ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.255/2021 ಕಲಂ. 457,380 ಐ.ಪಿ.ಸಿ:-

          ದಿನಾಂಕ: 30/08/2021 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ.ರಾಜು ಬಿನ್ ಕೆ.ನಾಗಾಚಾರಿ, 24 ವರ್ಷ, ಆಚಾರಿ ಜನಾಂಗ, ಭಗೀರಥ ಬಟ್ಟೆ ಅಂಗಡಿ, ಬಸ್ ಸ್ಟಾಂಡ್ ಬಳಿ, ಚಿಲಮತ್ತೂರು ಗ್ರಾಮ, ಮತ್ತು ಮಂಡಲಂ, ಹಿಂದೂಪುರ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಒಂದು ವರ್ಷದಿಂದ ಬಾಗೇಪಲ್ಲಿ ಟೌನ್ 9ನೇ ವಾರ್ಡ, ಬಿ.ಜಿ.ಎಸ್.ಸ್ಕೂಲ್ ರಸ್ತೆಯಲ್ಲಿ ಭಗೀರಥಿ ರೆಡಿಮೇಡ್ ಅಂಡ್ ಸ್ಯಾರಿ ಸೆಂಟರ್ ಬಟ್ಟೆ ಅಂಗಡಿ  ಇಟ್ಟು ಕೊಂಡಿರುತ್ತೆನೆ. ದಿನಾಂಕ 18/08/2021 ರಂದು ಎಂದಿನಂತೆ ಬೆಳಿಗ್ಗೆ ಅಂಗಡಿ ತೆಗೆದು ವ್ಯಾಪಾರ ಮಾಡಿಕೊಂಡು ರಾತ್ರಿ 8-45 ಗಂಟೆಯಲ್ಲಿ ಅಂಗಡಿ ಶೆಟರ್ ಡೋರ್ ಅನ್ನು ಮುಚ್ಚಿಕೊಂಡು,  ಬೀಗವನ್ನು ಹಾಕಿಕೊಂಡು  ಮನೆಗೆ ಹೋಗಿರುತ್ತೇನೆ. ದಿನಾಂಕ 19/08/2021 ರಂದು ಬೆಳಿಗ್ಗೆ 5-45 ಗಂಟೆಗೆ ನಮ್ಮ ಅಂಗಡಿಯ ಮಾಲೀಕರಾದ ಸ್ಟುಡೀಯೋ ಮೂರ್ತಿ ರವರು ನನಗೆ ಪೋನ್ ಮಾಡಿ ನಿಮ್ಮ ಅಂಗಡಿ ಶೆಟರ್ ಡೋರ್ ಅನ್ನು ಕೆಳಗಿನಿಂದ ಮೇಲಕ್ಕೆ ಎತ್ತಿ ಕಳ್ಳತನ ಮಾಡಿವುದಾಗಿ ತಿಳಿಸಿರುತ್ತಾರೆ. ತಕ್ಷಣ ನಾನು ಅಂಗಡಿ ಬಳಿಗೆ ಬಂದು ನೋಡಲಾಗಿ ಅಂಗಡಿಯ ಶೆಟರ್ ಡೋರ್ ಅನ್ನು ಯಾವುದೋ ಆಯುಧದಿಂದ ಮೇಲಕ್ಕೆ ಎತ್ತಿ ಅಂಗಡಿಯ ಒಳಗೆ ಹೋಗಿ ಅಂಗಡಿಯಲ್ಲಿದ್ದ ಸುಮಾರು 50 ಸಾವಿರ ಬೆಲೆ ಬಾಳುವ ಹುವಾಯಿ ಮೊಬೈಲ್ ಮತ್ತು ಸುಮಾರು 200 ರೂ ಗಳಷ್ಟು ಚಿಲ್ಲರೆ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನಗೆ ತುರ್ತು ಕೆಲಸ ಇದ್ದುದ್ದರಿಂದ ದೂರು ನೀಡಲು ತಡವಾಗಿರುತ್ತದೆ. ಆದ್ದರಿಂದ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ನನ್ನ ಅಂಗಡಿಯ ಶೆಟರ್ ಡೋರ್ ಅನ್ನು  ರಾತ್ರಿ ವೇಳೆಯಲ್ಲಿ  ಕಿತ್ತು ಅಂಗಡಿಯಲ್ಲಿದ್ದ ಮೊಬೈಲ್ ಪೋನ್ ಮತ್ತು ಹಣವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.256/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ: 30/08/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಾಬಾಜಾನ್ ಬಿನ್ ಲೇಟ್ ಖಾಸಿಂ ಸಾಬ್, 49 ವರ್ಷ, ಮುಸ್ಲಿಂ  ಜನಾಂಗ, ಸೆಲೆಕ್ಷನ್ ಗಾರ್ಮೆಂಟ್ಸ್  ಅಂಗಡಿ, ಡಿ.ವಿ.ಜಿ ರಸ್ತೆ, ಬಾಗೇಪಲ್ಲಿ ಟೌನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಬಾಗೇಪಲ್ಲಿ ಟೌನ್ ಡಿ.ವಿ.ಜಿ ರಸ್ತೆಯಲ್ಲಿರುವ ಬಾಲಕಿಯ ಫ್ರೌಢಶಾಲೆಗೆ ಮುಂಭಾಗದಲ್ಲಿ ಈಗ್ಗೆ 20 ವರ್ಷಗಳಿಂದ ಸೆಲೆಕ್ಷನ್ ಗಾರ್ಮೆಂಟ್ಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ದಿನಾಂಕ.29/08/2021 ರಂದು ಬೆಳಿಗ್ಗೆ ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡಿಕೊಂಡು ರಾತ್ರಿ 9-00 ಗಂಟೆ ಅಂಗಡಿಯ ರೋಲಿಂಗ್ ಶೆಟರ್ ಅನ್ನು ಹಾಕಿ ಡೊರ್ ಲಾಕ್ ಮತ್ತು ಬೀಗ ಹಾಕಿಕೊಂಡು ಹೋಗಿರುತ್ತೇನೆ.  ದಿನಾಂಕ 30/08/2021 ರಂದು ಎಂದಿನಂತೆ ಬೆಳಿಗ್ಗೆ 9-00 ಗಂಟೆಗೆ ಅಂಗಡಿ ಬಳಿ ಬಂದು ರೋಲಿಂಗ್ ಶೆಟರ್  ಅನ್ನು ತೆಗೆಯಲು ಹೋದಾಗ ರೋಲಿಂಗ್ ಶೆಟರ್ ಅನ್ನು ಮುಂದಕ್ಕೆ ಎಳೆದು ಒಳಗಡೆ ನುಗಿದಂತೆ ಕಂಡು ಬಂದಿರುತ್ತದೆ.  ನಂತರ ರೋಲಿಂಗ್ ಶೆಟರ್ ನ್ನು ಮೇಲಕ್ಕೆ ಎತ್ತಿ ಅಂಗಡಿಯ ಒಳಗೆ ಹೋಗಿ ನೋಡಿದಾಗ  ಅಂಗಡಿಯೊಳಗಿದ್ದ ಶರ್ಟುಗಳು, ಮಕ್ಕಳ ಬಟ್ಟೆಗಳು, ಪ್ಲಾಸ್ಟಿಕ್ ಬುಟ್ಟಿ ಹಾಗೂ ಕ್ಯಾಷ್ ಬಾಕ್ಸ್ ನಲ್ಲಿದ್ದ 1000/- ರೂ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ದಿನಾಂಕ 29/08/2021 ರಂದು ರಾತ್ರಿ ನನ್ನ ಅಂಗಡಿಯ ರೋಲಿಂಗ್ ಶೆಟರ್ ಅನ್ನು ಯಾರೋ ಕಳ್ಳರು ಬಲವಾಗಿ ಎಳೆದು ಮೇಲಕ್ಕೆ ಎತ್ತಿ ಒಳಗೆ ನುಗ್ಗಿ ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ಕಳ್ಳತನ ಮಾಡಿರುವ ಮಾಲನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.257/2021 ಕಲಂ. 32,34,11 ಕೆ.ಇ ಆಕ್ಟ್:-

     ದಿನಾಂಕ: 30/08/2021 ರಂದು ರಾತ್ರಿ 7-30 ಗಂಟೆಗೆ ಶ್ರೀ ಡಿ ಆರ್ ನಾಗರಾಜ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 30-08-2021 ರಂದು ಬಾಗೇಪಲ್ಲಿ ಟೌನ್ ನಲ್ಲಿ  ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-1444 ವಾಹನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-156 ನಟರಾಜ,  ಸಿ ಹೆಚ್ ಸಿ -257 ನರಸಿಂಹ ಮುರ್ತಿ   ಸಿ ಪಿ ಸಿ – 18, ಎ ಪಿ ಸಿ – 83 ರಾಜು ಹೆಚ್ ವಿ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಪಾಷಾ , ರವರೊಂದಿಗೆ  ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 6-00 ಗಂಟೆಯಲ್ಲಿ  ಯಾರೋ ಆಸಾಮಿಗಳು  AP 39 AB 0596 ನೊಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನದಲ್ಲಿ ಗೂಳೂರು ಕಡೆಗೆ ಅಕ್ರಮವಾಗಿ  ಮದ್ಯವನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ  ಮಾಹಿತಿ ಬಂದಿದ್ದು, ಗೂಳೂರು ವೃತ್ತದ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಹಾಜರಿದ್ದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಂತರ ಪಂಚರು ಮತ್ತು ನಾವು  ಜೀಪಿನಲ್ಲಿ ಗೂಳೂರು ರಸ್ತೆಯ ಪೋತೇಪಲ್ಲಿ ಕ್ರಾಸ್ ಬಳಿ  ಸಂಜೆ 6-15 ಗಂಟೆಯಲ್ಲಿ ಕಾಯುತ್ತಿದ್ದಾಗ  ಬಾಗೇಪಲ್ಲಿ ಕಡೆಯಿಂದ ಬಂದಂತಹ AP 39 AB 0596 ನೊಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನವನ್ನು ನಿಲ್ಲಿಸಿ, ವಾಹನವನ್ನು ತಪಾಸಣೆ ಮಾಡಲಾಗಿ ಮದ್ಯದ ಬಾಕ್ಸ್ ಗಳು ಇದ್ದು, ನಂತರ ದ್ವಿಚಕ್ರವಾಹನದಲ್ಲಿದ್ದವರ  ಹೆಸರು ವಿಳಾಸ ಕೇಳಲಾಗಿ  1)ಶ್ರೀನಿವಾಸ ಬಿನ್ ನಿಡಿಮಾಮಿಡಪ್ಪ, 28 ವರ್ಷ, ವಡ್ಡ ಜನಾಂಗ, ನೇಯ್ಗೆ ಕೆಲಸ, ರೆಡ್ಡಿ ಚೆರುವುಪಲ್ಲಿ ಗ್ರಾಮ, ಪಂಚಾಯ್ತಿ, ಗೊರಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ, 2)ಗೋವರ್ಧನ್ ಬಿನ್ ಅಂಜಿನಪ್ಪ, 25 ವರ್ಷ, ವಡ್ಡ ಜನಾಂಗ, ಕೂಲಿ ಕೆಲಸ, ರೆಡ್ಡಿಚೆರುವುಪಲ್ಲಿ ಗ್ರಾಮ, ಪಂಚಾಯ್ತಿ, ಗೊರಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತ ಪುರ ಜಿಲ್ಲೆ,  ಆಂದ್ರಪ್ರದೇಶ ಎಂದು ತಿಳಿಸಿರುತ್ತಾರೆ. ನಂತರ ಮದ್ಯವನ್ನು ಸಾಗಾಟ ಮಾಡಲು ಮತ್ತು ಮಾರಾಟ  ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ  ಪ್ಲಾಸ್ಟಿಕ್ ಚೀಲದಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ತೆಗೆದು ನೋಡಲಾಗಿ  HAYWARDS CHEERS WHISKY ಯ 2 ಬಾಕ್ಸ್ ಗಳಿದ್ದು, ಪ್ರತಿಯೊಂದು  ಬಾಕ್ಸ್ ನಲ್ಲಿ 90 ML ಸಾಮರ್ಥ್ಯದ 96 HAYWARDS CHEERS WHISKY ಯ ಟೆಟ್ರಾ ಪಾಕೇಟ್ ಗಳಿರುತ್ತವೆ. ಇವುಗಳು  ಒಟ್ಟು 17 ಲೀಟರ್ 280 ಎಂ.ಎಲ್ ಇದ್ದು, ಇದರ ಒಟ್ಟು ಬೆಲೆ 6,744 ರೂಗಳಾಗಿರುತ್ತದೆ. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ರಾತ್ರಿ 19-30 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿ.

