ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.326/2021 ಕಲಂ. 78(1)(a)(vi) ಕೆ.ಇ ಆಕ್ಟ್:-

     ದಿನಾಂಕ: 30/09/2021 ರಂದು ರಾತ್ರಿ 9-15 ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ.30/09/2021 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಮಾರ್ಗಾನುಕುಂಟೆ ಗ್ರಾಮದಲ್ಲಿರುವ   ಸ್ವಾಮಿ ಜನರಲ್ ಸ್ಟೋರ್ ಬಳಿ  ಯಾರೋ ಆಸಾಮಿಗಳು ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು  ಈ ದಿನ ನಡೆಯುವ ಚೆನೈ ಸೂಪರ್ ಕಿಂಗ್ಸ ಮತ್ತು ಸನ್ ರೈಸರ್ಸ್ ಹೈದ್ರಾಬಾದ್  ಕ್ರಿಕೆಟ್ ಟೀಮ್ ಗಳ  ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಕ್ರಿಕೆಟ್  ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ-212 ಶ್ರೀನಾಥ, ಪಿಸಿ-130 ಬಾಬಾವಲಿ, ಹೆಚ್.ಸಿ-178 ಶ್ರೀಪತಿ, ಪಿಸಿ-387 ಮೋಹನ ಹಾಗೂ  ಜೀಪ್ ಚಾಲಕ ಎ.ಹೆಚ್.ಸಿ ವೆಂಕಟೇಶ್  ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-537 ರಲ್ಲಿ ಹೊರಟು ಬಾಗೆಪಲ್ಲಿ ತಾಲ್ಲೂಕು ಗೂಳೂರು ಗ್ರಾಮದ ಬಸ್ ನಿಲ್ದಾಣದ ಬಳಿ   ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳದಿಂದ  ಸ್ವಲ್ಪ ದೂರದಲ್ಲಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು 200/- ರೂ  ಚೆನೈ ಸೂಪರ್ ಕಿಂಗ್ಸ ಗೆಲ್ಲುತ್ತದೆ ಎಂದು  ಮತ್ತು 200/- ಸನ್ ರೈಸರ್ಸ್ ಹೈದ್ರಾಬಾದ್ ಟೀಮ್  ಗೆಲ್ಲುತ್ತದೆ ಎಂದು ಹಣವನ್ನು ಮೊಬೈಲ್ ಮುಖಾಂತರ ಪಣಕ್ಕೆ ಹಾಕಿ  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು  ಹೆಸರು ವಿಳಾಸವನ್ನು ಕೇಳಲಾಗಿ 1) ನಾರಾಯಣಸ್ವಾಮಿ ಬಿನ್ ಲೇಟ್ ಕೃಷ್ಣಪ್ಪ, 35 ವರ್ಷ, ಬಲಜಗ ಜನಾಂಗ, ವ್ಯಾಪಾರ, ವಾಸ ಮಾರ್ಗಾನುಕುಂಟೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು 2] ಸುಧಾಕರ ಬಿನ್ ನಂಜುಂಡಪ್ಪ, 25 ವರ್ಷ, ನಾಯಕ ಜನಾಂಗ, ಕೊಲಿಕೆಲಸ, ವಾಸ ಜೋಗಿರೆಡ್ಡಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 3] ಲಕ್ಷ್ಮಣ ಬಿನ್ ಶ್ರೀರಾಮಪ್ಪ, 31 ವರ್ಷ, ಆದಿಕರ್ನಾಟಕ ಜನಾಂಗ, ವ್ಯವಸಾಯ, ವಾಸ ಪಿಚ್ಚಲವಾರಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ತಿಳಿಸಿರುತ್ತಾರೆ.  ನಂತರ ಆಸಾಮಿ ಬಳಿ ಇದ್ದ  ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ ಈಗಾಗಲೇ ದಿನಾಂಕ 28/09/2021 ಮತ್ತು ದಿನಾಂಕ 29/09/2021 ರಂದು ಪೋನ್ ಪೇ  ಮೂಲಕ   ಹಣವನ್ನು ಪಣಕ್ಕೆ ಹಾಕಿ  ಐಪಿಎಲ್  ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿರುವುದು ಕಂಡು ಬಂದಿರುತ್ತದೆ.  ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಉಪಯೋಗಿಸಿದ್ದ 1) ಒಂದು ವಿವೋ ಕಂಪೆನಿಯ ಸ್ಕ್ರೀನ್  ಟಚ್ ಮೊಬೈಲ್, 2] ಒಂದು ಓಪೋ ಕಂಪೆನಿಯ ಸ್ಕ್ರೀನ್  ಟಚ್ , 3] ಒಂದು ರಿಯಲ್ ಮೀ  ಕಂಪೆನಿಯ ಸ್ಕ್ರೀನ್  ಟಚ್ ಮೊಬೈಲ್, ಗಳನ್ನು  ಪ್ಲೈಟ್ ಮೂಡ್ ಗೆ ಹಾಕಿ ಹಾಗೂ ಹಾಗೂ ಪಣಕ್ಕೆ ಕಟ್ಟಿದ್ದ 1,500 /- ರೂ ಗಳನ್ನು  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ರಾತ್ರಿ 7-45 ಗಂಟೆಯಿಂದ 8-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ, ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-15  ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಅಸಲು ಪಂಚನಾಮೆ, ಮೊಬೈಲ್ ಪೋನ್ ಗಳು  ಹಾಗೂ ಆರೋಪಿಗಳನ್ನು  ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಗಳು ಕಾನೂನು ಬಾಹಿರವಾಗಿ ಐಪಿಎಲ್  ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು  ಆಡುತ್ತಿದ್ದರ  ಮೇಲ್ಕಂಡ ಆಸಾಮಿಗಳ  ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್-289/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:01-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.327/2021 ಕಲಂ. 78(1)(a)(vi) ಕೆ.ಇ ಆಕ್ಟ್:-

