ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 362/2021, ಕಲಂ. 279,337 ಐ.ಪಿ.ಸಿ:-

          ದಿನಾಂಕ: 13/10/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿಶ್ವನಾಥ ಬಿನ್ ನಾಗಪ್ಪ 31ವರ್ಷ, ನಾಯಕರು, ಜಿರಾಯ್ತಿ, ವಾಸ: ಗುಂಡ್ಲಮಂಡಿಕಲ್ ಗ್ರಾಮ, ಮಂಡಿಕಲ್ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನಮ್ಮ ಗ್ರಾಮದಲ್ಲಿ ಜಿರಾಯ್ತಿ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ತಂದೆ ತಾಯಿಗೆ 3ಜನ ಮಕ್ಕಳಿದ್ದು ಎಲ್ಲರಿಗೂ ಮಧುವೆಗಳಾಗಿರುತ್ತೆ. ನಮ್ಮ ತಂದೆ ತಾಯಿ ರವರು ನಮ್ಮೊಂದಿಗೆ ವಾಸವಾಗಿ ಜೀವನ ಮಾಡಿಕೊಂಡಿರುತ್ತಾರೆ. ನಮ್ಮ ತಂದೆ ನಾಗಪ್ಪ ಬಿನ್ ಲೇಟ್ ಲಕ್ಷ್ಮಯ್ಯ, 52ವರ್ಷ, ಜಿರಾಯ್ತಿ. ರವರು ದಿನಾಂಕ; 12/10/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಸುಂಕಲಮ್ಮ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ಹೋಗಿರುತ್ತಾರೆ. ದಿನಾಂಕ: 12/10/2021 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ನಾನು ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಯಾರೋ ನನ್ನ ಪೋನ್ ಗೆ ಕರೆಮಾಡಿ ನಿಮ್ಮ ತಂದೆಗೆ ಮದ್ಯಾಹ್ನ ಸುಮಾರು 3-15 ಗಂಟೆಯಲ್ಲಿ ಸುಂಕಲಮ್ಮ ದೇವಸ್ಥಾನದ ಬಳಿ ಅಪಘಾತವಾಗಿ ಗಾಯಗಳಾಗಿದ್ದು ನಿಮ್ಮ ತಂದೆಯನ್ನು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ತಕ್ಷಣ ನಾನು ಮತ್ತು ನಮ್ಮ ಭಾವನಾದ ಸುದರ್ಶನ್ ರವರು ನಮ್ಮ ಗ್ರಾಮದಿದಂದ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ನಮ್ಮ ತಂದೆಯವರು ಸುಂಕಲಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ಸು ನಮ್ಮ ಊರಿಗೆ ಬರಲು ಬಸ್ ನಿಲ್ದಾಣಕ್ಕೆ ಬರಲು ರಸ್ತೆಯನ್ನು ದಾಟುತ್ತಿರುವಾಗ ಬೆಂಗಳೂರು ಕಡೆಯಿಂದ ಟಿಎಸ್ 08 ಎಫ್ ಎಲ್ 0052 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಸೈರ್ ಕಾರನ್ನು ಕಾರಿನ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಹೊಡೆಸಿದ್ದರ  ಪರಿಣಾಮ ನಮ್ಮ ತಂದೆಗೆ ಎಡಕಾಲಿನ ತೊಡೆಯ ಮೂಳೆ ಮುರಿದು ರಕ್ತಗಾಯವಾಗಿದ್ದು, ಮುಖಕ್ಕೆ ಮತ್ತು ತಲೆಗೆ ತರಚಿದ ಗಾಯಗಳಾಗಿರುತ್ತದೆ ಎಂದು ತಿಳಿಯಿತು. ನಂತರ ವೈದ್ಯರ ಸಲಹೆ ಮೇರೆಗೆ ನಮ್ಮ ತಂದೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಚಿಕ್ಕಬಳ್ಳಾಪುರ ದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿದ್ದು ನಮ್ಮ ತಂದೆಯವರನ್ನು  ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿರುತ್ತೇವೆ. ಆದ್ದರಿಂದ ರಸ್ತೆ ದಾಟುತ್ತಿದ್ದ ನಮ್ಮ ತಂದೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ರಕ್ತಗಾಯನ್ನುಂಟು ಮಾಡಿರುವ ಟಿಎಸ್ 08 ಎಫ್ ಎಲ್ 0052 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕನ ವಿರುದ್ದ ಕಾನೂನು ರೀತಿ ಕ್ರಮಜರುಗಿಸಲು ಕೋರಿ ನೀಡಿದ ದೂರು.  ನಮ್ಮ ತಂದೆಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 140/2021, ಕಲಂ. 86,87 ಕೆ.ಪಿ ಆಕ್ಟ್:-

          ದಿನಾಂಕ: 13/10/2021 ರಂದು ಮದ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರಾದ ಕ್ರಿಷ್ಣಾರೆಡ್ಡಿ ಬಿನ್ ಲೇಟ್ ವೆಂಕಟಸ್ವಾಮಿ , 51 ವರ್ಷ, ವಕ್ಕಲಿಗರು, ನಲ್ಲಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಲ್ಲಗುಟ್ಟಹಳ್ಳಿ ಗ್ರಾ ಸರ್ವೆ ನಂ 40/1 ರಲ್ಲಿ 2 ಎಕರೆ 25 ಗುಂಟೆ ನನ್ನ ಸ್ವಂತ ಜಮೀನಿನಲ್ಲಿ ತಹಸೀಲ್ದಾರ್ ಸಾಹೇಬರವರಿಂದ ಪರವಾನಿಗೆ ಪಡೆದು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಮೇಲ್ಕಂಡ ಜಮೀನಿನಲ್ಲಿ 250 ಶ್ರೀಗಂಧದ ಮರಗಳನ್ನು ಬೆಳಸಿರುತ್ತೇನೆ, ದಿನಾಂಕ: 12/10/2021 ರ ಮಂಗಳವಾರ ದಂದು ಮದ್ಯರಾತ್ರಿ  ಸಮಯದಲ್ಲಿ ಶ್ರೀಗಂಧದ ಮರಗಳ ಜಮೀನೊಳಗೆ ಅಕ್ರಮವಾಗಿ ಯಾರೋ ಕಳ್ಳ ದುಷ್ಕರ್ಮಿಗಳು ಪ್ರವೇಶ ಮಾಡಿ 250 ಶ್ರೀಗಂಧ ಮರಗಳ ಪೈಕಿ 9 ಶ್ರೀಗಂಧ ಮರಗಳನ್ನು ಕತ್ತರಿಸಿ ನಂತರ ಕತ್ತರಿಸಿದ 5 ಶ್ರೀಗಂಧದ ಮರಗಳನ್ನು ಜಮೀನಿನಲ್ಲಿ ಬಿಟ್ಟು 4 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ,ನನಗೆ ಸುಮಾರು 2 ಲಕ್ಷ ರೂಗಳಷ್ಟು ನಷ್ಟ ಉಂಟು ಮಾಡಿರುತ್ತಾರೆ. ಆದ್ದರಿಂದ ಸದರಿ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಸಿ.ಇ.ಎನ್ ಪೊಲೀಸ್ ಠಾಣೆ, ಮೊ.ಸಂ. 40/2021, ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008:-

