ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 338/2021, ಕಲಂ. 87 ಕೆ.ಪಿ. ಆಕ್ಟ್:-

     ದಿನಾಂಕ:03.10.2021 ರಂದು ಸಂಜೆ 6.30 ಗಂಟೆ ಪಿಐ ಸಾಹೇಬರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮಾಲು, ಆರೋಪಿ, ಅಸಲು ಧಾಲಿ ಪಂಚನಾಮೆ ಮತ್ತು ನೀಡಿದ ವರಧಿ ಸಾರಾಂಶವೇನೆಂದರೆ ಈ ಮೂಲಕ ಬಾಗೇಪಲ್ಲಿ ಪೊಲೀಸ್ ಠಾಣೆಯ ಶ್ರೀ ನಾಗರಾಜ್ ಡಿ ಆರ್. ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನಿಮಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 03.10.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಗುರ್ರಾಲದಿನ್ನೆ ಗ್ರಾಮದ ಬಳಿ ಜಮೀನಿನಲ್ಲಿ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ, ಪಿಸಿ-134 ಧನಂಜಯ್ ಮತ್ತು ಸಿಪಿಸಿ 131 ರಾಜಪ್ಪ ಮತ್ತು ಜೀಪ್ ಚಾಲಕ ಎ.ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ, ಗುರ್ರಾಲದಿನ್ನೆ ಗ್ರಾಮದ ಗ್ರಾಮದ ಬಳಿ ಹೋಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ದಾಳಿಯ ಪಂಚನಾಮೆಗೆ ಸಹಕರಿಸಲು  ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 1444 ರಲ್ಲಿ ಕುಳಿತುಕೊಂಡು ಸ್ಥಳಕ್ಕೆ ಹೋಗಿ ರಸ್ತೆಯ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ಹೊಲಗಳಲ್ಲಿ  ಎಲ್ಲರೂ ನಡೆದುಕೊಂಡು ಸಂಜೆ 5-20 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ನಾವುಗಳು & ಪಂಚರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು ಹುಣಸೇಮರದ ಕೆಳಗೆ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆಯುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಒಬ್ಬ ಆಸಾಮಿಯು ಸ್ಥಳದಿಂದ ಓಡಿಹೋಗಿದ್ದು, ಸ್ಥಳದಲ್ಲಿ ಸಿಕ್ಕ ಆಸಾಮಿಯನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಕುಬೇರ ಬಿನ್ ಲೇಟ್ ಸಿದ್ದಪ್ಪ, 33 ವರ್ಷ, ಬಲಜಿಗರು, ಆಟೋ ಡ್ರೈವರ್, ವಾಸ: ಗುರ್ರಾಲದಿನ್ನೆ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಸ್ವಂತ ಸ್ಥಳ ಗಿರಿಯಪ್ಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾನೆ.  ಸ್ಥಳದಿಂದ ಓಡಿಹೋದ ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ  2) ನಾಗೇಂದ್ರ ಬಿನ್ ನಾರಾಯಣಸ್ವಾಮಿ, 23 ವರ್ಷ, ಬಲಜಿಗರು, ಜಿರಾಯ್ತಿ, ವಾಸ ಗುರ್ರಾಲದಿನ್ನೆ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ.  ಸ್ಥಳದಲ್ಲಿದ್ದ ಸಿಕ್ಕ ಆರೋಪಿಯನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 360/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿಯನ್ನು ಠಾಣೆಯಲ್ಲಿ ಸಂಜೆ 6-30 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 300/2021 ರಂತೆ ದಾಖಲಿಸಿಕೊಂಡಿರುತ್ತೆ. ದಿ:04-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 339/2021, ಕಲಂ. 32, 34 ಕೆ.ಇ. ಆಕ್ಟ್:-

     ದಿನಾಂಕ: 04/10/2021 ರಂದು ರಾತ್ರಿ 10-15 ಗಂಟೆಗೆ ನಾಗರಾಜ್ ಡಿ.ಆರ್. ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 04-10-2021 ರಂದು ರಾತ್ರಿ 8-30 ಗಂಟೆಯಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಕಾರಕೂರು, ಯಲ್ಲಂಪಲ್ಲಿ, ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ಯಾರೋ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು  ಮದ್ಯವನ್ನು ಗೋಣಿಚೀಲದಲ್ಲಿ ಇಟ್ಟುಕೊಂಡು ಆಚೇಪಲ್ಲಿ ಕ್ರಾಸ್ ಬಳಿ ಇರುವುದಾಗಿ ಖಚಿತ ಮಾಹಿತಿ ಬಂದಿದ್ದು  ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-1444 ವಾಹನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-276 ಸಾಗರ್, ಪಿಸಿ-192 ವಿನೋದ್ ಹಾಗೂ ಜೀಪ್ ಚಾಲಕ ಎ.ಪಿ.ಸಿ-57ನೂರ್ ಬಾಷಾ ರವರೊಂದಿಗೆ ಹೊರಟು ಬಾಗೇಪಲ್ಲಿ ಕಾರಕೂರು ಕ್ರಾಸ್ ನಲ್ಲಿ  ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಾನು, ಸಿಬ್ಬಂದಿಯವರು ಹಾಗೂ ಪಂಚರು ಸರ್ಕಾರಿ ಜೀಪಿನಲ್ಲಿ ಆಚೆಪಲ್ಲಿ ಕ್ರಾಸ್ ಬಳಿ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು ಆಚೆಪಲ್ಲಿ ಕ್ರಾಸ್ ನಲ್ಲಿ ಗೋಣಿಚೀಲ ಇಟ್ಟುಕೊಂಡು ನಿಂತಿದ್ದು  ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಯಾದ ಸಾಗರ ಪಿ.ಸಿ 276 ರವರು ಬೆನ್ನತ್ತಿ ಹಿಡಿದುಕೊಂಡಿದ್ದು, ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಶ್ರೀನಿವಾಸ ಬಿನ್ ವೆಂಕಟರಾಯಪ್ಪ, 31 ವರ್ಷ, ನಾಯಕ ಜನಾಂಗ, ಈಶನಗುಟ್ಟಾ, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂಬುದಾಗಿ ತಿಳಿಸಿದನು. ಸದರಿ ಆಸಾಮಿಗೆ ಮದ್ಯವನ್ನು ತೆಗೆದುಕೊಂಡು ಹೋಗಲು ಮತ್ತು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ.  ನಂತರ  ಪಂಚರ ಸಮಕ್ಷಮದಲ್ಲಿ ಚೀಲವನ್ನು ಪರಿಶೀಲಿಸಲಾಗಿ  ಗೋಣಿ ಚೀಲದಲ್ಲಿ  90 ML   ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೇಟ್ ಗಳಿದ್ದು, ಹಾಗೂ 90 ML ನ ಸಾಮರ್ಥ್ಯದ ORIGINAL CHOICE ನ 192 ಟೆಟ್ರಾ ಪಾಕೇಟ್ ಗಳಿರುತ್ತವೆ. ಇವುಗಳು 26 ಲೀಟರ್ 820 ಮಿ.ಲಿ ಆಗಿದ್ದು,  ಇದರ ಬೆಲೆ 10,152/- ರೂ ಗಳಾಗಿರುತ್ತದೆ. ನಂತರ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಮೇಲ್ಕಂಡ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು, ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 10-15 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮವನ್ನು ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 340/2021, ಕಲಂ. 379 ಐಪಿಸಿ:-