     ದಿನಾಂಕ: 30/09/2021 ರಂದು ರಾತ್ರಿ 9-30 ಗಂಟೆಗೆ ಶ್ರೀ.ನಾಗರಾಜ್,ಡಿ.ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ.30/09/2021 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್, ಅಂಬೇಡ್ಕರ್ ನಗರದಲ್ಲಿ ಯಾರೋ  ಆಸಾಮಿಯು ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು  ಈ ದಿನ ನಡೆಯುವ ಚೆನೈ ಸೂಪರ್ ಕಿಂಗ್ಸ ಮತ್ತು ಸನ್ ರೈಸರ್ಸ್ ಹೈದ್ರಾಬಾದ್  ಕ್ರಿಕೆಟ್ ಟೀಮ್ ಗಳ  ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಕ್ರಿಕೆಟ್  ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಪಿಸಿ-575 ವಿಜಯಪ್ಪ ಪಿಸಿ-422 ಲಕ್ಷ್ಮಣ್ ಹಾಗೂ  ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ  ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೆಪಲ್ಲಿ ತಾಲ್ಲೂಕು ಕಛೇರಿ  ಬಳಿ   ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳಕ್ಕೆ ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಯು ಪೋನ್ ನಲ್ಲಿ ಮಾತನಾಡಿಕೊಂಡು 100/- ರೂ  ಚೆನೈ ಸೂಪರ್ ಕಿಂಗ್ಸ ಗೆಲ್ಲುತ್ತದೆ ಟೀಮ್  ಗೆಲ್ಲುತ್ತದೆ ಎಂದು ಹಣವನ್ನು ಮೊಬೈಲ್ ಮುಖಾಂತರ ಪಣಕ್ಕೆ ಹಾಕಿ   ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದು. ಆಸಾಮಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು  ಹೆಸರು ವಿಳಾಸವನ್ನು ಕೇಳಲಾಗಿ ಬಾಬಾ ಫಕೃದ್ದೀನ್ ಬಿನ್ ಕರೀಂ ಬಾಷಾ, 25 ವರ್ಷ, ಮುಸ್ಲಿಂ ಜನಾಂಗ, ಅಂಬೇಡ್ಕರ್ ನಗರ ಕಾಲೋನಿ, 13 ನೇ ವಾರ್ಡ, ಬಾಗೇಪಲ್ಲಿ ತಾಲ್ಲೂಕು ತಿಳಿಸಿರುತ್ತಾರೆ. ನಂತರ ಆಸಾಮಿ ಬಳಿ ಇದ್ದ  ಮೊಬೈಲ್ ಪೋನ್ ಅನ್ನು ಪರಿಶಿಲಿಸಲಾಗಿ ಪೋನ್ ಪೇ  ಮೂಲಕ   ಹಣವನ್ನು ಪಣಕ್ಕೆ ಹಾಕಿ  ಐಪಿಎಲ್  ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿರುವುದು ಕಂಡು ಬಂದಿರುತ್ತದೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಉಪಯೋಗಿಸಿದ್ದ 1) ಒಂದು ವಿವೋ ಕಂಪೆನಿಯ ಸ್ಕ್ರೀನ್  ಟಚ್ ಮೊಬೈಲ್, ಅನ್ನು   ಪ್ಲೈಟ್ ಮೂಡ್ ಗೆ ಹಾಕಿ ಪಣಕ್ಕೆ ಕಟ್ಟಿದ್ದ 1,000 /- ರೂ ಗಳನ್ನು  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ರಾತ್ರಿ 8-15 ಗಂಟೆಯಿಂದ 9-15 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ, ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-30  ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಅಸಲು ಪಂಚನಾಮೆ, ಮೊಬೈಲ್ ಪೋನ್  ಅನ್ನು   ಹಾಗೂ ಆರೋಪಿಯನ್ನು  ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಯು ಕಾನೂನು ಬಾಹಿರವಾಗಿ ಐಪಿಎಲ್  ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು  ಆಡುತ್ತಿದ್ದು ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್-290/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:01-10-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.328/2021 ಕಲಂ. 279,337 ಐ.ಪಿ.ಸಿ & 187 INDIAN MOTOR VEHICLES ACT, 1988:-

     ದಿನಾಂಕ: 02/10/2021 ರಂದು ಬೆಳಿಗ್ಗೆ 1-00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನಟರಾಜ ಬಿನ್ ಗಂಗಪ್ಪ 32ವರ್ಷ, ಆದಿದ್ರಾವಿಡ, ಗಾರೆ ಕೆಲಸ, ವಾಸ: 5ನೇ ವಾರ್ಡ್ ಬಾಗೇಪಲ್ಲಿ ಪುರ.ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಾನು ದಿನಾಂಕ:01/10/2021 ರಂದು ರಾತ್ರಿ 10-00 ಗಂಟೆಯಲ್ಲಿ ನನ್ನ ಬಾಬತ್ತು ಎಪಿ 04 ಕೆ 0919 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಪಟ್ಟಣದ ನಮ್ಮ ಮನೆಯಿಂದ ನಮ್ಮ ಹೆಂಡತಿಯವರ ತವರು ಮನೆ ಜೂಲಪಾಳ್ಯ ಗ್ರಾಮಕ್ಕೆ ಹೋಗುತ್ತಿದ್ದು ಮಾರ್ಗಮದ್ಯೆ ಪಟ್ರವಾರಪಲ್ಲಿ ಗ್ರಾಮದ ಕ್ರಾಸ್ ಬಳಿ ನನ್ನ ಎದುರುಗಡೆಯಿಂದ ಬಂದ ಕೆಎ 25 ಎಎ 0361 ನೋಂದಣಿ ಸಂಖ್ಯೆಯ ಮಹೀಂದ್ರ ಬುಲೆರೋ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ್ದರ ಪರಿಣಾಮ ನಾನು ಕೆಳಗೆ ಬಿದ್ದು ನನ್ನ ಬಲಕಾಲು ಮತ್ತು ಕೈಗಳಿಗೆ ರಕ್ತಗಾಯಗಳಾಗಿರುತ್ತೆ. ನಂತರ ನನ್ನನ್ನು ದಾರಿಯಲ್ಲಿ ಹೋಗುತ್ತಿದ್ದವರು ಯಾರೋ ಉಪಚರಿಸಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದ್ದರಿಂದ ನನಗೆ ಅಪಘಾತ ಮಾಡಿ ಗಾಯಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ  ಕೆಎ 25 ಎಎ 0361 ನೋಂದಣಿ ಸಂಖ್ಯೆಯ ಮಹೀಂದ್ರ ಬುಲೆರೋ ವಾಹನದ ಚಾಲಕನನ್ನು ಪತ್ತೆ ಮಾಡಿ ನಮಗೆ ಸೂಕ್ತ ನ್ಯಾಯ ಕೊಡಿಸಬೇಕಾಗಿ ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು 2-00 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.329/2021 ಕಲಂ. 324,504 ಐ.ಪಿ.ಸಿ :-

