ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 81/2021 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ & 51(b) THE DISASTER MANAGEMENT ACT, 2005 :-

    ದಿನಾಂಕ: 30/05/2021 ರಂದು  ರಾತ್ರಿ 8-00 ಗಂಟೆಯ ಸಮಯದಲ್ಲಿ ಶ್ರೀ. ಬಿ.ಪಿ.ಮಂಜು ಪಿ.ಎಸ್.ಐ. ರವರು ಠಾಣೆಯಲ್ಲಿ ನೀಡಿದ ದೂರಿನ  ಸಾರಾಂಶವೇನೆಂದರೆ, ಈ ದಿನ  ಸಂಜೆ  5-30 ಗಂಟೆಯ ಸಮಯದಲ್ಲಿ ಸಂಕ್ರಾಮಿಕ ಕೋವಿಡ್-19 ಕಾಯಿಲೆಯ ಬಗ್ಗೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲು  ಚಿಕ್ಕಬಳ್ಳಾಪುರ ಉಪ ವಿಭಾಗದ ಡಿ,ವೈ,ಎಸ್,ಪಿ ಸಾಹೇಬರು ಸರ್ಕಾರಿ  ಜೀಪು ಸಂಖ್ಯೆ ಕೆಎ.40.ಜಿ.0855 ರ ವಾಹನದಲ್ಲಿ, ಚಾಲಕ ಎ.ಹೆಚ್.ಸಿ.119. ಅಶೋಕ, ಸಿಬ್ಬಂದಿಯವರಾದ  ಹೆಚ್.ಸಿ. 205 ರಮೇಶ. ಹೆಚ್.ಸಿ. 59 ಶ್ರೀನಿವಾಸ. ರವರೊಂದಿಗೆ ಮತ್ತು  ತಾನು ಜೀಪು ಸಂಖ್ಯೆ ಕೆ,ಎ 40 ಜಿ-567 ರ ವಾಹನದಲ್ಲಿ ಚಾಲಕ  ಮಂಜುನಾಥ ಎ.ಹೆಚ್.ಸಿ. 23 ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 38 ಸುರೇಶ. ಪಿಸಿ. 292 ಸಲೀಮುಲ್ಲಾ ಖಾನ್  ರವರೊಂದಿಗೆ ಗಸ್ತಿನಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ತಿಪ್ಪೇನಹಳ್ಳಿ ಗ್ರಾಮದ ಆನಂದ  ಬಿನ್ ಲೇಟ್ ಮುನಿರಾಜು 24ವರ್ಷ ವಕ್ಕಲಿಗರು  ರವರ ಚಿಲ್ಲರೆ ಅಂಗಡಿಯ ಪಕ್ಕದಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಕೊಂಡು, ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ತಿಪ್ಪೇನಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಆನಂದ ರವರ  ಚಿಲ್ಲರೆ ಅಂಗಡಿಯ ಬಳಿ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ  ಚಿಲ್ಲರೆ ಅಂಗಡಿಯ ಪಕ್ಕದಲ್ಲಿ ಉತ್ತರದ ಕಡೆ ಸಾರ್ವಜನಿಕರು ಗುಂಪು ಸೇರಿಕೊಂಡಿದ್ದು. ಪೊಲೀಸರನ್ನು ನೋಡಿ ಜನರು ಓಡಿ ಹೋದರು. ಮದ್ಯವನ್ನು ಮಾರಾಟ  ಮಾಡುತ್ತಿದ್ದ ಆಸಾಮಿ ಅಲ್ಲಿಯೇ ಇದ್ದು ಆಸಾಮಿಯನ್ನು ಮತ್ತು ಆತನ ವಶದಲ್ಲಿದ್ದ ಒಂದು ಬಿಳಿ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ತೆರೆದು ನೋಡಿದಾಗ ಚೀಲದಲ್ಲಿ 1) ಟ್ಯೂಬರ್ಗೋ ಬೀಯರ್ ನ 19  ಬಾಟೆಲ್ ಗಳು ಒಟ್ಟು 12 ಲೀಟರ್ 350 ಎಂ.ಎಲ್. ಇದರ ಬೆಲೆ. 2850/-  ರೂಪಾಯಿಗಳು. 2) ಓಲ್ಡ್ ಟಾವರ್ನ್ ವಿಸ್ಕಿಯ 180 .ಎಲ್. 