ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.213/2021 ಕಲಂ. 120B,406,420,504,506,34 ಐ.ಪಿ.ಸಿ:-

  ದಿನಾಂಕ:30/07/2021 ರಂದು ಬೆಳಿಗ್ಗೆ 11-00 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ಘನನ್ಯಾಯಾಲದ ಪಿಸಿಆರ್ ನಂ-32/2020 ನ್ನು ಸಾಧರಪಡಿಸಿದ್ದರ ಸಾರಾಂಶವೇನೆಂದರೆ The complainant was on look out to purchase a property around Bagepalli district with good marketable title. During the interregnum the accused No-1 and 2 conspired together and hatched a plan to make wrongful gain from the said disputed property bearing Sy.No.239,old No.195, measuring 4 acres 36 guntas situated in puttaparti village, Bagepalli Taluk, Kasaba Hobali, kolar district . accordingly accused No-2 met the complainant and introduced himself as real estate broker  and  made the complainante to believe that he is a respectable person and also having deep roots in the society and also has good knowledge about lands in the around Bagepalli district. After meeting the complainant the accused persons with an intention to deceive  him indused the Complainant to purchase the said disputed lands bearing Sy.No.239,old No.195, measuring 4 acres 36 guntas situated in puttaparti village, Bagepalli Taluk, Kasaba Hobali, kolar district stating that the property has a good and marketable title, Both accused No-1 and accused No-2 Fraudulently, intentionally, dishonestly, misrepresented to the complainante that accused No-1 is the actual owner of the property and further deceived that there is no encumbrance on the said property.

 1. The Complainant without knowing the fraudulent intention of accused No-1 and accused No-2 believed the wise words of them and proceeded further with an intrest in purchasing the property . Subsequently when the complainant asked for necessary documents like title deeds and revenue documents related to the property, the Accused No-1 and Accused No-2  played a clever game to that effect and gave the complainant such documents to make him believe that accused No-1 is the actual owner and further induced the  Complainant to purchase the property as soon as possible or else that the property will be sold to some other person by misrepresenting themselves towords the Complainant stating that they are in urgent need of money for their personly necessity.

4.The accused No-1 through accused No-2 indused the Complainant to that extent that he is so lucky to purchase the said property  which is having very goopd and marketable title which is free from any kind of litigation. Accordingly, the accused No-1 and accused No-2 as per their criminal conspirency without giving proper intimation and proper time to Complainant to think about the purchasing the property  indused him to purchase the property the property who woud otherwise not purchased unless being indused by them. Subsquantly a meeting was also fixed to negotiate the price and also to fix a date to get the property registrated in favor of Complainant which is also a part of the conspirency of the accused prrsons.

 1. It is submitted that the Complainant was indused to purchase the above said property and on 29.08.2018, a sale deed was executed by accused No-1 in favor of Complainant and the sale deed was registrated with Document No-2815/2018-19, in the office, of sub registrar, Bagepalli. After the registration of of the said sale deed, the Complainant made an application before the concerned revenue deportment for change of khata in his name. In the meanwhile, one shri.chitti babu, s/o. Krishnamurthy claiming to be th owner of the above said property raised his objection for change of khata in the name of the Complainant. On perusal of the application for khatha and objection, the Tahsildar,Bagepalli taluk initiated an enquiry for the ascertainment of dispute. During the pendency of the enquiry to the shock and surprise, complainant came to know about peior sale deed executed by the accused No-1 on 27-02-2007  in favour of one Shri. Chitti babu with respect to aforementioned property and the same property was again registered in the name of the Complainant.Thereupon, the Complainant made further equiry  with respect to above said property and it was again  to his shock and surprise that the same property was  also encumbered to sri. Adinarayanappa  and Sri.Nanjareddy in terms of sale agreement on 01.08.2012 and there was also pending suit with respect to the said property against Shri. Chitti Babu under section 79 A and B of Karnataka Land revenue Act before No-1 and accused No-2 to deceive the Complainant got clearing by looking at the acts and misresentation done by them.
 2. Such being the situation, the Complainant when confronted about the said sham transaction and fraud played by the Accused No.1 and accused No.2 both of them behaved in a negligent and rude manner and further terrorized the Complainant through anti-social elements, used unparliamentary language ang told the Complainant to do whatever he can do. By their attitude and behavior of the accused persons who conspired together to deceive the Complainant and in furtherance to the conspirency, formed an unlawful assembly represented themselves that they are actual owner of the property and further indused the Complainant to purchase the property who being induced by such representations. The accused persons not only breached the faith which has been bestowed on them but also cheated the complainant for their wrongful gain  at the cost the Complainant. Therefore the intention to cheat the Complainant right from their misreprestation of selling the property to the last .is proved by the facts of all the acts and omissions done by the accused No-1 and accused No.2 with a dishonest and fraudulent intention in order to enrich themselves illegally have cuused wrongful loss to the Complainant by deceiving him by selling the property which was alredy sold to some other person way back in year 2007. 

 7.The Complainant immediately approached the jurisdictional police station where the property falls within on 13.02.2019 and the police officials endorsed the written complaint of the Complainant with NCR No-44/2019 and shown their helplessness in registrering a Frist Information report against the acused persons.

 1. The Complainant has approached the jurisdictional police station against the accused persons for the cognizable offence committed by them which is required under section 154(1) and 154(3) of code criminal procedure.
 2. The Complainant would also like to examine the following witness which is more fully mentioned hereunder in the list of witness enclosed along with this Complainant.
 3. The Complainant would also relly upon the following documents annexted in the list of documents enclosed along with this Complainant.

Wherefore the Complainant most humbly prayed before this Hon’ble court to take cognizable of the offence under section 120B,406,420,504,506 read with section 34, 35,149 of Indian penal Code: or refer the Complainant to the station Housed officer of the jurisdictional Bagepalli police station and direct them to register the  Complainant , investigate and submit the report  to meet the ends of justice. ನೀಡಿರುವ ದೂರಿನ ಮೇರೆಗೆ  ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.102/2021 ಕಲಂ. 87 ಕೆ.ಪಿ ಆಕ್ಟ್:-

  ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:29/07/2021 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಅಂಕಾಲಮಡಗು ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ  ಹೆಚ್ ಸಿ -36  ಶ್ರೀ.ವಿಜಯ್ ಕುಮಾರ್, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿ.ಸಿ 561 ರಮೇಶ್ ತಳವಾರ, ಪಿ.ಸಿ 415 ಪರಸಪ್ಪತ್ಯಾಗರ್ಥಿ ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಅಂಕಾಲಮಡಗು ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಅಂಕಾಲಮಡಗು ಗ್ರಾಮದ ಕೆರೆಯ ಅಂಗಳಕ್ಕೆ ಮಧ್ಯಾಹ್ನ 3-00 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ವೃತ್ತಾಕಾರವಾಗಿ ಕುಳಿತು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರುಗಳ ಪೈಕಿ ಇಬ್ಬರನ್ನು ನಾವುಗಳು ಹಿಡಿದುಕೊಂಡಿದ್ದು 4 ಜನರು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ನಾವು ಹಿಡಿದುಕೊಂಡ ಆಸಾಮಿಗಳ ಹೆಸರು ವಿಳಾಸಗಳನ್ನು ವಿಚಾರಿಸಲಾಗಿ 1) ಶ್ರೀ.ರಾಜಣ್ಣ ಬಿನ್ ಲೇಟ್ ಈರಪ್ಪ, 48ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕಡದನಮರಿ ಗ್ರಾಮ, ಚಿಂತಾಮಣಿ ತಾಲ್ಲೂಕು 9901943487 2) ಶ್ರೀ.ವೆಂಕಟರಾಮರೆಡ್ಡಿ ಬಿನ್ ಲೇಟ್ ವೇಮನ್ನ, 45ವರ್ಷ, ಒಕ್ಕಲಿಗರು, ಜಿರಾಯ್ತಿ, ಬೊಮ್ಮಕಪಲ್ಲಿ ಗ್ರಾಮ, ಪಿ.ಟಿ.ಎಂ ಮಂಡಲಂ, ತಂಬಾಲಪಲ್ಲಿ ತಾಲ್ಲೂಕು ಚಿತ್ತೂರು ಜಿಲ್ಲೆ ಆಂದ್ರಪ್ರದೇಶ ಎಂದು ತಿಳಿಸಿದ್ದು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋದವರ ಹೆಸರು ವಿಳಾಸಗಳನ್ನು ತಿಳಿಯಲಾಗಿ 1)ವೆಂಕಟರವಣ ಬಿನ್ ನಂಜಪ್ಪ, 35ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕಡದನಮರಿ ಗ್ರಾಮ, ಚಿಂತಾಮಣಿ ತಾಲ್ಲೂಕು, 2) ಮಂಜುನಾಥರೆಡ್ಡಿ ಬಿನ್ ವೆಂಕಟಶಿವಾರೆಡ್ಡಿ, 30ವರ್ಷ, ಜಿರಾಯ್ತಿ, ಒಕ್ಕಲಿಗರು, ಅಂಕಾಲಮಡಗು ಗ್ರಾಮ, ಚಿಂತಾಮಣಿ ತಾಲ್ಲೂಕು 3) ಲಕ್ಷ್ಮಣ ಬಿನ್ ಬಿಲ್ಲಾಂಡ್ಲಹಳ್ಳಿ ಈರಪ್ಪ, 42ವರ್ಷ, ಆದಿ ಕರ್ನಾಟಕ ಜನಾಂಗ, ಕಡದನಮರಿ ಗ್ರಾಮ, ಚಿಂತಾಮಣಿ ತಾಲ್ಲೂಕು 9008778751, 4)ಚಿನ್ನಮುನೆಪ್ಪಗಾರಿ ಕೋನಪ್ಪ ಬಿನ್ ಚಿನ್ನಮುನಿಯಪ್ಪಗಾರಿ ಬೋಡಪ್ಪ, 35ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಟಿ.ಸದ್ದಂ ಗ್ರಾಮ, ಪಿ.ಟಿ.ಎಂ ಮಂಡಲಂ, ತಂಬಾಲಪಲ್ಲಿ ತಾಲ್ಲೂಕು ಚಿತ್ತೂರು ಜಿಲ್ಲೆ ಆಂದ್ರಪ್ರದೇಶ ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3150 ರೂಗಳಿದ್ದು ಇಸ್ಪೀಟ್ ಜೂಜಾಟ ಆಡುತ್ತಿದ್ದ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 3150/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಮಧ್ಯಾಹ್ನ 3-15 ಗಂಟೆಯಿಂದ ಮಧ್ಯಾಹ್ನ 4-15 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 5-15 ಗಂಟೆಗೆ ಠಾಣೆಗೆ ವಾಪಸ್ ಬಂದು ಸ್ವತಃ ಠಾಣೆಯ ಎನ್ ಸಿ ಆರ್ ನಂ: 134/2021 ರಂತೆ ದಾಖಲಿಸಿಕೊಂಡಿರುತ್ತೆ. ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ವಾಟ್ಸ್ ಹ್ಯಾಪ್ ಮುಖಾಂತರ ರವಾನಿಸಿಕೊಂಡು ಈ ದಿನ ದಿನಾಂಕ ಬೆಳಿಗ್ಗೆ 10-30 ಗಂಟೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯ ಮೊ ಸಂಖ್ಯೆ: 102/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 15(A),32(3) ಕೆ.ಪಿ ಆಕ್ಟ್:-

  ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:30/07/2021 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ಠಾಣೆಯ ಸಿಬ್ಬಂದಿ ಹೆಚ್.ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಕಡದನಮರಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಬಿಲ್ಲಾಂಡ್ಲಹಳ್ಳಿ ಗ್ರಾಮದ ವಾಸಿಯಾದ ಶ್ರೀ.ಬೈರೆಡ್ಡಿ ಬಿನ್ ಸುಬ್ಬರಾಯಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಸಿಬ್ಬಂದಿಯೊಂದಿಗೆ ಬಿಲ್ಲಾಂಡ್ಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಧ್ಯಾಹ್ನ 12-45 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಬಿಲ್ಲಾಂಡ್ಲಹಳ್ಳಿ ಗ್ರಾಮದ ವಾಸಿ ಬೈರೆಡ್ಡಿ ಬಿನ್ ಸುಬ್ಬರಾಯಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಚಿಲ್ಲರೆ ಅಂಗಡಿಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ಬೈರೆಡ್ಡಿ ಬಿನ್ ಸುಬ್ಬರಾಯಪ್ಪ 45 ವರ್ಷ,ವಕ್ಕಲಿಗರು,ಚಿಲ್ಲರೆ ಅಂಗಡಿ ವ್ಯಾಪಾರ,ವಾಸ-ಬಿಲ್ಲಾಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 09 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದ ಪ್ರತಿಯೊಂದರ ಮೇಲೆ ಬೆಲೆ 35.13 ರೂ ಎಂತ ಇದ್ದು ಒಟ್ಟು 810 ಎಂ.ಎಲ್ ನ 316.17 ರೂಗಳ ಮದ್ಯ ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 01-00 ಗಂಟೆಯಿಂದ ಮಧ್ಯಾಹ್ನ 01-45 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 02-30 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖ್ಯೆ: 103/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 20(b)(I)A ) (NARCOTIC DRUGS & PSYCHOTROPIC SUBSTANCES ACT, 1985:-

  ದಿನಾಂಕ;30.07.2021 ರಂದು ಮದ್ಯಾಹ್ನ 2-00 ಗಂಟೆಗೆ ನೀಡಿದ ದೂರಿನ ಸಾರಾಂಶವೆನೆಂದರೆ ಈ ದಿನ   ದಿನಾಂಕ:30-07-2021 ರಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ  ಬಿ.ಪಿ. ಮಂಜು ಆದ ತಾನು  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದಾಗ  ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಮಾದಕ ವಸ್ತುವಾದ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡಲು ಚಿಕ್ಕಬಳ್ಳಾಪುರ ತಾಲ್ಲೂಕು ಪೂರ್ವ-ಪಶ್ಚಿಮವಾಗಿ ಹಾದು ಹೋಗಿರುವ  ರಾಷ್ಟ್ರೀಯ ಹೆದ್ದಾರಿ-234 ರಸ್ತೆಯ ಪಟ್ರೇನಹಳ್ಳಿ ಗೇಟ್ ನಲ್ಲಿ ಇಬ್ಬರು ಆಸಾಮಿಗಳು ಶಿಡ್ಲಘಟ್ಟದ ಕಡೆಯಿಂದ ಆಟೋ ನಂಬರ್: KA-03-AG-2837 ನಂಬರಿನ ಆಟೋದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ಮಾರಾಟ  ಮಾಡಲು ಪ್ರಯತ್ನಿಸುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ  ಮಾಹಿತಿಯನ್ನು  ಠಾಣಾ ದಿನಚರಿಯಲ್ಲಿ  ನಮೂದಿಸಿ ನಂತರ ಮಾನ್ಯ ಪೊಲೀಸ್ ಉಪಾಧಿಕ್ಷಕರು ಚಿಕ್ಕಬಳ್ಳಾಪುರ  ಉಪ ವಿಭಾಗ  ಹಾಗೂ  ಚಿಕ್ಕಬಳ್ಳಾಪುರ ವೃತ್ತದ ಸಿಪಿಐ ರವರಿಗೆ ಇಲಾಖೆಯಿಂದ ಒದಗಿಸಿರುವ ದೂರವಾಣಿ ಸಂಖ್ಯೆಗೆ ಕರೆಮಾಡಿ ಸದರಿ ಮಾಹಿತಿಯನ್ನು ತಿಳಿಸಿ, ದಾಳಿ ಮಾಡಲು ಅನುಮತಿಯನ್ನು ಪಡೆದುಕೊಂಡು ನಂತರ ಪಂಚಾಯ್ತಿದಾರರಿಗೆ  ಕಲಂ: 41 NDPS  ಕಾಯ್ದೆ ಪ್ರಕಾರ ಪೊಲೀಸ್ ನೋಟೀಸ್ ಜಾರಿ ಮಾಡಿ  ಬೆಳಗ್ಗೆ 11-45 ಗಂಟೆಗೆ ಮೇಲ್ಕಂಡ ಮಾಹಿತಿಯ ಆಧಾರದ ಮೇರೆಗೆ ತಾನು ಸಿಬ್ಬಂದಿಯಾದ ಶ್ರೀ. ಸುರೇಶ್ ಹೆಚ್.ಸಿ-38. ಶ್ರೀ. ನರಸಿಂಹಮೂರ್ತಿ ಸಿಪಿಸಿ-264 ಮತ್ತು ಶ್ರೀನಿವಾಸ ಸಿಪಿಸಿ-359 ರವರು ಸರ್ಕಾರಿ ಜೀಪ್ ನಂಬರ್ KA-40-G-567 ರಲ್ಲಿ ಪಟ್ರೇನಹಳ್ಳಿ ಗ್ರಾಮದ ಒಳಗೆ ಮರೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಪಟ್ರೇನಹಳ್ಳಿ ಗೇಟ್ ಗೆ ಬಂದಿದ್ದು ಅದೇ ಸಮಯಕ್ಕೆ ಚಿಕ್ಕಬಳ್ಳಾಪುರ ವೃತ್ತದ ಮಾನ್ಯ ಸಿಪಿಐ ರವರಾದ ಶ್ರೀ.ಎಂ.ಎಂ.ಪ್ರಶಾಂತ್ ರವರು ತಮ್ಮ ಸಿಬ್ಬಂದಿಯೊಂದಿಗೆ ಸರ್ಕಾರಿ  ಜೀಪ್ ಸಂಖ್ಯೆ KA-40-G-6633 ರಲ್ಲಿ ಬಂದು ಪರಸ್ಪರ ಚೆಕ್ ಮಾಡಿಕೊಂಡು ಅವರ ಬಳಿ ಯಾವುದೇ ಮಾದಕ ವಸ್ತುಗಳು ಇಲ್ಲವೆಂದು ಖಚಿತಪಡಿಸಿಕೊಂಡು. ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯವರೊಂದಿಗೆ ಪಟ್ರೇನಹಳ್ಳಿ ಗೇಟ್ ಗೆ ಹೋಗುವಷ್ಟರಲ್ಲಿ ಪಟ್ರೇನಹಳ್ಳಿ ಗೇಟ್ ನಲ್ಲಿ ಇಬ್ಬರು ಆಸಾಮಿಗಳು ಶಿಡ್ಲಘಟ್ಟ ಕಡೆಯಿಂದ ಆಟೋದಲ್ಲಿ  ಬರುತ್ತಿದ್ದನ್ನು  ನೋಡಿ  ಸದರಿ ಆಟೋವನ್ನು ತಡೆದು ಆಟೋದಲ್ಲಿದ್ದವರ  ಹೆಸರು ಮತ್ತು ವಿಳಾಸವನ್ನು ಕೇಳಲಾಗಿ (1) ಪಿ.ಡೇವಿಡ್ ಬಿನ್ ಲೇಟ್ ಪ್ರಕಾಶ್, 23 ವರ್ಷ. ಕ್ರಿಶ್ಚಿಯನ್ ಜನಾಂಗ. ಗ್ಯಾಸ್ ಸಿಲಿಂಡರ್ ಸಪ್ಲೇಯರ್ ಕೆಲಸ ವಾಸ:3ನೇ ಕ್ರಾಸ್ ಅಟ್ಟರೂ ಲೇಔಟ್  ಯಲಹಂಕ ನ್ಯೂ ಟೌನ್ ಬೆಂಗಳೂರು ಎಂತಲು ಮತ್ತೊಬ್ಬ (2) ಜೆ.ಯೇಸುದಾಸ್ ಬಿನ್ ಲೇಟ್ ಜಯಕುಮಾರ್, 25 ವರ್ಷ, ಕ್ರಿಶ್ಚಿಯನ್ ಜನಾಂಗ, ನಂದಿ ಹಾಲು ವಾಹನ ಚಾಲಕ ವಾಸ: # 68 9ನೇ ಕ್ರಾಸ್ ಚಿಕ್ಕ ದಿನ್ನೆ. ಅಟ್ಟೂರು ಲೇ ಔಟ್ ಯಲಹಂಕ ನ್ಯೂ ಟೌನ್ ಬೆಂಗಳೂರು ಎಂತ ತಿಳಿಸಿದ್ದು ಆಟೋವನ್ನು  ಪರಿಶೀಲಿಸಲಾಗಿ  ಚಾಲಕನ ಸೀಟಿನ  ಕೆಳಗೆ  ಒಂದು ಪ್ಲಾಸ್ಟಿಕ್  ಕವರ್ ನಲ್ಲಿಟ್ಟಿದ್ದ ವಸ್ತುವಿನ ಬಗ್ಗೆ  ಪ್ರಶ್ನಿಸಿದಾಗ ಸದರಿಯವರು ಗಾಂಜಾ ಸೊಪ್ಪನ್ನು ಶಿಡ್ಲಘಟ್ಟದ ಕಡೆಯಿಂದ ಬೆಂಗಳೂರು ಕಡೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾಗಿ ಒಪ್ಪಿಕೊಂಡಿದ್ದು.  ದಾಳಿ ಮಾಡಿದ ಬಗ್ಗೆ   ಖಚಿತಪಡಿಸಿಕೊಂಡು ಮಾನ್ಯ ಡಿ.ವೈ.ಎಸ್.ಪಿ ಸಾಹೇಬರಿಗೆ ವಿಷಯ ತಿಳಿಸಿದ್ದು ಮದ್ಯಾಹ್ನ 12.15 ಗಂಟೆಗೆ  ಮಾನ್ಯ   ಡಿ.ವೈ.ಎಸ್.ಪಿ ಸಾಹೇಬರು  ಸ್ಥಳಕ್ಕೆ  ಬೇಟಿ ಮಾಡಿದ್ದು  ಮಾನ್ಯ ಡಿವೈಎಸ್ ಪಿ ಸಾಹೇಬರು ಪಂಚರ ಸಮ್ಮುಖದಲ್ಲಿ ವಿಧಿ-ವಿಧಾನಗಳನ್ನು ಅನುಸರಿಸಿ ಗಾಂಜಾ ಸೊಪ್ಪನ್ನು ಮತ್ತು  ಆರೋಪಿಗಳು ಗಾಂಜಾ ಸೊಪ್ಪನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ KA-03-AG-2837 ನಂಬರಿನ ಆಟೋವನ್ನು ಮದ್ಯಾಹ್ನ 12-15 ಗಂಟೆಯಿಂದ 1-30  ಗಂಟೆಯವರೆವಿಗೆ  ಪಂಚನಾಮೆ ಮುಖಾಂತರ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಫಿಗಳನ್ನು  ವಶಕ್ಕೆ  ನೀಡಿದ್ದು  ಆರೋಪಿಗಳಾದ 1) ಪಿ.ಡೇವಿಡ್ ಬಿನ್ ಲೇಟ್ ಪ್ರಕಾಶ್ ಮತ್ತು 2) ಜೆ.ಯೇಸುದಾಸ್ ಬಿನ್ ಲೇಟ್ ಜಯಕುಮಾರ್ ರವರುಗಳು ಮಾದಕ ವಸ್ತುವಾದ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕಾಗಿ ಸಾಗಾಣಿಕೆ ಮಾಡುತಿದ್ದವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸದರಿ ಮಾಲುಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.55/2021 ಕಲಂ.420 ಐ.ಪಿ.ಸಿ:-