     ದಿನಾಂಕ: 02/10/2021 ರಂದು ಬೆಳಿಗ್ಗೆ 3-00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಲ್ಲಿಕಾ ಕೋಂ ಅಕ್ರಂಭಾಷಾ 37ವರ್ಷ, ಮುಸ್ಲಿಂ ಜನಾಂಗ, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ: ಪಿರ್ದೋಸ್ ಮಸೀದಿ ಹತ್ತಿರ, 3ನೇ ವಾರ್ಡ್ ಬಾಗೇಪಷಲ್ಲಿ ಪುರ. ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನನಗೆ ಸುಮಾರು 19ವರ್ಷಗಳ ಹಿಂದೆ ಅಕ್ರಂಬಾಷ ಬಿನ್ ಫಕೃದ್ದೀನ್ ಸಾಬ್ ರವರೊಂದಿಗೆ ವಿವಾಹವಾಗಿದ್ದು ನಮಗೆ 18 ವರ್ಷದ ಚಾಪರ್ ಎಂಬ ಮಗನಿರುತ್ತಾನೆ. ನಾವು ಮಧುವೆಯಾದ 6ವರ್ಷಗಳ ಕಾಲ ಅನ್ಯೋನ್ಯವಾಗಿರುತ್ತೇವೆ. ನಂತರ ನನ್ನ ಗಂಡನ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬಂದು ನನಗೆ ಬೈಯುವುದು ಹೊಡೆಯುವುದು ಮಾಡುತ್ತಿದ್ದು ಹಿರಿಯರ ಸಮ್ಮುಖದಲ್ಲಿ ರಾಜೀ ಆಗುತ್ತಿದ್ದೆವು ಆದರೆ ಮುಂದಿನ ದಿನಗಳಲ್ಲಿ ನನ್ನ ಗಂಡ ಸಭಾಸುಲ್ತಾನ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿ ನನ್ನನ್ನು ಬೈಯುವುದು ಮಾಡುತ್ತಿದ್ದು ಇದೇ ವಿಚಾರವಾಗಿ ದಿನಾಂಕ: 01/10/2021 ರಂದು ರಾತ್ರಿ 9-00 ಗಂಟೆಯಲ್ಲಿ ನನ್ನ ಗಂಡ ಗಲಾಟೆ ತೆಗೆದು ನೀನು ನನಗೆ ಬೇಡ ನಾನು ಯಾರ ಜೊತೆಗಾದರೂ ಇರುತ್ತೇನೆ. ನೀನು ಕೇಳಬಾರದು ಬೇವರ್ಸಿ ಮುಂಡೆ ಎಂದು ಬೈದು ಕೋಲಿನಿಂದ ನನ್ನ ಹೊಟ್ಟೆಗೆ ಮತ್ತು ಕಾಲಿನ ತೊಡೆಯ ಭಾಗಕ್ಕೆ ಹೊಡೆದು ಗಾಯಪಡಿಸಿರುತ್ತಾನೆ. ನಂತರ ನಾನು ನೋವು ತಾಳಲಾರದೆ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಆದ್ದರಿಂದ ನನ್ನ ಗಂಡನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರು.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.170/2021 ಕಲಂ. 78(III) ಕೆ.ಇ ಆಕ್ಟ್:-

     ದಿನಾಂಕ: 01-10-2021 ರಂದು ಸಂಜೆ 7-00 ಗಂಟೆಯಲ್ಲಿ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ. ಗ್ರಾಮಾಂತರ ಠಾಣೆ ರವರು ಠಾಣೆಯಲ್ಲಿ ನೀಡಿದ ಜ್ಞಾಪನದ ಸಾರಾಂಶವೆನೆಂದರೆ ಈ ದಿನ ಸಂಜೆ 5.00 ಗಂಟೆಯಲ್ಲಿ ತಾನು ಸಿಬ್ಬಂದಿಯವರಾದ ಶ್ರೀ.ಸಿ.ಎ.ಸುರೇಶ ಹೆಚ್.ಸಿ.38. ಶ್ರೀ.  ನರಸಿಂಹಮೂರ್ತಿ. ಸಿಪಿಸಿ 264. ಶ್ರೀ. ಶ್ರೀನಿವಾಸ ಸಿಪಿಸಿ 359. ಶ್ರೀ. ಮುರಳಿ ಸಿಪಿಸಿ 138 ರವರೊಂದಿಗೆ ಠಾಣಾ  ಸರಹದ್ದು ಗಸ್ತಿನಲ್ಲಿರುವಾಗ ತನಗೆ ಚಿಕ್ಕಬಳ್ಳಾಪುರ ತಾಲ್ಲೂಕು ದಿಬ್ಬೂರು ಗ್ರಾಮದ ಗಂಗರಾಜು ಬಿನ್ ಮುನಿರಾಜಪ್ಪ 24ವರ್ಷ  ಬೋವಿ ಜನಾಂಗ ಜಿರಾಯ್ತಿ ಎಂಬುವವರು ದಿಬ್ಬೂರು ಗ್ರಾಮದ ಬಸ್ಸು ನಿಲ್ದಾಣದಲ್ಲಿ ಐಪಿಎಲ್ ಸರಣಿಯ ಕೋಲ್ಕತ್ತಾ ನೈಟ್ ರೈಡರ್ಸ್  ಮತ್ತು  ಕಿಂಗ್ಸ್ ಎಲೆವೆನ್ ಪಂಜಾಬ್  ತಂಡಗಳ ಮಧ್ಯ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಹಣವನ್ನು ಪಣವಾಗಿ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿರುವುದಾಗಿ  ಬಂದ ಖಚಿತ ಮಾಹಿತಿ ಮೇರೆಗೆ ಪಂಚಾಯ್ತಿದಾರರನ್ನು ಕರೆದುಕೊಂಡು  ಪೊಲೀಸ್ ಸಿಬ್ಬಂದಿಯವರೊಂದಿಗೆ  ಸರ್ಕಾರಿ ಜೀಪ್ ನಂ ಕೆಎ-40-ಜಿ-567 ರಲ್ಲಿ ಸಂಜೆ 5-30 ಗಂಟೆಗೆ ದಿಬ್ಬೂರು  ಗ್ರಾಮಕ್ಕೆ ಹೋಗಿ ಹೊರವಲಯದಲ್ಲಿ ವಾಹನವನ್ನು ಮರೆಯಾಗಿ ನಿಲ್ಲಿಸಿ ದಿಬ್ಬೂರು ಗ್ರಾಮದ ಬಸ್ಸು ನಿಲ್ದಾಣಕ್ಕೆ  ನಡೆದುಕೊಂಡು ಹೋದಾಗ ಬಸ್ಸು ನಿಲ್ದಾಣದಲ್ಲಿ ಒಬ್ಬ ಆಸಾಮಿಯು ಕೂಗಾಡುತ್ತಾ ಈ ದಿನ ಐಪಿಎಲ್ ಸರಣಿಯ ಕೋಲ್ಕತ್ತಾ ನೈಟ್ ರೈಡರ್ಸ್  ಮತ್ತು  ಕಿಂಗ್ಸ್ ಎಲೆವೆನ್ ಪಂಜಾಬ್  ತಂಡಗಳ  ಮದ್ಯ  ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ  ಕೋಲ್ಕತ್ತಾ ನೈಟ್ ರೈಡರ್ಸ್  ತಂಡ ವಿಜಯಶಾಲಿಯಾಗುತ್ತದೆ  ಎಂದು ಯಾರಾದರೂ  ಹಣವನ್ನು ಪಣವಾಗಿ ಬೆಟ್ ಕಟ್ಟಿ ಎಂದು ಸಾರ್ವಜನಿಕ ಸ್ಥಳದಲ್ಲಿ ಸದರಿ ಆಸಾಮಿಯು 500/- ರೂಪಾಯಿಗಳಿಗೆ 1000/- ರೂಪಾಯಿಗಳನ್ನು ಕೊಡುವುದಾಗಿ ಹಣವನ್ನು ಪಣವಾಗಿ ಕಟ್ಟಿ ಎಂದು ಸಾರ್ವಜನಿಕರರನ್ನು  ಪ್ರೇರೇಪಿಸಿ ಅವರಿಗೆ ಬೆಟ್ಟಿಂಗ್ ಕಟ್ಟಿ ಎಂದು ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಕ್ರೀಕೆಟ್ ಬೇಟ್ಟಿಂಗ್  ಮೇಲೆ ದಾಳಿ ಮಾಡಿ ಆಸಾಮಿಯನ್ನು  ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ಗಂಗರಾಜು ಬಿನ್ ಮುನಿರಾಜಪ್ಪ 24ವರ್ಷ ಬೋವಿ ಜನಾಂಗ ಜಿರಾಯ್ತಿ ವಾಸ: ಹಾಲು ಡೈರಿಯ ಹಿಂಭಾಗ ದಿಬ್ಬೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಉಳಿದವರು ಅಲ್ಲಿಂದ ಓಡಿ ಹೋದರು. ಸದರಿ ಅಸಾಮಿಯು ತಾನು ಇಂದು  ನಡೆಯಲಿರುವ  ಕೋಲ್ಕತ್ತಾ ನೈಟ್ ರೈಡರ್ಸ್  ವಿರುದ್ದ ಕಿಂಗ್ಸ್ ಎಲೆವೆಲ್ ಪಂಜಾಬ್  ಐಪಿಲ್ ಕ್ರಿಕೆಟ್ ಸರಣಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಕ್ರಿಕೆಟ್ ಬೆಟ್ಟಿಂಗ್ ಗ್ ಆಡುತ್ತಿದ್ದು, ಹಣವನ್ನು  ಫಣವಾಗಿ ಕಟ್ಟಿಸಿಕೊಂಡಿರುತ್ತೇ ನೆಂದು ಹೇಳಿ  ಆತನ  ಬಳಿ ಇದ್ದ  ಹಣವನ್ನು  ಹಾಜರುಪಡಿಸಿದ್ದು  ನಗದು ಹಣವನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಪರಿಶೀಲಿಸಲಾಗಿ ನಗದು ಹಣ ರೂ.700/- ಇರುತ್ತದೆ. ಸದರಿ ಹಣವನ್ನು ಮುಂದಿನ ನಡವಳಿಕೆಯ ಬಗ್ಗೆ ಪಂಚರ ಸಮ್ಮುಖದಲ್ಲಿ ಸಂಜೆ 5-45 ಗಂಟೆಯಿಂದ 6-30 ಗಂಟೆಯವರೆವಿಗೂ ಪಂಚನಾಮೆಯ ಮುಖಾಂತರ ಅಮಾನತ್ತು  ಪಡಿಸಿ ಕೊಂಡಿರುತ್ತದೆ. ಆಸಾಮಿಯನ್ನು ಮತ್ತು ಮಾಲನ್ನು ಈ ಜ್ಞಾಪನದೊಂದಿಗೆ ನೀಡುತ್ತಿದ್ದು ಆರೋಪಿಯ  ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿ  ನೀಡಿದ  ಜ್ಞಾಪನವನ್ನು  ಪಡೆದುಕೊಂಡು  ಠಾಣಾ NCR No. 243/2021 ರಂತೆ  ದಾಖಲಿಸಿಕೊಂಡಿರುತ್ತೆ. ಇದು  ಅಸಂಜ್ಞೆಯ  ಪ್ರಕರಣವಾಗಿರುವುದರಿಂದ ಸಂಜ್ಞೆಯ ಪ್ರಕರಣವೆಂದು ಪರಿಗಣಿಸಿ  ಆರೋಪಿಯ ವಿರುದ್ದ ಕಲಂ: 78 (3) ಕೆ.