ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 28/07/2021 ರಂದು  ಸಂಜೆ 6-05 ಗಂಟೆಯ ಸಮಯಕ್ಕೆ ಶ್ರೀ, ಬಿ.ಪಿ.ಮಂಜು ಪಿ.ಎಸ್.ಐ ರವರು  ಠಾಣೆಯಲ್ಲಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ದಿನಾಂಕ: 28/07/2021 ರಂದು  ಸಂಜೆ 4-00 ಗಂಟೆಯಲ್ಲಿ  ತಾನು ಠಾಣಾ ಸರಹದ್ದಿನ  ಗಸ್ತಿನಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ  ಬಯ್ಯಪ್ಪನಹಳ್ಳಿ  ಗ್ರಾಮದ  ವಾಸಿ ಶಿವರಾಮಿರೆಡ್ಡಿ  ಬಿನ್  ಲೇಟ್ ವೆಂಕಟರವಣಪ್ಪ 40 ವರ್ಷ  ವಕ್ಕಲಿಗರು ಚಿಲ್ಲರೆ  ಅಂಗಡಿ ವ್ಯಾಪಾರ ರವರು  ತನ್ನ  ಅಂಗಡಿಯ ಬಳಿ  ಸಾರ್ವಜನಿಕರಿಗೆ  ಮದ್ಯಪಾನ ಮಾಡಲು  ಅವಕಾಶ ಮಾಡಿಕೊಟ್ಟಿರುವುದಾಗಿ  ಖಚಿತ ಮಾಹಿತಿ ಬಂದಿದ್ದು, ಮಾಹಿತಿಯಂತೆ ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಬಯಪ್ಪನಹಳ್ಳಿ ಗ್ರಾಮದ ವಾಸಿ ಶಿವರಾಮಿರೆಡ್ಡಿರವರ ಅಂಗಡಿಯ  ಬಳಿ ಸಂಜೆ 4-30 ರಿಂದ 5-15 ಗಂಟೆಯವರೆವಿಗೆ  ದಾಳಿ  ಮಹಜರ್ ಕ್ರಮ ಜರುಗಿಸಿ ಆರೋಪಿಯ ವಶದಲ್ಲಿದ್ದ  ಮದ್ಯವಿದ್ದ 90 ಎಂ.ಎಲ್.ನ ಹೈವಾರ್ಡ್ಸ್ ವಿಸ್ಕಿಯ 10 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್.ನ ಹೈವಾರ್ಡ್ಸ್ ವಿಸ್ಕಿಯ ಎರಡು  ಖಾಲಿ ಟೆಟ್ರಾ ಪಾಕೆಟ್ ಗಳು. ಹಾಗೂ   ನಾಲ್ಕು  ಪ್ಲಾಸ್ಟಿಕ್  ಲೋಟಗಳನ್ನು  ಅಮಾನತ್ತು ಪಡಿಸಿಕೊಂಡಿರುತ್ತೆ.  ಮೇಲ್ಕಂಡ  ಆರೋಪಿಯ  ವಿರುದ್ದ  ಕಲಂ:15(ಎ). 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.40/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:-29/07/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಪಿರ್ಯಾಧಿದಾರರಾದ ಶ್ರೀ.ಮಂಜುನಾಥ ಬಿನ್ ನಾಗರಾಜಪ್ಪ 30 ವರ್ಷ, ನಾಯಕರು, ಕಂಬಿ ಕೆಲಸ, ಹೊನ್ನೇನಹಳ್ಳಿ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ:-25/06/2021 ರಂದು ತನ್ನ ಬಾಬತ್ತು KA-03-ED-2574 ರ ಹಿರೋ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ತಾನು ಮತ್ತು ತನ್ನ ಮಗನಾದ ಪೃಥ್ವಿ 2.5 ವರ್ಷ ರವರು ಗ್ರಾಮದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಬರಲು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ - ಬೆಂಗಳೂರು ಎನ್.ಹೆಚ್-44 ಬಿ.ಬಿ ರಸ್ತೆಯ ಡಿ.ವೈ.ಎಸ್.ಪಿ ಸಾಹೇಬರ ವಸತಿ ಗೃಹದ ಮುಂಭಾಗದ ಠಾರ್ ರಸ್ತೆಯಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ KA-50-N-5868 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾವು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ತನಗೆ ಬಲ ಕೈಗೆ ಹಾಗೂ ಬಲ ಮೊಣಕಾಲಿಗೆ ರಕ್ತಗಾಯಗಳಾಗಿದ್ದು ಹಾಗೂ ತನ್ನ ಮಗ ಪೃಥ್ವಿ ಗೆ ತಲೆಗೆ, ಬಲ ಕೆನ್ನೆಗೆ, ಬಲ ಕೈಗೆ ಹಾಗೂ ಬಲ ಕಾಲಿಗೆ ರಕ್ತ ಗಾಯಗಳಾಗಿದ್ದು ತಕ್ಷಣ ಅಲ್ಲಿನ ಸ್ಥಳೀಯರು ತಮ್ಮನ್ನು ಉಪಚರಿಸಿ ಅಪಘಾತಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ಕಾರಿನ ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಕೃಷ್ಣಪ್ಪ ಬಿನ್ ಚಿಕ್ಕಮುನಿಶಾಮಿ 56 ವರ್ಷ, ವಡ್ರೇಪಾಲ್ಯ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು ತನ್ನ ಮಗ ಪೃಥ್ವಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿಕೊಂಡು ಈ ದಿನ ತಡವಾಗಿ ದಿನಾಂಕ:-29/07/2021 ರಂದು ಸದರಿ ಅಪಘಾತಕ್ಕೆ ಕಾರಣನಾದ KA-50-N-5868 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.336/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 28/07/2021 ರಂದು ಸಂಜೆ 5.