Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.214/2021 ಕಲಂ. 78 ಕೆ.ಪಿ ಆಕ್ಟ್:-

     ದಿನಾಂಕ:30/07/2021 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ  ದಿನಾಂಕ: 29/07/2021 ರಂದು ಬೆಳ್ಳಗೆ 08-00 ಗಂಟೆಗೆ  ಶ್ರೀ ನಾಗರಾಜ್ ಡಿ.ಆರ್  ಪೊಲೀಸ್ ಇನ್ಸ್ ಪೆಕ್ಟರ್  ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:29-07-2021 ರಂದು ಬೆಳ್ಳಗೆ 8-00 ಗಂಟೆ ಸಮಯದಲ್ಲಿ ಶ್ರೀ ನಾಗರಾಜ್ ಡಿ.ಆರ್  ಪೊಲೀಸ್ ಇನ್ಸ್ ಪೆಕ್ಟರ್  ಬಾಗೇಪಲ್ಲಿ ಪೊಲೀಸ್ ಠಾಣೆ ಆದ  ನಾನು ಮತ್ತು ಸಿಬ್ಬಂದಿಯಾದ  ಸಿಪಿಸಿ 344, ಮಹಂತೇಶ, ಸಿಪಿಸಿ 423 ಬಸವರಾಜ್, ಸಿಪಿಸಿ 319 ವಿನಾಯಕ ವಿಶ್ವಬ್ರಾಹ್ಮಣ, ಸಿಪಿಸಿ-280 ಮುರಳಿ ಮತ್ತು ಸಿಪಿಸಿ 575 ವಿಜಯಪ್ಪ ರವರು ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪ್ ನಲ್ಲಿ ಚಾಲಕ ನೂರ್ ಬಾಷಾ ಸಿಹೆಚ್ ಸಿ 54 ರವರೊಂದಿಗೆ ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ, ಯಲ್ಲಂಪಲ್ಲಿ, ಗುಂಟಿಗಾನಪಲ್ಲಿ ಗ್ರಾಮಗಳ ಕಡೆ ಗಸ್ತು ನಿರ್ವಹಿಸುತ್ತಿದ್ದಾಗ  ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಹೋಬಳಿ, ಕೋಡಿಪಲ್ಲಿ ಗ್ರಾಮದ ಬಳಿಯಿರುವ ಖಾಲಿ ಜಾಗದಲ್ಲಿ  ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು, ಮೇರುವಪಲ್ಲಿ ಕ್ರಾಸ್ ಬಳಿ  ಹೋಗಿ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ, ದಾಳಿಗೆ ಸಹಕರಿಸಲು ಕೋರಿದ್ದರ ಮೇರೆಗೆ ಒಪ್ಪಿಕೊಂಡಿದ್ದು, ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಜೀಪ್ ನಲ್ಲಿ ಬೆಳಿಗ್ಗೆ 8-15 ಗಂಟೆಗೆ ಕೋಡಿಪಲ್ಲಿ ಗ್ರಾಮದ ರಸ್ತೆಯ ಮರೆಯಲ್ಲಿ ಜೀಪ್ ಅನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಗಳು ಸುತ್ತಲೂ ಕುಳಿತು ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ಧಾಳಿ ಮಾಡಿ ಜೂಜಾಟವಾಡುತ್ತಿದ್ದ ಆಸಾಮಿಗಳಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಗೋಪಾಲ ಬಿನ್ ನರಸಿಂಹಪ್ಪ ,42 ವರ್ಷ, ವಕ್ಕಲಿಗರು ಜನಾಂಗ, ಬೆಲ್ದಾರ್ ಕೆಲಸ, ಕೋಡಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 2) ಪಾಪಣ್ಣ ಬಿನ್ ಸುಬ್ಬನ್ನ, 23 ವರ್ಷ, ಗೊಲ್ಲ ಜನಾಂಗ, ಡ್ರೈವರ್ ಕೆಲಸ, ಕೋತ್ತಕೋಟೆ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 3) ಶ್ರೀನಿವಾಸ ಬಿನ್ ವೆಂಕಟರವಣಪ್ಪ, 40 ವರ್ಷ, ಬೋವಿ ಜನಾಂಗ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 4) ಅಮರನಾಥ ಬಿನ್ ಚೌಡಪ್ಪ, 30 ವರ್ಷ, ವಕ್ಕಲಿಗರು,  ವ್ಯವಸಾಯ, ಕೋಡಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು. ಸ್ಥಳದಲ್ಲಿ ಆಸಾಮಿಗಳು ಜೂಜಾಟವಾಡಲು ಬಳಸಿದ್ದ  ಒಟ್ಟು 52 ಇಸ್ಪೀಟ್ ಎಲೆಗಳು, ಪಣಕ್ಕಾಗಿ ಇಟ್ಟಿದ್ದ ಒಟ್ಟು 1930/- ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು 4 ಜನ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಬೆಳ್ಳಗೆ 9-30 ಗಂಟೆಗೆ ಹಾಜರಾಗಿ ವರಧಿಯನ್ನು ನೀಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-210/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 30-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.215/2021 ಕಲಂ. 78(3) ಕೆ.ಪಿ ಆಕ್ಟ್:-

    ದಿನಾಂಕ:30/07/2021 ರಂದು ಸಂಜೆ 4-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:29/07/2021 ರಂದು ರಾತ್ರಿ 7-45 ಗಂಟೆಗೆ  ಶ್ರೀ ಜಿ.ಆರ್. ಗೋಪಾಲರೆಡ್ಡಿ  ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ 29,07.2021 ರಂದು ಸಂಜೆ 6-30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಪರಗೋಡು ಗ್ರಾಮದ ಕ್ರಾಸ್ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿ,ಪಿ.ಸಿ-18 ಅರುಣ್,ಸಿ.ಪಿ.ಸಿ-214 ಅಶೋಕ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಜೀಪ್ ಚಾಲಕ ವೆಂಕಟೇಶ್ ಎ.ಹೆಚ್.ಸಿ-14 ರವರೊಂದಿಗೆ  ಟಿ.ಬಿ ಕ್ರಾಸ್ ಬಳಿ ಇದ್ದ  ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 6-45  ಗಂಟೆಗೆ ಹೋಗಿ ಪರಗೋಡು ಕ್ರಾಸ್ ಬಳಿ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಎಸ್, ಎಲ್, ಎನ್, ಕಟಿಂಗ್ ಶಾಪ್ನ ಬಳಿ ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 1920/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಬಾಬು ಬಿನ್ ನರಸಿಂಹಪ್ಪ, 37 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ: ಪರಗೋಡು ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಹಾಗೂ ಮಟ್ಕಾ ಜೂಜಾಟವನ್ನು ಯಾರ ಕುಮ್ಮಕ್ಕಿನಿಂದ ಆಡಿಸುತ್ತಿರುವುದು ಎಂದು ಕೇಳಲಾಗಿ ಬಾಬು  ರವರು ಮಟ್ಕಾ ಜೂಜಾಟವನ್ನು ಬಾಗೇಪಲ್ಲಿ ತಾಲ್ಲೂಕು ಘಂಟಂವಾರಿಪಲ್ಲಿ ಗ್ರಾಮದ ವಾಸಿಯಾದ ಶ್ರೀನಿವಾಸ ಅಲಿಯಾಸ್ ಟೈಲರ್ ಸೀನಾ ಬಿನ್ ಲೇಟ್ ನಂಜಪ್ಪ, ಭಜಂತ್ರಿ ಜನಾಂಗ ಮತ್ತು ಆತನ ಮಗನಾದ ನವೀನ ರವರ ಕುಮ್ಮಕ್ಕಿನಿಂದ  ಆಡಿಸುತ್ತಿರುವುದಾಗಿ ಹಾಗೂ ಜೂಜಾಟದಲ್ಲಿ  ವಸೂಲು ಮಾಡಲಾದ ಹಣವನ್ನು ಶ್ರೀನಿವಾಸ ಮತ್ತು ನವೀನ್ ರವರಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ.  ನಂತರ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ, ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 7.45  ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು ಬಾಬು ಬಿನ್ ನರಸಿಂಹಪ್ಪ, ಶ್ರೀನಿವಾಸ @ ಟೈಲರ್  ಸೀನಾ ಮತ್ತು ನವೀನ್ ಬಿನ್  ಶ್ರೀನಿವಾಸ @ ಟೈಲರ್  ಸೀನಾ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-212/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 30-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.216/2021 ಕಲಂ. 379 ಐ.ಪಿ.ಸಿ:-

