ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ.406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು 11-30 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಇನಾಯತ್ ಉಲ್ಲಾ ಶರೀಫ್  ಎಂ,  ಮುಸ್ಲಿಮರು, ವ್ಯವಸಾಯ, ವಾಸ: ಎನ್ ಆರ್, ಬಡಾವಣೆ, ಚಿಂತಾಮಣಿ ನಗರ  ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 01/03/2011 ರಂದು  20.000 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

2. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ.419,420 ಐ.ಪಿ.ಸಿ & 66(D),66(C) INFORMATION TECHNOLOGY ACT 2008:-

          ದಿನಾಂಕ:31/3/2021 ರಂದು ಪಿರ್ಯಾದಿ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಪಿ ಆರ್ ಕುಮಾರಸ್ವಾಮಿ ಬಿನ್ ರಾಮಚಂದ್ರಪ್ಪ, 27  ವರ್ಷ, ಭಜಂತ್ರಿ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ,ವಾಸ ಪೋಲನಾಯಕನಹಳ್ಳಿ  ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಮೊ ಸಂಖ್ಯೆ:9482996383  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಮೇಲ್ಕಂಡ ವಿಳಾಸದಲ್ಲಿ  ವಾಸವಿದ್ದು, ಬೆಂಗಳೂರು ನಗರದಲ್ಲಿನ ಕಾಡಬಿಸನಹಳ್ಳಿ(ಮಾರತ್ ಹಳ್ಳಿ ಜಂಕ್ಷನ್)  ಹೆಚ್ ಡಿ ಎಪ್ ಸಿ ಬ್ಯಾಂಕ್  ಶಾಖೆಯಲ್ಲಿ ಉಳಿತಾಯ ಖಾತೆ ನಂ: 50100307150360  ರಂತೆ ಖಾತೆಯನ್ನು ಮಾಡಿಕೊಂಡಿದ್ದು, ಸದರಿ ಖಾತೆಗೆ ಎ ಟಿ ಎಂ ಕಾರ್ಡನ್ನು ಮಾಡಿಸಿಕೊಂಡಿದ್ದು, ಇದಕ್ಕೆ ಮೊ ಸಂಖ್ಯೆ: 9482996383 ನ್ನು ಲಿಂಕ್ ಮಾಡಿಕೊಂಡು ಇದರಲ್ಲಿ ಗೂಗಲ್ ಫೇ & ಪೋನ್ ಫೇ ವ್ಯಾಲೆಟ್ ಗಳನ್ನು ಇನ್ಸಾಟಾಲ್ ಮಾಡಿಕೊಂಡು ಇದರಿಂದ ನನ್ನ ಹಣ ಕಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ;30/3/2021 ರಂದು ನಾನು ನಮ್ಮ ಮನೆಯಲ್ಲಿ ಇದ್ದಾಗ ಮದ್ಯಾನಃ ಸುಮಾರು 02-30 ಗಂಟೆಯಲ್ಲಿ ನನ್ನ ಕ್ರೆಡಿಟ್ ಕಾರ್ಢ ನಲ್ಲಿ  130/- ಹಣ ಕಟಾವು ಆಗಿತ್ತು, ಅದನ್ನು ಕೇಳಲು ಗೂಗಲ್ ನಲ್ಲಿನ ಕಸ್ಟಮರ್ ಕೇರ್  ನಂಬರ್; 18662466453 & 8000501615  ಗಳಿಗೆ ಕರೆ ಮಾಡಿದಾಗ  ಅವರು ನಿಮಗೆ ಸದರಿ 