ಅಭಿಪ್ರಾಯ / ಸಲಹೆಗಳು

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 79/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:30/05/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ ಎನ್ ಪಾಪಣ್ಣ ಆದ ನಾನು   ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಮತ್ತು ಹೆಚ್.ಸಿ-139 ರವರೊಂದಿಗೆ ಗಸ್ತಿನಲ್ಲಿದ್ದಾಗ ನನಗೆ ಯಗವಕೋಟೆ ಗ್ರಾಮದ ವಾಸಿಯಾದ ಪಿಳಪ್ಪ ಬಿನ್ ಲೇಟ್ ವೆಂಕಟರಾಯಪ್ಪ ರವರು ಅವರ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಹೆಚ್.ಸಿ-139 ಶ್ರೀನಾಥ ಎಂ.ಪಿ ಮತ್ತು ಹೆಚ್.ಸಿ 36 ವಿಜಯ್ ಕುಮಾರ್ ರವರೊಂದಿಗೆ ಯಗವಕೋಟೆ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಬೆಳಿಗ್ಗೆ 10-30 ಗಂಟೆಗೆ ಯಗವಕೋಟೆ ಗ್ರಾಮದ ಪಿಳ್ಳಪ್ಪ ಬಿನ್ ಲೇಟ್ ವೆಂಕಟರಾಯಪ್ಪ ರವರು ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮಧ್ಯ ನೀಡುತ್ತಿದ್ದ ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮಧ್ಯವನ್ನು ಸಾರ್ವಜನಿಕರಿಗೆ ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ  ಶ್ರೀ.ಪಿಳ್ಳಪ್ಪ ಬಿನ್ ಲೇಟ್ ವೆಂಕಟರಾಯಪ್ಪ 60 ವರ್ಷ ನಾಯಕ ಜನಾಂಗ ಕೂಲಿಕೆಲಸ ವಾಸ ಯಗವಕೋಟೆ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು. ನಂತರ ಪಂಚರ ಸಮಕ್ಷಮ ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ 90 ಎಂ.ಎಲ್ ಸಾಮರ್ಥ್ಯದ 16 ಹೈವಾರ್ಡ್ಸ್ ವಿಸ್ಕಿಯ ಟೆಟ್ರಾಪ್ಯಾಕೆಟ್ ಗಳು ಒಟ್ಟು 562.08 ರೂಗಳ ಬೆಲೆ ಬಾಳುವ 1 ಲೀಟರ್ 440 ಎಂ.ಎಲ್ ಮದ್ಯವನ್ನು, ಖಾಲಿಯ 90 ಎಂ.ಎಲ್ ನ 2 ಹೈವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಗಳನ್ನು ಮತ್ತು 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ  ಮಧ್ಯಾಹ್ನ 12-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣೆಯ ಮೊ.ಸಂಖ್ಯೆ:79/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 248/2021 ಕಲಂ. 323,341,504,506 ಐಪಿಸಿ :-

