ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 322/2021 ಕಲಂ. 78(1)(a)(vi) ಕೆ.ಪಿ. ಆಕ್ಟ್:-

ದಿನಾಂಕ 29/09/2021 ರಂದುರಾತ್ರಿ 21-15 ಗಂಟೆಗೆ ಪಿ ಐ ರವರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ   ದಿನಾಂಕ 29/09/2021 ರಂದು ಸಂಜೆ 7-35 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್, 19 ನೇ ವಾರ್ಡನಲ್ಲಿರುವ ಆಸೀಪ್ ಸೈಕಲ್ ಷಾಪ್ ಬಳಿ ಯಾರೋ ಆಸಾಮಿಗಳು  ಈ ದಿನ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್  ಮತ್ತು ರಾಯಲ್ಸ್ ಚಾಲೇಂಜರ್ಸ ಬೆಂಗಳೂರು ಟೀಮ್ ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಕ್ರಿಕೆಟ್  ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ-257 ನರಸಿಂಹಮೂರ್ತಿ, ಪಿಸಿ-344 ಮಹಾಂತೇಶ್ , ಪಿಸಿ-280 ಮುರಳಿ ರವರು ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೆಪಲ್ಲಿ ತಾಲ್ಲೂಕು ಕಛೇರಿಯ  ಬಳಿ ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತದೆ ಎಂದು  ಮತ್ತು ರಾಯಲ್ಸ್ ಚಾಲೇಂಜರ್ಸ ಬೆಂಗಳೂರು ಟೀಮ್  ಗೆಲ್ಲುತ್ತದೆ ಎಂದು ಹಣವನ್ನು ಪಣವಾಗಿಟ್ಟು ಹಾಗೂ  ಮೊಬೈಲ್ ಮುಖಾಂತರ ಹಣವನ್ನು ಪಣಕ್ಕೆ ಹಾಕಿ  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟವಾಡುತ್ತಿದ್ದು. ಆಸಾಮಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಆಸೀಪ್ ಬಿನ್ ಲೇಟ್ ಬಾಬಾಜಾನ್, 24 ವರ್ಷ, ಮುಸ್ಲಿಂ ಜನಾಂಗ, ಸೈಕಲ್ ಷಾಪ್ ಮೆಕ್ಯಾನಿಕ್ ಕೆಲಸ, ಗೀತಾಮಂದಿರದ ಬಳಿ, 19 ನೇ ವಾರ್ಡ, ವಾಸ ಕೊಡಿಕೊಂಡ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು 2] ವೆಂಕಟೇಶ್ ಬಿನ್ ನಾರಾಯಣಸ್ವಾಮಿ, 25 ವರ್ಷ, ಬಲಜಗ ಜನಾಂಗ, ಗಾರೆಕೆಲಸ, ವಾಸ  8ನೇ ವಾರ್ಡ, ಬಾಗೇಪಲ್ಲಿ ಟೌನ್  ಎಂದು ತಿಳಿಸಿರುತ್ತಾರೆ.  ನಂತರ ಆಸಾಮಿಗಳ ಬಳಿ ಇದ್ದ  ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ  ಪೋನ್ ಪೇ  ಮೂಲಕ   ಹಣವನ್ನು ಬೆಟ್ಟಿಂಗ್ ಕಟ್ಟಿರುತ್ತಾರೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಪಣವಾಗಿ ಕಟ್ಟಿದ್ದ 2,000/- ರೂ ನಗದು ಹಾಗೂ  ಕ್ರಿಕೆಟ್ ಬೆಟ್ಟಿಂಗ್ ಉಪಯೋಗಿಸಿದ್ದ 1) ವಿವೋ ಕಂಪೆನಿಯ ಟಚ್  ಸ್ಕ್ರೀನ್ ಮೊಬೈಲ್, 2] ರೆಡ್ ಮೀ ಟಚ್  ಸ್ಕ್ರೀನ್ ಮೊಬೈಲ್ ಪೋನ್ , ಅನ್ನು ಪ್ಲೈಟ್ ಮೂಡ್ ಗೆ ಹಾಕಿ  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-15 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲುನ್ನು  ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-285/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.   ದಿ:30-09-2021 ರಂದು ಘನ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 323/2021 ಕಲಂ. 78(1)(a)(vi) ಕೆ.ಪಿ. ಆಕ್ಟ್:-

          ದಿನಾಂಕ29/09/2021 ರಂದುರಾತ್ರಿ 21-30 ಗಂಟೆಗೆ ಪಿ ಎಸ್ ಐ ರವರು ಅಸಲು ಮತ್ತು ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ದಿನಾಂಕ 29/09/2021 ರಂದು ಸಂಜೆ 7-45 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್, ಟಿ.ಬಿ. ಕ್ರಾಸ್ ಜನಾರ್ಧನ್ ಬೇಕರಿ  ಬಳಿ ಯಾರೋ ಆಸಾಮಿಗಳು  ಈ ದಿನ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್  ಮತ್ತು ರಾಯಲ್ಸ್ ಚಾಲೇಂಜರ್ಸ ಬೆಂಗಳೂರು ಟೀಮ್ ನಡುವೆ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದು, ಕ್ರಿಕೆಟ್  ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-158 ಖಲಂದರ್ ಷರೀಪ್,  ಪಿಸಿ-237 ವಿನಯ್ ಕುಮಾರ ರವರು ಜೀಪ್ ಚಾಲಕ ಎ.ಹೆಚ್.ಸಿ- ವೆಂಕಟೇಶ್ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-537 ರಲ್ಲಿ ಹೊರಟು ಬಾಗೆಪಲ್ಲಿ ತಾಲ್ಲೂಕು ಕಛೇರಿಯ  ಬಳಿ ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತದೆ ಎಂದು  ಮತ್ತು ರಾಯಲ್ಸ್ ಚಾಲೇಂಜರ್ಸ ಬೆಂಗಳೂರು ಟೀಮ್  ಗೆಲ್ಲುತ್ತದೆ ಎಂದು ಹಣವನ್ನು ಪಣವಾಗಿಟ್ಟು ಹಾಗೂ  ಮೊಬೈಲ್ ಮುಖಾಂತರ ಹಣವನ್ನು ಪಣಕ್ಕೆ ಹಾಕಿ  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟವಾಡುತ್ತಿದ್ದು. ಆಸಾಮಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1] ಯಾರಬ್ ಬಿನ್ ಫಿದಾವುಲ್ಲಾ, 21 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ವಾಸ 10 ನೇ ವಾರ್ಡ, ಬಾಗೇಪಲ್ಲಿ ಟೌನ್, 2] ದುಜಾನ್ ಬೇಗ್ ಬಿನ್ ಮಹಬೂಬ್ ಬೇಗ್, 22 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, 10 ನೇ ವಾರ್ಡ, ಬಾಗೇಪಲ್ಲಿ ಟೌನ್   ಎಂದು ತಿಳಿಸಿರುತ್ತಾರೆ.  ನಂತರ ಆಸಾಮಿಗಳ ಬಳಿ ಇದ್ದ  ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ  ಪೋನ್ ಪೇ,  ಗೂಗಲ್ ಪೇ ಮೂಲಕ   ಹಣವನ್ನು ಬೆಟ್ಟಿಂಗ್ ಕಟ್ಟಿರುತ್ತಾರೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಪಣವಾಗಿ ಕಟ್ಟಿದ್ದ 2,600/- ರೂ ನಗದು ಹಾಗೂ ಕ್ರಿಕೆಟ್ ಬೆಟ್ಟಿಂಗ್ ಉಪಯೋಗಿಸಿದ್ದ 1]  ರೆಡ್ ಮೀ ಮೊಬೈಲ್ ಟಚ್  ಸ್ಕ್ರೀನ್, 2] ಕಾರ್ಬನ್ ಕೀ ಪ್ಯಾಡ್ ಮೊಬೈಲ್ ಅನ್ನು ಪ್ಲೈಟ್ ಮೂಡ್ ಗೆ ಹಾಕಿ  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 9-30 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲುನ್ನು  ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-286/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:30-09-2021 ರಂದು ಘನ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 324/2021 ಕಲಂ. 78(1)(a)(vi) ಕೆ.ಪಿ. ಆಕ್ಟ್:-

ದಿನಾಂಕ 29/09/2021 ರಂದು ರಾತ್ರಿ 10.00 ಗಂಟೆಗೆ ಸಿ ಹೆಚ್ ಸಿ-80 ಕೃಷ್ಣಪ್ಪ  ರವರು¸ ಅಸಲು ಪಂಚನಾಮೆ,ಮಾಲು ಮತ್ತು ಆರೋಪಿಗಳೊಂದಿಗೆಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ  ಆದ ನಾನು ಸಿಹೆಚ್.ಸಿ-80, ಕೃಷ್ಣಪ್ಪಮತ್ತು ಮಂಜುನಾಥ ಸಿಪಿಸಿ-531, ಜಯಣ್ಣ ಸಿಪಿಸಿ-152ರವರು ಈ ದಿನ ದಿನಾಂಕ:29.09.2021 ರಂದು ನಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಜಣ್ಣರವರ ಆದೇಶದಂತೆ  ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ತಾಲ್ಲೂಕಿನ ಬಾಗೇಪಲ್ಲಿ ಪುರದ ಬಸ್ ನಿಲ್ದಾಣ, ಟಿ.ಬಿ ಕ್ರಾಸ್ ಕಡೆ ಗಸ್ತುಮಾಡಿಕೊಂಡು ರಾತ್ರಿ 7.45 ಗಂಟೆಗೆ ಗೂಳೂರು ಸರ್ಕಲ್ ಬಳಿ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿಯೇನೆಂದರೆ, ಯಾರೋ ಒಬ್ಬ ಆಸಾಮಿಯು ಗೂಳೂರು ಸರ್ಕಲ್ ಕಡೆಗೆ ಹೋಗುವ ರಸ್ತೆಯ ಶ್ರೀನಿವಾಸರವರ ತರಕಾರಿ ಅಂಗಡಿಯ ಮುಂಭಾಗ ಅಕ್ರಮವಾಗಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ತನ್ನ ಕೈಯಲ್ಲಿ ಮೊಬೈಲ್ ಅನ್ನು ಹಿಡಿದುಕೊಂಡು ನೋಡುತ್ತಿದ್ದು,  ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಪಿ. ವೀರೇಂದ್ರ ಕುಮಾರ್ @ ವೀರಾ ಬಿನ್ ಲೇಟ್ ಪೆದ್ದ ಈರಪ್ಪ, 29ವರ್ಷ, ಬಲಜಿಗ, ಸೆಂಟ್ರಿಂಗ್ ಕೆಲಸ, ವಾಸ:-3ನೇ ವಾರ್ಡ್, ಬಿ.ಸಿ.ಎಂ ಹಾಸ್ಟೆಲ್ ಹಿಂಭಾಗ ಬಾಗೇಪಲ್ಲಿ ನಗರ ಎಂತ ತಿಳಿಸಿರುತ್ತಾನೆ. ಆಸಾಮಿಯನ್ನು ಪರಿಶೀಲನೆಮಾಡಲಾಗಿ 1+ ಕಂಪನಿಯ ಸ್ಕ್ರೀನ್ ಟೆಚ್ ಮೊಬೈಲ್ ಇದ್ದು, parkerexch.officebook99.com  ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್್ ಚಾಲೆಂಜರ್ಸ್ ಬೆಂಗಳೂರು ಮದ್ಯದ ಪಂದ್ಯದಲ್ಲಿ ರಾಜಸ್ಥಾನ್ ಕಡೆ 16,750/-ರೂ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಕಡೆ 25,000/-ರೂ ಎಂದು ತೋರಿಸುತ್ತಿದ್ದು, ಸದರಿ ಆಪ್ ನಲ್ಲಿ 20,050/-ರೂಗಳಿದ್ದು, exp balance 16,750/-  ರೂಗಳಾಗಿರುತ್ತೆಂತ ಇರುತ್ತೆ. ಆಸಾಮಿಯನ್ನು ಚೆಕ್ ಮಾಡಲಾಗಿ 500/-ರೂಗಳು ಹಣ ಇದ್ದು, ಸದರಿ ಆಪ್ ಅನ್ನು ರಘು, ಪಾತಬಾಗೇಪಲ್ಲಿ, ಕನ್ನಿಕಪರಮೇಶ್ವರಿ ದೇವಾಲಯದ ಹತ್ತಿರ ಮೊಬೈಲ್ ಅಂಗಡಿರವರ ಹತ್ತಿರ ಹಾಕಿಸುತ್ತಿದ್ದು, ಪ್ರತಿದಿನ ಈ ಆಫ್ ಗೆ ಹಣವನ್ನು ರಿಚಾರ್ಜ್ ಮಾಡಿಸುತ್ತಿದ್ದು, ಈ ದಿನ ಬೆಂಗಳೂರು ಹಾಗೂ ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಆಪ್ ಮೂಲಕ ರಾಜಸ್ಥಾನ್ ಕಡೆ 16,750/-ರೂ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಕಡೆ 25,000/-ರೂಗಳನ್ನು ಪಣವಾಗಿ ಕಟ್ಟಿರುತ್ತೇನೆಂತ ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಪಂಚನಾಮೆಯ ಮೂಲಕ ಮೊಬೈಲ್ಅನ್ನು ಅಮಾನತ್ತುಪಡಿಸಿಕೊಂಡು. ನಂತರ ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ, parkerexch.officebook99.com  ನಲ್ಲಿ ಹಣವನ್ನು ಪಣವಾಗಿಟ್ಟಿರುವ ಬಗ್ಗೆ ಆಪ್ ನ ಸ್ಕ್ರೀನ್ ಶಾಟ್ ಗಳನ್ನು ತೆಗೆದು ಆರೋಪಿ, ಮೊಬೈಲ್ ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಮೇಲ್ಕಂಡ ಆಸಾಮಿ ಮತ್ತು ರಘು, ಪಾತಬಾಗೇಪಲ್ಲಿ, ಕನ್ನಿಕಪರಮೇಶ್ವರಿ ದೇವಾಲಯದ ಹತ್ತಿರ ಮೊಬೈಲ್ ಅಂಗಡಿ ರವರ ವಿರುದ್ದ ಮುಂದಿನ ಕಾನೂನುರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್ ಸಿ ಆರ್ ನಂ 287/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:30-09-2021 ರಂದು ಘನ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 169/2021 ಕಲಂ. 279, 337 ಐಪಿಸಿ:-

