ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 345/2021, ಕಲಂ. 279, 337 ಐಪಿಸಿ:-

     ದಿನಾಂಕ: 06/10/2021 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಕೆ. ಸುಬಾನ್ ಬಿನ್ ಲೇಟ್ ಖಾಸೀಂ ಸಾಬ್ 54 ವರ್ಷ, ಮುಸ್ಲಿಂ ಜನಾಂಗ, ಆಟೋ ಚಾಲಕ ವೃತ್ತಿ, ಗೂಳೂರು ಗ್ರಾಮ ಮತ್ತು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಗೂಳೂರು ಗ್ರಾಮದಲ್ಲಿ ವಾಸವಾಗಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನಗೆ ಮತ್ತು ನನ್ನ ಹೆಂಡತಿ ಖಾಜಾಬಿ ರವರಿಗೆ ಇಬ್ಬರು ಮಕ್ಕಳಿದ್ದು, ಮೌಲಾ ಮತ್ತು ಖಲಂಧರ್ ಆಗಿರುತ್ತಾರೆ. ಇಬ್ಬರಿಗೂ ಮದುವೆಗಳಾಗಿದ್ದು, ಮೌಲಾರವರು ಗೂಳೂರು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಬೇರೆ ಮನೆ ಮಾಡಿಕೊಂಡು ವಾಸ ಮಾಡಿಕೊಂಡಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು,  ಮೊದಲನೇ ಮಹಮ್ಮದ ರಿಹಾನ್ 13 ವರ್ಷ ಮತ್ತು  ಎರಡನೇ ಮಹಮ್ಮದ್ ಅವೇಜ್ ಬಿನ್ ಮೌಲಾ 10 ವರ್ಷ ರವರಾಗಿರುತ್ತಾರೆ. ದಿನಾಂಕ:05.10.2021 ರಂದು ಸಂಜೆ 6.30 ಗಂಟೆ ಸಮಯದಲ್ಲಿ ನಾನು ಹಾಲಿಗೆಂದು ಮನೆಯಿಂದ ಬರುತ್ತಿದ್ದಾಗ ನನ್ನ ಮೊಮ್ಮಗಳಾದ ಸಾನಿಯಾ ರವರು ನನಗೆ ಪೋನ್ ಮಾಡಿ ಮಹಮ್ಮದ ರಿಹಾನ್ ಮತ್ತು  ಮಹಮ್ಮದ್ ಅವೇಜ್ ಗೂಳೂರಿನ ಷಾದಿಮಹಲ್ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿದೆ ಎಂದು ಹೇಳಿದ್ದು, ನಾನು ತಕ್ಷಣ ಷಾದಿಮಹಲ್ ರಸ್ತೆಯ ಬಳಿ ಹೋಗಿ ನೋಡಲಾಗಿ ಸ್ಥಳದಲ್ಲಿದ್ದ ನಮ್ಮ ಗ್ರಾಮದ ಅಂಗಡಿ ಸುಬಾನ್ ರವರು ನಿಮ್ಮ ಇಬ್ಬರು ಮೊಮ್ಮಕ್ಕಳನ್ನು ನಿನ್ನ ಮಗ ಮೌಲಾ ರವರು ಈಗ ಯಾವುದೋ ಆಟೋದಲ್ಲಿ ಚಿಕಿತ್ಸೆಗೆಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಂದು ತಿಳಿಸಿದರು. ನಂತರ ವಿಚಾರ ಮಾಡಿ ತಿಳಿಯಲಾಗಿ  ದಿನಾಂಕ:05.10.2021 ರಂದು ಸಂಜೆ 6.20 ಗಂಟೆ ಸಮಯದಲ್ಲಿ ನನ್ನ ಇಬ್ಬರು ಮೊಮ್ಮಕ್ಕಳಾದ ಮಹಮ್ಮದ ರಿಹಾನ್ ತನ್ನ ಸೈಕಲ್ ನಲ್ಲಿ ತನ್ನ ತಮ್ಮನಾದ ಮಹಮದ್ ಅವೇಜ್ ನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ತಿಮ್ಮಂಪಲ್ಲಿ ಗೂಳೂರು ರಸ್ತೆಯಲ್ಲಿ ಗೂಳೂರು ಗ್ರಾಮದ ಷಾದಿಮಹಲ್ ನ ಮುಂಭಾಗದ ರಸ್ತೆಯಲ್ಲಿ ಎಡಭಾಗದಲ್ಲಿ ಗೂಳೂರು ಗ್ರಾಮಕ್ಕೆ ಹೋಗಿ ಹಾಲು ತರಲು ಬರುತ್ತಿದ್ದಾಗ, ಹಿಂಬದಿಯಿಂದ ಕೆಎ-40-ಇಡಿ-3236 ನೊಂದಣಿ ಸಂಖ್ಯೆ ದ್ವಿಚಕ್ರವಾಹನ ಸ್ಕೂಟಿಯ ಸವಾರನಾದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ನವೀನ್ ಬಿನ್ ನಾಗು ರವರು  ದ್ವಿ ಚಕ್ರ ವಾಹನವನ್ನು ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ಸೈಕಲ್ ಗೆ  ಢಿಕ್ಕಿ ಹೊಡೆದಿದ್ದರ ಪರಿಣಾಮ ನನ್ನ ಮೊಮ್ಮಕ್ಕಳು ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿದ್ದು, ಮಹಮ್ಮದ್ ರಿಹಾನ್ ಗೆ ತಲೆಯ ಹಿಂಭಾಗ ರಕ್ತಗಾಯವಾಗಿದ್ದು, ಎದೆಗೆ, ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತೆ, ಅವೇಜ್ನ ಎಡಕಾಲಿಗೆ ತರಚಿದ ಗಾಯಗಳಾಗಿರುತ್ತೆಂದು, ಹಾಗೂ ಢಿಕ್ಕಿ ಹೊಡೆಸಿದ ದ್ವಿಚಕ್ರವಾಹನದ ಸವಾರನೂ ಸಹ ಅಪಘಾತದಿಂದ ವಾಹನ ಸಮೇತ ರಸ್ತೆಗೆ ಬಿದ್ದುಹೋಗಿದ್ದು ಆತನಿಗೂ ಸಹ ಮುಖದ ಮೇಲೆ ಗಾಯವಾಗಿದ್ದು, ನನ್ನ ಮೊಮ್ಮಕ್ಕಳಾದ ಮಹಮ್ಮದ್ ರಿಹಾನ್ ಮತ್ತು ಮಹಮ್ಮದ್ ಆವೇಜ್ ಗೆ ರವರಿಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಮಹಮ್ಮದ್ ರಿಹಾನ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮತ್ತು ಎಕ್ಸರೇ ಮಾಡಿಸಿ, ವೈದ್ಯರ ಸಲಹೆಯ ಮೇರೆಗೆ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುತ್ತಾರೆ. ನನ್ನ ಮೊಮ್ಮಕ್ಕಳಾದ ಮಹಮ್ಮದ್ ರಿಹಾನ್ ಮತ್ತು ಮಹಮ್ಮದ್ ಅವೇಜ್ ರವರು ರವರು ಸೈಕಲ್ ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ  ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಕೆಎ-40-ಇಡಿ-3236 ನೊಂದಣಿ ಸಂಖ್ಯೆ ದ್ವಿಚಕ್ರವಾಹನದ ಚಾಲಕನಾದ ನವೀನ್ ಬಿನ್ ನಾಗು ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 346/2021, ಕಲಂ. 279, 304(A)ಐಪಿಸಿ:-

     ದಿನಾಂಕ 06/10/2021 ರಂದು ಪಿರ್ಯಾದಿದಾರರಾದ ಸುಬ್ಬಾರೆಡ್ಡಿ ಎ. ಬಿನ್ ಲೇಟ್ ಆಧಿನಾರಾಯಣರೆಡ್ಡಿ     56 ವರ್ಷ, ವಕ್ಕಲಿಗರು, ಜಿರಾಯ್ತಿ, ಕೊಂಡರೆಡ್ಡಿಪಲ್ಲಿ ಗ್ರಾಮ, ತೋಳ್ಳಪಲ್ಲಿ ಗ್ರಾಮ ಪಂಚಾಯ್ತಿ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಇಂದುಕುರೋಳ್ಳಪಲ್ಲಿ ಗ್ರಾಮದ ನಮ್ಮ ಸಂಬಂದಿಕರಾದ ನಮ್ಮ ದೊಡ್ಡಪ್ಪನ ಮಗನಾಧ ರವಿಚಂದ್ರರೆಡ್ಡಿ ಬಿನ್ ಲೇಟ್ ಸೀತಾರಾಮರೆಡ್ಡಿ ರವರಿಗೆ ಮೊದಲು ಪೆದ್ದನಂಜಮ್ಮ ಎಂಬಾಕೆಯೊಂದಿಗೆ ಮದುವೆಯಾಗಿದ್ದು, ಅವರಿಗೆ  ಇಬ್ಬರು ಮಕ್ಕಳಾಗಿದ್ದು  1ನೇ ನಾಗಾರ್ಜುನ, 2ನೇ ಮಹೇಶ, ಆಗಿರುತ್ತಾರೆ, ಪೆದ್ದನಂಜಮ್ಮ ರವರು ಕಾಯಿಲೆಯಿಂದ ಮೃತಪಟ್ಟಿದ್ದು,ನಂತರ ಆಕೆಯ ತಂಗಿಯಾದ  ಚಿನ್ನನಂಜಮ್ಮ ರವರನ್ನು ಮದುವೆ ಮಾಡಿಕೊಂಡಿದ್ದು, ಅವರಿಗೆ ಲಕ್ಷ್ಮೀ ಎಂಬ ಹೆಣ್ಣು ಮಗು ಇರುತ್ತದೆ, ರವಿಚಂದ್ರರೆಡ್ಡಿ ರವರು ವ್ಯವಸಾಯ ವೃತ್ತಿ ಮಾಡಿಕೊಂಡಿದ್ದರು, ಇಬ್ಬರು ಗಂಡು ಮಕ್ಕಳು  ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ರವಿಚಂದ್ರರೆಡ್ಡಿ ರವರು ಮಗಳಾದ ಲಕ್ಷ್ಮೀ ರವರನ್ನು  ತಿಮ್ಮಂಪಲ್ಲಿ ಗ್ರಾಮದ ಕಸ್ತೂರಿ ಬಾ ವಸತಿ ಶಾಲೆಗೆ ಸೇರಿಸಿರುತ್ತಾರೆ. ದಿನಾಂಕ:04/10/2021 ರಂದು ಬೆಳಗ್ಗೆ ಸುಮಾರು 10;00 ಗಂಟೆ ಸಮಯದಲ್ಲಿ ರವಿಚಂದ್ರರೆಡ್ಡಿ ರವರಿಗೆ ತಿಮ್ಮಂಪಲ್ಲಿ ಶಾಲೆಯ ಬಳಿ ಅಪಘಾತವಾಗಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆಂದು  ಎಂದು ತಿಳಿಯಿತು, ನಾನು ಬಂದು ನೋಡಲಾಗಿ ವಿಚಾರ ನಿಜವಾಗಿತ್ತು ನಂತರ  ಅಪಘಾತದ ಬಗ್ಗೆ ವಿಚಾರಿಸಲಾಗಿ ರವಿಚಂದ್ರರೆಡ್ಡಿ ರವರು ಆತನ ಮಗಳಾದ ಲಕ್ಷ್ಮೀ ರವರನ್ನು ಶಾಲೆಗೆ ಬಿಡಲು ಆತನ ಬಾಬತ್ತು  ಕೆ ಎ 40 ಎಲ್ 2725 ನೊಂದಣಿ ಸಂಖ್ಯೆಯ ಹೀರೂ ಹೊಂಡಾ ಸ್ಲಂಡರ್ ಪ್ಲಸ್  ದ್ವಿ ಚಕ್ರ ವಾಹನದಲ್ಲಿ ಹೋಗಿ ಶಾಲೆಗೆ ಬಿಟ್ಟು ಶಾಲೆಯ ಮುಂದೆ ದ್ವಿ ಚಕ್ರ ವಾಹನದಲ್ಲಿ ನಿಂತಿದ್ದಾಗ, ತಿಮ್ಮಂಪಲ್ಲಿ ಕಡೆಯಿಂದ ಕೆ.ಎ-40-ಎಕ್ಸ್-8102 ಹೊಂಡಾ ಡ್ರೀಮ್ ಯುಗಾ ದ್ವಿ ಚಕ್ರ ವಾಹನವನ್ನು ಅದರ ಸವಾರ ತಿಮ್ಮಂಪಲ್ಲಿ ಕಡೆಯಿಂದ  ಅತಿವೇಗ ಮತ್ತು ಅಜಾಗರೂಕೆತಯಿಂದ ಚಾಲನೆ ಮಾಡಿಕೊಂಡು ಬಂದು ರವಿಚಂದ್ರ ರೆಡ್ಡಿ ರವರು ನಿಂತುಕೊಂಡಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ರವಿಚಂದ್ರರೆಡ್ಡಿ ರವರು ರಸ್ತೆಯ ಮೇಲೆ ಬಿದ್ದು ಹೋಗಿ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ತಕ್ಷಣ  ಸ್ಥಳಕ್ಕೆ ಬಂದಿದ್ದ ಶ್ರೀನಿವಾಸರೆಡ್ಡಿ ಬಿನ್ ಗಂಗುಲರೆಡ್ಡಿ ಮ್ಯಾಕಲೋಳ್ಳಪಲ್ಲಿ ಗ್ರಾಮ ರವರು ಯಾವುದೂ ವಾಹನದಲ್ಲಿ ಬಾಗೇಪಲ್ಲಿ  ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆಂದು ತಿಳಿಯಿತು. ನಂತರ ರವಿಚಂದ್ರರೆಡ್ಡಿ ರವರಿಗೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ  ವೈದ್ಯರ ಸಲಹೆ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಅಪಘಾತದಲ್ಲಿ ಉಂಟಾದ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:06/10/2021 ರಂದು ಮದ್ಯಾಹ್ನ ಸುಮಾರು 1:10  ಸಮಯದಲ್ಲಿ ಮೃತಪಟ್ಟಿರುತ್ತಾರೆ, ರವಿಚಂದ್ರರೆಡ್ಡಿ ರವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು,  ಅಪಘಾತವನ್ನುಂಟು ಮಾಡಿರುವ ಕೆ.ಎ-40-ಎಕ್ಸ್-8102 ಹೊಂಡಾ ಡ್ರೀಮ್ ಯುಗಾ ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೋರಿ ನೀಡಿದ ದೂರು.