     ದಿನಾಂಕ: 29/05/2021 ರಂದು ಸಂಜೆ 6.30 ಗಂಟೆಗೆ ಶ್ರೀಮತಿ ಲಕ್ಷ್ಮಿದೇವಮ್ಮ ಕೋಂ ಲೇಟ್ ರಾಮರೆಡ್ಡಿ, 62 ವರ್ಷ, ವಕ್ಕಲಿಗರು, ಮನೆಕೆಲಸ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಬಳಿ ಇರುವ ವಿವಿದ ಸರ್ವೇ ನಂಬರುಗಳಿಗೆ ಸೇರಿದ ಸುಮಾರು 15 ಎಕರೆ ಜಮೀನಿನ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ವಾಸಿಯಾದ ಕೆ.ವಿ.ಶ್ರೀನಿವಾಸರೆಡ್ಡಿ ಬಿನ್ ಲೇಟ್ ವೆಂಕಟರಾಮನ್ನ ರವರಿಗೆ ತಕರಾರಿದ್ದು, ಈ ಬಗ್ಗೆ ಕೆ.ವಿ.ಶ್ರೀನಿವಾಸರೆಡ್ಡಿ ರವರು ಚಿಂತಾಮಣಿ ಸಿವಿಲ್ ನ್ಯಾಯಾಲಯದಲ್ಲಿ ತಮ್ಮ ವಿರುಧ್ದ ದಾವೆ ಹೂಡಿದ್ದು, ಪ್ರಕರಣವು ವಿಚಾರಣೆಯಲ್ಲಿರುತ್ತೆ. ದಿನಾಂಕ 28/05/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ಮನೆಯಲ್ಲಿದ್ದಾಗ ತಮ್ಮ ಜಮೀನಿನ ಪಕ್ಕದಲ್ಲಿರುವ ತಮ್ಮ ಗ್ರಾಮದ ಮಂಜುನಾಥರೆಡ್ಡಿ ಬಿನ್ ನಾರಾಯಣಪ್ಪ ರವರು ತನಗೆ ಪೋನ್ ಮಾಡಿ ತಮ್ಮ ಗ್ರಾಮದ ಕೆ.ವಿ.ಶ್ರೀನಿವಾಸರೆಡ್ಡಿ ರವರು ತಕಾರಿರುವ ಜಮೀನಿನಲ್ಲಿರುವ ನೀಲಗಿರಿ ಮರಗಳನ್ನು ಕತ್ತರಿಸುತ್ತಿರುವುದಾಗಿ ತಿಳಿಸಿದ್ದರ ಮೇರೆಗೆ, ತಾನು ಸಂಜೆ 5.15 ಗಂಟೆ ಸಮಯದಲ್ಲಿ ತಕರಾರಿರುವ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಕೆ.ವಿ.ಶ್ರೀನಿವಾಸರೆಡ್ಡಿ ರವರು ತನ್ನನ್ನು ಅಕ್ರಮತಡೆ ಮಾಡಿ ತನ್ನನ್ನು ಕುರಿತು “ಬೇವರ್ಷಿ ಮುಂಡೆ ಈ ಜಮೀನು ನನಗೆ ಸೇರುತ್ತೆ” ಎಂದು ತನ್ನನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ತನ್ನ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ಈ ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ಮಂಜುನಾಥರೆಡ್ಡಿ ಬಿನ್ ನಾರಾಯಣಪ್ಪ ಮತ್ತು ಕಿರಣ್ ಕುಮಾರ್ ಬಿನ್ ವೆಂಕಟರೆಡ್ಡಿ ರವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡೋಣವೆಂದು ತಿಳಿಸಿದ್ದು, ಇದುವರೆಗೆ ಕೆ.ವಿ.ಶ್ರೀನಿವಾಸರೆಡ್ಡಿ ರವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು, ತಕರಾರಿರುವ ಜಮೀನಿನಲ್ಲಿನ ನೀಲಗಿರಿ ಮರಗಳನ್ನು ಕಟಾವು ಮಾಡದಂತೆ ರಕ್ಷಣೆ ನೀಡಿ ಕೆ.ವಿ.ಶ್ರೀನಿವಾಸರೆಡ್ಡಿ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 90/2021 ಕಲಂ. 143,144,147,148,323,324,504,506 ರೆ/ವಿ 149 ಐಪಿಸಿ :-

