ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 334/2021, ಕಲಂ. U/s 153A, 120B, 428, 429, 295 ರೆ/ವಿ 34 ಐಪಿಸಿ, ಕಲಂ. 11(1) PREVENTION OF CRUELTY TO ANIMALS ACT, 1960; ಕಲಂ. 59 FOOD SAFETY AND STANDARDS ACT-2006; ಕಲಂ. 5 THE KARNATAKA EPIDEMIC DISEASES ACT, 2020; ಕಲಂ. 8,11,9 THE KARNATAKA PREVENTION OF SLAUGHTER AND PRESERVATION OF CATTLE ACT-2020:-

    ದಿನಾಂಕ 03/10/2021 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದುದಾರರಾದ  ನಂದಿನಿ ಮತಿಯಾನಿ ಕೋಂ ನೀರಾಜ್ ಮತಿಯಾನಿ, 49 ವರ್ಷ, ಹಿಂದೂಕ್ಷರ್ತಿಯಾ ಜನಾಂಗ, 1 ಸಿ, 506, ದಿವ್ಯಾಶ್ರೀ ಎಲಾನ್ , ಸರ್ಜಾಪುರ ರೋಡ್, ಬೆಂಗಳೂರು-560035 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಂದಿನಿ ಮತಿಯಾನಿ, w/o ನೀರಜ್ r/o ಬೆಂಗಳೂರಿನಲ್ಲಿ 49 ವರ್ಷ, ನಾನು ಗೌ ಜ್ಞಾನ ಫೌಂಡೇಶನ್‌ನ ಸ್ವಯಂಸೇವಕ, ಭಾರತದಾದ್ಯಂತ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಯುವಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಪ್ರಾಣಿ ಕಲ್ಯಾಣಕ್ಕೆ ಮೀಸಲಾದ ಒಂದು NGO. 3ನೇ ಅಕ್ಟೋಬರ್, 2021 ರಂದು ಬೆಳಿಗ್ಗೆ 10:47 ರ ಸುಮಾರಿಗೆ, ಘಂಟಾವರಪಳ್ಳಿ ಪಂಚಾಯತ್ ಬಳಿ ಶ್ರೀ ಟೌಸಿಫ್ ಮತ್ತು ಅಫ್ರೋಜ್ ಖಾನ್ ರವರಿಗೆ ಸೇರಿದ ನಿಲಿ ಶೆಡ್ ಅನ್ನು ನೋಡಿದೆ, ಅಲ್ಲಿಂದ ಭಯಾನಕ ದುರ್ವಾಸನೆ ಬರುತ್ತಿತ್ತು, ಅಲ್ಲಿ ಹೋಗಿ ನೋಡಲಾಗಿ ಚೀಲಗಳ ರಾಶಿ ಕಂಡಿತು. ಅದರಲ್ಲಿ ಅಕ್ರಮವಾಗಿ ಹತ್ಯೆ ಮಾಡಿದ ಹಸುವಿನ ಮೂಳೆಗಳು, ಕೊಂಬು, ಚರ್ಮ ಮುಂತಾದ ಉಪ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ಮತ್ತು ಅಕ್ರಮವಾಗಿ ಹಸುವನ್ನು ಹತ್ಯೆ ಮಾಡಿ 2000 ಕ್ಕೂ ಹೆಚ್ಚು ಜಾನುವಾರುಗಳ ಸಂತತಿಯನ್ನು ದಾಸ್ತಾನು ಮಾಡಲಾಗಿದೆ. ಇವುಗಳನ್ನು ಬಾಗೇಪಲ್ಲಿ ಮತ್ತು ಸುತ್ತಮುತ್ತಲಿನ ಹಲವಾರು ಅಕ್ರಮ ಕಸಾಯಿಖಾನೆಗಳಿಂದ ತರಲಾಗಿದೆ ಎಂದು ತೋರುತ್ತದೆ. ಲೈವ್ ಬುಲ್, ದೇಸಿ ತಳಿ ಮತ್ತು ಬಿಳಿ ಬಣ್ಣವನ್ನು ಹಸುಗಳನ್ನು ಸಹ ಅಕ್ರಮ ವಧೆಗಾಗಿ ಇಲ್ಲಿ ಕಟ್ಟಲಾಗಿದೆ. ಈ ಸ್ಥಳವು ಗಬ್ಬು ನಾರುತ್ತಿದ್ದು, ಇದು ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತಿದೆ, ಸುತ್ತಮುತ್ತಲಿನ ನಿವಾಸಿಗಳಿಗೆ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ. 2021 ರ ಸೆಪ್ಟೆಂಬರ್ ಮೊದಲ ವಾರದಲ್ಲಿ, ಮೂರು ಕಂಟೇನರ್ ವಾಹನಗಳು ಬಾಗೇಪಲ್ಲಿ ಠಾಣಾ ಸರಹದ್ದಿನಿಂದ ಜಾನುವಾರುಗಳ ಕೊಂಬು ಮತ್ತು ಮೂಳೆಗಳನ್ನು ತುಂಬಿದವು. ಎಫ್ಐಆರ್ ಸಂಖ್ಯೆ: 259/21 ದಿನಾಂಕ 31/08/21 ರಂದು ಬಾಗೇಪಲ್ಲಿ ಪೊಲೀಸರು ಟೌಸಿಫ್ ಮತ್ತು ಇತರರ ಹೆಸರಿನಲ್ಲಿ ಬುಕ್ ಮಾಡಿದ್ದಾರೆ. ಅಕ್ರಮ ಕಸಾಯಿಖಾನೆಗಳಿಂದ ಹಸು, ಜಾನುವಾರು ಮತ್ತು ಸಂತತಿಯ ದೊಡ್ಡ ಪ್ರಮಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಈ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವುದನ್ನು ಇದು ತೋರಿಸುತ್ತದೆ. ಈ ಶೆಡ್‌ನಲ್ಲಿ ಕಾನೂನುಬಾಹಿರವಾಗಿ ಇರಿಸಲಾಗಿರುವ ಮೂಳೆಗಳು ಮತ್ತು ಕೊಂಬುಗಳ ಅಕ್ರಮ ಸಂಗ್ರಹದ ಮೇಲೆ ದಾಳಿ ಮಾಡಲು, ಈ ಎಲ್ಲಾ ಪ್ರಾಣಿ ಉಪ-ಉತ್ಪನ್ನಗಳನ್ನು ವಶಪಡಿಸಿಕೊಳ್ಳಲು, ಜೀವಂತ ಬುಲ್ ಅನ್ನು ವಶಪಡಿಸಿಕೊಳ್ಳಲು ಮತ್ತು ಈ ಬುಲ್ ಅನ್ನು ನೋಂದಾಯಿತ ಗೋಶಾಲೆಯಲ್ಲಿ ಸುರಕ್ಷತೆಗಾಗಿ ಪುನರ್ವಸತಿ ಮಾಡಲು ವಿನಂತಿಸಿ. ದಯಮಾಡಿ ಎಲ್ಲಾ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಿ ಮತ್ತು ಈ ಶೆಡ್ ಅನ್ನು ಮುಚ್ಚಲು ಮತ್ತು ತರುವಾಯ ಕೆಡವಲು, ಉಪ ಉತ್ಪನ್ನಗಳನ್ನು ಹೂಳಲು ಮತ್ತು ಈ ಅಧಿಕ ಮಾಲಿನ್ಯ ಮತ್ತು ಕಾನೂನುಬಾಹಿರ ವ್ಯಾಪಾರವನ್ನು ಮುಚ್ಚಲು 1. ಅಫ್ರೋಜ್ ಖಾನ್, s/o ದಿವಂಗತ ಬಾಬಾ ಸಾಹಿಬ್ r/o 11 ನೇ ವಾರ್ಡ್, ಈಶ್ವರ ರೆಡ್ಡಿ ಮನೆ, ಬಾಗೇಪಲ್ಲಿ, 2. ತೌಸಿಫ್ s/o ಅಫ್ರೋಜ್ ಖಾನ್ r/o 11 ನೇ ವಾರ್ಡ್, ಈಶ್ವರ ರೆಡ್ಡಿ ಮನೆ, ಬಾಗೇಪಲ್ಲಿ,  ಶೆಡ್‌ನ ನಿರ್ವಾಹಕರು, 3. ರಘುರಾಮ್ ರೆಡ್ಡಿ: ಶೆಡ್ ಇರುವ ಭೂಮಿಯ ಮಾಲೀಕರು, 4. ಅಮೀರ್ ಭಾಯಿ, ಅನಂತಪುರದ ಬೆರಂಗನಪಲ್ಲಿಯಿಂದ - ಮೂಳೆಗಳು ಮತ್ತು ಕೊಂಬುಗಳ ಪೂರೈಕೆದಾರ 1 & 2, 5. ತಾಡಪತ್ರಿಯ ಕುಲ್ಲಪ 1 ಮತ್ತು 2 ಕ್ಕೆ ಮೂಳೆಗಳು ಮತ್ತು ಕೊಂಬುಗಳ ಪೂರೈಕೆದಾರ, 6. ತಾಡಪತ್ರಿಯ ಫಕೀರ್ ಅಪ್ಪ- ಮೇಲೆ 1 & 2 ಕ್ಕೆ ಮೂಳೆಗಳು ಮತ್ತು ಕೊಂಬುಗಳ ಪೂರೈಕೆದಾರ, 7. Kerala chemicals and protein limited located at Kochi which is receiving the bone pellets from 1&2 above, 8. A1 fertilizers and their owners and directors- a business based in Bagepalli under this name 1&2 above run their trade 9. KA01-AF-4138 ವಾಹನದ ಮಾಲೀಕ ಇವರುಗಳ ವಿರುದ್ದ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 335/2021, ಕಲಂ. 504, 355, 149, 323, 324, 114 ಐಪಿಸಿ:-

