ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.349/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

    ದಿನಾಂಕ: 08/10/2021 ರಂದು ರಾತ್ರಿ 9-00 ಗಂಟೆಗೆ  ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನಿಮಗೆ ಸೂಚಿಸುವುದೆನೆಂದರೆ ದಿನಾಂಕ 08/10/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ಸ್ಟೇಡಿಯಂ ರಸ್ತೆಯಲ್ಲಿ  ಯಾರೋ ಆಸಾಮಿಗಳು ಈ ದಿನ ಮುಂಬಯಿ ಇಂಡಿಯನ್ಸ್  ಮತ್ತು ಸನ್ ರೈಸರ್ಸ್  ಹೈದ್ರಾಬಾದ್  ಟೀಮ್ ಗಳ  ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದು  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು  ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-257 ನರಸಿಂಹಮೂರ್ತಿ, ಪಿ.ಸಿ-05 ನಾಗರಾಜ್  , ಜೀಪ್ ಚಾಲಕ ಎ.ಹೆಚ್.ಸಿ- ವೆಂಕಟೇಶ್ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-537 ರಲ್ಲಿ ಹೊರಟು  ಗೂಳೂರು ಸರ್ಕಲ್ ಬಳಿ ಇದ್ದ  ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ , ಬಾಗೇಪಲ್ಲಿ ಟೌನ್ 3 ನೇ ವಾರ್ಡ, ಸ್ಟೇಡಿಯಂ ರಸ್ತೆಯಲ್ಲಿರುವ ಆಟೋ ಮೆಕ್ಯಾನಿಕ್ ಅಂಗಡಿ  ಬಳಿಯಿಂದ ಸ್ವಲ್ಪ ದೂರದಲ್ಲಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು  ಮುಂಬಯಿ ಇಂಡಿಯನ್ಸ್ ತಂಡ ಗೆಲ್ಲುತ್ತದೆ 200/- ರೂ ಎಂದು ಒಬ್ಬನು ಸನ್ ರೈಸರ್ಸ್  ಹೈದ್ರಾಬಾದ್ ತಂಡ ಗೆಲ್ಲುತ್ತದೆ ಎಂದು 200/- ರೂ ಎಂದು ಇನ್ನೊಬ್ಬನು ಹಣವನ್ನು ಪಣವಾಗಿ ಕಟ್ಟಿಕೊಂಡು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ  ಮೇಲೆ ದಾಳಿ ಮಾಡಲಾಗಿ ಒಬ್ಬನು ಪರಾರಿಯಾಗಿದ್ದು ಒಬ್ಬನನ್ನು  ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಪೃಥ್ವಿರಾಜ್ ಬಿನ್ ರಾಮಕೃಷ್ಣಪ್ಪ, 28 ವರ್ಷ, ಬಲಜಿಗ ಜನಾಂಗ, ಮೆಕ್ಯಾನಿಕ್ ಕೆಲಸ, ವಾಸ ಮಾನಸ ಆಸ್ಪತ್ರೆ ರಸ್ತೆ, 21 ನೇ ವಾರ್ಡ, ಬಾಗೇಪಲ್ಲಿ ಟೌನ್ ಎಂದು ಓಡಿಹೋದವನ ಹೆಸರು ವಿಳಾಸ ಕೇಳಲಾಗಿ ನವೀನ್ ಬಿನ್ ಮಲ್ಲಪ್ಪ, 24 ವರ್ಷ, ಅಗಸರು, ಸ್ಟೇಡಿಯಂ ರಸ್ತೆ, 3 ನೇ ವಾರ್ಡ ಬಾಗೇಪಲ್ಲಿ ಟೌನ್  ಎಂದು ತಿಳಿಸಿರುತ್ತಾರೆ,ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ  ಈಗಾಗಲೇ ಪಣಕ್ಕೆ ಕಟ್ಟಿದ್ದ 1000/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-00 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು, ಅಸಲು ಪಂಚನಾಮೆ ಹಾಗೂ ಆರೋಪಿಯನ್ನು  ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರನ ಮೇರೆಗೆ   ಠಾಣಾ  ಎನ್.ಸಿ .ಆರ್. 308/2021 ರಂತೆ ದಾಖಲಿಸಿಕೊಂಡಿರುತ್ತೆ. .ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿನಾಂಕ:09-10-2021 ರಂದು ಘನ ನ್ಯಾಯಾಲಯದ ಪಿ.ಸಿ  344  ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.350/2021 ಕಲಂ. 87 ಕೆ.ಪಿ ಆಕ್ಟ್:-

    ದಿನಾಂಕ 08/10/2021 ರಂದು ಮದ್ಯಾನ 02-00 ಗಂಟೆಗೆ ಶ್ರೀ ನಾಗರಾಜ್ ಡಿ ಆರ್. ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಆರೋಪಿಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ಶ್ರೀ ನಾಗರಾಜ್ ಡಿ ಆರ್. ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನಿಮಗೆ ಸೂಚಿಸುವುದೇನೆಂದರೆ,   ದಿನ ದಿನಾಂಕ: 08.10.2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಯಲ್ಲಂಪಲ್ಲಿ ಗ್ರಾಮದ ಶಾರದ ಶಾಲೆಯ ಬಳಿ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಿಹೆಚ್ ಸಿ-178 ಶ್ರೀಪತಿ, ಸಿಪಿಸಿ-134 ಧನಂಜಯ್ ಕುಮಾರ್,  ಸಿಪಿಸಿ-387 ಮೋಹನ್ ಕುಮಾರ್, ಸಿಪಿಸಿ-237 ವಿನಯ್ ಕುಮಾರ್ ಯಾದವ್, ಸಿಪಿಸಿ-280 ಮುರಳಿ ಮತ್ತು ಜೀಪ್ ಚಾಲಕ ಎ.ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ಕಾರಕೂರು ಕ್ರಾಸ್ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ದಾಳಿಯ ಪಂಚನಾಮೆಗೆ ಸಹಕರಿಸಲು  ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 1444 ರಲ್ಲಿ ಯಲ್ಲಂಪಲ್ಲಿ ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 12-30 ಗಂಟೆಗೆ ಹೋಗಿ ನಾವುಗಳು & ಪಂಚರು ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಖಾಲಿ ಜಾಗದಲ್ಲಿ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಶ್ರೀನಿವಾಸ್ @ ಬ್ಯಾಗೋಡು ಬಿನ್ ಮುನಿಯಪ್ಪ, 30 ವರ್ಷ, ನಾಯಕರು, ಟ್ರಾಕ್ಟರ್ ಚಾಲಕ, ವಾಸ: ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 2) ಶ್ರೀ ನಾಥ್ ಎನ್ ಬಿನ್ ನಾಗರಾಜು, 32 ವರ್ಷ, ಬಲಜಿಗರು, ಗಾರೆ ಕೆಲಸ, ವಾಸ:ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3) ವೇಣುಗೋಪಾಲ ಬಿನ್ ಲೇಟ್ ನರಸಿಂಹಪ್ಪ, 44 ವರ್ಷ, ಬಲಜಿಗರು, ಜಿರಾಯ್ತಿ ವಾಸ: ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ 4) ಮಂಜುನಾಥ್ ಬಿನ್ ಲೇಟ್ ನಂಜುಂಡಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ವಾಸ: ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 4 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 1,050/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಮದ್ಯಾಹ್ನ 2-00 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಮೇರೆಗೆ ಠಾಣಾ ಎನ್.ಸಿ.ಆರ್ 309/2021 ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತೆ.ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿನಾಂಕ:09-10-2021 ರಂದು ಘನ ನ್ಯಾಯಾಲಯದ ಪಿ.ಸಿ  344  ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.351/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ 08/10/2021 ರಂದು ಮದ್ಯಾಹ್ನ 03-30 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ರವರು ಮಾಲು,ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ   ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನಿಮಗೆ ಸೂಚಿಸುವುದೆನೆಂದರೆ,  ಈ ದಿನ ದಿನಾಂಕ; 08-10-2021 ರಂದು ಮದ್ಯಾಹ್ನ ಸುಮಾರು 2-00  ಗಂಟೆ ಸಮಯದಲ್ಲಿ ನಾನು ಮತ್ತು  ಸಿಹೆಚ್ ಸಿ-178 ಶ್ರೀಪತಿ , ಸಿ ಪಿ.ಸಿ 237 ವಿನಯ್ ಕುಮಾರ್ ಯಾದವ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ದೇವರಗುಡಿಪಲ್ಲಿ, ಕಾರಕೂರು ಕಡೆಗೆ ಗಸ್ತು ಮಾಡುತ್ತಿದ್ದಾಗ,  ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಯಲ್ಲಂಪಲ್ಲಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಹೆಚ್ ಸಿ-178 ಶ್ರೀಪತಿ , ಸಿ ಪಿ.ಸಿ 237 ವಿನಯ್ ಕುಮಾರ್ ಯಾದವ್  ರವರೊಂದಿಗೆ  ಸರ್ಕಾರಿ ಜೀಪ್ ನಲ್ಲಿ ಹೊರಟು, ಕಾರಕೂರು ಕ್ರಾಸ್ ನಲ್ಲಿದ್ದ  ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 2-15 ಗಂಟೆಗೆ ಯಲ್ಲಂಪಲ್ಲಿ  ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಲು ಯತ್ನಿಸಿದ ಅಸಾಮಿಯನ್ನು ಸಿಬ್ಬಂದಿಯಾದ ವಿನಯ್ ಕುಮಾರ್ ಯಾದವ್ ರವರು ಹಿಡಿದುಕೊಂಡು  ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ವೆಂಕಟೇಶ್ ಬಿನ್ ಲೇಟ್ ರಾಮನ್ನ, 50 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ, ಅಸಲು ದಾಳಿ ಪಂಚನಾಮೆ ಮತ್ತು ಮಾಲನ್ನು  ಮದ್ಯಾಹ್ನ 3-30   ಗಂಟೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಮೇರೆಗೆ ಠಾಣಾ ಎನ್.ಸಿ.ಆರ್ 310/2021 ರಂತೆ ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿನಾಂಕ:09-10-2021 ರಂದು ಘನ ನ್ಯಾಯಾಲಯದ ಪಿ.ಸಿ  344  ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.353/2021 ಕಲಂ. 506,504,324 ಐ.ಪಿ.ಸಿ :-