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-03 ಶ್ರೀ ರಾಜಣ್ಣ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 28/07/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು, ಸಿ.ಹೆಚ್.ಸಿ-41 ಜಗದೀಶ್ ರವರು ಠಾಣಾ ಸರಹದ್ದಿನ ನಲ್ಲಗುಟ್ಟಹಳ್ಳಿ, ನಾರಾಯಣಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಯ ಸಮಯದಲ್ಲಿ ಚಿಕ್ಕಕೊಂಡ್ರಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ ಸದರಿ ಗ್ರಾಮದ ಮೇಸ್ತ್ರಿ ನಾರಾಯಣಸ್ವಾಮಿ ಬಿನ್ ದೊಡ್ಡನಾರಾಯಣಪ್ಪರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಚಿಕ್ಕಕೊಂಡ್ರಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮೇಸ್ತ್ರಿ ನಾರಾಯಣಸ್ವಾಮಿ ಬಿನ್ ದೊಡ್ಡನಾರಾಯಣಪ್ಪ, 50ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಚಿಕ್ಕಕೊಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4.15 ರಿಂದ 5.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮೇಸ್ತ್ರಿ ನಾರಾಯಣಸ್ವಾಮಿ ಬಿನ್ ದೊಡ್ಡನಾರಾಯಣಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.337/2021 ಕಲಂ. 143,147,148,323,324,504,506,392,149 ಐ.ಪಿ.ಸಿ:-

  ದಿನಾಂಕ: 28/07/2021 ರಂದು ಸಂಜೆ 6.30 ಗಂಟೆಗೆ ಠಾಣೆಯ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ-339 ಕರಿಯಪ್ಪ ರವರು ನ್ಯಾಯಾಲಯದಿಂದ ತಂದು ಹಾಜರು ಪಡಿಸಿದ ಪಿ.ಸಿ.ಆರ್. ನಂ.109/2021 ಪ್ರಕರಣದ ಸಾರಾಂಶವೇನೆಂದರೆ, ಸದರಿ ಪ್ರಕರಣದ ದೂರುದಾರನಾದ ಎಂ.ಎಸ್.ದಾದಾಪೀರ್ ಬಿನ್ ಮೆಹಬೂಬ್ ಸಾಬ್, 58 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ನಿಮ್ಮಕಾಯಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನ್ಯಾಯಾಲಯಕ್ಕೆ ನೀಡಿರುವ ದೂರಿನ ಸಾರಾಂಶವೇನೆಂದರೆ, ದಿನಾಂಕ: 26/07/2020 ರಂದು ಮಧ್ಯಾಹ್ನ 2.45 ಗಂಟೆ ಸಮಯದಲ್ಲಿ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ತನ್ನ ತಂದೆಯನ್ನು ತಮ್ಮ ಗ್ರಾಮದ ಶಾಬುದ್ದಿನ್ ಖಲಂದರ್ ಮಕ್ಕಳಾದ 1)ಸುಭಾನಿ, 35 ವರ್ಷ, 2).ನೂರಾನಿ, 33 ವರ್ಷ, 3).ರೆಹಮಾನ್, 32 ವರ್ಷ, 4).ರಬ್ಬಾನಿ ರವರು ಮತ್ತು ಬೆಂಗಳೂರು ನಗರದ ಸಿ.ಟಿ ಮಾರ್ಕೇಟ್ ಹತ್ತಿರ ಇರುವ ಜಾಲಿ ಮೊಹಲ್ಲಾ ನಿವಾಸಿಗಳಾದ 5)ಶೇಕ್ ಮೌಲಾ ಬಿನ್ ಇಬ್ರಾಹಿಂ ಸಾಬ್ @ ಬಾಬಾಜಾನ್, 55 ವರ್ಷ, 6) ಶೇಕ್ ಹೈದರ್ ಬಿನ್ ಶೇಕ್ ಮೌಲಾ, 32 ವರ್ಷ ಮತ್ತು 7).