ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 29/04/2021 ರಂದು ಮದ್ಯಾಹ್ನ 1-30 ಗಂಟೆಗೆ ಶ್ರೀ ರೆಡ್ಡಪ್ಪ, ಎ.ಎಸ್.ಐ. ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ. ದಿನಾಂಕ; 29-04-2021 ರಂದು  11.30 ಗಂಟೆ ಸಮಯದಲ್ಲಿ ಸಿಪಿಐ ಸಾಹೇಬರ ಆದೇಶದಂತೆ ನಾನು ಮತ್ತು ಪಿಸಿ 83 ಮಂಜುನಾಥ ರವರು ಗೂಳೂರು ಕಡೆ ದ್ವಿಚಕ್ರ ವಾಹನದಲ್ಲಿ ಕೋವಿಡ್-19 ಲಾಕ್ ಡೌನ್ ಗಸ್ತಿನಲ್ಲಿದ್ದಾಗ ಜಿಗಣೇವಾಂಡ್ಲಪಲ್ಲಿ ಗ್ರಾಮದ ಅಂಗಡಿಯ ಮುಂಭಾಗದಲ್ಲಿ ಯಾರೋ ಆಸಾಮಿ  ಕಾನೂನು ಬಾಹಿರವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಬಂದಿದ್ದು,  ಸದರಿ ಮಾಹಿತಿಯ ಮೇರೆಗೆ ನಾನು ಮತ್ತು ಪಿ.ಸಿ 83 ಮಂಜುನಾಥ ರವರು ಜಿಗಣೇವಾಂಡ್ಲಪಲ್ಲಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪಂಚರನ್ನು ಕರೆದುಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಜಿಗಣೇವಾಂಡ್ಲಪಲ್ಲಿ ಗ್ರಾಮಕ್ಕೆ  ಮದ್ಯಾಹ್ನ 12.00 ಗಂಟೆಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ, ಯಾರೋ ಒಬ್ಬ ಆಸಾಮಿಯು ಅಂಗಡಿಯ ಮುಂಭಾಗ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿರುತ್ತಾನೆ. ಓಡಿಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ರಾಜಗೋಪಾಲ ಎ. ಬಿನ್ ವೈ ಆದಿನಾರಾಯಣಪ್ಪ, 38 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಜಿಗಣೇವಾಂಡ್ಲಪಲ್ಲಿ  ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಯಿತು. ಸ್ಥಳದಲ್ಲಿ, ಪಂಚರ ಸಮಕ್ಷಮದಲ್ಲಿ ಚೀಲವನ್ನು ಪರಿಶೀಲಿಸಲಾಗಿ 90 ML ಸಾಮರ್ಥ್ಯದ  HAYWARDS CHEERS WHISKY ಯ 15   ಟೆಟ್ರಾ ಪಾಕೇಟ್ ಗಳು ಮತ್ತು 180 ML ಸಾಮರ್ಥ್ಯದ  OLD TAVERN WHISKY ಯ 5 ಟೆಟ್ರಾ ಪಾಕೆಟ್ ಗಳಿದ್ದು,  , ಒಟ್ಟು 2 ಲೀಟರ್ 250 ಮಿಲಿ ಮದ್ಯವಿದ್ದು, ಇದರ ಬೆಲೆ ಸುಮಾರು 960.7/ ರೂ.ಗಳಾಗುತ್ತವೆ.  ಮೇಲ್ಕಂಡ ಮದ್ಯವನ್ನು  ಪಂಚರ ಸಮಕ್ಷಮ ಮದ್ಯಾಹ್ನ 12.00 ಗಂಟೆಯಿಂದ 12.50 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ.   ಮಾಲು, ಅಸಲು ಧಾಳಿ ಪಂಚನಾಮೆಯೊಂದಿಗೆ  ಮದ್ಯಾಹ್ನ  1.30 ಗಂಟೆಗೆ  ಠಾಣೆಗೆ ಹಾಜರಾಗಿ ಮೇಲ್ಕಂಡ ಆಸಾಮಿಯು  ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ದೂರಿನ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 379  ಐ.ಪಿ.ಸಿ:-

