ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.318/2021 ಕಲಂ. 78(3) ಕೆ.ಪಿ ಆಕ್ಟ್ & 66 INFORMATION TECHNOLOGY  ACT 2000:-

     ದಿನಾಂಕ 28/09/2021 ರಂದು ರಾತ್ರಿ 8-45 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ 28/09/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ಟಿ ಬಿ ಕ್ರಾಸ್ ಬಳಿ ಇರುವ ಬೀಡಾ ಅಂಗಡಿಯ ಬಳಿ  ಯಾರೋ ಆಸಾಮಿಗಳು  ಈ ದಿನ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ ಮೂಲಕ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-18 ಅರುಣ್, ಪಿಸಿ-278 ಶಬ್ಬೀರ್, ಪಿಸಿ-319 ವಿನಾಯಕ ರವರು ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಜೀಪ್ ನಂ ಕೆ.ಎ-40-ಜಿ-1444 ರಲ್ಲಿ ಹೊರಟು ಬಾಗೆಪಲ್ಲಿ ತಾಲ್ಲೂಕು ಕಛೇರಿ ಮುಂಭಾಗದ ಬಳಿ ಇದ್ದ ಪಂಚಾಯ್ತುದಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಟಿ ಬಿ ಕ್ರಾಸ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಅಸಾಮಿಗಳು ಮೊಬೈಲ್ ಮುಖಾಂತರ ಹಾಗೂ ನಗದ ಹಣವನ್ನು ಪಣವಾಗಿ ಕಟ್ಟಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟವಾಡುತ್ತಿದ್ದು. ಆಸಾಮಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಮಹಮ್ಮದ್ ರಫೀಕ್ ಬಿನ್ ಅಲ್ಲಾಬಕಷ್, 30 ವರ್ಷ, ಮುಸ್ಲಿಂ ಜನಾಂಗ, ಬೀಡಾ ಅಂಗಡಿ ವ್ಯಾಪಾರ, ವಾಸ ಮದರಾಸದ ಬಳಿ, ಘಂಟಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2] ಅನಿಲ್ ಬಿನ್ ಅಂಜನಯ್ಯ, 26 ವರ್ಷ, ಕಮ್ಮ ನಾಯ್ಡು ಜನಾಂಗ,  ವ್ಯಾಪಾರ, ವಾಸ ಮೈನಗಾನಹಳ್ಳಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು,3] ಬಾಬಾಜಾನ್ ಬಿನ್ ಫಕೃದ್ದೀನ್ ಸಾಬ್, 32 ವರ್ಷ, ಮುಸ್ಲಿಂ ಜನಾಂಗ, ಪಂಚರ್ ಅಂಗಡಿ, ಘಂಟಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು   ಎಂದು ತಿಳಿಸಿರುತ್ತಾರೆ ನಂತರ ಆಸಾಮಿಗಳ  ಬಳಿ ಇದ್ದ ಮೊಬೈಲ್ ಪೋನ್ ಗಳನ್ನು ಪರಿಶಿಲಿಸಲಾಗಿ  ಪೋನ್ ಪೇ, ಗೂಗಲ್ ಪೇ ಮೂಲಕ  ಪಂಜಾಬ್  ಕಿಂಗ್ಸ್  ಗೆಲ್ಲುವುದಾಗಿ  ಹಣವನ್ನು ಬೆಟ್ಟಿಂಗ್ ಕಟ್ಟಿರುತ್ತಾರೆ. ಹಾಗೂ ಮೊಬೈಲ್ ನಲ್ಲಿ ಪಂಜಾಬ್ ಗೆ  4000/- ರೂ ಎಂತ ಒಬ್ಬನೂ   ಮುಂಬಾಯಿ ಇಂಡಿಯನ್ಸ್ ಗೆ 4000/- ರೂ  ಎಂತ ವಾಯ್ಸ್ ಮೇಸಜ್ ಸಹ ಇರುತ್ತದೆ. ನಂತರ ಪಂಚರ ಸಮಕ್ಷಮ ಕ್ರಿಕೆಟ್ ಬೆಟ್ಟಿಂಗ್ ಗೆ ಉಪಯೋಗಿಸಿದ್ದ 1) ರೆಡ್ ಮೀ ಮೊಬೈಲ್ 2) ರೆಡ್ ಮೀ ಮೊಬೈಲ್ 3) ಆಪಲ್ ಐ ಪೋನ್ ಗಳನ್ನು ಪ್ಲೈಟ್ ಮೂಡ್ ಗೆ ಹಾಕಿದ್ದು ಹಾಗೂ ಆರೋಪಿತರು ಪಣಕ್ಕೆ ಕಟ್ಟಿದ್ದ 5500/- ರೂ ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ 8-45 ಗಂಟೆಗೆ ಠಾಣೆಗೆ  ಹಾಜರಾಗಿ ಸದರಿ ಮೇಲ್ಕಂಡ ಮಾಲುಗಳನ್ನು, ಅಸಲು ಪಂಚನಾಮೆ ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.319/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 28/09/2021 ರಂದು ರಾತ್ರಿ 10-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಉಬ್ಬ ಗಿಡ್ಡಯ್ಯ ಬಿನ್ ಫಕಿರಪ್ಪ, 34 ವರ್ಷ,  ಕುರುಬ ಜನಾಂಗ, ಲಾರಿ ಟ್ರಾನ್ಸ್ ಪೋರ್ಟ ಮಾಲೀಕರು, ವಾಸ ಟೀಚರ್ಸ್ ಕಾಲೋನಿ, ಡೋನ್ ಟೌನ್, ಡೋನ್ ತಾಲ್ಲೂಕು, ಕರ್ನೂಲ್ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಶೀಸಾಯಿ  ಮಾರುತಿ ಟ್ರಾನ್ಸ್ ಪೋರ್ಟ ಎಂಬ ಹೆಸರಿನ ಟ್ರಾನ್ಸ್ ಪೋರ್ಟ ಕಂಪೆನಿಯನ್ನು ಹೊಂದಿದ್ದು ನನ್ನ ಬಳಿ ನಾಲ್ಕು ಲಾರಿಗಳಿರುತ್ತವೆ. ಲಾರಿಗಳನ್ನು ಬಾಡಿಗೆಗೆ ಕಳುಹಿಸಿಕೊಡುತ್ತಿರುತ್ತೇನೆ. AP-21-T.Z-3499 ಅಶೋಕ್ ಲೈಲ್ಯಾಂಡ್ ಲಾರಿಗೆ ಚಾಲಕನಾಗಿ ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆಯ ತಾಲ್ಲೂಕು, ಜಂಬಿಗೆ ಮರದ ಹಳ್ಳಿ ಗ್ರಾಮದ ವಾಸಿಯಾದ ಪ್ರದೀಪ್ ಬಿನ್ ನಾಗರಾಜು, ಕುರುಬ ಜನಾಂಗ ರವರನ್ನು ನೇಮಿಸಿಕೊಂಡಿರುತ್ತೇನೆ ಪ್ರದೀಪ್ ರವರು ನನ್ನ ಬಳಿ ಈಗ್ಗೆ ಆರು ವರ್ಷಗಳಿಂದ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ. 25/09/2021 ರಂದು ಶನಿವಾರ ಸಂಜೆ 4-30 ಗಂಟೆ ಸಮಯಕ್ಕೆ ನನ್ನ ಬಾಬತ್ತು AP-21-T.Z-3499 ಅಶೋಕ್ ಲೈಲ್ಯಾಂಡ್ ಲಾರಿಗೆ ರಾಯಚೂರಿನಲ್ಲಿ ಸುಮಾರು 12,00,000/-  ರೂ ಬೆಲೆ ಬಾಳುವ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿಕೊಂಡು ಲಾರಿಯನ್ನು ಚಾಲಕ ಪ್ರದೀಪನು ಚಾಲನೆ ಮಾಡಿಕೊಂಡು ಬೆಂಗಳೂರಿನ ಯಶವಂತಪುರ ಆರ್ ಎಂ ಸಿ ಯಾರ್ಡ್ ಗೆ ಬರಲು  ಹೊರಟಿರುತ್ತಾನೆ. ದಿನಾಂಕ 28/09/2021 ರಂದು ಬೆಳಿಗ್ಗೆ ಪ್ರದೀಪನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ದಿನಾಂಕ 25/09/2021 ರಂದು ಸಂಜೆ AP-21-T.Z-3499 ಅಶೋಕ್ ಲೈಲ್ಯಾಂಡ್ ಲಾರಿಗೆ  ರಾಯಚೂರಿನಿಂದ  ಅಕ್ಕಿ ಲೋಡ್ ಮಾಡಿಕೊಂಡು ಹೊರಟು, ಆಂದ್ರದ ಪತ್ತಿಕೊಂಡ ಎಂಬಲ್ಲಿ ಶನಿವಾರ ರಾತ್ರಿ ಬರುವಾಗ ಟೈರ್ ಹೊಡೆದಿದ್ದು, ಅಲ್ಲಿಯೇ ಮಲಗಿದ್ದು, ನಂತರ ದಿನಾಂಕ: 26/09/2021 ಭಾನುವಾರ ಬೆಳಿಗ್ಗೆ ಪಂಚರ್ ಹಾಕಿಸಿಕೊಂಡು ಹೊರಟು ದಾರಿ ಮಧ್ಯೆ 2 ಬಾರಿ ಪುನಃ ಪಂಚರ ಆಗಿದ್ದರಿಂದ ತುಗಲಿ ಎಂಬಲ್ಲಿ ಲಾರಿಯನ್ನು ನಿಲ್ಲಿಸಿ ಮಲಗಿಕೊಂಡು ರಾತ್ರಿ 7-30 