27 ಟೆಟ್ರಾ ಪಾಕೆಟ್ ಗಳು. ಒಟ್ಟು 04 ಲೀಟರ್ 860 ಎಂ.ಎಲ್. ಇದರ ಬೆಲೆ 2322/-ರೂಪಾಯಿಗಳು. 3)  ಹೈವಾರ್ಡ್ ವಿಸ್ಕಿಯ 90 ಎಂ.ಎಲ್.ನ 16 ಟೆಟ್ರಾ ಪಾಕೆಟ್ ಗಳು ಒಟ್ಟು ಮದ್ಯ 1 ಲೀಟರ್ 440 ಎಮ್.ಎಲ್ ಆಗಿದ್ದು ಇದರ ಒಟ್ಟು ಮೌಲ್ಯವು 560/- ರೂಪಾಯಿಗಳು. 4) ಮ್ಯಾಕ್ ಡೌಲ್ಸ್ ರಮ್ 180 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ 05 ಟೆಟ್ರಾ ಪಾಕೇಟ್ಗಳು, ಇದ್ದು ಇದರ ಒಟ್ಟು ಮದ್ಯ 900 ಎಂ.ಎಲ್. ಆಗಿದ್ದು ಇದರ ಒಟ್ಟು ಮೌಲ್ಯವು 530/- ರೂಪಾಯಿಗಳು. 5) ಬ್ಯಾಗ್ ಪೈಪರ್  ಕಂಪನಿಯ 180 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ 23 ಟೆಟ್ರಾ ಪಾಕೇಟ್ ಗಳು ಇದ್ದು ಇದರ ಒಟ್ಟು ಮದ್ಯ 4 ಲೀಟರ್ 440 ಎಂ.ಎಲ್. ಆಗಿದ್ದು ಇದರ ಒಟ್ಟು ಮೌಲ್ಯವು 2438/- ರೂಗಳಾಗಿದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ಆನಂದ  ಬಿನ್ ಲೇಟ್ ಮುನಿರಾಜು 24ವರ್ಷ ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ: ತಿಪ್ಪೇನಹಳ್ಳಿ ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ವ್ಯಾಪಾರ ಮಾಡಿ ಸಂಗ್ರಹಿಸಿದ್ದ ಒಟ್ಟು ಹಣ. 3900/- ಇರುತ್ತದೆ.  ಆಸಾಮಿಯ ಬಳಿ ಮದ್ಯವನ್ನು ಸಾಗಾಣಿಕೆ ಮಾಡಲು ಮತ್ತು ಆತನ ಬಳಿ ಇಟ್ಟುಕೊಳ್ಳಲು  ಪರವಾನಿಗೆಯನ್ನು ಪಡೆದಿರುವ ಬಗ್ಗೆ ಕೇಳಲಾಗಿ  ಆಸಾಮಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂತ  ತಾನು ಸದರಿ ಮದ್ಯವನ್ನು  ಚಿಕ್ಕಬಳ್ಳಾಪುರ ನಗರದ ಚಾಣುಕ್ಯ ಬಾರ್ ನಿಂದ ತಂದಿರುವುದಾಗಿ ತಿಳಿಸಿದನು. ಸದರಿ ಅಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಸಂಜೆ  6-00 ಗಂಟೆಯಿಂದ 7-00 ಗಂಟೆಯವರೆಗೂ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡಿರುವುದಾಗಿ ಸದರಿ ಆರೋಪಿಯು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವುದು ಗೊತ್ತಿದ್ದು, ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಿ ಸಾಂಕ್ರಾಮಿಕ ರೋಗ ಹರಡಲು ಕಾರಣನಾಗಿದ್ದು  ಈತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

2. ಚಿಕ್ಕಬಳ್ಳಾಪುರ ಪುರ ಪೊಲೀಸ್ ಠಾಣೆ ಮೊ.ಸಂ. 41/2021 ಕಲಂ. 420,468,471,120B,34 ಐ.ಪಿ.ಸಿ :-

