Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.359/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ:10/10/2021 ರಂದು ರಾತ್ರಿ 9-15 ಗಂಟೆಗೆ  ಶ್ರೀ ನಾಗರಾಜ್ ಡಿ ಆರ್, ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 10/10/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ, ಸುಂಕಲಮ್ಮ ದೇವಸ್ಥಾನದ ಮುಂಭಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಈ ದಿನ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಗಳ  ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದು  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು  ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಸಿಹೆಚ್ ಸಿ-156 ನಟರಾಜ್ ಹಾಗೂ ಜೀಪ್ ಚಾಲಕ ಸಿಹೆಚ್ ಸಿ-257 ನರಸಿಂಹಮೂರ್ತಿ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು  ಟಿ ಬಿ ಕ್ರಾಸ್ ನ ಬಳಿ ಇದ್ದ  ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ , ಎನ್ ಹೆಚ್ 44 ರಸ್ತೆಯಲ್ಲಿ ಜೀಪ್ ಅನ್ನು ನಿಲ್ಲಿಸಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು  ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲುತ್ತದೆ 10,000/- ರೂ ಎಂದು ಒಬ್ಬನು,  ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲುತ್ತದೆ ಎಂದು ಇನ್ನೊಬ್ಬನು ಹಣವನ್ನು ಪಣವಾಗಿ ಕಟ್ಟಿಕೊಂಡು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ  ಮೇಲೆ ದಾಳಿ ಮಾಡಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಸಾಮಿಗಳು ಓಡಿ ಹೋಗುತ್ತಿದ್ದವರಲ್ಲಿ ಒಬ್ಬನನ್ನು ಹಿಡಿದುಕೊಂಡಿದ್ದು, ಉಳಿದ ಅಸಾಮಿಗಳು ಓಡಿಹೋಗಿರುತ್ತಾರೆ, ಸದರಿ ಅಸಾಮಿಯ  ಹೆಸರು ವಿಳಾಸವನ್ನು ಕೇಳಲಾಗಿ 1) ನವೀನ್ ರೆಡ್ಡಿ ಬಿನ್ ರೆಡ್ಡಪ್ಪ, 25 ವರ್ಷ, ವಕ್ಕಲಿಗರು, ಹಂದಿ ವ್ಯಾಪಾರ, ವಾಸ: ಕಡೇಹಳ್ಳಿ ಗ್ರಾಮ, ಹಂಪಸಂದ್ರ ಪಂಚಾಯ್ತಿ, ಗುಡಿಬಂಡೆ ತಾಲ್ಲೂಕು  ಎಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ  ಈಗಾಗಲೇ ಪಣಕ್ಕೆ ಕಟ್ಟಿದ್ದ 25,000/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-15 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು, ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ  ಮೇರೆಗೆ  ಠಾಣಾ  ಎನ್.ಸಿ .ಆರ್. 316/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:11-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.360/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 12/10/2021 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಬಿನ್ ಅಶ್ವತ್ಥಪ್ಪ 42ವರ್ಷ, ಬಲಜಿಗರು, ಗಾರೆ ಕೆಲಸ, ವಾಸ: ನೇತಾಜಿ ಸರ್ಕಲ್, 8ನೇ ವಾರ್ಡ್ ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಕೆಎ 43 ಕೆ 9942 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಹೊಂದಿದ್ದು ಸದರಿ ವಾಹನವನ್ನು ದಿನಾಂಕ: 11/10/2021 ರಂದು ರಾತ್ರಿ 2-00 ಗಂಟೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದು ನಂತರ ದಿನಾಂಕ: 12/10/2021 ರಂದು ಬೆಳಿಗ್ಗೆ 6-00 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 20 ಸಾವಿರ ಬೆಲೆ ಬಾಳುವ ಕೆಎ 43 ಕೆ 9942 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ನಮ್ಮ ಬಾಬತ್ತು ದ್ವಿಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.361/2021 ಕಲಂ. 11,14,32,34 ಕೆ.ಇ ಆಕ್ಟ್:-

