Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 331/2021 ಕಲಂ. 279,304(A) ಐಪಿಸಿ :-

  ದಿನಾಂಕ: 02/10/2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೆಂಕಟರವಣಪ್ಪ ವೈ ಆರ್  ಬಿನ್ ಲೇಟ್ ಎನ್.ವಿ ರಾಮಪ್ಪ 48 ವರ್ಷ, ಬಲಜಿಗರು, ವ್ಯವಸಾಯ       ನಲ್ಲಚೆರುವು ಗ್ರಾಮ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ, ನನ್ನ ಹೆಂಡತಿ ರವಣಮ್ಮ ರವರಿಗೆ 3 ಜನ ಹೆಣ್ಣು ಮಕ್ಕಳಿದ್ದು 1ನೇ ಅಶ್ವಿನಿ, 2ನೇ ಅರ್ಚನ, 3ನೇ ಪಾವನಿ ಆಗಿರುತ್ತಾರೆ  ನಮ್ಮ 2ನೇ ಮಗಳಾದ ಅರ್ಚನ ರವರನ್ನು ಈಗ್ಗೆ ಸುಮಾರು 8 ವರ್ಷಗಳ ಹಿಂದೆ ಬಾಗೇಪಲ್ಲಿ ಟೌನ್ನ 1ನೇ ವಾರ್ಡ್ ನ ವಾಸಿಯಾದ ವೆಂಕಟರವಣಪ್ಪ ರವರ ಮಗನಾದ ಅನಿಲ್ ಕುಮಾರ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿರುತ್ತೇವೆ,  ಅವರಿಗೆ ಯಶ್ ಎಂಬ ಒಂದು ಗಂಡು ಮಗು ಇರುತ್ತದೆ,  ದಿನಾಂಕ:01/10/2021 ರಂದು ಸಂಜೆ ನನ್ನ ಮಗಳಾದ ಅರ್ಚನ ರವರು ನಮ್ಮ ಗ್ರಾಮಕ್ಕೆ ಬಂದಿದ್ದು, ಈ ದಿನ ದಿನಾಂಕ:02/10/2021 ರಂದು ಬೆಳಗ್ಗೆ ಸುಮಾರು 12:00 ಗಂಟೆ ಸಮಯದಲ್ಲಿ ನಮ್ಮ ಅಳಿಯ ಅನಿಲ್ ಕುಮಾರ್ ರವರಿಗೆ ಘಂಟ್ಲಮಲ್ಲಮ್ಮ ಕಣಿವೆ ಸಮೀಪ ಅಪಘಾತವಾಗಿರುವ ಬಗ್ಗೆ ವಿಚಾರ ತಿಳಿಯಿತು, ನಂತರ ನಾನು ಬಂದು ನೋಡಲಾಗಿ ವಿಚಾರ ನಿಜವಾಗಿತ್ತು, ನಂತರ ಅಪಘಾತದ ಬಗ್ಗೆ ವಿಚಾರಿಸಲಾಗಿ ಈ ದಿನ ಬೆಳಗ್ಗೆ ಸುಮಾರು 7:00 ಗಂಟೆ ಸಮಯದಲ್ಲಿ ನಮ್ಮ ಅಳಿಯ ಅನಿಲ್ ಕುಮಾರ್ ರವರು ನಮ್ಮ ಗ್ರಾಮಕ್ಕೆ ಬರಲು ಆತನ ಬಾಬತ್ತು  ಕೆಎ 03 ಜೆಡಿ 2358 ಸ್ಕೂಟಿ ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿ ಬಿಟ್ಟು  ಅಚೇಪಲ್ಲಿ ಯಿಂದ ಸುಮಾರು 4 ಕಿಲೋ ಮೀಟರ್ ಪಾತಪಾಳ್ಯ ಕಡೆಗೆ ಬರುತ್ತಿದ್ದಾಗ ನಮ್ಮ ಅಳಿಯ ಅನಿಲ್ ಕುಮಾರ್ ರವರು ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರ ಮಾಡಿಕೊಂಡು ಹೋಗಿ ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ನಿಯಂತ್ರಿಸಲಾಗದೇ, ರಸ್ತೆಯಲ್ಲಿ ಬೀಳಿಸಿ ಅಪಘಾತವನ್ನುಂಟು ಮಾಡಿದ  ಪರಿಣಾಮ ನಮ್ಮ ಅಳಿಯ ಅನಿಲ್ ಕುಮಾರ್ ರವರಿಗೆ ತಲೆಗೆ, ಕೈಗೆ, ಮತ್ತು ಮೈಮೇಲೆ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ತಿಳಿಯಿತು, ನಂತರ ನಾವು ಯಾವುದೂ ವಾಹನದಲ್ಲಿ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ಶವಗಾರಕ್ಕೆ ಸಾಗಿಸಿರುತ್ತೆ. ಆದ್ದರಿಂದ ಅಪಘಾತವನ್ನುಂಟು ಮಾಡಿದ ಕೆಎ 03 ಜೆಡಿ 2358 ಸ್ಕೂಟಿ ದ್ವಿ ಚಕ್ರ ವಾಹನದ ಸವಾರ ಅನಿಲ್ ಕುಮಾರ್ ಬಿನ್ ವೆಂಕಟರವಣಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 332/2021 ಕಲಂ. 78(3) ಕೆ.ಪಿ. ಆಕ್ಟ್ 1963 :-

  ದಿನಾಂಕ: 01/10/2021 ರಂದು ಸಂಜೆ 7-45 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ 01.10.2021 ರಂದು ಸಂಜೆ 6-30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಕುಂಬಾರಪೇಟೆ  ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ, ಸಿಪಿಸಿ-278 ಶಬ್ಬೀರ್ ಮತ್ತು  ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-1444 ವಾಹನದಲ್ಲಿ  ಎಸ್ ಬಿ ಎಮ್ ವೃತ್ತದ  ಬಳಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 6-45 ಗಂಟೆಗೆ ಹೋಗಿ ಕುಂಬಾರಪೇಟೆ ಕ್ರಾಸ್ ನ ಡಿವಿಜಿ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕುಂಬಾರಪೇಟೆ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡು ತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 290/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಭಾಷ ಬಿನ್ ಲೇಟ್ ಖಾದಿರ್ ಭಾಷ, 35 ವರ್ಷ, ಮುಸ್ಲಿಂ ಜನಾಂಗ, ಮಟನ್ ಮಾರ್ಕೆಟ್ ನಲ್ಲಿ ಗುಜರಿ ವ್ಯಾಪಾರ, ವಾಸ: 14 ನೇ ವಾರ್ಡ, ಕುಂಬಾರಪೇಟೆ, ಬಾಗೇಪಲ್ಲಿ ಪುರ ಎಂದು ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಪಂಚಾಯ್ತಿದಾರರಾರ ಸಮಕ್ಷಮ ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ  ಒಂದು ಬಾಲ್ ಪಾಯಿಂಟ್ ಪೆನ್, ಹಾಗೂ ಒಂದು ಮಟ್ಕ ಚೀಟಿ, ಮತ್ತು 290/- ರೂ ನಗದು ಹಣವನ್ನು  ಪಂಚನಾಮೆಯನ್ನು ಜರುಗಿಸಿ, ಮುಂದಿನ ತನಿಖೆಗಾಗಿ ಅಮಾನತ್ತು ಪಡಿಸಿಕೊಂಡೆವು ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 7-45 ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-293/2021 ರಂತೆ ದಾಖಲಿಸಿರುತ್ತೆ. ದಿ:02-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 333/2021 ಕಲಂ. 78(1)(a)(vi) ಕೆ.ಪಿ. ಆಕ್ಟ್ 1963 :-