  ದಿನಾಂಕ:30/07/2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರು ಶ್ರೀಮತಿ ವೆಂಕಟಲಕ್ಷಮ್ಮ ಕೊಂ ಆಶ್ವಥರಾಜು ವಾಪಸಂದ್ರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಗಣಕೀಕೃತ ದೂರಿನ ಸರಾಂಶವೇನೆಂದರೆ ತನ್ನ ಗಂಡನಾದ ಅಶ್ವಥರಾಜುರವರಿಗೆ ಆರೋಗ್ಯ ಸರಿಯಿಲ್ಲದೆ ಮನೆಯಲ್ಲಿ ಮಲಗಿದ್ದು ತಾನು ತಳ್ಳುವ ಬಂಡಿಯಲ್ಲಿ ಕಳ್ಳೆಕಾಯಿ ಮತ್ತು ಜೋಳದ ವ್ಯಾಪಾರ ಮತ್ತು ಕೂಲಿ ಕೆಲಸವನ್ನು ಮಾಡಿಕೊಂಡು ತಮ್ಮ ಜೀವನ ಮಾಡಿಕೊಂಡಿದ್ದು ದಿನಾಂಕ:28/07/2021 ರಂದು ಬೆಳಗ್ಗೆ ಎ.ಪಿ.ಎಂ.ಸಿ ಮಾರ್ಕೆಟ್ ಗೆ ಹೋಗಿ ವಾಪಸ್ಸು ಹಳೇ ಸರ್ಕಾರಿ ಅಸ್ಪತ್ರೆಯ ರಸ್ತೆಯಿಂದ  ಮನೆಗ ಹೂಗುತ್ತಿರುವಾಗ ಬೆಳಗ್ಗೆ 10.45 ಗಂಟೆಯ ಸಮಯದಲ್ಲಿ ಹಳೇ ಸರ್ಕಾರಿ ಅಸ್ಪತ್ರೆಯ ಮುಂಬಾಗ ಎಂ.ಪಿ.ಹೆಚ್.ಎಸ್ ಶಾಲೆಯ ತಿರುವಿನ ಬಳಿ  ಯಾರೋ ಒಬ್ಬ ವ್ಯಕ್ತಿ ತನ್ನನ್ನು  ಹಿಂಬದಿಯಿಂದ ಬಂದು ಮುಂದೆ ಹೋಗುತ್ತಿರುವಾಗ ಬಾರಮ್ಮ ಸಾರ್ ಕೂಗುತ್ತಿದ್ದರೆ ಹಗಲಿನಲ್ಲಿ ಈ ರೀತಿ ಓಡಾಡುತ್ತಿರಲ್ಲಾ ಇಲ್ಲಿ ಕಳ್ಳತನ ಜಾಸ್ತಿಯಾಗಿದೆ ಎಂದು ಹೇಳಿದ ಅಗ ಹಿಂದೆ ಬಂದು ನೋಡಿದ್ದು ಅಲ್ಲಿ ಇಬ್ಬರು ಬಿಳಿ ಷರಟು ಹಾಕಿಕೊಂಡು ಕಾಪೌಂಡ ಗೋಡೆಯ ಪಕ್ಕದಲ್ಲಿ ನಿಂತಿದ್ದು ಅವರು ಏನಮ್ಮ ನೀನು ಈ ರಸ್ತೆಯಲ್ಲಿ ಕಳ್ಳತನ ಜಾಸ್ತಿಯಾಗಿದೆ ಕತ್ತಿನಲ್ಲಿದ್ದ ಸರವನ್ನು ತೆಗೆದು ಬಚ್ಚಿಟ್ಟುಕೊಂಡು ಹೋಗು ಎಂದು ಕತ್ತಿನ ಸರವನ್ನು ತೆಗೆದು ಪೇಪರನಲ್ಲಿ ಭದ್ರವಾಗಿ ಇಟ್ಟುಕೊಂಡು ಹೋಗು ಎಂದು ನನ್ನನ್ನು ನಂಬಿಸಿದರು ನಾನು ಅವರ ಮಾತನ್ನು ನಂಬಿ ನನ್ನ ಕತ್ತಿನಲ್ಲಿದ್ದ ಚಿನ್ನದ ಚೈನನ್ನು ತೆಗೆದು ಪೇಪರನಲ್ಲಿಟ್ಟು ಅದನ್ನು ಮುದರಿ ಸುತ್ತಿಕಟ್ಟು ತನ್ನ ಸೀರೆಯ ಸೆರಗಿನ ತೂದಿ ತೆಗೆದಿದ್ದು ಸದರಿ ಸುತ್ತಿಕಟ್ಟು ಪೇಪರನ್ನು ತೆಗೆದುಯಿಟ್ಟುಕೊಂಡು ಗಂಟುಹಾಕಿಕೊಂಡೆ ನಂತರ ಅ ಅಪರಿಚಿತ ವ್ಯಕ್ತಿ ತಮ್ಮ ಹೆಸರು ಸೀನ ಎಂದು ಹೇಳಿ ಇಬ್ಬರು ಒಂದು ದ್ವಿಚಕ್ರ ವಾಹನದಲ್ಲಿ ಮೊತ್ತಬ್ಬ ಬೇರೆ ದ್ವಿಚಕ್ರ ವಾಹನದಲ್ಲಿ ಹೂರಟು ಹೋದರು ನಾನು ಸ್ವಲ್ಪ ದೂರ ಹೋಗಿ ಸೆರಗಿನ ಗಂಟು ಬಿಚ್ಚಿ ನೋಡಿಕೊಂಡಿದ್ದು ಸದರಿ ಪೇಪರನಲ್ಲಿ  ಚೈನ್ ಬದಲು ಕಲ್ಲುಗಳು ಇದ್ದವು ನನ್ನ ಗಮನವನ್ನು ಬೆರೆಡೆ ಸೆಳೆದು ಮೋಸ ಮಾಡಿ ನನ್ನ ಕತ್ತಿನ ಚೈನ್ ತೆಗೆದುಕೊಂಡು ಹೋಗಿರುತ್ತಾರೆ ಸದರಿ ಚೈನ ಅಂದಾಜು 20 ಗ್ರಾಂ ಇದ್ದು ಇದರ ಬೆಲೆ 80.000/- ರೂ ಗಳಾಗಿರುತ್ತದೆ. ನಾನು ನನ್ನ ಗಂಡನಿಗೆ ನಡೆದ ವಿಚಾರವನ್ನು ರಾತ್ರಿ ಸಮಯದಲ್ಲಿ ನಿದಾನವಾಗಿ ತಿಳಿಸಿ ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ನನ್ನ ಗಮನವನ್ನು ಬೆರೆಡೆ ಸೆಳೆದು ನನ್ನ ಕತ್ತಿನ ಚೈನ್ ತೆಗೆದುಕೊಂಡು ಮೊಸ ಮಾಡಿರುವ ಅಪರಿಚಿತರನ್ನು ಪತ್ತೆ ಮಾಡಿ ನನ್ನ ಚೈನ್ನ್ನು  ಕೊಡಿಸಿಕೊಟ್ಟು ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.173/2021 ಕಲಂ. 78(I),78(III) ಕೆ.ಪಿ. ಆಕ್ಟ್:-

