ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.254/2021 ಕಲಂ. 341,353,34 ಐ.ಪಿ.ಸಿ:-

    ದಿನಾಂಕ: 28/08/2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎನ್ಎಲ್ ರಘು ಬಿನ್ ಲಕ್ಷ್ಮಣರೆಡ್ಡಿ, 42ವರ್ಷ, ವಕ್ಕಲಿಗರು, ಚಾಲಕ/ನಿರ್ವಾಹಕ ಬಿಲ್ಲೇ ಸಂಖ್ಯೆ 289 ಬಾಗೇಪಲ್ಲಿ ಘಟಕ. ವಾಸ: 11ನೇ ವಾರ್ಡ್, ಬಾಗೇಪಲ್ಲಿ ಪುರ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 26/08/2021 ರಂದು ಕರಾರಸಾನಿಗಮ ಚಿಕ್ಕಬಳ್ಳಾಪುರ ವಿಭಾಗದ ಬಾಗೇಪಲ್ಲಿ ಘಟಕಕ್ಕೆ ಸೇರಿದ ವಾಹನ ಸಂಖ್ಯೆ ಕೆಎ 40 ಎಫ್ 702 ಮಾರ್ಗ ಸಂಖ್ಯೆ 70 ರಲ್ಲಿ ನಾನು ನಿರ್ವಾಹಕನಾಗಿ ಕರ್ತವ್ಯವನ್ನು ನಿರ್ಹಿಸುತ್ತಿದ್ದಸು ಸಮಯ ಸುಮಾರು 16-30 ಗಂಟೆ ರಲ್ಲಿ ಬಾಗೇಪಲ್ಲಿ ಬಸ್ ನಿಲ್ದಾಣ ಬಿಟ್ಟು ಮದಕವಾರಿಪಚಲ್ಲಿ ಗ್ರಾಮಕ್ಕೆ ತೆರಳುತ್ತಿದ್ದು ಈ ಸಂದರ್ಭದಲ್ಲಿ ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ನಮ್ಮ ವಾಹನಕ್ಕೆ ಸುಮಾರು 10-12 ಜನ ವಿದ್ಯಾರ್ಥಿ ಮತ್ತು ಪ್ರಯಾಣಿಕರು ಮಾಮಿಡಿಕಾಯಲಪಲ್ಲಿ ಗ್ರಾಮದವರು ಹತ್ತಿಕೊಂಡಿರುತ್ತಾರೆ. ಸದರಿ ವಾಹನವನ್ನು ನಮೂನೆ-4 ರಂತೆ ಮಾರ್ಗಾಚರಣೆ3 ಮಾಡಿದ್ದು ಈ ಸಮಯದಲ್ಲಿ ಮಾಮಿಡಿಕಾಯಲಪಲ್ಲಿ ಕ್ರಾಸ್ ಮೂಲಕ ಮಾತ್ರ ಬಸ್ ಸಂಚರಿಸಲು ಆದೇಶವಿರುತ್ತದೆ. ಆದರೆ ಸದರಿ ವಿದ್ಯಾರ್ಥಿ ಮತ್ತು ಪ್ರಯಾನಿಕರು ಮಾಮಿಡಿಕಾಯಲಪಲ್ಲಿ ಗ್ರಾಮದ ಒಳಗೆ ವಾಹನ ಬರಬೇಕೆಂದು ಚಾಲಕ ಮತ್ತು ನಿರ್ವಾಹಕರಾದ ನಮ್ಮ ಜೊತೆ ವಾಗ್ವಾದ ಮಾಡಿರುತ್ತಾರೆ. ಬಸ್ ನಿಲ್ದಾಣದ ಸಂಚಾರ ನಿಯಂತ್ರಕರ ಸೂಚನೆ ಮೇರೆಗೆ ನಾವು ವಾಹನವನ್ನು ನಾವು ಮಾಮಿಡಿಕಾಯಲಪಲ್ಲಿ ಗ್ರಾಮದೊಳಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರಯಾಣಿಕರು ಇಳಿದ ನಂತರ ಸಮಯ 17-45 ಗಂಟೆ ಯಲ್ಲಿ ಪ್ರಯಾಣಿಕರಲ್ಲಿ ಒಬ್ಬರಾದ ರಾಜ್ ಕುಮಾರ್ ಬಿನ್ ರಾಮಕೃಷ್ಣಪ್ಪ ಮಾಮಿಡಿಕಾಯಲಪಲ್ಲಿ ಗ್ರಾಮ ರವರು ಮತ್ತು ಅವರ ತಂದೆಯಾದ ರಾಮಕೃಷ್ಣಪ್ಪ ರವರು ನಮ್ಮ ವಾಹನಕ್ಕೆ ಅಡ್ಡ ಕುಳಿತು ನಮ್ಮ ಗ್ರಾಮದೊಳಗೆ ವಾಹನ ಬಂದು ಹೋಗುವಂತೆ, ಇಲ್ಲದಿದ್ದರೆ ನಾವು ಬಸ್ಸನ್ನು ಕಾರ್ಯಾಚರಣೆ ಮಾಡಲು ಬಿಡುವುದಿಲ್ಲವೆಂದು ಬಸ್ಸಿನ ಮುಂದೆ ಕುಳಿತು ಸುಮಾರು ಒಂದು ಗಂಟೆ ಮೂವತ್ತು  ನಿಮಿಷಗಳ ಕಾಲ ನಮ್ಮ ವಾಹನವನ್ನು ಅಲ್ಲಿಂದ ಚಲಿಸಲು ಬಿಡದೆ ತಡೆಯೊಡ್ಡಿ ನಮ್ಮ ಕರ್ತವ್ಯಕ್ಕೆ ಟಡ್ಡಿಪಡಿಸಿರುತ್ತಾರೆ. ಸದರಿ ವಿಷಯವನ್ನು ಘಟಕ ವ್ಯವಸ್ಥಾಪಕರಿಗೆ ತಿಳಿಸಿದ್ದು ನಂತರ ಪೊಲೀಸರು ಬಂದು ವಾಹನದ ಕಾರ್ಯಾಚರಣೆಗೆ ಸಮಯ 19-15 ಗಂಟೆಯಲ್ಲಿ ಅನುವು ಮಾಡಿಕೊಟ್ಟರುತ್ತಾರೆ. ಸದರಿ ದೂರಿಗೆ ಸಂಬಂಧಿಸಿದಂತೆ ನಾನು ದಿನಾಂಕ: 26/08/2021 ರಿಂದ 28/08/2021 ರವರೆಗೂ ಕರ್ತವ್ಯ ನಿರತವಾಗಿದ್ದು ಈ ಕುರಿತು ದೂರು ಸಲ್ಲಿಸಲು ಸಾಧ್ಯವಾಗಿರದ ಕಾರಣ ದೂರು ಸಲ್ಲಿಸಲು ತಡವಾಗಿರುತ್ತೆ. ಆದ್ದರಿಂದ ಸರ್ಕಾರಿ ಸಾರ್ವಜನಿಕ ಸೇವೆಗೆ ಅಡ್ಡಿಪಡಿಸಿ ಸಂಸ್ಥೆಯ ಆದಾಯಕ್ಕೆ ನಷ್ಟ ಉಂಟುಮಾಡಿ ನಮ್ಮ ವಾಹನವನ್ನು ಅಡ್ಡಗಟ್ಟಿದವರ ಮೇಲೆ ಕಾನೂನು ರೀತಿ ಕ್ರಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.138/2021 ಕಲಂ. 15(A),32(3) ಕೆ.ಇ ಆಕ್ಟ್:-