     ದಿನಾಂಕ: 05/10/2021 ರಂದು ಬೆಳಿಗ್ಗೆ 10-45 ಗಂಟೆಗೆ ಶ್ರೀ. ನಾಗರಾಜ  ಡಿ.ಆರ್ ಪೊಲೀಸ್ ಇನ್ಸ್ ಪೆಕ್ಟರ್  ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 05-10-2021 ರಂದು ಬೆಳಗ್ಗೆ 8.00  ಗಂಟೆ ಸಮಯದಲ್ಲಿ ನಾನು  ಯಲ್ಲಂಪಲ್ಲಿ, ಕಾನಗಮಾಲಕಪಲ್ಲಿ ಮಿಟ್ಟೇಮರಿ ಗ್ರಾಮ ಕಡೆಗೆ ಹಗಲು ಗ್ರಾಮಗಸ್ತಿಗೆಂದು ಹೋಗುತ್ತಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ  ಮಿಟ್ಟೇಮರಿ  ಹೋಬಳಿ ಪಾಪಿನೇಪಲ್ಲಿ ಗ್ರಾಮದ ಕೆರೆಯ ಕಾಲುವೆಯಲ್ಲಿ ಯಾರೋ ಆಸಾಮಿಯು ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಾಣಿಕೆ ಮಾಡಲು ಟ್ರಾಕ್ಟರ್ ನಲ್ಲಿ ಮರಳನ್ನು ತುಂಬುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ- 1444 ರಲ್ಲಿ ಚಾಲಕ ಎ.ಹೆಚ್.ಸಿ-57 ನೂರ್ ಪಾಷಾ, ಸಿಬ್ಬಂದಿಯಾದ ಪಿಸಿ-276 ಸಾಗರ್  ಮತ್ತು 192 ವಿನೋದ್ ಕುಮಾರ್ ರವರೊಂದಿಗೆ, ಮಿಟ್ಟೇಮರಿ ಗ್ರಾಮದ ಬಸ್ ನಿಲ್ದಾಣದ ಬಳಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಪಾಪಿನೇಪಲ್ಲಿ ಗ್ರಾಮದ ಕೆರೆಯ ಬಳಿಗೆ ಸುಮಾರು ಬೆಳಗ್ಗೆ 8.45 ಗಂಟೆಗೆ ಹೋಗಿ ನೋಡಲಾಗಿ, ಕೆರೆಯಲ್ಲಿ ಯಾರೋ ಆಸಾಮಿಯು ಟ್ರಾಕ್ಟರ್ ಗೆ ಮರಳು ತುಂಬುತ್ತಿದ್ದು, ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಟ್ರಾಕ್ಟರ್ ಅನ್ನು ಅಲ್ಲಿ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದವನನ್ನು ಸಿಪಿಸಿ 276 ಸಾಗರ್ ಮತ್ತು 192 ವಿನೋದ್ ಕುಮಾರ್ ರವರು ಹಿಡಿದುಕೊಂಡು ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ನರಸಿಂಹಪ್ಪ, 57 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಪಾಪಿನೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾನೆ.  ನಂತರ ಸ್ಥಳದಲ್ಲಿದ್ದ ಮರಳು ತುಂಬಿದ ಟ್ರಾಕ್ಟರ್ ಅನ್ನು  ಪರಿಶೀಲಿಸಲಾಗಿ ಹೊಸದಾದ ನೊಂದಣಿ ಸಂಖ್ಯೆ ಇಲ್ಲದ  ಕೆಂಪು ಬಣ್ಣದ SOLIS ಕಂಪನಿಯ ಟ್ರಾಕ್ಟರ್ ಆಗಿರುತ್ತೆ. ಎಂಜಿನ್ ಸಂಖ್ಯೆ 3102ELU14C102970F19 ಆಗಿರುತ್ತೆ.  ಟ್ರಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ ಟ್ರಾಲಿಯ ತುಂಬ ಮರಳು ತುಂಬಿರುತ್ತದೆ.  ಸದರಿ ಟ್ರಾಕ್ಟರ್ ನಲ್ಲಿ ಸರ್ಕಾರಿ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ  ಕಳ್ಳತನ ಮಾಡುತ್ತಿರುವುದು ಕಂಡುಬಂದಿರುತ್ತದೆ. ಸ್ಥಳದಲ್ಲಿ  ಬೆಳಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸದರಿ ಆಸಾಮಿ ಮತ್ತು ಮರಳು ತುಂಬಿದ ಟ್ರಾಕ್ಟರ್ ಅನ್ನು ವಶಕ್ಕೆ ತೆಗೆದುಕೊಂಡು ಬೆಳಗ್ಗೆ 10.45 ಗಂಟೆಗೆ ಠಾಣೆಗೆ ಹಾಜರಾಗಿ, ಮೇಲ್ಕಂಡ ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 341/2021, ಕಲಂ. 78(1)(a)(vi) ಕೆ.ಪಿ. ಆಕ್ಟ್:-