   ದಿನಾಂಕ:10/10/2021 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಚಾಂದ್ ಪಾಷಾ ಬಿನ್ ಲೇಟ್ ಗೌಸ್ ಪೀರ್ ಸಾಬ್, 48ವರ್ಷ,ಜೂಸ್ ಅಂಗಡಿಯಲ್ಲಿ ವ್ಯಾಪಾರ ಕುಂಬಾರ ಪೇಟೆ,18ನೇ ವಾರ್ಡ ಬಾಗೇಪಲ್ಲಿ ಪುರ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನನ್ನ ಶ್ರೀಮತಿಯವರಾದ ಹಸೀನಾಬಾನುರವರು 2021ನೇ ವರ್ಷದ ಜನೇವರಿ 24ನೆ ತಾರೀಖು ಮೃತರಾಗಿದ್ದು ನಂತರ ನಾನು ಇದೇ ಎಪ್ರೀಲ್ 29 ನೇ ತಾರೀಖು ಷೇಕ್ ಅಪ್ರೀನ್ ಎಂಬುವವರನ್ನು 2ನೇ ಮದುವೆಯಾಗಿರುತ್ತೆನೆ.ಇದಾದ ಮೇಲೆ ನನ್ನ ಮೋದಲನೇ ಪತ್ನಿ ಮಗ ನೂರುಪಾಷಾರವರು ಆಗಾಗ್ಗೆ ನನ್ನ ಮತ್ತು ಪತ್ನಿ ಅಪ್ರೀನ್ ಮೇಲೆ ಆಗಾಗ್ಗೆ ಗಲಾಟೆ ಮಾಡುವುದು ಬಯ್ಯುವುದು ಮಾಡುತ್ತಾಇದ್ದ ಇದರಿಂದ ನನ್ನ ಮನಸ್ಸಿಗೆ ನೋವಾಗಿ ನಿನಗೆ ಎನು ಬೇಕು ಕೇಳು ಕೋಡುತ್ತೆನೆ ಸುಮ್ಮನೆ ಗಲಾಟೆ ಮಾಡಬೇಡ ಎಂದು ಕೇಳಿದೆ ಅದಕ್ಕೆ ಆತ ಮನೆ,ಒಡವೆ,ಹಣ ೆಲ್ಲಾ ಕೇಳಿದ್ದು ಕೋಟ್ಟಿರುತ್ತೆನೆ ಮತ್ತು ಬಾಗೇಪಲ್ಲಿ ಬಸ್ ನಿಲ್ದಾಣ ಮುಂಬಾಗದಲ್ಲಿ ನನ್ನದೊಂದು ಹಣ್ಣಿನ ರಸ ಅಂಗಡಿ ಇದ್ದು ಅದನ್ನು ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದು ಅದನ್ನು ಸಹ ನನ್ನ ಮಗ ಕಬಳಿಸಲು ದಿನಾಂಕ 10/10/2021 ರಂದು ಬೆಳಿಗ್ಗೆ 09-30ಗಂಟೆಗೆ ಅಂಗಡಿಗಡ ಬಂದಿದ್ದು ಆಗ ನಾನು ತಿಂಡಿ ತಿನ್ನುತ್ತಿದ್ದು ನನ್ನನ್ನು ಕುರಿತು ನೀನು ರೋಗ ಬಂದು ಸಾಯ್ತಿಯಾ,ಹೋಗು ಮನೆಗೆ ಹಾಳಾಗಿ ಇಲ್ಲಿ ಇರಬೇಡ ಅಂಗಡಿ ಬಿಟ್ಟು ಹೋಗು ಪುಟ್ಟಪಾತನಲ್ಲಿ ಸಾಯಿ, ಈ ಅಂಗಡಿ ನಾನೇ ನೆಡೆಸಿಕೊಂಡು ಹೋಗುತ್ತೆನೆ ಎಂದು ಜೋರಾಗಿ ಮಾತನಾಡಿ ನನ್ನನ್ನು ಒಂದು ಕಟ್ಟಿಗೆಯಿಂದ ತಲೆಗೆ ಹೊಡೆದು ಗಾಯಪಡಿಸಿರುತ್ತಾನೆ ನಂತರ ನನ್ನನ್ನು ಷಪಖತ್ ರವರು ಆಸ್ಪತ್ರೆಗೆ ಸೇರಿಸಿರುತ್ತಾರೆ ಆದ್ದರಿಂದ ನನ್ನನ್ನು ಹೊಡೆದಿರುವ ನನ್ನ ಮಗ ನೂರುಪಾಷರವರ ಮೇಲೆ ರವರ  ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ. ಎಂದು ನೀಡಿದ ಹೇಳಿಕೆಯನ್ನು ಪಡೆದು ವಾಪಸ್ಸು ಠಾಣೆಗೆ ಬೆಳಿಗ್ಗೆ 11-30 ಗಂಟೆಗೆ ಬಂದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 279,337,304(A) ಐ.ಪಿ.ಸಿ:-