ಮೈನುದ್ದೀನ್ ಬಿನ್ ಶೇಕ್ ಮೌಲಾ, 33 ವರ್ಷ ರವರು ತನ್ನ ತಂದೆಯನ್ನು ಕೊಂದು ಹಾಕಿದ್ದು, ಈ ಬಗ್ಗೆ ಸದರಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಪಿರ್ಯಾದು ನೀಡಿರುತ್ತೇನೆ. ಆ ನಂತರ ತಾನು ಸಂಜೆ 4.30 ಸಮಯಕ್ಕೆ ಕೊಲಿಮಿವಾರಹಳ್ಳಿ ಗ್ರಾಮದ ಸರ್ವೆ ನಂಬರ್ 6 ರ ಬಳಿ ಇರುವ ಪಿರಾನಿ ಮಾ ದರ್ಗಾ ಬಳಿಗೆ ಬಂದಿರುತ್ತೇನೆ. ಅಷ್ಟರಲ್ಲಿ ಸದರಿ ದಿನಾಂಕದಂದು ಮಧ್ಯಾಹ್ನ 3.00 ಗಂಟೆ ಸಮಯದಲ್ಲಿ ಈ ಮೇಲಿನ ಆರೋಪಿಗಳು ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಹೆಂಡತಿಯನ್ನು ನೆಲದ ಮೇಲೆ ತಳ್ಳಿ ಕೈಗಳಿಂದ ಮತ್ತು ಕಾಲುಗಳಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈದು, ತಾನು ಅವರುಗಳ ಮೇಲೆ ಕೆಂಚಾರ್ಲಹಳ್ಳಿ ಪೊಲೀಸರಿಗೆ ನೀಡಿರುವ ದೂರನ್ನು ವಾಪಸ್ ತೆಗೆಯಬೇಕೆಂದು ತನಗೆ ಪೋನ್ ಮಾಡಲು ತನ್ನ ಹೆಂಡತಿಗೆ ಪುಸಲಾಯಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಈ ವಿಚಾರವನ್ನು ತನ್ನ ಹೆಂಡತಿ ಶ್ರೀಮತಿ ಶಹವಾರ್ ರವರು ಇದೇ ದಿನ ಸಂಜೆ 4.30 ಗಂಟೆ ಸಮಯದಲ್ಲಿ ಮೇಲ್ಕಂಡ ಸ್ಥಳದಲ್ಲಿ ತಿಳಿಸಿರುತ್ತಾರೆ. ತಕ್ಷಣ ಆರೋಪಿಗಳೆಲ್ಲಾ ಆಕ್ರಮ ಗುಂಪು ಕಟ್ಟಿಕೊಂಡು ತನ್ನನ್ನು ಕೈಗಳಿಂದ ಮತ್ತು ಕಾಲುಗಳಿಂದ ಒದ್ದು ತಮ್ಮಗಳ ಮೇಲೆ ಕೆಂಚಾರ್ಲಹಳ್ಳಿ ಪೋಲಿಸರಿಗೆ ನೀಡಿರುವ ಪಿರ್ಯಾದನ್ನು ವಾಪಸ್ಸು ಪಡೆಯಬೇಕೆಂದು, ತಪ್ಪಿದರೆ ಒಂದೇ ಏಟಿಗೆ ತನ್ನನ್ನು ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಸದರಿ ಆರೋಪಿಗಳು ಪೀರಾನಿ ಮಾ ದರ್ಗಾದಲ್ಲಿದ್ದ ಹುಂಡಿ ಹಣ ಸುಮಾರು ಒಂದು ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಹಾಗೂ ದರ್ಗಾದ ಪಕ್ಕದಲ್ಲಿದ್ದ ತನಗೆ ಸೇರಿದ ಕೋಣೆಯಲ್ಲಿ ತಾನು ತನ್ನ ವೈದ್ಯಕೀಯ ಚಿಕಿತ್ಸೆಗೆ ಸಂಗ್ರಹಿಸಿಟ್ಟಿದ್ದ ರೂ. 2,75,000/- ರೂಪಾಯಿಗಳನ್ನು ಲೂಟಿ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕೃತ್ಯವನ್ನು ತನ್ನ ಹೆಂಡತಿ ಶಹವಾರ್ ಮತ್ತು ತನ್ನ ಮಗಳು ಅಬಿದಾ ರವರು ನೋಡಿರುತ್ತಾರೆ. ಆರೋಪಿಗಳು ತನಗೆ ಹಲ್ಲೆ ಮಾಡಿದ್ದರಿಂದ ಮೈ ನೋವು ಇದ್ದಿದ್ದರಿಂದ ಕೃತ್ಯ ನಡೆದ ಮಾರನೇ ದಿನ ಅಂದರೆ ದಿನಾಂಕ: 27/07/2020 ರಂದು ಕೆಂಚಾರ್ಲಹಳ್ಳಿ ಪೊಲೀಸರಿಗೆ ಖುದ್ದಾಗಿ ಪಿರ್ಯಾಧು ನೀಡಿರುತ್ತಾನೆ. ಸದರಿ ಪೋಲೀಸರು ಕ್ರಮ ಜರುಗಿಸದೇ ಇದ್ದಿದರಿಂದ ತಾನು ದಿನಾಂಕ: 25/09/2020 ರಂದು ಚಿಂತಾಮಣಿ ಪೋಲೀಸ್ ವೃತ್ತ ನೀರಿಕ್ಷಕರಿಗೆ ಪಿರ್ಯಾಧು ನೀಡಿರುತ್ತೇನೆ. ಆದಾಗ್ಯೂ ಪೊಲೀಸರು ಕ್ರಮ ಜರುಗಿಸದಿದ್ದ ಕಾರಣ ತಾನು ದಿನಾಂಕ:07/10/2020 ರಂದು ಚಿಂತಾಮಣಿ ಪೊಲೀಸ್ ವೃತ್ತ ನಿರೀಕ್ಷಕರು, ಡಿ.ವೈ.ಎಸ್.ಪಿ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಪೋಲೀಸ್ ಸೂಪರಿಟೆಂಡ್ ರವರಿಗೆ ಆರ್.ಪಿ.ಎ.ಡಿ ಮೂಲಕ ರವಾನಿಸಿರುತ್ತೇನೆ. ಸದರಿ ಅಧಿಕಾರಿಗಳಿಗೆ ಪಿರ್ಯಾದು ಬಟವಾಡೆ ಆಗಿದ್ದರೂ ಸಹಾ ಅವರು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಮೇಲ್ಕಂಡ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಘನ ನ್ಯಾಯಾಲಯವು ಸೂಚಿಸಿರುವುದಾಗಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 379 ಐ.ಪಿ.ಸಿ:-

  ರಾಮಮೂರ್ತಿ ಜಿ.ವಿ ಬಿನ್ ಲೇಟ್ ವೆಂಕಟಪ್ಪ, 35 ವರ್ಷ, ಗೊಲ್ಲರು, ಶಿಕ್ಷಕರು, ಗುಡ್ಡಂಪಲ್ಲಿ ಗ್ರಾಮ, ಇರಗಂಪಲ್ಲಿ ಅಂಚೆ, ಚಿಂತಾಮಣಿ ತಾಲ್ಲೂಕು ಹಾಲಿ ವಾಸ ಕನ್ನಂಪಲ್ಲಿ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೆನೆಂದರೆ  ನಾನು ಕೆಎ-40 ಯು-6171  ಹಿರೋ ಹೊಂಡಾ ಪ್ಯಾಷನ್ ಪ್ರೋ ದ್ವಿ-ಚಕ್ರ  [ಇಂಜಿನ್ ನಂ-HA10ENDHK54406, ಚಾಸೀಸ್ ನಂ  MBLHA10AWDHK23347 ವಾಹನವನ್ನು ಹೊಂದಿರುತ್ತೇನೆ. ಸದರಿ ದ್ವಿ-ಚಕ್ರ ವಾಹನದಲ್ಲಿ ನಾನು ಪ್ರತಿ ದಿನ ಕೆಲಸಕ್ಕೆ ಹೋಗಿ ಬರುತ್ತಿರುತ್ತೇನೆ. ಹೀಗಿರುವಾಗ ದಿನಾಂಕ 20/07/2021  ರಂದು ಸಂಜೆ 4-00 ಗಂಟೆಯಲ್ಲಿ ನನ್ನ ಬಾಬತ್ತು ಕೆಎ-40 ಯು-6171  ದ್ವಿ-ಚಕ್ರ ವಾಹನವನ್ನು ಚಿಂತಾಮಣಿ ನಗರದ ಪ್ಲವರ್ ವೃತ್ತದ ಬಳಿ ಇರುವ ವಿದುರ ನಾರಾಯಣ ಬುಕ್ ಸ್ಟೋರ್ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿ ಪಿ.ಸಿ.ಆರ್ ಕಾಂಪ್ಲೇಕ್ಸ್ ನ ಒಳಗೆ ಹೋಗಿ ನಂತರ ವಾಪಸ್ಸು ಬಂದು ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ದ್ವಿ-ಚಕ್ರ ವಾಹನ ಇಲ್ಲದೆ ಇದ್ದು ನನಗೆ ಗಾಬರಿಯಾಗಿ ಸುತ್ತು ಮತ್ತಲು ಹುಡಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ನನ್ನ ದ್ವಿ ಚಕ್ರ ವಾಹನದ ಬೆಲೆ ಸುಮಾರು 21,000/-ರೂ ಆಗಿರುತ್ತೆ.  ನನ್ನ ಬಾಬತ್ತು ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದುವರೆಗೂ  ನನ್ನ ದ್ವಿ-ಚಕ್ರ ವಾಹನವನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿರುತ್ತೇನೆ. ಆದ್ದರಿಂದ ನನ್ನ ದ್ವಿ-ಚಕ್ರ ವಾಹನವನ್ನು ಹಾಗೂ ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 32,34,38A ಕೆ.ಇ ಆಕ್ಟ್:-

  ದಿ:28/07/2021 ರಂದು ರಾತ್ರಿ 9-30 ಗಂಟೆಗೆ   ಪಿರ್ಯಾದಿದಾರರಾದ ಶ್ರೀಸರಸ್ವತಮ್ಮ, ಪೊಲೀಸ್ ಸಬ್ ಇನ್ಸಪೆಕ್ಟರ್, ಡಿ.ಸಿ.ಬಿ/ ಸಿ.ಇ.ಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ರವರು  ಠಾಣೆಗೆ   ಮಾಲುಗಳು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ  ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿ:28/07/2021 ರಂದು ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-80 ಕೃಷ್ಣಪ್ಪ, ಪಿ.ಸಿ-142 ಅಶೋಕ, ಮತ್ತು ಪಿಸಿ-152 ಜಯ ಮತ್ತು ಜೀಪ್ ಚಾಲಕರಾದ ಎ.ಹೆಚ್,ಸಿ-13 ಸುಶೀಲ್ ಕುಮಾರ್ ರವರೊಂದಿಗೆ ತಮ್ಮ ಠಾಣೆಯ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-58 ರಲ್ಲಿ ಗೌರಿಬಿದನೂರು ತಾಲ್ಲುಕಿನ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಸಾಯಂಕಾಲ 5-15 ಗಂಟೆಯಲ್ಲಿ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಗೌರಿಬಿದನೂರು ಪುರ ಠಾಣಾ ಸರಹದ್ದಿನ ಗೌರಿಬಿದನೂರು- ಮಧುಗಿರಿ ರಸ್ತೆಯ ಕೆ.ಇ.ಬಿ ಕಛೇರಿಯ ಮುಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯವನ್ನು KA-44 V-1992 ಆಕ್ಸಿಸ್-125 ಬಿಳಿ ಬಣ್ಣದ ಸ್ಕೂಟಿ ದ್ವಿ ಚಕ್ರವಾಹನದಲ್ಲಿ ಸಾಗಾಣಿಕೆ ಮಾಡಿಕೊಂಡು ಒಬ್ಬ ಅಸಾಮಿಯು ಬರುತ್ತಿದ್ದು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಯನ್ನು ತಡೆದು ವಿಚಾರಿಸಿದಾಗ ಆತನ ಹೆಸರು ವಿಳಾಸ ಕೇಳಲಾಗಿ ಕೃಷ್ಣ.ಸಿ ಬಿನ್ ಚಿಕ್ಕಪ್ಪಯ್ಯ, 24 ವರ್ಷ, ಕುಂಬಾರ ಜನಾಂಗ, ತಿರುಮಲ ಬಾರ್ ನಲ್ಲಿ ಕೆಲಸ ವಾಸ: ಕರೇಕಲ್ಲಹಳ್ಳಿ ಗ್ರಾಮ ಎಂತ ತಿಳಿಸಿದ್ದು ನಂತರ ದ್ವಿ ಚಕ್ರ ವಾಹನದ ಮುಂಭಾಗದಲ್ಲಿದ್ದ ಬಿಳಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ ಮದ್ಯ ತುಂಬಿದ 5 ರಟ್ಟಿನ ಬಾಕ್ಸ್ ಗಳಿದ್ದು ಪರಿಶೀಲಿಸಲಾಗಿ 05 ಬಾಕ್ಸ್ ಗಳಲ್ಲಿಯೂ 8 ML RARE BLEND OF INDIAN WHISKY & MALTS  ಟೆಟ್ರಾ ಪಾಕೆಟ್ಗಳು 180 ML ಸಾಮಥ್ರ್ಯವಿದ್ದು ಇವುಗಳ ಒಟ್ಟು ಸಾಮರ್ಥ್ಯ 43 ಲೀಟರ್ 200 ML ಇರುತ್ತೆ. ಇದರ ಒಟ್ಟು ಬೆಲೆ 20,820-00 ರೂಪಾಯಿಗಳು ಸದರಿ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತಿರುಮಲ ವೈನ್ಸ್ ನಿಂದ ಹಳ್ಳಿಗಳಿಗೆ ಹೆಚ್ಚಿನ ಬೆಲೆಗೆ ಮಾರಲು ತೆಗೆದುಕೊಂಡು ಹೋಗುತ್ತೀರುವುದಾಗಿ ತಿಳಿಸಿದ್ದು ಯಾವುದೇ ಮದ್ಯ ಮಾರಲು ಪರವಾನಿಗೆ ಇಲ್ಲವೆಂತ ತಿಳಿಸಿರುತ್ತಾರೆ. ಸ್ಥಳದಲ್ಲಿ ಸಿಕ್ಕಿದ ಆರೋಪಿ ಮತ್ತು ಮಾಲನ್ನು ಅಸಲು ಪಂಚನಾಮೆಯೊಂದಿಗೆ ನೀಡಿದ್ದವುಗಳನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.104/2021 ಕಲಂ. 506,504,307 ಐ.ಪಿ.ಸಿ :-