ಪಿ. ಆಕ್ಟ್ ರೀತ್ಯಾ ಕೇಸು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಗೌರವಾನ್ವಿತ ನ್ಯಾಯಾದೀಶರು ಎ.ಸಿ.ಜೆ  ಮತ್ತು  ಜೆ.ಎಂ.ಎಪ್.ಸಿ. ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ  ಅನುಮತಿಯನ್ನು  ಪಡೆದುಕೊಂಡು  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ. ಆದುದರಿಂದ  ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.73/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ 01/10/2021 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ಕೆ.ಟಿ ಶ್ರೀನಿವಾಸ್ ಬಿನ್ ಕೆ.ಟಿ ಕೃಷ್ಣಪ್ಪ 62 ವರ್ಷ, ಬಲಜಿಗರು, ಕಂದವಾರ ಬಾಗಿಲು, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ಜಿರಾಯ್ತಿಯಿಂದ ಜೀವನ ನಡೆಸಿಕೊಂಡಿದ್ದು ತನಗೆ ಇಬ್ಬರು ಜನ ಮಕ್ಕಳಿದ್ದು, ಆ ಪೈಕಿ 1 ನೇ ಮಗಳಾದ ಸುಕನ್ಯ, 2 ನೇ ಭರತ್ ಕುಮಾರ್ ಎಸ್ ಆಗಿದ್ದು, ಈ ಪೈಕಿ ತನ್ನ ಎರಡನೇ ಮಗನಾದ ಭರತ್ ಕುಮಾರ್ ಎಸ್ ರವರು ದಿನಾಂಕ:-30/09/2021 ರಂದು ಬೆಳಿಗ್ಗೆ ಸುಮಾರು 08-00 ಗಂಟೆಯ ಸಮಯದಲ್ಲಿ ತನ್ನ ಎರಡೂ ಮೊಬೈಲ್ ಗಳನ್ನು ಮನೆಯಲ್ಲಿಯೇ ಇಟ್ಟು ಹೊರಗಡೆ ಹೋಗಿದ್ದು ಇಂದಿನವರೆಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ  ಈ ಬಗ್ಗೆ ತಾನು ಮತ್ತು ತನ್ನ ಕುಟುಂಬದವರು ಅವರ ಸ್ನೇಹಿತರ ಬಳಿ ವಿಚಾರಿಸಲಾಗಿ ಇದುವರೆಗೂ ತನ್ನ ಮಗನ ಬಗ್ಗೆ ಸುಳಿವು ತಿಳಿದು ಬಂದಿರುವುದಿಲ್ಲ. ಈ ದಿನ ಮಧ್ಯಾಹ್ನದ ಸಮಯದಲ್ಲಿ ಯಾರೋ ಅಪರಿಚಿತರ ಮೂಲಕ ತನ್ನ ಮಗನ ದ್ವಿಚಕ್ರವಾಹನವನ್ನು ಜಕ್ಕಲಮೊಡಗು ಪಂಪ್ ಹೌಸ್ ಬಳಿ ಬಿಟ್ಟಿರುವುದಾಗಿ ತಿಳಿದು ಬಂದಿದ್ದು, ತನ್ನ ಮಗನ ಸ್ನೇಹಿತರು ಮನೆಯ ಎಲ್ಲಾ ಕಡೆ ಸುತ್ತಾ ಮುತ್ತಾ ಪರಿಚಯ ಇರುವ ಮತ್ತು ಎಲ್ಲಾ ಕಡೆ ಹುಡುಕಾಡಿ ವಿಚಾರಿಸಲಾಗಿ ಈ ದಿನ ಸದರಿ KA-40-EF-5945 ರ ಸಂಖ್ಯೆಯ ದ್ವಿಚಕ್ರವಾಹನವನ್ನು ಜಕ್ಕಲಮೊಡಗು ಪಂಪ್ ಹೌಸ್ ಬಳಿ ಬಿಟ್ಟಿರುವುದಾಗಿ ತಿಳಿದುಬಂದಿರುವುದರಿಂದ ಹಾಗೂ ಎಲ್ಲಿಯೂ ತನ್ನ ಮಗನ ಸುಳಿವು ದೊರಕಿರುವುದಿಲ್ಲ ಆದ್ದರಿಂದ ತಡವಾಗಿ ಈ ದಿನ ದಿನಾಂಕ:-01/10/2021 ರಂದು ಕಾಣೆಯಾಗಿರುವ ತನ್ನ ಮಗ ಭರತ್ ಕುಮಾರ್ ಎಸ್ ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.432/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ: 01/10/2021 ರಂದು ಸಂಜೆ 4.00 ಗಂಟೆಗೆ ಶ್ರೀಮತಿ ಗಾಯಿತ್ರಿ ಕೋಂ ಪ್ರಕಾಶ್, 28 ವರ್ಷ, ಗೃಹಣಿ, ಆದಿ ದ್ರಾವಿಡ ಜನಾಂಗ, ಅಮಿಟಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಪ್ರಕಾಶ್ ರವರ ಜೊತೆ ಈಗ್ಗೆ 04 ವರ್ಷದ ಹಿಂದೆ ಮದುವೆಯಾಗಿರುತ್ತೆ. ತಮಗೆ ಒಂದು ಗಂಡು ಮಗು ಸಹ ಇರುತ್ತೆ. ತನ್ನ ಗಂಡ ಪ್ರಕಾಶ್ ಬಿನ್ ಮುನಿಯಪ್ಪ, 32 ವರ್ಷ ರವರು ಗಾರೆ ಕೆಲಸ ಮಾಡಿಕೊಂಡಿದ್ದು ಪ್ರತಿ ದಿನ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ವಾಪಸ್ಸು ಮನೆಗೆ ಬರುತ್ತಿದ್ದರು. ಹೀಗಿರುವಾಗ ದಿನಾಂಕ: 25/09/2021 ರಂದು ಬೆಳಗ್ಗೆ 08.00 ಗಂಟೆ ಸಮಯದಲ್ಲಿ ತಾನು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಸಂಜೆ ಆದರೂ ವಾಪಸ್ಸು ಮನೆಗೆ ಬಂದಿರುವುದಿಲ್ಲ. ನಂತರ ತಾವುಗಳು ತನ್ನ ಗಂಡನನ್ನು ತಮ್ಮ ಗ್ರಾಮದಲ್ಲಿ, ತಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಆತನ ಸ್ನೇಹಿತರ ಮನೆಗಳಲ್ಲಿ ವಿಚಾರ ಮಾಡಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತನ್ನ ಗಂಡನ ಪತ್ತೆಯ ಬಗ್ಗೆ ತಾವುಗಳು ಇದುವರೆಗೂ ಹುಡುಕಾಡಿಕೊಂಡಿದ್ದು, ಆತನು ಇದುವರೆಗೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಕಾಣೆಯಾದ ತನ್ನ ಗಂಡ ಪ್ರಕಾಶ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.433/2021 ಕಲಂ. 78(1)(a)(vi) ಕೆ.ಇ ಆಕ್ಟ್:-

