ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.176/2021 ಕಲಂ. 15(A),32(3)  ಕೆ.ಇ ಆಕ್ಟ್:-

     ದಿನಾಂಕ: 09-10-2021 ರಂದು ಮದ್ಯಾಹ್ನ 12-10 ಗಂಟೆಯ ಸಮಯದಲ್ಲಿ  ಶ್ರೀ. ಗಿರೀಶ  ಹೆಚ್.ಸಿ. 208 ರವರು ಠಾಣೆಯಲ್ಲಿ  ನೀಡಿದ  ದೂರಿನ  ಸಾರಾಂಶವೇನೆಂದರೆ, ತಾನು ಮದ್ಯಾಹ್ನ 12-00 ಗಂಟೆಯಲ್ಲಿ  ಠಾಣೆಯಲ್ಲಿದ್ದಾಗ  ತನಗೆ   ಚಿಕ್ಕಬಳ್ಳಾಪುರ  ತಾಲ್ಲೂಕು ಮಂಚನಬಲೆ  ಗ್ರಾಮದ ವಾಸಿ  ಮರಿಯಪ್ಪ ಬಿನ್ ಲೇಟ್  ಮುತ್ಯಾಲಪ್ಪ 65ವರ್ಷ ಆದಿ ಕರ್ನಾಟಕ ಜನಾಂಗ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ರವರು ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ  ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಆಸಾಮಿಯ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.442/2021 ಕಲಂ. 454,380 ಐ.ಪಿ.ಸಿ:-

     ದಿನಾಂಕ: 09/10/2021 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀಮತಿ ಸುಧಾ ಕೊಂ ರೆಡ್ಡಪ್ಪ.ಸಿ.ಎಸ್, 50 ವರ್ಷ, ಬ್ರಾಹ್ಮಣರು, ಬೈರವೇಶ್ವರ ಶಾಲೆಯಲ್ಲಿ ಸಹ ಶಿಕ್ಷಕರು, ಬೂರಗಮಾಕಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತನ್ನ ಗಂಡ ಸಿ.ಎಸ್. ರೆಡ್ಡಪ್ಪ ರವರು ಹೊಸಕೋಟೆ ಬಳಿ ನಡವತ್ತಿಯಲ್ಲಿ ಪಶುವೈದ್ಯಕೀಯ ಇಲಾಖೆಯಲ್ಲಿ ಕಾಂಪೌಂಡರ್ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ತಮಗೆ ಇಬ್ಬರು ಮಕ್ಕಳಿದ್ದು, 1ನೇ ವೆಂಕಟೇಶ ಶುಕ್ಲ, ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. 2ನೇ ಮಗ ದ್ಯಾನ ತೇಜಸ್ ಶುಕ್ಲ ರವರು ಆಗಿರುತ್ತಾರೆ. ತಾನು ಮತ್ತು ತನ್ನ ಎರಡನೆ ಮಗ ಮನೆಯಲ್ಲಿ ವಾಸವಾಗಿರುತ್ತೆವೆ. ದಿನಾಂಕ:08/10/2021 ರಂದು ಬೆಳಿಗ್ಗೆ 08.00 ಗಂಟೆಗೆ ತನ್ನ 2ನೇ ಮಗ ಕಾಲೇಜಿಗೆ ಹೋದನು, ತಾನು ಬೆಳಿಗ್ಗೆ 09.00 ಗಂಟೆಗೆ ತಮ್ಮ ಮನೆಗೆ ಡೋರ್ ಲಾಕ್ ಬೀಗವನ್ನು ಹಾಕಿಕೊಂಡು ಶಾಲೆಗೆ ಹೋದೆನು.  ಸಂಜೆ ಸುಮಾರು 6.15 ಗಂಟೆಯಲ್ಲಿ ತನ್ನ 2ನೇ ಮಗ   ದ್ಯಾನ ತೇಜಸ್ ಶುಕ್ಲ ರವರು ತನಗೆ ಪೋನ್ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿಸಿದ. ತನಗೆ ಗಾಬರಿಯಾಗಿ ಕೂಡಲೆ ತಾನು ಚಿಂತಾಮಣಿಯಿಂದ ತಮ್ಮ ಮನೆಗೆ ಹೋಗಿ ನೋಡಲಾಗಿ ತಮ್ಮ ಮನೆಯ ಬಾಗಿಲು ತೆಗೆದಿದ್ದು, ಡೋರ್ ಲಾಕ್ ಬೀಗವು ಮುರಿದಿರುತ್ತೆ. ಮನೆಯೊಳಗೆ ರೂಮಿನೊಳಗೆ ಹೋಗಿ ನೋಡಲಾಗಿ ರೂಮಿನಲ್ಲಿ ಬ್ಯಾಗಿನಲ್ಲಿ ಇಟ್ಟಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತು. ರೂಮಿನಲ್ಲಿ ತಾನು ಬ್ಯಾಗಿನಲ್ಲಿಟ್ಟಿದ್ದ, ಬಂಗಾರದ ವಡವೆಗಳಾದ 1) 42 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, 2) 8 ಗ್ರಾಂ ತೂಕದ 1 ಜೊತೆ ಬಂಗಾರದ ಮಾಟಿ, 3) 8 ಗ್ರಾಂ ತೂಕದ 1 ಬಂಗಾರದ ಉಂಗುರ, 4) 1 ಗ್ರಾಂ ತೂಕದ ಬಂಗಾರದ 1 ಮೂಗತಿ. ಒಟ್ಟು 59 ಗ್ರಾಂ ತೂಕದ 1.77.000/- ರೂಗಳ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ವಡವೆಗಳಾದ 5) 300 ಗ್ರಾಂ ತೂಕದ 1 ಬೆಳ್ಳಿ ತಟ್ಟೆ, 6) 100 ಗ್ರಾಂ ತೂಕದ ಬೆಳ್ಳಿ ಪಂಚಪಾತ್ರೆ, 7) 100 ಗ್ರಾಂ ತೂಕದ ಬೆಳ್ಳಿ ಅರ್ಘ್ಯ ಪಾತ್ರೆ, 8) 50 ಗ್ರಾಂ ತೂಕದ ಬೆಳ್ಳಿ ಉದ್ದರಿಣಿ, 9) 100 ಗ್ರಾಂ ತೂಕದ ಬೆಳ್ಳಿ ಹರಿಶಿಣ ಕುಂಕುಮದ 2 ಬಟ್ಟಲಗಳು, 10) 50 ಗ್ರಾಂ ತೂಕದ ಚಿಕ್ಕ ಚಿಕ್ಕ 5 ಬೆಳ್ಳಿ ಬಟ್ಟಲುಗಳು (ತಲಾ 10ಗ್ರಾಂ), 11) 20 ಗ್ರಾಂ ತೂಕದ ಗಂದದ ಬೆಳ್ಳಿ ಬಟ್ಟಲು, 12) 50 ಗ್ರಾಂ ತೂಕದ 1 ಜೊತೆ ಬೆಳ್ಳಿ ಕಾಲು ಚೈನುಗಳು, 13) 30 ಗ್ರಾಂ ತೂಕದ 1 ಬೆಳ್ಳಿ ದೀಪಗಳು, 14) 2 ಗ್ರಾಂ ತೂಕದ ಬೆಳ್ಳಿ ಕಾಯಿನ್ ಒಟ್ಟು 802 ಗ್ರಾಂ ತೂಕದ 32.080/- ರೂಗಳ ಬೆಲೆ ಬಾಳುವ ಬೆಳ್ಳಿ ವಡವೆಗಳು ಹಾಗೂ 15) 1 ಒಪ್ಪೋ ಕಂಪನಿಯ ಎ5 ಎಸ್ ಸ್ಮಾಟ್ ಮೊಬೈಲ್ ಪೋನ್ (IMEI NO: 869577049351288) ಮತ್ತು ಅದರಲ್ಲಿದ್ದ ಜಿಯೋ ಕಂಪನಿಯ 8618477927 ಸಿಮ್ ಕಾರ್ಡ 11.500/- ರೂಗಳ ಬೆಲೆ ಬಾಳುವ ಮೊಬೈಲ್ ಪೋನ್ ಕಾಣಿಸಲಿಲ್ಲ. ಯಾರೋ ಕಳ್ಳರು ದಿನಾಂಕ: 08/10/2021 ರಂದು ಬೆಳಿಗ್ಗೆ 09.00 ಗಂಟೆಯಿಂದ ಸಂಜೆ 6.00 ಗಂಟೆಯ ಮದ್ಯೆ ಯಾವುದೋ ಸಮಯದಲ್ಲಿ ಯಾವುದೋ ಆಯುಧದಿಂದ ತಮ್ಮ ಮನೆಯ ಡೋರ್ ಲಾಕ್ ಬೀಗವನ್ನು ಮೀಟಿ ಕಿತ್ತು ಮನೆಯೊಳಗೆ ಪ್ರವೇಶಿಸಿ ತಮ್ಮ ಮನೆಯ ರೂಮಿನಲ್ಲಿಟ್ಟಿದ್ದ ಒಟ್ಟು 59 ಗ್ರಾಂ ತೂಕದ 1.77.000/- ರೂಗಳ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ಒಟ್ಟು 802 ಗ್ರಾಂ ತೂಕದ 32.080/- ರೂಗಳ ಬೆಲೆ ಬಾಳುವ ಬೆಳ್ಳಿ ವಡವೆಗಳು ಹಾಗೂ 1 ಒಪ್ಪೋ ಕಂಪನಿಯ ಎ5 ಎಸ್ ಸ್ಮಾಟ್ ಮೊಬೈಲ್ ಪೋನ್ (IMEI NO: 869577049351288) ಮತ್ತು ಅದರಲ್ಲಿದ್ದ ಜಿಯೋ ಕಂಪನಿಯ 8618477927 ಸಿಮ್ ಕಾರ್ಡ 11.500/- ರೂಗಳ ಬೆಲೆ ಬಾಳುವ ಮೊಬೈಲ್ ಪೋನ್ ಒಟ್ಟು 2.20.580/- ರೂಗಳ ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಮತ್ತು ಬಂಗಾರದ ಮತ್ತು ಬೆಳ್ಳಿ ವಡವೆಗಳನ್ನು ಹಾಗೂ  ಮೊಬೈಲ್ ಪೋನ್ ನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.189/2021 ಕಲಂ. 279,304(A)  ಐ.ಪಿ.ಸಿ:-