  ದಿನಾಂಕ 29-07-2021 ರಂದು ಮಧ್ಯಾಹ್ನ12-00 ಗಂಟೆಗೆ ನ್ಯಾಯಾಲಯದ ಪಿ.ಸಿ. 129 ರಾಮಚಂದ್ರರವರು  ಘನ ನ್ಯಾಯಾಲಯದಿಂದ ಎನ್.ಸಿ.ಆರ್. ನಂ. 327/2021 ರಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದರ ಸಾರಾಂಶವೇನೆಂಧರೆ  ದಿನಾಂಕ: 24-07-2021 ರಂದು ಸಂಜೆ 04-00  ಗಂಟೆಯಲ್ಲಿ ನಾನು, ಪಿ.ಸಿ. 512 ರಾಜಶೇಖರ, ಪಿ.ಸಿ. 520 ಶ್ರೀನಾಥ್  ಮತ್ತು ಚಾಲಕ  ಮಹೇಶ ಎ.ಪಿ.ಸಿ.143  ರವರೊಂದಿಗೆ ಹೊಸೂರು  ಗ್ರಾಮದಲ್ಲಿ  ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಕೋಟಾಲದಿನ್ನೆ ಕ್ರಾಸ್ ನಲ್ಲಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ  ಕೊಡಿಗೇನಹಳ್ಳಿ ರಸ್ತೆಯಲ್ಲಿ ಯಾರೋ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಹಣವನ್ನು ಪಣವಾಗಿಟ್ಟು ಹಾಗೂ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಂಡು ಅಂಕಿ.ಸಂಖ್ಯೆಗಳನ್ನು ಬರೆದು ಅಕ್ರಮ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾನೆಂದು  ಖಚಿತವಾದ ಮಾಹಿತಿ ಬಂದಿದ್ದು  ಸದರಿ ಮಾಹಿತಿಯ ಮೇರೆಗೆ ಪಂಚರೊಂದಿಗೆ  ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕೋಟಾಲದಿನ್ನೆ ಕ್ರಾಸ್ ನಿಂದ ಉತ್ತರಕ್ಕೆ ಹೋಗುವ ಹಂಪಸಂದ್ರ- ಕೊಡಿಗೇನಹಳ್ಳಿ ರಸ್ತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ  ಯಾರೋ ಒಬ್ಬ ಅಂಗವಿಕಲ ಆಸಾಮಿಯು ಕುಳಿತುಕೊಂಡು  ದಾರಿಯಲ್ಲಿ ಓಡಾಡುವವರಿಗೆ  1 ರೂಪಾಯಿಗೆ 70 ರೂಪಾಯಿಗಳನ್ನು ಕೊಡುತ್ತೇನೆ, ಬನ್ನಿ ನನ್ನ ಬಳಿ ಹಣವನ್ನು ಕಟ್ಟಿ ಅಂಕಿಗಳನ್ನು ಬರೆಯಿಸಿಕೊಂಡು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ  ಎಂದು ಕೂಗುತ್ತಿದ್ದು  ಕೆಲವರು ಆತನ ಬಳಿ ಹಣವನ್ನು ಕೊಟ್ಟು ಚೀಟಿಯಲ್ಲಿ ಏನನ್ನೋ ಬರೆಯಿಸಿಕೊಳ್ಳುತ್ತಿದ್ದು  ನಾನು ಮತ್ತು ಸಿಬ್ಬಂದಿಯವರು  ದಾಳಿಮಾಡಿ ಬರೆದುಕೊಡುತ್ತಿದ್ದ  ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ಬಾಲರಾಜು @ ಕುಂಟ ಬಾಲರಾಜು ಬಿನ್  ಲೇಟ್ ನಾರಾಯಣಪ್ಪ, 47 ವರ್ಷ, ನಾಯಕ, ಹೂವಿನ ವ್ಯಾಪಾರ, ವಾಸ ಮುದುಗೆರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು. ಅಲ್ಲಿದ್ದ ಕೆಲವರು  ಓಡಿಹೋಗಿದ್ದು  ಆಸಾಮಿಯ ಕೈಯಲ್ಲಿ ಒಂದು ಚೀಟಿ ಇದ್ದು ಏನದು ಎಂದು ಕೇಳಿದಾಗ ತಾನು ಹಣವನ್ನು ಪಣವಾಗಿಟ್ಟು ಹಾಗೂ ಸಾರ್ವಜನಿಕರಿಂದ  ಹಣವನ್ನು ಕಟ್ಟಿಸಿಕೊಂಡು ಅಂಕಿ ಸಂಖ್ಯೆಗಳನ್ನು ಬರೆದುಕೊಟ್ಟು  ಮಟ್ಕಾ ಜೂಜಾಟವನ್ನು ಆಡುತ್ತಿದ್ದೇನೆಂದು ತಿಳಿಸಿದನು. ಆಸಾಮಿಯು ಸಾರ್ವಜನಿಕರಿಂದ ಕಟ್ಟಿಸಿಕೊಂಡಿದ್ದ ಹಣವನ್ನು ಹಾಜರುಪಡಿಸಿದ್ದು ಎಣಿಸಲಾಗಿ 1)ನಗದುಹಣ 1760/- ಹಣ, 2)ಒಂದು ಮಟ್ಕಾ ಚೀಟಿ , 3) ಬಾಲ್ ಪೆನ್ ಅನ್ನು  ವಶಪಡಿಸಿಕೊಂಡು, ಪಂಚನಾಮೆಯನ್ನು  16-30 ಗಂಟೆಯಿಂದ 17-30 ಗಂಟೆಯವರೆಗೆ  ಜರುಗಿಸಿ ಠಾಣೆಗೆ 18-00  ಗಂಟೆಗೆ ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 78(1)(3)  ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರಿಂದ ಠಾಣಾ ಎನ್.ಸಿ.ಆರ್ ನಂ. 327/2021 ರಂತೆ ನೊಂದಾಯಿಸಿದ್ದು ಸದರಿ ದೂರು ಅಸಂಜ್ಞೇಯ ಅಪರಾಧವಾಗಿದ್ದರಿಂದ ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುವುದು.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.174/2021 ಕಲಂ. 87 ಕೆ.ಪಿ. ಆಕ್ಟ್:-

  ದಿನಾಂಕ: 26/07/2021 ರಂದು 19-10 ಗಂಟೆ ಸಮಯಲ್ಲಿ ಗೌರೀಬಿದನೂರು ವೃತ್ತ ನಿರೀಕ್ಷಕರಾದ  ಶ್ರೀ.ಎಸ್.ಡಿ.ಶಶೀಧರ್ ರವರು ಠಾಣಾಧಿಕಾರಿಗಳಾದ ತನಗೆ ಸೂಚಿಸಿದ್ದೇನೆಂದರೆ ಈ ದಿನ ದಿನಾಂಕ:26/07/2021  ರಂದು ಸಂಜೆ 5-00 ಗಂಟೆಯಲ್ಲಿ ವೃತ್ತ ಕಛೇರಿಯಲ್ಲಿದ್ದಾಗ  ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಇಡಗೂರು  ಕೆರೆ ಅಂಗಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಹೆಚ್.ಸಿ-224 ಶ್ರಿ ವೆಂಕಟೇಶ, ಪಿ.ಸಿ-310 ಮೈಲಾರಪ್ಪ, ಹಾಗೂ ರವರೊಂದಿಗೆ ಚಾಲಕ ಎ.ಪಿ.ಸಿ- 133 ಹೇಮಾಂತ್ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-1222 ರಲ್ಲಿ ಇಡಗೂರು ಗ್ರಾಮಕ್ಕೆ ಸಂಜೆ 5-15  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-1222 ರಲ್ಲಿ ಹೊರಟು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಇಡಗೂರು ಗ್ರಾಮದ ಕೆರೆ ಸಮೀಪ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಇಡಗೂರು ಗ್ರಾಮದ ಕೆರೆ ಅಂಗಳದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 100/-ರೂ ಇನ್ನೋಬ್ಬ ಬಾಹರ್ ಗೆ 100/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು  ಕುಳ್ಳಿತುಕೊಳ್ಳುವಂತೆ ಸೂಚಿಸಿದರು, ಒಬ್ಬರು ಸ್ಥಳದಿಂದ ಓಡಿಹೋದರು ಸ್ಥಳದಲ್ಲಿ ವಶಕ್ಕೆ ಪಡೆದವರ ಹೆಸರು ವಿಳಾಸವನ್ನು ಕೆಳಲಾಗಿ 1) ಲಕ್ಷ್ಮೀಪತಿ ಬಿನ್ ಲೇಟ್ ವೆಂಕಟಪ್ಪ, 50 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ ಡಗೂರು ಗ್ರಾಮ,  ಗೌರಿಬಿದನೂರು ತಾಲ್ಲೂಕು, 2) ನರಸಿಂಹಮೂರ್ತಿ ಬಿನ್ ನಾರಾಯಣಪ್ಪ, 45 ವರ್ಷ, ಮಡಿವಾಳರು, ಕುರುಬರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 3) ತಿಲಕ್ ಬಿನ್ ರಮೇಶ, 21 ವರ್ಷ,ಸಾದರಗೌಡ, ಕೂಲಿ ಕೆಲಸ, ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 4) ಪಾಪಣ್ಣ ಬಿನ್ ಲೇಟ್ ವೆಂಕಟರವಣಪ್ಪ, 41 ವರ್ಷ, ಸಾದರ ಗೌಡ, ಇಡಗೂರು ಗ್ರಾಮ ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸ ಕೇಳಿ ತಿಳಿಯಲಾಗಿ 5) ಶಿವಶಂಕರ್ ಬಿನ್ ಭೀಮಣ್ಣ, ನಾಯಕರು, ಇಡಗೂರು ಗ್ರಾಮ,ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದರು. ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 9200/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಂಜೆ 05-30  ಗಂಟೆಯಿಂದ 6-30  ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ರಾತ್ರಿ 7-10 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಮಾಲು ಮತ್ತು ಆಸಾಮಿಗಳನ್ನು ವರದಿ ಮತ್ತು ಅಸಲು ಪಂಚನಾಮೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.331/2021 ರಂತೆ ದಾಖಲಿಸಿಕೊಂಡಿರುತ್ತೇನೆ. .ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.175/2021 ಕಲಂ. 87 ಕೆ.ಪಿ. ಆಕ್ಟ್:-

  ದಿನಾಂಕ: 28/07/2021 ರಂದು 18-15 ಗಂಟೆ ಸಮಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ.ವಿಜಯ್ ಕುಮಾರ್.ಕೆ.ಸಿ.ರವರು ಠಾಣಾಧಿಕಾರಿಗಳಾದ ತನಗೆ ಸೂಚಿಸಿದ್ದೇನೆಂದರೆ  ಈ ದಿನ ದಿನಾಂಕ;28-07-2021 ರಂದು ಮಧ್ಯಾಹ್ನ 4-15 ಗಂಟೆಯಲ್ಲಿ ಸಿಬ್ಬಂದಿಯವರಾದ ಪಿಸಿ-302, ಕುಮಾರ ನಾಯ್ಕ, ಪಿಸಿ-426 ಲೋಹಿತ್, ಪಿಸಿ-582  ಮಂಜುನಾಥ ,ಪಿಸಿ-281 ಗುರುಸ್ವಾಮಿ, ಜೀಪ್ ಚಾಲಕ ಎಪಿಸಿ-143 ಮಹೇಶ್ ರವರೊಂದಿಗೆ  ಕೆ.ಎ.40.ಜಿ.538 ಸರ್ಕಾರಿ ಜೀಪಿನಲ್ಲಿ ಗೌರೀಬಿದನೂರು ತಾಲ್ಲೂಕು ವಾಟದಹೊಸಹಳ್ಳಿ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ, ವಾಟದಹೊಸಹಳ್ಳಿ ಗ್ರಾಮದ ಕೆರೆಯ  ಅಂಗಳದಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಂಚಾಯ್ತಿದಾರರು ಹಾಗು  ಪೊಲೀಸ್ ಠಾಣೆಯ  ಪೊಲೀಸ್  ಸಿಬ್ಬಂದಿಯವರಾದ ಪಿಸಿ-302, ಕುಮಾರ ನಾಯ್ಕ, ಪಿಸಿ-426 ಲೋಹಿತ್, ಪಿಸಿ-582  ಮಂಜುನಾಥ ,ಪಿಸಿ-281 ಗುರುಸ್ವಾಮಿ, ಜೀಪ್ ಚಾಲಕ ಎಪಿಸಿ-143 ಮಹೇಶ್ ರವರನ್ನು ಕರೆದುಕೊಂಡು ಕೆ.ಎ.40.ಜಿ.538 ಸರ್ಕಾರಿ ಜೀಪಿನಲ್ಲಿ ವಾಟದಹೊಸಹಳ್ಳಿ ಗ್ರಾಮದ ಕೆರೆಯ ಅಂಗಳಕ್ಕೆ  ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,   ಪೊದೆಗಳ ನಡುವೆ  5 ಜನರು   ಗುಂಪಾಗಿ ಕುಳಿತು  ಇವರಲ್ಲಿ  ಕೆಲವರು ಅಂದರ್ ಗೆ ನೂರು ರೂಪಾಯಿ ಇನ್ನೂ ಕೆಲವರು ಬಾಹರ್ ಗೆ  ನೂರು ರೂಪಾಯಿ ಎಂದು ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡು, ಪೊಲೀಸರು ಸದರಿ ಸ್ಥಳವನ್ನು ಸುತ್ತುವರೆದು ಪಂಚರ ಸಮಕ್ಷಮ ಸದರಿ ಸ್ಥಳದ ಮೇಲೆ ದಾಳಿ ಮಾಡಿ  ಜೂಜಾಟವಾಡುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸವನ್ನು ಕೇಳಲಾಗಿ1]ಪ್ರಸನ್ನ ನಾಯಕ ಬಿನ್ ಲೇಟ್ ಲಕ್ಷ್ಮೇ ನಾಯಕ, 38 ವರ್ಷ, ಲಂಭಾಣಿ ಜನಾಂಗ, ಜಿರಾಯ್ತಿ, ಕೃಷ್ಣರಾಜಪುರ ತಾಂಡ,  ಗೌರಿಬಿದನೂರು ತಾಲ್ಲೂಕು 2] ಶೇಖರ್  ನಾಯ್ಕ್ ಬಿನ್ ಪೀರೇನಾಯ್ಕ್, 27 ವರ್ಷ, ಲಂಭಾಣಿ ಜನಾಂಗ, ಜಿರಾಯ್ತಿ, ಕೃಷ್ಣರಾಜಪುರ ತಾಂಡ,  ಗೌರಿಬಿದನೂರು ತಾಲ್ಲೂಕು 3] ಹರೀಶ್ ನಾಯ್ಕ್ ಬಿನ್  ಲೇಟ್ ಲಕ್ಷ್ಮೇನಾಯ್ಕ್, 22ವರ್ಷ, ಲಂಭಾಣಿ ಜನಾಂಗ, ಜಿರಾಯ್ತಿ, ಕೃಷ್ಣರಾಜಪುರ ತಾಂಡ,  ಗೌರಿಬಿದನೂರು ತಾಲ್ಲೂಕು  4] ವಿನೋದ್ ನಾಯ್ಕ್ ಬಿನ್ ಗೋವಿಂದ ನಾಯ್ಕ್, 26ವರ್ಷ, ಲಂಭಾಣಿ ಜನಾಂಗ, ಜಿರಾಯ್ತಿ, ಕೃಷ್ಣರಾಜಪುರ ತಾಂಡ,  ಗೌರಿಬಿದನೂರು ತಾಲ್ಲೂಕು, 5] ಗಿರೀಶ್ ನಾಯ್ಕ್ ಆರ್.ಎಸ್. ಬಿನ್ ಶಿವೇನಾಯ್ಕ್, 22ವರ್ಷ, ಲಂಭಾಣಿ ಜನಾಂಗ, ಜಿರಾಯ್ತಿ, ಕೃಷ್ಣರಾಜಪುರ ತಾಂಡ,  ಗೌರಿಬಿದನೂರು ತಾಲ್ಲೂಕುಎಂದು ತಿಳಿಸಿದ್ದು, . ಸ್ಥಳದಲ್ಲಿ ಪರಿಶೀಲಿಸಲಾಗಿ ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್ ಮೇಲೆ ಜೂಜಾಟವಾಡಲು ಬಳಸುತ್ತಿದ್ದ  ಇಸ್ಟೀಟ್ ಎಲೆಗಳು,  ಮತ್ತು  ಜೂಜಾಟಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದು,  ಹಣವನ್ನು ಎಣಿಸಲಾಗಿ 2400/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳು ಇರುತ್ತವೆ. ಇವುಗಳನ್ನು  ಪಂಚರ ಸಮಕ್ಷಮದಲ್ಲಿ ಸಂಜೆ4-30 ರಿಂದ 5-30 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ.  ನಂತರ ಸಂಜೆ 6-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಸ್ಥಳದಲ್ಲಿ ವಶಕ್ಕೆಪಡೆದಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್ , 52 ಇಸ್ಪೀಟ್ ಎಲೆಗಳು, 2400/- ನಗದು ಹಣ, ಹಾಗು ಆರೋಪಿಗಳನ್ನು  ನಿಮ್ಮ ವಶಕ್ಕೆ ನೀಡುತ್ತಿದ್ದು,  ಕಾನೂನು ಕ್ರಮ  ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.336/2021 ರಂತೆ ದಾಖಲಿಸಿಕೊಂಡಿರುತ್ತೇನೆ. ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.176/2021 ಕಲಂ. 15(A),32(3) ಕೆ.ಇ. ಆಕ್ಟ್:-

  ದಿನಾಂಕ:30/07/2021 ರಂದು ಮದ್ಯಾಹ್ನ 12-15 ಗಂಟೆಗೆಗುಡಿಬಂಡೆ ಘನ  ನ್ಯಾಯಾಲಯದ ಸಿಬ್ಬಂದಿ ಪಿ.ಸಿ-302 ಕುಮಾರನಾಯ್ಕ ರವರು ಘನ ನ್ಯಾಯಾಲಯದಿಂದ ಅನುಮತಿ ಆದೇಶವನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 12/07/2021 ರಂದು ಪಿರ್ಯಾದಿದಾರರು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಚರ್ಚಾ ಸಭೆಯನ್ನು ಮುಗಿಸಿಕೊಂಡು ವಾಪಸ್ ಗೌರಿಬಿದನೂರಿಗೆ ಬರಲು ಮಂಚೇನಹಳ್ಳಿ ಬಳಿ ಬರುತ್ತಿದ್ದಾಗ ಸಂಜೆ 4-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ನಗರಗೆರೆ ಗ್ರಾಮದಲ್ಲಿ, ನಾರಾಯಣಸ್ವಾಮಿ ಬಿನ್ ಲೇಟ್ ಬಡಿಗಿ ನಾರಾಯಣಪ್ಪ   ರವರ ಕಬಾಬ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ, ಪಿಸಿ-512, ರಾಜಶೇಖರ  ಮತ್ತು  ಸಿ.ಪಿ.ಸಿ-281 ಗುರುಸ್ವಾಮಿ, ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಚಾಲಕ ಎ.ಪಿ.ಸಿ-143 ಮಹೇಶ ರವರೊಂದಿಗೆ ಪಂಚಾಯ್ತಿದಾರರನ್ನು ಕರೆದುಕೊಂಡು ಸಾಯಂಕಾಲ 4-45  ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ನಾರಾಯಣಸ್ವಾಮಿ @ ಸನ್ನಿ  ಬಿನ್ ಲೇಟ್ ಬಡಿಗಿ ನಾರಾಯಣಪ್ಪ, 38 ವರ್ಷ, ನಾಯಕ ಜನಾಂಗ, ಕಬಾಬ್ ವ್ಯಾಪಾರ,ವಾಸ 3ನೇ ವಾರ್ಡ್ , ನಗರಗೆರೆ ಗ್ರಾಮ, ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು, ಇವುಗಳ ಒಟ್ಟು ಬೆಲೆ 737.73 ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 5-00 ಗಂಟೆಯಿಂದ 06 -00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ306/2021 ರಂತೆ ದಾಖಲಿಸಿಕೊಂಡು ಸಂಜ್ಞೇಯ ಪ್ರಕಣ ದಾಖಲಿಸಲು  ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ಘನ ನ್ಯಾಯಾಲಯದ ಆದೇಶವನ್ನು ಪಡೆದು ಠಾಣಾ ಮೊ.ಸಂ.176/2021 ಕಲಂ. 15(ಎ). 32(3) ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.105/2021 ಕಲಂ. 379 ಐ.ಪಿ.ಸಿ:-

  ದಿನಾಂಕ:29/07/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ಅಲ್ತಾಫ್ ಬಿನ್ ಸೈಯದ್ ಸಾಬ್, ಬೀಮಕ್ಕ ಲೇಔಟ್, ಗೌರಿಬಿನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಹೆಸರಿನಲ್ಲಿರುವ ಕೆ.ಎ53 ಇ.ಆರ್-4989 ಡಿಯೋ ದ್ವಿಚಕ್ರ ವಾಹನವನ್ನು ದಿನಾಂಕ:15/07/2021 ರಂದು ನನ್ನ ಮನೆಯ ಹತ್ತಿರ ನಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಕಳವು ಆಗಿರುತ್ತೆ. 15 ದಿನಗಳಿಂದ ಹುಡುಕಿದರೂ ಸಿಗಲಿಲ್ಲ. ಆದ್ದರಿಂದ ಕಳ್ಳತನವಾಗಿರುವ ಸುಮಾರು 35,000/- ರೂ. ಬೆಲೆ ಬಾಳುವ ನನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೊಳ್ಳುತ್ತೇನೆಂದು ನೀಡಿದ ದೂರಾಗಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.107/2021 ಕಲಂ. 87 ಕೆ.ಪಿ ಆಕ್ಟ್:-

