Feedback / Suggestions

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 428(A),324,307 ಐ.ಪಿ.ಸಿ:-

     ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನಾನು ಮುದ್ದಲಪಲ್ಲಿ ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ವಾಸವಾಗಿದ್ದು ನನಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು  ಎಲ್ಲರಿಗೂ ಮದುವೆಯಾಗಿದ್ದು ನಾಲ್ಕನೇ ಮಗಳಾದ ಲಕ್ಷ್ಮೀ ದೇವಿ ರವರನ್ನು ನಮ್ಮ ಗ್ರಾಮದ   ಅಕ್ಕುಲಪ್ಪ ರವರ ಮಗನಾದ ವೆಂಕಟರವಣಪ್ಪ ರವರಿಗೆ ಸುಮಾರು 8 ವರ್ಷಗಳ ಹಿಂದೆ   ಮದುವೆ ಮಾಡಿಕೊಟ್ಟಿದ್ದು  ನನ್ನ ಮಗಳಾದ ಲಕ್ಷ್ಮಿದೇವಮ್ಮಳಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಬಂದು ಗಂಡು ಮಗುವಿರುತ್ತೆ  ಮದುವೆಯಾದಗಿನಿಂದಲೂ ಗಂಡ ಹೆಂಡಿತಿ ಅನ್ಯೋನ್ಯವಾಗಿ  ಸಂಸಾರ ಮಾಡಿಕೊಂಡಿದ್ದರು ಆದರೆ  6 ತಿಂಗಳ ಹಿಂದಿನಿಂದಲೂ ನನ್ನ ಅಳಿಯನಾದ ವೆಂಕಟರವಣಪ್ಪನು ಕುಡಿತದ ಚಟಕ್ಕೆ ಬಿದ್ದು ಕೆಲಸಕ್ಕೂ ಹೋಗದೇ ಮನೆಯಲ್ಲಿಯೆ ಇರುತ್ತಿದ್ದನು ನನ್ನ ಮಗಳೆ ಕೂಲಿ ಕೆಲಸಕ್ಕೆ ಹೋಗಿ ಸಂಸಾರವನ್ನು ಪೋಷಣೆ ಮಾಡುತ್ತಿದ್ದಳು ಸುಮಾರು 15 ದಿನಗಳಿಂದಲೂ ವೆಂಕಟರವಣಪ್ಪನು ನನ್ನ ಮಗಳಿಗೆ ನೀನು ಕೂಲಿ ಕೆಲಸ ಮಾಡುವ ಜಾಗದಲ್ಲಿ ಯಾರೋ ಜೋತೆ ಅನೈತಿಕ ಸಂಬಂಧ ಹೊಂದಿದ್ದಿಯ  ಎಂದು ಕುಡಿದು  ಬಂದು ದೈಹಿಕವಾಗಿ  ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು  ನಿನ್ನನ್ನು ಸಾಯಿಸುವುದಾಗಿ ಹೇಳುತ್ತಿದ್ದನು. ದಿನಾಂಕ 29-08-2021 ರಂದು ಮದ್ಯಾಹ್ನ 3:00 ಗಂಟೆ ಸಮಯದಲ್ಲಿ ನನ್ನ ಅಳಿಯನಾದ ವೆಂಕಟರವಣಪ್ಪನು  ಮನೆಗೆ ಬಂದು  ಮನೆಯ ಬಾಗಿಲನ್ನು ಹಾಕಿಕೊಂಡು ನನ್ನ ಮಗಳನ್ನು ಸಾಯಿಸುವ ಉದ್ದೇಶದಿಂಲೇ  ಮನೆಯಲ್ಲಿದ್ದ ಮಚ್ಚಿನಿಂದ ನನ್ನ ಮಗಳ ಕತ್ತಿನ ಹಿಂಭಾಗ , ತಲೆಗೆ ಮತ್ತು ಬಲ ಕೈ ಮೇಲೆ   ಹಲ್ಲೇ  ಮಾಡಿದ್ದರಿಂದ  ನನ್ನ ಮಗಳು ಕಿರುಚಿಕೊಂಡು ಅಲ್ಲಿಯೆ ಬಿದ್ದಿರುತ್ತಾಳೆ  ನಂತರ ಅಕ್ಕ-ಪಕ್ಕದವರಾದ  ಶಿವನ್ನ, ಭಜಂತ್ರಿ ನರಸಿಂಹಪ್ಪ  ರವರು ಕಿರುಚಾಟವನ್ನು ಕೇಳಿ  ಮನೆಯ ಹತ್ತಿರ ಹೋಗಿ ಬಾಗಿಲನ್ನು ತೆಗೆಯುವಂತೆ ವೆಂಕಟರವಣಪ್ಪನಿಗೆ ಹೇಳಿದ್ದು ಅವನು ಬಾಗಿಲನ್ನು ತೆಗೆದಿರುತ್ತಾನೆ  ವಿಚಾರವನ್ನು ತಿಳಿದ ನಾನು ಮನೆಯ ಹತ್ತಿರ ಹೋಗಿ ನೋಡಲಾಗಿ ನನ್ನ ಮಗಳು  ರಕ್ತದ ಮಡುವಿನಲ್ಲಿ ಬಿದ್ದಿರುತ್ತಾಳೆ ನನ್ನ ಮಗಳಿಗೆ ಏಕೆ ಈ ರೀತಿ ಹಲ್ಲೇ ಮಾಡಿ ಹಿಂಸೆಮಾಡುತ್ತಿದ್ದಿಯ  ಎಂದು ನನ್ನ ಅಳಿಯ ವೆಂಕಟರವಣಪ್ಪನನ್ನು ಕೇಳಲು ಹೋದಾಗ ನನ್ನನ್ನು ಸಹ ಹತ್ತಿರ ಬರದಂತೆ ತಳ್ಳಿರುತ್ತಾನೆ   ಆದ್ದರಿಂದ ನನ್ನ ಮಗಳನ್ನು ಸಾಯಿಸುವ ಉದ್ದೇಶದಿಂದ ಮಚ್ಚಿನಿಂದ ಹಲ್ಲೇ ಮಾಡಿದ ವೆಂಕಟರವಣಪ್ಪನ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಕೋರಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.377/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 29/08/2021 ರಂದು ಮದ್ಯಾಹ್ನ 3.45 ಗಂಟೆಗೆ ಠಾಣೆಯ ಎ.