  ದಿನಾಂಕ: 30/04/2021 ರಂದು ಸಂಜೆ 5-40 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಾಮಸುಬ್ಬಮ್ಮ, ಜಿ. 53 ವರ್ಷ, ಮುಖ್ಯೋಪಾಧ್ಯಯರು, ಸರ್ಕಾರಿ ಪ್ರೌಢಶಾಲೆ ಘಂಟಂವಾರಿಪಲ್ಲಿ. ಬಾಗೇಪಲ್ಲಿ ತಾಲ್ಲೂಕು. ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:16/04/2021 ರಂದು ನಮ್ಮ ಶಾಲೆಯಲ್ಲಿ ಮೀಟರ್ ನಿಂದ ಕಂಪ್ಯೂಟರ್ ಕೊಠಡಿಗೆ ಹಾಗೂ ತರಗತಿ ಕೊಠಡಿಗಳಿಗೆ ಅಳವಡಿಸಿರುವ 4.MM ನ ಎರಡು ಕಾಯಿಲ್ ವೈರ್ ಸುಮಾರು (100 ಮೀಟರ್), ಕಳವು ಆಗಿರುತ್ತದೆ. ಇದರ ವೆಚ್ಚ 6800/- ರೂಗಳಾಗಿದ್ದು, ಇದರ  ಬಿಲ್ ತಮಗೆ ತಲುಪಿಸಲು ಕಾರಣಾಂತರಗಳಿಂದ ತಡವಾಗಿದ್ದು ತಾವು ದಯಮಾಡಿ ಈ ಕೃತ್ಯವನ್ನು ಎಸಗಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡು ನಮ್ಮ ವೈರನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದುರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.65/2021 ಕಲಂ. 188,269,271 ಐ.ಪಿ.ಸಿ & 5 (1) THE KARNATAKA EPIDEMIC DISEASES ACT, 2020:-

     ದಿನಾಂಕ: 30/04/2021 ರಂದು ಮಧ್ಯಾಹ್ನ 2-30 ಗಂಟೆಯ ಸಮಯದಲ್ಲಿ  ಪಿರ್ಯಾದಿದಾರರಾಧ  ಯಾಸ್ಮೀನ್ .35 ವರ್ಷ, ಪಿ ಡಿ ಓ ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿ. ಕಾರ್ಯಾಲಯ, ವಾಸ: ಟ್ಯಾಂಕ್ ಬಂಡ್ ರಸ್ತೆ, ಟೀಚರ್ಸ್ ಕಾಲೋನಿ, ಚಿಂತಾಮಣಿ ನಗರ. ಸ್ವಂತ ಸ್ಥಳ: ಎಸ್, ಎನ್ ಪೇಟೆ, ಬಳ್ಳಾರಿ ಬಳ್ಳಾರಿ ನಗರ ಮೊ ನಂ: 9449574337 ರವರು   ಠಾಣೆಗೆ  ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ, ನಂದಿಗಾನಹಳ್ಳಿ ಗ್ರಾಮ,ಪಂಚಾಯ್ತಿ ವ್ಯಾಪ್ತಿಯ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ  ಶ್ರೀಮತಿ ಸಲ್ಮ ರವರು ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ  ಕೆಲವು  ದಿನಗಳಿಂದ  ವಾಸವಾಗಿದ್ದು,   ದರ್ಗಾಗೆ ಭೇಟಿ  ನೀಡಿರುತ್ತಾರೆ ಇವರಿಗೆ  ದಿನಾಂಕ: 27/04/20221 ರಂದು  ಕೋವಿಡ್  ಪಾಸಿಟೀವ್  ಎಂದು ತಿಳಿದು  ಬಂದ ಕೂಡಲೇ  ಅವರನ್ನು  ಸರ್ಕಾರಿ  ಆಸ್ಪತ್ರೆಗೆ ದಾಖಲು  ಮಾಡಲು ಆಶಾ ಕಾರ್ಯಕರ್ತೆಯರು ಮತ್ತು  ಪಂಚಾಯಿತಿ  ಸಿಬ್ಬಂದಿ  ರವರು ಹೋದಾಗ  ಅವರು  ಗ್ರಾಮದಲ್ಲಿ  ಇಲ್ಲದೇ  ಇರುವುದು ಕಂಡು  ಬಂದಿರುತ್ತೆದೆ. ಹಾಗೂ  ದೂರವಾಣಿ ಮೂಲಕ ಸಂಪರ್ಕಸಲು ಪ್ರಯತ್ನಿಸಿದಾಗಲೂ ಕರೆಯನ್ನು ಸ್ವೀಕರಿಸುತ್ತಿಲ್ಲ ಆದುದರಿಂದ  ಕೋವಿಡ್ ಪಾಸಿಟೀವ್ ಇರುವುದರಿಂದ ಇವರಿಂದಾಗಿ   ಗ್ರಾಮಗಳಲ್ಲಿ  ಇತರರಿಗೆ  ಸೋಂಕು ತಗಲುವ ಸಂಭವ ಹೆಚ್ಚಿಗೆ  ಇರುವುದರಿಂದ ತುರ್ತಾಗಿ ಅವರನ್ನು ಹುಡುಕಿ ಕೊಡಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಎಂದು ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.102/2021 ಕಲಂ. 32,34,36(A) ಕೆ.ಇ ಆಕ್ಟ್:-

