ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 172/2021 ಕಲಂ. 32,34,36(B) ಕೆ.ಇ ಆಕ್ಟ್:-

  ದಿನಾಂಕ: 29/06/2021 ರಂದು ಸಂಜೆ 6-15 ಗಂಟೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಕ್ಕಬಳ್ಳಾಪುರ ಉಪವಿಭಾಗ ಚಿಕ್ಕಬಳ್ಳಾಪುರ ರವರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿತಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:29/06/2021 ರಂದು ನಾನು ಮತ್ತು ಸಿಬ್ಬಂದಿಯವರೊಂದಿಗೆ ಹಾಗೂ ಬಾಗೇಪಲ್ಲಿ ಪೊಲೀಸ್ ಠಾಣೆಯ WPC-1625 ಶ್ರೀಮತಿ ವಾಣಿ ರವರೊಂದಿಗೆ ಕಂಬಾಲಹಳ್ಳಿಯ ಬಸ್ ನಿಲ್ದಾಣದಲ್ಲಿದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ಗುಂಟಿಗಾನಹಳ್ಳಿ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿರುವ ವೆಂಕಟರವಣಮ್ಮ ಕೋಂ ವೆಂಕಟರಾಯಪ್ಪ 50 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಗುಂಟಿಗಾನಹಳ್ಳಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ರವರ ಚಿಲ್ಲರೆ ಅಂಗಡಿಯಲ್ಲಿ ದಾಳಿಮಾಡಿ ಅಕ್ರಮವಾಗಿ ಮಾರಾಟಮಾಡಲು ಇಟ್ಟುಕೊಂಡಿದ್ದ ವಿವಿಧ ಕಂಪನಿಯ ಮಧ್ಯವನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತೆ. ಮಧ್ಯದ ಬಗ್ಗೆ ವಿವರವನ್ನು ಅಸಲು ಪಂಚನಾಮೆಯಲ್ಲಿ ವಿವರವಾಗಿ ನಮೂದಿಸಿರುತ್ತೆ. ಸದರಿ ಅಮಾನತ್ತು ಪಡಿಸಿಕೊಂಡಿರುವ ಒಟ್ಟು ಮದ್ಯ 17 ಲೀಟರ್ 980 ಎಂ ಎಲ್ ಇದ್ದು ಈ ಮದ್ಯದ ಒಟ್ಟು ಬೆಲೆ 6,634 ರೂಗಳು ಆಗಿರುತ್ತದೆ. ಸದರಿ ಅಮಾನತ್ತು ಪಡಿಸಿಕೊಂಡಿರುವ ಮಧ್ಯದಲ್ಲಿ ತಲಾ ಒಂದೊಂದು ಪ್ಯಾಕೆಟ್ / ಬೀರ್ ಬಾಟಲ್ ನ್ನು ಎಫ್ ಎಸ್ ಎಲ್ ಪರೀಕ್ಷೆಗಾಗಿ ಅಲಾಯಿದೆಯಾಗಿ ತೆಗೆದು  ಅಲಾಯಿದೆಯಾಗಿ ತಿಳಿ ಬಿಳಿ ಬಟ್ಟೆಯಲ್ಲಿ ದಾರದಿಂದ ಹೊಲೆದು ಬಿ ಅಕ್ಷರದಿಂದ  ಅರಗು ಮಾಡಿ ಭದ್ರ ಪಡಿಸಿರುತ್ತೆ. ಸದರಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಇಟ್ಟುಕೊಂಡಿದ್ದ ಚಿಲ್ಲರೆ ಅಂಗಡಿಯ ಮಾಲೀಕರಾದ ಶ್ರೀಮತಿ ವೆಂಕಟರವರಣಮ್ಮ ರವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ WPC-1625 ಶ್ರೀಮತಿ ವಾಣಿ ರವರ ಮುಖಾಂತರ ಪೊಲೀಸರ ವಶಕ್ಕೆ ಪಡೆದು ಕೊಂಡಿದ್ದು ಆರೋಪಿತಳಾದ ವೆಂಕಟರವರಣಮ್ಮರವರು ಸದರಿ ಮದ್ಯವನ್ನು ಮಿಟ್ಟೇಮರಿ ಗ್ರಾಮದ ಸುನೀಲ್ ವೈನ್ಸ್ ನಿಂದ ಮಾಲೀಕರಾದ ವೆಂಕಟೇಶಪ್ಪ  ರವರ ಕ್ಯಾಷಿಯರ್ ರಾಮಾಂಜಿ ಎಂಬುವವರ ಮೂಲಕ ಅಂಗಡಿಗೆ  ಸಪ್ಲೈ ಮಾಡುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡಲು ಇಟ್ಟುಕೊಂಡಿದ್ದ ಆರೋಪಿತಳಾದ  ವೆಂಕಟರವರಣಮ್ಮ ರವರನ್ನು ಹಾಗೂ ಅಂಗಡಿಗೆ ಮದ್ಯವನ್ನು ಸಪ್ಲೈ ಮಾಡುವ ಮೇಲ್ಕಂಡ ವೈನ್ ಶಾಪ್ ಮಾಲೀಕರ ಮತ್ತು ಕ್ಯಾಶಿಯರ್ ರವರ ಮೇಲೆ ಮುಂದಿ ಕಾನೂನು ಕ್ರಮ ಜರುಗಿಸಲು ಸೂಚಿಸಿ ವಶಕ್ಕೆ ಪಡೆದಿರುವ ಮೇಲ್ಕಂಡ ಆರೋಪಿತಳನ್ನು ಮತ್ತು ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೆ.  ಇದರೊಂದಿಗೆ ಅಸಲು ಮಹಜರ್ ಲಗತ್ತಿಸಿರುತ್ತೆ.  ಎಂದು ನೀಡಿದ ವರದಿಯ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 91/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:29/06/2021 ರಂದು ಮದ್ಯಾಹ್ನ 14-45 ಗಂಟೆಗೆ ಠಾಣಾ ಎನ್,ಸಿ,ಆರ್ 132/2021 ರಲ್ಲಿ ಪ್ರಕರಣ ದಾಖಲಿಸಲು ಘನ ಒಂದನೇ ಸಿ,ಜೆ ಮತ್ತು ಜೆಮ್,ಎಫ್,ಎಫ್,ಸಿ ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ ಅನುಮತಿಯ ಸಾರಾಂಶವೆನೆಂದರೆ ದಿನ ದಿನಾಂಕ: 29.06.2021  ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಅಣಕನೂರು ಗ್ರಾಮದ  ಸರ್ಕಾರಿ ಅಮಾನಿ ಗೋಪಾಲಕೃಷ್ಣ ಕೆರೆ ಹೊರವಲಯದಲ್ಲಿರುವ ಜಾಲಿ ಮರದ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಯಾರೋ ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಮಾಹಿತಿ ಬಂದಿದ್ದು ಸದರಿ ಆಸಾಮಿಗಳ ವಿರುದ್ಧ ಠಾಣಾ ಮೊ.ಸಂ 91/2021 ಕಲಂ:87 ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 92/2021 ಕಲಂ. 34 ಕೆ.ಇ ಆಕ್ಟ್ & 51(b) THE DISASTER MANAGEMENT ACT, 2005:-