     ದಿನಾಂಕ: 29/05/2021 ರಂದು ಗಾಯಾಳುವಾದ ನಂದೀಶ್ ಬಿನ್ ಶ್ರೀರಾಮಪ್ಪ, 31 ವರ್ಷ, ನಾಯಕ ಜನಾಂಗ, ಗಾರೆ ಕೆಲಸ, ವಿನಾಯಕ ನಗರ, ಚಿಂತಾಮಣಿ ನಗರ ರವರು ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಾನು ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಹೀಗಿರುವಾಗ ದಿನಾಂಕ: 29/05/2021 ರಂದು ರಾತ್ರಿ 7:30 ಗಂಟಯಲ್ಲಿ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ವಿನಾಯಕ ನಗರ 01ನೇ ಕ್ರಾಸ್ ಬಳಿ ಟಿಪ್ಪು ನಗರಕ್ಕೆ ಹೋಗುವ ರಸ್ತೆಯಲ್ಲಿ ನನ್ನ ಅಣ್ಣನಾದ ಮಂಜುನಾಥ್ ರವರನ್ನು ಪ್ರಸಾದ್ ಎಂಬುವವರು ಕೈಗಳಿಂದ ಹೊಡೆಯುತ್ತಿದ್ದು ನಂತರ ನಾನು ಮತ್ತು ನಮ್ಮ ಅತ್ತೆಯಾದ ರತ್ನಮ್ಮ ಕೋಂ ರಾಜಣ್ಣ ರವರು ಯಾಕೆ ಈ ರೀತಿ ಹೊಡೆಯುತ್ತಿದ್ದಿರಾ ಎಂದು ಪ್ರಸಾದ್ ರವರನ್ನು ಕೇಳಿದಕ್ಕೆ ನನ್ನ ಮಗನೆ ಈ ವಿಚಾರ ನಿನಗ್ಯಾಕೋ ಎಂದು ಏಕಾಏಕಿ ನನ್ನ ತಲೆಗೆ ಅಲ್ಲೆ ಇದ್ದ ಕೋಲಿನಿಂದ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ ನನ್ನ ಎಡ ಕಿವಿಗೆ ಸಹ ಕೋಲಿನಿಂದ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ ನಂತರ ಕೈಗಳಿಂದ ಪ್ರಸಾದ್ ಮತ್ತು ಇತರರು ಸೇರಿಕೊಂಡು ನನ್ನ ಬೆನ್ನಿಗೆ ಹಾಗೂ ಹೊಟ್ಟೆಗೆ ಕೈಗಳಿಂದ ಗುದ್ದಿರುತ್ತಾರೆ ನಂತರ ನನ್ನ ಅತ್ತೆಯಾದ ರತ್ನಮ್ಮ ರವರು ಅಡ್ಡ ಬಂದಿದಕ್ಕೆ ಪ್ರಸಾದ್ ಎಂಬುವವರು ಕೈಗಳಿಂದ ಅವರ ಮುಖಕ್ಕೆ ಹಾಗೂ ತಲೆಗೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ ನಂತರ ನನ್ನ ಮಕ್ಕಳ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಸಾದ್ ಮತ್ತು ಇತರರು ನಮಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ ನಂತರ ವಿನಾಯಕ ನಗರದ ವಾಸಿಗಳಾದ ಅಶೋಕ್ ಬಿನ್ ಲೇಟ್ ವೆಂಕಟರವಣಪ್ಪ, ಹನುಮಂತಪ್ಪ ರವರು ಬಂದು ಗಲಾಟೆ ಬೀಡಿಸಿರುತ್ತಾರೆ ಯಾವುದೇ ವಾಹನದಲ್ಲಿ ನಾಗೇಶ್ ಎಂಬುವವರು ನನ್ನನ್ನು ಮತ್ತು ರತ್ನಮ್ಮ ಹಾಗೂ ಮಂಜುನಾಥ್ ರವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಮಂಜುನಾಥ್ ರವರು ಪ್ರಜ್ಞೆ ತಪ್ಪಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ವೈದ್ಯರ ಸೂಚನೆ ಮೇರೆಗೆ ಕರೆದುಕೊಂಡು ಹೋಗಿರುತ್ತಾರೆ ವೈದ್ಯರು ನನಗೆ ಚಿಕಿತ್ಸೆ ನೀಡಿ ನನ್ನ ಎಡ ಕಿವಿಗೆ ಮೂರು ಹೋಲಿಗೆ ಹಾಕಿರುತ್ತಾರೆ ಆದ್ದರಿಂದ ನಮ್ಮ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ಪ್ರಸಾದ್ ಮತ್ತು ಇತರರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 107/2021 ಕಲಂ. 323,504,506,188,269,270 ಐಪಿಸಿ :-