     ದಿನಾಂಕ: 08/10/2021 ರಂದು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಶ್ರೀನಿವಾಸ್ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ  ದಿನಾಂಕ:08/10/2021 ರಂದು ಬೆಳಿಗ್ಗೆ 8-00 ಗಂಟೆಯಿಂದ ಹಗಲು ರಕ್ಷಕ್ ವಾಹನದಲ್ಲಿ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾನು ಚಿಂತಾಮಣಿ ನಗರ ಠಾಣೆಗೆ ಒದಗಿಸಿರುವ ರಕ್ಷಕ್ ಜೀಪ್ ಸಂಖ್ಯೆ ಕೆಎ-40 ಜಿ-61 ರಲ್ಲಿ ಜೀಪ್ ಚಾಲಕನೊಂದಿಗೆ ಚಿಂತಾಮಣಿ ನಗರದ ಬೆಂಗಳೂರು ರಸ್ತೆ, ಚೇಳೂರು ವೃತ್ತ, ಎಪಿಎಂಸಿ ಮಾರುಕಟ್ಟೆ ಮುಂತಾದ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ಕೋಲಾರ ಕ್ರಾಸ್ ಬಳಿ ಗಸ್ತಿನಲ್ಲಿದ್ದಾಗ ಕೋಲಾರ ರಸ್ತೆ ಕಡೆಯಿಂದ KA-52-Q-8155 SUPER XL HEAVY DUTY ದ್ವಿಚಕ್ರ ವಾಹನ ಸವಾರ ಚಿಂತಾಮಣಿ-ಕೋಲಾರ ರಸ್ತೆಯ ತಿರುವಿನಲ್ಲಿ ಕೋಲಾರ ಕಡೆ ಹೋಗುತ್ತಿದ್ದಾಗ ಶ್ರೀನಿವಾಸಪುರ ರಸ್ತೆ ಕಡೆಯಿಂದ MH-43-Y-6760 ರ ಟ್ಯಾಂಕರ್ ಲಾರಿ ಚಾಲಕನು ಲಾರಿಯನ್ನು ಅತಿ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  KA-52-Q-8155 SUPER XL HEAVY DUTY ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಯ ಮೇಲೆ ಬಿದ್ದುಹೋಗಿದ್ದು, ಕೂಡಲೇ ತಾನು ಮತ್ತು ಅಲ್ಲಿದ್ದ ಸಾರ್ವಜನಿಕರು ಹೋಗಿ ನೋಡಲಾಗಿ ದ್ವಿಚಕ್ರ ವಾಹನ ಲಾರಿ ಚಕ್ರದ ಕೆಳಗಡೆ ಸಿಕ್ಕಿ ಪೂರ್ತಿ ಜಖಂಗೊಂಡಿದ್ದು, ದ್ವಿಚಕ್ರ ವಾಹನ ಸವಾರನಿಗೆ ತಲೆಯ ಮುಂಭಾಗ ಮತ್ತು ಹಿಂಭಾಗ, ಎಡಕಾಲಿನ ಮೇಲೆ ತೀವ್ರ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮೃತ ದ್ವಿಚಕ್ರ ವಾಹನ ಸವಾರನಿಗೆ ಸುಮಾರು 55-60 ವರ್ಷ ವಯಸ್ಸಾಗಿದ್ದು, ವಾರಸುದಾರರು ಯಾರು ಬರದ ಕಾರಣ ಅಲ್ಲಿದ್ದ ಸಾರ್ವಜನಿಕರ ಸಹಾಯದೊಂದಿಗೆ ಯಾವುದೋ ವಾಹನದಲ್ಲಿ ಮೃತ ದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇನೆ. ಆದ್ದರಿಂದ  KA-52-Q-8155 SUPER XL HEAVY DUTY ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆಸಿದ MH-43-Y-6760 ರ ಟ್ಯಾಂಕರ್ ಲಾರಿ ಮತ್ತು ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಸಿರುತ್ತೆ.