     ದಿನಾಂಕ: 04/10/2021 ರಂದು ರಾತ್ರಿ 9-00 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ   ದಿನಾಂಕ 04/10/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್, 2 ನೇ ವಾರ್ಡ, ವಾಲ್ಮೀಕಿ ದೇವಾಸ್ಥಾನದ ಮುಂಭಾಗದಲ್ಲಿರುವ ಚಿಲ್ಲರೆ ಅಂಗಡಿಯ ಬಳಿ ಳಿ  ಯಾರೋ ಆಸಾಮಿಯು ಈ ದಿನ ಚೆನೈ ಸೂಪರ್ ಕಿಂಗ್ಸ  ಮತ್ತು ಡೆಲ್ಲಿ ಕ್ಯಾಪಿಟಲ್ಸ ನಡುವೆ ಮ್ಯಾಚ್ ನಡೆಯುತ್ತಿದ್ದು  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು  ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ-257 ನರಸಿಂಹಮೂರ್ತಿ, ಪಿಸಿ-280 ಮುರಳಿ , ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೆಪಲ್ಲಿ ಟೌನ್, ಗೂಳೂರು ಸರ್ಕಲ್  ಬಳಿ ಇದ್ದ  ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ 2 ನೇವಾರ್ಡ, ವಾಲ್ಮೀಕಿ ದೇವಾಸ್ಥಾನದ ಬಳಿ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಯು ಮೊಬೈಲ್ ಪೋನ್ ನಲ್ಲಿ ಸಂಬಾಷಣೆ ಮಾಡಿಕೊಂಡು ಚೆನೈ ಸೂಪರ್ ಕಿಂಗ್ಸ  ತಂಡ ಗೆಲ್ಲುತ್ತದೆ 500/- ರೂ ಎಂದು ಹಣವನ್ನು ಪಣವಾಗಿ ಕಟ್ಟಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟವಾಡುತ್ತಿದ್ದು. ಆಸಾಮಿ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಕಾರ್ತಿಕ್ ಬಿನ್ ಗಡ್ಡಂ ಮೂರ್ತಿ, 24 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಲ್ಮೀಕಿ ದೇವಾಸ್ಥಾನದ ಬಳಿ, 2ನೇ ವಾರ್ಡ,  ಬಾಗೇಪಲ್ಲಿ ಟೌನ್ ಎಂದು ತಿಳಿಸಿರುತ್ತಾರೆ, ನಂತರ ಆಸಾಮಿಯನ್ನು ತಾನು ಹಣವನ್ನು ಯಾರಿಗೆ ಕಟ್ಟಿದ್ದು ಎಂದು ವಿಚಾರಿಸಲಾಗಿ ತನ್ನ ಸ್ನೇಹಿತನಾದ ಗಣೇಶ ಬಿನ್ ನರಸಿಂಹಪ್ಪ,  24 ವರ್ಷ, ಪ.ಜಾತಿ, ಖಾಸಗಿ ಕೆಲಸ, ವಾಸ  ಕೃಷಿ ಇಲಾಖೆ ಕಚೇರಿ ಬಳಿ, 3 ನೇ ವಾರ್ಡ, ಬಾಗೇಪಲ್ಲಿ ಟೌನ್ ಎಂಬುದಾಗಿ ತಿಳಿಸಿರುತ್ತಾನೆ. ನಂತರ ಆಸಾಮಿ ಬಳಿ ಇದ್ದ ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ  ಮೊಬೈಲ್ ನಲ್ಲಿ ಕ್ರಿಕ್ ಬಜ್ ಎಂಬ ಆ್ಯಪ್ ಮುಖಾಂತರ ಕ್ರಿಕೆಟ್ ಸ್ಕೋರ್ ಅನ್ನು ನೋಡಿಕೊಂಡು, ಪೋನ್ ನಲ್ಲಿ ಸಂಬಾಷನೆ ಮಾಡಿಕೊಂಡು ಚೆನ್ಯ ಸುಪರ್ ಕಿಂಗ್ಸ  ಮತ್ತು ಡೆಲ್ಲಿ ಕ್ಯಾಪಿಟಲ್ಸ ನಡುವೆ ನಡೆಯುತ್ತಿರುವ ಮ್ಯಾಚಿಗೆ  ಹಣವನ್ನು ಬೆಟ್ಟಿಂಗ್ ಕಟ್ಟಿರುತ್ತಾರೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಗೆ ಉಪಯೋಗಿಸಿದ್ದ 1) ರಿಯಲ್ ಮೀ ಮೊಬೈಲ್ ಅನ್ನು ಪ್ಲೈಟ್ ಮೂಡ್ ಗೆ ಹಾಕಿದ್ದು ಹಾಗೂ ಆರೋಪಿತನು ಈಗಾಗಲೇ ಪಣಕ್ಕೆ ಕಟ್ಟಿದ್ದ 500/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-00 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು, ಅಸಲು ಪಂಚನಾಮೆ ಹಾಗೂ ಆರೋಪಿಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-301/2021 ರಂತೆ ದಾಖಲಿಸಿಕೊಂಡಿರುತ್ತೆ. ದಿನಾಂಕ: 05-10-2021 ರಂದು ಘನ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 138/2021, ಕಲಂ. 323, 324, 504 ರೆ/ವಿ 34 ಐಪಿಸಿ:-

     ದಿನಾಂಕ 04/10/2021 ರಂದು ಸಂಜೆ 05-00 ಗಂಟೆಗೆ ಕೋಲಾರದ SNR ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ಶಬಾನಾ ಕೋಂ ಮನ್ನಾ 30 ವರ್ಷ ಮುಸ್ಲೀಂ ಜನಾಂಗ ಬೂಂದಿ ಅಂಗಡಿ ವ್ಯಾಪಾರ ವಾಸ ನಿಮ್ಮಕಾಯಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಠಾಣಾ ಸಿಬ್ಬಂದಿ ಹೆಚ್.ಸಿ 98 ರವರು ಪಡೆದು ಹಾಜರುಪಡಿಸಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ಈಗ್ಗೆ ಸುಮಾರು 10 ವರ್ಷಗಳಿಂದ ನಿಮ್ಮಕಾಯಲಹಳ್ಳಿ ದರ್ಗಾದ ರಸ್ತೆಯಲ್ಲಿ ಬೂಂದಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ ನಮ್ಮ ಗ್ರಾಮದ ವಾಸಿಯಾದ ಅಕಿಲಾ ಕೋಂ ಬಾಬಾಜಾನ್ ರವರು ಸಹ ದರ್ಗಾದ ರಸ್ತೆಯಲ್ಲಿ ಬೂಂದಿ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ ಹೀಗಿರುವಲ್ಲಿ ದಿನಾಂಕ 03/10/2021 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ನಾನು ಹಾಗೂ ನನ್ನ ಮಗನಾದ ಆದಿಲ್ ಬೂಂದಿ ಅಂಗಡಿಯನ್ನು ಜೋಡಿಸುತ್ತಿದ್ದಾಗ ಶಬ್ಬೀರ್ ಬಿನ್ ಗುಲಾಬ್ ಜಾನ್ ರವರು ನನ್ನ ಮಗ ಆದಿಲ್ ರವರನ್ನು ಕುರಿತು ಅಂಗಡಿಯನ್ನು ಏಕೆ ನಮ್ಮ ಅಂಗಡಿಗೆ ಅಡ್ಡ ಇಡುತ್ತಿದ್ದೀಯಾ ಎಂತ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಯುತ್ತಿದ್ದಾಗ ಅಂಗಡಿಯ ಬಳಿ ಇದ್ದ ನಾನು ನನ್ನ ಮಗನನ್ನು ಜಗಳ ಬಿಡಿಸಲು ಬಂದಾಗ ಶಬ್ಬೀರ್ ನನ್ನನ್ನು ಕೆಳಗೆ ತಳ್ಳಿ ಕಾಲಿನಿಂದ ಎದೆಗೆ ಒದ್ದಿರುತ್ತಾನೆ ಅಷ್ಟರಲ್ಲೇ ಅಲ್ಲಿಗೆ ಬಂದ ಬಾಬಾಜಾನ್ ಬಿನ್ ಗುಲಾಬ್ ಜಾನ್ ರವರು ಮೊಳೆ ಇರುವ ಮರದ ಹಲಿಗೆಯಿಂದ ತಲೆಯ ಮೇಲ್ಬಾಗದ ಎಡಗಡೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಲ್ಲೇ ಇದ್ದ ಅಕಿಲಾ ಕೋಂ ಬಾಬಾಜಾನ್ ರವರು ಸಹ ನನ್ನ ಎಡಗೈಗೆ ಮರದ ಹಲಿಗೆಯಿಂದ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಷ್ಟರಲ್ಲಿ ಜಗಳ ನಡೆಯುತ್ತಿರುವ ಸ್ಥಳಕ್ಕೆ ಬಂದ ನಾಗರಾಜ ಬಿನ್ ರಾಮ್ ಸಿಂಗ್ ಸೀನಾ ಬಿನ್ ಈರಪ್ಪ ರವರು ಜಗಳ ಬಿಡಿಸಿದರು ನಂತರ ನನ್ನ ಮಗ ಆದಿಲ್ ನನ್ನ ಗಂಡನಿಗೆ ಪೋನ್ ಮಾಡಿ ಗಲಾಟೆಯ ಬಗ್ಗೆ ತಿಳಿಸಿರುತ್ತಾರೆ ಸ್ವಲ್ಪ ಸಮಯದ ನಂತರ ನನ್ನ ಗಂಡ ಸ್ಥಳಕ್ಕೆ ಬಂದು ಯಾವುದೋ ಆಟೋ ರಿಕ್ಷಾದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ SNR ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ ನಮ್ಮ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿದೆ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 173/2021, ಕಲಂ. 143, 147, 323, 324, 504, 506, 447, 427 ರೆ/ವಿ 149 ಐಪಿಸಿ:-