    ದಿನಾಂಕ 03/10/2021 ರಂದು ಮದ್ಯಾನ 03.00 ಗಂಟೆಗೆ ಪಿರ್ಯಾದಿದಾರರದ ಶ್ರೀ ಸಾಯಿಕುಮಾರ ಬಿನ್ ರಾಮಾಂಜಿನಪ್ಪ 19 ವರ್ಷ ಬೋವಿ ಜನಾಂಗ ವಾಸ ಕದಿರೆನ್ನಗಾರಿಪಲ್ಲಿ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 01/10/2021 ರಂದು ರಾತ್ರಿ ಸುಮಾರು 8-30 ರ ಸಮಯದಲ್ಲಿ ವಿಜಯ್ ಜಿಲಾಜಿರ್ಲಾ ಮತ್ತು ಇತರೆ ಮೂರು ಜನರು ನಮ್ಮ ಗ್ರಾಮಕ್ಕೆ ಬಂದು ಗ್ರಾಮಸ್ತರಲ್ಲಿ ಇಲ್ಲಿ ಸಾಯಿ ಕುಮಾರ್ ಯಾರು ಎಂದು ವಿಚಾರಿಸುತ್ತಿದ್ದರು ಆಗ ಅಲ್ಲಿಯೇ ಇದ್ದ ನಮ್ಮ ಅಣ್ಣ ನಾರಾಯಣಸ್ವಾಮಿಯವರು ಯಾಕೇ ನೀವು ನನ್ನ ತಮ್ಮ ಸಾಯಿಕುಮಾರನನ್ನು ವಿಚಾರಿಸುತ್ತಿರುವುದು ಎಂದು ಕೇಳಿದಾಗ ವಿಜಯ ಜೊತೆ ಬಂದ ಅಸಾಮಿ ಒಬ್ಬ ನಿನ್ನ ಅಮ್ಮನಾ ಕೈಯ್ಯೆ ಎಲ್ಲೋ ನಿನ್ನ ತಮ್ಮ ಎಂದು ಚಪ್ಪಲಿಯಿಂದ ನಮ್ಮ ಅಣ್ಣನಿಗೆ ಹೊಡೆದಿರುತ್ತಾನೆ ಆಗ ಅದೇ ಸಮಯದಲ್ಲಿ ನನ್ನ ತಾಯಿಯಾದ ಲಷ್ಮಿದೇವಮ್ಮ ಅವರು ಯಾಕೆ ನನ್ನ ಮಗನನ್ನು ಹೊಡೆದಿದ್ದು ಎಂದು ಕೇಳಿದಕ್ಕೆ ವಿಜಯ್ ಎಂಬುವವನು ನನ್ನ ತಾಯಿಯವರಿಗೆ ಯಾರೇ ನೀನು ಬೇವರ್ಸಿ ಮೂಂಡೆ ಎಂದು ಬೈದು ಕೈಗಳನ್ನು ಹಿಡಿದು ಕೈಬಳೆಗಳನ್ನು ಪುಡಿ ಮಾಡಿ ಕಟ್ಟಿಗೆಯಿಂದ ಹೊಡೆದಿರುತ್ತಾನೆ ನಂತರ ಅಲ್ಲಿ ಜೋರಾಗಿ ಗಲಾಟೆ ಆಗುತ್ತಿದ್ದನ್ನು ಕಂಡ ನಾನು ಅಲ್ಲಿಗೆ ಬಂದು ಯಾಕೆ ನಮ್ಮ ತಾಯಿ ಮತ್ತು ಅಣ್ಣನನ್ನು ಹೊಡೆಯುತಿರುವುದು ಅವರನ್ನು ಹೊಡೆಯಬೇಡಿ ನಾನೇ ಸಾಯಿಕುಮಾರ ನಿಮಗೆ ಏನು ಬೇಕು ಹೇಳಿ ಅಂದು ಕೇಳಿದಾಗ ಆಗ ವಿಜಯ್ ಅಂಬುವನು ಅವರ ಸ್ನೇಹಿತರನ್ನು ಕುರಿತು ಬಾಬು, ಚಂದ್ರು ಬನ್ನಿರೋ ಈ ನನ್ನ ಮಗನನ್ನು ಎತ್ತಾಕೋಳ್ಳರೋ ಎಂದು ಹೇಳಿದಾಗ ಅದಕ್ಕೆನಾನು ಪ್ರತಿಭಟಿಸಿದ್ದು ಆಗ ಅವರು ಒಟ್ಟು ನಾಲ್ಕು ಜನರು ನನ್ನನ್ನು ಕೈಗಳಿಂದ ಕನ್ನೆಗೆ ಬಾಯಿಗೆ  ಹೊಡೆದು ಆಟೋದಲ್ಲಿ ಒಳಗೆ ಹಾಕಿಕೊಂಡು ಹೋಗುತ್ತಿದ್ದಾಗ ನಮ್ಮ ತಾಯಿ ಜೋರಾಗಿ ಕಿರುಚಿಕೊಂಡಾಗ ನಮ್ಮ ಊರಿನ ಚಂದ್ರ ಸೀನ ಬಾಲಚಂದ್ರ  ಆಟೋ ಸೀನ ರಾಮಚಂದ್ರ ಅಂಜಿನಪ್ಪ ರಾಮು ವೆಂಕಟೇಶ ರವರುಗಳು ಓಡಿ ಬಂದು ಆಟೋಅನ್ನು ಹಿಡಿದುಕೋಂಡು ಆಗ ಅದರಲ್ಲಿದ್ದ ಮೂರು ಜನರು ಓಡಿ ಹೋಗಿರುತ್ತಾರೆ ವಿಜಯ್ ಎಂಬ ಆತ ಸಿಕ್ಕಿರುತ್ತಾನೆ ಆಗ ಆತನಿಗೆ ಕೇಳಿದಾಗ ನವೀನ್ ಸೋಮನಾಥ ಪುರ ಎಂಬ ಹುಡುಗ ನಮ್ಮ ಸಾಯಿಕುಮಾರ ನ ಪೋನ್ ನಂಬರ್ ನೀಡಿ ಕಳಿಸಿರುತ್ತಾನೆ ಎಂದು ಹೇಳಿರುತ್ತಾನೆ ನಂತರ ಬಾಬು ಮತ್ತು ಚಂದ್ರು ರವರು ನನ್ನನ್ನು ಕರೆದುಕೊಂಡು ಸಾಯಿಕುಮಾರನನ್ನು ಹೊಡೆಯುವದಕ್ಕೆ ಕರೆದುಕೊಂಡು ಬಂದಿರುತ್ತಾರೆ ಎಂದು ಹೇಳಿರುತ್ತಾನೆ ಆದ್ದರಿಂದ ನಮ್ಮನ್ನು ಹೊಡೆದಿರುವ ಚಂದ್ರು ವಿಜಯ್ ಬಾಬು ಹಾಗೂ ಹೊಡೆದಿರುದಕ್ಕೆ ಕಾರಣವಾಗಿರುವ ನವೀನ್ ಸೋಮನಾಥಪುರ ಮತ್ತು ಆಟೋ ಕೆ.ಎ-01-ಎ.ಎಲ್.6760 ವಾಹನದ ಮೇಲೆ  ಕಾನೂನು ಕ್ರಮ ಕೈಗೋಳ್ಳಲು ಕೋರಿ ನೀಡಿದ ದೂರಾಗಿರುತ್ತದೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 336/2021, ಕಲಂ. 78(1)(a)(vi)ಕೆ.ಪಿ ಆಕ್ಟ್:-

