Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.348/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ: 07/10/2021 ರಂದು ರಾತ್ರಿ 9-00 ಗಂಟೆಗೆ  ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನಿಮಗೆ ಸೂಚಿಸುವುದೆನೆಂದರೆ ದಿನಾಂಕ 07/10/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಪರಗೋಡು ಗ್ರಾಮದಲ್ಲಿ  ಯಾರೋ ಆಸಾಮಿಗಳು ಈ ದಿನ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಟೀಮ್ ಗಳ  ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದು  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು  ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-214 ಅಶೋಕ್, ಪಿಸಿ-278 ಶಬ್ಬೀರ್ ಊರಾನಮನಿ , ಜೀಪ್ ಚಾಲಕ ಎ.ಹೆಚ್.ಸಿ- ವೆಂಕಟೇಶ್ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-537 ರಲ್ಲಿ ಹೊರಟು  ಪರಗೋಡು ಗ್ರಾಮದ ಗೇಟ್ ಬಳಿ ಇದ್ದ  ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ , ಪರಗೋಡು ಗ್ರಾಮದಲ್ಲಿರುವ ಅಶ್ವತ್ಥಕಟ್ಟೆ   ಬಳಿ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು  ಕೋಲ್ಕತ್ತಾ ನೈಟ್ ರೈಡರ್ಸ್  ತಂಡ ಗೆಲ್ಲುತ್ತದೆ 500/- ರೂ ಎಂದು ಒಬ್ಬನು,  ರಾಜಸ್ಥಾನ್ ರಾಯಲ್ಸ್  ತಂಡ ಗೆಲ್ಲುತ್ತದೆ ಎಂದು ಇನ್ನೊಬ್ಬನು ಹಣವನ್ನು ಪಣವಾಗಿ ಕಟ್ಟಿಕೊಂಡು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ  ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಸಾಯಿಕುಮಾರ ಬಿನ್ ರಮೇಶ್, 20 ವರ್ಷ, ನಾಯಕ ಜನಾಂಗ, ಖಾಸಗಿ ಕೆಲಸ, ವಾಸ ಪರಗೋಡು ಗ್ರಾಮ, ಬಾಗೇಪಲ್ಲಿ ತಾಲ್ಲೂಕು,  2]  ಹರೀಶ್ ಬಿನ್ ನಾರಾಯಣಸ್ವಾಮಿ, 26 ವರ್ಷ, ಅಗಸ ಜನಾಂಗ, ಜಿರಾಯ್ತಿ, ವಾಸ ಪರಗೋಡು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ,    ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ  ಈಗಾಗಲೇ ಪಣಕ್ಕೆ ಕಟ್ಟಿದ್ದ 1600/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-00 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು, ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯ ವಿರುದ್ದ ಕಾನೂನು ಕ್ರಮ  ಜರುಗಿಸಲು  ಸೂಚಿಸಿದ  ಮೇರೆಗೆ  ಠಾಣಾ  ಎನ್.ಸಿ .ಆರ್. 307/2021 ರಂತೆ ದಾಖಲಿಸಿಕೊಂಡಿರುತ್ತೆ. ದಿನಾಂಕ:08-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 15(A),32(3) ಕೆ.ಇ  ಆಕ್ಟ್:-