ಗಂಟೆಗೆ ಬಿಟ್ಟು, ಅದೇ ರಾತ್ರಿ ಸುಮಾರು 11-30 ಗಂಟೆಯಲ್ಲಿ ಬಾಗೇಪಲ್ಲಿ ಟೋಲ್ ಬಿಟ್ಟು, ಎನ್ ಹೆಚ್ -44 ರಸ್ತೆಯಲ್ಲಿರುವ ಬಾಗೇಪಲ್ಲಿ ತಾಲ್ಲೂಕು ಪರಗೋಡು ಗ್ರಾಮದ ಬಳಿ ಬಂದಾಗ ನಿದ್ದೆ ಬಂದಿದ್ದರಿಂದ ಲಾರಿಯನ್ನು ರಸ್ತೆಯ  ಬದಿ ನಿಲ್ಲಿಸಿ, ಲಾರಿಯಲ್ಲಿ ಮಲಗಿರುತ್ತಾನೆ. ದಿನಾಂಕ.27/09/2021 ರಂದು ಪ್ರದೀಪನಿಗೆ ಬೆಳಿಗ್ಗೆ ಸುಮಾರು 9-30 ಗಂಟೆ ಸುಮಾರಿಗೆ ಎಚ್ಚರವಾಗಿದ್ದು, ಎದ್ದು ನೋಡಲಾಗಿ ತಾನು ಪರಗೋಡು ಗ್ರಾಮಪಂಚಾಯ್ತಿ ಕಛೇರಿ ಬಳಿ  ರಸ್ತೆಯ ಪಕ್ಕದಲ್ಲಿ ಗಿಡಗಳ ಬಳಿ ಇರುವುದಾಗಿ  ತಿಳಿದು ಗಾಬರಿಯಿಂದ ತಾನು ಲಾರಿ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ಲಾರಿ ಸ್ಥಳದಲ್ಲಿ ಇಲ್ಲದೇ ಇರುವುದನ್ನು ನೋಡಿ, ಯಾವುದೋ ಲಾರಿಯಲ್ಲಿ ಬೆಂಗಳೂರಿನ ಯಶವಂತಪುರ ಆರ್.ಎಂ.ಸಿ ಹಾಗೂ ಪಾರ್ಕಿಂಗ್ ನಲ್ಲಿ ಹುಡುಕಾಡಿ ನೋಡಲಾಗಿ ಎಲ್ಲಿಯೂ ಕಂಡ ಬಂದಿರುವುದಿಲ್ಲ. ನಂತರ ರಾತ್ರಿ ಬಾಗೇಪಲ್ಲಿಗೆ ವಾಪಸ್ ಬಂದು ದಿನಾಂಕ 28/09/2021 ರಂದು ನನಗೆ ಪೋನ್ ಮಾಡಿ ಮೇಲ್ಕಂಡ ವಿಚಾರವನ್ನು ತಿಳಿಸಿರುತ್ತಾನೆ. ಪರಗೋಡು ಗ್ರಾಮದ ಬಳಿ ಎನ್ ಹೆಚ್-44 ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ನನ್ನ ಬಾಬತ್ತು ಸುಮಾರು 18 ಲಕ್ಷ ರೂ ಬೆಲೆ ಬಾಳುವ AP-21-T.Z-3499 ಅಶೋಕ್ ಲೈಲ್ಯಾಂಡ್ ಲಾರಿ ಮತ್ತು ಲಾರಿಯಲ್ಲಿ ತುಂಬಿಸಿದ್ದ ಸುಮಾರು 12 ಲಕ್ಷ ಬೆಲೆ ಬಾಳುವ 30 ಟನ್ ಅಕ್ಕಿ ಮೂಟೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು , ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಕ್ಕಿಯ ಮೂಟೆಗಳನ್ನು ತುಂಬಿರುವ ಲಾರಿಯನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:28.09.2021 ರಂದು ಸಂಜೆ 5-10 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:28.09.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೇತೇನಹಳ್ಳಿ ಗ್ರಾಮದ ವಾಸಿ ರಂಗಪ್ಪ ಬಿನ್ ಲೇಟ್ ಮುನಿಯಪ್ಪ, 35 ವರ್ಷ, ಜಿರಾಯ್ತಿ,. ಈಡಿಗ ಜನಾಂಗ. ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ  ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.428/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ: 29/09/2021 ರಂದು 12.30 AM ಗಂಟೆಗೆ ಠಾಣೆಯ ಘನ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ರವರು ಘನ ನ್ಯಾಯಾಲಯದ ನ್ಯಾಯಾದೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:28/09/2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಠಾಣೆಯ ಪಿ.