 

3. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 347/2021, ಕಲಂ. 379 ಐಪಿಸಿ:-

     ದಿನಾಂಕ: 06/10/2021 ರಂದು ರಾತ್ರಿ 9-30 ಗಂಟೆಗೆ  ಶ್ರೀ.ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಅಸಲು ಪಂಚನಾಮೆ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ: 06-10-2021 ರಂದು ರಾತ್ರಿ 7:00  ಗಂಟೆ ಸಮಯದಲ್ಲಿ ನಾನು  ಗ್ರಾಮಗಸ್ತು ಮಾಡಿಕೊಂಡು ಗೂಳೂರು ಗ್ರಾಮ ಕಡೆಗೆ ಹೋಗುತ್ತಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ  ಗೂಳೂರು ಹೋಬಳಿ ಜಿ.ಚರ್ಲಾಪಲ್ಲಿ ಗ್ರಾಮದ ಕೆರೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ನಲ್ಲಿ  ಆಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಸರ್ಕಾರಿ ಜೀಪ್ ನಂ ಕೆ.ಎ-40-ಜಿ- 537 ರಲ್ಲಿ ಚಾಲಕ ಎ.ಹೆಚ್.ಸಿ-14 ವೆಂಕಟೇಶ್, ಸಿಬ್ಬಂದಿಯಾದ ಹೆಚ್.ಸಿ-212 ಶ್ರೀನಾಥ, ಮತ್ತು ಪಿಸಿ-176 ಶಶಿಕುಮಾರ ರವರೊಂದಿಗೆ, ಗೂಳೂರು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಬಂದ  ಜಿ.ಚೆರ್ಲಾಪಲ್ಲಿ ಗ್ರಾಮದ ಕೆರೆಯ ಬಳಿಗೆ ಸುಮಾರು 7-35 ಗಂಟೆಗೆ ಹೋಗಿ ನೋಡಲಾಗಿ, ಕೆರೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ಗೆ ಮರಳು ತುಂಬುತ್ತಿದ್ದು, ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ ಟ್ರಾಕ್ಟರ್ ಅನ್ನು ಅಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆ. ನಂತರ ಸ್ಥಳದಲ್ಲಿದ್ದ ಮರಳು ತುಂಬಿದ ಟ್ರಾಕ್ಟರ್ ಅನ್ನು  ಪರಿಶೀಲಿಸಲಾಗಿ ನೊಂದಣಿ ಸಂಖ್ಯೆಯ ಕೆಂಪು ಬಣ್ಣದ  MASSEY FERGUSON ಟ್ರಾಕ್ಟರ್ ಎಂಜಿನ್ ಆಗಿದ್ದು, ಟ್ರಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ ಟ್ರಾಲಿಯ ತುಂಬ ಮರಳು ತುಂಬಿರುತ್ತದೆ. ಸದರಿ ಟ್ರಾಕ್ಟರ್ ನಲ್ಲಿ ಸರ್ಕಾರಿ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ  ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು,   ಸ್ಥಳದಲ್ಲಿ  ಸಂಜೆ 7-45 ಗಂಟೆಯಿಂದ 8:45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮರಳು ತುಂಬಿದ ಟ್ರಾಕ್ಟರ್ ಅನ್ನು ವಶಕ್ಕೆ ತೆಗೆದುಕೊಂಡು ರಾತ್ರಿ 9-30 ಗಂಟೆಗೆ ಠಾಣೆಗೆ ಬಂದಿದ್ದು, ನೊಂದಣಿ ಸಂಖ್ಯೆಯ MASSEY FERGUSON ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚೇಳೂರು ಪೊಲೀಸ್ ಠಾಣೆ, ಮೊ.ಸಂ. 94/2021, ಕಲಂ. 15(A), 32(3)ಕೆ.ಇ. ಆಕ್ಟ್:-

     ದಿನಾಂಕ:06-10-2021 ರಂದು ಮಧ್ಯಾಹ್ನ 3-30 ಗಂಟೆಯಲ್ಲಿ ವೆಂಕಟರವಣಪ್ಪ ವಿ ಪಿಎಸ್ ಐ ಚೇಳೂರು ಪೊಲೀಸ್ ರವರು ಠಾಣೆಗೆ ಹಾಜರಾಗಿ ವರದಿಯ ಸಮೇತ ಸೂಚಿಸಿದ್ದೇನೆಂದರೆ, ಚೇಳೂರು ಬಸ್ ನಿಲ್ದಾಣದ ಬಳಿ ಗಸ್ತು ಕರ್ತವ್ಯದಲ್ಲಿದ್ದಾಗ ಗುಗ್ಗಿರ್ಲ್ಲಪಲ್ಲಿ ಗ್ರಾಮದ ವಾಸಿ ರಘುನಾಥರೆಡ್ಡಿ ರವರು ಚೇಳೂರು ಗ್ರಾಮದ ಆರ್.ಎಂ.