     ದಿನಾಂಕ 12/10/2021 ರಂದು ಮದ್ಯಾಹ್ನ 1-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ  ಪೊಲೀಸ್ ಇನ್ಸಪೆಕ್ಟರ್ ಶ್ರೀ ಮಂಜು ಬಿ ಪಿ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ನಾನು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀ್ಪ್ ಸಂಖ್ಯೆ; ಕೆಎ-40 ಜಿ 270  ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಭಾಗೇಪಲ್ಲಿ ತಾಲ್ಲೂಕಿನ ಟಿ ಬಿ ಕ್ರಾಸ್ ಬಳಿ ಬಂದಿದ್ದು ಬೆಳಿಗ್ಗೆ ಸುಮಾರು  10-00 ಗಂಟೆಗೆ  ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಭಾಗೇಪಲ್ಲಿ ಕಡೆಯಿಂದ ಫೆರೇಸಂದ್ರ ಕ್ಕೆ ಹೋಗುವ ಸರ್ವೀಸ್ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಮದ್ಯಸಾಗಾಣಿಕೆ  ಮಾಡಿಕೊಂಡು ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಕರೆಯಿಸಿಕೊಂಡು ಹೆಚ್ ಪಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಇದ್ದಾಗ ಯಾರೋ ಒಬ್ಬ ಆಸಾಮಿ ಟಿ ಬಿ ಕ್ರಾಸ್ ಕಡೆಯಿಂದ ಹೆಚ್ ಪಿ ಪೆಟ್ರೋಲ್ ಬಂಕ್  ಕಡೆ ಹೋಗುತ್ತಿದ್ದಾಗ ಜೀಪ್ ನ್ನು ನೋಡಿ  ಸದರಿ ಆಸಾಮಿಯು ದ್ವಿಚಕ್ರವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ನಂತರ ನಾವುಗಳು ಪಂಚರ ಸಮಕ್ಷಮ ದ್ವಿಚಕ್ರವಾಹನ ಪರಿಶೀಲಿಸಲಾಗಿ  ಕೆಎ -04 ಹೆಚ್ ಎನ್ 0781 ಹೋಂಡಾ ಆಕ್ಟೀವ ಕಂಪನಿಯದ್ದಾಗಿದ್ದು, ಮುಂಭಾಗದಲ್ಲಿ ಎರಡು  ಪ್ಲಾಸ್ಟಿಕ್ ಚೀಲಗಳಿದ್ದು, ಚೀಲಗಳನ್ನು ಬಿಚ್ಚಿನೋಡಲಾಗಿ  HAYWARDS CHEERS Whisky  ಯ 05 ರಟ್ಟಿನ ಬಾಕ್ಸುಗಳಿದ್ದು, ಒಟ್ಟು 43 ಲೀಟರ್ 200 ಎಂ ಎಲ್ ಇದ್ದು ಇದರ ಒಟ್ಟು ಬೆಲೆ  16,862/- ರೂಗಳಾಗಿರುತ್ತದೆ. ನಂತರ ಮಾಲುಗಳನ್ನು ಎಪ್ ಎಸ್ ಎಲ್ ಪರೀಕ್ಷೇಗಾಗಿ ಕಳುಹಿಸುವ ಸಲುವಾಗಿ ಎಲ್ಲಾ ಬಾಕ್ಸಗಳಿಂದ ತಲಾ ಒಂದರಂತೆ ಪ್ರತ್ಯೇಕವಾಗಿ  ತೆಗೆದು ಬಿಳಿ ಬಟ್ಟೆಯಲ್ಲಿ ಹಾಕಿ ದಾರದಿಂದ ಹೊಲೆದು ಬಿ ಎಂಬ  ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಪರಾರಿಯಾದ  ಆಸಾಮಿ ಮಾಲನ್ನು ಎಲ್ಲಿಂದ ತಂದಿರುತ್ತಾನೆಂತ ತಿಳಿದು ಬಂದಿರುವುದಿಲ್ಲ. ದ್ವಿಚಕ್ರವಾಹನದ ಸವಾರನ ಬಗ್ಗೆ ಬಾತ್ಮೀದಾರರಲ್ಲಿ ವಿಚಾರಿಸಲಾಗಿ ನರಸಿಂಹಮೂರ್ತಿ, ಮಾವಿನಕಾಯಿಹಳ್ಳಿ, ಭಾಗೇಪಲ್ಲಿ ತಾಲ್ಲೂಕು. ಮೊ ಸಂಖ್ಯೆ:8971753594 ಅಂತ ತಿಳಿದು ಬಂದಿರುತ್ತದೆ. ಸದರಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು  ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿದ್ದ ಕೆಎ-02, ಹೆಚ್ ಎನ್ 0781 ದ್ವಿಚಕ್ರವಾಹನದ ಸವಾರನನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರಗಿಸಲು ಕೋರಿ ಮಾಲು ಮತ್ತು ದ್ವಿಚಕ್ರವಾಹನವನ್ನು ಮತ್ತು ಅಸಲು ಪಂಚನಾಮೆಯನ್ನು ವರದಿಯೊಂದಿಗೆ ನೀಡುತ್ತಿದ್ದು, ಮುಂದಿನ ಕ್ರಮ ಜರಗಿಸಲು ಕ್ರಮ ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 11-10-2021 ರಂದು ಮದ್ಯಾಹ್ನ 3.15 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿಬಿ/ಸಿ.ಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಪಿ ಮಂಜು ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮಾಲು, ಆರೋಪಿತ, ಪಂಚನಾಮೆ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ,  ಈ ದಿನ ದಿನಾಂಕ:-11-10-2021 ರಂದು ತಾನು ಮತ್ತು ಸಿಬ್ಬಂದಿಯವರಾದ ಮಧು, ಸಿಪಿಸಿ-527 ಹಾಗೂ ಕೆ.ಎ-40-ಜಿ-270 ಜೀಪ್ ಚಾಲಕರಾದ ಎಪಿಸಿ-138 ಮಹಬೂಬ್ ಬಾಷಾ ರವರೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಓಪಿಓ ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 1-45 ಗಂಟೆಗೆ ಭುವನೇಶ್ವರಿ ವೃತ್ತಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಯಾರೋ ಒಬ್ಬ ಆಸಾಮಿ ಚಿಕ್ಕಬಳ್ಳಾಪುರ ನಗರದ ಎನ್.ಪಿ.