ಎಸ್.ಐ ಶ್ರೀ ನಾರಾಯಣಸ್ವಾಮಿ.ಕೆ ರವರು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿಗೆ ಸೇರಿದ ಕೈವಾರ ಕ್ರಾಸ್ ಬಳಿ ಇರುವ ಗುರು ಹೋಟಲ್ ನ ಮುಂದೆ ಯಾರೋ ಒಬ್ಬ ಆಸಾಮಿ ಮೊಬೈಲ್ ಮೂಲಕ ಕಾನೂನು ಬಾಹಿರವಾಗಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ದಾಳಿ ಮಾಡಲು ಪಂಚಾಯ್ತಿದಾರರೊಂದಿಗೆ ತಾನು ಮತ್ತು ಸಿ.ಹೆಚ್.ಸಿ-41 ಜಗದೀಶ್, ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-544 ವೆಂಕಟರವಣ,ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-38 ವೇಣುರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ರಾತ್ರಿ 8.45 ಗಂಟೆಗೆ ಕೈವಾರ ಕ್ರಾಸ್ ಗೆ ಹೋಗಿ ಗುರು ಹೋಟಲ್ ನ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಹೋಟಲ್ ನ ಲೈಟ್ ಬೆಳಕಿನಲ್ಲಿ 2 ಜನ ಆಸಾಮಿಗಳು ಕುಳಿತುಕೊಂಡು ಮೊಬೈಲ್ ನೋಡುತ್ತಾ ಕೈಗಳಲ್ಲಿ ಮೊಬೈಲ್ ಫೋನ್ ಗಳನ್ನು ಹಿಡಿದುಕೊಂಡು ನೋಡುತ್ತಾ ಈ ದಿನ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಮಧ್ಯೆ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುತ್ತೆ 1,000/- ರೂ ಎಂದು ಒಬ್ಬ ಆಸಾಮಿಯು, ಪಂಬಾಜ್ ತಂಡ ಗೆಲ್ಲುತ್ತೆ 1,000/- ರೂ ಎಂದು ಮತ್ತೊಬ್ಬ ಆಸಾಮಿ ಕಾನೂನು ಬಾಹಿರವಾಗಿ ಹಣವನ್ನು ಪಣಕ್ಕಿಟ್ಟು ಬೆಟ್ಟಿಂಗ್ ಕೂಗುತ್ತಾ ಇದ್ದು, ತಾವು ಅವರನ್ನು ಸುತ್ತುವರೆದು ಕುಳಿತಿದ್ದವರನ್ನು ಎದ್ದೇಳದಂತೆ ಸಂಜ್ಞೆ ನೀಡುವಷ್ಟರಲ್ಲಿ ಒಬ್ಬ ಆಸಾಮಿಯು ಸ್ಥಳದಿಂದ ಓಡಿ ಹೋಗಿದ್ದು ಸ್ಥಳದಲ್ಲಿ ವಶಕ್ಕೆ ಪಡೆದಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ 1)ಕಾರ್ತಿಕ್ ಬಿನ್ ವೆಂಕಟೇಶಪ್ಪ, 27 ವರ್ಷ, ಗೊಲ್ಲರು, ಹೋಟಲ್ ವ್ಯಾಪಾರ, ವಾಸ:ಕೊಂಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಓಡಿ ಹೋದವನ ಹೆಸರು ವಿಳಾಸ ಕೇಳಲಾಗಿ 2)ಪಾಷ (ತಂದೆಯ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತೆ) ಪೋನ್ ನಂ.9916793355 ಎಂದು ತಿಳಿಸಿರುತ್ತಾನೆ. ಕಾರ್ತಿಕ್ ರವರ ಎಡಗೈಯಲ್ಲಿ ಒಪ್ಪೋ ಕಂಪನಿಯ ಮೊಬೈಲ್ ಫೋನ್, ಬಲಗೈಯಲ್ಲಿ 1,000/- ರೂ ನಗದು ಹಣವನ್ನು ಹಿಡಿದುಕೊಂಡಿದ್ದು, ಈತನನ್ನು ಜಪ್ತಿ ಮಾಡಲಾಗಿ ಈತನ ಬಳಿ ಜೇಬಿನಲ್ಲಿ ಜೂಜಾಟ ಆಡಲು 1,100/- ಸದರಿ ಆಸಾಮಿಯು ಮೊಬೈಲ್ ಫೋನ್ ನಿಂದ ಕ್ರಿಕೆಟ್ ಬೆಟ್ಟಿಂಗ್ ಆಡಿರುವುದಾಗಿ ಕಂಡು ಬಂದಿರುತ್ತೆ. ನಂತರ ಸ್ಥಳದಲ್ಲಿದ್ದ ಆಸಾಮಿಯು ಪಣಕ್ಕೆ ಇಟ್ಟಿದ್ದ ಒಟ್ಟು 2,100/-ರೂ ನಗದು ಹಣ ಮತ್ತು