  ದಿನಾಂಕ: 01/10/2021 ರಂದು ರಾತ್ರಿ 9-00 ಗಂಟೆಗೆ  ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ.01/10/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ಸರ್ಕಾರಿ ಬಾಲಕಿಯರ ಫೌಢಶಾಲೆಯ ಮುಂಭಾಗದ ಗೇಟಿನ ಬಳಿ  ಯಾರೋ ಆಸಾಮಿಗಳು ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು  ಈ ದಿನ ನಡೆಯುವ ಪಂಜಾಜ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಕ್ರಿಕೆಟ್ ಟೀಮ್ ಗಳ  ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಹಣವನ್ನು ಪಣಕ್ಕೆ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ-178 ಶ್ರೀಪತಿ, ಪಿಸಿ-387 ಮೋಹನ್ , ಪಿಸಿ-134 ಧನಂಜಯ್  ಹಾಗೂ  ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ  ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೆಪಲ್ಲಿ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿರುವ ರಸ್ತೆಯ ಬಳಿ    ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಹೋಗಿ ಸ್ವಲ್ಪ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು 200/- ರೂ  ಪಂಜಾಜ್ ಕಿಂಗ್ಸ್ ಗೆಲ್ಲುತ್ತದೆ ಎಂದು ಮತ್ತು ಕೊಲ್ಕತ್ತಾ ನೈಟ್ ಗೆಲ್ಲುತ್ತದೆ ಟೀಮ್ ಎಂದು  ಟೀಮ್  ಗೆಲ್ಲುತ್ತದೆ ಎಂದು ಹಣವನ್ನು ಪಣಕ್ಕೆ ಹಾಕಿ  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಗಳ  ಮೇಲೆ ದಾಳಿ ಮಾಡಿ ಹಿಡಿದುಕೊಂಡು  ಹೆಸರು ವಿಳಾಸವನ್ನು ಕೇಳಲಾಗಿ 1) ಶಿವಶಂಕರ ಬಿನ್ ನರಸಿಂಹಪ್ಪ, 30 ವರ್ಷ, ನಾಯಕ ಜನಾಂಗ, ಕಬಾಬ್ ಅಂಗಡಿ ವ್ಯಾಪಾರ, ವಾಸ ವೆಂಕಟೇಶ್ವರ ಟಾಕೀಸ್ ಹಿಂಬಾಗ, 7 ನೇ ವಾರ್ಡ,  ಬಾಗೇಪಲ್ಲಿ ತಾಲ್ಲೂಕು, 2] ಶ್ರೀನಿವಾಸಲು ಬಿನ್ ವೆಂಕಟರಾಯಪ್ಪ, 38 ವರ್ಷ, ಆದಿಕರ್ನಾಟಕ ಜನಾಂಗ, ವಾಸ ಕಾಲೋನಿ, ಘಂಟಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 3] ಆಸಿಫ್ ಬಿನ್ ಮಹೇರ್ ಪಾಷಾ, 23 ವರ್ಷ, ಮುಸ್ಲಿಂ ಜನಾಂಗ, ಬೀಡಾ ಅಂಗಡಿ ವ್ಯಾಪಾರ, ವಾಸ ಮೆಕ್ಕಾ ಮಸೀದಿ ಬಳಿ, ಕುಂಬಾರಪೇಟೆ, 18 ನೇ ವಾರ್ಡ, ಬಾಗೇಪಲ್ಲಿ ಟೌನ್ ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್  ಗೆ ಪಣಕ್ಕೆ ಕಟ್ಟಿದ್ದ 2,500 /- ರೂ ಗಳನ್ನು  ಪಂಚರ ಸಮಕ್ಷಮ ರಾತ್ರಿ 7-45 ಗಂಟೆಯಿಂದ 8-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ, ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-00  ಗಂಟೆಗೆ ಠಾಣೆಗೆ  ಹಾಜರಾಗಿ ಅಸಲು ಪಂಚನಾಮೆ, ಹಣ, ಹಾಗೂ ಆರೋಪಿಗಳನ್ನು  ತಮ್ಮ ವಶಕ್ಕೆ ನೀಡುತ್ತಿದ್ದು ಕಾನೂನು ಬಾಹಿರವಾಗಿ ಐಪಿಎಲ್  ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು  ಆಡುತ್ತಿದ್ದರ  ಮೇಲ್ಕಂಡ ಆಸಾಮಿಗಳ  ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-294/2021 ರಂತೆ ದಾಖಲಿಸಿಕೊಂಡಿರುತ್ತೆ. ದಿ:02-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿ ಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚೇಳೂರು ಪೊಲೀಸ್ ಠಾಣೆ ಮೊ.ಸಂ. 93/2021 ಕಲಂ. 379 ಐಪಿಸಿ :-

  ದಿನಾಂಕ 02/10/2021 ರಂದು ಪಿರ್ಯಾದಿದಾರರಾದ ಶ್ರೀ ಮಧುಸೂಧನ್ ರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ, ತನ್ನ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ KA-40 Y-2108 SPLENDOR PLUS ಅನ್ನು ಹೊಂದಿದ್ದು ದಿನಾಂಕ 30/09/2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ನಾವು ವಾಸವಾಗಿರುವ  ಚೇಳೂರು ಗ್ರಾಮದ ನಮ್ಮ ಮನೆಯ ಪಕ್ಕದಲ್ಲಿ ದ್ವಿಚಕ್ರ ವಾಹನ ಸಂಖ್ಯೆ KA-40 Y-2108 SPLENDOR PLUS ಅನ್ನು ನಿಲ್ಲಿಸಿದ್ದು ನಂತರ ದಿನಾಂಕ 01/10/2021 ಬೆಳಗ್ಗೆ 06-00 ಸಮಯದಲ್ಲಿ ನಾನು ಮನೆಯಿಂದ ಹೊರಗಡೆ ಬಂದು ನೋಡಲಾಗಿ ದ್ವಿಚಕ್ರ ವಾಹನವಿರುವುದಿಲ್ಲ ಸುತ್ತಮುತ್ತಲು ಹುಡಕಾಡಲಾಗಿ ಸಿಕ್ಕಿರುವುದಿಲ್ಲ ತನ್ನ ಬಾಬತ್ತು ದ್ವಿಚಕ್ರ ವಾಹನವನ್ನು  ದಿನಾಂಕ 30/09/2021 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಆದ್ದರಿಂದ ಕಳವು ಮಾಡಿಕೊಂಡು ದ್ವಿಚಕ್ರ ವಾಹನವನ್ನು  ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿರುತ್ತೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 171/2021 ಕಲಂ. 78(3) ಕೆ.ಪಿ. ಆಕ್ಟ್ 1963 :-

