ಅಭಿಪ್ರಾಯ / ಸಲಹೆಗಳು

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 34/2021 ಕಲಂ. 406,420 ಐಪಿಸಿ :-

     ದಿನಾಂಕ: 29/03/2021 ರಂದು 11-45 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು  ಶಾಖೆಯಲ್ಲಿ  ಬುಡನ್ ಸಾಬ್ ಬಿನ್ ಮಸ್ತಾನ್ ಸಾಬ್, ಮುಸ್ಲಿಮರು, ವ್ಯವಸಾಯ, ವಾಸ;  ಎಂ ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು,  ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 18/06/2011 ರಂದು  1.16.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು,  ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ  ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 35/2021 ಕಲಂ. 406,420 ಐಪಿಸಿ :-

     ದಿನಾಂಕ: 29/03/2021 ರಂದು 12-00 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು  ಶಾಖೆಯಲ್ಲಿ  ವೆಂಕಟರಾಮರೆಡ್ಡಿ  ಹೆಚ್ ಜಿ  ಹಿಂದೂ ಧರ್ಮ, ವ್ಯವಸಾಯ , ವಾಸ;  ಹನುಮಯ್ಯಗಾರಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು,  ರವರು ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 18/01/2011 ರಂದು  1.00.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್ ಠಾಣೆ, ಮೊ.ಸಂ. 36/2021 ಕಲಂ. 406, 420 ಐಪಿಸಿ :-

     ದಿನಾಂಕ: 29/03/2021 ರಂದು 12-15 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಮೆಹೂಬೂಬ್ ಸಾಬ್ ಬಿನ್ ದೌಡಾ ಸಾಬ್  ಮುಸ್ಲಿಮರು, ವ್ಯವಸಾಯ, ವಾಸ;  ಎಂ ಗೊಲ್ಲಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು,  ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ:01/03/2011 ರಂದು  2.00.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

4. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 37/2021 ಕಲಂ. 406, 420 ಐಪಿಸಿ :-

     ದಿನಾಂಕ: 29/03/2021 ರಂದು 12-30 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಎಂ, ಎನ್  ನನ್ನೇ ಸಾಬ್  ಬಿನ್ ಮದರ್ ಸಾಬ್ ಮುಸ್ಲಿಮರು, ವ್ಯವಸಾಯ, ವಾಸ;  ಬೋಡಂಪಲ್ಲಿ ಗ್ರಾಮ,  ಚಿಂತಾಮಣಿ ತಾಲ್ಲೂಕು,  ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ:13/01/2011 ರಂದು  30.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 38/2021 ಕಲಂ. 406, 420 ಐಪಿಸಿ :-

     ದಿನಾಂಕ: 29/03/2021 ರಂದು 12-45 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಮೌಲಾ ಸಾಬ್ ಬಿನ್ ಬುಡಾನ್ ಸಾಬ್,  ಮುಸ್ಲಿಮರು, ವ್ಯವಸಾಯ, ವಾಸ;  ಎಂ ಗೊಲ್ಲಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು,  ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 26/02/2011 ರಂದು  96.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

6. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 39/2021 ಕಲಂ. 406, 420 ಐಪಿಸಿ :-

     ದಿನಾಂಕ: 29/03/2021 ರಂದು 13-00 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಚಾಂದ್ ಪಾಷಾ ಬಿನ್ ಗೌಸ್ ಸಾಬ್,  ಮುಸ್ಲಿಮರು, ವ್ಯವಸಾಯ, ವಾಸ: ಕೆ ಆರ್ ಬಡಾವಣೆ, ನಾರೆಪ್ಪಕುಂಟೆ ಚಿಂತಾಮಣಿ ನಗರ  ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 29/04/2011 ರಂದು  10.000 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 45/2021 ಕಲಂ. 379 ಐಪಿಸಿ :-

     ದಿನಾಂಕ:29.03.2021 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಲಕ್ಷ್ಮೀದೇವಮ್ಮ ಕೋಂ ಲೇಟ್ ನಾರಾಯಣಸ್ವಾಮಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ವಾಸವಾಗಿದ್ದು, ತನಗೆ ಇಬ್ಬರು ಗಂಡು ಮಕ್ಕಳಿದ್ದು, 1 ನೇ ರಾಜೇಶ್ ಎನ್ ಮತ್ತು 2 ನೇ ನರೇಶ್ ಎನ್ ಆಗಿದ್ದು, ತನ್ನ 2 ನೇ ಮಗನಿಗೆ ಮದುವೆಯಾಗಿ ಬೇರೆ ಕಡೆ ವಾಸವಾಗಿದ್ದು, ತನ್ನ 1 ನೇ ಮಗ ರಾಜೇಶ್ ಶ್ರೀ ಸಾಯಿ ಇಂಡಸ್ಟ್ರೀಸ್ ಫ್ಯಾಬ್ರಿಕೇಷನ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ಮಗನ ಮದುವೆಗೆಂದು ತಾನು ತನ್ನ ಮಗ ಕೆಲಸ ಮಾಡುವ ಫ್ಯಾಕ್ಟರಿಯಲ್ಲಿ 2 ಚೀಟಿಗಳನ್ನು ಹಾಕಿದ್ದು, ಈಗ್ಗೆ 3 ತಿಂಗಳ ಹಿಂದೆ ಚೀಟಿ ಮುಕ್ತಾಯವಾಗಿ 3,20,000/- ಹಣ ಬಂದಿದ್ದು, ಸದರಿ ನಗದು ಹಣವನ್ನು ಮತ್ತು ತಾನು ಈ ಹಿಂದೆ ಖರೀಧಿಸಿದ್ದ ಬಂಗಾರದ ಒಡವೆಗಳನ್ನು ಒಂದು ಚೀಲದಲ್ಲಿ ಮತ್ತು ಫೆಬ್ರವರಿ ತಿಂಗಳಲ್ಲಿ ಮುಕ್ತಾಯವಾಗಿರುವ ಚೀಟಿಯಿಂದ ಬಂದ ಹಣ 1,25,000/- ಹಣವನ್ನು   ಮತ್ತು ಇತರೆ ಬಂಗಾರದ ಒಡವೆಗಳನ್ನು ಒಂದು ಪ್ಲಾಸ್ಟಿಕ್ ಕವರಿನಲ್ಲಿಟ್ಟುಕೊಂಡು ಎರಡೂ ಚೀಲಗಳನ್ನು ಮತ್ತು ಬಟ್ಟೆಗಳನ್ನು ಬಟ್ಟೆಯ ಬ್ಯಾಗಿನಲ್ಲಿಟ್ಟುಕೊಂಡು ತನ್ನ ಮಗನೊಂದಿಗೆ ಗಲಾಟೆ ಮಾಡಿಕೊಂಡು ಚಿಕ್ಕಬಳ್ಳಾಪುರ ತಾಲ್ಲೂಕು ಕರಿಗಾನಪಾಳ್ಯ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರಾದ ನಾಗರಾಜುರವರ ಮನೆಗೆ ಹೋಗಲು ದಿನಾಂಕ:25.03.2021 ರಂದು ಮದ್ಯಾಹ್ನ 1-30 ಗಂಟೆಗೆ ಮನೆಯನ್ನು ಬಿಟ್ಟು ಯಲಹಂಕಕ್ಕೆ ಬಂದು ಅಲ್ಲಿಂದ ಚಿಕ್ಕಬಳ್ಳಾಪುರ ಬಸ್ಸನ್ನು ಹತ್ತಿಕೊಂಡು ಚಿಕ್ಕಬಳ್ಳಾಪುರಕ್ಕೆ ಬಂದು ನಂತರ ಆಟೋದಲ್ಲಿ ಕರಿಗಾನಪಾಳ್ಯದ ನಾಗರಾಜುರವರ ಮನೆಗೆ ಸಂಜೆ 6-30 ಗಂಟೆಗೆ ಬಂದಿದ್ದು, ಆಗ ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಚಿಲಕ ಹಾಕಿದ್ದು, ತಾನು ಚಿಲಕ ತೆಗೆದು ಮನೆಯೊಳಗೆ ಹೋದೆ ಅಷ್ಟರಲ್ಲಿ ಮುನಿಲಕ್ಷ್ಮಮ್ಮ ಬಂದು ಟೀ ಮಾಡಿ ಕೊಟ್ಟಿದ್ದು, ಕುಡಿದು ತಾನು ತಂದಿದ್ದ ಬ್ಯಾಗನ್ನು ತೆಗೆದು ನೋಡಲಾಗಿ ತಾನು ತಂದಿದ್ದ ಒಡವೆ ಮತ್ತು ಹಣದ ಎರಡು ಚೀಲಗಳು ಇದ್ದು, ರಾತ್ರಿ ಊಟ ಮಾಡಿ ಮಲಗಿದ್ದು, ದಿನಾಂಕ:26.03.2021 ರಂದು ಬೆಳಿಗ್ಗೆ 7-00 ಗಂಟೆಗೆ ನಾಗರಾಜು ಮತ್ತು ಮುನಿಲಕ್ಷ್ಮಮ್ಮರವರು ರೋಜ ಹೂವುಗಳನ್ನು ಕೀಳಲು ಹೋಗಿದ್ದು, ತಾನು 7-30 ಗಂಟೆಗೆ ಎದ್ದು ನೋಡಲಾಗಿ 3,20,000/- ರೂ ಬೆಲೆ ಬಾಳುವ ನಗದು ಹಣ ಮತ್ತು ಬಂಗಾರದ ಒಡವೆಗಳಿರುವ ಒಂದು ಚೀಲ ಬ್ಯಾಗಿನಲ್ಲಿರಲಿಲ್ಲ. ತಕ್ಷಣ ತಾನು ಕಿರುಚಿಕೊಂಡಾಗ ತಮ್ಮ ಮೈದ ನಾಗರಾಜ್ ಮತ್ತು ತಮ್ಮ ತಂಗಿ ಮುನಿಲಕ್ಷ್ಮಮ್ಮರವರು ಬಂದು ಏನಾಯಿತೆಂದು ಕೇಳಿದ್ದು, ತಾನು ತನ್ನ ಮಗನೊಂದಿಗೆ ಗಲಾಟೆ ಮಾಡಿಕೊಂಡು ಬರುವಾಗ ಮನೆಯಲ್ಲಿದ್ದ ಬಂಗಾರದ ಒಡವೆಗಳು ಮತ್ತು ನಗದು ಹಣವನ್ನು ಎರಡು ಚೀಲಗಳಲ್ಲಿ ಇಟ್ಟುಕೊಂಡು ಬ್ಯಾಗಿನಲ್ಲಿಟ್ಟುಕೊಂಡು ತಂದಿದ್ದು, ಆ ಪೈಕಿ ಈಗ ಒಂದು ಚೀಲ ಇರುವುದಿಲ್ಲವೆಂದು 1,25,000/- ನಗದು ಹಣ ಮತ್ತು ಒಡವೆಗಳಿರುವ ಒಂದು ಚೀಲ ಮಾತ್ರ ಇರುತ್ತದೆಂದು ತಿಳಿಸಿ ನಂತರ ತಮ್ಮ ಮನೆಗೆ ಬೆಂಗಳೂರಿಗೆ ಹೋಗಿ ಮನೆಯಲ್ಲಿ ಒಂದು ಸಾರಿ ಸರಿಯಾಗಿ ಹುಡುಕಾಡಿ ನಂತರ ತನ್ನ ಮಗ ರಾಜೇಶನೊಂದಿಗೆ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ಬ್ಯಾಗಿನಲ್ಲಿದ್ದ ಬಂಗಾರದ ಒಡವೆಗಳನ್ನು ಮತ್ತು  3 ಲಕ್ಷ 20 ಸಾವಿರ ನಗದು ಹಣವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಿ ತನಗೆ ನ್ಯಾಯ ದೊರಕಿಸಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

8. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 19/2021 ಕಲಂ. 323, 324, 504, 506 ಐಪಿಸಿ :-

     ದಿನಾಂಕ; 29-03-2021 ರಂದು ಮದ್ಯಾಹ್ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ವೈದ್ಯಾಧಿಕಾರಿಗಳು ರವಾನಿಸಿರುವ ಮೆಮೋವನ್ನು ಸ್ವೀಕರಿಸಿ ನಂತರ ಪಿ.ಸಿ-541 ರವರೊಂದಿಗೆ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರ ಸಮಕ್ಷಮ ಗಾಯಾಳು ಶ್ರೀ ಮಧು ಸೂದನ ಬಿನ್ ವೆಂಕಟರೋಣಪ್ಪ, 30 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ; ಸುಣ್ಣಕಲ್ಲು ಬೀದಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಸ್ಮಶಾನ ಪಕ್ಕದಲ್ಲಿ ವಾರ್ಡ್ ನಂ: 31, ಚಿಕ್ಕಬಳ್ಳಾಪುರ ನಗರ, ಸ್ವಂತ ಊರು: ಹೊಸಹುಡ್ಯ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತಾನು ಕೂಲಿ ಕೆಲಸಕ್ಕೆ ಪ್ರತಿ ದಿನ ಹೋಗುತ್ತಿದ್ದು, ಅದರಂತೆ ಈ ದಿನ ದಿನಾಂಕ; 29-03-2021 ರಂದು ಬೆಳಗ್ಗೆ ಸುಮಾರು 8.00 ಗಂಟೆ ಸಮಯದಲ್ಲಿ ಮರಳು ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹೋದಾಗ ಆಗ ಅಲ್ಲಿರುವ ನಂದಿ ಕ್ರಾಸ್ ನ ಮೇಸ್ತ್ರಿ ಕೆಲಸಕ್ಕೆ ಕರೆದುಕೊಂಡರು. ತಾನು ಮತ್ತು ತನ್ನ ಜೊತೆ ಇನ್ನೊಬ್ಬನು ಅತನ ಹೆಸರು ವಿಳಾಸ ಗೊತ್ತಿರುವುದಿಲ್ಲ. ನಾವುಗಳು ಇಬ್ಬರೂ ನಡೆದುಕೊಂಡು ಚಿಕ್ಕಬಳ್ಳಾಪುರ  ನಗರದ  ರೆಡ್ಡಿ ಬಾರ್ ಅಂಡ್ ರೆಸ್ಟೊರೆಂಟ್ ಹತ್ತಿರ ಬಂದಿದ್ದು, ನಂತರ ಇಬ್ಬರು ಮದ್ಯ ಪಾನ ಮಾಡಿ, 50/- ರೂಗಳನ್ನು ಕೇಳಿದ್ದಕ್ಕೆ ಆತನು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿದ್ದ ರಿಪೀಸ್ ನಿಂದ ಎಡ ತಲೆಗೆ ಹಾಗೂ ಕೈಗಳಿಗೆ ಕಾಲಿಗೆ ಬೆರಳುಗಳಿಗೆ ಹೊಡೆದಿದ್ದು, ಇದರಿಂದ ರಕ್ತ ಗಾಯವಾಗಿ ತಾನು ಅಲ್ಲಿಯೇ ಕುಸಿದ್ದು ಬಿದ್ದಿದ್ದು, ನಂತರ ಆತನು ಓಡಿ ಹೋಗಿದ್ದು, ಯಾರೋ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ತನ್ನನ್ನು ರಿಪೀಸ್ ನಿಂದ ಹೊಡೆದು ತಲೆಗೆ ಕೈ ಕಾಲುಗಳಿಗೆ ರಕ್ತ ಗಾಯ ಮಾಡಿರುವ ಆರೋಪಿತನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ಯ ಮೇರೆಗೆ ಠಾಣೆಗೆ ವಾಪಸ್ಸು ಬಂದು ಸಂಜೆ 7.00 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 20/2021 ಕಲಂ. 279,337 ಐಪಿಸಿ :-