     ದಿನಾಂಕ:04-10-2021 ರಂದು ರಾತ್ರಿ 19-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಿಂದ ಬಂದ ಮೆಮೊ ಮೇರೆಗೆ ಜಿಲ್ಲಾಸ್ಪೆತ್ರಯಲ್ಲಿ ವೈದ್ಯರ ಸಮಕ್ಷಮ ಗಾಯಾಳು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ರಾಮಚಂದ್ರಹೊಸೂರು ಗ್ರಾಮದ ಸರ್ವೆ ನಂ 91/8 ರಲ್ಲಿ 20 ಗುಂಟೆ ಜಮೀನನ್ನು ತನ್ನ ಗ್ರಾಮದ ರತ್ನಮ್ಮ  ಎಂಬುವವರಿಂದ ಕ್ರಯಕ್ಕೆ ಪಡೆದುಕೊಂಡು ಸದರಿ ಜಮೀನಿಗೆ ಸರ್ವೆ ಮಾಡಿಸಿ ಕುಚಗಳನ್ನು ನಾಟಿದ್ದು  ತಾನು ದಿನಾಂಕ:04-10-2021 ರಂದು ತಾನು ಬೆಳಿಗ್ಗೆ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾಗ ದಿನಾಂಕ:04-10-2021 ರಂದು ಸುಮಾರು ಸಂಜೆ 5-00 ಗಂಟೆ ಸಮಯದಲ್ಲಿ ಪಕ್ಕದ ಜಮೀನವರಾದ  ಆರ್ ಜಿ ಕೃಷ್ಣಪ್ಪ ಬಿನ್ ಗೋಪಾಲಪ್ಪ ಪತ್ನಿಯಾದ ಯಶೋದಮ್ಮ ಅವರ ಮಕ್ಕಳಾದ ಚರಣ್ ಕುಮಾರ್ ಮತ್ತು ಶರತ್ ಬಾಬು. ಬಾಮೈದ ಶಿವತೇಜ್ ಎಂಬುವವರು ತನ್ನ ಜಮೀನಿಗೆ ಬಂದು ಜಮೀನಿಗೆ ಹಾಕಿದ ಕುಚಗಳನ್ನು ಮುರಿದು ಕಬ್ಬಿಣದ ತಂತಿಯನ್ನು ಕಟ್ ಮಾಡಿ ಬೆಳೆಯನ್ನು ನಾಶ ಮಾಡಿರುತ್ತಾರೆ. ಇದನ್ನು ಕೇಳಲು ಹೋದಾಗ ತನ್ನ ಮೇಲೆ ಮೇಲ್ಕಂಡ ಎಲ್ಲರೂ ತನ್ನ ಮೇಲೆ ಗಲಾಟೆ ಮಾಡಿದ್ದು ಆ ಪೈಕಿ ಶಿವತೇಜ್ ಎಂಬುವವನು ದೊಣ್ಣೆಯಿಂದ ತನ್ನ ಮೇಲೆ ಎಡಮೊಣಕಾಲು. ಎಡತೊಡೆಗೆ ಹೊಡೆದು ಮೂಗೇಟು ಮಾಡಿರುತ್ತಾರೆ. ಜಗಳ ಬಿಡಿಸಲು ಬಂದ ತನ್ನ ಅಣ್ಣ ಈರೇಗೌಡ ಹಾಗೂ ತನ್ನ ಹೆಂಡತಿಯಾದ ಮಂಜುಳ ರವರಿಗೂ ಸಹ ಕೈಗಳಿಂದ ಹೊಡೆದು ತನ್ನ ಹೆಂಡತಿ ಎಡ ಕೈಗೆ ರಕ್ತಗಾಯ ಮಾಡಿರುತ್ತಾರೆ ನಂತರ ತನ್ನನ್ನು ಚಿಕಿತ್ಸೆಗಾಗಿ ತನ್ನ ಗ್ರಾಮದ ಆನಂದ ಬಿನ್ ಕೆಂಪಣ್ಣ ಹಾಗೂ ಶಿವಕುಮಾರ್ ಬಿನ್ ಸೊಣ್ಣಪ್ಪ ದಾಖಲಿಸಿರುತ್ತಾರೆ. ಮೆಲ್ಕಂಡರವರು ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈಯ್ದು ನಿಮ್ಮನ್ನು ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಮತ್ತು ತನ್ನ ಜಮೀನಿಗೆ ಹಾಕಿದ ಕುಚಗಳನ್ನು ಕಬ್ಬಿಣದ ತಂತಿಯನ್ನು ಕಿತ್ತು ಹಾಕಿ ತನಗೆ ಸುಮಾರು 20,000/- ರೂಗಳು ನಷ್ಠವನ್ನುಂಟು ಮಾಡಿರುತ್ತಾರೆ. ತನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ಮೇರೆಗೆ ಈ ಪ್ರ ವ ವರದಿ.

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 174/2021, ಕಲಂ. 143, 147, 323, 324, 504, 506 ರೆ/ವಿ 149 ಐಪಿಸಿ:-