          ದಿನಾಂಕ:13/10/2021 ರಂದು ಪಿರ್ಯಾದಿ ಶ್ರೀ ಕಾರ್ತೀಕ್ ಹೆಚ್  ಬಿನ್ ಹರೀಶ್, 24 ವರ್ಷ, ಒಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಪ್ರಶಾಂತ ನಗರ ಚಿಕ್ಕಬಳ್ಳಾಪುರ ಟೌನ್. ಮೊ ಸಂಕ್ಯೆ: 7338014354 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತಾನು ಮೇಲ್ಕಂಡ ವಿಳಾಸದಲ್ಲಿ ತಂದೆ ತಾಯಿಯೊಂದಿಗೆ ವಾಸ ಮಾಡಿಕೊಂಡು ಖಾಸಗಿ ಕಂಒನಿಯಲ್ಲಿ ಕೆಲಸವನ್ನು ಮಾಡಿಕೊಂಡಿರುತ್ತೇನೆ. ನಾನು ಚಿಕ್ಕಬಳ್ಳಾಪುರ ನಗರದಲ್ಲಿ ಬಿ ಬಿ ರಸ್ತೆಯಲ್ಲಿ ಇರುವ ಕೋಟಕ್ ಮಹೇಂದ್ರ ಬ್ಯಾಂಕ್ ನಲ್ಲಿ ಅಕೌಂಟ್ ನಂ:5213416600 ರಂತೆ ಉಳಿತಾಯ ಖಾತೆಯನ್ನು ಹೊಂದಿದ್ದು, ಸದರಿ ಖಾತೆಗೆ ನನ್ನ ಮೇಲ್ಕಂಡ ಮೊಬೈಲ್ ನಂಭರ್ ನ್ನು ಲಿಂಕ್ ಮಾಡಿಕೊಂಡು ನನ್ನ ಮೊಬೈಲ್ ನಲ್ಲಿ ಪೋನ್ ಫೇ ವ್ಯಾಲೆಟ್ ನ್ನು ಇನ್ಸಾಟಾಲ್  ಮಾಡಿಕೊಂಡು ಇದರಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ  ದಿನಾಂಕ:9/10/2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ ತನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು, ಅದರಲ್ಲಿ ಪಾರ್ಟ ಟೈಂ ಜಾಬ್ ದಿನಕ್ಕೆ 10000/- ರೂಗಳು ಸ್ಯಾಲರಿ ಅಂತ ಇತ್ತು & ಒಂದು ಲಿಂಕ್  ಮತ್ತು ಮೊಬೈಲ್ ನಂಬರ್ +917058454592 ಸಹ ಇತ್ತು. ತಾನು ಪಾರ್ಟ ಟೈಂ ಜಾಬ್ ಮಾಡಿ ಹಣ ಸಂಪಾಧಿಸೋಣವೆಂತ  ಅದರಲ್ಲಿನ ಲಿಂಕ್ ನ್ನು ಕ್ಲಿಕ್ ಮಾಡಿದೆ ಅದು ವ್ಯಾಟ್ಸಾಪ್ ಮೆಸ್ಸೆಂಜರ್ ಗೆ ಕನೆಕ್ಟ್ ಆಯಿತು.ಸದರಿ ವ್ಯಾಟ್ಸಾಪ್ ನಲ್ಲಿ ಆ ಅನಾಮದ್ಯೇಯ  ವ್ಯಕ್ತಿ ನಮ್ಮ ಸಂಸ್ಥೆ AMEJAN  ಗೆ ಟೈಯಾಪ್ ಆಗಿದೆ. ನಾನು ಒಂದು ಲಿಂಕ್ ನ್ನು ಕಳುಹಿಸುತ್ತೇನೆ. ಅದರಲ್ಲಿ 200 ರೂಗಳನ್ನು ಇನ್ವೆಸ್ಟ್ ಮಾಡಿದರೆ 400 ರೂಗಳು ಬರುತ್ತದೆ ಅಂತ ಹೇಳಿದ.  ತಾನು ಅದನ್ನು ನಂಬಿ ನನ್ನ ಮೇಲ್ಕಂಡ ತನ್ನ ಬ್ಯಾಂಕ್ ಖಾತೆಯಿಂದ ನನ್ನ ಪೋನ್ ಫೇ ಮೂಲಕ ಅವನು ಕಳುಹಿಸಿದ ಲಿಂಕ್ ಮೂಲಕ 200  ಕಳುಹಿಸಿದೆ. ಅದೇ ರೀತಿ ತನ್ನ ಖಾತೆಯಿಂದ 16,800/- ರೂಗಳನ್ನು ಮತ್ತು ನಮ್ಮ ತಾಯಿವರ ಹೆಚ್ ಡಿ ಎಪ್ ಸಿ ಬ್ಯಾಂಕ್ ಅಕೌಂಟ್ ನಂ:50100399405350  ರಿಂದ 49,000/- ರೂಗಳನ್ನು ಇನ್ವೆಸ್ಟ್ ಮಾಡಿರುತ್ತೇನೆ.. ಆದರೆ  ಸದರಿ ಮೊ ಸಂಖ್ಯೆ: +917058454592 ಸಂಖ್ಯೆಯ ಬಳಕೆದಾರನು ನನ್ನಿಂದ ಒಟ್ಟು 65,800/- ರೂಗಳನ್ನು ಇನ್ವೆಸ್ಟ್ ಮಾಡಿಸಿಕೊಂಡು ನಮ್ಮ ಹಣವನ್ನು ವಾಪಸ್ಸು ನೀಡದೆ ವಂಚಿಸಿರುತ್ತಾನೆ. ಸದರಿ ವಂಚಕ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಿಕೊಡಲು ಕೋರಿ ದೂರು.

 