   ದಿನಾಂಕ: 10/10/2021 ರಂದು ಬೆಳಿಗ್ಗೆ 7:45 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಶ್ರೀನಿವಾಸ ಬಿನ್ ವೆಂಕಟರವಣಪ್ಪ, 28 ವರ್ಷ, ಆದಿ ಕರ್ನಾಟಕ  ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ಬುಚಿಪಲ್ಲಿ ಗ್ರಾಮ, ಪಿ ಟಿ ಎಂ ಮಂಡಲಂ, ತಂಬಾಲಪಲ್ಲಿ ತಾಲ್ಲೂಕು , ಚಿತ್ತೂರು ಜಿಲ್ಲೆ ರವರು ನೀಡಿದ ಹೇಳಿಕೆಯನ್ನು ಹೆಚ್.ಸಿ 176 ಮುನಿರಾಜು ರವರು ಪಡೆದುಕೊಂಡು ಬಂದು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ  ನಾನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಹೀಗಿರುವಲ್ಲಿ ನೆನ್ನೆ ದಿನ ದಿನಾಂಕ: 09/10/2021 ರಂದು ರಾತ್ರಿ ನಾನು ಮತ್ತು ನಮ್ಮ ಸಂಬಂಧಿಯಾದ ನಾಗರಾಜು ಬಿನ್ ಶ್ರೀರಾಮುಲು, 30 ವರ್ಷ, ಖಾಸಗಿ ಆಸ್ಪತ್ರೆಯಲ್ಲಿ  ಸಹಾಯಕ ಕೆಲಸ, ಮಲ್ಲೇಲ ಗ್ರಾಮ, ಪಿ ಟಿ ಎಂ ಮಂಡಲಂ, ತಂಬಾಲಪಲ್ಲಿ ತಾಲ್ಲೂಕು ರವರು ನಾಗರಾಜು ರವರ ಬಾಬತ್ತು ಕೆಎ 04 ಜೆಆರ್ 4315 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ನಮ್ಮ ಗ್ರಾಮಕ್ಕೆ ಹೋಗಿದ್ದು ನಂತರ ನಾನು ಮತ್ತು ನಮ್ಮ ಸಂಬಂಧಿಯಾದ ನಾಗರಾಜು ರವರು ಬೆಂಗಳೂರಿಗೆ ಹೋಗಲು ಈ ದಿನ ದಿನಾಂಕ: 10/10/2021 ರಂದು ಬೆಳಿಗ್ಗೆ 3-30 ಗಂಟೆಗೆ ನಮ್ಮ ಗ್ರಾಮವನ್ನು ಬಿಟ್ಟು ನಾಗರಾಜು ರವರ ದ್ವಿ ಚಕ್ರ ವಾಹನದಲ್ಲಿ ಚಿಂತಾಮಣಿ ತಾಲ್ಲೂಕು ವೇಂಪಲ್ಲಿ – ಯಗವಕೋಟೆ ಮಾರ್ಗ ಮಧ್ಯದ ರಸ್ತೆಯಲ್ಲಿ ಬೆಳಿಗ್ಗೆ 4:00 ಗಂಟೆಗೆ ಸಮಯದಲ್ಲಿ ಹೋಗುತ್ತಿದ್ದಾಗ ದ್ವಿ ಚಕ್ರ ವಾಹನವನ್ನು ಓಡಿಸುತ್ತಿದ್ದ ನಾಗರಾಜು ರವರು ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಬದಿಯಲ್ಲಿ ಪಲ್ಟಿ ಹೊಡೆಯಿಸಿ ಅಪಘಾತವನ್ನು ಉಂಟು ಮಾಡಿದ್ದರಿಂದ ನನ್ನ ಎಡಕಾಲಿಗೆ ತಲೆಗೆ ಗಾಯಗಳಾಗಿದ್ದು ನಾಗರಾಜು ರವರ ತಲೆಗೆ ಎಡಕಾಲಿಗೆ ಎದೆಗೆ ತೀವ್ರ ಸ್ವರೂಪದ ಗಾಯಗಳಾಗಿ ನಾಗರಾಜು ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ನಂತರ ಸ್ಥಳಕ್ಕೆ ಯಾರೋ ಸಾರ್ವಜನಿಕರು ಬಂದು ಗಾಯಗೊಂಡಿದ್ದ ನನ್ನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ, ಅಪಘಾತಕ್ಕಿಡಾಗಿರುವ ಕೆಎ 04 ಜೆ ಆರ್ 4315 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಜಖಂಗೊಂಡಿದ್ದು ಸ್ಥಳದಲ್ಲಿಯೇ ಇರುತ್ತೆ. ಮೇಲ್ಕಂಡಂತೆ ಅಪಘಾತವನ್ನು ಉಂಟು ಮಾಡಿದ ನಾಗರಾಜು ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ: 10-10-2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿಬಿ/ಸಿ.ಇಎನ್ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮತಿ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ಕೊಟ್ಟ ಆರೋಪಿತನು, ಪಂಚನಾಮೆ, ಮಾಲು, ಹಾಗೂ ವರದಿಯ ದೂರನ್ನು ಪಡೆದುಕೊಂಡಿದ್ದರ ದೂರಿನ ಸಾರಾಂಶವೇನೆಂದರೆ, ತಮ್ಮ ಠಾಣೆಯ ಮೇಲಾಧಿಕಾರಿಗಳಾದ ಸಿ.ಪಿ.ಐ ಶ್ರೀ ಬಿ.ಪಿ.ಮಂಜು ರವರ ಆದೇಶದಂತೆ ಈ ದಿನ ದಿನಾಂಕ; 10-10-2021 ರಂದು ತಾನು ಮತ್ತು ಸಿಬ್ಬಂದಿಯವರಾದ ಸಿ.ಹೆಚ್.ಸಿ-50 ಶ್ರೀ. ನರಸಿಂಹಮೂರ್ತಿ, ಸಿ.ಪಿ.ಸಿ-527 ಶ್ರೀ ಮಧು ಮತ್ತು ಕೆಎ-40-ಜಿ-58 ರ ಜೀಪ್ ಚಾಲಕರಾದ ಎ.ಹೆಚ್.ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಕೆ.ಎ-40-ಜಿ-58 ರ ಸರ್ಕಾರಿ ಜೀಪಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಎ.ಪಿ.ಎಂ.ಸಿ ಮಾರುಕಟ್ಟೆ, ಬಿ.ಬಿ ರಸ್ತೆ ಕಡೆ ಗಸ್ತುಮಾಡಿಕೊಂಡು ಬೆಳಿಗ್ಗೆ 10-45 ಗಂಟೆಗೆ ನಗರದ ಶಿಡ್ಲಘಟ್ಟ ವೃತದಲ್ಲಿದ್ದಾಗ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಯಾರೋ ಒಬ್ಬ ಆಸಾಮಿ ಚಂದ್ರು ಹೊಟೇಲ್ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಮಧ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಬೆಳಿಗ್ಗೆ 10-55 ಗಂಟೆಗೆ ಹುಸೇನ ಮಸೀದಿ ಬಳಿ ಕಾಯುತ್ತಿದ್ದಾಗ ಯಾರೋ ಒಬ್ಬ ಆಸಾಮಿ ಬಜಾಜ್ ಕವಾಸಕಿ ಕೆಎ-04-ಇ.ಎಫ್-9106 ರ ದ್ವಿಚಕ್ರವಾಹನದಲ್ಲಿ ಬಂದಿದ್ದು ನಂತರ ಸದರಿ ಆಸಾಮಿಯನ್ನು ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಬಾಬು ಬಿನ್ ಜಲೀಲ್ ಸಾಬ್ 50 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ ಡಿ-ಹೊಸೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಲೀ ವಾಸ-ಕಂದವಾರ ಬಾಗಿಲು ಚಿಕ್ಕಬಳ್ಳಾಪುರ ನಗರ ಎಂತ ತಿಳಿಸಿದ್ದು, ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಬಳಿ ಇದ್ದ 1756/- ರೂ ಬೆಲೆ ಬಾಳುವ 50 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳಿದ್ದು, ಇದರ ಟ್ಟು ಮಧ್ಯವು 04 ಲೀಟರ್ 500 ಎಂ.ಎಲ್ ಆಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಸಾಗಾಣಿಕೆ ಮಾಡಿಕೊಂಡು ಹೋಗಿ ಮಾರಾಟ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ? ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ನಂತರ ಮಾಲಿನ ಬಗ್ಗೆ ಕೇಳಲಾಗಿ ತಾನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ನಗರದ ಮಂಜುನಾಥ ವೈನ್ಸಿನಲ್ಲಿ ಕೆಲಸ ಮಾಡುತ್ತಿರುವ ಕ್ಯಾಷಿಯರ್ ಅಭಿ ರವರಿಂದ ಮಂಜುನಾಥ ವೈನ್ಸ್ ನಿಂದ ತಂದಿರುವುದಾಗಿ ತಿಳಿಸಿದ್ದು, ನಂತರ ಮೇಲ್ಕಂಡ ಮಾಲಿನ ಪೈಕಿ 02 ಮಧ್ಯದ ಟೆಟ್ರಾ ಪಾಕೆಟ್ಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಿ ಸಲುವಾಗಿ ಪ್ರತ್ಯೇಕವಾಗಿ ತೆಗೆದು ಬಳಿ ಬಟ್ಟೆಯ ಬ್ಯಾಗಿನಲ್ಲಿ ಹಾಕಿ ಮೊಹರು ಮಾಡಿ ಮೇಲ್ಕಂಡ ಮಾಲು ಮತ್ತು ದ್ವಿಚಕ್ರವಾಹನವನ್ನು ಅಮಾನತ್ತುಪಡಿಸಿಕೊಂಡು ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದಾಗ ಬಾಬು ಹಾಗೂ ಕರ್ನಾಟಕ ಸರ್ಕಾರದ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಈ ಕೃತ್ಯಕ್ಕೆ ಸಹಕರಿಸಿದ ಮಂಜುನಾಥ ವೈನ್ಸ್ ನ ಕ್ಯಾಷಿಯರ್ ಹಾಗೂ ಮಾಲೀಕರು ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿ ಆರೋಪಿ, ಮಾಲು, ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡಿದ್ದರ ಮೇರೆಗೆ ಈ ಪ್ರ.ವ.ವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.443/2021 ಕಲಂ. 379ಐ.ಪಿ.ಸಿ:-