     ದಿನಾಂಕ:30/03/2021 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾಧುದಾರರಾದ ಶ್ರೀ.ಕೃಷ್ಣಪ್ಪ ಬಿನ್ ಲೇಟ್ ವೆಂಕಟಪ್ಪ 48 ವರ್ಷ, ಎ.ಆರ್.ಎಸ್.ಐ ಡಿ.ಎ.ಆರ್ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಡಿ.ಎ.ಆರ್ ಚಿಕ್ಕಬಳ್ಳಾಪುರದಲ್ಲಿ ಎ.ಆರ್.ಎಸ್.ಐ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ತನಗೆ ದಿನಾಂಕ:-29/03/2021 ರಂದು ತನಗೆ ಮೇಲಾಧಿಕಾರಿಗಳು ರಾತ್ರಿ 8-00 ಗಂಟೆಯಿಂದ ಬೆಳಿಗ್ಗೆ 08-00 ಗಂಟೆಯವರೆಗೆ ಹೊಯ್ಸಳ-112 ರ KA-03-G-1422 ರ ಇನೋವಾ ಕಾರಿಗೆ ಚಾಲಕನನ್ನಾಗಿ ನೇಮಿಸಿದ್ದು ಅದರಂತೆ ತಾನು ಹಾಗೂ ನಗರ ಠಾಣೆಯ ಸಿಬ್ಬಂದಿ ಸಿ.ಪಿ.ಸಿ-144 ಶ್ರೀ ಮುತ್ತುರಾಜ್ ಹಾಗೂ ಸಿ.ಪಿ.ಸಿ-275 ಬೀರೇಶ್ ರವರೊಂದಿಗೆ ಚಿಕ್ಕಬಳ್ಳಾಪುರ ಟೌನ್, ಹಾರೋಬಂಡೆ, ಆರ್,ಟಿ,ಓ ಕಛೇರಿ, ವಾಪಸಂದ್ರ ಬ್ರಿಡ್ಜ್, ಡಿ.ಸಿ ಕಛೇರಿ ಬಳಿ  ಕರ್ತವ್ಯವನ್ನು ನಿರ್ವಹಿಸಿ ದಿನಾಂಕ:-30/03/2021 ರಂದು ಸುಮಾರು ಬೆಳಗಿನ ಜಾವ 02-00 ಗಂಟೆಯ ಸಮಯದಲ್ಲಿ ತಮ್ಮ ಕಾರನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಹೆಚ್-44 ಬೈಪಾಸ್ ರಸ್ತೆಯ ಬನ್ನಿಕುಪ್ಪೆ ಬ್ರಿಡ್ಜ್ ಬಳಿ ಇರುವ ಸರ್ವೀಸ್ ರಸ್ತೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಮ್ಮ ಕಾರಿನ ವಿಂಡೋ ಗ್ಲಾಸ್ಗಳನ್ನು ಕ್ಲೋಸ್ ಮಾಡಿಕೊಂಡು ಟಾಪ್ ಲೈಟ್ ಹಾಕಿ ನಿಲ್ಲಿಸಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬಂದ ಬಾಗೇಪಲ್ಲಿ ಕಡೆಯಿಂದ ಬಂದ TS-03-UB-0677 ರ ಕ್ಯಾಂಟರ್ ವಾಹನದ ಚಾಲಕ ವಾಹನವನ್ನು ಹೈವೇ ರಸ್ತೆಯಿಂದ ಬನ್ನಿಕುಪ್ಪೆ ಸರ್ವೀಸ್ ರಸ್ತೆಗೆ ಹೋಗುತ್ತಿದ್ದಾಗ ಅದರ ಹಿಂದೆ ಬಂದ MH-43-BG-8373 ಕ್ಯಾಂಟರ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸರ್ವೀಸ್ ರಸ್ತೆಗೆ ಹೋಗುತ್ತಿದ್ದ ಕ್ಯಾಂಟರ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ನಂತರ ನಿಂತಿದ್ದ ತಮ್ಮ ಕಾರಿನ ಮುಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ್ದು ತಾನು ಕಾರನ್ನು ಇಳಿದು ನೋಡಲಾಗಿ ಸದರಿ ತಮ್ಮ ಕಾರಿನ ಬಲಭಾಗದ ಮುಂದಿನ ಬಂಪರ್, ಬಲಭಾಗದ ಹೆಡ್ ಲೈಟ್, ಬಲ ಭಾಗದ ಬಂಪರ್ ಹಾಗೂ ಅಪಘಾತ ಪಡಿಸಿದ ರಭಸಕ್ಕೆ ಹಿಂಭಾಗದ ಗ್ಲಾಸ್ ಜಕಂಗೊಂಡಿರುತ್ತೆ. ಹಾಗೂ ಅಪಘಾತಕ್ಕೀಡಾದ TS-03-UB-0677 ರ ಕ್ಯಾಂಟರ್ ವಾಹನದ ಹಿಂಭಾಗ ಹಾಗೂ ಅಪಘಾತ ಪಡಿಸಿದ MH-43-BG-8373 ಕ್ಯಾಂಟರ್ ವಾಹನದ ಮುಂಭಾಗ ಪೂರಾ ಜಕಂಗೊಂಡಿದ್ದು, ಸದರಿ ಅಪಘಾತ ಪಡಿಸಿದ ಚಾಲಕನನ್ನು ನೋಡಲಾಗಿ ಅವನಿಗೆ ಮೂಗಿಗೆ ಕೈ-ಕಾಲುಗಳಿಗೆ ಗಾಯಗಳಾಗಿದ್ದು ಸದರಿ ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸತ್ಯನಾರಾಯಣ ಸಿಂಗ್ ಬಿನ್ ಶ್ರೀರಾಮ್ ಕರಣ್ ಸಿಂಗ್ 37 ವರ್ಷ, ಗೋಡ ಜನಾಂಗ, ಸವಣ್ಪುರ ಗ್ರಾಮ, ಸುಲ್ತಾನಪುರ ಜಿಲ್ಲೆ, ಉತ್ತರ ಪ್ರದೇಶ ಎಂತ ತಿಳಿಸಿದ್ದು ಸದರಿ ಚಾಲಕನನ್ನು ಉಪಚರಿಸಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವಾಹನಗಳನ್ನು ಟೋಯಿಂಗ್ ಮೂಲಕ ಠಾಣೆಗೆ ತಂದು ನಿಲ್ಲಿಸಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಸದರಿ ಅಪಘಾತಕ್ಕೆ ಕಾರಣನಾದ MH-43-BG-8373 ರ ಕ್ಯಾಂಟರ್ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 133/2021 ಕಲಂ. 324, 504, 506 ಐಪಿಸಿ :-