130/- ರೂಗಳ ಹಣವನ್ನು ರೀಫಂಡ್ ಮಾಡುತ್ತೇವೆಂತ ತಿಳಿಸಿದರು. ಬೇಡ ಅದನ್ನು ಡಿಆಕ್ಟವೇಟ್ ಮಾಡುವಂತೆ ತಿಳಿಸಿದೆ. ಅದನ್ನು ಮಾಡುತ್ತೇನೆ. ಅದಕ್ಕೆ ನೀವು ನಿಮ್ಮ ಮೊಬೈಲ್ ನಲ್ಲಿನ ಫ್ಲೇ ಸ್ಟೋರ್ ನಿಂದ ANIDESK APP ನ್ನು ಡೌನ್ ಲೋಡ್ ಮಾಡಿಕೊಂಡು ಮೊದಲು ಇನ್ಸಾಟಾಲ್ ಮಾಡಲು ತಿಳಿಸಿದ. ನಾನು ಅದನ್ನು ನಂಬಿ ನನ್ನ ಮೊಬೈಲ್ ನಲ್ಲಿನ ಫ್ಲೇಸ್ಟೋರ್ ನಿಂದ ANIDESK APP ನ್ನು ಇನ್ಸಾಟಾಲ್ ಮಾಡಿಕೊಂಡೆ. ನಂತರ ಅವನು ಮೊ ಸಂಖ್ಯೆ: 9685424607 ಸಂಖ್ಯೆಯಿಂದ ಕರೆ ಮಾಡಿ  ANIDESK APP ನ್ನು ಓಪನ್ ಮಾಡಿ ಅದರಲ್ಲಿನ ID NUMBER  ನ್ನು ಹೇಳುವಂತೆ ತಿಳಿಸಿದ. ನಾನು  ANIDESK APP ನ್ನು ಓಪನ್ ಮಾಡಿ ಅದರಲ್ಲಿನ ID NUMBER  ನ್ನು ಅವರಿಗೆ ಹೇಳಿದೆ. ನಂತರ ನನ್ನ ಮೊಬೈಲ್ ಗೆ ಕೆಲವು ಓಟಿಪಿ ಸಂಖ್ಯೆಗಳ ಸಂದೇಶಗಳು ಬರುತ್ತಿದ್ದವು ಆದರೆ ನಾನು ಓಟಿಪಿ ನಂಬರ್ ಯಾರಿಗೂ ಶೇರ್ ಮಾಡಲಿಲ್ಲ. ಆದರೆ ನನ್ನ ಮೇಲ್ಕಂಡ  ಹೆಚ್ ಡಿ ಎಪ್ ಸಿ ಅಕೌಂಟ್ ನಿಂದ ನಾಲ್ಕು ಭಾರಿ ಮೊದಲು 60000/-, 80000/-, 48000/- & 106/- ರೂಗಳು ಒಟ್ಟು  1,88,106/- ರೂಗಳ ಹಣವನ್ನು ಮೇಲ್ಕಂಡ ಮೊಬೈಲ್ ಸಂಖ್ಯೆ ಬಳಕೆದಾರನು ವರ್ಗಾಯಿಸಿಕೊಂಡಿರುತ್ತಾನೆ. ನನಗೆ ಕಸ್ಟಮರ್ ಕೇರ್ ಅಂತ ಕರೆ ಮಾಡಿ ನನ್ನಿಂದ ANIDESK APP ನ್ನು ಡೌನ್ ಲೋಡ್ ಮಾಡಿಸಿ ನನ್ನಿಂದ ಐಡಿ ನಂಬರ್ ಪಡೆದು ನನ್ನ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡು  ವಂಚಿಸಿರುತ್ತಾನೆ. ಸದರಿ ಆರೋಪಿಯನ್ನು ಪತ್ತೆ ಮಾಡಿ  ಕಾನೂನು ಕ್ರಮ ಜರಗಿಸಿ, ನನಗೆ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಲು ತಮ್ಮಲ್ಲಿ ಕೋರಿ ನೀಡಿದ ದೂರು.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ.32,34 ಕೆ.ಇ ಆಕ್ಟ್:-

          ದಿನಾಂಕ: 31/03/2021 ರಂದು 00:30 ಗಂಟೆಗೆ ಪಿರ್ಯಾದಿದಾರರಾದ  ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜಣ್ಣ.ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ  ನಾನು ಈ ದಿನ ದಿನಾಂಕ:30/03/2021 ರಂದು ತಮ್ಮ ಠಾಣೆಯ ಸಿಬ್ಬಂದಿ ರವರಾದ ಹೆಚ್.ಸಿ- 71 ಸುಬ್ರಮಣಿ, ಹೆಚ್.ಸಿ- 80 ಕೃಷ್ಣಪ್ಪ, ಹೆಚ್.ಸಿ-192 ರಾಜಗೋಪಾಲ್ ಪಿಸಿ-152 ಜಯಣ್ಣ ಮತ್ತು ಜೀಪ್ ಚಾಲಕ ಎಪಿಸಿ-138 ಮಹಬೂಬ್ ಬಾಷ ರವರೊಂದಿಗೆ ಕಾನೂನು ಭಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಶಿಡ್ಲಘಟ್ಟ, ವೀರಾಪುರ, ವೈ ಹುಣಿಸೇನಹಳ್ಳಿ, ಉಪ್ಪರಪೇಟೆ, ಕತ್ತರಗುಪ್ಪೆ ಇತ್ಯಾದಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ರಾತ್ತಿ 10-30 ಗಂಟೆಗೆ ಚಿಂತಾಮಣಿ ನಗರದ ಬೆಂಗಳೂರು ಸರ್ಕಲ್ ಗೆ ಬಂದಾಗ   ಕಾನೂನು ಬಾಹಿರವಾಗಿ ಮದ್ಯವನ್ನು ಸಂಗ್ರಹಣೆ ಮಾಡಿಕೊಂಡು ಮಾರಾಟ ಮಾಡಲು ಸಾಗಣೆ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಅಲ್ಲಿಯೇ ಪಂಚರನ್ನು ಬರಮಾಡಿಕೊಂಡು ಮಾಹಿತಿ ತಿಳಿಸಿ  ಪಂಚರೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್್ಂ ಡಿಪೋ ಹತ್ತಿರ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕೆಎ-04 ಎಮ್ ಕ್ಯೂ-117 ವೈಟ್ ಸಿಫ್ಟ್ ಕಾರುನ್ನು ತಡೆದು ಪರಿಶೀಲಿಸಲಾಗಿ 08 ಮದ್ಯ ತುಂಬಿದ ರಟ್ಟಿನ ಬಾಕ್ಸ್ ಗಳಿದ್ದು ಅವುಗಳನ್ನು ಬಿಚ್ಚಿನೋಡಲಾಗಿ 90 ಎಂಎಲ್ ನ ಹೈವಾರ್ಡ್ಸ್ ನ ಮದ್ಯ ತುಂಬಿದ ಟೆಟ್ರಾ ಪಾಕೆಟ್ ಗಳಿದ್ದು ಪ್ರತಿ ಟೆಟ್ರಾ ಪಾಕೆಟ್ ನ ಬೆಲೆ ರೂ 35 ರೂಪಾಯಿ 13 ಪೈಸೆ ಆಗಿರುತ್ತೆ. ಒಟ್ಟು ಎಲ್ಲಾ ಒಟ್ಟು 08 ಮದ್ಯ ತುಂಬಿದ ರಟ್ಟಿನ ಬಾಕ್ಸ್ಗಳ ಬೆಲೆ ರೂ 26979/- ರೂಪಾಯಿಗಳಾಗಿದ್ದು ಇದರ ಒಟ್ಟು ಪ್ರಮಾಣ 69 ಲೀಟರ್ 120 ಎಂ.ಎಲ್ ಆಗಿರುತ್ತೆ. ನಂತರ ಕಾರಿನಲ್ಲಿ ಒಬ್ಬ ಆಸಾಮಿ ಇದ್ದು ಹೆಸರು ಮತ್ತು ವಿಳಾಸ ಕೇಳಲಾಗಿ ಜೆ.ನಾಗೇಶ ಬಿನ್ ಜಯರಾಮರೆಡ್ಡಿ ಲೇಟ್, 35ವರ್ಷ, ವಕ್ಕಲಿಗರು, ಅಮೃತ್ ವೈನ್ಸ್ ನಲ್ಲಿ ಕೆಲಸ, ವಾಸ ಪ್ರಭಾಕರ ಬಡಾವಣೆ, ಚಿಂತಾಮಣಿ ನಗರ ಎಂತ ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಕುರಿತು ಈ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂತ ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂತ ತಿಳಿಸಿದನು. ಹಾಗೂ ನಿಹಾಲ್ ವೈನ್ಸ್ ನಿಂದ ತಂದಿರುವುದಾಗಿ ತಿಳಿಸಿದನು. ನಂತರ  ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅವುಗಳ ಪೈಕಿ ಎಫ್.ಎಸ್.