  ದಿನಾಂಕ: 02-10-2021 ರಂದು ಸಂಜೆ 6-30 ಗಂಟೆಯಲ್ಲಿ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ. ಗ್ರಾಮಾಂತರ ಠಾಣೆ ರವರು ಠಾಣೆಯಲ್ಲಿ ನೀಡಿದ ಜ್ಞಾಪನದ ಸಾರಾಂಶವೆನೆಂದರೆ  ಈ ದಿನ ಸಂಜೆ  4-30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ  ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಸರಹದ್ದಿಗೆ ಸೇರಿದ ಸೂಲಿಕುಂಟೆ ಗ್ರಾಮದ ಗೇಟ್ ಬಳಿ  ಡಿ.ವಿ.ಮಂಜುನಾಥ ಬಿನ್ ವೆಂಕಟರಾಯಪ್ಪ 45ವರ್ಷ ವಕ್ಕಲಿಗರು ಜಿರಾಯ್ತಿ ವಾಸ:ಗೇರಹಳ್ಳಿ ಗ್ರಾಮ ಎಂಬುವವರು ಸೂಲಿಕುಂಟೆ  ಗ್ರಾಮದ ಕ್ರಾಸ್ ನಲ್ಲಿ ಐಪಿಎಲ್ ಸರಣಿಯ ಡೆಲ್ಲಿ ಕ್ಯಾಪಿಟಲ್ ವಿರುದ್ದ ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಸಾರ್ವಜನಿಕರಿಂದ ಹಣವನ್ನು ಫಣವಾಗಿ ಕಟ್ಟಿಸಿಕೊಂಡು ಜೂಜಾಟ ಆಡುತ್ತಿರುವುದಾಗಿ  ಬಂದ ಖಚಿತ ಮಾಹಿತಿ ಬಂದಿದ್ದು ಸದರಿ ಮಾಹಿತಿಯ ಮೇರೆಗೆ ದಾಳಿ ಕ್ರಮವನ್ನು ಜರುಗಿಸಲು ಪಂಚಾಯ್ತಿದಾರರನ್ನು ಠಾಣೆಗೆ ಕರೆಯಿಸಿಕೊಂಡು ಅವರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ಪಂಚಾಯ್ತಿದಾರರು ಹಾಗು ಪೊಲೀಸ್ ಸಿಬ್ಬಂದಿಯವರಾದ ಶ್ರೀ.ಸಿ.ಎ.ಸುರೇಶ ಹೆಚ್.ಸಿ.38. ಶ್ರೀ.ನರಸಿಂಹಮೂರ್ತಿ. ಸಿಪಿಸಿ 264. ಶ್ರೀ. ಮುರಳಿ ಸಿಪಿಸಿ 138 ರವರೊಂದಿಗೆ ಸರ್ಕಾರಿ ಜೀಪ್ ನಂ ಕೆಎ-40-ಜಿ-567 ರಲ್ಲಿ ಸಂಜೆ 5-00 ಗಂಟೆಗೆ ಸೂಲಿಕುಂಟೆ ಗ್ರಾಮದ ಬಳಿ ಹೋಗಿ ಗ್ರಾಮದ ಹೊರವಲಯದಲ್ಲಿ ವಾಹನವನ್ನು ಮರೆಯಾಗಿ ನಿಲ್ಲಿಸಿ ಸೂಲಿಕುಂಟೆ ಗೇಟ್ ಗೆ ನಡೆದುಕೊಂಡು ಹೋದಾಗ ಅಲ್ಲಿ  ಒಬ್ಬ ಆಸಾಮಿಯು ಕೂಗಾಡುತ್ತಾ ಈ ದಿನ ಐಪಿಎಲ್ ಸರಣಿಯ  ಡೆಲ್ಲಿ ಕ್ಯಾಪಿಟಲ್  ವಿರುದ್ದ ಮುಂಬೈ ಇಂಡಿಯನ್ಸ್ ತಂಡಗಳ ಮದ್ಯ  ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ  ಡೆಲ್ಲಿ  ಕ್ಯಾಪಿಟಲ್  ತಂಡ ವಿಜಯಶಾಲಿಯಾಗುತ್ತದೆ  ಎಂದು ಯಾರಾದರೂ  ಹಣವನ್ನು ಪಣವಾಗಿ ಬೆಟ್ ಕಟ್ಟಿ ಎಂದು ಸಾರ್ವಜನಿಕ ಸ್ಥಳದಲ್ಲಿ ಸದರಿ ಆಸಾಮಿಯು 200/-ರೂಪಾಯಿಗಳಿಗೆ 400/-ರೂಪಾಯಿಗಳನ್ನು ಕೊಡುವುದಾಗಿ ಹಣವನ್ನು ಪಣವಾಗಿ ಕಟ್ಟಿ ಎಂದು ಸಾರ್ವಜನಿಕರರನ್ನು ಪ್ರೇರೇಪಿಸಿ ಅವರಿಗೆ ಬೆಟ್ಟಿಂಗ್ ಕಟ್ಟಿ ಎಂದು ಕೂಗಾಡುತ್ತಾ ಮೊಬೈಲ್ ಪೋನಿನಲ್ಲಿ ಕ್ರಿಕೆಟ್ ದೃಶ್ಯಾವಳಿಗಳನ್ನು  ತೋರಿಸಿ  ಸಾರ್ವಜನಿಕರಿಂದ  ಬೆಟ್ಟಿಂಗ್ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದನ್ನು  ಖಚಿತ ಪಡಿಸಿಕೊಂಡು ನಂತರ ಪಂಚರೊಂದಿಗೆ  ನಾವು ಕ್ರೀಕೆಟ್ ಬೇಟಿಂಗ್ ಮೇಲೆ ದಾಳಿ ಮಾಡಿದ್ದು ಸಮವಸ್ತ್ರದಲ್ಲಿದ್ದ ಪೋಲೀಸರನ್ನು ನೋಡಿ ಅಲ್ಲಿದ್ದವರು ಓಡಿ ಹೋಗಿದ್ದು ಆ ಪೈಕಿ ಒಬ್ಬ  ಆಸಾಮಿಯನ್ನು  ವಶಕ್ಕೆ ಪಡೆದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ಡಿ.ವಿ.ಮಂಜುನಾಥ ಬಿನ್ ವೆಂಕಟರಾಯಪ್ಪ 45ವರ್ಷ ವಕ್ಕಲಿಗರು  ಜಿರಾಯ್ತಿ ವಾಸ:ಗೇರಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಸದರಿ ಅಸಾಮಿಯನ್ನು ವಿಚಾರ ಮಾಡಲಾಗಿ ತಾನು ಇಂದು  ನಡೆಯುತ್ತಿರುವ ಡೆಲ್ಲಿ ಕ್ಯಾಪಿಟೆಲ್ ವಿರುದ್ದ ಮುಂಬೈ ಇಂಡಿಯನ್ಸ್   ಐಪಿಲ್ ಕ್ರಿಕೆಟ್ ಸರಣಿಯಲ್ಲಿ ಡೆಲ್ಲಿ ಕ್ಯಾಪಿಟೆಲ್  ಪರವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ  ಆಡುತ್ತಿದ್ದು, ಹಣವನ್ನು  ಫಣವಾಗಿ ಕಟ್ಟಿಸಿಕೊಂಡಿರುತ್ತೇನೆಂದು ಹೇಳಿ  ಆತನ  ಬಳಿ ಇದ್ದ ಒಂದು ಮೊಬೈಲ್ ಪೋನು ಮತ್ತು ಹಣವನ್ನು ಹಾಜರುಪಡಿಸಿದ್ದು ನಗದು ಹಣವನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಪರಿಶೀಲಿಸಲಾಗಿ (1) ಒಂದು ವಿವೋ ಕಂಪನಿಯ ಮೊಬೈಲ್ ಪೋನು. (2) ನಗದು ಹಣ ರೂ.800/- ಇರುತ್ತದೆ. ಸದರಿ ಮಾಲನ್ನು ಮುಂದಿನ ನಡವಳಿಕೆಯ ಬಗ್ಗೆ ಪಂಚರ ಸಮ್ಮುಖದಲ್ಲಿ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆವಿಗೂ ಪಂಚನಾಮೆಯ ಮುಖಾಂತರ ಅಮಾನತ್ತು  ಪಡಿಸಿಕೊಂಡಿರುತ್ತದೆ. ಮಹಜರ್  ಆಸಾಮಿಯನ್ನು ಮತ್ತು ಮಾಲನ್ನು ಈ ಜ್ಞಾಪನದೊಂದಿಗೆ ನೀಡುತ್ತಿದ್ದು ಆರೋಪಿಯ  ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿ  ನೀಡಿದ ಜ್ಞಾಪನವನ್ನು  ಪಡೆದುಕೊಂಡು  ಠಾಣಾ  NCR No.245/2021 ರಂತೆ  ದಾಖಲಿಸಿಕೊಂಡಿರುತ್ತೆ.  ಇದು  ಅಸಂಜ್ಞೆಯ  ಪ್ರಕರಣವಾಗಿರುವುದರಿಂದ ಸಂಜ್ಞೆಯ ಪ್ರಕರಣವೆಂದು ಪರಿಗಣಿಸಿ  ಆರೋಪಿಯ ವಿರುದ್ದ ಕಲಂ: 78 (3) ಕೆ.ಪಿ. ಆಕ್ಟ್ ರೀತ್ಯಾ ಕೇಸು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಗೌರವಾನ್ವಿತ ನ್ಯಾಯಾದೀಶರು ಎ.ಸಿ.ಜೆ ಮತ್ತು ಜೆ.ಎಂ.ಎಪ್.ಸಿ. ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ  ಅನುಮತಿಯನ್ನು  ಪಡೆದುಕೊಂಡು  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ. ಆದುದರಿಂದ  ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 172/2021 ಕಲಂ. 78(III) ಕೆ.ಪಿ. ಆಕ್ಟ್ 1963 & ಸೆಕ್ಷನ್ 66 ಐಟಿ ಆಕ್ಟ್ :-

  ದಿನಾಂಕ: 02-10-2021 ರಂದು ಸಂಜೆ 6-30 ಗಂಟೆಯಲ್ಲಿ ಶ್ರೀ.ಎಂ.ಎಂ.ಪ್ರಶಾಂತ್ ಸಿಪಿಐ ಚಿಕ್ಕಬಳ್ಳಾಪುರ ವೃತ್ತ ಚಿಕ್ಕಬಳ್ಳಾಪುರ . ರವರು ಠಾಣೆಯಲ್ಲಿ ನೀಡಿದ ಜ್ಞಾಪನದ ಸಾರಾಂಶವೆನೆಂದರೆ ದಿನಾಂಕ:02/10/2021 ರಂದು ಸಂಜೆ 5.30 ಗಂಟೆಯಲ್ಲಿ ತಾನು ಚಿಕ್ಕಬಳ್ಳಾಪುರ ವೃತ್ತ ಕಛೇರಿಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಅಣಕನೂರು ಗ್ರಾಮದಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯ ಇರುವ ಐಪಿಎಲ್ ಕ್ರಿಕೇಟ್ ಪಂದ್ಯಕ್ಕೆ ಆಸಾಮಿಯೊಬ್ಬನು ತನ್ನ ಬಳಿಯಿರುವ ಮೊಬೈಲ್ ನಲ್ಲಿ ಗೇಮಿಂಗ್ ಆಪ್ ಮುಖಾಂತರ ಪಂದ್ಯಕ್ಕೆ ಹಣವನ್ನು ಪಣವಾಗಿ ಬೆಟ್ಟಿಂಗ್ ಕಟ್ಟಿಕೊಂಡು ಜೂಜಾಟವಾಡುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಕಛೇರಿಗೆ ಪಂಚಾಯ್ತಿದಾರರನ್ನು ಕರೆಯಿಸಿ ಅವರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ಪಂಚಾಯ್ತಿದಾರರು ಹಾಗು ಪೊಲೀಸ್ ಸಿಬ್ಬಂದಿಯವರಾದ ಶ್ರೀ.ರವಿಕುಮಾರ್ ಸಿಹೆಚ್.ಸಿ-114, ಶ್ರೀ ವಿಜಯ್ ಕುಮಾರ್ ಸಿಪಿಸಿ-245, ಶ್ರೀ ಗೌತಮ್ ರಾಜ್ ಸಿಪಿಸಿ-286 ಹಾಗೂ ಜೀಪ್ ಚಾಲಕ ರಾಮಲಕ್ಷ್ಮಣ್ ಎ.ಹೆಚ್.ಸಿ-42 ರವರೊಂದಿಗೆ ಸರ್ಕಾರಿ ಜೀಪ್ ನಂ ಕೆಎ-40 ಜಿ-6633 ರಲ್ಲಿ ಸಂಜೆ 5-45 ಗಂಟೆಗೆ ಹೊರಟು ಚಿಕ್ಕಬಳ್ಳಾಪುರ ಎಂ.ಜಿ ರಸ್ತೆಯ ಮುಖಾಂತರ ಶಿಡ್ಲಘಟ್ಟ ರಸ್ತೆಯಲ್ಲಿ ಹೋಗಿ ಅಣಕನೂರು ಗ್ರಾಮದ ಗೇಟ್ ನಿಂದ ಊರಿನ ಕಡೆಗೆ ಹೋಗಿ ವಾಹನವನ್ನು ಮನೆಗಳ ಪಕ್ಕ ಮರೆಯಾಗಿ ನಿಲ್ಲಿಸಿ ಎಲ್ಲರೂ ವಾಹನದಿಂದ ಕೆಳಕ್ಕೆ ಇಳಿದು ಅಲ್ಲಿಂದ ಎಲ್ಲರೂ ನಡೆದುಕೊಂಡು ಅಣಕನೂರು ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿಗೆ ಹೋದಾಗ ಯಾರೋ ಒಬ್ಬ ಆಸಾಮಿಯು ತನ್ನ ಮೊಬೈಲ್ ಫೋನ್ ನಲ್ಲಿ ಕ್ರಿಕೇಟ್ ಪಂದ್ಯವನ್ನು ನೋಡುತ್ತಿದ್ದನ್ನು ಗಮನಿಸಿಕೊಂಡು ಪಂಚರ ಸಮ್ಮುಖದಲ್ಲಿ ಆಸಾಮಿಯನ್ನು ಹಿಡಿದುಕೊಂಡಿರುತ್ತೇವೆ. ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಆತನು ತನ್ನ ಹೆಸರು ರಮೇಶ್ ಕುಮಾರ್ ಎ.ವಿ ಬಿನ್ ಲೇಟ್ ವೆಂಕಟರಾಮಪ್ಪ, 39 ವರ್ಷ, ಬಲಜಿಗರು, ಗಾರೆ ಕೆಲಸ, ವಾಸ: ಅಣಕನೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ಎಂದು ತಿಳಿಸಿದ್ದು, ಆತನಿಗೆ ಮೊಬೈಲ್ ನಲ್ಲಿ ಏನು ಮಾಡುತ್ತಿರುವೆಯೆಂದು ಕೇಳಿದಾಗ ಆತನು CRICKET MAZZA 777 APP ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಕಟ್ಟಿಕೊಂಡು ಗೇಮ್ ಆಡುತ್ತಿರುವುದಾಗಿ ತಿಳಿಸಿ ಫೋನನ್ನು ಹಾಜರುಪಡಿಸಿರುತ್ತಾನೆ. ಪರಿಶೀಲಿಸಲಾಗಿ ಆಸಾಮಿಯ ತನ್ನ ಮೊಬೈಲ್ ಫೋನ್ ನಲ್ಲಿ ಆನ್ ಲೈನ್ ಗೇಮ್ ಆಡುತ್ತಿದ್ದುದ್ದು ಕಂಡು ಬಂದಿರುತ್ತದೆ. ಮೊಬೈಲ್ ಫೋನನ್ನು ಪರಿಶೀಲಿಸಿದ್ದು, ಇದು OPPO F19 PRO ಕಂಪನಿಯ ಮೊಬೈಲ್ ಫೋನ್ ಆಗಿರುತ್ತದೆ. ಅಲ್ಲದೇ ಈತನು ತನ್ನ ಮೊಬೈಲ್ ಮುಖಾಂತರ ICICI BANK ACC NO:002205501140-IFSC-ICIC0000022 ನಂಬರ್ ಗೆ 5000/-ರೂಪಾಯಿಗಳು ಹಣವನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿರುತ್ತದೆ. ಆಸಾಮಿಯನ್ನು ವಿಚಾರ ಮಾಡಿದಾಗ ಆನ್  ಲೈನ್ ಗೇಮ್ ಆಡುತ್ತಿರುವುದನ್ನು ಒಪ್ಪಿಕೊಂಡಿದ್ದು, ತಾನು ಬೆಟ್ಟಿಂಗ್ ಎಂದು ಇಟ್ಟುಕೊಂಡ ಹಣವೆಂದು ಹಾಜರುಪಡಿಸಿದ ನಗದು ಹಣವನ್ನು ಹಾಜರುಪಡಿಸಿದ್ದು ವಶಕ್ಕೆ ಪಡೆದು ಪಂಚರ ಸಮಕ್ಷಮ ಪರಿಶೀಲಿಸಲಾಗಿ ನಗದು ಹಣ ರೂ.2000/- ಇರುತ್ತದೆ. ನಗದು ಹಣ ಮತ್ತು ಇವುಗಳನ್ನು ಮುಂದಿನ ನಡವಳಿಕೆಯ ಬಗ್ಗೆ ಪಂಚರ ಸಮ್ಮುಖದಲ್ಲಿ ಅಮಾನತ್ತುಪಡಿಸಿಕೊಂಡಿದ್ದು,  ಆತನ ಮಾಹಿತಿಯಂತೆ ಇನ್ನೂ ಕೆಲವರು ಆತನೊಂದಿಗೆ ಭಾಗಿಯಾಗಿರುವ ಶಂಕೆ ಇರುತ್ತದೆ. ಮಹಜರನ್ನು ಸಂಜೆ 6-00 ರಿಂದ 6-45 ಗಂಟೆಯವರೆಗೆ ಕೈಗೊಂಡಿರುತ್ತೆ. ಆಸಾಮಿಯನ್ನು ಮತ್ತು ಆತನ ಬಳಿಯಿದ್ದ ಮೊಬೈಲ್ ಮತ್ತು ನಗದು ಹಣವನ್ನು ಪಂಚನಾಮೆಯೊಂದಿಗೆ ಈ ಜ್ಞಾಪನವನ್ನು ನೀಡುತ್ತಿದ್ದು ಆರೋಪಿತನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ಜ್ಞಾಪನವನ್ನು ಪಡೆದುಕೊಂಡು ಠಾಣಾ  NCR No 246/2021 ರಂತೆ ನಮೂದಿಸಿ ಕೊಂಡಿರುತ್ತೆ. ಇದು  ಅಸಂಜ್ಞೆಯ  ಪ್ರಕರಣವಾಗಿರುವುದರಿಂದ ಸಂಜ್ಞೆಯ ಪ್ರಕರಣವೆಂದು ಪರಿಗಣಿಸಿ  ಆರೋಪಿಯ ವಿರುದ್ದ ಕಲಂ: 78(iii), KP Act ಮತ್ತು  ಕಲಂ: 66 IT Act ರೀತ್ಯಾ ಕೇಸು  ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಗೌರವಾನ್ವಿತ ನ್ಯಾಯಾದೀಶರು ಎ.ಸಿ.ಜೆ ಮತ್ತು ಜೆ.ಎಂ.ಎಪ್.ಸಿ. ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ  ಅನುಮತಿಯನ್ನು  ಪಡೆದುಕೊಂಡು  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ. ಆದುದರಿಂದ  ಪ್ರ.ವ.ವರದಿ.