   ದಿನಾಂಕ: 10/10/2021 ರಂದು ಬೆಳಿಗ್ಗೆ 9.00 ಗಂಟೆಗೆ ಠಾಣೆಯ ಶ್ರೀ.ನಾರಾಯಣಸ್ವಾಮಿ.ಸಿ, ಪಿ.ಎಸ್.ಐ ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 10/10/2021 ರಂದು ಬೆಳಿಗ್ಗೆ 06.00 ಗಂಟೆಗೆ ಮಾನ್ಯ ಪಿ.ಐ ರವರ ಆದೇಶದಂತೆ ತಾನು ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ಮತ್ತು ಸಿ.ಪಿ.ಸಿ-544 ವೆಂಕಟರವಣ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-326 ವಾಹನದಲ್ಲಿ ಚಾಲಕನೊಂದಿಗೆ ಠಾಣಾ ಸರಹದ್ದಿನ ಕಲ್ಲಹಳ್ಳಿ, ಮುನುಗನಹಳ್ಳಿ, ಆಲಂಬಗಿರಿ, ಚೆನ್ನಕೇಶವಪುರ ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಚಿನ್ನಸಂದ್ರ ಗ್ರಾಮದ ಮಾರ್ಗವಾಗಿ ಕಡಪ-ಬೆಂಗಳೂರು ಹೆದ್ದಾರಿಯಲ್ಲಿ ಬೆಳಿಗ್ಗೆ 08.00 ಗಂಟೆಯಲ್ಲಿ ಬರುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಕಡಪ ರಸ್ತೆಯಲ್ಲಿ  ಮುನಗನಹಳ್ಳಿ ಗ್ರಾಮದ ಕಡೆಯಿಂದ ಬರುತ್ತಿದ್ದವನು ತಮ್ಮನ್ನು ನೋಡಿ, ಸದರಿ ವ್ಯಕ್ತಿಯು ದ್ವಿಚಕ್ರ ವಾಹನವನ್ನು ಚಿನ್ನಸಂದ್ರ ಗ್ರಾಮದ ಶಾಲಾ ಕಟ್ಟಡದ ಕಡೆಗೆ ತಿರುಗಿಸಿಕೊಂಡು ಹೋಗುತ್ತಿದ್ದನು. ತಾವು ಅನುಮಾನದಿಂದ ಆತನನ್ನು ಹಿಂಭಾಲಿಸಿಕೊಂಡು ಹೋಗಿ ಶಾಲಾ ಆವರಣದ ಬಳಿ ಹಿಡಿದುಕೊಂಡು ಆತನ ಹೆಸರು ವಿಳಾಸ ಮತ್ತು ದ್ವಿಚಕ್ರ ವಾಹನದ ಬಗ್ಗೆ ಕೇಳಲಾಗಿ ಆತನು ಗಾಬರಿಯಲ್ಲಿ ತೊದಲುತ್ತಾ ಮಾತನಾಡಿದನು. ಈ ಬಗ್ಗೆ ಸರಿಯಾಗಿ ಹೇಳುವಂತೆ ಕೇಳಿದ್ದಕ್ಕೆ ತನ್ನ ಹೆಸರು ಯಾರಬ್ ಪಾಷ ಬಿನ್ ಅಲ್ಲಾಬಕಾಷ್, 31 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ: ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತಲೂ ಸದರಿ ದ್ವಿಚಕ್ರ ವಾಹನವನ್ನು ಈಗ್ಗೆ ಸುಮಾರು 10 ದಿನಗಳ ಹಿಂದೆ ಬೆಂಗಳೂರು ನಗರದ ಯಾವುದೋ ಒಂದು ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಬಂದು ವಾಹನಕ್ಕೆ ಈ ಮೊದಲು ಇದ್ದ ನಂಬರ್ ಪ್ಲೇಟ್ ನ್ನು ಕಿತ್ತುಹಾಕಿ ನಂತರ ಕೆಎ-40-ಎಕ್ಸ್-5669 ಸಂಖ್ಯೆಯ ನಂಬರ್ ಪ್ಲೇಟ್ ನ್ನು ಹಾಕಿಕೊಂಡು ಸ್ವಂತಕ್ಕೆ ಉಪಯೋಗಿಸಿ ಕೊಳ್ಳುತ್ತಿರುವುದಾಗಿ ಹೇಳಿದನು. ನಂತರ  ಸದರಿ ದ್ವಿ-ಚಕ್ರ ವಾಹನವನ್ನು ಪರಿಶೀಲಿಸಲಾಗಿ ಕಪ್ಪುಬಣ್ಣ್ದದ ಹೀರೋಹೊಂಡಾ ಸ್ಪೆಂಡರ್ ವಾಹನವಾಗಿದ್ದು, ಇಂಜಿನ್ ನಂ 04H 15E41843  ಮತ್ತು  ಚಾರ್ಸಿಸ್ ನಂ 04H16F43068 ಎಂಬುದಾಗಿ ಕಂಡುಬಂದಿರುತ್ತೆ. ಹಾಗೂ ಇದು ಸುಮಾರು 40 ಸಾವಿರ ರೂ ಬೆಲೆ ಬಾಳುವುದಾಗಿದ್ದು, ಸದರಿ ದ್ವಿ-ಚಕ್ರ ವಾಹನವನ್ನು ಮತ್ತು ಕಳುವು ಮಾಡಿರುವ ವ್ಯಕ್ತಿ ಹಾಗೂ ವರದಿಯೊಂದಿಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

  

8. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.190/2021 ಕಲಂ. 504,506 ಐ.ಪಿ.ಸಿ & 3(1)(s),3(1)(r) The SC & ST (Prevention of Atrocities) Amendment Act 2015:-

   ದಿನಾಂಕ: 10/10/2021 ರಂದು ಪಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಬಿನ್ ನಾರಾಯಣಪ್ಪ, 51 ವರ್ಷ, ವ್ಯಾಪಾರ, ಆದಿ ದ್ರಾವೀಡ, ಚಿನ್ನಸಂದ್ರ ಗ್ರಾಮ, ಕಸಬಾ ಹೋಬಳಿ, ಚಿಂತಾಮಣಿ ತಾಲ್ಲೂಕು, ಮೊ 9591971455 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ಹಿಂದೆ ಚಿಂತಾಮಣಿ ನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಜಿ. ರಾಕೇಶ್ ರವರಿಗೂ ಮತ್ತು ತನಗೂ ಸುಮಾರು 02 ವರ್ಷಗಳಿಂದ ತುಂಬಾ ಹತ್ತಿರ ಸ್ನೇಹಿತರಾಗಿದ್ದು, ಸದರಿ ಬ್ಯಾಂಕಿನಲ್ಲಿ ಸುರೇಶ್ ಬಾಬು  ಬಿ.ಎನ್ ಬಿನ್ ಲೇಟ್ ನಾಗಭೂಷಣಾಚಾರಿ ಎಂಬುವವರು ರೀ ಅಪ್ರವೈಜರ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಸದರಿ ಸುರೇಶ್ ಬಾಬು ಬಿ.ಎನ್  ಮತ್ತು ಸರಳ ಎಂ ಕೋಂ ಗಂಗಾಧರ್ ಎಂಬುವವರು ಸ್ನೇಹಿತರಾಗಿರುತ್ತಾರೆ. ಸದರಿ ಎಂ ಸರಳ ರವರು ಸುರೇಶ್ ಬಾಬು ರವರನ್ನು ಮಾತನಾಡಲು ಬರುತ್ತಿದ್ದು, ಈ ಸಮಯದಲ್ಲಿ ಸರಳ ರವರು ರಾಕೇಶ್ ರವರಿಗೆ ಕೆಲಸ ನಿರ್ವಹಿಸುವ ದಿನಗಳಲ್ಲಿ ಪರಿಚಯವಾಗಿದ್ದು, ಸರಳ ರವರು ರಾಕೇಶ್ ರವರನ್ನು ಭೇಟಿ ಮಾಡಿ “ ನಾನು ಮನೆ ಕಟ್ಟುತ್ತಿದ್ದೇನೆ, ನನಗೆ ಹಣದ ಅವಶ್ಯಕತೆ ತುಂಬಾ ಇದೆ ಯಾರಿಂದಾದರೂ ಹಣ ಕೊಡಿಸಿಕೊಡಿ ಮತ್ತೆ ಆರು ತಿಂಗಳ ವಾಯಿದೆ ಒಳಗಾಗಿ ವಾಪಸ್ಸು ನೀಡುತ್ತೇನೆ ಎಂದು” ಹೇಳಿ ಸದರಿ ಜಿ. ರಾಕೇಶ್ ರವರಿಂದ ರೂ 12,00,000/-  ಗಳನ್ನು ಪಡೆದುಕೊಂಡು ಹೋಗಿರುತ್ತಾರೆ. ಸುಮಾರು ಒಂದುವರೆ ಚರ್ಷ ಆದರೂ ಸಹ ಸರಳ ಎಂ ರವರು ಹಣವನ್ನು ವಾಪಸ್ಸು ಕೊಟ್ಟಿರುವುದಿಲ್ಲ. ಈ ವಿಚಾರವನ್ನು ದಿನಾಂಕ: 03/04/2021 ರಂದು ಸಾಯಂಕಲ 4-30 ಗಂಟೆ ಸಮಯದಲ್ಲಿ ಸದರಿ ಸುರೇಶ್ದ ಬಾಬು ಬಿ.ಎನ್ ರವರನ್ನು ಚಿಂತಾಮಣಿ ನಗರ ಸಭೆಯ ಪಕ್ಕದಲ್ಲರಿಉವ ಪಾರ್ಕ್ ಬಳಿ ಕರೆಯಿಸಿ “ ಅಣ್ಣ ಸರಳ ಎಂ ರವರಿಂದ ಹಣವನ್ನು ಕೊಡಿಸಿಬಿಡು ಜಿ. ರಾಕೇಶ್ ರವರು ತುಂಬಾ ಕಷ್ಟದಲ್ಲಿದ್ದಾರೆ” ಎಂದು ಸಮಾಧಾನವಾಗಿ ಹೇಳಿದಾಗ ಸದರಿ ಸುರೇಶ್್ ಬಾಬು ರವರು ಏಕಾಏಕಿ “ಏಯ್ ಯಾರೋ ನೀನು ಹಣ ಕೇಳುವುದಕ್ಕೆ, ನಿನೇನಾದರೂ ಈ ವಿಚಾರವಾಗಿ ಬಂದರೆ ಸರಿ ಇರುವುದಿಲ್ಲ” ಎಂದು ಏಕಾಏಕಿ ದೌರ್ಜನ್ಯವೆಸಗಿರುತ್ತಾರೆ. ಆಗ ತಾನು ಅಣ್ಣ ಸಮಾಧಾನವಾಗಿ ಮಾತನಾಡಿ ನಾನೇನೂ ನಿಮ್ಮ ಮೇಲೆ ಗಲಾಟೆ ಮಾಡಲು ಬಂದಿಲ್ಲ ಒಬ್ಬ ಸ್ನೇಹಿತ ಪರವಾಗಿ ಬಂದಿದ್ದೇನೆ ಎಂದು ಹೇಳಿದಾಗ ಸದರಿ ಸುರೇಶ್ ಬಾಬು ರವರು “ಏಯ್ ಲೋಪರ್ ನೀನ್ಯಾರೋ ಅವನ ಪರವಾಗಿ ಮಾತನಾಡುವುದಕ್ಕೆ, ಈ ಮಾದಿಗ ಜಾತಿಯವರೆಲ್ಲಾ ಒಂದೇ ಅದಕ್ಕೆ ನೀನು ನಿನ್ನ ಸ್ನೇಹಿತನ ಪರವಾಗಿ ಬಂದಿದ್ದಿಯಾ” ಎಂದು ಜಾತಿ ನಿಂಧನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಲು ಮುಂದಾಗಿ, ಇನ್ನೊಂದು ಬಾತಿ ನೀನು ಈ ವಿಚಾರವಾಗಿ ಬಂದರೆ ನನ್ನ ಬಳಿ ರೌಡಿಗಳು ಇದ್ದಾರೆ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಹಾಗೂ ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು ನನ್ನ ಜೇಬಿನಲ್ಲಿದ್ದಾರೆ ನನ್ನನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ತಾವುಗಳು ದಯವಿಟ್ಟು ಮೇಲ್ಕಂಡ ಸುರೇಶ್ ಬಾಬು ಜಿ.ಎನ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕಯಗೊಂಡು ತನಗೆ ಸೂಕ್ತ ಪ್ರಾಣ ರಕ್ಷಣೆಯನ್ನು ನೀಡೇಕೆಂದು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.275/2021 ಕಲಂ. 87 ಕೆ.ಪಿ ಆಕ್ಟ್:-