4. ಸಿ.ಇ.ಎನ್ ಪೊಲೀಸ್ ಠಾಣೆ, ಮೊ.ಸಂ. 41/2021, ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008:-

          ದಿನಾಂಕ:13/10/2021 ರಂದು ಪಿರ್ಯಾಧಿ ಶ್ರೀ ವಿಮಾಸ್ ಎಂ ಎಂ ಬಿನ್ ಮುರಳಿ ಕೃಷ್ಣ, ಯಲ್ದೂರು ಟ್ರೇಡಿಂಗ್ ಕೋ.ವಾಸ ಪ್ರೇಮ್ ನಗರ್ ರಸ್ತೆ, ಚಿಂತಾಮಣಿ ಟೌನ್,ಮೊ ಸಂಖ್ಯೆ: 9964300282  ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿ ನೀಡಿದ  ದೂರನ ಸಾರಾಂಶವೇನೆಂದರೆ  ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು, , ಯಲ್ದೂರು ಟ್ರೇಡಿಂಗ್ ಕೋ  ಎಂಬ ದಿನಸಿ ಅಂಗಡಿಯನ್ನು ನಡೆಸಿಕೊಂಡು ಕುಟುಂಬ ನೆಡೆಸಿಕೊಂಡು ಹೋಗುತ್ತಿರುತ್ತೇವೆ. ನಾನು ಚಿಂತಾಮಣಿ ನಗರದಲ್ಲಿನ ಕರೂರು ವೈಶ್ಯಾ ಬ್ಯಾಂಕ್  ನಲ್ಲಿ ಅಕೌಂಟ್ ನಂಬರ್:13511350000006901 ಖಾತೆಯನ್ನು ಹೊಂದಿದ್ದು, ಈ ಖಾತೆಯಿಂದ  ನನ್ನ ವ್ಯಾಪಾರದ ವ್ಯವರಗಳನ್ನು ಮಾಡಿಕೊಂಡು ಹೋಗುತ್ತಿರುತ್ತೇನೆ. ಈಗಿರುವಲ್ಲಿ  ದಿನಾಂಕ:14/7/2021 ರಂದು ಬಾಸುಮತಿ ಅಕ್ಕಿಯನ್ನು ತರಿಸಿ ಚಿಂತಾಮಣಿ ತಾಲ್ಲೂಕು ಮತ್ತು ಸುತ್ತಮುತ್ತಲ ತಾಲ್ಲೂಕುಗಳಿಗೆ ಸರಭರಾಜು ಮಾಡೋಣವೆಂದು ನಾನು ಗೂಗಲ್ ನಲ್ಲಿ ಬ್ರೌಜ್ ಮಾಡಿ ಇಂಡಿಯಾ ಗೇಟ್ ಬಾಸುಮತಿ ರೈಸ್ ಲಿಮಿಟೆಡ್ ಕಂಪನಿಗೆ ಗೂಗಲ್ ಮೂಲಕ ರಿಕ್ವೆಸ್ಟ್ ಕಳುಹಿಸಿದ್ದು, ಅವರು ನಂತರ  ಮೊ ಸಂಖ್ಯೆ:9831362952 ರಿಂದ ನನ್ನ ಮೊ ನಂಬರ್ 9964300282 ಕರೆ ಮಾಡಿದ್ದು , ನಿಮ್ಮ ಅಂಗಡಿಯ ಜಿಎಸ್ಟಿ ಮತ್ತು ಇತರೆ ದಾಖಲೆಗಳನ್ನು ನಮ್ಮ ಮೇಲ್ ಐಡಿ:info@indiagaterice.co.in ಗೆ ಕಳುಹಿಸಲು ತಿಳಿಸಿದ. ಅದರಂತೆ ತಾನು ದಿನಾಂಕ:16/7/2021 ರಂದು ಆಧಾರ್ ಕಾರ್ಢ, ಜಿ ಎಸ್ ಟಿ ದಾಖಲೆಯನ್ನು  ಅವರ ಮೇಲ್ ಐಡಿಗೆ ಕಳುಹಿಸಿದೆ. ಅವರು ಪರೀಶೀಲಿಸಿ ವ್ಯವಹರಿಸುವುದಾಗಿ ತಿಳಿಸಿದರು. ನಂತರ ಪುನಃ ಅವರು  ಮೇಲ್ಕಂಡ ಮೊ ಸಂಖ್ಯೆಯಿಂದ ಕರೆ ಮಾಡಿ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿದೆವು. ನಿಮ್ಮ ಅಂಗಡಿಗೆ ಸರಕನ್ನು ಕಳುಹಿಸಲು ಕಂಪನಿಯಿಂದ ಅನುಮತಿ ಸಿಕ್ಕಿದೆ ಅಂತ ತಿಳಿಸಿ. ಇಂಡಿಯ ಗೇಟ್ ಡೀಲರ್ ಶಿಪ್ ಫಾರಂನ್ನು ನನ್ನ E MAIL ID:-vimasmeda2000@gmail.com ಗೆ ಕಳುಹಿಸಿದರು.  