ಎಸ್.ಐ ಶ್ರೀ ಅಶ್ವಥನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 29/08/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು, ಸಿ.ಪಿ.ಸಿ-504 ಸತೀಶ್ ಮತ್ತು ಸಿ.ಪಿ.ಸಿ-185 ಶ್ರೀನಿವಾಸಮೂರ್ತಿ ರವರು ಠಾಣಾ ಸರಹದ್ದಿನ ಚಿಕ್ಕಬೊಮ್ಮನಹಳ್ಳಿ, ಪಣಸಚೌಡನಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 2.15 ಗಂಟೆಯ ಸಮಯದಲ್ಲಿ ದೊಡ್ಡಬೊಮ್ಮನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ರೂಪಮ್ಮ ಕೋಂ ಲೇಟ್ ವೆಂಕಟೇಶಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ದೊಡ್ಡಬೊಮ್ಮನಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಮನೆಯ ಮುಂದೆ  ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 7 ಟೆಟ್ರಾ ಪಾಕೆಟ್ ಗಳು, 2). 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4).ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರೂಪಮ್ಮ ಕೋಂ ಲೇಟ್ ವೆಂಕಟೇಶಪ್ಪ, 55 ವರ್ಷ, ದೋಬಿ ಜನಾಂಗ, ಗೃಹಣಿ, ದೊಡ್ಡಬೊಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 2.30 ರಿಂದ ಮದ್ಯಾಹ್ನ 3.15 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ರೂಪಮ್ಮ ಕೋಂ ಲೇಟ್ ವೆಂಕಟೇಶಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.378/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 29/08/2021 ರಂದು ಸಂಜೆ 6.30 ಗಂಟೆಗೆ ಠಾಣೆಯ ಎ.ಎಸ್.ಐ ಶ್ರೀ ಅಶ್ವಥನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 29/08/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು, ಸಿ.ಪಿ.ಸಿ-504 ಸತೀಶ್ ಮತ್ತು ಸಿ.ಪಿ.ಸಿ-185 ಶ್ರೀನಿವಾಸಮೂರ್ತಿ ರವರು ಠಾಣಾ ಸರಹದ್ದಿನ ಕುರುಬೂರು, ಮೈಲಾಂಡ್ಲಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆಯ ಸಮಯದಲ್ಲಿ ಸೀಕಲ್ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಬಾಲಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸೀಕಲ್ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿಯ ಮುಂದೆ  ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 8 ಟೆಟ್ರಾ ಪಾಕೆಟ್ ಗಳು, 2). 