ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 171/2021 ಕಲಂ. 120B,406,420,506,34 ಐ.ಪಿ.ಸಿ:-

  ದಿನಾಂಕ: 28/06/2021 ರಂದು ಮದ್ಯಾಹ್ನ 12-15 ಗಂಟೆಗೆ ಪಿರ್ಯಾದಿದಾರರಾದ ಬಿ.ವಿಶಾಲಾಕ್ಷಿ ಕೋಂ ಬಿ. ಪುರುಷೋತ್ತಮ ರೆಡ್ಡಿ 64 ವರ್ಷ, ವಕ್ಕಲಿಗರು, ಗೃಹಿಣಿ, ಪ್ಲಾಟ್ ನಂ 279, ಎಂ.ಎಲ್.ಎ & ಎಂ.ಪಿ ಸ್ ಕಾಲೋನಿ, ರೋಡ್ ನಂ 10-ಸಿ ಜ್ಯೂಬ್ಲಿ ಹಿಲ್ಸ್, ಹೈದ್ರಾಬಾದ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:17/11/2018 ರಂದು ಬಾಗೇಪಲ್ಲಿ ತಾಲ್ಲೂಕಿನ ಪಾತಬಾಗೇಪಲ್ಲಿ ವಾಸಿ ಸೋಮಶೇಖರ ರೆಡ್ಡಿ ರವರ ಬಾಬತ್ತು ಪಾತಬಾಗೇಪಲ್ಲಿ ಸರ್ವೇ ನಂಬರ್ ಗಳಾದ 36 ರಲ್ಲಿ 4 ಎಕರೆ 19 ಗುಂಟೆ, ಖರಾಬು 13 ½ ಗುಂಟೆ, ಜಮೀನನ್ನು, ಸರ್ವೇ ನಂಬರ್ 29/2 ರಲ್ಲಿ 3 ಎಕರೆ 10 ಗುಂಟೆ ಖರಾಬು 5 ಗುಂಟೆ ಜಮೀನು, ಸರ್ವೇ ನಂಬರ್ 26/2 ರಲ್ಲಿ 1 ಎಕರೆ 18 ಗುಂಟೆ ಖರಾಬು 4 ಗುಂಟೆ, ಸರ್ವೇ ನಂಬರ್ 25/2 ರಲ್ಲಿ 32 ಗುಂಟೆ, ಖರಾಬು 3 ಗುಂಟೆ ಜಮೀನನ್ನು ಸೋಮಶೇಖರ ರೆಡ್ಡಿ ಬಿನ್ ಟಿ.ಎನ್ ಚಂಗಲರಾಯರೆಡ್ಡಿ, 41 ವರ್ಷ, ವಕ್ಕಲಿಗರು ಮತ್ತು ಶ್ರೀಮತಿ ಪ್ರಸನ್ನಲತ ಕೋಂ ಟಿ.ಸಿ ಸೋಮಶೇಖರ ರೆಡ್ಡಿ, 35 ವರ್ಷ, ಹಾಗೂ ಅವರ ಮಗಳಾದ ಕುಮಾರಿ ಆರತಿ ರವರ ಪರವಾಗಿ  ಆಕೆಯ ತಾಯಿ ಪ್ರಸನ್ನಲತ ರವರು ನನಗೆ ಬಾಗೇಪಲ್ಲಿಯ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ BGP-4-00141-2018-19 ರಂತೆ ಜಿ.ಪಿ.ಎ ಮಾಡಿಕೊಟ್ಟಿರುತ್ತಾರೆ. ಮುಂದುವರೆದು ಇದೇ ದಿನ ಮೇಲ್ಕಂಡವರು ಬಾಗೇಪಲ್ಲಿಯ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ದಾಖಲಾತಿ ಸಂಖ್ಯೆ 4227/2018-19 ರಂತೆ ಸೇಲ್ ಅಗ್ರಿಮೆಂಟ್ ಸಹಾ ನನಗೆ ಮಾಡಿಕೊಟ್ಟಿರುತ್ತಾರೆ. ಇದಕ್ಕೆ ನನ್ನಿಂದ DD NO-004157 ರಲ್ಲಿ 14,50,000/- ರೂ.ಗಳ ಪೂರ್ತಿಹಣವನ್ನು ಪಡೆದಿರುತ್ತಾರೆ. , ಸೋಮಶೇಖರರೆಡ್ಡಿ ರವರು ನನಗೆ ಮೇಲ್ಕಂಡ ಜಮೀನನ್ನು ಸ್ವಾಧೀನ ಸಹಿತ ವಾಗಿ ನೀಡಿರುತ್ತಾರೆ. ಇದೇ ದಿನ  ಸೋಮಶೇಖರ ರೆಡ್ಡಿ ರವರು  ತನ್ನ ತಂದೆ ಹಾಗೂ ತಮ್ಮನ ಹೆಸರಿನಲ್ಲಿ ಜಮೀನುಗಳಿದ್ದು, ಇವುಗಳನ್ನು ಸಹಾ ನನ್ನ ಹೆಸರಿಗೆ ಕ್ರಯ ಮಾಡಿಕೊಡುವುದಾಗಿ ನನ್ನನ್ನು ನಂಬಿಸಿ ನನ್ನ ಹೆಚ್.