 

4. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ಪ್ರಕಾಶ್.ಜೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:30/08/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಜುಂಜನಹಳ್ಳಿ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟರಾಯಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಹೆಚ್.ಸಿ-139 ಶ್ರೀನಾಥ ಎಂ.ಪಿ ರವರೊಂದಿಗೆ ಜುಂಜನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಬೆಳಿಗ್ಗೆ 11-00 ಗಂಟೆಗೆ ನಾವು ಪಂಚಾಯ್ತಿದಾರರೊಂದಿಗೆ ಜುಂಜನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟರಾಯಪ್ಪ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟರಾಯಪ್ಪ 68 ವರ್ಷ ದೋಬಿ ಜನಾಂಗ ಜಿರಾಯ್ತಿ ವಾಸ ಜುಂಜನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ನಂತರ ಸದರಿ ಆಸಾಮಿಯು ಯಾವುದೇ ಪರವಾನಿಗೆಯನ್ನು ಹೊಂದಿರದೇ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದು ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 10 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 351.03 ರೂಗಳ 900 ಎಂ.ಎಲ್ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 11-15  ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಕೈಗೊಂಡ ಪಂಚನಾಮೆಯ ಮುಖಾಂತರ ಅಮಾನತ್ತುಪಡಿಸಿಕೊಂಡು ನಂತರ ಮಧ್ಯಾಹ್ನ 01-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣಾ ಮೊ.ಸಂ 122/2021 ಕಲಂ 15(ಎ) 32(3) K.E ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. ಮನುಷ್ಯ ಕಾಣೆ:-

     ಈ ದಿನ ದಿನಾಂಕ 30/08/2021 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ವಿನೋದ್ ಕುಮಾರ್ ಸಿ.ಎಸ್ ಬಿನ್ ಶಂಕರಪ್ಪ.ಕೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಾರನಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆ. ನಮ್ಮ ತಂದೆ ತಾಯಿಗೆ ನಾವು ಇಬ್ಬರು ಗಂಡು ಮಕ್ಕಳಿದ್ದು ಮೊದಲನೇ ನಾನು ಎರಡನೇ ನನ್ನ ತಮ್ಮನಾದ ವಿಶ್ವನಾಥ.ಸಿ.ಎಸ್ ಬಿನ್ ಶಂಕರಪ್ಪ, 25ವರ್ಷ, ಗೊಲ್ಲರು, ಜಿರಾಯ್ತಿ ಎಂಬುವರು ಡಿಪ್ಲಮೋ ವಿದ್ಯಾಭ್ಯಾಸಮಾಡಿದ್ದು ಎರಡು ವರ್ಷಗಳಿಂದ ನಮ್ಮ ಗ್ರಾಮದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ಜಿರಾಯ್ತಿಮಾಡಿಕೊಂಡು ಇದ್ದನು ನಾನು ವಾರಕ್ಕೊಮ್ಮೆ ಮನೆಗೆ ಬಂದು ಶನಿವಾರ ಭಾನುವಾರದಂದು ನನ್ನ ತಮ್ಮ, ತಂದೆ ತಾಯಿಯೊಂದಗೆ ಜಿರಾಯ್ತಿ ಕೆಲಸ ಮಾಡಿಕೊಂಡು ಇದ್ದು ಬೆಂಗಳೂರಿಗೆ ಹೋಗುತ್ತಿದ್ದೆ ನಂತರ ದಿನಾಂಕ 27/08/2021 ರಂದು ಮಧ್ಯಾಹ್ನ 1-11 ಗಂಟೆ ಸಮಯದಲ್ಲಿ ನನ್ನ ತಮ್ಮನಿಗೆ ಪೋನ್ ಮಾಡಿ ಎಲ್ಲಿ ಇದ್ದಿಯಾ ಎಂದು ಕೇಳಿದೆ ಆಗ ನನ್ನ ತಮ್ಮ ತೋಟದಲ್ಲಿ ಕೆಲಸಮಾಡುತ್ತಿರುವುದಾಗಿ ತಿಳಿಸಿದನು ನಾನು ಗ್ರಾಮಕ್ಕೆ ಬರುತ್ತಿರುವುದಾಗಿ ನನ್ನ ತಮ್ಮನಿಗೆ ವಿಚಾರ ತಿಳಿಸಿ ಸಂಜೆ 5-00 ಗಂಟೆಗೆ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಇರಗಂಪಲ್ಲಿಗೆ ಬರುವಂತೆ ಹೇಳಿದೆ ನಂತರ ನಾನು ಬಸ್ ಸಿಗದ ಕಾರಣ ಇರಗಂಪಲ್ಲಿಗೆ ಸ್ವಲ್ಪ ತಡವಾಗಿ 7 ಗಂಟೆಗೆ ಇರಗಂಪಲ್ಲಿಗೆ ಬಂದು ನನ್ನ ತಮ್ಮನಿಗೆ ಸುಮಾರು ಬಾರಿ ಕರೆಮಾಡಿದ್ದು ನನ್ನ ತಮ್ಮನ್ನ ಪೋನ್ ಸ್ವಿಚ್ ಆಫ್ ಆಗಿತ್ತು ನಂತರ ನಾನು ಹಾಲಿನ ಗಾಡಿಯಲ್ಲಿ ನಮ್ಮ ಗ್ರಾಮಕ್ಕೆ ಹೋಗಿ  ನಮ್ಮ ತಂದೆ ತಾಯಿಯನ್ನು ವಿಚಾರಿಸಲಾಗಿ ನನ್ನ ತಮ್ಮನಾದ ವಿಶ್ವನಾಥ ರವರು ಸದರಿ ದಿನ ದಿನಾಂಕ 27/08/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಪೋಟೋಗಳನ್ನು ತೊಳೆಸಿಕೊಂಡು ಬರಲೆಂದು ಹೋದವನ್ನು ಮತ್ತೆ ಮನೆಗೆ ವಾಪಸ್ ಬಂದಿರುವುದಿಲ್ಲ ಎಂದು ತಿಳಿಸಿದರು ಸದರಿ ದಿನ ನನ್ನ ತಮ್ಮ ಮನೆಗೆ ವಾಪಸ್ ಬರದೆ ಇದ್ದು ನನ್ನ ತಮ್ಮನನ್ನು ಇದುವರೆಗೂ ನಮ್ಮ ಸಂಬಂಧಿಕರ ನನ್ನ ತಮ್ಮನ ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ನನ್ನ ತಮ್ಮ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿದ್ದು ಕಾಣೆಯಾಗಿರುವ ನನ್ನ ತಮ್ಮನ್ನು ಪತ್ತೆಮಾಡಿಕೊಳ್ಳಲು ಕೋರುತ್ತೇನೆ. ಇದುವರೆಗೂ ನನ್ನ ತಮ್ಮನ್ನು ಹುಡುಕಾಡಿಕೊಂಡು ಇದ್ದು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುವುದಾಗಿ ನೀಡಿರುವ ದೂರಾಗಿರುತ್ತೆ.

 

6. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.36/2021 ಕಲಂ. 419,420 ಐ.ಪಿ.ಸಿ & 66(C),66(D) INFORMATION TECHNOLOGY ACT 2000:-

     ದಿನಾಂಕ:31/8/2021 ರಂದು ಪಿರ್ಯಾದಿ ಕುಮಾರಿ ಸ್ನೇಹ ಸಿ ಎಸ್ ಬಿನ್ ಎನ್ ಶ್ರೀನಿವಾಸರೆಡ್ಡಿ,18 ವರ್ಷ, ಒಕ್ಕಲಿಗರು, ಪದವಿ ವ್ಯಾಸಂಗ, ವಾಸ ಚೊಕ್ಕರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ಸಂಖ್ಯೆ:8867260535 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಕೊಡುಗು ಜಿಲ್ಲೆ ಪೊನ್ನಂಪೇಟೆಯಲ್ಲಿ ಬಿ ಎಸ್ಸೀ (ಪಾರೆಸ್ಟೀ) ಪಧವಿ ವ್ಯಾಸಂಗವನ್ನು ಮಾಡಿಕೊಂಡಿರುತ್ತೇನೆ. ನಾನು ಚಿಂತಾಮಣಿ ನಗರದಲ್ಲಿನ ಎಸ್  ಬಿ ಐ ಬ್ಯಾಂಕ್ ನಲ್ಲಿ ಉಳಿತಾಯಖಾತೆ ನಂ:- 37723638154 ರಂತೆ ಖಾತೆಯನ್ನು ಹೊಂದಿದ್ದು, ಇದಕ್ಕೆ ಎ ಟಿ ಎಂ ಕಾರ್ಢನ್ನು ಮತ್ತು ಈ ಖಾತೆಗೆ ತನ್ನ ಮೇಲ್ಕಂಡ ಮೊಬೈಲ್ ನಂಬರ್ ನ್ನು ಲಿಂಕ್ ಮಾಡಿಕೊಂಡು ಫೋನ್ ಫೇ ವ್ಯಾಲೆಟ್ ನ್ನು ಮೊಬೈಲ್ ನಲ್ಲಿ ಇನ್ಸಾಟಾಲ್ ಮಾಡಿಕೊಂಡು ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ನಾನು ದಿನಾಂಕ:16/8/2021 ರಂದು ನಾನು ರಂದು ಸಂಜೆ ಸುಮಾರು 07-00 ಗಂಟೆಯ ಸಮಯದಲ್ಲಿ  ನಾನು  ಬ್ಯಾಂಕ್ ಬ್ಯಾಲೆನ್ಸ್ ಚಕ್ ಮಾಡಿದಾಗ ನನ್ನ ಖಾತೆಯಲ್ಲಿ  ಇದ್ದ 86563/- ರೂಗಳ ಫೈಕಿ ಕೇವಲ 6563/- ರೂಗಳು ಮಾತ್ರ ಬ್ಯಾಲೆನ್ಸ್ ಇದ್ದು, ನನಗೆ ಗಾಭರಿಯಾಗಿ  ದಿನಾಂಕ:17/8/2021 ರಂದು  ನಾನು  ಬ್ಯಾಂಕ್ ಇ ಮೇಲ್ ಮೂಖಾಂತರ ದೂರನ್ನು ದಾಖಲಿಸಿರುತ್ತೇನೆ. ದಿನಾಂಕ:16/8/2021 ರಂದು ನನ್ನ ಖಾತೆಯಿಂದ 10000/-,9000/-,13000/-,13000/-,35000/-, ಈಗೆ 05 ಭಾರಿ ಒಟ್ಟು 80000/- ರೂಗಳು ಕಟಾವು ಆಗಿರುತ್ತದೆ. ಎ ಟಿ ಎಂ ಕಾರ್ಢ ನನ್ನ ಬಳಿಯೆ ಇದ್ದರೂ ಸಹ ನನ್ನ ಅನುಮತಿ ಇಲ್ಲದೆ ನನ್ನ ಖಾತೆಯಲ್ಲಿನ ಹಣ ಕಟಾವು ಆಗಿದ್ದು, ಸದರಿ ವಿಚಾರವನ್ನು ನಮ್ಮ ತಂದೆಯವರಿಗೆ ತಿಳಿಸಿದ್ದು ಅವರು ಬ್ಯಾಂಕ್ ನಲ್ಲಿ ಅವರು ಸಹ ದೂರನ್ನು ದಾಖಲಿಸಿದ್ದು,   ಬ್ಯಾಂಕ್  ಅಧಿಕಾರಿಗಳು ದಿನಾಂಕ:27/8/2021 ರಂದು  ಐಸಿಐಸಿಐ ಬ್ಯಾಂಕ್ ಅಕೌಂಟ್ ನಂ:180805001133 & IFSC CODE:ICIC0000001 ಖಾತೆಗೆ ಹಣ ವರ್ಗಾವಣೆಯಾಗಿರುವುದಾಗಿ ತಿಳಿಸಿ ಸ್ಟೇಟ್  ಮೆಂಟ್ ತಡವಾಗಿ ನೀಡಿರುತ್ತಾರೆ. ಆದುದರಿಂದ ಸದರಿ ದೂರನ್ನು ಸಹ ತಡವಾಗಿ ನೀಡುತ್ತಿರುತ್ತೇನೆ. ಸದರಿ ಮೇಲ್ಕಂಡ ಸೈಬರ್ ವಂಚಕರು ನನ್ನ ಖಾತೆಯಿಂದ  ಯಾವುದೋ ರೀತಿಯಲ್ಲಿ ಒಟ್ಟು 80000/- ರೂಗಳನ್ನು ಮೇಲ್ಕಂಡ  ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದು, ಸದರಿಯವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿ ಕೊಡಲು ಕೋರಿ ನೀಡಿದ ದೂರು.