ಓ ರಸ್ತೆಯಲ್ಲಿರುವ ಅಜಿತ್ ಟೈಲರ್ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾದ ಮಟ್ಕಾ ಅಂಕಿ ಜೂಜಾಟ ವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಬಂದ ಮಾಹಿತಿಯನ್ನು ತಿಳಿಸಿ ಪಂಚರೊಂದಿಗೆ ಮದ್ಯಾಹ್ನ 2-00 ಗಂಟೆಗೆ ಜೀಪಿನಲ್ಲಿ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರನ್ನು ಜೋರಾಗಿ ಕೂಗುತ್ತಾ ಬನ್ನಿ ಬನ್ನಿ ಮಟ್ಕಾ ಚೀಟಿಗಳನ್ನು ಬರೆಯಿಸಿಕೊಂಡು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದವನನ್ನು ಪಂಚರ ಸಮಕ್ಷಮ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಶ್ರೀನಿವಾಸ ಬಿನ್ ಲಕ್ಷ್ಮಯ್ಯ, 60 ವರ್ಷ, ಶ್ರೀ ವೈಷ್ಣವ ಜನಾಂಗ, ಟೈಲರಿಂಗ್ ಕೆಲಸ, ವಾಸ ಸಬ್ಬೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಸದರಿ ಆಸಾಮಿಯನ್ನು ಪರಿಶೀಲನೆ ಮಾಡಲಾಗಿ ಒಂದು ಮಟ್ಕಾ ಚೀಟಿ ಇದ್ದು, 3460/- ರೂ ನಗದು ಹಣವಿರುತ್ತೆ. ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಟ್ಟಿದ್ದರಿಂದ ಬಂದಿರುವ ಹಣವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯಿಂದ ಒಂದು ಮಟ್ಕಾ ಚೀಟಿ, ನಗದು ಹಣ ಮತ್ತು ಒಂದು ಬಾಲ್ ಪಾಯಿಂಟ್ ಪೆನನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಟ್ಕಾ ಚೀಟಿಗಳನ್ನು ಯಾರಿಗೆ ಕೊಡುತ್ತಿರುವುದು ಎಂದು ಕೇಳಲಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದ ವಾಸಿಯಾದ ಕರಗಪ್ಪ ರವರಿಗೆ ಕೊಡುತ್ತಿದ್ದು, ಆತನು ತಮಗೆ ಕಮಿಷನ್ ಕೊಡುತ್ತಾನೆಂದು ಹೇಳಿದ್ದು, ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ, ಮಾಲುಗಳು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಸದರಿ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ; 11-10-2021 ರಂದು ಮದ್ಯಾಹ್ನ 3.45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀಮತಿ ಸರಸ್ವತಮ್ಮ ರವರು ಠಾಣೆಗೆ ಹಾಜರುಪಡಿಸಿದ  ಹಾಜರುಪಡಿಸಿದ ಮಾಲು, ಆರೋಪಿತ, ಪಂಚನಾಮೆ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 11-10-2021 ರಂದು ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ.ಪಿ. ಮಂಜು ಸಾಹೇಬರವರು ತನಗೆ,ಮತ್ತು ಸಿಬ್ಬಂದಿಯವರಾದ ಅಶೋಕ್ .ಸಿ.ಪಿ.ಸಿ-142 ಮತ್ತು ಜಯಣ್ಣ ಸಿ.ಪಿ.ಸಿ-152 ರವರುಗಳಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಗಂಗಮ್ಮ ಗುಡಿ ರಸ್ತೆ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 2.00 ಗಂಟೆಗೆ ಬಿಬಿ ರಸ್ತೆಗೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಯಾರೋ ಒಬ್ಬ ಆಸಾಮಿ ಚಿಕ್ಕಬಳ್ಳಾಪುರ ನಗರದ ಎನ್.ಪಿ.ಓ ರಸ್ತೆಯಲ್ಲಿರುವ ಮುರಳಿ ಬಾರ್ ಹತ್ತಿರ ಸಾರ್ವಜನಿಕ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾದ ಮಟ್ಕಾ ಚೀಟಿಯನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಬಂದ ಮಾಹಿತಿಯನ್ನು ತಿಳಿಸಿ ಪಂಚರೊಂದಿಗೆ ಮದ್ಯಾಹ್ನ 2.15 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರನ್ನು ಜೋರಾಗಿ ಕೂಗುತ್ತಾ ಬನ್ನಿ ಬನ್ನಿ ಮಟ್ಕಾ ಚೀಟಿಗಳನ್ನು ಬರೆಯಿಸಿಕೊಂಡು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದವನನ್ನು ಪಂಚರ ಸಮಕ್ಷಮ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಅಶ್ವತ್ಥನಾರಾಯಣ ಬಿನ್ ಲೇಟ್ ವೆಂಕಟರಾಯಪ್ಪ, 61 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಬೀಡಗಾನಹಳ್ಳಿ ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದನು. ನಂತರ ಸದರಿ ಆಸಾಮಿಯನ್ನು ಪರಿಶೀಲನೆ ಮಾಡಲಾಗಿ ಒಂದು ಮಟ್ಕಾ ಚೀಟಿ ಇದ್ದು, 640/- ರೂ ನಗದು ಹಣವಿರುತ್ತೆ. ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಟ್ಟಿದ್ದರಿಂದ ಬಂದಿರುವ ಹಣವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯಿಂದ ಒಂದು ಮಟ್ಕಾ ಚೀಟಿ, ನಗದು ಹಣ ಮತ್ತು ಒಂದು ಬಾಲ್ ಪಾಯಿಂಟ್ ಪೆನನ್ನು ಅಮಾನತ್ತುಪಡಿಸಿಕೊಂಡಿದ್ದು, ಸದರಿ ಮಟ್ಕಾ ಚೀಟಿಗಳನ್ನು ಯಾರಿಗೆ ಕೊಡುತ್ತಿರುವುದು ಎಂದು ಕೇಳಲಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದ ವಾಸಿಯಾದ ಕರಗಪ್ಪ ರವರಿಗೆ ಕೊಡುತ್ತಿದ್ದು, ಆತನು ನಮಗೆ ಕಮೀಷನ್ ಕೊಡುತ್ತಾನೆಂದು ಹೇಳಿದ್ದು,  ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ, ಮಾಲುಗಳು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಈ ಕೃತ್ಯಕ್ಕೆ ಸಹಕರಿಸಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದ ವಾಸಿಯಾದ ಕರಗಪ್ಪ ರವರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.81/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ; 11-10-2021 ರಂದು ಸಂಜೆ 5.45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀಮತಿ ಸರಸ್ವತಮ್ಮ ರವರು ಠಾಣೆಗೆ ಹಾಜರುಪಡಿಸಿದ  ಹಾಜರುಪಡಿಸಿದ ಮಾಲು, ಆರೋಪಿತ, ಪಂಚನಾಮೆ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 11-10-2021 ರಂದು ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ.ಪಿ. ಮಂಜು ಸಾಹೇಬರವರು ತನಗೆ,ಮತ್ತು ಸಿಬ್ಬಂದಿಯವರಾದ ಅಶೋಕ್ .ಸಿ.ಪಿ.ಸಿ-142 ಮತ್ತು ಜಯಣ್ಣ ಸಿ.ಪಿ.ಸಿ-152 ರವರುಗಳಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ ಕಡೆ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಗೆ ಬಿಬಿ ರಸ್ತೆಗೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಯಾರೋ ಒಬ್ಬ ಆಸಾಮಿ ಚಿಕ್ಕಬಳ್ಳಾಪುರ ನಗರದ ಎನ್.ಪಿ.ಓ ರಸ್ತೆಯಲ್ಲಿರುವ ಮುರಳಿ ಬಾರ್ ಹತ್ತಿರ ಸಾರ್ವಜನಿಕ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾದ ಮಟ್ಕಾ ಚೀಟಿಯನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಬಂದ ಮಾಹಿತಿಯನ್ನು ತಿಳಿಸಿ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಸಂಜೆ 4.15 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರನ್ನು ಜೋರಾಗಿ ಕೂಗುತ್ತಾ ಬನ್ನಿ ಬನ್ನಿ ಮಟ್ಕಾ ಚೀಟಿಗಳನ್ನು ಬರೆಯಿಸಿಕೊಂಡು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದವನನ್ನು ಪಂಚರ ಸಮಕ್ಷಮ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಶ್ರೀರಾಮಯ್ಯ ಬಿನ್ ಗಂಗಪ್ಪ, 62 ವರ್ಷ, ಭೋವಿ ಜನಾಂಗ, ಬೂಡಬಂಡಹಳ್ಳಿ ಗ್ರಾಮ, ವಾಟದ ಹೊಸಹಳ್ಳಿ ಪೋಸ್ಟ್, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಯನ್ನು ಪರಿಶೀಲನೆ ಮಾಡಲಾಗಿ ಒಂದು ಮಟ್ಕಾ ಚೀಟಿ ಇದ್ದು, 2860/- ರೂ ನಗದು ಹಣವಿರುತ್ತೆ. ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಟ್ಟಿದ್ದರಿಂದ ಬಂದಿರುವ ಹಣವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯಿಂದ ಒಂದು ಮಟ್ಕಾ ಚೀಟಿ, ನಗದು ಹಣ ಮತ್ತು ಒಂದು ಬಾಲ್ ಪಾಯಿಂಟ್ ಪೆನನ್ನು ಅಮಾನತ್ತುಪಡಿಸಿಕೊಂಡಿದ್ದು, ಸದರಿ ಮಟ್ಕಾ ಚೀಟಿಗಳನ್ನು ಯಾರಿಗೆ ಕೊಡುತ್ತಿರುವುದು ಎಂದು ಕೇಳಲಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದ ವಾಸಿಯಾದ ಕರಗಪ್ಪ ರವರಿಗೆ ಕೊಡುತ್ತಿದ್ದು, ಆತನು ನಮಗೆ ಕಮೀಷನ್ ಕೊಡುತ್ತಾನೆಂದು ಹೇಳಿದ್ದು,  ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ, ಮಾಲುಗಳು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಈ ಕೃತ್ಯಕ್ಕೆ ಸಹಕರಿಸಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದ ವಾಸಿಯಾದ ಕರಗಪ್ಪ ರವರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.446/2021 ಕಲಂ. 143,147,148,323,324,341,504,506(B),149 ಐ.ಪಿ.ಸಿ:-

     ದಿನಾಂಕ: 11/10/2021 ರಂದು ಸಂಜೆ 5.30 ಗಂಟೆಗೆ ಜಿ.ವಿ.ಮಂಜುನಾಥ ಬಿನ್ ಲೇಟ್ ಜಿ.ವೆಂಕಟರಾಮಪ್ಪ, 52 ವರ್ಷ, ನೇಯ್ಗೆ ಜನಾಂಗ, ಕೂಲಿಕೆಲಸ, ಗಾಜಲವಾರಹಳ್ಳಿ ಗ್ರಾಮ, ಕೋರ್ಲಪರ್ತಿ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:09/11/2021 ರಂದು ಶಿಡ್ಡಘಟ್ಟ ತಾಲ್ಲೂಕು, ಭಶೆಟ್ಟಹಳ್ಳಿ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದುದರಿಂದ ತಾನು ಮತ್ತು ತಮ್ಮ ಗ್ರಾಮದ ನನ್ನ ಸ್ನೇಹಿತ ಬಲಜಿಗ ಜನಾಂಗದ ಜಿ.ಎನ್.