          ದಿನಾಂಕ: 30/09/2021 ರಂದು ಸಂಜೆ 5-00 ಗಂಟೆಯ  ಸಮಯಕ್ಕೆ  ಪಿರ್ಯಾದಿ  ಎಸ್.ವಿ. ಅನಿಲ್ ಕುಮಾರ್  ಬಿನ್ ವೆಂಕಟರವಣಪ್ಪ 26ವರ್ಷ ಬೋವಿ ಜನಾಂಗ ಜಿರಾಯ್ತಿ ವೃತ್ತಿ. ವಾಸ:ಶೆಟ್ಟಿವಾರಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. ತನ್ನ ದೊಡ್ಡಪ್ಪ ಮುನಿಶ್ಯಾಮಪ್ಪ ನಿಗೆ  03 ಹೆಣ್ಣು 01 ಗಂಡು ಮಗನಿದ್ದು  ಗಂಡು ಮಗನಾದ ಎಸ್.ಎಂ.ಪವನ್ ಕುಮಾರ್ 24ವರ್ಷ ರವರು ಚಿಕ್ಕಬಳ್ಳಾಪುರ ಟೌನ್ ನಲ್ಲಿರುವ ಜಚನಿ ಕಾಲೇಜಿನಲ್ಲಿ 02ನೇ ವರ್ಷದ ಎಲ್.ಎಲ್.ಬಿ. ವ್ಯಾಸಂಗ ಮಾಡುತ್ತಿರುತ್ತಾನೆ. ಪ್ರತಿ ದಿನ ನಮ್ಮ ಊರಿನಿಂದ ಚಿಕ್ಕಬಳ್ಳಾಪುರ ಕಾಲೇಜಿಗೆ ಬಂದು ಹೋಗುತ್ತಿರುತ್ತಾನೆ. ದಿನಾಂಕ: 28-09-2021 ರಂದು ಬೆಳಗ್ಗೆ 08-00 ಗಂಟೆಯಲ್ಲಿ ಎಸ್.ಎಂ.ಪವನ್ ಕುಮಾರ್ ರವರು ನಮ್ಮ ಗ್ರಾಮದಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಚಿಕ್ಕಬಳ್ಳಾಪುರ ಕಾಲೇಜಿಗೆ ಹೋಗಿದ್ದನು. ಅ ದಿನ ಬೆಳಗ್ಗೆ 11-00 ಗಂಟೆಗೆ ಕಾಲೇಜು ಇದ್ದುದರಿಂದ ಮತ್ತು ಬೇರೆ ನೋಟ್ ಬುಕ್ ಗಳನ್ನು ತೆಗೆದುಕೊಂಡು ಬರಲು ಆತನ ಸ್ನೇಹಿತನಾದ ಚಂದ್ರಶೇಖರ್. ಸಿ.ಎಲ್. ಬಿನ್ ಲಕ್ಷ್ಮೀನಾರಾಯಣ ಚಿನ್ನೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರೊಂದಿಗೆ ಕೆ.ಎ.40.ಇಸಿ.2682 ನಂಬರಿನ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಬೆಳಗ್ಗೆ 10.45 ಗಂಟೆಯಲ್ಲಿ ಗೊಳ್ಳುಚಿನ್ನಪ್ಪನಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದಾಗ ಗೊಳ್ಳುಚಿನ್ನಪ್ಪನ ಹಳ್ಳಿ ಗ್ರಾಮದೊಳಗಿನಿಂದ ರಸ್ತೆಗೆ ಕೆ.ಎ.43.ಎಸ್.3523 ನಂಬರಿನ ದ್ವಿಚಕ್ರ ವಾಹನದ ಸವಾರನು ಚಾಲನೆ ಮಾಡಿಕೊಂಡು ಬಂದಾಗ ಕೆ.ಎ.40.ಇಸಿ.2682 ನಂಬರಿನ  ಪಲ್ಸರ್ ದ್ವಿಚಕ್ರ ವಾಹನದ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆ.ಎ.43.ಎಸ್.3523 ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದು ಅದರ ಪರಿಣಾಮ ಎರಡು ದ್ವಿ ಚಕ್ರ ವಾಹನಗಳು  ಜಖಂಗೊಂಡಿದ್ದು ನನ್ನ ದೊಡ್ಡಪ್ಪನ ಮಗ ಎಸ್.ಎಂ.ಪವನ್ ಕುಮಾರ್ ರವರು ಕೆಳಕ್ಕೆ ಬಿದ್ದು ಹೋಗಿ  ತಲೆಯ ಹಿಂಭಾಗದಲ್ಲಿ ಎರಡು ಮೊಣ ಕಾಲುಗಳಿಗೆ, ಎಡ ಭುಜಕ್ಕೆ ರಕ್ತಗಾಯಗಳಾಗಿರುತ್ತೆಂತ ಯಾರೋ ಸಾರ್ವಜನಿಕರು ನಮ್ಮ ದೊಡ್ಡಪ್ಪನಿಗೆ ಕರೆ ಮಾಡಿ ವಿಚಾರ  ತಿಳಿಸಿರುತ್ತಾರೆ.   ತಕ್ಷಣ ತನ್ನ ದೊಡ್ಡಪ್ಪ  ಯಾವುದೋ  ಆಟೋದಲ್ಲಿ ದಿಬ್ಬೂರು ಗ್ರಾಮಕ್ಕೆ  ಕರೆದುಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡಿಸಿಕೊಂಡು  ವೈದ್ಯರ ಸಲಹೆಯಂತೆ  ಚಿಕ್ಕಬಳ್ಳಾಪುರ  ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಅಲ್ಲಿಯ  ವೈದ್ಯಾಧೀಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಂಗಳೂರಿಗೆ  ಕಳುಹಿಸಿದ್ದು, ಅದರಂತೆ ಎಸ್.ಎಂ.ಪವನ್ ಕುಮಾರ್ ನನ್ನು ಆಂಬುಲೆನ್ಸ್ ವಾಹನದಲ್ಲಿ ಬೆಂಗಳೂರಿಗೆ ಕರೆದುಕೊಂಡು  ಯಲಹಂಕದಲ್ಲಿರುವ ಅಪೂರ್ವ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವ  ವಿಚಾರ ತಿಳಿದು  ನಾನು ಅಪೂರ್ವ ಅಸ್ಪತ್ರೆಗೆ ಬಂದು ನೋಡಿದ್ದು ಎಸ್.ಎಂ.ಪವನ್ ಕುಮಾರ್  ಅಪಘಾತವಾಗಿ ಗಾಯಗಳಾಗಿರುವುದು ನಿಜವಾಗಿರುತ್ತದೆ. ಈ ಅಪಘಾತಕ್ಕೆ ಕೆ.ಎ.40.ಇಸಿ.2682 ನಂಬರಿನ  ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಸವಾರನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ನಾವುಗಳು ಎಸ್.ಎಂ.ಪವನ್ ಕುಮಾರ್ ನಿಗೆ  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಪೊಲೀಸ್ ಠಾಣೆಗ ಬಂದು ದೂರು ನೀಡಿರುತ್ತೇನೆ. ಈ ಅಪಘಾತಕ್ಕೆ  ಕಾರಣವಾದ  ಕೆ.ಎ.40.ಇಸಿ.2682 ನಂಬರಿನ  ಪಲ್ಸರ್ ದ್ವಿ ಚಕ್ರ ವಾಹನದ  ಸವಾರನ ವಿರುದ್ದ ಸೂಕ್ತ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ  ನೀಡಿದ ದೂರಿನ ಮೇರೆಗೆ  ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ. 51/2021 ಕಲಂ. 279, 337 ಐಪಿಸಿ ಮತ್ತು 187 ಐ.ಎಂ.ವಿ. ಆಕ್ಟ್:-