ನಂತರ ಸದರಿ ಫಾರಂ ನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅದರೊಂದಿಗೆ ಪುನಃ ಆಧಾರ್ ಕಾರ್ಢ, ಫಾನ್ ಕಾರ್ಢ, ಒಂದು ಕ್ಯಾನ್ಸಲ್ ಚಕ್  ಲೀಪ್ ನ್ನು ಅವರ ಮೇಲ್ಕಂಡ ಮೇಲೆಗೆ ಮೇಲ್ ಮಾಡಿದೆ.ನಂತರ  ಅವರು ಪುನಃ ಮೇಲ್ಕಂಡ ಮೊಬೈಲ್ ನಂಬರ್ ನಿಂದ ಕರೆ ಮಾಡಿ 05 ವರ್ಷಗಳ ನೊಂದಣೆಗೆಂದು 35800/- ರೂಗಳನ್ನು ಕಂಪನಿಯ ಎಸ್ ಬಿ ಐ ಅಕೌಂಟ್ ನಂಬರ್:32243509739 & IFSC CODE:SBIN0005222 ಕ್ಕೆ ಕಳುಹಿಸಲು ತಿಳಿಸಿದ. ಅದರಂತೆ ನಾನು ನನ್ನ  ಮೇಲ್ಕಂಡ ಖಾತೆಯಿಂದ  35,800/- ರೂಗಳನ್ನು ಕಳುಹಿಸಿದೆ. ನಂತರ ಸದರಿ ಕಂಪನಿಯವರು ದಿನಾಂಕ:22/7/2021 ರಂದು ರಿಜಿಸ್ಟ್ರೇಷನ್ ಅಪ್ರೂವಲ್ ಲೆಟರ್ ನನ್ನ ಮೇಲ್ ಐಡಿಗೆ ಕಳುಹಿಸಿರುತ್ತಾರೆ.ನಂತರ ಪುನಃ ಕರೆ ಮಾಡಿ ಇನವಾಯ್ಸ್ ಗೆ 51,8867/- ರೂಗಳನ್ನು ಕಳುಹಿಸಲು ತಿಳಿಸಿರುತ್ತಾರೆ. ಅದರಂತೆ ನಾನು ನನ್ನ ಖಾತೆಯಿಂದ ಎರಡು ಭಾರಿ 150000/- & 3,68,867/- ರೂಗಳಂತೆ ಅವರ ಕಳುಹಿಸಿದ  SBI ACCOUNT NO: 11166636172 & IFSC CODE:SBIN0005222 ಖಾತೆಗೆ 1,50,000/- ರೂಗಳನ್ನು YES BANK ACCOUNT NUMBER 062052000000932 ಖಾತೆಗೆ 3,68,867/- ರೂಗಳನ್ನು  ನನ್ನ ಮೇಲ್ಕಂಡ ಕರೂರು ವೈಶ್ಯಾ ಬ್ಯಾಂಕ್ ಖಾತೆಯಿಂದ ಕಳುಹಿಸಿರುತ್ತೇನೆ. ನಂತರ ಪುನಃ ಅವರು ನನಗೆ ಕರೆ ಮಾಡಿ ಐದು ವರ್ಷಗಳ ಅಗ್ರಿಮೆಂಟ್ ಹಾಗೋ ಸೆಕ್ಯೋರಿಟಿ  ಡೆಪಾಸಿಟ್ಗಾಗಿ 2,81,930/-ರೂಗಳನ್ನು ಕಳುಹಿಸಲು ತಿಳಿಸಿದ. ನಾನು ನನ್ನ ಮೇಲ್ಕಂಡ ಖಾತೆಯಿಂದ ಆರ್ ಟಿ ಜಿ ಎಸ್ ಮೂಲಕ   ಅವರ YES BANK ACCOUNT NUMBER 062052000000932 ಖಾತೆಗೆ ಜಮೇ ಮಾಡಿರುತ್ತೇನೆ. ನಂತರ ನನಗೆ ಟ್ರಾನ್ಸಾಪೋರ್ಟ ಟ್ರ್ಯಾಕಿಂಗ್ ಐಡಿ ಯನ್ನು ಕಳುಹಿಸಿದರು. ನಂತರ ಮೇಲ್ ಐಡಿ ಬ್ಲಾಕ್ ಮಾಡಿದರು. ಪೋನ್ ಸ್ವಿಚ್ಚಾಪ್ ಆಡಿರುತ್ತಾರೆ. ಈಗ ಕಾಲ್ ಹೋಗುತ್ತಿಲ್ಲ. ಆದ ಕಾರಣ ನನಗೆ ಬಾಸುಮತಿ ಅಕ್ಕಿಯ ಡೀಲರ್ ಶಿಪ್ ಕೊಡುವುದಾಗಿ  ನಂಬಿಸಿ ನನ್ನಿಂದ ಒಟ್ಟು 8,36,597/- ರೂಗಳನ್ನು ಮೇಲ್ಕಂಡ ಅಕೌಂಟ್ ನಂಬರ್ ಗಳಿಗೆ ಜಮೇ ಮಾಡಿಸಿಕೊಂಡು ಪೋನ್ ಗಳನ್ನು ಸ್ವಿಚ್ಚಾಪ್ ಮಾಡಿಕೊಂಡು ವಂಚಿಸಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಿ ಕೊಡಲು ಕೋರಿ ನೀಡಿದ ದೂರು.

