ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.342/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ: 04/10/2021 ರಂದು ರಾತ್ರಿ 9-00 ಗಂಟೆಗೆ ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 04/10/2021 ರಂದು ರಾತ್ರಿ 7-40 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್, 3 ನೇ ವಾರ್ಡ, ಗೂಳೂರು ರಸ್ತೆಯಲ್ಲಿರುವ ಟೀ ಅಂಗಡಿ ಬಳಿ  ಯಾರೋ ಆಸಾಮಿಗಳು ಈ ದಿನ ಚೆನೈ ಸೂಪರ್ ಕಿಂಗ್ಸ  ಮತ್ತು ಡೆಲ್ಲಿ ಕ್ಯಾಪಿಟಲ್ಸ ನಡುವೆ ಮ್ಯಾಚ್ ನಡೆಯುತ್ತಿದ್ದು  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು  ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ-178 ನರಸಿಂಹಮೂರ್ತಿ, ಪಿಸಿ-237 ವಿನಯ್ ಕುಮಾರ , ಜೀಪ್ ಚಾಲಕ ಎ.ಹೆಚ್.ಸಿ- ವೆಂಕಟೇಶ್ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-537 ರಲ್ಲಿ ಹೊರಟು ಬಾಗೆಪಲ್ಲಿ ಟೌನ್, ಗೂಳೂರು ಸರ್ಕಲ್  ಬಳಿ ಇದ್ದ  ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಗೂಳೂರು ರಸ್ತೆಯಲ್ಲಿರುವ ಟೀ ಅಂಗಡಿಯ  ಬಳಿ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು  ಚೆನೈ ಸೂಪರ್ ಕಿಂಗ್ಸ  ತಂಡ ಗೆಲ್ಲುತ್ತದೆ 100/- ರೂ ಎಂದು ಒಬ್ಬನು,  ಡೆಲ್ಲಿ ಕ್ಯಾಪಿಟಲ್ಸ ತಂಡ ಗೆಲ್ಲುತ್ತದೆ ಎಂದು ಹಣವನ್ನು ಪಣವಾಗಿ ಕಟ್ಟಿಕೊಂಡು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ  ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಅಮಾನುಲ್ಲಾ ಬಿನ್ ಲೇಟ್ ಅಬ್ದುಲ್ ರಹೇಮಾನ್ ಸಾಬ್, 45 ವರ್ಷ, ಹೋಟೇಲ್ ನಲ್ಲ ಕೆಲಸ, ವಾಶ ಬಿಸಿಎಂ ಹಾಸ್ಟೇಲ್ ಬಳಿ, 3 ನೇ ವಾರ್ಡ, ಬಾಗೇಪಲ್ಲಿ ಟೌನ್-ಪೋನ್ ನಂ 6362116128, 2] ಫಯಾಜ್ ಬಿನ್ ಅಬ್ದುಲ್ ಸಾಬ್, 35 ವರ್ಷ, ಹೋಟೇಲ್ ನಲ್ಲಿ ಕೆಲಸ, ವಾಸ ಪಾತಬಾಗೇಪಲ್ಲಿ ರಸ್ತೆ, 3 ನೇ ವಾರ್ಡ, ಬಾಗೇಪಲ್ಲಿ ಟೌನ್ ಪೋನ್ 9611888534 ಎಂದು ತಿಳಿಸಿರುತ್ತಾರೆ,    ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ  ಈಗಾಗಲೇ ಪಣಕ್ಕೆ ಕಟ್ಟಿದ್ದ 500/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-10 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು, ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-302/2021 ರಂತೆ ದಾಖಲಿಸಿಕೊಂಡಿರುತ್ತೆ.:05-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.343/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 05/10/2021 ರಂದು ರಾತ್ರಿ 8-45 ಗಂಟೆಗೆ ನಾಗರಾಜ್. ಪೊಲೀಸ್ ಇನ್ಸ್ ಪೆಕ್ಟರ್, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೆನೆಂದರೆ ಈ ದಿನ ದಿನಾಂಕ; 05-10-2021 ರಂದು  ಸಂಜೆ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ರಾತ್ರಿ 7-00 ಗಂಟೆಯಲ್ಲಿ ಗೂಳೂರು ಗ್ರಾಮದ ಬಳಿ ಇರುವಾಗ ಯಾರೋ ಆಸಾಮಿಯು ಗೂಳೂರು ಹೋಬಳಿ, ನಂಜರೆಡ್ಡಿಪಲ್ಲಿ ಗ್ರಾಮದಲ್ಲಿ ಯಾರೋ ಆಸಾಮಿಯು  ಚಿಲ್ಲರೆ ಅಂಗಡಿ ಬಳಿ  ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು  ಮತ್ತು ಸಿಬ್ಬಂದಿಯವರಾದ  ಹೆಚ್.ಸಿ-257 ನರಸಿಂಹಮೂರ್ತಿ, ಹೆಚ್.ಸಿ-156  ನಟರಾಜ್ ಹಾಗೂ ಜೀಪ್ ಚಾಲಕ  ಎ.ಹೆಚ್.