  ದಿನಾಂಕ:30/07/2021 ರಂದು ಸಂಜೆ 7-00 ಗಂಟೆಗೆ ಶ್ರೀ.ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 30-07-2021 ರಂದು ಸಂಜೆ 4:00  ಗಂಟೆ ಸಮಯದಲ್ಲಿ ನಾನು  ಗ್ರಾಮಗಸ್ತು ಮಾಡಿಕೊಂಡು ಗೂಳೂರು ಗ್ರಾಮ ಕಡೆಗೆ ಹೋಗುತ್ತಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ  ಗೂಳೂರು ಹೋಬಳಿ ಜಿ.ಚರ್ಲಾಪಲ್ಲಿ ಗ್ರಾಮದ ಕೆರೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ನಲ್ಲಿ  ಆಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಸರ್ಕಾರಿ ಜೀಪ್ ನಂ ಕೆ.ಎ-40-ಜಿ- 537 ರಲ್ಲಿ ಚಾಲಕ ಎ.ಹೆಚ್.ಸಿ-14 ವೆಂಕಟೇಶ್, ಸಿಬ್ಬಂದಿಯಾದ ಪಿಸಿ-192 ವಿನೋದ ಕುಮಾರ, ಮತ್ತು ಪಿಸಿ-276 ಸಾಗರ್  ರವರೊಂದಿಗೆ, ಗೂಳೂರು ಗ್ರಾಮದ ಬಸ್ ನಿಲ್ದಾಣದ ಬಳಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಬಂದ  ಜಿ.ಚೆರ್ಲಾಪಲ್ಲಿ ಗ್ರಾಮದ ಕೆರೆಯ ಬಳಿಗೆ ಸುಮಾರು 4-35 ಗಂಟೆಗೆ ಹೋಗಿ ನೋಡಲಾಗಿ, ಕೆರೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ಗೆ ಮರಳು ತುಂಬುತ್ತಿದ್ದು, ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ ಟ್ರಾಕ್ಟರ್ ಅನ್ನು ಅಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆ.   ನಂತರ ಸ್ಥಳದಲ್ಲಿದ್ದ ಮರಳು ತುಂಬಿದ ಟ್ರಾಕ್ಟರ್ ಅನ್ನು  ಪರಿಶೀಲಿಸಲಾಗಿ ಎ.ಪಿ-02-ಎ.ಡಿ-8465 ನೊಂದಣಿ ಸಂಖ್ಯೆಯ ಕೆಂಪು ಬಣ್ಣದ  ಮಹೀಂದ್ರಾ ಟ್ರಾಕ್ಟರ್ ಎಂಜಿನ್ ಆಗಿದ್ದು, ಟ್ರಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ ಟ್ರಾಲಿಯ ತುಂಬ ಮರಳು ತುಂಬಿರುತ್ತದೆ. ಸದರಿ ಟ್ರಾಕ್ಟರ್ ನಲ್ಲಿ ಸರ್ಕಾರಿ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ  ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು,   ಸ್ಥಳದಲ್ಲಿ  ಸಂಜೆ 4-45 ಗಂಟೆಯಿಂದ 5:45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮರಳು ತುಂಬಿದ ಟ್ರಾಕ್ಟರ್ ಅನ್ನು ವಶಕ್ಕೆ ತೆಗೆದುಕೊಂಡು ಸಂಜೆ  7:00 ಗಂಟೆಗೆ ಠಾಣೆಗೆ ಬಂದಿದ್ದು, ಎ.ಪಿ-02-ಎ.ಡಿ-8465 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.217/2021 ಕಲಂ. 279,337,338,304(A) ಐ.ಪಿ.ಸಿ:-

  ದಿನಾಂಕ:31-07-2021 ರಂದು ಬೆಳಗಿನ ಜಾವ 1-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನಂದರೆ ನಬೀರಸೂಲ್ ಬಿನ್ ಲೇಟ್ ವನ್ನೂರ್ ಸಾಬ್ ,60ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ವಾಸ: ಆರ್ ವಿ ನಾಯ್ಡು ಕಾಲೋನಿ, ಅನಂತಪುರ ಟೌನ್. ಆದ ನಾನು ನನಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದು ಎಲ್ಲರಿಗೂ ಮಧುವೆಯಾಗಿರುತ್ತದೆ. ಡಿ ಅನ್ವರ್ ರವರು 3 ನೇ ಯವನಾಗಿರುತ್ತಾನೆ. ಸದರಿ ಅನ್ವರ್ ರವರು ಈಗ್ಗೆ ಸುಮಾರು 10 ವರ್ಷಗಳಿಂದ ಅಗ್ರಿಕಲ್ಚರ್ ಕಛೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಕೊಂಡಿದ್ದರು. ದಿನಾಂಕ:30/07/2021 ರಂದು ಅನ್ವರ್ ರವರು ಬೆಂಗಳೂರಿನಲ್ಲಿ ಕೆಲಸವಿದೆ ಎಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಮನೆಯನ್ನು ಬಿಟ್ಟು ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಬಂದರು. ನಂತರ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ನನಗೆ ಪೋನ್ ಮಾಡಿ ರಾತ್ರಿ ಸುಮಾರು 8-45 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕು ಮದರಸಾ ಮುಂಭಾಗ ಎನ್ ಹೆಚ್-44 ರಸ್ತೆಯಲ್ಲಿ ನಿನ್ನ ಮಗನಿಗೆ ಅಪಘಾತವಾಗಿ ತೀವ್ರತರವಾದ ಗಾಯಗಳಾಗಿರುತ್ತೆಂದು ವಿಚಾರವನ್ನು ತಿಳಿಸಿದರು.  ನಂತರ ನಾನು ನಮ್ಮ ಸಂಬಂಧಿಕರು ಬಾಗೇಪಲ್ಲಿಗೆ ಬಂದು ವಿಚಾರ ತಿಳಿಯಲಾಗಿ ಅನಂತಪುರ ಕಡೆಯಿಂದ ಬೆಂಗಳೂರಿಗೆ ಬರುವ ಪೇಪರ್ ವಾಹನವಾದ ಎಪಿ-02 ಟಿಸಿ-8485 ನೋಂದಣಿ ಸಂಖ್ಯೆಯ ಬೊಲೆರೋ ವಾಹನದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಬಾಗೇಪಲ್ಲಿ ಬಳಿ ಮದರಸಾ ಮುಂಭಾಗ ಎನ್ ಹೆಚ್-44 ರಸ್ತೆಯಲ್ಲಿ ಹೋಗುತ್ತಿದ್ದಾಗ, ಬಾಗೇಪಲ್ಲಿಯ ಟಿಬಿ ಕ್ರಾಸ್ ನಿಂದ ಬೆಂಗಳೂರಿಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಕೆಎ-40 ಎಫ್-973 ನೋಂದಣಿ ಸಂಖ್ಯೆಯ ಕೆಎಸ್ಆರ್ ಟಿಸಿ ಬಸ್ಸಿನ ಚಾಲಕನು ಬಸ್ಸನ್ನು ಏಕಾಏಕಿ ಯಾವುದೇ ಸೂಚನೆ ನೀಡದೆ ಎನ್ ಹೆಚ್-44 ರಸ್ತೆಗೆ ತಿರುಗಿಸಿದ್ದು ಆಗ ಬೊಲೆರೋ ವಾಹನದ ಚಾಲನು ತನ್ನ ವಾಹನವನ್ನು ನಿಯಂತ್ರಿಸಲಾಗದೆ ಬಸ್ಸಿಗೆ ಡಿಕ್ಕಿ ಹೊಡೆದು ಬೂಲೆರೋ ವಾಹನ ಪಲ್ಟಿಯಾಗಿ ಡಿವೈಡರ್ ದಾಟಿ ಬೆಂಗಳೂರು- ಹೈದರಾಬಾದ್ ರಸ್ತೆಯಲ್ಲಿ ವಾಹನ ಬಿದ್ದಿದ್ದು ಬಲೆರೋ ವಾಹನದಲ್ಲಿದ್ದ 1) ಶ್ರೀಮತಿ ಫೌಜಿಯಾ ಕೋಂ ಮೌಲಾ ಅಲಿ 35ವರ್ಷ, ತಾಡಪತ್ರಿ ರವರಿಗೆ ಮೈಮೇಲೆ ತೀವ್ರಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ನನ್ನ ಮಗನಾದ 2)ಡಿ ಅನ್ವರ್ ರವರಿಗೆ ತಲೆಗೆ ಮೈಮೇಲೆ ತೀವ್ರತರನಾದ ಗಾಯಗಳಾಗಿರುವುದಾಗಿ, 3)ಸಲಾಂ ಬಿನ್ ಖಾಸಿಂಸಾಬ್ ಮತ್ತು 4)ಮಹಮ್ಮದ್ ರಿಹಾನ್ ಬಿನ್ ಮೌಲಾ ಅಲಿ, 5)ಮಹಮ್ಮದ್ ಸುಹೇಲ್ ಬಿನ್ ಮೌಲಾ ಅಲಿ, ಮತ್ತು ಬಲೆರೋ ವಾಹನದ ಚಾಲಕನಾದ 6)ಲಕ್ಷ್ಮೀನಾರಾಯಣ ಬಿನ್ ನಾರಾಯಣಪ್ಪರವರಿಗೆ ಮೇಲ್ಕಂಡ ಎಲ್ಲರಿಗೂ ರಕ್ತಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನನ್ನ ಮಗ ಡಿ ಅನ್ವರ್ ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವಿಚಾರ ತಿಳಿಯಿತು.  ಮೃತ ದೇಹವು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ. ಈ ಅಪಘಾತಕ್ಕೆ ಕೆ.ಎ-40 ಎಫ್-973 ನೋಂದಣಿ ಸಂಖ್ಯೆಯ ಕೆಎಸ್ಆರ್ ಟಿಸಿ ಬಸ್ಸಿನ ಚಾಲಕನ ಅತಿ ವೇಗ ಮತ್ತು ಅಜಾರೂಕತೆಯೇ ಕಾರಣವಾಗಿರುತ್ತೆ. ಆದ್ದರಿಂದ ಚಾಲಕನ ವಿರುದ್ದ ಕಾನೂನು ರೀತಿ ಕ್ರಮಜರುಗಿಸಲು ಕೋರುತ್ತೇನೆ. (ಕನ್ನಡ ಭಾಷೆಯಲ್ಲಿ ಟೈಪ್ ಮಾಡಿಸಿದ್ದನ್ನು ತೆಲುಗು ಭಾಷೆಯಲ್ಲಿ ತರ್ಜುಮೆ ಮಾಡಿಸಿ ಕೇಳಿದೆ ಸರಿಯಿದೆ) ಮುದ್ರಿತ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತದೆ.