     ದಿನಾಂಕ: 29/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನರಸಿಂಹ ಬಿನ್ ಲೇಟ್ ನಾರಾಯಣಸ್ವಾಮಿ, 35 ವರ್ಷ, ಗೊಲ್ಲರು, ಸೆಂಟರಿಂಗ್ ಕೆಲಸ, ಹಿರೇಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳೀಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 28/03/2021 ರಂದು ಸಂಜೆ 7.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇರುವ ದಿಂಡಿನ ಮೇಲೆ ಕುಳಿತುಕೊಂಡಿದ್ದಾಗ ತಮ್ಮ ಗ್ರಾಮದ ತಮ್ಮ ಜನಾಂಗಕ್ಕೆ ಸೇರಿದ ಜಗದೀಶ್ ಬಿನ್ ರಮೇಶ್ ರವರು ತನ್ನ ಬಳಿ ಬಂದು ಕುಳಿತಿದ್ದು, ಆಗ ತಾನು ನಿನ್ನ ಸ್ನೇಹಿತ ನಾಗೇಶ್ ರವರ ಕೇಸು ಏನಾಗಿದೆ. ಇನ್ನೂ ಜೈಲಿನಲ್ಲಿ ಇದ್ದಾನ, ಏಕೆ ಈ ರೀತಿ ಮಾಡಬೇಕು ಎಂದು ಹೇಳಿದ್ದಕ್ಕೆ ಜಗದೀಶ್ “ನಿನಗೇಕೋ ಬೋಳಿ ನನ್ನ ಮಗನೇ, ನನ್ನ ಸ್ನೇಹಿತನ ವಿಚಾರ. ಏಕೆ ಮೈಗೆ ಎಂಗೆ ಇದೆ” ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ ತಾನು ಏಕೆ ಈ ರೀತಿ ಬೈಯ್ಯುತ್ತಿರುವುದು ಎಂದು ಕೇಳುತ್ತಿದ್ದಂತೆ ಜಗದೀಶ ತನ್ನ ಮೇಲೆ ಜಗಳ ಮಾಡಿ, ಹತ್ತಿರದಲ್ಲಿ ಇದ್ದ ಕಟ್ಟಿಗೆಯಿಂದ ತನ್ನ ಎಡ ಕಣ್ಣಿನ ಬಳಿ ಹೊಡೆದಾಗ ಕಣ್ಣಿನ ಬಳಿ ರಕ್ತಗಾಯವಾಗಿರುತ್ತೆ. ನಂತರ ಅದೇ ಕಟ್ಟಿಗೆಯಿಂದ ತನ್ನ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದನು. ನಂತರ ತಾನು ಕೆಳಗೆ ಬಿದ್ದು ಹೋದಾಗ ಜಗದೀಶ ತನಗೆ ಪ್ರಾಣಬೆದರಿಕೆಯನ್ನು ಹಾಕಿ ಹೊರಟು ಹೋಗಿರುತ್ತಾನೆ. ಆದ್ದರಿಂದ ಜಗದೀಶ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 80/2021 ಕಲಂ. 279, 304(ಎ) ಐಪಿಸಿ :-

     ದಿನಾಂಕ 29/03/2021 ರಮದು 16-30 ಗಂಟೆಗೆ  ಪಿರ್ಯಾಧಿದಾರರಾದ ಅನಂತಮೂರ್ತಿ ಬಿನ್ ಲೇಟ್ ನಂಜುಂಡರಾವ್ ,40 ವರ್ಷ, ಬ್ರಾಹ್ಮಣರು, ಹಿಂದೂಪುರದಲ್ಲಿ ಕಂಪ್ಯೂಟರ್  ಆಪರೇಟರ್ ಕೆಲಸ, ಡೋರ್ ನಂ 5/03/182(ಎ) ಡಿ.ಆರ್ ಕಾಲೋನಿ.ಹಿಂದೂಪುರ ಟೌನ್ ,ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 28/03/2021 ರಂದು ತನ್ನ ಅಣ್ಣನ ಮಗನಾದ ಸಾಯಿಪವನ್ ಬಿನ್ ಜೆ ರಘು ಪ್ರಸಾದ್ , 24 ವರ್ಷ, ಬ್ರಾಹ್ಮಣರು ಎಲೆಕ್ಟ್ರಿಷಿಯನ್ ಕೆಲಸ,11-9-36 ಕೋಟಾ ಬೀದಿ ಹಿಂದೂಪುರ ಟೌನ್ ರವರು ತನ್ನ ಬಾಬತ್ತು KA 03-JG-7089 YAMAHA R1 5 ದ್ವಿಚಕ್ರ ವಾಹನದಲ್ಲಿ ಸುಮಾರು 8-30 ಗಂಟೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಬೆಂಗಳೂರಿನಿಂದ ಹಿಂದೂಪುರಕ್ಕೆ ರಾತ್ರಿ ಕತ್ತಲಿನಲ್ಲಿ ವಿದುರಾಶ್ವತ್ಥ ಆರ್ಚ್ ನ ಮುಂಭಾಗದಲ್ಲಿ ಬರುತ್ತಿರುವಾಗ ನಾಯಿ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ಅಲ್ಲೇ ನಿಂತಿದ್ದ KA-02–AE-5162 ನಂಬರಿನ ಮಹೇಂದ್ರ ಲಾರಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ  ಮತ್ತು ಕಾಲಿಗೆ ತೀವ್ರತರವಾದ ಗಾಯವಾಗಿರುತ್ತೆಂತ ಸುಜಿತ್ ಬಿ.ಎಸ್ ಎಂಬುವವರು ನನಗೆ ಕರೆ ಮಾಡಿ ತಿಳಿಸಿದರು ನನ್ನ ಅಣ್ಣನ ಮಗನಾದ ಸಾಯಿ ಪವನ್ ರವರನ್ನು ಗೌರಿಬಿದನೂರಿನ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಾಪಿಸ್ಟ್ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು  ಈ ದಿನ ದಿನಾಂಕ 29/03/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆಂದು ವೈದ್ಯರು ತಿಳಿಸಿದರು ಬಂದು ದೂರನ್ನು ನೀಡಿರುತ್ತೇನೆ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 81/2021 ಕಲಂ. 323, 324, 504, 506 ಐಪಿಸಿ :-