  ದಿ:28/07/2021  ರಂದು ರಾತ್ರಿ 10-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ.ಕೆ.ಎಂ.ನಾರಾಯಣಸ್ವಾಮಿ @ ರಾಜು  ಬಿನ್  ಕೆ.ಸಿ.ಮುನಿಯಪ್ಪ, ವಾಸ ಭಾರತಿ ಶೋರೂಂ ಪಕ್ಕ, ಮಾದವನಗರ, ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಸುಮಾರು 26 ವರ್ಷಗಳ ಹಿಂದೆ   ಶ್ರೀಮತಿ.ವಿಜಯನಿರ್ಮಲ ರವರನ್ನು ಮದುವೆಯಾಗಿದ್ದು, ನಮಗೆ ಒಂದನೇ ಶ್ರೀ.ಶ್ವೇತಶ್ರೀ, 22 ವರ್ಷ , ಎರಡನೇ ಸಂಜಯ್,21 ವರ್ಷ  ಮತ್ತು ಮುರನೇಯ ಶ್ರೀ.ಸಹನಾ, 20 ವರ್ಷ  ಎಂಬ ಮೂರು ಜನ ಮಕ್ಕಳಿರುತ್ತಾರೆ. ನನ್ನ ಮಗನಾದ  ಸಂಜಯ್ ಎಂಬುವವರು 09 ನೇ ತರಗತಿಯವರಗೆ ವಿಧ್ಯಾಭ್ಯಾಸವನ್ನು ಮಾಡಿ ನಂತರ ಕುಟುಂಬದ ಪೋಷಣೆಯ ಕಾರಣಗಳಿಂದ ಮುಂದಿನ ವಿಧ್ಯಾಭ್ಯಾಸವನ್ನು ಮಾಡದೇ  ಖಾಸಗಿ ಕೆಲಸವನ್ನು ಮಾಡಿಕೊಂಡು ನಮ್ಮ ಜೊತೆಯಲ್ಲಿ ವಾಸವಾಗಿರುತ್ತಾನೆ. ನನ್ನ ಮಗನಿಗೆ ಗೌರಿಬಿದನೂರು ನಗರದ ವಾಸಿಯಾದ ಶ್ರೀಕಾಂತ ಬಿನ್ ಲೇಟ್ ಸುಬ್ರಮಣ್ಯ, ಎಸ್.ಸಿ.ಜನಾಂಗ, ಸುಮಾರು 21 ವರ್ಷ, ವಿವೇಕಾನಂದ ಕಾಲೋನಿ  ಎಂಬುವವರು  ಪರಿಚಯವಾಗಿ ಆಗಾಗ ನಮ್ಮ ಮಗನ ಜೊತೆಯಲ್ಲಿ ಆಚೆ ಕಾಣಿಸಿಕೊಳ್ಳುತ್ತಿದ್ದು ಈ ವಿಚಾರದಲ್ಲಿ ಶ್ರೀಕಾಂತ ರವರಿಗೆ ನನ್ನ ಮಗನಾದ ಸಂಜಯ್ ರವರ  ಜೊತೆ ಸೇರಬೇಡವೆಂತ  ಬುದ್ದಿವಾದ ಹೇಳಿದ್ದು ಈಬಗ್ಗೆ ನನ್ನ ಮಗನಿಗೂ ಸಹಾ ಬುದ್ದಿ ಹೇಳಿದ್ದೆವು.  ಈಗೀರುವಲ್ಲಿ ದಿ:27/07/2021 ರಂದು ರಾತ್ರಿ ಸುಮಾರು 8-55 ಗಂಟೆಯಲ್ಲಿ  ನಾನು   ಗೌರಿಬಿದನೂರು ತಾಲ್ಲೂಕಿನ, ಡಿ.ಪಾಳ್ಯ ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಏಸುಕ್ರಿಸ್ಥನಿಗೆ ಸಂಬಂಧಿಸಿದ ಧಾರ್ಮಿಕ ಕೆಲಸದಲ್ಲಿದ್ದಾಗ  ನನ್ನ ಮಗನಾದ ಸಂಜಯ್ ರವರು ನನಗೆ ಮೊಬೈಲ್ ಕರೆ ಮಾಡಿ  ಗಾಬರಿಯಿಂದ ಮತ್ತು ಅಸ್ವಸ್ಥ ರೀತಿಯಲ್ಲಿ ಮಾತನಾಡುತ್ತಾ ಈದಿನ ದಿ:27/07/2021 ರಂದು ನಾನು ಮನೆಯಲ್ಲಿದ್ದಾಗ ರಾತ್ರಿ ಸುಮಾರು 8-35 ಗಂಟೆಗೆ  ನನ್ನ ಸ್ನೇಹಿತನಾದ  ಶ್ರೀಕಾಂತ ರವರು ನನಗೆ ಮೊಬೈಲ್ ಕರೆ ಮಾಡಿ ನಿನಗೆ ಕೊಡಬೇಕಾದ ಹಣವನ್ನು ಕೊಡುತ್ತೇನೆ ನೀನು ಗೌರಿಬಿದನೂರು ನಗರದ, ಕೋಟೆ ಶಾಲೆಯ ಆವರಣಕ್ಕೆ  ಬಂದು ಬಿಡು ಎಂದು ತಿಳಿಸಿದನು. ನಾನು ಈದಿನ ದಿ:27/07/2021 ರಂದು ರಾತ್ರಿ ಸುಮಾರು 8-45 ಗಂಟೆಗೆ  ಕೋಟೆಯ ಶಾಲೆಯ ಆವರಣಕ್ಕೆ ಹೋದಾಗ ಅಲ್ಲಿ ನನ್ನ ಸ್ನೇಹಿತನಾದ ಶ್ರೀಕಾಂತ ರವರಿದ್ದು  ನಾನು ಶ್ರೀಕಾಂತನನ್ನು ನನಗೆ ಕೊಡಬೇಕಾದ ಹಣವನ್ನು ಕೊಡ ಅಂತ ಕೇಳಿದಾಗ  ಯಾವ  ದುಡ್ಡು, ನಿನಗೆ ನಾನು ದುಡ್ಡನ್ನು ವಾಪಸ್ಸು ಕೊಡುವುದಿಲ್ಲ, ನಿನಗೆ  ನಾನು ಯಾವದೇ ಬಾಕಿಯಿರುವುದಿಲ್ಲವೆಂತ ಏಕಾ ಏಕಿ  ಜಗಳ ತೆಗೆದು  ನನ್ನ ಮೇಲೆ ಗಲಾಟೆ ಮಾಡಿ ನಿನ್ನನ್ನು ಇಲ್ಲಿಯೇ ಮುಗಿಸಿಬಿಡುತ್ತೇನೆ, ಲೋಫರ್ ನನ್ನ ಮಗನೇ  ಅಂತ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದನು.  