     ದಿನಾಂಕ:06-10-2021 ರಂದು ಸಂಜೆ 6-20 ಗಂಟೆಗೆ ಶ್ರೀ ವೆಂಕಟರವಣಪ್ಪ ವಿ ಪಿಎಸ್ ಐ ಚೇಳೂರು ಪೊಲೀಸ್ ರವರು ಠಾಣೆಗೆ ಹಾಜರಾಗಿ ವರದಿಯ ಸಮೇತ ಸೂಚಿಸಿದ್ದೇನೆಂದರೆ ದಿನಾಂಕ:06-10-2021 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ  ಪಾಳ್ಯಕೆರೆ  ಕಡೆ ಗಸ್ತು ಕರ್ತವ್ಯದಲ್ಲಿದ್ದಾಗ ಬಾಣಾಲಪಲ್ಲಿ  ಗ್ರಾಮದಲ್ಲಿ ಅದೇ ಗ್ರಾಮದ ವಾಸಿ ವೆಂಕಟರವಣಪ್ಪ ರವರು ತಮ್ಮ ವಾಸದ ಮನೆಯ ಮುಂಭಾಗ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ನಾನು ಮತ್ತು ಸಿ ಪಿ ಸಿ-437  ಸತೀಶ  ಆದ ನಾವಿಬ್ಬರೂ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ವೆಂಕಟರವಣಪ್ಪ ರವರು ತಮ್ಮ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟರವಣಪ್ಪ  ಬಿನ್ ವೆಂಕಟರಾಯಪ್ಪ, 50ವರ್ಷ, ಜಂಗಮದಾಸ ಜನಾಂಗ, ವ್ಯಾಪಾರ, ವಾಸ:ಬಾಣಾಲಪಲ್ಲಿ  ಗ್ರಾಮ,  ಬಾಗೇಪಲ್ಲಿ ತಾಲ್ಲೂಕು,  ಎಂದು ತಿಳಿಸಿದ್ದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 180 ಎಂ.ಎಲ್.ನ  ಬ್ಯಾಗ್ ಪೈಪರ್ ಡಿಲೆಕ್ಸ್  ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ಗಳು ಇದ್ದು, (1 ಲೀಟರ್ 800 ಎಂ.ಎಲ್, ಅದರ ಬೆಲೆ 1062/-ರೂಗಳು), ಮತ್ತು 180 ಎಂಲ್ ನ 02 ಓಲ್ಡ್ ಟವರೆನ್ ವಿಸ್ಕಿ ಟೆಟ್ರಾ ಪ್ಯಾಕಕೆಟ್ ಗಳಿದ್ದು  (360 ಎಂ.ಎಲ್, ಅದರ ಬೆಲೆ 192/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಇದ್ದು  ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ವೆಂಕಟರವಣಪ್ಪ  ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.,ಸಿ.ಆರ್ 106/2021 ರಂತೆ ದಾಖಲಿಸಿಕೊಂಡಿದ್ದು  . ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.440/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ: 07/10/2021 ರಂದು ರಾತ್ರಿ 10.15 ಗಂಟೆಗೆ ಠಾಣೆಯ ಘನ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ರವರು ಘನ ನ್ಯಾಯಾಲಯದ ನ್ಯಾಯಾದೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/10/2021 ರಂದು ರಾತ್ರಿ 8.00 ಗಂಟೆಯಲ್ಲಿ ಠಾಣೆಯ ಪಿ.ಎಸ್.ಐ ಶ್ರೀ ನಾರಾಯಣಸ್ವಾಮಿ.ಸಿ ರವರು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿನ ಚಿಂತಾಮಣಿ- ಚಿಕ್ಕಬಳ್ಳಾಪುರ ರಸ್ತೆಯ ಉಪ್ಪಾರಪೇಟೆ ಗ್ರಾಮದ ಶರೀಪಿಯಾ ಮಸೀದಿಯ ಬಳಿ ಇರುವ ಜಹೀದ್ ಶರೀಫ್ ಬಿನ್ ನಿಜಾಮ್ ಷರೀಫ್ ರವರ ಗುಜರಿ ಅಂಗಡಿಯ ಬಳಿ ಯಾರೋ ಆಸಾಮಿಗಳು ಮೊಬೈಲ್ ಮೂಲಕ ಕಾನೂನು ಬಾಹಿರವಾಗಿ ಐ.ಪಿ.ಎಲ್ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ತಾನು ಸದರಿ ಸ್ಥಳದಲ್ಲಿ ದಾಳಿ ಮಾಡಲು ಇಲಾಖಾ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-41 ಜಗದೀಶ್, ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-544 ವೆಂಕಟರವಣ, ಜೀಪ್ ಚಾಲಕ ಎ.ಹೆಚ್.ಸಿ-39  ವೇಣುಗೋಪಾಲ್ ಹಾಗೂ ಪಂಚರನ್ನು ಕರೆದುಕೊಂಡು ರಾತ್ರಿ 8.15 ಗಂಟೆಗೆ ಬಾಗೇಪಲ್ಲಿ ಸರ್ಕಲ್, ಕೋನಪಲ್ಲಿ ಮಾರ್ಗವಾಗಿ ಉಪ್ಪಾರಪೇಟೆ ಗ್ರಾಮದ ಬಳಿ ಸ್ವಲ್ಪ ಹಿಂದೆ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಜಹೀದ್ ಶರೀಫ್ ರವರ ಗುಜರಿ ಅಂಗಡಿ ಬಳಿ ಹೋಗುವಷ್ಠರಲ್ಲಿ ಅಂಗಡಿಯ ಮುಂಭಾಗದಲ್ಲಿ ಮೊಬೈಲ್ ನೋಡುತ್ತಾ ಕುಳಿತುಕೊಂಡಿದ್ದ ಇಬ್ಬರು ಆಸಾಮಿಗಳ ಪೈಕಿ ಒಬ್ಬ ವ್ಯೆಕ್ತಿಯು ಓಡಿ ಹೋಗಿದ್ದು, ಮತ್ತೊಬ್ಬ ಆಸಾಮಿಯನ್ನು ವಶಕ್ಕೆ ಪಡೆದು ಪಂಚರು ಸಮಕ್ಷಮ ಆತನನ್ನು ತಲಾಷೆ ಮಾಡಲಾಗಿ ಆತನ ಬಳಿ ಒಂದು ಮೊಬೈಲ್ ಇದ್ದು, ಅದು ವಿವೋ 1802 ಕಂಪನಿಯ ಮೊಬೈಲ್ ಆಗಿದ್ದು, ಡಿಸ್ ಪ್ಲೇ ನಲ್ಲಿ ಆನ್ ಲೈನ್ ಪೇಜ್ ಓಪನ್ ಇದ್ದು, ಅದರಲ್ಲಿ IPL 2021 FRESH EXCH  ಕಲ್ಕತ್ತಾ ನೈಟ್  ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್  ಎಂದು ಇದ್ದು, ಸದರಿ ಪೇಜ್ ನ ಬಗ್ಗೆ ಹಾಗೂ ಆತನ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ಜಹೀದ್ ಶರೀಫ್ ಬಿನ್ ನಿಜಾಮ್ ಷರೀಫ್, 23 ವರ್ಷ, ಮುಸ್ಲಿಂ ಜನಾಂಗ, ಅಂಗಡಿಯ ಮಾಲೀಕರು ಉಪ್ಪರ ಪೇಟೆ ಗ್ರಾಮ, ಅಂಬಾಜಿ ದುರ್ಗ ಹೋಬಳಿ, ಚಿಂತಾಮಣಿ ತಾಲ್ಲೂಕು ಎಂದು ಹಾಗೂ ಓಡಿ ಹೋದ ಆಸಾಮಿಯ ಹೆಸರು ಹಾಗೂ ವಿಳಾಸ ಕೇಳಲಾಗಿ ಅಸ್ಲಾಂ ಬಿನ್ ಅಪ್ಸರ್, 25 ವರ್ಷ, ಉಪ್ಪಾರಪೇಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ಮತ್ತು ತಾನು IPL-2021 ನ ಕ್ರಿಕೇಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು ಹಾಲಿ ತಾನು ಕಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ನಾನು 500 ರೂ ಹಣವನ್ನು ಪಣವಾಗಿ ಕಟ್ಟಿದ್ದು, ಓಡಿ ಹೋದ ತಮ್ಮ ಗ್ರಾಮದ ಅಸ್ಲಾಂ ಬಿನ್ ಅಪ್ಸರ್ ರವರು ರಾಜಸ್ಥಾನ್ ರಾಯಲ್ಸ್ ಪರವಾಗಿ 500 ರೂ ಹಣವನ್ನು ಬೆಟ್ಟಿಂಗ್ ಕಟ್ಟಿಕೊಂಡು ಆತನೊಂದಿಗೆ ಜೂಜಾಟವಾಡುತ್ತಿರುವುದಾಗಿ ತಿಳಿಸಿದನು. ಆತನನ್ನು ಪರಿಶೀಲಿಸಲಾಗಿ ಆತನ ಬಳಿ ಪಣಕ್ಕಿಟ್ಟಿದ್ದ 500 ರೂ ನಗದು ಹಣವಿರುತ್ತೆ. ಆತನ ಬಳಿ ಇದ್ದ ಮೊಬೈಲ್ ನ್ನು ಪರಿಶೀಲಿಸಲಾಗಿ ವಿವೊ 1802 ಮೊಬೈಲ್ ನಲ್ಲಿ 9113613452 ಮತ್ತು 9972342787 ನಂಬರಿನ ಸಿಮ್ ಗಳಿದ್ದವು. ನಂತರ ಆತನನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ರಾತ್ರಿ 8-30 ರಿಂದ 9-15 ಗಂಟೆಯವರೆಗೆ ಜಹೀದ್ ಶರೀಪ್ ರವರ ಅಂಗಡಿಯ ಮುಂದೆ ವಿದ್ಯುತ್ ದೀಪದ ಬೆಳಕಿನಲ್ಲಿ ಪಂಚನಾಮೆಯ ಮೂಲಕ ವಿವೊ 1802 ಮೊಬೈಲ್ ಹಾಗೂ 500 ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿದ್ದು ಕಾನೂನು ಬಾಹಿರವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 78(1)(a)(vi) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.273/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:07/10/2021 ರಂದು ಪಿರ್ಯಾದಿ ರಾಮಕ್ಕ ಕೋಂ ನರಸಿಂಹಪ್ಪ, 40 ವರ್ಷ, ಗೊಲ್ಲರು, ಜಿರಾಯ್ತಿ, ವಾಸ ಹುಲಿಕುಂಟೆ ಗ್ರಾಮ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾವು ಜೋಳವನ್ನು ಬೆಳೆದು ಬೊಟ್ಟಾದಪ್ಪನಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ ರವರಿಗೆ ಮಾರಾಟ ಮಾಡಿದ್ದೆವು, ಅವರಿಂದ ಹಣ ಬರಬೇಕಾಗಿರುವುದರಿಂದ ಈ ದಿನ ದಿನಾಂಕ:06/10/2021 ರಂದು ಬೆಳಿಗ್ಗೆ 9-00 ಗಂಟೆಗೆ ಹಣವನ್ನು ತರುತ್ತೇನೆಂದು ಹೇಳಿ ಪತಿ ತನ್ನ ಬಾಬತ್ತು ಕೆ.ಎ-40, ಎಕ್ಸ್-8700 ಟಿ.ವಿ.ಎಸ್ ಹೆವಿಡ್ಯೂಟಿ ದ್ವಿ ಚಕ್ರವಾಹನದಲ್ಲಿ ಹೋದರು, ನಂತರ ಇದೇ ದಿನ ಬೆಳಿಗ್ಗೆ ಸುಮಾರು 9-45 ಗಂಟೆಗೆ ನಮ್ಮ ಬಾವನ ಮಗಳು ನಾರಾಯಣಮ್ಮ ರವರು ನಮ್ಮ ಮನೆಗೆ ಬಂದು ನಿನ್ನ ಗಂಡ ನರಸಿಂಹಪ್ಪ ರವರಿಗೆ ಮತ್ತು ಬೋಡಬಂಡನಹಳ್ಳಿ ಮಜರ ವಡ್ಡರ ಮನೆಯ ವಾಸಿ ಅಶ್ವತ್ಥಪ್ಪ ರವರಿಗೆ ನಗರಗೆ ರಸ್ತೆ ಸಬ್ಬನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಮೀಪ ಅಪಘಾತವಾಗಿ ರಕ್ತಗಾಯಗಳಾಗಿದ್ದು ಗಾಯಾಳುಗಳನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು, ಕೂಡಲೆ ನಾನು ನಮ್ಮ ಸಂಬಂಧಿ ನಾರಾಯಣಮ್ಮ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ವಿಚಾರ ನಿಜವಾಗಿದ್ದು, ನನ್ನ ಗಂಡ ನರಸಿಂಹಪ್ಪ ರವರಿಂದ ವಿಚಾರ ತಿಳಿಯಲಾಗಿ ಬೆಳಿಗ್ಗೆ ಸುಮಾರು 9-00 ಗಂಟೆಯಲ್ಲಿ ತನ್ನ ಬಾಬತ್ತು ಕೆ.ಎ-40, ಎಕ್ಸ್-8700 ಟಿ.ವಿಎಸ್ ದ್ವಿ ಚಕ್ರವಾಹನದಲ್ಲಿ ವಾಟದಹೊಸಹಳ್ಳಿ ಕ್ರಾಸ್ ಬಳಿ ಹೋಗಿ, ಕ್ರಾಸ್ ಬಳಿ ಇದ್ದ ವಡ್ಡರ ಮನೆ ವಾಸಿ ಅಶ್ವತ್ಥಪ್ಪ ರವರನ್ನು ತನ್ನ ದ್ವಿ ಚಕ್ರವಾಹನದಲ್ಲಿ ಕೂರಿಸಿಕೊಂಡು ಬೊಟ್ಟಾದಪ್ಪನಹಳ್ಳಿಗೆ ಹೋಗಲು ಗೌರಿಬಿದನೂರು- ನಗರಗೆರೆ ರಸ್ತೆ ಮಾರ್ಗವಾಗಿ ಸಬ್ಬನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಮೀಪ ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದಾಗ ನಗರಗೆರೆ ಕಡೆಯಿಂದ ಕೆ.ಎ-40, ಎ-9039 ಆಟೋವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಪತಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಅಪಘಾತಪಡಿಸಿ ರಕ್ತಗಾಯವುಂಟು ಮಾಡಿರುವುದಾಗಿ ತಿಳಿಯಿತು, ಗಾಯಗೊಂಡ ನನ್ನ ಪತಿಯನ್ನು ವೈದ್ಯರ ಸೂಚನೆಯಂತೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇನೆ, ಗಾಯಗೊಂಡಿದ್ದ ಅಶ್ವತ್ಥಪ್ಪ ಬಿನ್ ಲೇಟ್ ಈರಪ್ಪ, 45 ವರ್ಷ, ಬೋಡಬಂಡನಹಳ್ಳಿ ಮಜರ ವಡ್ಡರಮನೆ ರವರನ್ನು ಸಹ ಬೆಂಗಳೂರಿನ ಸಂಜಯ್ ಗಾಂದಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿರುತ್ತಾರೆ, ನಾನು ನನ್ನ ಪತಿಗೆ ಚಿಕಿತ್ಸೆ ಕೊಡುಸುವುದರಿಂದ ನಾನು ಈ ದಿನ ತಡವಾಗಿ ದೂರು ನೀಡಿರುತ್ತೇನೆ. ಈ ಅಪಘಾತಕ್ಕೆ ಕಾರಣವಾದ ಮೇಲ್ಕಂಡ ಕೆ.ಎ-40, ಎ-9039 ಆಟೋ ಮತ್ತು ಆಟೋದ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.274/2021 ಕಲಂ. 78(3) ಕೆ.ಇ ಆಕ್ಟ್:-