ಹಾಗೂ ಒಂದು ಮೊಬೈಲ್ ನ್ನು ರಾತ್ರಿ 9.00 ರಿಂದ 9.45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಆರೋಪಿಯನ್ನು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು, ಕಾನೂನು ಬಾಹಿರವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 78(1)(a)(vi) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.429/2021 ಕಲಂ. 78(1)(a)(vi) ಕೆ.ಪಿ ಆಕ್ಟ್:-

     ದಿನಾಂಕ: 29/09/2021 ರಂದು 01.00 AM ಗಂಟೆಗೆ ಠಾಣೆಯ ಘನ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ರವರು ಘನ ನ್ಯಾಯಾಲಯದ ನ್ಯಾಯಾದೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 28/09/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಠಾಣೆಯ ಎ.ಎಸ್.ಐ ಶ್ರೀ ಅಶ್ವಥನಾರಾಯಣಸ್ವಾಮಿ, ಸಿ.ಪಿ.ಸಿ-16 ಲೋಕೇಶ್ ಮತ್ತು ಸಿ.ಪಿ.ಸಿ-498 ಚಲಪತಿರವರು ಪಿ.ಎಸ್.ಐ ಸಾಹೇಬರ ಆದೇಶದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗವಿ ರಸ್ತೆಯ ಬಳಿ ರಾತ್ರಿ ಗಸ್ತು ಮಾಡುತ್ತಿದ್ದಾಗ ಠಾಣೆಯ ಪಿ.ಎಸ್.ಐ ರವರರಾದ ಶ್ರೀ ನಾರಾಯಣಸ್ವಾಮಿ ರವರಿಗೆ ಬಂದ ಖಚಿತ ಮಾಹಿತಿಯಂತೆ ಸಾಹೇಬರು ತನಗೆ ಕರೆ ಮಾಡಿ ಠಾಣಾ ಸರಹದ್ದಿಗೆ ಸೇರಿದ ಹುಲಗುಮ್ಮನಹಳ್ಳಿ ಕ್ರಾಸ್ ಬಳಿ ಬಳಿ ಯಾರೋ ಆಸಾಮಿಗಳು ಮೊಬೈಲ್ ಮೂಲಕ ಕಾನೂನು ಬಾಹಿರವಾಗಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುವುದಾಗಿ ತಿಳಿಸಿದ್ದು, ಅದರಂತೆ ತಾವು ದಾಳಿ ಮಾಡಲು ಪಂಚಾಯ್ತಿದಾರರೊಂದಿಗೆ ತಾನು ಮತ್ತು ಸಿ.ಪಿ.ಸಿ-16 ಲೋಕೇಶ್, ಸಿ.ಪಿ.ಸಿ-498 ಚಲಪತಿರವರೊಂದಿಗೆ ತಮ್ಮ ದ್ವಿಚಕ್ರ ವಾಹನಗಳಲ್ಲಿ ರಾತ್ರಿ 9.15 ಗಂಟೆಗೆ ಹುಲಗುಮ್ಮನಹಳ್ಳಿ ಕ್ರಾಸ್ ಬಳಿ ಹೋಗಿ ದ್ವಿಚಕ್ರ ವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ನೋಡಲಾಗಿ ಸದರಿ ಕ್ರಾಸಿನ ಮುಂದೆ ಲೈಟ್ ಬೆಳಕಿನಲ್ಲಿ 4 ಜನ ಆಸಾಮಿಗಳು ಕುಳಿತುಕೊಂಡು ಮೊಬೈಲ್ ನೋಡುತ್ತಾ ಕೈಗಳಲ್ಲಿ ಮೊಬೈಲ್ ಫೋನ್ ಗಳನ್ನು ಹಿಡಿದುಕೊಂಡು ನೋಡುತ್ತಾ ಈ ದಿನ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಮಧ್ಯೆ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುತ್ತೆ 500/- ರೂ ಎಂದು ಒಬ್ಬ ಆಸಾಮಿಯು, ಪಂಬಾಜ್ ತಂಡ ಗೆಲ್ಲುತ್ತೆ 500/- ರೂ ಎಂದು ಮತ್ತೊಬ್ಬ ಆಸಾಮಿ ಕಾನೂನು ಬಾಹಿರವಾಗಿ ಹಣವನ್ನು ಪಣಕ್ಕಿಟ್ಟು ಬೆಟ್ಟಿಂಗ್ ಕೂಗುತ್ತಾ ಇದ್ದು, ನಾವು ಅವರನ್ನು ಸುತ್ತುವರೆದು ಕುಳಿತಿದ್ದವರನ್ನು ಎದ್ದೇಳದಂತೆ ಸಂಜ್ಞೆ ನೀಡುವಷ್ಟರಲ್ಲಿ ಇಬ್ಬರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು ಸ್ಥಳದಲ್ಲಿ ವಶಕ್ಕೆ ಪಡೆದಿದ್ದ ಇಬ್ಬರೂ ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 1).