     ದಿನಾಂಕ 29/03/2021  ರಂದು  ರಾತ್ರಿ 8-00 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ  ಗಾಯಾಳು  ಶ್ರೀ.ಎ. ವೆಂಕಟಾಚಲಪತಿ ಬಿನ್ ಲೇಟ್ ಅನಂತಪ್ಪ, 62 ವರ್ಷ, ಒಕ್ಕಲಿಗರು, ಜಿರಾಯ್ತಿ, ರಮಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರ  ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8-45 ಗಂಟೆಗೆ ಠಾಣೆಗೆ ವಾಪಸ್ ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ- ದಿನಾಂಕ;29/03/2021 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ಪಿರ್ಯಾದಿದಾರರು ತನ್ನ ಬಾಬ್ತು ಜಮೀನಿನಲ್ಲಿದ್ದಾಗ, ಅವರ ಕೆಲಸಕ್ಕೆ ಬಂದಿದ್ದ ಟ್ರಾಕ್ಟರ್ ಡ್ರೈವರ್ ಆಂಜಿನಪ್ಪ ಬಿನ್ ಲೇಟ್  ತಿಪ್ಪಣ್ಣ ರವರಿಗೆ  ಪಿರ್ಯಾದಿ ತಮ್ಮನಾದ  ಆರೋಪಿ ಗೋಪಾಲರೆಡ್ಡಿ ಬಿನ್ ಅನಂತಪ್ಪ ರವರು ಅವಾಚ್ಯ ಶಬ್ದಗಳಿಂದ  ನಮ್ಮ ಜಮೀನಿನ ಬಳಿ ಬರಬೇಡವೆಂದು ಎಷ್ಟು ಭಾರಿ ಹೇಳಿದರೂ, ಅವರ ಕೂಲಿ ಕೆಲಸಕ್ಕೆ  ಹೋಗುತ್ತೀಯಾ ಎಂದು ಲೋಪರ್ ನನ್ನ ಮಕ್ಕಳು ಎಂದು  ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು.  ಅಲ್ಲಿಯೇ ಇದ್ದ ಪಿರ್ಯಾದಿದಾರರು ಆತನಿಗೆ ಏಕೆ ಬೈಯುವುದು, ನಮ್ಮ ಕೆಲಸಕ್ಕೆ ಬಂದರೆ  ಎಂದು ಕೇಳುವಷ್ಟರಲ್ಲಿ ಅಲ್ಲಿಯೇ ಇದ್ದ ನೀಲಗಿರಿ ಕಟ್ಟಿಗೆಯಿಂದ ಪಿರ್ಯಾದಿಯ ತಲೆಗೆ ಹೊಡೆಯಲು ಬಂದಾಗ, ಪಿರ್ಯಾದಿದಾರರು ತನ್ನ ರಡು ಕೈಗಳನ್ನು ಮೇಲಕ್ಕೆ ಎತ್ತಿದಾಗ  ತನ್ನ ಎರಡು ಕೈಗಳ ಮುಂಗೈಯಿಂದ ಕೆಳಭಾಗಕ್ಕೆ ಕಟ್ಟಿಗೆಯಿಂದ ಹೊಡೆದು ರಕ್ತಗಾಯಪಡಿಸಿ,ಎಡಭುಜಕ್ಕೆ ಅದೇ ಕೋಲಿನಿಂದ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ಪಿರ್ಯಾದಿಯನ್ನು ಆರೋಪಿಯು ಕೆಟ್ಟ ಕೆಟ್ಟದಾಗಿ ಅವಾಚ್ಯ ಶಬ್ದಗಳಿಂದ ಬೈದು ಜಮೀನಿನ ಬಳಿ  ತನಗೆ ಇಷ್ಟವಿಲ್ಲದ ಕೆಲಸದಾಳಗಳನ್ನು ಕರೆದುಕೊಂಡು ಬಂದರೆ  ಪ್ರಾಣ ಸಹಿತ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರು.