     ದಿನಾಂಕ: 29/04/2021 ರಂದು ಮದ್ಯಾಹ್ನ 12-30 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ  ಎನ್,ಮೋಹನ್  ಪಿ.ಎಸ್.ಐ.ರವರು ನೀಡಿದ ದೂರಿನ ಸಾರಾಂಶವೇನೆಂರೆ. ಈ ದಿನ  ದಿನಾಂಕ: 29/04/2021 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ನಾನು ಪಿ.ಸಿ.179 ಶಿವಶೇಖರ  ರವರೊಂದಿಗೆ ವಿದುರಾಶ್ವಥ ಹೊರಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲಾ ಅಪರಾಧ ಪತ್ತೆ ವಿಶೇಷ ದಳದ ಸಿಬ್ಬಂದಿಯಾದ  ಚಂದ್ರಶೇಖರ್  ಎ.ಪಿ.ಸಿ -184 ರವರು ತನಗೆ   ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಹುದಗೂರು ಗ್ರಾಮದಲ್ಲಿನ ಓಂ ಶಿವ ವೈನ್ಸ್ ನಿಂದ ಖರೀದಿ ಮಾಡಿಕೊಂಡು  ಬೈಚಾಪುರ ಕ್ರಾಸ್ ನಲ್ಲಿ    ಯಾರೋ ಆಸಾಮಿಯು ದ್ವಿಚಕ್ರ ವಾಹನದಲ್ಲಿ  ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು  ಸಾಗಾಣಿಕೆಯನ್ನು  ಮಾಡುತ್ತಿದ್ದಾನೆಂದು  ಖಚಿತ ಮಾಹಿತಿ ಬಂದಿದೆ ಎಂದು ತಿಳಿಸಿದ ಮಾಹಿತಿಯ ಮೇರೆಗೆ   ಸಿಬ್ಬಂದಿಯವರಾದ ಜಿಲ್ಲಾ ಅಪರಾಧ ಪತ್ತೆ ವಿಶೇಷ ದಳದ ಸಿಬ್ಬಂದಿಯಾದ  ಚಂದ್ರಶೇಖರ್ ಎ.ಪಿ.ಸಿ - 184, ಪಿ.ಸಿ.179 ಶಿವಶೇಖರ     ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಬೆಳಿಗ್ಗೆ 11-00 ಗಂಟೆಗೆ ಬೈಚಾಪುರ ಕ್ರಾಸ್  ಬಳಿಗೆ ಹೋಗಿ, ನೋಡಲಾಗಿ  ಯಾರೋ ಒಬ್ಬ ಆಸಾಮಿಯು ನೊಂದಣಿ ಸಂಖ್ಯೆಯಿಲ್ಲದ  ಟಿ.ವಿ.ಎಸ್. ಕಂಪನಿಯ ಎಕ್ಸೆಲ್ ( ಚಾಸಿಸ್ ನಂಬರ್ – MD62HP15K1C43122 ) ದ್ವಿಚಕ್ರ ವಾಹನದಲ್ಲಿ ಎರಡು  ಪ್ಲಾಸ್ಟೀಕ್ ಚೀಲಗಳಲ್ಲಿ  ಮದ್ಯವನ್ನು    ಸಾಗಿಸಿಕೊಂಡು ಬರುತ್ತಿದ್ದು  ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಪೊಲೀಸ್ ವಾಹನವನ್ನು ಕಂಡು ದ್ವಿಚಕ್ರ ವಾಹನ ಮತ್ತು ಎರಡು  ಚೀಲಗಳನ್ನು  ಸ್ಥಳದಲ್ಲಿ ಬಿಟ್ಟು  ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು   ಸಿಬ್ಬಂದಿಯವರು ಆತನನ್ನು ಬೆನ್ನಟ್ಟಿ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಿ ತಿಳಿಲಾಗಿ  ಕೌಶಿಕ್ ಬಿನ್ ಗೋವಿಂದಪ್ಪ, 23 ವರ್ಷ, ನಾಯಕರು,  ವ್ಯಾಪಾರ, ವಾಸ ಉಚ್ಚೋದನಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮದಲ್ಲಿ  ಎರಡು ಪ್ಲಾಸ್ಟೀಕ್ ಚೀಲಗಳನ್ನು  ಪರಿಶೀಲಿಸಲಾಗಿ, ಅದರಲ್ಲಿ 1 ) ಒಂದು