  ದಿ:30/07/2021 ರಂದು ಬೆಳಗ್ಗೆ 10-30 ಗಂಟೆಗೆ  ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಪಿ.ಸಿ.-318.ದೇವರಾಜು ರವರು ಠಾಣಾ ಎನ್.ಸಿ.ಆರ್.ನಂ.153/2021 ರಲ್ಲಿ ಆರೋಪಿಗಳ ವಿರುದ್ದ  ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯವು  ಅನುಮತಿಯನ್ನು ನೀಡಿರುವುದನ್ನು  ತಂದು ಹಾಜರ್ಪಡಿಸಿದ್ದು  ಎನ್.ಸಿ.ಆರ್.ನಂ.153/2021 ರಲ್ಲಿನ ಸಾರಾಂಶವೇನೆಂದರೆ  ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ  ಆದ ನಾನು ದಿನಾಂಕ:18/07/2021 ರಂದು ಸಂಜೆ 4-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಬೀಟ್ ಸಿಬ್ಬಂದಿಯಾದ  ಸಿಪಿಸಿ-572 ಶಶಿಕುಮಾರ್ ಪೋನ್ ಮಾಡಿ ತಿಳಿಸಿದ್ದೇನೆಂದರೆ ಲೀಡರ್ಸ್ ಶಾಲೆ  ಪಕ್ಕದಲ್ಲಿರುವ ಜಾಲಿ  ಮರಗಳ ಮದ್ಯೆ ಕೆಳಗೆ ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸಂಜೆ 4-10 ಗಂಟೆ ಸಮಯಕ್ಕೆ ಸರ್ಕಾರಿ ಜೀಪ್ ಕೆ.ಎ-40 ಜಿ-.281 ರಲ್ಲಿ ಚಾಲಕ ಹರೀಶ್ ಎಪಿಸಿ-76 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ-214 ಲೋಕೇಶ್, ಸಿ ಹೆಚ್ ಸಿ-12 ಶಿವ ಶಂಕರ್ ಮತ್ತು ಸಿಪಿಸಿ- 507 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಸಂಜೆ 4-20 ಗಂಟೆ ಸಮಯಕ್ಕೆ ರೈಮೇಂಡ್ಸ್ ಪ್ಯಾಕ್ಟರಿ ಬಳಿ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ನಲ್ಲಿ ಲೀಡರ್ಸ್ ಶಾಲೆಯ ಬಳಿ ಸಂಜೆ 4-30 ಗಂಟೆ ಸಮಯಕ್ಕೆ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಜಾಲಿ ಮರಗಳ ಮದ್ಯೆ ಕೆಳಗೆ ಗುಂಪಾಗಿ ಕುಳಿತುಕೊಂಡು ಅಂದರ್ -200 ಬಾಹರ್-200 ಎಂದು ಕೂಗಾಡುತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1] ಸಿದ್ದೇಶ್ ಬಿನ್ ಸಿದ್ದಪ್ಪ, 35 ವರ್ಷ, ಡ್ರೈವರ್ ಕೆಲಸ, ಆದಿ ಕರ್ನಾಟಕ ಜನಾಂಗ, ವಾಸ: ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು.  2] ಕಾಳಪ್ಪ ಬಿನ್ ಗಂಗಪ್ಪ, 43 ವರ್ಷ, ಪೈಂಟಿಂಗ್ ಕೆಲಸ, ಶನಿ ಮಹಾತ್ಮ ದೇವಸ್ಥಾನದ ಬಳಿ ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು.  3] ಮಂಜುನಾಥ ಬಿನ್ ಕಾಳಪ್ಪ, 30 ವರ್ಷ, ಪೈಂಟಿಂಗ್ ಕೆಲಸ, ಆದಿ ಕರ್ನಾಟಕ ಜನಾಂಗ, ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು.  4] ಕೃಷ್ಣಪ್ಪ ಬಿನ್ ಗಂಗಪ್ಪ, 55 ವರ್ಷ, ಈಡಿಗರು, ಕೂಲಿ ಕೆಲಸ, ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು   ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ  1] ವಿವಿದ ಮುಖ ಬೆಲೆಯ ಒಟ್ಟು ರೂ 1200/- ಹಣ.  2] 52 ಇಸ್ಪೀಟ್ ಎಲೆಗಳು ಮತ್ತು  3] ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 4-45 ಗಂಟೆಯಿಂದ 5-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ.  ಮತ್ತೆ ಠಾಣೆಗೆ ವಾಪಸ್ಸು 6-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿ  ಅಸಲು ಪಂಚನಾಮೆಯೊಂದಿಗೆ  ಮೇಲ್ಕಂಡ ಆರೋಪಿಗಳು  ಮತ್ತು ಮಾಲುಗಳೊಂದಿಗೆ  ನೀಡಿದ  ದೂರು ವರದಿಯಯಾಗಿರುತ್ತೆ.  ಈ ದೂರು ವರದಿಯ ಮೇರೆಗೆ  ಶ್ರೀ.ನರಸಿಂಹಮೂರ್ತಿ, ಎ.ಎಸ್.ಐ ರವರು ಪಡೆದುಕೊಂಡು ಠಾಣೆಯಲ್ಲಿ  ಎನ್.ಸಿ.ಆರ್.ನಂ. 153/2021 ರೀತ್ಯಾ ದಾಖಲಿಸಿಕೊಂಡಿರುತ್ತಾರೆ.   ನಂತರ   ಎ.ಎಸ್.ಐ ರವರು ಘನ ನ್ಯಾಯಾಲಯಕ್ಕೆ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ಸಂಬಂಧ ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರ ಮೇರೆಗೆ  ಆರೋಪಿತರ ವಿರುದ್ದ ಠಾಣೆಯಲ್ಲಿ ಮೊ.ಸಂ.107/2021 ಕಲಂ  87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.171/2021 ಕಲಂ. 506,324 ಐ.ಪಿ.ಸಿ:-

  ದಿನಾಂಕ:29/07/2021 ರಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 11:00 ಗಂಟೆಗೆ ವಾಪಸ್ ಬಂದು ಠಾಣೆಯ ಮೊ.ಸಂ:171/2021 ಕಲಂ:324,506 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕೊಂಡಿದ್ದರ ಸಾರಾಂಶವೇನೆಂದರೆ ಗಾಯಾಳು ತಿರುಮಲಪ್ಪ ರವರು ತಮ್ಮ ಗ್ರಾಮದ ಲಕ್ಷ್ಮಣ ಬಿನ್ ವೆಂಕಟರಾಯಪ್ಪ ರವರು ಶಿಡ್ಲಘಟ್ಟ ತಾಲ್ಲೂಕು ನೇಡಿಮಾಕಲಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ನಂಜುಂಡಪ್ಪ ರವರಿಗೆ ಹುಡುಗಿಯನ್ನು ಮದುವೆ ಮಾಡಿಕೊಳಲ್ಲು ತೋರಿಸಿದ್ದು ಆದರೆ ಸದರಿ ಹುಡುಗಿ ಕಡೆಯವರು ನರಸಿಂಹಮೂರ್ತಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪಿಗೆ ಪಡೆದಿದ್ದು ಕಾರಣ ಈ ವಿಚಾರವನ್ನು ತಾನೇ ಹುಡುಗಿಯವರ ಕಡೆ ಹುಡುಗಿಯನ್ನು ನರಸಿಂಹಮೂರ್ತಿ ರವರಿಗೆ ಕೊಡಬೇಡ ಎಂತ ತಿಳಿಸಿರುವ ಬಗ್ಗೆ ಊಹೆ ಮಾಡಿಕೊಂಡು ಕಮ್ಮಗುಟ್ಟಹಳ್ಳಿ ಗ್ರಾಮದ ಸುರೇಶ ಬಿನ್ ನಾರಾಯಣಪ್ಪ ರವರ ಬಳಿ ಆರ್.ಚೊಕ್ಕನಹಳ್ಳಿ ಗ್ರಾಮದ ಮಂಜುನಾಥ ಬಿನ್ ಗಂಗಪ್ಪ ರವರು ನರಸಿಂಹಮೂರ್ತಿಗೆ ತಿರುಮಲಪ್ಪ ಹೆಣ್ಣು ಕೊಡಬಾರದು ಎಂತ ತಿಳಿಸಿರುತ್ತಾನೆ. ಎಂದೂ ತನಗೆ ತಿಳಿಸಿದ್ದು ಎಂತ ಸುರೇಶ ತನ್ನ ಬಳಿ ವಿಚಾರವನ್ನು ತಿಳಿಸಿದನು ಆಗ ತಾನು ಮಂಜುನಾಥನ ಬಳಿ ಏನೋ ನೀನು ಸುರೇಶನ ಹತ್ತಿರ ತಾನು ನರಸಿಂಹಮೂರ್ತಿಗೆ ಹೆಣ್ಣು ಕೊಡಬೇಡಿ ಎಂತ ಹುಡುಗಿಯವರ ಕಡೆ ತಿಳಿಸಿರುತ್ತೇನೆ ಎಂತ ತಿಳಿಸಿದ್ದೀಯಾ  ಹುಡುಗಿಯು ಯಾರೋ ಎಂದು ತನಗೆ ಗೋತ್ತಿರುವುದ್ದಿಲ್ಲ. ಸುಮ್ಮನೆ ತನ್ನ ಮೇಲೆ ಅಪಾದನೆ ಹೊರಿಸಿದ್ದಿಯಾ ಎಂತ ಮಂಜುನಾಥನಿಗೆ ಹೇಳಿರುತ್ತೇನೆ ಇದರಿಂದ ತನ್ನ ಮೇಲೆ ಮಂಜುನಾಥ ಧ್ವೇಷ ಸಾದಿಸುತ್ತಿದ್ದನು ಹೀಗಿರುವಲ್ಲಿ ಈ ದಿನ ದಿನಾಂಕ 29/07/2021 ರಂದು ರಾತ್ರಿ ಸುಮಾರು 07:00 ಗಂಟೆ ಸಮಯದಲ್ಲಿ ತಾನು ಮತ್ತು ತಮ್ಮ ಸಂಬಂಧಿಯಾದ ಲಕ್ಷ್ಮಣ ಹಾಗೂ ನರಸಿಂಹಮೂರ್ತಿ ರವರು ಒಟ್ಟಿಗೆ ದ್ವಿಚಕ್ರ ವಾಹನದಲ್ಲಿ ರಾತ್ರಿ ಸುಮಾರು 07:00 ಗಂಟೆಗೆ ಆರ್.ಚೊಕ್ಕನಹಳ್ಳಿ ಗ್ರಾಮದ ಮಂಜುನಾಥ ರವರ ಮನೆಯ ಬಳಿ ಬಂದು ಮಂಜುನಾಥನನ್ನು ಈಚೆಗೆ ಬರಲು ಕರೆದಾಗ ಈಚೆ ಬಂದು ಏಕಾಏಕಿ ಮನೆಯ ಬಳಿ ಇದ್ದ ಕೊಡ್ಲಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಮತ್ತು ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿ ಅದೇ ಕೊಡ್ಲಿಯಿಂದ ತಿರುಗಿಸಿ ಕೊಂಡು ಬೆನ್ನಿನ ಎಡಭಾಗಕ್ಕೆ ಹೊಡೆದು ತರಚಿದ ಗಾಯ ಪಡಿಸಿದನು ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಲಕ್ಷ್ಮಣ ಮತ್ತು ನರಸಿಂಹಮೂರ್ತಿ ರವರು ಜಗಳವನ್ನು ಬಿಡಿಸಿ ಸ್ಥಳದಲ್ಲಿ ವಿಚಾರಿಸಿ ತಾವು ಹೋದ ದ್ವಿಚಕ್ರ ವಾಹನದಲ್ಲಿ ಗಾಯಾಳುವಾದ ತನ್ನನ್ನು ಅವರುಗಳು ಚಿಕೆತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕೆತ್ಸೆ ಪಡಿಸಿದರು ತಾನು ಇಲ್ಲಿಯೇ ಇದ್ದರು ತನ್ನ ಪ್ರಾಣ ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿದನು ಸದರಿ ಮಂಜುನಾಥ ಬಿನ್ ಗಂಗಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

13. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 30-07-2021 ರಂದು ಬೆಳಿಗ್ಗೆ 11.30 ಗಂಟೆಗೆ ಪಿ.ಎಸ್.ಐ ರವರು ಮಾಲು, ಆಸಾಮಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:30/07/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಶೆಟ್ಟಿಹಳ್ಳಿ ಗ್ರಾಮದ ಮುನಿಕೃಷ್ಣಪ್ಪ ಬಿನ್ ಲೇಟ್ ತಿಮ್ಮನ್ನ ರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-148 ಕೃಷ್ಣಪ್ಪ, ಸಿಪಿಸಿ-511 ಮುರಳಿ ರವರೊಂದಿಗೆ ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿ  ಗ್ರಾಮದಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ನಡೆದುಕೊಂಡು ಶೆಟ್ಟಿಹಳ್ಳಿ ಗ್ರಾಮದ ಮುನಿಕೃಷ್ಣಪ್ಪ ಬಿನ್ ಲೇಟ್ ತಿಮ್ಮನ್ನ ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿ ಮಾಲೀಕನಾದ ಮುನಿಕೃಷ್ಣಪ್ಪ ರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಚಿಲ್ಲರೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಮುನಿಕೃಷ್ಣಪ್ಪ ಬಿನ್ ಲೇಟ್ ತಿಮ್ಮನ್ನ 50 ವರ್ಷ, ಅಂಗಡಿ ವ್ಯಾಪಾರ, ನಾಯಕ ಜನಾಂಗ, ವಾಸ ಶೆಟ್ಟಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 15 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 15 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 527/-ರೂ ಆಗಿರುತ್ತೆ. ಮದ್ಯ ಒಟ್ಟು 1350 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಮುನಿಕೃಷ್ಣಪ್ಪ ರವರನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಬೆಳಿಗ್ಗೆ 9-45 ರಿಂದ 10-45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್, ಆಸಾಮಿಯನ್ನು  ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮುನಿಕೃಷ್ಣಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:29-07-2021 ರಂದು ಸಂಜೆ 16-00 ಗಂಟೆಗೆ PSI ರವರು ಮಾಲು, ಆರೋಪಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಎನ್.ರತ್ನಯ್ಯ, ಪಿ.ಎಸ್.ಐ., ಪಾತಪಾಳ್ಯ ಪೊಲೀಸ್ ಠಾಣೆ ಆದ ನಾನು ನೀಡುತ್ತಿರುವ ವರದಿ ಏನೆಂದರೆ, ಈ ದಿನ ದಿನಾಂಕ:29-07-2021 ರಂದು ಬೆಳಿಗ್ಗೆ ನಾನು ಹಾಗೂ ಸಿಬ್ಬಂದಿಯವರಾದ ಸಿಪಿಸಿ-119 ಗಿರೀಶ.ಕೆ ಹಾಗೂ ಚಾಲಕ ಎ.ಪಿ.ಸಿ-98 ಶ್ರೀನಾಥ ರವರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ರಲ್ಲಿ ನಲ್ಲಚೆರುವು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನಲ್ಲಚೆರುವು ಗ್ರಾಮದ ಅಲ್ಲ್ಲಾಬಕಾಷ್ ಬಿನ್ ಲೇಟ್ ಬಾಬೂಸಾಬ್ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯಲ್ಲಿ  ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ಅಲ್ಲ್ಲಾಬಕಾಷ್ ಬಿನ್ ಲೇಟ್ ಬಾಬೂಸಾಬ್, 65 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ನಲ್ಲಚೆರುವು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ML Haywards Cheers Whisky 10 Tetra Pockets ಇದ್ದು, (900 ML ಅದರ ಬೆಲೆ 350/-ರೂಗಳು), 1 Ltrs ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ML Haywards Cheers Whisky 1 Emty Tetra Pocket ಇದ್ದು, ಆರೋಪಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 15-00 ಗಂಟೆಯಿಂದ 15-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.252/2021 ಕಲಂ. 379 ಐ.ಪಿ.ಸಿ:-

  ದಿನಾಂಕ:29.07.2021 ರಂದು ಮದ್ಯಾಹ್ನ 13.30 ಗಂಟೆಗೆ ಪಿರ್ಯಾದಿದಾರರಾದ ಮಾಳಪ್ಪ ಬಿನ್ ಲೇಟ್ ಚಿಕ್ಕಸಿದ್ದಪ್ಪ, 51 ವರ್ಷ, ಕುರುಬರು, ಜಿರಾಯ್ತಿ, ಕೆ ಜಿ ಚಿಕ್ಕಬಲ್ಲ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಜಿರಾಯ್ತಿಯ ಜೊತೆಗೆ ಮನೆಯ ಬಳಿ ಮೇಕೆ ಸಾಕಾಣಿಕೆ ಮಾಡುವ ಉದ್ದೇಶದಿಂದ ಸ್ಟ್ಯಾಂಡ್ ಮಾಡಿಸಿಕೊಂಡು ಸದರಿ ಸ್ಟ್ಯಾಂಡ್ ನಲ್ಲಿ ಸೀಡ್ಸ್ ಜಾತಿಗೆ ಸೇರಿದ 5 ಕಾಫಿ ಬಣ್ಣದ ಮೇಕೆಗಳನ್ನು ಸಾಕಾಣಿಕೆ ಮಾಡಿಕೊಂಡಿರುತ್ತೇನೆ. ಸದರಿ ಮೇಕೆಗಳನ್ನು ಸ್ಟ್ಯಾಂಡ್ ನಲ್ಲಿಯೇ ಇಟ್ಟು ಮೇವನ್ನು ಹಾಕಿ ಸಾಕಾಣಿಕೆ ಮಾಡುತ್ತಿರುತ್ತೇನೆ. ಸದರಿ ಮೇಕೆ ಸ್ಟ್ಯಾಂಡ್ ಗೆ ಬೀಗವನ್ನು ಹಾಕಿರುತ್ತೇನೆ. ಎಂದಿನಂತೆ ದಿನಾಂಕ: 16-07-2021 ರಂದು ರಾತ್ರಿ ಸಮಯದಲ್ಲಿ ಎಂದಿನಂತೆ ರಾತ್ರಿ 10.30 ಗಂಟೆಗೆ ಮೇವನ್ನು ಹಾಕಿ ಮೇಕೆ ಸ್ಟ್ಯಾಂಡ್ ಗೆ ಬೀಗವನ್ನು ಹಾಕಿ ಮಲಗಿದ್ದು ಬೆಳಿಗ್ಗೆ 4.30 ಗಂಟೆಗೆ ಎದ್ದು ಹೊರಗಡೆ ಬರಲು ಪ್ರಯತ್ನಿಸಿದಾಗ ಮನೆಯ ಬಾಗಿಲನ್ನು ಯಾರೋ ಹೊರಗಡೆಯಿಂದ ಚಿಲಕ ಹಾಕಿದ್ದು ನಂತರ ತಾನು ತಮ್ಮ ಪಕ್ಕದ ಮನೆಯ ವಾಸಿಯಾದ ತಮ್ಮ ಅಣ್ಣನಾದ ಮುನಿನಾರಾಯಣಪ್ಪ ರವರಿಗೆ ಜೋರಾಗಿ ಕೂಗಿದ್ದು ಆತನು ಬಂದು ಬಾಗಿಲನ್ನು ತೆಗೆದಿದ್ದು ತಾವು ಹೊರಗಡೆ ಬಂದು ನೋಡಲಾಗಿ ತಮ್ಮ ಮೇಕೆ ಸ್ಟ್ಯಾಂಡ್ ಗೆ ತಾನು ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಹೊಡೆದು ಹಾಕಿ ಸುಮಾರು 70,000-00 ರೂ ಬೆಲೆ ಬಾಳುವ 5 ಮೇಕೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ತಾವು ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಮನೆಯ ಚಿಲಕವನ್ನು ಹಾಕಿ ಮನೆಯ ಬಳಿಯಿದ್ದ ಮೇಕೆ ಸ್ಟ್ಯಾಂಡ್ ನಲ್ಲಿದ್ದ ಮೇಕೆಗಳನ್ನು ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ. ತಾನು ಮೇಕೆಗಳನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪೆಡೆದು ಪ್ರಕರಣ ದಾಖಲಿಸಿರುತ್ತೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.253/2021 ಕಲಂ. 436 ಐ.ಪಿ.ಸಿ:-