ಡಿ.ಎಫ್.ಸಿ ಸಹಕಾರ ನಗರ ಬ್ರಾಂಚ್ ಬೆಂಗಳೂರು ಖಾತೆಯಿಂದ 40,50,000/- ರೂ.ಗಳ ಡಿ.ಡಿ ಯನ್ನು ಪಡೆದುಕೊಂಡಿರುತ್ತಾನೆ. ಇದಕ್ಕೆ ಸೋಮಶೇಖರ ರೆಡ್ಡಿ ರವರ ತಮ್ಮ ರಾಘವೇಂದ್ರ ರೆಡ್ಡಿ  ಮತ್ತು ಅವರ ತಂದೆ ಚಂಗಲರಾಯರೆಡ್ಡಿ ರವರು ಸಾಕ್ಷೀಗಳಾಗಿರುತ್ತಾರೆ. ಎಂ.ಸುಬ್ಬಿರೆಡ್ಡಿ ರವರು ಗುರ್ತಿಸಿರುತ್ತಾರೆ.  ನಂತರ ನಾನು ಆಗಾಗ ಜಮೀನಿನ ಬಳಿ ಬಂದು ಹೋಗುತ್ತಿದ್ದೆನು.  ಇತ್ತೀಚೆಗೆ ನಾನು ಜಮೀನಿನ ಬಳಿ ಬಂದಾಗ, ಮೇಲ್ಕಂಡ ಸರ್ವೇ ನಂಬರ್ 25/2,26/2,29/2 ರಲ್ಲಿನ ಜಮೀನನ್ನು ನನಗೆ ಜಿ.ಪಿ.ಎ ಮತ್ತು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದ ಸೋಮಶೇಖರ ರೆಡ್ಡಿ ಆತನ ಹೆಂಡತಿ ಪ್ರಸನ್ನಲತಾ ಹಾಗೂ ಪ್ರಸನ್ನಲತಾ ರವರ ಅತ್ತಿಗೆಯಾದ ಲಕ್ಷ್ಮೀ ಕೋಂ ಅಪ್ಪಿರೆಡ್ಡಿಗಾರಿ ಅಮರನಾಥರೆಡ್ಡಿ, 48 ವರ್ಷ, ರೇಗಾಟಿಪಲ್ಲಿ ಗ್ರಾಮ, ಧರ್ಮಾವರಂ ತಾಲ್ಲೂಕು, ಅನಂತಪುರಂ ಜಿಲ್ಲೆ, ಗುರ್ತಿಸುವವರಾದ ಎಂ.ಸುಬ್ಬಿರೆಡ್ಡಿ ರವರು ನನಗೆ ಮೋಸ ಮಾಡಬೇಕೆಂಬ ಒಳಸಂಚಿನಿಂದ 13/11/2020 ರಂದು  ಸೋಮಶೇಖರ ರೆಡ್ಡಿ ರವರು  ಲಕ್ಷ್ಮೀ ರವರಿಗೆ  ಕ್ರಯ ಮಾಡಿಕೊಟ್ಟಿರುತ್ತಾರೆಂದು ತಿಳಿಯಿತು. ತಕ್ಷಣ ನಾನು ಉಳಿದ ಸರ್ವೇ ನಂಬರ್ 36 ರ ಜಮೀನನ್ನೂ ನನ್ನ ಮಗನಾದ ಬಿ ರವೀಂದ್ರ ರೆಡ್ಡಿ ರವರಿಗೆ ಕ್ರಯ ಮಾಡಿಕೊಟ್ಟಿರುತ್ತೇನೆ. ನಂತರ ನಾನು ಬಾಗೇಪಲ್ಲಿಗೆ ಬಂದು ಸೋಮಶೇಖರ ರೆಡ್ಡಿ ರವರ ಬಳಿ ಹೋಗಿ ಈ ಬಗ್ಗೆ  ಕೇಳಲಾಗಿ ಸೋಮಶೇಖರ ರೆಡ್ಡಿ ನಾನು ಬೇಕೆಂದು ನಿಮಗೆ ಮೋಸ ಮಾಡಲು ಒಳಸಂಚಿನಿಂದ ಈ ರೀತಿ ಮಾಡಿರುವುದಾಗಿಯೂ ನಿಮಗೆ ಜಮೀನು ಕೊಡುವುದಿಲ್ಲ ಹಣವನ್ನೂ ವಾಪಸ್ ನೀಡುವುದಿಲ್ಲ ಈ ವಿಚಾರವಾಗಿ ನನ್ನ ಬಳಿ ಬಂದರೆ, ನಿಮಗೆ ಒಂದು ಗತಿ ಕಾಣಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ.  ನನಗೆ ಮೋಸ ಮಾಡುವ ಉದ್ದೇಶದಿಂದ ಮೇಲ್ಕಂಡ ಸೋಮಶೇಖರ ರೆಡ್ಡಿ, ಪ್ರಸನ್ನಲತ, ಎಂ.ಸುಬ್ಬಿರೆಡ್ಡಿ, ಲಕ್ಷ್ಮೀ ಕೋಂ ಅಮರನಾಥ ರೆಡ್ಡಿ ರವರು ಒಳಸಂಚಿನಿಂದ ಲಕ್ಷ್ಮೀ ರವರ ಹೆಸರಿಗೆ ನನಗೆ ಜಿ.