 

5. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.104/2021 ಕಲಂ. 20(b),20 (a) NARCOTIC DRUGS & PSYCHOTROPIC SUBSTANCES ACT, 1985:-

  ದಿನಾಂಕ: 31/07/2021 ರಂದು ಮಧ್ಯಾಹ್ನ 2-45 ಗಂಟೆಯ ಸಮಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಆರ್.ನಾರಾಯಣಸ್ವಾಮಿ ಸಾಹೇಬರವರು ಠಾಣೆಯ ಹೆಚ್ ಸಿ 36 ರವರೊಂದಿಗೆ ಕಳುಹಿಸಿಕೊಟ್ಟ ದೂರಿನ ಸಾರಾಂಶವೇನೆಂದರೆ, ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಪಿ.ಎಸ್.ಐ ಶ್ರೀ.ಆರ್.ನಾರಾಯಣಸ್ವಾಮಿ ಆದ ನಾನು ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂzÀರೆ ನನಗೆ ಈ ದಿನ ದಿನಾಂಕ 31/07/2021 ರಂದು ಮಧ್ಯಾಹ್ನ 1-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಇರಗಂಪಲ್ಲಿ ಗ್ರಾಮದ ವಾಸಿಯಾದ ಶ್ರೀಮತಿ.ವಿಜಯಮ್ಮ ಕೋಂ ವೆಂಕಟರೆಡ್ಡಿ ರವರ ವಾಸದ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗಾಂಜಾಗಿಡಗಳನ್ನು ಬೆಳೆಸಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಾನು ಸದರಿ ಮಾಹಿತಿಯನ್ನು ಠಾಣಾ ದಿನಚರಿಯಲ್ಲಿ ನಮೂದುಮಾಡಿ ನಂತರ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಹೆಚ್.ಸಿ 139 ಶ್ರೀ.ಶ್ರೀನಾಥ.ಎಂ.ಪಿ, ಹೆಚ್.ಸಿ 36 ಶ್ರೀ.ವಿಜಯ್ಕುಮಾರ್ ಬಿ, ಹೆಚ್.ಸಿ 176 ಶ್ರೀ.ಮುನಿರಾಜು.ಸಿ, ಮ.ಪಿ.ಸಿ 590 ಶ್ರೀಮತಿ.ಲಕ್ಷ್ಮಿಕಾಂತಮ್ಮ ಮತ್ತು ಜೀಪ್ ಚಾಲಕ ಎಪಿಸಿ 65 ಶ್ರೀ.ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 530 ರಲ್ಲಿ  ಮಧ್ಯಾಹ್ನ 1-15 ಗಂಟೆಗೆ ಠಾಣೆಯನ್ನು ಬಿಟ್ಟು ಇರಗಂಪಲ್ಲಿ ಗ್ರಾಮಕ್ಕೆ ಬೇಟಿ ನೀಡಿ ಮತ್ತೊಮ್ಮೆ ಬಾತ್ಮಿದಾರರಿಂದ ಮಾಹಿತಿಯನ್ನು ಪಡೆದುಕೊಂಡು ಮಾಹಿತಿಯ ಆದಾರದ ಮೇರೆಗೆ ಇರಗಂಪಲ್ಲಿ ಗ್ರಾಮದ ವಾಸಿಯಾದ ಶ್ರೀಮತಿ.ವಿಜಯಮ್ಮ ಕೋಂ ವೆಂಕಟರೆಡ್ಡಿ ರವರ ಮನೆಯ ಬಳಿಗೆ ಮಧ್ಯಾಹ್ನ 1-45 ಗಂಟೆಗೆ ಹೋಗಿ ಮನೆಯಲ್ಲಿ ವಿಚಾರಿಸಲಾಗಿ ಮನೆಯಲ್ಲಿ ಯಾರೋ ಒಬ್ಬ ಮಹಿಳೆ ಇದ್ದು ಆಕೆಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ತನ್ನ ಹೆಸರು ಶ್ರೀಮತಿ.ವಿಜಯಮ್ಮ ಕೋಂ ವೆಂಕಟರೆಡ್ಡಿ, 37ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಆಕೆಯನ್ನು ಕುರಿತು ನೀವು ಮನೆಯ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೇಳೆಸಿರುವ ಬಗ್ಗೆ ಮಾಹಿತಿ  ತಿಳಿದು ಬಂದಿದ್ದು ನೀವು ಬೆಳೆಸಿರುವ ಗಾಂಜಾ ಗಿಡಗಳನ್ನು ತೋರಿಸುವಂತೆ ಕೇಳಲಾಗಿ ಶ್ರೀಮತಿ.ವಿಜಯಮ್ಮ ರವರು ತಾನು ಮುಂದುಮುಂದಾಗಿ ಆಕೆಯ ವಾಸದ ಮನೆಯ ಹಿಂಭಾಗಕ್ಕೆ ನಮ್ಮಗಳನ್ನು ಕರೆದುಕೊಂಡು ಹೋಗಿ ಮನೆಯ ಹಿಂಭಾಗದಲ್ಲಿ ಬೆಳೆಸಿದ್ದ ಒಂದು ಗಾಂಜಾ ಗಿಡವನ್ನು ನಮಗೆ ತೋರಿಸಿದ್ದು ಸದರಿ ಗಾಂಜಾ ಗಿಡವು ಸುಮಾರು 8 ಅಡಿ ಎತ್ತರದ ಒಂದು ದೊಡ್ಡ ಗಾತ್ರದ ಗಾಂಜಾ ಗಿಡವಾಗಿದ್ದು ಸದರಿ ಗಿಡದ ಕೆಳಭಾಗದಿಂದ ಸುಮಾರು 5 ಅಡಿಗಳ ಎತ್ತರದ ವರೆಗೂ ರೆಂಬೆಗಳನ್ನು ಕೋಯ್ದುಕೊಂಡು ಹೋಗಿರುವಂತೆ ಕಂಡು ಬಂದಿರುತ್ತೆ. ಸದರಿ ಗಾಂಜಾಗಿಡವನ್ನು ಆರೋಪಿಯು ತಮ್ಮ ವಾಸದ ಮನೆಯ ಹಿಂಭಾಗದಲ್ಲಿ ಯಾರಿಗೂ ತಿಳಿಯದಂತೆ ಮರೆಯಲ್ಲಿ ಅಕ್ರಮವಾಗಿ ಮಾರಾಟಮಾಡುವ ಉದ್ದೇಶದಿಂದ ಬೆಳೆಸಿರುವುದು ಕಂಡು ಬಂದಿದ್ದು ಆರೋಪಿಯೋಂದಿಗೆ ನಾನು ಸ್ಥಳದಲ್ಲಿ ಹಾಜರಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ಈ ದೂರನ್ನು ನನ್ನ ಜೊತೆಯಲ್ಲಿ ಬಂದಿದ್ದ ಹೆಚ್.ಸಿ 36 ರವರ ಜೊತೆಯಲ್ಲಿ ಕಳುಹಿಸಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಸೂಚಿಸಿ ಕಳುಹಿಸಿಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

6. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.72/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30/07/2021 ರಂದು ಸಂಜೆ 5:10 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರತಾಪ್ ಕೆ.ಆರ್  ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:30/07/2021 ರಂದು ಸಂಜೆ 4:00 ಗಂಟೆಯಲ್ಲಿ  ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರತಾಪ್ ಕೆ.ಆರ್ ಆದ ನಾನು ಠಾಣೆಯಲ್ಲಿದ್ದಾಗ ಚೇಳೂರು ಗ್ರಾಮದ ಅರವಿಂದ ಆಂಗ್ಲ ಮಾಧ್ಯಮ ಶಾಲೆ ಮುಂಭಾಗ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಠಾಣೆಯ ಸಿಬ್ಬಂದಿಯವರಾದ ಸಿ.ಪಿ.