನ್ನು ಹಾಯಿಸುವ ಸಲುವಾಗಿ ಬೋರ್ವೆಲ್ ನಿಂದ ಕೃಷಿಹೊಂಡಕ್ಕೆ ಪೈಪ್ ಲೈನ್ ನ್ನ್ನು ಅಳವಡಿಸಿರುತ್ತೇನೆ. ಈಗಿರುವಲ್ಲಿ ದಿನಾಂಕ: 05-10-2021 ರಿಂದ ದಿನಾಂಕ: 10-10-2021 ರ ಮಧ್ಯೆ 3 ಬಾರಿ ಪೈಪ್ ಲೈನ್ನ್ನು ಅಳವಡಿಸಿದ್ದರು ಸಹ ಮೇಲ್ಕಂಡ ನಮ್ಮ ಜಮೀನಿನಲ್ಲಿ ಯಾರೋ ಅತಿಕ್ರಮ ಪ್ರವೇಶ ಮಾಡಿ, ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಹಾಕಿದ್ದ ಪೈಪ್ ಲೈನ್ ನ್ನ್ನು ಹೊಡೆದು ಹಾಕಿ ಸುಮಾರು 1000 ರೂಗಳಷ್ಠು ನಷ್ಠವನ್ನು ಉಂಟು ಮಾಡಿರುತ್ತಾರೆ. ಈ ಮೊದಲು ಸಹ ಸುಮಾರು ಸಲ ನಮ್ಮ ಗ್ರಾಮದ ಸಂದೀಪ್ ಬಿನ್ ಮೂರ್ತಿ, ಅಶೋಕ ಬಿನ್ ಭಾಗ್ಯಮ್ಮ ಮತ್ತು ತಮ್ಮ ಅಣ್ಣ ಡಿ.ಚನ್ನಪ್ಪ ರವರ ಮಗನಾದ ಮಂಜುನಾಥ ರವರುಗಳು ತಮ್ಮ ಜಮೀನಿನಲ್ಲಿ ಗಿಡಗಳನ್ನು ಮುರಿದುಹಾಕುವುದು ಸಾಮಾಗ್ರಿಗಳನ್ನು ಎತ್ತಿಕೊಂಡು ಹೋಗಿ ಬಿಸಾಡುವುದು ಮಾಡುತ್ತಾ ಸುಖಾಸುಮ್ಮನೇ ತಮಗೆ ತೊಂದರೆ ನೀಡುತ್ತಿದ್ದು, ಪೈಪ್ ಲೈನ್ನ್ನು ಮುರಿದು ಹಾಕಿರುವ ವಿಚಾರದಲ್ಲಿ ಮೇಲ್ಕಂಡ ಸಂದೀಪ್, ಅಶೋಕ ಮತ್ತು ಮಂಜುನಾಥ ರವರೇ ಮಾಡಿರಬಹುದೆಂದು ಅನುಮಾನವಿರುತ್ತೆ. ಆದುದರಿಂದ ಪೈಪ್ ಲೈನ್ನ್ನು ಮುರಿದು ಹಾಕಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 317/2021 ಕಲಂ: 447, 427 ರ/ಜೊ 34 ಐ.ಪಿ.ಸಿ ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.318/2021 ಕಲಂ. 323,324,504,506,149 ಐ.ಪಿ.ಸಿ:-

     ದಿನಾಂಕ: 14-10-2021 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀಮತಿ ವಿ. ಸೌಂದರ್ಯ ಕೋಂ ಮುರಳಿ ಮೋಹನ್, 26 ವರ್ಷ, ಭೋವಿ ಜನಾಂಗ, ಗೃಹಿಣಿ, ವೈ.ಹುಣಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತವರು ಮನೆ ಬಶೆಟ್ಟಿಹಳ್ಳಿ ಗ್ರಾಮದ ಬಳಿಯಿರುವ ರಾಮಲಿಂಗಾಪುರ ಗ್ರಾಮವಾಗಿದ್ದು ತನ್ನನ್ನು ಈಗ್ಗೆ 2 ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕು ವೈ.