ಪಿ.ಎ ಮತ್ತು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದ ಜಮೀನನ್ನು ಲಕ್ಷ್ಮೀ ರವರ ಹೆಸರಿಗೆ ಕ್ರಯ ಮಾಡಿಸಿ ಅಲ್ಲದೆ ತನ್ನ ತಂದೆ ಹಾಗೂ ತಮ್ಮನ ಜಮೀನನ್ನು ನನಗೆ ಕ್ರಯ ಮಾಡಿಕೊಡುವುದಾಗಿ ಹೇಳಿ ನನ್ನಿಂದ ಹಣ ಪಡೆದು ಕ್ರಯ ಮಾಡಿಕೊಡದೆ ನನಗೆ ಅಪರಾಧಿಕ ನಂಬಿಕೆ ದ್ರೋಹವನ್ನು ಎಸಗಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 89/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ: 28/06/2021 ರಂದು 18:00 ಗಂಟೆಗೆ ಠಾಣಾ ಎನ್,ಸಿ,ಆರ್ ನಂ 131/2021 ರಲ್ಲಿ ಪ್ರಕರಣ ದಾಖಲಿಸಲು ಘನ ಒಂದನೇ ಅಪರ ಸಿ,ಜೆ ಮತ್ತು ಜೆ,ಎಮ,ಫ್,ಸಿ ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ ಪ್ರಕರಣ ದಾಖಲಿಸಲು ಅನುಮತಿಯ ಸಾರಾಂಶವೆನೆಂದರೆ ದಿನಾಂಕ:28/06/2021 ರಂದು ಸಾಯಂಕಾಲ 4-45 ಗಂಟೆಗೆ ಪಿ.ಎಸ್.ಐ ಸಾಹೇಬರು ಆರೋಪಿಗಳು ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ಈ ದಿನ ದಿನಾಂಕ: 28.06.2021  ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಅಣಕನೂರು ಗ್ರಾಮದ  ಸರ್ಕಾರಿ ಅಮಾನಿ ಗೋಪಾಲಕೃಷ್ಣ ಕೆರೆ ಹೊರವಲಯದಲ್ಲಿರುವ ಜಾಲಿ ಮರದ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಯಾರೋ ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಹೆಚ್.ಸಿ-38 ಸುರೇಶ್,  ಹೆಚ್,ಸಿ 33 ರಾಜೇಶ್ ಪಿ.ಸಿ 446 ಕರಿಬಾಬು ಪಿ.ಸಿ-264 ನರಸಿಂಹಮೂರ್ತಿ,  ಪಿ.ಸಿ-292 ಸಲೀಂ ಮುಲ್ಲಾ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಪಂಚಾಯ್ತಿದಾರರನ್ನು ಸರ್ಕಾರಿ ಅಮಾನಿ ಗೋಪಾಲಕೃಷ್ಣ ಕೆರೆ ಹೊರವಲಯದಲ್ಲಿರುವ ಜಾಲಿ ಮರದ ಕೆಳಗೆ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ಜಾಲಿ ಮರದ ಕಡೆಗೆ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಜಾಲಿ ಮರದ ಕಡೆಗೆ 03 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಮಂಜುನಾಥ ಸಿ,ಎ ಬಿನ್ ಲೇಟ್ ಅಪ್ಪಯ್ಯ ಶೆಟ್ಟಿ .60 ವರ್ಷ, ಬಲಜಿಗರು, ವ್ಯಾಪಾರ ಚೊಕ್ಕಹಳ್ಳಿ ಗ್ರಾಮ , , ಚಿಕ್ಕಬಳ್ಳಾಪುರ ತಾಲ್ಲೂಕು, 2] ಶಿವಕುಮಾರ ಎಸ್, ಬಿನ್ ಶ್ರೀರಾಮಯ್ಯ 38 ವರ್ಷ,ಬೋವಿ ಜನಾಂಗ, ಡ್ರೈವರ್ ಕೆಲಸ, ಚಾಮರಾಜಪೇಟೆ, ಚಿಕ್ಕಬಳ್ಳಾಪುರ ನಗರ, 3] ವೆಂಕಟೇಶ್ ಬಿನ್ ವೆಂಕಟರೋಣಪ್ಪ, 45 ವರ್ಷ, ಬಲಜಿಗರು, ಕೂಲಿ ಕೆಲಸ ಕಂದವಾರ ಬಾಗಿಲು, ಚಿಕ್ಕಬಳ್ಳಾಪುರ ನಗರ  ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 3440/ -ರೂ. ಗಳಿದ್ದು, ಮೇಲ್ಕಂಡ 03 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 3440/-ರೂ. ನಗದು ಹಣವನ್ನು ಮದ್ಯಾಹ್ನ 3-30 ಗಂಟೆಯಿಂದ ಸಾಯಂಕಾಲ 4-15 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಕೆ.ಪಿ.ಆಕ್ಟ್ ಅಡಿಯಲ್ಲಿ ಮೇಲ್ಕಂಡ ಅಸಾಮಿಗಳ ವಿರುದ್ದ  ಪ್ರ,ವ,ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 90/2021 ಕಲಂ. 279,337,304(A) ಐ.ಪಿ.ಸಿ:-

  ದಿನಾಂಕ: 28/06/2021 ರಂದು ರಾತ್ರಿ 7-00 ಗಂಟೆಯ ಸಮಯದಲ್ಲಿ ಪಿರ್ಯಾದಿ ಶ್ರೀಮತಿ  ಕೆ. ಸರಸ್ವತಿ  ಕೋಂ  ಒಬಳೇಶ 29ವರ್ಷ ಆದಿದ್ರಾವಿಡ ಜನಾಂಗ ಕಣಿತಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 27/06/2021 ರಂದು ತನ್ನ ತಮ್ಮ ಗಂಗಾಧರ ರವರ ಮದುವೆಯ ಕಾರ್ಯ ಶಿಡ್ಲಘಟ್ಟ ತಾಲ್ಲೂಕು ತನ್ನ ತವರು ಮನೆ ವೀರಾಪುರ ಗ್ರಾಮದಲ್ಲಿ ನಡೆದಿದ್ದು, ದಿನಾಂಕ: 28/06/2021 ರಂದು ಚಿಕ್ಕಬಳ್ಳಾಪುರ ತಾಲ್ಲೂಕು ಆವಲಗುರ್ಕಿ ಗ್ರಾಮದಲ್ಲಿ ರಿಸೆಪ್ಷನ್ ಇದ್ದುದರಿಂದ  ವೀರಾಪುರ ಗ್ರಾಮದ ದ್ಯಾವಪ್ಪ ರವರ ಬಾಬತ್ತು KA-04-C-2062  ನಂಬರಿನ ಟಾಟಾ ಸುಮೋ ವಾಹನದಲ್ಲಿ ಆವಲಗುರ್ಕಿ ಗ್ರಾಮಕ್ಕೆ ಹೋಗಲು ತಾನು, ತನ್ನ ದೊಡ್ಡಪ್ಪ ಮುನಿಯಪ್ಪ ಬಿನ್ ಲೇಟ್ ವೆಂಕಟರಾಯಪ್ಪ ತನ್ನ ದೊಡ್ಡಮ್ಮ ಸಂಜೀವಮ್ಮ, ತನ್ನ ಗಂಡ ಒಬಳೇಶ, ಮಗಳಾದ ಮಾನಸ. ತನ್ನ ತಾಯಿ ಪಿಳ್ಳಮ್ಮ ತಂದೆ  ಕೃಷ್ಣಪ್ಪ.  ತಮ್ಮನಾದ  ಲಕ್ಷ್ಮೀಕಾಂತ್.  ಕಾರು ಚಾಲಕ  ಭುಜೇಂದ್ರ ಬಿನ್ ದ್ಯಾವಪ್ಪ ರವರೊಂದಿಗೆ ಮದ್ಯಾಹ್ನ 3-00 ಗಂಟೆಗೆ ವೀರಾಪುರ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಬರಲು ಎನ್.ಹೆಚ್.234 ರಸ್ತೆಯ ಲಕ್ಕಹಳ್ಳಿ  ಗೇಟ್ ಸಮೀಪ ಬರುತ್ತಿದ್ದಾಗ  ಚಾಲಕ ಭುಜೇಂದ್ರ ಬಿನ್ ದ್ಯಾವಪ್ಪ ರವರು KA-04-C-2062  ನಂಬರಿನ ಟಾಟಾ ಸುಮೋ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದಿದ್ದು, ಮದ್ಯಾಹ್ನ 3-15 ಗಂಟೆಯ ಸಮಯದಲ್ಲಿ ಲಕ್ಕಹಳ್ಳಿ ಗೇಟ್ ಸಮೀಪ  ಯಾವುದೋ ಒಂದು ದ್ವಿಚಕ್ರ ವಾಹನ ಹಠಾತ್ ಆಗಿ ರಸ್ತೆಗೆ ಬಂದಿದ್ದರಿಂದ  ವಾಹನ ಸವಾರನ ನಿಯಂತ್ರಣ ತಪ್ಪಿ  ರಸ್ತೆಯ ಬದಿಗೆ ಉರುಳಿಸಿ ಅಪಘಾತ ಪಡಿಸಿದ್ದರಿಂದ  ವಾಹನ ಜಖಂಗೊಂಡು  ವಾಹನದಲ್ಲಿದ್ದ  ತನಗೆ  ಸೊಂಟಕ್ಕೆ ಪೆಟ್ಟಾಗಿದ್ದು,  ಉಳಿದವರಿಗೂ ಗಾಯಗಳಾಗಿದ್ದು ಆ ಪೈಕಿ ತನ್ನ ಮಗಳಾದ 09ವರ್ಷದ ಮಾನಸ ರವರ ತಲೆಗೆ ತೀವ್ರತರವಾದ  ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಸ್ಥಳಕ್ಕೆ ಬಂದ ಸಾರ್ವಜನಿಕರು ನಮ್ಮನ್ನು   ಉಪಚರಿಸಿ  ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ  ಕಳುಹಿಸಿಕೊಟ್ಟರು. ನಮ್ಮ ದೊಡ್ಡಪ್ಪ ಮುನಿಯಪ್ಪ ರವರನ್ನು ಯಾವುದೋ ಕಾರಿನಲ್ಲಿ ಶಿಡ್ಲಘಟ್ಟ ಆಸ್ಪತ್ರೆಗೆ ಕಳುಹಿಸಿದ್ದು ಸಂಜೆ 4-00 ಗಂಟೆಯಲ್ಲಿ ಮುನಿಯಪ್ಪರವರು ಆಸ್ಪತ್ರೆಯಲ್ಲಿ ತೀರಕೊಂಡಿರುತ್ತಾರೆ. ಉಳಿದವರು ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಈ ಅಪಘಾತಕ್ಕೆ ಕಾರಣವಾದ KA-04-C-2062  ನಂಬರಿನ ಟಾಟಾ ಸುಮೋ ವಾಹನದ ಚಾಲಕ ಭುಜೇಂದ್ರ ಬಿನ್ ದ್ಯಾವಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 294/2021 ಕಲಂ. 279,337  ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ 28-06-2021 ರಂದು ಬೆಳಗ್ಗೆ 11-30 ಗಂಟೆಗೆ ಹೆಚ್.ಸಿ 41 ರವರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ವತ್ರೆಯಲ್ಲಿ ಗಾಯಾಳು ತಾನಿಯಾ ಶೇಖ್ ಕೊಂ ಅಮೀರ್ ಶೇಖ್, 22 ವರ್ಷ, ಮುಸ್ಲಿಂ ಜನಾಂಗ, ತುಳಸಿ ಚಿತ್ರಮಂದಿರ ಹತ್ತಿರ, ಮಾರತ್ ಹಳ್ಳಿ, ಬೆಂಗಳೂರು ನಗರ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ  ತನಗೆ ಸುಮಾರು 05 ವರ್ಷದ ಹಿಂದೆ ಅಮೀರ್ ಶೇಖ್ ರವರ ಜೊತೆ ಮದುವೆಯಾಗಿದ್ದು ತಮಗಿಬ್ಬರಿಗೂ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ಕಾರಣ ಬೇರೆ ಬೇರೆಯಾಗಿ ವಾಸವಾಗಿದ್ದು, ಹಾಲಿ ತಾನು ತನ್ನ ತಂಗಿಯಾದ ಕರಿಶ್ಮಾ ಕೊಂ ಜಿತೇಂದ್ರಕುಮಾರ್ ರವರ ಮನೆಯಲ್ಲಿ  ವಾಸವಾಗಿರುತ್ತೇನೆ. ದಿನಾಂಕ 27-06-2021 ರಂದು ತಾನು ಚಿಂತಾಮಣಿ ತಾಲ್ಲೂಕು ಮುರುಗಮಲ್ಲ ದರ್ಗಾಕ್ಕೆ  ಬರಲು ಅದೇ ದಿನ ರಾತ್ರಿ 9-00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ಕಾಗತಿ ಗ್ರಾಮದ ಬಳಿ ನಿಂತಿದ್ದಾಗ ಚಿಂತಾಮಣಿ ಕಡೆಯಿಂದ ಬಂದ ಯಾವುದೋ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಪಕ್ಕದಲ್ಲಿ ನಿಂತಿದ್ದ ತನಗೆ ಡಿಕ್ಕಿ ಹೊಡೆಸಿ ತನ್ನ ಬಲ ಕಾಲಿನ ಮೇಲೆ ಹರಿಸಿಕೊಂಡು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದನು. ಆಗ ತಾನು ಕೆಳಗೆ ಬಿದ್ದು ಹೋಗಿದ್ದು  ತನ್ನ ಬಲಕಾಲಿನ ತೊಡೆ ಮತ್ತು ಪಾದದ ಬಳಿ ಮತ್ತು ಎಡ ಕೈ ಬೆರಳುಗಳಿಗೆ ಮೂಳೆ ಮುರಿತದ ರಕ್ತಗಾಯಗಳಾಗಿರುತ್ತೆ. ಆಗ ರಸ್ತೆಯಲ್ಲಿ ಬಿದ್ದಿದ್ದ ತನ್ನನ್ನು ಯಾರೋ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು. ತನ್ನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ವತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.  ತಾನು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಆದ್ದರಿಂದ ತನಗೆ ಅಫಘಾತ ಮಾಡಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.  ತನಗೆ ಅಪಘಾತವಾದಾಗ ದ್ವಿಚಕ್ರ ವಾಹನದ ನಂಬರ್ ಅನ್ನು ನೋಡಿರುವುದಿಲ್ಲ. ಹಾಗೂ ಗಾಯಗಳ ದಿಸೆಯಿಂದ ತಾನು ಈ ಹೇಳಿಕೆಯನ್ನು ನೀಡಿದ್ದು ತಾನು ಪೂರ್ತಿಯಾಗಿ ಚೇತರಿಸಿಕೊಂಡ  ನಂತರ  ಪೂರ್ತಿ ಮಾಹಿತಿಯನ್ನು ನೀಡುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 119/2021 ಕಲಂ. 392  ಐ.ಪಿ.ಸಿ:-