   ದಿನಾಂಕ:28.08.2021 ರಂದು ಮದ್ಯಾಹ್ನ 12-05 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:28.08.2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ತಾನು ಗಸ್ತಿನಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕಣಜೇನಹಳ್ಳಿ ಗ್ರಾಮದ ವಾಸಿ ರಾಹುಲ್ ಬಿನ್ ತಿಪ್ಪೆಸ್ವಾಮಿ, 20 ವರ್ಷ, ಲಂಬಾಣಿ ಜನಾಂಗ, ಬಾರ್ ನಲ್ಲಿ ಕೆಲಸ ವಾಸ: ಹಾಲಿ ವಾಸ ಕಣಜೇನಹಳ್ಳಿ ಗ್ರಾಮ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ: 28/08/2021 ರಂದು  ಸಂಜೆ  4-00  ಗಂಟೆಯ ಸಮಯಕ್ಕೆ  ಪಿರ್ಯಾದಿ ಶಿವಯ್ಯ  ಬಿನ್  ಶ್ರೀರಾಮುಲು 25ವರ್ಷ  ತಲಾರಿ ಜನಾಂಗ, AP-02-Y-4758 ಈಚೇರ್ ವಾಹನದ ಮಾಲೀಕ ವಾಸ:  ನಂ. 5/320 ಸಂಜಯನಗರ  ಧರ್ಮಾವರಂ ಟೌನ್. ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ  ನೀಡಿದ  ದೂರಿನ ಸಾರಾಂಶವೇನೆಂದರೆ  ತಾನು  AP-02-Y-4758 ಈಚೇರ್ ವಾಹನದ ಮಾಲೀಕನಾಗಿರುತ್ತೇನೆ. ಈ ವಾಹನಕ್ಕೆ ಶಿವಪ್ರಸಾದ್ ಬಿನ್ ಲೇಟ್ ಶ್ರೀನಿವಾಸಲು  ಬಿ.ಸಿ. ಕಾಲೋನಿ ಚಿನ್ನಕೊತ್ತಪಲ್ಲಿ ಗ್ರಾಮ ರವರನ್ನು ಚಾಲಕನಾಗಿ ನೇಮಿಸಿ ಕೊಂಡಿರುತ್ತೇನೆ. ಸದರಿ ವಾಹನಕ್ಕೆ ದಿನಾಂಕ: 26/08/2021 ಅನಂತಪುರದಲ್ಲಿ  ಪೈಂಟಿಂಗ್ ಪೌಡರ್ ನ್ನು ಲೋಡು ಮಾಡಿಸಿ ಬೆಂಗಳೂರು ನಲ್ಲಿ ಅನ್ ಲೋಡು ಮಾಡಿಕೊಂಡು ಬರಲು   ಚಾಲಕನಾಗಿ ಶಿವಪ್ರಸಾದ್  ಮತ್ತು ಕ್ಲೀನರ್ ಆಗಿ ನವೀನ್ ಬಿನ್ ತಿರುಪಾಲು ತಿಪ್ಪೇಪಲ್ಲಿ ರವರನ್ನು ಕಳುಹಿಸಿದ್ದೆ.  ಅವರು ದಿನಾಂಕ: 27/08/2021 ರಂದು ಅನ್ ಲೋಡು ಮಾಡಿಕೊಂಡು  ನಂತರ ಬೆಂಗಳೂರು ನಲ್ಲಿ ಟ್ರಾನ್ಸ್ ಪೋರ್ಟ್ಸ್  ಬುಕ್ಕಿಂಗ್ ಕಛೇರಿಯಲ್ಲಿ  ಪಾರ್ಸೆಲ್ ವಸ್ತುಗಳನ್ನು  ಲೋಡು ಮಾಡಿಸಿಕೊಂಡು ಬೆಂಗಳೂರಿನಿಂದ ಅನಂತಪುರಕ್ಕೆ ಎನ್.ಹೆಚ್. 44 ರಸ್ತೆಯಲ್ಲಿ ಬರುತ್ತಿದ್ದಾಗ  ದಿನಾಂಕ: 27/08/2021 ರಂದು  ಮದ್ಯರಾತ್ರಿ 12-00 ಗಂಟೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಶೆಟ್ಟಿಗೆರೆ  ಕ್ರಾಸ್ ಸಮೀಪ ಬರುತ್ತಿದ್ದಾಗ  ವಾಹನದ ಹಿಂದಿನ ಬಲಭಾಗದ ಟೈರು ಹೊಡೆದು ಹೋಗಿರುವುದಾಗಿ ಕ್ಲೀನರ್  ನವೀನ್ ಪೋನು ಮಾಡಿ ವಿಷಯ ತಿಳಿಸಿದನು.  ಇದಾದ ನಂತರ  ವಾಹನದ ಚಕ್ರವನ್ನು ಬದಲಾಯಿಸಿಕೊಳ್ಳುತ್ತಿದ್ದಾಗ ಬೆಳಗಿನ ಜಾವ 02-00 ಗಂಟೆಯ ಸಮಯದಲ್ಲಿ ಬೆಂಗಳೂರು ಕಡೆಯಿಂದ KA-51-AG-0163 ನಂಬರಿನ ಲಾರಿಯ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ನಮ್ಮ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದರಿಂದ  ವಾಹನವು  ರಸ್ತೆಯ ಬದಿಗೆ ಉರುಳಿಕೊಂಡಿದ್ದು ಅಪಘಾತದಲ್ಲಿ ಚಕ್ರವನ್ನು ಬದಲಾಯಿಸುತ್ತಿದ್ದ ಚಾಲಕ ಶಿವ ಪ್ರಸಾದ ಮತ್ತು ಕ್ಲೀನರ್ ರವರಿಗೆ ಗಾಯಗಳಾಗಿರುವುದಾಗಿ ವಿಚಾರ ತಿಳಿಸಿದನು. ಆ ಕೂಡಲೇ ಸ್ಥಳಕ್ಕೆ ಬಂದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆಂದು ವಿಚಾರ ತಿಳಿಯಿತು. ತಾನು  ಚಿಕ್ಕಬಳ್ಳಾಪುರಕ್ಕೆ ಬಂದು ವಿಚಾರ ಮಾಡಲಾಗಿ  ಗಾಯಳುಗಳನ್ನು  ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದು  ಗಾಯಾಳುಗಳನ್ನು  ಬೆಂಗಳೂರಿನ  ವಿಕ್ಟೋರಿಯಾ, ನಿಮ್ಹಾನ್ಸ್. ಸಂಜಯ ಗಾಂಧಿ ಆಸ್ಪತ್ರೆ ಮತ್ತು ಸೆಂಟ್ ಜಾನ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಾಲಕ ಶಿವಪ್ರಸಾದ್ ನನ್ನು ಪರೀಕ್ಷಿಸಿ ಮಾರ್ಗಮದ್ಯ ಮೃತಪಟ್ಟಿರುತ್ತಾನೆಂದು ಮತ್ತು  ಕ್ಲೀನರ್ ನವೀನ್ ರವರು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು  ಈ ಅಪಘಾತವು ಕ್ಕೆ KA-51-AG-0163 ನಂಬರಿನ ಲಾರಿಯ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ್ದು ಆರೋಪಿ ಚಾಲಕನ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ  ಕೋರಿ ನೀಡಿದ  ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.204/2021 ಕಲಂ. 279,337 ಐ.ಪಿ.ಸಿ:-