ಪ್ರಭಾಕರ್ ಬಿನ್ ಲೇಟ್ ನಾರಾಯಣಪ್ಪ, 42 ವರ್ಷ ರವರು ತನ್ನ ಬಾಬತ್ತು ನಂಬರ್ ಕೆಎ-01 ಜೆಡಿ-7271 ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಬಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ಸುಮಾರು 10.15 ಗಂಟೆಗೆ ಬಶೆಟ್ಟಿಹಳ್ಳಿ ಗ್ರಾಮ ಬಿಟ್ಟು ಚಿಂತಾಮಣಿ ನಗರದಲ್ಲಿ ವಾಸವಾಗಿರುವ ತನ್ನ ತಮ್ಮನಾದ ಜಿ.ವಿ.ಚಂದ್ರಶೇಖರ್ ರವರ ಮನೆಗೆ ಬರಲು ಅದೇ ದಿನ ರಾತ್ರಿ ಸುಮಾರು 10.45 ಗಂಟೆ ಸಮಯದಲ್ಲಿ ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ಶಿಡ್ಡಘಟ್ಟ ತಾಲ್ಲೂಕು, ಗಂಗನಹಳ್ಳಿ ಗ್ರಾಮದ ಬಳಿ ತಾನು ಹಾಗೂ ಜಿ.ಎನ್.ಪ್ರಭಾಕರ್ ರವರು ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಗಂಗನಹಳ್ಳಿ ಗ್ರಾಮದ ರಸ್ತೆಯ ಹಂಪ್ಸ್ ಬಳಿ ಯಾರೋ ಮೂರು ಜನ ಅಪರಿಚಿತ ಆಸಾಮಿಗಳು ನಿಂತುಕೊಂಡಿದ್ದು, ತಾನು ತಮ್ಮ ದ್ವಿಚಕ್ರ ವಾಹನವನ್ನು ನಿಧಾನ ಮಾಡಿದಾಗ ಅಲ್ಲಿ ನಿಂತಿದ್ದ ಆಸಾಮಿಗಳ ಪೈಕಿ ಒಬ್ಬ ತನ್ನ ಹಿಂಬದಿ ಕುಳಿತಿದ್ದ ಪ್ರಭಾಕರ್ ರವರ ತಲೆಗೆ ಕೈನಿಂದ ಹೊಡೆದಿರುತ್ತಾನೆ. ಆಗ ತಾವುಗಳು ತಮ್ಮ ದ್ವಿಚಕ್ರ ವಾಹವನ್ನು ನಿಲ್ಲಿಸಿ ಏಕೆ ತಮ್ಮನ್ನು ಹೊಡೆದಿದ್ದು ಎಂದು ಕೇಳಿದ್ದಕ್ಕೆ ಅವರು ನಿಧಾನವಾಗಿ ಗಾಡಿಯನ್ನು ಓಡಿಸಿಕೊಂಡು ಹೋಗೋ ಎಂದು ಏಕ ವಚನದಲ್ಲಿ ಏರು ದ್ವನಿಯಲ್ಲಿ ಮಾತನಾಡಿದ್ದು, ಆಗ ತಾನು ನಾವುಗಳು ನಿಧಾನವಾಗಿಯೇ ಚಾಲನೆ ಮಾಡಿಕೊಂಡು ಬರುತ್ತಿರುವುದು ಎಂದು ಹೇಳಿದಾಗ ಅವರು ವಿನಾಃ ಕಾರಣ ತಮ್ಮ ಮೇಲೆ ಜಗಳ ತೆಗೆದು, ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಅದೇ ಸಮಯಕ್ಕೆ ಅಲ್ಲಿದ್ದ ಒಬ್ಬ ಆಸಾಮಿ ಕೆಳಕ್ಕೆ ಬಿದ್ದು ಹೋಗಿದ್ದಕ್ಕೆ ಅವರು ನಮ್ಮಿಂದಲೇ ಅವನು ಬಿದ್ದುಹೋದನೆಂದು ತಮ್ಮ ಬಳಿ ಹಣವನ್ನು ಕೇಳಿರುತ್ತಾರೆ. ಆಗ ತಾವುಗಳು ನಿಮಗೇನಾದರೂ ತೊಂದರೆಯಾಗಿದ್ದರೆ ಚಿಂತಾಮಣಿಗೆ ಬನ್ನಿ ನಾವೇ ಆತನಿಗೆ ಚಿಕಿತ್ಸೆಯನ್ನು ಕೊಡಿಸುತ್ತೇವೆ ಎಂದು ಹೇಳಿರುತ್ತೇವೆ. ಅದಕ್ಕೆ ಅವರು ನಿರಾಕರಿಸಿದ್ದರಿಂದ ಸದರಿ ಗಲಾಟೆಯ ಬಗ್ಗೆ ತಾನು ತನ್ನ ತಮ್ಮ ಜಿ.ವಿ.ಚಂದ್ರಶೇಖರ್ ರವರಿಗೆ ಪೋನ್ ಮುಖಾಂತರ ತಿಳಿಸಿ ಅಲ್ಲಿಂದ ಚಿಂತಾಮಣಿ ಕಡೆ ಬಂದಿರುತ್ತೇವೆ. ನಂತರ ಅದೇ ಮೂರು ಜನ ಆಸಾಮಿಗಳು ತಮ್ಮಗಳನ್ನು ಹಿಂಬಾಲಿಸಿಕೊಂಡು ಬಂದು ರಾತ್ರಿ ಸುಮಾರು 11.30 ಗಂಟೆ ಸಮಯದಲ್ಲಿ ಚಿಂತಾಮಣಿ ಬಾಗೇಪಲ್ಲಿ ರಸ್ತೆಯ ಚಿಂತಾಮಣಿ ತಾಲ್ಲೂಕು, ನಾಯನಹಳ್ಳಿ ಗ್ರಾಮದ ಬಳಿ ಇರುವ ಭಾರತ್ ಗ್ಯಾಸ್ ಗೋಡನ್ ಬಳಿ ಬರುತ್ತಿದ್ದಾಗ ಮೇಲ್ಕಂಡ ಮೂರು ಜನ ಆಸಾಮಿಗಳ ಜೊತೆಗೆ ಇತರೆ ಸುಮಾರು 3-4 ಜನ ಆಸಾಮಿಗಳು ದ್ವಿಚಕ್ರ ವಾಹನಗಳಲ್ಲಿ ಬಂದು ತಮ್ಮನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಡೆದು, ಕೆಟ್ಟ ಮಾತುಗಳಿಂದ ಬೈದು, ಕಬ್ಬಿಣದ ರಾಡ್ ನಿಂದ ತನ್ನ ತಲೆಗೆ ಹೊಡೆದು ರಕ್ತ ಗಾಯವನ್ನುಂಟು ಮಾಡಿ, ದೊಣ್ಣೆಯಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಪ್ರಭಾಕರ್ ರವರಿಗೂ ಸಹ ದೊಣ್ಣೆಯಿಂದ ತಲೆಯ ಹಿಂಭಾಗ ಹೊಡೆದು ರಕ್ತಗಾಯಪಡಿಸಿ, ಕೈಗಳಿಂದ ಆತನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಗಲಾಟೆಯ ವಿಚಾರವನ್ನು ತಿಳಿದಿದ್ದ ತನ್ನ ತಮ್ಮ ಜಿ.ವಿ.ಚಂದ್ರಶೇಖರ್ ರವರು ಹಾಗೂ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ಅದೇ ಸಮಯಕ್ಕೆ ಸ್ಥಳಕ್ಕೆ ಬಂದಾಗ ಮೇಲ್ಕಂಡವರು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳನ್ನು ತೋರಿಸಿ, ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಗಾಯಗೊಂಡಿದ್ದ ತಮ್ಮನ್ನು ತನ್ನ ತಮ್ಮ ಜಿ.ವಿ.ಚಂದ್ರಶೇಖರ್ ತಮ್ಮನ್ನು ಉಪಚರಿಸಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ. ಇದುವರೆಗೂ ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತಮ್ಮ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡ ಅಪರಿಚಿತ ಆಸಾಮಿಗಳನ್ನು ಪತ್ತೆ ಮಾಡಿ ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.165/2021 ಕಲಂ. 78(3) ಕೆ.ಇ ಆಕ್ಟ್:-