     ದಿನಾಂಕ 07-10-20212 ರಂದು 20-30 ಗಂಟೆಗೆ ಗುಡಿಬಂಡೆ ನ್ಯಾಯಾಲಯದ ಪಿ.ಸಿ. 582 ಮಂಜುನಾಥ ಕಾಳೇಲ ರವರು ಠಾಣಾ ಎನ್.ಸಿ.ಆರ್. ನಂ. 465/2021 ರಲ್ಲಿ  ಅನುಮತಿಯನ್ನು ಪಡೆದುಕೊಮಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:06-10-2021 ರಂದು ರಾತ್ರಿ 10-30 ಗಂಟೆಯಲ್ಲಿ ಪಿ.ಎಸ್.ಶ್ರೀ ವಿಜಯ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂಧರೆ: ದಿನಾಂಕ:06-10-2021 ರಂದು ರಾತ್ರಿ 08-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ನಗರಗೆರೆ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ-33 ಕೃಷ್ಣ ರವರು ನೀಡಿದ ಮಾಹಿತಿ ಮೇರೆಗೆ ಗೌರಿಬಿದನೂರು ತಾಲ್ಲೂಕು ನಗರಗೆರೆ  ಗ್ರಾಮದಲ್ಲಿ  ನಗರಗೆರೆ ಬಸ್ ನಿಲ್ದಾಣದಲ್ಲಿರುವ ಸಾಧಿಕ್ ಮೊಬೈಲ್ಸ್ ಅಂಗಡಿಯಲ್ಲಿ  ಸಾಧಿಕ್ ಬಿನ್ ಅಬ್ದುಲ್ ಎಸ್, 27 ವರ್ಷ, ಮುಸ್ಲೀಂ ಜನಾಂಗ, ನಗರಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು ನಾಗೇಶ್ ಬಿನ್ ಆದಿನಾರಾಯಣಪ್ಪ, 30 ವರ್ಷ, ನಾಯಕ ಜನಾಂಗ, ನಗರಗೆರೆ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಮೊಬೈಲ್ ನಲ್ಲಿ ಈ ದಿನ ರಾಯಲ್ ಚಾಲೆಂಜ್ ಬೆಂಗಳೂರು ಮತ್ತು ಸನ್ ರೈಸರ್ ಹೈದರಾಬಾದ್ ತಂಡಗಳ ನಡುವೆ ನಡೆಯುತ್ತಿರುವ ಐ.ಪಿ.ಎಲ್. ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದಿರುತ್ತೆ. ಸದರಿ ಮಾಹಿತಿಯ ಮೇರೆಗೆ ದಾಳಿ ಮಾಡಲು ಸಿಬ್ಬಂದಿಯವರಾದ ಪಿ.ಸಿ. 33 ಕೃಷ್ಣಪ್ಪ, ಪಿ.ಸಿ. 460 ಸನಾವುಲ್ಲಾರವರೊಂದಿಗೆ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ  ಮರೆಯಲ್ಲಿ ನಿಂತು ನೊಡಲಾಗಿ ಸದರಿ ನಗರಗೆರೆ ಬಸ್ ನಿಲ್ದಾಣದಲ್ಲಿ  ರಸ್ತೆಯಿಂದ ದಕ್ಷಿಣಕ್ಕೆ ಇರುವ ಗುರುಮೂರ್ತಿರವರ ಅಂಗಡಿಯ ಸಮುಚ್ಚಯದಲ್ಲಿರುವ  ಸಾದಿಕ್ ಮೊಬೈಲ್ಸ್ ಅಂಗಡಿಯಾಗಿದ್ದು ಅಂಗಡಿಯಲ್ಲಿ ಒಬ್ಬ ಆಸಾಮಿಯಿದ್ದು ಹೊರಗೆ ಬಾಗಿಲಿನ ಬಳಿ ಇನ್ನೊಬ್ಬ ಆಸಾಮಿಯು ನಿಂತಿದ್ದು  ಅಂಗಡಿಯೊಳಗೆ ಇರುವ ಆಸಾಮಿಯ ಕೈಯಲ್ಲಿ ಮೊಬೈಲ್ ಪೋನ್ ಮತ್ತು  ಹಣವನ್ನು ಹಿಡಿದುಕೊಂಡು ನಿಂತಿದ್ದು ಅಂಗಡಿಯೊಳಗೆ ಇದ್ದ ಆಸಾಮಿಯು  ಈ ದಿನ ಆರ್.ಸಿ. ಬಿ. ಗೆಲ್ಲುತ್ತೆ, 1000/- ಇನ್ನೋಬ್ಬ ಎಸ್.ಆರ್.ಹೆಚ್. ಗೆಲ್ಲುತ್ತೆ 1000/- ಎಂದು ಕೂಗುತ್ತಿದ್ದು ಆಸಾಮಿಗಳು  ಅಕ್ರಮ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿರುವುದು ಖಚಿತಪಡಿಸಿಕೊಂಡು  ದಾಳಿ ಮಾಡಿ ಆಸಾಮಿಗಳನ್ನು ಹಿಡಿದುಕೊಂಡು  ಹೆಸರು ವಿಳಾಸ ತಿಳಿಯಲಾಗಿ ಸಾಧಿಕ್ ಬಿನ್ ಅಬ್ದುಲ್ ಎಸ್, 27 ವರ್ಷ, ಮುಸ್ಲೀಂ ಜನಾಂಗ, ನಗರಗೆರೆಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು ನಾಗೇಶ್ ಬಿನ್ ಆದಿನಾರಾಯಣಪ್ಪ, 30 ವರ್ಷ, ನಾಯಕ ಜನಾಂಗ, ನಗರಗೆರೆ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. 1 ನೇ ಆಸಾಮಿ ಸಾಧಿಕ್ ಕೈಯಲ್ಲಿ ಮೊಬೈಲ್ ಇದ್ದು  ಮೊಬೈಲ್ ನಲ್ಲಿ ಕ್ರೀಕೇಟ್ ಎಕ್ಸ್ ಎಂಬ ಅಪ್ಲಿಕೇಷನ್ ನಲ್ಲಿ  ಕ್ರಿಕೇಟ್  ಸ್ಕೋರ್ ಅನ್ನು ನೋಡಿ ಬೆಟ್ಟಿಂಗ್ ಆಡುತ್ತಿದ್ದು  ಪಣಕ್ಕಿಟ್ಟಿದ್ದ 3000/- ರೂ ನಗದು ಹಣ, 2)ವಿವೊ ಮೊಬೈಲ್ ಅದರಲ್ಲಿರುವ  ಏರ್ ಟೆಲ್ ಸಿಮ್ ನಂಬರ್ ಗಳಾದ 9742545359, 9901195899 ಸಿಮ್ ಗಳಿರುವ ಮೊಬೈಲ್ ಅನ್ನು ಅಮಾನತ್ತುಪಡಿಸಿಕೊಂಡು  ಪಂಚನಾಮೆಯನ್ನು  ರಾತ್ರಿ 09-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಜರುಗಿಸಿ  10-30 ಗಂಟೆಗೆ ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸುತ್ತಿದ್ದು  ಆರೋಪಿಗಳ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್. ನಂ. 465/2021 ರಂತೆ ಎನ್.ಸಿ.ಆರ್. ಅನ್ನು ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಅಕ್ರಮ ಕ್ರಿಕೇಟ್  ಬೆಟ್ಟಿಂಗ್ ಆಡುತ್ತಿರುವವರ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆಯನ್ನು ಕೈಗೊಳ್ಳಲು  ಅನುಮತಿಯನ್ನು ಘನ ನ್ಯಾಯಾಲಯದಿಂದ  ಪಡೆದುಕೊಂಡು  ಮೊ.ಸಂಖ್ಯೆ 274/2021 ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುವುದು.

 

6. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.158/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿ:08/10/2021 ರಂದು ಬೆಳಗ್ಗೆ 10-30 ಗಂಟೆ ಸಮಯಲದಲ್ಲಿ ನ್ಯಾಯಾಲಯದ ಪಿ.ಸಿ-318 ರವರು ಘನ ನ್ಯಾಯಾಲಯದಿಂದ ಎನ್.ಸಿ.ಆರ್ ನಂ:227/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರ್ ಪಡಿಸಿದ ಸಾರಾಂಶವೆನೆಂದರೆ ದಿ:14/09/2021 ರಂದು  ಸಂಜೆ 6-40 ಗಂಟೆಗೆ ಶ್ರೀ.ಹೆಚ್.ಸಿ.226 ಲಿಂಗಪ್ಪ ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ ನೀಡಿದ ದೂರು ವರದಿಯ ಸಂಬಂದವೆನೆಂದರೆ ಶ್ರೀ.ಲಿಂಗಪ್ಪ, ಸಿ.ಹೆಚ್.ಸಿ-226 ಗೌರಿಬಿದನೂರು ನಗರ ಠಾಣೆ ಆದ ತಾನು ಕ್ರೈಂ ಸಿಬ್ಬಂದಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ದಿ:14/09/2021 ರಂದು  ತಮ್ಮ ಪಿ.ಎಸ್.ಐ ಸಾಹೇಬರು ತನಗೆ ಠಾಣಾ ಸರಹದ್ದಿನಲ್ಲಿ  ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕಾನೂನು ಕ್ರಮ ಜರುಗಿಸುವ ಬಗ್ಗೆ ಸೂಚನೆಗಳನ್ನು ನೀಡಿ ನೇಮಕ ಮಾಡಿದ್ದು  ಅದರಂತೆ  ತಾನು  ಗೌರಿಬಿದನೂರು ನಗರದಲ್ಲಿ  ಗಸ್ತು ಮಾಡುತ್ತಿದ್ದಾಗ  ಈ ದಿನ ದಿ:14/09/2021 ರಂದು ಸಂಜೆ 5-00 ಗಂಟೆಯಲ್ಲಿ  ತನಗೆ ಬಾತ್ಮಿದಾರರು ಪೊನ್ ಮಾಡಿ  ಗೌರಿಬಿದನೂರು ನಗರದ, ಕಲ್ಲೂಡಿ ಗ್ರಾಮ, ಗೌರಿಬಿದನೂರು ಕಡೆ ಹೋಗುವ ಆಟೋ ನಿಲ್ದಾಣದ ಬಳಿಯ  ಸಾರ್ವಜನಿಕರ  ರಸ್ತೆಯ ಪಕ್ಕದಲ್ಲಿ   ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶವನ್ನು ಮಾಡಿಕೊಟ್ಟು ಸಾರ್ವಜನಿಕರು ಮದ್ಯ ಸೇವನೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ತಿಳಿದ್ದರ  ಮೇರೆಗೆ  ತಾನು ತಮ್ಮ ಪಿ.ಎಸ್.ಐ ರವರಿಗೆ ಮಾಹಿತಿಯನ್ನು ನೀಡಿ  ಅವರ ಮಾರ್ಗದರ್ಶನದಂತೆ ಠಾಣೆಯ ಸಿಪಿಸಿ-201 ರವರೊಂದಿಗೆ ಭರತ್ ಪೆಟ್ರೊಲ್ ಬಳಿಯ ಈದಿನ ದಿ:14/09/2021 ರಂದು ಸಂಜೆ 5-10 ಗಂಟೆಗೆ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಮತ್ತು ಮೇಲ್ಕಂಡ ಸಿಬ್ಬಂದಿಯನ್ನು  ನನ್ನ ಜೊತೆ  ಕರೆದುಕೊಂಡು ಈದಿನ ದಿ:14/09/2021 ರಂದು ಸಂಜೆ 5-15 ಗಂಟೆಗೆ ಗೌರಿಬಿದನೂರು ನಗರದ, ಕಲ್ಲೂಡಿ ಗ್ರಾಮ ಆಟೋದ ನಿಲ್ದಾಣ ಗೌರಿಬಿದನೂರು ಕಡೆ ಹೋಗುವ ಆಟೋ ನಿಲ್ದಾಣದ ಬಳಿಗೆ ಬಂದು ಸ್ವಲ್ಪ ದೂರಗಾಡಿಯನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಗೌರಿಬಿದನೂರು ನಗರದ, ಕಲ್ಲೂಡಿಯ ಬಳಿಯ, ಗೌರಿಬಿದಮನೂರು ಕಡೆ ಹೋಗುವ ಆಟೋ ನಿಲ್ದಾಣದ ಬಳಿ  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟು ಮಧ್ಯವನ್ನು ಇಟ್ಟುಕೊಂಡು ಅಲ್ಲಿದ್ದ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟಿದ್ದು ಅಲ್ಲಿ ಸಾರ್ವಜನಿಕರು ಮದ್ಯ ಸೇವನೆ ಮಾಡುತ್ತೀರುವುದು ಖಚಿತ ಪಟ್ಟಿದ್ದು ಕೂಡಲೇ ಪಂಚರ ಸಮಕ್ಷಮ  ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯ ಸೇವನೆಗೆ  ಸ್ಥಳವಕಾಶವನ್ನು  ಮಾಡಿಕೊಟ್ಟಿದ್ದ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀ. ಗಂಗಧರ ಬಿನ್ ಲೆಟ್ ಸಂಜೀವರಾಯಪ್ಪ, 50 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಾಸ: ಕಲ್ಲೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಮದ್ಯವನ್ನು ಸರಬರಾಜು ಮಾಡುತ್ತಿರುವುದಕ್ಕೆ  ಸಂಬಂಧಪಟ್ಟಂತೆ ಯಾವುದಾದರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಪರಿಶೀಲನೆ ಮಾಡಲಾಗಿ 1] ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಮದ್ಯವಿರುವ 14 ಟೆಟ್ರಾ ಪಾಕೇಟುಗಳು, ಇವುಗಳ ಒಟ್ಟು ಮೌಲ್ಯ 491.82/-ರೂಗಳು, ಮಧ್ಯದ ಪ್ರಮಾಣವನ್ನು  ಲೆಕ್ಕ ಮಾಡಲಾಗಿ ಒಟ್ಟು ಸಾಮರ್ಥ್ಯ 01 ಲೀಟರ್ 260 ಎಂ.ಎಲ್ ಆಗಿರುತ್ತೆ.  2] ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಖಾಲಿ 02 ಟೆಟ್ರಾ ಪಾಕೇಟುಗಳು. 3] ಮದ್ಯವನ್ನು ಕುಡಿದು ಬಿಸಾಕಿದಂತಹ 02 ಖಾಲಿ  ಪ್ಲಾಸ್ಟಿಕ್   ಗ್ಲಾಸುಗಳು ಮತ್ತು 4] 01 ಲೀಟರ್ ಸಾಮರ್ಥ್ಯದ ಒಂದು ಖಾಲಿ  ಪ್ಲಾಸ್ಟಿಕ್ ವಾಟರ್ ಬಾಟೆಲ್ ಇದ್ದು ಇವುಗಳನ್ನು ಸಂಜೆ 5-20  ಗಂಟೆಯಿಂದ ಸಂಜೆ 6-20 ಗಂಟೆಯವರೆಗೆ ಪಂಚನಾಮೆಯನ್ನು  ಜರುಗಿಸಿ ಮೇಲ್ಕಂಡ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಸಂಜೆ 6-25 ಗಂಟೆಗೆ ಬಂದು ಸಂಜೆ  6-40 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯನ್ನು ತಮ್ಮ ಮುಂದೆ ಹಾಜರ್ಪಡಿಸುತ್ತಿದ್ದು ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ  ಠಾಣಾಧಿಕಾದಿಕಾರಿಗಳಾದ ತಮ್ಮಲ್ಲಿ ವರದಿಯನ್ನು ನಿವೇದಿಸಿಕೊಂಡಿರುತ್ತೆಂತ ನೀಡಿದ ದೂರು ವರದಿಯಾಗಿದ್ದು, ಈ ದೂರು ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್.ನಂ.227/2021 ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಂಡಿದ್ದು ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ಈ ದಿನ ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಈ ದಿನ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.159/2021 ಕಲಂ. 78(III)  ಕೆ.ಪಿ ಆಕ್ಟ್:-