   ದಿನಾಂಕ:09/10/2021 ರಂದು ನ್ಯಾಯಾಲಯದ ಸಿಬ್ಬಂದಿ ಪಿಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:21/09/2021 ರಂದು ಸಂಜೆ 5-30 ಗಂಟೆಗೆ ಪಿ.ಎಸ್.ಐ ಸಾಹೇಬರು ಮಾಲು, ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:21/09/2021  ರಂದು  ಮದ್ಯಾಹ್ನ 3-00  ಗಂಟೆಯಲ್ಲಿ  ನಾನು ಠಾಣೆಯಲ್ಲಿದ್ದಾಗ, ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಜೋಡಿಬಿಸಲಹಳ್ಳಿ ದೊಡ್ಡಮಾಲೂರು ರಸ್ತೆಯ ದಕ್ಷಿಣಕ್ಕೆ ಇರುವ ಹಳ್ಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಸಿಹೆಚ್ ಸಿ-211 ಮುರಳಿಧರ, ಸಿ.ಹೆಚ್.ಸಿ-170 ಜೂಲಪ್ಪ ಎನ್,  ಹೆಚ್.ಸಿ-184 ಅನ್ಸರ್ ಬಾಷಾ, ಸಿಪಿಸಿ-246 ಸಿಂಕದರ್ ಮುಲ್ಲಾ, ಸಿಪಿಸಿ-312, ಸೋಮನಾಥ ಮಾಲಗಾರ್, ಸಿಪಿಸಿ-426 ಲೋಹಿತ್ ಹಾಗೂ ಚಾಲಕ ಎ.ಪಿ.ಸಿ- 143 ಮಹೇಶ್ ರವರೊಂದಿಗೆ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಹಾಗೂ ದ್ವಿ ಚಕ್ರವಾಹನಗಳಲ್ಲಿ ಜೋಡಿಬಿಸಲಹಳ್ಳಿ ಗ್ರಾಮಕ್ಕೆ ಸಾಯಂಕಾಲ 3-30 ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಜೋಡಿಬಿಸಲಹಳ್ಳಿ ದೊಡ್ಡಮಾಲೂರು ರಸ್ತೆಯ ದಕ್ಷಿಣಕ್ಕೆ ಇರುವ ಹಳ್ಳದ ಬಳಿ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹಳ್ಳದಲ್ಲಿ ಗಿಡಗಳ ಮದ್ಯ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 200/-ರೂ ಇನ್ನೋಬ್ಬ ಬಾಹರ್ ಗೆ 200/-ರೂ ಎಂದು ಜೋರಾಗಿ ಕೂಗುತ್ತಾ, ಉಳಿದವರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು ಮೇಲೆ ಎದ್ದೇಳದಂತೆ ಸೂಚಿಸಿದರೂ ಕೆಲವರು ಸ್ಥಳದಿಂದ ಓಡಿಹೋಗಿದ್ದು, ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸವನ್ನು ಕೆಳಲಾಗಿ 1) ಹರಿ ಬಿನ್ ಬಾಲಪ್ಪ, 31 ವರ್ಷ, ಆಚಾರ ಜನಾಂಗ, ವ್ಯಾಪಾರ, ಮಹಾಲಕ್ಷ್ಮೀ ಲೇಔಟ್, ಬುಕ್ಕಿನಪಲ್ಲಿ ರಸ್ತೆ, ಚಿಂತಾಮಣಿ ಟೌನ್, ಮೊ.ನಂ.8310038467. 2) ಸಣ್ಣಪ್ಪಯ್ಯ ಬಿನ್ ಲೇಟ್ ನಾಗಪ್ಪ, 60, ವರ್ಷ, ಉಪ್ಪಾರ ಜನಾಂಗ, ಜಿರಾಯ್ತಿ, ವಾಸ ಉಡುಮಲೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು,  3) ಚಂದ್ರಣ್ಣ ಬಿನ್ ಲೇಟ್ ಪಾಪಣ್ಣ, 56 ವರ್ಷ, ಗೊಲ್ಲರ ಜನಾಂಗ, ಜಿರಾಯ್ತಿ, ವಾಸ ಚಿಕ್ಕಮಾಲೂರು, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, 4) ತಿಮ್ಮಯ್ಯ ಬಿನ್ ಲೇಟ್ ತಿಮ್ಮಯ್ಯ, 80 ವರ್ಷ, ಕಂಸ ಜನಾಂಗ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, 5) ರಮೇಶ ಬಿನ್ ಐಯ್ಯಣ್ಣ, 37 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ದೊಡ್ಡಬ್ಯಾಲ್ಯ ಗ್ರಾಮ, ಬ್ಯಾಲ್ಯ ಪೋಸ್ಟ್, ಮಧುಗಿರಿ ತಾಲ್ಲೂಕು, 9620133421. 6) ಹನುಮಂತರಾಯಪ್ಪ ಬಿನ್ ಲೇಟ್ ತಿಮ್ಮನಾಯ್ಕ, 52 ವರ್ಷ, ಕೂಲಿ ಕೆಲಸ ವಾಸ ದೊಡ್ಡ ಬ್ಯಾಲ್ಯ ಗ್ರಾಮ, ಪುರವಾರ ಹೋಬಳಿ, ಮಧುಗಿರಿ ತಾಲ್ಲೂಕು.  ಎಂದು ತಿಳಿಸಿರುತ್ತಾರೆ, ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 9,600/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಾಯಂಕಾಲ  3-45  ಗಂಟೆಯಿಂದ 4-45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ಮೆಮೋನೊಂದಿಗೆ ಮೇಲ್ಕಂಡ ಮಾಲುಗಳು, ಆಸಾಮಿಗಳನ್ನು ಮತ್ತು ಅಸಲು ಪಂಚನಾಮೆಯನ್ನು ನೀಡುತ್ತಿದ್ದು  ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.438/2021 ರಂತೆ ದಾಖಲಿಸಿಕೊಂಡಿರುತ್ತೆ.