  ದಿನಾಂಕ: 30-05-2021 ರಂದು ರಾತ್ರಿ 7-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾಧಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ವೇನೆಂದರೆ,  ತಾನು ಬೆಂಗಳೂರಿನಲ್ಲಿ ಹೋಟಲ್ ವ್ಯವಹಾರ ಮಾಡಿಕೊಂಡಿದ್ದು ತನಗೆ  2020 ನೇ ಜನವರಿ ಮಾಹೆಯಲ್ಲಿ  ಚಿಕ್ಕಬಳ್ಳಾಪುರ ನಗರದ  ಅರ್ಚನಾ ಎಸ್ ಎಂಬುವವರು ತನ್ನ ಸ್ನೇಹಿತ ಕವನ್ ಮುಖಾಂತರ  ಪರಿಚಯವಾಗಿದ್ದು   ಸದರಿ ಅರ್ಚನಾ ಹಾಗೂ ಅಕೆಯ ತಂಗಿ ಪುಷ್ಪಾ ಹಾಗೂ ತಮ್ಮ ಶ್ರೀಹರಿ ಎಂಬುವವರು ತಮಗೆ ಅರ್ ಬಿ ಐ ನಿಂದ ಸುಮಾರು 6.35,000 ಕೋಟಿ ರೂ ಪಂಡ್ ಬಂದಿದ್ದು ಅರ್ ಬಿ ಐ ಅಕೌಂಟ್ ನಲ್ಲಿದ್ದು  ಅದಕ್ಕೆ ಟ್ಯಾಕ್ಸ್ ,ಸೆಸ್ಸ್ ಹಣ ಕಟ್ಟಿದರೆ  ಹಣ ಬಿಡುಗಡೆಯಾಗುವುದಾಗಿ  ಸಂಚು ಮಾಡಿ ನಂಬಿಸಿ  ಕೆಲವು ದಾಖಲೆಗಳನ್ನು ತೋರಿಸಿ ನಂಬಿಸಿ ತನ್ನ ಬಳಿಯಿಂದ ರೂ 23,25,000/- ರೂ ಗಳನ್ನು ಪಡೆದುಕೊಂಡು  ಮೋಸ ಮಾಡಿದ್ದು  ನಂತರ ಮೋಸದ ಅರಿವಾಗಿ  ತನ್ನ ಹಣವನ್ನು ವಾಪಸ್ಸು ನೀಡುವಂತೆ  ಒತ್ತಡ ಹೇರಿದ್ದರಿಂದ ಆಕೆಯ ಚಿಕ್ಕಬಳ್ಳಾಪುರ ಕೆನರಾ ಬ್ಯಾಂಕ್ ಚೆಕ್ ಗಳನ್ನು ನೀಡಿದ್ದು ಅವು ಬೌನ್ಸ ಆಗಿದ್ದರಿಂದ  ಕೇಸು ದಾಖಲಿಸುವುದಾಗಿ  ತಿಳಿಸಿದ್ದರಿಂದ 8,00,000/- ರೂ ವಾಪಸ್ಸು ಮಾಡಿದ್ದು ಉಳಿಕೆ 15,25,000/- ರೂಗಳನ್ನು  ಆರೋಪಿಗಳು ನೀಡದೆ  ಮೋಸ ಮಾಡಿರುವುದಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಸಿಕೊಂಡು ತನಿಖೆ  ಕೈಗೊಂಡಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 91/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

  ಪಿರ್ಯಾದಿದಾರರಾದ ನಾರಾಯಣಸ್ವಾಮಿ. ಆರ್ ಪಿ.ಎಸ್.ಐ-01  ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ; 31/05/2021 ರಂದು ಬೆಳಿಗ್ಗೆ ನಾನು ಹಾಗೂ ಠಾಣಾ ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಇದೇ ದಿನ ಬೆಳಿಗ್ಗೆ9-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಎನ್ ಆರ್ ಬಡಾವಣೆಯಲ್ಲಿ ರಸ್ತೆಯಲ್ಲಿ ಬರುವ ಭಾಗ್ಯಲಕ್ಷ್ಮೀ ಕಲ್ಯಾಣ ಮಂಟಪದ ಕೆಳಭಾಗದಲ್ಲಿರುವ  ರೈತ ಬಜಾರ್ ಅಂಗಡಿಯ  ಮಾಲಿಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು  ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಅಂಗಡಿಯ ಮಾಲಿಕರಾದ ಆನಂದರೆಡ್ಡಿ ಬಿನ್ ನಾರಾಯಣರೆಡ್ಡಿ 60 