     ದಿ:08/10/2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ರವರು ಘನ ನ್ಯಾಯಾಲಯದಿಂದ ಎನ್.ಸಿ.ಆರ್ ನಂ:224/2021 ರಲ್ಲಿ ಘನ ನ್ಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು  ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರ್ ಪಡಿಸಿದ ಆದೇಶ ಪತ್ರದ ಸಾರಾಂಶವೆನೆಂದರೆ ದಿನಾಂಕ 09/09/2021 ರಂದು ಸಂಜೆ 4:15 ಗಂಟೆಯಲ್ಲಿ ಶ್ರೀ ಲೋಕೇಶ್ ಹೆಚ್.ಸಿ-214 ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಂಬಂದ ದಿನಾಂಕ: 09-09-2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ನಗರದ ಸಂತೇಮೈದಾನದ ಮುನಿಸಿಪಲ್ ಶಾಲೆ ಹಿಂಭಾಗದ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಪಿ.ಸಿ 34 ಮಂಜುನಾಥ ರವರನ್ನು ಕರೆದುಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪಂಚರನ್ನು ಬರಮಾಡಿಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ಸಂತೇಮೈದಾನದ ಮುನಿಸಿಪಲ್ ಶಾಲೆ ಹಿಂಭಾಗದ ರಸ್ತೆಯ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಮಟ್ಕಾ ಅಂಕಿಗಳನ್ನು ಬರೆಯಿಸಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗಾಡುತ್ತಿರುವುದು ಕಂಡುಬಂದಿತು. ನಂತರ ಪಂಚರ ಸಮ್ಮುಖದಲ್ಲಿ ಅವನನ್ನು ಸುತ್ತುವರಿದು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಮುದ್ದುರಂಗಪ್ಪ ಬಿನ್ ಲೇಟ್ ಹನುಮಂತಪ್ಪ, 70 ವರ್ಷ, ಕುರುಬರು, ವದ್ದೇನಹಳ್ಳಿ, ಗ್ರಾಮ, ಡಿ-ಪಾಳ್ಯ ಹೋಬಳಿ, ಮಂಚೇನಹಳ್ಳಿ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 100/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ 224/2021 ರಂತೆ ದಾಖಲು ಮಾಡಿಕೊಂಡು ಈ ಎನ್.ಸಿ.ಆರ್ ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕಯಗೊಳ್ಳಲು ಅನುಮತಿಗಾಗಿ  ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ಅನುಮತಿಯನ್ನು ಪಡೆದುಕೊಂಡು ಈ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.160/2021 ಕಲಂ. 78(III)  ಕೆ.ಪಿ ಆಕ್ಟ್:-

     ದಿನಾಂಕ: 08/10/2021 ರಂದು ಬೆಳಿಗ್ಗೆ 11-15 ಗಂಟೆಗೆ ಪಿ.ಸಿ. 318 ರವರು ನ್ಯಾಯಾಲಯದಿಂದ ತಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ,  ಚಂದ್ರಕಲಾ ಎನ್. ಪಿ.ಎಸ್.ಐ. ಆದ ನಾನು ದಿನಾಂಕ: 24/09/2021 ರಂದು ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಖಚಿತ ಕೆಳಗೆ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ   ಮಟ್ಕಾ ಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಪಂಚರನ್ನು ಠಾಣೆಗೆ ಕರೆಯಿಸಿ ವಿಚಾರವನ್ನು ತಿಳಿಸಿ ದಾಳಿಗೆ ಸಹಕರಿಸುವಂತೆ ಕೋರಿದ್ದರ ಮೇರೆಗೆ ಅವರು ಒಪ್ಪಿಕೊಂಡ ನಂತರ ಜೀಪಿನಲ್ಲಿ ನಾನು ಪಂಚರು ಸಿಬ್ಬಂದಿಗಳಾದ ಹೆಚ್.ಸಿ. 226 ಲಿಂಗಪ್ಪ ಪಿ.ಸಿ. 201 ಸುರೇಶ ರವರೊಂದಿಗೆ ಹಿರೇಬಿದನೂರು ಬಳಿ ಹೋಗಿ ಅಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಆಲದ ಮರದ  ಬಳಿ ಮರೆಯಲ್ಲಿ ನಿಂತು ನೋಡಿದಾಗ   ಯಾರೋ ಒಬ್ಬ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು. ನಾವು ಪಂಚರ ಸಮ್ಮುಖದಲ್ಲಿ ಆತನನ್ನು  ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ತನ್ನ ಹೆಸರು ಆನಂದ ಬಿನ್ ರಾಧಾಕೃಷ್ಣಪ್ಪ, 32 ವರ್ಷ, ಸವಿತಾ ಜನಾಂಗ, ವ್ಯಾಪಾರ, ಹಿರೇಬಿದನೂರು ಗ್ರಾಮ, ಗೌರಿಬಿದನೂರು ಟೌನ್.  ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಆರೋಪಿಯ ಬಳಿ ಒಂದು ಮಟ್ಕಾ ಚೀಟಿ ಹಾಗೂ ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 710 ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಸಂಜೆ 5-30 ಗಂಟೆಯಿಂದ  6-15 ಗಂಟೆಯವರೆಗೆ ಪಂಚನಾಮೆಯನ್ನು ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 6-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ಆದೇಶಿಸಿ ನೀಡಿದ ವರದಿ ಪಡೆದು ನ್ಯಾಯಾಲಯದಿಂದ ಪ್ರಕರಣ ದಾಖಲು ಮಾಡಲು ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲು  ಮಾಡಿರುತ್ತೇನೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.161/2021 ಕಲಂ. 87  ಕೆ.ಪಿ ಆಕ್ಟ್:-

     ದಿನಾಂಕ 08/10/2021 ರಂದು ಬೆಳಿಗ್ಗೆ 11:30 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ 318 ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 28/09/2021 ರಂದು ಮದ್ಯಾಹ್ನ 3:30 ಗಂಟೆಯಲ್ಲಿ ಶ್ರೀಮತಿ ಚಂದ್ರಕಲಾ ಪಿ.ಎಸ್.ಐ-2 ರವರು ಹೆಚ್.ಸಿ 214 ರವರು ನೀಡಿದ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ-226, ಹೆಚ್.ಸಿ 244 ಹೆಚ್.ಸಿ 244 ಆದ ನಾನು, ಪಿ.ಸಿ-537, ಹಾಗೂ ಪಿ.ಸಿ 201 ರವರನ್ನು  ಕರೆದುಕೊಂಡು ಸರ್ಕಾರಿ ವಾಹನದಲ್ಲಿ ವಿದ್ಯಾನಿಧಿ ಶಾಲೆಯ ಬಳಿ  ಸ್ವಲ್ಪ ದೂರದಲ್ಲಿ ಹೆಚ್.ಸಿ. 214 ರವರು ಇದ್ದುದ್ದನ್ನು ಕಂಡು ಜೀಪನ್ನು ಅಲ್ಲೇ ನಿಲ್ಲಿಸಿ  ಪಂಚರರೊಂದಿಗೆ  ನಡೆದುಕೊಂಡು ಮರಿಯಪ್ಪನ ಪಾಳ್ಯದ ಸಂದಿಯಲ್ಲಿರುವ ಬಯಲಿನಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಮೂರು ಜನ ಆಸಾಮಿಗಳು 100/- ರೂಪಾಯಿಗಳು ಅಂದರ್ ಹಾಗೂ 200/- ರೂಪಾಯಿಗಳು ಬಾಹರ್ ಎಂದು ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಇಬ್ಬರು ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಪ್ರಕಾಶ್ ಬಿನ್ ಗಂಗಾಧರಪ್ಪ , 39 ವರ್ಷ, ಜಿರಾಯ್ತಿ, ಕುರುಬರು, ವಾಸ ಹನುಮಂತಪುರ ಗ್ರಾಮ, ಗೌರಿಬಿದನೂರು ಟೌನ್.  2) ಜಾವೀದ್ ಬಿನ್ ನಸೀರ್ , 30 ವರ್ಷ, ಆಟೋ ಡ್ರೈವರ್ ವಾಸ: ಟಿಪ್ಪು ನಗರ  ಗೌರಿಬಿದನೂರು ಪುರ ಎಂತ ತಿಳಿಸಿದ್ದು, ಇನ್ನೊಬ್ಬ ವ್ಯಕ್ತಿಯು ನಮ್ಮನ್ನು ಕಂಡು ಓಡಿ ಹೋಗಿದ್ದು, ಆತನ ಹೆಸರು ವಿಚಾರಿಸಲಾಗಿ ವಿಜಯ್ ಕುಮಾರ್ ಬಿನ್ ದುಗ್ಗಪ್ಪ, ಪ್ರಶಾಂತ ನಗರ ಎಂದು ತಿಳಿಯಿತು. ಸದರಿ ಆಸಾಮಿಗಳು ಪಣಕ್ಕೆ ಕಟ್ಟಿದ್ದ ನಗದು ಹಣ 1810/- ರೂಗಳು, ಚೆಲ್ಲಾ-ಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟು ಎಲೆಗಳನ್ನು ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿದ್ದು ಈ ದಿನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