     ದಿನಾಂಕ 12/10/2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ 318 ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 11/10/2021 ರಂದು ಮದ್ಯಾಹ್ನ 12:00 ಗಂಟೆಯಲ್ಲಿ ಶ್ರೀಮತಿ ಚಂದ್ರಕಲಾ-ಪಿ.ಎಸ್.ಐ 2 ರವರು ಗೌರಿಬಿದನೂರು ನಗರದ ಎಂ.ಜಿ ವೃತ್ತದ ಬಳಿ KA-40-G-092 ರಲ್ಲಿ ಸಿಬ್ಬಂದಿಯವರಾದ ಪಿ.ಸಿ 102 ಪ್ರತಾಪ್ ಕುಮಾರ್ ಹಾಗೂ ಗೃಹರಕ್ಷಕ ಇಲಾಖೆಯ HG-290 ಸಿದ್ದೇಶಕುಮಾರ್ ರವರೊಂದಿಗೆ ಗಸ್ತು ಮಾಡುತ್ತಿರುವಾಗ ಸುಮಂಗಲೀ ಬಡಾವಣೆಯ ಸುಮಂಗಲಿ ಕಲ್ಯಾಣ ಮಂಟಪದ ಬಳಿ ಯಾರೋ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವಾಗಿ ಹೆಚ್.ಸಿ 214 ಲೋಕೇಶ್ ರವರು ಮಾಹಿತಿ ನೀಡಿದ್ದು KSRTC ನಿಲ್ದಾಣದ ಬಳಿ ಪಂಚಸಾಕ್ಷಿದಾರರನ್ನು ಬರಮಾಡಿಕೊಂಡು ಮಾಹಿತಿಯಂತೆ ಸುಮಂಗಲಿ ಕಲ್ಯಾಣ ಮಂಟಪದ ಬಳಿ ಜೀಪನ್ನು ನಿಲ್ಲಿಸಿ ಕಲ್ಯಾಣ ಮಂಟಪದ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಕಲ್ಯಾಣ ಮಂಟಪದ ಪಕ್ಕದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಮಟ್ಕಾ ಅಂಕಿಗಳನ್ನು ಬರೆಯಿಸಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗಾಡುತ್ತಿರುವುದು ಕಂಡುಬಂದಿತು. ನಂತರ ಪಂಚರ ಸಮ್ಮುಖದಲ್ಲಿ ಅವನನ್ನು ಸುತ್ತುವರಿದು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಗಂಗರಾಜು ಬಿನ್ ಈಶ್ವರಪ್ಪ, 42 ವರ್ಷ, ಗೊಲ್ಲರು, ಹಿರೇಬಿದನೂರು, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ನಂತರ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 810/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಅಂಕಿಗಳನ್ನು ಸಾರ್ವಜನಿಕರಿಗೆ ಬರೆದುಕೊಟ್ಟು ಸಾರ್ವಜನಿಕರಿಂದ ಪಡೆದ ಹಣ ಎಂದು ತಿಳಿಸಿದ್ದು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಮದ್ಯಾಹ್ನ 1:15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿರುತ್ತೇನೆ. ನಂತರ ಈ ದಿನ ಪ್ರಕರಣವನ್ನು ದಾಖಲಿಸಿರುತ್ತೇನೆ.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.197/2021 ಕಲಂ. 454,457,380 ಐ.ಪಿ.ಸಿ:-

     ದಿನಾಂಕ:11/10/2021 ರಂದು ಪಿರ್ಯಾದಿದಾರರಾದ ಶ್ರೀ ಮೀರ್ ನಜಂ ರಜಾ ಬಿನ್ ಮೀರ್ ಜಹೋರ್ ಹುಸೇನ್ 37 ವರ್ಷ, ವ್ಯಾಪಾರ ವಾಸ ಪೋತೇನಹಳ್ಳಿ ಗ್ರಾಮ ಗೌರಿಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಾಯಿಯಾದ ಮೀನ ಹಜ್ ಬೇಗಂ ಮತ್ತು ತಂದೆಯಾದ ಮೀರ್ ಜಾಹೋರ್ ಹುಸೇನ್ ರವರು ಬೇರೆಯಾಗಿ ನಮ್ಮ ಗ್ರಾಮದಲ್ಲಿ ವಾಸವಾಗಿದ್ದು, ನಾನು ಇದೇ ಗ್ರಾಮದಲ್ಲಿ ಬೇರೆ ವಾಸವಾಗಿರುತ್ತೇನೆ. ದಿನಾಂಕ:07/10/2021 ರಂದು ನಮ್ಮ ತಂದೆತಾಯಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರಲು ಹೋಗಿದ್ದು, ಅಲ್ಲಿಯೇ ನೆಂಟರ ಮನೆಯಲ್ಲಿ ಇದ್ದು, ನಮ್ಮ ಗ್ರಾಮಕ್ಕೆ ಬಂದಿರುವುದಿಲ್ಲ.  ಈ ದಿನ ಮದ್ಯಾಹ್ನ ಸುಮಾರು 1-30 ಗಂಟೆಗೆ ತಮ್ಮ ತಾಯಿಯ ಮನೆ ಮನೆಯ ಮುಂದೆ ನಾನು ಹೋಗುತ್ತಿದ್ದಾಗ ಬಾಗಿಲು ತೆರೆದಿದ್ದು, ನಮ್ಮ ತಂದೆ ತಾಯಿ ಬಂದಿರುತ್ತಾರೆಂದು ಹೋಗಿ ನೋಡಲಾಗಿ ಮನೆಯ ಮುಂದಿನ ಬಾಗಿಲು ಯಾವುದೋ ಆಯುಧದಿಂದ ಹೊಡೆದು ಬಾಗಿಲು ತೆಗೆದಿದ್ದು, ಮನೆ ಒಳಗೆ ಇದ್ದ ಎರಡು ಬಾಗಿಲುಗಳ ಪಕ್ಕ ಒಂದು ಬಿರುವನ್ನು ಯಾರೋ ಕಳ್ಳರು ಒಡೆದು ಹಾಕಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನನಗೆ ಗಾಬರಿಯಾಗಿ ತಾಯಿಗೆ ಫೋನ್ ಮಾಡಿ ಕೇಳಲಾಗಿ ನಮ್ಮ ತಾಯಿ ಅದರಲ್ಲಿ ಸುಮಾರು 32 ಗ್ರಾಂ, ತೂಕದ 4 ಬಂಗಾರದ ಬಳೆ, ಸುಮಾರು 40 ಗ್ರಾಂ ತೂಕದ ಬಂಗಾರದ ಕಡಗ ಸುಮಾರು 10 ಗ್ರಾಂ ತೂಕದ 2 ಬಂಗಾರದ ಗುರ ಇಟ್ಟಿದ್ದಾಗಿ ತಿಳಿಸಿದರು ಮೇಲ್ಕಂಡ ಎಲ್ಲಾ ಒಡವೆಗಳನ್ನು ಯಾರೋ ಕಳ್ಳರು ದಿನಾಂಕ:07/10/2021 ರಿಂದ ದಿನಾಂಕ:11/10/2021 ರ ಮಧ್ಯೆ ಮನೆಯ ಬಾಗಿಲು ಮುರಿದು ಮನೆಯ ಬಿರುವನ್ನು ಹೊಡೆದು ಹಾಕಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಒಡವೆಗಳನ್ನು ಸುಮಾರು 20 ವರ್ಷಗಳ ಹಿಂದೆ ತೆಗೆದುಕೊಂಡಿದ್ದು, ಇದರ ಬೆಲೆ ಸುಮಾರು 1,60,000/- ರೂಗಳು ಆಗಿದ್ದು, ಅದ್ದರಿಂದ ಸ್ಥಳಕ್ಕೆ ಬಂದು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 304A,279,337 ಐ.ಪಿ.ಸಿ:-