 

7. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 74/2021 ಕಲಂ. 420 ರೆ/ವಿ 34 ಐಪಿಸಿ :-

  ದಿನಾಂಕ;02-10-2021 ರಂದು ರಾತ್ರಿ 7.15 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ಶಾರಧಮ್ಮ ಕೋಂ ಚಂದ್ರಶೇಖರ್, 45ವರ್ಷ, ಬ್ರಾಹ್ಮಣರು, ಗೃಹಿಣಿ, ವಾಸ: ವಾರ್ಡ್ ನಂ: 08, ಮರಳು ಸಿದ್ದೇಶ್ವರ ಸ್ವಾಮಿ,ದೇವಸ್ಥಾನದ ಮುಂಭಾಗ, ಚಿಕ್ಕಬಳ್ಳಾಪುರ ನಗರ ರವರು  ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಚಿಂತಾಮಣಿ ತಾಲ್ಲೂಕು ದೊಡ್ಡಗಂಜೂರು ಗ್ರಾಮದ ವಾಸಿಗಳಾದ ಶ್ರೀನಿವಾಸ, ರಮೇಶ್, ರವರು  ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಮತ್ತು ಚಾಲಕನಾಗಿ ಕೆಲಸ ಮಾಡಿಕೊಂಡಿರುವುದಾಗಿ  ಅವರ ಮಗ ಸುನೀಲ್ ಕುಮಾರ್ ಜಿ.ಆರ್ ಎಂಬುವರು 3 ಜನರು, ತನ್ನ ಸ್ನೇಹಿತೆಯಾದ ಅಶ್ವತ್ಥಮ್ಮ ರವರಿಗೆ ಪರಿಚಯವಾಗಿದ್ದು, ನಂತರ ತುಂಬಾ ಹತ್ತಿರವಾಗಿ ನಾವು ಪೈನಾನ್ಸ್ ವ್ಯವಹಾರ ಮಾಡುತ್ತಿರುತ್ತೇವೆಂದು, ನಮಗೆ ಹಣದ ಅವಶ್ಯಕತೆ ಇರುವುದಾಗಿ ಮತ್ತೆ ನಿಮಗೆ ಹಣವನ್ನು ವಾಪಸ್ಸು ಕೊಡುವುದಾಗಿ ನಂಬಿಕೆ ಬರುವಂತೆ ಮಾತುಗಳನ್ನು ಹೇಳಿ ಅಶ್ವತ್ಥಮ್ಮ ರವರು ಸುಮಾರು 10,00,000/-ರೂಗಳಿಗೆ ಮನೆಯನ್ನು ಭರ್ಕತ್ ಉಲ್ಲಾ ರವರ ಅಡಮಾನ ಇಟ್ಟು ಹಣವನ್ನು ಕೊಟ್ಟಿರುವುದಾಗಿ ಹೇಳಿದ ನಂತರ ಶ್ರೀಮತಿ ಅಶ್ವತ್ಥಮ್ಮ ರವರವರೊಂದಿಗೆ ತನ್ನ ಬಳಿ ಬಂದು ನಾವು ಪೈನಾನ್ಸ್ ವ್ಯವಹಾರ ಮಾಡುತ್ತಿದ್ದು, ನಮಗೆ ಹಣದ ಅವಶ್ಯಕತೆ ಇರುವುದಾಗಿ ನಂಬಿಸಿದ್ದು, ಶ್ರೀ ಭುವನೇಶ್ವರಿ ಪೈನಾನ್ಸ್ ನಲ್ಲಿ ತನ್ನನ್ನು ಕರೆದುಕೊಂಡು ಹೋಗಿ ತಲಾ 5,00,000/- ರೂಗಳ 2 ಚೀಟಿಗಳನ್ನು ಒಟ್ಟು (10,00,000/-ರೂಗಳು) ಶ್ರೀನಿವಾಸ ಮತ್ತು ರಮೇಶ್ ಕುಮಾರ್ ಹಾಗೂ ಅವರ ಮಗನಾದ ಸುನಿಲ್ ಕುಮಾರ್. ಜಿ.ಆರ್ ರವರು ಸೇರಿ ತನಗೆ ಮತ್ತು ನನ್ನ ಸ್ನೇಹಿತಳಾದ ಅಶ್ವತ್ಥಮ್ಮ ರವರಿಗೆ ನಂಬಿಕೆ ಬರುವಂತೆ ಮಾತುಗಳನ್ನು ಹೇಳಿ, ತನ್ನ ಕೈಯಲ್ಲಿ ಜಾಮೀನು ಹಾಕಿಸಿ 10,00,000/- ರೂಗಳ ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ಅವರು ಚೀಟಿ ಬಾಬತ್ತು ಹಣವನ್ನು ವಾಪಸ್ಸು ಕಟ್ಟಿರುವುದಿಲ್ಲ. ತನ್ನ ಸ್ನೇಹಿತೆಗೂ ಸಹ ಮನೆಯ ಬಾಬತ್ತು ಹಣವನ್ನು ಕೊಟ್ಟಿರುವುದಿಲ್ಲ. ನಾವುಗಳು ಎಷ್ಟು ಸಲ ಕೇಳಿದರೂ ಸಹ ಹಣವನ್ನು ಕೊಡದೇ ಸತಾಯಿಸುತ್ತಿರುತ್ತಾರೆ. ಸದರಿ ಹಣವನ್ನು ಭುವನೇಶ್ವರಿ ಪೈನಾನ್ಸ್ ಗೆ ತಾನೇ ತನ್ನ ಕಷ್ಟದಿಂದ ಹಣವನ್ನು ಕಟ್ಟಿದ್ದು, ಶ್ರೀನಿವಾಸ ಮತ್ತು ರಮೇಶ್ ಕುಮಾರ್ ಹಾಗೂ ಅವರ ಮಗನಾದ ಸುನಿಲ್ ಕುಮಾರ್. ಜಿ.ಆರ್ ರವರಿಗೆ ತಾನು ನಿಮ್ಮ ವಿರುದ್ದ ದೂರು ಕೊಡುವುದಾಗಿ ಹೇಳಿದಾಗ ಚಿಂತಾಮಣಿ ತಾಲ್ಲೂಕು ತಾಲ್ಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿರುವ ಶ್ರೀನಿವಾಸ ರವರ ಮನೆಯನ್ನು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟು ನಂತರ ಹಣವನ್ನು ಕೊಡುವುದಾಗಿ ನಂಬಿಸಿ ಕರೆಸಿಕೊಂಡು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮನೆಯನ್ನು ಮಾರಿ ಹಣವನ್ನು ಕೊಡುತ್ತೇವೆಂದು ನಂಬಿಸಿ, ನನ್ನ ಬಳಿ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡು ಸೇಲ್ ಅಗ್ರಿಮೆಂಟ್ ಅನ್ನು ದಿನಾಂಕ; 12-10-2020 ರಂದು ರದ್ದು ಮಾಡಿಸಿ, ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ. ಆದರೂ ಸಹ ತನ್ನ ಹಣವನ್ನು ಕೊಟ್ಟಿರುವುದಿಲ್ಲ. ತಾನು ಪೋನ್ ಮಾಡಿದರೆ ಸ್ವಿಚ್ ಆಪ್ ಬರುತ್ತಿರುತ್ತೆ. ಹಲವಾರು ಬಾರಿ ಹುಡುಕಾಡಿಕೊಂಡು ಹೋಗಿ ಕೇಳಲಾಗಿ ಕೊಡುತ್ತೇವೆ. ಎಂದು ನಂಬಿಸಿ ಹೇಳಿ ಕಳುಹಿಸಿರುತ್ತಿರುತ್ತಾರೆ. ಆದ್ದರಿಂದ 10,00,000/- ರೂಗಳನ್ನು ಪಡೆದುಕೊಂಡು ವಾಪಸ್ಸು ನೀಡದೇ ವಂಚನೆ ಮಾಡಿ, ಮೋಸ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 436/2021 ಕಲಂ. 15(A),32(3) KARNATAKA EXCISE ACT, 1965 :-