ಹುಣಸೇನಹಳ್ಳಿ ಸ್ಟೇಷನ್ ಬಳಿಯಿರುವ ಶ್ರೀನಿವಾಸಪ್ಪ ರವರ ಮಗನಾದ ಮುರಳಿಮೋಹನ್ ರವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ತನ್ನ ಗಂಡ ಮುರಳಿಮೋಹನ್, ತಮ್ಮ ಅತ್ತೆ ಶ್ರೀಮತಿ ವೆಂಕಟಲಕ್ಷ್ಮಮ್ಮ, ತಮ್ಮ ಮಾವನಾದ ಶ್ರೀನಿವಾಸಪ್ಪ, ತನ್ನ ಗಂಡನ ತಮ್ಮನಾದ ರವಿಚಂದ್ರ ಮತ್ತು ಆತನ ಹೆಂಡತಿಯಾದ ಶ್ರೀಮತಿ ವೀಣಾ ರವರು ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ದಿನಾಂಕ: 13-10-2021 ರಂದು ಸಂಜೆ ಸುಮಾರು 3.30 ಗಂಟೆಯಲ್ಲಿ ತಾನು ಮನೆಯಲ್ಲಿ ಓಡಾಡುತ್ತಿದ್ದಾಗ ತನ್ನ ತಂಗಿಯಾದ ವೀಣಾ ರವರಿಗೆ ತನ್ನ ಮೊಣಕಾಲು ಅಕಸ್ಮಿಕವಾಗಿ ತಗುಲಿದ್ದು ಆಗ ತನಗೆ ಮತ್ತು ವೀಣಾ ರವರಿಗೆ ಮಾತಿನ ಚಕಮಕಿ ನಡೆದಿದ್ದು ಆಗ ನಮ್ಮ ಮಾವ ಶ್ರೀನಿವಾಸಪ್ಪ ರವರು ಬುದ್ದಿವಾದ ಹೇಳಿದ್ದು ವೀಣಾ ರವರು ಸುಮ್ಮನಾಗಿರುತ್ತಾರೆ. ನಂತರ ದಿನಾಂಕ: 13-10-2021 ರಂದು ಸಂಜೆ 5.30 ರಲ್ಲಿ ವೀಣಾ ರವರ ಸಂಬಂಧಿಕರಾದ ಆಕೆಯ ತಾಯಿಯಾದ ಶ್ರೀಮತಿ ಮುನಿರತ್ನಮ್ಮ ಕೋಂ ವಿಶ್ವನಾಥ, ವೀಣಾ ರವರ ಚಿಕ್ಕಮ್ಮನಾದ ಶ್ರೀಮತಿ ಪದ್ಮಮ್ಮ ಕೋಂ ಪುಟ್ಟಣ್ಣ, ವೀಣಾ ರವರ ಚಿಕ್ಕಪ್ಪಂದಿರಾದ ಪುಟ್ಟಣ್ಣ, ಸುನೀಲ್ ಮತ್ತು ಮಂಜುನಾಥ ರವರು ನಮ್ಮ ಮನೆಯ ಬಳಿ ಬಂದು ತನ್ನನ್ನು ಹಾಗೂ ತಮ್ಮ ಮಾವನವರನ್ನು ಕುರಿತು ಲೋಪರ್ ನನ್ನ ಮಕ್ಕಳ ನಮ್ಮ ಮಗಳನ್ನೆ ಬೈಯುತ್ತೀರಾ ನಿಮಗೆ ಎಷ್ಟು ದೈರ್ಯ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಆ ಪೈಕಿ ವೀಣಾ ರವರು ತನಗೆ ಒಂದು ಕೋಲಿನಲ್ಲಿ ತಲೆಗೆ ಹೊಡೆದಿದ್ದು, ಎಲ್ಲರೂ ಸೇರಿಕೊಂಡು ತನ್ನನ್ನು ಕೈಗಳಿಂದ ಹೊಡೆದು ಗುದ್ದಿದ್ದು, ತನ್ನನ್ನು ಬಗ್ಗಿಸಿ ಸೊಂಟಕ್ಕೆ ಹೊಡೆದಿದ್ದು, ತನಗೆ ಕೈಯಲ್ಲಿ, ತಲೆಯಲ್ಲಿ ಹಾಗೂ ಮೂಗಿನಲ್ಲಿ ರಕ್ತ ಬಂದಿದ್ದು ಗಾಯಗಳಾಗಿರುತ್ತೆ, ಆ ಪೈಕಿ ಒಬ್ಬರು ತನಗೆ ಕೈಯಲ್ಲಿ ಚಾಕು ಹಿಡಿದುಕೊಂಡು ನಿನ್ನನ್ನು ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆಗ ನಮ್ಮ ಅತ್ತೆ ಶ್ರೀಮತಿ ವೆಂಕಟಲಕ್ಷ್ಮಮ್ಮ ಮತ್ತು ನಮ್ಮ ಮಾವ ಶ್ರೀನಿವಾಸಪ್ಪ ರವರು ಗಲಾಟೆ ಬಿಡಿಸಿ ತನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ. ತನ್ನ ಮೇಲೆ ಗಲಾಟೆ ಮಾಡಿ ತನ್ನನ್ನು ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 318/2021 ಕಲಂ: 323, 324, 504, 506 ರ/ಜೊ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ:13.10.2021 ರಂದು ಮದ್ಯಾಹ್ನ 2.15 ಗಂಟೆಗೆ ಪಿರ್ಯಾದಿ ಶ್ರೀಮತಿ. ರೂಪ, ತಾಲ್ಲೂಕು ಅಲ್ಪ ಸಂಖ್ಯಾತರ ವಿಸ್ತರಣಾಧಿಕಾರಿಗಳು, ಶಿಡ್ಲಘಟ್ಟ ರವರು ಠಾಣೆಗೆ ಹಾಜರಾಗಿ ಮೌಲಾನ ಅಜಾದ್ ಮಾದರಿ ಶಾಲೆ ಮತ್ತು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ವಾರ್ಡು ನಂ.26, ರಾಜೀವ್ ಗಾಂದೀ ಬಡಾವಣೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಮೂರು ವರ್ಷಗಳಿಂದ ಶಾಲೆಯು ನಡೆಯುತ್ತಿರುತ್ತದೆ. ಪ್ರಸ್ತುತ ಶಾಲೆಯು ದಿನಾಂಕ.10.10.2021 ರಿಂದ ದಸರಾ ರಜೆ ಇರುವ ಕಾರಣ ಇರುತ್ತದೆ. ಆದರೆ ಮಾಹಿತಿ ಕೇಂದ್ರವು ಕಾರ್ಯ ನಿರ್ವಹಿಸುತ್ತಿದ್ದು, ದಿನಾಂಕ.12.10.2021 ರಂದು ಮಾಹಿತಿಕೇಂದ್ರ ಸಿಬ್ಬಂದಿಯು ವಿದ್ಯಾರ್ಥಿ ವೇತನದ ಕೆಲಸದ ನಿಮಿತ್ತ ಕಾಲೇಜುಗಳಿಗೆ ಬೇಟಿ ನೀಡಿ ಮದ್ಯಾಹ್ನ ಸುಮಾರು 2.30 ಗಂಟೆಗೆ ಕೇಂದ್ರಕ್ಕೆ ಬಂದಾಗ ಮಾಹಿತಿ ಕೇಂದ್ರದಲ್ಲಿ 1] 2- ಕಂಪ್ಯೂಟರ್ ಮಾನೀಟರ್ ಗಳು ಬೆಲೆ ಸುಮಾರು 25ಸಾವಿರ , 2] ಒಂದು ಪ್ರಿಂಟರ್ 8 ಸಾವಿರ, ಹಾಗೂ ಮೌಲಾನ ಅಜಾದ್ ಮಾದರಿ ಇಂಗ್ಲೀಷ್ ಶಾಲೆಗೆ ಸೇರಿದ 1- ಗ್ಯಾಸ್ ಸ್ಟೌವ್ 7500/-ರೂ, ಗ್ಯಾಸ್ ಸಿಲೆಂಡರ್ 3 ಸಾವಿರ ಇವುಗಳ ಒಟ್ಟು ಬೆಲೆ 43,500/- ಬೆಲೆ ಬಾಳುವ ವಸ್ತುಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಕಳುವಾದ ವಸ್ತುಗಳನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

15. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.128/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ.13.10.2021 ರಂದು ರಾತ್ರಿ 7.30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ DCB/CEN ಪೋಲೀಸ್ ಠಾಣೆ ಇನ್ಸಪೆಕ್ಟರ್ ಮಂಜು ಬಿ.ಪಿ ಆದೇಶದಂತೆ ಮಹಿಳಾ ಪಿಎಸ್ಐ ಸರಸ್ವತಮ್ಮ ಆದ ನಾನು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ KA.40.G.58 ರಲ್ಲಿ ಕಾನೂನು ಬಾಹಿರ ಚೆಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ, ಸಂಜೆ ಸುಮಾರು 05:45 ಗಂಟೆಯ ಸಮಯದಲ್ಲಿ ಪೂಜಮ್ಮ ದೇವಾಲಯದ ಮುಂಭಾಗದ ವೃತ್ತದಲ್ಲಿ ಇದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಪೂಜಮ್ಮ ದೇವಾಲಯದ ಮುಂಭಾಗದಲ್ಲಿದ್ದಾಗ ಯಾರೋ ಒಬ್ಬ ಆಸಾಮಿ ದ್ವಿಚಕ್ರ ವಾಹನದಲ್ಲಿ ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು ದ್ವಿಚಕ್ರ ವಾಹನವನ್ನು ನಿಲ್ಲಿಸಿ ಪರಿಶೀಲಿಸಲಾಗಿ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ KA.40.X.1020 ಟಿವಿಎಸ್ ಹೆವಿಡ್ಯೂಟಿ ಕಂಪನಿಯಾಗಿದ್ದು, ಮುಂಭಾಗದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ HAYWARDS PUNCH WHISKY 90ML 96 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು ಮದ್ಯವು 8 ಲೀ 640 ಎಂ.ಎಲ್ ಇದ್ದು ಒಟ್ಟು ಬೆಲೆ 3372/- ರೂಗಳಾಗಿರುತ್ತದೆ. ಮಾಲುಗಳ ಪೈಕಿ ಒಂದು ಟೆಟ್ರಾ ಪ್ಯಾಕೇಟ್ ಗಳು ಎಫ್ಎಸ್ಎಲ್ ಕಳುಹಿಸುವ ಸಲುವಾಗಿ ತೆಗೆದು ಬಳಿ ಚೀಲದಲ್ಲಿ ಹಾಕಿ ದಾರದಿಂದ ಹೊಳೆದು ಅರಗಿನಿಂದ “R” ಎಂಬ ಇಂಗ್ಲಿಷ್ ಅಕ್ಷರದಿಂದ ಸೀಲ್ ಮಾಡಿದ್ದು ದ್ವಿಚಕ್ರ ವಾಹನದ ಸವಾರ ಶ್ರೀನಿವಾಸ ಬಿನ್ ಲೇಟ್ ನಾರಾಯಣಪ್ಪ, 43 ವರ್ಷ, ಬಲಜಿಗರು, ಜಿರಾಯ್ತಿ, ಕಂಬಾಳಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರನ್ನು ವಶಕ್ಕೆ ಪಡೆದಿದ್ದು ಮೇಲ್ಕಂಡ ಮಾಲು ಹಾಗೂ ದ್ವಿಚಕ್ರ ವಾಹನ ಹಾಗೂ ಆಸಾಮಿಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 14-10-2021 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080