  

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.276/2021 ಕಲಂ. 323,355,341,504,506ಐ.ಪಿ.ಸಿ &  The Scheduled Castes and the Scheduled Tribes (Prevention of Atrocities) Amendment Bill, 2015:-

   ದಿನಾಂಕ 10-10-2021 ರಂದು  ಮಧ್ಯರಾತ್ರಿ 02-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋ ಪಡೆದುಕೊಂಡು   ಆಸ್ಪತ್ರೆಗೆ ಭೇಟಿ  ನೀಡಿ ಗಾಯಾಳು  ಕೆ. ಮಂಜುಂಡಪ್ಪ ಬಿನ್ ಲೇಟ್ ಕದಿರಪ್ಪ, 52 ವರ್ಷ,  ಆದಿಕರ್ನಾಟಕ, ಸಮಾಜ ಸೇವಕ , ವಾಸ ಹುದುಗೂರು ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು  ತಾಲ್ಲೂಕು , ಚಿಕ್ಕಬಳ್ಳಾಪುರ ಜಿಲ್ಲೆರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂಧರೆ  ನಾಣು ದಿನಾಂಕ 09-10-2021  ರಂದು ಸಂಜೆ 06-30 ಗಂಟೆಯಲ್ಲಿ  ಆಕ್ಟೀವಾ  ಬೈಕಿನಲ್ಲಿ  ಗೌರಿಬಿದನೂರು  ಕಡೆಯಿಂದ ಹುದುಗೂರು  ಕಡೆಗೆ ಹೋಗುತ್ತಿದ್ದಾಗ  ಮದ್ಯದಾರಿಯಲ್ಲಿ  ಕೊತ್ತಕುಂಟೆ ಮೇಲಿರುವ  ಕೃಷಿ ಹೊಂಡಾದ  ಬಳಿ ಮೈನ್ ರೋಡ್ ಟಾರ್ ರೋಡಿನಲ್ಲಿ  ಹೋಗುತ್ತಿದ್ದಾಗ  ಒಂದು ಟ್ರ್ಯಾಕ್ಟರ್  ನ ಚಾಲಕ  ಹಿಂದಿನಿಂದ ಜಲ್ಲಿ ತುಂಬಿದ ಟ್ರ್ಯಾಕ್ಟರ್ ನಂ. ಕೆ.ಎ-40-ಟಿ.ಎ.-9036 ಟ್ರ್ಯಾಕ್ಟರ್ ಓವರ್ ಟೇಕ್ ಮಾಡಿಕೊಂಡು  ಮುಂದಕ್ಕೆ  ಬಂದನು. ನಾನು  ಯಾಕಪ್ಪ ಎಷ್ಟು ಓವರ್ ಟೇಕ್ ಮಾಡಿಕೊಂಡು ಬರ್ತೀಯಪ್ಪ ಕೇಳಿದಾಗ  ಚಾಲಕನಾದ  ಪ್ರವೀಣ ಬಿನ್ ನಾರಾಯಣ ಸ್ವಾಮಿ  ಟ್ರ್ಯಾಕ್ಟರ್ ನಿಲ್ಲಿಸಿ  ನನ್ನ ಗಾಡಿಗೆ  ಅಡ್ಡನಿಲ್ಲಿಸಿ  ನನ್ನನ್ನು  ಏ ನಾ ಕೊಡುಕಾ ನಿನ್ನ ಜಾಸ್ತಿ ದಿನಗಳಿಂದ  ನೋಡುತ್ತಿದ್ದಿನಿ,  ಮಾದಿಗನನ್ನ ಮಗನೇ  ಇಲ್ಲಿ ಸಿಕ್ಕಿದ್ದೀಯಾ ಕೈಯಿಂದ ಎಡಕಿವಿಗೆ  ಬಲವಾಗಿ ಹೊಡೆದು ಮನಬಂದಂತೆ ಪಾದರಕ್ಎ ಕಾಲಿನಿಂದ ತುಳಿದಿರುತ್ತಾನೆ.  ನೀನು ಇಲ್ಲೇ ಮಾತಾಡಿದರೆ ಸಾಯಿಸಿ ಹೂತಾಕಿ ಬಿಡುತ್ತೇನೆ ಎಂದು  ಬೆದರಿಕೆ ಹಾಕಿ ನೀನು ಏನು ಮಾಡ್ತಿಯೋ ಮಾಡಿಕೋ ಹೋಗು ಎಂದು ಮನ ಬಂದಂತೆ ಹೊಡೆದಿರುತ್ತಾನೆ. ನಾನು ಕಿರುಚಿಕೊಂಡಾಗ  ಕುರಿಮೇಯಿಸಲು  ಹೊಡೆದುಕೊಂಡು ಬರುತ್ತಿದ್ದ ಗಂಗಾದೇವಿರವರು ಜಗಳವನ್ನು ಬಿಡಿಸಿದರು. ಮೇಲ್ಕಂಡವನ ವಿರುದ್ದ ಕಾನೂನು  ರೀತಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು  ಮದ್ಯರಾತ್ರಿ 03-30 ಗಂಟೆಗೆ ವಾಪಸ್ ಬಂದು  ಪ್ರಕರಣ ದಾಖಲಿಸಿರುವುದು.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.238/2021 ಕಲಂ. 504 ಐ.ಪಿ.ಸಿ & 3(1) (r),3(1)(s) SC AND THE ST (PREVENTION OF ATTROCITIES) ACT, 1989:-