ಎಲ್ ಪರೀಕ್ಷೆಗಾಗಿ ಪ್ರತಿಯೊಂದು ರಟ್ಟಿನ ಬಾಕ್ಸ್ ನಲ್ಲಿಯೂ ಒಂದು 90 ಎಂಎಲ್ ನ ಹೈವಾರ್ಡ್ಸ್ ನ ಮದ್ಯ ತುಂಬಿದ ಟೆಟ್ರಾ ಪಾಕೆಟ್ನ್ನುತು ಅಲಾಯಿದೆಯಾಗಿ ತೆಗದು ಒಂದು ಬಿಳಿ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಸೀಲು ಮಾಡಿರುತ್ತೆ. ಕಾನೂನು ಬಾಹಿರವಾಗಿ ಮದ್ಯವನ್ನು ಸಂಗ್ರಹಣೆ ಮಾಡಿಕೊಂಡು ಮಾರಾಟ ಮಾಡಲು ಸಾಗಣೆ ಮಾಡುತ್ತದ್ದ ಮೇಲ್ಕಂಡ ಆಸಾಮಿ ಜೆ.ನಾಗೇಶ್  ಮತ್ತು ಮಾಲು ಮತ್ತು ಅಬಕಾರಿ ನಿಯಮಗಳನ್ನು ಪಾಲಿಸದೇ ಕಾನೂನು ಬಾಹಿರವಾಗಿ ಹೆಚ್ಚಿನ ಮದ್ಯವನ್ನು ಮಾರಾಟ ,ಮಾಡಲು ನೀಡಿದ ನಿಹಾಲ್ ವೈನ್ಸ್ ನ ಕ್ಯಾಷಿಯರ್ ಶ್ರೀನಿವಾಸ ರವರ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ದೂರು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:30/03/2021 ರಂದು ಸಾಯಂಕಾಲ 4.00 ಗಂಟೆಯಲ್ಲಿ ನ್ಯಾಯಾಲಯದ ಪಿಸಿ-89 ಮಂಜುನಾಥರವರು ಠಾಣಾ NCR NO-65/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ:ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಶ್ರೀಧರ್ ಕೆ,ವಿ ಪೊಲೀಸ್ ಇನ್ಸಪೆಕ್ಟರ್ ಆದ ನಾನು ಈ ದಿನ ದಿನಾಂಕ:30/03/2021 ರಂದು ಬೆಳಿಗ್ಗೆ:11.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಠಾಣಾ 09 ನೇ ಬೀಟ್ ಸಿಬ್ಬಂದಿ ಸಿ,ಪಿ,ಸಿ-430 ಪ್ರದೀಪ್ ಎಂ,ಬಿ ರವರು ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ ತಾಲೂಕು ಪೈಯೂರು ಗ್ರಾಮದಲ್ಲಿ ಗಸ್ತುನಲ್ಲಿರುವಾಗ ನಾಗೇಶ ಪಿ,ಜಿ ಬಿನ್ ಗಂಗಾಧರಪ್ಪರವರ ಚಿಲ್ಲರೆ ಅಂಗಡಿಯ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ನಾಗೇಶ ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲುಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-85 ಸುನೀಲ್ ಕುಮಾರ್ ಸಿ,ಪಿಸಿ 198 ನಾಗೇಶರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಹೆಚ್,ಸಿ-43 ವೆಂಕಟಾಚಲ ರವರೊಂದಿಗೆ ಪೈಯೂರು ಗ್ರಾಮಕ್ಕೆ ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಹೋಗಿ  ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ನಾಗೇಶ ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ನ್ನು