     ದಿನಾಂಕ-12/101/2021 ರಂದು ಮಧ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರಾದ ಸಿದ್ದಲಿಂಗಪ್ಪ ಬಿನ್ ರಂಗಪ್ಪ,70ವರ್ಷ,ಗಂಗಟಕಾರ ವಕ್ಕಲಿಗರು,ಜಿರಾಯ್ತಿ,ತಿಮ್ಮಸಂದ್ರ ಗ್ರಾಮ,ದೊಡ್ಡಬಳ್ಳಾಪುರ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ,ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.ತಾನು ಕೂಲಿಯಿಂದ ಜೀವಿಸುತ್ತಿದ್ದು ನನಗೆ 50ವರ್ಷದ ಹನುಮಕ್ಕ ಹೆಂಡತಿ ಇದ್ದು ನಮಗೆ 25ವರ್ಷದ ಮಗ ರಾಜೇಶ ಮತ್ತು 23 ವರ್ಷದ ಸುಮಾ ಎಂಬ ಮಗಳಿದ್ದು ಮಗಳಿಗೆ ಮದುವೆಯಾಗಿರುತ್ತದೆ.ನನ್ನ ಹೆಂಡತಿಯ ತವರೂರು  ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮ,ನನ್ನ ಮಗ ರಾಜೇಶ  7 ನೇ ತರಗತಿ ಓದಿಕೊಂಡಿದ್ದು ಮದುವೆಯಾಗಿರಲಿಲ್ಲ.ಇವನು ಕೂಲಿ ಕೆಲಸ ಮತ್ತು ಅಡುಗೆ ಕೆಲಸವನ್ನು ಮಾಡಿ ತಂದು ನಮ್ಮನ್ನು ಪೋಷಿಸುತ್ತಿದ್ದನು.ಅವನಿಗೆ ಚಿಕ್ಕಬಳ್ಳಾಪುರ ಸುತ್ತಮುತ್ತ ಅಡುಗೆ ಭಟ್ಟರುಗಳು ಪರಿಚಯವಿದ್ದು ಆಗಾಗ ಹೋಗಿ ಅಡುಗೆ ಕೆಲಸಗಳನ್ನುಮಾಡಿಕಕೊಂಡು ಬರುತ್ತಿದ್ದನು.ದಿನಾಂಕ-11/10/2021 ರಂದು ನನ್ನ ಮಗ ರಾಜೇಶ ಮತ್ತು ನಮ್ಮೂರಿನ ನಮ್ಮ ಜನಾಂಗದ ಗೌತಮ್ ಬಿನ್ ರಾಮಾಂಜಿನಪ್ಪ,ಇಬ್ಬರೂ ಮದ್ಯಾಹ್ನ ನಮ್ಮೂರಿನ ಗಂಗರತ್ನಮ್ಮ ಕೋಂ ವಾಸುದೇವ ರವರ KA50 EC 5587 ಹೀರೋ ಸ್ಪಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಪಡೆದುಕೊಂಡು ಇಬ್ಬರೂ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು.ದಿನಾಂಕ-11/10/2021 ರಂದು ರಾತ್ರಿ ಸುಮಾರು 08.15 ಗಂಟೆಯಲ್ಲಿ ನಮ್ಮ ಸಂಬಂದಿ ರಾಮಚಂದ್ರ ತನ್ನ ತಮ್ಮ ನರಸಿಂಹಮೂರ್ತಿ ರವರಿಗೆ ಮೊಬೈಲ್  ಕರೆ ಮಾಡಿ  ರಾಜೇಶ ಮತ್ತು ಗೌತಮ್ ಆರ್. ಇಬ್ಬರೂ ಸಂಜೆ 07.30 ಗಂಟೆಯಲ್ಲಿ ನಂದಿ ಬೆಟ್ಟ-ಕಾರಹಳ್ಳಿ ಮಧ್ಯೆ ಆಂಜನೇಯ ದೇವಸ್ಧಾನದ ಬಳಿ ರಸ್ತೆ ಅಪಘಾತಾವಾಗಿ ರಾಜೇಶನ ಸ್ಧಿತಿ ಚಿಂತಾಜನಕವಾಗಿದ್ದು ಗೌತಮ್ ತೀವ್ರ ಗಾಯಗಳಿಂದ ನರಳುತ್ತಿದ್ದು ಬೇಗ ಬರುವಂತೆ ಹೇಳಿದರೆಂದು  ನಮ್ಮೂರಿನ ನಮ್ಮ ಸಂಬಂಧಿ ನರಸಿಂಹಮೂರ್ತಿ ಬಿನ್ ಲಕ್ಷೀನರಸಪ್ಪ ಬಂದು ತಿಳಿಸಿದನು.ಕೂಡಲೇ ನಮ್ಮ ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ ಕಾರಿನಲ್ಲಿ  ನಾನು ಮೇಲ್ಕಂಡ ನರಸಿಂಹಮೂರ್ತಿ,ಶಶಿಕುಮಾರ್,ಚನ್ನಪ್ಪ,ನರಸಿಂಹಮೂರ್ತಿ ಬಿನ್ ರಾಮಾಂಜಿನಪ್ಪ ಹಾಗೂ ಮತ್ತೊಬ್ಬ ನರಸಿಂಹಮೂರ್ತಿ ಬಿನ್ ತಿಮ್ಮೇಗೌಡ ಎಲ್ಲರೂ ಕಾರಿನಲ್ಲಿ ಸ್ದಳಕ್ಕೆ ಬಂದಾಗ ನಮ್ಮೂರಿನ ರಾಮಚಂದ್ರಪ್ಪ ಬಿನ್ ಲೇ. ಲಕ್ಷೀನರಸಪ್ಪ ಹರೀಶ್ ಬಿನ್ ಲೇ.ನಾರಾಯಣಸ್ವಾಮಿ,ಇದ್ದು ಗೌತಮ್ ಗೆ ನೀರು ಕುಡಿಸಿ ಉಪಚರಿಸುತ್ತಿದರು.  ರಾಜೇಶನಿಗೆ ಮುಖ ಮತ್ತು ತಲೆಗೆ ಮಾರಣಾಂತಿಕ ಗಾಯಗಳಾಗಿ ಸ್ಧಳದಲ್ಲೇ ಮೃತಪಟ್ಟಿದ್ದನು.ರಾಮಚಂದ್ರಪ್ಪನು ಆಂಬ್ಯುಲೆನ್ಸ್ ಗೆ ಕರೆ ಮಾಡಿರುವುದಾಗಿ ಹೇಳಿದನು.ವಿಚಾರ ಮಾಡಲಾಗಿ ರಾಜೇಷ ಮತ್ತು ಗೌತಮ್ ಕಾರಹಳ್ಳಿ ಕ್ರಾಸ್ ಕಡೆಯಿಂದ ಮೇಲ್ಕಂಡ KA50 EC 5587 ಹೀರೋ ಸ್ಪಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಊರಿಗೆ ವಾಪಸ್ಸು ಬರುತ್ತಿದ್ದು ದ್ವಿಚಕ್ರ ವಾಹನವನ್ನು ಗೌತಮ್ ಅತಿವೇಗ ಮತ್ತು ಅಜಾಗರೂಕತರಯಿಂದ ಓಡಿಸಿಕೊಂಡು ಹೋಗಿ ರಾತ್ರಿ 07.30 ಗಂಟೆಯಲ್ಲಿ ರಸ್ತೆಯ ಎಡಬದಿಯ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರ ಪರಿಣಾಮ ದ್ವಿಚಕ್ರ ವಾಹನ ಜಖಂ ಆಗಿ ಗೌತಮ್ ನಿಗೆ ಮುಖ,ಮತ್ತು ತಲೆಗೂ ತೀವ್ರ ಗಾಯಗಳಾಗಿ ಬಲಗೈ ಗೆ ತರಚಿದ ಗಾಯಗಳಾಗಿ ರಾಜೇಶ ಸ್ಧಳದಲ್ಲೇ ಮೃತಪಟ್ಟಿದನೆಂದು ರಾಮಚಂದ್ರ ಮತ್ತು ಹರೀಷ ತಿಳಿಸಿದರು.ಆಂಬ್ಯೂಲೆನ್ಸ್ ಬಂದಿದ್ದು ಗೌತಮ್ ನನ್ನು ಆಂಬ್ಯೂಲೆನ್ಸ್ ನಲ್ಲಿ ದೇವನಹಳ್ಳಿಯ ಆಸ್ಪತ್ರೆಗೆ ಕಳುಹಿಸಿ ರಾಜೇಶನ ಹೆಣವನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದೆವು.ಈ ಅಪಘಾತಕ್ಕೆ ಗೌತಮ್ ಅತಿವೇಗ ಮತ್ತು ಅಜಾರೂಕತೆಯಿಂದ ದ್ವಿಚಕ್ರ ವಾಹನ ಓಡಿಸಿ ಅಪಘಾತ ಮಾಡಿದ್ದೇ ಕಾರಣವಾಗಿದ್ದು ಸದರಿ ಗೌತಮ್ ನ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ  ಈ ದಿನ ತಡವಾಗಿ ಠಾಣೆಗೆ ಬಂದು  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.315/2021 ಕಲಂ. 120B,416,427,441,420,504,506,34 ಐ.ಪಿ.ಸಿ:-