    ದಿನಾಂಕ: 28/08/2021 ರಂದು ಪಿರ್ಯಾದುದಾರರಾದ ಗಂಗಾಧರಯ್ಯ ಬಿನ್ ನರಸಿಂಹಪ್ಪ, 34 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಗುಂಡಗಲ್ಲು ಗ್ರಾಮ, ಕೊಡಿಗೆನಹಳ್ಳಿ ಹೊಬಳಿ, ಮದುಗಿರಿ ತಾಲ್ಲೂಕ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಮಾವನ ಮಗಳಾದ ಗಗನ ಆರ್ ಬಿನ್ ರಮೇಶ್, 15 ವರ್ಷ ರವರನ್ನ ನನ್ನ ಸ್ವಂತ ಊರಿನಲ್ಲಿ ನಾನೆ ಸಾಕುತಿದ್ದು, ವಿದ್ಯಾಬ್ಯಾಸವನ್ನು ಮಾಡಿಸಿರುತ್ತೆನೆ, ಇವಳು ವಿದುರಾಶ್ವತ್ಥದಲ್ಲಿರುವ ಸತ್ಯಾಗ್ರಹ ಪ್ರೌಡಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು ಕೊರೊನಾ ಖಾಯಿಲೆ ಕಾರಣದಿಂದ ಶಾಲೆಯು ರಜೆ ಇರುವುದರಿಂದ ಅವರ ತಂದೆಯಾದ ರಮೇಶ್ ಬಿನ್ ಲೇಟ್ ನರಸಿಂಹಪ್ಪ ರವರೊಂದಿಗೆ ಹಿಂದೂಪುರದ ಶ್ರೀಕಂಠಪುರಕ್ಕೆ ಹೊಗಿರುತ್ತಾಳೆ, ಶಾಲೆಯು ಪ್ರಾರಂಭವಾಗಿದ್ದರಿಂದ ದಿನಾಂಕ 27/08/2021 ರಂದು ಶಾಲೆಗೆ ಬರಲು ಹಿಂದುಪುರದಿಂದ SVMS ಖಾಸಗಿ ಬಸ್ಸ್ ನಂ AP 39 TD 8528 ರ ಬಸ್ಸ್ ಹತ್ತಿ ಸುಮಾರು ಬೆಳಿಗ್ಗೆ 8-45 ಕ್ಕೆ ವೀದುರಾಶ್ವತ್ಥ ಬಸ್ಸ್ ನಿಲ್ದಾಣದಲ್ಲಿ ಬಸ್ಸ್ ಇಳಿಯುವಾಗ ಚಾಲಕ ಏಕಾ ಏಕಿ ಬಸ್ಸ್ ಮುಂದಕ್ಕೆ ಚಾಲನೆ ಮಾಡಿದ್ದರಿಂದ ಗಗನ ಆರ್ ಬಸ್ಸ್ ನಿಂದ ಕೆಳಗೆ ಬಿದ್ದಿರುತ್ತಾಳೆ, ಅಲ್ಲಿ ಇದ್ದ ಆಟೋ ಚಾಲಕರಾದ ನರಸಿಂಹಮೂರ್ತಿ ಬಿನ್ ಲೇಟ್ ಕೆ ನರಸಿಂಹಪ್ಪ , ಹೆಚ್ ಕಾಲೋನಿ ರವರು ಸ್ಥಳದಲ್ಲಿ ಇದ್ದುದ್ದರಿಂದ ಅದೇ ಆಟೋದಲ್ಲಿ ಪ್ರಥಮ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊದಾಗ ಹೇಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೊಗಬೆಕೆಂದು ವೈದ್ಯರು ತಿಳಿಸಿದಾಗ ಪೋನ್ ಮುಕಾಂತರ ಗಗನ ಒದುತ್ತಿರಿವ  ಸತ್ಯಾಗ್ರಹ ಪ್ರೌಡಶಾಲೆಯ ಉಪಾದ್ಯಯರಿಗೆ ವಿಚಾರ ತಿಳಿಸಿದಾಗ ಅವರ ಸಂಬಂದಿಗಳಿಗೆ ಪೋನ್ ಮಾಡಿ ತಿಳಿಸಿದಾಗ ನಾನು ಮತ್ತು ಗಗನ ತಂದೆ ರಮೇಶ್ ರವರು ಬಂದು ಖಾಸಗಿ ಅಂಬ್ಯುಲನ್ಸ್ ನಲ್ಲಿ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೊಗಿರುತ್ತಾರೆ, ನಾವು ವೈದ್ಯರನ್ನು ವಿಚಾರಿಸಿದಾಗ ಗಗನ ತಲೆಗೆ ಪೆಟ್ಟು ಬಿದ್ದಿರುತ್ತದೆ ಎಂದು ತಿಳಿಸಿದರು, ದಿನಾಂಕ 28/08/2021 ರಂದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೇಳಿದ ವೈದ್ಯರ ಸೂಚನೆ ಮೇರೆಗೆ ಹಿಂದೂಪುರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾಳೆ ಆದ್ದರಿಂದ ನನ್ನ ಮಾವನ ಮಗಳಾದ ಗಗನ ರವರಿಗೆ ಖಾಸಗಿ ಬಸ್ಸ್ ಚಾಲಕನ ಅಜಾಗರುಕತೆಯಿಂದ ತಲೆಗೆ ತಿವ್ರ ಗಾಯ ಪಡಿಸಿದ ಚಾಲಕನ ವೀರುದ್ದ ಕಾನೂನು ಕ್ರಮ ಜರುಗಿಸಲು ಕೊರಿ ನೀಡಿದ ದೂರು. ನಾನು ನಿಮಾನ್ಸ್ ಆಸ್ಪತ್ರೆಯಲ್ಲಿ ಇದ್ದ ಕಾರಣ ತಡವಾಗಿ ನೀಡಿದ ದೂರಾಗಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.205/2021 ಕಲಂ. 279,304(A) ಐ.ಪಿ.ಸಿ:-