ನಿಲ್ಲಿಸಿ ನಾಗೇಶ ಪಿ,ಜಿ ರವರ ಚಿಲ್ಲರೆ ಅಂಗಡಿಯ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 11-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ಹಿಡಿದುಕೊಂಡು ಆತನ ಹೆಸರು & ವಿಳಾಸ ತಿಳಿಯಲಾಗಿ ನಾಗೇಶ ಪಿ,ಜಿ, ಬಿನ್ ಗಂಗಾಧರಪ್ಪ 32 ವರ್ಷ ನಾಯಕರು ಚಿಲ್ಲರೆ ಅಂಗಡಿ ವ್ಯಾಪಾರ ಪೈಯೂರು ಗ್ರಾಮ ಮಂಡಿಕಲ್ಲು ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು, ಎಂದು ತಿಳಿದಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 02 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1,080 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 421.56/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 1-30 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 1-45 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.49/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:31-03-2021 ರಂದು ಬೆಳಗ್ಗೆ:10-05 ಗಂಟೆಯಲ್ಲಿ ಪಿರ್ಯಾದಿದಾರರಾದ ಕೃಷ್ಣ ನಾಯ್ಕ್ ಬಿನ್ ಫೀರೇನಾಯ್ಕ್, 30 ವರ್ಷ, ಲಂಬಾಣಿ ಜನಾಂಗ,ವ್ಯವಸಾಯ, ಆದೇಪಲ್ಲಿ ತಾಂಡಾ, ಚಿಲಮತ್ತೂರು ಮಂಡಲಂ ಹಿಂದೂಪುರ  ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ ಪೋನ್ ನಂ. 8374687166. ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ತನ್ನ ದೊಡ್ಡಮ್ಮನ  ಮಗನಾದ ಶ್ರೀನಿವಾಸ ನಾಯ್ಕ್ ಬಿನ್ ಲೇಟ್ ನಾರಾಯಣ್ ನಾಯ್ಕ್ 36 ವರ್ಷ ಲಂಬಾಣಿ ಜನಾಂಗ, ಕೂಲಿ ಕೆಲಸ ಆದೇಪಲ್ಲಿ ತಾಂಡಾ ಚಿಲಮತ್ತೂರು ಮಂಡಲಂ ಹಿಂದೂಪುರ  ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ ರವರು ಬೆಂಗಳೂರಿನ ಜೆ,ಪಿ ನಗರ 7ನೇ ಹಂತ ಪುಟ್ಟೆನಹಳ್ಳಿಯಲ್ಲಿ  ಕೆಲಸ ಮಾಡಿಕೊಂಡು  ಅಲ್ಲಿಯೇ ವಾಸವಾಗಿದ್ದು  ತಿಂಗಳಿಗೆ ಒಂದು ಬಾರಿ ಮನೆಗೆ ಬರುತ್ತಿದ್ದು  ಈಗಿರುವಲ್ಲಿ ಹೋಳಿ ಹಬ್ಬದ ಪ್ರಯುಕ್ತ ದಿನಾಂಕ: 27/03/2021 ರಂದು ರಾತ್ರಿ  ಸುಮಾರು 10-00 ಗಂಟೆಯಲ್ಲಿ   ತನ್ನ ಸ್ನೇಹಿತನ ಬಾಬತ್ತು KA-05 HM-0582  ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಬೆಂಗಳೂರನ್ನು ಬಿಟ್ಟು  ನಮ್ಮ  ಊರು ಆದೇಪಲ್ಲಿ ತಾಂಡಾಕ್ಕೆ  ಬೆಂಗಳೂರು- ಹೈದರಾಬಾದ್ ಎನ್,ಹೆಚ್-44 ರಸ್ತೆಯಲ್ಲಿ ಬರುತ್ತಿದ್ದಾಗ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮದ ಹತ್ತಿರ ಬೆಂಗಳೂರಿನಿಂದ ಹೈದರಾಬಾದ್ ಕಡೆ ಹೋಗುವ ಎನ್,ಹೆಚ್-44 ರಸ್ತೆಯಲ್ಲಿ ದಿನಾಂಕ:28/03/2021 ರಂದು ಬೆಳಗಿನ ಜಾವ  ಸುಮಾರು 1-00 ಗಂಟೆಯಲ್ಲಿ ಶ್ರೀನಿವಾಸ ನಾಯ್ಕ್ ರವರು ಆತನು ಚಾಲನೆ ಮಾಡುತ್ತಿದ್ದ ಮೇಲ್ಕಂಡ ದ್ವಿ ಚಕ್ರವಾಹನವನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲ ಭಾಗದಲ್ಲಿನ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತವಾದ ಪರಿಣಾಮ  ತಮ್ಮ ಅಣ್ಣ ಶ್ರೀನಿವಾಸ ನಾಯ್ಕ್  ರವರಿಗೆ ಎಡ ಭಾಗದ ಮುಖಕ್ಕೆ, ಬಲ ಭಾಗದ ಮುಖಕ್ಕೆ,  ಎಡ ಕಾಲಿಗೆ ತರಚಿದ ಗಾಯವಾಗಿ ತಲೆಯ ಬಲ ಭಾಗಕ್ಕೆ ರಕ್ತ ಗಾಯವಾಗಿದ್ದು,   ತಕ್ಷಣ ಸಾರ್ವಜನಿಕರು  ಗಾಯಗೊಂಡಿದ ಶ್ರೀನಿವಾಸ ನಾಯ್ಕ್ ರನ್ನು 108 ಅಂಬುಲೇನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ  ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ವೈದ್ಯಾಧೀಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಶ್ರೀನಿವಾಸ ನಾಯ್ಕ್ ರವರ ಅಣ್ಣನಾದ ಅಂಜಿನಾಯ್ಕ್ ರವರು ತನಗೆ ಪೋನ್ ಮಾಡಿ ವಿಷಯ ತಿಳಿಸಿದ್ದು , ನಂತರ ತಾನು ಆಸ್ಪತ್ರೆಗೆ ಹೋಗಿ  ನೋಡಿದ್ದು ವಿಚಾರವು ನಿಜವಾಗಿದ್ದು,  ಶ್ರೀನಿವಾಸ ನಾಯ್ಕ್ ರವರಿಗೆ ಚಿಕಿತ್ಸೆ ಕೊಡಿಸುತ್ತಿದ್ದಾಗ  ದಿನಾಂಕ:30/03/2021 ರಂದು  ರಾತ್ರಿ ಸುಮಾರು 8-45 ಗಂಟೆಯಲ್ಲಿ  ಮೇಲ್ಕಂಡ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಆದ್ದರರಿಂದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.38/2021 ಕಲಂ. 279,337,304(A) ಐ.ಪಿ.ಸಿ & 134,187 INDIAN MOTOR VEHICLES ACT:-