     ದಿನಾಂಕ:- 04/10/201 ರಂದು ರಾತ್ರಿ 7:00 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಯಿಂದ ಬಂದ ಮೇಮೂ ಮೆರಿಗೆ ವೈದ್ಯರ ಸಮಕ್ಷಮ ಗಾಯಾಳು ನೀಡಿದ ಸಾರಾಂಶವೇನೆಂದರೆ ನಮ್ಮ ಗ್ರಾಮದ ಸರ್ವೆ ನಂಬರ್ 91/7 ರಲ್ಲಿ 1ಎಕರೆ14ಗುಂಟೆ ಜಮೀನಿದ್ದು ಸದರಿ ಜಮೀನಿಗೆ ಸಂಬಂದಿಸಿದಂತೆ ಸರ್ವೆ ಮಾಡಿದ್ದು, ಸದರಿ ಸರ್ವೆಯಲ್ಲಿ ನನ್ನ ಜಮೀನಿನ ಪಕ್ಕದಲ್ಲಿರುವ  ಮುನಿರಾಜು ಬಿನ್ ಸೊಣ್ಣಪ್ಪ ರವರ ಜಮೀನಿನಲ್ಲಿ 12 ಅಡಿ ತನಗೆ ಬರಬೇಕಾಗಿದ್ದು ಈ ಬಗ್ಗೆ ಸರ್ವೆ ಅಧಿಕಾರಿಗಳು ಸರ್ವೆ ಮಾಡಿ ಕಲ್ಲನ್ನು ನಿಲ್ಲಿಸಿರುತ್ತಾರೆ, ಸದರಿ 12 ಅಡಿ ಜಮೀನು ಬಿಟ್ಟುಕೊಡುವಂತೆ ಹಲವಾರು ಬಾರಿ ಕೇಳಿದರು ಬಿಟ್ಟುಕೊಟ್ಟಿರುವುದಿಲ್ಲ, ಈ ದಿನ ದಿನಾಂಕ:- 04/10/2021ರಂದು ಬೆಳಿಗ್ಗೆ 7:30 ಗಂಟೆ ಸಮಯದಲ್ಲಿ ಮುನಿರಾಜುರವರು ನೆಟ್ಟಿದ್ದ ಕಲ್ಲ ಹಾಗೂ ಕಬ್ಬಿಣದ ತಂತಿಯನ್ನು ತಗೆದು ಪಕಕ್ಕೆ ಹಾಕಿರುತ್ತಾರೆ. ಸಂಜೆ 5:00 ಗಂಟೆ ಸಮಯದಲ್ಲಿ ಮುನಿರಾಜು  ಬಿನ್ ಸೊಣ್ಣಪ್ಪ, ಆನಂದ ಬಿನ್ ಕೆಂಪಣ್ಣ, ಈರೆಗೌಡ ಬಿನ್ ಸೊಣ್ಣಪ್ಪ ಹಾಗೂ ಮುನಿರಾಜು ಹೆಂಡತಿ ಮಂಜುಳಮ್ಮ ರವರು ಮತ್ತು ಸೊಣ್ಣಪ್ಪ ಬಿನ್ ಮೊಟಪ್ಪರವರು ಏಕಾಏಕಿ  ತನ್ನ ಮನೆಯ ಬಳಿ ಬಂದು ಕಲ್ಲು ಕಿತ್ತಿರುವ ಬಗ್ಗೆ ಗಲಾಟೆ ತೆಗೆದು ಆ ಪೈಕಿ ಮುನಿರಾಜು,ಆನಂದ,ಈರೆಗೌಡ ರವರು ಕಲ್ಲುಗಳಿಂದ ತನ್ನ ಎಡಗೈ,ಎದೆಯ  ಮುಂಬಾದಲ್ಲಿ  ಹಾಗೂ ಎಡಕಾಲಿನ ತೊಡೆಯ ಭಾಗಕ್ಕೆ ಹೊಡೆದು ಗಾಯಗೊಳಿಸಿರುತ್ತಾರೆ, ಆಪೈಕಿ ಮುನಿರಾಜು ರವರು ಕೈಯಲ್ಲಿ ಮಚ್ಚು ಹಿಡಿದುಕೊಂಡು ಬಂದು ನಿನ್ನನ್ನು ಬಿಡುವುದಿಲ್ಲವೆಂದು ಪ್ರಾಣ ಬೇದರಿಕೆ ಹಾಕಿ ಅವಾಚ್ಚ ಶಬ್ದಗಳಿಂದ ಬೈದಿರುತ್ತಾರೆ.ತನ್ನನ್ನು ಚಿಕಿತ್ಸೆಗಾಗಿ ನನ್ನ ಚಿಕ್ಕಪ್ಪರಾದ ಶ್ರೀನಿವಾಸ ಬಿನ್ ಗೋಪಾಲಪ್ಪ ರವರು ತಂದು ತನ್ನನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪೇತ್ರೆಗೆ ಸೇರಿಸಿರುತ್ತಾರೆ,ಏಕಾಏಕಿ  ತನ್ನ ಮೇಲೆ ಗಲಾಟೆ ತೆಗೆದು ಅವಾಚ್ಚ ಶಬ್ದಗಳಿಂದ  ಬೈದು ಪ್ರಾಣ ಬೇದಿರಿಕೆ ಕಾಕಿರುತ್ತಾರೆ ಆದ್ದರಿಂದ ಮೇಲ್ಕಂಡ ರವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆಯ ಮೇರಿಗೆ  ಈ ಪ್ರ ವರದಿ.

 

8. ಚಿಂತಾಮಣಿ ನಗರ ಪೊಲೀಸ್ ಠಾಣೆ, ಮೊ.ಸಂ. 186/2021, ಕಲಂ. 323, 324, 504, 506 ರೆ/ವಿ 34 ಐಪಿಸಿ:-