ಸಿ 437 ಸತೀಶ್ , ಮೋಹನ್ ಎಪಿಸಿ 87 ರವರೊಂದಿಗೆ ಚೇಳೂರು ಬಸ್ ನಿಲ್ದಾಣದಲ್ಲಿ ಪಂಚರನ್ನು ಬರಮಾಡಿಕೊಂಡು  ಅರವಿಂದ ಆಂಗ್ಲ ಮಾಧ್ಯಮ ಶಾಲೆ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಬಳಿ ಅಕ್ರಮವಾಗಿ ಮಧ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಮಧ್ಯಪಾನ ಮಾಡುತ್ತಿದ್ದವನನ್ನು  ವಶಕ್ಕೆ ಪಡೆದು ಆಸಾಮಿಗೆ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ನಿನ್ನ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು ಹರಿಕುಮಾರ್ ಬಿನ್ ಲೇಟ್ ರಾಮಾಂಜನೇಯುಲು, 30 ವರ್ಷ, ಬಲಿಜ ಜನಾಂಗ, ಡ್ರೈವರ್ ಕೆಲಸ, ನಂ 6-122, ಪೆದ್ದನವಾರಿಪಲ್ಲಿ ಗ್ರಾಮ, ತಲುಪುಲ ಮಂಡಲಂ, ಕದಿರಿ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರ ಪ್ರದೇಶ, ( ಹಾಲಿ ವಾಸ ಗೊಲ್ಲಪಲ್ಲಿ  ಬಿ ಕೊತ್ತಕೋಟ ಮಂಡಲಂ, ಬಿ ಕೊತ್ತಕೋಟ ತಾಲ್ಲೂಕು, ಚಿತ್ತೂರು ಜಿಲ್ಲೆ ಆಂಧ್ರಪ್ರದೇಶ) ಎಂದು ತಿಳಿಸಿದ್ದು. ನಂತರ ಆತನ ಬಳಿಯಿದ್ದ ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ  180 ಎಂ.ಎಲ್ ನ OLD TAVERN WHISKY  ಕಂಪನಿಯ 6 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 1080 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 86.75 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 520.5 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ 180 ಎಂ.ಎಲ್ ನ OLD TAVERN WHISKY ಕಂಪನಿಯ 6 ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ ಸದರಿ ಸ್ಥಳದಲ್ಲಿದ್ದ ಒಂದು ಲೀಟರ್ ನ ಖಾಲಿ ವಾಟರ್ ಬಾಟಲ್  ಹಾಗೂ  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಸಂಜೆ 4:15 ಗಂಟೆಯಿಂದ 5:00 ಗಂಟೆಯವರೆಗೆ ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ,  ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ ನೀಡಿದ  ವರದಿಯನ್ನು  ಪಡೆದು ಠಾಣಾ ಮೊಸಂ 72/2021 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.177/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30/07/2021 ರಂದು ಸಂಜೆ 16-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿಸಿ 129 ರಾಮಚಂದ್ರರವರು ಘನ ನ್ಯಾಯಾಲಯದಿಂದ ಅನುಮತಿ ಆದೇಶವನ್ನು ತಂದು ಹಾಜರ್ಪಡಿಸಿದ್ದರ ಸಾರಾಂಶವೇನಂದರೆ,  ದಿನಾಂಕ:30/07/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ಪಿರ್ಯಾದಿಯವರು ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣೆ ವ್ಯಾಪ್ತಿಯ ದೊಡ್ಡಕುರುಗೋಡು ಗ್ರಾಮದಲ್ಲಿ, ಶ್ರೀನಿವಾಸ ಬಿನ್ ಲೇಟ್ ಕೊಂಡಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಧುರಾಶ್ವತ್ಥ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ-179 ಶಿವಶೇಖರ, ಮತ್ತು ಗ್ರಾಮ ಗಸ್ತಿನ ಪಿ.ಸಿ-312 ಸೋಮನಾಥ ಮಾಲಗಾರ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಬೆಳಿಗ್ಗೆ 10-00 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ಶ್ರೀನಿವಾಸ ಬಿನ್ ಲೇಟ್ ಕೊಂಡಪ್ಪ, 42 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ದೊಡ್ಡಕುರುಗೋಡು ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 18 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 620 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 632.34/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಬೆಳಿಗ್ಗೆ 10-00 ಗಂಟೆಯಿಂದ 11-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 18  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ. 339/2021 ರಂತೆ ದಾಖಲಿಸಿ ನಂತರ ಘನ ನ್ಯಾಯಾಲಯದ ಅನುಮತಿ ಮೇರೆಗೆ ಠಾಣಾ ಮೋ ನಂ 177/2021 ಕಲಂ 15(ಎ), 32(3), ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 457,380 ಐ.ಪಿ.ಸಿ:-

  ದಿನಾಂಕ:30/07/2021 ರಂದು ಪಿರ್ಯಾದಿದಾರರಾದ ಶ್ರೀ ರಾಜಶೇಖರಶರ್ಮ ಬಿನ್ ಎಂ.ಎಸ್.ಭಾನುಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಸುಮಾರು 2 ವರ್ಷಗಳಿಂದ ಹಳೇಹಳ್ಳಿ ಗ್ರಾಮದ ಸರ್ವೆ ನಂಬರ್ 207 ರ ಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿರುವ ಶ್ರೀ ಅಣ್ಣಮ್ಮದೇವಿ ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡಿಕೊಂಡಿದ್ದು, ಅದರಂತೆ ದಿನಾಂಕ:27/07/2021 ರಂದು ದೇವಸ್ಥಾನದಲ್ಲಿ ಪೂಜೆ ಕೆಲಸ ಮುಗಿಸಿಕೊಂಡು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಮನೆಗೆ ಬಂದಿದ್ದು, ಮತ್ತೆ ದಿನಾಂಕ:28/07/2021 ರಂದು ಬೆಳಿಗ್ಗೆ ಸುಮಾರು 08-5 ಗಂಟೆಗೆ ದೇವಸ್ಥಾನಕ್ಕೆ ಪೂಜೆ ಮಾಡಲು ಹೋದಾಗ ಗ್ರಾಮದ ಕೆಲವರು ದೇವಸ್ಥಾನದ ಬೀಗವನ್ನು ಯಾರೋ ಕಳ್ಳರು ಹೊಡೆದು ಹಾಕಿರುತ್ತಾರೆಂದು ತಿಳಿಸಿದ್ದು, ಆಗ ನಾನು ಹೋಗಿ ನೋಡಲಾಗಿ ದೇವಸ್ಥಾನದ ಮುಂಭಾಗಿಲಿಗೆ ಅಳವಡಿಸಿದ್ದ ಬೀಗವನ್ನು ಯಾರೋ ಹೊಡೆದು ಹಾಖಿದ್ದು, ನಾನು ಗ್ರಾಮಸ್ಥರ ಜೊತೆಗೆ ದೇವಸ್ಥಾನದ ಒಳಗೆ ಹೋಗಿ ನೋಡಲಾಗಿ ದೇವಸ್ಥಾನದ ಗರ್ಭ ಗುಡಿಯ ಬೀಗವನ್ನು ಸಹ ಹೊಡೆದು ಹಾಕಿ ದೇವರ ವಿಗ್ರಹದ ಮೇಲೆ ಇದ್ದ ಸುಮಾರು 3 ಗ್ರಾಂ ತೂಕದ ಬಂಗಾರದ ತಾಳಿ ಮತ್ತು ದೇವಸ್ಥಾನದ ಒಳಗಿದ್ದ ಹಿತ್ತಾಳೆಯ ಪಂಚಾರತಿ ಮತ್ತು ಏಕಾರತಿಯನ್ನು ಕಳವು ಮಾಡಿಕೊಂಡು ನಂತರ ಗರ್ಭಗುಡಿಯ ಹಿಂಭಾಗದಲ್ಲಿದ್ದ ಲಾಖರ್ ನ ಬೀಗವನ್ನು ತೆರೆಯಲು ಪ್ರಯತ್ನ ಮಾಡಿದ್ದು, ದೇವಸ್ಥಾನದಲ್ಲಿ ಕಳವು ಆದ ವಸ್ತುಗಳ ಬೆಲೆ ಸುಮಾರು 10000/- ರೂ ಗಳಾಗಿದ್ದು, ಅದ್ದರಿಂದ ದೇವಸ್ಥಾನದಲ್ಲಿ ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಮತ್ತೆ ಕಳ್ಳತನವಾದ ವಸ್ತುಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30/07/2021 ರಂದು ಪಿ.