ಸಿ-57 ನೂರ್ ಬಾಷಾ  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-1444 ವಾಹನದಲ್ಲಿ ಹೊರಟು ಗೂಳೂರು ಬಸ್ ನಿಲ್ದಾಣದ ಬಳಿ   ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ದಾಳಿ  ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಾವು ಮತ್ತು ಪಂಚರು ಗೂಳೂರು ಹೋಬಳಿ ನಂಜರೆಡ್ಡಿಪಲ್ಲಿ ಗ್ರಾಮದ ಬಳಿ ಜೀಪಿನಲ್ಲಿ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೆ  ಮುಂಭಾಗದಲ್ಲಿದ್ದವನು ಓಡಿ ಹೋಗಲು ಪ್ರಯತ್ನಿಸಿದವನನ್ನು ನಾವು ಮತ್ತು ಪಂಚರು  ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ತಿಳಿಯಲಾಗಿ ನರೇಶ ಬಿನ್ ಲೇಟ್ ನರಸಿಂಹಪ್ಪ, 34 ವರ್ಷ, ಬಲಜಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಂಜರೆಡ್ಡಿಪಲ್ಲಿ  ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮದಲ್ಲಿ  ಸ್ಥಳದಲ್ಲಿ ಪರಿಶೀಲಿಸಲಾಗಿ 1] 90 ಎಂ ಎಲ್  HAYWARDS CHEERS WHISKY ಯ 12  ಟೆಟ್ರಾ ಪಾಕೇಟ್ ಗಳಿದ್ದು, 2] 90ML ನ 3 ಖಾಲಿ ಟೆಟ್ರಾ ಪಾಕೇಟ್ ಗಳು, 3] ಮದ್ಯ ಕುಡಿದಿರುವ ಖಾಲಿ 2 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು    ಒಟ್ಟು 1 ಲೀಟರ್ 080 ಎಂ.ಎಲ್ ಆಗಿದ್ದು, ಇದರ ಬೆಲೆ 421/- ರೂಗಳಾಗಿರುತ್ತೆ,  ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 8-45 ಗಂಟೆಗೆ ಠಾಣೆಗೆ ಹಾಜರಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿ ಆರ್ ನಂ 304/2021 ರಂತೆ ದಾಖಲಿಸಿಕೊಂಡಿರುತ್ತದೆ.ದಿನಾಂಕ :06-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.344/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 06/10/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಹುಸೇನ್ ಟಿ ಎಸ್ ಬಿನ್ ಸಾಬೂಸಾಬಿ, 39ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ವಾಸ: 6ನೇ ವಾರ್ಡ್ ಬಾಗೇಪಲ್ಲಿ ಪುರ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಕೆ ಎ 67 ಇ 3800 ನೋಂದಣಿ ಸಂಖ್ಯೆಯ  ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಹೊಂದಿರುತ್ತೇನೆ. ಸದರಿ ವಾಹನವನ್ನು ದಿನಾಂಕ: 04/10/2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಮ್ಮ ಮನೆ ಮುಂದೆ ನಿಲ್ಲಿಸಿರುತ್ತೇನೆ. ನಾನು ನಂತರ ದಿನಾಂಕ:05/10/2021 ರಂದು ಬೆಳಿಗ್ಗೆ 5-00 ಗಂಟೆಗೆ ಎದ್ದು ನೋಡಿದಾಗ ನನ್ನ ಬಾಬತ್ತು ಸುಮಾರು 40000/- ರೂ ಬೆಲೆ ಬಾಳುವ ನನ್ನ ದ್ವಿಚಕ್ರ ವಾಹನ ಕಳುವು ಆಗಿರುತ್ತದೆ ಎಂದು ತಿಳಿದಿರುತ್ತದೆ ಅಲ್ಲಲ್ಲಿ ಹುಡುಕಿದರೂ ನನ್ನ ದ್ವಿಚಕ್ರ ವಾಹನ ಸಿಕ್ಕಿರುವುದಿಲ್ಲ ಅಕ್ಕ-ಪಕ್ಕದವರನ್ನು ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕದಿರುವುದರಿಂದ ಆದುದರಿಂದ ತಾವು ದಯೆ ತೋರಿ ನನ್ನ ದ್ವಿಚಕ್ರ ವಾಹನ ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.175/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 05-10-2021 ರಂದು ಸಂಜೆ 5-00 ಗಂಟೆಯಲ್ಲಿ  ಚಿಕ್ಕಬಳ್ಳಾಪುರ  ಜಿಲ್ಲಾ ಸರ್ಕಾರಿ  ಆಸ್ಪತ್ರೆಯಲ್ಲಿ  ಗಾಯಾಳು ರಘು ಬಿನ್ ನಾಗರಾಜ 35ವರ್ಷ ಬೆಸ್ತರು ಮೀನಿನ ವ್ಯಾಪಾರ ಚಾಮರಾಜಪೇಟೆ ಚಿಕ್ಕಬಳ್ಳಾಪುರ ಟೌನ್ ರವರ ಹೇಳೀಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ತಾನು ಕಂದವಾರ ಕೆರೆಯಲ್ಲಿ ಮೀನುಗಳನ್ನು ಹಿಡಿಯಲು ಹರಾಜಿನಲ್ಲಿ ಪಡೆದುಕೊಂಡು ಮೀನುಗಳನ್ನು ಹಿಡಿದುಕೊಂಡು ಮಾರಾಟ ಮಾಡಿ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 