    ದಿನಾಂಕ:28/08/2021 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ನಾಗರಾಜು.ಡಿ. ಬಿನ್ ಲೇಟ್ ದಾಸಪ್ಪ,62ವರ್ಷ, ಈಡಿಗರು, ಚಿಲ್ಲರೆ ಅಂಗಡಿ ವ್ಯಾಪಾರ,       ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾನು ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಚಿಲ್ಲರೆ ಅಂಗಡಿಯ ವ್ಯಾಪಾರವನ್ನು ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನಗೆ ಒಂದು ಹೆಣ್ಣು ಮತ್ತು ಒಂದು ಗಂಡು ಇಬ್ಬರು ಮಕ್ಕಳಿರುತ್ತಾರೆ. ತನ್ನ ಮಗನಾದ ವಿನಯ್ ಕುಮಾರ್ .ಎನ್. ,26ವರ್ಷ, ರವರು ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ AJAX ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಎಂದಿನಂತೆ ಈ ದಿನ ದಿನಾಂಕ:28/08/2021 ರಂದು ಬೆಳಿಗ್ಗೆ 08-00 ಗಂಟೆಗೆ ಕೆಲಸಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ಹೇಳಿ ತನ್ನ ಬಾಬತ್ತು KA-40 EA-9553 ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಹೋಗಿರುತ್ತಾನೆ. ಈ ದಿನ ಸಂಜೆ  6-45 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ರಾಜು ಬಿನ್ ನಾಗರಾಜು ಎಂಬುವರು ತಮ್ಮ ಅಂಗಡಿಯ ಬಳಿ ಬಂದು ನಿಮ್ಮ ಮಗನಿಗೆ ಗೌರಿಬಿದನೂರು ಬಳಿ ಅಪಘಾತವಾಗಿದೆ ಎಂದು ತಿಳಿಸಿರುತ್ತಾರೆ. ಕೋಡಲೇ ತಾನು ತಮ್ಮ ಗ್ರಾಮದವರ ಜೋತೆಯಲ್ಲಿ ಗೌರಿಬಿದನೂರಿಗೆ ಬಂದು ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿನಿಂದ ತನ್ನ ಮಗನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಬಳಿ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು ಕೋಡಲೇ ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಬಳಿ ನೋಡಲಾಗಿ ತನ್ನ ಮಗ ಮೃತಪಟ್ಟಿರುತ್ತಾನೆ. ತನ್ನ ಮಗನ ಬಲಗಾಲು ಮೊಣಕಾಲಿನ ವರೆಗೆ ತುಂಡಾಗಿ  ಬೇರ್ಪಟ್ಟಿರುತ್ತೆ. ಹಾಗೂ ತಲೆಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿ ಮೂಗಿನಲ್ಲಿ ಹಾಗೂ ಕಿವಿಯಲ್ಲಿ ರಕ್ತ ಬಂದಿರುತ್ತೆ. ವಿಷಯ ತಿಳಿಯಲಾಗಿ ತನ್ನ ಮಗ ವಿನಯ್ ಕುಮರ್ ರವರು ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಿಂದ ಸಂಜೆ 5-30 ಗಂಟೆಯಲ್ಲಿ ಕೆಲಸವನ್ನು ಮುಗಿಸಿಕೊಂಡು ನಮ್ಮ ಗ್ರಾಮ ವಾಟದಹೊಸಹಳ್ಳಿಗೆ ಬರುತ್ತಿರುವಾಗ ಸಂಜೆ ಸುಮಾರು 6-00 ಗಂಟೆಸಮಯದಲ್ಲಿ ಗಂಗಾಧರಪ್ಪ ಬಿನ್ ನಂಜುಂಡಪ್ಪ ರವರ ಜಮೀನಿನ ಬಳಿ ಗೌರಿಬಿದನೂರು-ಹಿಂದೂಪುರ ರಸ್ತೆಯಲ್ಲಿ ತನ್ನ ಬಾಬತ್ತು KA-40 EA-9553 ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಹಳೇ ಆರ್.ಟಿ.ಓ ಕಛೇರಿಯ ಸಮೀಪ ರಸ್ತೆಯಲ್ಲಿ ಬರುತ್ತಿರುವಾಗ ವಿನಯ್ ಕುಮಾರ್ ವಾಹನದ ಎದುರುಗಡೆಯಿಂದ ಅಂದರೆ ಗೌರಿಬಿದನೂರು ಕಡೆಯಿಂದ ಬರುತ್ತಿರುವ  AP-21 TE-2720  ನೊಂದಣಿ ಸಂಖ್ಯೆಯ ಈಚರ್ ಕಂಪನಿಯ ಲಾರಿಯ ಚಾಲಕ ತಾನು ಚಾಲನೆ ಮಾಡುತ್ತಿದ್ದ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ವಿನಯ್ ಕುಮಾರ್ ಚಾಲನೆ ಮಾಡುತ್ತಿದ್ದ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ತನ್ನ ಮಗ ಹಾಗೂ ತನ್ನ ಮಗ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಲಾರಿಯು ಹತ್ತಿದ್ದು ತನ್ನ ಮಗನ ಬಲಕಾಲು ಲಾರಿಯ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಮೊಣಕಾಲಿನ ವರೆಗೆ ತುಂಡಾಗಿ ಬೇರ್ಪಟ್ಟಿರುತ್ತೆ ಹಾಗೂ ತಲೆಯ ಹಿಂಭಾಗ ಮತ್ತು ಮುಂಭಾಗದಲ್ಲಿ ರಕ್ತಗಾಯ ವಾಗಿ ತನ್ನ ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತ ದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ನನ್ನ ಮಗನ ಸಾವಿಗೆ  AP-21 TE-2720  ನೊಂದಣಿ ಸಂಖ್ಯೆಯ ಈಚರ್ ಕಂಪನಿಯ ಲಾರಿಯ ಚಾಲಕನ ಅತಿವೇಗ ಮತ್ತು ಅಜಾಗರುಕತೆಯ ಚಾಲನೆಯೇ ಕಾರಣವಾಗಿರುತ್ತೆ. ಆದುದರಿಂದ ಮೇಲ್ಕಂಡ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.206/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:24/08/2021 ರಂದು ಸಂಜೆ 7-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಿ.ಕೆ ವಾಸುದೇವ್ ಡಿ.ವೈ.ಎಸ್.ಪಿ ಚಿಕ್ಕಬಳ್ಳಾಪುರ ಉಪ-ವಿಭಾಗ, ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂಧರೆ: ದಿನಾಂಕ:24/08/2021 ರಂದು ಸಂಜೆ 5-00 ಗಂಟೆಯಲ್ಲಿ ಗೌರಿಬಿದನೂರು ವೃತ್ತ ಕಛೇರಿಗೆ ಬಂದು ಕಛೇರಿಯಲ್ಲಿದ್ದಾಗ  ಭಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಗಾನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ತಾನು ಹಾಗೂ ತಮ್ಮ ಕಛೇರಿಯ ಸಿಬ್ಬಂದಿಯವರಾದ ಹೆಚ್.ಸಿ.205 ರಮೇಶ್ ಹಾಗೂ ಜೀಪ್ ನ ಚಾಲಕ ಎ.ಪಿ.ಸಿ-119 ಅಶೋಕ್ ರನ್ನು ಹಾಗೂ ಗೌರಿಬಿದನೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-187 ಅಶ್ವತ್ಥಪ್ಪ, ಸಿ.ಹೆಚ್.ಸಿ-60 ರಿಜ್ವಾನ್ ಪಿ.ಸಿ-115 ಕೆಂಪರಾಜು ರವರನ್ನು  ಕರೆದುಕೊಂಡು ಸರ್ಕಾರಿ ಜೀಪ್ ಸಂಖ್ಯೆ:ಕೆಎ-40 ಜಿ-08555 ರಲ್ಲಿ ದೇವಗಾನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಸಂಜೆ 5-30  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ದೇವಗಾನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಸಮೀಪ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸ್ವಲ್ಪ ದೂರದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 200/-ರೂ ಇನ್ನೋಬ್ಬ ಬಾಹರ್ ಗೆ 200/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು  ಇಸ್ಪೀಟು ಜಾಜಾಟ ಆಡುತ್ತಿರುವವರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ಕೆಳಲಾಗಿ 1)ಮಂಜುನಾಥ ಬಿನ್ ಆದಿನಾರಾಯಣಪ್ಪ, 20 ವರ್ಷ, ನಾಯಕ ಜನಾಂಗ, ವೇದಲವೇಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 2)ಆದಿನಾರಾಯಣ ರೆಡ್ಡಿ ಬಿನ್ ಲೇಟ್ ಗೋವಿಂದರೆಡ್ಡಿ, 62 ವರ್ಷ, ರೆಡ್ಡಿ ಜನಾಂಗ, ವ್ಯವಸಾಯ, ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 3)ರಾಮಚಂದ್ರಪ್ಪ ಬಿನ್ ವೆಂಕಟರವಣಪ್ಪ, 48 ವರ್ಷ, ಬಲಜಿಗರು, ಕೂಲಿ ಕೆಲಸ, ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 4)ಸುಬ್ಬರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ, 55ವರ್ಷ, ರೆಡ್ಡಿ ಜನಾಂಗ, ವ್ಯವಸಾಯ, ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 5)ರಾಮಕೃಷ್ಣಪ್ಪ ಬಿನ್ ನಾಗಪ್ಪ, 35 ವರ್ಷ, ಉಪ್ಪಾರರು, ವ್ಯವಸಾಯ, ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 6)ಬಾಲಪ್ಪ ಬಿನ್ ನರಸಪ್ಪ, 28 ವರ್ಷ, ನಾಯಕ ಜನಾಂಗ, ವ್ಯವಸಾಯ, ವದ್ದೇನಹಳ್ಳಿಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 4550/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಂಜೆ 6-00  ಗಂಟೆಯಿಂದ 7-00 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಸಂಜೆ 7-30 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಮಾಲು ಮತ್ತು ಆಸಾಮಿಗಳನ್ನು ವರದಿ ಮತ್ತು ಅಸಲು ಪಂಚನಾಮೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ 29/08/2021 ರಂದು ಬೇಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ನೀಡಿದ ನ್ಯಾಯಾಲಯದ ಅನುಮತಿಯ ವರದಿಯ ಮೇರೆಗೆ ಠಾಣಾ ಮೊ.ಸಂ 206/2021 ರಂತೆ ಕಲಂ 87 ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.150/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ:29/08/2021 ರಂದು ಮಾನ್ಯ ಸಿಪಿಐ ರವರು ಮಾಲು ಮತ್ತು ಆರೋಪಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿ ವರದಿಯ ಸಾರಾಂಶವೇನೆಂದರೆ ದಿನಾಂಕ:29/08/2021 ರಂದು ಬೆಳಿಗ್ಗೆ 08-30 ಗಂಟೆಗೆ ಗೌರಿಬಿದನೂರು ವೃತ್ತ ಕಛೇರಿಯಿಂದ ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಜಿಲ್ಲಾ ಉಸ್ತೂವಾರಿ ಸಚಿವರ ಬಂದೋಬಸ್ತ್ ಕರ್ತವ್ಯಕ್ಕೆ ಬಿಸಲಹಳ್ಳಿ, ನಾಗೇನಹಳ್ಳಿ, ಕಡೆ ಗಸ್ತು ಮಾಡಿಕೊಂಡು ಹೋಗುತ್ತಿದ್ದಾಗ ಮಂಚೇನಹಳ್ಳಿ ಡಿ.ಪಾಳ್ಯ ಗ್ರಾಮಗಳ ಮಧ್ಯೆ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಮುನಿರಾಜು ರವರ ಹೊಟೆಲ್ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್.ಸಿ.224 ವೆಂಕಟೇಶ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40, ಜಿ-1234 ರಲ್ಲಿ ಮಂಚೇನಹಳ್ಳಿ  ಡಿ.ಪಾಳ್ಯ ರಸ್ತೆಯಲ್ಲಿರುವ ಮುನಿರಾಜು ಹೊಟೆಲ್ ಬಳಿ ಬೆಳಿಗ್ಗೆ 09-00 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಅದರಲ್ಲಿದ್ದ ಮಧ್ಯದ ಪಾಕೇಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಮಧ್ಯದ ಪಾಕೇಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ವೆಂಕಟೇಶ ಬಿನ್ ಪುಟ್ಟಪ್ಪ, 32 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ ಡಿ.ಪಾಳ್ಯ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್.ನ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 20 ಟೆಟ್ರಾ ಪಾಕೇಟ್ ಗಳು ಇದ್ದು, ಇವುಗಳ ಒಟ್ಟು 1 ಲೀಟರ್ 800 ಎಂ.ಎಲ್. ಆಗಿರುತ್ತದೆ. ಇವುಗಳ ಒಟ್ಟು ಬೆಲೆ 710/- ರೂಗಳಾಗಿರುತ್ತದೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 90 ಎಂ.ಎಲ್.ನ ಹೈವಾರ್ಡ್ಸ್  ಚೀಯರ್ಸ್ ವಿಸ್ಕಿಯ 04 ಖಾಲಿ ಟೆಟ್ರಾ ಪಾಕೇಟ್ ಗಳು ಬಿದ್ದಿದ್ದು, ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗೂ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದಾದರೂ ಪರವಾನಿಗೆ ಇದೇಯೇ ಎಂದು ಕೇಳಿದಾಗ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ಬೆಳಿಗ್ಗೆ 09-15 ಗಂಟೆಯಿಂದ 10-15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂಎಲ್ ಸಾಮರ್ಥ್ಯದ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 20 ಟೆಟ್ರಾ ಪಾಕೇಟ್ ಗಳು ಒಂದು ಪ್ಲಾಸ್ಟಿಕ್ ಚೀಲ ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 04 ಖಾಲಿ ಟೆಟ್ರಾ ಪಾಕೇಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು ಬೆಳಿಗ್ಗೆ 10-45 ಗಂಟೆಗೆ ಠಾಣೆಗೆ ವಾಪಾಸ್ ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ದ ಕಲಂ 15(ಎ), 32(3) ಕೆ.