ದಿನಾಂಕ;- 30-09-2021 ರಂದು ಬೆಳಗ್ಗೆ 11-30 ಗಂಟೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಿಂದ ಹೆಚ್.ಸಿ 206 ಮಂಜುನಾಥ ರವರು ಗಾಯಾಳು ಹೇಳಿಕೆಯನ್ನು ಪಡೆದು ಠಾಣೆಯಲ್ಲಿ ಹಾಜರ್ಪಡಿ ಸಿದ್ದನ್ನು ಪಡೆದು ಪರಿಶೀಲಿಸಲಾಗಿ ಪಿರ್ಯಾದುದಾರರು ಕೂಲಿಯಿಂದ ಜೀವನ ವನ್ನು ನಡೆಸುತ್ತಿದ್ದು ಪಿರ್ಯಾದಿ ಯ ಗ್ರಾಮದ ಬಳಿ  ಸೀತಾಪಲ ಗಿಡಗಳು ಹೇರಳಲಾಗಿ ಇದ್ದು ಅವುಗಳ ಲ್ಲಿ ಬಿಟ್ಟಿರುವ ಕಾಯಿಗಳನ್ನು ಕಿತ್ತುಕೊಂಡು ಬೆಂಗಳೂರಿಗೆ ಹಾಕಲು ಅದೇ ಗ್ರಾಮದ  ಶ್ರೀನಿವಾಸ ಮತ್ತು ವೇಣುಗೋಪಾಲ  ಹಾಗೂ  ಪಕ್ಕದ ಗ್ರಾಮವಾದ ಊಟಗೊಂದಿ  ತಾಂಡಾದ  ಚಕ್ರೇನಾ ಯ್ಕ  ರವರುಗಳೊಂದಿಗೆ   ಸೀತಾಪಲ ಹಣ್ಣುಗಳನ್ನು  ಜಲಗೋರ್ಲಪಲ್ಲಿ ಗ್ರಾಮದ ಮಂಜುನಾಥ ರವರ ಬಾಬತ್ತು ಹೊಸ ಬೊಲೋ ರೋ ವಾಹನದಲ್ಲಿ ತುಂಬಿಕೊಂಡು ಬೆಂಗಳೂರಿಗೆ ಹೋಗಲು  ಪಿರ್ಯಾದಿಯ ಮಗನಾದ   ಕದಿರೀಪತಿ   ಚಾಲಕನೊಂದಿಗೆ  ಮುಂದೆ  ಪಿರ್ಯಾದಿ  ಹಾಗೂ ಚಕ್ರೇ ನಾಯ್ಕ  ರವರಿದ್ದು  ಬೊಲೊರೋ ವಾಹನದ ಹಿಂಬದಿಯಲ್ಲಿ  ಶ್ರೀನಿವಾಸ  ಮತ್ತು  ವೇಣು ಗೋಪಾಲ ರವರು ಕುಳಿತುಕೊಂಡು ಇದೇ ದಿನ ಬೆಳಗ್ಗೆ 3-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾ ಪುರ ಸಮೀಪದ  ಎನ್ಎಚ್-7 ರಸ್ತೆಯಲ್ಲಿನ ಅಗಲಗುರ್ಕಿ ಬ್ರಿಡ್ಜ್  ಸಮೀಪ ರಸ್ತೆಯ  ಬಲಬದಿ ಯಲ್ಲಿ  ಬೊಲೋರೋ ವಾಹನದಲ್ಲಿ ಹೋಗುತ್ತಿದ್ದಾಗ  ನಮ್ಮ ಮುಂದೆ ಎಡಬದಿ ಯಲ್ಲಿ  ಲಾರಿ ಯೊಂದು ಹೋಗುತ್ತಿದ್ದು  ಲಾರಿಯ ಚಾಲಕ ಯಾವುದೇ ಸೂಚನೆಯನ್ನು ಕೊಡದೆ ಸಡನ್ನಾಗಿ ಎಡಬದಿಯಿಂದ ಬಲಬದಿಗೆ ಬಂದ ಕಾರಣ  ಚಾಲನೆಯಲ್ಲಿದ್ದ  ನಮ್ಮ ವಾಹನ  ಲಾರಿಯ ಹಿಂಬಾಗಕ್ಕೆ ತಗುಲಿ ಬೊಲೊರೋ ವಾಹನದ ಮುಂಬಾಗ ಜಖಂಗೊಂಡು ಮುಂದೆ ಇದ್ದ ಪಿರ್ಯಾದಿಯ ತಲೆಯ ಬಾಗಕ್ಕೆ, ಬಲಗಾಲಿನ ಹಿಮ್ಮಡಿಗೆ  ಗಾಯವಾಗಿದ್ದು  ಮತ್ತೊಬ್ಬ ಚಕ್ರೇ ನಾಯ್ಕ ರವರಿಗೆ   ಹಣೆಗೆ, ಬಾಯಿಯ ಬಳಿ, ಬಲಗಾಲಿನ ಮೊಣಕಾಲಿನ ಕೆಳಗೆ ಊತಗಾಯ. ಎಡಗಾಲಿನ ಮೊಣಕಾಲಿಗೆ  ಹಾಗೂ ಕಾಲಿನ ಕೆಳಗೆ ಗಾಯ ವಾಗಿದ್ದು  ಹಿಂಬದಿಯಲ್ಲಿದ್ದ ಶ್ರೀನಿ ವಾಸ ಮತ್ತು ವೇಣುಗೋಪಾಲ ರವರಿಗೆ ಯಾವುದೇ ಗಾಯಗಳು ಆಗದೇ ಇದ್ದು  ಅಪಘಾತಕ್ಕೆ ಕಾರಣನಾದ ಲಾರಿಯ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರು ತ್ತಾನೆ,  ಜೊತೆಯಲ್ಲಿ ದ್ದವರು ನಮ್ಮನ್ನು ಉಪಚರಿಸಿ  ಸ್ಥಳಕ್ಕೆ ಬಂದ 108 ಆಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾ ಪುರಕ್ಕೆ ಚಿಕಿತ್ಸೆಗಾಗಿ ದಾಖಲಿಸದರು, ಅಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತೇವೆ,  ಅಪಘಾತ ಕ್ಕೆ ಕಾರಣನಾದ  ಲಾರಿಯನ್ನು ಮತ್ತು ಅದರ ಚಾಲಕ ನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ  ಹೇಳಿಕೆಯ ಮೇರೆಗೆ ಈ ಪ್ರವವರದಿ,

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 141/2021 ಕಲಂ. 279, 337 ಐಪಿಸಿ:-

          ದಿನಾಂಕ:30/09/2021 ರಂದು ಸಂಜೆ 4-30 ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 159 ಮೊಹಮ್ಮದ್ ಸೈಯಾದ್  ರವರು ಚಿಕ್ಕಬಳ್ಳಾಪುರ ಸರ್ಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು  ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, 70 ವರ್ಷ, ಬೋವಿ ಜನಾಂಗ, ಜಿರಾಯ್ತಿ,ವಾಸ: ಬಚ್ಚಗಾನಹಳ್ಳಿ ಗ್ರಾಮ,ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ  ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ದಿನಾಂಕ:29-09-2021 ರಂದು  ಮಧ್ಯಾಹ್ನ 2-30 ರಿಂದ 3-00 ಗಂಟೆಯ ಸಮಯದಲ್ಲಿ  ನನ್ನ ಗ್ರಾಮದಿಂದ  ಸುಮಾರು 2 ಕಿ.ಮೀ ದೂರದಲ್ಲಿ ನನ್ನ ಹೊಲದಿಂದ  ನನ್ನ ಗ್ರಾಮಕ್ಕೆ  ಟಿ. ವೆಂಕಟಾಪುರ  ರಸ್ತೆಯಲ್ಲಿ ದೊಡ್ಡ ಕಾಲುವೆಯಿಂದ ಸ್ವಲ್ಪ ಮುಂದಕ್ಕೆ ಬಂದರೆ ಅಲ್ಲಿ  ಕೆರೆಗೆ  ನೀರು ಹೋಗಲು ಇರುವ  ಕಾಲುವೆ ಬಳಿ ಹುಲ್ಲನ್ನು ಹೊತ್ತುಕೊಂಡು ರಸ್ತೆಯ ಎಡಭಾಗದಲ್ಲಿ ಟಾರ್ ರಸ್ತೆಯನ್ನು  ಬಿಟ್ಟು ಪಕ್ಕದಲ್ಲಿ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ನಮ್ಮ ಗ್ರಾಮದ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ  ಯಾವುದೋ ವಾಹನ ನನಗೆ ಜೋರಾಗಿ ಗುದ್ದಿತು ನಾನು ತಕ್ಷಣ  ಕೆಳಕ್ಕೆ ಬಿದ್ದು ಬಿಟ್ಟೆನು ನಂತರ ನೋಡಲಾಗಿ ಅದು ಟ್ರಾಕ್ಟರ್ ಆಗಿದ್ದು ಸದರಿ ಟ್ರಾಕ್ಟರ್ ನ  ಚಾಲಕ ಜೋರಾಗಿ ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಗುದ್ದಿದನು ಆತನು ಗುದ್ದಿದ  ರಭಸಕ್ಕೆ  ನಾನು ಕೆಳಕ್ಕೆ  ಬಿದ್ದು ಬಿಟ್ಟಿದ್ದು ಅಲ್ಲೇ ನಮ್ಮ ಗ್ರಾಮದ ಭಾಗ್ಯಮ್ಮ ಕೋಂ ನಾರಾಯಣಸ್ವಾಮಿ ರವರು ಕುರಿಗಳನ್ನು ಮೇಯಿಸುತ್ತಿದ್ದು ನಾನು ಕೆಳಕ್ಕೆ  ಬಿದ್ದು ಬಿಟ್ಟಿರುವುದ್ದನ್ನು  ನೋಡಿ ಓಡಿ ಬಂದು ನನ್ನನ್ನು  ಉಪಚರಿಸಿ ಯಾರದೊ  ಮೊಬೈಲ್  ಪೋನ್  ಮುಂಖಾತರ  ನನ್ನ ಸೊಸೆಯಾದ ಅಂಜಿನಮ್ಮ ಹಾಗೂ ಕೋನಪ್ಪ ರವರು  ಸ್ಥಳಕ್ಕೆ  ಬಂದು  ನನ್ನನ್ನು ಉಪಚರಿಸಿತ್ತಿದ್ದರು ಆ ವೇಳೆಯಲ್ಲಿ ಟ್ರಾಕ್ಟರ್ ನ ಚಾಲಕ ಟ್ರಾಕ್ಟ್ರರ್ ನ್ನು  ಸ್ಥಳದಲ್ಲಿ  ಬಿಟ್ಟು ಓಡಿ ಹೋಗಿರುತ್ತಾನೆ. ಟ್ರಾಕ್ಟ್ ರ್  ಸಂಖ್ಯೆ ನೋಡಲಾಗಿ AP-03-BW-9627  ಆಗಿರುತ್ತೆ.  ನಂತರ ನನ್ನನ್ನು  ನನ್ನ ಮನೆಯವರು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ  ಕರೆದುಕೊಂಡು  ಬಂದು ದಾಖಲು ಮಾಡಿರುತ್ತಾರೆ.  ನನಗೆ  ಟ್ರಾಕ್ಟರ್ ಚಾಲಕನಿಂದ  ಗುದ್ದಿದ ಪರಿಣಾಮ ನನ್ನ ಎಡಕಾಲಿನ ಮೊಣಕಾಲು ಮತ್ತು ಮೊಣಕಾಲಿನ ಕೆಳಭಾಗದ ಮೂಳೆ ಬಳಿ ರಕ್ತಗಾಯವಾಗಿದ್ದು ಮೊಣಕಾಲಿನನಿಂದ ಕೆಳಗೆ ಬೆರಳುಗಳ ವರೆಗೂ ಕಾಲು ಊತ ಬಂದಿರುತ್ತೆ. ಹಾಗೂ ತೊಡೆ ಬಳಿ ರಕ್ತಗಾಯವಾಗಿರುತ್ತೆ. ಮತ್ತು ಮೊಣ ಕೈಗಳ ಬಳಿ ತರಚಿದ ಗಾಯಗಳಾಗಿರುತ್ತೆ.  ನನ್ನ  ಸ್ಥಿತಿಗೆ ಕಾರಣನಾದ  ಟ್ರಾಕ್ಟರ್ ನ ಚಾಲಕ ಮತ್ತು ಟ್ರಾಕ್ಟರ್ ನ ಮೇಲೆ  ಕಾನೂನು  ಕ್ರಮ ಕೈಗೊಳ್ಳ ಬೇಕೆಂದು  ಕೋರಿ ನೀಡಿದ  ಹೇಳಿಕೆಯ ಮೇರೆಗೆ  ಠಾಣಾ ಮೊ.ಸಂಖ್ಯೆ:141/2021 ಕಲಂ:279,337 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 269/2021 ಕಲಂ. 304(ಎ) ಐಪಿಸಿ:-