ಇಮ್ರಾನ್ ಬಿನ್ ಚಾಂದ್ ಪಾಷ, 28 ವರ್ಷ, ಮುಸ್ಲಿಂ ಜನಾಂಗ, ಕಾರ್ಪೇಂಟರ್ ಕೆಲಸ, ಕೈವಾರ ಕ್ರಾಸ್, ಚಿಂತಾಮಣಿ ತಾಲ್ಲೂಕು, 2).ಅತೀಖ್ ಬಿನ್ ಅಬ್ದುಲ್ ಗಫಾರ್, 27 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸಿಕ್ಕಿ ಬಿದ್ದವರನ್ನು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 3).ಮುನಿರಾಜು ಹುಲಗುಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಪೋನ್ ನಂ 9902197935, 4).ಅಬ್ದುಲ್, ಕೈವಾರ ಗ್ರಾಮ, ಪೋನ್ ನಂ.9113963200 ಎಂದು ತಿಳಿಸಿರುತ್ತಾನೆ. ಇಮ್ರಾನ್ ರವರ ಎಡಗೈಯಲ್ಲಿ ವಿವೋ ಸ್ಮಾರ್ಟ್ ಮೊಬೈಲ್ ಫೋನ್, ಬಲಗೈಯಲ್ಲಿ 500/- ರೂ ನಗದು ಹಣವನ್ನು ಹಿಡಿದುಕೊಂಡಿದ್ದು, ಅತೀಖ್ ರವರ ಬಲಕೈಯಲ್ಲಿ ರೆಡ್ ಮೀ ಸ್ಮಾರ್ಟ್ ಮೊಬೈಲ್ ಫೋನ್, ಎಡ ಕೈಯಲ್ಲಿ 500/- ರೂ ನಗದು ಹಣವನ್ನು ಹಿಡಿದುಕೊಂಡಿದ್ದು, ಸಿಕ್ಕಿಬಿದ್ದವರನ್ನು ಜಪ್ತಿ ಮಾಡಲಾಗಿ ಇಮ್ರಾನ್ ಬಳಿ ಜೇಬಿನಲ್ಲಿ ಜೂಜಾಟ ಆಡಲು 800/- ಮತ್ತು ಅತೀಖ್ ರವರ ಜೇಬಿನಲ್ಲಿ 900/- ರೂ ಹಣ ಇರುತ್ತದೆ. ಸದರಿ ಆಸಾಮಿಗಳು ಮೊಬೈಲ್ ಫೋನ್ ನಿಂದ ಕ್ರಿಕೆಟ್ ಬೆಟ್ಟಿಂಗ್ ಆಡಿರುವುದಾಗಿ ಕಂಡು ಬಂದಿರುತ್ತೆ. ನಂತರ ಸ್ಥಳದಲ್ಲಿದ್ದ ಆಸಾಮಿಗಳು ಪಣಕ್ಕೆ ಇಟ್ಟಿದ್ದ ಒಟ್ಟು 2,700/-ರೂ ನಗದು ಹಣ ಮತ್ತು 2 ಮೊಬೈಲ್ ಗಳನ್ನು ರಾತ್ರಿ 9.20 ರಿಂದ 10.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಆರೋಪಿಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು ಕಾನೂನು ಬಾಹಿರವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 78(1)(a)(vi) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.232/2021 ಕಲಂ. 506,34,504 ಐ.ಪಿ.ಸಿ:-

     ದಿನಾಂಕ 28/09/2021 ರಂದು ರಾತ್ರಿ 9-00 ಗಂಟೆಗೆ ಘನ ನ್ಯಾಐಆಲಯದ ಕರ್ತವ್ಯ ಪಿಸಿ 430 ರವರು ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿಕೊಳ್ಳಲು ಠಾಣಾ ಎನ್ ಸಿ.