ರಟ್ಟಿನ ಬಾಕ್ಸ್ ನಲ್ಲಿ 180 ML  ನ OLD TAVERN  CHEERS WHISKY ಯ 48 ಮದ್ಯ ತುಂಬಿದ ಟೆಟ್ರಾ ಪಾಕೇಟ್ ಗಳಲ್ಲಿ ಪ್ರತಿಯೊಂದು ಟೆಟ್ರಾ ಪಾಕೇಟ್ ನ ಬೆಲೆ 86 ರೂಪಾಯಿ 75 ಪೈಸೆ ಇರುತ್ತೆ. ನಂತರ 2) ಇನ್ನೊಂದು  ರಟ್ಟಿನ ಬಾಕ್ಸ್ ನ್ನು  ಪರಿಶೀಲಿಸಲಾಗಿ 180 ML  ನ  8 PM WHISKY  ಯ  48 ಟೆಟ್ರಾ ಪಾಕೇಟ್ ಗಳಲ್ಲಿ ಪ್ರತಿಯೊಂದರ ಬೆಲೆ 86 ರೂಪಾಯಿ 75 ಪೈಸೆ ಇರುತ್ತೆ.3)  ಇನ್ನೊಂದು  ರಟ್ಟಿನ ಬಾಕ್ಸ್  ನ್ನು  ಪರಿಶೀಲಿಸಲಾಗಿ 330 ML  ನ  KNOCK OUT ನ 24 ಟಿನ್  ಪ್ರತಿಯೊಂದರ ಬೆಲೆ 80 ರೂಪಾಯಿ ಇರುತ್ತೆ .4)  ಇನ್ನೊಂದು  ರಟ್ಟಿನ ಬಾಕ್ಸ್  ನ್ನು  ಪರಿಶೀಲಿಸಲಾಗಿ 650 ML  ನ  KNOCK OUT ನ   12 ಬಾಟಲ್  ಗಳು   ಪ್ರತಿಯೊಂದರ ಬೆಲೆ 150 ರೂಪಾಯಿ ಇರುತ್ತೆ . 5)  ಇನ್ನೊಂದು  ರಟ್ಟಿನ ಬಾಕ್ಸ್  ನ್ನು  ಪರಿಶೀಲಿಸಲಾಗಿ 650 ML  ನ  TUBORG  ನ   12 ಬಾಟಲ್  ಗಳು   ಪ್ರತಿಯೊಂದರ ಬೆಲೆ 150 ರೂಪಾಯಿ ಇರುತ್ತೆ.  6)  ಇನ್ನೊಂದು  ರಟ್ಟಿನ ಬಾಕ್ಸ್  ನ್ನು  ಪರಿಶೀಲಿಸಲಾಗಿ 650 ML  ನ  TUBORG  ನ   12 ಬಾಟಲ್  ಗಳು   ಪ್ರತಿಯೊಂದರ ಬೆಲೆ 150 ರೂಪಾಯಿ ಇರುತ್ತೆ. ಇವುಗಳ ಒಟ್ಟು ಬೆಲೆ 15,648/- ರೂಗಳು ಆಗಿದ್ದು, ಒಟ್ಟು 48 ಲೀಟರ್ 600  ML ಸಾಮರ್ಥ್ಯದ ಮದ್ಯವಾಗಿರುತ್ತದೆ. ಇವುಗಳ ಪೈಕಿ FSL  ಪರೀಕ್ಷೆಗಾಗಿ  180 ML  ನ OLD TAVERN  CHEERS WHISKY ಯ  01 ಟೆಟ್ರಾ ಪ್ಯಾಕೇಟ್ ಮತ್ತು  180 ML  ನ  8 PM WHISKY  ಯ 01 ಟೆಟ್ರಾ ಪ್ಯಾಕೇಟನ್ನು,  330 ML  ನ  KNOCK OUT ನ ಒಂದು  ಟಿನ್  ಅನ್ನು , 650 ML  ನ  KNOCK OUT ನ   ಒಂದು ಬಾಟಲ್  ಅನ್ನು ಅಲಾಯಿದೆಯಾಗಿ ತೆಗೆದು K  ಎಂಬ ಅಕ್ಷರದಿಂದ ಅರಗು ಮಾಡಿ ಸೀಲು ಮಾಡಿರುತ್ತೆ.   ಸದರಿ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು  ಸಾಗಾಣಿಕೆಯನ್ನು ಮಾಡುತ್ತಿದ್ದಾನೆ.  ನಂತರ   ಸ್ಥಳದಲ್ಲಿ  ಮದ್ಯಾಹ್ನ 11-00  ಗಂಟೆಯಿಂದ 12-00   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1 ) 180 ML  ನ OLD TAVERN  CHEERS WHISKY ಯ 48 ಮದ್ಯ ತುಂಬಿದ ಟೆಟ್ರಾ ಪಾಕೇಟ್ ಗಳು 2) 180 ML  ನ  8 PM WHISKY  ಯ  48 ಟೆಟ್ರಾ ಪಾಕೇಟ್ ಗಳು 3)  330 ML  ನ  KNOCK OUT ನ 24 ಟಿನ್   ಗಳು  .4)  650 ML  ನ  KNOCK OUT ನ   12 ಬಾಟಲ್  ಗಳು   . 5)  650 ML  ನ  TUBORG  ನ   12 ಬಾಟಲ್  ಗಳು, 6) ನೊಂದಣಿ ಸಂಖ್ಯೆಯಿಲ್ಲದ  ಟಿ.ವಿ.