    ದಿನಾಂಕ: 02/10/2021 ರಂದು ಸಂಜೆ 5-45 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾನೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 02/10/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್, ಗೂಳುರು ಸರ್ಕಲ್ ಬಳಿ  ಯಾರೋ ಆಸಾಮಿ ಈ ದಿನ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ -156 ನಟರಾಜ್, ಹೆಚ್ ಸಿ-257 ನರಸಿಂಹಮೂರ್ತಿ, ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೆಪಲ್ಲಿ ಟೌನ್, ಎಸ್ ಬಿ ಎಂ ಸರ್ಕಲ್ ಬಳಿ ಇದ್ದ  ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಗೂಳೂರು ಸರ್ಕಲ್  ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಯು ಮೊಬೈಲ್ ಮುಖಾಂತರ ಹಣವನ್ನು ಪಣವಾಗಿ ಕಟ್ಟಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟವಾಡುತ್ತಿದ್ದು. ಆಸಾಮಿ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಸುರೇಂದ್ರ ಬಿನ್  ಶ್ರೀನಿವಾಸ, 23 ವರ್ಷ, ಬಲಜಿಗ ಜನಾಂಗ, ತರಕಾರಿ ವ್ಯಾಪಾರ, ವಾಸ ಯಂಗ್ ಇಂಡಿಯಾ ಶಾಲೆ ಬಳಿ, 7 ನೇ ವಾರ್ಡ, ಬಾಗೇಪಲ್ಲಿ ಟೌನ್ ಎಂದು ತಿಳಿಸಿರುತ್ತಾರೆ ನಂತರ ಆಸಾಮಿ ಬಳಿ ಇದ್ದ ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ  ದಿನಾಂಕ 01/10/2021 ರಂದು  ಪೋನ್ ಪೇ,  ಮೂಲಕ  ಪಂಜಾಬ್  ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮ್ಯಾಚಿಗೆ  ಹಣವನ್ನು ಬೆಟ್ಟಿಂಗ್ ಕಟ್ಟಿರುತ್ತಾರೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಗೆ ಉಪಯೋಗಿಸಿದ್ದ 1) ಆ್ಯಪಲ್ ಐ ಮೊಬೈಲ್ ಅನ್ನು ಪ್ಲೈಟ್ ಮೂಡ್ ಗೆ ಹಾಕಿದ್ದು ಹಾಗೂ ಆರೋಪಿತನು ಈಗಾಗಲೇ ಪಣಕ್ಕೆ ಗೆದ್ದಿದ್ದ ಕಟ್ಟಿ 1,500/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ 5-45 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲನ್ನು, ಅಸಲು ಪಂಚನಾಮೆ ಹಾಗೂ ಆರೋಪಿಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-297/2021 ರಂತೆ ದಾಖಲಿಸಿಕೊಂಡಿರುತ್ತೆ. ದಿನಾಂಕ 03/10/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿ ಸಿ 344 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರು ಪಡಿಸಿದನ್ನು ಸ್ವಿಕರೀಸಿ ಠಾಣಾ ಮೊ ಸಂ-336/2021 ರಂತೆ ದಾಖಲಿಸಿರುತ್ತೆನೆ.

 

4. ಬಾಗೇಪಲ್ಲಿ ಪೊಲೀಸ್ ಠಾಣೆ, ಮೊ.ಸಂ. 337/2021, ಕಲಂ. 78(1)(a)(vi)ಕೆ.ಪಿ ಆಕ್ಟ್:-

    ದಿನಾಂಕ: 02/10/2021 ರಂದು ಸಂಜೆ 4-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಿಹೆಚ್.ಸಿ-71, ಸುಬ್ರಮಣಿ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ನಾನು ಮತ್ತು  ಮಂಜುನಾಥ ಸಿಪಿಸಿ-531ರವರು ಈ ದಿನ ದಿನಾಂಕ:02.10.2021 ರಂದು ನಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಜಣ್ಣರವರ ಆದೇಶದಂತೆ  ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಡೆ ಗಸ್ತುಮಾಡಿಕೊಂಡು ಮಧ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ಮಿಟ್ಟೇಮರಿ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿಯೇನೆಂದರೆ, ಯಾರೋ ಒಬ್ಬ ಆಸಾಮಿಯು ಸುಮಾರು 2 ದಿನಗಳಿಂದ ಬಾಗೇಪಲ್ಲಿ ತಾಲ್ಲೂಕಿನ ಸೂರಪ್ಪಲ್ಲಿ ಗ್ರಾಮದ ರಾಮದೇವರ ದೇವಸ್ಥಾನ ಮುಂಭಾಗ ಅಕ್ರಮವಾಗಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಮಿಟ್ಟೇಮರಿ ಹೊರ ಪೊಲೀಸ್ ಠಾಣೆಯ ಪಿಸಿ-192 ವಿನೋದ್ ಕುಮಾರ್ , ಪಿಸಿ-276 ಸಾಗರ್ ಮತ್ತು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ತನ್ನ ಕೈಯಲ್ಲಿ ಮೊಬೈಲ್ ಅನ್ನು ಹಿಡಿದುಕೊಂಡು ನೋಡುತ್ತಿದ್ದು,  ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಲಕ್ಷ್ಮೀನರಸಿಂಹಪ್ಪ.ಎಸ್.ಪಿ ಬಿನ್ ಪೆದ್ದಮಲ್ಲಪ್ಪ, 32ವರ್ಷ, ಪರಿಶಿಷ್ಟ ಜಾತಿ, ಟೆಂಪೋ ಚಾಲಕ, ಸೂರಪ್ಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಆಸಾಮಿಯನ್ನು ಪರಿಶೀಲನೆ ಮಾಡಲಾಗಿ ರಿಯಲ್ ಮಿ ಕಂಪನಿಯ ಸ್ಕ್ರೀನ್ ಟೆಚ್ ಮೊಬೈಲ್ ಇದ್ದು, queenexch.com  ನಲ್ಲಿ ದಿನಾಂಕ:01.10.2021 ರಂದು ಕೊಲ್ಕತ್ತಾ ನೈಟ್ ರೈಡರ್ಸ ಮತ್ತು ಪಂಜಾಬ್ ಕಿಂಗ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕಡೆ 1000/-ರೂ ಹಣವನ್ನು ಪಣವಾಗಿ ಇಟ್ಟುರುವುದಾಗಿ ಎಂದು ತೋರಿಸುತ್ತಿದ್ದು, ಸದರಿ ಆಪ್ ನಲ್ಲಿ main IR balance 2277/-  ರೂ 76 ಪೈಸೆಗಳಾಗಿರುತ್ತೆಂತ ಇರುತ್ತೆ. ಆಸಾಮಿಯನ್ನು ಚೆಕ್ ಮಾಡಲಾಗಿ 3100/-ರೂಗಳು ಹಣ ಇದ್ದು,  ಸದರಿ ಹಣವನ್ನು ಕ್ರಿಕೆಟ್ ಬೆಟ್ಟಿಂಗ್ ಆಡಲು ಜೆ.ಪಿ ಎಂಬುವವರ ಮೊಬೈಲ್ ಸಂಖ್ಯೆ;706079011 ನಂಬರಿಗೆ ಆಫ್ ಬಳಸಲು ರಿಚಾರ್ಜ್ ಮಾಡುವ ಸಲುವಾಗಿ ಇಟ್ಟುಕೊಂಡಿರುವುದಾಗಿ ತಿಳಿಸಿರುತ್ತಾನೆ. ಸದರಿ ಆಪ್ ಅನ್ನು ಆರೋಪಿ ಮತ್ತು ಆತನ ಸ್ನೇಹಿತನಾದ ಚಾಕವೇಲು ಗ್ರಾಮದ ಕೇಶವ ಎಂಬುವವರು ಸಹ ಈ ಆಪ್ ನಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಆಡುತ್ತಿರುತ್ತೇವೆಂತ ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಪಂಚನಾಮೆಯ ಮೂಲಕ ಮೊಬೈಲ್ಅನ್ನು ಮತ್ತು ಮೊಬೈಲ್ ನಲ್ಲಿ ಅಳವಡಿಸಿರುವ 2 ಸಿಮ್ ಗಳನ್ನು ಮತ್ತು 3100/- ರೂ ಹಣವನ್ನು ಅಮಾನತ್ತುಪಡಿಸಿಕೊಂಡು. ನಂತರ ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ, queenexch.com  ನಲ್ಲಿ ಹಣವನ್ನು ಪಣವಾಗಿಟ್ಟಿರುವ ಬಗ್ಗೆ ಆಪ್ ನ ಸ್ಕ್ರೀನ್ ಶಾಟ್ ಗಳನ್ನು ತೆಗೆದು ಆರೋಪಿ, ಮೊಬೈಲ್ ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಮೇಲ್ಕಂಡ ಆಸಾಮಿ ಮತ್ತು ಸದರಿ ಕ್ರಿಕೆಟ್ ಬೆಟ್ಟಿಂಗ್ ಆಡಲು ಅಫ್ ನೀಡಿರುವ ಜೆ.ಪಿ ಎಂಬುವವರ ನಂ.7096079011 ಮತ್ತು ಈ ಆಪ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವ ಚಾಕವೇಲು ಗ್ರಾಮದ ಕೇಶವ  ಎಂಬುವವರ ವಿರುದ್ದ ಮುಂದಿನ ಕಾನೂನುರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿಆರ್ ನಂ-296/2021 ರಂತೆ ದಾಖಲಿಸಿಕೊಂಡಿರುತ್ತೆ. ದಿನಾಂಕ 03/10/2021 ರಂದು ಮದ್ಯಾಹ್ನ 4-00 ಗಂಟೆಗೆ ಪಿ ಸಿ 344 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರು ಪಡಿಸಿದನ್ನು ಸ್ವಿಕರೀಸಿ ಠಾಣಾ ಮೊ ಸಂ-337/2021 ರಂತೆ ದಾಖಲಿಸಿರುತ್ತೆನೆ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ, ಮೊ.ಸಂ. 75/2021, ಕಲಂ. 295A ಐಪಿಸಿ:-

