ಅಭಿಪ್ರಾಯ / ಸಲಹೆಗಳು

 

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.354/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 09/10/2021 ರಂದು ಸಂಜೆ 5-00 ಗಂಟೆಗೆ  ಶ್ರೀಮತಿ ಪದ್ಮ ಮಹೆಚ್ ಸಿ-238, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೇನೆಂದರೆ  ಈ ದಿನ ದಿನಾಂಕ; 09-10-2021 ರಂದು ಪೊಲೀಸ್ ನಿರೀಕ್ಷಕರಾದ ನಾಗರಾಜ್ ಡಿ ಆರ್ ರವರು ನನಗೆ ಮತ್ತು ಮತ್ತು  ಸಿ ಪಿ.ಸಿ 134 ಧನಂಜಯ್ ಕುಮಾರ್  ರವರಿಗೆ ಗ್ರಾಮಗಳ ಗಸ್ತಿಗೆ  ನೇಮಿಸಿದ್ದು, ಅದರಂತೆ ನಾವು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಸಿ ಪಿ.ಸಿ 134 ಧನಂಜಯ್ ಕುಮಾರ್ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ಗೂಳೂರು, ಚಿನ್ನಕಾಯಲಪಲ್ಲಿ, ಯಗವ ಮದ್ದಲಖಾನ ಗ್ರಾಮಗಳ ಕಡೆಗೆ ಗಸ್ತು ಮಾಡುತ್ತಿದ್ದಾಗ,  ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ದಿಗವ ಐವಾರ್ಲಪಲ್ಲಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿ ಪಿ.ಸಿ 134 ಧನಂಜಯ್ ಕುಮಾರ್  ರವರೊಂದಿಗೆ  ದ್ವಿಚಕ್ರ ವಾಹನದಲ್ಲಿ ಹೊರಟು, ದಿಗವ ಐವಾರ್ಲಪಲ್ಲಿ ಕ್ರಾಸ್ ನಲ್ಲಿದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 3-45 ಗಂಟೆಗೆ ದಿಗವ ಐವಾರ್ಲಪಲ್ಲಿ ಗ್ರಾಮದ ಬಳಿ ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಲು ಯತ್ನಿಸಿದ ಅಸಾಮಿಯನ್ನು ಸಿಬ್ಬಂದಿಯಾದ ಧನಂಜಯ್ ಕುಮಾರ್ ರವರು ಹಿಡಿದುಕೊಂಡು ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ರಮಣ ಬಿನ್ ಶ್ರೀರಾಮಪ್ಪ, 28 ವರ್ಷ, ಭೋವಿ ಜನಾಂಗ, ಗಾರೆ ಕೆಲಸ, ವಾಸ: ದಿಗವ ಐವಾರ್ಲಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ. ಇವುಗಳು ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ–421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ, ಅಸಲು ದಾಳಿ ಪಂಚನಾಮೆ ಮತ್ತು ಮಾಲನ್ನು  ಸಂಜೆ  5-00 ಗಂಟೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-312/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:10-10-2021 ರಂದು ಘನ ನ್ಯಾಯಾಲಯದ ಪಿ.ಸಿ 344 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.355/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 09/10/2021 ರಂದು ಸಂಜೆ 6-15 ಗಂಟೆಗೆ  ಶ್ರೀ ನಾಗರಾಜ್ ಡಿ ಆರ್. ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 09.10.2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ದೇವರಗುಡಿಪಲ್ಲಿ ಗ್ರಾಮದ ಗ್ರಾಮಪಂಚಾಯ್ತಿ ಕಛೇರಿ ಹಿಂಭಾಗ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ 258 ನರಸಿಂಹಮೂರ್ತಿ, ಪಿಸಿ-237 ವಿನಯ್ ಕುಮಾರ್ ಯಾದವ್, ಪಿಸಿ-278 ಶಬ್ಬೀರ್ ಊರನಮನಿ, ಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ. ಪಿಸಿ 432 ಮಾಳಪ್ಪ ಮತ್ತು ಜೀಪ್ ಚಾಲಕ ಎ.ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮದ  ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಹೋಗಿ ದೇವಸ್ಥಾನದ ಮರೆಯಲ್ಲಿ ಜೀಪ್ ನಿಲ್ಲಿಸಿ,  ಸ್ಥಳದಲ್ಲಿದ್ದ  ಪಂಚರನ್ನು ಬರಮಾಡಿಕೊಂಡು ಅವರಿಗೆ ಧಾಳಿ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ದಾಳಿಯ ಪಂಚನಾಮೆಗೆ ಸಹಕರಿಸಲು  ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಗ್ರಾಮಪಂಚಾಯ್ತಿ ಕಟ್ಟಡದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗ್ರಾಮಪಂಚಾಯ್ತಿ ಹಿಂಭಾಗ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಹರಿರಾಜ ಬಿನ್ ಲೇಟ್ ನಾರಾಯಣಾಜಿ, 50 ವರ್ಷ, ಭಟ್ಟರಾಜು ಜನಾಂಗ, ಹರಿಕಥೆ ಹೇಳುವುದು, ವಾಸ ರಾಘವೇಂದ್ರ ಟಾಕೀಸ್ ಹತ್ತಿರ, 4ನೇ ವಾರ್ಡ್, ಬಾಗೇಪಲ್ಲಿ ಪುರ,  2) ಚಂದ್ರಶೇಖರ ಬಿನ್ ಲೇಟ್ ವೆಂಕಟರವಣಪ್ಪ, 42 ವರ್ಷ, ಬಲಜಿಗರು, ವ್ಯವಸಾಯ, ವಾಸ: ಶಂಖಂವಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೆಪಲ್ಲಿ ತಾಲ್ಲೂಕು, 3) ಸೋಮಶೇಖರ ಬಿನ್ ಲೇಟ್ ಸತ್ಯ ನಾರಾಯಣ, 45 ವರ್ಷ, ಬಲಜಿಗರು, ಈರುಳ್ಳಿ ವ್ಯಾಪಾರ, ವಾಸ ಕೊಂಡಂವಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 4) ನಾಗಾರ್ಜುನ ಬಿನ್ ನರಸಿಂಹಪ್ಪ, 45 ವರ್ಷ, ಬಲಜಿಗರು, ಚಾಲಕ ವೃತ್ತಿ, ದೇವರಗುಡಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ. ಸ್ಥಳದಲ್ಲಿದ್ದ ಮೇಲ್ಕಂಡ 4 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 8200/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಸಂಜೆ 6-15 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-313/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:10-10-2021 ರಂದು ಘನ ನ್ಯಾಯಾಲಯದ ಪಿ.ಸಿ 344 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.356/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 09/10/2021 ರಂದು ರಾತ್ರಿ 7-30 ಗಂಟೆಗೆ ಸುಬ್ರಮಣಿ ಸಿಹೆಚ್.ಸಿ-71 ಡಿಸಿಬಿ-ಸಿಇಎನ್ ಪೊಲೀಸ್ ಠಾಣೆರವರು ಅಸಲು ಪಂಚನಾಮೆ,ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ಈ ದಿನ ದಿನಾಂಕ:09.10.2021 ರಂದು ನಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ಮಂಜು ಬಿ.ಪಿ ರವರ ಆದೇಶದಂತೆ  ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ತಾಲ್ಲೂಕಿನ  ಕೊತ್ತಕೋಟೆ ಗ್ರಾಮದ ಬಳಿ ಸಂಜೆ 5.30 ಗಂಟೆಯ ಸಮಯದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿಯೇನೆಂದರೆ, ಬಾಗೇಪಲ್ಲಿ ತಾಲ್ಲೂಕಿನ  ಪರಗೋಡು ಗ್ರಾಮದ ಗಂಗರಾಜು ಎಂಬುವವರ ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶ ನೀಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಸಂಜೆ 5.45 ಗಂಟೆಗೆ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಗಂಗರಾಜುರವರ ಚಿಲ್ಲರೆ ಅಂಗಡಿಯ ಮುಂಭಾಗದ ಖಾಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನಮಾಡುತ್ತಿದ್ದು, ನಮ್ಮಗಳನ್ನು ನೋಡಿ ಓಡಿಹೋದರು. ಸದರಿ  ಸ್ಥಳದ ಅಂಗಡಿಯ ಬಳಿ ಇದ್ದ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಗಂಗರಾಜು ಬಿನ್ ಲೇಟ್ ಕೃಷ್ಣಪ್ಪ, 45ವರ್ಷ, ಗಾಣಿಗ, ಚಿಲ್ಲರೆ ಅಂಗಡಿ ವ್ಯಾಪಾರಿ ಮತ್ತು ಅಂಗಡಿ ಮಾಲೀಕರು, ಪರಗೋಡು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದನು, ಸದರಿ ಆಸಾಮಿಗೆ  ಅಂಗಡಿಯ ಮುಂಭಾಗದ ಖಾಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆಗಾಗಿ ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂತ ತಿಳಿಸಿದನು. ಸ್ಥಳದಲ್ಲಿ ದೊರೆತ 22 ಮದ್ಯ ತುಂಬಿರುವ HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳಿದ್ದು, ಒಟ್ಟು ಮದ್ಯವು 1 ಲೀಟರ್ 980 ಎಂ.ಎಲ್ ಇದ್ದು, ಒಟ್ಟು 770/- ರೂ ಬೆಲೆಬಾಳುವುದಾಗಿರುತ್ತೆ. ಒಂದು ಖಾಲಿ ವಾಟರ್ ಬಾಟಲ್, 2 ಖಾಲಿ ಗ್ಲಾಸುಗಳು,  2 ಖಾಲಿ HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳಿದ್ದು, ಸ್ಥಳದಲ್ಲಿ ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ನಂತರ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ, ಆರೋಪಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನುರೀತ್ಯಾ ಕ್ರಮಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-314/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:10-10-2021 ರಂದು ಘನ ನ್ಯಾಯಾಲಯದ ಪಿ.ಸಿ 344 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.78/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 10-10-2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿಬಿ/ಸಿ.ಇಎನ್ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮತಿ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ಕೊಟ್ಟ ಆರೋಪಿತರನ್ನು ಪಂಚನಾಮೆ, ಮಾಲು, ಹಾಗೂ ವರದಿಯ ದೂರನ್ನು ಪಡೆದುಕೊಂಡಿದ್ದರ ದೂರಿನ ಸಾರಾಂಶವೇನೆಂದರೆ, ದಿನಾಂಕ: 10-10-2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ.ಪಿ ಮಂಜು ರವರು ತನಗೆ ಮತ್ತು ಸಿಬ್ಬಂದಿಯವರಾದ ಜಯಣ್ಣ, ಸಿಪಿಸಿ-142 ಹಾಗೂ ಕೆ.ಎ-40-ಜಿ-58 ಜೀಪ್ ಚಾಲಕರಾದ ಮಧು, ಸಿಪಿಸಿ-527 ರವರುಗಳಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ನೇಮಕ ಮಾಡಿದ್ದು, ಅದರಂತೆ ತಾನು ಮತ್ತು ಸಿಬ್ಬಂದಿಯವರು ತಾಲ್ಲೂಕಿನ ತಿಪ್ಪೇನಹಳ್ಳಿ, ಕಣಜೇನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ರಾತ್ರಿ ಸುಮಾರು 7-00 ಗಂಟೆಗೆ ನಗರದ ನಿಮ್ಮಾಕಲಕುಂಟೆಗೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಯಾರೋ ಇಬ್ಬರು ಆಸಾಮಿಗಳು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿರುವ ನಂದಿನಿ ಬೂತ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಬಂದ ಮಾಹಿತಿಯನ್ನು ತಿಳಿಸಿ ಪಂಚರೊಂದಗೆ ರಾತ್ರಿ ಸುಮಾರು 7-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು ಸೇರಿಕೊಂಡು ಡೆಲ್ಲಿ ಗೆಲ್ಲುತ್ತದೆ 100/- ರೂ ಎಂತಲೂ, ಚನೈ ಗೆಲ್ಲುತ್ತದೆ 100/- ರೂ ಎಂತಲೂ ಹಣವನ್ನು ಪಣಕ್ಕೆ ಇಟ್ಟು ಜೂಜಾಟವಾಡುತ್ತಿದ್ದು, ಪಂಚರ ಸಮಕ್ಷಮ ಸದರಿ ಆಸಾಮಿಗಳನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು 1) ಅಭಿ @ ಭುವನ್ ಬಿನ್ ಅಶ್ವತ್ಥಪ್ಪ, 23 ವರ್ಷ, ವಕ್ಕಲಿಗರು, ಜಿರಾಯ್ತ, ವಾಸ ಅಂದಾರ್ಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 2) ಪ್ರತಾಪ್ ಬಿನ್ ಮುನೇಗೌಡ, 27 ವರ್ಷ,  ವಕ್ಕಲಿಗರು, ಜಿರಾಯ್ತ, ವಾಸ ಅಂದಾರ್ಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಕಿಕ್ರೆಟ್ ಬೆಟ್ಟಿಂಗ್ ಜೂಜಾಟಕ್ಕೆ ಪಣವಾಗಿಟ್ಟಿದ್ದ 500/- ರೂ ನಗದು ಹಣ, ಒಂದು ಚೀಟಿ ಮತ್ತು ಒಂದು ಪೆನನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿದ್ದು ಸದರಿ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿ ಆರೋಪಿತರು, ಮಾಲು, ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡಿದ್ದರ ಮೇರೆಗೆ ಈ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.444/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 10/10/2021 ರಂದು ಸಂಜೆ 6-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ವೇಣು, ಸಿ.ಹೆಚ್.ಸಿ-110 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 10/10/2021  ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ಮಂಜು.ಪಿ.ಐ ರವರು ತನಗೆ ಹಾಗೂ ತಮ್ಮ ಠಾಣೆಯ ಸಿ.ಹೆಚ್.ಸಿ-198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ತಾವುಗಳು ಈ ದಿನ ಸಂಜೆ ಸುಮಾರು 4-45 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಚನ್ನಕೇಶವಪುರ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಚನ್ನಕೇಶವಪುರ ಗ್ರಾಮದ ವಾಸಿ ದೇವರಾಜ ಬಿನ್ ಲೇಟ್ ಮುನಿಚಿಕ್ಕಪ್ಪ ಎಂಬುವವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಪಂಚರೊಂದಿಗೆ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲಾಗಿ ಮದ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಚಿಲ್ಲರೆ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆಸಾಮಿಯ ಹೆಸರು ಹಾಗೂ ವಿಳಾಸ ವಿಚಾರಿಸಲಾಗಿ  ದೇವರಾಜ ಬಿನ್ ಲೇಟ್ ಮುನಿಚಿಕ್ಕಪ್ಪ, 38 ವರ್ಷ,  ಕುರುಬ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ,  ಚನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ಪರಿಶೀಲಿಸಲಾಗಿ 1).Haywards Cheers Whisky ಯ 90 ML ನ ಮದ್ಯ ತುಂಬಿದ 18 ಟೆಟ್ರಾ ಪಾಕೇಟ್ ಗಳು, 2)2 ಪ್ಲಾಸ್ಟಿಕ್ ಗ್ಲಾಸ್ ಗಳು, 3)Haywards Cheers Whisky ಯ 