     ದಿನಾಂಕ: 01/10/2021 ರಂದು ರಾತ್ರಿ 11.00 ಗಂಟೆಗೆ ಠಾಣೆಯ ಘನ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ರವರು ಘನ ನ್ಯಾಯಾಲಯದ ನ್ಯಾಯಾದೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ:01/10/2021 ರಂದು ರಾತ್ರಿ 8.45 ಗಂಟೆ ಸಮಯದಲ್ಲಿ ಠಾಣೆಯ ಪ್ರಭಾರ ಪಿ.ಐ ಶ್ರೀ ಜಿ.ಪಿ.ರಾಜು ರವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿನ ಕನ್ನಂಪಲ್ಲಿ- ಕಟಮಾಚನಹಳ್ಳಿ ಮಾರ್ಗ ಮದ್ಯೆ ಇರುವ ಜೆ.ಸಿ.ಆರ್ ಬಾರ್ ಮುಂಭಾಗ ಯಾರೋ ಒಬ್ಬ ಆಸಾಮಿ ಮೊಬೈಲ್ ಮೂಲಕ ಕಾನೂನು ಬಾಹಿರವಾಗಿ ಐ.ಪಿ.ಎಲ್ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ತಾನು ಸದರಿ ಸ್ಥಳದಲ್ಲಿ ದಾಳಿ ಮಾಡಲು ಇಲಾಖಾ ಜೀಪ್ ಸಂಖ್ಯೆ ಕೆಎ-40 ಜಿ-6399 ರಲ್ಲಿ ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-41 ಜಗದೀಶ್, ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-544 ವೆಂಕಟರವಣ, ಜೀಪ್ ಚಾಲಕ ಎ.ಪಿ.ಸಿ-110 ಮೂರ್ತಿ ಹಾಗೂ ಪಂಚರನ್ನು ಕರೆದುಕೊಂಡು ರಾತ್ರಿ 9.15 ಗಂಟೆಗೆ ಜೆ.ಸಿ.ಆರ್ ಬಾರ್ ನಿಂದ ಸ್ವಲ್ಪ ಹಿಂದೆ ದೂರದಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಬಾರ್ ಮುಂಭಾಗ ಒಬ್ಬ ಆಸಾಮಿ ಮೊಬೈಲ್ ನೋಡುತ್ತಾ ಕುಳಿತುಕೊಂಡಿದ್ದು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಆಸಾಮಿಯನ್ನು ಸುತ್ತುವರೆದು, ಆತನ ಬಳಿ ಇದ್ದ ಮೊಬೈಲ್ ನೋಡಲಾಗಿ ರೆಡ್ಮಿ ನೋಟ್-4 ಮೊಬೈಲ್ ಆಗಿದ್ದು, ಡಿಸ್ ಪ್ಲೇ ನಲ್ಲಿ ಆನ್ ಲೈನ್ ಪೇಜ್ ಓಪನ್ ಇದ್ದು, ಅದರಲ್ಲಿ IPL 2021 FRESH EXCH ಕೊಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಎಂದು ಇದ್ದು, ಸದರಿ ಪೇಜ್ ನ ಬಗ್ಗೆ ಹಾಗೂ ಆತನ ಬಗ್ಗೆ ವಿಚಾರಿಸಲಾಗಿ ನನ್ನ ಹೆಸರು ಅಶೋಕ್.ಡಿ.ಕೆ ಬಿನ್ ಕೋದಂಡರಾಮ, 30 ವರ್ಷ, ಗಾಣಿಗರು, ದೊಡ್ಡಹಳ್ಳಿ ಗ್ರಾಮ, ಕೈವಾರ ಹೋಬಳಿ, ಚಿಂತಾಮಣಿ ತಾಲ್ಲೂಕು ಎಂದು ಮತ್ತು ನಾನು IPL-2021 ನ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ವಾಡುತ್ತಿರುವುದಾಗಿ ಹಾಗೂ ನನಗೆ ಈ ಆಫ್ ಅನ್ನು ನನ್ನ ಮೊಬೈಲ್ ಸಂಖ್ಯೆ: 9481585290 ಗೆ ಚಿನ್ನಸಂದ್ರ ಗ್ರಾಮದ ವಾಸಿಯಾದ ಫಯಾಜ್ ತನ್ನ ಮೊಬೈಲ್ ಸಂಖ್ಯೆ: 8217809052 ರಿಂದ ಮೂರು ದಿನಗಳ ಮುಂಚೆ ಲಿಂಕ್ ಕಳುಹಿಸಿದ್ದು ಅದೇ ದಿನ ಫಯಾಜ್ ಮೊಬೈಲ್ ನಂಬರ್ 9743487318 ಗೆ ಪೋನ್ ಫೇ ಮುಖಾಂತರ ಹಣ ಹಾಕಿ ಕ್ರಿಕೇಟ್ ಬೆಟ್ಟಿಂಗ್ ಅನ್ನು ಆನ್ ಲೈನ್ ಮುಖಾಂತರ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ರಾತ್ರಿ 9.30 ರಿಂದ 10.10 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಆನ್ ಲೈನ್ ಮುಖಾಂತರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೇಲ್ಕಂಡ ಅಶೋಕ್.ಡಿ.ಕೆ ಬಿನ್ ಕೋದಂಡರಾಮ ಮತ್ತು ಫಯಾಜ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 78(1)(a)(vi) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.182/2021 ಕಲಂ. 302,323,504,506,34 ಐ.ಪಿ.ಸಿ:-

     ದಿನಾಂಕ 01/10/2021 ರಂದು ರಾತ್ರಿ 10.00 ಗಂಟೆಗೆ ಹೋಸಕೋಟೆ ಎಂ.ವಿ.ಜಿ ಆಸ್ಪತ್ರೆ ಬಳಿ ಪಿರ್ಯಾದಿದಾರರಾದ ಕೆ.ಆರ್ ನಿರ್ಮಲ ಕೋಂ ಕೆ.ಎನ್ ಶಂಕರಾಚಾರಿ,ಎನ್ ಆರ್ ಬಡಾವಣೆ, ಭಕ್ತ ನಗರ, ಚಿಂತಾಮಣಿ ನಗರ ರವರು ನೀಡಿದ ಲಿಖಿತ ದೂರನ್ನು ಪಡೆದು ಅಲ್ಲಿಂದ ಠಾಣೆಗೆ ರಾತ್ರಿ 11:30 ಗಂಟೆಗೆ ವಾಪಸ್ಸು ಬಂದು ಪ್ರಕರಣದ ದಾಖಲಿಸಿದ ದೂರಿನ ಸಾರಾಂಶವೆನೆಂದರೆ ತಾನು ತನ್ನ ಗಂಡ ಗಂಡ ಮಕ್ಕಳೊಂದಿಗೆ ವಾಸವಾಗಿರುತ್ತೇನೆ ಸುಮಾರು 03 ವರ್ಷಗಳ ಹಿಂದೆ ಮೈಲಾಂಡ್ಲಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರಿಗೆ ತಮ್ಮ ವಾಸದ ಮನೆಯನ್ನು 03 ಲಕ್ಷ ರೂಗಳಿಗೆ ಲೀಸ್ ಗೆ ನೀಡಿರುತ್ತೇನೆ ಈಗಿರುವಲ್ಲಿ ನಮಗೆ ಮನೆ ಅವಶ್ಯಕತೆ ಇದ್ದುದರಿಂದ ನಾರಾಯಣಸ್ವಾಮಿ ರವರಿಗೆ ಮನೆ ಖಾಲಿ ಮಾಡುವಂತೆ ತಿಳಿಸಿದ್ದು ಈ ವಿಚಾರದಲ್ಲಿ ನಮಗೂ ಹಾಗೂ ನಾರಾಯಣಸ್ವಾಮಿ ರವರಿಗೆ ಬಾಯಿ ಮಾತಿನಲ್ಲಿ ಜಗಳವಾಗಿರುತ್ತೇ ದಿನಾಂಕ: 01/10/2021 ರಂದು ಬೆಳಿಗ್ಗೆ ಸುಮಾರು 8.00 ಗಂಟೆ ಸಮಯದಲ್ಲಿ ತಾನು ತನ್ನ ಗಂಡ ಶಂಕರಾಚಾರಿಯವರು ಮನೆಯಲ್ಲಿದ್ದಾಗ ನಾರಾಯಸ್ವಾಮಿ ಆತನ ಹೆಂಡತಿ ಅರುಣ ಹಾಗೂ ಆತನ ಮಕ್ಕಳು ತಮ್ಮ ಮನೆಯ ಬಳಿ ಬಂದು ಶೆಡ್ ಬೀಗವನ್ನು ತೆಗೆಯುವಂತೆ ಕೇಳಿದ್ದು ಅದಕ್ಕೆ ತನ್ನ ಗಂಡ ಸ್ವಲ್ಪ ಸಮಯದ ನಂತರ ತೆಗೆಯುವುದಾಗಿ ಹೇಳಿದರು ಸಹ ನಾರಾಯಣಸ್ವಾಮಿ ರವರು ತಮ್ಮ ಗಂಡನ ಮೇಲೆ ಜಗಳ ತೆಗೆದು ಏ ಲೋಫರ್ ನನ್ನ ಮಗನೆ ಎಂದು ಬೈದು ಕೈಯಿಂದ ತನ್ನ ಗಂಡನ ಎಡ ಕೆನ್ನೆಗೆ ಒಡೆದಿದ್ದು, ಅರುಣ ರವರು ತನ್ನ ಗಂಡನ ಕೈಯಲ್ಲಿದ್ದ ಕಿ ಅನ್ನು ಕಿತ್ತುಕೊಳ್ಳಲು ಬಂದು ತನ್ನ ಗಂಡನನ್ನು ಕೈಗಳಿಂದ ತಳ್ಳಿದಾಗ ತನ್ನ ಗಂಡನಾದ ಶಂಕರಾಚಾರಿ ರವರ ಕೆಳಗೆ ಬಿದ್ದು ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿರುತ್ತೇ. ಆಗ ತಾನು ಹಾಗೂ ತನ್ನ ಮಕಳು ಅನುಷ ರವರು ಅಡ್ಡ ಹೋದಾಗ ನಮಗೂ ಸಹ ನಾರಾಯಣಸ್ವಾಮಿ ಹಾಗೂ ಅವರ ಮಕ್ಕಳಾದ ಸಿದ್ದು ಹಾಗೂ ಸಿರೀಶ ರವರು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ತಂಟೆಗೆ ಬಂದ್ರೆ ನಿಮ್ಮನ್ನ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ನಂತರ ಗಾಯಗೊಂಡಿದ್ದ ತನ್ನ ಗಂಡನನ್ನು ಯಾವುದೋ ವಾಹನದಲ್ಲಿ ತಾನು ಹಾಗೂ ತನ್ನ ಮಕ್ಕಳು ಮತ್ತು ಇತರೆಯವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಪ್ರಥಮ ಚಿಕಿತ್ಸೆಗೆ ಸೇರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಎಂ.ವಿ.ಜೆ ಆಸ್ಪತ್ರೆಗೆ ಹೋಗುತ್ತಿದ್ದಾಗ ತನ್ನ ಗಂಡ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ ತನ್ನ ಗಂಡನಾದ ಶಂಕರಾಚಾರಿಯವರಿಗೆ ಮನೆ ಖಾಲಿ ಮಾಡುವ ವಿಚಾರದಲ್ಲಿ ಕೊಲೆ ಮಾಡುವ ಉದ್ದೇಶದಿಂದ  ನಾರಾಯಣಸ್ವಾಮಿ, ಆತನ ಹೆಂಡತಿ ಹಾಗೂ ಮಕ್ಕಳು ಕೈಯಿಂದ ಒಡೆದು ಕೈಯಿಂದ ತಳ್ಳಿದ ಪರಿಣಾಮ ತನ್ನ ಗಂಡನ ತಲೆಗೆ ತೀರ್ವ ರಕ್ತಗಾಯವಾಗಿ ಮೃತ ಪಟ್ಟಿರುತ್ತಾರೆ ಆದ್ದರಿಂದ ತನ್ನ ಗಂಡನನ್ನು ಕೊಲೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.183/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ 02/10/2021 ರಂದು  ಪಿಸಿ 367 ರವರು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಬೆಳಿಗ್ಗೆ 10-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ:01/10/2021ರಂದು  ವೇಣು ಹೆಚ್.ಸಿ 110 ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 01/10/2021 ರಂದು ನಮ್ಮ ಠಾಣೆಯ ಪಿ.ಐ ರವರಾದ ಶ್ರೀ ರಾಜಣ್ಣ ಎನ್ ರವರು ನನಗೂ ಮತ್ತು ಮಂಜುನಾಥ್ ಸಿಹೆಚ್.ಸಿ-198 ರವರಿಗೆ  ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಣೆಗಾಗಿ ನೇಮಿಸಿದ್ದ ಅದರಂತೆ ನಾವು ಈ ದಿನ ಚಿಂತಾಮಣಿ ನಗರದ ಚೇಳೂರು ವೃತ್ತ ಅಜಾದ್ ಚೌಕ, ಗಜಾನನ ವೃತ್ತ ಕಡೆ ಗಸ್ತು ಮಾಡಿಕೊಂಡು ರಾತ್ರಿ 7:30 ಗಂಟೆಗೆ ಬೆಂಗಳೂರು ವೃತ್ತದ ಬಳಿ ಗಸ್ತಿನಲ್ಲಿದ್ದಾಗ ನಮ್ಮಗಳ ಜೊತೆ ಚಿಂತಾಮಣಿ ನಗರ ಠಾಣೆಯ ಹೆಚ್.ಸಿ-177 ರವರ ಜೊತೆ ಗೂಡಿ ಬಾತ್ಮಿದಾರರಿಂದ ಬಂದ ಮಾಹಿತಿಯೆನೆಂದರೆ ಯಾರೋ ಒಬ್ಬ ಅಸಾಮಿಯು ಬೆಂಗಳೂರು ವೃತ್ತ ಬಳಿಯ ಹಳೆ ಪೆಟ್ರೋಲ್ ಬಂಕ್ ಮುಂಭಾಗ ಅಕ್ರಮವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿ ತನ್ನ ಕೈಯಲ್ಲಿ ಮೊಬೈಲ್ ನ್ನು ಹಿಡಿದುಕೊಂಡು ನೋಡುತ್ತಿದ್ದು, ಸದರಿ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಕೇಶವ ಬಿನ್ ಜಿ.ನಾಗರಾಜ, 30 ವರ್ಷ, ವಾಲ್ಮಿಕಿ ಜನಾಂಗ, ಕಾರ್ಪೆಂಟರ್ ಕೆಲಸ, ಚಾಕುವೇಲು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಅಸಾಮಿಯನ್ನು ಪರೀಶಿಲಿಸಲಾಗಿ ರೆಡ್ ಮಿ ನೋಟ್-9 ಕಂಪನಿಯ ಸ್ಕ್ರೀನ್ ಟಚ್ ಮೊಬೈಲ್ ಇದ್ದು, Queenexch.com ನಲ್ಲಿ ಕಲ್ಕತ್ತ ನೈಟ್ ರೈಡರ್ಸ್ ಮತ್ತು ಕಿಂಗ್ ಇಲೆವೆನ್ ಪಂಜಾಬ್ ನಡುವೆ ಪಂದ್ಯಾ ನಡೆಯುತ್ತಿದ್ದು, ಸದರಿ ಆಪ್ ನಲ್ಲಿ(ಲಿಂಕ್ ನಲ್ಲಿ) 4320.92/- ರೂಗಳಿರುತ್ತೇ. ಅಸಾಮಿಯನ್ನು ಚೆಕ್ ಮಾಡಲಾಗಿ 150/- ರೂಗಳು ಹಣ ಇದ್ದು ಸದರಿ ಅಪ್ (ಲಿಂಕ್) ಅನ್ನು 7096079011 ರ ಮೊಬೈಲ್ ನಂಬರಿನ ಮೂಲಕ ನಾನು ಬೆಂಗಳೂರಿನ ರಾಜಾ ರಾಜೇಶ್ವರಿ ನಗರದಲ್ಲಿ ಬಿಲ್ಡಿಂಗ್ ಕೆಲಸ ಮಾಡುವ ಜಾಗದಲ್ಲಿ ಹಾಕಿಸಿಕೊಂಡಿದ್ದು, ಪ್ರತಿ ದಿನ ರಿಚಾರ್ಜ್ ಮಾಡಿಸುತ್ತಿದ್ದು, ಈ ದಿನ ಕಲ್ಕತ್ತ ನೈಟ್ ರೈಡರ್ಸ್ ಮತ್ತು ಕಿಂಗ್ ಇಲೆವೆನ್ ಪಂಜಾಬ್ ಪಂದ್ಯಾಗಳಿಗೆ ಆಡಲು ನನ್ನ ಮೊಬೈಲ್ ನಲ್ಲಿರುವ ಆಫ್ ಗೆ ಪಣವಾಗಿ ಆಡಲು 4320/- ರೂಗಳು ರಿಚಾರ್ಜ ಮಾಡಿಸಿಕೊಂಡಿರುತ್ತೇನೆಂದು ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಪಂಚನಾಮೆ ಮೂಲಕ ಅಮಾನತು ಪಡಿಸಿಕೊಂಡು ನಂತರ ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ Queenexch.com ನಲ್ಲಿ ಹಣವನ್ನು ಪಣವಾಗಿಟ್ಟಿರುವ ಬಗ್ಗೆ ಆಪ್ ನ ಸ್ರೀನ್ ಶಾಟ್ ಗಳು ತೆಗೆದು ಆರೋಪಿ, ಮೊಬೈಲ್ ಮತ್ತು ಅಸಲು ಪಂಚನಾಮೆಯೊಂದಿಗೆ ನೀಡುತ್ತಿದ್ದು, ಮೇಲ್ಕಂಡ ಅಸಾಮಿ ಮತ್ತು 7096079011 ರ ಸಂಖ್ಯೆಯ ಅಸಾಮಿಯ ವಿರುದ್ದ ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಇದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಠಾಣೆಯ ಎನ್.ಸಿ.ಆರ್ ಸಂಖ್ಯೆ 143/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಮೇರೆಗೆ   ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.183/2021 ಕಲಂ. 78(3) ಕೆ.ಪಿ ಆಕ್ಟ್:-