    ದಿನಾಂಕ; 03-10-2021 ರಂದು ರಾತ್ರಿ 8.10 ಗಂಟೆಗೆ ಪಿರ್ಯಾದಿಯಾದ ಶ್ರೀ ಹರೀಶ ಬಿನ್ ಶೀನಪ್ಪ, 28 ವರ್ಷ, ಮಡಿವಾಳ, ಕಾರ್ಮಿಕ, ವಾಸ; ಕಂದವಾರ ಚಿಕ್ಕಬಳ್ಳಾಪುರ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಹರೀಶ ಎಂಬ ತಾನು, ತನ್ನ ಸ್ನೇಹಿತರಾದ ತಿಲಕ್ ಕೆ.ವಿ, ಹರೀಶ್, ಗಂಗಾಧರ್ ನಾವೆಲ್ಲರೂ ತನ್ನ ಸಹೋದರಿಯಾದ ಸರಸ್ವತಿ ಕಂದವಾರ ವಾರ್ಡ್ ನಂ: 14, ಚಿಕ್ಕಬಳ್ಳಾಪುರದಲ್ಲಿ ವಾಸವಿದ್ದು, ಆಕೆಯ ಮನೆಗೆ ತಾನು ಮತ್ತು ತನ್ನ ಸ್ನೇಹಿತರು, ದಿನಾಂಕ; 03-10-2021 ರಂದು ಬಾನುವಾರ ಬೆಳಗ್ಗೆ 11.00 ಗಂಟೆಗೆ ಸುಮಾರಿಗೆ ಬೇಟಿ ನೀಡಿರುತ್ತೇವೆ. ಆಗ ಅಲ್ಲಿ ತನ್ನ ಸಹೋದರಿ ಮನೆಗೆ ಅಂಟಿಕೊಂಡಿರುವಂತೆ ಇರುವ ಮನೆಯಿಂದ ಜೋರಾದ ಶಬ್ದಗಳೊಂದಿಗೆ ಹಿಂದು ದೇವರುಗಳನ್ನು ಹಾಗೂ ಹಿಂದೂ ಧರ್ಮವನ್ನು ನಿಂದಿಸುತ್ತಾ ಹಿಂದು ದೇವರುಗಳು ದೇವರಲ್ಲ ಎಲ್ಲಾ ಪ್ರಾಣಿಗಳನ್ನು ದೇವರೆಂದು ಕರೆಯುತ್ತಾರೆ, ಕಾಗೆ, ಕೋತಿ, ಧನಗಳನ್ನು ದೇವರು ಎಂದು ಕರೆಯುತ್ತಾರೆ. ಅವುಗಳನ್ನು ನಂಬಬೇಡಿ ಏಸು ಒಬ್ಬನೇ ದೇವರು ಏಸುವನ್ನು ಪ್ರಾರ್ಥಿಸಿ ಹಿಂದು ದೇವರುಗಳನ್ನು ಪ್ರಾರ್ಥಿಸಬೇಡಿ ಅದರಿಂದ ಯಾವುದೇ ಉಪಯೋಗವಿಲ್ಲ ಸೃಷ್ಟಿಕರ್ತ ಏಸು ಒಬ್ಬನೇ ಎಂದು ಹೇಳುತ್ತಿರುವುದು ತನಗೂ, ತನ್ನ ಸ್ನೇಹಿತರಿಗೂ ಕೇಳಿಸುತ್ತದೆ. ನಂತರ ತಾವು ಒಳಗೆ ಹಿಂದೂ ಧರ್ಮದ ವಿರುದ್ದ ಚಟುವಟಿಕೆಗಳು ನಡೆಯುತ್ತಿದೆ ಎಂದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ನಂತರ ಓಳಗೆ ಹೋಗಿ ಅವರನ್ನು ಪ್ರಶ್ನಿಸಲು ಮುಂದಾದಾಗ ಅವರು ಇಲ್ಲಿ ಏಸುವಿನ ಪ್ರಾರ್ಥನೆ ನಡೆಯುತ್ತಿದೆ ಎಂದು ಹೇಳಿದರು. ನಾವು ಇಲ್ಲಿ ಸಣ್ಣ ಸಣ್ಣ ಮಕ್ಕಳಿರುವರು ಒಬ್ಬರೂ ಮಾಸ್ಕ್ ಧರಿಸಿಲ್ಲ, ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ ಅದು ಅಲ್ಲದೇ ಕಿರಿದಾದ ಜಾಗವಿದ್ದು, ಸಣ್ಣ ಮಕ್ಕಳನ್ನು ಸೇರಿಸಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿಕೊಂಡು ಪ್ರಾರ್ಥನೆ ನಡೆಸುತ್ತಿರುವುದು ಸುಳ್ಳು ಏಕೆ ಹೇಳುತ್ತೀರ ಹಿಂದು ಧರ್ಮಕ್ಕೆ ಹೇಳಲು ಅವರು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಹಾಗೂ ಹೊರಗೆ ಹೋಗಲು ಹೇಳಿದ್ದು, ಇದರಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದಲ್ಲದೇ ತನ್ನ ಧಾರ್ಮಿಕ ಪ್ರಕಾರ ಹಸುವನ್ನು ಗೋಮಾತೆ ಎಂದು ಕಾಗೆಯನ್ನು ಶನೇಶ್ವರ ಎಂದು ಆಂಜನೇಯನನ್ನು ಕೋತಿ ಎಂದು ಹೇಳಿ ನಿಂದಿಸಿ ದಕ್ಕೆ ತಂದಿರುತ್ತಾರೆ. ನಂತರ ಅವರ ಹೆಸರು ವಿಳಾಸ ತಿಳಿಯಲಾಗಿ ಜಾನ್ ಅಬ್ರಾಹಂ ಬೆಂಗಳೂರು ಹಾಗೂ ಇತರರು ಎಂದು ತಿಳಿಯಿತು. ಆದ್ದರಿಂದ ಇವರ ವಿರುದ್ದ ಸೂಕ್ತವಾದ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 437/2021, ಕಲಂ. 143, 147, 148, 323, 324, 504, 506 ರೆ/ವಿ 149 ಐಪಿಸಿ:-