ಆ ಸಂಧರ್ಭದಲ್ಲಿ ನನಗೆ ಪ್ರಾಣಭಯವಾಗಿ ದಿಕ್ಕುತೋಚದೇ ಆತನಿಂದ ತಪ್ಪಿಸಿಕೊಳ್ಳಲು ಅಕ್ಕಪಕ್ಕದ ಸಾರ್ವಜನಿಕರ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಳ್ಳಲು ಪ್ರಯತ್ನಿಸಿದಾಗ   ಶ್ರೀಕಾಂತನು ಆತನ ಬಳಿಯಿದ್ದ  ಚಾಕುವಿನಿಂದ  ನನ್ನ ಎಡಬಾಗದ ಪಕ್ಕೆಲುಬಿನ ಕೆಳಗೆ ಬಲವಾಗಿ (ದೊಕ್ಕೆಗೆ) ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದನು. ಇದರಿಂದ ನನಗೆ ರಕ್ತಗಾಯವಾಗಿ ಕಿರುಚುತ್ತಾ ಜೋರಾಗಿ ಕೂಗುತ್ತಿದ್ದಂತೆ ಅಕ್ಕಪಕ್ಕದ ಯಾರೋ ಸಾರ್ವಜನಿಕರು ನನ್ನ ಬಳಿಗೆ ಬರುವಷ್ಟರಲ್ಲಿ ಶ್ರೀಕಾಂತ ರವರು ಅಲ್ಲಿಂದ ಓಡಿ ಹೋಗಿದ್ದು, ನಂತರ ಸಾರ್ವಜನಿಕರು ನನ್ನನ್ನು ಉಪಚರಿಸಿ ಯಾವುದೋ ಆಟೋದಲ್ಲಿ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು  ಈ ವಿಚಾರವನ್ನು ನಮ್ಮ ತಾಯಿ ಮತ್ತು ಕುಟುಂಬದವರಿಗೆ ತಿಳಿಸಿದ್ದು, ನಮ್ಮ ತಾಯಿ ಮತ್ತು ಕುಟುಂಬದವರು ಆಸ್ಪತ್ರೆಗೆ ಬಂದಿದ್ದು  ವೈದ್ಯರು ನನ್ನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದು ನೀನು ಕೂಡಲೇ ಚಿಕ್ಕಬಳ್ಳಾಪುರಕ್ಕೆ ಬಾ ಅಂತ ತಿಳಿಸಿದನು. ನಾನು ಕೂಡಲೇ ಡಿ.ಪಾಳ್ಯದಿಂದ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಹೋದಾಗ ನನ್ನ ಮಗ ಚಿಕಿತ್ಸೆಯನ್ನು ಪಡೆಯುತ್ತಿದ್ದು  ಆಗ ನನ್ನ ಮಗನನ್ನು ಪುನಃ ಘಟನೆಯ ಬಗ್ಗೆ ವಿಚಾರಿಸಿದಾಗ ಮೇಲ್ಕಂಡಂತೆ  ತಿಳಿಸಿದ. ನಂತರ ಇಲ್ಲಿನ ಆಸ್ಪತ್ರೆಯ  ವೈಧ್ಯಾಧಿಕಾರಿಗಳು ನನ್ನ ಮಗನಾದ ಸಂಜಯ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ  ಕರೆದುಕೊಂಡು ಹೋಗಲು ನನಗೆ ತಿಳಿಸಿದ ಮೇರೆಗೆ ನನ್ನ ಮಗನನ್ನು ಕರೆದುಕೊಂಡು  ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ನಮ್ಮ ಕುಟಂಬದವರೆಲ್ಲಾ ನನ್ನ ಮಗನ ಜೊತೆ ಆಸ್ಪತ್ರೆಯಲ್ಲಿದ್ದುದ್ದರಿಂದ ಘಟನೆಯ ನಡೆದ ಕೂಡಲೇ ಠಾಣೆಯಲ್ಲಿ ದೂರನ್ನು ನೀಡಲು ಸಾದ್ಯವಾಗಿರುವುದಿಲ್ಲ. ನನ್ನ ಮಗನಾದ ಸಂಜಯ್ ರವರಿಗೆ  ಕೊಡಬೇಕಾದ ದುಡ್ಡನ್ನು ಕೊಡದೇ, ದುಡ್ಡನ್ನು ಕೊಡುವುದಾಗಿ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆಯನ್ನು ಹಾಕಿ ಚಾಕುವಿನಿಂದ ಮಾರಣಾಂತಿಕವಾದ ಹಲ್ಲೆಯನ್ನು ಮಾಡಿ ಕೊಲೆ ಪ್ರಯತ್ನವನ್ನು ಮಾಡಿರುವ ಶ್ರೀಕಾಂತ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆಂತ ನೀಡಿದ ದೂರಾಗಿದ್ದು ಈ ದೂರಿನ ಸಂಬಂಧ ಠಾಣೆಯಲ್ಲಿ  ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.248/2021 ಕಲಂ. 457,380,511 ಐ.ಪಿ.ಸಿ :-

  ದಿನಾಂಕ: 28/07/2021 ರಂದು ಬೆಳಿಗ್ಗೆ 10.15 ಗಂಟೆಯಲ್ಲಿ ಪಿರ್ಯಾದಿದಾರರಾದ ದಿವಾಕರ್.ಕೆ ಬಿನ್ ಲೇಟ್ ಕುಮಾರಾಚಾರಿ ರವರು 03 ಆಸಾಮಿಗಳನ್ನುಠಾಣೆಯಲ್ಲಿ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾವು ತಮ್ಮ ಗ್ರಾಮದಲ್ಲಿ ಕುಂದಲಗುರ್ಕಿ ರಸ್ತೆಯಲ್ಲಿ ಮನೆ ಕಟ್ಟಿಕೊಂಡು ಅದೇ ಬಿಲ್ಡಿಂಗ್ ನಲ್ಲಿ ಮುಂಭಾಗ ಸುಮಾರು 02 ವರ್ಷಗಳಿಂದ ನಿಕಿತ ಮೊಬೈಲ್ಸ್ ಅಂಗಡಿ ಇಟ್ಟುಕೊಂಡು ತಾನು ಮತ್ತು ತಮ್ಮ ಅಣ್ಣ ಭರತ್ ವ್ಯಾಪಾರ ಮಾಡಿಕೊಂಡಿರುತ್ತೇವೆ. ತಾವು ಪ್ರತಿದಿನ ಅಂಗಡಿಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆವಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ರಾತ್ರಿ ಅಂಗಡಿಗೆ ಬಾಗಿಲು ಹಾಕಿಕೊಂಡು ಮನೆಗೆ ಹೋಗುತ್ತಿರುತ್ತೇವೆ. ತಮ್ಮ ಅಂಗಡಿಗೆ ಮುಂಭಾಗದಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿರುತ್ತೆ. ಎಂದಿನಂತೆ ದಿನಾಂಕ: 27-07-2021 ರಂದು ಮೊಬೈಲ್ ಅಂಗಡಿಯಲ್ಲಿ ಬೆಳಿಗ್ಗೆಯಿಂದ ರಾತ್ರಿ 8-30 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡಿದ್ದು, ನಂತರ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿರುತ್ತೇವೆ. ರಾತ್ರಿ ಸುಮಾರು 1.00 ಗಂಟೆಯ ಸಮಯದಲ್ಲಿ ತಾನು ಮನೆಯಲ್ಲಿ ಮಲಗಿಕೊಂಡಿದ್ದಾಗ ತಮ್ಮ ಮೊಬೈಲ್ ಅಂಗಡಿಯ ಬಳಿ ಏನೋ ಶಬ್ದ ಆಗುತ್ತಿದ್ದುದನ್ನು ಕೇಳಿಸಿಕೊಂಡು ಮನೆಯ ಮಹಡಿ ಮೇಲಿಂದ ನೋಡಲಾಗಿ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಲು ತಮ್ಮ ಮೊಬೈಲ್ ಅಂಗಡಿಗೆ ಮುಂಭಾಗ ಅಳವಡಿಸಿದ್ದ ಸಿ.ಸಿ ಕ್ಯಾಮೆರಾಗಳನ್ನು ಪಕ್ಕಕ್ಕೆ ತಿರುಗಿಸಿ, ಆಯುಧಗಳಿಂದ ಅಂಗಡಿ ಬಾಗಿಲು ತೆಗೆಯಲು ಪ್ರಯತ್ನಿಸುತ್ತಿದ್ದಾಗ, ತಾನು ತಮ್ಮ ಮನೆಯವರು ಅಂಗಡಿ ಬಳಿ ಬಂದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮೂರು ಜನರನ್ನು ಹಿಡಿದುಕೊಳ್ಳಲು ಹೋದಾಗ ಆಸಾಮಿಗಳು ಓಡಿ ಹೋಗುವ ಪ್ರಯತ್ನದಲ್ಲಿ ಕೆಳಕ್ಕೆ ಬಿದ್ದು ಸ್ವಲ್ಪ ಗಾಯಗಳಾಗಿರುತ್ತವೆ. ಆಸಾಮಿಗಳನ್ನು ಹಿಡಿದುಕೊಂಡು ವಿಚಾರಿಸಲಾಗಿ  ತಾವು 1) ನಾಗಪ್ಪ @ ನಾಗರಾಜ ಬಿನ್ ಲೇಟ್ ಮುನಿಯಪ್ಪ, 45 ವರ್ಷ, ಪ.ಜಾತಿ, ಕೂಲಿ ಕೆಲಸ, ಬೈಚಾಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು, 2) ಮುನಿರಾಜು ಬಿನ್ ಗುಂಡಪ್ಪ, 40 ವರ್ಷ, ಪ.ಜಾತಿ, ಬೈಚಾಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು 3) ಮೂರ್ತಿ ಬಿನ್ ಮುನಿಶಾಮಪ್ಪ, 40 ವರ್ಷ, ನಾಯಕ, ಗುಂಡಮ್ಮನಹಳ್ಳಿ ಗ್ರಾಮ, ಮೆಳೇಕೋಟೆ ಬಳಿ, ದೊಡ್ಡಬಳ್ಳಾಪುರ  ತಾಲ್ಲೂಕು  ವಾಸಿಗಳು ಎಂದು ತಿಳಿಸಿರುತ್ತಾರೆ. ತಮ್ಮ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ ಮೇಲ್ಕಂಡ  ಮೂರು ಜನ ಕಳ್ಳರನ್ನು, ಕಳ್ಳತನ ಮಾಡಲು ಬಳಸಿದ ಆಯುಧಗಳೊಂದಿಗೆ ಕೆಲ ಗ್ರಾಮಸ್ಥರ ಸಹಾಯದಿಂದ ಹಿಡಿದುಕೊಂಡು ಮೂರು ಜನ ಆಸಾಮಿಗಳಿಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದು, ಮೇಲ್ಕಂಡ ಮೂರೂ ಜನ ಕಳ್ಳರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.249/2021 ಕಲಂ. 323,324,34 ಐ.ಪಿ.ಸಿ :-

  ದಿನಾಂಕ: 28/07/2021 ರಂದು ಮದ್ಯಾಹ್ನ 12.15 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಕೂಲಿ ಕೆಲಸ ಮಾಡಿಕೊಂಡು ತನ್ನ ಸಂಸಾರದೊಂದಿಗೆ ವಾಸವಾಗಿರುತ್ತೇನೆ. ತನಗೆ ದೇವನಹಳ್ಳಿ ತಾಲ್ಳೂಕು ಬೈಚಾಪುರ ಗ್ರಾಮದ ಮುನಿರಾಜು ಬಿನ್ ಗುಂಡಪ್ಪ, ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಮೂರ್ತಿ ಬಿನ್ ಮುನಿಶಾಮಪ್ಪ ರವರುಗಳು ಪರಿಚಯವಿದ್ದು ತಾವು ಮೂರು ಜನರು ಕೂಲಿ ಕೆಲಸ ಮಾಡಿಕೊಂಡಿದ್ದು ತಮಗೆ ಕೂಲಿ ಕೆಲಸದಿಂದ ಬರುತಿದ್ದ ಹಣ ಸಾಕಗಾದ ಕಾರಣ ತಾವು ಮೂರು ಜನರು ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕೆಂದು ಯೋಚಿಸಿ ತಾವುಗಳು ಕಳ್ಳತನ ಮಾಡಿದರೆ ಅದರಿಂದ ಹೆಚ್ಚು ಹಣ ಸಂಪಾದನೆ ಮಾಡುಬಹುದೆಂದು ಮಾತನಾಡಿಕೊಂಡು ದಿನಾಂಕ:27.07.2021 ರಂದು ಎಲ್ಲಿಯಾದರೂ ಕಳ್ಳತನ ಮಡೋಣವೆಂದು ಮಾತನಾಡಿಕೊಂಡು ಕಳ್ಳತನ ಮಾಡಲು ಇದೇ ದಿನ ರಾತ್ರಿ ಸುಮಾರು 1.00 ಗಂಟೆ ಸಮಯದಲ್ಲಿ ತಾನು ಹಾಗು ಮೇಲ್ಕಂಡ ತನ್ನ ಸ್ನೇಹಿರೊಂದಿಗೆ ಶಿಡ್ಲಘಟ್ಟ ತಾಲ್ಲುಕು ವೈ ಹುಣಸೇನಹಳ್ಳಿ ಗ್ರಾಮದ ರೈಲ್ವೇ ಸ್ಟೆಷನ್ ಬಳಿ ಕುಂದಲುಗುರ್ಕಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿರುವ ನಿಕಿತ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಲು ನಿರ್ದರಿಸಿಕೊಂಡು ನಿಕಿತ ಅಂಗಡಿಯ ಬಾಗಿಲನ್ನು ಮುರಿದು ಒಳಗಡೆ ಹೋಗಲು ಪ್ರಯತ್ನಿಸುತಿದ್ದಾಗ ಅಲ್ಲಿಗೆ ಬಂದು ಯಾರೋ ಸಾರ್ವಜನಿಕರು ತಮ್ಮ ಮೂರು ಜನರನ್ನು ಹಿಡಿದುಕೊಳ್ಳಲು ಪ್ರಯತ್ನಪಟ್ಟಾಗ ತಾವು ಮೂರು ಜನರು ತಪ್ಪಿಸಿಕೊಳ್ಳುವ ಸಲುವಾಗಿ ಓಡಿ ಹೋಗಲು ಪ್ರಯತ್ನ ಪಟ್ಟಾಗ ಮೂರು ಜನರು ಕೆಳಗಡೆ ಬಿದ್ದು ಹೋಗಿ ಗಾಯಗಳಾಗಿದ್ದು ಹಾಗು ಬಿದ್ದು ಹೋಗಿದ್ದು ತಮ್ಮನ್ನು ಯಾರೋ ಸಾರ್ವಜನಿಕರು ಕೈಗಳಿಂದ ಹಾಗೂ ಕಲ್ಲಿನಿಂದ ಹೊಡೆದು ತಮಗೆ ತಲೆಗೆ ಕೈ ಕಾಲುಗಳಿಗೆ ಗಾಯಗಳಾಗಿರುತ್ತೆ. ತಮಗೆ ಹೊಡೆದು ಗಾಯಗಳನ್ನುಂಟು ಮಾಡಿದ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.250/2021 ಕಲಂ. 78(3) ಕೆ.ಪಿ ಆಕ್ಟ್:-

  ದಿನಾಂಕ 28/07/2021 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿದಾರರಾದ ಮಹೇಂದ್ರ.ಎನ್ ಎಪಿಸಿ-63 ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಚಿಕ್ಕಬಳ್ಳಾಪುರ ಜಿಲ್ಲೆರವರು ಎಸ್.ಪಿ ಸ್ಕ್ವಾಡ್ ಆಗಿ ನೇಮಿಸಿದ್ದು, ತನಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ದಾಳಿ ಮಾಡಲು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾನು ಈ ದಿನ ದಿನಾಂಕ 28/07/2021 ರಂದು ಬೆಳಿಗ್ಗೆ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4-30 ಗಂಟೆ ಸಮಯದಲ್ಲಿ ಮೇಲೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಮೇಲೂರು ಗ್ರಾಮದ ಸರ್ಕಲ್ ನಲ್ಲಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ತೋರಿಸಿ ಲಾಟರಿ ಟಿಕೇಟ್ ಆಡಲು ಗುಂಪುಸೇರಿಸಿಕೊಂಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಮೇಲೂರು ಗ್ರಾಮದ ಸರ್ಕಲ್ ಬಳಿ ಹೋಗಿ ಅಂಗಡಿಗಳ ಮರೆಯಲ್ಲಿ ನಿಂತು ನೋಡಲಾಗಿ ಸರ್ಕಲ್ ನಲ್ಲಿ ಒಬ್ಬ ಆಸಾಮಿಯು ನಿಂತುಕೊಂಡು ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ತನ್ನ ಬಳಿ ಇದ್ದ ಮೊಬೈಲ್ ನಲ್ಲಿನ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ತೋರಿಸಿ, ಸದರಿ ಟಿಕೇಟ್ ಗಳು ಡ್ರಾ ಆಗುವ ದಿನಾಂಕವನ್ನು ತಿಳಿಸಿ, ಈ ಲಾಟರಿಗಳನ್ನು ನೀವು ಖರೀದಿ ಮಾಡಿ ಎಂದು ಕರೆಯುತ್ತಿದ್ದು, ಕೂಡಲೇ ತಾನು ಸದರಿ ಆಸಾಮಿಯ ಮೇಲೆ ದಾಳಿ ಮಾಡಿ ಆತನನ್ನು ಮತ್ತು ಆತನ ಬಳಿ ಇದ್ದ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ವಾಸುದೇವ್ ಬಿನ್ ನಾರಾಯಣಪ್ಪ, 56 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ-ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯ ಮೊಬೈಲ್ ಅನ್ನು ಪರಿಶೀಲಿಸಲಾಗಿ ನಿನ್ನೆ ದಿನ ಲಾಟರಿ ಆಡಿರುವುದು ಕಂಡು ಬಂದಿದ್ದು, ಸದರಿ ಆಸಾಮಿಯು ಅಕ್ರಮವಾಗಿ ಲಾಟರಿ ಟಿಕೇಟ್ ಅಡುತ್ತಿರುವುದಾಗಿ ಕಂಡು ಬಂದಿದ್ದರಿಂದ ಆಸಾಮಿಯನ್ನು ಮತ್ತು ಮೊಬೈಲ್ ಅನ್ನು ಮುಂದಿನ ಕ್ರಮದ ಬಗ್ಗೆ ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು, ಆಸಾಮಿಯನ್ನು ಮತ್ತು ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು, ಅಕ್ರಮವಾಗಿ ಲಾಟರಿ ಬೆಟ್ಟಿಂಗ್ ನಡೆಸುತ್ತಿದ್ದ ಆಸಾಮಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 30-07-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080