 

13. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 37/2021 ಕಲಂ. 323, 341, 504 ರೆ/ವಿ 34 ಐಪಿಸಿ :-

     ದಿನಾಂಕ 29-03-2021 ರಂದು ಸಂಜೆ 06.00 ಗಂಟೆಗೆ ಪಿರ್ಯಾಧಿದಾರರಾದ ಇಮ್ರಾನ್ ಬಿನ್ ನನ್ನುಸಾಬಿ, 25 ವರ್ಷ, ಖಾಸಗಿ ಬಸ್ ಚಾಲಕ, ಮುಸ್ಲೀಂ ಜನಾಂಗ, ವಾಸ ಬೋಡಂಪಲ್ಲಿ ಗ್ರಾಮ, ಮುಂಗಾನಹಳ್ಳಿ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಎ.ಕೆ.ಬಿ ಹೆಸರಿನ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುರುತ್ತೇನೆ. ದಿನಾಂಕ 29/03/2021 ರಂದು ತಾನು ಚಿಂತಾಮಣಿಯಿಂದ ಬಿಳ್ಳೂರುಗೆ ಹೋಗಲು ಕೆಎ-40-7425 ನೋಂದಣಿ ಸಂಖ್ಯೆಯ ಖಾಸಗಿ ಬಸ್ ನಲ್ಲಿ ಚಾಲಕನಾಗಿ ಬಸ್ ನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಕೆಂಚಾರ್ಲಹಳ್ಳಿ ಕರೆ ಏರಿ ಬಳಿ ರಸ್ತೆಯಲ್ಲಿ ಸಂಜೆ 4-45 ಗಂಟೆ ಸಮಯದಲ್ಲಿ ಕುರಿಗಳು ಅಡ್ಡ ಬರುತ್ತಿದ್ದರಿಂದ ಬಸ್ ನಿಧಾನ ಮಾಡಿಕೊಂಡು ಬರುತ್ತಿದ್ದಾಗ ಹಿಂದುಗಡೆಯಿಂದ ದ್ವಿಚಕ್ರವಾಹನದಲ್ಲಿ ಬಂದ ಯಾರೋ ಒಬ್ಬಾತ ಏಕಾಏಕಿ ಬಸ್ ಮುಂದೆ ಬಂದು ದ್ವಿಚಕ್ರವಾಹನವನ್ನು ನಿಲ್ಲಿಸಿ ಬಸ್ ಅಡ್ಡಗಟ್ಟಿ ಲೋಫರ್ ನನ್ನ ಮಗನೇ ಸೂಳೇ ನನ್ನ ಮಗನೇ ಸೈಡ್ ನೀಡದೇ ಬರುತ್ತಿಯಾ ಎಂದು ಗಲಾಟೆ ಮಾಡಿ ತನ್ನನ್ನು ಕೆಳಗೆ ಇಳಿಸಿ ಕೈಗಳಿಂದ ಹೊಡೆದು ಎಡಕೈ ರೆಟ್ಟೆಗೆ ಮತ್ತು ಬಲಗೈ ಹೆಬ್ಬರಳಿಗೆ ಕಚ್ಚಿ ರಕ್ತಗಾಯಪಡಿಸಿರುತ್ತಾನೆ. ಆಗ ಆತನ ಬೆಂಬಲಕ್ಕೆ ಬಂದ ಕೆಂಚಾರ್ಲಹಳ್ಳಿ ಗ್ರಾಮದ ಶ್ರೀನಾಥ ಎಂಬಾತನು ಬಂದು ತನ್ನ ಕೆನ್ನೆಗೆ ಹೊಡೆದಿದ್ದು, ಜಗಳ ಬಿಡಿಸಲು ಬಂದ ನಿರ್ವಾಹಕನಾದ ತರುಣ್ ಗೆ ಇಬ್ಬರೂ ಸೇರಿ ಕೈಗಳಿಂದ ಹೊಡೆದಿರುತ್ತಾರೆ.  ಆಗ ಬಸ್ ನಲ್ಲಿದ್ದವರು ಬಂದು ತಮ್ಮನ್ನು ಆವರಿಂದ ಬಿಡಿಸಿರುತ್ತಾರೆ. ದ್ವಿಚಕ್ರವಾಹನ ಸವಾರನ ಹೆಸರು ಗೊಲ್ಲಪಲ್ಲಿ ಗ್ರಾಮದ ಅರುಣ್ ಕುಮಾರ್ ಎಂದು ತಿಳಿದುಬಂದಿರುತ್ತದೆ. ತನ್ನ ಮೇಲೆ ವಿನಾಕಾರಣ ಸೈಡ್ ಬಿಡಲಿಲ್ಲವೆಂದು ಕೈಗಳಿಂದ ಹೊಡೆದು ಕಚ್ಚಿ ಗಾಯಗೊಳಿಸಿದ ಗೊಲ್ಲಪಲ್ಲಿ ಗ್ರಾಮದ ಅರುಣ್ ಕುಮಾರ್ ಮತ್ತು ಕೆಂಚಾರ್ಲಹಳ್ಳಿ ಗ್ರಾಮದ ಶ್ರೀನಾಥ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ .86/2021 ಕಲಂ. 279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್:-