 

4. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.163/2021 ಕಲಂ. 78(III) ಕೆ.ಪಿ ಆಕ್ಟ್:-

     ದಿನಾಂಕ:-08/10/2021 ರಂದು ಮದ್ಯಾಹ್ನ 13-00 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ. 318 ರವರು  ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಹಾಜರುಪಡಿಸಿದ ಆದೇಶ ಪಡೆದಿದ್ದರ ಸಾರಾಂಶವೇನೆಂದರೆ, ದಿ:-09/09/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಮಾನ್ಯ ಮ. ಪಿ.ಎಸ್.ಐ. ಮೆಡಮ್ ರವರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:09/09/2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಗೆ ಸರ್ಕಾರಿ ಜೀಪ್ ಸಂಖ್ಯೆ-40 ಜಿ-92 ರಲ್ಲಿ ಸಿ ಹೆಚ್ ಸಿ-214 ಲೋಕೇಶ್ ರವರೊಂದಿಗೆ ಗಸ್ತು ಮಾಡುತ್ತೀರುವಾಗ ಮದ್ಯಾಹ್ನ 1-45 ಗಂಟೆಯಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆ ಸಿಬ್ಬಂದಿ ಸಿ.ಪಿ.ಸಿ- 507 ಹನುಮಂತರಾಯಪ್ಪ ರವರು ಪೊನ್ ಮಾಡಿ ಗೌರಿಬಿದನೂರು ನಗರದ ಮುನಿಸಿಪಾಲ್ ಕಾಲೇಜ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳವಾದ ರಸ್ತೆಯ ಸಂತೆ ಮೈದಾನದಲ್ಲಿ  ಯಾರೋ ಒಬ್ಬ ಅಸಾಮಿಯು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಅಮೀಷೋಡ್ಡಿ ಮಟ್ಕಾ ಜೂಜಾಟವನ್ನು ಆಡುತ್ತಾ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಹೋಗಿ ಅಲ್ಲಿಗೆ ಮಾಹಿತಿ ನೀಡಿದ ಸಿಬ್ಬಂದಿಯಾದ  ಸಿಪಿಸಿ-507 ಹನುಮಂತರಾಯಪ್ಪ ರವರನ್ನು ಮದ್ಯಾಹ್ನ 1-50 ಗಂಟೆ ಸಮಯಕ್ಕೆ ಕರೆದುಕೊಂಡು ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಕಾಲದಲ್ಲಿ ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೆರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಸಂತೇ ಮೈದಾನಕ್ಕೆ ಹೋಗುವ ರಸ್ತೆಯ ಮರೆಯಲ್ಲಿ ಜೀಪ್ನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು  ಮುನಿಸಿಪಾಲ್ ಕಾಲೇಜ್ ಗೋಡೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ 1 ರೂಪಾಯಿಗೆ 70 ರೂಪಾಯಿಗಳು ಕೊಡುವುದಾಗಿ ಅಮೀಷೊಡ್ಡಿ ಕೂಗುತ್ತಾ ಮಾಟ್ಕಾ ಚೀಟಿಗಳನ್ನು ಬರೆದುಕೊಡುತ್ತೀರುವುದು ಖಚಿತ ಪಡಿಸಿಕೊಂಡು ನಂತರ ತಾವುಗಳು ಪಂಚರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಸುತ್ತುವರೆದು ಆತನನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ 1] ಜಿ ಬಷೀರ್ ಸಾಬ್ ಬಿನ್ ಲೇಟ್ ಇಮಾಮ್ ಸಾಬ್, 73 ವರ್ಷ, ಮುಸ್ಲಿಂ ಜನಾಂಗ, ನಿವೃತ್ತಾ ಕೆ.ಎಸ್.ಆರ್.ಟಿ.