    ದಿನಾಂಕ: 03/10/201 ರಂದು ಸಂಜೆ 5.00 ಗಂಟೆಗೆ ಪ್ರಕಾಶ್ ಬಿನ್ ಮುನಿವೆಂಕಟರಾಯಪ್ಪ, 32 ವರ್ಷ, ಚಾಲಕ ವೃತ್ತಿ, ಆದಿ ಕರ್ನಾಟಕ ಜನಾಂಗ, ಮಲ್ಲಿಕಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 02/10/2021 ರಂದು ಬೆಳಗ್ಗೆ ತಮ್ಮ ಮನೆಯ ಬಳಿ ಚರಂಡಿ ಸ್ವಚ್ಚ ಮಾಡುವ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ವಾಸಿ ಚಿಕ್ಕನಾರಾಯಣಪ್ಪ ರವರಿಗೂ ಬಾಯಿ ಮಾತಿನಲ್ಲಿ ಗಲಾಟೆಯಾಗಿರುತ್ತೆ. ನಂತರ ಅದೇ ದಿನ ಸಂಜೆ 5.00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದ ತಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ಚಿಕ್ಕನಾರಾಯಣಪ್ಪ ರವರ ಕಡೆಯವರಾದ ನಾಯಕ ಜನಾಂಗದ 1)ಸಂಪತ್ ಬಿನ್ ಮರಿಯಪ್ಪ, 25 ವರ್ಷ, ಕೂಲಿ ಕೆಲಸ, 2) ಗಂಗಪ್ಪ ಬಿನ್ ಶ್ರೀರಾಮಪ್ಪ, 30 ವರ್ಷ, ಕೂಲಿ ಕೆಲಸ, 3)ನರಹರಿ ಬಿನ್ ನಾರಾಯಣಸ್ವಾಮಿ, 25 ವರ್ಷ, ಕೂಲಿ ಕೆಲಸ, 4)ಪ್ರಕಾಶ್ ಬಿನ್ ವಸಂತಪ್ಪ, 25 ವರ್ಷ, ಕೂಲಿ ಕೆಲಸ, 5)ದೇವರಾಜ್ ಬಿನ್ ನರಸಿಂಹಪ್ಪ, 30 ವರ್ಷ, ಕೂಲಿ ಕೆಲಸ ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಸಂಪತ್ ರವರು ತನ್ನನ್ನು ಕುರಿತು “ಏನೋ ಬೋಳಿ ನನ್ನ ಮಗನೇ ಏಕೆ ಚಿಕ್ಕನಾರಾಯಣಪ್ಪ ರವರ ಮೇಲೆ ಗಲಾಟೆ ಮಾಡದ್ದು” ಎಂದು ಅವಾಚ್ಯಶಬ್ದಗಳಿಂದ ಬೈದು, ಅಲ್ಲಿಯೇ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ತನ್ನ ಬೆನ್ನಿನ ಮೇಲೆ ಹೊಡೆದು ನೋವುಂಟು ಮಾಡಿದನು. ಅಷ್ಟರಲ್ಲಿ ತಮ್ಮ ಗ್ರಾಮದ ನಮ್ಮ ಜನಾಂಗದ ಮಂಜುನಾಥ ಬಿನ್ ವೆಂಕಟರಾಯಪ್ಪ, 38 ವರ್ಷ, ಜಿರಾಯ್ತಿ, ಮಂಜುನಾಥ ಬಿನ್ ಪೂಜಪ್ಪ, 30 ವರ್ಷ, ಜಿರಾಯ್ತಿ, ಭರತ್ ಬಿನ್ ಶ್ರೀನಿವಾಸ, 20 ವರ್ಷ, ಜಿರಾಯ್ತಿ, ನಂದಿನಿ ಕೊಂ ಪ್ರಕಾಶ್, 36 ವರ್ಷ, ಜಿರಾಯ್ತಿ, ವೆಂಕಟಮ್ಮ ಕೊಂ ಮುನಿವೆಂಕಟರಾಯಪ್ಪ, 52 ವರ್ಷ, ಜಿರಾಯ್ತಿ, ಮತ್ತು ಜ್ಯೋತ್ತಮ್ಮ ಕೊಂ ಮಂಜುನಾಥ, 35 ವರ್ಷ, ಜಿರಾಯ್ತಿ, ರವರು ಜಗಳ ಬಿಡಿಸಲು ಬಂದಿದ್ದು ಆಗ ಗಂಗಪ್ಪ ಬಿನ್ ಶ್ರೀರಾಮಪ್ಪ ರವರು ಅಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಮಂಜುನಾಥ ಬಿನ್ ವೆಂಕಟರಾಯಪ್ಪ ರವರಿಗೆ ಕಣ್ಣು ಮತ್ತು ಕಿವಿಯ ಬಳಿ ಹೊಡೆದು ರಕ್ತಗಾಯ ಪಡಿಸಿದನು. ಉಳಿದವರು ಮಂಜುನಾಥ ಬಿನ್ ಪೂಜಪ್ಪ, ಭರತ್, ನಂದಿನಿ ವೆಂಕಟಮ್ಮ ಮತ್ತು ಜ್ಯೋತ್ತಮ್ಮ ರವರಿಗೆ ಕೈ ಗಳಿಂದ ಮೈ ಮೇಲೆ ಹೊಡೆದು, ಕಾಲುಗಳಿಂದ ಒದ್ದು “ಇನ್ನೊಂದು ಸಾರಿ ನಮ್ಮವರ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿದರು ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ದೇವರಾಜ್ ಬಿನ್ ಪೂಜಪ್ಪ ಮತ್ತು ಗಂಗಾಧರ್ ಬಿನ್ ವೆಂಕಟರಾಯಪ್ಪ ರವರು ಬಂದು ಜಗಳ ಬಿಡಿಸಿದರು. ನಂತರ ಗಾಯಗೊಂಡಿದ್ದ ತಮ್ಮನ್ನು ಯಾವುದೋ ಟಾಟಾ ಏಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿದರು. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ತಾನು ಠಾಣೆಗೆ ಬಂದು ದೂರು ನೀಡುತ್ತಿದ್ದು ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್ ಠಾಣೆ, ಮೊ.ಸಂ. 185/2021, ಕಲಂ. 323, 448, 504, 506 ರೆ/ವಿ 34 ಐಪಿಸಿ:-

    ಪಿರ್ಯಾದಿದಾರರಾದ ಕೃಷ್ಣಮೂರ್ತಿ ಬಿನ್ ಲೇಟ್ ಸೂರ್ಯನಾರಾಯಣಶೆಟ್ಟಿ, 51 ವರ್ಷ, ವೈಶ್ಯರು, ವ್ಯಾಪಾರ ವಾಸ ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಚಿಂತಾಮಣಿ ನಗರದ ಡೈಮಂಡ್ ಟಾಕೀಸ್ ರಸ್ತೆಯಲ್ಲಿ ಅರಿಶಿಣ-ಕುಂಕುಮ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನಗೆ ಹಾಗೂ ಗಜಾನನ ವೃತ್ತದ ಬಳಿ ಇರುವ ಜಗನ್ನಾಥ್  ಬಿನ್  ಲೇಟ್ ಲಕ್ಷ್ಮಣರಾವ್  ರವರಿಗೆ ಹಣದ ವ್ಯವಹಾರವಿದ್ದು ಜಗಾನ್ನಾಥ್ ರವರು ತನಗೆ ಹಣ ಕೊಡಬೇಕಾಗಿದ್ದು ನಾನು ಹಣ ಕೇಳಿದಾಗ ನನ್ನ  ಮೇಲೆ ಜಗಳ ತೆಗೆೆಯುತ್ತಿದ್ದು ಈ ವಿಚಾರದಲ್ಲಿ ನಮ್ಮ ಹಿರಿಯರು ರಾಜಿ ಪಂಚಾಯ್ತಿ ಮಾಡಿರುತ್ತಾರೆ. ಹೀಗಿರುವಾಗ ದಿನಾಂಕ 29/09/2021 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ತಾನು ಹಾಗೂ ತನ್ನ ಹೆಂಡತಿ ಅರ್ಪಿತಾ ರವರು ಮನೆಯಲ್ಲಿದ್ದಾಗ ಜಗನ್ನಾಥ್ ರಾವ್ ಬಿನ್ ಲಕ್ಷ್ಮಣರಾವ್, ವಸಂತ್ ಬಿನ್ ನಾಗರಾಜ್  ಹಾಗೂ ಇತರೇ ಯವರು ತಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ತನ್ನನ್ನು ಕುರಿತು ಏ ಲೋಪರ್ ನನ್ನ ಮಗನೇ ತಾನು ಏಕೆ ನಿನಗೆ ಹಣ ಕೊಡಬೇಕು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ತಾನು ಜಗನ್ನಾಥ್ ರವರಿಗೆ ಏಕೆ ಈ ರೀತಿ ಬೈಯ್ಯುತ್ತಿದ್ದೀಯಾ ಎಂದು ಕೇಳುವಷ್ಟರಲ್ಲಿ  ಜಗನ್ನಾಥ್ ರಾವ್ ರವರು ಕೈಗಳಿಂದ ತನ್ನ ಹೊಟ್ಟೆಗೆ, ಬೆನ್ನಿಗೆ ಗುದ್ದಿ ಮೂಗೇಟುಂಟು ಮಾಡಿದಾಗ ಅಡ್ಡ ಬಂದ ನನ್ನ ಹೆಂಡತಿಯಾದ ಅರ್ಪಿತಾ  ರವರನ್ನು ಹಾಗೂ ತಮ್ಮ ಅತ್ತೆಯಾದ ಗೌರಮ್ಮ ರವರನ್ನು ಜಗನ್ನಾಥ್,ವಸಂತ್ ಹಾಗೂ ಇತರೇ ರವರು ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿರುತ್ತಾರೆ. ನಂತರ ಇಬ್ಬರು ಸೇರಿ ಇನ್ನೋಮ್ಮೆ ಹಣ ಕೇಳಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಮನೆಯ ಮಾಲೀಕರಾದ ಶಿವ ಶಂಕರ್ ಹಾಗೂ ರಘು ರವರು ಜಗಳ ಬಿಡಿಸಿ ಅವ ಆದ್ದರಿಂದ ಹಣದ ವಿಚಾರದಲ್ಲಿ ತಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ತಮ್ಮನ್ನು ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುವ ಜಗನ್ನಾಥ್ ರಾವ್, ವಸಂತ್ ಹಾಗೂ ಇತರೇಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ. ಸದರಿ ಗಲಾಟೆ ವಿಚಾರದಲ್ಲಿ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆಗೂ ರಾಜಿಗೆ ಬಾರದ ಕಾರಣ ತಡವಾಗಿ ದೂರು ನೀಡಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 272/2021, ಕಲಂ. 279, 304(A)ಐಪಿಸಿ ಮತ್ತು ಕಲಂ. 187 ಐಎಂವಿ ಆಕ್ಟ್:-