     ದಿನಾಂಕ:-30/03/2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೆಚ್.ಕೆ ಆನಂದ ಬಿನ್ ಕದಿರಪ್ಪ, 24 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಹಾಲಿ ವಾಸ-ಗೊಲ್ಲಹಳ್ಳಿ ಅಂಜಿನಾಪುರ, ಬೆಂಗಳೂರು, ಸ್ವಂತ ಸ್ಥಳ:-ಹಲಸಹಳ್ಳಿ ಗ್ರಾಮ, ಜಡಿಗೇನಹಳ್ಳಿ ಹೋಬಳಿ, ಹೊಸಕೋಟೆ ತಾಲ್ಲೂಕು ಬೆಂ (ಗ್ರಾ) ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಯವರಾದ ಕದಿರಪ್ಪ ಬಿನ್ ಲೇಟ್ ವೆಂಕಟರವಣಪ್ಪ (48 ವರ್ಷ) ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ತನ್ನ ತಾಯಿಯವರ ತವರು ಮನೆ ಇದೇ ಶಿಡ್ಲಘಟ್ಟ ತಾಲ್ಲೂಕು ಗುಡ್ಲನಾರಸಿಂಹನಹಳ್ಳಿ ಗ್ರಾಮವಾಗಿದ್ದು, ದಿನಾಂಕ 28/03/2021 ರಂದು ರಾತ್ರಿ ತನ್ನ ತಂದೆ ಹಾಗು ತನ್ನ ತಾಯಿ ರತ್ನಮ್ಮ ರವರು ಕದಿರಿ ಹುಣ್ಣಿಮೆ ಹಬ್ಬದ ಪ್ರಯುಕ್ತವಾಗಿ ತಮ್ಮ ಗ್ರಾಮದಿಂದ ಗುಡ್ಲನಾರಸಿಂಹನಹಳ್ಳಿ ಗ್ರಾಮಕ್ಕೆ ಬಂದಿರುತ್ತಾರೆ. ದಿನಾಂಕ 29/03/2021 ರಂದು ಸಂಜೆ ತನ್ನ ತಂದೆಯವರು ಅತ್ತಿಗಾನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತನ್ನ ಅತ್ತೆ ನಾರಾಯಣಮ್ಮ ರವರ ಮನೆಗೆ ಹೋಗಿ ಬರುತ್ತೇನೆಂದು ಗುಡ್ಲನಾರಸಿಂಹನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತಮ್ಮ ಸಂಬಂಧಿಕೊಬ್ಬರ ಬಾಬತ್ತು ಕೆಎ-50-ಎಕ್ಸ್-6976 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟೀವಾ ದ್ವಿ ಚಕ್ರ ವಾಹನದಲ್ಲಿ ಅತ್ತಿಗಾನಹಳ್ಳಿ ಗ್ರಾಮಕ್ಕೆ ಹೋಗಿ ತನ್ನ ಅತ್ತೆಯವರನ್ನು ಮಾತನಾಡಿಸಿಕೊಂಡು ವಾಪಸ್ಸು ಗುಡ್ಲನಾರಸಿಂಹನಹಳ್ಳಿ ಗ್ರಾಮಕ್ಕೆ ಬರಲು ಅದೇ ದಿನ ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ಚೀಮಂಗಲ ಗ್ರಾಮದಿಂದ ಸ್ವಲ್ಪ ಮುಂಭಾಗದಲ್ಲಿ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಗುಡ್ಲನಾರಸಿಂಹನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಆ ಸಮಯದಲ್ಲಿ ಕನ್ನಮಂಗಲ ಗ್ರಾಮದ ಕಡೆಯಿಂದ ಬಂದ ಕೆಎ-40-ಟಿ-9876 ನೊಂದಣಿ ಸಂಖ್ಯೆ ಟ್ರಾಕ್ಟರ್ ಅನ್ನು ಅದರ ಚಾಲಕನಾದ ಯಣ್ಣೂರು ಗ್ರಾಮದ ವಾಸಿ ಸುಬ್ರಮಣಿ ಬಿನ್ ಮಾರಪ್ಪ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಂದೆಯವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಟ್ರಾಕ್ಟರ್ ನ ಚಕ್ರ ತನ್ನ ತಂದೆಯವರ ಹೊಟ್ಟೆಯ ಮೇಲೆ ಹತ್ತಿ ಹೊಟ್ಟೆಯ ಭಾಗದಲ್ಲಿ ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಸತ್ತು ಹೋಗಿರುತ್ತಾರೆ. ಇದನ್ನು ಕಂಡ ಟ್ರಾಕ್ಟರ್ ನ ಚಾಲಕನು ತನ್ನ ಟ್ರಾಕ್ಟರ್ ನ ಸಮೇತವಾಗಿ ಪರಾರಿಯಾಗಿರುತ್ತಾನೆ. ನಂತರ ತನಗೆ ಈ ವಿಷಯವನ್ನು ತಮ್ಮ ಸಂಬಂಧಿಕರು ಪೋನ್ ಮಾಡಿ ವಿಷಯವನ್ನು ತಿಳಿಸಿದಾಗ ಕೂಡಲೇ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ತಾನು ಅಲ್ಲಿದ್ದ ಗುಡ್ಲನಾರಸಿಂಹನಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ಮುನಿನರಸಪ್ಪ, ಅತ್ತಿಗಾನಹಳ್ಳಿ ಗ್ರಾಮದ ನಾಗೇಶ್ ಬಿನ್ ಕೃಷ್ಣಪ್ಪ ಹಾಗು ಇತರರನ್ನು ವಿಚಾರ ಮಾಡಲಾಗಿ ಅಪಘಾತವನ್ನುಂಟು ಮಾಡಿ ಪರಾರಿಯಾಗಿರುವ ಟ್ರಾಕ್ಟರ್ ನ ಬಗ್ಗೆ ಹಾಗು ಅದರ ಚಾಲಕನ ಮಾಹಿತಿಯನ್ನು ನೀಡಿರುತ್ತಾರೆ. ನಂತರ ತಾನು ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ತನ್ನ ತಂದೆಯವರ ಶವವನ್ನು ಸಾಗಿಸಿಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇನೆ. ಈ ವಿಷಯವನ್ನು ತಾನು ತಮ್ಮ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ತಂದೆಯವರಿಗೆ ಅಪಘಾತವನ್ನುಂಟು ಮಾಡಿ ಪರಾರಿಯಾಗಿರುವ ಕೆಎ-40-ಟಿ-9876 ಟ್ರಾಕ್ಟರ್ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 30-03-2021 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080