  ದಿನಾಂಕ: 28/06/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಜೇಜಾಂಬ.ಬಿ ಕೋಂ ಶಿವಾರೆಡ್ಡಿ.ಎನ್, 40 ವರ್ಷ, ವಕ್ಕಲಿಗ, ಟೈಲರ್ ಕೆಲಸ, ವಾಸ: ಗುಂಡಪ್ಪ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಅಂಜನಿ ಬಡಾವಣೆಯಲ್ಲಿ ಮಹಾಲಕ್ಷ್ಮಿ ಲೇಡಿಸ್ ಟೈಲರ್ ಅಂಗಡಿ ಇಟ್ಟುಕೊಂಡಿರುತ್ತೇನೆ. ದಿನಾಂಕ:28/06/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ನಾನು ಚಿಂತಾಮಣಿ ಎನ್.ಆರ್.ಬಡಾವಣೆಯಲ್ಲಿರುವ ಕಾರ್ಪೋರೆಷನ್  ಬ್ಯಾಂಕ್ ನಲ್ಲಿ ನನ್ನ ಖಾತೆಗೆ ಹಣವನ್ನು ಕಟ್ಟಿ ನಂತರ ಮನೆಗೆ ವಾಪಸ್ಸು ಬರಲು ಮದ್ಯಾಹ್ನ: 1-10 ಗಂಟೆಯಲ್ಲಿ ಎನ್.ಆರ್.ಬಡಾವಣೆ ಶ್ರೀ.ಸಾಯಿ ಹೋಮಯೋಪತಿ ಅಂಗಡಿಯ ಮುಂಭಾಗ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ಮುಂದುಗಡೆಯಿಂದ ಬಂದ ಪಲ್ಸರ್ ದ್ವಿಚಕ್ರವಾಹನದಲ್ಲಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಹಾಕಿರುವ ಸುಮಾರು 25 ರಿಂದ 30ವರ್ಷ ವಯಸ್ಸಿನವರು ಬಂದು ಹಿಂಬದಿ ಸವಾರ ನನ್ನ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಾಗ ನನ್ನ ಕತ್ತಿನ ಎಡಭಾಗದಲ್ಲಿ ತರಚಿದ ಗಾಯವಾಗಿ ನಾನು ಕೆಳಗಡೆ ಕುಳಿತುಕೊಂಡೆ. ನನ್ನ ಬಳಿ ಕಿತ್ತುಕೊಂಡ ದ್ವಿಚಕ್ರ ವಾಹನ ಸವಾರರು   ಪೂಜಾ ಬೇಬಿ ಸಿಟ್ಟಿಂಗ್ ರಸ್ತೆ ಕಡೆ ಹೊರಟು ಹೋಗಿರುತ್ತಾರೆ. ನನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡ ಅಪರಿಚಿತ ವ್ಯಕ್ತಿಗಳ ಪೈಕಿ ಮುಂದಗಡೆ ಕುಳಿತಿದ್ದ ಕಪ್ಪು ಕಲ್ಲರ್ ಜಕರ್ೀನ್ ಹಾಕಿದ್ದು, ಹಿಂಬದಿ ಸವಾರ ಬಿಳಿ ಗೆರೆಗಳುಳ್ಳ ತುಂಬು ತೋಳಿನ ಷರಟು ಹಾಕಿರುತ್ತಾರೆ. ಗಾಬರಿಯಲ್ಲಿ ಪಲ್ಸರ್ ವಾಹನದ ನಂಬರನ್ನು ನೋಡಿರುವುದಿಲ್ಲ. ನನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರ ಸುಮಾರು 50 ಗ್ರಾಂ ತೂಕವಿದ್ದು ಬೆಲೆ ಸುಮಾರು 1,50,000 ರೂಗಳಾಗಿರುತ್ತೆ. ನನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 120/2021 ಕಲಂ. 392  ಐ.ಪಿ.ಸಿ:-