90 ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ನೀರಿನ ಬಾಟೆಲ್ ಇರುತ್ತೆ. ವಶಪಡಿಸಿಕೊಂಡ ಒಟ್ಟು ಮದ್ಯ 01 ಲೀಟರ್ 620 ML ಇದ್ದು, ಬೆಲೆ ಸುಮಾರು 632/- ರೂಗಳಾದ್ದಾಗಿರುತ್ತೆ. ನಂತರ ಮೇಲ್ಕಂಡ ಮಾಲುಗಳನ್ನು ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಯಾವುದೇ ಪರವಾನಿಗೆಯನ್ನು ಪಡೆಯದೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ದೇವರಾಜ ಬಿನ್ ಲೇಟ್ ಮುನಿಚಿಕ್ಕಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.445/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 11/10/2021 ರಂದು ಬೆಳಿಗ್ಗೆ 10.30 ಗಂಟೆಗೆ ಕೆ.ಎಂ.ನಾಗೇಶ್ ಬಿನ್ ಲೇಟ್ ಎಸ್.ಮುನಿಯಪ್ಪ, 43 ವರ್ಷ, ಗೊಲ್ಲರು, ಜಿರಾಯ್ತಿ, ಕದಿರಿನಾಯಕನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದಊರಿನ ಸಾರಾಂಶವೇನೆಂದರೆ, ತನ್ನ ಮಗನಾದ ಆಕಾಶ್ ರವರಿಗೆ 25 ವರ್ಷ ವಯಸ್ಸಾಗಿದ್ದು, ಚಿಂತಾಮಣಿ ನಗರದ ಟೊಮೆಟೋ ಮಾರ್ಕೇಟ್ ನಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 10/10/2021 ರಂದು ಸಂಜೆ 7.30 ಗಂಟೆಗೆ ಚಿಂತಾಮಣಿಗೆ ಹೋಗುವ ಸಲುವಾಗಿ ಆತನ ಬಾಬತ್ತು ಕೆಎ-03 ಇಟಿ-5759 ಆಕ್ಟೀವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೋದ. ರಾತ್ರಿ ಸುಮಾರು 11.00 ಗಂಟೆ ಸಮಯದಲ್ಲಿ ತನ್ನ ಬಾಮೈದ ಬಾಲಕೃಷ್ಣ ರವರಿಗೆ ಯಾರೋ ಪೋನ್ ಮಾಡಿ ಚಿಂತಾಮಣಿ- ಶಿಡ್ಲಘಟ್ಟ ಮುಖ್ಯ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಆಕಾಶ್ ರವರ ದ್ವಿಚಕ್ರ ವಾಹನಕ್ಕೆ ಅಪಘಾತವಾಗಿದ್ದು, ಆಕಾಶ್ ರವರಿಗೆ ತೀವ್ರವಾದ ಗಾಯಗಳಾಗಿದ್ದು, ರಸ್ತೆಯಲ್ಲಿ ಬರುತ್ತಿದ್ದವರು ಆತನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯೆ ಸತ್ತುಹೋಗಿರುತ್ತಾನೆಂದು ಪೋನ್ ನಲ್ಲಿ ತಿಳಿಸಿದ್ದಾಗಿ ತಮಗೆ ತಿಳಿಸಿದನು. ಕೂಡಲೇ ತಾನು ಹಾಗೂ ತಮ್ಮ ಮನೆಯವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ಮಗನಿಗೆ ತಲೆ, ಮುಖಕ್ಕೆ, ಕೈ ಕಾಲುಗಳಿಗೆ ಗಾಯಗಳಾಗಿ ಮೃತಪಟ್ಟಿರುತ್ತಾನೆ. ವಿಚಾರ ಮಾಡಲಾಗಿ ತನ್ನ ಮಗ ಆಕಾಶ್ ದಿನಾಂಕ: 10/10/2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಚಿಂತಾಮಣಿಯಿಂದ ಊರಿಗೆ ವಾಪಸ್ ಬರಲು ದ್ವಿಚಕ್ರ ವಾಹನದಲ್ಲಿ ತಿಮ್ಮಸಂದ್ರ ಗ್ರಾಮದ ಶೆಲ್ ಪೆಟ್ರೋಲ್ ಬಂಕ್ ಬಳಿ ಬರುವಷ್ಠರಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿ, ಸದರಿ ವಾಹನದ ಚಾಲಕ ಸ್ಥಳದಿಂದ ಹೊರಟು ಹೋಗಿರುವುದಾಗಿ ಈ ಅಪಘಾತಕ್ಕೆ ಯಾವುದೋ ವಾಹನ ಸವಾರನ ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆಯೇ ಕಾರಣವಾಗಿದ್ದು, ಅಪರಿಚಿತ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 143,144,147,148,323,324,504,506,149 ಐ.ಪಿ.ಸಿ:-