  ದಿನಾಂಕ: 29/06/2021 ರಂದು ರಾತ್ರಿ 8-00 ಗಂಟೆಯಲ್ಲಿ  ಚಿಕ್ಕಬಳ್ಳಾಪುರ ಉಪ ವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕರವರಾದ  ಶ್ರೀ. ಕೆ. ರವಿಶಂಕರ್. ಕೆ.ಎಸ್.ಪಿ.ಎಸ್. ರವರು  ಡಿ.ಎಸ್.ಪಿ. ಕಛೇರಿಯ ಸಿಬ್ಬಂದಿಯಾದ ಶ್ರೀ ಬಾಲಸುಬ್ರಮಣ್ಯಂ ಹೆಚ್.ಸಿ. 207 ರವರ ಮೂಲಕ ಚಿಕ್ಕಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಗೆ  ರವಾನಿಸಿದ  ದೂರನ್ನು ಸ್ವೀಕರಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 07/06/2021 ರಂದು ಸಂಜೆ ಸುಮಾರು 4-45 ರಿಂದ 5-00 ಗಂಟೆಯ ಮದ್ಯ ಮುಷ್ಟೂರು ಗ್ರಾಮದ  ವಾಸಿಗಳಾದ  ಪ್ರವೀಣ. ಮಂಜುನಾಥಚಾರಿ. ಕೃಷ್ಣಪ್ಪ. ಆಂಜಿನಪ್ಪ. ರವರುಗಳು ಶ್ರೀನಿವಾಸ ಎಂಬುವವರ  ಮಗನಾದ  ವೆಂಕಟೇಶ ರವರನ್ನು ಅವರ  ಮನೆಯಿಂದ ಹೊರಗೆ  ಕರೆದುಕೊಂಡು ಹೋಗಿ ಮಾಜಿ ಶಾಸಕ ಎಂ.ಶಿವಾನಂದ ರವರ  ಜಮೀನಿನಲ್ಲಿ ಮದ್ಯಪಾನ ಮಾಡಿ ಕೊಲೆ  ಮಾಡಿರುವುದಾಗಿ ಶ್ರೀನಿವಾಸರವರು ನೀಡಿದ  ದೂರಿನ ಮೇರೆಗೆ  ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಮೊ.ಸಂ. 84/2021 ಕಲಂ: 302 ರೆ/ವಿ 34 ಐಪಿಸಿ  ಮತ್ತು ಸೆಕ್ಷನ್ 3(2)(V) ಎಸ್.ಸಿ./ಎಸ್.ಟಿ.ಪಿ.ಒ.ಎ  ಅಮೆಂಡ್  ಮೆಂಟ್ ಆಕ್ಟ್ ರೀತ್ಯಾ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದು ದೂರಿನಲ್ಲಿ ನಮೂದಿಸಿರುವ ಆಂಜಿನಪ್ಪ ಬಿನ್ ನಾರಾಯಣಪ್ಪ  34ವರ್ಷ ಪರಿಶಿಷ್ಟ ಜಾತಿ ಸಾರಿಗೆ ನೌಕರ  ಮುಷ್ಟೂರು ಗ್ರಾಮ ರವರನ್ನು ದಿನಾಂಕ: 29/06/2021 ರಂದು ವಿಚಾರಣೆ ಮಾಡಿದಾಗ  ಮೇ ಮತ್ತು ಜೂನ್ ತಿಂಗಳಲ್ಲಿ ಲಾಕ್ ಡೌನ್ ಇದ್ದುದರಿಂದ  ತಾನು  ಮೇ ತಿಂಗಳ ಅಂತ್ಯದಲ್ಲಿ  ಚಿಕ್ಕಬಳ್ಳಾಪುರ  ನಗರದ  ಲೈಬ್ರರಿ ಮುಂಭಾಗದಲ್ಲಿರುವ ಸಪ್ತಗಿರಿ ಬಾರ್ ನಲ್ಲಿಬ್ಯಾಗ್ ಪೈಪರ್ ಕಂಪನಿಯ 180 ML  ನ ಮತ್ತು 90 ML  ನ ಒಂದು  ಕೇಸ್ ಟೆಟ್ರಾ ಪಾಕೆಟ್ ಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟುಕೊಂಡು ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾನೆ.  ಮುಂದುವರೆದು ದಿನಾಂಕ: 07/06/2021 ರಂದು ಕೋವಿಡ್-19 ಲಾಕಲ್ ಡೌನ್ ಸಲುವಾಗಿ  ತಾನು ತನ್ನ ಮನೆಯಲ್ಲಿದ್ದ 180  ML ನ ಬ್ಯಾಗ್ ಪೈಪೆರ್ ಟೆಟ್ರಾ ಪಾಕೆಟ್ ಗಳನ್ನು ತೆಗೆದುಕೊಂಡು ಬಂದು ಶಿವಾನಂದ ರವರ  ಜಮೀನುನಲ್ಲಿದ್ದ ಮೃತ ವೆಂಕಟೇಶ ಆತನ  ಸ್ನೇಹಿತರಾದ  ಪ್ರವೀಣ್. ಮಂಜುನಾಥಚಾರಿ. ಯೂಸೂಪ್ ಮತ್ತು ಕೃಷ್ಣಪ್ಪ ರವರುಗಳಿಗೆ  ಮದ್ಯಪಾನವನ್ನು 550/- ರೂಪಾಯಿಗಳಿಗೆ  ಮಾರಾಟ ಮಾಡಿದ್ದು  ಸ್ವಲ್ಪ ಸಮಯಕ್ಕೆ ತನ್ನ ಸಗನೇಹಿತ ಕೃಷ್ಣಪ್ಪ ರವರ ಸಂಬಂಧಿಕರು ಮನೆಗೆ ಬಂದಿರುವುದಾಗಿ  ಬಂದ  ಪೋನ್ ಮಾಹಿತಿಯಂತೆ ತನ್ನ ದ್ವಿ ಚಕ್ರ ವಾಹನ ನಂಬರ್; ಕೆ.ಎ.27.ಎಲ್.718 ಬಜಾಜ್ ಸಿಟಿ 100 ವಾಹನವನ್ನು ಅಲ್ಲಿಯೇ ಬಿಟ್ಟು  ಕೃಷ್ಣಪ್ಪ ರವರ ದ್ವಿ ಚಕ್ರ ವಾಹನದಲ್ಲಿ ತಾನು ಮತ್ತು ಸ್ನೇಹಿತ ಕೃಷ್ಣಪ್ಪ ವಾಪಸ್ಸು ಬಂದಿರುತ್ತಾರೆ. ನಂತರ ಸ್ವಲ್ಪ ಸಮಯಕ್ಕೆ  ವೆಂಕಟೇಶರವರನ್ನು ಯಾರೋ  ಕೊಲೆ ಮಾಡಿರುವುದಾಗಿ ವಿಷಯ ತಿಳಿಯಲಾಗಿ  ವೆಂಕಟೇಶನ  ಜೊತೆಯಲ್ಲಿ  ಮದ್ಯ ಸೇವನೆ ಮಾಡುತ್ತಿದ್ದ  ಮಂಜುನಾಥಚಾರಿ ಮತ್ತು ಯೂಸೂಪ್ ಎಂಬುವವರು  ಹಿಂದಿನ  ವೈಷಮ್ಯಗಳ ಹಿನ್ನಲೆಯಲ್ಲಿ ಚಾಕುವಿನಿಂದ ಇರಿದು ತಲೆಯ  ಮೇಲೆ  ಕಲ್ಲು ಹಾಕಿ ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ.  ಆಂಜಿನಪ್ಪ ರವರು  KSRTC ಯಲ್ಲಿ ಚಾಲಕ / ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು ಮದ್ಯವನ್ನು  ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಚಿಕ್ಕಬಳ್ಳಾಪುರ ಸಪ್ತಗಿರಿ ಬಾರ್ ನಿಂದ ಮದ್ಯವನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಿ ಮನೆಯಲ್ಲಿ ದಾಸ್ತಾನು ಮಾಡಿಕೊಂಡು ವೆಂಕಟೇಶ ಮತ್ತು ಸ್ನೇಹಿತರಿಗೆ  ಮಾರಾಟ ಮಾಡಿರುತ್ತಾನೆ. ದಿನಾಂಕ: 07/06/2021 ರಂದು ಕೋವಿಡ-19 ಲಾಕ್ ಡೌನ್ ಇದ್ದರೂ ಆಂಜಿನಪ್ಪ ರವರು  ಲಾಕ್ ಡೌನ್ ಆದೇಶವನ್ನು ಪಾಲಿಸದೇ ಸರ್ಕಾರ ಆದೇಶವನ್ನು ಉಲ್ಲಂಘನೆ ಮಾಡಿ   ಮಾರಾಟ ಮಾಡಿ ಮೃತ ವೆಂಕಟೇಶ ಮತ್ತು ಆತನ ಸ್ನೇಹಿತರಾದ ಪ್ರವೀಣ್. ಮಂಜುನಾಥಚಾರಿ. ಯೂಸೂಪ್ ಮತ್ತು ಕೃಷ್ಣಪ್ಪ ರವರುಗಳೊಂದಿಗೆ ಒಂದೇ ಸ್ಥಳದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತುಕೊಂಡು ಸಾಮಾಜಿಕ  ಆಂತರವನ್ನು  ಕಾಯ್ದುಕೊಳ್ಳದೇ  