05-10-2021 ರಂದು ಮದ್ಯಾಹ್ನ ಸುಮಾರು 3-15 ಗಂಟೆಯಲ್ಲಿ  ತಾನು ಮತ್ತು ತನ್ನ ಸ್ನೇಹಿತರಾದ ದೀಪಕ್ ಕುಮಾರ್ ಬಿನ್ ಮುನಿರಾಜು, ಮಧು ಬಿನ್ ಮುನಿಯಪ್ಪ  ಗಂಗರಾಜು  ಬಿನ್ ಶ್ರೀನಿವಾಸ್  ರವರುಗಳು ಕೆರೆಯ  ಪಶ್ಚಿಮದ ಕಡೆ  ಹೋಗಿ ನೋಡಲಾಗಿ ಕಂದವಾರ ಶಿವ ಮತ್ತು ಬಂಡಹಳ್ಳಿ ಗ್ರಾಮದ ವೆಂಕಟೇಶ  ಮತ್ತು  ಇತರರು  ಕೆರೆಗೆ ಅಡ್ಡವಾಗಿ  ಹಾಕಿಸಿದ್ದ  ಗ್ರಿಲ್ ಮೆಸ್ ನ್ನು  ಕಿತ್ತುಹಾಕಿ  ಮೀನುಗಳನ್ನು  ಹಿಡಿಯುತ್ತಿದ್ದರು. ಆಗ ತಾನು ನೀವು ಯಾಕೆ ಇಲ್ಲಿ  ಮೀನು ಹಿಡಿಯುತ್ತಿರುವುದು  ಎಂತ ಕೇಳಿದ್ದಕ್ಕೆ  ಅವರು ಕೆರೆ ಮಾತ್ರ ನಿಮಗೆ ಸೇರಿದ್ದು  ಕೆರೆ ಪಕ್ಕದಲ್ಲಿ ಕಾಲುವೆ ನಮಗೆ ಸೇರಿದ್ದು ಎಂತ ತನ್ನ ಮೇಲೆ ಜಗಳ ತೆಗೆದು  ಬಂಡಹಳ್ಳಿ ಗ್ರಾಮದ ವೆಂಕಟೇಶ  ಆತನ ಕೈಯಲ್ಲಿದ್ದ   ಮಚ್ಚಿನಿಂದ ನನ್ನ ತಲೆಗೆ   ಹೊಡೆದು  ರಕ್ತಗಾಯ ಪಡಿಸಿದನು.   ಕಂದವಾರ ಶಿವ ಆತನ ಕೈಯಲ್ಲಿದ್ದ  ದೊಣ್ಣೆಯಿಂದ  ತನ್ನ ಎರಡು ಕೈಗಳಿಗೆ  ಹೊಡೆದು  ಮೂಗೇಟುಗಳುಂಟು ಮಾಡಿದನು. ಇವರ ಜೊತೆಯಲ್ಲಿದ್ದ ಮತ್ತೊಬ್ಬ ಆಸಾಮಿಯು ಆತನ ಕೈಯಲ್ಲಿದ್ದ ಚಾಕುವಿನಿಂದ  ಎಡಕಾಲಿಗೆ ಹೊಡೆದು  ರಕ್ತಗಾಯ ಪಡಿಸಿದನು.  ಬಿಡಿಸಲು  ಬಂದ ದೀಪಕ್ ರವರಿಗೂ ಸಹ ಮೇಲ್ಕಂಡವರು ದೊಣ್ಣೆಗಳಿಂದ ತಲೆಗೆ,. ಬಲಮೊಣಕಾಲಿಗೆ  ಮತ್ತು ಮುಖದ ಮೇಲೆ ಹೊಡೆದು  ಮೂಗೇಟುಗಳುಂಟು ಮಾಡಿರುತ್ತಾರೆ.  ಎಲ್ಲರೂ ನಮ್ಮನ್ನು ಅವಾಚ್ಯ ಶಬ್ದಗಳಿಂದ  ಬೈದು ನಮ್ಮ ತಂಟೆಗೆ ಬಂದರೆ ಪ್ರಾಣ ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ  ತನ್ನ  ಜೊತೆಯಲ್ಲಿದ್ದವರು ತನ್ನನ್ನು ದ್ವಿ ಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರಕ್ಕೆ   ಕರೆದುಕೊಂಡು ಬಂದು ಸರ್ಕಾರಿ ಆಸ್ಪತ್ರೆಯಲ್ಲಿ  ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ  ಮಲ್ಕಂಡವರ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯನ್ನು  ಪಡೆದುಕೊಂಡು ಸಂಜೆ 5 -45 ಗಂಟೆಗೆ  ಠಾಣೆಗೆ ವಾಪಸ್ಸು ಬಂದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ. ಆದ್ದರಿಂದ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ; 05-10-2021 ಮದ್ಯಾಹ್ನ 1.45 ಗಂಟೆಗೆ ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ-195 ರವರು ಠಾಣೆಗೆ ಹಾಜರಾಗಿ ಕೊಟ್ಟ ಮಾಲು, ಆರೋಪಿ, ಅಸಲು ಪಂಚನಾಮೆ, ಹಾಗೂ ವರದಿಯ ದೂರನ್ನು ಪಡೆದುಕೊಂಡಿದ್ದರ ದೂರಿನ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿಬಿ/ಸಿ.ಇಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ-195 ಹೆಚ್.ಮುರಳೀಧರ್ ಆದ ತಾನು ಮತ್ತು ಸಿ.ಪಿ.ಸಿ-142 ಅಶೋಕ ರವರು ಈ ದಿನ ದಿನಾಂಕ; 05-10-2021 ರಂದು ಠಾಣೆಯ ಸಿ.ಪಿ.ಐ ಶ್ರೀ ರಾಜಣ್ಣ ರವರ ಆದೇಶದಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಗಳ ಮಾಹಿತಿಯನ್ನು ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ, ಎಂ.ಜಿ ರಸ್ತೆ, ಮತ್ತು ಎಪಿಎಂಸಿ ಮಾರುಕಟ್ಟೆ ಕಡೆ ಗಸ್ತು ಮಾಡಿಕೊಂಡು ಬೆಳಗ್ಗೆ 11.00 ಗಂಟೆಗೆ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಗಸ್ತಿನಲ್ಲಿದ್ದಾಗ ಎ.ಪಿ.ಎಂ.