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4).ಒಂದು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಬಾಲಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ, 40 ವರ್ಷ, ಗಾಣಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಸೀಕಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ  5.15 ರಿಂದ ಸಂಜೆ 6.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಬಾಲಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.159/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 29/08/2021 ರಂದು ಸಂಜೆ 17:30 ಗಂಟೆಗೆ  ನ್ಯಾಯಾಲಯದ ಪಿ.ಸಿ  367 ರವರು ಎನ್ ಸಿ ಆರ್ ನಂ 115/2021 ರಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರತಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ  ಈ ದಿನ ದಿನಾಂಕ:29/08/2021ರಂದು  ಪಿ.ಐ ಸಾಹೇಬರು ನನಗೆ ಹಾಗೂ ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ನೇಮಿಸಿದ್ದು ಅದರಂತೆ ನಾವು  ಚಿಂತಾಮಣಿ ನಗರದ   ವೆಂಕಟಗಿರಿಕೋಟೆ, ಆದರ್ಶ ಚಿತ್ರಮಂದಿರ, ಎನ್ ಎನ್ ಟಿ ಸರ್ಕಲ್ ಕಡೆ ಗಸ್ತು ಮಾಡುತ್ತಿದ್ದ   ಬೆಳಿಗ್ಗೆ 9:30 ಗಂಟೆ ಸಮಯದಲ್ಲಿ ನಗರದ ಮೆಹಬೂಬ್ ಸರ್ಕಲ್ ನಲ್ಲಿರುವ ಆಟೋ ಸ್ಟಾಂಡ್ ಹಿಂಭಾಗದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಪಂಚರೊಂದಿಗೆ ಆಟೋ ಸ್ಟಾಂಡ್  ನ ಬಳಿ ಹೋಗಿ ಮೊರೆಯಲ್ಲಿ ನಿಂತು  ನೋಡಲಾಗಿ ಆಟೋ ಸ್ಟಾಂಡ್ ಹಿಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಪೆನ್ , ಪೇಪರ್ ಹಿಡಿದುಕೊಂಡು  1 ರೂ ಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಅಂಕಿಗಳನ್ನು ಬರೆಯುತ್ತಿದ್ದವನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಫಯಾಜ್ ಬಿನ್ ಲೇಟ್ ಅನ್ವರ್ , 32 ವರ್ಷ, ಮುಸ್ಲಿಂರು, ಆಟೋ ಚಾಲಕ, ಮೆಹಬೂಬ್ ನಗರ, ಚಿಂತಾಮಣಿ ನಗರ  ಮೊ.ನಂ 9113209477 ಎಂತ ತಿಳಿಸಿರುತ್ತಾನೆ.  ನಂತರ ಆತನ ಬಳಿ ಪರಿಶೀಲಿಸಲಾಗಿ 1 ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 650/- ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸದರಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿ ಆರ್ ನಂ: 115/2021 ರಂತೆ ದಾಖಲಿಸಿ ಅಸಂಜ್ಞೇಯ ಅಪರಾಧವಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.200/2021 ಕಲಂ. 304(A) ಐ.ಪಿ.ಸಿ:-