          ದಿನಾಂಕ:30/09/2021 ರಂದು ಸಂಜೆ 19-15 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ ಲಕ್ಷ್ಮೀನರಸಮ್ಮ ಕೋಂ ಚಿಕ್ಕಪ್ಪಯ್ಯ, 32 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ವಾಸ ಮುದುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ನನ್ನ ಗಂಡ ಚಿಕ್ಕಪ್ಪಯ್ಯ, ಹಾಗೂ ಮಕ್ಕಳಾದ ಅಖಿಲ, ಮತ್ತು ನಿತಿನ್ ರವರು ಮುದುಗೆರೆ ಗ್ರಾಮದಲ್ಲಿ ವಾಸವಾಗಿರುತ್ತೇವೆ. ನನ್ನ  ಗಂಡ ಕೂಲಿ ಕೆಲಸಕ್ಕೆ ಹೋಗುತ್ತಿದ್ದ, ನನ್ನ ಗಂಡನಿಗೆ ಕುಡಿಯುವ ಅಭ್ಯಾಸವಿದ್ದು ಆಗಾಗ್ಗೆ ಮದ್ಯಸೇವನೆ ಮಾಡುತ್ತಿದ್ದ, ದಿನಾಂಕ:29/09/2021 ರಂದು ನಮ್ಮ ಗ್ರಾಮದ ನಮ್ಮ ಜನಾಂಗದ ನಮ್ಮ ಪಕ್ಕದ ಮನೆಯ ವಾಸಿ ದೇವರಾಜು ಬಿನ್ ಲೇಟ್ ವೆಂಕಟರವಣಪ್ಪ, ರವರು ನನ್ನ ಗಂಡನಿಗೆ ಅವರ ಮನೆಯ ಬಳಿ ಇರುವ ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿಗಳನ್ನು ಕೀಳಲು ಹೇಳಿದರು, ನನ್ನ ಗಂಡ ಮದ್ಯಸೇವನೆ ಮಾಡಿದ್ದರಿಂದ ತೆಂಗಿನ ಮರವನ್ನು ಹತ್ತುವುದು ಬೇಡವೆಂದು ನಾನು ನಿನ್ನೆಯ ದಿನ  ತಡೆದಿದ್ದೆ, ಆದರೆ ಈ ದಿನ ದಿನಾಂಕ:30/09/2021 ರಂದು ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಒಳಗಡೆ ಇದ್ದಾಗ ನನಗೆ ಗೊತ್ತಿಲ್ಲದೆ, ನಮ್ಮ ಗ್ರಾಮದ ವಾಸಿ ದೇವರಾಜು ನನ್ನ ಗಂಡನನ್ನು ಅವರ ತೆಂಗಿನ ಮರದಲ್ಲಿರುವ ತೆಂಗಿನ ಕಾಯಿಗಳನ್ನು ಕೀಳಲು ಮರವನ್ನು ಹತ್ತಿಸಿರುತ್ತಾನೆ, ಆಕಸ್ಮಿಕವಾಗಿ ಕಾಲು ಜಾರಿ ಗಂಡ ಆಯ ತಪ್ಪಿ ತೆಂಗಿನ ಮರದಿಂದ ಕೆಳಗಡೆ ಬಿದ್ದಿರುವುದಾಗಿ ದೇವರಾಜು ತಿಳಿಸಿದ ಕೂಡಲೆ ನಾನು ಮನೆಯಿಂದ ಹೊರಗಡೆ ಬಂದು ನೋಡಿದಾಗ ನನ್ನ ಗಂಡ ಚಿಕ್ಕಪ್ಪಯ್ಯ ದೇವರಾಜು ರವರ ತೆಂಗಿನ ಮರದ ಕೆಳಗೆ ಬಿದ್ದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮೇಲ್ನೋಟಕ್ಕೆ ಯಾವುದೇ ಗಾಯಗಳು ಇರಲಿಲ್ಲ. ಕೂಡಲೆ ನಾನು ಮತ್ತು ದೇವರಾಜು, ನಮ್ಮ ಗ್ರಾಮದ ಚನ್ನಪ್ಪ  ಈ ದಿನ ಮದ್ಯಾಹ್ನ ಸುಮಾರು 1-30 ಗಂಟೆಗೆ ನನ್ನ ಪತಿಯನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲು ಮಾಡಿದಾಗ ವೈದ್ಯಾಧಿಕಾರಿಗಳು ನನ್ನ ಪತಿ ಚಿಕ್ಕಪ್ಪಯ್ಯ ಮೃತಪಟ್ಟಿರುವುದಾಗಿ ತಿಳಿಸಿದರು. ದೇವರಾಜು ರವರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ನನ್ನ ಪತಿ ಚಿಕ್ಕಪ್ಪಯ್ಯ ರವರಿಗೆ ತೆಂಗಿನ ಕಾಯಿಗಳನ್ನು ಕೀಳಿಸಲು ತೆಂಗಿನ ಮರವನ್ನು ಹತ್ತಿಸಿರುತ್ತಾನೆ. ನನ್ನ ಪತಿ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಮೃತ ನನ್ನ ಪತಿ ಚಿಕ್ಕಪ್ಪಯ್ಯ ರವರ ಸಾವಿಗೆ ದೇವರಾಜು ಬಿನ್ ಲೇಟ್ ವೆಂಕಟರವಣಪ್ಪ, 40 ವರ್ಷ, ಎ.ಕೆ ಜನಾಂಗ, ಮುದುಗೆರೆ ಗ್ರಾಮ ರವರ ನಿರ್ಲಕ್ಷತೆಯೇ ಕಾರಣವಾಗಿರುತ್ತದೆ. ಆದ್ದರಿಂದ ದೇವರಾಜು ಬಿನ್ ಲೇಟ್ ವೆಂಕಟರವಣಪ್ಪ ರವರ ವಿರುದ್ಧ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 270/2021 ಕಲಂ. 78(3) ಕೆ.ಪಿ. ಆಕ್ಟ್:-

          ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂಧರೆ ಘನ ನ್ಯಾಯಾಲಯದಲ್ಲಿ  ಗೌರಿಬಿದನೂರು ಗ್ರಾಮಾಂತರ ಠಾಣೆ ಯಲ್ಲಿ ಪಿ.ಎಸ್.ಐ. ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ  ವಿಜಯಕುಮಾರ್ ಕೆ.ಸಿ. ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ 30-09-2021 ರಂದು ರಾತ್ರಿ 07-30 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು ಮುದುಗೆರೆ  ಗ್ರಾಮದಲ್ಲಿ  ಹೊಸೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ  ವಿಜಯ್ ಸ್ಟೋರ್ ನ ಎಂ ವಿಜಯಕುಮಾರ್ ಬಿನ್ ಲೇಟ್ ಮಂಜುನಾಥರವರ ಅಂಗಡಿಯಲ್ಲಿ  ವಿಜಯಕುಮಾರ್  ಮತ್ತು ಶಿವಕುಮಾರ್ ಬಿನ್  ಮೈಲಾರಪ್ಪ, ಮುದುಗೆರೆ ರವರು ಮೊಬೈಲ್ ನಲ್ಲಿ ಈ ದಿನ ನಡೆಯುತ್ತಿರುವ  ಐ.ಪಿ.ಎಲ್. ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದಿರುತ್ತೆ. ಸದರಿ ಮಾಹಿತಿಯ ಮೇರೆಗೆ  ದಾಳಿ ಮಾಡಲು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಠಾಣಾ ಎನ್.ಸಿ.ಆರ್. ನಂ. 453/2021 ರಂತೆ ಸ್ವತಃ ಎನ್.ಸಿ.ಆರ್. ಅನ್ನು ದಾಖಲಿಸಿಕೊಂಡಿರುತ್ತೇನೆ. ಸದರಿ ಅಕ್ರಮ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿರುವವರ ಮೇಲೆ ದಾಳಿ ಮಾಡಿ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆಯನ್ನು ಕೈಗೊಳ್ಳಲು  ಘನ ನ್ಯಾಯಾಲಯದಲ್ಲಿ ಕಲಂ 78(3) ಕೆ.ಪಿ.ಆಕ್ಟ್  ಅಸಂಜ್ಞೇಯ ಅಪರಾಧವಾಗಿದ್ದು ಅನುಮತಿಯನ್ನು ಪಡೆದುಕೊಂಡು 21-55 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ. 205 ಮೋಹನ್ ರವರು ಹಾಜರುಪಡಿಸಿದ್ದು  ಠಾಣಾ ಮೊ.ಸಂಖ್ಯೆ 270/2021 ಕಲಂ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