     ದಿನಾಂಕ:30/05/2021 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಎಸ್ ಸಾಕಮ್ಮ ಕೊಂ ಶ್ರೀನಿವಾಸ 38 ವರ್ಷ, ಆದಿ ಕರ್ನಾಟಕ ಜನಾಂಗ, ಆಶಾಕಾರ್ಯಕರ್ತೆ ಕೆಲಸ ವಾಸ: ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಆಶಾ ಕಾರ್ಯಕರ್ತೆ ಕೆಲಸ ಮಾಡುತ್ತಿದ್ದು ಬೀಚಗಾನಹಳ್ಳಿ ಢಾ:ಪ್ರಸಾದ್ ರವರ ಮಾರ್ಗದರ್ಶನದಂತೆ ದಿನಾಂಕ:29/05/2021 ಶನಿವಾರ ದಂದು ಸಂಜೆ 7-30 ಗಂಟೆ ಸಮಯದಲ್ಲಿ  ಸೋಮೇಶ್ವರ ಗ್ರಾಮದ ವಾಸಿಯಾದ ಶ್ರೀಮತಿ ವೆಂಕಟಲಕ್ಷ್ಮಮ್ಮ ಕೊಂ ಎಸ್,ಬಿ ಸುರೇಶ 23 ವರ್ಷ, ರವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಸದರಿ ವ್ಯಕ್ತಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 28/05/2021 ರಂದು ದಾಖಲಾಗಿದ್ದು 29/05/2021 ರಂದು ಪಾಸಿಟಿವ್ ಬಂದಿರುವ ಕಾರಣ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಗಮನಕ್ಕೆ ತರದೇ ಮನೆಗೆ ಬಂದಿದ್ದು ಗೊತ್ತಾಗಿ ಅವರ ಮನೆಗೆ ಹೋದಾಗ ಅವರು ನಮಗೆ ಏನೂ ಕಾಯಿಲೆ ಇಲ್ಲವೆಂದು ವಾದಿಸಿದ್ದು ಮನವಲಿಸಿ ಪಲ್ಸ್ ರೇಟ್ ಚೆಕ್ ಮಾಡಿದಾಗ ಪಲ್ಸ ರೇಟ್ 80 % ಬಂದ ಕಾರಣ ತಕ್ಷಣ ತಾನು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಶ್ರೀಮತಿ ಶಶಿಕಳ ರವರ ಗಂಡನಾದ ಎಸ್,ಡಿ ಸುಬ್ರಮಣ್ಯ ರವರು ತಕ್ಷಣ ತಮ್ಮ ವೈದ್ಯಾಧಿಕಾರಿಗಳಾದ ಡಾ:ಪ್ರಸಾದ್ ಸಾರ್ ರವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದಾಗ ತಕ್ಷಣ ಅಂಬುಲೆನ್ಸ ವ್ಯವಸ್ಥೆ ಮಾಡಿ ಸಿ,ಸಿ ಸೆಂಟರ್ ಅಥವಾ ತಾಲ್ಲೂಕು ಆಸ್ಪತ್ರೆಗೆ ಸೇರಿಸಲು ತಿಳಿಸಿದರು ತಾವು ಅಂಬುಲೆನ್ಸ ಕರೆಯಿಸಿ ರೋಗಿಯನ್ನು ಶಿಪ್ಟ್ ಮಾಡುವಾಗ ಕೆಯ ಗಂಡನಾದ ಎಸ್,ಬಿ ಸುರೇಶ ರವರ ಹೇಳಿಕೆಯನ್ನು ಪಡೆದು ಅವರ ಒಪ್ಪಿಗೆ ಮೇರೆಗೆ ಶಿಪ್ಟ್ ಮಾಡಿ ಕಳುಹಿಸಿಕೊಡುವ ಸಮಯದಲ್ಲಿ ಆಕೆಯ ಅಣ್ಣನಾದ ವೆಂಕಟೇಶ ಬಿನ್ ಪಿಲ್ಲಪ್ಪ ಎಂಬುವವರು ಎಕಾಏಕಿ ಬಂದು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಇಲ್ಲಿಂದ ನೀವು ಜಾಗ ಖಾಲಿ ಮಾಡದಿದ್ದರೇ ನಿಮ್ಮ ಮೇಲೆ ಪೆಟ್ರೋಲ್ ತಂದು ಸುರಿದು ಸಜೀವ ಧಹನ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿದ್ದು ಆದ್ದರಿಂದ ಕೊವಿಡ್ ವಾರಿಯರ್ಸ ಮೇಲೆ ದೌರ್ಜನ್ಯ ಮಾಡಿ ಹಲ್ಲೆ ಮಾಡಿರುವ ವೆಂಕಟೇಶ್ ರವರ ವಿರುದ್ದ ಕಾನೂನಿನ ಕ್ರಮ ಜರುಗಿಸಲು ನೀಡಿದ ದೂರು.