     ದಿ:29/09/2021 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಚಂದ್ರಕಲಾ ಮ.ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೆನೆಂದರೆ, ದಿ:29/09/2021 ರಂದು  ಸಂಜೆ 7-30 ಗಂಟೆಯ ಸಮಯದಲ್ಲಿ  ತಾನು ಠಾಣೆಯಲ್ಲಿದ್ದಾಗ, ಗೌರಿಬಿದನೂರು ನಗರ ಪೊಲೀಸ್ ಠಾಣಾ ಸರಹದ್ದಿನ,  ಡಿ ಪಾಳ್ಯ ಕ್ರಾಸ್ ತಿರುವಿನ ಬೈಪಾಸ್ ರಸ್ತೆಯ ಬಳಿ ಕಾನೂನು ಬಾಹಿರವಾಗಿ ಯಾರೋ ಅಸಾಮಿಗಳು ಮೋಬೈಲ್ನಲ್ಲಿ ಬರುತ್ತಿರುವ ಸ್ಕೋರ್ ನೋಡಿಕೊಂಡು ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ನ್ನು ಆಡುತ್ತಿರುವುದಾಗಿ ಮಾಹಿತಿಯು ತಿಳಿಸಿದ್ದು ಅದರಂತೆ ಠಾಣೆಯಲ್ಲಿದ್ದ ಸಿಬ್ಬಂದಿಯಾದ ಸಿ.ಹೆಚ್.ಸಿ-226 ಲಿಂಗಪ್ಪ, ಸಿ.ಹೆಚ್.ಸಿ-214 ಲೋಕೇಶ್, ಮತ್ತು ಸಿ.ಪಿ.ಸಿ- 201 ಸುರೇಶ್ ರವರನ್ನು ಕರೆದುಕೊಂಡು ಮಾಹಿತಿಯನ್ನು ತಿಳಿಸಿ ಸಂಜೆ 7-35 ಗಂಟೆ ಸಮಯದಲ್ಲಿ ಸರ್ಕಾರಿ ಜೀಪ್  ಕೆ.ಎ-40 ಜಿ.-92 ರನ್ನು ಸಿ ಹೆಚ್.ಸಿ-214 ಲೋಕೇಶ್ ರವರು ಚಾಲನೆ ಮಾಡಿಕೊಂಡು ಸಂಜೆ 7-40 ಗಂಟೆ ಸಮಯಕ್ಕೆ ಹಿರೇಬಿದನೂರು ಬೈಪಾಸ್ ರಸ್ತೆಯ ಬಳಿ ಹೋಗಿ ಅಲ್ಲಿದ್ದ ಪಂಚರನ್ನು ಬರ ಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಕಾಲದಲ್ಲಿ ಹಾಜರಿದ್ದು ತನಿಖೆಗೆ ಸಹಕರಿಸಲು ಒಪ್ಪಿಕೊಂಡಿದ್ದು, ಸದರಿಯವರನ್ನು ಸರ್ಕಾರಿ ಜೀಪ್ ನಲ್ಲಿ ಕರೆದುಕೊಂಡು ಸಂಜೆ 7-45 ಗಂಟೆಗೆ ಹೋಗಿ ಗಂಗಸಂದ್ರ ಗ್ರಾಮಕ್ಕೆ ಹೋಗುವ ರಸ್ತೆಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಪಂಚರೊಂದಿಗೆ ಸ್ವಲ್ಪ ದೂರ ಡಿ ಪಾಳ್ಯ ರಸ್ತೆಯ ಕ್ರಾಸ್ ಬಳಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲ ಅಸಾಮಿಗಳು ಮೋಬೈಲ್ ನ್ನು ನೋಡಿಕೊಳ್ಳುತ್ತಾ ರಾಯಲ್ಸ್ ಚಾಲೇಂಜರ್ಸ್ ಬೆಂಗಳೂರು (ಆರ್,ಸಿ.ಬಿ) ಗೆ 1000 ರೂಪಾಯಿಗಳು ಗೆಲ್ಲುತ್ತೇ ಎಂದು ಒಬ್ಬ ಅಸಾಮಿಯು  ರಾಜಸ್ಥಾನ್ ರಾಯಲ್ಸ್ (ಆರ್.ಆರ್) ಗೆಲ್ಲುತ್ತೆ 1000/- ರೂಪಾಯಿಗಳು ಎಂದು ಮತ್ತೊಬ್ಬ ಕೂಗುತ್ತಾ ಮೋಬೈಲ್ನಲ್ಲಿ ಸ್ಕೋರ್ ನೋಡಿಕೊಂಡು ಐ.ಪಿ.ಎಲ್ ಬೆಟ್ಟಿಂಗ್ ಆಡುತ್ತೀರುವುದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ತಾವುಗಳು ದಾಳಿ ಮಾಡಿ ಸುತ್ತುವರೆದು ಅಲ್ಲಿದ್ದ ಅಸಾಮಿಗಳನ್ನು ತಮ್ಮ ಸಿಬ್ಬಂದಿಯ ಮೂಲಕ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಅತಿಕ್ ಅಹಮದ್ ಬಿನ್ ಬಷೀರ್ ಅಹಮದ್, 29 ವರ್ಷ, ಮುಸ್ಲೀಮರು, ಮೆಕಾನಿಕ್ ಕೆಲಸ, ಉರ್ದು ಶಾಲೆ ಮುಂಬಾಗ, ನೆಹರೂಜಿ ಕಾಲೋನಿ, ಗೌರಿಬಿದನೂರು ನಗರ ಮೊ: 9148988633 2) ಮಹಮದ್ ಸಲೀಂ ಬಿನ್ ಖಾಸಿಂ, 30 ವರ್ಷ, ಮುಸ್ಲೀಮರು, ಮೆಕಾನಿಕ್ ಕೆಲಸ, ವಾಸ ಸುಮಂಗಲಿ ಬಡಾವಣೆ, ಗೌರಿಬಿದನೂರು ನಗರ, ಮೊ:9900654243  ಮತ್ತೊಬ್ಬ ಆಸಾಮಿ  3) ಕುಮಾರ್ ಬಿನ್ ಬಸವರಾಜು, 30 ವರ್ಷ, ಲಿಂಗಾಯಿತರು, ಜಿರಾಯ್ತಿ, ವಾಸ ಹುದುಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಮೊ:9164289006 ಎಂದು ತಿಳಿಸಿರುತ್ತಾರೆ. ಇವರುಗಳನ್ನು ವಿಚಾರ ಮಾಡಲಾಗಿ ತಾವು ಈ ದಿನ ನಡೆಯುತ್ತಿರುವ ಆರ್.ಸಿ.ಬಿ ವಿ/ಎಸ್ ಆರ್.ಆರ್ ಐ.ಪಿ.ಎಲ್ ಕ್ರಿಕೆಟ್ ಸಂಬಂಧ ಮೊಬೈಲ್ ನಲ್ಲಿ ಗೋಡಾ ಆಫ್ ನಲ್ಲಿ ಬರುವ ಸ್ಕೋರ್ ನೋಡಿಕೊಂಡು ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದು, ನಿಮ್ಮ ಬಳಿ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಸಿಬ್ಬಂದಿಗಳಿಂದ ಆಸಾಮಿಗಳ ಅಂಗಶೋಧನೆ ಮಾಡಿಸಲಾಗಿ ಅತಿಕ್ ಅಹಮದ್ ರವರ ಬಳಿ 2050/- ರೂ. ನಗದು ಹಣ SAMSUNG   ಕಂಪನಿಯ ಕೀ ಪ್ಯಾಡ್ ಮೊಬೈಲ್ ಇರುತ್ತೆ. ಮಹಮದ್ ಸಲೀಂ ರವರ ಅಂಗಶೋಧನೆ ಮಾಡಲಾಗಿ 1800/- ರೂ.ನಗದು ಹಣ  MI ಕಂಪನಿಯ ಸ್ಕ್ರೀನ್ ಟಚ್ ಮೊಬೈಲ್ ಇರುತ್ತೆ. ಮೂರನೇ ಆಸಾಮಿಯಾದ ಕುಮಾರ್ ಬಿನ್ ಬಸವರಾಜು ರವರ ಅಂಗಶೋಧನೆ ಮಾಡಿಸಲಾಗಿ SAMSUNG  ಕಂಪನಿಯ ಸ್ಕ್ರೀನ್ ಟಚ್ ಮೊಬೈಲ್ ಮತ್ತು 7150/- ರೂ. ನಗದು ಹಣ ಇರುತ್ತೆ. ನಗದು ಹಣದ ಬಗ್ಗೆ ಕೇಳಲಾಗಿ  ಪಂಚರ ಸಮಕ್ಷಮ ಮೂರೂ ಮೊಬೈಲ್ ಗಳನ್ನು ಹಾಗೂ ಒಟ್ಟು 11,000/- ರೂ.ಗಳನ್ನು ಸಂಜೆ 7:50 ಗಂಟೆಯಿಂದ ರಾತ್ರಿ 8:50 ಗಂಟೆಯವರೆಗೆ ಜರುಗಿಸಿದ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆಸಾಮಿಗಳನ್ನು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು ವರದಿಯನ್ನು ರಾತ್ರಿ 9-30 ಗಂಟೆಗೆ ಸಿದ್ದಪಡಿಸಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ 250/2021 ಅನ್ನು ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ದಿನಾಂಕ:01/10/2021 ರಂದು ರಾತ್ರಿ 9:00 ಗಂಟೆಗೆ ಪ್ರಕಣವನ್ನು ದಾಖಲು ಮಾಡಿರುವುದಾಗಿರುತ್ತೆ.