    ದಿನಾಂಕ:04/10/2021 ರಂದು ಬೆಳಿಗ್ಗೆ 8-45 ಗಂಟೆಗೆ ಪಿರ್ಯಾದಿ ರಂಗರಾಜು ಬಿನ್  ನಾರಾಯಣಪ್ಪ, 38 ವರ್ಷ, ಕುರುಬರು, ಜಿರಾಯ್ತಿ, ವಾಸ ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದೊಡ್ಡಕುರುಗೋಡು ಗ್ರಾಮದ ವಾಸಿಯಾಗಿದ್ದು, ಹಾಲಿ ಗ್ರಾಮ ಪಂಚಾಯ್ತಿ ಸದಸ್ಯನಾಗಿರುತ್ತೇನೆ.  ದಿನಾಂಕ:04/10/2021 ರಂದು ಬೆಳಿಗ್ಗೆ ಸುಮಾರು 5-30 ಗಂಟೆ ಸಮಯದಲ್ಲಿ ನಾನು ನಮ್ಮ ಜಮೀನುಗಳ ಕಡೆ ಹೋಗಿ ಮತ್ತೆ ವಿಧುರಾಶ್ವತ್ಥ ಕಡೆಗೆ ನಮ್ಮ ಗ್ರಾಮದ ಗೇಟ್ ನ ಸಂಜೀವರಾಯಪ್ಪ ರವರ ಮನೆಯ ಬಳಿ ವಾಪಸ್ಸು ಬರುತ್ತಿದ್ದಾಗ, ಹಿಂದೂಪುರ - ಬೆಂಗಳೂರು ಎಸ್.ಹೆಚ್.-9 ರಸ್ತೆಯಲ್ಲಿ ರಸ್ತೆಯ ಎಡ ಭಾಗದಲ್ಲಿ  ಯಾರೋ ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಟಾರು ರಸ್ತೆಯ ಮೇಲೆ ಬಿದ್ದಿದ್ದು ನಾನು ಹೋಗಿ ನೋಡಲಾಗಿ ತಲೆಗೆ, ಮುಖದ ಮೇಲೆ ರಕ್ತಗಾಯಗಳಾಗಿದ್ದು, ಎಡ ಕಾಲು ಮತ್ತು ಬಲ ಕೈ ಮೇಲೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಇದನು ನೋಡಿದರೆ ಮೃತ ಅಪರಿಚಿ ವ್ಯಕ್ತಿ ಹಿಂದೂಪುರ ಕಡೆಯಿಂದ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ  ಯಾವುದೋ ವಾಹನವು ನಡೆದುಕೊಂಡು ಹೋಗುತ್ತಿದ್ದ  ಅಪರಿಚಿತ ವ್ಯಕ್ತಿಗೆ ಅಫಘಾತಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಅಪಘಾತವನ್ನುಂಟು ಮಾಡಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ವಾಹನ ಮತ್ತು ಚಾಲಕನನನ್ನು ಪತ್ತೆ ಮಾಡಿ  ಅವರ ವಿರುದ್ಧ ಕಾನೂನು  ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ ಮೃತನ ಪತ್ತೆಯ ಬಗ್ಗೆ ನಾನು ನಮ್ಮ ಗ್ರಾಮದ ಹಾಗೂ ನಮ್ಮ ಸುತ್ತಮುತ್ತಲಿನ ಗ್ರಾಮದ ನನಗೆ ಪರಿಚಿಯವರುವವರಲ್ಲಿ ವಿಚಾರ ಮಾಡಲಾಗಿ ಅಪರಿಚಿತ ವ್ಯಕ್ತಿಯ ಸಂಬಂಧಿರು ಯಾರೂ ಪತ್ತೆಯಾಗಿರುವುದಿಲ್ಲ. ಈ ಘಟನೆಯು ಈ ದಿನ ಬೆಳಗಿನ ಜಾವ ನಡೆದಿರಬಹುದು, ಮೃತ ಅಪರಿಚಿತ ವ್ಯಕ್ತಿಯ  ಚಹರೆ ವಿವರಗಳು, ಹೆಸರು:- ತಿಳಿದು ಬಂದಿರುವುದಿಲ್ಲ, ವಯಸ್ಸು:- ಸುಮಾರು 60 ರಿಂದ 65  ವರ್ಷ, ಎತ್ತರ:- ಸುಮಾರು 5 ರಿಂದ 5.4  ಅಡಿ , ಚಹರೆ ವಿವರಗಳು:-   ಸಾದಾರಣ ಮೈ ಕಟ್ಟು, ಬಿಳಿ ತಲೆ ಕೂದಲು, ಬಿಳಿ ಕೂದಲಿನ ಗಡ್ಡ, ಗೋಧಿ ಮೈಬಣ್ಣ, ಬಟ್ಟೆಗಳು:- ಕಪ್ಪು, ಹಳದಿ ಮತ್ತು ಬಿಳಿ ಮಿಶ್ರಿತ ಬಣ್ಣದ ಷರ್ಟ್,ಹಸಿರು ಬಣ್ಣದ ಕಾಚಾ ಧರಿಸಿರುತ್ತಾರೆಂದು, ನೀಡಿದ ದೂರಿನ ಸಾರಾಂಶವಾಗಿರುತ್ತದೆ.

 

9. ಗುಡಿಬಂಡೆ ಪೊಲೀಸ್ ಠಾಣೆ, ಮೊ.ಸಂ. 237/2021, ಕಲಂ. 279, 337 ಐಪಿಸಿ:-

    ದಿನಾಂಕ: 04.10.2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಎಸ್ ಮೋಹನ್ ಬಿನ್ ಸೆಂಗೋಡೆನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ತೆಲಂಗಾಣದಿಂದ TN-52-B-2666 ನೊಂದಣಿ ಸಂಖ್ಯೆಯ ಲಾರಿಯಲ್ಲಿ ಗ್ರಾನೈಟ್ ನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದಾಗ, ದಿ:04.10.2021 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಯರ್ರಲಕ್ಕೇನಹಳ್ಳಿ ಕ್ರಾಸ್ ನ ಬಳಿ ಇರುವ ರಾಜಾಸ್ಥಾನ ಹರಿಯಾಣ ಮಹದೇವ ಹೋಟೆಲ್ ಮುಂಬಾಗ ರಾಷ್ಟ್ರೀಯ ಹೆದ್ದಾರಿ - 44 ರಲ್ಲಿ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದರುಗಡೆಯಿಂದ ವಿರುದ್ದ ದಿಕ್ಕಿನಲ್ಲಿ ಬಂದ NL-01-AD-0678 ಲಾರಿಯ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಓಡಿಸುತ್ತಿದ್ದ TN-52-B-2666 ಲಾರಿಗೆ ಡಿಕ್ಕಿ ಹೊಡೆಸಿ ರಸ್ತೆ ಅಪಘಾತವನ್ನುಂಟು ಮಾಡಿದ ಪರಿಣಾಮ TN-52-B-2666 ಲಾರಿಯ ಮುಂಬಾಗ ಪೂರ ಜಖಂಗೊಂಡಿರುತ್ತೆ. ಲಾರಿಯಲ್ಲಿದ್ದ ನನಗೆ ಎಡಕಾಲಿಗೆ ರಕ್ತಗಾಯವಾಗಿರುತ್ತೆ. ಮತ್ತು ನಮ್ಮ ಲಾರಿಯಲ್ಲಿದ್ದ ಕ್ಲೀನರ್ ಯುವರಾಜ್ ಬಿನ್ ಪಳನಿಸ್ವಾಮಿ, 25 ವರ್ಷ, ಪ.ಜಾತಿ. ತಟ್ಟಾಂಗುಟ್ಟೈ ಗ್ರಾಮ, ತರುಚಂಗೋಡ್ ತಾಲ್ಲೂಕು, ನಾಮುಕಲ್ ಜಿಲ್ಲೆ, ತಮಿಳುನಾಡು ರವರಿಗೆ ಮೂಗೇಟುಗಳುಂಟಾಗಿರುತ್ತೆ. ಈ ರಸ್ತೆ ಅಪಘಾತವನ್ನುಂಟು ಮಾಡಿರುವ NL-01-AD-0678 ಲಾರಿಯ ಮುಂಬಾಗ ಎಡಭಾಗದಲ್ಲಿ ಜಖಂಗೊಂಡಿರುತ್ತೆ. ಈ ರಸ್ತೆ ಅಪಘಾತವನ್ನುಂಟು ಮಾಡಿರುವ ಲಾರಿಯ ಚಾಲಕನ ಹೆಸರು ಮತ್ತು ವಿಳಾಸಗಳನ್ನು ಕೇಳಿ ತಿಳಿಯಲಾಗಿ  ಇಂದ್ರಪ್ರತಾಪ್ ಬಿನ್ ರಾಮಚಂದ್ರ, 50 ವರ್ಷ, ಯಾದವ ಜನಾಂಗ, ಸರಯ್ಯ ಗ್ರಾಮ, ಕದರ್ ತಾಲ್ಲೂಕು, ಅಜಂಗಡ ಜಿಲ್ಲೆ. ಉತ್ತರಪ್ರದೇಶ ಎಂದು ತಿಳಿದು ಬಂದಿರುತ್ತೆ. ಕಾನೂನು ರೀತ್ಯ ಕ್ರಮ ಜರುಗಿಸಲು ಈ ಮೂಲಕ ಕೋರಿದೆ. ಎಂದು ನಾನು ತೆಲುಗಿನಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಟೈಪ್ ಮಾಡಿ ಓದಿ ತೆಲುಗಿನಲ್ಲಿ ತರ್ಜುಮೆ ಮಾಡಿ ಹೇಳಿರುತ್ತಾರೆ ಕೇಳಿರುತ್ತೇನೆ ಸರಿ ಇರುತ್ತೆ. ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 189/2021, ಕಲಂ. 279, 337, 304(A)ಐಪಿಸಿ:-