  ದಿನಾಂಕ: 03/10/2021 ರಂದು ಬೆಳಿಗ್ಗೆ 11.45 ಗಂಟೆಗೆ ಠಾಣೆಯ ಸಿ.ಹೆಚ್.ಸಿ-96 ಶ್ರೀ ಆನಂದಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03/10/2021 ರಂದು ಪಿ.ಐ ಸಾಹೇಬರು ತನ್ನನ್ನು ಮತ್ತು ಕರಿಯಪ್ಪ ಸಿ.ಪಿ.ಸಿ-339, ವಿಶ್ವನಾಥ ಸಿ.ಪಿ.ಸಿ-516 ರವರನ್ನು ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾವು ಠಾಣಾ ವ್ಯಾಪ್ತಿಯ ಚಿನ್ನಸಂದ್ರ, ಸೂಲದೇನಹಳ್ಳಿ, ಚೆನ್ನಕೇಶವಪುರ, ನಿಡಗುರ್ಕಿ, ಜೀಡರಹಳ್ಳಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಇದೇ ದಿನ ಬೆಳಿಗ್ಗೆ 10.00 ಗಂಟೆಗೆ ಹೀರೇಕಟ್ಟಿಗೇನಹಳ್ಳಿ ಗ್ರಾಮದ ಬಳಿಗೆ ಹೋದಾಗ ಸದರಿ ಗ್ರಾಮದ ವಾಸಿಯಾದ ಲಕ್ಷ್ಮೀದೇವಮ್ಮ ಕೋಂ ನರಸಿಂಹಯ್ಯ ಎಂಬುವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಮನೆಯ ಮುಂದೆ ಕುಳಿತು ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಸ್ಥಳಾವಕಾಶ ಮಾಡಿಕೊಟ್ಟಿದ್ದ ಮಹಿಳೆಯು ಓಡಿ ಹೋಗಿರುತ್ತಾಳೆ. ಸದರಿ ಮಹಿಳೆಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ಲಕ್ಷ್ಮೀದೇವಮ್ಮ ಕೋಂ ನರಸಿಂಹಯ್ಯ, 32 ವರ್ಷ, ಗೊಲ್ಲರು, ಗೃಹಣಿ, ಹಿರೇಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 06 ಟೆಟ್ರಾ ಪ್ಯಾಕೆಟ್ ಗಳು, 2) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಬೆಳಿಗ್ಗೆ 10.15 ಗಂಟೆಯಿಂದ 11.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಲಕ್ಷ್ಮೀದೇವಮ್ಮ ಕೋಂ ನರಸಿಂಹಯ್ಯರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 184/2021 ಕಲಂ. 379,511 ಐಪಿಸಿ :-

  ಪಿರ್ಯಾದಿದಾರರಾದ ಎಸ್.ರಾಜಾರಾಮ್ ಬಿನ್ ಜಿ.ಹೆಚ್ ಸತ್ಯನಾರಾಯಣರಾವ್, 64 ವರ್ಷ, ಹಿರಿಯ ವಕೀಲರು, ವಾರ್ಡ್ ನಂ: 01, ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ವಕೀಲ ವೃತ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 01/10/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ತಾನು  ಚಿಂತಾಮಣಿ ನ್ಯಾಯಾಲಯದಲ್ಲಿದ್ದಾಗ ತನ್ನ ಸೊಸೆಯಾದ  ಶ್ರೀಲೇಖಾ ರವರು  ತನಗೆ ಪೋನ್ ಮಾಡಿ ತಾನು ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಸಾಮಿಗಳು ಮನೆಯೊಳಗೆ ಬಂದು  ರೂಂನ ಬೀರುವನ್ನು ತೆಗೆದು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದು ತಾನು ಅವರನ್ನು ನೋಡಿ ಕಿರುಚಿಕೊಂಡಾಗ   ಸಾರ್ವಜನಿಕರು ಬಂದು ಆ ಇಬ್ಬರನ್ನು ಹಿಡಿದುಕೊಂಡಿರುತ್ತಾರೆಂದು ತಿಳಿಸಿದ್ದು ನಾನು ಕೂಡಲೇ  ಮನೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ನಂತರ ತಾನು ಅವರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ 1] ಗಜೇಂದ್ರ @ R X ಶ್ರೀನಿವಾಸ್ 2] ಆನಂದ  ಬಿನ್ ವೆಂಕಟರಮಣ ಎಂದು ತಿಳಿಸಿದ್ದು ನಂತರ ನಾನು 112  ವಾಹನಕ್ಕೆ  ಕರೆ ಮಾಡಿ ಆ ಇಬ್ಬರು ಅಸಾಮಿಗಳನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿರುತ್ತೇವೆ.  ತಾನು ಆ ದಿನ  ಸ್ವಂತ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು ಠಾಣೆಯಲ್ಲಿ  ದೂರು ನೀಡಲು ಆಗದೇ ಇದ್ದು ಈ ದಿನ ದಿನಾಂಕ 03/10/2021 ರಂದು ಠಾಣೆಗೆ ಬಂದು ತಡವಾಗಿ ದೂರು ನೀಡುತ್ತಿರುತ್ತೇನೆ.  ಆದ್ದರಿಂದ ತಮ್ಮ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿರುವ ಮೇಲ್ಕಂಡ  ಗಜೇಂದ್ರ @ R X ಶ್ರೀನಿವಾಸ್ ಮತ್ತು ಆನಂದ  ಬಿನ್ ವೆಂಕಟರಮಣ  ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 271/2021 ಕಲಂ. 306 ಐಪಿಸಿ :-