ಮದ್ಯಪಾನವನ್ನು ಮಾಡಿ ಕೋವಿಡ್ -19  ಸಾಂಕ್ರಾಮಿಕ ಖಾಯಿಲೆಯ  ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ ಸಾಂಕ್ರಾಮಿಕ ರೋಗ ಹರಡಲು ಅವಕಾಶ  ಮಾಡಿ ಅಪರಾಧವೆಸಗಿರುವುದು ವಿಚಾರಣೆಯಿಂದ ಮತ್ತು ಈಗಾಗಲೇ ಪ್ರಕರಣದಲ್ಲಿ ಕೈಗೊಂಡ ತನಿಖೆಯಿಂದ  ಮೇಲ್ಕಂಡ ಆರೋಪಿಗಳು ಶಿವಾನಂದ ರವರ  ಜಮೀನುನಲ್ಲಿ  ಮದ್ಯಪಾನ ಮಾಡಿದ್ದು ಮಹಜರ್ ಮೂಲಕ ಬ್ಯಾಗ್ ಪೈಪರ್ ಕಂಪನಿಯ 180  ML  ನ ಖಾಲಿಟೆಟ್ರಾ  ಪಾಕೆಟ್ ಗಳನ್ನು ಅಮಾನತ್ತು ಪಡಿಸಿದ್ದು  ಪಂಚನಾಮೆಯಿಂದ. ಸಾಕ್ಷ್ಯಾಧಾರಗಳಿಂದ ಮತ್ತು ಆರೋಪಿಗಳು ನೀಡಿರುವ ಸ್ವಇಚ್ಚಾ ಹೇಳಿಕೆಗಳಿಂದ  ತಿಳಿದುಬಂದಿರುತ್ತೆ. ಆದ್ದರಿಂದ  ಆಂಜಿನಪ್ಪ ರವರ  ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಹಾಗೂ ಲಾಕ್ ಡೌನ್  ಉಲ್ಲಂಘನೆ ಮಾಡಿದ ತರರಾದ ಪ್ರವೀಣ್ . ಮಂಜುನಾಥಚಾರಿ. ಯೂಸೂಪ್ ಮತ್ತು ಕೃಷ್ಣಪ್ಪ ರವರುಗಳ ವಿರುದ್ದ ವಿಪತ್ತು  ನಿರ್ವಹಣಾ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡು  ತನಿಖೆ ಕೈಗೊಳ್ಳಲು   ಸೂಚಿಸಿದ್ದರ  ಮೇರೆಗೆ  ಈ ಪ್ರ.ವ.ವರದಿ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ 30/06/2021 ರಂದು ಬೆಳಗ್ಗೆ 8.45 ಗಂಟೆಗೆ ಬುಡಗವಾರಹಳ್ಲಿ ಗ್ರಾಮದ ವಾಸಿ ಪಿರ್ಯಾದಿ ವೆಂಕಟರೆಡ್ಡಿ ಬಿನ್ ರಾಮಪ್ಪರವರಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂವೇನೆಂದರೆ ದಿನಾಂಕ 17/06/2021 ರಂದು ಬೆಳಗ್ಗೆ 9.15 ಗಂಟೆಯ ಸಮಯದಲ್ಲಿ ತಾನು ತಮ್ಮ ಮಮನೆಯಲ್ಲಿದ್ದಾಗ ತಮ್ಮ ಬಜಾರಿನಲ್ಲಿರು ತಿಮ್ಮಪ್ಪ ರವರ ಮನೆಯ ಮುಂದೆ ಗಲಾಟೆ ಶಬ್ದ ಕೇಳಿ ಬಂದಿದ್ದು ಆಗ ತಾನು ಮತ್ತು ತಮ್ಮ ತಮದೆಯಾದ ರಾಮಪ್ಪ, ನಾರಾಯಣಸ್ವಾಮಿ ಬಿನ್ ಲಕ್ಷ್ಮಪ್ಪ, ವೆಂಕಟಮ್ಮ ಕೊಂ ರಾಮಪ್ಪ ರವರುಗಳು ಹೋಗಿ ನೋಡಲಾಗಿ ತಿಮ್ಮಪ್ಪರವರ ಮನೆಯ ಮುಂದೆ ದಾರಿಯಲ್ಲಿ  ಹೋಗಿ ಬರುವ ವಿಚಾರದಲ್ಲಿ ತಮ್ಮ ಗ್ರಾಮದ ತಮ್ಮ ಜನಾಂಗದ ಶೋಭಮ್ಮ ಕೋಂ ವೆಂಕಟೇಶಪ್ಪ ಮತ್ತು ಇವರ ಗಂಡ ವೆಂಕಟೇಶಪ್ಪ, ತಮ್ಮ ಚಿನ್ನ ವೆಂಕಟೇಶ್ ರವರುಗಳು ನೀಲಮ್ಮರವರ ಮನೆಯ ಮುಂದೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ರಸ್ತೆಯಿಂದ ಪಕ್ಕಕ್ಕೆ ತೆಗೆಯುತ್ತಿದ್ದಾಗ ನೀಲಮ್ಮರವರ ಮೇಲೆ ಜಗಳ ಮಾಡಿ ಏ ಲಂಜ ಮುಂಡೆ, ಮೀಕಿ ಎಂತೆ ಕೊವ್ವು ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುತ್ತೀರಿ ಎಂದು ಅವಾಚ್ಚ ಶಬ್ದಗಳಿಂದ ಬೈದು ಈ ರಸ್ತೆಯಲ್ಲಿ ವಾಹನಗಳನ್ನು ಮತ್ತು ಇತರೆ ವಸ್ತುಗಳನ್ನು ಹಾಕಿ ನಾವು ಹೋಗಿ ಬರಲು ತೊಂದರೆ ಕೊಡುತ್ತಿದ್ದಿರಾ ನಿಮ್ಮನ್ನು ಸಾಯಿಸುತ್ತೆವೆಮದು ಪ್ರಾಣ ಬೆದರಿಕೆ ಹಾಕಿದ್ದು, ಆ ಪೈಕಿ ವೆಮಕಟೇಶಪ್ಪರವರು ಅಲ್ಲಿಯೇ ಇದ್ದ ಒಂದು ದೊಣ್ನೆಯನ್ನು ತೆಗೆದುಕೊಂಡು ನೀಲಮ್ಮರವರ ಮೈ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಮೂಗೇಟುಗಳನ್ನು ಉಂಟು ಮಾಡಿದ್ದು, ನಂತರ ವೆಂಕಟೇಶಪ್ಪರವರು ಅದೆ ದೊಣ್ನೆಯಿಂದ ತಿಪ್ಪಣ್ನರವರ ತಲೆಗೆ ಮತ್ತು ಮೈ ಮೇಲೆ ಹೊಡೆದು ಮೂಗೇಟುಗಳುಂಟು ಮಾಡಿದ್ದು, ನಂತರ ಚಿನ್ನ ವೆಂಕಟೇಶಪ್ಪ ಮತ್ತು ಶೋಭಮ್ಮರವರು ನೀಲಮ್ಮರವರನ್ನು ಕೈಗಳಿಂದ ಮೈ ಮೇಲೆ ಹೊಡೆದು ಅವಾಚ್ಚ ಶಬ್ದಗಳಿಂದ ಬೈದಿದ್ದು, ತಿಪ್ಪಣ್ಣ ಮತ್ತು ನಿಲಮ್ಮರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಈ ವಿಚಾರಕ್ಕ ಸಂಬಂಧೀಸಿದಂತೆ ಗ್ರಾಮದಲ್ಲಿ ನ್ಯಾಯ-ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ತಮಗೆ ನ್ಯಾಯಾ ಸಿಗದ ಕಾರಣ ತನ್ನ ಮುಖಾಂತರ ದೂರನ್ನು ನೀಡಲು ತಿಳಿಸಿದರ ಮೇರಿಗೆ ದಿನಾಂಕ 30/06/2021 ರಂದು ತಡವಾಗಿ ದುರನ್ನು ನೀಡುತ್ತಿದ್ದು, ಮುಂದಿನ ಕ್ರಮಕ್ಕಾಗಿ ಕೋರಿರುವುದಾಗಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 30/06/2021 ರಂದು ಬೆಳಗ್ಗೆ 11.00 ಪಿ.ಎಸ್.ಐ ರವರು ಮಾಲು, ಪಂಚನಾಮೆ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೇನೆಂದರೆ ದಿನಾಂಕ 30/06/2021 ರಂದು ಬೆಲಗ್ಗೆ 9.00 ಗಂಟೆಯಲ್ಲಿ ತಾನು ಮತ್ತು ಠಾಣಾ ಸಿಬ್ಬಂಧಿ ಪಿ.ಸಿ-91 ಮಂಜುನಾಥರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ಠಾಣಾ ಸರಹದ್ದು ಗಸ್ತಿಗಾಗಿ  ಸಾದಲಿ, ಎಸ್.