          ದಿನಾಂಕ 31-03-2021 ರಂದು ಬೆಳಗ್ಗೆ 09.00 ಗಂಟೆಗೆ ಪಿರ್ಯಾಧಿದಾರರಾದ ಅಶ್ವಥನಾರಾಯಣಪ್ಪ ಬಿನ್ ಲೇಟ್ ದೊಡ್ಡನಾರೆರಪ್ಪ, 63 ವರ್ಷ, ಗೊಲ್ಲರು, ರಿಟೈರ್ಡ್ ಕಿಲೋಸ್ಕರ ಉದ್ಯೂಗಿ, ವಾಸ ದಂಡುಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಹಾಗೂ ತಮ್ಮ ತಮ್ಮನಾದ ಶಂಕರಪ್ಪ ಒಟ್ಟಿಗೆ ವಾಸವಾಗಿರುತ್ತೇವೆ. ತನ್ನ ತಮ್ಮನ ಹೆಂಡತಿಯಾದ 38 ವರ್ಷ ವಯಸ್ಸಿನ ವೀಣಾ ರವರಿಗೆ ಎಮ್ಮೆ ತುಳಿದು ಕಾಲು ಬೆರಳಿಗೆ ಗಾಯವಾಗಿದ್ದರಿಂದ ವೀಣಾ ಮತ್ತು ಶಂಕರಪ್ಪ ರವರು ದಿನಾಂಕ 30-03-2021 ರಂದು ಅವರ ಬಾಬತ್ತು ಕೆ.ಎ-07ಹೆಚ್5662 ಹಿರೋ ಹೋಂಡಾ ಸಿ.ಡಿ 100 ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಗೆ ಹೋಗಿ ಆಸ್ವತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ತಮ್ಮ ಗ್ರಾಮದ ಕ್ರಾಸ್ ಬಳಿ ಬರುತ್ತಿದ್ದಾಗ ಸಂಜೆ 07.00 ಗಂಟೆ ಸಮಯದಲ್ಲಿ ಹಿಂಬದಿಯಿಂದ ಬಂದ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಶಂಕರಪ್ಪ, ವೀಣಾ ರವರು ಕೆಳಗೆ ಬಿದ್ದು ಶಂಕರಪ್ಪನಿಗೆ ತಲೆಗೆ ರಕ್ತಗಾಯವಾಗಿ ಮೇಮೇಲೆ ಮೂಗೇಟುಗಳಾಗಿದ್ದು, ವೀಣಾರವರಿಗೆ ಎರಡು ಕಾಲುಳು ತುಂಡಾಗಿದ್ದು, ತಲೆಗೆ ತೀವ್ರವಾದ ಗಾಯಗಳಾಗಿರುತ್ತವೆ. ಕೂಡಲೇ ಅಲ್ಲಿಯೇ ಕ್ರಾಸ್ ನಲ್ಲಿದ್ದ ತಮ್ಮ ಗ್ರಾಮದ ರಮೇಶ ಬಿನ್ ಲೇಟ್ ಕೃಷ್ಣಪ್ಪ, ರೆಡ್ಡಪ್ಪ ಬಿನ್ ನರಸಪ್ಪ ರವರು ಅವರನ್ನು ಉಪಚರಿಸಿ ಯಾವುದೋ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ವತ್ರೆಗೆ ದಾಖಲಿಸಿ ತನಗೆ ವಿಚಾರ ತಿಳಿಸಿದ್ದು, ಆಸ್ವತ್ರೆಯಲ್ಲಿ ಚಿಕಿತ್ಸೆಪಡಿಸುತ್ತಿದ್ದಾಗ ದಿನಾಂಕ 31-03-2021 ರಂದು ಮುಂಜಾನೆ ಸುಮಾರು 03.00 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೀಣಾ ರವರು ಮೃತಪಟ್ಟಿರುತ್ತಾರೆ. ವೀಣಾ ರವರ ಮೃತದೇಹ ಕೋಲಾರದ ಆರ್.ಎಲ್.ಜಾಲಪ್ಪ ಆಸ್ವತ್ರೆಯ ಶವಾಗಾರದಲ್ಲಿರುತ್ತೆ. ತನ್ನ ತಮ್ಮ ಶಂಕರಪ್ಪ ಆಸ್ವತ್ರೆಯಲ್ಲಿ ಚಿಕಿತ್ಸೆಪಡಿಯುತ್ತಿದ್ದು ಅಪಘಾತದಲ್ಲಿ ತಲೆಗೆ ಗಾಯವಾದುದ್ದರಿಂದ ಸರಿಯಾಗಿ ಹೇಳಿಕೆ ಕೊಡದ ಸ್ಥಿತಿಯಲ್ಲಿ ಇರುವುದಿಲ್ಲ. ಅದ್ದರಿಂದ ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಅಪರಿಚಿತ ವಾಹನವನ್ನು ಪತ್ತೆಮಾಡಿ ಸದರಿ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.    

 

         

ಇತ್ತೀಚಿನ ನವೀಕರಣ​ : 31-03-2021 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080