9. ಗೌರಿಬಿದನೂರು ನಗರ ಪೊಲೀಸ್‌ ಠಾಣೆ ಮೊ.ಸಂ. 154/2021 ಕಲಂ. 380 ಐಪಿಸಿ:-

     ದಿನಾಂಕ: 30/09/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಅಶ್ವಿನಿ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಗೌರಿಬಿದನೂರು ನಗರದ ಬಿ.ಹೆಚ್ ರಸ್ತೆಯ ಬದಿಯಲ್ಲಿ ಶ್ರೀ. ಧನಲಕ್ಷ್ಮೀ ಅಂಡ್ ಕೋ ಬೂಸಾ ಅಂಗಡಿಯನ್ನು ಇಟ್ಟುಕೊಂಡು ನಾನು ಮತ್ತು ನಮ್ಮ ತಂದೆ ಕೆ.ಎ ವೆಂಕಟಾಛಲಪತಿ ಶೆಟ್ಟಿ ರವರು ಅಂಗಡಿಯಲ್ಲಿ ಬೂಸಾ, ಹಿಂಡಿ, ಮೆಕ್ಕೆಜೋಳ, ರಾಗಿ ವ್ಯಾಪಾರವನ್ನು ಮಾಡಿಕೊಂಡಿರುತ್ತೇವೆ. ದಿನಾಂಕ: 30/09/2021 ರಂದು  ಮದ್ಯಾಹ್ನ 1:30 ಗಂಟೆಗೆ ನಾನು ಊಟಕ್ಕೆ ಮನೆಗೆ ಹೋದೆನು. ಅಂಗಡಿಯಲ್ಲಿ ನನ್ನ ತಂದೆ ಕೆ.ಎ ವೆಂಕಟಾಛಲಪತಿ ಶೆಟ್ಟಿ ರವರು ಇದ್ದರು. ಮದ್ಯಾಹ್ನ ಸುಮಾರು 2:00 ಗಂಟೆಗೆ ನನ್ನ ತಂದೆ ನನಗೆ ಪೋನ್ ಮಾಡಿ ಯಾರೋ ಮೂವರು ಕಳ್ಳರು ಅಂಗಡಿಯಲ್ಲಿ ಹಣವನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರು. ಕೂಡಲೇ ನಾನು ಅಂಗಡಿಯ ಬಳಿ ಬರಲಾಗಿ ನನ್ನ ತಂದೆ ಹೇಳಿದ್ದೇನೆಂದರೆ, ನಾನು ಅಂಗಡಿಯಲ್ಲಿದ್ದಾಗ, ಮದ್ಯಾಹ್ನ ಸುಮಾರು 1:45 ಗಂಟೆಗೆ ಯಾರೋ ಮೂವರು ಅಪರಿಚಿತರು ಅಂಗಡಿಯ ಬಳಿ ಬಂದಿದ್ದು, ಅದರಲ್ಲಿ ಒಬ್ಬ ಆಸಾಮಿ ಅಂಗಡಿಯ ಒಳಗೆ ಬಂದು ಕಡಲೇ ಹಿಂಡಿ ಶಾಂಪಲ್ ತೋರಿಸಿ ಎಂದು ಕೇಳಿದನು. ನಾನು ಮುಂಬದಿಯ ಮೂಟೆಗಳಲ್ಲಿ ನೋಡಿ ಎಂದಾಗ ನಮಗೆ ಒಳಗಡೆಯ ಮೂಟೆಗಳಲ್ಲಿ ಶಾಂಪಲ್ ತೋರಿಸಿ ಎಂದು ಕೇಳಿದನು. ನಾನು ಕಡಲೇ ಹಿಂಡಿಯನ್ನು ತೋರಿಸಲು ನಾನು ಕುಳಿತಿದ್ದ ಕ್ಯಾಷ್ ಟೇಬಲ್ ನಿಂದ ಸ್ವಲ್ಪ ಮುಂದೆ ಹೋಗಿದ್ದು, ಕಡಲೇ ಹಿಂಡಿಯ ತೋರಿಸುವಂತೆ ಕೇಳಿ ಈ ಮೂಟೆ ಬೇಡ ಬೇರೆ ಮೂಟೆ ತೋರಿಸಿ ಇನ್ನೂ ಬೇರೆಯ ಮೂಟೆ ತೋರಿಸಿ ಎಂದು ನನ್ನ ಗಮನವನ್ನು ಬೇರೆಡೆ ಸೆಳೆಯುತ್ತಿದ್ದನು. ಮೂವರ ಪೈಕಿ ಒಬ್ಬ ಆಸಾಮಿ ಕ್ಯಾಷ್ ಟೇಬಲ್ ಬಳಿ ಬಂದಿದ್ದು ಕ್ಯಾಷ್ ಟೇಬಲ್ ಡ್ರಾ ತೆಗೆದು ಹಣವನ್ನು ತೆಗೆದುಕೊಂಡಿದ್ದು, ಕ್ಯಾಷ್ ಟೇಬಲ್ ಬಳಿ ಇದ್ದ ಆಸಾಮಿಯನ್ನು ಗಮನಿಸಿದ ನಮ್ಮ ಗ್ರಾಹಕ ನಾಸೀರ್ ಖಾನ್ ಬಿನ್ ಲೇಟ್ ಜಿ.ಮೆಹಬೂಬ್ ಖಾನ್, 48 ವರ್ಷ, ವ್ಯಾಪಾರ, ನ್ಯೂಹಾರಿಜನ್ ಸ್ಕೂಲ್ ಬಳಿ,  23  ನೇ ವಾರ್ಡ್, ಬಾಗೇಪಲ್ಲಿ  ಟೌನ್   ರವರು  ನೀವು ಯಾರು ಕ್ಯಾಷ್ ಟೇಬಲ್ ಬಳಿ ಏಕೆ ನಿಂತಿದ್ದೀರಾ ಎನ್ನುತ್ತಿದ್ದಂತೆ ಹೊರಗಡೆ ನಿಂತಿದ್ದ ಒಬ್ಬ ವ್ಯಕ್ತಿ ಮತ್ತು ಡ್ರಾದಲ್ಲಿ ಹಣವನ್ನು ಕಳ್ಳತನ ಮಾಡಿದ್ದ ವ್ಯಕ್ತಿ ಹಾಗೂ ನನ್ನ ಗಮನವನ್ನು  ಕಡಲೆ ಹಿಂಡಿ ಶಾಂಪಲ್ ತೋರಿಸುವ ಕಡೆಗೆ ಸೆಳೆಯುತ್ತಿದ್ದ ವ್ಯಕ್ತಿ ಮೂವರೂ ಸ್ಥಳದಿಂದ ಓಡಿಹೋದರು. ನಾನು ಕ್ಯಾಷ್ ಡ್ರಾ ನೋಡಲಾಗಿ ಎಣಿಸಿ ಕಟ್ಟು ಕಟ್ಟಿ ಇಟ್ಟಿದ್ದ 25,000/- ರೂ. ಗಳು ಇರಲಿಲ್ಲ. ನಾನು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ಓಡಿಹೋಗುತ್ತಿದ್ದ ಮೂವರು ಕಳ್ಳರ ಪೈಕಿ ಒಬ್ಬನನ್ನು ಹಿಡಿದುಕೊಂಡಿರುವುದಾಗಿ ನನ್ನ ತಂದೆ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಸಿಕ್ಕಿದ್ದ ಒಬ್ಬ ಕಳ್ಳನನ್ನು ಠಾಣೆಗೆ ಕರೆದುಕೊಂಡು ಹೋದರು. ನನ್ನ ತಂದೆ ಕೆ.ಎ ವೆಂಕಟಾಛಲಪತಿ ಶೆಟ್ಟಿ ಬಿನ್ ಲೇಟ್ ಅಶ್ವತ್ಥನಾರಾಯಣ ಶೆಟ್ಟಿ, 68 ವರ್ಷ, ವೈಶ್ಯರು, ವ್ಯಾಪಾರ, ತ್ಯಾಗರಾಜಕಾಲೋನಿ, ಗೌರಿಬಿದನೂರು ರವರ  ಗಮನವನ್ನು ಬೇರೆಡೆ ಸೆಳೆದು ಕ್ಯಾಷ್ ಡ್ರಾದಲ್ಲಿ ಇಟ್ಟಿದ್ದ 25,000/- ರೂ.ಗಳನ್ನು ಕಳ್ಳತನ ಮಾಡಿರುವ ಉಳಿದ ಇಬ್ಬರು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೇನೆ.

 

10. ಗೌರಿಬಿದನೂರು ನಗರ ಪೊಲೀಸ್‌ ಠಾಣೆ ಮೊ.ಸಂ. 155/2021 ಕಲಂ. 506, 504, 324 ಐಪಿಸಿ:-

          ದಿ:30/09/2021 ರಂದು ಗಾಯಾಳು ಚಿಕ್ಕನರಸಿಂಹಪ್ಪ ಬಿನ್  ಲೇಟ್ ದೊಡ್ಡದಾಸಪ್ಪ, ಗೊಟಕನಾಪುರ ಗ್ರಾಮ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತನ್ನ ಹೆಂಡತಿ ನಡುಪಮ್ಮ ಆಗಿದ್ದು ನಮಗೆ ದಯಾನಂದ ಎಂಬ ಒಬ್ಬ ಮಗನಿರುತ್ತಾನೆ. ನಮ್ಮ ತಂದೆಗೆ 1]  ಗಂಗಪ್ಪ,70 ವರ್ಷ. 2] ಚಿಕ್ಕನರಸಿಂಹಪ್ಪ ಎಂಬ ತಾನು ಸೇರಿ  ಇಬ್ಬರು ಮಕ್ಕಳಿದ್ದು ನಾವು ಇದೇ ಗೊಟಕನಾಪುರದಲ್ಲಿ ವಾಸವಾಗಿರುತ್ತೇವೆ. ಈಗ್ಗೆ ಸುಮಾರು ಒಂದು  ತಿಂಗಳ ಹಿಂದೆ ರಾತ್ರಿ ಸುಮಾರು 8-30 ಗಂಟೆಯ ಸಮಯದಲ್ಲಿ ತನ್ನ ಅಣ್ಣನ ಮಗನಾದ ನರಸಿಂಹಮೂರ್ತಿ ರವರು ತನ್ನ ಮಗ ದಯಾನಂದ ರವರಿಗೆ ಮೊಬೈಲ್ ಕರೆ ಮಾಡಿ ನಮ್ಮ ಮನೆಯ ಸಮೀಪದ ವಾಸಯಾಗಿರುವ  ನರಸಿಂಹಮೂರ್ತಿ @ ಮೂರ್ತಿ@  ಪಿಟ್ಟೂ ಬಿನ್ ಲೇಟ್ ಗಂಗಾಧರ, ಗಾರೆಕೆಲಸ, ಎಸ್.ಸಿ.ಜನಾಂಗ, ಗೊಟಕನಾಪುರ ಗ್ರಾಮ ರವರು ಅವರ ಮನೆಯ ಬಳಿಯ ನೀರಿನ ಸೊಂಪು ತುಂಬಿ ನೀರು ಹರಿದು ನಮ್ಮ ಮನೆಯ ಮುಂದೆ ಬಂದು ನಿಂತಿದ್ದು ಈ ವಿಚಾರದಲ್ಲಿ ನಾನು, ನಮ್ಮ ತಂದೆ ಗಂಗಪ್ಪ, ತಾಯಿ ಗಂಗರತ್ನಮ್ಮ ರವರು ಹೋಗಿ ನರಸಿಂಹಮೂರ್ತಿ @ ಮೂರ್ತಿ @ ಪಿಟ್ಟೂ ರವರ ಬಳಿ ಹೋಗಿ  ವಿನಾಃ ಕಾರಣ ನೀರು ಹರಿದು ಮನೆಯ ಮುಂದೆ ಬಂದು ನಿಲ್ಲುತ್ತಿದ್ದು  ಕೂಡಲೇ ವಾಲನ್ನು ತಿರುಗಿಸಿ ನೀರು ಹರಿಯದಂತೆ ಮಾಡಲು ಕೇಳಿದಾಗ ನರಸಿಂಹಮೂರ್ತಿ@ ಮೂರ್ತಿ@  ಪಿಟ್ಟೂ ಮತ್ತು ಅವರ ಅಣ್ಣನಾದ ನಾರಾಯಣಸ್ವಾಮಿ ರವರು ನನ್ನ ತಂದೆ ಗಂಗಪ್ಪ ರವರಿಗೆ ಹೊಡೆದಿರುವುದಾಗಿ ಕೂಡಲೇ ಬರುವಂತೆ  ತಿಳಿಸಿದ ಮೇರೆಗೆ  ಮನೆಯಲ್ಲಿದ್ದ ತಾನು , ತನ್ನ ಮಗ  ನಮ್ಮ ಅಣ್ಣ ಗಂಗಪ್ಪ ರವರ ಮನೆಯ ಬಳಿಗೆ ಹೋದಾಗ  ಈ ಸ್ಥಳದಲ್ಲಿ ನರಸಿಂಹಮೂರ್ತಿ @ ಮೂರ್ತಿ @  ಪಿಟ್ಟೂ ಮತ್ತು ಅವರ ಅಣ್ಣ ನರಸಿಂಹಮೂರ್ತಿ ರವರಿದ್ದು ಅವರಿಗೆ ತಾನು ಮತ್ತು ತನ್ನ ಮಗ ವಿನಾಃ ಕಾರಣ ಏಕೇ ಗಲಾಟೆ ಮಾಡುತ್ತೀದ್ದೀರಿ ನಿಮ್ಮ ತಪ್ಪು ಇದ್ದರೂ ನಮ್ಮ ಅಣ್ಣ-ಅತ್ತಿಗೆ ನಮ್ಮವರ ಮೇಲೆ ಗಲಾಟೆ ಮಾಡಿ ಅವರ  ಮೇಲೆ ಹಲ್ಲೆ ಮಾಡುತ್ತಿದ್ದೀರಿ ಒಂದು ಕಡೆ ಇರುವವವರು ಅನೋನ್ಯವಾಗಿರಬೇಕು ಅಂತ ಹೇಳಿ ಬುದ್ದಿ ಹೇಳಿದಾಗ ಮೇಲ್ಕಂಡವರು ನೀನು ನಿಮ್ಮ ಅಣ್ಣನಿಗೆ ಸಪೋರ್ಟ್ ಮಾಡುವುದಕ್ಕೆ ಬಂದಿದ್ದೀಯಾ ಸುಮ್ಮನೇ ಹೋಗು ನೋಡಿದ್ದೇವೆ ಅಂತ ಗುರಾಯಿಸಿಕೊಂಡು ಹೊರಟು ಹೋಗಿದ್ದು ನಂತರ ನಾವು ಎಲ್ಲಿಯಾದರೂ ಹೋಗಲಿ ಅಂತ ವಾಪಸ್ಸು ಬಂದು ಸುಮ್ಮನಾದೆವು. ಈಗೀರುವಲ್ಲಿ ದಿ:29/09/2021 ರಂದು ಮದ್ಯಾಹ್ನ ಸುಮಾರು 12-30 ಗಂಟೆಯಲ್ಲಿ ನಮ್ಮ ಜಮೀನಿನ ಗಣಿಮೆಯ ಬಳಿ ತಾನು ಎತ್ತುಗಳನ್ನು ಮೇಯಿಸುತ್ತಿದ್ದಾಗ ನಮ್ಮ ಜಮೀನಿನ ಪಕ್ಕದಲ್ಲಿರುವ  ಸ್ಮಶಾನದ ಬಳಿ ನರಸಿಂಹಮೂರ್ತಿ @ ಮೂರ್ತಿ @  ಪಿಟ್ಟೂ ರವರಿದ್ದು  ತನ್ನನ್ನು ಗುರಾಯಿಸುತ್ತಿದ್ದು ಆಗ ತಾನು ತನ್ನಷ್ಟಕ್ಕೆ ಎತ್ತುಗಳನ್ನು ಮೇಯಿಸುತ್ತಿದ್ದಾಗ ತನ್ನ ಹಿಂದಿನಿಂದ ಬಂದ ನರಸಿಂಹಮೂರ್ತಿ@ ಮೂರ್ತಿ @  ಪಿಟ್ಟೂ ರವರು ತನ್ನ ಮೇಲೆ ಗಲಾಟೆ ಮಾಡುತ್ತಾ ಆದಿನ ನಿಮ್ಮ ಅಣ್ಣನಿಗೆ ಸಪೋರ್ಟ್  ಮಾಡುತ್ತೀಯಾ ನನ್ನ ಮಗನೇ ಈದಿನ ನಿನ್ನನ್ನು ಮುಗಿಸಿಬಿಡುತ್ತೇನೆಂದು ಪ್ರಾಣಬೆದರಿಕೆಯನ್ನು ಹಾಕಿ ಆತನ ಕೈಯಲ್ಲಿದ್ದ ಒಂದು ಬಿಯರ್ ಬಾಟಲ್ ನಿಂದ ತನ್ನ ಬೆನ್ನಿನ ಹಿಂಭಾಗ 03 ಬಾರಿ ಚುಚ್ಚಿ ರಕ್ತಗಾಯಪಡಿಸಿ, ಅದೇ ಬೀಯರ್ ಬಾಟಲ್ ನಿಂದ ತನ್ನ ತಲೆಯ ಎಡಭಾಗದ ಎಡಕಿವಿಯ ಹಿಂಭಾಗದ ಸಮೀಪ ಹೊಡೆದಿದ್ದು ಆಗ ತಾನು ಜೋರಾಗಿ ಕೂಗಿಕೊಂಡು ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡು  ಓಡಿ ಹೋದನು.   ನಂತರ ತಾನು  ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ  ಆಸ್ಪತ್ರೆಗೆ  ಬಂದು ದಾಖಲುಗಿರುತ್ತೇನೆ. ತಾನು  ಈ ಹಿಂದೆ  ನೀರಿನ ವಿಚಾರದಲ್ಲಿ ನನ್ನ ಅಣ್ಣ ಗಂಗಪ್ಪ ರವರಿಗೆ ಸಪೋರ್ಟ್ ಆಗಿ  ಹೋಗಿ ನರಸಿಂಹಮೂರ್ತಿ @ ಮೂರ್ತಿ @  ಪಿಟ್ಟೂ ಮತ್ತು ಅವರ ಅಣ್ಣ ನಾರಾಯಣಸ್ವಾಮಿ ರವರಿಗೆ ಬುದ್ದಿ ಹೇಳಿದ್ದರಿಂದ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನ ಮೇಲೆ ಬೀಯರ್ ಬಾಟಲ್ ನಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪ್ರಾಣಬೆದರಿಕೆಯನ್ನು ಹಾಕಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ, ರಾಜಿ ಪಂಚಾಯ್ತಿಗೆ ಬಾರದ ಕಾರಣ ಈದಿನ ತಡವಾಗಿ   ಹೇಳಿಕೆಯನ್ನು  ನೀಡಿರುತ್ತೇನೆಂತ ನೀಡಿದ ಹೇಳಿಕೆಯ ದೂರಾಗಿದ್ದು  ಸದರಿ ಹೇಳಿಕೆಯ ದೂರನ್ನು ಪಡೆದುಕೊಂಡು ಠಾಣೆಗೆ ವಾಪಸ್ಸಾಗಿ ಆರೋಪಿಯ ವಿರುದ್ದ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

11. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 104/2021 ಕಲಂ. 15(A), 32(3) ಕೆ.ಇ. ಆಕ್ಟ್ :-

ದಿನಾಂಕ 30/09/2021 ರಂದು ಮದ್ಯಾಹ್ನ 13.30 ಗಂಟೆಗೆ ಪಿ.ಎಸ್.ಐ ರವರು ಮಾಲು,ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:30/09/2021 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಬಂಡಕೋಟೆ ಗ್ರಾಮದಲ್ಲಿರುವ ಮುನಿವೆಂಕಟಪ್ಪ, ಬಿನ್ ಬಿ.ಮುನಿಚೌಡಪ್ಪ ರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ 06 ನೇ ಗ್ರಾಮ ಗಸ್ತಿನ ಸಿಬ್ಬಂದಿಯಾದ ಮಪಿಸಿ 589 ಸುಮ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಬಂಡಕೋಟೆ ಗ್ರಾಮಕ್ಕೆ ಹೋಗಿ ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಬಂಡಕೋಟೆ ಗ್ರಾಮದಲ್ಲಿರುವ ಮುನಿವೆಂಕಟಪ್ಪ ಬಿನ್ ಬಿ.ಮುನಿಚೌಡಪ್ಪ ರವರು ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿ ಮಾಲೀಕ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು, ಅಂಗಡಿ ಮಾಲೀಕ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಓಡಿ ಹೋದ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಮುನಿವೆಂಕಟಪ್ಪ, ಬಿನ್ ಬಿ.ಮುನಿಚೌಡಪ್ಪ,50 ವರ್ಷ, ಬೋವಿ ಜನಾಂಗ, ಬಂಡಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿದು ಬಂದಿರುತ್ತದೆ. ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಒಂದು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 13 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 13 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 457/-ರೂ ಆಗಿರುತ್ತೆ. ಮದ್ಯ ಒಟ್ಟು 1170 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕನಾದ ಮುನಿವೆಂಕಟಪ್ಪ, ಬಿನ್ ಬಿ.ಮುನಿಚೌಡಪ್ಪ ಓಡಿಹೋಗಿರುವುದಾಗಿ ತಿಳಿಯಿತು.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12.00 ರಿಂದ  ಮದ್ಯಾಹ್ನ 13.00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್, ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು, ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮುನಿವೆಂಕಟಪ್ಪ, ಬಿನ್ ಬಿ.ಮುನಿಚೌಡಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

12. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 185/2021 ಕಲಂ. 78(III) ಕೆ.ಪಿ. ಆಕ್ಟ್ :-

          ಈ ದಿನ ದಿನಾಂಕ:01/10/2021 ರಂದು ಬೆಳಗ್ಗೆ 10.15 ಗಂಟೆಗೆ ನ್ಯಾಯಾಲಯದ ಹೆಚ್.ಸಿ-137 ಮಂಜುನಾಥ್ ರವರು ಎನ್.ಸಿ.ಆರ್ ನಂ.306/2021 ರಲ್ಲಿ ಪ್ರಕರಣ ದಾಖಲು ಮಾಡಲು ಮಾನ್ಯ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ  ದಿನಾಂಕ: 29/09/2021 ರಂದು ನಾನು ಕಛೇರಿಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ತೊಂಡೇಬಾವಿ ರೈಲ್ವೆ ಸ್ಟೇಷನ್ ಮುಂದೆ ಇರುವ ಹರೀಶ್ ಮೊಬೈಲ್ ಅಂಗಡಿಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ನಾನು ಅಪರಾಧ ಸಿಬ್ಬಂದಿಗೆ ಈ ವಿಚಾರವಾಗಿ ಪಂಚರನ್ನು ಮಾಹಿತಿ ಇದ್ದ ಸ್ಥಳಕ್ಕೆ ಬರಲು ತಿಳಿಸಿ ಹಾಗೂ ಪೊಲೀಸ್ ಸಿಬ್ಬಂದಿಯಾದ ಪಿಸಿ-532 ಚಿಕ್ಕಣ್ಣ, ಪಿಸಿ-310 ಮೈಲಾರಪ್ಪ ರವರೊಂದಿಗೆ ಖಾಸಹಗಿ ದ್ವಿಚಕ್ರ ವಾಹನಗಳಲ್ಲಿ ಹರೀಶ್ ಅಂಗಡಿಯ ಸ್ವಲ್ಪ ದೂರದಲ್ಲಿ ನಮ್ಮಲ್ಲಿ ಒಬ್ಬ ಮಪ್ತಿಯಲ್ಲಿರುವ ಸಿಬ್ಬಂದಿಯನ್ನು ಅಂಗಡಿಯ ಬಳಿ ಕಳುಹಿಸಿಕೊಟ್ಟು ಮೊಬೈಲ್ ಅಂಗಡಿಯಲ್ಲಿದ್ದ ಆಸಾಮಿ ಮತ್ತೊಬ್ಬ ವ್ಯಕ್ತಿಯೊಂದಿಗೆ ರಾಜಸ್ಥಾನ್ ಗೆಲ್ಲುತ್ತೆ ರಾಜಸ್ಥಾನ್ ಮೇಲೆ 2000 ರೂ ಬೆಟ್ ಎಂತಲೂ ಮತ್ತೊಬ್ಬ ರ್.ಸಿ.ಬಿ ಗೆಲ್ಲುತ್ತೆ ಆರ್.ಸಿ.ಬಿ ಮೇಲೆ 4000 ರೂ ಎಂತಲೂ ಹಾಗೂ ಅಂಗಡಿಯಲ್ಲಿದ್ದ  ತನ್ನ ಮೊಬೈಲ್ ಗೆ ಬಂದ ಕರೆಗಳಲ್ಲಿ ಮಾತನಾಡುತ್ತಾ ಇರುವುದನ್ನು  ಅಂಗಡಿಯ ಬಳಿ ಹೋಗಿರುವ ಸಿಬ್ಬಂದಿ ಕೈ ಸನ್ನೆ ಮಾಡಿದಾಗ ನಾವು ಮತ್ತು ಪಂಚರು ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಆಸಾಮಿ ಆರ್.ಸಿ.ಬಿ ಮೇಲೆ 4000 ರೂ ಎಂತಲೂ ಬೆಟ್ ಎಂದು ಮಾತನಾಡುತ್ತಾ ಈತನಿಗೆ ಬಂದ ಮೂರು ಕರೆಗಳಿಗೆ ತಲಾ 4000 ರೂಗಳಂತೆ ಮತ್ತೊಂದು ಕರೆಗೆ 5000 ರೂ ರಾಜಸ್ಥಾನ ಗೆಲ್ಲುತ್ತೆ ಎಂದು ಈ ದಿನ ನಡೆಯುವ ರಾಜಸ್ಥಾನ ಹಾಗೂ ಆರ್.ಸಿಬಿ ನಡುವೆ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಒಬ್ಬ ವ್ಯಕ್ತಿ ಓಡಿಹೋಗಿದ್ದು ಅಂಗಡಿಯಲ್ಲಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸವನ್ನು ಕೇಳಲಾಗಿ 1) ಹರೀಶ ಬಿನ್ ಲಕ್ಷ್ಮಣರೆಡ್ಡಿ, 28 ವರ್ಷ, ವಕ್ಕಲಿಗರು, ಮೊಬೈಲ್ ಅಂಗಡಿಯಲ್ಲಿ ವ್ಯಾಪಾರ, ವಾಸ: ತೊಂಡೇಬಾಔಇ ಗ್ರಾಮ ಎಂದು ತಿಳಿಸಿದ್ದು ಓಡಿ ಹೋದವರ  ಹೆಸರು 2) ಉದಯ್ ತೊಂಡೇಬಾವಿ ವಾಸಿ ಎಂತಲೂ ಹಾಗೂ ಹರೀಶ್ ಬಳಿ ಇದ್ದ ಮೊಬೈಲ್ ಗೆ ಫೋನ್ ಪೇ ಅನ್ನು ಪರಿಶೀಲಿಸಿದಾಗ ಈತನ ಮೊ.ನಂ.9535190193 ಮೊಬೈಲ್ ನಂಬರಿಗೆ 3)ವಿಜಯ್ ಎಂಬುವವನು 895147115 ಮೊಬೈಲ್ ನಂಬರಿನಿಂಧ 4000 ರೂಗಳನ್ನು 4) ಕಣ್ವ ಎಂಬುವವನು 8892083673 ಮೊಬೈಲ್ ನಂಬರಿನಿಂದ 5000 ರೂ ಫೋನ್ ಪೇ ಮೂಲಕ ಹಣ ಜಮಾ ಆಗಿದ್ದು ಈ ದಿನ 29/09/2021 ರಂದು ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಆರ್.ಸಿ.ಬಿ ಟೀಮ್ ಗೆಲ್ಲುತ್ತೆ ಎಂದು ಹರೀಶ್ ರಾಜಸ್ಥಾನ್ ಗೆಲ್ಲುತ್ತೆ ಎಂದು ಹಣವನ್ನು ನಗದಾಗಿ ಹಾಗೂ ಮೊಬೈಲ್ ಫೋನ್ ಪೇ ಮೂಲಕ ಪಣವಾಗಿ ಕಟ್ಟಿ ಜೂಜಾಡಿದ್ದು ಸ್ಥಳದಲ್ಲಿ ಪಂಚರ ಸಮಕ್ಷಮದಲ್ಲಿ ರಾತ್ರಿ 7-35 ರಿಂದ 8-30 ಗಂಟೆಯವರೆಗೆ  ಪಂಚನಾಮೆ ಕ್ರಮವನ್ನು ಅಂಗಡಿ ಬಳಿ ಇದ್ದ ಲೈಟ್ ಬೆಳಕಿನಲ್ಲಿ ಜರುಗಿಸಿ ಆರೋಪಿಯ ಬಳಿ ಇದ್ದ ಮೊಬೈಲ್ ನಂಬರ್ 9535190193 ಏರ್ ಟೆಲ್ ಸಿಮ್ ಇರುವ ಎಂಐ ನೋಟ್ 04 ಟಚ್ ಸ್ಕ್ರೀನ್ ಮೊಬೈಲ್ ಸೆಟ್ ಅನ್ನು ಹಾಗೂ ಈತನ ಬಳಿ ಬೆಟ್ಟಿಂಗ್ ಪಂದ್ಯಕ್ಕೆ ಕಟ್ಟಿದ್ದ 2000 ರೂ ಗಳನ್ನು ವಶಕ್ಕೆ ತೆಗೆದುಕೊಂಡಿರುತ್ತೆ.  ಆರೋಪಿ ಹರೀಶ್ ಬಿನ್ ಲಕ್ಷ್ಮಣರೆಡ್ಡಿ ಈತನ ಮೊಬೈಲ್ ಸೆಟ್ ಹಾಗೂ 2000 ರೂ ಗಳನ್ನು ಪಂಚನಾಮೆಯೊಂದಿಗೆ ಹಾಜರ್ಪಡಿಸುತ್ತಿದ್ದು ಈತನ ವಿರುದ್ದ  ಮೇಲ್ಕಂಡವರು ಫೋನ್ ಮುಖಾಂತರ ಕ್ರಿಕೆಟ್ ಬೆಟ್ಟಿಂಗ್ ಆಡಿದವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ಪ್ರ.ವ.ವರದಿ.