ಸಿ ಯಾರ್ಡನ ಬಳಿ ಮುಂಭಾಗ ರಘು ಡಾಬ ಹೋಟಲ್ ಅನ್ನು ನಡೆಸುತ್ತಿದ್ದು ಸದರಿ ರಘು ಡಾಬ ಹೋಟಲ್ ನಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ನಾನು ಮತ್ತು ಸಿ ಹೆಚ್ ಸಿ-149 ಇನಾಯತ್ ವುಲ್ಲಾ ಆದ ನಾವಿಬ್ಬರೂ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ರಘುನಾಥರೆಡ್ಡಿ ಬಿನ್ ವೆಂಕಟರವಣಪ್ಪ ರವರು ರಘು ಡಾಬ ಹೋಟಲ್ ನಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ ಹೆಸರು ಮತ್ತು ವಿಳಾಸ ಕೇಳಲಾಗಿ ರಘುನಾಥರೆಡ್ಡಿ ಬಿನ್ ವೆಂಕಟರವಣಪ್ಪ 35 ವರ್ಷ, ವಕ್ಕಲಿಗ  ಜನಾಂಗ, ಹೋಟೆಲ್ ವ್ಯಾಪಾರ, ವಾಸ:ಗುಗ್ಗಿರ್ಲ್ಲಪಲ್ಲಿ ಗ್ರಾಮ,  ಪಿ.ಟಿ.ಎಂ ಮಂಡಲ, ತಂಬಾಲಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ ಆಂದ್ರ ಪ್ರದೇಶ್ ಎಂದು ತಿಳಿಸಿದ್ದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾಡ್ಸರ್್ ಚಿಯರ್ಸ್ ವಿಸ್ಕಿಯ 15 ಟೆಟ್ರಾ ಪ್ಯಾಕೆಟ್ಗಳು ಇದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 525/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಇದ್ದು  ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 2-20 ಗಂಟೆಯಿಂದ 3-20 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ರಘುನಾಥರೆಡ್ಡಿ ಬಿನ್ ವೆಂಕಟರವಣಪ್ಪ ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿದ್ದರ ಮೆರೆಗೆ ಎನ್.ಸಿ.ಆರ್ 105/2021 ರಂತೆ ದಾಖಲಿಸಿಕೊಂಡಿದ್ದು.   ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ, ಮೊ.ಸಂ. 188/2021, ಕಲಂ. 457, 380 ಐಪಿಸಿ:-

     ದಿನಾಂಕ: 06/10/2021 ರಂದು ಪಿರ್ಯಾದಿದಾರರಾದ ಎಲ್. ವೆಂಕಟರೆಡ್ಡಿ ರಾಜೀವ ನಗರ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನ್ನ ಬಾಮೈದನಾದ ರವಿ.ಕೆ.ಎನ್ ಬಿನ್ ನಾರಾಯಣಸ್ವಾಮಿ, ರವರು ಗುರ್ರಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಸುಮಾರು ಒಂದು ವರ್ಷದಿಂದ ಚಿಂತಾಮಣಿ ನಗರದ ರಾಜೀವ್ ನಗರದಲ್ಲಿರುವ ಮಂಜುನಾಥ ಬಿನ್ ಶ್ರೀರಾಮರೆಡ್ಡಿ ರವರ ಬಾಬತ್ತು ಮನೆಯ ಕೆಳಗಿನ ಅಂತಸ್ತಿನಲ್ಲಿ ಬಾಡಿಗೆಗೆ ಕುಟುಂಬ ಸಮೇತರಾಗಿ ವಾಸವಾಗಿರುತ್ತಾರೆ ಹೀಗಿರುವಾಗ ದಿನಾಂಕ: 05/10/2021 ರಂದು ಬೆಳಿಗ್ಗೆ 11:00 ಗಂಟೆ ಸಮಯದಲ್ಲಿ ಕುಟುಂಬ ಸಮೇತರಾಗಿ ಶ್ರೀ ಸಿಗಂದೂರು ದೇವರ ದರ್ಶನಕ್ಕೆ ಹೋಗಿದ್ದು ಹೋಗುವಾಗ ನನಗೆ ಮನೆ ಕಡೆ ನೋಡಿಕೊಳ್ಳುವಂತೆ ತಿಳಿಸಿದ್ದರು ದಿನಾಂಕ: 06/10/2021 ರಂದು ಬೆಳಿಗ್ಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಬಾವಮೈದ ಕೆ ಎನ್ ರವಿ ವಾಸವಾಗಿರುವ ಮನೆಯಲ್ಲಿ ನೆನ್ನೆ ರಾತ್ರಿ ಯಾರೂ ಕಳ್ಳರು ಮನೆಯ ಬಾಗಿಲನ್ನು ಮುರಿದು ಮನೆಯ ರೂಂ ಗಳಲ್ಲಿ ಇದ್ದ ಕರ್ಬೋರ್ಡ್ ಮತ್ತು ಬೀರುಗಳನ್ನು ಮೀಟಿ ಅದರಲ್ಲಿದ್ದ ಬೆಳೆ ಬಾಳುವ ಬಂಗಾರದ ಮತ್ತು ಬೆಳ್ಳಿ ಅಭರಣಗಳನ್ನು ಕಳ್ಳತನ ಮಾಡಿರುತ್ತಾರೆ ಮನೆ ಮಾಲೀಕರಾದ ಮಂಜುನಾಥ್ ಎಂ.ಎಸ್ ಕುಟುಂಬದವರು ನನಗೆ ತಿಳಿಸಿದ್ದು ಮನೆಯ ಬಳಿ ಹೋಗಿ ನೋಡಲಾಗಿ ನಿಜವಾಗಿರುತ್ತೆ ನಂತರ ನನ್ನ ಬಾವಮೈದನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಮನೆಯಲ್ಲಿದ್ದ ಬೆಳ್ಳಿ, ಬಂಗಾರ, ಹಣದ ಬಗ್ಗೆ ವಿಚಾರಿಸಿದಾಗ ಚಿಕ್ಕಮಕ್ಕಳ 02 ಕತ್ತಿನ ಸರಗಳು-15 ಗ್ರಾಂ. ಚಿಕ್ಕ ಮಕ್ಕಳ ಉಂಗುರಗಳು-06 ಗ್ರಾಂ, ಕಿವಿ ಓಲೆ 3 ಜೊತೆ 12 ಗ್ರಾಂ, ಜುಮುಕಿ ಒಂದು ಜೊತೆ 7 ಗ್ರಾಂ, ಮತ್ತು ಬೆಳ್ಳಿ ಚೆಂಬು 300 ಗ್ರಾಂ ಇದ್ದಾಗಿ ತಿಳಿಸಿದ್ದರು. ಈ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ:05/10/2021 ರಿಂದ 06/10/2021 ಬೆಳಗಿನ ಜಾವದ ಮಧ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ವಸ್ತುಗಳ ಒಟ್ಟು ಬೆಲೆ 1,50,000/- ಅಗಿರುತ್ತೇ ಆದ್ದರಿಂದ ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಕಳ್ಳನ್ನು ಮತ್ತು ಮಾಲುಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 108/2021, ಕಲಂ. 15(A), 32(3)ಕೆ.ಇ. ಆಕ್ಟ್:-

     ದಿನಾಂಕ 06/10/2021 ರಂದು ಮಧ್ಯಾಹ್ನ 2-00 ಗಂಟೆಗೆ ಪಿ.ಎಸ್ಐ ರವರು ಮಾಲು, ಮಹಜರ್ ಹಾಗೂ ಆರೋಪಿತೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:06/10/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಯರಮರೆಡ್ಡಿಹಳ್ಳಿ ಗ್ರಾಮದಲ್ಲಿರುವ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ ರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ ಸದರಿಯವರು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ 13 ನೇ ಗ್ರಾಮಗಸ್ತಿನ ಸಿಬ್ಬಂದಿಯಾದ ಸಿಪಿಸಿ-568 ರವಿಕುಮಾರ್ ರವರು ಖಚಿತ ಮಾಹಿತಿ ನೀಡಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ಪಿ.ಎಸ್.ಐ ಆದ ತಾನು ಸಿಬ್ಬಂದಿಯಾದ ಮಪಿಸಿ-167 ಮಂಜುಳಾ, ಸಿಪಿಸಿ-568 ರವಿಕುಮಾರ್ ರವರೊಂದಿಗೆ ಕೆಎ-40-ಜಿ-539 ಸರ್ಕಾರಿ ವಾಹನದಲ್ಲಿ ಯರಮರೆಡ್ಡಿಹಳ್ಳಿ ಗ್ರಾಮಕ್ಕೆ ಹೋಗಿ  ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ತಾವು ನಡೆದುಕೊಂಡು ಯರಮರೆಡ್ಡಿಹಳ್ಳಿ ಗ್ರಾಮದಲ್ಲಿರುವ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ ರವರ ಚಿಲ್ಲರೆ ಅಂಗಡಿ ಮುಂದೆ ಹೋಗಿ ನೋಡಲಾಗಿ ಅಂಗಡಿ ಮಾಲೀಕಳಾದ ರಾಮರತ್ನಮ್ಮ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿ ಮಾಲೀಕಳನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ, 45 ವರ್ಷ, ವಕ್ಕಲಿಗ ಜನಾಂಗ, ವಾಸ ಯರಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದರು.  ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ  ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ಗಳು ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY  ಮಧ್ಯದ 11  ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 11 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 386/-ರೂ ಆಗಿರುತ್ತೆ. ಮದ್ಯ ಒಟ್ಟು 990 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ರಾಮಲಕ್ಷ್ಮಮ್ಮ ರವರನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12-30 ರಿಂದ 13-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲು, ಮಹಜರ್ ಹಾಗೂ ರಾಮರತ್ನಮ್ಮ ರವರನ್ನು  ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ 108/2021 ಕಲಂ 15(ಎ).32(3) ಕೆ.ಇ. ಆಕ್ಟ್ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.