   ದಿ:09.10.2021 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ನಾರಾಯಣಪ್ಪನವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ  ನಾರಾಯಣಪ್ಪ ಬಿನ್ ಲೇಟ್ ನಾರಾಯಣಪ್ಪ, ( 9740856238) ಗುಡಿಬಂಡೆ ತಾಲ್ಲೂಕು ಕೊಂಡಾವಲಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಆದಿದ್ರಾವಿಡ ಕೋಮಿಗೆ ಸೇರಿದವನಾದ ನಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ದಿ:27.09.2021 ರಂದು ಇದೇ ಗ್ರಾಮದ ವಕ್ಕಲಿಗ ಸಮುದಾಯದ ಕೆ.ವಿ.ಸುರೇಶ್ ಬಿನ್ ಲೇಟ್ ವೆಂಕಟೇಶಪ್ಪರವರು ನನ್ನ ಹೆಂಡತಿಯಾದ ಪ್ರಮೀಳಮ್ಮರವರನ್ನು ಅಕ್ರಮ ಸಂಬಂದ ಇಟ್ಟುಕೊಂಡು ನನ್ನಿಂದ ದೂರವಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಲಿಂಗನಹಳ್ಳಿ ಸ್ವಗ್ರಾಮದಲ್ಲಿ ವಾಸವಾಗಿ ಈ ಸುರೇಶರವರು ಪದೇ ಪದೇ ನನ್ನ ಹೆಂಡತಿ ಯೊಡನೆ ಮೊಬೈಲ್ ಸಂಬಾಷಣೆ ಮಾಡಿ ಅಲ್ಲಿಗೆ ಹೋಗಿ ಬರುತ್ತಿರುವುದನ್ನು ಗಮನಿಸಿದ ನನ್ನ ಮಗ ಮನನೊಂದು ವಿಷಸೇವನೆ ಮಾಡಿರುತ್ತಾನೆ. ಈತನ  ಈ ನಡವಳಿಯಿಂದ ನನ್ನ ಸಂಸಾರವು ಬೀದಿಗೆ ಬಿದ್ದಿರುತ್ತದೆ. ಸದರಿ ಸುರೇಶರವರ ಮೇಲೆ ಕಾನೂನು ರೀತ್ಯ ಕ್ರಮವಹಿಸಲು ತಮಗೆ ದೂರು ಸಲ್ಲಿಸಿರುತ್ತೇನೆ.     ದಿ:08.10.2021 ರಂದು ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ನಾನು ಯತಾಸ್ಥಿತಿ ಕೂಲಿಗೆ ಹೋಗುತ್ತಿದ್ದಾಗ ಅಡ್ಡ ಬಂದ ಸದರಿ ಕೆ.ವಿ. ಸುರೇಶರವರು ನನ್ನನ್ನು ದುರುಗುಟ್ಟಿನೋಡಿ. “ ಲೇ ಪಿಲಿರಾ ದಾನ್ನಿ ಲಂಡಾಡಿ ನಾ ಕೊಡುಕುಲ್ಲಾರ ” ಎಂದು ತೆಲುಗಿನಲ್ಲಿ ನನ್ನ ಹೆಂಡತಿ ಮತ್ತು ನಮ್ಮನ್ನು ಸಾರ್ವಜನಿಕ ರಸ್ತೆಯಲ್ಲಿ ನಮ್ಮ ಜಾತಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿ ತಂದಿದ್ದ ದೊಣ್ಣೆಯಿಂದ ನನ್ನ ಮತ್ತು ನನ್ನ ಮಗ ಪವನ್ ನನ್ನು ಹೊಡೆಯಲು ಮುಂದಾಗಿರುತ್ತಾರೆ. ಅಲ್ಲಿದ್ದ ಊರಿನ ಹಿರಿಯರು ಬಂದು ಜಗಳ ಬಿಡಿಸಿರುತ್ತಾರೆ. ಅದ್ದರಿಂದ ಸದರಿ ಸುರೇಶ ಬಿನ್ ಲೇಟ್ ವೆಂಕಟೇಶಪ್ಪರವರು ನನ್ನ ಸಂಸಾರವನ್ನು ಬೀದಿಗೆ ತಂದಿದ್ದು ಅಲ್ಲದೆ ಪದೇ ಪದೇ ಬಡವರಾದ ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಯಾವುದೋ ಪೂರ್ವಾಗ್ರಹ ಪೀಡಿತನಾಗಿ ದೌರ್ಜನ್ಯ ಮಾಡಲು ಮುಂದಾಗುತ್ತಿರುವುದರಿಂದ ನಮ್ಮ ಕುಟುಂಬಕ್ಕೆ ಭಯವುಂಟಾಗಿರುತ್ತೆ. ತಾವಂದಿರು ಇವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯಾ ದೊರಕಿಸಿಕೊಟ್ಟು ನಮ್ಮ ಸುಗಮ ಜೀವನಕ್ಕೆ ಸದಾವಕಾಶ ಕಲ್ಪಿಸಿಕೊಡಲು ತಮ್ಮಲ್ಲಿಗೆ ದೂರು ಸಲ್ಲಿಸುತ್ತಿದ್ದೇನೆ. ಊರಿನ ಹಿರಿಯರು ನ್ಯಾಯ ಪಂಚಾಯ್ತಿ ಮಾಡಲು ಹೇಳಿದ್ದು ಯಾವುದೇ ನ್ಯಾಯ ಪಂಚಾಯ್ತಿ ಮಾಡಿರುವುದಿಲ್ಲ ಕಾರಣ ದೂರು ನೀಡಲು ತಡವಾಗಿರುತ್ತೆ. ಎಂದು ನೀಡಿದ ದೂರಾಗಿರುತ್ತೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.125/2021 ಕಲಂ. 279 ಐ.ಪಿ.ಸಿ & 4,12 THE KARNATAKA PREVENTION OF SLAUGHTER AND PRESERVATION OF CATTLE ACT-2020:-

   ದಿನಾಂಕ: 10-10-2021 ರಂದು ಬೆಳಿಗ್ಗೆ 11-10 ಗಂಟೆ ಸಮಯದಲ್ಲಿ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಪಿಎಸ್ ಐ ರವರು ಸಿಪಿಸಿ-240 ಮಧುಸೂಧನ್ ರವರ ಮುಖಾಂತರ ರವಾನಿಸಿದ ದೂರಿನ ಸಾರಾಂಶವೇನಂದರೆ, ದಿನಾಂಕ: 10-10-2021 ರಂದು ಬೆಳಿಗ್ಗೆ 10-00 ಗಂಟೆ  ಸಮಯದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಗಳಾದ ಹೆಚ್ ಸಿ-85 ನರಸಿಂಹಮೂರ್ತಿ , ಹೆಚ್ ಸಿ-234 ಶೇಖರ್ ಮತ್ತು ಸಿಪಿಸಿ-240 ಮಧುಸೂಧನ್ ರವರೊಂದಿಗೆ ಸರ್ಕಾರಿ ವಾಹನ KA-42-G-1555 ಬೂಲೋರೊ ಜೀಪ್ ನಲ್ಲಿ ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಗುಂಗಿರ್ಲಹಳ್ಳಿ-ಜಕ್ಕಲಮಡಗು ಗ್ರಾಮಗಳ ಮಧ್ಯವಿರುವ ರಸ್ತೆಯ ತಿರುವಿನಲ್ಲಿ KA-42-9693 ಟಾಟಾ ಪಿಕ್ ಅಫ್ ವಾಹನದ ಚಾಲಕ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ರಸ್ತೆಯ ತಿರುವಿನ ಪಕ್ಕದ ಹಳ್ಳಕ್ಕೆ ಮುಗಚಿ ಬಿಳಿಸಿದ್ದು ಸದರಿ ವಾಹನದಲ್ಲಿ ದನದ ಮಾಂಸ ಇರುವುದಾಗಿ ಹಾಗೂ ಅದರ ಚಾಲಕ ವಾಹನದಲ್ಲಿ ಸಿಕ್ಕಿ ಹಾಕಿಕೊಂಡಿರುವುದಾಗಿ ಬಂದ ಮಾಹಿತಿಯ ಮೇರೆಗೆ ಸದರಿ ಸ್ಥಳಕ್ಕೆ ಬೆಳಿಗ್ಗೆ 10-30 ಗಂಟೆಗೆ ಬಂದು ನೋಡಲಾಗಿ ರಸ್ತೆಯ ತಿರುವಿನ ಹಳ್ಳದಲ್ಲಿ KA-42-9693 ಟಾಟಾ ಕಂಪನಿಯ ಪಿಕ್ ಅಪ್ ವಾಹನವು ಮುಗಚಿ ಬಿದ್ದಿರುವುದು ಕಂಡು ಬಂದಿದ್ದು ಸದರಿ ವಾಹನ ವಾಹನದಲ್ಲಿ ದನದ ಮಾಂಸವಿರುತ್ತೆ ವಾಹನದ ಚಾಲಕ ವಾಹನದಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಆತನನ್ನು ರಕ್ಷಣೆ ಮಾಡಿ ವಶಕ್ಕೆ ಪಡೆದುಕೊಂಡಿರುತ್ತೆ. ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಏಜಾಜ್ ಬಿನ್ ಸೈಯದ್ ಅಜ್ಗರ್, 38 ವರ್ಷ,ಹಿರೇಬಿದನೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಕೃತ್ಯದ ಸ್ಥಳದಲ್ಲಿಯೇ ದೂರನ್ನು ತಯಾರಿಸಿ ಪಿಸಿ-240 ಮಧುಸೂಧನ್ ರವರ ಜೊತೆಯಲ್ಲಿ ಠಾಣೆಗೆ ಕಳುಹಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.312/2021 ಕಲಂ. 379 ಐ.ಪಿ.ಸಿ:-