ಸಿ ಮಾರುಕಟ್ಟೆಯ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಯಾರೋ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಬಂದ ಮಾಹಿತಿಯನ್ನು ತಿಳಿಸಿ, ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಬೆಳಗ್ಗೆ 11.15 ಗಂಟೆಗೆ ಹೋಗಿ ಮರೆಯಲ್ಲಿ ನೋಡಲಾಗಿ ಯಾರೋ ಕೆಲವರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದು, ನಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ಕೇಳಲಾಗಿ ತನ್ನ ಹೆಸರು ಮುದ್ದುಕೃಷ್ಣ ಬಿನ್ ಚಿಕ್ಕಮುನಿಶಾಮಪ್ಪ, 50 ವರ್ಷ, ವಕ್ಕಲಿಗರು, ವ್ಯವಸಾಯ,ವಾಸ; ಗಂಟಿಗಾನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ಸದರಿ ಸ್ಥಳದಲ್ಲಿ 90 ಎಂ. ಎಲ್ ಮದ್ಯ ತುಂಬಿರುವ 15 Haywards Cheers Whisky Tetra pocket ಗಳು ಒಂದು ಖಾಲಿ ವಾಟರ್ ಬಾಟೆಲ್, 02 ಖಾಲಿಯಾಗಿರುವ 90 ಎಂ.ಎಲ್ Haywards Cheers  Whisky tetra pockets ಗಳಿರುತ್ತೆ. ಮದ್ಯ ತುಂಬಿರುವ ಪ್ರತಿಯೊಂದರ ಬೆಲೆ 35.13/- ರೂಗಳಂತೆ ಒಟ್ಟು 527/- ರೂಗಳಾಗಿದ್ದು, ಒಟ್ಟು ಮದ್ಯವು 01 ಲೀಟರ್ 350 ಎಂ.ಎಲ್ ಆಗಿರುತ್ತೆ. ನಂತರ ಮೇಲ್ಕಂಡ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಆರೋಪಿ, ಮಾಲುಗಳು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯ ದೂರನ್ನು ಪಡೆದುಕೊಂಡಿದ್ದರ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.187/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ: 05/10/2021 ರಂದು ಘನ ನ್ಯಾಯಾಲಯದಿಂದ ಎನ್.ಸಿ.ಆರ್ ನಂ: 146/2021 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯದ ಅನುಮತಿಯನ್ನು ಪಡೆದು  ಆದೇಶ ಪ್ರತಿಯನ್ನು ಹಾಜರುಪಡಿಸಿದ ಸಾರಾಂಶವೆನೆಂದರೆ ದಿನಾಂಕ:04/10/2021 ರಂದು ಪಿರ್ಯಾದಿದಾರರಾದ ರಂಗಶಾಮಯ್ಯ. ವೈ. ಆರ್ ರವರು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 81 ವಿಶ್ವನಾಥ ಹಾಗೂ ಪಿಸಿ 539 ರವೀಂದ್ರ ರವರು ಚಿಂತಾಮಣಿ ನಗರದಲ್ಲಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಕೆಎ-40, ಜಿ-3699 ಸರ್ಕಾರಿ ಜೀಪಿನಲ್ಲಿ ಚಿಂತಾಮಣಿ ನಗರದ ಕೆ.ಆರ್.ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ, ಮಾರುತಿ ಸರ್ಕಲ್  ಕಡೆ ಗಸ್ತು ಮಾಡುತ್ತಿದ್ದಾಗ ರಾತ್ರಿ 9-30 ಗಂಟೆ ಸಮಯದಲ್ಲಿ ನನಗೆ ಬಂದ ಖಚಿತ ಮಾಹಿತಿಯಂತೆ ಗಜಾನನ ವೃತ್ತದ ಬಳಿ ಇರುವ ಎಸ್.ಎ ಮೊಬೈಲ್ಸ್ ಅಂಗಡಿಯ ಮುಂಭಾಗದಲ್ಲಿ ಯಾರೋ ಇಬ್ಬರು ಅಸಾಮಿಗಳು  ಮೊಬೈಲ್  ಗಳ ಮೂಲಕ  ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಮಾಹಿತಿ ಬಂದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯವರು  ಮಾರುತಿ ವೃತ್ತದಲ್ಲಿ ಪಂಚರನ್ನು ಬರಮಾಡಿಕೊಂಡು ಗಜಾನನ ವೃತ್ತದ ಬಳಿ ಹೋಗಿ ಜೀಪ್ ನ್ನು ನಿಲ್ಲಿಸಿ ಪಂಚರೊಂದಿಗೆ ಮೊರೆಯಲ್ಲಿ ನಿಂತುಕೊಂಡು ಎಸ್.ಎ ಮೊಬೈಲ್ ಅಂಗಡಿಯ ಕಡೆ ನೋಡಲಾಗಿ ಅಂಗಡಿಯ ಮುಂಭಾಗದಲ್ಲಿ ಯಾರೋ  ಇಬ್ಬರು ಅಸಾಮಿಗಳು  ಈ ದಿನ  ನಡೆಯುತ್ತಿರುವ ಚನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಐ.ಪಿ.ಎಲ್.ಕ್ರಿಕೆಟ್ ಪಂದ್ಯದ ಬಗ್ಗೆ ಮೊಬೈಲ್ ನಲ್ಲಿ ನೋಡುತ್ತಿದ್ದು ಪಂಚರೊಂದಿಗೆ ದಾಳಿ ಮಾಡಿದ್ದು  ಆ ಪೈಕಿ ಒಬ್ಬ ಅಸಾಮಿ ಓಡಿ ಹೋಗಿದ್ದು ಇನ್ನೋಬ್ಬ ಅಸಾಮಿಯನ್ನು  ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ ಸೈಯದ್ ಅರ್ಬಾಜ್ ಬಿನ್ ಸೈಯದ್ ಅಬ್ಬಾಸ್, 20 ವರ್ಷ, ವ್ಯಾಪಾರ, ಚೌಡರೆಡ್ಡಿಪಾಳ್ಳ, ಚಿಂತಾಮಣಿ ನಗರ ಎಂದು ತಿಳಿಸಿದ್ದು  ಓಡಿ ಹೋದವನ ಬಗ್ಗೆ ವಿಚಾರಿಸಲಾಗಿ ನವೀನ್ ಬಿನ್ ಲೋಕೇಶ್, 20 ವರ್ಷ, ಪದ್ಮಶಾಲಿ ಜನಾಂಗ, ಚೌಡರೆಡ್ಡಿಪಾಳ್ಳ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾನೆ. ಸದರಿ ಅಸಾಮಿಯನ್ನು  ಪಂಚರ ಸಮಕ್ಷಮ ಅಂಗಶೋದನೆ ಮಾಡಲಾಗಿ ಆತನ ಬಳಿ ಪೋಕೋ ಕಂಪನಿಯ ಸ್ಕ್ರೀನ್ ಟಚ್ ಮೊಬೈಲ್  ಹಾಗೂ 200/- ರೂ  ನಗದು ಹಣವಿದ್ದು  ಮೊಬೈಲ್ ನ್ನು ಪರಿಶೀಲಿಸಲಾಗಿ  max66.com  ಲಿಂಕ್ ಇದ್ದು ಸದರಿ ಲಿಂಕ್ ನ ಬಗ್ಗೆ ವಿಚಾರಿಸಲಾಗಿ  ಸದರಿ  ಲಿಂಕ್ ನಿಂದ ನಾವು  ಶ್ರೀನಿವಾಸಪುರದ 8867507305 ಮೊಬೈಲ್ ನಂಬರ್ ನ ವ್ಯಕ್ತಿಯ ಬಳಿ ಕಳುಹಿಸಿಕೊಂಡು ಆತನ ಬಳಿ ಐ.