 

7.  ನಂದಿ ಗಿರಿಧಾಮ ಪೊಲೀಸ್ ಠಾಣೆ, ಮೊ.ಸಂ. 123/2021, ಕಲಂ. 427, 380, 457 ಐಪಿಸಿ:-

     ದಿನಾಂಕ:06-10-2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಪಿ.ಲಲಿತ ಕೋಂ ಪಿ ಬಿ ಶ್ರೀನಿವಾಸ ರೆಡ್ಡಿ, 35 ವರ್ಷ, ವಕ್ಕಲಿಗರು, ಅರುಣೋದಯ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಡೈರೆಕ್ಟರ್ , ಅರಸನಹಳ್ಳಿ  ರಸ್ತೆ ತುಮಕಲಹಳ್ಳಿ, ವಾಸ: ನಂ 4 ಮತ್ತು 5 ಮಾರುತಿನಗರ, ಕೋಗಿಲು ಕ್ರಾಸ್, 1ನೇ ಮೇನ್ , 4ನೇ ಕ್ರಾಸು, ಯಲಹಂಕ ಬೆಂಗಳೂರು  ರವರು ಠಾಣಿಗೆ ಹಾಜರಾಗಿ ನೀಡಿದ ದೂರಿನ ಸಾರಾಶಂವೇನಂದರೆ, ತಾನು ಸುಮಾರು 6, 7 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ, ಅರಸನಹಳ್ಳಿ ರಸ್ತೆ ತುಮಕಲಹಳ್ಳಿಯ ಅರಸನಹಳ್ಳಿ ಗ್ರಾಮದ ಕೃಷ್ಣಪ್ಪ ನವರ ಜಮೀನಿನ ಬಳಿ ಅರುಣೋದಯ ಸೀಡ್ಸ್ ಕಂಪನಿ ನಿರ್ಮಾಣ ಮಾಡಿದ್ದು ಅಲ್ಲಿ ನಾವು ತರಕಾರಿ ಬೀಜಗಳನ್ನು ಸಂಸ್ಕರಣ ಮಾಡಿ ಹಾಗೂ ದವಸ ದಾನ್ಯಗಳು ಸೇರಿ ಬಿತ್ತನೆ  ಬೀಜಗಳನ್ನು  ಸಂಸ್ಕರಣೆ ಮಾಡುತ್ತಿರುತ್ತೇವೆ. ನಮ್ಮ ಘಟಕದಲ್ಲಿ ಸುಮಾರು 7,8 ಜನ ಕೆಲಸ ಮಾಡುತ್ತಿರುತ್ತಾರೆ. ನಾವು ಸದರಿ ಗೋದಾಮಿನ ಮುಂಭಾಗ ಆಫೀಸ್ ಇದ್ದು ಅದರ ಮೇಲ್ಭಾಗ ಸಂಸಾರ ಇರುತ್ತೇವೆ. ಪ್ರತಿದಿನ ನಾವು ಕೆಲಸ ಮುಗಿದ ಮೇಲೆ ಗೋದಾಮು ಹಾಗೂ ಆಫೀಸು ಎಲ್ಲಕ್ಕೂ ಬೀಗಗಳನ್ನು ಹಾಕಿಕೊಂಡು ಕೆಲವು ದಿನ ಆಪೀಸಿನ ಮೇಲ್ಭಾಗದ ಮನೆಯಲ್ಲಿ ಹಾಗೂ ಕೆಲವು ದಿನ ಯಲಹಂಕದ ನಮ್ಮ ಮನೆಗೆ ಹೋಗಿ ಬರುತ್ತಿರುತ್ತೇವೆ. ದಿನಾಂಕ:03-10-2021 ರಂದು ಎಂದಿನಂತೆ ರಾತ್ರಿ 9-25 ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ಗೋಡಾನ್ ಮತ್ತು ಆಫೀಸಿನ ಶೆಟ್ಟರ್ ಬೀಗಗಳನ್ನು ಹಾಗೂ ಬಾಗಿಲಿನ ಬೀಗಗಳನ್ನು