ಆರ್ 292/2021 ರನ್ನು ಘನ ನ್ಯಾಯಾದಲ್ಲಿ ಅನುಮತಿ ನೀಡಿದ್ದನ್ನು ಹಾಜರುಪಡಿಸಿದ ಅನುಮತಿಯ ಸಾರಾಂಶವೇನೆಂದರೆ ದಿ:27.09.2021 ರಂದು ಕೊಂಡಾವಲಹಳ್ಳಿ ಗ್ರಾಮದ ಕೆವಿ ಸುರೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ:21.09.2021 ರಂದು ಶಾಲೆಯ ವಾಹನ ಚಾಲನೆ ಕೆಲಸ ನಿರ್ವಹಿಸುತ್ತಿದ್ದಾಗ ತಮ್ಮ ಗ್ರಾಮದ ನಾರಾಯಣಪ್ಪ ಮತ್ತು ಆತನ ಮಗನು ಪವನ್ ಎಂಬುವನು ಬಂದು ನೀನು ನನ್ನ ತಾಯಿಯವರಿಗೆ ಪೋನ್ ಮಾಡುತ್ತಿದ್ದೆ ಎಂದು ಅಕ್ರಮ ಗಲಾಟೆ ಮಾಡಿ ಹೀನಾಯ ಮಾತುಗಳಿಂದ ಬೈದರು. ಹಾಗೂ ಪ್ರತಿದಿನ ನನ್ನನ್ನು ನೋಡಿದ ತಕ್ಷಣ ನೀನು ನನ್ನ ಹೆಂಡತಿಯನ್ನು ಅಕ್ರಮ ಸಂಬಂದ ಇಟ್ಟುಕೊಂಡಿದ್ದೀಯ ಎಂದು ಸಂಶಯ ಪಟ್ಟು ದಿನಾಲು ವಿನಾಕಾರಣ ಗಲಾಟೆ ಮಾಡುತ್ತಾನೆ ಹಾಗೂ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಹಾಗೂ ದಿ:24.09.2021 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಕುಡಿದು ಬಂದು ರಸ್ತೆಯಲ್ಲಿ ನನ್ನ ಹೆಸರನ್ನು ಇಟ್ಟು ಬಾಯಿಗೆ ಬಂದಂತೆ ಬೈದಿರುತ್ತಾನೆ. ಆದ್ದರಿಂದ ಮೇಲ್ಕಂಡವರನ್ನು ಪೊಲೀಸ್ ಠಾಣೆಗೆ ಕರೆಸಿ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯಾದೊರಕಿಸಕೊಡಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.233/2021 ಕಲಂ. 504 ಐ.ಪಿ.ಸಿ:-

     ದಿನಾಂಕ 28/09/2021 ರಂದು ರಾತ್ರಿ 9-30 ಗಂಟೆಗೆ ಘನ ನ್ಯಾಐಆಲಯದ ಕರ್ತವ್ಯ ಪಿಸಿ 430 ರವರು ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿಕೊಳ್ಳಲು ಠಾಣಾ ಎನ್ ಸಿ.ಆರ್ 293/2021 ರನ್ನು ಘನ ನ್ಯಾಯಾದಲ್ಲಿ ಅನುಮತಿ ನೀಡಿದ್ದನ್ನು ಹಾಜರುಪಡಿಸಿದ ಅನುಮತಿಯ ಸಾರಾಂಶವೇನೆಂದರೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಾವಲಹಳ್ಳಿ ಗ್ರಾಮದ ನಾರಾಯಣಪ್ಪನವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರಿಗೆ ಈಗ್ಗೆ ಸುಮಾರು 30 ವರ್ಷಗಳ ಹಿಂದೆ ದೊಡ್ಡಬಳ್ಳಾಪುರ ಗ್ರಾಮದ ಲಿಂಗನಹಳ್ಳಿಯ ಪ್ರಮೀಳಮ್ಮ ಎಂಬುವರೊಂದಿಗೆ ಮದುವೆಯಾಗಿದ್ದು ಈಗ್ಗೆ 8 ವರ್ಷಗಳಿಂದ ತವರೂರಿನಲ್ಲಿ ಇರುತ್ತಾಳೆ. ನಮ್ಮ ಗ್ರಾಮದ ಕೆ.ವಿ.ಕೇಶವ ಬಿನ್ ಲೇಟ್ ವೆಂಕಟೇಶಪ್ಪನವರು ಅನೈತಿಕ ಸಂಬಂದ ಇಟ್ಟುಕೊಂಡು ನಮ್ಮ ಸಂಸಾರ ಕೆಡಿಸಿರುತ್ತಾನೆ. ನನ್ನ ಮಗನೂ ಕೂಡ ಸುರೇಶ್ ರವರು ತನ್ನ ಹೆಂಡತಿ ಜೊತೆ ಮಾತನಾಡುವುದನ್ನು ನೋಡಿ, ನನ್ನ ಹೆಂಢತಿಯನ್ನು ಗಲಾಟೆ ಮಾಡಿರುತ್ತಾನೆ. ಸುರೇಶರವರು ದಿ:23.09.2021 ರಂದು ತನ್ನ ಮೇಲೆ ಗಲಾಟಎಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಮತ್ತು ಸೈಜು ದೊಣ್ಣೆಯಿಂದ ನನ್ನ ಮಗನನ್ನು ಹೊಡೆಯಲು ಬಂದಿರುತ್ತಾನೆ. ಆದ್ದರಿಂದ ಸುರೇಶರವರು ನನ್ನ ತಂಟೆಗೆ ಬರದಂತೆ ಜಗಳ ಮಾಡದಂತೆ ಸೂಕ್ತ ಬಂದೋಬಸ್ತ್ ಮಾಡಿಕೊಡಬೇಕೆಂದು ಪ್ರಾರ್ಥನೆ, ಎಂದು ನೀಡಿದ ದೂರಾಗಿರುತ್ತೆ.