ಎಸ್. ಕಂಪನಿಯ ಎಕ್ಸೆಲ್ ( ಚಾಸಿಸ್ ನಂಬರ್ – MD62HP15K1C43122 ) ದ್ವಿಚಕ್ರ ವಾಹನವನ್ನು 7) ಎರಡು ಪ್ಲಾಸ್ಟಿಕ್ ಚೀಲಗಳನ್ನು  ವಶಪಡಿಸಿಕೊಂಡು, ಠಾಣೆಗೆ ಮದ್ಯಾಹ್ನ 12-30 ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ಮತ್ತು ಓಂ ಶಿವ ವೈನ್ಸ್ ನ ಮಾಲೀಕ ಮತ್ತು ಕ್ಯಾಷಿಯರ್ ನ ವಿರುದ್ಧ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 05/04/2021 ರಂದು ಚಂದ್ರಶೇಖರ್ ಎ.ಪಿ.ಸಿ.184. ಜಿಲ್ಲಾ ಅಪರಾಧ ಪತ್ತೆ ವಿಶೇಷ ದಳ ಡಿಪಿಒ. ಚಿಕ್ಕಬಳ್ಳಾಪುರ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ನಾನು ಚಿಕ್ಕಬಳ್ಳಾಪುರ ಜಿಲ್ಲಾ ಅಪರಾಧ ಪತ್ತೆ ಕಾರ್ಯದ ವಿಶೇಷ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಈ ದಿನ ದಿನಾಂಕ: 05/04/2021 ರಂದು ನಾನು ಗೌರೀಬಿದನೂರು ತಾಲ್ಲೂಕಿನ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ, ಸಂಜೆ ಸುಮಾರು 7-00 ಗಂಟೆಯಲ್ಲಿ ಯಾರೋ ಒಬ್ಬ ಆಸಾಮಿಯು ವಿಧುರಾಶ್ವತ್ಥ ಕ್ರಾಸ್ ನಲ್ಲಿ ರಾಮಚಂದ್ರ ಪುರಕ್ಕೆ ಹೋಗುವ ರಸ್ತೆಯಲ್ಲಿರುವ ತನ್ನ ಪೆಟ್ಟಿಗೆ ಅಂಗಡಿಯ ಬಳಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ನಾನು ಸ್ಥಳಕ್ಕೆ ರಾತ್ರಿ 7-30 ಗಂಟೆಗೆ ಹೋಗಿ ನೋಡಿದಾಗ, ಯಾರೋ 3 ಜನರು ಮಧ್ಯಪಾನ ಮಾಡಲು ಕುಳಿತಿದ್ದು, ಇವರಿಗೆ ಒಬ್ಬ ಆಸಾಮಿಯು ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಹಾಗು ಬಾಟಲಿಗಳನ್ನು ಕೊಡುತ್ತಿದ್ದನು, ಇದನ್ನು ನೋಡಿ, ನಾನು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಹಿಡಿದುಕೊಂಡಾಗ, ಮಧ್ಯಪಾನ ಮಾಡಲು ಕೂತಿದ್ದವರು ಓಡಿ ಹೋಗಿರುತ್ತಾರೆ. ನಂತರ ನಾನು ಹಿಡಿದುಕೊಂಡಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ, ರಾಮು ಬಿನ್ ನರಸಿಂಹಪ್ಪ0, 45 ವರ್ಷ, ಮಡಿವಾಳ ಜನಾಂಗ, ವಾಸ ಕುಡುಮಲಕುಂಟೆ ಗ್ರಾಮ ಎಂದು ತಿಳಿಸಿದ್ದು, ಈತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 4 ಬೀಯರ್ ಬಾಟಲ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 2 ಲೀಟರ್ 600 ಎಂ.ಎಲ್. ಆಗಿದ್ದು, ಇವುಗಳ ಬೆಲೆ 580 ರೂಗಳು, ಹಾಗು 90 ಎಂ.ಎಲ್. ಸಾಮರ್ಥ್ಯದ 20 ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮಧ್ಯ 1ಲೀ 800 ಎಂ.