ಗೊಲ್ಲಹಳ್ಳಿ, ಪೂಸಗಾನದೊಡ್ಡಿ, ಕೊಂಡಪ್ಪಗಾರಹಳ್ಳಿ, ಯಲಗಲಹಳ್ಳಿ, ಚಿಕ್ಕ ದಿಬ್ಬುರಹಳ್ಳಿ ಕಡೆ ಗಸ್ತು ಮಾಡಿಕೊಂಡು ಬೆಳಗ್ಗೆ 9.30 ಗಂಟೆಗೆ ದಿಬ್ಬುರಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿದಾಗ ಬಾತ್ಮಿದಾರರು ದಿಬ್ಬುರಹಳ್ಳಿ ಗ್ರಾಮದ ವೆಂಕಟೇಶಪ್ಪ @ ಶಾಟೋಡು ಬಿನ್ ರಾಮಪ್ಪ ರವರು ತಮ್ಮ ಚಿಕನ್ ಅಂಗಡಿಯ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಯಲಾಗಿ ಪಂಚರನ್ನು ಬರ ಮಾಡಿಕೊಂಡು ವಿಚಾರ ತಿಳಿಸಿ ಸದರಿ ಸ್ಥಳಕ್ಕೆ ಬೇಟಿ ಮಾಡಿ ನೋಡಲಾಗಿ ಸದರಿ ಸ್ಥಳದಲ್ಲಿ ಸಾರ್ವಜನಿಕರು ಮದ್ಯ ಸೇವನೆ ಮಾಡುತ್ತಿದ್ದು ಕಂಡು ಬಂದಿದ್ದು, ಸದರಿ ಸ್ಥಳಕ್ಕೆ ಹೋಗುತ್ತಿದ್ದಂತೆ ಸಾರ್ವಜನಿಕರು ಪರಾರಿಯಾಗಿದ್ದು ಸ್ಥಳದಲ್ಲಿ ಪರಿಶೀಲಿಸಲಾಗಿ ಮದ್ಯ ತುಂನಿದ ಟೆಟ್ರಾ ಪಾಕೆಟ್ ಗಳು, ಖಾಲಿ ಟೆಟ್ರಾ ಪಾಕೆಟ್ ಗಳು, ಪ್ಲಾಸ್ಟಿಕ್ ಗ್ಲಾಸ್ ಗಳು, ನೀರಿನ ಬಾಟಲ್ ಕಂಡು ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ HAYWARDY CHEERS WHISKY ಯ 90 ML ನ 12 ಟೆಟ್ರಾ ಪಾಕೆಟ್ ಗಳು ಇದ್ದು. ಇವುಗಳ ಒಂದ ಬೆಲೆ 35.13/-ರುಗಳಾಗಿದ್ದು, ಇವುಗಳ ಒಟ್ಟು ಮದ್ಯದ ಸಾಮರ್ಥ್ಯ 1 ಲೀಟರ್ 80 ML ಆಗಿದ್ದು, ಇವುಗಳ ೊಟ್ಟು ಮೊತ್ತ 421.56/-ರೂಗಳಾಗಿದ್ದು, HAYWARDY CHEERS WHISKY ಯ 90 ML ನ 2 ಖಾಲಿ ಟೆಟ್ರಾ ಪಾಕೆಟ್ ಗಳು, 2 ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 1 ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲ್  ಕಂಡು ಬಂದಿದ್ದು, ನಂತರ ಅಂಗಡಿಯಲ್ಲಿದ್ದ ಆಸಾಮಿಯನ್ನು ಕರೆದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೆಂಕಟೆಶಪ್ಪ @ ಶಾಟೋಡು ಬಿನ್ ರಾಮಪ್ಪ, 48 ವರ್ಷ, ವಕ್ಕಲಿಗರು, ಚಿಕನ್ ಅಂಗಡಿ ವ್ಯಾಪಾರ, ದಿಬ್ಬುರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆಯನ್ನು ಹೊಂದಿದ್ದಾರೆಯೇ ಎಂದು ಕೇಳಲಾಗಿ ಆಸಾಮಿಯು ತನ್ನ ಬಳಿ ಯಾವುದೆ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ನಂತರ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಬೆಳಗ್ಗೆ 10.00 ಗಂಟೆಯಿಂದ 10.45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ಕೋರಿರುವುದಾಗಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:26/06/2021 ರಂದು ಎ,ಎಸ್,ಐ ಚಂದ್ರಶೇಖರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:26/06/2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಪಿ.ಸಿ-30 ಗಂಗಪ್ಪ  ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲ್ಲೂಕು ಚೆಂಡೂರು ಗ್ರಾಮದಲ್ಲಿ ಗಸ್ತುನಲ್ಲಿರುವಾಗ ಬಾಬಾ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಪಿ.ಸಿ-408 ರಮೇಶ ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಮದ್ಯಾಹ್ನ 2-30 ಗಂಟೆ ಸಮಯಕ್ಕೆ ಚೆಂಡೂರು  ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಬಾಬಾ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 2-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು  ಆತನ ಹೆಸರು & ವಿಳಾಸ ಕೇಳಿ ತಿಳಿಯಲಾಗಿ ಬಾಬಾ ಬಿನಬ್ ಆದಂ ಸಾಬ್, 32 ವರ್ಷ, ಮುಸ್ಲಿಂ, ಡ್ರೈವರ್  ಕೆಲಸ,  ವಾಸ:ಚೆಂಡೂರು ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ ಗಳ  ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*12=421.44/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 03-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-00 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.136/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:26/06/2021 ರಂದು ಎ,ಎಸ್,ಐ ಚಂದ್ರಶೇಖರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:26/06/2021 ರಂದು ಸಂಜೆ 4-00  ಗಂಟೆಯಲ್ಲಿ ಚೆಂಡೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದ ಪಿ.ಸಿ-30 ಗಂಗಪ್ಪ  ರವರೊಂದಿಗೆ ಗ್ರಾಮದಲ್ಲಿದ್ದಾಗ  ಚೆಂಡೂರು ಗ್ರಾಮದ ಗಸ್ತು ಸಿಬ್ಬಂದಿ  ರವರಿಗೆ ಚೆಂಡೂರು ಗ್ರಾಮದ  ರವಿ  ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಪಿ.ಸಿ-408 ರಮೇಶ ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಸಂಜೆ 4-15 ಗಂಟೆ ಸಮಯಕ್ಕೆ ಚೆಂಡೂರು  ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ರವಿ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 4-30  ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು  ಆತನ ಹೆಸರು & ವಿಳಾಸ ಕೇಳಿ ತಿಳಿಯಲಾಗಿ ರವಿ  ಬಿನ್ ಸುಬ್ಬರೆಡ್ಡಿ,  40 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ,   ವಾಸ:ಚೆಂಡೂರು ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 14 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ ಗಳ  ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 260 ಎಮ್,ಎಲ್ ಆಗಿದ್ದು, ಆ ಪಾಕೆಟ್ ಗಳ  ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=491.82/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 4-45 ಗಂಟೆಯಿಂದ ಸಂಜೆ 5-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-15 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 87 ಕೆ.ಪಿ ಆಕ್ಟ್:-

  ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ ಶ್ರೀ ಚಂದ್ರಶೇಖರ್ ರವರು ಸಂಜೆ 7-00 ಗಂಟೆಗೆ ಠಾಣೆಗೆ ಹಾಜರಾಗಿ ನಿಡಿದ  ವರದಿಯ ದೂರು ಏನೆಂದರೆ, ಈ ದಿನ ದಿನಾಂಕ:28/06/2021 ರಂದು ಸಂಜೆ 4-00 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಹನುಂಮತರಾಯಪ್ಪ ಸಿ.ಹೆಚ್.ಸಿ-73  ರವರು ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ ತಾಲ್ಲೂಕು ಜೀಗಾನಹಳ್ಳಿ ಕೆರೆಯ ಅಂಗಳದಲ್ಲಿ  ಕೆಳಗೆ ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿ ಸಿ,ಎಚ್,ಸಿ-102 ಆನಂದ,  ಹೆಚ್.ಸಿ-73 ಹನುಮಂತರಾಯಪ್ಪ, ಹೆಚ್.ಸಿ-23 ಕುಮಾರ್ ನಾಯಕ, ಹೆಚ್.ಸಿ-29 ಶ್ರೀನಿವವಾಸ, ಹೆಚ್.ಸಿ-28 ದಕ್ಷಿಣಾ ಮೂರ್ತಿ, ಪಿ.ಸಿ-583 ಅವಿನಾಶ್, ಪಿ.ಸಿ-141 ಸಂತೋಷ್. ಪಿ.ಸಿ-92 ರವಿ, ರವರನ್ನು ಕರೆದುಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸರ್ಕಾರಿ  ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ  ರವರೊಂದಿಗೆ ಮದ್ಯಾಹ್ನ 4-10 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 4-15 ಗಂಟೆಗೆ ಗುಡಿಬಂಡೆ ಟೌನ್ ನಲ್ಲಿರುವ ಸಂಪಂಗಿ ವೃತ್ತಾದಲ್ಲಿ ಪಂಚರನ್ನು ಬರ ಮಾಡಿಕೊಂಡು ಮಾಹಿತಿಯನ್ನು ತಿಳಿಸಿ ನಮ್ಮ ಜೀಪಿನಲ್ಲಿ ಕರೆದುಕೊಂಡು ಸಂಜೆ 4.30 ಗಂಟೆಗೆ ಜೀಗಾನಹಳ್ಳಿ ಗ್ರಾಮಕ್ಕೆ  ಹೋಗಿ, ಜೀಗಾನಹಳ್ಳಿ ಕೆರೆಯಿಂದ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ನಡೆದುಕೊಂಡು ಹೊಗಿ ಮರೆಯಲ್ಲಿ ನಿಂತು ನೋಡಲಾಗಿ, ಕೆರೆಯ ಅಂಗಳದಲ್ಲಿ ಹೊಂಗೆ ಮರದ ಕೆಳಗೆ ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 4-30 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ನರಸಿಂಹ ಮೂತರ್ಿ ಬಿನ್ ದೇವೇಂದ್ರಚಾರಿ, 30 ವರ್ಷ, ಬ್ರಾಹ್ಮಣ, ಕೂಲಿ ಕೆಲಸ, ವಾಸ:  ರಾಮಪಟ್ಟಣ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು , 2) ಹರಿನಾಥ ಬಿನ್ ಶ್ರೀನಿವಾಸ, 45 ವರ್ಷ, ಬಲಜಿಗರು, ಜಿರಾಯ್ತಿ, ಮಂಡಿಕಲ್ಲು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು ಎಂದು ತಿಳಿಸಿದ್ದು,  ಓಡಿ ಹೋದ ಆಸಾಮಿಗಳು ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ 3) ನವೀನ್ ಬಿನ್ ಗೋವಿಂದಪ್ಪ, 32 ವರ್ಷ, ಬಲಜಿಗರು, ವಾಸ ಮಂಡಿಕಲ್ಲು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು 4)  ಮಂಜು, ಸಿದ್ದಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು 5) ಬಾಲಕೃಷ್ಣ, ವಾಸ:  ರಾಮಪಟ್ಟಣ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು  ಎಂದು ತಿಳಿದುಬಂದಿರುತ್ತೆ. ನಂತರ ಪಂಚರ ಸಮಕ್ಷಮ ವಶದಲ್ಲಿ ಸ್ಥಳದಲ್ಲಿ ಬಿಸಾಡಿದ್ದ ಜೂಜಾಟ ಪಣಕ್ಕೆ ಇಟ್ಟಿದ್ದ ಮಾಲನ್ನು ಪರಿಶೀಲನೆ ಮಾಡಲಾಗಿ 2080 ರೂ ಹಣ,  52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ 2080/- ರೂ & 52 ಇಸ್ಪೀಟ್ ಎಲೆಗಳನ್ನು ಹಾಗೂ  ಸ್ಥಳದಲ್ಲಿದ್ದ ಕೃತ್ಯಕ್ಕೆ ಬಳಿಸಿದ 1) ಕೆ.