ಹಾಕಿಕೊಂಡು ಯಲಹಂಕದ ಮನೆಗೆ ಹೋದೆನು ನಂತರ ದಿನಾಂಕ: 04-10-2021 ರಂದು ಬೆಳಿಗ್ಗೆ ಸುಮಾರು 6-00 ಗಂಟೆಗೆ ನಾವು ಯಲಹಂಕದ ಮನೆಯಲ್ಲಿದ್ದಾಗ ನಮಗೆ ಪರಿಚಿತರಾದ ಅರಸನಹಳ್ಳಿ ಗ್ರಾಮದ ಉಷಾ ಕೋಂ ಸೀನ ರವರು ವಾಕಿಂಗ್ ಬಂದಾಗ ನಮ್ಮ ಕಛೇರಿಯ ಶೆಟ್ಟರ್ ಬಾಗಿಲು ಅರ್ಧ ತೆರೆದಿರುವುದನ್ನು ನೋಡಿ ನಮಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದು ನಾನು ತಕ್ಷಣ ಯಲಹಂಕದಿಂದ ಬಸ್ಸಿನಲ್ಲಿ ಬಂದು ನಮ್ಮ ಕಛೇರಿಯ ಬಳಿಗೆ  8-30 ಗಂಟೆಗೆ ಹೋಗಿ ನೋಡಲಾಗಿ ನಮ್ಮ ಕಛೇರಿಯ ಶೆಟ್ಟರ್ ಬಾಗಿಲನ್ನು ಮೇಲಕ್ಕೆ ಎತ್ತಿ ಯಾರೋ ದುರಾತ್ಮರು ಒಳಕ್ಕೆ ಹೋಗಿ ಒಳಗೆ ಇದ್ದ ಲ್ಯಾಪ್ ಟಾಪ್ , ಕಂಪ್ಯೂಟರ್ ಸಿಸ್ಟಮ್ , ಯುಪಿಎಸ್, ಎರಡು ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಹಾಗೂ ಕಛೇರಿಯಲ್ಲಿ ಇಟ್ಟಿದ್ದ ಜರ್ಮಿನೇಶನ್ ಸೀಡ್ಸ್ ಮತ್ತು ಪೌಂಡೇಶನ್ ಸೀಡ್ಸ್ ನ ಪಾಕೇಟ್ ಗಳನ್ನು ಎಲ್ಲಂದರಲ್ಲಿ ಎತ್ತಿ ಬಿಸಾಡಿ ಹೋಗಿರುತ್ತಾರೆ. ತಮ್ಮ ಕಛೇರಿಯಲ್ಲಿದ್ದ ಕಳ್ಳತನ ಮಾಡಿಕೊಂಡಿರುವ ವಸ್ತುಗಳು ಸುಮಾರು 30-40 ಸಾವಿರ ರೂಗಳು ಬಾಳುವುದಾಗಿದ್ದು ಚೆಲ್ಲಾ ಪಿಲ್ಲಿಯಾಗಿ ಚೆಲ್ಲಿರುವ ಸೀಡ್ಸ್ ಬ್ಯಾಗುಗಳ ಬೆಲಯನ್ನು ನೋಡಿ ನಂತರ ಬಂದು ತಿಳಿಸುತ್ತೇನೆ. ಮೇಲ್ಕಂಡಂತೆ ನಮ್ಮ ಅರುಣೋದಯ ಕಂಪನಿಯ ಕಛೇರಿಯ ಶೆಟ್ಟರ್ ಬಾಗಿಲನ್ನು ಹಾಳು ಮಾಡಿ ಹಾಗೂ ಹೊಳಗಿನ ಅಲ್ಯೂಮಿನಿಯಂ ಬಾಗಿಲನ್ನು ಜಖಂಗೊಳಿಸಿ ಒಳಗೆ ನುಗ್ಗಿ ನಮ್ಮ ಕಂಪನಿಯ ಕಛೇರಿಯಲ್ಲಿನ ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ನಮ್ಮ ಕಂಪನಿಯ ನಿರ್ದಶಕರುಗಳಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 07-10-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080