ವರ್ಷ ವಕ್ಕಲಿಗರು ರೈತ ಬಜಾರ್ ಅಂಗಡಿ ಮಾಲೀಕರು ವಾಸ ತಿಮ್ಮಸಂದ್ರ ಗ್ರಾಮ ವಾರ್ಡ ನಂಬರ್ 31,ಚಿಂತಾಮಣಿ ತಾಲ್ಲೂಕು ಪೋನ್ ನಂ.9448310524 ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಅಂಗಡಿ ಮಾಲಿಕರು ಮುಖಕ್ಕೆ ಮಾಸ್ಕ್ ಧರೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

4. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 143,147,323,324,504,506,149 ಐ.ಪಿ.ಸಿ :-

     ದಿನಾಂಕ: 31/05/2021 ರಂದು 15.00 ಗಂಟೆಗೆ ಶ್ರೀ ಮಂಜುನಾಥ ಜಿ.ಎನ್ ಬಿನ್ ಪಿ. ನರಸಿಂಹರೆಡ್ಡಿ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ಗಡಿಮಿಂಚೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು ದಿನಾಂಕ 30/05/2021 ರಂದು ತನ್ನ ಸ್ವಂತ ಕೆಲಸದ ನಿಮಿತ್ತ ಸಾದಲಿ ಗ್ರಾಮಕ್ಕೆ ಹೋಗಿ ನಂತರ ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 6.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ತನ್ನ ಜಮೀನಿನ ಬಳಿ ರಸ್ತೆಯಲ್ಲಿ ತನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ಗ್ರಾಮದ ಕಡೆಯಿಂದ ಸಾದಲಿ ಗ್ರಾಮದ ಗೋವಿಂದಸ್ವಾಮಿ ರವರು ಅವರ ದ್ವಿಚಕ್ರ ವಾಹನದಲ್ಲಿ ಬಂದಿರುತ್ತಾರೆ, ಅಲ್ಲಿ ತಿರುವು ಇದ್ದುದರಿಂದ ತನ್ನ ಮತ್ತು ಆತನ ದ್ವಿಚಕ್ರ ವಾಹನದ ಕನ್ನಡಿಗಳು ತಗುಲಿರುತ್ತವೆ. ಆಗ ಗೋವಿಂದಸ್ವಾಮಿ ಏನೋ ಲೋಪರ್ ನನ್ನ ಮಗನೆ ನೋಡಿಕೊಂಡು ಬರುವುದಕ್ಕೆ ಆಗುವುದಿಲ್ಲವಾ ಎಂದು ತನ್ನ ಮೇಲೆ ಗಲಾಟೆಗೆ ಬಂದಿರುತ್ತಾನೆ. ಆಗ ಸಾದಲಿ ಕಡೆಯಿಂದ ಬರುತ್ತಿದ್ದ ತಮ್ಮ ಗ್ರಾಮದ ರಮೇಶ ಬಿನ್ ನರಸರೆಡ್ಡಿ ಮತ್ತು ವಿಜಯಕುಮಾರ್ ಬಿನ್ ಮುನೇಶ್ವರಚಾರಿ ರವರುಗಳು ಇಬ್ಬರಿಗೂ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ. ನಂತರ ರಾತ್ರಿ ಸುಮಾರು 9.30 ಗಂಟೆ ಸಮಯದಲ್ಲಿ ಗೋವಿಂದಸ್ವಾಮಿ ಮತ್ತು ಅವರ ಮಕ್ಕಳು ಹಾಗೂ ಹೆಂಡತಿ ಮತ್ತು ಅವರೊಂದಿಗೆ ಸುಮಾರು 10 ಜನರು ಅಪರಿಚಿತರು ತನ್ನ ಮನೆಯ ಬಳಿಗೆ ಬಂದು ನೀನು ನಮ್ಮ ಗ್ರಾಮಕ್ಕೆ ಬಾರೋ ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ದಿನಾಂಕ 31/05/2021 ರಂದು ಬೆಳಿಗ್ಗೆ ಸುಮಾರು 7.00 ಗಂಟೆ ಸಮಯದಲಿ ತಾನು ಕೊತ್ತಂಬರಿ ಸೊಪ್ಪಿಗೆ ಔಷದಿಯನ್ನು ಸಿಂಪಡಿಸಲು ಔಷದಿ ತರಲು