     ದಿನಾಂಕ: 04/10/2021 ರಂದು ಸಂಜೆ 18-30 ಗಂಟೆಗೆ ಘನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಪಿ.ಸಿ-367 ರವರು ಠಾಣೆಗೆ ಹಾಜರಾಗಿ ನೀಡಿದ ಪಿ.ಸಿಆರ್ ನಂ:278/2021 ನ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಬಿ. ಸುಬಾನ್ ಷರೀಫ್ ಬಿನ್ ಲೇಟ್ ಭಾಷಾ ಸಾಭಿ, 37 ವರ್ಷ, ಮುಸ್ಲಿಮರು, ವಾಸ: ನಿಮ್ಮಕಾಯಲಹಳ್ಳಿ ಗ್ರಾಮ, ಮುರುಗಮಲ್ಲ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಆದ ತಾನು, ತನ್ನ ತಾಯಿ ಮೆಹರುನ್ನೀಸಾ, ಅಣ್ಣ ಮೌಲಾನಾ, ಹಾಗೂ ಅಣ್ಣನ ಹೆಂಡತಿಯಾದ ನೇತಾಜ್ ಉನ್ನೀಸಾ ರವರೆಲ್ಲಾ ಒಂದೇ ಮನೆಯಲ್ಲಿ ವಾಸವಾಗಿದ್ದು, ತನ್ನ ತಾಯಿ ಮೆಹರುನ್ನಿಸಾ ಮತ್ತು ಅಣ್ಣನಾದ ಮೌಲಾನಾ ಹಾಗೂ ಮೌಲಾನಾ ರವರ ಹೆಂಡತಿಯಾದ ನೇತಾಜ್ ಉನ್ನೀಸಾ ರವರುಗಳು ಸೇರಿ  ತನಗೆ ಮಾಸಿಕ ಮತ್ತು ದೈಹಿಕ ಕಿರುಗಳ ಕೊಡುತ್ತಿದ್ದು, ತನ್ನ ಅತ್ತಿಗೆಯಾದ ನೇತಾಜ್ ಉನ್ನೀಸಾ ರವರು ುದ್ದೇಶ ಪೂರ್ವಕವಾಗಿ ತಾನು ಕುಡಿಯುವ ಬಿಸಿ ನೀರಿನಲ್ಲಿ ಕಪ್ಪೆಯನ್ನು ಹಾಕಿದ್ದು ನಾನು ನೋಡದೆ ಕುಡಿದು ಆನಾರೊಗ್ಯ ಉಂಟಾಗುವಂತೆ ಮಾಡಿದ್ದು, ಈ ಬಗ್ಗೆ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿರುತ್ತೇನೆ. ಇವರುಗಳ ಕಿರುಕುಲದಿಂದ ಬೇಸತ್ತು ತಾನು 1-2 ವರ್ಷ ದೇಶಾದ್ಯಂತರ ಹೊರಟು ಹೋಗಿ ಆಗಾಗ ಮನೆಗೆ ಬರುತ್ತಿದ್ದ, ಸುಮಾರು 4-5 ವರ್ಷಗಳಿಂದ ಮನೆಯಲ್ಲೇ ಇದ್ದು ಆಟೋ ಇಟ್ಟುಕೊಂಡು ದುಡಿದು ಮನೆಗೆ ಬೇಕಾದ ಸರಕುಗಳನ್ನು ತಂದು ಕೊಡುತ್ತಿದ್ದು. ಆದರೆ ತನ್ನ ತಾಯಿ ಮತ್ತು ಅಣ್ಣ ಇಬ್ಬರು ಸೇರಿಕೊಂಡು ತನಗೆ ಸರಿಯಾಗಿ ಊಟ ಕೊಡದೆ ಇನ್ನೂ ಮೂಲಭೂತ ಸೌಕರ್ಯಗಳನ್ನು ನೀಡದೇ ತೊಂದರೆ ಕೊಡುತ್ತಿದ್ದರು. ತನ್ನ ತಾಯಿಯ ಬಳಿ ಹೋಗಿ “ನನಗೆ ಮದುವೆ ಮಾಡಿಕೊಳ್ಳುವ ವಯಸ್ಸಾಗಿದೆ ಹೆಣ್ಣು ನೋಡಿ ಎಂದು ಕೇಳಿದಾಗ” ತಾಯಿ ನಿನಗೆ ಮದುವೆ ಮಾಡಿಕೊಳ್ಳು ವಯಸ್ಸು ಮೀರಿದೆ ಎಂದು ವ್ಯಂಗವಾಗಿ ತನಗೆ ನೋವಾಗುವ ರೀತಿಯಲ್ಲಿ ಮಾತನಾಡಿರುತ್ತಾರೆ.  ಹೀಗಿರುವಲ್ಲಿ ದಿನಾಂಕ: 29/09/2021 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ತನ್ನ ತಾಯಿಯನ್ನು ಕುರಿತು “ಯಾಕಮ್ಮ ನಾನು ದುಡಿದು ಮನೆಗ ಬೇಕಾಗುವ ಸರಕುಗಳನ್ನು ತಂದು ಹಾಕುತ್ತಿದ್ದರೂ ಸಹ ನನಗೆ ಊಟ ಹಾಕದೇ, ನನಗೆ ಮದುವೆ ಮಾಡದೇ ಇದ್ದು ನಾನು ಏನೂ ತಪ್ಪು ಮಾಡಿದ್ದೀನಿ ಎಂತ ಕೇಳಿದಾಗ, ಅಲ್ಲಿಯೇ ಇದ್ದ ತನ್ನ ಅಣ್ಣನಾದ ಮೌಲಾ ರವರು ಏನು ಜೋರಾಗಿ ಮಾತನಾಡುತ್ತಿದ್ದೀಯಾ ಎಂತ ಅವಾಚ್ಯ ಶಬ್ದಗಳಿಂದ ಬೈದು, ತಾಯಿ ಮತ್ತು ಅಣ್ಣ ಇಬ್ಬರು ಸೇರಿಕೊಂಡು ಕೈಗಳಿಂದ ನನ್ನ ಕೆನ್ನೆಗೆ ಹೊಡೆದಿರುತ್ತಾರೆ. ನಂತರ ತನ್ನ ಅಣ್ಣ ಕೋಲಿನಿಂದ ತಲೆಗೆ ಹೊಡೆಯಲು ಬಂದಾಗ  ದರ್ಗಾದವರು ಬಂದು ಜಗಳ ಬಿಡಿಸಿದ್ದು, ನಂತರ ಇದೇ ದಿನ ರಾತ್ರಿ 12-00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರ ಪೊಲೀಸರು ತನ್ನ ಮನೆಯ ಮುಂದೆ ಬಂದು ತನ್ನನ್ನು ಏನನ್ನು ವಿಚಾರಿಸದೇ ಏಕಾಏಕಿ ಲಾಟಿಯಲ್ಲಿ ತಲೆಗೆ, ಕಣ್ಣಿಗೆ ಕೈನಿಂದ ಹೊಡೆದು, ತನ್ನನ್ನು ಕೆಳಗೆ ಬೀಳಿಸಿ 4-5 ಜನ ಪೊಲೀಸಿನವರಲ್ಲಿ 3 ಜನ ಪೊಲೀಸಿನವರು ಸೇರಿಕೊಂಡು ಲಾಡಿಯಲ್ಲಿ ನನ್ನ ಕೈಗಳಿಗೆ, ಕಾಲುಗಳಿಗೆ ಹೊಡಿದಿರುತ್ತಾರೆ, ನಂತರ ಶೂ ಕಾಲುಗಳಿಂದ ನನ್ನನ್ನು ಹೊದ್ದು, ನನ್ನ ತೊಡೆ ಸಂದುಗಳಿಗೆ ಮತ್ತು ಪುಷ್ಠಗಳಿಗೆ ಲಾಟಿಯಲ್ಲಿ ಹೊಡೆದು ನನ್ನ ಜೇಬಿನಲ್ಲಿದ್ದ ಸ್ಯಾಮ್ಸ್ಸಾಂಗ್ ಮೊಬೈಲ್ ಅನ್ನು ಕಿತ್ತುಕೊಂಡಿರುತ್ತಾರೆ. ಇದಾದ ನಂತರ ರಾತ್ರಿ ಸುಮಾರು 12-30 ಗಂಟೆ ಸಮಯದಲ್ಲಿ ಬಟ್ಲಹಳ್ಳಿ ಪೋಲಿಸರು ಬಂದು ಏಕಾಏಕಿ ತನ್ನ ಕೈ ಮೇಲೆ , ಕಾಲುಗಳ ಮೇಲೆ, ಬೆನ್ನು ಮೇಲೆ ಲಾಠಿಯಲ್ಲಿ ಹೊಡೆದಿರುತ್ತಾರೆ. ತನ್ನ ಅಣ್ಣ ಮತ್ತು ತಾಯಿ ರವರು ಪೊಲೀಸರಿಗೆ ಹಣ ಕೊಟ್ಟು ತನ್ನನ್ನು ಹೊಡೆಸಿದ್ದು, ಪೊಲೀಸರು ಹಣದ ಆಸೆಗಾಗಿ ವಿನಾಕಾರಣ ನನ್ನನ್ನು ಹೊಡೆದಿರುತ್ತಾರೆ. ತನಗೆ ಹೊಡೆದಿರುವ ಪೊಲೀಸರ ಹೆಸರುಗಳು ನನಗೆ ಗೊತ್ತಿರುವುದಿಲ್ಲ. ತನಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಭಯ ಆಗಿ ಘನ ನ್ಯಾಯಾಲಯದ ಮೂಲಕ ದೂರು ನೀಡಿರುತ್ತೇನೆ. ಆದ್ದರಿಂದ ತನ್ನದನ್ನು ಅವಾಚ್ಯ ಶಬ್ದಗಳಿಂದ ಬೈದು, ಹೊಡೆದಿರುವ ತನ್ನ ಅಣ್ಣ ಮತ್ತು ತಾಯಿ, ಹಾಗೂ 4-5 ಜನ ಚಿಂತಾಮಣಿ ನಗರ ಪೊಲೀಸರು, 2-3 ಜನ ಬಟ್ಲಹಳ್ಳಿ ಪೊಲೀಸರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ತನಗೆ ನ್ಯಾಯ ಮಾಡಿಸಿಕೊಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿದ್ದು, ಅದರಂತೆ ಘನ ನ್ಯಾಯಾಲಯದ ಪಿ.ಸಿ.ಆರ್ ನಂ: 278/2021 ರ ಆದೇಶದಂತೆ ಪ್ರಕರಣ ದಾಖಲಿಸಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 190/2021, ಕಲಂ. 32, 34, 38A ಕೆ.ಇ. ಆಕ್ಟ್:-