ಸಿ.336 ಉಮೇಶ್ ಬಿ ಶಿರಶ್ಯಾಡ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 30/07/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ನಾನು ಮತ್ತು  ಪಿ.ಸಿ-105 ನವೀನ್ ರವರೊಂದಿಗೆ ಅಲ್ಲೀಪುರ ಗ್ರಾಮ ಕಡೆಗಳಲ್ಲಿ ಗಸ್ತಿನಲ್ಲಿ ಇರುವಾಗ ಬಂದ ಮಾಹಿತಿ ಏನೇಂದರೆ ತರಿದಾಳು  ಗ್ರಾಮದ  ರಂಗಣ್ಣ ಬಿನ್ ಲೇಟ್ ಗಂಗಣ್ಣ ರವರು ತರಿದಾಳು ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 105 ನವೀನ್  ರವರು ಹಾಗೂ ಪಂಚರೊಂದಿಗೆ  ಮದ್ಯಾಹ್ನ 3-30  ಗಂಟೆಯ ಸಮಯಕ್ಕೆ  ತರಿದಾಳು ಗ್ರಾಮದ ರಂಗಣ್ಣ ಬಿನ್ ಲೇಟ್ ಗಂಗಣ್ಣ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ರಂಗಣ್ಣ ಬಿನ್ ಲೇಟ್ ಗಂಗಣ್ಣ 66 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ ತರಿದಾಳು ಗ್ರಾಮ, ತೊಂಡೇಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 16  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 3). 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು 4.ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಮದ್ಯಾಹ್ನ 3-45 ಗಂಟೆಯಿಂದ ಸಂಜೆ 4-45 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 576/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ರಂಗಣ್ಣ ಬಿನ್ ಲೇಟ್ ಗಂಗಣ್ಣ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.128/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30/07/2021 ರಂದು ಠಾಣಾ ಪಿಸಿ 336 ಉಮೇಶ್ ಬಿ ಶಿರಶ್ಯಾಡ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 30/07/2021 ರಂದು ಸಂಜೆ 5-15 ಗಂಟೆಯ ಸಮಯದಲ್ಲಿ  ನಾನು ಮತ್ತು  ಪಿ.ಸಿ-105 ನವೀನ್ ರವರೊಂದಿಗೆ ತೊಂಡೇಬಾವಿ ಕಡೆಗಳಲ್ಲಿ ಗಸ್ತಿನಲ್ಲಿ ಇರುವಾಗ ಬಂದ ಮಾಹಿತಿ ಏನೇಂದರೆ ತೊಂಡೇಬಾವಿ  ಗ್ರಾಮದ  ಮೈಲಾರಿ ಬಿನ್ ಲೇಟ್ ನಾರಾಯಣಪ್ಪ ರವರು ತೊಂಡೇಬಾವಿ ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 105 ನವೀನ್  ರವರು ಹಾಗೂ ಪಂಚರೊಂದಿಗೆ  ಸಂಜೆ 5-30  ಗಂಟೆಯ ಸಮಯಕ್ಕೆ  ತೊಂಡೇಬಾವಿ ಗ್ರಾಮದ ಮೈಲಾರಿ ಬಿನ್ ಲೇಟ್ ನಾರಾಯಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಮೈಲಾರಿ ಬಿನ್ ಲೇಟ್ ನಾರಾಯಣಪ್ಪ, 32 ವರ್ಷ, ಪ.ಜಾತಿ ಚಿಲ್ಲರೆ ಅಂಗಡಿ ವ್ಯಾಪಾರ ತೊಂಡೇಬಾವಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 15  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 3). 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು 4.ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಸಂಜೆ 5-30 ಗಂಟೆಯಿಂದ ಸಂಜೆ 6-30 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 536/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಮೈಲಾರಿ ಬಿನ್ ಲೇಟ್ ನಾರಾಯಣಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:31/07/2021 ರಂದು ಮದ್ಯಾಹ್ನ 12:00 ಗಂಟೆಗೆ ಎ.ಎಸ್.ಐ ಶ್ರಿ. ಗೋಪಾಲ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:31-07-2021 ರಂದು ಬೆಳಿಗ್ಗೆ 10:30 ಗಂಟೆ ಸಮಯದಲ್ಲಿ ತಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-230 ನಾಗರಾಜ ಮತ್ತು ಹೆಚ್.ಸಿ-32 ಕೇಶವಮೂರ್ತಿ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಚದಲಪುರ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೊಳವನಹಳ್ಳಿ ಗ್ರಾಮದ ಜಯಚಂದ್ರಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಹೋಟೆಲ್ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕೊಳವನಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 10:45 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಜಯಚಂದ್ರಪ್ಪ ಬಿನ್ ಲೇಟ್ ಮುನಿಯಪ್ಪ, 65 ವರ್ಷ, ಒಕ್ಕಲಿಗರು, ಹೋಟೆಲ್ ಕೆಲಸ, ವಾಸ: ಕೊಳವನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 12 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 12 ಟೆಟ್ರಾ ಪ್ಯಾಕೇಟುಗಳ ಬೆಲೆ 421 ರೂಪಾಯಿ ಆಗಿರುತ್ತೆ. ಇದರ ಒಟ್ಟು ಸಾಮಾರ್ಥ್ಯ 1080 ಮೀಲಿಯಾಗಿರುತ್ತೆ. 