 

5. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 87/2021 ಕಲಂ. 279,337 ಐಪಿಸಿ :-

     ದಿನಾಂಕ:30/05/2021 ರಂದು ಬೆಳಗ್ಗೆ 9.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಮಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ, 48 ವರ್ಷ, ನಾಯಕರು, ವ್ಯವಸಾಯ, ವಾಸ ದೊಡ್ಡಮಲ್ಲೇಕೆರೆ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:29.05.2021 ರಂದು ನಮ್ಮ ಅಣ್ಣನ ಮಗಳಾದ ಅರುಣ ಕೋಂ ಶಿವ ಕುಮಾರ್, 27 ವರ್ಷ, ದೊಡ್ಡಮಲ್ಲೇಕೆರೆ ಗ್ರಾಮ ರವರು ಮಾನ್ಸಂಟೋ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದು ಈ ದಿನ ಕೆಲಸಕ್ಕೆ ಬೆಳಗ್ಗೆ ತೊಂಡೇಬಾವಿ ಕಡೆಯಿಂದ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-40-ಆರ್-490 ಎಕ್ಸ್.ಎಲ್ ಹೆವಿ ಡ್ಯೂಟಿ ವಾಹನದಲ್ಲಿ ಬಂದು ಕಂಪನಿಯಲ್ಲಿ ಸಹಿಯನ್ನು ಮಾಡಿ ನಂತರ ತನ್ನ ದ್ವಿಚಕ್ರ ವಾಹನದಲ್ಲಿ ಬೆಳಗ್ಗೆ 8.30 ಗಂಟೆಗೆ ಮಾನ್ಸಂಟೋ ಕಂಪನಿಯ ಮುಂಭಾಗ ರಸ್ತೆಯನ್ನು ದಾಟುತ್ತಿರುವಾಗ ತಿಪ್ಪಗಾನಹಳ್ಳಿ ಕಡೆಯಿಂದ ಬಂದ ಕೆಎ-43-ಆರ್-7689 ದ್ವಿಚಕ್ರ ವಾಹನದ ಸವಾರ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ಅಣ್ಣನ ಮಗಳಾದ ಅರುಣ ರವರ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ್ದರಿಂದ ಅರುಣ ರವರಿಗೆ ತಲೆಗೆ ಮತ್ತು ಕೈ ಕಾಲುಗಳಿಗೆ ಗಾಯಗಳು ಆಗಿದ್ದು ಅಲ್ಲಿಗೆ ಬಂದು ಟೂಲ್ ಆಂಬುಲೆನ್ಸ್ ವಾಹನದಲ್ಲಿ ಗೌರಿಬಿದನೂರು  ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ವೈದ್ಯರ ಸಲಹೆ ಮೇರೆಗೆ  ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸೇರಿಸಿದ್ದು ಅಪಘಾತ ಪಡಿಸಿದ ವಾಹನದ ಸವಾರನಿಗೆ ಮೂಗೇಟುಗಳಾಗಿದ್ದು ಅಪಘಾತ ಪಡಿಸಿದ ಕೆಎ-43-ಆರ್-7689 ದ್ವಿಚಕ್ರ ವಾಹನದ ಸವಾರನ ಮೇಲೆ  ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 171/2021 ಕಲಂ. 32,34,43(A) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:30-05-2021 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ  ಹಾಜರಾಗಿ  ನೀಡಿದ ವರದಿಯ ಸಾರಾಂಶವೇನೆಂದರೆ ತನಗೆ ಪಿ.ಎಸ್.ಐ ಸಾಹೇಬರು ದಿನಾಂಕ:29-05-2021 ರಂದು ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ  ತಾನು  ಠಾಣಾ ಸರಹದ್ದಿನ,ಆನೂರು, ಚಿಕ್ಕದಾಸರಹಳ್ಳಿ, ಚೀಮಂಗಲ, ಹಾರಡಿ  ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ದಿನಾಂಕ:30-05-2021 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಹೆಚ್. ಕ್ರಾಸ್ ನಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಹೆಚ್;ಕ್ರಾಸ್ ಗ್ರಾಮದ  ಹೊಸಕೋಟೆ ರಸ್ತೆ ಕಡೆಯಿಂದ ಒಬ್ಬ ಆಸಾಮಿಯು ಒಂದು ಗೋಣಿ ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಹೆಚ್.