    ದಿನಾಂಕ:03/10/2021  ರಂದು ಪಿರ್ಯಾದಿದಾರರಾದ ಲೋಕೇಶ್ ಎಸ್.ಕೆ ಬಿನ್ ಕೃಷ್ಣಪ್ಪ, 35 ವರ್ಷ, ಕುರುಬ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ಶಿರವಾರ ಗ್ರಾಮ, ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನನ್ನ ಹೆಂಡತಿ ಮತ್ತು ಮಗು ದೊಡ್ಡ ಹುಸೇನ್ ಪುರದಲ್ಲಿ ಇದ್ದು ಅವರನ್ನು ನೋಡಿಕೊಂಡು ಬರುವುದಾಗಿ ಈ ದಿನ  ನಮ್ಮ ತಂದೆ ಕೃಷ್ಣಪ್ಪ ಬಿನ್ ಲೇಟ್ ರಂಗಪ್ಪ @ ರಂಗಯ್ಯ ಮತ್ತು ತಾಯಿ ಹನುಮಕ್ಕ ರವರು ನಮ್ಮ  ಬಾಬತ್ತು ಕೆಎ-43-ಕ್ಯೂ-5921 ಟಿವಿಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಹೋಗಿ ಬರುವುದಾಗಿ ತಿಳಿಸಿ ಮದ್ಯಾಹ್ನ 12.30 ಗಂಟೆಗೆ ಮನೆಯಿಂದ ಹೋಗಿದ್ದು ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿ ಮಹೇಶ್ ಬಿನ್ ಗೋಪಿನಾಥ್ ರವರು ಫೋನ್ ಮಾಡಿ ನಿಮ್ಮ ತಂದೆ ದೊಡ್ಡಬಳ್ಳಾಪುರ-ಗೌರಿಬಿದನೂರು ಎಸ್.ಹೆಚ್-9 ರಸ್ತೆಯ ಬಸವಾಪುರ ಗ್ರಾಮದ ಬಳಿ ಗೌರಿಬಿದನೂರು ಕಡೆಗೆ ಹೋಗುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಬಂದ ಕೆಎ-32-ಪಿ-6139 BREZZA CAR ನ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಮದ್ಯಾಹ್ನ 1.15 ಗಂಟೆ ಸಮಯದಲ್ಲಿ ಅಪಘಾತ ಉಂಟು ಮಾಡು ನಿಮ್ಮ ತಂದೆ ಕೃಷ್ಣಪ್ಪ ರವರಿಗೆ ತಲೆಗೆ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನಿಮ್ಮ ತಾಯಿಗೂ ಸಹಾ ತಲೆಗೆ ಕೈಕಾಲುಗಳಿಗೆ ಗಾಯಗಳಾಗಿದ್ದು ನಾನು ಮತ್ತು ಅಲ್ಲಿನ ಸ್ಥಳೀಯರ ಸಹಾಯದಿಂದ ಉಪಚರಿಸಿ 108 ಆಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದು ತಕ್ಷನ ಸ್ಥಳಕ್ಕೆ ಬಂದು ನೋಡಿ ನಂತರ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೋಗಿ ನಮ್ಮ ತಾಯಿ ಮತ್ತು ನನಗೆ ಫೋನ್ ಮಾಡಿದ ಮಹೇಶನನ್ನು ವಿಚಾರಿಸಲಾಗಿ ವಿಷಯ ನಿಜವಾಗಿದ್ದು ನಮ್ಮ ತಂದೆಯ  ಮತ್ತು ನಮ್ಮ ತಾಯಿಯ ಅಪಘಾತಕ್ಕೆ  ಕಾರಣನಾದ ಕೆಎ-32-ಪಿ-6139 ಕಾರಿನ ಚಾಲಕ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿದ್ದರಿಂದ ನಮ್ಮ ತಂದೆ ಮೃತಪಟ್ಟಿದ್ದು ಅಪಘಾತ ಪಡಿಸಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 307/2021, ಕಲಂ. 323, 324, 504, 506 ರೆ/ವಿ 34 ಐಪಿಸಿ:-

    ದಿನಾಂಕ: 04-10-2021 ರಂದು ಬೆಳಿಗ್ಗೆ 8.15 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶ್ರೀ ಶಿವಕುಮಾರ್ ಬಿನ್ ಸಂಜೀವಪ್ಪ, 27 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಸುಗಟೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆ ಪಡೆದು ಬೆಳಿಗ್ಗೆ 9.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ಈಗ್ಗೆ ಒಂದೂವರೆ ವರ್ಷದ ಹಿಂದೆ ತಾನು ತಮ್ಮ ಗ್ರಾಮದ ಚಿತ್ರಾ ಬಿನದ ನರಸಿಂಹಪ್ಪ ಎಂಬಾಕೆಯನ್ನು ಪ್ರೀತಿ ಮಾಡಿ ಆಕೆಯನ್ನು ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಅವರ ತಂದೆ ನರಸಿಂಹಪ್ಪ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು ಆ ಸಮಯದಲ್ಲಿ ಚಿತ್ರ ರವರು ಅಪ್ರಾಪ್ತೆಯಾಗಿದ್ದ ಕಾರಣ ತನ್ನ ಮೇಲೆ ಕೇಸು ದಾಖಲಾಗಿರುತ್ತೆ, ನಂತರ ದಿನಾಂಕ: 08-03-2021 ರಂದು ಚಿತ್ರ ರವರು ತನಗೆ ಪೋನ್ ಮಾಡಿ ತನ್ನನ್ನು ಗ್ರಾಮಕ್ಕೆ ಕರೆಯಿಸಿಕೊಂಡು ಎಲ್ಲಿಯಾದರೂ ಹೋಗಿ ಮದುವೆಯಾಗೋಣ ಎಂದು ಹೇಳಿದ್ದರಿಂದ ತಾನು ಆಕೆಯನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿರುತ್ತೇನೆ. ಈ ವಿಚಾರದಲ್ಲಿ ತನಗೆ ಮತ್ತು ನರಸಿಂಹಪ್ಪ ರವರ ಕುಟುಂಬದವರಿಗೆ ವೈಮನಸ್ಸುಗಳಿರುತ್ತೆ, ಈ ಹಿನ್ನೆಲೆಯಲ್ಲಿ ದಿನಾಂಕ: 03-10-2021 ರಂದು ಸಂಜೆ 6.00 ಗಂಟೆಯಲ್ಲಿ ತಾನು ಹಾಗೂ ತಮ್ಮ ಮಾವನಾದ ಚಿನ್ನಪ್ಪ ರವರು ತಮ್ಮ ಗ್ರಾಮದ ಹಾಲುಕುಂಟೆ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯದ ಬಳಿ ನಿಂತಿದ್ದಾಗ ನರಸಿಂಹಪ್ಪನ ಮಗನಾದ ಭುವನೇಶ ರವರು ತನ್ನನ್ನು ಹಾಗೂ ತಮ್ಮ ಮಾವನನ್ನು ಕುರಿತು ನಿಮ್ಮ ಅಮ್ಮನ್ನೇ ಕ್ಯಾಯ ಲೋಪರ್ ನನ್ನ ಮಕ್ಕಳೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಆಗ ತಾನು ಏಕೆ ಬೈದಾಡಿಕೊಳ್ಳುತ್ತಿದ್ದೀಯ ಎಂದು ಕೇಳಿದ್ದಕ್ಕೆ ಭುವನೇಶ ರವರು ತಮ್ಮ ಗ್ರಾಮದ ಆತನ ಸ್ನೇಹಿತರಾದ ಸಂತೋಷ ಬಿನ್ ಪಿಳ್ಳಪ್ಪ ಮತ್ತು ಪವನ್ ಬಿನ್ ನಾರಾಯಣಪ್ಪ ರವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮೂರು ಜನರು ಸೇರಿಕೊಂಡು ತನಗೆ ಕೈಗಳಿಂದ ಹೊಡೆದು ಅಲ್ಲಿಯೇ ಇದ್ದ ಒಂದು ಕಲ್ಲಿನಿಂದ ಸಂತೋಷನು ತನಗೆ ಕತ್ತಿನ ಬಳಿ ಹೊಡೆದು ಗಾಯವುಂಟುಮಾಡಿದ್ದು ಕಲ್ಲನ್ನು ಭವನೇಶನು ಸಂತೋಷನ ಕೈಯಿಂದ ಕಿತ್ತುಕೊಂಡು ತನಗೆ ಬಲ ಭಾಗದ ಕಿವಿಯ ಬಳಿ ಹೊಡೆದು ಮೂಗೇಟು ಉಂಟುಮಾಡಿದ್ದು, ಆಗ ಮೂರು ಜನರು ಸೇರಿಕೊಂಡು ತನ್ನನ್ನು ಕೆಳಕ್ಕೆ ತಳ್ಳಿ ಕಾಲಿನಲ್ಲಿ ಒದ್ದು ನೀನು ಏನಾದರೂ ತಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವನ ಸಹಿತ ಉಳಿಸುವುದಿಲವಲೆಂದು ಪ್ರಾಣ ಬೆದರಿಕೆ ಹಾಕಿದ್ದು ಆಗ ತನ್ನ ಜೊತೆಯಲ್ಲಿದ್ದ ತನ್ನ ಮಾವ ಚಿನ್ನಪ್ಪ ರವರು ಗಲಾಟೆ ಬಿಡಿಸಿ ತನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವಿನಾ ಕಾರಣ ಹಳೆಯ ವೈಶಮ್ಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಭುವನೇಶ, ಸಂತೋಷ ಮತ್ತು ಪವನ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ: 307/2021 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ, ಮೊ.ಸಂ. 308/2021, ಕಲಂ. 323, 324, 504, 506 ರೆ/ವಿ 34 ಐಪಿಸಿ:-