 

10. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.162/2021 ಕಲಂ. 15(A),32(3)  ಕೆ.ಇ  ಆಕ್ಟ್:-

     ದಿ:08/10/2021 ರಂದು ಮದ್ಯಾಹ್ನ 12-00 ರಂದು ನ್ಯಾಯಾಲಯದ ಪಿಸಿ-318 ರವರು ಘನ ನ್ಯಾಯಾಲಯದಲ್ಲಿ ಎನ್ ಸಿ.ಆರ್;223/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ಪಡೆದುಕೊಂಡು ತಂದು ಹಾಜರ್ ಪಡಿಸಿದ್ದನ್ನು ಸಾರಾಂಶವೆನೆಂದರೆ ದಿ;09/09/2021 ರಂದು ಸಂಜೆ 5-50 ಗಂಟೆ ಸಮಯದಲ್ಲಿ ಮಾನ್ಯ ಮ. ಪಿ.ಎಸ್.ಐ. ಮೆಡಮ್ ರವರು ನೀಡಿದ ವರದಿಯ ಸಂಬಂದವೆನೆಂದರೆ ದಿನಾಂಕ:09/09/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಗೆ ಸರ್ಕಾರಿ ಜೀಪ್ ಸಂಖ್ಯೆ-40 ಜಿ-92 ರಲ್ಲಿ ಸಿ.ಪಿ.ಸಿ- 507 ಹನುಮಂತರಾಯಪ್ಪ ಮತು ಸಿಪಿಸಿ-201 ಸುರೇಶ್ ರವರೊಂದಿಗೆ ಗಸ್ತು ಮಾಡುತ್ತೀರುವಾಗ ಸಂಜೆ 4-15 ಗಂಟೆಯಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯಾದ ಸಿ.ಹೆಚ್.ಸಿ 214 ಲೋಕೇಶ್  ರವರು ಪೊನ್ ಮಾಡಿ ಗೌರಿಬಿದನೂರು ನಗರದ ಸಾರ್ವಜನಿಕ ಸ್ಥಳವಾದ ಸಿವಿಲ್ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬ ಅಸಾಮಿಯು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಅಮೀಷೋಡ್ಡಿ ಮಟ್ಕಾ ಜೂಜಾಟವನ್ನು ಆಡುತ್ತಾ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಎಂ. ಜಿ. ವೃತ್ತ ಬಳಿ ಬಳಿ ಹೋಗಿ ಅಲ್ಲಿಗೆ ಮಾಹಿತಿ ನೀಡಿದ ಸಿಬ್ಬಂದಿಯಾದ  ಸಿ.ಹೆಚ್.ಸಿ-214 ಲೋಕೇಶ್ ರವರನ್ನು ಸಂಜೆ 4-20 ಗಂಟೆ ಸಮಯಕ್ಕೆ ಕರೆದುಕೊಂಡು ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಕಾಲದಲ್ಲಿ ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೆರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಎಂ.ಜಿ. ವೃತ್ತದ ಮರೆಯಲ್ಲಿ ಜೀಪ್ನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕ ಸ್ಥಳವಾದ ಸಿವಿಲ್ ಬಸ್ ನಿಲ್ದಾಣದಲ್ಲಿ 1 ರೂಪಾಯಿಗೆ 70 ರೂಪಾಯಿಗಳು ಕೊಡುವುದಾಗಿ ಅಮೀಷೊಡ್ಡಿ ಕೂಗುತ್ತಾ ಮಾಟ್ಕಾ ಚೀಟಿಗಳನ್ನು ಬರೆದುಕೊಡುತ್ತೀರುವುದು ಖಚಿತ ಪಡಿಸಿಕೊಂಡು ನಂತರ ತಾವುಗಳು ಪಂಚರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಸುತ್ತುವರೆದು ಆತನನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ 1] ಕುಲ್ಲಾಯಪ್ಪ ಬಿನ್ ಲೇಟ್ ಮೊಚಿ ರಾಮಪ್ಪ, 48 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯಾಪಾರ, ವಾಸ: ಸಂತೆಮೈದಾನ, ಗೌರಿಬಿದನೂರು ಟೌನ್ ಎಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು 510-00 ರೂಪಾಯಿಗಳು, ಒಂದು ಮಟ್ಕಾ ಚೀಟಿ, ಮತ್ತು ಒಂದು ಪೆನ್ನು ಇರುತ್ತೆ. ನಂತರ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 4-30 ಗಂಟೆಯಿಂದ 5-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು, ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಸಂಜೆ 5-30 ಗಂಟೆ ಸಮಯಕ್ಕೆ ಬಂದು  ಸಂಜೆ 5-50 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ:223/2021 ರೀತ್ಯಾ ದಾಖಲು ಮಾಡಿಕೊಂಡು ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಈ ದಿನ ಹಾಜರ್ ಪಡಿಸಿದ್ದನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.192/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:07/10/2021 ರಂದು ಪಿರ್ಯಾದಿದಾರರಾದ  ಆದಿನಾರಾಯಣಪ್ಪ.ಬಿ ಬಿನ್ ದಾಸಣ್ಣ, 32 ವರ್ಷ, ನಾಯಕ ಜನಾಂಗ, ಚಾಲಕ, ವೃತ್ತಿ, ವಾಸ:2-246, ಕಗ್ಗಲ್ಲು ಗ್ರಾ, ಹಿಂದೂಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06/10/2021 ರಂದು ನಾನು ನನ್ನ ಸ್ನೇಹಿತರಾದ ಸಾಯಿ, ಮದನ ಮೋಹನರೆಡ್ಡಿ ಮತ್ತು ಕಪಿಲ್ ತೇಜ್ ರವರು ನಮ್ಮ ಸ್ನೇಹಿತ ನರೇಂದ್ರ ಕುಮಾರ್ ರವರ KA-41, B-7856 ಮಹೇಂದ್ರ ವೆರೋಟ ಕಾರಿನಲ್ಲಿ ಸ್ವಂತ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಲು ಹೊರಟಿದ್ದೆವು. ನಾವು ನಮ್ಮ ಗ್ರಾಮದಿಂದ ಹಿಂದೂಪುರ, ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ-ಬೆಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಲ್ಲಿನಾಯಕನಹಳ್ಳೀ ಗ್ರಾಮದ ಬಳಿ ಇರುವ ರೋಡ್ ಹಂಪ್ಸ್ ಬಳಿ ಕಾರು ಚಲಾಯಿಸುತ್ತಿದ್ದ ನಾನು ನನ್ನ ಕಾರನ್ನು ಸ್ಲೋ ಮಾಡಿದಾಗ ಹಿಂದಿನಿಂದ ಬರುತ್ತಿದ್ದ KA-52, A-7083 ಐಚರ್ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನಮ್ಮ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಕಾರಿನ ಹಿಂಭಾಗ ಸೀಟಿನವರೆಗೆ ಸಂಪೂರ್ಣ ಜಖಂ ಗೊಂಡಿದ್ದು, ಹಿಂಬದಿ ಸೀಟಿನ ಎಡಭಾಗದಲ್ಲಿ ಕುಳಿತಿದ್ದ ಕಪಿಲ್ ತೇಜ್ ರವರ ತಲೆಗೆ, ಮುಖಕ್ಕೆ ಮೂಗೇಟುಗಳಾಗಿದ್ದವು.  ಉಳಿದ ನಮಗೆ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ತಕ್ಷಣ ನಾವು ಕಪಿಲ್ ತೇಜ್ ರವರನ್ನು ರಸ್ತೆಯಲ್ಲಿ ಬಂದ ಯಾವುದೋ ವಾಹನದಲ್ಲಿ ಹಿಂದೂಪುರದ ಅವರ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿರುತ್ತೆವೆ. ಈ ದಿನ ಕಪಿಲ್ ತೇಜ್ ರವರಿಗೆ ಅಪಘಾಥದಿಂದ ತಲೆ ಮತ್ತು ಮುಖದಲ್ಲಿ ನೋವು ಹೆಚ್ಚಾಗಿದ್ದು, ಗೌರಿಬಿದನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ನಾವು ಕಪಿಲ್ ತೇಜ್ ರವರಿಗೆ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿ, ಕಾರಿನ ಮಾಲೀಕರಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಕಾರಿಗೆ ಅಪಘಾತವನ್ನುಂಟುಮಾಡಿದ KA-52, A-7083 ಐಚರ್ ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ದೂರು.

 

12. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.193/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:07/10/2021 ರಂದು ಸಾಯಂಕಾಲ 5-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಹೊನ್ನಪ್ಪನಹಳ್ಳಿ ಗ್ರಾಮದ  ರಾಮಾಂಜಿನಪ್ಪ ಬಿನ್ ನರಸಿಂಹಪ್ಪ ರವರು ತನ್ನ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ಸದರಿಯವರ ಮೇಲೆ ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು, ಪಿ.ಸಿ.283 ಅರವಿಂದ ಹಾಗೂ ಜೀಪ್ ಚಾಲಕ ಎಪಿಸಿ.120 ನಟೇಶ್ ಮತ್ತು ಪಂಚರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಹೊನ್ನಪ್ಪನಹಳ್ಳಿ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಎಲ್ಲರೂ ನಡೆದುಕೊಂಡು ರಾಮಾಂಜಿನಪ್ಪ ಬಿನ್ ನರಸಿಂಹಪ್ಪರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋಗಿದ್ದು, ಮನೆಯ ಮುಂದೆ ಇದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಾಂಜಿನಪ್ಪ ಬಿನ್ ನರಸಿಂಹಪ್ಪ, 40 ವರ್ಷ, ನಾಯಕರು, ಜಿರಾಯ್ತಿ, ಹೊನ್ನಪ್ಪನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಸ್ಥಳದಲ್ಲಿ 90 ML ಸಾಮರ್ಥ್ಯದ HAYWARDS CHEERS WHISKY ಯ 03 ಖಾಲಿ ಟೆಟ್ರಾ ಪ್ಯಾಕೇಟ್, 03 ಖಾಲಿ ಪೇಪರ್ ಗ್ಲಾಸ್ ಹಾಗೂ ಒಂದು ಪ್ಲಾಸ್ಟಿಕ್ ಬ್ಯಾಗ್ ಇದ್ದು, ಪ್ಲಾಸ್ಟಿಕ್ ಬ್ಯಾಗನ್ನು ಪರಿಶೀಲಿಸಲಾಗಿ ಅದರಲ್ಲಿ 90 ML HAYWARDS CHEERS WHISKY ಯ 13 ಟೆಟ್ರಾ ಪ್ಯಾಕೇಟ್ ಗಳಿದ್ದು, ಇವುಗಳು ಒಟ್ಟು 1170 [ಒಂದು ಲೀಟರ್ ನೂರ ಎಪ್ಪತ್ತು ಮಿಲಿ ಲೀಟರ್] ಲೀಟರ್ ಮದ್ಯ ಇದ್ದು, ಇದರ ಬೆಲೆ 456.69/-ರೂ.ಗಳು ಆಗಿರುತ್ತೆ. ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ದೊರೆತ 1] 90 ML ಸಾಮರ್ಥ್ಯದ HAYWARDS CHEERS WHISKY ಯ 03 ಖಾಲಿ ಟೆಟ್ರಾ ಪ್ಯಾಕೇಟ್, 2] 03 ಖಾಲಿ ಪೇಪರ್ ಗ್ಲಾಸ್, 3] ಒಂದು ಪ್ಲಾಸ್ಟಿಕ್ ಬ್ಯಾಗ್, 4] 90 ML HAYWARDS CHEERS WHISKY ಯ 13 ಟೆಟ್ರಾ ಪ್ಯಾಕೇಟ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ  ಸಾಯಂಕಾಲ 5-15 ಗಂಟೆಯಿಂದ 6-00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಹಾಗೂ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ರಾಮಾಂಜಿನಪ್ಪ ಬಿನ್ ನರಸಿಂಹಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಸಂಜೆ 6-15 ಗಂಟೆಗೆ ಠಾಣೆಗೆ ವಾಪಾಸ್ ಬಂದು ಠಾಣಾ ಮೊ.ಸಂ. 193/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

13. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.194/2021 ಕಲಂ. 78(III) ಕೆ.ಪಿ ಆಕ್ಟ್:-

     ದಿನಾಂಕ:08/10/2021 ರಂದು ಬೆಳಗ್ಗೆ 9.30 ಗಂಟೆಗೆ ಹೆಚ್.ಸಿ-137 ರವರು ಘನ ನ್ಯಾಯಾಲಯದ ಅನುಮತಿ ಪಡೆದು ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ ದಿನಾಂಕ:06/10/2021 ರಂದು ಸಂಜೆ 06-00 ಗಂಟೆಯಲ್ಲಿ ನಾನು ಮತ್ತು ಸಿಬ್ಬಂದಿಯೊಂದಿಗೆ ಮಂಚೇನಹಳ್ಳಿಯಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಬಂದ ಮಾಹಿತಿಯಂತೆ ಯಾರೋ ಅಸಾಮಿಯು ತೊಂಡೇಬಾವಿ ಹೋಬಳಿಯ ಚಿಕ್ಕ ಹುಸೇನ್ ಪುರ ಗೇಟ್ ನಲ್ಲಿರುವ ಪ್ಯಾರು ಚಿಲ್ಲರೆ ಅಂಗಡಿ ಬಳಿ ಈ ದಿನ ನಡೆಯಲಿರುವ   ಆರ್.ಸಿ.ಬಿ ವಿರುದ್ದ ಎಸ್.ಆರ್.ಎಚ್  ಮಧ್ಯೆ ನಡೆಯುವ ಐಪಿಎಲ್ ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಡುತ್ತಿರುವುದಾಗಿ ಮಾಹಿತಿ ಬಂದಿದ್ದು  ಅದರಂತೆ  ಅದರಂತೆ ನಾನು ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಬೆಟ್ಟಿಂಗ್ ವಿಚಾರವನ್ನು ತಿಳಿಸಿ ಪೊಲೀಸ್ ನೋಟಿಸ್ ಜಾರಿ ಮಾಡಿ ಸಿಬ್ಬಂದಿಯವರಾದ ಪಿಸಿ-483 ರಮೇಶ್ ಬಾಬು, ಪಿಸಿ-311 ಗೂಳಪ್ಪ, ಪಿಸಿ-336 ಉಮೇಶ್ ಶಿರಶ್ಯಾಡ  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-395 ರಲ್ಲಿ  ಜೀಪ್ ಚಾಲಕ ಎಪಿಸಿ-120 ನಟೇಶ ರವರೊಂದಿಗೆ ಚಿಕ್ಕ ಹುಸೇನ್ ಪುರ ಗೇಟ್ ಬಳಿ ಹೋಗಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ  ಒಬ್ಬ ಆಸಾಮಿಯು  ತನ್ನ ಫೋನ್ ನಲ್ಲಿ ಯಾರನ್ನೋ ಕುರಿತು  ಈ ದಿನ 2000 ರೂ ಆರ್.ಸಿ.ಬಿ ಗೆಲ್ಲುತ್ತೆ ಎಂತ ಮಾತನಾಡುತ್ತಿದ್ದು  ನಮ್ಮನ್ನು ನೋಡಿ ಓಡಿ ಹೋಗುತ್ತಿದ್ದವನನ್ನು ಹಿಡಿದು ಮೊಬೈಲ್ ನೋಡಲಾಗಿ ಅದರಲ್ಲಿ ಬಾಬು ಎಂಬುವವನ್ನು ಫೋನ್ ನಲ್ಲಿ ಮಾತನಾಡಿಸಿದ್ದು ಇದರ ಬಗ್ಗೆ ವಿಚಾರಣೆ ಮಾಡಲಾಗಿ ಬಾಬು ಎಂಬುವವನು ಎಸ್. ಆರ್ ಹೆಚ್.ವಿರುದ್ದ ನನಗೆ ಬೆಟ್ಟಿಂಗ್ ಗಾಗಿ 2000 ನಗದು ಕೊಟ್ಟು ಹೋಗಿರುವುದಾಗಿ ತಿಳಿಸಿದ್ದು  ತಕ್ಷಣ ಆತನನ್ನು ವಶಕ್ಕೆ ಪಡೆದು ಆತನ ಬಳಿ ಚೆಕ್ ಮಾಡಲಾಗಿ 2000 ರೂ ನಗದು ಇರುತ್ತದೆ ಹಾಗೂ ಆತನ  ಹೆಸರು ಮತ್ತು ವಿಳಾಸ ಕೇಳಲಾಗಿ ಪ್ಯಾರು ಬಿನ್ ಲೇಟ್ ಇಬ್ರಾಹಿಂ, 38 ವರ್ಷ, ಮುಸ್ಲಿಂ, ಚಿಲ್ಲರೆ ಅಂಗಡಿ ವ್ಯಾಪಾರ, ಚಿಕ್ಕಹುಸೇನ್ ಪುರ ಗ್ರಾಮ, ತೊಂಡೇಬಾವಿ ಹೋಬಳಿ,  ಮೊ:9980523441 ಎಂದು ತಿಳಿಸಿದ್ದು  ಈತನನ್ನು ಏಕೆ ಈ ರೀತಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವೆಯ ಇದು ಕಾನೂನು ವಿರುದ್ದ  ಎಂತ ಕೇಳಲಾಗಿ ಸದರಿ ಆಸಾಮಿಯು ನಾನು ಆಗಾಗ ಜನರ ಬಳಿ ನಗದಾಗಿ ಹಣವನ್ನು ಪಡೆದು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದನ್ನು  ಪಂಚಾಯ್ತಿದಾರರ ಸಮಕ್ಷಮ ವಶಕ್ಕೆ ಪಡೆದುಕೊಂಡಿರುತ್ತದೆ . ಹಾಗೂ  ಪಂಚನಾಮೆಯನ್ನು ಅಂಗಡಿಯ ಮುಂದಿನ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮ ಪಂಚನಾಮೆಯನ್ನು  ರಾತ್ರಿ 7-15 ರಿಂದ 7-45 ರವರೆಗೆ ಜರುಗಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು  ಸದರಿ ಆರೋಪಿಯೊಂದಿಗೆ  ಅಮಾನತ್ತುಪಡಿಸಿಕೊಂಡ  2000 ರೂ ನಗದು ಮತ್ತು  ಪಂಚನಾಮೆ  ಹಾಗೂ  ವರದಿಯೊಂದಿಗೆ ರಾತ್ರಿ  8-30 ಗಂಟೆಗೆ ಠಾಣೆಗೆ ಬಂದು  ಠಾಣಾ ಎನ್.ಸಿ.ಆರ್ ಸಂಖ್ಯೆ 312/2021 ರಂತೆ ದಾಖಲಿಸಿಕೊಂಡು ಅನುಮತಿ ಪಡೆದು ಕಲಂ 78(3) ಕೆಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.09/2021 ಕಲಂ. 78(III) ಕೆ.ಪಿ ಆಕ್ಟ್:-