ಸಿ ಚಾಲಕ, ವಾಸ: ಸಂತೆಮೈದಾನ ಗೌರಿಬಿದನೂರು ಟೌನ್ ಎಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು 480-00 ರೂಪಾಯಿಗಳು, ಒಂದು ಮಟ್ಕಾ ಚೀಟಿ, ಮತ್ತು ಒಂದು ಪೆನ್ನು ಇರುತ್ತೆ. ನಂತರ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 2-00 ಗಂಟೆಯಿಂದ 2-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು, ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಮದ್ಯಾಹ್ನ 3-00 ಗಂಟೆ ಸಮಯಕ್ಕೆ ಬಂದು  ಮದ್ಯಾಹ್ನ 3-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ  ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

5. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 08/10/2021 ರಂದು ಮದ್ಯಾಹ್ನ 03.00 ಗಂಟೆಗೆ  ಹೆಚ್.ಸಿ 110 ವೇಣು ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಪಿ.ಐ ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ:08/10/2021 ರಂದು ತನಗೆ ಮತ್ತು ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ದಿನಾಂಕ:08/10/2021 ರಂದು ಮದ್ಯಾಹ್ನ 12.45 ಗಂಟೆ ಸಮಯದಲ್ಲಿ ಸಿದ್ದೇಪಲ್ಲಿ ಕ್ರಾಸ್ ನಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಸಿದ್ದೇಪಲ್ಲಿ ಕ್ರಾಸ್ ನಲ್ಲಿರುವ ರಾಮಣ್ಣ ಬಿನ್ ಸುಬ್ಬರಾಯಪ್ಪರವರು ತಮ್ಮ ತರಕಾರಿ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ, ಯಾವುದೇ ಪರವಾನಿಗೆ ಇಲ್ಲದೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ತಾವುಗಳು ಪಂಚರೊಂದಿಗೆ ದಾಳಿ ಮಾಡಲಾಗಿ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಆರೋಪಿ ಓಡಿಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರಾಮಣ್ಣ ಬಿನ್ ಸುಬ್ಬರಾಯಪ್ಪ, 60 ವರ್ಷ, ಗೊಲ್ಲ ಜನಾಂಗ, ತರಕಾರಿ ಅಂಗಡಿ ವ್ಯಾಪಾರ, ಸಿದ್ದೇಪಲ್ಲಿ ಕ್ರಾಸ್, ಚಿಂತಾಮಣಿ ತಾಲ್ಲೂಕು ದು ತಿಳಿದು ಬಂದಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ ಮದ್ಯ ತುಂಬಿದ 90 ML ನ 16 ಟೆಟ್ರಾ ಪಾಕೇಟ್ ಗಳು  2) 2 ಪ್ಲಾಸ್ಟಿಕ್ ಗ್ಲಾಸ್ ಗಳು 3) ಖಾಲಿ ಇದ್ದ ಎರಡು HAYWARDS CHEERS WHISKY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳು 4) ಖಾಲಿ ಒಂದು ಲೀಟರ್ ನೀರಿನ ಬಾಟಲ್ ಇದ್ದು ವಶಪಡೆಸಿಕೊಂಡು ಒಟ್ಟು ಮದ್ಯ 1.440 ಎಂ.ಎಲ್ ಇದ್ದು ಇದರ ಬೆಲೆ 562/- ರೂಗಳಾಗಿರುತ್ತದೆ. ಮಾಲನ್ನು ಪಂಚನಾಮೆ ಮೂಲಕ ಅಮಾನತ್ತು ಪಡೆಸಿಕೊಂಡು ಯಾವುದೇ ಪರವಾನಿಗೆ ಪಡೆಯದೇ ತರಕಾರಿ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ  ಮಾಡಿಕೊಟ್ಟಿದ್ದ ಆಸಾಮಿಯಾದ ರಾಮಣ್ಣ ಬಿನ್ ಸುಬ್ಬರಾಯಪ್ಪ, ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

6. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.195/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 09/10/2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದುದಾರರಾದ ಹೆಚ್.ಎಲ್.ನಾಗರಾಜ್ ಬಿನ್ ಲೇಟ್ ಲಕ್ಕಪ್ಪ, 47 ವರ್ಷ, ಕುರುಬ ಜನಾಂಗ, ಜಿರಾಯ್ತಿ, ಹಿರೇಬಿದನೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನಗೆ ದಿವ್ಯ ಎಂಬ ಒಬ್ಬಳೆ ಮಗಳಿದ್ದು, ಎಂ.ಎಸ್ಸಿ ಓದಿದ್ದು, ಸ್ವಲ್ಪ ದಿನಗಳ ಕಾಲ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಾರ್ಟ್ ಟೈಮ್ ಲಚ್ಚರರ್ ಆಗಿ ಕೆಲಸ ಮಾಡುತ್ತಿದ್ದು, ಈಗ ಮನೆಯಲ್ಲಿದ್ದಳು. ನನ್ನ ಮಗಳನ್ನು ನಮ್ಮ ಗ್ರಾಮದ ಚಂದ್ರಶೇಖರ ಬಿನ್ ನಂಜಪ್ಪ, 32 ವರ್ಷ, ಲಿಂಗಾಯಿತ ಜನಾಂಗ, ಚಾಲಕ ವೃತ್ತಿಯವನು ಈಗ್ಗೆ ಸುಮಾರು ಒಂದೂವರೆ ವರ್ಷದಿಂದ  ಪ್ರೀತಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದು, ಈ ವಿಚಾರದಲ್ಲಿ 9 ತಿಂಗಳ ಹಿಂದೆ ನಾನು ಆತನಿಗೆ ನನ್ನ ಮಗಳ ಸಹವಾಸಕ್ಕೆ ಬರಬೇಡವೆಂದು ಎಚ್ಚರಿಕೆ ನೀಡಿದ್ದೆನು. ನೆನ್ನೆ ದಿನ ದಿನಾಂಕ: 08/10/2021 ರಂದು ನನ್ನ ಮಗಳು ಕುರುಬರಹಳ್ಳೀ ರಸ್ತೆಯಲ್ಲಿರುವ ನನ್ನ ತಮ್ಮ ತಿಮ್ಮೇಗೌಡ ರವರ ಮನೆಗೆ ಹೋಗಿದ್ದಳು. ಸಂಜೆ ಸುಮಾರು 7-00 ಗಂಟೆಯಲ್ಲಿ ನನ್ನ ಮಗಳು ದಿವ್ಯ ನನ್ನ ತಮ್ಮನ ಮನೆಯಿಂದ ಹೊರಗೆ ಹೋದವಳು ಮನೆಗೆ ವಾಪಸ್ಸು ಬಂದಿರುವುದಿಲ್ಲ ಎಂದು ನನ್ನ ತಮ್ಮ ನನಗೆ ರಾತ್ರಿ ಸುಮಾರು 8-00 ಗಂಟೆಯಲ್ಲಿ ತಿಳಿಸಿದನು. ಆ ನಂತರ ನಾನು ನನ್ನ ತಮ್ಮ ತಿಮ್ಮೇಗೌಡ, ನಮ್ಮ ನೆಂಟರು ಮತ್ತು ಸ್ನೇಹಿತರುಗಳು ಸೇರಿ ನಮ್ಮ ಗ್ರಾಮದಲ್ಲಿ, ಅಕ್ಕಪಕ್ಕದ ಗ್ರಾಮಗಳಲ್ಲಿ, ಗೌರಿಬಿದನೂರು ಟೌನ್ ನಲ್ಲಿ ನಮ್ಮ ನೆಂಟರು ಮತ್ತು ಆಕೆಯ ಸ್ನೇಹಿತರ ಮನೆಗಳಲ್ಲಿ ಹುಡುಕಾಡುತ್ತಿದ್ದೆವು. ಈ ದಿನ ದಿನಾಂಕ: 09/10/2021 ರಂದು ಬೆಳಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಯಾರೋ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ನನಗೆ ಪೋನ್ ಮಾಡಿ ದಿನಾಂಕ: 08/10/2021 ರಂದು ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಮುದುಗಾನಕುಂಟೆ ಕ್ರಾಸ್ ಬಳಿ KA-53, EY-7143 ಮಹೇಂದ್ರ ಡಿಯೋ ವಾಹನದಲ್ಲಿ ಹೋಗುತ್ತಿದ್ದ ದಿವ್ಯ ಮತ್ತು ಚಂದ್ರಶೇಖರ ಎಂಬುವವರಿಗೆ ಅಪಘಾತವಾಗಿ \ತೀವ್ರ ರಕ್ತಗಾಯಗಳಾಗಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ: 08/10/2021 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ನನ್ನ ತಮ್ಮನ ಮನೆಯಲ್ಲಿದ್ದ ನನ್ನ ಮಗಳಾದ ದಿವ್ಯಳನ್ನು ನಮ್ಮ ಗ್ರಾಮದ ಚಂದ್ರಶೇಖರ ಬಿನ್ ನಂಜಪ್ಪ ಎಂಬುವವನು KA-53, EY-7143 ಮಹೇಂದ್ರ ಡಿಯೋ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಮುದುಗಾನಕುಂಟೆ ಕ್ರಾಸ್ ಬಳಿ ಹೋಗುತ್ತಿದ್ದಾಗ ಗೌರಿಬಿದನೂರು-ಚಿಕ್ಕಬಳ್ಳಾಪುರ ಟಾರು ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ದ್ವಿಚಕ್ರ ವಾಹನ ಬೀಳಿಸಿ ನನ್ನ ಮಗಳಿಗೆ ಅಪಘಾತವನ್ನುಂಟು ಮಾಡಿದ್ದು, ಸದರಿ KA-53, EY-7143 ಮಹೇಂದ್ರ ಡಿಯೋ ದ್ವಿಚಕ್ರ ವಾಹನ ಸವಾರ ಚಂದ್ರಶೇಖರ್ ಬಿನ್ ನಂಜಪ್ಪರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.124/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:08-10-2021 ರಂದು ಸಂಜೆ 4-30 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 08-10-2021 ರಂದು ಮಧ್ಯಾಹ್ನ 3:15 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-85 ನರಸಿಂಹ, ಪಿಸಿ-240 ಮಧುಸೂಧನ್  ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ನಂದಿ ಗ್ರಾಮದ  ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ತಿರ್ನಹಳ್ಳಿ ಗ್ರಾಮದ ವೆಂಕಟಸ್ವಾಮಿ ಬಿನ್ ಲೇಟ್ ಮುನಿಕೃಷ್ಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ತಿರ್ನಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮಧ್ಯಾಹ್ನ 3-30 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ವೆಂಕಟಸ್ವಾಮಿ ಬಿನ್ ಲೇಟ್ ಮುನಿಕೃಷ್ಣಪ್ಪ, 58 ವರ್ಷ, ನೇಕಾರರು, ಚಿಲ್ಲರೆ ಅಂಗಡಿ ವ್ಯಾಪಾರಿ, ತಿರ್ನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 10 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 10 ಟೆಟ್ರಾ ಪ್ಯಾಕೇಟುಗಳ ಬೆಲೆ 351 ರೂಪಾಯಿ ಆಗಿದ್ದು ಓಟ್ಟು ಮದ್ಯ 900 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮಧ್ಯಾಹ್ನ 3-35 ಗಂಟೆಯಿಂದ ಸಂಜೆ 4-10 ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಸಂಜೆ 4-20 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ .ವರದಿ

 

8. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.124/2021 ಕಲಂ. 380 ಐ.ಪಿ.ಸಿ:-

     ದಿನಾಂಕ.08.10.2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಲಕ್ಷ್ಮೀನಾರಾಯಣಬಾಬು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ,  ತಾನು ಶಿಡ್ಲಘಟ್ಟ ಟೌನ್ ವಾಸವಿ ರಸ್ತೆಯಲ್ಲಿ ಮೆಡಿಕಲ್ ಸ್ವೋರ್ ನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ತಮ್ಮ ಮನೆಯಲ್ಲಿ ಪ್ರಮೀಳಮ್ಮ ಕೋಂ ವೆಂಕಟೇಶ್, 35 ವರ್ಷ ರವರು ಸುಮಾರು 08 ತಿಂಗಳಿನಿಂದ ಮನೆ ಕೆಲಸ ಮಾಡಿಕೊಂಡಿದ್ದು. ಹೀಗಿರುವಾಗ ಈಗ್ಗೆ 03 ತಿಂಗಳ ಹಿಂದೆ ತನ್ನ ಮೊಮ್ಮಗಳ ನಾಮಕರಣವನ್ನು ನಾವು ಮನೆಯಲ್ಲಿ ಹಮ್ಮಿಕೊಂಡಿದ್ದ ಸಮಯದಲ್ಲಿ ತಮ್ಮ ಮನೆಯ ರೂಂನಲ್ಲಿಟ್ಟಿದ್ದ, ಸುಮಾರು 64 ಗ್ರಾಂ ತೂಕದ ಬಂಗಾರದ ಬಳೆಗಳನ್ನು ಪ್ರಮೀಳಮ್ಮ ರವರು ಬೇರುವಿನಲ್ಲಿ ಬಟ್ಟೆಗಳನ್ನು ಜೋಡಿಸುವ ಸಮಯದಲ್ಲಿ ತೆಗೆದುಕೊಂಡು ತನ್ನ ಬಳಿ ಇಟ್ಟುಕೊಳ್ಳುತ್ತಿದುದ್ದನ್ನು ತಾನು ಮತ್ತು ತನ್ನ ಮಗಳು ಮದುಶ್ರೀ ರವರು ನೋಡಿದ್ದು, ಪ್ರಮಿಳಮ್ಮ ಸದರಿ ಬಳೆಗಳು ನೆಲದ ಮೇಲೆ ಬಿದ್ದು ಹೋಗಿದ್ದು ಇದನ್ನು ನಿಮಗೆ ನೀಡಲು ನಾನು ತೆಗೆದುಕೊಂಡಿರುತ್ತೇನೆ ಎಂದು ತಿಳಿಸಿರುತ್ತಾರೆ. ಆಗ ನಾವು ಈ ಪ್ರಮೀಳಮ್ಮ ರವರಿಗೆ ಈ ರೂಂನಲ್ಲಿ ನಿನಗೆ ಏನು ಕೆಲಸ ಇಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಟ್ಟಿರುತ್ತೇವೆ ಇನ್ನು ಮುಂದೆ ನೀನು ಈ ರೂಂಗೆ ಬರಬೇಡ ಎಂದು ಬುದ್ದಿವಾದ ಹೇಳಿರುತ್ತೇವೆ. ದಿನಾಂಕ.10.09.2021 ನಂತರ ಗೌರಿಗಣೇಶ ಹಬ್ಬ ಮುಗಿದ ನಂತರ ನಮ್ಮ ಮನೆಯ ರೂಂನಲ್ಲಿ ಟೇಬಲ್ ಮೇಲೆ ಇಟ್ಟಿದ್ದ 12 ಗ್ರಾಂ ಬಂಗಾರದ ಚೈನ್ ಕಾಣದೇ ಇದ್ದು, ಮಾರನೇ ದಿನದಿಂದ ಪ್ರಮೀಳಮ್ಮ ರವರು ನಮ್ಮ ಮನೆಗೆ ಕೆಲಸಕ್ಕೆ ಬಾರದೇ ಇದ್ದು, ನಮಗೆ ಪ್ರಮೀಳಮ್ಮ ರವರ ಮೇಲೆ ಅನುಮಾನ ಬಂದು ಅವರ ಮನೆಗೆ ಹೋಗಿ ವಿಚಾರಿಸಿದಾಗ ನಾನು ಯಾವುದೇ ಆಭರಣಗಳನ್ನು ತೆಗೆದುಕೊಂಡಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಅದರೂ ನನಗೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಮ್ಮ ರವರ ಮೇಲೆ ಅನುಮಾನ ಬಂದಿದ್ದು ಪುನಃ ನಾನು ಪ್ರಮೀಳಮ್ಮ ಅವರ ಗಂಡನನ್ನು ಆಕಸ್ಮಾತ್ ತೆಗೆದುಕೊಂಡಿದ್ದರೆ ಅಥವಾ ಬೇರೆ ಎಲ್ಲಿಯಾದರೂ ಗಿರವಿ ಇಟ್ಟಿದ್ದರೆ ಹೇಳಿ ನಾನೇ ಬಿಡಿಸಿಕೊಳ್ಳುತ್ತೇವೆಂದು ಎಂದು ಕೇಳಿಕೊಂಡಾಗ ನಾವು ಎಲ್ಲಿಯೂ ಇಟ್ಟಿಲ್ಲ ಬೇಕಾದರೆ ಹಣವನ್ನು ಕೊಡುತ್ತೇವೆಂದು ಒಪ್ಪಿಕೊಂಡಿರುತ್ತಾರೆ. ಆದರೆ ಇವರು ಹತ್ತು ದಿನ ಕಳೆದರೂ ಹಣ ಕೊಡದಿದ್ದ ರಿಂದ ದಿನಾಂಕ.01.10.2021 ರಂದು ಶಿಡ್ಲಘಟ್ಟ ಪೊಲೀಸ್ ಠಾಣೆಗೆ ಪ್ರಮೀಳಮ್ಮ ಮತ್ತು ವೆಂಕಟೇಶ ರನ್ನು ಕರೆದುಕೊಂಡು ಬಂದು ಪಿ.ಎಸ್.ಐ ಮೇಡಂ ರವರಲ್ಲಿ ವಿಚಾರ ತಿಳಿಸಿದಾಗ ಮೇಡಂ ರವರು ಅವರನ್ನು ವಿಚಾರ ಮಾಡಿ ಆಗಿದ್ದು ಆಗಿ ಹೋಗಿದೆ ನೀವು ಮಾತನಾಡಿ ತೀರ್ಮಾನಿಸಿಕೊಂಡ ಹಾಗೇ ಬಗೆಹರಿಸಿಕೊಳ್ಳಿ ಎಂದು ಬುದ್ದಿ ಹೇಳಿ ವಾಪಸ್ಸು ಕಳುಹಿಸಿರುತ್ತಾರೆ. ನಂತರ ಇವರು ಪರಿಚಯವಾಗಿದ್ದರಿಂದ ನಾನು ಯಾವುದೇ ದೂರನ್ನು ನೀಡಿದೆ ವಾಪಸ್ಸು ಹೊರಟು ಹೋಗಿರುತ್ತೇನೆ. ನಂತರ ನಾನು ವೆಂಕಟೇಶ್ ರವರು ನನ್ನ ಬಳಿ ಒಪ್ಪಿಕೊಂಡಿರುವಂತೆ ನನಗೆ ತಿಂಗಳಿಗೆ 5000/- ರೂಗಳನ್ನು ಪ್ರಮೀಳಮ್ಮ ರವರನ್ನು ಕೇಳಿದಾಗ ಅವರು ನನಗೆ ನಿನಗೆ ಯಾವುದೇ ಹಣವನ್ನು ಕೊಡುವುದಿಲ್ಲ ನಿಮ್ಮ ಕೈಲಾದುದುನ್ನು ,ಮಾಡಿಕೊಳ್ಳಿ ನನ್ನ ಗಂಡ ಸುಮ್ಮನೆ ಒಪ್ಪಿಕೊಂಡಿರುತ್ತಾರೆ. ನೀವೂ ಮತ್ತೆ ಹಣವನ್ನು ಕೇಳಿದರೆ ನಾನೇ ನಿನ್ನ ಮೇಲೆ ದೂರನ್ನು ಕೊಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ನಮ್ಮ ಮನೆಯಲ್ಲಿ ಸುಮಾರು 12 ಗ್ರಾಂ ಬಂಗಾರದ ಕತ್ತಿನ ಚೈನ್ ಸುಮಾರು 60 ಸಾವಿರ ಬೆಲೆ ಬಾಳುವುದನ್ನು ಪ್ರಮೀಳಮ್ಮ ಕಳ್ಳತನ ಮಾಡಿರುವುದಾಗಿ ಅನುಮಾನ ವಿರುತ್ತೆ. ಆದ್ದರಿಂದ ಪ್ರಮೀಳಮ್ಮ ಮತ್ತು ಅವರ ಗಂಡನನ್ನು ಠಾಣೆಗೆ ಕರೆಸಿ ಕಳುವಾದ ನಮ್ಮ ಬಂಗಾರದ ಚೈನನ್ನು ವಾಪಸ್ಸು ಕೊಡಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.  ಮೇಲ್ಕಂಡವರು ನಾವು ಮಾತನಾಡಿಕೊಂಡಿರುವಂತೆ ಹಣ ಕೊಡದ ಕಾರಣದಿಂದ ಈ ದಿನ ತಡವಾಗಿ ದೂರನ್ನು ನೀಡಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 09-10-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080