ಪಿ.ಎಲ್ ಕ್ರಿಕೆಟ್ ಜೂಜಾಟ ಆಡುತ್ತಿರುತ್ತೇವೆಂದು  ತಿಳಿಸಿರುತ್ತಾನೆ. ನಂತರ ಮೊಬೈಲ್ ಹಾಗೂ ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಅಸಾಮಿ, ಮಾಲು ಹಾಗೂ ಮಹಜರ್ ನೊಂದಿಗೆ ಠಾಣೆಗೆ ರಾತ್ರಿ 10-30 ಗಂಟೆಗೆ  ವಾಪಸ್ಸಾಗಿದ್ದು ಮೇಲ್ಕಂಡ ಅಸಾಮಿಯ ವಿರುದ್ದ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಎನ್.ಸಿ.ಆರ್ ನಂ:146/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಪ್ರ ವ ವರದಿಯನ್ನು ದಾಖಲಿಸಿಲು ಅನುಮತಿಯನ್ನು ಪಡೆದು ಹಾಜರುಪಡಿದ ಪ್ರತಿಯ ಮೇರೆಗೆ ಕಲಂ: 78(1)(a)(vi) ರಂತೆ ಪ್ರ ವ ವರದಿಯನ್ನು  ದಾಖಲಿಸಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.157/2021 ಕಲಂ. 3,25 (1B) (a) INDIAN ARMS ACT, 1959:-

     ದಿನಾಂಕ 05/10/2021 ರಂದು ರಾತ್ರಿ 9:30 ಗಂಟೆಯಲ್ಲಿ ಶ್ರೀಮತಿ ಚಂದ್ರಕಲಾ-ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ, ದಿನಾಂಕ 05/10/2021 ರಂದು ಸಂಜೆ 6:00 ಗಂಟೆಯಲ್ಲಿ  ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-92 ರ ವಾಹನದಲ್ಲಿ ಅಪರಾದ ದಳದ ಸಿಬ್ಬಂದಿಗಳಾದ ಹೆಚ್.ಸಿ-226 ಲಿಂಗಪ್ಪ ಮತ್ತು ಸಿ.ಪಿ.ಸಿ-201 ಸುರೇಶ್ ರವರೊಂದಿಗೆ ಸಂಜೆ ಗಸ್ತನ್ನು ಪ್ರಾರಂಬಿಸಿ ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ಬಿ.ಹೆಚ್. ರಸ್ತೆಯಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಬಳಿ ಬಂದಾಗ ಬ್ಯಾಂಕ್ ಪಕ್ಕದ ವಿ.ವಿ.ಪುರಂ ಕೆನರಾ ಬ್ಯಾಂಕ್ ಎ.ಟಿ.ಎಂ ಬಳಿ ಯಾರೋ ಇಬ್ಬರು ಅಸಾಮಿಗಳು ನಿಂತಿದ್ದು ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಯಾವುದೋ ಪ್ಲಾಸ್ಟೀಕ್ ಚೀಲವನ್ನು ಹಿಡಿದುಕೊಂಡಿದ್ದವನು ಪೊಲೀಸ್ ಜೀಪನ್ನು ಕಂಡು ಇಬ್ಬರೂ ಆಸಾಮಿಗಳು ಓಡಿಹೋಗಲು ಪ್ರಯತ್ನಸಿದ್ದು ಸದರಿಯವರನ್ನು ಸಿಬ್ಬಂದಿಯಾದ ಹೆಚ್.ಸಿ-226 ಲಿಂಗಪ್ಪ ಮತ್ತು ಸಿ.ಪಿ.ಸಿ-201 ಸುರೇಶ್ ರವರು ಹಿಡಿದುಕೊಂಡಿದ್ದು, ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ಚೀಲವನ್ನು ಹಿಡಿದುಕೊಂಡಿದ್ದ ಆಸಾಮಿ 1) ರಾಜು ಬಿನ್ ಅಶ್ವತ್ಥಪ್ಪ, 22 ವರ್ಷ, ನಾಯಕರು, ಕುರಿ ಮೇಯಿಸುವ ಕೆಲಸ, ಪುಟ್ಟಾಪುರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 2] ಪವನ್ ಕುಮಾರ್ ಚಿಕ್ಕ ನರಸಿಂಹಪ್ಪ,  26 ವರ್ಷ, ನಾಯಕರು, ಗಾರೆ ಕೆಲಸ, ವಾಸ; ಬೂದೇನಹಳ್ಳಿ ಗ್ರಾಮ ಮದುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ, ಸ್ವಂತ ಸ್ಥಳ ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲುಕು ಎಂದು ತಿಳಿಸಿರುತ್ತಾರೆ.  ರಾಜು ಬಳಿಯಿದ್ದ ಚೀಲವನ್ನು ಪರಿಶೀಲಿಸಲಾಗಿ ಎಸ್.ಬಿ.ಎಂ.ಎಲ್, ಮಸಲ್ ಲೋಡ್ ನಾಡ ಬಂದೂಕಾಗಿದ್ದು ಇದರ ಮೇಲೆ 1856 ಎಂದು ನಮೂದು ಮಾಡಿರುತ್ತೆ. ಈ ಬಂದೂಕಿನ ಬಗ್ಗೆ ಆಸಾಮಿಗಳನ್ನು ಕೇಳಲಾಗಿ ಪ್ರಭಾಕರ್ ಡಿ ಪಾಳ್ಯ ಗೌರಿಬಿದನೂರು ತಾಲ್ಲೂಕು ರವರಿಂದ ಪಡೆದಿರುವುದಾಗಿ ತಿಳಿಸಿತ್ತಾರೆ. ಬಂದೂಕನ್ನು ಹೊಂದಲು ಪರವಾನಿಗೆ ಇದಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ಹೇಳಿರುತ್ತಾರೆ. ಆಸಾಮಿಗಳು ಯಾವುದೇ ಪರವಾನಿಗೆಯನ್ನು ಹೊಂದಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಬಂದೂಕನ್ನು ತೆಗೆದುಕೊಂಡು ಹೋಗುತ್ತಿದ್ದು, ಸದರಿ ಆಸಾಮಿಗಳನ್ನು ಮತ್ತು ಬಂದೂಕನ್ನು ವಶಕ್ಕೆ ಪಡೆದುಕೊಂಡು ರಾತ್ರಿ 9-30 ಗಂಟೆ ಸಮಯಕ್ಕೆ ಠಾಣೆಗೆ ವಾಪಸ್ಸಾಗಿ ಆಸಾಮಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

8. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.108/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 06/10/2021 ರಂದು ಮಧ್ಯಾಹ್ನ 2-00 ಗಂಟೆಗೆ ಪಿ.ಎಸ್ಐ ರವರು ಮಾಲು, ಮಹಜರ್ ಹಾಗೂ ಆರೋಪಿತೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:06/10/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಯರಮರೆಡ್ಡಿಹಳ್ಳಿ ಗ್ರಾಮದಲ್ಲಿರುವ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ ರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ ಸದರಿಯವರು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ 13 ನೇ ಗ್ರಾಮಗಸ್ತಿನ ಸಿಬ್ಬಂದಿಯಾದ ಸಿಪಿಸಿ-568 ರವಿಕುಮಾರ್ ರವರು ಖಚಿತ ಮಾಹಿತಿ ನೀಡಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ಪಿ.ಎಸ್.ಐ ಆದ ತಾನು ಸಿಬ್ಬಂದಿಯಾದ ಮಪಿಸಿ-167 ಮಂಜುಳಾ, ಸಿಪಿಸಿ-568 ರವಿಕುಮಾರ್ ರವರೊಂದಿಗೆ ಕೆಎ-40-ಜಿ-539 ಸರ್ಕಾರಿ ವಾಹನದಲ್ಲಿ ಯರಮರೆಡ್ಡಿಹಳ್ಳಿ ಗ್ರಾಮಕ್ಕೆ ಹೋಗಿ  ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ತಾವು ನಡೆದುಕೊಂಡು ಯರಮರೆಡ್ಡಿಹಳ್ಳಿ ಗ್ರಾಮದಲ್ಲಿರುವ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ ರವರ ಚಿಲ್ಲರೆ ಅಂಗಡಿ ಮುಂದೆ ಹೋಗಿ ನೋಡಲಾಗಿ ಅಂಗಡಿ ಮಾಲೀಕಳಾದ ರಾಮರತ್ನಮ್ಮ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿ ಮಾಲೀಕಳನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ, 45 ವರ್ಷ, ವಕ್ಕಲಿಗ ಜನಾಂಗ, ವಾಸ ಯರಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದರು.  ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ  ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ಗಳು ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY  ಮಧ್ಯದ 11  ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 11 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 386/-ರೂ ಆಗಿರುತ್ತೆ. ಮದ್ಯ ಒಟ್ಟು 990 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ರಾಮಲಕ್ಷ್ಮಮ್ಮ ರವರನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12-30 ರಿಂದ 13-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲು, ಮಹಜರ್ ಹಾಗೂ ರಾಮರತ್ನಮ್ಮ ರವರನ್ನು  ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ರಾಮರತ್ನಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ 108/2021 ಕಲಂ 15(ಎ).32(3) ಕೆ.