2) 180 ML ಸಾಮರ್ಥ್ಯದ OLD TAVERN WHISKY ಯ 4 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 86.75 ಪೈಸೆ ಆಗಿದ್ದು 4 ಟೆಟ್ರಾ ಪ್ಯಾಕೇಟುಗಳ ಬೆಲೆ 347 ರೂಪಾಯಿ ಆಗಿರುತ್ತೆ. ಇದರ ಒಟ್ಟು ಸಾಮಾರ್ಥ್ಯ 720 ಮೀಲಿಯಾಗಿರುತ್ತೆ, 3) 180 ML ಸಾಮರ್ಥ್ಯದ BAGPIPER DELUXE WHISKY ಯ 2 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 106.23 ಪೈಸೆ ಆಗಿದ್ದು 2 ಟೆಟ್ರಾ ಪ್ಯಾಕೇಟುಗಳ ಬೆಲೆ 212 ರೂಪಾಯಿ ಆಗಿರುತ್ತೆ. ಇದರ ಒಟ್ಟು ಸಾಮಾರ್ಥ್ಯ 360 ಮೀಲಿಯಾಗಿರುತ್ತೆ, 4) 90 ML ಸಾಮರ್ಥ್ಯದ HAYWARDS CHEERS  WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು,5) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 10:50 ಗಂಟೆಯಿಂದ ಬೆಳಿಗ್ಗೆ 11:40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:31/07/2021 ರಂದು ಮದ್ಯಾಹ್ನ 13:00 ಗಂಟೆಗೆ ಪಿರ್ಯಾದಿ ಈಶ್ವರರೆಡ್ಡಿ ಬಿನ್ ನಾರಾಯಣರೆಡ್ಡಿ, 48 ವರ್ಷ, ವಕ್ಕಲಿಗರು, ಜಿರಾಯ್ತಿ ಮತ್ತು ಕೂಲಿ, ವಾಸ ರಾಘವಂಪಲ್ಲಿ ಗ್ರಾಮ, ಭತ್ತಲಪಲ್ಲಿ(ಮ),  ಧರ್ಮವರಂ(ತಾ), ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ-26/07/2021 ರಂದು ಬೆಳಿಗ್ಗೆ ಭತ್ತಲಪಲ್ಲಿ ಗ್ರಾಮದಿಂದ ಪಪ್ಪಾಯಿಯನ್ನು AP02-TJ-0297 ಬೊಲೇರೊ ವಾಹನದಲ್ಲಿ ತುಂಬಿಕೊಂಡು ಬೆಂಗಳೂರು  ನಗರಕ್ಕೆ ಹೋಗಿ ಅನ್ ಲೋಡ್ ಮಾಡಿ ದಿನಾಂಕ-27/07/2021 ರಂದು ಸಂಜೆ 07.00 ಗಂಟೆಗೆ ಬೆಂಗಳೂರು ನಗರದಿಂದ  ಬೊಲೋರೋ ವಾಹನದ ಮುಂಭಾದಲ್ಲಿ ಕುಳಿತುಕೊಂಡು ಅದರ ಚಾಲಕನಾದ ಆನಂದರೆಡ್ಡಿ ಬಿನ್ ನಾರಾಯಣರೆಡ್ಡಿ ರವರು ಚಾಲನೆ ಮಾಡಿಕೊಂಡು ಎನ್.ಎಚ್-44 ರಸ್ತೆಯ ಮಾರ್ಗವಾಗಿ ರಾತ್ರಿ 10:30 ಗಂಟೆಗೆ ನಾಗಾರ್ಜುಜುನ ಕಾಲೇಜು ಮುಂಭಾಗದ ಪ್ಲೈಓವರ್ ಮೇಲೆ ಬರುತ್ತಿದ್ದಾಗಿ ನಾನು ಕುಳಿತಿದ್ದ ಬೊಲೋರೋ ವಾಹನದ ಚಾಲಕ ಆನಂದರೆಡ್ಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮುಂದೆ ಹೋಗುತ್ತಿದ್ದ ಲಾರಿಯನ್ನು ತಪ್ಪಿಸಲು ಎಡಭಾಗಕ್ಕೆ ಬಂದಾಗ ಪ್ಲೈಓವರ್ ಡಿವೈಡರ್ ಗೋಡೆಗೆ ಡಿಕ್ಕಿ ಹೊಡೆಸಿ ಅಪಘತಪಡಿಸಿದ ಪರಿಣಾಮ ತನಗೆ ಮೂಗಿಗೆ ಮತ್ತು ಎಡ ಕಣ್ಣಿನ ಕೆಳಭಾಗ ಮತ್ತು ಎಡಭಾಗದ ದವಡೆಗೆ ರಕ್ತ ಗಾಯಗಳಾಗಿದ್ದು ಮತ್ತು ಸೊಂಟಕ್ಕೆ ಮೂಗೇಟು ಉಂಟಾಗಿರುತ್ತವೆ. AP02-TJ-0297 ವಾಹನದ ಮುಂಭಾಗ ಪೂರ್ತಿ ಜಖಂಗೊಂಡಿದ್ದಾಗ ತನ್ನನ್ನು ಅಲ್ಲೇ ಬರುತ್ತಿದ್ದ ಸಾರ್ವಜನಿಕರು ಉಪಚರಿಸಿ ನನ್ನನ್ನು 108 ಆಂಬೂಲೆನ್ಸ್ ನಲ್ಲಿ ಚಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದರು. ಅಲ್ಲಿಂದ ಅನಂತಪುರ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದರು. ತಾನು ಚಿಕಿತ್ಸೆ ಪಡೆದು ದಿನಾಂಕ-29/07/2021 ರಂದು ಬಿಡುಗಡೆಹೊಂದಿ ಈ ದಿನ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ. ತನಗೆ ಅಪಘಾತಪಡಿಸಿದ AP02-TJ-0297 ಬೊಲೋರೋ ಮತ್ತು ಅದರ ಚಾಲಕನಾದ ಆನಂದರೆಡಿ ಬಿನ್  ನಾರಾಯಣರೆಡ್ಡಿ, 42 ವರ್ಷ, ವಕ್ಕಲಿಗರು, ಚಾಲಕ, ವಾಸ ರಾಘವಂಪಲ್ಲಿ ಗ್ರಾಮ, ಭತ್ತಲಪಲ್ಲಿ(ಮ), ಧರ್ಮವರಂ(ತಾ), ಅನಂತಪುರ ಜಿಲ್ಲೆ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

13. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30-07-2021 ರಂದು ಮದ್ಯಾಹ್ನ 12-30 ಗಂಟೆಗೆ ಮಾನ್ಯ CPI, ಚೇಳೂರು ವೃತ್ತ ರವರು ಮಾಲು, ಆರೋಪಿ, & ಪಂಚನಾಮೆ ಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ದಾಖಲಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:30/07/2021 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ತಾವು ಸಿಬ್ಬಂದಿಯಾದ ಸಿ.ಹೆಚ್.ಸಿ-209 ಖಲಂಧರ್, ಹಾಗೂ ಚಾಲಕ ಎ.ಪಿ.ಸಿ-110 ನರಸಿಂಹಮೂರ್ತಿ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-6399 ರಲ್ಲಿ ನಾರೇಮದ್ದೇಪಲ್ಲಿ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಶಿವಪುರ ಗ್ರಾಮದ ನಾಗ ರಾಜ.ಬಿ ಬಿನ್ ಚಿನ್ನಪ್ಪಯ್ಯ, ಎಂಬುವವರು ತನ್ನ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚರೊಂದಿಗೆ ಮೇಲ್ಕಂಡ ನಾಗರಾಜ.ಬಿ ಬಿನ್ ಚಿನ್ನಪ್ಪಯ್ಯ ರವರ ಅಂಗಡಿಯ ಬಳಿ ಹೋಗಿ ಜೀಪನ್ನು ನಿಲ್ಲಿಸುತ್ತಿ ದ್ದಂತೆ ಜೀಪನ್ನು ಕಂಡು ಅಂಗಡಿಯ ಮುಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು, ಸ್ಥಳ ದಲ್ಲಿದ್ದ ಅಂಗಡಿ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ನಾಗರಾಜ.