  ದಿನಾಂಕ 02/10/2021 ರಂದು  10-15 ಗಂಟೆಗೆ ಪಿರ್ಯಾಧಿದಾರರಾದ ಶಾಂತರಾಜ್ ಬಿನ್ ತಿಮ್ಮಪ್ಪ ,27 ವರ್ಷ, ಭೋವಿ ಜನಾಂಗ, ವ್ಯವಸಾಯ, ನರಸಾಪುರ ಗ್ರಾಮ,ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಾಯಿ ನಮ್ಮ ಗ್ರಾಮದ ಕೊಂಡಪ್ಪ ಎಂಬುವವರ ಜೊತೆ  ಹೆಚ್ಚು ಸಲುಗೆಯಿಂದ ಮಾತನಾಡುತ್ತಿದ್ದರು ಇದರ ವಿಚಾರವಾಗಿ ದಿನಾಂಕ 28/09/2021 ರಂದು ಕೊಂಡಪ್ಪ ರವರ ಪತ್ನಿ ನಮ್ಮ ತಾಯಿ ಜೊತೆ ಜಗಳ ಮಾಡಿಕೊಂಡಿದ್ದರು ನಂತರ ಈ ವಿಚಾರವಾಗಿ ಕೊಂಡಪ್ಪ ನಮ್ಮ ತಾಯಿಯನ್ನು ನಿನ್ನಿಂದ ನಮ್ಮಸಂಸಾರ ಹಾಳಾಗುತ್ತಿದೆ, ನೀನು ಎಲ್ಲಾದರೂ ಹೋಗಿ ಸಾಯಿ ಎಂದು ಬೈದು ಹೋದನು. ನಮ್ಮ ತಾಯಿ ಮನನೊಂದು ಮನೆಯಿಂದ ಹೊರಟು ಹೋಗಿರುತ್ತಾರೆ. ದಿನಾಂಕ 29/09/2021 ರಂದು ಸೂರ್ಯನಾಯಕನಹಳ್ಳಿ ರಸ್ತೆಯ ಬಳಿ ಲಚ್ಚೇಗೌಡ ರವರ ಮನೆಯ ಬಳಿ ನಮ್ಮ ತಾಯಿ ನನಗೆ ಸಿಕ್ಕಿದ್ದು ಮೇಲಿನ ವಿಚಾರವಾಗಿ ನಮ್ಮ ತಾಯಿಗೆ ಬುದ್ದಿವಾದ ಹೇಳಿ ಬಾ ಮನೆಗೆ ಹೋಗೊಣ ಎಂದು ಕರೆದೆ ಆಗ ನಮ್ಮ ತಾಯಿ  ನೀನು ಹೋಗು ನಾನು ಮತ್ತೆ ಬರುತ್ತೇನೆ. ಎಂದು ಹೇಳಿದಳು.  ನಾನು ಅಲ್ಲಿಂದ ಮನೆಗೆ ಹೊರಟು ಹೋದೆ. ನಂತರ ರಾತ್ರಿಯಾದರೂ ಮನೆಗೆ ಬರದ ಕಾರಣ ನಾನು ನಮ್ಮ ಸಂಬಂಧಿಕರ ಮನೆಯಲ್ಲಿ ಸುತ್ತ ಮುತ್ತ ಸ್ಥಳಗಳಲ್ಲಿ ಹುಡುಕಲಾಗಿ ಸಿಗದ ಕಾರಣ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ನಮ್ಮ ತಾಯಿ ಕಾಣೆಯಾಗಿರುವ ಬಗ್ಗೆ ನನ್ನ ತಂಗಿ ದೂರು ದಾಖಲಿಸಿರುತ್ತಾರೆ. ಹೀಗಿರುವಾಗ್ಗೆ  ದಿನಾಂಕ 02/10/2021 ರಂದು ಬೆಳಿಗ್ಗೆ ಸುಮಾರು 9-00  ಗಂಟೆಯಲ್ಲಿ ನಮ್ಮ ಗ್ರಾಮದ ಸದಾಶಿವ ರೆಡ್ಡಿ ರವರು ನಮ್ಮ ಮನೆಯ ಬಳಿ ಬಂದು ಆದೆಪ್ಪ ರವರ ಜಮೀನಿನಲ್ಲಿರುವ ಬಾವಿಯಲ್ಲಿ ಯಾವುದೋ ಮಹಿಳೆಯ ಶವ ಬಿದ್ದಿರುವುದಾಗಿ ತಿಳಿಸಿದರು. ಕೂಡಲೇ ನಾವು ಬಾವಿಯ ಬಳಿ ಹೋಗಿ ನೋಡಲಾಗಿ ಮೃತ ದೇಹವು ನಮ್ಮ ತಾಯಿಯದ್ದಾಗಿರುತ್ತೆ.  ನಮ್ಮ ತಾಯಿಗೆ ಕೊಂಡಪ್ಪ ರವರು ದಿನಾಂಕ 28/09/2021 ರಂದು ಜಗಳ ಮಾಡಿ ಸಾಯಲು ದುಶ್ಪೇರಣೆ ಮಾಡಿದ್ದರಿಂದ ನಮ್ಮ ತಾಯಿ ಮನ ನೊಂದು ನರಸಾಪುರ ಗ್ರಾಮದ ಆದೆಪ್ಪ ರವರ ಜಮೀನಿನಲ್ಲಿರುವ ಬಾವಿಯಲ್ಲಿ ಬಿದ್ದು  ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಆದುದರಿಂದ ಕೊಂಡಪ್ಪ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

11. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 105/2021 ಕಲಂ. 279,337,304(A) ಐಪಿಸಿ :-

  ದಿನಾಂಕ 02/10/2021 ರಂದು ಸಂಜೆ 07.00 ಗಂಟೆಯಲ್ಲಿ ಚಿಂತಾಮಣಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸೈಯದ್ ಜುನೈದ್ ಬಿನ್ ಸಮೀಉಲ್ಲಾ, 23 ವರ್ಷ, ಮುಸ್ಲೀಂ ಜನಾಂಗ, ಮೊಬೈಲ್ ಕಂಪನಿಯಲ್ಲಿ ಕೆಲಸ, ವಾಸ ನಂ 103, 8ನೇಕ್ರಾಸ್, ಮೋದಿ ರಸ್ತೆ, ಮೋದಿ ಮಸೀದಿ ಬಳಿ, ಡಿ.ಜೆ ಹಳ್ಳಿ ಬೆಂಗಳೂರು-45 ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆದು ರಾತ್ರಿ 09.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿದ ಗಾಯಾಳು ಹೇಳಿಕೆ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 02/10/2021 ರಂದು ಮದ್ಯಾಹ್ನ ತನ್ನ ಸ್ನೇಹಿತ ಅನೀಪ್ ಷರೀಪ್ ರವರು ಮುರಗಮಲ್ಲ ದರ್ಗಾಗೆ ಹೋಗಲು ಕರೆದಿದ್ದು, ತಾನು ತನ್ನ ಸ್ನೇಹಿತನ ಬಾಬತ್ತು ಕೆಎ-05-ಡಿ-1744 ಸ್ಕಾರ್ಪಿಯೋ ಕಾರ್ ವಾಹನದಲ್ಲಿ ತಾನು ತನ್ನ ಸ್ನೇಹಿತ, ಸ್ನೇಹಿತನ ಕುಟುಂಬದವರಾದ ಸಲೀಂ ಖಾನ್, ನಾದೀರಾ, ಸೈಯಾ ಪಾತೀಮಾ, ಸಾನಿಯಾ,ಸುಹೇಲ್, ಜೋಯಾಖಾನಂ, ಸಲೀಮ್, ರೇಷ್ಮಾ ಮತ್ತು ರೇಷ್ಮಾಳ ಮಗು ಆಲೀಮಾ ರವರು ಕಾರಿನಲ್ಲಿ ಮದ್ಯಾಹ್ನ 2.30 ಗಂಟೆಗೆ ಬೆಂಗಳೂರು ಬಿಟ್ಟು, ಮುರಗಮಲ್ಲ ದರ್ಗಾಗೆ ಬರುತ್ತಿದ್ದಾಗ ಕಾರನ್ನು ಚಾಲಕ ಅನೀಪ್ ಷರೀಪ್ ರವರು ಚಾಲನೆ ಮಾಡುತ್ತಿದ್ದರು, ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ಚಿಂತಾಮಣಿ ಮುರಗಮಲ್ಲ ರಸ್ತೆಯ ಗೊಲ್ಲಪಲ್ಲಿಗಡ್ಡ ಗ್ರಾಮದ ಸಮೀಪ ತಿರುವಿನಲ್ಲಿ ಚಾಲಕ ಅನೀಪ್ ಷರೀಪ್ ರವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಿರುಗಿಸಿದ ಪರಿಣಾಮ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಪಲ್ಟಿ ಹೊಡೆಸಿದ್ದು,ಕಾರಿನಲ್ಲಿದ್ದ ಮೇಲ್ಕಂಡ ಎಲ್ಲರಿಗೂ ಗಾಯಗಳಾಗಿದ್ದು, ತನಗೆ ಬಲಕಿವಿಯ ಮೇಲ್ಬಾಗದಲ್ಲಿ ರಕ್ತಗಾಯವಾಗಿದ್ದು, ಕತ್ತಿನ ಹಿಂಭಾಗದಲ್ಲಿ ಒತ್ತಿದ ಗಾಯವಾಗಿರುತ್ತದೆ.ಆ ಪೈಕಿ ರೇಷ್ಮಾಳ ಮಗಳಾದ 6 ತಿಂಗಳ ಅಲೀಮಾಳಿಗೆ ತಲೆಯ ಹಿಂಭಾಗದ ಎಡಭಾಗದಲ್ಲಿ ಗಾಯವಾಗಿ ಮೃತಪಟ್ಟಿರುತ್ತಾಳೆ.ಗಾಯಾಳುಗಳೆಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಈ ಅಪಘಾತಕ್ಕೆ ಕಾರಣವಾದ ಚಾಲಕ ಅನೀಪ್ ಷರೀಪ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ತಾನು ಉರ್ದುವಿನಲ್ಲಿ ಹೇಳಿದ್ದನ್ನು ಪೊಲೀಸರು ಕನ್ನಡಕ್ಕೆ ತರ್ಜಿಮೆ ಮಾಡಿಕೊಂಡು ಬರೆದ ಹೇಳಿಕೆ ದೂರಿನ ಸಾರಾಂಶವಾಗಿರುತ್ತದೆ.