ಇ. ಆಕ್ಟ್ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.191/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:05/10/2021 ರಂದು ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:23/09/2021 ರಂದು ಮದ್ಯಾಹ್ನ 03-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ದೊಡ್ಡರ್ಯಾಗಡಹಳ್ಳಿ  ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನದ ಬಳಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-283 ಅರವಿಂದ, ಪಿಸಿ-336 ಉಮೇಶ್.ಬಿ.ಶಿರಶ್ಯಾಡ್, ಪಿ.ಸಿ-483 ರಮೇಶ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 04-00 ಗಂಟೆಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡುಗೆಯಲ್ಲಿ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ದೇವಸ್ಥಾನದ ಬಳಿ ಅಂದರ್ ಗೆ 200/- ಬಾಹರ್ 200/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಕೃಷ್ಣೋಜಿರಾವ್ ಬಿನ್ ಜಟೋಜಿರಾವ್, 35 ವರ್ಷ, ಮರಾಠಿ, ಪೇಯಿಂಟ್ ಕೆಲಸ, ದೊಡ್ಡರ್ಯಾಗಡಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 2] ವಿಷ್ಣುವರ್ಧನ್ ಬಿನ್ ಗಂಗಪ್ಪ, 40 ವರ್ಷ, ಕೂಲಿ, ಶೆಟ್ಟಿ ಬಲಜಿಗ, ಚಿಕ್ಕರ್ಯಾಗಡಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು,  3] ಪ್ರಶಾಂತ್ ರಾವ್ ಬಿನ್ ನಾರಾಯಣರಾವ್, 22 ವರ್ಷ, ಮರಾಠಿ, ಕೂಲಿ, ದೊಡ್ಡರ್ಯಾಗಡಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿ ಎಲ್ಲರನ್ನೂ ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಸ್ಥಳದಲ್ಲಿ ದೊರೆತ 1900/- (ಒಂದು ಸಾವಿರದ ಒಂಬತ್ತು ನೂರು  ರೂಪಾಯಿಗಳು ಮಾತ್ರ) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 6-15 ಗಂಟೆಗೆ ಠಾಣೆಗೆ ವಾಪಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 295/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 05/10/2021 ರಂದು ಸಂಜೆ 6-15 ಗಂಟೆಗೆ ಡಿ,ಸಿ.ಬಿ/ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ-195 ರವರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ  ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಮುರಳೀಧರ ಸಿ.ಹೆಚ್.ಸಿ-195 ಆದ ನನಗೆ ಮತ್ತು ಮಧು, ಸಿಪಿಸಿ-527 ರವರುಗಳಿಗೆ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಎನ್. ರಾಜಣ್ಣ ರವರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ನೇಮಕ ಮಾಡಿದ್ದು, ಅದರಂತೆ ನಾವುಗಳು ಕಂದವಾರ, ಬೈರನಾಯಕನಹಳ್ಳಿ, ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ ಸುಮಾರು 5-00 ಗಂಟೆಗೆ ನಂದಿ ಗ್ರಾಮಕ್ಕೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ನಂದಿ ಗ್ರಾಮದಲ್ಲಿರುವ ದರ್ಗಾ ಬಳಿಗೆ ಸಂಜೆ 5-10 ಗಂಟೆಗೆ ಹೋಗಿ ನೋಡಲಾಗಿ ಪಿಳ್ಳಪ್ಪ ಬಿನ್ ಲೇಟ್ ನಂಜಪ್ಪ, 48 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ ನಂದಿ ಗ್ರಾಮ ರವರು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಬಳಿ ಇದ್ದ 632/-ರೂ ಬೆಲೆ ಬಾಳುವ, 01 ಲೀಟರ್ 620 ಎಂ.ಎಲ್ ಸಾಮರ್ಥ್ಯದ ಮದ್ಯ ತುಂಬಿರುವ 18 HAYWARD CHEERS WHISKY TETRA POCKET ಗಳನ್ನು, ಖಾಲಿ ವಾಟರ್ ಬಾಟೆಲ್, ಖಾಲಿಯಾಗಿರುವ 02 HAYWARD CHEERS WHISKY TETRA POCKET ಗಳನ್ನು ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮಕೈಗೊಳ್ಳಲು ಸೂಚಿಸಿದರ  ಮೇರೆಗೆ ಈ ಪ್ರವವರದಿ.