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.140/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:30.08.2021 ರಂದು ಸಂಜೆ 6-20 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:30.08.2021 ರಂದು ಸಂಜೆ 6-15 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಅಡವಿಗೊಲ್ಲವಾರಹಳ್ಳಿ ಗ್ರಾಮದ ವಾಸಿ ನರಸಿಂಹಪ್ಪ @ ಬೇರಿಂಗ್ ನರಸಿಂಹಪ್ಪ ಬಿನ್  ಚಿಕ್ಕನರಸಿಂಹಪ್ಪ, 42 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯಾಪಾರ ವೃತ್ತಿ ವಾಸ: ಅಡವಿಗೊಲ್ಲವಾರಹಳ್ಳಿ ಗ್ರಾಮ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.379/2021 ಕಲಂ. 420,504,506(B),149 ಐ.ಪಿ.ಸಿ:-

     ದಿನಾಂಕ: 30/08/2021 ರಂದು ಬೆಳಿಗ್ಗೆ 11.30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿ.ಪಿ.ಸಿ-339 ಕರಿಯಪ್ಪ ರವರು ಘನ ನ್ಯಾಯಾಲಯದ ಪಿ.ಸಿ.ಆರ್.ನಂ.131/2021 ರನ್ನು ಠಾಣೆಗೆ ತಂದು ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ, ಸದರಿ ಪ್ರಕರಣದ ದೂರುದಾರನಾದ ಸೈಯದ್ ಚಾಂದ್ ಪಾಷಾ ಬಿನ್ ಸೈಯದ್ ಮಸ್ತಾನ್, 58 ವರ್ಷ, ಉಪ್ಪಾರಪೇಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರಿಗೆ ಉಪ್ಪಾರಪೇಟೆ ಗ್ರಾಮದ ಸರ್ವೇ ನಂಬರ್ 14 ರಲ್ಲಿ 25 ಗುಂಟೆ ಜಮೀನಿದ್ದು, ಅದರಲ್ಲಿ ಎರಡು ಗುಂಟೆ ಖರಾಬು ಜಮೀನಾಗಿರುತ್ತೆ. ಸದರಿ ಜಮೀನು ದೂರುದಾರನಾದ ಸೈಯದ್ ಚಾಂದ್ ಪಾಷಾ ರವರ ತಾತನಾದ ಜಹಂಗೀರ್ ಸಾಬ್ ರವರ ಪಿತ್ರಾರ್ಜಿತ ಆಸ್ತಿಯಾಗಿರುತ್ತೆ. ಹೀಗಿರುವಾಗ ದೂರುದಾರರ ದಾಯಾಧಿಗಳಾದ 1)ಸೈಯದ್ ಇಬ್ರಾಹಿಂ ಬಿನ್ ಜಹಂಗೀರ್ ಸಾಬ್, 2),ಸಜೀದಾ ಬೇಗಂ ಕೋಂ ಲೇಟ್ ಸೈಯದ್ ಅಮೀರ್, 3).ಗೋರಿಮಾ ಕೋಂ ಸೈಯದ್ ಇಬ್ರಾಹೀಂ, 4) ತಸ್ವೀರ್ ಬಿನ್ ಸೈಯದ್ ಇಬ್ರಾಹೀಂ, 5).ನಗೀನಾ ಬಿನ್ ಸೈಯದ್ ಇಬ್ರಾಹೀಂ, 6) ಸೈಯದ್ ಜಾವಿದ್ ಬಿನ್ ಸೈಯದ್ ಇಬ್ರಾಹೀಂ, 7).ತೈಮುಲ್ ಯಾಸೀನ್ ಬಿನ್ ಸೈಯದ್ ಇಬ್ರಾಹೀಂ, 8).ಸೈಯದ್ ಆರೀಫ್ ಬಿನ್ ಸೈಯದ್ ಇಬ್ರಾಹೀಂ, 9).ಪಾತೀಮಾ ಬಿನ್ ಸೈಯದ್ ಇಬ್ರಾಹೀಂ, 10).ಸಲ್ಮಾ ಬಿನ್ ಸೈಯದ್ ಇಬ್ರಾಹೀಂ, 11).ಯಾಸ್ಮೀನ್ ತಾಜ್ ಬಿನ್ ಸೈಯದ್ ಇಬ್ರಾಹೀಂ, 12).ಸೈಯದ್ ಮುಭಾರಕ್ ಬಿನ್ ಸೈಯದ್ ಇಬ್ರಾಹೀಂ, 13).ಶಾಜೀಯಾ ಬಾನು ಬಿನ್ ಲೇಟ್ ಸೈಯದ್ ಅಮೀರ್, 14).ಅಮೀನಾ ತಾಜ್ ಬಿನ್ ಲೇಟ್ ಸೈಯದ್ ಅಮೀರ್, 15).ಆಯಿಷಾ ಸುಲ್ತಾನ ಬಿನ್ ಲೇಟ್ ಸೈಯದ್ ಅಮೀರ್ ರವರುಗಳು ಮೇಲ್ಕಂಡ ಜಮೀನಿನಲ್ಲಿ ನಮಗೆ ಭಾಗ ಬರಬೇಕಾದರೂ ಸಹ ನಮಗೆ ಮೋಸ ಮಾಡುವ ಉದ್ದೇಶದಿಂದ ನಮ್ಮ ವಂಶ ವೃಕ್ಷವನ್ನು ಬದಲಿಸಿರುತ್ತಾರೆ ಹಾಗೂ ಸದರಿ ಜಮೀನಿನ ಆರ್.ಟಿ.ಸಿ, ಮುಟೇಷನ್, ಹಾಗೂ ಇತರೆ ದಾಖಲಾತಿಗಳನ್ನು ತನ್ನ ಗಮನಕ್ಕೆ ಬಾರದಂತೆ ಬದಲಾಯಿಸಿ 16).ಶ್ರೀನಿವಾಸ್ ಬಿನ್ ಸುಬ್ಬರಾಯಪ್ಪ, 46 ವರ್ಷ, ಎ.ಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರಿಗೆ ಮಾರಾಟ ಮಾಡಿರುತ್ತಾರೆ. ನಂತರ ತಾನು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆಯನ್ನು ಸಲ್ಲಿದ್ದು, ಸದರಿ ನ್ಯಾಯಾಲಯ, ಸದರಿ ಜಮೀನಿನ ಬಗ್ಗೆ ತಡೆಯಾಜ್ಞೆಯನ್ನು ನೀಡಿರುತ್ತೆ. ಹೀಗಿರುವಾಗ ಮೇಲ್ಕಂಡವರು ತನ್ನನ್ನು ಕುರಿತು ಸದರಿ ದಾವೆಯನ್ನು ವಾಪಸ್ ಪಡೆಯುವಂತೆ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಘನ ನ್ಯಾಯಾಲಯಕ್ಕೆ ದಾವೆಯನ್ನು ಸಲ್ಲಿಸಿದ್ದು, ಸದರಿ ನ್ಯಾಯಾಲಯವು ಮೇಲ್ಕಂಡ ಆರೋಪಿಗಳ ಮೇಲೆ ಕ್ರಮ ಜರುಗಿಸಲು ನೀಡಿದ ಪಿ.ಸಿ.ಆರ್ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.380/2021 ಕಲಂ.143,147,148,323,324,307,504,506,149  ಐ.ಪಿ.ಸಿ:-

     ದಿನಾಂಕ: 30/08/2021 ರಂದು 6.30 ಗಂಟೆಗೆ ಪಿರ್ಯಾಧಿದಾರರಾದ ಎಂ.ಮಂಜುನಾಥ ಬಿನ್ ಲೇಟ್ ಮದನ ಮೋಹನಪ್ಪ, 43 ವರ್ಷ, ಬಲಜಿಗರು, ವ್ಯವಸಾಯ,  ವಾಸ: ಊಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಣ್ಣನಾದ ನಾಗೇಶ್ ರವರಿಗೆ 1ನೇ ರಾಕೇಶ್ 25 ವರ್ಷ, 2ನೇ ಅಮರ್ 23 ವರ್ಷ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ರಾಕೇಶ್ ಎಂ.ಬಿ.ಎ ವ್ಯಾಸಂಗ ಮಾಡಿದ್ದು, ಚಿಂತಾಮಣಿಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಪೀಲ್ಡ್ ಆಪೀಸರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಅಮರ್ ಎಸ್.ಎಸ್.ಎಲ್.ಸಿ ವರೆಗೆ ವ್ಯಾಸಂಗ ಮಾಡಿದ್ದು, ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡು ಚಿಕ್ಕಬಳ್ಳಾಪುರ ನಗರದಲ್ಲಿರುವ ತಮ್ಮ ಅತ್ತೆಯಾದ ಮುನಿಯಮ್ಮ ರವರ ಮನೆಯಲ್ಲಿ ಇರುತ್ತಾನೆ. ದಿನಾಂಕ:27/08/2021 ರಂದು ತನ್ನ ಅಣ್ಣನಾದ ನಾಗೇಶ್ ರವರು ಹೊಸದಾಗಿ ಕಟ್ಟಿರುವ ಮನೆಯ ಗೃಹಪ್ರವೇಶಕ್ಕೆ ಅಮರ್ ಬಂದಿದ್ದು ಗ್ರಾಮದಲ್ಲಿಯೇ ಇದ್ದನು. ಈ ದಿನ ದಿನಾಂಕ:30/08/2021 ರಂದು ಬೆಳಿಗ್ಗೆ 08.30 ಗಂಟೆಯಲ್ಲಿ ತಾನು ಮತ್ತು ರಾಕೇಶ್ ರವರು ತನ್ನ ಅಣ್ಣನ ಹಳೇಯ ಮನೆಯ ಮುಂದೆ ಇದ್ದಾಗ, ತಮ್ಮ ಗ್ರಾಮದ ವಾಸಿಗಳಾದ ಮನೋಜ್ ಬಿನ್ ಲೇಟ್ ರಾಘವೇಂದ್ರ, ಗೌತಮ್ ಬಿನ್ ವೆಂಕಟೇಶ್, ಅನಿಲ್ ಬಿನ್ ಎಂ.ನಾಗರಾಜ್, ವೆಂಕಟೇಶ್ ಬಿನ್ ಲೇಟ್ ಕಿಟ್ಟಣ್ಣ ಮತ್ತು ಮಂಜುನಾಥ್ ಬಿನ್ ಲೇಟ್ ಕಿಟ್ಟಣ್ಣ ಎಂಬುವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಮನೋಜ್ ಎಂಬುವನು ತಮ್ಮನ್ನು ಕುರಿತು “ಎಲ್ಲಿ ಆ ನನ್ನ ಮಗ ಅಮರ್” ಎಂದು ಕೇಳಿದಾಗ ಅಲ್ಲಿದ್ದ ರಾಕೇಶ್ ಮನೋಜ್ ನನ್ನು ಕುರಿತು “ಮರ್ಯಾದೆಯಾಗಿ ಮಾತನಾಡು ನೀನು ಬಂದಿರುವ ವಿಚಾರ ತಿಳಿಸಿ ಸಮಾದಾನವಾಗಿ ಮಾತನಾಡು” ಎಂದು ಹೇಳಿದಾಗ ಅವನು “ನಿಮಗೇನು ಮರ್ಯಾದೆ ಕೊಡುವುದು ನಿನ್ನ ತಮ್ಮ ಮಾಡಿರುವ ಅಲಕ ಕೆಲಸಕ್ಕೆ ಮರ್ಯಾದೆ ಕೊಡಬೇಕಾ” ಎಂದು ಕೆಟ್ಟ ಮಾತುಗಳಿಂದ ಬೈದಾಗ, ರಾಕೇಶ್ ಅವರನ್ನು ಕುರಿತು “ನೀವು ಇಲ್ಲಿಂದ ಹೋಗಿ ನಮ್ಮ ತಂದೆ ಬಂದ ನಂತರ ಮಾತನಾಡೋಣ” ಎಂದು ಹೇಳಿದಾಗ, “ನಿಮ್ಮ ತಂದೆ ಬಂದ ಮೇಲೆ ಏನೂ ಮಾತನಾಡುವುದು” ಎಂದು ಮನೋಜ್ ಏಕಾಏಕಿ ರಾಕೇಶ್ ಮೇಲೆ ಗಲಾಟೆ ಮಾಡಿ ಅವನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ರಾಕೇಶ್ ರವರ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ಗೌತಮ್ ರವರು ಹಾಕಿ ಬ್ಯಾಟ್ ನಿಂದ ರಾಕೇಶ್ ರವರ ಎಡಕಿವಿಯ ಬಳಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಅನಿಲ್ ದೊಣ್ಣೆಯಿಂದ ರಾಕೇಶ್ ಮೈಮೇಲೆ ಹೊಡೆದು ನೋವುಂಟುಮಾಡಿರುತ್ತಾನೆ. ಉಳಿದ ವೆಂಕಟೇಶ್ ಮತ್ತು ಮಂಜುನಾಥ ರವರು ಕೈಗಳಿಂದ ರಾಕೇಶ್ ರವರ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿ, ಬೋಳಿ ನನ್ನ ಮಗನೇ ನಿನ್ನ ತಮ್ಮ ಅಮರ್ ನನ್ನ ತಂಗಿಯಾದ ದುರ್ಗ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಾನು, ರಾಘವೇಂದ್ರ ಬಿನ್ ಮುಕುಂದಪ್ಪ ಮತ್ತು ಗಲಾಟೆಯ ವಿಚಾರ ತಿಳಿದು ಅಲ್ಲಿಗೆ ಬಂದ ರಾಕೇಶ್ ತಮ್ಮ ಅಮರ್ ರವರು ಅಡ್ಡ ಹೋಗಿ ಜಗಳ ಬಿಡಿಸಿದೆವು. ನಂತರ ನಾನು ರಾಕೇಶ್ ನನ್ನು ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ನಂತರ ಗಲಾಟೆಗೆ ಕಾರಣ ತಿಳಿಯಲಾಗಿ ರಾಕೇಶ್ ತಮ್ಮನಾದ ಅಮರ್ ಎಂಬುವನು ಮನೋಜ್ ತಂಗಿಯಾದ ದುರ್ಗಳನ್ನು  ಪ್ರೀತಿಸುತ್ತಿರುವ ವಿಚಾರ ತಿಳಿದ ಮನೋಜ್ ರವರು ದಿನಾಂಕ:29/08/2021 ರಂದು ರಾತ್ರಿ 9.00 ಗಂಟೆಗೆ ಗ್ರಾಮದಲ್ಲಿ ಅಮರ್ ಮೇಲೆ ಜಗಳ ತೆಗೆದು ತನ್ನ ತಂಗಿಯ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲವೆಂದು ಬೆದರಿಕೆಯನ್ನು ಹಾಕಿದ್ದು, ನಂತರ ಈ ದಿನ ಮನೋಜ್ ಮೇಲ್ಕಂಡವರೊಂದಿಗೆ ಗುಂಪು ಕಟ್ಟಿಕೊಂಡು ಬಂದು ಈ ಕೃತ್ಯವನ್ನು ಎಸಗಿರುವುದಾಗಿ ತಿಳಿದುಬಂದಿರುತ್ತೆ. ಗಾಯಗೊಂಡಿರುವ ರಾಕೇಶ್ ರವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುತ್ತೆ. ತಾನು ಆಸ್ಪತ್ರೆಯಿಂದ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.381/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 30/08/2021 ರಂದು ಸಂಜೆ 7.15 ಗಂಟೆಗೆ ಠಾಣೆಯ ಸಿ.ಹೆಚ್.ಸಿ 249 ಸಂದೀಪ್ ಕುಮಾರ್ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 30/08/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಮತ್ತು ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನ ಕೋನಪಲ್ಲಿ, ಉಪ್ಪರಪೇಟೆ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.30 ಗಂಟೆಯ ಸಮಯದಲ್ಲಿ ಮಲ್ಲಿಕಾರ್ಜುನಪುರ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಮಂಗಮ್ಮ ಕೋಂ ರಾಮಾಂಜಿನಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಮಲ್ಲಿಕಾರ್ಜುನಪುರ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಮನೆಯ ಮುಂದೆ  ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು  2) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4) ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಗಮ್ಮ ಕೋಂ ರಾಮಾಂಜಿನಪ್ಪ, 45 ವರ್ಷ, ಗೃಹಣಿ, ಕೂಲಿ ಕೆಲಸ, ಮಲ್ಲಿಕಾರ್ಜುನಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 6.00 ರಿಂದ 6.45 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಗಮ್ಮ ಕೋಂ ರಾಮಾಂಜಿನಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

11. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.382/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ: 30/08/2021 ರಮದು ಬೆಳಿಗ್ಗೆ 11.00 ಗಂಟೆಗೆ ವೆಂಕಟೇಶರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ, 55 ವರ್ಷ, ಜಿರಾಯ್ತಿ, ವಕ್ಕಲಿಗ ಜನಾಂಗ, ಚಿಕ್ಕಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಮೂರು ಜನ ಮಕ್ಕಳಿದ್ದು, ಮೊದಲನೇ ಪವಿತ್ರ, ಎರಡನೇ ಪ್ರತಿಬಾ ಮತ್ತು ಮೂರನೇ ಪ್ರವೀಣ್ ಕುಮಾರ್ ರವರಾಗಿರುತ್ತಾರೆ. ತನ್ನ ಮಗ ಪ್ರವೀಣ್ ಕುಮಾರ್ ರವರಿಗೆ 28 ವರ್ಷ ವಯಸ್ಸಾಗಿದ್ದು ಬೆಂಗಳೂರಿನ ವಿಭೂತಿಪುರದಲ್ಲಿ ಚಿಲ್ಲೆರೆ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದನು. ಇತ್ತೀಚ್ಚಿಗೆ ಲಾಕ್ ಡೌನ್ ಇದ್ದರಿಂದ ಕಳೆದ ಒಂದೂವರೆ ವರ್ಷದಿಂದ ತಮ್ಮ ಗ್ರಾಮದಲ್ಲಿಯೇ ಇರುತ್ತಾನೆ. ಹೀಗಿರುವಾಗ ಪ್ರವೀಣ್ ಕುಮಾರ್ ದಿನಾಂಕ 26/07/2021 ರಂದು ಬೆಳಗ್ಗೆ 07.30 ಗಂಟೆ ಸಮಯದಲ್ಲಿ ತನಗೆ ಮೈಲಾಂಡ್ಲಹಳ್ಳಿ ಗೇಟ್ ನಲ್ಲಿ ಕೆಲಸವಿದೆ ಎಂದು ಹೇಳಿ ತಮ್ಮ ದ್ವಿಚಕ್ರವನ್ನು ತೆಗೆದುಕೊಂಡು ಮನೆಯಿಂದ ಹೋಗಿರುತ್ತಾನೆ. ನಂತರ ಸಂಜೆಯಾದರೂ ಮನೆಗೆ ವಾಪಸ್ಸು ಬಾರದೇ ಇದ್ದು ತಾವು ಗಾಬರಿಗೊಂಡು ಆತನ ಮೋಬೈಲ್ ನಂ 8951811517 ಗೆ ಕರೆ ಮಾಡಲಾಗಿ ಮೊಬೈಲ್ ಸ್ವಿಚ್ಚ್ ಆಫ್ ಆಗಿರುತ್ತೆ. ನಂತರ ತಮ್ಮ ನೆಂಟರನ್ನು ಮತ್ತು ಆತನ ಸ್ನೇಹಿತರನ್ನು ಈ ಬಗ್ಗೆ ವಿಚಾರಿಸಲಾಗಿ ಪ್ರವೀಣ್ ಕುಮಾರ್ ರವರ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ತನ್ನ ಮಗ ಬೆಂಗಳೂರು ನಗರದ ವಾಸಿ ದೀಪ (ಮೋ 9964728901) ರವರ ಜೊತೆ ಹೋಗಿರುವುದಾಗಿ ಅನುಮಾನವಿರುತ್ತೆ. ತಾನು ಇದುವರೆಗೂ ತನ್ನ ಮಗನನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

12. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 323,324,325,504,506,34 ಐ.ಪಿ.ಸಿ & 3(1)(r),3(1)(s),3(1)(zc),3(2)(va) The SC & ST (Prevention of Atrocities) Amendment Act 2015:-

     ದಿನಾಂಕ:30/08/2021 ರಂದು ರಾತ್ರಿ 9-00 ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 143 ಶ್ರೀನಾಥ ರವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ರಾಜೇಶ್ ಬಿನ್ ವೆಂಕಟರವಣಪ್ಪ,25 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ: ಶೆಟ್ಟಿಕೆರೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ  ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆಯ ಸಾರಾಂಶವೆನೇಂದರೆ,  ತಾನು ಮೇಲ್ಕಂಡ  ವಿಳಾಸದಲ್ಲಿ ವಾಸವಿದ್ದು ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ, ನಮ್ಮ ತಾಯಿಯಾದ ಮುನಿರತ್ನಮ್ಮ ರವರು ಈಗ್ಗೆ ಸುಮಾರು 13 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಈಗ್ಗೆ ಸುಮಾರು 15 ದಿನಗಳ ಹಿಂದೆ ನಮ್ಮ ತಾಯಿಯವರು ನಮ್ಮ ಗ್ರಾಮದ ವಕ್ಕಲಿಗ ಜನಾಂಗದ ಮದ್ದಿರೆಡ್ಡಿ ಬಿನ್ ಬೈರೆಡ್ಡಿ ರವರ ಪತ್ನಿಯಾದ ಅನಿತಾ ರವರನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಚಿಂತಾಮಣಿಗೆ ಹೋಗಲು ಮದ್ದಿರೆಡ್ಡಿ ರವರು ನಮ್ಮ ಗ್ರಾಮದ ವಾಸಿಯಾದ ಅಮಾನುಲ್ಲಾ ರವರ ಕಾರನ್ನು ಬಾಡಿಗೆಗೆ ಮಾತನಾಡಿಕೊಂಡು ನಮ್ಮ ತಾಯಿಯವರ ಜೊತೆಯಲ್ಲಿಯೇ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದಿರುತ್ತಾರೆ, ಚಿಂತಾಮಣಿಗೆ ಹೋಗಿ ಬಂದ ಕಾರಿನ ಬಾಡಿಗೆ ಹಣವನ್ನು ಇನ್ನೂ ಕೊಟ್ಟಿರುವುದಿಲ್ಲವೆಂತ ಅಮಾನುಲ್ಲಾ ನಮ್ಮ ತಾಯಿಯನ್ನು ಕೇಳುತ್ತಿದ್ದು ಅದಕ್ಕೆ ನಮ್ಮ ತಾಯಿಯವರು ಮದ್ದಿರೆಡ್ಡಿರವರ ಬಳಿ ತೆಗೆದುಕೊಳ್ಳುವಂತೆ ಅಮಾನುಲ್ಲಾರವರಿಗೆ ಹೇಳಿರುತ್ತಾರೆ. ದಿನಾಂಕ:29/08/2021 ರಂದು ಸಂಜೆ ಸುಮಾರು 7-30 ಗಂಟೆಯ ಸಮಯದಲ್ಲಿ  ನಾನು ನಮ್ಮ ತಾಯಿಯಾದ ಮುನಿರತ್ನಮ್ಮ ಹಾಗೂ ನನ್ನ ಹೆಂಡತಿಯಾದ ನಂದಿನಿ ರವರು ನಮ್ಮ  ಮನೆಯಲ್ಲಿದ್ದಾಗ  ಮದ್ದಿರೆಡ್ಡಿ ಬಿನ್ ಬೈರೆಡ್ಡಿ ಮತ್ತು ಅವರ ಮಾವನಾದ ಬೈರೆಡ್ಡಿ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ ರವರು ನಮ್ಮ ಮನೆಯ ಬಳಿ ಬಂದು ನಮ್ಮ ತಾಯಿಯವರನ್ನು ಕುರಿತು ಕೆಟ್ಟ ಮಾತುಗಳಿಂದ ಬೈಯುತ್ತಿದ್ದು ಆಗ ನಾನು ಮತ್ತು ನಮ್ಮ ತಾಯಯವರು ಮನೆಯಿಂದ ಹೊರೆಗೆ ಬಂದು ನಾನು ಮದ್ದಿರೆಡ್ಡಿರವರನ್ನು ಏಕೆ ನಮ್ಮ ತಾಯಿಯವರನ್ನು ಬೈಯುತ್ತಿರುವುದು ಎಂತ ಕೇಳಿದ್ದಕ್ಕೆ ಮದ್ದಿರೆಡ್ಡಿ ನಮ್ಮ ತಾಯಿಯವರನ್ನು ಕುರಿತು ಈ ಲೋಫರ್  ಮುಂಡೆ ನನಗೇ ಬಾಡಿಗೆ ಹಣ ಕೊಡುವಂತೆ ಹೇಳುತ್ತಾಳೆ. ಈ ಮಾದಿಗ ಮುಂಡೆದು ನಮ್ಮ ಗ್ರಾಮದಲ್ಲಿ ಜಾಸ್ತಿ ಆಯಿತು ಇವಳನ್ನು ಇಲ್ಲಿಯೇ ಮುಗಿಸಿಬಿಡುತ್ತೇನೆಂತ ಆತನ ಕೈಯಲ್ಲಿದ್ದ ದೊಣ್ಣೆಯಿಂದ ನಮ್ಮ ತಾಯಿಯನ್ನು ಹೊಡೆಯಲು ಹೋದಾಗ ನಾನು ಅಡ್ಡ ಹೋಗಿದ್ದಕ್ಕೆ ಅದೇ ದೊಣ್ಣೆಯಿಂದ ನನ್ನ ಎದೆ ಸೊಂಟಕ್ಕೆ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ಅಷ್ಟರಲ್ಲಿ ಮದ್ದಿರೆಡ್ಡಿರವರ ಮಾವ ಬೈರೆಡ್ಡಿ ಕಲ್ಲುಗಳಿಂದ ನಮ್ಮ ಮನೆಯ ಗೋಡೆಗೆ ಹಾಕಿ ಈ ಮಾದಿಗ ನನ್ನ ಮಕ್ಕಳನ್ನು ಊರಿನಲ್ಲಿ ಇಡಲು ಬಿಡಬಾರದು ಎಂತ ಹೇಳಿ ಕೈಗಳಿಂದ ನನ್ನನ್ನು ಹೊಡೆದು ನನ್ನನ್ನು ಬಿಗಿಯಾಗಿ ತಬ್ಬಿ ಹಿಡಿದುಕೊಂಡಿದ್ದು ಮದ್ದಿರೆಡ್ಡಿ ಬಂದು ನನ್ನನ್ನು ಕಾಲಿನಿಂದ ಒದ್ದು ನನ್ನ ಬಲಕಿವಿಯನ್ನು ಕಚ್ಚಿದ್ದು ನನ್ನ ಕಿವಿಯ ಕೆಳಭಾಗ ತುಂಡಾಗಿ ಕೆಳಗೆ ಬಿದ್ದಿರುತ್ತೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮದ್ದಿರೆಡ್ಡಿ ರವರ ತಂದೆ ಬೈರೆಡ್ಡಿ ಬಿನ್ ಲೇಟ್ ಸುಬ್ಬಣ್ಣ ರವರು ನನ್ನನ್ನು ಕೆಳಕ್ಕೆ ತಳ್ಳಿ ಎಳೆದಾಡಿದ್ದು ನನ್ನ ಎರಡೂ ಮೊಣಕಾಲುಗಳಿಗೆ ತರಚಿದ ಗಾಯಗಳಾರುತ್ತೆ. ನಂತರ ಮೂರು ಜನರು ಸೇರಿ ನಮ್ಮನ್ನು ಕುರಿತು ಇನ್ನು ಮುಂದೆ ಬಾಡಿಗೆ ಹಣ ಕೊಡುವಂತೆ ಹೇಳಿದರೆ ನಿಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ಅಲ್ಲಿಯೇ  ಇದ್ದ ನಮ್ಮ ಗ್ರಾಮದ ವೆಂಕಟೇಶಪ್ಪ ಬಿನ್ ತಲಕಾಯಲಕೊಂಡ ವೆಂಕಟರಾಯಪ್ಪರವರು ಹಾಗೂ ವೆಂಕಟೇಶ್ ಬಿನ್ ತಿಮ್ಮಣ್ಣ, ನರಸಿಂಹಪ್ಪ ಬಿನ್ ನಾಗಪ್ಪರವರು ಅಡ್ಡ ಬಂದು ಅವರಿಂದ ನಮ್ಮನ್ನು ಬಿಡಿಸಿ ಗಾಯಗೊಂಡಿದ್ದ ನಮ್ಮನ್ನು ಉಪಚರಿಸಿದ್ದು ನಂತರ ನಮ್ಮ ತಂದೆಯವರು ಬಂದು 108 ಅಂಬ್ಯುಲೆನ್ಸ್ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಪಡಿಸಿರುತ್ತಾರೆ. ಆದ್ದರಿಂದ ನಮ್ಮ ಮೇಲೆ ಗಲಾಟೆ ಮಾಡಿ ಹೊಡೆದು ಜಾತಿ  ಬಗ್ಗೆ ಬೈದು ಪ್ರಾಣಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂಖ್ಯೆ:121/2021 ಕಲಂ:323,324,325,504,506 ರೆ-ವಿ 34 ಐ.ಪಿ.ಸಿ ಮತ್ತು ಕಲಂ:3(1)(r),3(1)(s), 3(1)(zc), 3(2)(va) SC-ST POA  ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

13. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.208/2021 ಕಲಂ. 506,307 ಐ.ಪಿ.ಸಿ:-

     ದಿನಾಂಕ:30/08/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಶ್ರೀ ನಾಗಪ್ಪ ಬಿನ್ ಲೇಟ್ ಗುರ್ರಪ್ಪ, 72 ವರ್ಷ, ಭೋವಿ ಜನಾಂಗ, ಜಿರಾಯ್ತಿ ವಾಸ ನರಸಾಪುರ ಗ್ರಾಮ, ಡಿ ಪಾಳ್ಯ ಹೋಬಳಿ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನಗೂ ಮತ್ತು ತನ್ನ ಪತ್ನಿಯಾದ ನಂಜಮ್ಮನವರಿಗೆ, ಇಬ್ಬರು ಮಕ್ಕಳಿದ್ದು ಮೊದಲನೇ ಅಶ್ವತ್ಥಪ್ಪ 40 ವರ್ಷ ಗಂಡು ಮಗನು, ಎರಡನೇ 37 ವರ್ಷದ ಲಕ್ಷ್ಮೀ ಎಂಬು ಹೆಣ್ಣು ಮಗಳು ಇರುತ್ತಾರೆ, ತನ್ನ ಮಗಳಾದ ಲಕ್ಷ್ಮೀಯನ್ನು ನಮ್ಮ ಗ್ರಾಮದ ವೆಂಕಟೇಶಪ್ಪ ಎಂಬುವರಿಗೆ ಕೊಟ್ಟು ಮಧುವೆ ಮಾಡಿದ್ದು ಆಕೆಯು ತನ್ನ ಗಂಡನೊಂದಿಗೆ ಅವರ ಮನೆಯಲ್ಲಿರುತ್ತಾರೆ, ತನ್ನ ಮಗನಿಗೆ ಬಾಗೇಪಲ್ಲಿ ತಾಲ್ಲೂಕಿನ ಆದೆಪಲ್ಲಿ ಗ್ರಾಮದ ವಾಸಿ ಸುನೀತಾ ರವರೊಂದಿಗೆ ಮಧುವೆ ಮಾಡಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಇರುತ್ತೆ. ತಾನು ಮತ್ತು ತನ್ನ ಹೆಂಡತಿಯು ತನ್ನ ಮಗ ಅಶ್ವತಪ್ಪ್ಥ ರವರ ಜೋತೆ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ತನ್ನ ಮಗಳಾದ ಲಕ್ಷ್ಮೀರವರು ತನ್ನ ತಮ್ಮ ತಿಮ್ಮಪ್ಪ ರವರಿಂದ ಅರ್ಧ ಎಕರೆ ಜಮೀನನ್ನು ಖರೀದಿಸಲು ಮುಂಗಡವಾಗಿ ಸ್ವಲ್ಪ ಹಣವನ್ನು ಕೊಟ್ಟು ಈಗ್ಗೆ ಸುಮಾರು 15 ದಿನಗಳ ಹಿಂದೆ ಸದರಿ ಜಮೀನನ್ನು ನೊಂದಣಿ ಮಾಡಿಕೊಳ್ಳಲು ಗೌರೀಬಿದನೂರು ಸಬ್ ರಿಜಿಸ್ಟರ್ ಕಚೇರಿಗೆ ಬಂದಿದ್ದೆವು, ಆ ಸಮಯದಲ್ಲಿ ಸದರಿ ಜಮೀನು ತಕರಾರು ಇದ್ದರಿಂದ ತನ್ನ ಮಗಳ ಹೆಸರಿಗೆ ನೋಂದಣಿ ಮಾಡಿಸಲು ಆಗಿರಲಿಲ್ಲ. ತನಗೆ ನಮ್ಮ ಗ್ರಾಮದ ಸರ್ವೆ ನಂಬರಿನಲ್ಲಿ ಸುಮಾರು 4 ಎಕರೆ ಜಮೀನು ಇದ್ದು ಈ ಜಮೀನನ್ನು ತನ್ನ ಮಗಳಾದ ಲಕ್ಷ್ಮೀಗೆ ಅರ್ಧ ಎಕರೆ ಜಮೀನನ್ನು ತನ್ನ ಮಗಳ ಹೆಸರಿಗೆ ನೋಂದಣಿ ಮಾಡಲು ನಿರ್ಧಾರ ಮಾಡಿದೆವು, ಈ ವಿಚಾರ ತನ್ನ ಮಗನಾದ ಅಶ್ವತ್ಥಪ್ಪನಿಗೆ ತಿಳಿದು ಎರಡು ಮೂರು ಬಾರಿ ತನ್ನ ಮತ್ತು ತನ್ನ ಹೆಂಡತಿ ಮೇಲೆ ಗಲಾಟೆ ಮಾಡಿ ಹೊಡೆದು ಈ ಜಮೀನಿನಲ್ಲಿ ಲಕ್ಷ್ಮೀಗೆ ಭಾಗ ಕೊಟ್ಟರೆ ನಿಮ್ಮನ್ನು ಸಾಯಿಸಿಬಿಡುತ್ತೇನೆಂದು ನಮಗೆ ಬೆದರಿಕೆ ಹಾಕಿ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದ, ಈ ದಿನ ದಿನಾಂಕ: 30/08/2021 ರಂದು ತಾನು ನಮ್ಮ ಜಮೀನಿನಲ್ಲಿ ಬೆಳೆದಿರುವ ಟೊಮಟಾ ಹಣ್ಣು ಬಿಡಿಸಲು ಕೂಲಿ ಆಳುಗಳನ್ನು ಕರೆದುಕೊಂಡು ಬರಲು ಸೂರ್ಯನಾಯಕನಹಳ್ಳಿಗೆ ಹೋಗಿದ್ದೆನು. ತನ್ನ ಹೆಂಡತಿ ನಂಜಮ್ಮ ರವರು ಟೊಮಟಾಗಳನ್ನು ಬಿಡಿಸಲು ನಮ್ಮ ಜಮೀನಿನ ಹತ್ತಿರ ಹೋಗಿದ್ದಳು. ತಾನು ಸೂರ್ಯನಾಯಕನಹಳ್ಳಿಯಿಂದ ಮನೆಗೆ ಬಂದಿದ್ದಾಗ ತನ್ನ ಸಂಬಂಧಿಯಾದ ಶಂಕರ ಎಂಬುವನು ಬಂದು ನಿಮ್ಮ ಮಗ ಅಶ್ವತ್ಥಪ್ಪನು ತೋಟದ ಜಮೀನಿನ ಬಳಿ ಇದ್ದ ನಿಮ್ಮ ಹೆಂಡತಿ ನಂಜಮ್ಮನವರಿಗೆ ಹೊಡೆದು ರಕ್ತಗಾಯಗಳನ್ನುಂಟು ಮಾಡಿರುವುದಾಗಿ ತಿಳಿಸಿದನು ಆ ಸಮಯದಲ್ಲಿ ನಮ್ಮ ತೋಟದ ಕಡೆಯಿಂದ ನಮ್ಮ ಊರಿನ ಅಶ್ವತ್ಥನಾರಾಯಣ ಬಿನ್ ಗಂಗಾಧರ, ಗಂಗರಾಜು, ಮತ್ತು ಮಂಜು ರವರು ತನ್ನ ಹೆಂಡತಿಯನ್ನು ಯಾವುದೋ ಆಟೋದಲ್ಲಿ ಕರೆದುಕೊಂಡು ಬರುತ್ತಿದ್ದರು. ತಾನು ಆಟೋ ನಿಲ್ಲಿಸಿ ನೋಡಲಾಗಿ ತನ್ನ ಹೆಂಡತಿಯ ತಲೆಗೆ, ಹಣೆಗೆ ರಕ್ತಗಾಯವಾಗಿ ಎಡ ಕೈ ಮುರಿದಿತ್ತು. ತನ್ನ ಹೆಂಡತಿ ನಂಜಮ್ಮ ರವರನ್ನು ವಿಚಾರ ಮಾಡಲಾಗಿ ಆಕೆಯು ತಿಳಿಸಿದ್ದೇನೆಂದರೆ, ತಾನು ಈ ದಿನ ಬೆಳಿಗ್ಗೆ ಸುಮಾರು 9-00 ಗಂಟೆಯಲ್ಲಿ ತೋಟದಲ್ಲಿ ಟೊಮಟೋ ಬಿಡಿಸುತ್ತಿದ್ದಾಗ ಅಲ್ಲಿಗೆ ಬಂದ ತನ್ನ ಮಗ ಅಶ್ವತ್ಥಪ್ಪನು ನೀನು ಈ ಜಮೀನಿನಲ್ಲಿ ಲಕ್ಷ್ಮೀಗೆ ಭಾಗ ಕೊಡಬಾರದು ಮತ್ತು  ನೀವು ಜಮಿನಿನ ಕಡೆ ಬಂದರೆ ಕೊಲೆ ಮಾಡುತ್ತೇನೆಂದು ಹೇಳಿ ಒಂದು ದೊಣ್ಣೆಯಿಂದ ತನ್ನ ಎಡಕೈಗೆ ಮೂಳೆ ಮುರಿದು ಹೋಗುವಂತೆ ಹೊಡೆದನು,  ಆ ಸಮಯದಲ್ಲಿ ತಾನು ಅವನೊಂದಿಗೆ ಮಾತನಾಡುತ್ತಿದ್ದಾಗ,  ಅಲ್ಲಿಯೇ ಇದ್ದ ಒಂದು ಗಡಾರಿಯನ್ನು ಎತ್ತಿಕೊಂಡು ಬಂದು ತನ್ನ ತಲೆಗೆ ಮತ್ತು ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಈ ಸಮಯದಲ್ಲಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗಂಗರಾಜಮ್ಮ ಮತ್ತು ಶಿವಮ್ಮ ರವರು ನೋಡಿ ಗಲಾಟೆಯನ್ನು ಬಿಡಿಸಲು ಬಂದಾಗ ಅವರ ಮೇಲೆಯೂ ಸಹಾ ಗಲಾಟೆ ಮಾಡಿ ನಮ್ಮ ಮನೆಯ ವಿಚಾರಕ್ಕೆ ನೀವ್ಯಾರು ಬರುವುದಕ್ಕೆ ಎಂದು ಹೇಳಿ ಅವರನ್ನು ಅಲ್ಲಿಂದ ಓಡಿಸಿದನೆಂದು ತಿಳಿಸಿದಳು, ನಂತರ ತಾನು ನನ್ನ ಹೆಂಡತಿಯನ್ನು ಚಿಕಿತ್ಸೆಗಾಗಿ ನಮ್ಮ ಗ್ರಾಮದ ಅಶ್ವತ್ಥ ನಾರಾಯಣ ಬಿನ್ ಗಂಗಾಧರಪ್ಪ, ಗಂಗರಾಜು ಮತ್ತು ಮಂಜು ರವರೊಂದಿಗೆ ತೆಗೆದುಕೊಂಡು ಬಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ತಲೆಗೆ ಪೆಟ್ಟಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದರು. ತನ್ನ ಮಗಳಾದ ಲಕ್ಷ್ಮೀ ರವರು ತನ್ನ ಪತ್ನಿಯನ್ನು ನಿಮಾನ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ತನ್ನ ಮಗಳಾದ ಲಕ್ಷ್ಮೀಗೆ ಜಮೀನಿನಲ್ಲಿ ಭಾಗ ಕೊಡುವ ವಿಚಾರದಲ್ಲಿ ದ್ವೇಷ ಇಟ್ಟುಕೊಂಡು ನನ್ನ ಹೆಂಡತಿಯನ್ನು ಕೊಲೆ ಮಾಡಲು ಪ್ರಯತ್ನಿಸಿರುವ ನನ್ನ ಮಗ ಅಶ್ವತ್ಥಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ.