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.183/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ;28/09/2021 ರಂದು ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಸರಸ್ವತಮ್ಮ ರವರು ಮಾಲು ಆರೋಪಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:28/09/2021 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-80 ಕೃಷ್ಣಪ್ಪ ಮತ್ತು ಪಿಸಿ-152 ಜಯಣ್ಣ ಹಾಗೂ ಜೀಪ್ ಚಾಲಕರಾದ ಎ.ಹೆಚ್.ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-58 ರಲ್ಲಿ ಗೌರಿಬಿದನೂರು ತಾಲ್ಲುಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ 02.30 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ  ಖಚಿತ ಮಾಹಿತಿ ಏನೆಂದರೆ ಡಿಪಾಳ್ಯ ಕ್ರಾಸ್ ಗೆ ಹೋಗುವ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಮದ್ಯವನ್ನು ಚೀಲದಲ್ಲಿ ಎತ್ತಿಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ  ಡಿಪಾಳ್ಯ ಗ್ರಾಮದ ಸ್ಟಾರ್ ಮೆಡಿಕಲ್ಸ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಆಸಾಮಿಯನ್ನು ಹಿಡಿದು  ಹೆಸರು ವಿಳಾಸ ಕೇಳಲಾಗಿ ನಾಗೇಶ ಬಿನ್ ಗಂಗಪ್ಪ, 34 ವರ್ಷ, ನಾಯಕ ಜನಾಂಗ, ವದ್ದೇನಹಳ್ಳಿ ಗ್ರಾಮ, ಡಿಪಾಳ್ಯ ಹೋಬಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಆತನ ಬಳಿ ಇದ್ದ ಚೀಲವನ್ನು  ಪರಿಶೀಲಿಸಲಾಗಿ 1] 90 ಎಂಎಲ್ ನ ಮದ್ಯ ತುಂಬಿದ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 96 ಟೆಟ್ರಾ ಪಾಕೆಟ್ ಗಳು ಇದ್ದು ನಂತರ ಆಸಾಮಿಯನ್ನು ಕೇಳಲಾಗಿ ಮದ್ಯವನ್ನು ಶಕ್ತಿ ವೈನ್ಸ್ ನ ಕ್ಯಾಷಿಯರ್ ಗಂಗಾಧರ ರವರ ಬಳಿ ಖರೀದಿಸಿ ಹೆಚ್ಚಿನ ಬೆಲೆಗೆ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಹಾಗೂ ತನ್ನಲ್ಲಿ ಯಾವುದೇ ರೀತಿಯ ಪರವಾನಗಿ ಇಲ್ಲವೆಂತ ತಿಳಿಸಿರುತ್ತಾನೆ.  ಸದರಿ ಮದ್ಯದ ಸಾಮರ್ಥ್ಯವು 8 ಲೀಟರ್ 640 ಎಂ.ಎಲ್ ಇದ್ದು ಇದರ ಬೆಲೆ 3372 ರೂ ಆಗಿರುತ್ತದೆ. ನಂತರ ಆಸಾಮಿಯನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಕೇಸಿನ ಮುಂದಿನ ಕ್ರಮಕ್ಕಾಗಿ ಮೇಲ್ಕಂಡ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆಸಾಮಿ ಮತ್ತು ಮಾಲುಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಆಸಾಮಿ, ಬಾರ್ ಮಾಲಿಕರು ಹಾಗೂ ಕ್ಯಾಷಿಯರ್ ಗಂಗಾಧರ ರವರ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ವರದಿ.

ಇತ್ತೀಚಿನ ನವೀಕರಣ​ : 29-09-2021 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080