ಎಲ್ ಆಗಿದ್ದು, ಇವುಗಳ ಒಟ್ಟು ಬೆಲೆ 702 ರೂ ಆಗಿರುತ್ತೆ. ಈತನಿಗೆ ಇವುಗಳನ್ನು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲದೇ ಇರುವುದರಿಂದ ಮಧ್ಯವನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 7-30 ಗಂಟೆಯಿಂದ 8-00 ಗಂಟೆಯವರೆಗೆ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು, ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿರುತ್ತೇನೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.104/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ 13/04/2021 ರಂದು ಮದ್ಯಾಹ್ನ ಸಮಯದಲ್ಲಿ ಗೌರೀಬಿದನೂರು ಪೊಲೀಸ್ ವೃತ್ತ ನೀರಿಕ಼ಕರಾದ ಎಸ್.ಡಿ.ಶಶೀಧರ್ ಸಿ.ಪಿ.ಐ ರವರು ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಹಾಜರಾಗಿ ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13/04/2021 ರಂದು ಬೆಳಿಗ್ಗೆ 12-00 ಗಂಟೆಯಲ್ಲಿ ವೃತ್ತ ಕಛೇರಿಯಲ್ಲಿದ್ದಾಗ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಕುರುಗೊಡು ಗ್ರಾಮದ ಅಶ್ವತ್ಥಕಟ್ಟೆ ಬಳಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಹಾಗೂ ವೃತ್ತ ಕಛೇರಿಯ ಸಿಬ್ಬಂದಿಗಳಾದ ಹೆಚ್.ಸಿ 224 ವೆಂಕಟೇಶ್, ಪಿ.ಸಿ 310 ಮೈಲಾರಿ, ಪಿ.ಸಿ 10 ಶಿವಕುಮಾರ್ ರವರೊಂದಿಗೆ ಮತ್ತು ಪಂಚರೊಂದಿಗೆ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-1222 ರಲ್ಲಿ ಚಿಕ್ಕಕುರುಗೊಡು ಗ್ರಾಮಕ್ಕೆ ಮದ್ಯಾಹ್ನ 12-45 ಗಂಟೆಗೆ ಹೋಗಿ ಸ್ವಲಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಅಶ್ವತ್ಥಕಟ್ಟೆಯ ಬಳಿ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 200/-ರೂ ಇನ್ನೋಬ್ಬ ಬಾಹರ್ ಗೆ 200/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸವನ್ನು ಕೆಳಲಾಗಿ 1)ನವೀನ್ ಕುಮಾರ್ ಬಿನ್ ಲಕ್ಷ್ಮೀನಾರಾಯಣ, 26 ವರ್ಷ, ನಾಯಕರು, ಪ್ಲವರ್ ಡೆರಕೊರೆಟ್ ಕೆಲಸ್, ಚಿಕ್ಕಕುರುಗೋಡು ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು 2) ರಾಮಾಂಜಿನಪ್ಪ ಬಿನ್ ಲೇಟ್ ರಾಮಪ್ಪ, 50 ವರ್ಷ, ನಾಯಕರು, ಜಿರಾಯ್ತಿ, ಚಿಕ್ಕಕುರುಗೋಡು ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು 3) ವೆಂಕಟೇಶ್ ಬಿನ್ ಲೇಟ್ ರಂಗಪ್ಪ, 26 ವರ್ಷ, ನಾಯಕರು, ಖಾಸಗಿ ಪ್ಯಾಕ್ಟರಿಯಲ್ಲಿ ಕೆಲಸ್, ಚಿಕ್ಕಕುರುಗೋಡು ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು 4) ಚಲಪತಿ ಬಿನ್ ತಿಮ್ಮರಾಜು, 19 ವರಷ, ವಿದ್ಯಾರ್ಥಿ, ಚಿಕ್ಕಕುರುಗೋಡು ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 11,180/- ರೂಗಳು ಮತ್ತು ಒಂದು ಪ್ಲಾಸ್ಟಿಕ್ ಚಿಲವನ್ನು ಪಂಚರ ಸಮಕ್ಷಮ ಮದ್ಯಾಹ್ನ 1-00 ಗಂಟೆಯಿಂದ 