ಸಾದಲಿ ಗ್ರಾಮದ ನೇಯ್ಗೆ ನಾರಾಯಣಸ್ವಾಮಿ ರವರ ಅಂಗಡಿಯ ಬಳಿ ಹೋಗಿ  ಔಷದಿಯನ್ನು ತೆಗೆದುಕೊಳ್ಳುತ್ತಿದ್ದಾಗ ಗೋವಿಂದಸ್ವಾಮಿ ರವರ ಮಕ್ಕಳಾದ ಕೃಷ್ಣ ಮತ್ತು ಚೆಲುವ ರವರು ಅಲ್ಲಿಗೆ ಬಂದು ಏನೋ ಲೋಪರ್ ನನ್ನ ಮಗನೆ ನೆನ್ನೆ ನಮ್ಮ ತಂದೆಯ ಮೇಲೆ ಗಲಾಟೆ ಮಾಡಿದೆಯಂತೆ ಈಗ ನಮ್ಮೂರಿಗೆ ಬಂದಿದ್ದೀಯಾ ನಿನ್ನಮ್ಮನ್ನೆ ಕ್ಯಾಯಾ ಎಂದು ತನ್ನನ್ನು ಕೆಟ್ಟಕೆಟ್ಟದಾಗಿ ಬೈದು ಇಬ್ಬರೂ ತನ್ನನ್ನು ಹಿಡಿದುಕೊಂಡು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿ ಅವರ ಮನೆಯ ಕಡೆಗೆ ಎಳೆದುಕೊಂಡು ಹೋಗಲು ತನ್ನನ್ನು ಹಿಡಿದುಕೊಂಡಾಗ ಅಲ್ಲಿಗೆ ಬಂದ ಗೋವಿಂದಸ್ವಾಮಿ ಮತ್ತು ಆತನ ಹೆಂಡತಿ ಮುತ್ತುಲಕ್ಷ್ಮಿ ರವರು ಈ ನನ್ನ ಮಗನದು ಜಾಸ್ತಿಯಾಯಿತು ಸಾಯಿಸಿ ಬಿಡೋಣವೆಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಗೋವಿಂದಸ್ವಾಮಿ ತನ್ನ ತಲೆಯ ಹಣೆಯ ಮದ್ಯದಲ್ಲಿ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ. ನಂತರ ಮುತ್ತುಲಕ್ಷ್ಮೀಯೂ ಸಹ ಕಲ್ಲಿನಿಂದ ತನ್ನ ಮೂಗಿನ ಮೇಲೆ ಮತ್ತು ಮುಂಭಾಗದ ಕೆಳಭಾಗದ ಹಲ್ಲಿಗೆ ಹೊಡೆದು ನೋವುಂಟು ಮಾಡಿರುತ್ತಾಳೆ. ಗಲಾಟೆಯ ಸಮಯದಲ್ಲಿ ತನ್ನ ಬಳಿ ಇದ್ದ 11000-00 ರೂ ಹಣ ಬಿದ್ದು ಎಲ್ಲಿಯೋ ಕಳೆದು ಹೋಗಿರುತ್ತದೆ. ಆಗ ಸಾದಲಿ ಗ್ರಾಮದ ಸೀನಪ್ಪ ಬಿನ್ ರಾಮಪ್ಪ ಮತ್ತು ದೇವರಾಜ ಬಿನ್ ಮಲ್ಲಪ್ಪ ರವರುಗಳು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ನಂತರ ಸಾದಲಿ ಗ್ರಾಮದ ನನ್ನ ತಮ್ಮ ಸೀತಾರಾಮರೆಡ್ಡಿ ಬಿನ್ ಪ್ರಭಾಕರರೆಡ್ಡಿ ರವರು ಬಂದು ಗಾಯಗೊಂಡಿದ್ದ ತನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಾನು ಅಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ದೂರನ್ನು ನೀಡುತ್ತಿದ್ದು ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ 63/2021 ಕಲಂ 143,147,323,324,504,506 ರೆವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.128/2021 ಕಲಂ. 323,324,504,34 ಐ.ಪಿ.ಸಿ :-