     ದಿನಾಂಕ: 29.08.2021  ರಂದು ಮದ್ಯಾಹ್ನ 1-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಮಂಜುನಾಥ ಬಿನ್ ದೊಡ್ಡವೆಂಕಟೇಶಪ್ಪ, ಚಿನ್ನೇನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ ತಂದೆಯಾದ ದೊಡ್ಡವೆಂಕಟೇಶಪ್ಪ ಬಿನ್ ಲೇಟ್ ನಾಗಪ್ಪನವರು 60ವರ್ಷ, ರವರು ದಿನಾಂಕ: 22.08.2021  ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ತಮ್ಮ ಗ್ರಾಮವಾದ ಚಿನ್ನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಕಟ್ಟಡದ ಕಂಟ್ರ್ಯಾಕ್ಟರ್ ಬೈರಾರೆಡ್ಡಿ ರವರ ಬಳಿ ಹೋಗಿದ್ದು, ಸದರಿ ಶಾಲೆಯ ಮೇಲೆ ಹತ್ತಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡದ ಪ್ಲಾಸ್ಟಿಂಟ್ ಗೆ ಕ್ಯೂರಿಂಗ್ ಮಾಡುತ್ತಿದ್ದಾಗ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ತನ್ನ ತಂದೆ ದೊಡ್ಡವೆಂಕಟೇಶಪ್ಪನಿಗೆ ಶಾಲೆಯ ಕಟ್ಟಡದ ಮೇಲೆ ಹಾದು ಹೋದ ವಿದ್ಯುತ್ ವೈರ್ ತಗುಲಿ ಶಾಕ್ ಹೊಡೆದು, ಅಲ್ಲಿಂದ ಕೆಳಕ್ಕೆ ಬಿದ್ದಿದ್ದು, ನಂತರ ಅವರನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಇಲ್ಲಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಸಿಟಿ ಸ್ಕ್ಯಾನಿಂಗ್ ಮಾಡಿಸಿ ಚಿಕಿತ್ಸೆ ಕೊಡಿಸಿಕೊಂಡು ವಾಪಸ್ಸು ಗುಡಿಬಂಡೆಗೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾಗ ಚಿಕಿತ್ಸೆ ಪಲಕಾರಿಯಾಗದೆ ದಿ:29.08.2021 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ಮೃತ ಪಟ್ಟಿರುತ್ತಾನೆ. ಬೆಸ್ಕಾಂ ಇಲಾಖೆಯವರಿಗೆ ವಿದ್ಯುತ್ ತಂದಿಯನ್ನು ತೆರುವುಗೊಳಿಸಲು ಅರ್ಜಿಯನ್ನು ನೀಡಿದ್ದರೂ ಸಹ ತೆರವುಗೊಳಿಸದೇ ನಿರ್ಲಕ್ಷ ವಹಿಸಿರುತ್ತಾರೆ. ಆದ್ದರಿಂದ ಬೆಸ್ಕಾಂ ಇಲಾಖೆಯ ಎಇಇ ರವರ  ಹಾಗೂ ಕಾಂಟ್ರಾಕ್ಟರ್ ಬೈರರೆಡ್ಡಿ ರವರ ನಿರ್ಲಕ್ಷದಿಂದ ಈ ಘಟನೆ ಸಂಬವಿಸಿರುತ್ತೆ. ಆದ್ದರಿಂದ ಬೆಸ್ಕಾಂ ಇಲಾಖೆಯ ಎಇಇ ರವರ  ಮೇಲೆ ಹಾಗೂ ಕಾಂಟ್ರಾಕ್ಟರ್ ಬೈರರೆಡ್ಡಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.202/2021 ಕಲಂ. 506,341,34,323,324 ಐ.ಪಿ.ಸಿ:-