 

12. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 188/2021 ಕಲಂ. 304(ಎ) ಐಪಿಸಿ :-

  ದಿನಾಂಕ:02/10/2021  ರಂದು ಪಿರ್ಯಾದಿದಾರರಾದ ನರಸಪ್ಪ ಬಿನ್ ಲೇಟ್ ಯರತಿಪ್ಪಯ್ಯ, 65 ವರ್ಷ, ಗೊಲ್ಲ, ಜಿರಾಯ್ತಿ, ಕೊತ್ತೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮಗೆ ಸೇರಿದ ನಮ್ಮ ಸ್ವಂತ ಜಮೀನಿನಲ್ಲಿ ಅತ್ತಿ ಮರವಿದ್ದು ಸದರಿ ಅತ್ತಿ ಮರಕ್ಕೆ ಅಂಟಿಕೊಂಡು 11 ಕೆವಿ ತಂತಿ ಹಾದು ಹೋಗಿರುತ್ತದೆ. ವಿದ್ಯುತ್ ತಂತಿಗೆ ಮರದ ರೆಂಬೆಗಳು ತಗಲುತ್ತಿದ್ದು  ಇದನ್ನು ಕತ್ತರಿಸದೆ ಸಂಬಂಧಪಟ್ಟ ತೊಂಡೇಬಾವಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ತೋರಿಸಿರುತ್ತಾರೆ. ಈ ದಿನ ದಿನಾಂಕ:02/10/2021 ರಂದು ಸುಮಾರು 6.30 ಗಂಟೆ ಸಮಯದಲ್ಲಿ ನನ್ನ ಮಗನಾದ ರವಿ ಕುಮಾರ್ ರವರು ನಮ್ಮ ಖಾಲಿ ಜಾಗದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ಕ್ಲೀನ್ ಮಾಡಲು ಹಾಗೂ ಮೇಕೆಗಳಿಗೆ ಮೇವನ್ನು ತರಲು ಮೇಲ್ಕಂಡ ಜಾಗಕ್ಕೆ ಹೋಗಿದ್ದು ಕಬ್ಬಿಣದ ಮಚ್ಚಿನಿಂದ ರೆಂಬೆಯನ್ನು ಕಡಿದಾಗ ಸದರಿ ಅತ್ತಿ ಮರದ ರೆಂಬೆಗಳು 11 ಕೆವಿ ವಿದ್ಯುತ್ ತಂತಿಗೆ ತೆಗುಲಿಕೊಂಡಿದ್ದರ ಪರಿಣಾಮವಾಗಿ ವಿದ್ಯುತ್ ಶಾಕ್ ತಗುಲಿ ನನ್ನ ಮಗ ರವಿಕುಮಾರ್ ಬೆಳಗ್ಗೆ 7.30 ಗಂಟೆಗೆ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ. ಸದರಿ ವಿಚಾರವನ್ನು ಪಕ್ಕದ ಜಮೀನಿನವರಾದ ಚೌಡಪ್ಪ ಬಿನ್ ಮುದ್ದು ಕೃಷ್ಣಪ್ಪ ರವರು ನನ್ನ ಹೆಂಡತಿಗೆ ತಿಳಿಸಿದ್ದು ತಕ್ಷಣ ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನನ್ನ ಮಗನ ಸಾವಿಗೆ ಸಂಬಂಧಪಟ್ಟ ತೊಂಡೇಬಾವಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಅಜಾಗರೂಕತೆ ಕಾರಣವಾಗಿರುತ್ತೆ. ನನ್ನ ಮಗನ ಸಾವಿಗೆ ಕಾರಣರಾದ ತೊಂಡೇಬಾವಿ ಬೆಸ್ಕಾಂ ಅಧಿಕಾರಿಗಳ ವಿರುದ್ದ ಸೂಕ್ತ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ .189/2021 ಕಲಂ . 279,337,304(A) ಐಪಿಸಿ :-

  ದಿನಾಂಕ:03/10/2021  ರಂದು ಪಿರ್ಯಾದಿದಾರರಾದ ಲೋಕೇಶ್ ಎಸ್.ಕೆ ಬಿನ್ ಕೃಷ್ಣಪ್ಪ, 35 ವರ್ಷ, ಕುರುಬ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ಶಿರವಾರ ಗ್ರಾಮ, ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನನ್ನ ಹೆಂಡತಿ ಮತ್ತು ಮಗು ದೊಡ್ಡ ಹುಸೇನ್ ಪುರದಲ್ಲಿ ಇದ್ದು ಅವರನ್ನು ನೋಡಿಕೊಂಡು ಬರುವುದಾಗಿ ಈ ದಿನ  ನಮ್ಮ ತಂದೆ ಕೃಷ್ಣಪ್ಪ ಬಿನ್ ಲೇಟ್ ರಂಗಪ್ಪ @ ರಂಗಯ್ಯ ಮತ್ತು ತಾಯಿ ಹನುಮಕ್ಕ ರವರು ನಮ್ಮ  ಬಾಬತ್ತು ಕೆಎ-43-ಕ್ಯೂ-5921 ಟಿವಿಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಹೋಗಿ ಬರುವುದಾಗಿ ತಿಳಿಸಿ ಮದ್ಯಾಹ್ನ 12.30 ಗಂಟೆಗೆ ಮನೆಯಿಂದ ಹೋಗಿದ್ದು ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿ ಮಹೇಶ್ ಬಿನ್ ಗೋಪಿನಾಥ್ ರವರು ಫೋನ್ ಮಾಡಿ ನಿಮ್ಮ ತಂದೆ ದೊಡ್ಡಬಳ್ಳಾಪುರ-ಗೌರಿಬಿದನೂರು ಎಸ್.ಹೆಚ್-9 ರಸ್ತೆಯ ಬಸವಾಪುರ ಗ್ರಾಮದ ಬಳಿ ಗೌರಿಬಿದನೂರು ಕಡೆಗೆ ಹೋಗುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಬಂದ ಕೆಎ-32-ಪಿ-6139 BREZZA CAR ನ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಮದ್ಯಾಹ್ನ 1.15 ಗಂಟೆ ಸಮಯದಲ್ಲಿ ಅಪಘಾತ ಉಂಟು ಮಾಡು ನಿಮ್ಮ ತಂದೆ ಕೃಷ್ಣಪ್ಪ ರವರಿಗೆ ತಲೆಗೆ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನಿಮ್ಮ ತಾಯಿಗೂ ಸಹಾ ತಲೆಗೆ ಕೈಕಾಲುಗಳಿಗೆ ಗಾಯಗಳಾಗಿದ್ದು ನಾನು ಮತ್ತು ಅಲ್ಲಿನ ಸ್ಥಳೀಯರ ಸಹಾಯದಿಂದ ಉಪಚರಿಸಿ 108 ಆಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದು ತಕ್ಷನ ಸ್ಥಳಕ್ಕೆ ಬಂದು ನೋಡಿ ನಂತರ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೋಗಿ ನಮ್ಮ ತಾಯಿ ಮತ್ತು ನನಗೆ ಫೋನ್ ಮಾಡಿದ ಮಹೇಶನನ್ನು ವಿಚಾರಿಸಲಾಗಿ ವಿಷಯ ನಿಜವಾಗಿದ್ದು ನಮ್ಮ ತಂದೆಯ  ಮತ್ತು ನಮ್ಮ ತಾಯಿಯ ಅಪಘಾತಕ್ಕೆ  ಕಾರಣನಾದ ಕೆಎ-32-ಪಿ-6139 ಕಾರಿನ ಚಾಲಕ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿದ್ದರಿಂದ ನಮ್ಮ ತಂದೆ ಮೃತಪಟ್ಟಿದ್ದು ಅಪಘಾತ ಪಡಿಸಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

14. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 121/2021 ಕಲಂ. 78 ಕೆ.ಪಿ. ಆಕ್ಟ್ 1963 :-

  ದಿನಾಂಕ:03/10/2021 ರಂದು ನಾನು ಠಾಣೆಯಲ್ಲಿರುವಾಗ ಮದ್ಯಾಹ್ನ 3:30 ಗಂಟೆ ಸಮಯದಲ್ಲಿ ಡಿ.ಹೊಸೂರು ಗ್ರಾಮದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಕಟ್ಟಿಂಗ್ ಶಾಫ್ ಮುಂಭಾಗದ ಬಳಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಕ್ರೀಕೆಟ್ ಬೆಟ್ಟಿಂಗ್  ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:125/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಕ್ರೀಕೆಟ್ ಬೆಟ್ಟಿಂಗ್  ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

Last Updated: 03-10-2021 06:25 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080