 

12. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:02/10/2021 ರಂದು ನ್ಯಾಯಾಲಯದ ಸಿಬ್ಬಂದಿ ಸಿಪಿಸಿ-174 ರವರು  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮದ್ಯಾಹ್ನ 12-15 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಠಾಣಾ ಮೊ ಸಂ; 103/2021 ಕಲಂ :87 ಕೆ,ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. ದಿನಾಂಕ:01-10-2021 ರಂದು ಮದ್ಯಾಹ್ನ 16-30 ಗಂಟೆಗೆ ASI(SA) ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01-10-2021 ರಂದು ಮದ್ಯಾಹ್ನ 14-00 ಗಂಟೆಯಲ್ಲಿ ತಾವು ಪಾತಪಾಳ್ಯ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಸಿ.ಪಿ.ಐ., ಚೇಳೂರು ವೃತ್ತ ರವರು ತಮಗೆ ಫೋನ್ ಮಾಡಿ ಕೊತ್ತೂರು ಗ್ರಾಮದ  ಸರ್ಕಾರಿ ಜಮೀನಿನಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ದಾಳಿ ಮಾಡಲು ಸೂಚಿಸಿದ್ದರ ಮೇರೆಗೆ ತಾವು   ಸಿಬ್ಬಂದಿಯವರಾದ ಸಿಪಿಸಿ-234 ಸುರೇಶ ಕೊಂಡಗುಳಿ, ಸಿಪಿಸಿ-324 ಮುಸ್ತಾಕ್ ಅಹಮದ್, ಸಿಪಿಸಿ-76 ಸುರೇಶ, ಸಿಪಿಸಿ-181 ಪ್ರಸಾದ,  ಸಿಪಿಸಿ-436 ನಂದೀಶ್ವರ, ಸಿಪಿಸಿ-303 ಬಸವರಾಜ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಚಾಲಕ ಸಿಪಿಸಿ-98 ಶ್ರೀನಾಥ ರವರೊಂದಿಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿದರೂ ಸಹ ಒಬ್ಬ ಆಸಾಮಿಯು ಸದರಿ ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿ 6 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1)ವೆಂಕಟರಾಮಪ್ಪ ಬಿನ್ ಮುನಿಸ್ವಾಮಿ, 32 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು 2)ನರಸಿಂಹಪ್ಪ ಬಿನ್ ಮುತ್ತಪ್ಪ, 27 ವರ್ಷ, ನಾಯಕರು, ಚಾಲಕ ಕೆಲಸ, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3)ಸಂತೋಷ ಬಿನ್ ವೆಂಕಟರಾಮಪ್ಪ, 28 ವರ್ಷ, ನಾಯಕರು, ಕೂಲಿಕೆಲಸ, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು 4)ಅನಿಲ್ ಕುಮಾರ್ ಬಿನ್ ಶ್ರೀನಿವಾಸ, 21 ವರ್ಷ, ನಾಯಕರು,  ಕೂಲಿ ಕೆಲಸ, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು. 5)ನಾಗರಾಜ ಬಿನ್ ಲೇಟ್ ನಾರಾಯಣಸ್ವಾಮಿ, 35 ವರ್ಷ, ನಾಯಕರು, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು 6)ಅನಿಲ್ ಕುಮಾರ್ ಬಿನ್ ಲೇಟ್ ಅಶ್ವತ್ಥಪ್ಪ, 25 ವರ್ಷ, ನಾಯಕರು, ಜಿರಾಯ್ತಿ, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತಲೂ ಓಡಿ ಹೋದ ಆಸಾಮಿಯ ಹೆಸರು & ವಿಳಾಸ ಕೇಳಿ ತಿಳಿಯಲಾಗಿ  7)ಬಾಬು ಬಿನ್ ರಾಮಪ್ಪ, 38 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ.   ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ ಆರು ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  930/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 15-00 ರಿಂದ 16-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

13. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.07/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:02-10-2021 ರಂದು ಬೆಳಗ್ಗೆ 9.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅನಿತ ಕೊಂ ಶ್ರೀನಿವಾಸ 38 ವರ್ಷ  ಕೊರಚರು, ಕೂಲಿ ಕೆಲಸ, ವಾಸ ತಿಪ್ಪರೆಡ್ಡಿನಾಗೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಮೊ.ನಂ-8197122635 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:01-10-2021 ರಂದು ಸಂಜೆ ಸುಮಾರು 5.20 ಗಂಟೆ ಸಮಯದಲ್ಲಿ ತಾನು ತಮ್ಮ ಮನೆ ಯ ಮುಂದೆ ಇದ್ದಾಗ ತಮ್ಮ ಮನೆಯ ಬಳಿ ಇರುವ ನೂಗಲ ಬಂಡೆಯ  ಬಳಿ ಇರುವ ಮೊರಿ ಹತ್ತಿರ ಜನರು ಗುಂಪು ಸೇರಿದ್ದನ್ನು ನೋಡಿ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಮಗ ಚಂದು ಕುಮಾರ್ ರವರಿಗೆ  ಬಲಗಾಲಿನ  ಪಾದದ ಬಳಿ ರಕ್ತ ಗಾಯವಾಗಿದ್ದು, ಮತ್ತು ಆತನ ಸ್ನೇಹಿತ  ರಾಜ್ ಕುಮಾರ್ ರವರಿಗೆ ಬಲಕಾಲಿನ ಮೂಣಕಾಲಿನ  ಕೆಳಗೆ ಗಾಯಾವಾಗಿದ್ದು, ತನ್ನ ಮಗನಿಗೆ ವಿಚಾರಿಸಲಾಗಿ ತಾನು ಮತ್ತು ತನ್ನ ಸ್ನೇಹಿತ ರಾಜ್ ಕುಮಾರ್ ರವರು ಮೊರಿಯ ಬಳಿ ರಸ್ತೆಯ ಪಕ್ಕದಲ್ಲಿ ನಿಂತುಕೊಂಡು ಮಾತನಾಡುತ್ತಿದ್ದಾಗ ಪೆರೇಸಂದ್ರ ಕಡೆಯಿಂದ ತಿಪ್ಪರೆಡ್ಡಿನಾಗೇನಹಳ್ಳಿ ಗ್ರಾಮದ ಕಡೆಗೆ ಕೆ.ಎ-03-ಎಡಿ-1308 ನೊಂದಣಿ ಸಂಖ್ಯೆಯ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ತಮಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡೆಸಿರುವುದಾಗಿ ವಿಚಾರ ತಿಳಿಯಿತು , ಕೂಡಲೇ ಗಾಯಾಳುಗಳನ್ನು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆ ಗಾಗಿ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಕೂಡಿಸಿ ಅಲ್ಲಿನ ವೈಧ್ಯರ ಸಲಹೆ ಮೇರೆಗೆ ತನ್ನ ಮಗ ಚಂದು ಕುಮಾರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತೆವೆ. ಈ ಅಪಘಾತಕ್ಕೆ ಕಾರಣ ವಾದ ಕೆ.ಎ-03-ಎಡಿ-1308 ಕಾರಿನ ಚಾಲಕನ ವಿರುದ್ದ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು. ತನ್ನ ಮಗನಿಗೆ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ  ಈ ದಿನ ತಡವಾಗಿ ಬಂದು ದೂರು ನೀಡಿರುತ್ತೆನೆ.

ಇತ್ತೀಚಿನ ನವೀಕರಣ​ : 02-10-2021 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080