    ದಿನಾಂಕ: 04-10-2021 ರಂದು ಬೆಳಿಗ್ಗೆ 9.15 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶ್ರೀ ಎಸ್.ಎನ್. ಭುವನೇಶ್ ಬಿನ್ ನರಸಿಂಹಪ್ಪ, 22 ವರ್ಷ, ಎಸ್.ಸಿ  ಜನಾಂಗ, ವಿದ್ಯಾರ್ಥಿ, ವಾಸ: ಸುಗಟೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ನೀಡಿದ ಹೇಳಿಕೆಯನ್ನು ಪಡೆದು ಬೆಳಿಗ್ಗೆ 10.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತನ್ನ ತಂಗಿಯಾದ ಚಿತ್ರ ರವರನ್ನು ತಮ್ಮ ಗ್ರಾಮದ ಶಿವಕುಮಾರ್ ಬಿನ್ ಸಂಜೀವಪ್ಪ ರವರು ಹೀಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಅಪಹರಿಸಿಕೊಂಡು ಹೋಗಿದ್ದು ಈ ವಿಚಾರದಲ್ಲಿ ಆತನ ಮೇಲೆ ಪೊಕ್ಸೊ ಕೇಸು ಹಾಕಿರುತ್ತೇವೆ. ಹೀಗೆ ಸುಮಾರು 7 ತಿಂಗಳ ಹಿಂದೆ ತನ್ನ ತಂಗಿಯನ್ನು ಪೂನಃ ಕರೆದುಕೊಂಡು ಹೋಗಿದ್ದು ಈ ಬಗ್ಗೆಯು ಸಹ ಕೇಸು ದಾಖಲಿಸಿರುತ್ತೇವೆ. ಹೀಗಿದ್ದು ಶಿವಕುಮಾರ ರವರು ತನ್ನ ತಂಗಿ ಮನೆಯಲ್ಲಿದ್ದಾಗ ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ತಮ್ಮನ್ನು ಗುರಾಯಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಿದ್ದು ಈ ದಿನ ದಿನಾಂಕ: 03-10-2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ತಾನು ಮಾತ್ರೆಗಳನ್ನು ತೆಗೆದುಕೊಂಡು ಬರುವ ಸಲುವಾಗಿ ತಮ್ಮ ಗ್ರಾಮದಿಂದ ಜಂಗಮಕೋಟೆಗೆ ಹೋಗುತ್ತಿದ್ದಾಗ ಮಳೆ ಬಂದಿದ್ದು ಆಗ ತಾನು ಹಾಲುಕುಂಟೆ ಬಳಿ ಇರುವ ಆಂಜನೇಯ ಸ್ವಾಮಿ ದೇವಲಾಯದ ಬಳಿ ಹೋಗಿದ್ದು ಆಗ ಅಲ್ಲಿಯೇ ಇದ್ದ ಶಿವಕುಮಾರ ರವರು ತನ್ನನ್ನು ಗುರಾಯಿಸಿಕೊಂಡು ನೋಡುತ್ತಿದ್ದು ಆಗ ತಾನು ಏಕೆ ನನ್ನನ್ನು ಗುರಾಯಿಸುತ್ತಿದಿಯಾ ಎಂದು ಕೇಳಿದಕ್ಕೆ ಶಿವಕುಮಾರ ರವರು ಮತ್ತು ಆತನ ಜೊತೆಯಲ್ಲಿದ್ದ ಚಿನ್ನಪ್ಪ ಬಿನ್ ಪಿಳ್ಳಮುನಿಯಪ್ಪ, ಇಬ್ಬರು ಸೇರಿಕೊಂಡು ಕೈಗಳಿಂದ ಹೊಡೆದು ನನಗೆ ಹೀಗೆ 20 ದಿನಗಳ ಹಿಂದೆ ಆಪರೇಷನ್ ಆಗಿದ್ದ ಸೊಂಟದ ಭಾಗದ ಬಳಿ ಶಿವಕುಮಾರ್ ರವರು ಕಲ್ಲಿನಿಂದ ಹೊಡೆದು ಕೆಳ್ಳಕ್ಕೆ ತಳ್ಳಿ ತನಗೆ ಕೈಗಳಿಂದ ಎದೆಯ ಮೇಲೆ ಹಾಗೂ ಮುಖಕ್ಕೆ ಗುದ್ದಿ ಅಲ್ಲಿಯೇ ಇದ ಒಂದು ಕಲ್ಲಿನಿಂದ ತನ್ನ ಎದೆಗೆ ಗುದ್ದಿ ಮೂಗೇಟುಗಳು ಉಂಟು ಮಾಡಿದ್ದು ಆಗ ತಾನು ತಮ್ಮ ಅಣ್ಣ ಸಂತೋಷ ಬಿನ್ ನಾರಾಯಣಪ್ಪ ರವರಿಗೆ ಪೋನ್ ಮಾಡಿದ್ದು ಆತನು ಕೂಡಲೆ ಬಂದು ಶಿವಕುಮಾರನನ್ನು ಅವನಿಗೆ ಆಪರೇಷನ್ ಹಾಗಿದೆ ಅವನಿಗೆ ಏಕೆ ಹೊಡೆದೆ ಎಂದು ಕೇಳುವಷ್ಟರಲ್ಲಿ ಶಿವಕುಮಾರನ್ನು ಆತನಿಗೂ ಸಹ ಕೈಗಳಲ್ಲಿ ಮುಖಕ್ಕೆ ಗುದ್ದಿ ತಾನು ಈಗಾಗಲೆ ಜೈಲಿಗೆ ಹೋಗಿ ಬಂದಿದ್ದೆನೆ ನಿಮ್ಮ ಮನೆಯವರನ್ನು ಎಲ್ಲಾರನ್ನು ಮುಗಿಸಿ ಪುನಃ ಜೈಲಿಗೆ ಹೋಗುತ್ತೇನೆ ಎಂದು ಲೋಪರ್ ನನ್ನ ಮಕ್ಕಳ ನಿಮ್ಮ ಕೈಯಲ್ಲಿ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ತಮ್ಮ ಅಣ್ಣ ಸಂತೋಷ ರವರು ತನ್ನನ್ನು ಅವರಿಂದ ಬಿಡಿಸಿಕೊಂಡು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಹಳೆಯ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಶಿವಕುಮಾರ ಮತ್ತು ಚಿನ್ನಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ: 308/2021 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 04-10-2021 09:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080