   ದಿನಾಂಕ:09-10-2021 ರಂದು  ಸಂಜೆ 4-00  ಗಂಟೆಯಲ್ಲಿ ಪಿರ್ಯಾದಿದಾರರಾದ  ಶ್ರೀ.ಆರ್.ಶ್ರೀಕಾಂತ್, ಪೌರಾಯುಕ್ತರು , ನಗರಸಭೆ, ಶಿಡ್ಲಘಟ್ಟ ಟೌನ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ ಸಂಗ್ರಹವಾಗುವ ತ್ಯಾಜ್ಯವನ್ನು ಹಿತ್ತಲಹಳ್ಳಿ ಗ್ರಾಮದ ಪ್ರದೇಶದಲ್ಲಿನ ಘನತ್ಯಾಜ್ಯ ವಸ್ತುಗಳು ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡುಲಾಗುತ್ತದೆ ಇದೇ ಪ್ರದೇಶದಲ್ಲಿ ಕಸವನ್ನು ಬೇರ್ಪಡಿಸಲು ಅಳವಡಿಸಿದ Screening ಯಂತ್ರಗಳಿಗೆ 5 ಹೆಚ್.ಪಿ. ಸಾಮಾರ್ಥ್ಯದ ಮೋಟರ್ಗಳನ್ನು ಬಳಸಲಾಗುತ್ತಿದ್ದು, ದಿನಾಂಕ:07-10-2021 ರಂದು ರಾತ್ರಿ ವೇಳೆ Screening ಯಂತ್ರಗಳಿಗೆ ಅಳವಡಿಸಿದ್ದ  5 ಹೆಚ್.ಪಿ. ಸಾಮಾರ್ಥ್ಯದ ಪ್ರತಿಯೊಂದರ ಬೆಲೆ ರೂ 12,000/- (ಹನ್ನೆರಡು ಸಾವಿರ) ಒಟ್ಟು 2 ಮೋಟರ್ ಗಳ ಬೆಲೆ ರೂ 24,000/- ರೂ ಗಳಾಗಿರುತ್ತೆ ಮೇಲಿನ ಸ್ಥಳದಲ್ಲಿ 02 ಸಂಖ್ಯೆ ಮೋಟರ್ ಗಳು ಕಳುವಾಗಿರುವ ಬಗ್ಗೆ ಅಲ್ಲಿ ಹಗಲಿನ ವೇಳೆ ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ಶ್ರೀ.ಭವಾನಿ ಸಿಂಗ್ ರವರು ಕಛೇರಿಗೆ ವರದಿ ಸಲ್ಲಿಸಿರುತ್ತಾರೆ, ಈ ಸಂಬಂದ ದಿನಾಂಕ:09-10-2021 ರಂದು ಬೆಳಿಗ್ಗೆ 8-30 ರ ಸಮಯದಲ್ಲಿ ತಾನು ಮತ್ತು ಅರೋಗ್ಯ ನಿರೀಕ್ಷಕರಾದ ಶ್ರೀಮತಿ.ಎಂ.ಶೋಭ ಹಾಗೂ ಸಿಬ್ಬಂದಿಯೊಂದಿಗೆ ಭೇಟಿನೀಡಿದಾಗ 5 ಹೆಚ್.ಪಿ. ಸಾಮಾರ್ಥ್ಯದ 2 ಮೋಟರ್ ಗಳು  ಕಳುವಾಗಿರುವುದು ದೃಡಪಟ್ಟಿರುತ್ತದೆ. ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ತಡವಾಗಿ ದೂರು ನೀಡಿದ್ದು ಆದ ಕಾರಣ ದಯವಿಟ್ಟು 5 ಹೆಚ್.ಪಿ. ಸಾಮಾರ್ಥ್ಯದ 2 ಮೋಟರ್ ಗಳು ಕಳುವಾಗಿರುವ ಬಗ್ಗೆ ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮವಹಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:312/2021 ಕಲಂ:379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.313/2021 ಕಲಂ. 427,447,323,504,506,34 ಐ.ಪಿ.ಸಿ:-

      ದಿನಾಂಕ: 10-10-2021 ರಂದು ಫಿರ್ಯಾದಿದಾರರಾದ ಎಂ. ತಿರುಪಳಪ್ಪ ಬಿನ್ ಆರ್.ಮುನಿಶಾಮಯ್ಯ, 47 ವರ್ಷ, ತೊಗಟರು, ಜಿರಾಯ್ತಿ, ವಾಸ: ಬಳುವನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಠಾಣೆಯಲ್ಲಿ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೆ ನಂ. 176 ರಲ್ಲಿನ 2 ಎಕರೆ & 177 ರಲ್ಲಿನ 2 ಎಕರೆ ಒಟ್ಟು 4 ಎಕರೆ ಜಮೀನನ್ನು 2006-07 ನೇ ಸಾಲಿನಲ್ಲಿ ತಮ್ಮ ಗ್ರಾಮದ ಪವತಿ ಎನ್.ಎಂ. ರಾಮರತ್ನಮ್ ಬಿನ್ ಎನ್.ಎಂ. ಮುನಿಶಾಮಪ್ಪ ಎಂಬುವರ ಕಡೆಯಿಂದ ಕೊಂಡುಕೊಂಡಿದ್ದು ಅಂದಿನಿಂದಲೂ ಸದರಿ ಜಮೀನಿನಲ್ಲಿ ನಾವೆ ಅನುಭವದಲಿರುತ್ತೇವೆ ಮತ್ತು ಸದರಿ ಜಮೀನಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನಮ್ಮ ತಂದೆಯವರಾದ ಆರ್. ಮುನಿಶಾಮಯ್ಯ ಬಿನ್ ಲೇಟ್ ರಾಮಯ್ಯ ರವರ ಹೆಸರಿಲ್ಲಿರುತ್ತದೆ. ಸದರಿ ಜಮೀನಿನಲ್ಲಿ ನಾವು ಹಿಪ್ಪು ನೇರಳೆ ಸೊಪ್ಪು ಹಾಕಿದ್ದು ಸ್ವಲ್ಪ ಜಮೀನು ಖಾಲಿ ಇದ್ದು ಸದರಿ ಜಮೀನಿನಲ್ಲಿ ದನಕರುಗಳಿಗೆ ಮೇವಿಗಾಗಿ ಜೋಳವನ್ನು ಚೆಲ್ಲಿರುತ್ತೇವೆ. ಸದರಿ ಜಮೀನಿ ವಿಚಾರದಲ್ಲಿ ಇರಗನಹಳ್ಳಿ ಗ್ರಾಮದ ಲೋಕನಾಥ್ ಎನ್.ಜಿ. ಬಿನ್ ಲೇಟ್ ಎನ್.ಎಂ. ಗಣೇಶ್ ದಾಸ್ ಮತ್ತು ಆತನ ಹೆಂಡತಿಯಾದ ಶ್ರೀಮತಿ ಶಕುಂತಲ ರವರು ಆಗಾಗ ನಮ್ಮ ಮೇಲೆ ಗಲಾಟೆ ಮಾಡುತ್ತಿದ್ದರು.  ಹೀಗಿದ್ದು ದಿನಾಂಕ: 29-09-2021 ಸಂಜೆ ಸುಮಾರು 4.30 ಗಂಟೆ ಸಮಯದಲ್ಲಿ ತಾನು, ತಮ್ಮ ತಂದೆಯವರಾದ ಆರ್.ಮುನಿಶಾಮಯ್ಯ ರವರು ಕೆಲಸ ಮಾಡುತ್ತಿದ್ದಾಗ ಇರಗನಹಳ್ಳಿ ಗ್ರಾಮದ ಎನ್.ಜಿ. ಲೋಕನಾಥ್ ಮತ್ತು ಆತನ ಹೆಂಡತಿಯಾದ ಶ್ರೀಮತಿ ಶಕುಂತಲಮ್ಮ ರವರು ನಮ್ಮ ಜಮೀನಿನ ಒಳಗೆ ಅಕ್ರಮ ಪ್ರವೇಶ ಮಾಡಿ ನಾವು ಚೆಲ್ಲಿದ್ದ ಜೋಳದ ಬೆಳೆಯನ್ನು ಉಳುಮೆ ಮಾಡಲು ಪ್ರಯತ್ನ ಮಾಡಿದ್ದು ಆಗ ತಾನು ಏಕೆ ನಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಎನ್.ಜಿ. ಲೋಕನಾಥ ರವರು ತನ್ನನ್ನು ಹಾಗೂ ತಮ್ಮ ತಂದೆಯವರನ್ನು ಕುರಿತು ಏನೋ ಲೋಪರ್ ನನ್ನ ಮಕ್ಕಳು ಇದು ನಿಮ್ಮ ಅಪ್ಪನದಾ ಜಮೀನು ಈ ಜಮೀನು ನಮಗೆ ಸೇರಿದ್ದು ಅದನ್ನು ಕೇಳಲು ನೀವು ಯಾರೋ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ಲೋಕನಾಥ ಮತ್ತು ಶಕುಂತಲಮ್ಮ ರವರು ಇಬ್ಬರು ಸೇರಿಕೊಂಡು ತನಗೆ ಕೈಗಳಿಂದ ಹೊಡೆದು ಮುಖಕ್ಕೆ ಗುದ್ದಿ ಗಾಯಗೊಳಿಸಿ ಕೆಳಕ್ಕೆ ತಳ್ಳಿ ಕಾಲಿನಿಂದ ಒದ್ದು ಗಾಯಗೊಳಿಸಿದ್ದು ಇನ್ನು ಮುಂದೆ ನೀವೇನಾದರೂ ನಮ್ಮ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದ್ದು ಆಗ ನಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ಜಿ. ದೊಡ್ಡಪ್ಪ ಮತ್ತು ಎನ್.ಎಂ. ರಾಜು ಬಿನ್ ಲೇಟ್ ಎನ್. ನಾರಾಯಣಸ್ವಾಮಿ ರವರು ಬಂದು ಗಲಾಟೆ ಬಿಡಿಸಿದ್ದು ನಮಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ತಾನು ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಈ ಬಗ್ಗೆ ತಮ್ಮ ಗ್ರಾಮದ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಇದುವರೆಗೂ ಮೇಲ್ಕಂಡವರು ರಾಜಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 313/2021 ಕಲಂ: 427, 447, 323, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 10-10-2021 05:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080