     ದಿನಾಂಕ:04/10/2021 ರಂದು ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಪಿ.ಎಸ್. ಐ ಶ್ರೀಮತಿ ಸರಸ್ವತಮ್ಮ ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:04/10/2021 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-80 ಕೃಷ್ಣಪ್ಪ ಮತ್ತು ಪಿಸಿ-152 ಜಯಣ್ಣ ಹಾಗೂ ಜೀಪ್ ಚಾಲಕರಾದ ಎ.ಪಿ.ಸಿ.138 ಮೇಹಬೂಬ್ ಪಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-270 ರಲ್ಲಿ ಗೌರಿಬಿದನೂರು ತಾಲ್ಲುಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ 1-45 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ  ಖಚಿತ ಮಾಹಿತಿ ಏನೆಂದರೆ ಯಾರೋ ಒಬ್ಬ ಆಸಾಮಿ ದ್ವಿಚಕ್ರ ವಾಹನದಲ್ಲಿ ಒಂದು ಚೀಲದಲ್ಲಿ ಮದ್ಯವನ್ನು ಎತ್ತಿಕೊಂಡು ಬಸವನಹಳ್ಳಿ ಕಡೆಗೆ ಬರುತ್ತಿರುವುದಾಗಿ ಮಾಹಿತಿ ಬಂದಿದ್ದು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ  ಬಸವನಹಳ್ಳಿ ರಸ್ತೆಯ ಎನ್.ಎಸ್.ಆರ್ ಕೋಳಿ ಫಾರಂ ಬಳಿ ಕಾಯುತ್ತಿದ್ದಾಗ ಒಬ್ಬ ಆಸಾಮಿ ದ್ವಿಚಕ್ರ ವಾಹನದಲ್ಲಿ ಒಂದು ಬಿಳಿ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು, ಅದರಿಯವರನ್ನು ನಿಲ್ಲಿಸಲಾಗಿ ಸದರಿ ಆಸಾಮಿ ಗಾಬರಿಯಿಂದ ಪೊಲೀಸ್ ಜೀಪನ್ನು ನೋಡಿ ತನ್ನ ದ್ವಿಚಕ್ರ ವಾಹನವನ್ನು ಚೀಲದ ಸಮೇತ  ಮತ್ತು ವಿವೋ ಕಂಪನಿಯ ಒಂದು ಮೊಬೈಲ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಸದರಿ ಚೀಲವನ್ನು ಪರಿಶೀಲಿಸಲಾಗಿ 192, 90 ಎಂ.ಎಲ್.ನ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೇಟ್ ಗಳಿರುತ್ತೆ.  ನಂತರ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ಕೆ.ಎ-40, ಯು-7197 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಸೂಪರ್ ಎಕ್ಸ್.ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ವಾಗಿರುತ್ತದೆ. ಮೊಬೈಲ್ ಅನ್ನು ಪರಿಶೀಲಿಸಲಾಗಿ ವಿವೋ ಕಂಪನಿಯ ಒಂದು ಟಚ್ ಸ್ಕ್ರೀನ್ ಮೋಬೈಲ್ ಆಗಿರುತ್ತದೆ. ನಂತರ ಸ್ಥಳದಿಂದ ಓಡಿಹೋದ ಆಸಾಮಿಯ ಬಗ್ಗೆ ವಿಚಾರ ಮಾಡಲಾಗಿ ಗುರುಮೂರ್ತಿ @ ಗುರು ನಾರಾಯಣ ಬಿನ್ ದೊಡ್ಡಬಾಲಪ್ಪ, 35 ವರ್ಷ, ಬೋವಿ ಜನಾಂಗ, ಬಸವನಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿದ್ದ ಮಾಲುಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಸ್ಥಳದಲ್ಲಿ ದೊರೆತ ಮಧ್ಯವು ಸುಮಾರು 17 ಲೀಟರ್ 280 ಎಂ.ಎಲ್. ಇದ್ದು, ಇದರ ಒಟ್ಟು ಬೆಲೆ 6744/- ರೂಗಳಾಗಿರುತ್ತೆ. ಸದರಿ ಮಾಲುಗಳನ್ನು ತಮ್ಮಲ್ಲಿ ಹಾಜರುಪಡಿಸುತ್ತಿದ್ದು, ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮಧ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಮೇಲ್ಕಂಡ ಆಸಾಮಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ದೂರು.

 

10. ಪಾತಪಾಳ್ಯ ಪೊಲೀಸ್ ಠಾಣೆ, ಮೊ.ಸಂ. 106/2021, ಕಲಂ. 324, 504 ಐಪಿಸಿ:-

     ದಿನಾಂಕ:-04-10-2021 ರಂದು ಬೆಳಿಗ್ಗೆ 10-30 ಗಂಟೆಗೆ ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀ.ಪೆದ್ದರೆಡ್ಡಿ ಬಿನ್ ಬೈಯ್ಯಪ್ಪ ರವರು ಹೇಳಿಕೆ ಪಡೆದುಕೊಂಡು ಬಂದು ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:04-10-2021 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ತಾನು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಗ್ರಾಮ ಈಶ್ವರರೆಡ್ಡಿ ಬಿನ್ ಯಾಮನ್ನ ರವರು ತನ್ನ ಬಳಿ ಬಂದು ನೀನು ಜಮೀನಿನಲ್ಲಿ ಯಾವುದೇ ಬೆಳೆ ಇಡಬಾರದು ಎಂದು ಗಲಾಟೆ ಮಾಡಿದ್ದು, ತಮ್ಮ ಮಗ ಆಂಜನೇಯರೆಡ್ಡಿ ರವರು ತನ್ನನ್ನು ತಮ್ಮ ಮನೆಯ ಬಳಿಗೆ ಕರೆದುಕೊಂಡು ಬಂದಾಗ ಮೇಲ್ಕಂಡ ಈಶ್ವರರೆಡ್ಡಿ ರವರು ಟಮೋಟ ಗಿಡಗಳಿಗೆ ನೆಡುವ ಕೋಲಿನಿಂದ ತನ್ನ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯ ಮಾಡಿ, ಅವಾಚ್ಯವಾಗಿ ಬೈಯ್ದಿರುವುದಾಗಿ ತನ್ನ ಮಗ ಜಗಳ ಬಿಡಿಸಿ ಪಾತಪಾಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿರುವುದಾಗಿ ಮೇಲ್ಕಂಡ ಈಶ್ವರರೆಡ್ಡಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

11. ಪಾತಪಾಳ್ಯ ಪೊಲೀಸ್ ಠಾಣೆ, ಮೊ.ಸಂ. 107/2021, ಕಲಂ. 323, 324, 341, 506 ರೆ/ವಿ 34 ಐಪಿಸಿ:-