ಬಿ ಬಿನ್ ಚಿನ್ನಪ್ಪಯ್ಯ, 48 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ನಾಯಕರು, ಶಿವಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ  90 ML ನ 25 ಹೈವಾರ್ಡ್ಸ ಚೀಯರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೆಟ್ ಗಳು (2 ಲೀಟರ್ 250 ಎಂ.ಎಲ್ ಮದ್ಯ, ಅದರ ಬೆಲೆ ಸುಮಾರು  878/- ರೂ), ಒಂದು ಲೀಟರ್ ನ 01 ಖಾಲಿ ವಾಟರ್ ಬಾಟಲ್, 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ಎಂ.ಎಲ್ ನ 01 ಖಾಲಿ ಹೈವಾರ್ಡ್ಸ  ಚೀಯರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೆಟ್ ಇದ್ದು ನಾಗರಾಜ ರವರನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುವುದಾಗಿ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 11-00 ರಿಂದ ಮದ್ಯಾಹ್ನ 12-00 ಗಂಟೆಯವರೆಗೂ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30-07-2021 ರಂದು ಸಂಜೆ 6-45 ಗಂಟೆಗೆ ಶ್ರೀ ಎನ್.ರತ್ನಯ್ಯ, ಪಿ.ಎಸ್.ಐ., ಪಾತಪಾಳ್ಯ ಪೊಲೀಸ್ ಠಾಣೆರವರು ಮಾಉ, ಆರೋಪಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:30-07-2021 ರಂದು ಸಂಜೆ  ತಾನು ಸಿಬ್ಬಂದಿಯವರಾದ ಸಿಪಿಸಿ-436 ನಂದೀಶ್ವರ ನೆಲ್ಕುದ್ರೆ ಹಾಗೂ ಚಾಲಕ ಎ.ಪಿ.ಸಿ-98 ಶ್ರೀನಾಥರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ರಲ್ಲಿ ರಾಚವಾರಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ರಾಚವಾರಪಲ್ಲಿ ಗ್ರಾಮದ ಗಂಗಾಧರ ಬಿನ್ ಬೀಷ್ಮಪ್ಪ ಎಂಬುವವರು ತಮ್ಮ ಹೋಟೆಲ್ ನಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವುಗಳು ಅಲ್ಲಿಗೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ಗಂಗಾಧರ ಬಿನ್ ಬೀಷ್ಮಪ್ಪ, 31 ವರ್ಷ, ಬೆಸ್ತರು, ವ್ಯಾಪಾರ, ಸೋಮನಾಥಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ ಗಳು ಇದ್ದು, (900 ಎಂ.ಎಲ್, ಅದರ ಬೆಲೆ 350/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್.ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಒಂದು ಖಾಲಿ ಟೆಟ್ರಾ ಪ್ಯಾಕೆಟ್ ಇದ್ದು, ಆರೋಪಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 5-30 ಗಂಟೆಯಿಂದ 6-15 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.255/2021 ಕಲಂ. 447,504,506 ಐ.ಪಿ.ಸಿ:-

  ದಿನಾಂಕ:30.07.2021 ರಂದು ರಾತ್ರಿ 8.30 ಗಂಟೆಗೆ ಪಿರ್ಯಾದಿದಾರರಾದ ಪಾರ್ವತಮ್ಮ ಕೋಂ ಲೇಟ್ ಮನೋಹರ, 60 ವರ್ಷ, ಕೊರಚರು, ಗೃಹಿಣಿ ಅನೂರು ಗ್ರಾಮ ಶಿಡ್ಲಘಟ್ಟ ತಾಲ್ಲುಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ತಾತನಾದ ಮುನಿವೆಂಕಟಪ್ಪ ರವರಿಗೆ 1 ನೇ ನಾರಾಯಣಪ್ಪ, 2 ನೇ ಹನುಮಂತರಾಯಪ್ಪ, 3 ನೇ ವೆಂಕಟರಾಯಪ್ಪ ಎಂಬ ಮೂರು ಜನ ಗಂಡು ಮಕ್ಕಳಿದ್ದು 3 ನೇ ಮಗನಾದ ವೆಂಕಟರಾಯಪ್ಪ ರವರು ತಮ್ಮ ತಂದೆಯಾಗಿರುತ್ತಾರೆ. ತಮ್ಮ ದೊಡ್ಡಪ್ಪನಾದ ನರಾಯಣಪ್ಪ ರವರು ಮದುವೆಯಾದಾಗಿನಿಂದಲು ಅವರ ಅತ್ತೆಯ ಮನೆಯಾದ ಬಚ್ಚನಹಳ್ಳಿ ಗ್ರಾಮದಲ್ಲಿಯೇ ವಾಸವಾಗಿರುತ್ತಾರೆ. ತಮ್ಮ ತಾತನಾದ ಮುನಿವೆಂಕಟಪ್ಪ ರವರ ಹೆಸರಿನಲ್ಲಿ ಅನೂರು ಗ್ರಾಮದ ಸರ್ವೆ ನಂ 111 ರಲ್ಲಿ 5.16 ಗುಂಟೆ ಜಮೀನು ಇದ್ದು ಈ ಜಮೀನು ನನ್ನ ತಾತನಾದ ಮುನಿವೆಂಕಟಪ್ಪ ರವರ ಸ್ವಯಾರ್ಜಿತ ಆಸ್ತಿಯಾಗಿರುತ್ತೆ. ನಂತರ ತಮ್ಮ ತಾತ ಮುನಿವೆಂಕಟಪ್ಪ ರವರು ಮರಣ ಹೊಂದಿದ್ದ ನಂತರ ತಮ್ಮ ತಾತನ ಹೆಸರಿನಲ್ಲಿದ್ದ 5 ಎಕರೆ 16 ಗುಂಟೆ ಜಮೀನನ್ನು ಪವತಿ ಅದಾರದ ಮೇಲೆ ತಮ್ಮ ದೊಡ್ಡಪ್ಪನಾದ ಹನುಮಂತರಾಯಪ್ಪ ರವರ ಹೆಸರಿಗೆ ಬಂದಿರುತ್ತೆ. ನಂತರ ತಮ್ಮ ತಂದೆಯಾದ ವೆಂಕಟರಾಯಪ್ಪ ರವರು ಹನುಮಂತರಾಯಪ್ಪ ರವರಿಗೆ ತಮಗೆ ಬರಬೇಕಾದ ಬಾಗದ ಜಮೀನು ವಿಭಾಗ ಮಾಡಿ ಕೊಡು ಎಂದು ತಮ್ಮ ದೊಡ್ಡಪ್ಪನಾದ ಹನುಮಂತರಾಯಪ್ಪ ರವರು 5.16 ಗುಂಟೆ ಜಮೀನನ್ನು 2.29 ಗುಂಟೆಯಂತೆ ವಿಭಾಗಗಳು ಮಾಡಿಕೊಂಡಿರುತ್ತಾರೆ. ತಮ್ಮ ತಂದೆಯಾದ ವೆಂಕಟರಾಯಪ್ಪ ರವರಿಗೆ ತಾನು ಒಬ್ಬಳೇ ಮಗಳಾಗಿದ್ದು ತಮ್ಮ ತಂದೆ ಭಾಗಕ್ಕೆ ಬಂದಿದ್ದ ಜಮೀನನ್ನ  ತನ್ನ ಸ್ವಾಧೀನಕ್ಕೆ ಕೊಟಿದ್ದು ಅಂದಿನಿಂದ ನಾನೇ ಅನುಭದಲ್ಲಿರುತ್ತೇನೆ. ತಾನು ಅನುಭವದಲ್ಲಿದ್ದ ಜಮೀನಿನಲ್ಲಿ ರಾಗಿ ಬೆಳೆಯನ್ನು ಬೆಳೆದುಕೊಳ್ಳುತ್ತಿರುತ್ತೇನೆ. ನಂತರ ಜಮೀನಿನಲ್ಲಿ ನೀಲಿಗಿರಿ ಮರಗಳನ್ನು ಬೆಳೆದಿರುತ್ತೇನೆ ತಮ್ಮ ತಂದೆಯವರು ತಮ್ಮ ದೊಡ್ಡಪ್ಪ ರವರಿಗೆ ಹಲುವಾರು ಬಾರಿ ನನಗೆ ಬಾಗಬರಬೇಕಾಗಿರುವ ಜಮೀನನ್ನು ನನ್ನ ಹೆಸರಿಗೆ ದಾಖಲೆ ಮಾಡಿಕೊಡುವಂತೆ ಕೇಳಿದರೂ ಸಹ ಈಗ ಅನುಭವದಲ್ಲಿದ್ದೀವಿ ಅಲ್ಲವಾ ಮುಂದೆ ಯಾವಾಗಲದರೂ ತಮ್ಮತಮ್ಮ ಹೆಸರಿಗೆ ದಾಖಲೆಗಳನ್ನು ಮಾಡಿಕೊಳ್ಳೋಣ ಎಂದು ಸಬೂಬು ಹೇಳಿಕೊಂಡು ಬರುತಿದ್ದರು ನಂತರ ತಮ್ಮ ದೊಡ್ಡಪ್ಪನಾದ ಹನುಮಂತರಾಯಪ್ಪ ರವರು ನಮಗೂ ಯಾರಿಗೂ ತಿಳಿಯದಂತೆ ಅನೂರು ಗ್ರಾಮದ ಸರ್ವೆ ನಂ 111 ರಲ್ಲಿನ 5.16 ಗುಂಟೆ ಜಮೀನನ್ನ ದಾನ ಪತ್ರದ ಮೂಲಕ ಹನುಮಂತರಾಯಪ್ಪ ರವರ ಮಗಳಾದ ಗೌರಮ್ಮ ರವರ ಮಗನಾದ ಮಂಜುನಾಥ ರವರ ಹೆಸರಿಗೆ 9 ವರ್ಷಗಳ ಹಿಂದೆ ದಾನ ಪತ್ರದ ಮೂಲಕ ಮಂಜುನಾಥ ಹೆಸರಿಗೆ ದಾಖಲೆಗಳನ್ನು ಮಾಡಿಕೊಂಡಿದ್ದು ಈ ವಿಚಾರ ನಮಗೆ ತಿಳಿದು ನಾವುಗಳು ಘನ ನ್ಯಾಯಾಲಯದಲ್ಲಿ ಓಎಸ್ ನಂ 355/2015 ರಂತೆ ದಾವೆ ಹೂಡಿದ್ದು ಪ್ರಸ್ತುತ ದಾವೆಯು ಘನ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುತ್ತೆ. ಹೀಗಿರುವಲ್ಲಿ ದಿನಾಂಕ:09.03.2021 ರಂದು ಮದ್ಯಾಹ್ನ 12.00 ಗಂಟೆಯ ಸಮಯದಲ್ಲಿ ತಾನು ಸ್ವಾಧೀನನುಭವದಲ್ಲಿರುವ 2.29 ಗುಂಟೆ ಜಮೀನಿನಲ್ಲಿ ಕೆಲಸ ಮಾಡುತಿದ್ದಾಗ ಹನುಮಂತರಾಯಪ್ಪ ರವರ ಮೊಮ್ಮಗನಾದ ಮಂಜುನಾಥ ಬಿನ್ ಪೂಲಯ್ಯ ಅನೂರು ಗ್ರಾಮ ರವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶಮಾಡಿ ನನ್ನನ್ನು ಕುರಿತು ಲೋಪರ್ ಮುಂಡೆ ಬೇವರ್ಸಿ ಮುಂಡೆ ಈ ಜಮೀನು ನಮ್ಮ ತಾತ ಹನುಂತರಾಯಪ್ಪ ರವರದ್ದು ನಮ್ಮ ತಾತ ನನಗೆ ದಾನ ಪತ್ರ ಮಾಡಿಕೊಟ್ಟಿದ್ದಾನೆ ನೀನು ಯಾರೂ ಈ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಇನ್ನೊಂದು ಸಲ ಈ ಜಮೀನಿನ ವಿಚಾರಕ್ಕೆ ಬಂದುರೆ ನಿನ್ನನ್ನು ಸಾಯಿಸಿ ಇದೇ ಜಮೀನಿನಲ್ಲಿ ಊತು ಬೀಡುತ್ತೆನೆಂದು ಪ್ರಾಣ ಬೆದರಿಕೆ ಹಾಕಿ ತನ್ನ ಮೇಲೆ ಗಲಾಟೆ ಮಾಡುತಿದ್ದಾಗ ತಮ್ಮ ಅಕ್ಕ ಪಕ್ಕದ ಜಮೀನಿನವರು ಬಂದು ಜಗಳವನ್ನು ಬಿಡಿಸಿರುತ್ತಾರೆ ನಂತರ ತಮ್ಮ ಗ್ರಾಮದ ಪಂಚಾಯ್ತಿದಾರರು ರಾಜಿ ಪಂಚಾಯ್ತಿ ಮಾಡೋಣವೆಂತ ತಿಳಿಸಿದ್ದು ಇಷ್ಟು ದಿನಗಳಾದರು ಸಹ ಮಂಜುನಾಥ ಬಿನ್ ಫೂಲಯ್ಯ ರವರು ರಾಜಿ ಪಂಚಾಯ್ತಿಗೆ ಬಾರದ ಕಾರಣ ತಾನು ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ತಾನು ಸ್ವಾಧೀನನುಭವದಲ್ಲಿರುವ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದಿರಿಕೆ ಹಾಕಿರುವ ಮಂಜುನಾಥ ಬಿನ್ ಫೂಲಯ್ಯ ರವರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

16. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 32(2),15(A) ಕೆ.ಇ ಆಕ್ಟ್:-

  ದಿನಾಂಕ.30.07.2021 ರಂದು ರಾತ್ರಿ 7-30 ಗಂಟೆಗೆ ಕೆ.ಸತೀಶ್ ಪಿ.ಎಸ್.ಐ (ಕಾ.ಸು) ರವರು ಅಮಾನತ್ತು ಪಡಿಸಿದ ಮಾಲುಗಳು ಮಹಜರ್ ನೊಂದಿಗೆ ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ದಿನಾಂಕ:30-07-2021 ರಂದು ಸಂಜೆ ಸುಮಾರು 5-45 ಗಂಟೆಗೆ ನಾನು ಹೆಚ್.ಸಿ.97 ಸುಬ್ರಮಣಿ ಜೀಪ್ ಚಾಲಕ ಮಂಜುನಾಥ ರವರೊಂದಿಗೆ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆ, ಡಿಗ್ರಿ ಕಾಲೇಟ್, ಅಮೀರ್ ಬಾಬಾದರ್ಗಾ, ಇಲಾಹಿನಗರ ಕಡೆ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ  ರಾಜೀವ್ ಗಾಂಧೀ ಲೇಔಟ್ 150 ಮನೆಗಳ ಬಳಿ ನಯಾಜ್ ಬಿನ್ ಹಸ್ಸಿಂದ, ಚಿಲ್ಲರೆ ಅಂಗಡಿ ವ್ಯಾಪಾರಿ ಎಂಬುವರು ಸಾರ್ವಜನಿಕರಿಗೆ ಪರವಾನಗಿ ಇಲ್ಲದೆ ಅವರ ಅಂಗಡಿಯ ಮುಂದೆ ಮದ್ಯಪಾನ ಮಾಡಲು ಅನುವು ಮಾಡಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಕೂಡಲೇ ಪಂಚರೊಂದಿಗೆ ನಾವು ಮೇಲ್ಕಂಡ ಸ್ಥಳಕ್ಕೆ ಸಂಜೆ 6-15 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿದ್ದ ಆಸಾಮಿಯು ಸಹ ಮದ್ಯದ ಪಾಕೇಟ್ ಗಳನ್ನು ಬಿಟ್ಟು ಓಡಿ ಹೋಗಿದ್ದು, ಆತನ ಹೆಸರು ವಿಳಾಸ ತಿಳಿಯಲಾಗಿ ನಯಾಜ್ ಬಿನ್ ಹಸ್ಸಿಂದ, ಸುಮಾರು 45 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, 150 ಮನೆಗಳ ಬಡಾವಣೆಯಲ್ಲಿ 41 ನೇ ಮನೆಯಲ್ಲಿ ವಾಸ ರಾಜೀವ್ ಗಾಂದೀ ಲೇಔಟ್, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಟ್ಟು ಹೋಗಿದ್ದ ಮದ್ಯದ ಪಾಕೇಟ್ ಗಳನ್ನು ಪರಿಶೀಲಿಸಲಾಗಿ Original Choice Delux Whisky 90 ML ನ 17 ಮದ್ಯದ ಪಾಕೆಟ್ ಗಳಿದ್ದು, ಒಂದರ ಬೆಲೆ 35.13 ರೂಗಳಾಗಿದ್ದು, 17 ರ ಬೆಲೆ ಒಟ್ಟು 597-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ Original Choice Delux Whisky 90 ML  ನ 02 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತೆ. ಸದರಿ ಆಸಾಮಿಯು ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡಲು ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿರುವುದಾಗಿ ತಿಳಿದು ಕಂಡು ಬಂದಿರುತ್ತೆ. ಸ್ಥಳದಲ್ಲಿ ಸಿಕ್ಕಿದ 17 ಮದ್ಯದ ಪಾಕೇಟ್, 2-ಖಾಲಿ ಪಾಕೇಟ್ & ಖಾಲಿ ಗ್ಲಾಸ್ ಗಳನ್ನು ಮುಂದಿನ ತನಿಖೆ ಬಗ್ಗೆ ಸಂಜೆ 6-20 ರಿಂದ 6-50 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಸ್ಥಳದಲ್ಲಿ ಮಾಲುಗಳನ್ನು  ಠಾಣೆಗೆ ತೆಗೆದುಕೊಂಡು ಬಂದು ಒಪ್ಪಿಸಿದ್ದು, ನಯಾಜ್ ರವರು ತಲೆಮರೆಸಿಕೊಂಡಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.90/2021 ಕಲಂ.32(3),15(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

Last Updated: 31-07-2021 05:56 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080