 

11. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.108/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:05-10-2021 ರಂದು ಮದ್ಯಾಹ್ನ 13-30 ಗಂಟೆಯಲ್ಲಿ ನ್ಯಾಯಾಲಯ ಕರ್ತವ್ಯ ಸಿಬ್ಬಂದಿಯಾದ ಪಿಸಿ-174 ರವರು ಠಾಣಾ NCR NO:148/2021  ರಲ್ಲಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಆದೇಶ ಪತ್ರವನ್ನು ಹಾಜರುಪಡಿಸಿದ್ದು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:04-10-2021 ರಂದು  ಸಂಜೆ 17-30 ಗಂಟೆಗೆ ಶ್ರೀ.ಸೈಯದ್ ಅನ್ಸರ್, ASI  ಪಾತಪಾಳ್ಯ ಪೊಲೀಸ್ ಠಾಣೆ ರವರು ಮದ್ಯಾಹ್ನ 15-00 ತಾನು ಚಾಲಕ ಎಪಿಸಿ-98 ಶ್ರೀನಾಥ ಹಾಗೂ ಸಿಪಿಸಿ-181 ಪ್ರಸಾದ ರವರೊಂದಿಗೆ ಕೆಎ-40-ಜಿ-59 ಸರ್ಕಾರಿ ಜೀಪಿನಲ್ಲಿ ಗಸ್ತಿನಲ್ಲಿದ್ದಾಗ ನಾರೇಮದ್ದೇಪಲ್ಲಿ ಗ್ರಾಮದಲ್ಲಿರುವ ವೆಂಕಟೇಶ ಬಿನ್ ವೆಂಕಟರವಣಪ್ಪ ಎಂಬುವವರು ತಮ್ಮ ಚಿಲ್ಲರೆ ಅಂಗಡಿ  ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ವೆಂಕಟೇಶ ಬಿನ್ ವೆಂಕಟರವಣಪ್ಪ  ರವರು ತಮ್ಮ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಹಾಗೂ ಅಂಗಡಿ ಮಾಲಿಕರು ಅಲ್ಲಿಂದ ಓಡಿ ಹೋಗಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ವೆಂಕಟೇಶ ಬಿನ್ ವೆಂಕಟರವಣಪ್ಪ, 45 ವರ್ಷ, ಪಿಚ್ಚಗುಂಟ್ಲ ಜನಾಂಗ, ವ್ಯಾಪಾರ, ವಾಸ:ನಾರೇಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ML ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 15 ಟೆಟ್ರಾ ಪ್ಯಾಕೇಟ್ ಗಳು ಇದ್ದು, (1 ಲೀಟರ್ 350 ML ಅದರ ಬೆಲೆ 525/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ML ನ ಒಂದು ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 16-00 ಗಂಟೆಯಿಂದ 16-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ವೆಂಕಟೇಶ ಬಿನ್ ವೆಂಕಟರವಣಪ್ಪರವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ NCR.NO.148/2021 ರಂತೆ ದಾಖಲಿಸಿಕೊಂಡು ನಂತರ  ಘನ ನ್ಯಾಯಾಲಯದ ಅನುಮತಿಗಾಗಿ ಸಲ್ಲಿಸಿಕೊಂಡಿರುವುದಾಗಿರುತ್ತೆ.

 

12. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.08/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:-05.10.2021 ರಂದು ಸಂಜೆ.6.00 ಗಂಟೆಗೆ  ಪಿರ್ಯಾದಿದಾರರಾದ ಸುಮಿತ್ರಮ್ಮ ಕೋಂ ಚಿಕ್ಕನರಸಿಂಹಪ್ಪ ನಾಯಕರು, ಬಚ್ಚೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಪೋನ್ ನಂ 9900425238 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:- ದಿನಾಂಕ:-26.09.2021 ರಂದು ಭಾನುವಾರ ರಾತ್ರಿ ಸುಮಾರು 9-00 ಗಂಟೆಗೆ  ಚೌಟಗುಂಟಹಳ್ಳಿ ಗ್ರಾಮದ ವಾಸಿಯಾದ ಮಲ್ಲೇನ್ ಬಿನ್ ವೆಂಕಟರೋಣಪ್ಪ ಮತ್ತು ನನ್ನ ಗಂಡ ಚಿಕ್ಕನರಸಿಂಹಪ್ಪ ಇಬ್ಬರು ಸೇರಿ ನಮ್ಮ ಮನೆಯ ಮುಂದೆ ಮಲಗಿಕೊಂಡಿದ್ದು ಬೆಳಗ್ಗೆ ಸುಮಾರು 6.00 ಗಂಟೆಗೆ ಎದ್ದು ನೋಡಲಾಗಿ ಮಲ್ಲೇಶ್ ಮತ್ತು ನನ್ನ ಗಂಡ ಚಿಕ್ಕನರಸಿಂಹಪ್ಪ ಇಬ್ಬರು ಇರುವುದಿಲ್ಲ, ಸದರಿ ಮಲ್ಲೇಶ ರವರು ನನ್ನ ಗಂಡನನ್ನು ಕರೆದುಕೊಂಡು ಹೋಗಿರಬಹುದೆಂದು ಇತನ ಮೇಲೆ ಅನುಮಾನ ಇರುತ್ತೆ ಅಂದಿನಿಂದ ನಾವು ನೆಂಟರ ಮನೆಗಳಲ್ಲಿ ಹಾಗೂ ಆತನ ಸ್ನೇಹಿತರ ಮನೆಗೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ತಡವಾಗಿ  ಈ ದಿನ ಠಾಣೆಗೆ ಬಂದು ದೂರು ನೀಡಿರುತ್ತೇನೆ.ನನ್ನ ಗಂಡ ಚಿಕ್ಕನರಸಿಂಹಪ್ಪ ರವರನ್ನು ಪತ್ತೆಮಾಡಿಕೊಡಬೇಕಾಗಿ ಕೋರಿ ದೂರು.

ಇತ್ತೀಚಿನ ನವೀಕರಣ​ : 06-10-2021 05:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080