     ದಿನಾಂಕ: 11-10-2021 ರಂದು ಸಂಜೆ 5.20 ಗಂಟೆಯಲ್ಲಿ ನ್ಯಾಯಾಲಯದ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಪಿಸಿ-90 ರಾಜಕುಮಾರ ರವರು ಘನ ನ್ಯಾಯಾಲಯದಿಂದ ಸಾದರಾದ ಪಿಸಿಆರ್ ನಂ. 25/2021 ರ ದೂರನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀ ಮುನಿಯಪ್ಪ ಬಿನ್ ಲೇಟ್ ವಸಂತಪ್ಪ, 45 ವರ್ಷ, ಎ.ಹುಣಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಘನ ನ್ಯಾಯಾಲಯದಿಂದ ಸಾದರಪಡಿಸಿದ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ ಎ.ಹುಣಸೇನಹಳ್ಳಿ ಗ್ರಾಮದ ಸರ್ವೆ ನಂ. 34/ಪಿ45 ರಲ್ಲಿ 3 ಎಕರೆ, 3/2 ರಲ್ಲಿ 0.27 ಗುಂಟೆ, 3/3 ರಲ್ಲಿ 0.21 ಗುಂಟೆ ಒಟ್ಟು 4-08 ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಫಿರ್ಯಾದಿದಾರರು ಕೊಳವೆ ಬಾವಿ ಹಾಕಿಸಿಕೊಂಡು ಆಲುಗಡ್ಡೆ ಮತ್ತು ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುತ್ತಾರೆ. ಹೀಗಿದ್ದು ಈ ಪ್ರಕರಣದ ಆರೋಪಿಯಾದ ಡಿ.ಮುನಿರಾಜು ಎಂಬುವರು ಈಗ್ಗೆ 3 ವರ್ಷಗಳ ಹಿಂದೆ ವಿಜಯರಪುರ ಟೌನ್ ವಾಸಿಯಾದ ವೆಂಕಟೇಶ ಬಿನ್ ಪಿಳ್ಳಪ್ಪ ಎಂಬುವರೊಂದಿಗೆ ಫಿರ್ಯಾದಿದಾರರನ್ನು ಸಂಪರ್ಕಿಸಿ ತೋಟಗಾರಿಕೆ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ನಡೆದ ಲಾಟರಿ ಯೋಜನೆಯಲ್ಲಿ ಫಿರ್ಯಾದಿದಾರರು ದಿನಾಂಕ: 01-12-2017 ರಂದು ನಂ. 18 ರಲ್ಲಿ ಆಯ್ಕೆಯಾಗಿರುವುದಾಗಿ ಸರ್ಕಾರದಿಂದ 27,00,000-00 ರೂ ಸಬ್ಸಿಡಿ ಬರುವುದಾಗಿ ಹೇಳಿ ಸದರಿ ಸಬ್ಸಿಡಿಗೆ 50,000-00 ರೂ ಹಣವನ್ನು ಚೀಮಂಗಲ ಗ್ರಾಮದ ಗೋಪಾಲಪ್ಪ ಬಿನ್ ಮುನಿವೆಂಕಟಪ್ಪ ಮತ್ತು ವಿಜಯಪುರ ಟೌನ್ ವಾಸಿಗಳಾದ ವೆಂಕಟೇಶ ಬಿನ್ ಪಿಳ್ಳಪ್ಪ ಹಾಗೂ ಅಣ್ಣದೊರೈ ಬಿನ್ ಈರಣ್ಣ ಎಂಬುವರ ಮುಂದೆ ಪಡೆದುಕೊಂಡಿರುತ್ತಾರೆ ಅದೇ ಸಮಯದಲ್ಲಿ ಪಾಲಿ ಹೌಸ್ ಮಾಡಿಸುವುದಾಗಿ ತಯಾರಿಸಿದ್ದ ಮೂಲ ದಾಖಲೆಗಳನ್ನು ಸಹ ಪಡೆದುಕೊಂಡಿರುತ್ತಾರೆ. ಹಾಗೂ ಆರೋಪಿ ಮುನಿರಾಜು ರವರು ಕಂಪನಿಯವರ ಸಹಕಾರದಿಂದ ಫಿರ್ಯಾದಿದಾರರ ಬಾಬತ್ತು ಜಮೀನಿನಲ್ಲಿ 30 ಗುಂಟೆ ಜಮೀನಿನಲ್ಲಿ ಪಾಲಿ ಹೌಸ್ ನಿರ್ಮಾಣಕ್ಕೆ ಅಡಿಪಾಯವನ್ನು ಸಹ ಹಾಕಿಸಿರುತ್ತಾರೆ. ಆರೋಪಿಯು ಅಡಿಪಾಯವನ್ನು ಹಾಕಿದ ನಂತರ ಆರೋಪಿಯು ಫಿರ್ಯಾದಿದಾರರಿಗೆ ತೊಂದರೆ ಮಾಡುವ ಉದ್ದೇಶದಿಂದ ಪಾಲಿ ಹೌಸ್ ಕೆಲಸವನ್ನು ಪೂರ್ಣಗೊಳಿಸದೆ ಇದ್ದು ಫಿರ್ಯಾದಿದಾರರು ಆರೋಪಿಯನ್ನು ದಿನಾಂಕ: 08-01-2020 ರಂದು ಆರೋಪಿಯ ಗ್ರಾಮದಲ್ಲಿ ಕೇಳಿದ್ದಕ್ಕೆ ಫಿರ್ಯಾದಿದಾರರಿಗೆ ಆರೋಪಿಯು ನಿನ್ನ ಅಮ್ಮನೆ ನಾಯಕರ ಜಾತಿನೇಕೇಯ ನಮ್ಮ ಊರಿನಲ್ಲಿ ಬಂದು ನಮ್ಮನ್ನು ಹಣ ಕೇಳುವುದಕ್ಕೆ ನಿನಗೆ ಎಷ್ಟು ದೈರ್ಯ ನಾನು ಮನಸ್ಸು ಮಾಡಿದರೆ ಊರನಿಂದ ಹೊರಗಡೆ ಹೋಗುವುದಕ್ಕೆ ಆಗುವುದಿಲ್ಲ, ಇಲ್ಲಿಯೇ ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದು ಈ ವಿಚಾರದಲ್ಲಿ ಪೊಲೀಸರಲ್ಲಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ನಂತರ ಆರೋಪಿಯು ಫಿರ್ಯಾದಿದಾರರಿಗೆ ನೀನು ನನ್ನ ಮೇಲೆ ಯಾರಿಗೆ ಬೇಕಾದರೂ ದೂರು ಕೊಡು ಆದರೆ ನನ್ನನ್ನು ಏನೂ ಮಾಡುವುದಲ್ಲೆ ಆಗುವುದಿಲ್ಲ ಎಂದು ದೌರ್ಜನ್ಯವೆಸಗಿದ್ದು ಫಿರ್ಯಾದಿದಾರರಿಗೆ ಸದರಿ ಜಮೀನಿನಲ್ಲಿ ಈಗ್ಗೆ 3 ವರ್ಷಗಳಿಂದ ಸದರಿ ಜಮೀನಿನಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಾಗದೆ ಇದ್ದು ಫಿರ್ಯಾದಿದಾರರಿಗೆ 5,00,000-00 ರೂ ನಷ್ಟವುಂಟಾಗಿದ್ದು ಅಲ್ಲದೆ ಪಾಲಿ ಹೌಸ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿ ಮುಂಗಡವಾಗಿ 50,000-00 ರೂ ಹಣವನ್ನು ಸಹ ತೆಗೆದುಕೊಂಡು ವಾಪಸ್ಸು ಕೊಡದೆ ನಷ್ಟವನ್ನು ಉಂಟುಮಾಡಿರುತ್ತಾನೆಂದು ಇತ್ಯಾದಿಯಾಗಿ ಸಾದರಾದ ದೂರಿನ ಮೇರೆಗೆ ಠಾಣಾ ಮೊ.ಸಂ. 315/2021 ಕಲಂ 120(ಬಿ), 416, 427, 441, 420, 504, 506 ರ/ಜೊ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 12-10-2021 05:43 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080