ಇ.ಆಕ್ಟ್ ರೀತ್ಯ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿ ನೀಡಿದ ವರದಿ.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.151/2021 ಕಲಂ. 279,337 ಐ.ಪಿ.ಸಿ:-

   ದಿನಾಂಕ: 29/08/2021 ರಂದು ಮದ್ಯಾಹ್ನ 12-30 ಗಂಟೆಗೆ ಅರ್ಜುನ್ ರೆಡ್ಡಿ ಬಿನ್ ವೇಣುಗೋಪಾಲರೆಡ್ಡಿ, 28 ವರ್ಷ, ವಕ್ಕಲಿಗರು, ಕಲ್ಲಿನಾಯಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 28/08/2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ನಮ್ಮ ದೊಡ್ಡಪ್ಪನಾದ ಅಶ್ವಥರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ, 65 ವರ್ಷ ಎಂಬುವವರು ನಮ್ಮ ಗ್ರಾಮದಲ್ಲಿರುವ ನಮ್ಮ ಮನೆಯಿಂದ KA-40, Y-7218 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಅವರ ಮನೆಗೆ ಹೋಗಲು ರಸ್ತೆಯಲ್ಲಿರುವ ಉಬ್ಬಿನ ಬಳಿ ಗೌರಿಬಿದನೂರು ಕಡೆಯಿಂದ ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದಾಗ KA-50, EE-9349 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರ  ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನಮ್ಮ ದೊಡ್ಡಪ್ಪನವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ದೊಡ್ಡಪ್ಪ ಅಶ್ವಥರೆಡ್ಡಿರವರು ದ್ವಿಚಕ್ರವಾಹನದಿಂದ ಬಿದ್ದು, ಅವರ ಎಡಕಾಲಿಗೆ ಮತ್ತು ಎಡಕೈಗೆ ರಕ್ತಗಾಯಗಳಾಗಿದ್ದು, ದ್ವಿಚಕ್ರವಾಹನ ಜಖಂಗೊಂಡಿರುತ್ತೆ. ಅದೇ ದಾರಿಯಲ್ಲಿ ಹೋಗುತ್ತಿದ್ದವರು ನನಗೆ ಪೋನ್ ಮಾಡಿ ತಿಳಿಸಿದ್ದು, ನಾನು ತಕ್ಷಣ ಕಾರಿನಲ್ಲಿ ಸ್ಥಳಕ್ಕೆ ಹೋಗಿ ನೋಡಿ ಅದೇ ಕಾರಿನಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನಮ್ಮ ದೊಡ್ಡಪ್ಪನೊಂದಿಗೆ ಇದ್ದು, ಈ ದಿನ ತಡವಾಗಿ ಠಾಣೆಗೆ ಬಂದು ನಮ್ಮ ದೊಡ್ಡಪ್ಪ ಅಶ್ವಥರೆಡ್ಡಿರವರಿಗೆ ಅಪಘಾತವನ್ನುಂಟು ಮಾಡಿದ KA-50, EE-9349 ನೊಂದಣಿ ಸಂಖ್ಯೆಯ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.281/2021 ಕಲಂ. 379 ಐ.ಪಿ.ಸಿ:-

    ದಿನಾಂಕ: 29/08/2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಶ್ರೀನಿವಾಸ.ಎಮ್ ಬಿನ್ ಮುನಿಯಪ್ಪ, 42 ವರ್ಷ, ದೊಡ್ಡದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಾನು ತನ್ನ ಸ್ವಂತ ಕೆಲಸಗಳಿಗೋಸ್ಕರ 2018 ನೇ ವರ್ಷದಲ್ಲಿ ಶಿಡ್ಲಘಟ್ಟ ನಗರದಲ್ಲಿ ಶಾರದಾ ಕಾನ್ವೆಂಟ್ ಪಕ್ಕ ರಾಯಲ್ ಮೋಟಾರ್ಸ್ ಷೋ ರೂಂ ನಲ್ಲಿ ಹೊಸ ಟಿ.ವಿ.ಎಸ್ ಕಂಪನಿಯ ಸ್ಟಾರ್ ಸಿಟಿ ದ್ವಿಚಕ್ರ ವಾಹನವನ್ನು ಖರೀದಿ ಮಾಡಿದ್ದು, ಅದರ ನೋಂದಣಿ ಸಂಖ್ಯೆ ಕೆ.ಎ-40 ಇ.ಸಿ-8893 ಆಗಿರುತ್ತೆ. ನಾವು  ದೊಡ್ಡದಾಸೇನಹಳ್ಳಿ-ಕಂಗಾನಹಳ್ಳಿ ರಸ್ತೆಯಲ್ಲಿರುವ ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ಸಂಸಾರ ಸಮೇತ ಅಲ್ಲಿಯೇ ವಾಸವಿರುತ್ತೇವೆ. ತಾನು ತನ್ನ ದ್ವಿಚಕ್ರ ವಾಹನವನ್ನು ರಾತ್ರಿ ಸಮಯದಲ್ಲಿ ತಮ್ಮ ಮನೆಯ ಪಕ್ಕದಲ್ಲಿ ಧನಗಳ ಶೆಡ್ ನಲ್ಲಿ ನಿಲ್ಲಿಸುತ್ತಿರುತ್ತೇನೆ. ಎಂದಿನಂತೆ ದಿನಾಂಕ: 26/08/2021 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ತಾನು ತನ್ನ ಮೇಲ್ಕಂಡ ಕೆ.