2-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮದ್ಯಾಹ್ನ 2-30 ಠಾಣೆಗೆ ವಾಪಸ್ ಬಂದು ಆರೋಪಿಗಳನ್ನು ಹಾಗೂ ಮಾಲು ಮತ್ತು ಮಹಜರನ್ನು ನೀಡುತಿದ್ದು, ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡಿರುತ್ತೆ. ಈ ದಿನ ನ್ಯಾಯಾಲಯದ ಸಿಬ್ಬಂದಿ ಪಿಸಿ 129 ರವರು ನೀಡಿದ ನ್ಯಾಯಾಲಯದ ಅನುಮತಿಯ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.133/2021 ಕಲಂ. 15(A),32(3)  ಕೆ.ಇ  ಆಕ್ಟ್:-

     ದಿನಾಂಕ:-30/04/2021 ರಂದು ಬೆಳಿಗ್ಗೆ 10-45 ಗಂಟೆಗೆ ಪಿಸಿ-543 ಸುದಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ದಿನಾಂಕ 30/04/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ಪಿಸಿ 543 ಸುಧಾಕರ್ ಆದ ತನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ವರದನಾಯಕನಹಳ್ಳಿ ಹರಳಹಳ್ಳಿ, ಚೀಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಅಬ್ಲೂಡು ಗ್ರಾಮದ ಸಪ್ಪಲಮ್ಮ ದೇವಾಲಯದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ದೇವಾಲಯದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಗೋಣಿ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಯಾರೋ 3 ಜನ ಆಸಾಮಿಗಳಿಗೆ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಮಾಡಿ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸದರಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆವರ ಹೆಸರು ವಿಳಾಸ ಕೇಳಲಾಗಿ ಮುನಿರಾಜು ಬಿನ್ ಮುನಿಶಾಮಪ್ಪ, 66 ವರ್ಷ, ಬಲಜಿಗರು, ವಾಸ-ಮರಳುಕುಂಟೆ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿ ಬಳಿ ಇದ್ದ ಗೋಣಿ ಚೀಲದಲ್ಲಿ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ Original Choice Deluxe Whisky ಯ 17 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 597.21 ರೂ.ಗಳಾಗಿರುತ್ತೆ ಸ್ಥಳದಲ್ಲಿ 3 ಪ್ಲಾಸ್ಟಿಕ್ ಗ್ಲಾಸುಗಳು, 3 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ Original Choice Deluxe Whisky ಯ 3 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಮುನಿರಾಜು ಬಿನ್ ಮುನಿಶಾಮಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 01-05-2021 05:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080