     ದಿನಾಂಕ:08-10-2021 ರಂದು ಮಧ್ಯಾನ್ಹ-2-30 ಗಂಟೆಯ ಸಮಯದಲ್ಲಿ ಹೆಚ್ ಸಿ-59 ರವರು ಘನ  ನ್ಯಾಯಾಲಯದಿಂದ ಎನ್ ಸಿ ಆರ್ 14/2021 ರಲ್ಲಿ ಕ್ರಿಮೀನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಸ್ವೀಕರಿಸಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:07-10-2021 ರಂದು ರಾತ್ರಿ 7-00 ಗಂಟೆಯಲ್ಲಿ ಪಿ.ಎಸ್.ಐ ಶ್ರೀ ಮಂಜುನಾಥ.ಡಿ ರವರು ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂಧರೆ: ದಿನಾಂಕ:07-10-2021 ರಂದು ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ  ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ  ಹೆಚ್.ಸಿ-59 ಶ್ರೀನಿವಾಸ  ರವರು ನೀಡಿದ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ  ತಾಲ್ಲೂಕು ಪೆರೇಸಂದ್ರ ಗ್ರಾಮದ ಸಂತೆ ಮೈದಾನ ಬಳಿ ಇರುವ ಸಪ್ಪಲಮ್ಮ ದೇವಸ್ಥಾನದ ಪಕ್ಕದಲ್ಲಿನ ಅಶ್ವತ್ಥಕಟ್ಟೆ ಕೆಳಗೆ ಗಂಗರಾಜು ಬಿನ್ ದುಗ್ಯಪ್ಪ, 23 ವರ್ಷ, ಆದಿ ಕರ್ನಾಟಕ, ತರಕಾರಿ ವ್ಯಾಪಾರ, ವಾಸ ಪೆರೇಸಂದ್ರ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ಮತ್ತು ಅಶೋಕ ಕುಮಾರ್ ಬಿನ್ ಶ್ರೀನಿವಾಸ, 23 ವರ್ಷ, ಕೊರಚರು, ತರಕಾರಿ ವ್ಯಾಪಾರ,  ವಾಸ ಮುತ್ತಕದಹಳ್ಳಿ ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು. ಹಾಗೂ ನಂದೀಶ ಬಿನ್ ಗಂಗಪ್ಪ, 28 ವರ್ಷ, ಆದಿ ಕರ್ನಾಟಕ, ತರಕಾರಿ ವ್ಯಾಪಾರ, ವಾಸ ಬುಶೆಟ್ಟಿಹಳ್ಳಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು.ರವರು ಮೊಬೈಲ್ ನಲ್ಲಿ ಈ ದಿನ ಚೆನ್ನೈ ಮತ್ತು ಪಂಜಾಬ್  ತಂಡಗಳ ನಡುವೆ ನಡೆಯುತ್ತಿರುವ ಐ.ಪಿ.ಎಲ್. ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದಿರುತ್ತೆ. ಸದರಿ ಮಾಹಿತಿಯ ಮೇರೆಗೆ ದಾಳಿ ಮಾಡಲು ಸಿಬ್ಬಂದಿಯವರಾದ ಪಿ.ಸಿ. 203 ಮಂಜುನಾಯಕ,  ರವರೊಂದಿಗೆ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ  ಮರೆಯಲ್ಲಿ ನಿಂತು ನೊಡಲಾಗಿ ಪೆರೇಸಂದ್ರ ಗ್ರಾಮದ ಸಂತೆ ಮೈದಾನದ ಬಳಿ ಇರುವ ಸಪ್ಪಲಮ್ಮ ದೇವಸ್ಥಾನದ ಪಕ್ಕದಲ್ಲಿ ದಕ್ಷಿಣಕ್ಕೆ ಇರುವ  ಅಶ್ವತ್ಥಕಟ್ಟೆ ಕೆಳಗೆ ಮೂವರು ಆಸಾಮಿಗಳು  ಕೈಯಲ್ಲಿ ಮೊಬೈಲ್ ಪೋನ್ ಮತ್ತು  ಹಣವನ್ನು ಹಿಡಿದುಕೊಂಡು ನಿಂತಿದ್ದು ಒಬ್ಬ  ಆಸಾಮಿಯು  ಈ ದಿನ ಚೆನ್ನೈ  ಗೆಲ್ಲುತ್ತೆ, 1000/- ಇನ್ನೋಬ್ಬ ಪಂಜಾಬ್  ಗೆಲ್ಲುತ್ತೆ 1000/- ಎಂದು,  ಮತ್ತೊಬ್ಬ ಚೆನ್ನೈ  ಗೆಲ್ಲುತ್ತೆ, 1000/-  ಎಂದು  ಆಸಾಮಿಗಳು  ಅಕ್ರಮ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿರುವುದು ಖಚಿತಪಡಿಸಿಕೊಂಡು ಸಂಜೆ 5-15  ದಾಳಿ ಮಾಡಿ ಆಸಾಮಿಗಳನ್ನು ಹಿಡಿದುಕೊಂಡು  ಹೆಸರು ವಿಳಾಸ ತಿಳಿಯಲಾಗಿ ಗಂಗರಾಜು ಬಿನ್ ದುಗ್ಯಪ್ಪ, 23 ವರ್ಷ ಆದಿ ಕರ್ನಾಟಕ, ತರಕಾರಿ ವ್ಯಾಪಾರ, ವಾಸ ಬುಶೆಟ್ಟಿಹಳ್ಳಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ಮತ್ತು ಅಶೋಕ ಕುಮಾರ್ ಬಿನ್ ಶ್ರೀನಿವಾಸ, 23 ವರ್ಷ, ಕೊರಚರು, ತರಕಾರಿ ವ್ಯಾಪಾರ,  ವಾಸ ಮುತ್ತಕದಹಳ್ಳಿ ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು. ಹಾಗೂ ನಂದೀಶ ಬಿನ್ ಗಂಗಪ್ಪ, 28 ವರ್ಷ, ಆದಿ ಕರ್ನಾಟಕ, ತರಕಾರಿ ವ್ಯಾಪಾರ, ವಾಸ ಬುಶೆಟ್ಟಿಹಳ್ಳಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. 1 ನೇ ಆಸಾಮಿ ಗಂಗರಾಜು  ಕೈಯಲ್ಲಿ ಮೊಬೈಲ್ ಇದ್ದು  ಮೊಬೈಲ್ ನಲ್ಲಿ CRICBUZZ ಎಂಬ ಅಪ್ಲಿಕೇಷನ್ ನಲ್ಲಿ  ಕ್ರಿಕೇಟ್  ಸ್ಕೋರ್ ಅನ್ನು ನೋಡಿ ಬೆಟ್ಟಿಂಗ್ ಆಡುತ್ತಿದ್ದು  ಪಣಕ್ಕಿಟ್ಟಿದ್ದ 1100/- ರೂ ನಗದು ಹಣ, 2)ಓಪೋ ರೇನೋ  ಮೊಬೈಲ್  ಅದರಲ್ಲಿರುವ  ಜಿಯೋ  ಸಿಮ್ ನಂಬರ್ ಗಳಾದ 9113221820, ಏರ್ ಟೆಲ್  9035310684 ಸಿಮ್ ಗಳಿರುವ ಮೊಬೈಲ್ ಅನ್ನು ಮತ್ತು 2 ನೇ ಆಸಾಮಿ ಅಶೋಕ್ ಕುಮಾರ್  ಕೈಯಲ್ಲಿ ಮೊಬೈಲ್ ಇದ್ದು  ಮೊಬೈಲ್ ನಲ್ಲಿ CRICBUZZ ಎಂಬ ಅಪ್ಲಿಕೇಷನ್ ನಲ್ಲಿ  ಕ್ರಿಕೇಟ್  ಸ್ಕೋರ್ ಅನ್ನು ನೋಡಿ ಬೆಟ್ಟಿಂಗ್ ಆಡುತ್ತಿದ್ದು  ಪಣಕ್ಕಿಟ್ಟಿದ್ದ 2670/- ರೂ ನಗದು ಹಣ, 2)ವಿವೋ ಮೊಬೈಲ್  ಅದರಲ್ಲಿರುವ  ಜಿಯೋ  ಸಿಮ್ ನಂಬರ್ ಆದ  9113002969  ಸಿಮ್ ಇರುವ  ಮೊಬೈಲ್ ಅನ್ನು ಹಾಗೂ 3 ನೇ ಆಸಾಮಿ ನಂದೀಶ ಕೈಯಲ್ಲಿ ಮೊಬೈಲ್ ಇದ್ದು  ಮೊಬೈಲ್ ನಲ್ಲಿ CRICBUZZ ಎಂಬ ಅಪ್ಲಿಕೇಷನ್ ನಲ್ಲಿ  ಕ್ರಿಕೇಟ್  ಸ್ಕೋರ್ ಅನ್ನು ನೋಡಿ ಬೆಟ್ಟಿಂಗ್ ಆಡುತ್ತಿದ್ದು  ಪಣಕ್ಕಿಟ್ಟಿದ್ದ 4400/- ರೂ ನಗದು ಹಣ, 2)ವಿವೊ ಮೊಬೈಲ್  ಅದರಲ್ಲಿರುವ  ಏರ್ ಟೆಲ್ ಸಿಮ್ ನಂಬರ್ ಆದ  9731432487 ಸಿಮ್  ಇರುವ ರುವ ಮೊಬೈಲ್ ಅನ್ನು ಅಮಾನತ್ತುಪಡಿಸಿಕೊಂಡು  ಪಂಚನಾಮೆಯನ್ನು  ಸಂಜೆ 5-30  ಗಂಟೆಯಿಂದ ಸಂಜೆ 6-30  ಗಂಟೆಯವರೆಗೆ ಜರುಗಿಸಿ  ರಾತ್ರಿ 7-00  ಗಂಟೆಗೆ ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸುತ್ತಿದ್ದು  ಆರೋಪಿಗಳ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್. ನಂ. 14/2021 ರಂತೆ ಎನ್.ಸಿ.ಆರ್. ನ ಮೇಲೆ ಕಾನೂನು ಕ್ರಮಕ್ಕಾಗಿ ನೀಡಿದ ದೂರು.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.310/2021 ಕಲಂ. 279,304(A)ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:07-10-2021 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಪಿರ್ಯಾದಿದಾರರಾದ ಲೋಕೆಶ್ ಬಿನ್ ನಾಗರಾಜ,ಸುಮಾರು 24 ವರ್ಷ, ಬೆಸ್ತರು, ವ್ಯಾಪಾರ, ವಾಸ: ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ:06-10-2021 ರಂದು ರಾತ್ರಿ 8-00 ಗಂಟೆಯಲ್ಲಿ ಜಂಗಮಕೋಟೆ-ಜಂಗಮಕೋಟೆ ಕ್ರಾಸ್ ಮುಖ್ಯ ರಸ್ತೆಯ ತಮ್ಮ ಗ್ರಾಮದ ರಸೂಲ್ ಪಾಷ ರವರ ಪ್ಲಾಸ್ಟಿಕ್ ಅಂಗಡಿಯ ಬಳಿ ಇದ್ದಾಗ ಅದೇ ಸಮಯದಲ್ಲಿ  ಯಾರೋ ಸುಮಾರು 60 ರಿಂದ 65 ವರ್ಷದ  ವ್ಯಕ್ತಿ ಜಂಗಮಕೋಟೆ ಗ್ರಾಮದ ಕಡೆಯಿಂದ  ಅನ್ವರ್ ಸಾಬ್ ರವರ ಜಮೀನಿನ ಮುಂಭಾಗ ರಸ್ತೆಯ ಎಡಬದಿಯಲ್ಲಿಯೇ ನಡೆದುಕೊಂಡು ಬರುತ್ತಿದ್ದಾಗ ಜಂಗಮಕೋಟೆ ಗ್ರಾಮದ ಕಡೆಯಿಂದ ಬಂದ ಯಾವುದೋ ಒಂದು ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿಯೇ ನಡೆದುಕೊಂಡು ಬರುತ್ತಿದ್ದ  ವ್ಯಕ್ತಿಗೆ ಹಿಂಬದಿಯಿಂದ ಡಿಕ್ಕಿಹೊಡೆಸಿ ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಸದರಿ ಕಾರು ವೇಗವಾಗಿ ಹೊರಟು ಹೋಗಿದ್ದರಿಂದ ಅದರ ನೊಂದಣಿ ಸಂಖ್ಯೆ ಗಮನಿಸಲು ಸಾದ್ಯವಾಗಿರುವುದಿಲ್ಲ ತಕ್ಷಣ  ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ವ್ಯಕ್ತಿಗೆ  ತಲೆಯ ಎಡಭಾಗದ ಹಣೆಯ ಬಳಿ, ತಲೆಯ ಎಡಕಿವಿಯ ಪಕ್ಕದಲ್ಲಿ,ಎಡಕೈಗೆಗೆ ರಕ್ತಗಾಗಳಾಗಿದ್ದು,ಎರಡೂ ಮೊಣಕಾಲುಗಳಿಗೆ, ಎಡಕಾಲಿಗೆ ತರುಚಿದ ಗಾಯಗಳಾಗಿದ್ದು, ಮತ್ತು ಎರಡೂ ಕಿವಿಯಲ್ಲಿ ,ಮೂಗಿನಲ್ಲಿ, ಬಾಯಿಯಲ್ಲಿ ರಕ್ತ ಬಂದಿದ್ದು ಸದರಿ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ,ಸುಮಾರು 60-65 ವರ್ಷ ವಯಸ್ಸಿನ ಅಪರಿಚಿತ ಗಂಡಸ್ಸಾಗಿದ್ದು, ಸುಮಾರು 5.4 ಅಡಿ ಎತ್ತರವಿದ್ದು, ಸಾದಾರಣ ಮೈಕಟ್ಟು, ಕಪ್ಪು ಮೈ ಬಣ್ಣದ, ಕೋಲು ಮುಖ, ತಲೆಯಲ್ಲಿ ಸುಮಾರು ಎರಡು ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು ಇರುತ್ತೆ, ಮೃತನ ಮೈ ಮೇಲೆ ನೀಲಿ ಮತ್ತು ಕೆಂಪು ಬಣ್ಣದ ಚೌಕಳಿ ಇರುವ ಪೂರ್ತಿ ತೋಳಿನ ಶರ್ಟ್ ,ಕಪ್ಪುಬಣ್ಣದ ಸ್ವೆಟರ್, ಆಕಾಶ ನೀಲಿ ಬಣ್ಣದ ಚೌಕಳಿ ಲುಂಗಿ ಮತ್ತು  ಕಂದು ಬಣ್ಣದ ಅಂಡರ್ವೇರ್ ಇರುತ್ತೆ.  ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಅಪರಿಚಿತ ವಕ್ತಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ಕಾರನ್ನು  ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವುಂಟುಮಾಡಿದ ಪರಿಣಾಮ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಪರಿಚಿತ ಗಂಡಸ್ಸಿನ ಹೆಸರು ವಿಳಾಸ ಮತ್ತು ವಾರುಸುದಾರರ ಪತ್ತೆ ಬಗ್ಗೆ ಸುತ್ತಮುತ್ತಲು ಗ್ರಾಮಗಳಲ್ಲಿ ವಿಚಾರ ಮಾಡಿದರೂ  ಸಹ ಪತ್ತೆಯಾಗಿರುವುದಿಲ್ಲ ಅಲ್ಲಿಯೇ ಇದ್ದ ಸಾರ್ವಜನಿಕರ ಸಹಾಯದಿಂದ  ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಯಾವುದೋ ಒಂದು ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು. ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ವಿಚಾರ ಮಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೃತನ  ಹೆಸರು ಮತ್ತು  ವಿಳಾಸವನ್ನು ಹಾಗೂ ಅಪಘಾತವುಂಟುಮಾಡಿದ ಕಾರನ್ನು ಮತ್ತು ಅದರ ಚಾಲಕನನ್ನು  ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ. 310/2021 ಕಲಂ 279, 304(ಎ) ಐಪಿಸಿ ರ/ಜೊ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.311/2021 ಕಲಂ. 143,147,447,341,323,504,506,149 ಐ.ಪಿ.ಸಿ :-

     ದಿನಾಂಕ:07-10-2021 ರಂದು ಸಂಜೆ 7-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಧರ್ ರೆಡ್ಡಿ ಬಿನ್ ಲೇಟ್ ರಾಮಚಂದ್ರ ರೆಡ್ಡಿ ,26 ವರ್ಷ, ವಕ್ಕಲಿಗರು, ಜಿರಾಯ್ತಿ,ವಾಸ-ದೇವರಮಳ್ಳೂರು ಗ್ರಾಮ,ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ,  ತನ್ನ ತಾತನಾದ ಲೇಟ್ ಎನ್.ವೆಂಕಟರಾಯಪ್ಪ ರವರಿಗೆ 1 ನೇ ಯಶೋಧಮ್ಮ, 2 ನೇ ಲೇಟ್ ನಾರಾಯಣ ರೆಡ್ಡಿ, 3 ನೇ ತನ್ನ ತಂದೆಯವರಾದ ಲೇಟ್ ರಾಮಚಂದ್ರ ರೆಡ್ಡಿ ರವರಾಗಿದ್ದು, ತನ್ನ ತಾತನಾದ ಎನ್ ವೆಂಕಟರಾಯಪ್ಪ ರವರಿಗೆ ಲೇಟ್ ದೊಡ್ಡ ವೆಂಕಟರಾಯಪ್ಪ ಎಂಬ ಅಣ್ಣ, ಬೈಯ್ಯಣ್ಣ ಎಂಬ ತಮ್ಮನಿರುತ್ತಾನೆ.  ದೇವರಮಳ್ಳೂರು, ಗುಮ್ಮನಹಳ್ಳಿ, ಘಟಾರ್ಲಹಳ್ಳಿ ಗ್ರಾಮದ  ಸರ್ವೆ ನಂಬರ್ 59/1, 10/ಪಿ33, 117/5, 187,203,152,66/2, 58/1, 116/6, 54/2ಎ, 185, 5/2, 5/3, 5/4, 8/ಪಿ2, 8/ಪಿ7, 59/3 ರಲ್ಲಿ ಒಟ್ಟು ಸುಮಾರು 28 ಎಕರೆ ಜಮೀನು ತನ್ನ ತಾತನಾದ ಎನ್.ವೆಂಕಟರಾಯಪ್ಪ  ಸ್ವಯಾರ್ಜಿತವಾದ ಆಸ್ತಿಯಾಗಿದ್ದು, ಈ ಜಮೀನಿನಲ್ಲಿ ತನ್ನ ತಂದೆಯವರು, ಅವರ ಅಣ್ಣಂದಿರುಗಳು ಹಾಗು ಕುಟುಂಬದವರು ನನ್ನ ತಾತನ ಕಾಲದಿಂದಲೂ ಸ್ವಾಧೀನ ಅನುಭೋಗದಲ್ಲಿ ಇರುತ್ತಾರೆ. ಹೀಗಿರುವಾಗ ತನ್ನ ತಾತನ ಅಣ್ಣ ಲೇಟ್ ದೊಡ್ಡ ವೆಂಕಟರಾಯಪ್ಪ ಹಾಗು ತಮ್ಮನಾದ ಬೈಯ್ಯಣ್ಣ ರವರ ಕುಟುಂಬದವರು ತನ್ನ ತಾತನ ಸ್ವಯಾರ್ಜಿತವಾದ ಜಮೀನಿನ ಮೇಲೆ ತಕರಾರು ಮಾಡಿ, ಘನ ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ಓಎಸ್ ನಂಬರ್ 64/2006 ರಂತೆ ದಾವೆಯನ್ನು ಹೂಡಿದ್ದು, ಸದರಿ ದಾವೆಯು ವಜಾ ಆಗಿರುತ್ತದೆ. ನಂತರ ಮೇಲ್ಕಂಡವರು ಸದರಿ ದಾವೆಯ ಮೇಲೆ ಆರ್.ಎ ನಂಬರ್-57/2012 ರಂತೆ ಅಪೀಲು ಹೋಗಿದ್ದು, ಸದರಿ ದಾವೆಯು ಸಹ ವಜಾ ಆಗಿರುತ್ತದೆ. ತದ ನಂತರ ಓಎಸ್ ನಂಬರ್ 62/2012 ರಂತೆ  ಮುನಿರೆಡ್ಡಿ ಹಾಗು ಇತರರು ದಾವೆಯನ್ನು ಹೂಡಿದ್ದು, ಸದರಿ ದಾವೆಯು ಸಹ ವಜಾ ಆಗಿರುತ್ತದೆ. ಈ ಜಮೀನಿನ ಬಗ್ಗೆ ಘನ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ಡಿಗ್ರಿ ಆದೇಶ ಸಹ ಆಗಿರುತ್ತದೆ.  ಮೇಲ್ಕಂಡ ತನ್ನ ತಾತನ ಸ್ವಯಾರ್ಜಿತವಾದ ಜಮೀನಿನಲ್ಲಿ ತಾನು, ತನ್ನ ಕುಟುಂಬದವರು ಹಾಗು ತನ್ನ ದೊಡ್ಡಪ್ಪ ರವರ ಕುಟುಂಬದವರಿ ಸ್ವಾಧೀನ ಅನುಭೋಗದಲ್ಲಿರುತ್ತೇವೆ. ಹೀಗಿರುವಾಗ ದಿನಾಂಕ 04/10/2021 ರಂದು ಬೆಳಿಗ್ಗೆ ಸುಮಾರು 11-30 ಗಂಟೆಗೆ ತಾನು, ತನ್ನ ಅಣ್ಣ ಸುದರ್ಶನ್, ತನ್ನ ದೊಡ್ಡಪ್ಪನ ಮಗಳಾದ ವನಜಾ ರವರು ಸರ್ವೆ ನಂಬರ್ 152 ರ ಜಮೀನಿನಲ್ಲಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸುತ್ತಿದ್ದಾಗ, ತನ್ನ ತಾತನ ಅಣ್ಣ ಲೇಟ್ ದೊಡ್ಡ ವೆಂಕಟರಾಯಪ್ಪ ರವರ ಹೆಂಡತಿ 1) ನಾರಾಯಣಮ್ಮ , ಈಕೆಯ ಮಕ್ಕಳಾದ 2) ಪದ್ಮಾವತಮ್ಮ, 3) ಅನಿತಾ, ಪದ್ಮಾವತಮ್ಮ ರವರ ಮಗನಾದ 4) ನಟರಾಜ್ ಹಾಗು ಬಯ್ಯಣ್ಣ ರವರ ಮಕ್ಕಳಾದ 5) ಮುನಿರೆಡ್ಡಿ, 6) ಕೃಷ್ಣಾರೆಡ್ಡಿ, 7) ಗೋವಿಂದರೆಡ್ಡಿ, 8) ಮಗಳಾದ ಈರಗಮ್ಮ ಹಾಗು ಇವರ ಮನೆಯವರಾದ 9) ಪುಟ್ಟಮ್ಮ ಕೋಂ ಮುನಿರೆಡ್ಡಿ, 10) ಯಶೋದಮ್ಮ, 11) ಸುಮಿತ್ರಾ, 12) ಕೇಶವ, 13) ನಂಜರೆಡ್ಡಿ, 14) ಸುರೇಶ್, 15) ಮಾಲಾ, 16) ನಾರಾಯಣಸ್ವಾಮಿ, 17) ಪ್ರಮೀಳಾ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೈಯಲ್ಲಿ ರಾಡ್ ಗಳನ್ನು ಹಿಡಿದುಕೊಂಡು ತಮ್ಮ ಜಮೀನೊಳಗೆ ಅಕ್ರಮ ಪ್ರವೇಶ ಮಾಡಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಅನ್ನು ಅಡ್ಡಗಟ್ಟಿ ತಮ್ಮನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು, ತನಗೂ ಮತ್ತು ತನ್ನ ಅಣ್ಣನಿಗೆ ಕೈಗಳಿಂದ ಮೈ ಮೇಲೆ ಹೊಡೆದು, ಈ ಜಮೀನಿನಲ್ಲಿ ನಮಗೂ ಸಹ ಭಾಗ ಬರಬೇಕು ಯಾವ ಕೋರ್ಟ್ ನಲ್ಲಿ ನಿನ್ನ ಪರ ಆದೇಶವಾದರೂ ಸಹ ನಮಗೆ ನೀವು ಭಾಗ ಕೊಡಲೇ ಬೇಕು ನೀವು ಭಾಗ ಕೊಡದಿದ್ದರೆ ನಿಮ್ಮನ್ನು ಸಾಯಿಸಿ ಇದೇ ಜಮೀನಿನಲ್ಲಿ ಹೂತಿ ಬಿಡುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಈ ಗಲಾಟೆಯ ವಿಷಯವನ್ನು ತಾನು ತಮ್ಮ ಮನೆಯ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿ  ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 311/2021 ಕಲಂ 143, 147,447,341,323,504, 506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

    

Last Updated: 08-10-2021 06:18 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080