 

5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 146/2021, ಕಲಂ. 143,147,323,353,504,506,149 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

          ದಿನಾಂಕ:13-10-2021 ರಂದು   ಬೆಳಗ್ಗೆ 11-00 ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 154 ರವರು  ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗಾಯಾಳು ತಿಮ್ಮಪ್ಪ ಬಿನ್ ಲೇಟ್ ಚನ್ನರಾಯಪ್ಪ,40 ವರ್ಷ, ನಾಯಕರು, ಚಿಂತಾಮಣಿ ಡಿಪೋನಲ್ಲಿ  ಡ್ರೈವರ್ ಕಂ ಕಂಡಕ್ಟರ್  ಕೆಲಸ,  ಬ್ಯಾಡ್ಜ ನಂ:199 ವಾಸ:ಹಳೆ ಗಂಜಿಗುಂಟೆ ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದರ ಸಾರಾಶಂವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಚಿಂತಾಮಣಿ ಡಿಪೋನಲ್ಲಿ ಡ್ರೈವರ್ ಕಂ ಕಂಡಕ್ಟರ್ ಕೆಲಸವನ್ನು  ನಿರ್ವಹಿಸುತ್ತೇನೆ. ನಾನು ಪ್ರತಿ ದಿನ  ನಮ್ಮ ಗ್ರಾಮದಿಂದ ಡಿಪೋಗೆ ಹೋಗಿ ಕರ್ತವ್ಯವನ್ನು ನಿರ್ವಹಿಸಿಕೊಂಡು ರಾತ್ರಿ ಮನೆಗೆ ಬರುತ್ತಿರುತ್ತೇನೆ, ಆದರಂತೆ ದಿನಾಂಕ:12/10/2021 ರಂದು ಬೆಳಗ್ಗೆ ಡಿಪೋಗೆ ಕೆಲಸಕ್ಕೆ ಹೋಗಿರುತ್ತೇನೆ ಡಿಪೋನಲ್ಲಿ  ಸಂಚಾರಿ ನಿರೀಕ್ಷಕರವರಾದ ಶ್ರೀ ವಾಮದೇವ ನಾಯಕ್ ರವರು ನನ್ನನ್ನು ಬಸ್ ನಂ:ಕೆಎ-40-ಎಫ್-698 ಕ್ಕೆ ನಿರ್ವಹಕನಾಗಿ, ಎಂ.ಎ ಶಂಕರಪ್ಪ ರವರನ್ನು  ಡ್ರೈವರ್  ಆಗಿ ರೂಟ್ ನಂಬರ್:121/122 ರ ಮಾರ್ಗವಾಗಿ ಚಿಂತಾಮಣಿಯಿಂದ ವಯಾ ಕೋರ್ಲಪರ್ತಿ, ಜೂಲಪಾಳ್ಯ ರೂಟ್ ಗೆ ನೇಮಿಸಿರುತ್ತಾರೆ. ಆದರಂತೆ ನಾವು ಬೆಳಗ್ಗೆ 9-00 ಗಂಟೆಗೆ ಡಿಪೋದಿಂದ ಬಸ್ಸನ್ನು ತೆಗೆದುಕೊಂಡು ಕೋಲಾರಕ್ಕೆ ಹೋಗಿ ಚಿಂತಾಮಣಿ ವಾಪಸ್ಸು ಬಂದಿರುತ್ತೇವೆ ನಂತರ ಅಲ್ಲಿಂದ ರಾಯಲ್ಪಡಿಗೆ ಹೋಗಿ ಪುನಃ ಚಿಂತಾಮಣಿಗೆ ಬಂದಿರುತ್ತೇವೆ.ನಂತರ ಕೋಲಾರಕ್ಕೆ ಹೋಗಿ ಚಿಂತಾಮಣಿಗೆ ವಾಪಸ್ಸು ಬಂದು ಜೂಲಪಾಳ್ಯಕ್ಕೆ ಹೋಗಲು ಚಿಂತಾಮಣಿ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿಕೊಂಡು ಹೊರಟಿರುತ್ತೇವೆ. ಅದರಲ್ಲಿ ಕೇಲವು ಕಾಲೇಜ್ ಹುಡುಗ, ಹುಡುಗಿಯರು ಸಹ ಹತ್ತಿಕೊಂಡಿದ್ದರು. ಬಸ್ ನಲ್ಲಿದ್ದ ಕರಯಪ್ಪನಹಳ್ಳಿ ಗ್ರಾಮದ ರೇಖಾ ಬಿನ್ ದೇವರೆಡ್ಡಿ ರವರು ಕಾಲೇಜ್ ಪಾಸ್ ನ್ನು ಹೊಂದಿರುತ್ತಾಳೆ. ಸದರಿ ಪಾಸ್ ಕರಿಯಪ್ಪನಹಳ್ಳಿ ವಯಾ ದಿಬ್ಬೂರಹಳ್ಳಿ ,ಚಿಂತಾಮಣಿ ಮಾರ್ಗವಾಗಿ ಇರುತ್ತದೆ.ನಾವು ಸದರಿ ಪಾಸ್ ನ್ನು ಗಂಜಿಗುಂಟೆಯವರೆಗೆ ಉಪಯೋಗಿಸಬಹುದು ಇದು ದಿಬ್ಬೂರಹಳ್ಳಿ ಮಾರ್ಗವಾಗಿ ಹೋಗುವುದಿಲ್ಲ ಆದ್ದರಿಂದ ನೀನು ಗಂಜಿಗುಂಟೆಯಿಂದ ಟಿಕೇಟ್ ನ್ನು ಪಡೆದುಕೊಳ್ಳಬೇಕೇಂದು ತಿಳಿಸಿರುತ್ತೇನೆ ಅದರಂತೆ ನಾನು ಸ್ಟೇಜ್  ಬದಲಾವಣೆಯಾಗುವುದರಿಂದ ರೇಖಾಗೆ ದೊಡ್ಡಬಂದರಘಟ್ಟದಿಂದ ಈ ತಿಮ್ಮಸಂದ್ರಕ್ಕೆ ಟಿಕೇಟ್ ನ್ನು  ನೀಡಿರುತ್ತೇನೆ ಸಂಜೆ ಸುಮಾರು 6-50 ಗಂಟೆಗೆ ಬಸ್ಸು ತುರುಕಾಚನಹಳ್ಳಿ ಗೇಟ್ ಗೆ ಬಂದಾಗ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಬಂದು  ಬಸ್ಸನ್ನು ನಿಲ್ಲಿಸಿರುತ್ತಾರೆ. ಆಗ ನಾನು ಮತ್ತು ಡ್ರೈವರ್  ನೋಡುತ್ತಿದ್ದಂತೆ ಗುಂಪಿನಲ್ಲಿದ್ದ ತುರುಕಾಚನಹಳ್ಳಿ ಗ್ರಾಮದ  ರಾಜೇಶ್  ಬಿನ್ ದೇವರೆಡ್ಡಿ, ಭಾಸ್ಕರ್ ಬಿನ್ ಬೈರಾರೆಡ್ಡಿ, ಅನಿಲ್ ಬಿನ್ ಆದಿರೆಡ್ಡಿ, ಬೈರಾರೆಡ್ಡಿ ಹಾಗೂ ಇತರರು ಏಕಾಏಕಿ ಬಸ್ಸಿನ ಒಳಗೆ ಬಂದು ಆಪೈಕಿ ರಾಜೇಶ್ ನನ್ನ ಕತ್ತಿನ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಬಸ್ಸಿನಿಂದ  ಹೊರಗಡೆ ಎಳೆದುಕೊಂಡು  ಬಂದು ರಾಜೇಶ್ ಯಾಕೋ ನನ್ನ ತಂಗಿಗೆ ಟಿಕೇಟ್ ನ್ನು  ನೀಡಿದ್ದು  ಅವಳ ಬಳಿ ಪಾಸ್ ಇದೆ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಾರೆ ಆದರೆ  ನೀನು ಮಾತ್ರ ಒಪ್ಪುವುದಿಲ್ಲ ನಿನ್ನಮ್ಮನ್ನೇ ಕ್ಯಾಯಾ ಸೂಳೆ ನನ್ನ ಮಗನೆ ನಿಮ್ಮಂತ ಕೆಳಜಾತಿಯ ನನ್ನ ಮಕ್ಕಳು ಯಾಕೆ ಬರುತ್ತೀರಾ ಎಂದು ಕೆಟ್ಟ ಕೆಟ್ಟದಾಗಿ ಬೈದು ನಿನ್ನನ್ನು ನಾನು ನಿಮ್ಮೂರಿಗೆ ಬಂದು ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾನೆ ನಂತರ ಕೈನ ಮುಷ್ಟಿಯಿಂದ ನನ್ನ ತಲೆಯ ಕುತ್ತಿಗೆಗೆ ಗುದ್ದು ನೋವುಂಟು  ಮಾಡಿರುತ್ತಾನೆ. ಉಳಿದವರು ಸಹ ಕೈಗಳಿಂದ ನನ್ನ ಕೆನ್ನೆಗಳಿಗೆ, ಕತ್ತಿನ ಮೇಲೆ,  ತಲೆಯ ಹಿಂಭಾಗ, ಬಲ ಮತ್ತು ಎಡ ಭಾಗಗಳಲ್ಲಿಯೂ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ನಮ್ಮ ಡ್ರೈವರ್ ನನ್ನನ್ನು ಬಿಡಿಸಲು ಬಂದಾಗ ಆತನನ್ನು ಹೊಡೆದು ಪಕ್ಕಕ್ಕೆ ತಳ್ಳಿರುತ್ತಾರೆ. ಬಸ್ ನಲ್ಲಿದೆ ಜೂಲಪಾಳ್ಯದ ನರಸಿಂಹಪ್ಪ ರವರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ನಾವುಗಳು ಕರ್ತವ್ಯವನ್ನು ನಿರ್ವಹಿಸಲು ಮೇಲ್ಕಂಡವರು ಬಿಟ್ಟಿರುವುದಿಲ್ಲ ನಂತರ ನಾವು ಬಸ್ಸನ್ನು ತೆಗೆದುಕೊಂಡು  ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ. ಆದ್ದರಿಂದ  ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ನಮ್ಮ ಮೇಲೆ  ಹಲ್ಲೆ ಮಾಡಿ ಅವಾಚ್ಯವಾಗಿ ಬೈದಿರುವ  ಹಾಗೂ  ಜಾತಿ ನಿಂದನೆ ಮಾಡಿರುವ  ಮೇಲ್ಕಂಡವರ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂಖ್ಯೆ:146/2021 ಕಲಂ:143,147,323,353,504,506,ರೆ-ವಿ 149 ಐ,ಪಿ,ಸಿ ಮತ್ತು ಕಲಂ:3(1)(r), 3(1)(s)  SC/ST POA-2015 ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 277/2021, ಕಲಂ. 78(I),78(III) ಕೆ.ಪಿ ಆಕ್ಟ್:-