     ದಿನಾಂಕ:30/05/2021 ರಂದು ಸಂಜೆ 17-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಬಿನ್ ಲೇಟ್ ಆದಿನಾರಾಯಣಪ್ಪ, 35 ವರ್ಷ, ಆದಿ ಕರ್ನಾಟಕ, ಟ್ರಾಕ್ಟರ್ ಚಾಲಕ ವಾಸ ಚೋಳಶೆಟ್ಟಿಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:28/05/2021 ರಂದು ಮದ್ಯಾಹ್ನ ಪಿರ್ಯಾದಿದಾರರ ಮನೆಯ ಬಳಿ ಇದ್ದ ಸೀಬೆ ಗಿಡ ಹಾಗೂ ಇತರೆ ಗಿಡಗಳನ್ನು ಪಿರ್ಯಾದಿದಾರರ ಮನೆಯ ಹಿಂಭಾಗದಲ್ಲಿರುವ ಶಿವಪ್ಪನವರ ಮೇಕೆಗಳು ತಿಂದು ಹಾಕಿದ್ದು, ಈ ಬಗ್ಗೆ ಸಂಜೆ ಸುಮಾರು 7-00 ಗಂಟೆಯಲ್ಲಿ ಪಿರ್ಯಾದಿದಾರರ ಪತ್ನಿ ಸಿರೀಷಾ, ಶಿವಪ್ಪ ರವರ ಪತ್ನಿ ಗಂಗರಾಜಮ್ಮ ರವರಿಗೆ ಏಕೆ ನಿಮ್ಮ ಮೇಕೆಗಳು ನಮ್ಮ ಗಿಡಗಳನ್ನು ತಿಂದು ಹಾಕಿದ ಬಗ್ಗೆ ಕೇಳಿದ್ದಕ್ಕೆ ಹೆಂಗಸರು ಬೈದಾಡಿಕೊಳ್ಳುತ್ತಿದ್ದು ಆ ಸಮಯದಲ್ಲಿ ನಾನು ಕುಡಿಯುವ ನೀರು ತರಲು ಹೋಗಿ ಮನೆಗೆ ವಾಪಸ್ಸು ಬಂದಾಗ ಕಿತ್ತಾಡಿಕೊಳ್ಳುತ್ತಿದ್ದನ್ನು ನೋಡಿ ಏಕೆ ಈ ರೀತಿ ಜಗಳ ಮಾಡುತ್ತೀಯಾ ಎಂದು ಕೇಳುತ್ತಿದ್ದಂತೆಯೇ ಶಿವಪ್ಪನವರ ಅಣ್ಣ ಗಂಗಾಧರಪ್ಪ ಏಕಾ ಏಕಿ ತನ್ನ ಕೈಯ್ಯಲ್ಲಿದ್ದ ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಆಗ ಗಲಾಟೆ ಶಬ್ದ ಕೇಳಿ ಅಲ್ಲಿಗೆ ಬಂದ ಕೃಷ್ಣ ಬಿನ್ ಗಂಗಪ್ಪ ರವರು ಗಲಾಟೆ ಬಿಡಿಸಲು ಬಂದಾಗ ಅವರಿಗೂ ಸಹ ಕೋಲಿನಿಂದ ಪಕ್ಕೆಲುಬು ಎಡಭಾಗಕ್ಕೆ ಹೊಡೆದು ಮೂಗೇಟು ಉಂಟುಮಾಡಿರುತ್ತಾನೆ. ಪತ್ನಿ ಸಿರಿಷಾಗೆ ಗಂಗರಾಜಮ್ಮ ರವರು ಜುಟ್ಟು ಹಿಡಿದು ಎಳೆದಾಡಿ, ಕೈಗಳಿಂದ ಹೊಡೆದು, ಕೆಳಕ್ಕೆ ತಳ್ಳಿ ಕಾಲುಗಳಿಂದ ಹೊದ್ದಿರುತ್ತಾರೆ, ಆಗ ಅವಳನ್ನು ಬಿಡಿಸಲು ಬಂದ ಶೈಲಜಾ ಕೋಂ ನಾಗರಾಜು ರವರಿಗೂ ಸಹ ಗಂಗರಾಜಮ್ಮ ಮತ್ತು ನಾರಾಯಣಮ್ಮ ಕೈಗಳಿಂದ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ಆಗ ನಾವು ಅವರುಗಳಿಂದ ಬಿಡಿಸಿಕೊಂಡು ಮನೆಯೊಳಗೆ ಹೋಗಿ ಆಂಬುಲೆನ್ಸ್ ಗೆ ಕರೆ ಮಾಡಿ ಆಂಬುಲೆನ್ಸ್ ಬಂದ ನಂತರ ನಾವು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಕರೋನಾ ಇದ್ದ ಕಾರಣ ಅದೇ ದಿನ ನಾವು ಗ್ರಾಮಕ್ಕೆ ವಾಪಸ್ಸು ಹೋಗಿ ಈ ದಿನ ಬಂದು ತಡವಾಗಿ ಠಾಣೆಯಲ್ಲಿ ದೂರನ್ನು ನೀಡುತ್ತಿದ್ದು ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.173/2021 ಕಲಂ. 269,271 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ:-30/05/2021 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿದಾರರಾದ ಎ.ಎಸ್.ಐ ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 30/05/2021 ರಂದು ಬೆಳಿಗ್ಗೆ ಪಿ.ಎಸ್.