ಎ-02-ಜೆಜಿ-1598 ನೊಂದಣಿ ಸಂಖ್ಯೆಯ ಅವೆಂಜರ್ ದ್ವಿಚಕ್ರ ವಾಹನ, 2) ಟಿ.ಎನ್.-70-ಹೆಚ್-6100 ನೊಂದಣಿ ಸಂಖ್ಯೆಯ ಡಿಸ್ಕವರಿ., 3) ಕೆ.ಎ-03-ಹೆಚ್ ಕ್ಯೂ- 1614 ನೊಂದಣಿ ಸಂಖ್ಯೆಯ ಪಲ್ಸರ್, 4) ಕೆ.ಎ-53-ಇಬಿ-3085 ನೊಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ , 5) ಕೆ.ಎ-50-ಎಲ್- 2831 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟೀವಾ ದ್ವಿಚಕ್ರವಾಹನಗಳನ್ನು ಪಂಚರ ಸಮಕ್ಷಮ ಸಂಜೆ 5-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ  ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಇಬ್ಬರು  ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-30 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-00  ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಎನ್.ಸಿ.ಆರ್ ದಾಖಲಿಸಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.138/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30/06/2021 ರಂದು ಬೆಳಗ್ಗೆ 10-00 ಗಂಟೆಗೆ  ಎ,ಎಸ್,ಐ  ನಂಜುಂಡಶರ್ಮ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:30/06/2021 ರಂದು 7-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗಸ್ತು ಸಿಬ್ಬಂದಿ ಸಿ.ಹೆಚ್.ಸಿ-77 ಶಂಕರಪ್ಪ  ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ  ತಾಲ್ಲೂಕು ಕೋರೇನಹಳ್ಳಿ  ಗ್ರಾಮದಲ್ಲಿ ಗಸ್ತುನಲ್ಲಿರುವಾಗ ವೆಂಕಟೇಶ ಬಿನ್ ವೆಂಕಟರಾಮಯ್ಯ  ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಪೆರೇಸಂದ್ರ ಹೊರ ಠಾಣಾ ಸಿಬ್ಬಂದಿಯಾದ ಶ್ರೀನಿವಾಸ  ಸಿ.ಪಿ.ಸಿ-272 ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಬೆಳಗ್ಗೆ 7-30 ಗಂಟೆ ಸಮಯಕ್ಕೆ  ಕೋರೇನಹಳ್ಳಿ  ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ವೆಂಕಟೇಶ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಗ್ಗೆ 8-00 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಂಯನ್ನು ವಶಕ್ಕೆ ಪಡೆದು  ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ವೆಂಕಟೇಶ ಬಿನ್ ವೆಂಕಟರಾಮಯ್ಯ ,  30 ವರ್ಷ, ಕೊರಚರು, ಜಿರಾಯ್ತಿ,   ವಾಸ: ಕೋರೇನಹಳ್ಳಿ  ಗ್ರಾಮ,  ಮಂಡಿಕಲ್ಲು ಹೋಬಳಿ , ಚಿಕ್ಕಬಳ್ಳಾಪುರ  ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 20 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 800 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*20=702/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಗ್ಗೆ 8-00 ಗಂಟೆಯಿಂದ 09-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಗ್ಗೆ 9-30 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಬೆಳಗ್ಗೆ 10-00 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿರುತ್ತೆ.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:30/06/2021 ರಂದು ಬೆಳಗ್ಗೆ 11-15  ಗಂಟೆಗೆ  ಎ,ಎಸ್,ಐ  ನಂಜುಂಡಶರ್ಮ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:30/06/2021 ರಂದು 10-00  ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗುಪ್ತ ಮಾಗಹಿತಿ ಸಿಬ್ಬಂದಿ  ಹನುಮಂತರಾಯಪ್ಪ ಹೆಚ್.ಸಿ-73 ರವರು  ನನಗೆ ಪೋನ್ ಮಾಡಿ ಗುಡಿಬಂಡೆ ಟೌನಿನಲ್ಲಿ ಗಸ್ತುನಲ್ಲಿರುವಾಗ ಕುಂಬಾರಪೇಟೆ ಕ್ರಾಸ್ ನ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಪಿ.ಸಿ-141 ಸಂತೋಷ್   ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಬೆಳಗ್ಗೆ 10-15  ಗಂಟೆ ಸಮಯಕ್ಕೆ  ಕುಂಬಾರಪೇಟೆ ಕ್ರಾಸ್ ನ   ಬಳಿ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ವೆಂಕಟೇಶ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಗ್ಗೆ 10-30  ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿ ಓಡಿ ಹೋಗಿದ್ದು   ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ರಮೇಶ್ ಬಿನ್ ವೆಂಕಟ್ರೋಣಪ್ಪ  ,  38 ವರ್ಷ, ನಾಯಕರು, ಜಿರಾಯ್ತಿ, ಕುಂಬಾರಪೇಟೆ, ಗುಡಿಬಂಡೆ ಟೌನ್ ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 800 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಗ್ಗೆ 10-30 ಗಂಟೆಯಿಂದ 11-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಗ್ಗೆ 11-00 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಬೆಳಗ್ಗೆ 11-15 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿರುತ್ತೆ.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 15(A),32(3) ಕೆ.ಇ ಆಕ್ಟ್:-

  ಘನ ನ್ಯಾಯಾಲಯದಲ್ಲಿ  ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ 29/06/2021 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ  ನಾನು ಮತ್ತು ಠಾಣಾ ಪಿ.ಸಿ.483 ರಮೇಶ್ ಬಾಬು ಹಾಗೂ  ಜೀಪ್ ಚಾಲಕನಾದ ಎ.ಪಿ.ಸಿ.120 ನಟೇಶ್ ರವರು ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-395 ರಲ್ಲಿ ತೊಂಡೇಬಾವಿ, ಪೋತೇನಹಳ್ಳಿ ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು  ಅಲಕಾಫುರ ಗ್ರಾಮದಲ್ಲಿ ಇರುವಾಗ ನನಗೆ ಬಂದ ಮಾಹಿತಿ ಏನೇಂದರೆ ನಂದಿಗಾನಹಳ್ಳಿ ಗ್ರಾಮದ ಗಂಗಾಧರಪ್ಪ ಬಿನ್ ನರಸಿಂಹಪ್ಪ ಎಂಬುವರು  ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ನಾವು ಪಂಚಾಯ್ತಿದಾರರೊಂದಿಗೆ ಸಂಜೆ 4-15  ಗಂಟೆಯ ಸಮಯಕ್ಕೆ ನಂದಿಗಾನಹಳ್ಳಿ ಗ್ರಾಮದ ಗಂಗಾಧರಪ್ಪ ಬಿನ್ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಗಂಗಾಧರಪ್ಪ ಬಿನ್ ನರಸಿಂಹಪ್ಪ, 50 ವರ್ಷ, ಆದಿ ದ್ರಾವಿಡ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಂದಿಗಾನಹಳ್ಳಿ ಗ್ರಾಮ ತೊಂಡೇಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 25 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 03 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  4 ಪ್ಲಾಸ್ಟಿಕ್  ಲೋಟಗಳನ್ನು ಮತ್ತು  ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 910/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಗಂಗಾಧರಪ್ಪ ಬಿನ್ ನರಸಿಂಹಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಸಂಜೆ 6-15 ಗಂಟೆಗೆ ಠಾಣೆಗೆ ವಾಪಾಸ್ ಬಂದು ಠಾಣಾ ಮೊ.ಸಂ.109/2021 ಕಲಂ 15(ಎ), 32(3) ಕೆ.ಇ.ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.64/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:29/06/2021 ರಂದು ಸಂಜೆ 7:20 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:29-04-2021 ರಂದು ಸಂಜೆ 5:30 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-118 ಪೆಂಚುಲಪ್ಪ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ತಿಮ್ಮನಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಶ್ರೀರಾಂಪುರ ಗ್ರಾಮದ ನರಸಿಂಹಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಶ್ರೀರಾಂಪುರ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 5:50 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ನರಸಿಂಹಯ್ಯ ಬಿನ್ ಲೇಟ್ ಮುನಿಪೂಜಪ್ಪ, 65 ವರ್ಷ, ಆದಿ ಕರ್ನಾಟಕ ಜನಾಂಗ, ಅಂಗಡಿಯ ವ್ಯಾಪಾರ, ವಾಸ: ಶ್ರೀರಾಂಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 14 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 14 ಟೆಟ್ರಾ ಪ್ಯಾಕೇಟುಗಳ ಬೆಲೆ 491 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 260 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS  WHISKY ಯ 7 ಖಾಲಿ  ಟೆಟ್ರಾ   ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 6:00 ಗಂಟೆಯಿಂದ ಸಂಜೆ 6:40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

13. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.65/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:309/06/2021 ರಂದು ಮದ್ಯಾಹ್ನ 12:15 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:30-04-2021 ರಂದು ಬೆಳಿಗ್ಗೆ 10:30 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಪಿಸಿ-207 ನವೀನ್ ಕುಮಾರ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ತಿರ್ನಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ನಂದಿ ಗ್ರಾಮದ ಪಿಳ್ಳಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ನಂದಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಮೈಕ್ ಸೆಟ್ ಸೀನ ಎಂಬುವರ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ನಂದಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 10:50 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಪಿಳ್ಳಪ್ಪ ಬಿನ್ ಲೇಟ್ ನಂಜಪ್ಪ, 48 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS  WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 11:00 ಗಂಟೆಯಿಂದ ಬೆಳಿಗ್ಗೆ 11:50 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.213/2021 ಕಲಂ. 379 ಐ.ಪಿ.ಸಿ:-

  ದಿನಾಂಕ:-29/06/2021 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಭಿಷೇಕ್ ಬಿನ್ ಚೆನ್ನಕೃಷ್ಣಪ್ಪ, 27 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ತಿಪ್ಪೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 67/5 ರಲ್ಲಿ 1 ಎಕರೆ 1 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ಬೆಳೆಗಳಿಗೆ ನೀರನ್ನು ಹಾಯಿಸಲು ತಮ್ಮ ಜಮೀನಿನಲ್ಲಿ ಸಂಪ್ ಅನ್ನು ನಿರ್ಮಾಣ ಮಾಡಿಕೊಂಡು ಅದರಲ್ಲಿಂದ ನೀರನ್ನು ಮೋಟಾರ್ ಪಂಪ್ ಮೂಲಕ ಹಾಯಿಸಿಕೊಳ್ಳುತ್ತಿದ್ದು, ದಿನಾಂಕ 26/06/2021 ರಂದು ರಾತ್ರಿ ಸುಮಾರು 8-00 ಗಂಟೆಯವರೆಗೆ ತಾನು ಜಮೀನಿನಲ್ಲಿ ಕೆಲಸ ಮಾಡಿಕೊಂಡು ಆನಂತರ ಮನೆಗೆ ಹೋಗಿ ಮಾರನೇ ದಿನ ದಿನಾಂಕ 27/06/2021 ರಂದು ಸುಮಾರು 8-00 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿ ಹೋಗುತ್ತಿದ್ದಾಗ ತನಗೆ ಪರಿಚಯ ಇರುವ ಮಲ್ಲಿಶೆಟ್ಟಿಪುರ ಗ್ರಾಮದ ವಾಸಿ ಯೋಗೇಶ್ ಬಿನ್ ಕೃಷ್ಣಪ್ಪ ಎಂಬುವನು ತನ್ನ ದ್ವಿ ಚಕ್ರ ವಾಹನದ ಮೇಲೆ ಒಂದು ಗೋಣಿ ಚೀಲದಲ್ಲಿ ಮೋಟಾರ್ ಪಂಪ್ ಅನ್ನು ಇಟ್ಟುಕೊಂಡು ಹೋಗುತ್ತಿದ್ದವನು ತನಗೆ ಅಡ್ಡ ಬಂದಿದ್ದು, ತಾನು ಆತನಿಗೆ ಅದರ ಬಗ್ಗೆ ವಿಚಾರ ಮಾಡಲಾಗಿ ಆತನು ಏನು ಹೇಳದೇ ಹೊರಟು ಹೋಗಿರುತ್ತಾನೆ. ನಂತರ ತಾನು ತನ್ನ ಜಮೀನಿನ ಬಳಿ ಹೋಗಿ ನೋಡಲಾಗಿ ತಮ್ಮ ಜಮೀನಿನಲ್ಲಿನ ಸಂಪ್ ಬಳಿ ಇದ್ದ ಮೋಟಾರ್ ಪಂಪ್ ಕಳ್ಳತನವಾಗಿರುವುದು ಕಂಡು ಬಂದಿದ್ದು, ತಮ್ಮ ಜಮೀನಿನಲ್ಲಿ ಕಳುವಾಗಿರುವ ಮೋಟಾರ್ ಪಂಪ್ ಲೂಬಿ ಕಂಪನಿಗೆ ಸೇರಿದ 3 ಹೆಚ್.ಪಿ ಸಾಮಥ್ರ್ಯದ ಪಂಪ್ ಆಗಿದ್ದು, ಇದು ಹಸಿರು ಬಣ್ಣದಿಂದ ಕೂಡಿದ್ದು, ಇದು ಸುಮಾರು 18.500-00 ರೂ ಬೆಲೆ ಬಾಳುವುದ್ದಾಗಿರುತ್ತದೆ. ತಮ್ಮ ಜಮೀನಿನಲ್ಲಿನ ಮೋಟಾರ್ ಪಂಪ್ ಅನ್ನು ಮಲ್ಲಿಶೆಟ್ಟಿಪುರ ಗ್ರಾಮದ ವಾಸಿ ಯೋಗೇಶ್ ಬಿನ್ ಕೃಷ್ಣಪ್ಪ ಎಂಬುವನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ತಾನು ತನ್ನ ಮೋಟಾರ್ ಪಂಪ್ ಅನ್ನು ಗುಜರಿ ಅಂಗಡಿಗಳ ಬಳಿ ಹುಡುಕಾಡಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಕಳುವಾಗಿರುವ ಮೋಟಾರ್ ಪಂಪ್ ಮತ್ತು ಅದನ್ನು ಕಳ್ಳತನ ಮಾಡಿರುವ ಯೋಗೇಶ್ ರವರನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 30-06-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080