     ದಿನಾಂಕ 10/10/2021 ರಂದು ಮದ್ಯಾಹ್ನ 15.45 ಗಂಟೆಯಲ್ಲಿ ಠಾಣಾ ಸಿಬ್ಬಂಧಿ ಹೆಚ್.ಸಿ-53 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಪಡೆದ ಪಿರ್ಯಾದಿ ಹಾಗೂ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ತಂದೆ-ತಾಯಿಯವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ದಿನಾಂಕ 09/10/2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ತನ್ನ ಹಿರಿಯ ಅಕ್ಕಳಾದ ಶ್ರೀಮತಿ ಕಲಾವತಿ ಕೊಂ ಗಂಗಪ್ಪ ಮತ್ತು ಚಿಂತಾಮಣಿ ತಾಲ್ಲೂಕು, ರಾಮಪುರ ಗ್ರಾಮದ ವಾಸಿ ಮಂಜುನಾಥ ಬಿನ್ ಕದಿರಪ್ಪರವರುಗಳು ತಮ್ಮ ಮನೆಗೆ ಬಂದಿದ್ದು, ತಾನು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ತನ್ನ ಮೊಬೈಲ್ ನೋಡಿಕೊಳ್ಳುತ್ತಿದ್ದಾಗ ಅದೇ ದಿನ ಸಂಜೆ ಸುಮಾರು 4.00 ಗಂಟೆಯಲ್ಲಿ ಹಳೆ ಗಂಜಿಗುಂಟೆ ಗ್ರಾಮದ ವಾಸಿಗಳಾದ ತಮ್ಮ ಜನಾಂಗದ ವೆಂಕಟಮ್ಮ ಕೊಂ ನಾರಾಯಣಪ್ಪ, ನಾರಾಯಣಪ್ಪ ಬಿನ್ ಪಾಪಣ್ಣ, ಶ್ರೀನಾಥ ಬಿನ್ ನಾರಾಯಣಪ್ಪ, ನರೇಂದ್ರ ಬಿನ್ ನಾರಾಯಣಪ್ಪ ಮತ್ತು ಚಿಂತಾಮಣಿ ತಾಲ್ಲೂಕು, ದೊಡ್ಡಹಳ್ಳಿ ಗ್ರಾಮದ ವಾಸಿಗಳಾದ ವೆಂಕಟರವಣಪ್ಪ ಮತ್ತು ಅವರ ಮಗ ಹೆಸರು ತಿಳಿದಿರುವುದಿಲ್ಲ, ರವರುಗಳು ತಮ್ಮ ಮನೆಯ ಬಳಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ತನ್ನನ್ನು ಕುರಿತು ಏ ಲೋಫರ್ ಮುಂಡೆ, ಹೊರಗೆ ಬಾ, ಈ ದಿನ ನಮಗೆ ಒಂದು ಗತಿ ಕಾಣಿಸಬೇಕು ಎಂದಿದ್ದು, ಆಗ ತಾನು ಹಾಗೂ ತನ್ನ ತಾಯಿ ಸುಮಾರು 75 ವರ್ಷದ ಕೃಷ್ಣಮ್ಮವರರುಗಳು ಮನೆಯಿಂದ ಹೊರಗೆ ಬಂದು ಏಕೆ ನಮ್ಮನ್ನು ವಿನಾಃ ಕಾರಣ ಬೈಯುತ್ತಿದ್ದೀರ ಎನ್ನಲಾಗಿ, ಆ ಪೈಕಿ ವೆಂಕಟಮ್ಮರವರು ತಮ್ಮನ್ನು ಕುರಿತು ಲೋಫರ್ ಮುಂಡೆಗಳ ನಮ್ಮ ಮೇಲೆ ಪೊಲೀಸ್ ಠಾಣೆಗೆ ದೂರು ನೀಡುತ್ತೀರಾ, ಎಷ್ಟು ದೈರ್ಯ ನಿಮಗೆ ಎನ್ನಲಾಗಿ ತನ್ನ ತಾಯಿ ನಾವು ಹಿಂದಿನಂತೆ ನೀವು ಬಳಸಿಕೊಂಡ ಹಾಗೆ ಕುಂಟೆಗಳಲ್ಲಿನ ನೀರನ್ನು ಬಳಸಿಕೊಂಡಿದ್ದೀವಿ, ನೀವು ಗಲಾಟೆ ಮಾಡಿದ್ದಕ್ಕೆ ನಾವು ದೂರು ನೀಡಿದ್ಈವಿ ಎನ್ನಲಾಗಿ ಶ್ರೀನಾಥರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ತಾಯಿಯ ತೆಲೆಯ ಮದ್ಯ ಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದು, ವೆಂಕಟರವಣಪ್ಪರವರು ಒಂದು ಕಲ್ಲಿನಿಂದ ತನ್ನ ತಾಯಿಯ ಎಡಗೈ ಮೊಣ ಕೈಗೆ ಹೊಡೆದು ರಕ್ತ ಗಾಯಪಡಿಸಿದ್ದು, ವೆಂಕಟಮ್ಮರವರು ತನ್ನ ತಾಯಿಯ ಜುಟ್ಟು ಹಿಡಿದು, ಕೈಗಳಿಂದ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿದ್ದು, ಆಗ ತನ್ನ ತಾಯಿಯ ಬಲ ಕೈಗೆ ಮತ್ತು ದೇಹಕ್ಕೆ ನೋವುಂಟಾಗಿದ್ದು, ಅಡ್ಡ ಹೊದ ತನ್ನನ್ನು ನರೇಂದ್ರರವರು ಅದೇ ದೊಣ್ಣೆಯಿಂದ ತನ್ನ ತಲೆಯ ಮೇಲ್ಬಾಗದ ಎಡ ಕಡೆ ಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದು ನಂತರ ನಾರಾಯಣಪ್ಪರವರು ನರೇಂದ್ರರವರ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ತನ್ನ ಎರಡೂ ಕಾಲುಗಳ ಮೇಲೆ ಹೊಡೆದಿದ್ದು, ಆಗ ತನ್ನ ಬಲ ಕಾಲಿನ ಮೊಣ ಕಾಲಿಗೆ ರಕ್ತ ಗಾಯವಾಗಿರುತ್ತೆ. ಅಲ್ಲಿಯೇ ಇದ್ದ ವೆಂಕಟರವಣಪ್ಪರವರ ಮಗ ತಮ್ಮನ್ನು ಕುರಿತು ಈ ಬೇವರ್ಸಿ ಮುಂಡೆಗಳನ್ನು ಇಲ್ಲಿಯೇ ಸಾಯಿಸಿಬಿಡಬೇಕು ಎಂದು ಅವಾಚ್ಚ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದು, ಆಗ ತಮ್ಮ ಮನೆಯಲ್ಲಿದ್ದ ತನ್ನ ಅಕ್ಕ ಕಲಾವತಿ ಮತ್ತು ಮಂಜುನಾಥವರರು ಅಡ್ಡ ಬಂದು ಗಲಾಟೆಯನ್ನು ಬಿಡಿಸಿ ಅವರಿಗೆ ಬುದ್ದಿ ಹೇಳಿ ಕಳುಹಿಸಿದ್ದು, ತಮಗೆ ಮೈ-ಕೈ ನೋವು ಜಾಸ್ತಿಯಾಗಿ ರಕ್ತ ಗಾಯಗಳಾಗಿದ್ದರಿಂದ ದಿನಾಂಕ 09/10/2021 ರಂದು ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಸರ್ಕಾರಿ ಆಸ್ವತ್ರೆಗೆ ದಾಖಲಾಗಿದ್ದು, ತಮ್ಮ ಮೇಲೆ ದೌರ್ಜನ್ಯ ಮಾಡಿ, ಬೈದು, ಹೊಡೆದು, ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:10/10/2021 ರಂದು ಸಂಜೆ 17-30 ಗಂಟೆಗೆ ಎ,ಎಸ್,ಐ ಯರ್ರಪ್ಪ ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶ್ರೀಮತಿ ವೆಂಕಟಮ್ಮ ಕೊಂ ನಾರಾಯಣಪ್ಪ,55 ವರ್ಷ , ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ: ಜಿ,ಪೆದ್ದನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರು ಪಡಿಸಿದ ಗಾಯಾಳು ವೆಂಕಟಮ್ಮ ರವರ  ಹೇಳಿಕೆಯ ಸಾರಾಂಶವೆನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು  ಈ ಹಿಂದೆ ನೀರಿನ ವಿಚಾರದಲ್ಲಿ ನಮ್ಮ ಗ್ರಾಮದ ವಾಸಿಗಳಾದ (1) ಕ್ರಿಷ್ಣಮ್ಮ ಕೊಂ ಲೇಟ್ ಸುಬ್ಬಣ್ಣ, (2) ಸುನಿತಾ, (3)ವೆಂಕಟರವಣಪ್ಪ , (4)ಕಳಾವತಿ ಎಂಬುವವರು ನನ್ನ ಮೇಲೆ ಜಗಳ ತೆಗೆದಿದ್ದು ಈ ವಿಚಾರದಲ್ಲಿ ನಾನು ಪೊಲೀಸ್  ಠಾಣೆಗೆ ದೂರು ನೀಡಿದ್ದು ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ:09-10-2021 ರಂದು ಮಧ್ಯಾಹ್ನ 04-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಕೆಲಸಗಳನ್ನು ಮಾಡಿಕೊಂಡು ಮನೆಯ ಹೊರೆಗೆ ಬಂದಾಗ ನಮ್ಮ ಜನಾಂಗದ ಮೇಲ್ಕಂಡ (1) ಕ್ರಿಷ್ಣಮ್ಮ ಕೊಂ ಲೇಟ್ ಸುಬ್ಬಣ್ಣ ಎಂಬುವವಳು ಮೇಲ್ಕಂಡವರೊಂದಿಗೆ  ಏಕಾಏಕಿ ಬಂದು ಕ್ರಿಷ್ಣಮ್ಮ ನನ್ನ ಜುಟ್ಟು ಹಿಡಿದು ಎಳೆದಾಡಿ ಅಲ್ಲಿಯೇ ಇದ್ದ  ಕಲ್ಲಿನಿಂದ  ನನ್ನ ಬಲಭಾಗದ ತಲೆಯ ಮೇಲೆ  ಹೊಡೆದು ಊತಗಾಯ ಮಾಡಿರುತ್ತಾಳೆ.(2) ಸುನೀತಾ ಬಿನ್ ಸುಬ್ಬಣ್ಣ ಎಂಬುವಳು ಸೂಳೆ ಮುಂಡೇ ನಿನ್ನನ್ನು ಇಲ್ಲಯೇ ಸಾಯಿಸುತ್ತೇವೆಂತ ಹೇಳಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ.(3) ವೆಂಕಟರವಣಪ್ಪ ಎಂಬುವವರು ಅಲ್ಲಿಯೇ ಬಿದ್ದಿದ್ದ ಕೋಲಿನಿಂದ ನನ್ನ ಬಲಭುಜದ ಮೇಲೆ ಹೊಡೆದು ಮೂಗೇಟು ಮಾಡಿರುತ್ತಾನೆ (4)ಕಳಾವತಿ ಎಂಬುವವಳು ಕೈಗಳಿಂದ ನನ್ನ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು  ಮೂಗೇಟುಗಳುಂಟು ಮಾಡಿರುತ್ತಾಳೆ, ಅಲ್ಲಿಯೇ ಇದ್ದ ನಮ್ಮ ಗ್ರಾಮದ ವಾಸಿಗಳಾದ ನರಸಮ್ಮ ಕೊಂ ನರಸಿಂಹಪ್ಪ ಎಂಬುವವರು ಆರೋಪಿಗಳಿಂದ   ನನ್ನನ್ನು ಬಿಡಿಸಿ ನರಸಮ್ಮ ಎಂಬುವರು ನನ್ನನ್ನು ಯಾವುದೋ ಒಂದು ಬಸ್ಸಿನಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು  ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಆದ್ದರಿಂದ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಠಾಣಾ ಮೊ.ಸಂಖ್ಯೆ:145/2021 ಕಲಂ:323,324,504,506 ರೆ-ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.164/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 10/10/2021 ರಂದು ಮದ್ಯಾಹ್ನ 15-00 ಗಂಟೆಗೆ ಪಿರ್ಯಾದಿದಾರರಾದ ಬ್ರಹ್ಮಪ್ರಕಾಶ್ ಆರ್.