ಎ-40 ಇ.ಸಿ-8893 ಸ್ಟಾರ್ ಸಿಟಿ ದ್ವಿಚಕ್ರ ವಾಹನವನ್ನು ದನದ ಶೆಡ್ ನಲ್ಲಿ ನಿಲ್ಲಿಸಿ ಲಾಕ್ ಮಾಡಿ, ನಂತರ ರಾತ್ರಿ ಸುಮಾರು 11-00 ಗಂಟೆಗೆ ಮನೆಯಲ್ಲಿ ಮಲಗಿಕೊಂಡಿರುತ್ತೇನೆ. ಬೆಳಗಿನ ಜಾವ ಸುಮಾರು 5-00 ಗಂಟೆಯಲ್ಲಿ ತಾನು ಎದ್ದು ದನಗಳ ಶೆಡ್ಗೆ ಹೋದಾಗ, ರಾತ್ರಿ ಶೆಡ್ ನಲ್ಲಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನವು ಕಾಣಿಸಲಿಲ್ಲ. ತಾನು ಗಾಬರಿಯಾಗಿ ತಮ್ಮ ಮನೆಯವರನ್ನು ಎಬ್ಬಿಸಿ ವಿಚಾರ ತಿಳಿಸಿ ಸುತ್ತಮುತ್ತ ಹಾಗೂ ಗ್ರಾಮದ ಕಡೆ ಹುಡುಕಾಡಿದರೂ ಸಹ ತನ್ನ ದ್ವಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ. ರಾತ್ರಿ ಸಮಯದಲ್ಲಿ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ತಾನು ಇದುವರೆವಿಗೂ ದ್ವಿಚಕ್ರ ವಾಹನವನ್ನು ಹುಡುಕಾಡಿಕೊಂಡಿದ್ದು, ಪತ್ತೆಯಾಗದೇ ಇದ್ದುದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ತನ್ನ ದ್ವಿಚಕ್ರ ವಾಹನದ ಅಂದಾಜು ಬೆಲೆ 30,000-00 ರೂಪಾಯಿಗಳು ಆಗಿದ್ದು, ನನ್ನ ವಾಹನವನ್ನು ಪತ್ತೆ ಮಾಡಿಕೊಟ್ಟು ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.107/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:29/08/2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ. ಸತೀಶ್ ಪಿ,ಎಸ್,ಐ ರವರು ಅಸಲು ಪಂಚನಾಮೆ, ಮಾಲು, ಮತ್ತು ಆರೋಪಿಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:29-08-2021 ರಂದು ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ಸಿಬ್ಬಂದಿಯವರಾದ  ಹೆಚ್.ಸಿ.243 ಕೆ.ಎನ್. ರೆಡ್ಡಪ್ಪ ಪಿ.ಸಿ.280 ಶಶಿಕುಮಾರ್ ರವರೊಂದಿಗೆ ಶಿಡ್ಲಘಟ್ಟ ನಗರದ ಕೋಟೆ ಸರ್ಕಲ್ ನಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟದ  ನಗರದ ರೈಲ್ವೇ ಸ್ಟೇಷನ್ ಮುಂಭಾಗದ ಖಾಲಿ ಜಾಗದಲ್ಲಿ ಮರದ ಕೆಳಗಡೆ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-45 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಇವರ ಹೆಸರು ವಿಳಾಸ ಕೇಳಲಾಗಿ ಈಶ್ವರ ಬಿನ್ ರಾಮಪ್ಪ 30 ವರ್ಷ,  ಕೂಲಿ ಕೆಲಸ ಪ.ಜಾತಿ ವಾಸ: ದೊಡ್ಡ ಕಿರುಗುಂಬಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ಎಂದು ತಿಳಿಸಿರುತ್ತಾರೆ.  ಇವರನ್ನು ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಬಗ್ಗೆ ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ನಲ್ಲಿ ಪರಿಶೀಲಿಸಲಾಗಿ HAYWARDS cheers Whisky  90 ML ನ 18 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 18 ರ ಬೆಲೆ ಒಟ್ಟು 632 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ HAYWARDS cheers Whisky  90 ML ನ 02 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಪಂಚನಾಮೆಯ ಮೂಲಕ ವಶಕ್ಕೆ ಪಡೆದು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಯನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಇತ್ತೀಚಿನ ನವೀಕರಣ​ : 29-08-2021 04:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080