     ದಿನಾಂಕ:-04-10-2021 ರಂದು ಸಿ.ಹೆಚ್.ಸಿ-209 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಈಶ್ವರರೆಡ್ಡಿ ಬಿನ್ ಯಾಮನ್ನ ರವರ ಹೇಳಿಕೆ ಪಡೆದುಕೊಂಡು ಬಂದು ಮದ್ಯಾಹ್ನ 1-30 ಗಂಟೆಗೆ ವಾಪಸ್ಸಾಗಿ ಹೇಳಿಕೆ ದೂರನ್ನು ಹಾಜರುಪಡಿಸಿದ್ದು, ಪಡೆದುಕೊಂಡು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:04-10-2021 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ ತಾನು ತಮ್ಮ ಜಮೀನಿಗೆ ಹೋಗುವ ದಾರಿ ಬಿಡುವಂತೆ ಕೇಳಲು ಪೆದ್ದರೆಡ್ಡಿ ರವರ ಜಮೀನಿನ ಬಳಿ ಕೇಳಿದಾಗ ಪೆದ್ದರೆಡ್ಡಿ, ಸೀನಾ @ ಶ್ರೀನಿವಾಸ, ಆಂಜನೇಯರೆಡ್ಡಿ ರವರು ನಿನಗೆ ನಾವು ಏಕೆ ದಾರಿಯನ್ನು ಬಿಡಬೇಕು ಬಿಡುವುದಿಲ್ಲ, ಎಂದು ವಿನಾಕಾರಣ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯವಾಗಿ ಬೈಯ್ದಿರುವುದಾಗಿ ತಾನು ಮನೆಗೆ ವಾಪಸ್ಸು ಬರುತ್ತಿದ್ದಾಗ ತಮ್ಮ ಗ್ರಾಮದ ಬೈರೆಡ್ಡಿ ರವರ ಚಿಲ್ಲರೆ ಅಂಗಡಿ ಮುಂಭಾಗ ಇರುವ ಕುರಿಗಳ ದೊಡ್ಡಿ ಬಳಿ ತನ್ನನ್ನು ಅಡ್ಡಗಟ್ಟಿ ಮೇಲ್ಕಂಡ ಮೂರು ಜನರ ಪೈಕಿ ಪೆದ್ದರೆಡ್ಡಿ ರವರು ತನ್ನನ್ನು ಹಿಡಿದುಕೊಂಡಿದ್ದು, ಶ್ರೀನಿವಾಸ & ಆಂಜನೇಯರೆಡ್ಡಿ ಇಬ್ಬರು ಕುರಿ ದೊಡ್ಡಿಗೆ ಕಟ್ಟಿರುವ ಕೋಲುಗಳಿಂದ ತನ್ನ ಬೆನ್ನಿಗೆ ಬಲರೆಟ್ಟೆಗೆ, ಬಲಗೈ ಬೆರಳಿಗೆ ಹೊಡೆದು ಮೂಗೇಟುಗಳನ್ನು ಉಂಟು ಮಾಡಿರುವುದಾಗಿ ಇನ್ನೊಂದು ಬಾರಿ ದಾರಿ ಬಿಡು ಎಂದು ಕೇಳಿಕೊಂಡು ಬಂದರೆ ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುವುದಾಗಿ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 309/2021, ಕಲಂ. 279, 337 ಐಪಿಸಿ:-

     ದಿನಾಂಕ: 04-10-2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ಪಿರ್ಯಾದಿದಾರರಾದ ವಸೀಮ್ ಪಾಷಾ ಬಿನ್ ಸೈಯದ್ ಗೌಸ್ ಪಾಷಾ, 25 ವರ್ಷ, ಚಾಲಕ ವೃತ್ತಿ, 16ನೇ ವಾರ್ಡ್, ವಾಸ: ಟಿ.ಎಂ.ಸಿ. ಲೇ-ಔಟ್, ಆಜಾಧ್ ನಗರ, ಶಿಡ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ನಂ. ಕೆಎ-40-ಬಿ-1184 ಅಶೋಕ್ ಲೈಲ್ಯಾಡ್ ಬಡಾ ದೋಸ್ತ್ ಗೂಡ್ಸ್ ಗಾಡಿಯನ್ನು ಇಟ್ಟುಕೊಂಡಿದ್ದು ಸದರಿ ವಾಹನಕ್ಕೆ ತಾನೇ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ತನ್ನ ವಾಹನದಲ್ಲಿ ಮದನಪಲ್ಲಿಯಲ್ಲಿ ಸಿಲ್ಕ್ ವೇಸ್ಟ್ ನ್ನು ತುಂಬಿಕೊಂಡು ಶಿಡ್ಲಘಟ್ಟ ಕ್ಕೆ ಲೋಡ್ ಮಾಡಿಕೊಂಡು ಬರುತ್ತಿರುತ್ತೇನೆ. ತನ್ನ ವಾಹನದಲ್ಲಿ ಶಿಡ್ಲಘಟ್ಟ ಟೌನ್ ನಲ್ಲಿ ವಾಸವಾಗಿರುವ ನಯಾಜ್ ಪಾಷಾ ಬಿನ್ ಬಾಬಾಜಾನ್ ಮತ್ತು ಗೌಸ್ಫೀರ್ ಷೇಕ್ ಬಿನ್ ಉಸ್ಮಾನ್ ಸಾಬ್ ರವರು ಲೋಡರ್ ಗಳಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿದ್ದು ದಿನಾಂಕ: 03-10-2021 ರಂದು ಸಂಜೆ ಸುಮಾರು 6.30 ಗಂಟೆಯಲ್ಲಿ ಸಿಲ್ಕ್ ವೇಸ್ಟ್ ನ್ನು ಲೋಡ್ ಮಾಡಿಕೊಂಡು ಬರುವ ಸಲುವಾಗಿ ತನ್ನ ಬಾಬತ್ತು ನಂ. ಕೆಎ-40-ಬಿ-1184 ಗೂಡ್ಸ್ ವಾಹನದಲ್ಲಿ ಲೋಡರ್ ಗಳಾದ ನಯಾಜ್ ಪಾಷಾ ಮತ್ತು ಗೌಸ್ ಫೀರ್ ಷೇಕ್ ರವರೊಂದಿಗೆ ಶಿಡ್ಲಘಟ್ಟದಿಂದ ಮದನಪ್ಲಲಿಗೆ ಹೋಗುವ ಸಲುವಾಗಿ ಬೂದಾಳ ಗೇಟ್ ಬಳಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಚಿಂತಾಮಣಿ ಕಡೆಯಿಂದ ನಂ. ಕೆಎ-53-ಸಿ-4405 ಇಟಿಯಸ್ ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಮುಂಭಾಗ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಯಾವುದೋ ಒಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ತನ್ನ ಬಾಬತ್ತು ಕೆಎ-40-ಬಿ-1184 ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಬಾಬತ್ತು ವಾಹನದ ಮುಂಭಾಗ ಜಖಂ ಆಗಿದ್ದು ಆರೋಪಿ ನಂ. ಕೆಎ-53-ಸಿ-4405 ಕಾರು ಸಹ ಜಖಂ ಆಗಿದ್ದು, ತನ್ನ ಬಾಬತ್ತು ವಾಹನದಲ್ಲಿದ್ದಾಗ ಲೋಡರ್ ಗಳಾದ ನಯಾಜ್ ರವರಿಗೆ ತಲೆಗೆ ರಕ್ತಗಾಯವಾಗಿದ್ದು ಮೈ ಮೇಲೆ ಗಾಗಳಾಗಿರುತ್ತೆ, ಗೌಸ್ ಫೀರ್ ಷೇಕ್ ರವರಿಗೆ ಕತ್ತಿನ ಮೇಲೆ ಎಡಭಾಗದ ಹುಬ್ಬಿನ ಮೇಲೆ ಹಾಗೂ ಇತರೆ ಕಡೆ ಗಾಯಗಳಾಗಿದ್ದು ಗಾಯಾಳುಗಳನ್ನು ಕೂಡಲೇ ಸಾರ್ವಜನಿಕರ ಸಹಾಯದಿಂದ ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಹಾಗೂ ಅಪಘಾತದ ಬಗ್ಗೆ ನಮ್ಮ ಮನೆಯವರಿಗೆ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ಬಾಬತ್ತು ನಂ. ಕೆಎ-40-ಬಿ-1184 ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನು ಉಂಟುಮಾಡಿ ತನ್ನ ವಾಹನದಲ್ಲಿದ್ದ ಲೋಡರ್ ಗಳಾದ ನಯಾಜ್ ಪಾಷಾ ಮತ್ತು ಗೌಸ್ ಫೀರ್ ಷೇಕ್ ರವರಿಗೆ ಗಾಯಗಳಾಗಲು ಕಾರಣರಾದ ನಂ. ಕೆಎ-53-ಸಿ-4405 ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ. 309/2021 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 05-10-2021 07:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080