ಕ್ರಾಸ್ ಸರ್ಕಲ್ ನಲ್ಲಿಯೇ ಇದ್ದುಕೊಂಡು ಹೋಸಕೋಟೆ ಕಡೆಯಿಂದ ಬರುತ್ತಿದ್ದ ದ್ವಿಚಕ್ರವಾಹನಗಳನ್ನು ಗಮನಿಸಿಕೊಂಡಿದ್ದಾಗ ಒಬ್ಬ ಆಸಾಮಿಯು ತನ್ನ ದ್ವಿಚಕ್ರವಾಹನದ ಮುಂಬದಿಯಲ್ಲಿ ಒಂದು ಬಿಳಿ ಬಣ್ಣದ ಚೀಲವನ್ನು ಇಟ್ಟುಕೊಂಡು ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ಸದರಿ ದ್ವಿಚಕ್ರವಾಹನದ ಸವಾರನಿಗೆ ದ್ವಿಚಕ್ರವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸದರಿ ಆಸಾಮಿಯು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಗಾಬರಿಯಲ್ಲಿ ತನ್ನ ದ್ವಿಚಕ್ರವಾಹನದಲ್ಲಿದ್ದ ಒಂದು ಬಿಳಿ ಗೋಣಿಚೀಲವನ್ನು ಅಲ್ಲಿಯೇ ರಸ್ತೆಯ ಬಿಸಾಡಿ ದ್ವಿಚಕ್ರವಾಹನ ಸಮೇತ ಪರಾರಿಯಾಗಿರುತ್ತಾನೆ. ರಾತ್ರಿ ಸಮಯವಾಗಿದ್ದರಿಂದ ಸದರಿ ದ್ವಿಕ್ರವಾಹನದ ನೋಂದಣೀ ಸಂಖ್ಯೆಯನ್ನು ಗಮನಿಸಲು ಸಾದ್ಯವಾಗಿರುವುದಿಲ್ಲ, ಸದರಿ ಅಸಾಮಿ ಬಿಸಾಡಿ ಹೋಗಿದ್ದ ಗೋಣಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 2 ಮದ್ಯದ ಟೆಟ್ರಾ ಪಾಕೇಟ್ ಗಳಿರುವ ರೆಟ್ಟಿನ ಬಾಕ್ಸ್ ಗಳಿದ್ದು, ಒಂದು ಬಾಕ್ಸ್ ಅನ್ನು ತೆರೆದು ಪರಿಶೀಲಿಸಲಾಗಿ ಅದರಲ್ಲಿ 180 ಎಂಎಲ್ ಸಾಮರ್ಥ್ಯದ 48 ಓಲ್ಟ್ ಟಾವರ್ನ್  ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 86.75 ರೂ ಎಂದು ಬೆಲೆ ನಮೂದು ಆಗಿದ್ದು, ಮತ್ತೋಂದು ರೆಟ್ಟಿನ ಬಾಕ್ಸ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂಎಲ್ ಸಾಮರ್ಥ್ಯದ 70 ಹೈವಾರ್ಡ್ಸ್  ಪಂಚ್ ಪೈನ್ ವಿಸ್ಕಿ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಬೆಲೆ ನಮೂದು ಆಗಿದ್ದು ಮೇಲ್ಕಂಡ ಎಲ್ಲಾ ಮದ್ಯವು 6623/- ರೂ ಬೆಲೆ ಬಾಳುವುದ್ದಾಗಿದ್ದು, ಇದು 14.94 ಲೀಟರ್ ನಷ್ಟಿರುತ್ತದೆ. ಸದರಿ ಆಸಾಮಿಯು ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ತಮ್ಮ ಗ್ರಾಮದಲ್ಲಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಲು ದ್ವಿಚಕ್ರವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು ಮೇಲ್ಕಂಡ ಮದ್ಯವನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ವರದಿಯ ಮೇರಗೆ ಠಾಣಾ ಮೊ.ಸಂ:171/2021 ಕಲಂ:32,34, 43(ಎ) ಕೆ.ಇ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 30-05-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080