 

14. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:30/08/2021 ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿ.ಸಿ -318 ರವರು  ಎನ್ ಸಿ. ಆರ್ 190/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯದ ಆದೇಶವನ್ನು ತಂದು ಹಾಜರ್ ಪಡಿಸಿದರ ಸಾರಾಮಶವೆನೆಂದರೆ ದಿ:24/08/2021 ರಂದು  ಸಂಜೆ 6-15 ಗಂಟೆಗೆ ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ ನೀಡಿದ ದೂರಿನ ಸಂಬಂದ ಏನೆಂದರೆ ದಿ:24/08/2021 ರಂದು ಸಂಜೆ 4-30 ಗಂಟೆಯಲ್ಲಿ ತಾನು ಠಾಣಾ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ.-40.ಜಿ-281 ಜೀಪ್ನಲ್ಲಿ  ಚಾಲಕನಾದ ಎಪಿಸಿ-76. ಹರೀಶ, ಠಾಣಾ ಸಿಬ್ಬಂದಿಯಾದ ಪಿ.ಸಿ.102.ಪ್ರತಾಪಕುಮಾರ ರವರೊಂದಿಗೆ ಗೌರಿಬಿದನೂರು ನಗರದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಪಿ.ಸಿ-282 ಶ್ರೀ.ರಮೇಶ್ ರವರು ಪೋನ್ ಮಾಡಿ ಗೌರಿಬಿದನೂರು ನಗರ ಪೊಲೀಸ್ ಠಾಣಾ ಸರಹದ್ದಿನ, ನ್ಯಾಷನಲ್ ಕಾಲೇಜು ವೃತ್ತದ, ಆಟೋ ನಿಲ್ದಾಣದ ಬಳಿಯ  ಸಾರ್ವಜನಿಕ ರಸ್ತೆಯ  ಪಕ್ಕದಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಜೀಪ್ ಚಾಲಕ ಎಪಿಸಿ-76.ಹರೀಶ, ಪಿ.ಸಿ-102.ಪ್ರತಾಪ ರವರೊಂದಿಗೆ ಸಂಗೋಳ್ಳಿರಾಯಣ್ಣ ವೃತ್ತದ ಬಿಳಿಗೆ ಈದಿನ ದಿ:24/08/2021 ರಂದು ಸಂಜೆ 4-40 ಗಂಟೆಗೆ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಮತ್ತು ಮೇಲ್ಕಂಡ ಸಿಬ್ಬಂದಿಯನ್ನು  ತಮ್ಮ ಜೀಪ್ ನಲ್ಲಿ  ಕರೆದುಕೊಂಡು ಈದಿನ ದಿ:24/08/2021 ರಂದು ಸಂಜೆ 4-45 ಗಂಟೆಗೆ ನ್ಯಾಷನಲ್ ಕಾಲೇಜು ವೃತ್ತದ, ಆಟೋ ನಿಲ್ದಾಣದ ಬಳಿಯ  ಸಾರ್ವಜನಿಕ ರಸ್ತೆಯ  ಪಕ್ಕದಲ್ಲಿಗೆ ಬಂದು ಮರೆಯಲ್ಲಿ ಜೀಪನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ನ್ಯಾಷನಲ್ ಕಾಲೇಜು ವೃತ್ತದ, ಆಟೋ ನಿಲ್ದಾಣದ ಬಳಿಯ  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟು ಮಧ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿದ್ದ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ  ತಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಸರಬರಾಜು ಮಾಡುತ್ತಾ, ಸ್ಥಳವಕಾಶವನ್ನು  ಮಾಡಿಕೊಟ್ಟಿದ್ದ ಅಸಾಮಿಯನ್ನು ಹಿಡಿದು ಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀ.ಆರ್.ನರೇಶ ಬಿನ್ ಲೇಟ್ ರಾಮಾಂಜಿನಪ್ಪ,  ಸುಮಾರು 27 ವರ್ಷ, ಆದಿ ಕರ್ನಾಟಕ ಜನಾಂಗ, ಆಟೋ ಡ್ರೈವರ್ ಕೆಲಸ, ವಾಸ ಕುಡಮಲಕುಂಟೆ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು, ಮೊಬೈಲ್ ನಂ.8861328432 ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಮದ್ಯವನ್ನು ಸರಬರಾಜು ಮಾಡುತ್ತಿರುವುದಕ್ಕೆ  ಸಂಬಂಧಪಟ್ಟಂತೆ ಯಾವು ದಾದರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1] ಹೈವಾರ್ಡ್ಸ್  ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಮದ್ಯವಿರುವ 16 ಟೆಟ್ರಾ ಪಾಕೇಟುಗಳು, ಇವುಗಳ ಒಟ್ಟು ಮೌಲ್ಯ 562-08/-ರೂಗಳು, ಮಧ್ಯದ ಪ್ರಮಾಣವನ್ನು  ಲೆಕ್ಕ ಮಾಡಲಾಗಿ ಒಟ್ಟು ಸಾಮಥ್ರ್ಯ 01 ಲೀಟರ್ 440 ಎಂ.ಎಲ್ ಆಗಿರುತ್ತೆ.  2] ಹೈವಾರ್ಡ್ಸ್  ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಖಾಲಿ 04 ಟೆಟ್ರಾ ಪಾಕೇಟಗಳು. 3] ಮದ್ಯವನ್ನು ಕುಡಿದು ಬಿಸಾಕಿದಂತಹ 04 ಖಾಲಿ  ಪ್ಲಾಸ್ಟಿಕ್ ಗ್ಲಾಸುಗಳು ಮತ್ತು 4] 01 ಲೀಟರ್ ಸಾಮರ್ಥ್ಯದ ಒಂದು ಖಾಲಿ  ಪ್ಲಾಸ್ಟಿಕ್ ವಾಟರ್ ಬಾಟೆಲ್ ಇದ್ದು ಇವುಗಳನ್ನು ಸಂಜೆ 4-50  ಗಂಟೆಯಿಂದ ಸಂಜೆ 5-35 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಮೇಲ್ಕಂಡ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಸಂಜೆ 5-45 ಗಂಟೆಗೆ ಬಂದು ಸಂಜೆ  6-15 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯನ್ನು  ನಿಮ್ಮ ಮುಂದೆ ಹಾಜರ್ಪಡಿಸುತ್ತಿದ್ದು ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ  ಠಾಣಾಧಿಕಾದಿಕಾರಿಗಳಾದ ನಿಮಗೆ ಸೂಚಿರುತ್ತೆಂತ ನೀಡಿದ ದೂರು ವರದಿಯಾಗಿದ್ದು, ಈ ದೂರು ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್.ನಂ.190/2021 ರೀತ್ಯಾ  ದಾಖಲಿಸಿಕೊಂಡು ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡು ಈ ದಿನ ಘನ ನ್ಯಾಯಾಲಯದ ಆದೇಶವನ್ನು ಪಡೆದುಕೊಂಡು ಠಾಣಾ ಮೊ,ಸಂ;126/2021 ಕಲಂ 15(ಎ)32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

15. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿ:30/08/2021 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿಪಿಸಿ-318.ಶ್ರೀ.ದೇವರಾಜ ರವರು ಠಾಣಾ ಎನ್.ಸಿ.ಆರ್.ನಂ.194/2021 ರಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್  ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಕೋರಿ ಈಗಾಗಲೇ  ಅಸಲು ಎನ್.ಸಿ.ಆರ್.194/2021 ಹಾಗೂ  ಪಿರ್ಯಾದಿದಾರರ  ಅಸಲು-ದೂರು ವರದಿಯೊಂದಿಗೆ  ಸಲ್ಲಿಸಿಕೊಂಡಿದ್ದ  ಮನವಿಯ ವಿಚಾರದಲ್ಲಿ  ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವ  ಆದೇಶವನ್ನು ತಂದು ಠಾಣೆಯಲ್ಲಿ ನನ್ನ ಬಳಿ ಹಾಜರ್ಪಡಿಸಿದ್ದನ್ನು ಪಡೆದುಕೊಂಡಿದ್ದು ಎನ್.ಸಿ.ಆರ್.194/2021 ದೂರು ವರದಿಗೆ ಸಂಬಂಧಿಸಿದ  ವಿಚಾರವೇನೆಂದರೆ ದಿ:25/08/2021 ರಂದು  ಸಂಜೆ 6-40 ಗಂಟೆಗೆ ಶ್ರೀ.ಲೋಕೇಶ್, ಹೆಚ್.ಸಿ.214, ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ  ಹಾಜರಾಗಿ  ಶ್ರೀ.ಲೋಕೇಶ್, ಸಿ.ಹೆಚ್.ಸಿ-214, ಗೌರಿಬಿದನೂರು ನಗರ ಠಾಣೆ ಆದ ತಾನು ಗುಪ್ತ ಮಾಹಿತಿಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ದಿ:25/08/2021 ರಂದು  ನಮ್ಮ ಪಿ.ಎಸ್.ಐ ಸಾಹೇಬರಾದ ಶ್ರೀ.ಕೆ.ಪ್ರಸನ್ನಕುಮಾರ್ ರವರು ತನಗೆ ಠಾಣಾ ಸರಹದ್ದಿನಲ್ಲಿ  ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕಾನೂನು ಕ್ರಮ ಜರುಗಿಸುವ ಬಗ್ಗೆ ಸೂಚನೆಗಳನ್ನು ನೀಡಿ ನೇಮಕ ಮಾಡಿದ್ದು  ಅದರಂತೆ  ತಾನು  ಗೌರಿಬಿದನೂರು ನಗರದಲ್ಲಿ  ಗಸ್ತು ಮಾಡುತ್ತಿದ್ದಾಗ  ಈದಿನ ದಿ:25/08/2021 ರಂದು ಸಂಜೆ 5-00 ಗಂಟೆಯಲ್ಲಿ  ತನಗೆ  ಗೌರಿಬಿದನೂರು ನಗರದ, ಎನ್.ಆರ್.ವೃತ್ತದ ಬಳಿಯ, ವಿದುರಾಶ್ವಥ ಕಡೆ ಹೋಗುವ ಆಟೋ ನಿಲ್ದಾಣದ ಬಳಿಯ  ಸಾರ್ವಜನಿಕರ  ರಸ್ತೆಯ ಪಕ್ಕದಲ್ಲಿ   ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶವನ್ನು ಮಾಡಿಕೊಟ್ಟು ಮಧ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ  ತಾನು ನಮ್ಮ ಪಿ.ಎಸ್.ಐ ರವರಿಗೆ ಮಾಹಿತಿಯನ್ನು ನೀಡಿ  ಅವರ ಮಾರ್ಗದರ್ಶನದಂತೆ ಠಾಣೆಯ ಹೆಚ್.ಸಿ.213. ಶಿವಣ್ಣ ಮತ್ತು ಪಿ.ಸಿ.507.ಹನುಮಂತರಾಯಪ್ಪ ರವರೊಂದಿಗೆ ಬೆಂಗಳೂರು ವೃತ್ತದ ಬಳಿಯ ಆಟೋ ನಿಲ್ದಾಣದ ಬಳಿಗೆ  ಈದಿನ ದಿ:25/08/2021 ರಂದು ಸಂಜೆ 5-10 ಗಂಟೆಗೆ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಮತ್ತು ಮೇಲ್ಕಂಡ ಸಿಬ್ಬಂದಿಯನ್ನು  ತನ್ನ ಜೊತೆ  ಕರೆದುಕೊಂಡು ಈದಿನ ದಿ:25/08/2021 ರಂದು ಸಂಜೆ 5-15 ಗಂಟೆಗೆ ಗೌರಿಬಿದನೂರು ನಗರದ, ಎನ್.ಆರ್.ವೃತ್ತದ ಬಳಿಯ,  ವಿದುರಾಶ್ವಥ ಕಡೆ ಹೋಗುವ ಆಟೋ ನಿಲ್ದಾಣದ ಬಳಿಗೆ ಬಂದು ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಗೌರಿಬಿದನೂರು ನಗರದ, ಎನ್.ಆರ್.ವೃತ್ತದ ಬಳಿಯ,  ವಿದುರಾಶ್ವಥ ಕಡೆ ಹೋಗುವ ಆಟೋ ನಿಲ್ದಾಣದ ಬಳಿ  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟು ಮಧ್ಯವನ್ನು ಮಾರಾಟ ಮಾಡುತ್ತಿದ್ದು ಅಲ್ಲಿದ್ದ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಖಚಿತಪಟ್ಟಿದ್ದು ಕೂಡಲೇ ಪಂಚರ ಸಮಕ್ಷಮ  ತಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಮಾರಾಟ ಮಾಡುತ್ತಾ, ಸ್ಥಳವಕಾಶವನ್ನು  ಮಾಡಿಕೊಟ್ಟಿದ್ದ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀ. ರಾಮಾಂಜಿನಚಾರಿ @ ರಾಮಾಂಜಿ ಬಿನ್ ಲೇಟ್ ನಂಜುಂಡಚಾರಿ,  ಸುಮಾರು 65 ವರ್ಷ, ವಿಶ್ವಕರ್ಮ ಜನಾಂಗ, ಹೋಟೆಲ್ ವ್ಯಾಪಾರ, ವಾಸ ಹಾಲಗಾನಹಳ್ಳಿ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು, ಮೊಬೈಲ್ ನಂ.9731029452  ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಮದ್ಯವನ್ನು ಸರಬರಾಜು ಮಾಡುತ್ತಿರುವುದಕ್ಕೆ  ಸಂಬಂಧಪಟ್ಟಂತೆ ಯಾವುದಾದರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಪರಿಶೀಲನೆ ಮಾಡಲಾಗಿ 1] ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಮದ್ಯವಿರುವ 16 ಟೆಟ್ರಾ ಪಾಕೇಟುಗಳು, ಇವುಗಳ ಒಟ್ಟು ಮೌಲ್ಯ 562-08/-ರೂಗಳು, ಮಧ್ಯದ ಪ್ರಮಾಣವನ್ನು  ಲೆಕ್ಕ ಮಾಡಲಾಗಿ ಒಟ್ಟು ಸಾಮರ್ಥ್ಯ 01 ಲೀಟರ್ 440 ಎಂ.ಎಲ್ ಆಗಿರುತ್ತೆ.  2] ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಖಾಲಿ 04 ಟೆಟ್ರಾ ಪಾಕೇಟುಗಳು. 3] ಮದ್ಯವನ್ನು ಕುಡಿದು ಬಿಸಾಕಿದಂತಹ 04 ಖಾಲಿ  ಪ್ಲಾಸ್ಟಿಕ್   ಗ್ಲಾಸುಗಳು ಮತ್ತು 4] 01 ಲೀಟರ್ ಸಾಮರ್ಥ್ಯದ ಒಂದು ಖಾಲಿ  ಪ್ಲಾಸ್ಟಿಕ್ ವಾಟರ್ ಬಾಟೆಲ್ ಇದ್ದು ಇವುಗಳನ್ನು ಸಂಜೆ 5-20  ಗಂಟೆಯಿಂದ ಸಂಜೆ 6-20 ಗಂಟೆಯವರೆಗೆ ಪಂಚನಾಮೆಯನ್ನು  ಜರುಗಿಸಿ ಮೇಲ್ಕಂಡ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಸಂಜೆ 6-25 ಗಂಟೆಗೆ ಬಂದು ಸಂಜೆ  6-40 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯನ್ನು  ತಮ್ಮ ಮುಂದೆ ಹಾಜರ್ಪಡಿಸುತ್ತಿದ್ದು ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ  ನೀಡಿದ ದೂರು ವರದಿಯಾಗಿದ್ದು, ಈ ದೂರು ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್.ನಂ.194/2021 ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತೆ. ನಂತರ ಠಾಣೆಯ  ಎನ್.ಸಿ.ಆರ್.ನಂ.194/2021 ರಲ್ಲಿನ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳುವ ಸಲುವಾಗಿ ಅನುಮತಿಯನ್ನು  ನೀಡಲು ಕೋರಿ ಘನ ನ್ಯಾಯಾಲಯಕ್ಕೆ  ವರದಿಯನ್ನು ನಿವೇದಿಸಿಕೊಂಡಿದ್ದು, ಈ ಸಂಬಂಧ ಘನ  ನ್ಯಾಯಾಲಯವು  ಆರೋಪಿಯ ವಿರುದ್ದ  ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿರುವ ಅದೇಶವನ್ನು  ದಿ:30/08/2021 ರಂದು ಪಡೆದುಕೊಂಡು ಅರೋಪಿಯ ವಿರುದ್ದ ಠಾಣೆಯಲ್ಲಿ  ಮೊ.ಸಂ.127/2021 ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

16. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.203/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:31-08-2021 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಪ್ಪನ್ನ ಬಿನ್ ನಾಗಪ್ಪ 48 ವರ್ಷ ಬಲಜಿಗರು ಕೂಲಿ ಕೆಲಸ ವಾಸ - ಬುಶೆಟ್ಟಿಹಳ್ಳಿ ಗ್ರಾಮ ಮಂಡಿಕಲ್ಲು ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು.9900564003,7619446628 ರವರು ನೀಡಿದ ಲಿಖಿತ ದೂರಿನ ಸಾರಾಂಶವೆಂದರೆ, ದಿನಾಂಕ:28-08-2021 ರಂದು ಸಂಜೆ ಸುಮಾರು 07-00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಬಯ್ಯಣ್ಣ ರವರಿಗೆ ಯಾರೋ ದೂರವಾಣಿ ಕರೆಮಾಡಿ ಬಂಡಹಳ್ಳಿ ಕ್ರಾಸ್ ಬಳಿ ಬೆಂಗಳೂರು ಕಡೆಯಿಂದ ಹೈದ್ರಾಬಾದ್ ಕಡೆಗೆ ಹುಗುವಾಗ ಎನ್ ಎಚ್ -44 ರಸ್ತೆಯಲ್ಲಿ ತನ್ನ ಮಗನಾದ ವಿನಯ್ ಗೆ ಅಪಘಾತ ವಾಗಿರುವುದಾಗಿ ಮಾಹಿತಿ ಬಂದಿದ್ದು  ಸದರಿ ವಿಚಾರವನ್ನು  ತನ್ನ ತಮ್ಮ ಬಯ್ಯಣ್ಣ ತನಗೆ ತಿಳಿಸಿದ್ದು ಆ ಸಮಯದಲ್ಲಿ ತಾನು ತಮಿಳುನಾಡಿನ ತಿರುನಲ್ಲರ್ ಶನೇಶ್ವರ ದೇವಾಲಯಕ್ಕೆ ಹೋಗಿದ್ದು ಆಗ ತನ್ನ ತಮ್ಮನಿಗೆ ಸ್ಥಳಕ್ಕೆ ಹೋಗಲು ತಿಳಿಸಿದ್ದು , ತನ್ನ ತಮ್ಮ ಬಯಣ್ಣ ಮತ್ತು ತನ್ನ ಹೆಂಡತಿ ರತ್ನಮ್ಮ ರವರು ಕೂಡಲೇ ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದು ಅಲ್ಲಿ ನೋಡಲಾಗಿ  ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಗೆ ಆಂಬುಲೇನ್ಸ್ ನಲ್ಲಿ ಕರೆದುಕೊಂಡು ಹೋಗಿರುವುದಾಗಿ ವಿಚಾರ ತಿಳಿದುಕೊಂಡು ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಿದ್ದು ಅಪಘಾತ ಆಗಿರುವುದು ನಿಜವಾಗಿರುತ್ತೆಂದು  ತಿಳಿಸಿದರು, ದಿನಾಂಕ:28-08-2021 ರಂದು ತನ್ನ ಮಗ ಸಾಯಿ ವಿನಯ್ ಕುಮಾರ್ ಮತ್ತು ಆತನ ಸ್ನೇಹಿತನಾದಂತಹ ಆದರ್ಶ ರವರು ಆದರ್ಶನ ಬಾಬತ್ತು KA-40-ED-7507 ನೊಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಗಂಗರೇಕಾಲುವೆಗೆ ಹೋಗಿ ವಾಪಸ್ಸು ಗ್ರಾಮಕ್ಕೆ ಬರಲು ಬರುತ್ತಿದ್ದಾಗ ಬಂಡಹಳ್ಳಿ ಕ್ರಾಸ್ NH -44  ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಹೈದರಾಬಾದ್ ಕಡೆಗಿನ ರಸ್ತೆಯಲ್ಲಿ ಆದರ್ಶ ರವರು ದ್ವಿಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ರಸ್ತೆ ಯನ್ನು ದಾಟುತ್ತಿದ್ದ ಪಾದಚಾರಿ ಮುಕ್ತಾದೀರ್ ರೆಹಮಾನ್ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ದ್ವಿಚಕ್ರ ವಾಹನದ ಹಿಂಭಾಗದಲ್ಲಿದ್ದ ತನ್ನ ಮಗ ಸಾಯಿ ವಿನಯ್ ಕುಮಾರ್ ಗೆ ತಲೆ ಹಿಂಬಾಗಕ್ಕೆ ರಕ್ತ ಗಾಯ ವಾಗಿದ್ದು ಮೈ ಮೇಲೆ ತರಚಿದ ಗಾಯಗಳಾಗಿರುತ್ತೆ, ಪಾದಾಚಾರಿ ಮಕ್ತಾದೀರ್ ರೆಹಮಾನ್ ಗೆ ಎಡಗಣ್ಣಿನ ಹುಬ್ಬಿನ ಮೇಲೆ ಮತ್ತು ತುಟಿಗೆ ರಕ್ತಗಾಯ ವಾಗಿರುತ್ತೆಂದು ತನ್ನ ತಮ್ಮ ಬಯ್ಯಣ್ಣ ತನಗೆ ಚಿವಾರ ತಿಳಿಸಿದರು ತನ್ನ ಮಗನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಯಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಗಾಗಿ ದಾಖಲಿಸಿ ನಂತರ ಅಲ್ಲಿಂದ ಸೆಂಡ್ ಜಾನ್ಸ್ ಆಸ್ಪತ್ರೆ ಯಲ್ಲಿ ಆ ನಂತರ ಬಸವನ ಗುಡಿ ಖಾಸಗಿ ಆಸ್ಪತ್ರೆ ಯಲ್ಲಿ ಈಗ ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆಯುತ್ತಿದ್ದು ತನ್ನ ಮಗನನ್ನು ತೀವ್ರ ನಿಗಾ ಘಟಕದಲ್ಲಿಟ್ಟಿರುತ್ತಾರೆ. ಈ ಅಪಘಾತಕ್ಕೆ KA-40-ED-7507  ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರನಾದ ಆದರ್ಶ ರವರ ಅತಿ ವೇಗೆ ಮತ್ತು ಅಜಾಗರುಕತೆ ಚಾಲನೆ ಕಾರಣ ವಾಗಿದ್ದು ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿದೆ, ತಾನು ತನ್ನ ಮಗನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದರಿಂದ ತಡವಾಗಿ ಬಂದು ದೂರನ್ನು ನೀಡಿರುತ್ತೆನೆ.

 

17. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.152/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:30/08/2021 ರಂದು ಠಾಣಾ ಹೆಚ್.ಸಿ.137 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:28/08/2021 ರಂದು ಮಾನ್ಯ ಸಿಪಿಐ ಗೌರಿಬಿದನೂರು ವೃತ್ತ ರವರು ಮಾಲು, ಆರೋಪಿತರು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:28/08/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ವೃತ್ತ ಕಛೇರಿಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ಬಿ.ಬೊಮ್ಮಸಂದ್ರ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಗೌರಿಬಿದನೂರು ನಗರ ಠಾಣೆಯ ಪಿ.ಎಸ್.ಐ ಪ್ರಸನ್ನಕುಮಾರ್ ರವರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ.244 ಗೋಪಿನಾಥ  ಹೆಚ್.ಸಿ.214, ಲೋಕೇಶ್, ಹೆಚ್.ಸಿ.12 ಶಿವಶಂಕರಪ್ಪ, ಪಿ.ಸಿ.310 ಮೈಲಾರಪ್ಪ ಹಾಗೂ ಪಿ.ಸಿ.100 ಮಹೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಕೆ.ಎ-40, ಜಿ-1234 ರಲ್ಲಿ ಮದ್ಯಾಹ್ನ 3-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿದರೂ ಸಹ ಕೆಲವರು ಸ್ಥಳದಿಂದ ಓಡಿ ಹೋಗಿದ್ದು,  ಸ್ಥಳದಲ್ಲಿ ಸಿಕ್ಕವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಬಾಬು ಬಿನ್ ಜಾನಿ, 19 ವರ್ಷ, ಆದಿ ಕರ್ನಾಟಕ, ವ್ಯವಸಾಯ, ವಾಸ ಬಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಬಾಬು.ಜಿ ಬಿನ್ ಗಂಗಾಧರಪ್ಪ, 28 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ ಬಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಶಂಕರಪ್ಪ ಬಿನ್ ಲೇಟ್ ಗಂಗಪ್ಪ, 45 ವರ್ಷ, ಆದಿಕರ್ನಾಟಕ, ವ್ಯವಸಾಯ ವಾಸ ಬಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ, 4) ಗಂಗೋಜಿ ಬಿನ್ ನರಸಿಂಹಪ್ಪ @ ಕಡಿಯಪ್ಪ, 40 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ ಬಿ.ಬೊಮ್ಮಸಂದ್ರ ಗ್ರಾಮ ಗೌರಿಬಿದನೂರು ತಾಲ್ಲೂಕು 5) ಗಂಗಾಧರಪ್ಪ ಬಿನ್ ಲೇಟ್ ರಾಮಪ್ಪ, 40 ವರ್ಷ, ಆದಿಕರ್ನಾಟಕ, ಆಟೋ ಚಾಲಕ, ವಾಸ ಬಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಪಾಂಡು ಗಂಗಾಧರಪ್ಪ ಬಿನ್ ಲೇಟ್ ಪಾಂಡುರಂಗಪ್ಪ, 45 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ ಬಿ.ಬೊಮ್ಮಸಂದ್ರ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿದು ಬಂದಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಸ್ಥಳದಲ್ಲಿ ದೊರೆತ 720/- (ಏಳು ನೂರ ಇಪ್ಪತ್ತು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ಮತ್ತು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ತಮ್ಮ ವಶಕ್ಕೆ ನೀಡುತ್ತಿದ್ದು, ಸದರಿಯವರ ಮೇಲೆ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿ ಮೇರೆಗೆ ಎನ್.ಎಸಿ.ಆರ್ 261/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

18. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.282/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 30/08/2021 ರಂದು ಸಂಜೆ 6-15 ಗಂಟೆಯಲ್ಲಿ ಪಿ.ಸಿ-543, ಸುಧಾಕರ್, ರವರು ಮಾಲು ಮತ್ತು ಆರೋಪಿಯನ್ನು ಠಾಣೆಯಲ್ಲಿ ಹಾಜರುಪಡಿಸಿ, ಮುಂದಿನ ಕ್ರಮಕ್ಕಾಗಿ ನೀಡಿದ ವರಧಿ ದೂರಿನ ಸಾರಾಂಶವೇನೆಂದರೆ, ದಿನಾಂಕ: 30/08/2021 ರಂದು ತನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ಹನುಮಂತಪುರ, ವರದನಾಯಕನಹಳ್ಳಿ, ತಾತಹಳ್ಳಿ, ಚೀಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದಲ್ಲಿ ಗುಪ್ತ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಯಾರೋ ಅಸಾಮಿ ಗ್ರಾಮದ ಸಪ್ಪಲಮ್ಮ ದೇವಾಲಯದ ಬಳಿ ಗ್ರಾಮದ ಸರ್ಕಲ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಪಾಕೇಟುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಅಬ್ಲೂಡು ಗ್ರಾಮದ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಮೂರು ಜನ ಅಸಾಮಿಗಳು ಮಧ್ಯಸೇವನೆ ಮಾಡುತ್ತಾ ಕುಳಿತಿದ್ದು, ಒಬ್ಬ ಆಸಾಮಿ ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟುಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟುಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮದ್ಯವನ್ನು ಕುಡಿಯುತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಗಂಗರಾಜ ಬಿನ್ ನಂಜುಂಡಪ್ಪ, 38 ವರ್ಷ, ಬಲಜಿಗರು, ವಾಸ: ದೊಡ್ಡತೇಕಹಳ್ಳಿ ಗ್ರಾಮ, ಬಶೆಟ್ಟಿಹಳ್ಳಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು. ಎಂತ ತಿಳಿಸಿದ್ದು, ನಂತರ ಸದರಿ ಆಸಾಮಿ ಬಳಿ ಇದ್ದ ಕಪ್ಪು ಬಣ್ಣದ ಕವರ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ HAYWARDS Cheers Whisky ಯ 07 ಟೆಟ್ರಾ ಪಾಕೇಟ್ ಗಳಿದ್ದು, ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು, ಇವುಗಳ ಒಟ್ಟು ಬೆಲೆ 245.91 ರೂ.ಗಳಾಗಿರುತ್ತೆ ಸ್ಥಳದಲ್ಲಿ 3 ಪ್ಲಾಸ್ಟಿಕ್ ಗ್ಲಾಸುಗಳು, 3 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ HAYWARDS Cheers Whisky ಯ 3 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಗಂಗರಾಜ ಬಿನ್ ನಂಜುಂಡಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

19. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.283/2021 ಕಲಂ. 324,504,506 ಐ.ಪಿ.ಸಿ:-

     ದಿನಾಂಕ:31.08.2021 ರಂದು ಬೆಳಿಗ್ಗೆ 8.30 ಗಂಟೆಯ ಸಮಯದಲ್ಲಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಗಾಯಾಳು ಶಿವಶಂಕರ್ ಜಿ.ಎಸ್ ಬಿನ್ ಸಿದ್ದೇಗೌಡ, 46 ವರ್ಷ, ವಕ್ಕಲಿಗರು, ಹೇಮಾರ್ಲಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ತನ್ನ ಸ್ವಂತ ಸ್ಥಳ ಬೆಂಗಳೂರು ವಸಂತಪುರ ಆಗಿದ್ದು ತಾನು ಈಗ್ಗೆ ಒಂದು ವರ್ಷದ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಹೇಮಾರ್ಲಹಳ್ಳಿ ಗ್ರಾಮದ ಸಿಓಜಿ ಇಮೂನ್ಯಿಯಲ ಪ್ರಿಯರ್ ಹೌಸ್ ಚರ್ಚ ನಲ್ಲಿ ಸಹಾಯಕ ಪಾಸ್ಟರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ತಾನು ಹೇಮಾರ್ಲಹಳ್ಳಿಯಲ್ಲಿಯೇ ವಾಸವಾಗಿದ್ದು 15 ದಿನಕ್ಕೊಮ್ಮೆ ಊರಿಗೆ ಹೋಗಿ ಬರುತಿದ್ದೆ. ಈಗಿರುವಲ್ಲಿ ಈಗ್ಗೆ ಒಂದು ವರ್ಷದ ಹಿಂದೆ ಬೆಂಗಳೂರು ಚಂದ್ರಪ್ಪ ನಗರದ ವಾಸಿಗಳಾದ ಶ್ರೀರಾಮ ಮತ್ತು ಆತನ ಹೆಂಡತಿಯಾದ ರೇಣುಕಾ ರವರು ತನ್ನ ಮಗನಾದ ತೇಜಸ್ ರವರನ್ನು ಕರೆದುಕೊಂಡು ಬಂದು ತೇಜಸ್ ಒಳ್ಳೆ ಬುದ್ದಿ ಕಲಿಯಲಿ ಎಂದು ಹೇಮಾರ್ಲಹಳ್ಳಿ ಚರ್ಚ್ ನಲ್ಲಿ ಬಿಟ್ಟು ಹೋಗಿರುತ್ತಾರೆ. ಆತನ ನಡೆತೆ ಸರಿ ಇಲ್ಲದೇ ಇದ್ದು ತಾನು ಆಗಾಗ ಬುದ್ದಿ ಹೇಳುತಿದ್ದು ಅದರೂ ಸಹ ಕೇಳದೆ ತಮ್ಮ ಚರ್ಚ್ ನ್ನು ಬಿಟ್ಟು ಅಲ್ಲೇ ತಮ್ಮ ಚರ್ಚ್ ಪಕ್ಕದಲ್ಲಿರುವ ಚರ್ಚ್ ಇರುವ ಜಮೀನಿನ ಮಾಲೀಕರ ಬಾಬತ್ತು ಒಂದು ರೂಮ್ನಲ್ಲಿ ವಾಸವಾಗಿದ್ದನು ಅದರೂ ಸಹ ತೇಜಸ್ ತನ್ನ ಬುದ್ದಿಯನ್ನು ಬದಲಾಯಿಸಲಿಲ್ಲ. ದಿನಾಂಕ:31/08/2021 ರಂದು ಬೆಳಗಿನ ಜಾವ 1.30 ಗಂಟೆ ಸಮಯದಲ್ಲಿ ತಾನು ಚರ್ಚ್ ಪಕ್ಕದಲ್ಲಿನ ರೂಮ್ನಲ್ಲಿ ಮಲಗಿದ್ದಾಗ ತೇಜಸ್ ಬಿನ್ ಶ್ರೀರಾಮಪ್ಪ ರವರು ಮಧ್ಯಪಾನ ಮಾಡಿಕೊಂಡು ಬಂದು ತನ್ನನ್ನು ಬೈದಾಡಿಕೊಂಡು ತನ್ನ ರೂಮಿನ ಬಾಗಿಲು ತೆಗೆದು ತನ್ನ ಬಳಿ ಬಂದು ಏಕಾಏಕಿ ತನ್ನ ಮೇಲೆ ಗಲಾಟೆ ಮಾಡಿ ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಕಲ್ಲಿನಿಂದ ತನ್ನ ತಲೆಯ ಎಡಬಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ನಿನೇನಾದರು ತನಗೆ ಬುದ್ದಿವಾದ ಹೇಳಿದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆಗ ತಾನು ತಕ್ಷಣ ಹೇಮಾರ್ಲಹಳ್ಳಿ ಗ್ರಾಮದ ತನ್ನ ಸ್ನೇಹಿತರಾದ ನಾಗೇಶ ಬಿನ್ ಮುನಿಯಪ್ಪ, ವೆಂಕಟೇಶ ಬಿನ್ ಚಿಕ್ಕಮದ್ದೂರಪ್ಪ ರವರುಗಳಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು ಆಗ ಅವರು ತಕ್ಷಣ ಬಂದು ತೇಜಸ್ನಿಂದ ತನ್ನನ್ನು ಬಿಡಿಸಿಕೊಂಡು ಗಾಯವಾಗಿದ್ದ ತನ್ನನ್ನು ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಆದ್ದರಿಂದ  ತನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ತನ್ನ ತಲೆಗೆ ಹೊಡೆದು ಪ್ರಾಣ ಬೆದರಿಕೆ ಹಾಕಿದ ತೇಜಸ್ ಬಿನ್ ಶ್ರೀರಾಮ ರವರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

20. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 78 ಕೆ.ಪಿ ಆಕ್ಟ್:-

     ದಿನಾಂಕ.31-08-2021 ರಂದು ಮದ್ಯಾಹ್ನ 1-00 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ದಿನಾಂಕ.31-08-2021 ರಂದು ಬೆಳಿಗ್ಗೆ ಸುಮಾರು 11.30 ಗಂಟೆಯಲ್ಲಿ ನಾನು ಶಿಡ್ಲಘಟ್ಟ ನಗರ ಗಸ್ತಿನಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಪಿ.ಸಿ.308 ಚಂದಪ್ಪ ಯಲಿಗಾರ್, ಪಿ.ಸಿ.278 ನಾರಾಯಣ ರವರೊಂದಿಗೆ ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆ, ಅಜಾದ್ ನಗರ ಕಡೆ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ರಹಮತ್ ನಗರದ ಅನ್ಸಾರಿಮೊಹಲ್ಲಾದ ಸದ್ದಾಂ ರವರ ಗುಜರಿ ಅಂಗಡಿಯ ಮುಂದೆ ಯಾರೋ ಇಬ್ಬರು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಚೌಕಾಬಾರ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-50 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ರಟ್ಟಿನ ಮೇಲೆ ಚೌಕಾಬಾರ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಬಾಬಾಜಾನ್ ಬಿನ್ ಸುಬಾನ್ ಸಾಬ್, 28 ವರ್ಷ, ಮುಸ್ಲೀಂ, ಗಾರೇ ಮೇಸ್ತ್ರೀ, ಅನ್ಸಾರಿ ಮಸೀದಿ ಹತ್ತಿರ, 2ನೇ ಕಾರ್ಮಿಕನಗರ, ಶಿಡ್ಲಘಟ್ಟ ಟೌನ್ 2] ವಲಿಸಾಬ್ ಬಿನ್ ಮಹಬೂಬ್ ಸಾಬ್, 60 ವರ್ಷ, ಮುಸ್ಲಿಂ, ಕೂಲಿ ಕೆಲಸ, ಅನ್ಸಾರಿ ಮಸೀದಿ ಹತ್ತಿರ, 2ನೇ ಕಾರ್ಮಿಕನಗರ, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಚೌಕಾಬಾರ ಅದೃಷ್ಠದ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 300/- ರೂ ನಗದು ಹಣ ಇರುತ್ತೆ. ಇವರು ಚೌಕಾಬರ ಆಡಲು ಬಳಿಸಿದ್ದ 4 ಹುಣಸೇ ಬೀಜಗಳು ಮತ್ತು ಚೌಕಾಬಾರ ಟೇಬಲ್ ಬರೆದಿರುವ ರಟ್ಟನ್ನು ಮದ್ಯಾಹ್ನ 12-00 ಗಂಟೆಯಿಂದ 12-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ ಇಬ್ಬರನ್ನು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.110/2021 ಕಲಂ.78(ಎ),(VI), 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 31-08-2021 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080