ಪಿ. ಬಿನ್ ಪದ್ಮಪ್ರಭಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ದಿನಾಂಕ: 04/10/2021 ರಂದು  ಸಂಜೆ 6-00 ಗಂಟೆ ಸಮಯದಲ್ಲಿ ತನ್ನ ಬಾಬತ್ತು KA-40-EC-7837 ಆಕ್ಷಿವ್ ಹೊಂಡಾ ದ್ವಿಚಕ್ರವಾಹನದಲ್ಲಿ ತನ್ನ ಮಗಳಾದ  ತೃಷಾರ್ಥ ಜೈನ್ ಆರ್.ಬಿ ರವರನ್ನು ಹಿಂದೆಗಡೆ ಕೂರಿಸಿಕೊಂಡು ವಿವಿಪುರಂ ನಲ್ಲಿರುವ  ಪಿಯಾನೊ ಕ್ಲಾಸ್ ಗೆ ಬಿಡಲು ಹೋಗುತ್ತಿದ್ದಾಗ  ಮಹಾಲಕ್ಷ್ಮೀ ರೈಸ್ ಮಿಲ್ ಮುಂಭಾಗ KA-40-W-9731 ಹಿರೋ ಪ್ಯಾಷನ್ ಪ್ರೋ ದ್ವಿಚಕ್ರವಾಹನದ ಸವಾರನು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹಿಂಬದಿಯಿಂದ  ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾನು ಮತ್ತು ತನ್ನ ಮಗಳಾದ  ತೃಷಾರ್ಥ ಜೈನ್ ಆರ್.ಬಿ 11 ವರ್ಷ, ರವರು ದ್ವಿಚಕ್ರವಾಹನದಿಂದ ಕೆಳಗೆ ಬಿದ್ದು, ಹೋಗಿದ್ದು,  ತನಗೆ ಬಲಕಾಲಿಗೆ ಹಾಗೂ ಬಲಕೈಗೆ ರಕ್ತಗಾಯಗಳಾಗಿರುತ್ತದೆ.  ಹಾಗೂ  ತನ್ನ ಮಗಳಾದ ತೃಷಾರ್ಥ ಜೈನ್ ಆರ್.ಬಿ ರವರಿಗೆ ಬಲಕೈ ಬಲಕಾಲಿಗೆ ರಕ್ತಗಾಯಗಳಾಗಿದ್ದು, ಅಲ್ಲಿಂದ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ತನ್ನ ಮತ್ತು ತನ್ನ ಮಗಳಿಗೆ ಅಪಘಾತವುಂಟು ಮಾಡಿ KA-40-W-9731 ಹಿರೋ ಪ್ಯಾಷನ್ ಪ್ರೋ ದ್ವಿಚಕ್ರವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.  ಹಾಗೂ ನಾನು ಮತ್ತು ನನ್ನ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೇನೆ.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.196/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:11/10/2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಬಿ.ಬೊಮ್ಮಸಂದ್ರ  ಗ್ರಾಮದ  ಕೃಷ್ಣಪ್ಪ ಬಿನ್ ಗಂಗಯ್ಯ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಪಿ.ಸಿ.28 ಅಶ್ವತ್ಥನಾಯ್ಕ. ಹಾಗೂ  ಜೀಪ್ ಚಾಲಕ ಎಪಿಸಿ.120 ನಟೇಶ್ ರವರೊಂದಿಗೆ ಹಾಗೂ ಪಂಚರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಬೆಳಿಗ್ಗೆ 10-45  ಗಂಟೆಯ ಸಮಯಕ್ಕೆ  ಬಿ.ಬೊಮ್ಮಸಂದ್ರ ಗ್ರಾಮದ ಕೃಷ್ಣಪ್ಪ ಬಿನ್ ಗಂಗಯ್ಯ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಗಂಗಯ್ಯ, 50 ವರ್ಷ, ಆದಿ ಕರ್ನಾಟಕ,  ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬಿ.ಬೊಮ್ಮಸಂದ್ರ  ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 15  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 570/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಕೃಷ್ಣಪ್ಪ ಬಿನ್ ಗಂಗಯ್ಯ ರವರನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ವಾಪಾಸ್ ಬಂದು 196/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

ಇತ್ತೀಚಿನ ನವೀಕರಣ​ : 11-10-2021 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080