ಐ ರವರು ತನಗೆ ಠಾಣಾ ಸರಹದ್ದಿನ ಗ್ರಾಮಗಳ ಗಸ್ತು ಮಾಡುವ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾನು ಈ ದಿನ ಠಾಣಾ ಸರಹದ್ದಿನ ಗ್ರಾಮಗಳಾದ ಡಬರಗಾನಹಳ್ಳಿ, ಜಪ್ತಿಹೊಸಹಳ್ಳಿ, ತುಮ್ಮನಹಳ್ಳಿ, ಸೊರಕಾಯಲಹಳ್ಳಿ, ದೊಡ್ಡದಾಸರಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚಿಕ್ಕದಾಸರಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಸದರಿ ರಸ್ತೆಯ ಪಕ್ಕದಲ್ಲಿ ಒಬ್ಬ ಮಹಿಳೆಯು ತನ್ನ ಅಂಗಡಿಯನ್ನು ತೆರೆದು ಟೀಯನ್ನು ಮಾರಾಟ ಮಾಡುತ್ತಿದ್ದು, ಅಂಗಡಿಯ ಮುಂಭಾಗದ ಟೇಬಲ್ ಮೇಲೆ ಯಾರೋ 6 ಜನ ಆಸಾಮಿಗಳು ಅಂಗಡಿಯ ಮುಂಭಾಗದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕುಳಿತುಕೊಂಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅಂಗಡಿಯ ಮುಂಭಾಗದಲ್ಲಿ ಮಾರ್ಕ್ ಸಹ ಮಾಡಿರುವುದಿಲ್ಲ ಹಾಗು ಮಾಸ್ಕ್ ಗಳನ್ನು ಧರಿಸದೇ ಸರ್ಕಾರವು ಕೋವಿಡ್-19 ರೋಗಾಣು ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ಆದೇಶವನ್ನು ಹೊರಡಿಸಿದ್ದರೂ ಸಹ ಸದರಿ ಅಂಗಡಿಯ ಮಾಲೀಕರು ತನ್ನ ಅಂಗಡಿಯನ್ನು ತೆರೆದು ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರನ್ನು ಕೂರಿಸಿಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ವಿಳಾಸ ತಿಳಿಯಲಾಗಿ ಗೌರಮ್ಮ ಕೋಂ ದಾಮೋಧರ್ ಚಿಕ್ಕದಾಸರಹಳ್ಳಿ ಗ್ರಾಮ ಹಾಗು ಓಡಿ ಹೋದ ಆಸಾಮಿಗಳ ಹೆಸರು ವಿಳಾಸ ತಿಳಿಯಲಾಗಿ 1) ಗಂಗರಾಜು ಬಿನ್ ಮುನೆಯ್ಯ, ಚಿಕ್ಕದಾಸರಹಳ್ಳಿ ಗ್ರಾಮ, 2) ಮಧು ಬಿನ್ ದಾಮೋಧರ್, ಚಿಕ್ಕದಾಸರಹಳ್ಳಿ ಗ್ರಾಮ 3) ಮಲ್ಲಪ್ಪ ಬಿನ್ ರತ್ನಯ್ಯ, ಚಿಕ್ಕದಾಸರಹಳ್ಳಿ ಗ್ರಾಮ 4) ಅಕ್ಬರ್ ಬಿನ್ ನಜೀರ್ ಸಾಬ್, ಚಿಕ್ಕದಾಸರಹಳ್ಳಿ ಗ್ರಾಮ, 5) ಸಂತೋಷ್ ಬಿನ್ ಮುನಿನಾರಾಯಣಪ್ಪ, ಚಿಕ್ಕದಾಸರಹಳ್ಳಿ ಗ್ರಾಮ, 6) ದಾಮೋಧರ್ ಚಿಕ್ಕದಾಸರಹಳ್ಳಿ ಗ್ರಾಮ ಎಂದು ತಿಳಿದು ಬಂದಿರುತ್ತದೆ. ಸಕರ್ಾರವು ಕೋವಿಡ್-19 ರೋಗಾಣು ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ಆದೇಶವನ್ನು ಹೊರಡಿಸಿದ್ದರೂ ಸಹ ಸದರಿ ಅಂಗಡಿಯ ಮಾಲೀಕರು ಮತ್ತು ಮೇಲ್ಕಂಡ ಆಸಾಮಿಗಳು ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ಟೀಯನ್ನು ಕುಡಿದುಕೊಂಡು ಕುಳಿತಿದ್ದುಕೊಂಡು, ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ದೂರು.