  ದಿನಾಂಕ:29.07.2021 ರಂದು ಮದ್ಯಾಹ್ನ 15.30 ಗಂಟೆಗೆ ಪಿರ್ಯಾದಿದಾರರಾದ ಅರವಿಂದ ಕುಮಾರ್ ಬಿನ್ ಕೃಷ್ಣಪ್ಪ, 20 ವರ್ಷ, ನಾಯಕ, ಮೆಕಾನಿಕ್ ಕೆಲಸ, ಕನ್ನಮಂಗಲ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ತಮ್ಮ ಗ್ರಾಮದಲ್ಲಿ ಒಂದು ವರ್ಷದಿಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸೇರಿದ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡು ಮೆಕಾನಿಕ್ ಅಂಗಡಿಯನ್ನು ಇಟ್ಟುಕೊಂಡಿರುತ್ತೇನೆ. ದಿನಾಂಕ:27/07/2021 ರಂದು ತಾನು ನಿತ್ಯ ಕೆಲಸದಂತೆ ಅಂಗಡಿ ತೆರೆದು ಕೆಲಸ ನಿರ್ವಹಿಸುತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಅಶ್ವಥಪ್ಪ ಬಿನ್ ಮುನಿಶಾಮಪ್ಪ, ದೊಡ್ಡ ಅಂಜಿನಪ್ಪ ಬಿನ್ ಮುನಿಶಾಮಪ್ಪ ರವರುಗಳು ಕೈಯಲ್ಲಿ ದೊಣ್ಣೆ ಮಚ್ಚನ್ನು ಹಿಡಿದುಕೊಂಡು ತಮ್ಮ ಅಂಗಡಿಯ ಬಳಿ ಬಂದು ಅಶ್ವಥಪ್ಪ ರವರು ನೀನು ತನ್ನ ತಂಗಿಯ ಮಗಳಾದ ಮೌನಿಕಾಳಿಗೆ ಕರೆ ಮಾಡಿದ್ದೀಯಾ ಎಂದು ವಿನಾಕಾರಣ ಅರೋಪಿಸಿ ತನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದು ಆಗ ತಾನು ತನ್ನ ಮೊಬೈಲ್ ಪೋನ್ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತೇನೆ. ಆ ಸಮಯದಲ್ಲಿ ಅಶ್ವಥಪ್ಪ ರವರು ತನ್ನ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ಈ ವಿಚಾರದ ಬಗ್ಗೆ ತಮ್ಮ ಗ್ರಾಮದ ಮುಖಂಡರು ದಿನಾಂಕ:28.07.2021 ಬೆಳಿಗ್ಗೆ ಅಟ್ಟೂರಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ತಮಗೂ ಮತ್ತು ಅಶ್ವಥಪ್ಪ ರವರಿಗೆ ನ್ಯಾಯಾ ಪಂಚಾಯ್ತಿ ಮಾಡಿ ತನ್ನ ಮೊಬೈಲ್ ಪೋನ್ ಅನ್ನು ವಾಪಸ್ಸು ಕೊಡಿಸಿಕೊಟಿರುತ್ತಾರೆ ನಂತರ ಪಂಚಾಯ್ತಿ ಮುಗಿಸಿಕೊಂಡು ಹೋಗುವಾಗ ಅಶ್ವಥಪ್ಪ ಮತ್ತು ದೊಡ್ಡ ಅಂಜಿನಪ್ಪ ರವರು ತನ್ನನ್ನು ಕುರಿತು ಈ ನನ್ನ ಮಗನನ್ನು ಇಷ್ಟಕ್ಕೆ ಬಿಡಬಾರದು ಇವನಿಗೆ ಒಂದು ಗತಿ ಕಾಣಿಸಿ ಇವನು ಇಟ್ಟಿರುವ ಮೆಕಾನಿಕ್ ಅಂಗಡಿಯನ್ನು ಸುಟ್ಟು ಹಾಕಬೇಕೆಂದು ಬೈದುಕೊಂಡು ಹೋಗಿರುತ್ತಾರೆ. ತಾನು ಮೆಕಾನಿಕ್ ಅಂಗಡಿಗೆ ಬಂದು ಸಂಜೆಯವರಿಗೆ ಕೆಲಸ ಮಾಡಿಕೊಂಡು ಮನೆಗೆ ಹೋಗಿರುತ್ತೇನೆ. ಹೀಗಿರುವಲ್ಲಿ ನಿನ್ನೆ ದಿನ ರಾತ್ರಿ 11.30 ಗಂಟೆಯಲ್ಲಿ ತಾನು ಮನೆಯಲ್ಲಿ ಮಲಗಿಕೊಂಡಿದ್ದಾಗ ತನ್ನ ಅಂಗಡಿಗೆ ಬೆಂಕಿ ಬಿದ್ದಿದೆಯೆಂದು ತಮ್ಮ ಗ್ರಾಮದ ಶ್ರೀಧರ್ ರವರು ತಮ್ಮ ಮನೆಯ ಬಳಿ ಬಂದು ತಿಳಿಸಿರುತ್ತಾರೆ. ಆಗ ಕೂಡಲೇ ತಾನು ಮತ್ತು ತಮ್ಮ ಮನೆಯವರು ಹೋಗಿ ನೋಡಿದಾಗ ಅಂಗಡಿಗೆ ಬೆಂಕಿ ಹೊತ್ತಿ ಉರಿಯಿತಿರುತ್ತೆ. ನಂತರ ತಮ್ಮ ಗ್ರಾಮದ ಶಿವು ರವರು ಅಗ್ನಿ ಶಾಮಕ ದಳಕ್ಕೆ ಪೋನ್ ಮಾಡಿದ್ದು ಅಗ್ನಿ ಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿರುತ್ತಾರೆ. ತನ್ನ ಮೇಲಿನ ದ್ವೇಷದಿಂದ ತಮ್ಮ ಗ್ರಾಮದ ವಾಸಿಗಳಾದ ಅಶ್ವಥಪ್ಪ ಬಿನ್ ಮುನಿಶಾಮಪ್ಪ ಮತ್ತು ಇತರರು ರಾತ್ರಿ ಸಮಯದಲ್ಲಿ ತಮ್ಮ ಅಂಗಡಿಗೆ ಬೆಂಕಿ ಇಟ್ಟು ಅಂಗಡಿಯನ್ನು ಮತ್ತು ಅಂಗಡಿಯಲ್ಲಿದ್ದ ಸುಮಾರು 2 ಲಕ್ಷ ಬೆಲೆ ಬಾಳುವ ಎಲ್ಲಾ ವಸ್ತುಗಳು ಬೆಂಕಿಗೆ ಸುಟ್ಟು ನಷ್ಟವನ್ನುಂಟು ಮಾಡಿರುತ್ತಾರೆ. ಅದ್ದರಿಂದ ತಮ್ಮ ಅಂಗಡಿಗೆ ಬೆಂಕಿ ಇಟ್ಟು ಸುಟ್ಟಹಾಕಿರವು ಅಶ್ವಥಪ್ಪ ಬಿನ್ ಮುನಿಶಾಮಪ್ಪ ಹಾಗು ಇತರರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

17. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.89/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ.29.07.2021 ರಂದು ಸಂಜೆ 4.30 ಗಂಟೆಗೆ ಪಿರ್ಯಾದಿ ಆರ್.ಖಾಜಾ ಬಿನ್ ರಿಯಾಜ್ ಪಾಷ, ಮಹಬೂಬ್ ನಗಹರ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.26.07.2021 ರಂದು ಸಂಜೆ ಸುಮಾರು 6.30 ಗಂಟೆಯಲ್ಲಿ ನಮ್ಮ ತಂದೆಯಾದ ರಿಯಾಜ್ ಪಾಷ ಬಿನ್ ಸಾಬ್ ಜಾನ್ ಸಾಬ್, 55 ವರ್ಷ, ರವರು ನಮ್ಮ ಮನೆಯಿಂದ ರೈಲ್ವೆ ನಿಲ್ದಾಣದಲ್ಲಿ ಸಂಜೆ ವಾಕಿಂಗ್ (ವಾಯುವಿಹಾರ) ಮಾಡಲು ಖಾಸಿಂಪಾಳ್ಯ ರೈಲ್ವೆ ಅಂಡರ್ ಪಾಸ್ ಮೂಲಕ ನಡೆದುಕೊಂಡು ಮೆಕಾನಿಕ್ ಅಂಗಡಿ ಮುಂದೆ ರಸ್ತೆ ಎಡಬದಿಯಲ್ಲಿ  ಹೋಗುತ್ತಿದ್ದಾಗ ಕದಿರಿಪಾಳ್ಯ ಕಡೆಯಿಂದ ಕಾಂಗ್ರೇಸ್ ಭವನ ಕಡೆ ಬರುತ್ತಿದ್ದ KA.01.B.5411 ಮಾರುತಿ ಓಮನಿ ವ್ಯಾನ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಂದೆಗೆ ಅಪಘಾತ ಪಡಿಸಿ ಕೆಳಗೆ ಬಿದ್ದಾಗ ಎರಡೂ ಕೈ ಮತ್ತು ಸೊಂಟದ ಮೇಲೆ ಹತ್ತಿಸಿಕೊಂಡು ಹೋದ ಪರಿಣಾಮ ಎರಡೂ ಕೈಗಳು ಮತ್ತು ಸೊಂಟಕ್ಕೆತೀವ್ರವಾದ ಗಾಯಗಳಾಗಿದ್ದು, ಆಗ ರಸ್ತೆಯಲ್ಲಿ ಬರುತ್ತಿದ್ದ ಶಬ್ಬೀರ್ ಬಿನ್ ಸೈಯದ್ ಬಾಷ, ಖಾಸಿಂಪಾಳ್ಯ ಇತರರು ನೋಡಿ ನಮ್ಮ ತಂದೆಯನ್ನು ಉಪಚರಿಸಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಯಾವುದೋ ವಾಹನದಲ್ಲಿ ದಾಖಲಿಸಿ ವಿಚಾರ ನನಗೆ ತಿಳಿಸಿದ್ದು, ಕೂಡಲೇ ಆಸ್ಪತ್ರೆಗೆ ಬಂದು ನೋಡಿದಾಗ ನಿಜವಾಗಿದ್ದು ನಮ್ಮ ತಂದೆಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ನಮ್ಮ ತಂದೆಯನ್ನು ಬೆಂಗಳೂರು ಕೆ.ಆರ್.ಪುರ ಬಳಿ ಇರುವ ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಿರುತ್ತೇನೆ. ಆದ್ದರಿಂದ ನಮ್ಮ ತಂದೆಗೆ ಅಪಘಾತಪಡಿಸಿದ KA.01.B.5411 ಮಾರುತಿ ಓಮನಿ ವ್ಯಾನ್ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ತನ್ನ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದೂರು ನೀಡಲು ತಡವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರಕರಣದ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 30-07-2021 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080