 

13. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 186/2021 ಕಲಂ. 78(III) ಕೆ.ಪಿ. ಆಕ್ಟ್ :-

          ದಿನಾಂಕ:01/10/2021 ರಂದು ಬೆಳಗ್ಗೆ 10.30 ಗಂಟೆಗೆ ನ್ಯಾಯಾಲಯದ ಹೆಚ್.ಸಿ-137 ಮಂಜುನಾಥ್ ರವರು ಎನ್.ಸಿ.ಆರ್ ನಂ.307/2021 ರಲ್ಲಿ ಪ್ರಕರಣ ದಾಖಲು ಮಾಡಲು ಮಾನ್ಯ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ ದಿನಾಂಕ:29/09/2021 ರಂದು ರಾತ್ರಿ 09-00 ಗಂಟೆಯಲ್ಲಿ ನಾನು ಮತ್ತು ಸಿಬ್ಬಂದಿಯೊಂದಿಗೆ ಮಂಚೇನಹಳ್ಳಿಯಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಬಂದ ಮಾಹಿತಿಯಂತೆ ಯಾರೋ ಅಸಾಮಿಯು ಮಂಚೇನಹಳ್ಳಿಯ ಮಹೇಶ್ವರಿ ವೃತ್ತದ ಬಳಿ ಈ ದಿನ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ನಡೆಯುವ ಐಪಿಎಲ್ ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಡುತ್ತಿರುವುದಾಗಿ ಮಾಹಿತಿ ಬಂದಿದ್ದು  ಅದರಂತೆ  ಅದರಂತೆ ನಾನು ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಬೆಟ್ಟಿಂಗ್ ವಿಚಾರವನ್ನು ತಿಳಿಸಿ ಪೊಲೀಸ್ ನೋಟಿಸ್ ಜಾರಿ ಮಾಡಿ ಸಿಬ್ಬಂದಿಯವರಾದ ಪಿಸಿ-483 ರಮೇಶ್ ಬಾಬು, ಪಿಸಿ-283 ಅರವಿಂದ, ಪಿಸಿ-238 ದಿಲೀಪ್   ರವರೊಂದಿಗೆ ನಮ್ಮ ನಮ್ಮ ದ್ವಿಚಕ್ರ ವಾಹನಗಳಲ್ಲಿ ಗೌರಿಬಿದನೂರು ರಸ್ತೆಯ ಮಹೇಶ್ವರಿ ಸರ್ಕಲ್ ಬಳಿ ಹೋಗಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ  ಒಬ್ಬ ಆಸಾಮಿಯು ತನ್ನ ಫೋನ್ ನಲ್ಲಿ ಏನೋ ನೋಡುತ್ತಿರುವುದಾಗಿ ಕಂಡು ಬಂದಿದ್ದು ನಮ್ಮನ್ನು ನೋಡಿ ಓಡಿ ಹೋಗುತ್ತಿದ್ದವನನ್ನು ಹಿಡಿದು ಮೊಬೈಲ್ ನೋಡಲಾಗಿ ಅದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿರುವ ಮತ್ತು ಕ್ರಿಕೆಟ್ ಬರುತ್ತಿರುವ ದೃಷ್ಯವನ್ನು ನೋಡುತ್ತಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ತಕ್ಷಣ ಸ್ಕ್ರೀನ್ ಷಾಟ್ ಮಾಡಲಾಗಿ ಪ್ರಸ್ತುತ ಮೇಲ್ಕಂಡ ಮ್ಯಾಚ್ ಬರುತ್ತಿದ್ದು ಆತನನ್ನು ಹೆಸರು ಮತ್ತು ವಿಳಾಸ ಕೇಳಲಾಗಿ ರಫೀಕ್ ಬಿನ್ ಫಕೃದ್ದೀನ್  ಸಾಬ್, 28 ವರ್ಷ, ಮುಸ್ಲಿಂ, ಎಲೆಕ್ಟ್ರಿಷಿಯನ್ ಕೆಲಸ, ಗಾಂಧೀ ನಗರ, ಮಂಚೇನಹಳ್ಳಿ ಗ್ರಾಮ, ಮೊ:8197229322 ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಏಕೆ ಈ ರೀತಿ ಮೊಬೈಲ್ ನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದೀಯ ಎಂತ ಕೇಳಲಾಗಿ ಸದರಿ ಆಸಾಮಿಯು ತಾನು ಆನ್ ಲೈನ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದು ಈಗಾಗಲೇ ಪಂದ್ಯಕ್ಕೆ ಹಣವನ್ನು ಆನ್ ಲೈನ್ ನಲ್ಲಿ ಆರ್.ಸಿ.ಬಿ ಗೆದ್ದರೆ 2000 ರೂಗಳು  ಆರ್.ಆರ್.ಆರ್ ಗೆದ್ದರೆ 3000 ಎಂತ ಹಣವನ್ನು ಪಾವತಿಸಿದ್ದು ಉಳಿದ 500 ರೂ ಪಂದ್ಯಕ್ಕಾಗಿಯೇ ತನ್ನ ಬಳಿ ಇಟ್ಟುಕೊಂಡಿರುವುದಾಗಿ ತಿಳಿಸಿದ್ದನ್ನು ಪಂಚರ ಸಮಕ್ಷಮ 500 ರೂ ನಗದು ಮತ್ತು ರೆಡ್ ಮಿ ಮೊಬೈಲ್ ಅನ್ನು ಅಲ್ಲಿರುವ ಬೀದಿ ದೀಪದ ಕೆಳಗೆ ಬೆಳಕಿನಲ್ಲಿ ಪಂಚರ ಸಮಕ್ಷಮ ಪಂಚನಾಮೆಯನ್ನು  ರಾತ್ರಿ 9-15 ರಿಂದ 9-40 ರವರೆಗೆ ಜರುಗಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು  ಸದರಿ ಆರೋಪಿಯೊಂದಿಗೆ  ಅಮಾನತ್ತುಪಡಿಸಿಕೊಂಡ ರೆಡ್ ಮಿ ಮೊಬೈಲ್ ಮತ್ತು 500 ರೂ ನಗದು ಮತ್ತು  ಪಂಚನಾಮೆ  ಹಾಗೂ  ವರದಿಯೊಂದಿಗೆ ರಾತ್ರಿ 9-45 ಗಂಟೆಗೆ ನೀಡುತ್ತಿದ್ದು ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಪ್ರ.ವ.ವರದಿ.

 

14. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 187/2021 ಕಲಂ. 279, 337 ಐ.ಪಿ.ಸಿ:-

          ದಿನಾಂಕ:01/10/2021  ರಂದು ಪಿರ್ಯಾದಿದಾರರಾದ ರಾಮಾಂಜಿನಪ್ಪ ಬಿನ್ ಲೇಟ್ ರಂಗಪ್ಪ, 55 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ, ಮಂಚೇನಹಳ್ಳಿ ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:24/09/2021 ರಂದು ಸಂಜೆ 5-13 ಗಂಟೆ ಸಮಯದಲ್ಲಿ ಮನೆಯಿಂದ ನನ್ನ ಮಗಳಾದ ಹರ್ಷಿತ ರವರು ಮಂಚೇನಹಳ್ಳಿ ಬಸ್ ನಿಲ್ದಾಣದ ಹತ್ತಿರ ಹಾಲಿನ ಡೈರಿಗೆ ಹಾಲನ್ನು ಹಾಕಲು ಹೋಗುತ್ತಿದ್ದಾಗ ಮುಖ್ಯ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಕೆಎ-40-ಎಲ್-3621 ಬಜಾಜ್ ಕಂಪನಿಯ ಪಲ್ಸರ್ ದ್ವಿಚಕ್ರ ವಾಹನವು ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಮುನಿರಾಜು ಹೋಟೆಲ್ ಮುಂಭಾಗ ಸೈಕಲ್ ನ ಬಳಿ ನಿಂತಿದ್ದ ನನ್ನ ಮಗಳಾದ ಹರ್ಷಿತ ರವರಿಗೆ ಗುದ್ದಿರುವ ರಭಸಕ್ಕೆ ತಲೆಯ ಭಾಗಕ್ಕೆ ಪೆಟ್ಟು ಬಿದ್ದಿರುತ್ತದೆ. ಸ್ಥಳದಲ್ಲಿ ಹರೀಶ ಬಿನ್ ಶಿವರಾಜು ಎಂಬುವವರು ನೋಡಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಮತ್ತು ನನ್ನ ಮಗಳಾದ ಹರ್ಷಿತ ರವರಿಗೆ ತಲೆಯ ಭಾಗಕ್ಕೆ ಐದು ಹೊಲಿಗೆ ಹಾಕಿರುತ್ತಾರೆ. ಹಾಗೂ ಬೆನ್ನು ಮೂಳೆ ಬಿರುಕು ಬಿಟ್ಟಿರುವುದಾಗಿ ಖಾಸಗಿ ಆಸ್ಪತ್ರೆಯಲ್ಲಿ ತಿಳಿಸಿರುತ್ತಾರೆ. ಈ ಸನ್ನಿವೇಶದಿಂದ ದೂರು ಕೊಡಲು ಯಾರೂ ಇಲ್ಲದ ಕಾರಣ ಮತ್ತು ಆಸ್ಪತ್ರೆಯಲ್ಲಿ ಹರ್ಷಿತಳನ್ನು ದಾಖಲು ಮಾಡಿದ್ದರಿಂದ ದೂರು ನೀಡಲು ತಡವಾಗಿರುತ್ತದೆ. ವಿಚಾರಣೆ ಮಾಡಿ ಕೆಎ-40-ಎಲ್-3621 ಬಜಾಜ್ ಕಂಪನಿಯ ಪಲ್ಸರ್ ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

15. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 120/2021 ಕಲಂ. 87 ಕೆ.ಪಿ. ಆಕ್ಟ್ :-

          ದಿನಾಂಕ: 01/10/2021 ರಂದು ನಾನು ಠಾಣೆಯಲ್ಲಿರುವಾಗ ಸಂಜೆ 4-30 ಗಂಟೆ ಸಮಯದಲ್ಲಿ ಠಾಣಾ ವ್ಯಾಪ್ತಿಯ ಸುಲ್ತಾನಪೇಟೆ ಗ್ರಾಮದ ದೋರೆ ತೋಪಿಗೆ ಹೋಗುವ ಮಣ್ಣಿನ ರಸ್ತೆಯ ಮದ್ಯದಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:124/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 306/2021 ಕಲಂ. 32, 34, 43(A) ಕೆ.ಇ. ಆಕ್ಟ್ :-

          ದಿನಾಂಕ: 30.09.2021 ರಂದು ಬೆಳಿಗ್ಗೆ 10.15 ಗಂಟೆಗೆ ಪಿರ್ಯಾದಿದಾರರಾದ ಸರಸ್ಪತಮ್ಮ ಮ.ಪಿ.ಎಸ್.ಐ ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮಾಲು ಮತ್ತು ವರದಿಯನ್ನು ಪಡೆದುಕೊಂಡಿದ್ದ ಸಾರಾಂಶವೇನೆಂದರೆ, ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಐ ರವರಾದ ಶ್ರೀ. ಎನ್.ರಾಜಣ್ಣ ರವರ ಆದೇಶದ ಮೇರೆಗೆ ಸದರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಬ್ ಇನ್ಸ್ಪೇಕ್ಟರ್ ಸರಸ್ಪತಮ್ಮ ಆದ ತಾನು ದಿನಾಂಕ: 30-09-2021 ರಂದು ತಮ್ಮ ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ: 239 ಮಲ್ಲಿಕಾರ್ಜುನ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ:13 ಸುಶೀಲ್ ಕುಮಾರ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-58 ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಗೊರಮಡಗು, ಚಿಂತಡಿಪಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಬೆಳಗ್ಗೆ 8-15 ಗಂಟೆ ಸಮಯದಲ್ಲಿ ಕೆ. ಮುತ್ತಕದಹಳ್ಳಿ ಗ್ರಾಮಕ್ಕೆ ಬಂದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಯಾರೋ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯವನ್ನು ಯಮಹಾ ದ್ವಿಚಕ್ರವಾಹನದಲ್ಲಿ ಕೈವಾರದ ರಸ್ತೆ ಕಡೆಯಿಂದ ಸಾಗಿಸಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಾವುಗಳು ಕೂಡಲೇ ಸದರಿ ಸ್ಥಳಕ್ಕೆ ಹೋಗಿ ಕೈವಾರದ ಕಡೆಯಿಂದ ಬರುತ್ತಿದ್ದ ದ್ವಿಚ್ರಕವಾಹನಗಳನ್ನು ಗಮನಿಸುತ್ತಿದ್ದಾಗ, ಬೆಳಿಗ್ಗೆ 8-30 ಗಂಟೆಯಲ್ಲಿ  ಕೈವಾರ ರಸ್ತೆ  ಕಡೆಯಿಂದ ಯಮಹಾ ದ್ವಿಚಕ್ರವಾಹನದಲ್ಲಿ ಒಂದು ಬಿಳಿ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು, ಆಗ ತಾವು ಸದರಿ ದ್ವಿಚಕ್ರವಾಹನದ ಸವಾರನಿಗೆ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಸದರಿ ಅಸಾಮಿ ಪೊಲೀಸ್ ಜೀಪ್ ನಿಂತಿದ್ದನ್ನು ನೋಡಿ ದ್ವಿಚಕ್ರವಾಹನ ಮತ್ತು ಅದರಲ್ಲಿದ್ದ ಬಿಳಿ ಬಣ್ಣದ ಚೀಲವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಆಗ ನಾವು ಸದರಿ ಅಸಾಮಿಯನ್ನು ಹಿಂಬಾಲಿಸಿಕೊಂಡು ಹೋಗಲಾಗಿ ತಪ್ಪಿಸಿಕೊಂಡು ಹೋಗಿರುತ್ತಾನೆ. ದ್ವಿಚಕ್ರವಾಹನದಲ್ಲಿದ್ದ ಬಿಳಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳಿರುವ ಮೂರು ರೆಟ್ಟಿನ ಬಾಕ್ಸ್ಗಳಿದ್ದವು. ಪರಾರಿಯಾದ ಅಸಾಮಿಯ ಹೆಸರು ಮತ್ತು ವಿಳಾಸವನ್ನು ವಿಚಾರ ಮಾಡಿ ತಿಳಿದುಕೊಳ್ಳಲಾಗಿ, ಅಶೋಕ ಬಿನ್ ನಾಗೇಂದ್ರಪ್ಪ, 38 ವರ್ಷ, ಆದಿ ಕರ್ನಾಟಕ ಜನಾಂಗ, ಕೈವಾರದ ವಿಜಯಾ ಬಾರ್ ಆಂಡ್ ರೆಸ್ಟಾರೆಂಟ್ ಕೆಲಸ, ಸ್ವಂತ ಸ್ಥಳ: ಸೊಂಡೆಕೊಳ ಗ್ರಾಮ ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ ಹಾಲಿ ವಾಸ ಕೈವಾರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂತ ತಿಳಿದು ಬಂದಿರುತ್ತೆ. ಸದರಿ ಅಸಾಮಿ ಕೈವಾರದ ವಿಜಯಾ ಬಾರ್ ಆಂಡ್ ರೆಸ್ಟಾರೆಂಟ್ ಕೆಲಸ ಮಾಡಿಕೊಂಡು ಸದರಿ ಬಾರ್ ನ ಕ್ಯಾಷಿಯರ್ ಷಣ್ಮುಗಂ ರವರು ನೀಡಿದ ಮೇಲ್ಕಂಡ ಮದ್ಯದ ಮಾಲುಗಳನ್ನು ಯಾವುದೇ ಪರವಾನಗಿ ಇಲ್ಲದೇ ಗ್ರಾಮಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಸಾಗಾಣಿಗೆ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತೆ. ಸ್ಥಳದಲ್ಲಿದ್ದ ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ಕೆಎ-05 ಹೆಚ್.ಎಸ್-7359 ನೋಂದಣಿ ಸಂಖ್ಯೆಯ ಯಮಹಾ ಎಸ್.ಜೆಡ್.ಆರ್ ಕಂಪನಿಯದಾಗಿರುತ್ತೆ, ಸದರಿ ದ್ವಿಚಕ್ರವಾಹನದಲ್ಲಿರುವ ಮದ್ಯದ ಮಾಲುಗಳಿರುವ ಚೀಲವನ್ನು ಪರಿಶೀಲಿಸಲಾಗಿ ಸದರಿ ಚೀಲದಲ್ಲಿ ಮೂರು ರೆಟ್ಟಿನ ಬಾಕ್ಸ್ ಗಳಿದ್ದು, ಅವುಗಳನ್ನು ಪರಿಶೀಲನೆ ಮಾಡಲಾಗಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ಗಳಿರುವ ಎರಡು ರೆಟ್ಟಿನ ಬಾಕ್ಸ್ ಗಳಿದ್ದು, ಸದರಿ ಬಾಕ್ಸ್ ಗಳಲ್ಲಿ 90 ಎಂ.ಎಲ್ ಸಾಮಥ್ರ್ಯದ 192 ಟೆಟ್ರಾಪಾಕೇಟ್ ಗಳಿರುತ್ತೆ, ಮತ್ತೊಂದು ರೆಟ್ಟಿನ ಬಾಕ್ಸ್ ಅನ್ನು ಪರಿಶೀಲಿಸಲಾಗಿ ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿಯ 180 ಎಂ.ಎಲ್ ಸಾಮರ್ಥ್ಯದ 24 ಟೆಟ್ರಾ ಪಾಕೇಟ್ ಗಳು ಮತ್ತು ಒಲ್ಡ್ ಟೆವರನ್ ವಿಸ್ಕಿ 180 ಎಂ.ಎಲ್ ಸಾಮರ್ಥ್ಯದ 24 ಟೆಟ್ರಾ ಪ್ಯಾಕೆಟ್ಗಳಿರುತ್ತೆ. ಮೇಲ್ಕಂಡ ಎಲ್ಲಾ ಮದ್ಯದ ಮಾಲುಗಳು ಒಟ್ಟು 25 ಲೀಟರ್ 920 ಎಂ.ಎಲ್ ನಷ್ಟಿದ್ದು, ಅವುಗಳ ಒಟ್ಟು ಬೆಲೆ 11,376/- ರೂಗಳಾಗಿರುತ್ತೆ. ಮೇಲ್ಕಂಡ ಎಲ್ಲಾ ಮದ್ಯದ ಮಾಲುಗಳನ್ನು ಮತ್ತು ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ತಮ್ಮ ಮುಂದೆ ಹಾಜರುಪಡಿಸಿದ್ದು. ಕಾನೂನು ಬಾಹಿರವಾಗಿ ಮದ್ಯವನ್ನು ಸಂಗ್ರಹಣೆ ಮಾಡಿ ಸಾಗಾಣಿ ಮಾಡಿಕೊಂಡು ಬರುತ್ತಿದ್ದ ಆರೋಪಿ ಅಶೋಕ ಬಿನ್ ನಾಗೇಂದ್ರಪ್ಪ ಮತ್ತು ಮದ್ಯವನ್ನು ಸಾಗಾಣಿಗೆ ಮಾಡಲು ಹೇಳಿ ಮದ್ಯವನ್ನು ಕೊಟ್ಟಿದ್ದ ವಿಜಯ ಬಾರ್ & ರೆಸ್ಟೋರೆಂಟ್ ನ ಕ್ಯಾಷಿಯರ್ ಷಣ್ಮುಗಂ  ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 01-10-2021 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080