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.174/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ 31/05/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿಸಿ-543 ಸುಧಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 31/05/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ಹಂಡಿಗನಾಳ, ಕೇಶವಾಪುರ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ಅಪ್ಪೇಗೌಡನಹಳ್ಳಿ ಕ್ರಾಸ್ ನಲ್ಲಿ ಗುಪ್ತ ಮಾಹಿತಿ ಸಂಗ್ರಹದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಚೌಡಸಂದ್ರ ಗ್ರಾಮದ ಗೇಟ್ ನಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಚೌಡಸಂದ್ರ ಗ್ರಾಮದ ಗೇಟ್ ಬಳಿ ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಚೌಡಸಂದ್ರ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮರದ ಕೆಳಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಯಾರೋ ಇಬ್ಬರು ಆಸಾಮಿಗೆ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ನೀಡಿ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸದರಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕನು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ರಾಮಕೃಷ್ಣಪ್ಪ, 38 ವರ್ಷ, ಗೊಲ್ಲರು, ರೇಷ್ಮೇ ಕೆಲಸ, ವಾಸ-ಮಯೂರ ಸರ್ಕಲ್, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಯ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ 180 ಎಂ.ಎಲ್ ನ 8 ಓಲ್ಡ್ ಮಂಕ್ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 106.23 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 849.84  ರೂ.ಗಳಾಗಿರುತ್ತೆ ಸ್ಥಳದಲ್ಲಿ 2 ಪ್ಲಾಸ್ಟಿಕ್ ಗ್ಲಾಸು, 2 ಖಾಲಿ ನೀರಿನ ಪಾಕೇಟುಗಳು ಹಾಗು 180 ಎಂ.ಎಲ್ ನ 2 ಓಲ್ಡ್ ಮಂಕ್ ನ ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಮಂಜುನಾಥ ಬಿನ್ ರಾಮಕೃಷ್ಣಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 31-05-2021 05:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080