ದಿನಾಂಕ 12-10-2021 ರಂದು 17-30 ಗಂಟೆಗೆ ಪಿರ್ಯಾದಿದಾರರಾದ  ಕೃಷ್ಣಪ್ಪ ಹೆಚ್.ಸಿ. 80 ಸಿ.ಇ.ಎನ್. ಪೊಲೀಸ್ ಠಾಣೆ  ಚಿಕ್ಕಬಳ್ಳಾಪುರವರು  ಆಸಾಮಿ , ಮಾಲು ಮತ್ತು ಪಂಚನಾಮೆಯನ್ನು  ಹಾಜರುಪಡಿಸಿ ನೀಡಿದ ಕಂಪ್ಯೂಟರ್ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 12-10-2021 ರಂದು  ಚಿಕ್ಕಬಳ್ಳಾಪುರ  ಜಿಲ್ಲೆ ಚಿಕ್ಕಬಳ್ಳಾಪುರ  ಡಿ.ಸಿ.ಬಿ/ಸಿ.ಇ.ಎನ್. ಪೊಲೀಸ್ ಠಾಣೆಯ  ಇನ್ಸ್ ಪೆಕ್ಟರ್ ರವರಾದ  ಶ್ರೀ ಬಿ. ಪಿ. ಮಂಜು  ರವರು  ಹೆಚ್.ಸಿ. 80  ಕೃಷ್ಣಪ್ಪ ೆಸ್. ಆದ ನನಗೆ  ಮತ್ತು ಪಿ.ಸಿ. 152 ಜಯಣ್ಣ ರವರಿಗೆ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ  ಬಗ್ಗೆ  ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ  ವರದಿ ಮಾಡುವಂತೆ  ನೇಮಿಸಿ ಕಳುಹಿಸಿಕೊಟ್ಟಿದ್ದು  ಅದರಂತೆ ನಾವು ಗೌರಿಬಿದಣೂರು ತಾಲ್ಲೂಕಿನ  ವಿದುರಾಶ್ವತ್ಥ  ಕ್ರಾಸ್ ನಲ್ಲಿ  ಮಧ್ಯಾಹ್ಮ 03-00 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ ಭಾತ್ಮಿದಾರರಿಂದ  ಕದೀರೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯ ಮುಂಭಾಗದ ಸಾರ್ವಜನಿಕ  ಸ್ಥಳದಲ್ಲಿ  ಸಾರ್ವಜನಿಕರಿಗೆ ಅಕ್ರಮವಾಗಿ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿರುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು  ಅದರಂತೆ ನಾವಬು ಪಂಚರಿಗೆ  ತಿಳಿಸಿ  ನಮ್ಮೊಂದಿಗೆ ಪಂಚರನ್ನು ಮತ್ತು ವಿದುರಾಶ್ವತ್ಥ ಹೊರಠಾಣೆಯ ಸಿಬ್ಬಂದಿಯವರಾದ ಹೆಚ್.ಸಿಉ. 10 ಶ್ರೀರಾಮಯ್ಯರವರನ್ನು ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ  ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ  ಯಾರೋ ಒಬ್ಬ ಆಸಾಮಿಯು ಒಂದು ಕೈಯಲ್ಲಿ  ಬಿಳಿ ಹಾಳೆ ಹಿಡಿದುಕೊಂಡು ಬನ್ನಿ ಬನ್ನಿ, ಮಟ್ಕಾ ಅಂಕಿಗಳನ್ನು ಬರೆಯಿಸಿಕೊಳ್ಳಿ, 1 ರೂ. ಗೆ 70 ರೂ.ಗಳನ್ನು ಕೊಡುತ್ತೇನೆಂದು ಕೂಗುತ್ತಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹೆಸರು ವಿಳಾಸ ಕೇಳಲಾಗಿ  ಬಸವರಾಜು ಬಿನ್  ಲೇಟ್ ನಂಜುಂಡಪ್ಪ, 62 ವರ್ಷ,  ಹೋಟೇಲ್ ನಲ್ಲಿ ಕೆಲಸ, ಲಿ<ಗಾಯಿತರು, ಕದಿರೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲುಕು ಎಂದು ಹೇಳಿದ್ದು ಆಸಾಮಿಯ ಬಳಿ ಪರಿಶೀಲನೆಯನ್ನು ಮಾಡಿದಾಗ ವಿವಿಧ ಅಂಕಿಗಳಿಗೆ ವಿವಿಧ ಮೊತ್ತವನ್ನು  ಬರೆದಿರುವ  ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್, 4500/- ರೂ. ನಗದು ಹಣವಿದ್ದು  ಸದರಿ ಹಣವು ಮಟ್ಕಾ ಅಂಕಿಗಳನ್ನು  ಬರೆದಿರುವುದರಿಂದ  ಸಾರ್ವಜನಿಕರಿಂದ  ಪಣಕ್ಕಾಗಿ  ಕಟ್ಟಿಸಿಕೊಂಡ ಹಣ ಎಂದು  ತಿಳಿಸಿದ್ದು , ನಂತರ ಪಂಚರ ಸಮಕ್ಷಮ ಮಧ್ಯಾಹ್ನ 03-30 ಗಂಟೆಯಿಂದ ಸಂಜೆ 04-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿದ್ದು ಆಸಾಮಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 13-10-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080