     ದಿನಾಂಕ 29/08/2021 ರಂದು ರಾತ್ರಿ 11-30 ಗಂಟೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ, ದಿನಾಂಕ 29/08/2021 ರಂದು ಸಂಜೆ ಸುಮಾರು 6-15 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದ ಚಿಕ್ಕಮಾಲಪ್ಪ ರವರ ಮನೆಯ ಬಳಿ ಇರುವ ಹುಣಸೇ ಮರದ ಹತ್ತಿರ ಇರುವಾಗ ಆರೋಪಿತರು ಬಂದು ಹಳೆಯ ದ್ವೇಷದಿಂದ ಗಲಾಟೆ ಮಾಡಿ ಈ ಪೈಕಿ ಮನೋಜ್ಕುಮಾರ್ ತನ್ನ ಕಿವಿಯ ಹಿಂಭಾಗಕ್ಕೆ ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿದ್ದು, ಉಳಿದವರು ಕೈಗಳಿಂದ ಹೊಡೆದು ಆದೆಪ್ಪ ತನ್ನನ್ನು ತಡೆದು ನಿಲ್ಲಿಸಿ ಹೊಡೆಯಿರಿ ಎಂತ ಹೇಳಿದ್ದು, ಹಾಗೂ ಹೋಗುವಾಗ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂತ ಪ್ರಾಣಬೆದರಿಕೆ ಹಾಕಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ಮೇರೆಗೆ ಠಾಣೆಗೆ ದಿನಾಂಕ 30/08/2021 ರಂದು ಬೇಳಗಿನ ಜಾವ 00-45 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:29/08/2021 ರಂದು ಮದ್ಯಾಹ್ನ 13-15 ಗಂಟೆಗೆ ಪಾತಪಾಳ್ಯ ಠಾಣೆಯ ASI(SA) ರವರು ಮಾಲು, ಆರೋಪಿ & ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:29-08-2021 ರಂದು ತಾವು ಚಾಲಕ ಎಪಿಸಿ-98 ಶ್ರೀನಾಥ ರವರೊಂದಿಗೆ ಕೆಎ-40-ಜಿ-59 ಸರ್ಕಾರಿ ಜೀಪಿ ನಲ್ಲಿ ಗಸ್ತಿನಲ್ಲಿದ್ದಾಗ ಸೋಮನಾಥಪುರ ಗ್ರಾಮದ ಸೋಮನಾಥಪುರ ಗ್ರಾಮದಲ್ಲಿರುವ ಹೋಟೆಲ್ ನಲ್ಲಿ ಸುಧಾಕರ ಎನ್.ವಿ ಬಿನ್ ವೆಂಕಟರೆಡ್ಡಿ ಎಂಬುವವರು ತಮ್ಮ ಹೋಟೆಲ್ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾ ರರನ್ನು ಬರಮಾಡಿಕೊಂಡು ಬೀಟ್ ಕರ್ತವ್ಯಕ್ಕೆ ಬಂದಿದ್ದ ಸಿಬ್ಬಂದಿಯಾದ ಸಿಪಿಸಿ-321 ಮನೋಹರ ರವರನ್ನು ಕರೆದುಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಸುಧಾಕರ ಎನ್.ವಿ ಬಿನ್ ವೆಂಕಟರೆಡ್ಡಿ ರವರು ತಮ್ಮ ಹೋಟೆಲ್ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿದ್ದ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ಸುಧಾಕರ ಎನ್.ವಿ ಬಿನ್ ವೆಂಕಟರೆಡ್ಡಿ, 30 ವರ್ಷ, ಒಕ್ಕಲಿಗರು, ಹೋಟೇಲ್ ವ್ಯಾಪಾರ, ವಾಸ: ನಕ್ಕಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿಯ 12 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 080 ಎಂ.ಎಲ್, ಅದರ ಬೆಲೆ 420/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ್  ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 12-00 ಗಂಟೆಯಿಂದ 12-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಸುಧಾಕರ ಎನ್.ವಿ ಬಿನ್ ವೆಂಕಟರೆಡ್ಡಿರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

8. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:29/08/2021 ರಂದು ಸಂಜೆ 6-15 ಗಂಟೆಗೆ ಶ್ರೀ ಕೆ. ಸತೀಶ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಅಸಲು ಪಂಚನಾಮೆ, ಮಾಲು, ಆರೋಪಿತರನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ.29-08-2021 ರಂದು ಮಧ್ಯಾಹ್ನ 03-45 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಯಾರೋ ಸಾರ್ವಜನಿಕರು ನನಗೆ ಕರೆ ಮಾಡಿ ಶಿಡ್ಲಘಟ್ಟ ಟೌನ್, ಈದ್ಗಾ ಮೈದಾನದ ಹಿಂಭಾಗದ ಖಾಲಿ ಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ತಿಳಿಸಿದ್ದು ಸದರಿ ಭಾತ್ಮೀಯಂತೆ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ನಾನು ಠಾಣಾ ಸಿಬ್ಬಂದಿಯಾದ ಪಿ,ಸಿ 278 ನಾರಾಯಣ, ಪಿ,ಸಿ 555 ಅಶ್ವತ್ಥರೆಡ್ಡಿ, ಹೆಚ್.ಸಿ 97 ಸುಬ್ರಮಣಿ, ಪಿ,ಸಿ 280 ಶಶಿ ಕುಮಾರ್, ಪಿ.ಸಿ 554 ಪ್ರವೀಣ್ ಕುಮಾರ್, ಪಿ.ಸಿ 308 ಚಂದ್ರಪ್ಪ ಯಲಿಗರ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 5-00 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 50/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 50/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದು ಸದರಿಯವರ ಮೇಲೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ  ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಮುನಿನರಸಿಂಹಪ್ಪ ಬಿನ್ ಲೇಟ್ ಮುನಿಯಪ್ಪ  50 ವರ್ಷ, ಎಸ್.ಸಿ ಜನಾಂಗ, ರೇಷ್ಮೇ ಕೆಲಸ, ವಾಸ-ರಾಜೀವ್ ಗಾಂದೀ ಬಡಾವಣೆ, ಶಿಡ್ಲಘಟ್ಟ ನಗರ 2] ಮುನಿಕೃಷ್ಣ ಬಿನ್ ವೆಂಕಟರಾಯಪ್ಪ, 42 ವರ್ಷ, ಎಸ್.ಸಿ ಜನಾಂಗ, ರೇಷ್ಮೆ ಕೆಲಸ, ವಾಸ-ಸಿದ್ದಾರ್ಥ ನಗರ, ಶಿಡ್ಲಘಟ್ಟ ಟೌನ್ 3] ಶ್ರೀನಿವಾಸ ಬಿನ್ ಲೇಟ್ ಮುನಿಯಪ್ಪ 36 ವರ್ಷ, ಎಸ್.ಸಿ ಜನಾಂಗ, ರೇಷ್ಮೆ ಕೆಲಸ, ವಾಸ:ಸಿದ್ದಾರ್ಥ ನಗರ, ಶಿಡ್ಲಘಟ್ಟ ನಗರ 4] ಕದಿರಪ್ಪ ಬಿನ್ ಲೇಟ್ ಮುನಿಯಪ್ಪ, 42 ವರ್ಷ, ರೇಷ್ಮೆ ಕೆಲಸ, ಎಸ್,ಸಿ ಜನಾಂಗ, ವಾಸ:ಸಿದ್ದಾರ್ಥ ನಗರ, ಶಿಡ್ಲಘಟ್ಟ ಟೌನ್ ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 460/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ 5-15 ಗಂಟೆಯಿಂದ 5-45 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 04 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

Last Updated: 30-08-2021 07:39 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080