  ಶ್ರೀಮತಿ ಸುಶೀಲಮ್ಮ ಕೋಂ ಲೇಟ್ ಶಂಕರಾಚಾರಿ, 60 ವರ್ಷ, ಆಚಾರಿ ಜನಾಂಗ, ವಾಸ: ಸೊಣ್ಣಶೆಟ್ಟಿಹಳ್ಳಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ. ದಿನಾಂಕ:28/06/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ಚಿಂತಾಮಣಿ ಕೆನರಾ ಬ್ಯಾಂಕ್ಗೆ ಹೋಗಿ   ಕೆಲಸ ಮುಗಿಸಿಕೊಂಡು ನಂತರ ಮನೆಗೆ ವಾಪಸ್ಸು ಹೋಗಲು ಮದ್ಯಾಹ್ನ ಸುಮಾರು 1.30 ಗಂಟೆ ಸಮಯದಲ್ಲಿ ನಳಂದ ಶಾಲೆ ಮುಂಭಾಗದ ರಸ್ತೆಯ ಒಳಗಡೆ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ಮುಂದುಗಡೆಯಿಂದ ಬಂದ ಪಲ್ಸರ್ ದ್ವಿಚಕ್ರವಾಹನದಲ್ಲಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಹಾಕಿದ್ದು, ಅವರು ಸುಮಾರು 25 ರಿಂದ 30ವರ್ಷ ವಯಸ್ಸಿನವರು ಬಂದು ಹಿಂಬದಿ ಸವಾರ ನನ್ನ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಾಗ ನಾನು ಕೆಳಗಡೆ ಬಿದ್ದುಹೋಗಿರುತ್ತೇನೆ. ನನ್ನ ಬಳಿ ಕಿತ್ತುಕೊಂಡ ದ್ವಿಚಕ್ರ ವಾಹನ ಸವಾರರು ಕೋಲಾರ ರಸ್ತೆ ಕಡೆ ಹೊರಟು ಹೋಗಿರುತ್ತಾರೆ. ನನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡ ಅಪರಿಚಿತ ವ್ಯಕ್ತಿಗಳ ಪೈಕಿ ಮುಂದಗಡೆ ಕುಳಿತಿದ್ದ ಕಪ್ಪು ಕಲ್ಲರ್ ಜಕರ್ೀನ್ ಹಾಕಿದ್ದು, ಹಿಂಬದಿ ಸವಾರ ಬಿಳಿ ಗೆರೆಗಳುಳ್ಳ ತುಂಬು ತೋಳಿನ ಷರಟು ಹಾಕಿರುತ್ತಾರೆ. ಗಾಬರಿಯಲ್ಲಿ ಪಲ್ಸರ್ ವಾಹನದ ನಂಬರನ್ನು ನೋಡಿರುವುದಿಲ್ಲ. ನನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರ ಸುಮಾರು 45 ಗ್ರಾಂ ತೂಕವಿದ್ದು ಬೆಲೆ ಸುಮಾರು 1,00,000 ರೂಗಳಾಗಿರುತ್ತೆ. ನನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರುತ್ತೇನೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 75/2021 ಕಲಂ. 32,34 ಕೆ.ಇ ಆಕ್ಟ್:-

  ದಿನಾಂಕ:28/06/2021 ರಂದು ಸಂಜೆ 6.00 ಗಂಟೆಯಲ್ಲಿ ಪಿ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ 28/06/2021 ರಂದು ಸಂಜೆ 4.00 ಗಂಟೆಯಲ್ಲಿ  ಠಾಣೆಯಲ್ಲಿದ್ದಾಗ ಯಾರೋ ಒಬ್ಬ ಬಾತ್ಮಿದಾರರು ದೂರವಾಣಿ ಮುಖಾಂತರ ಕರೆ ಮಾಡಿ ದಢಂಘಟ್ಟ ಗ್ರಾಮದ ನಾರಾಯಣಪ್ಪ ಬಿನ್ ಲೇಟ್ ಗಂಗಪ್ಪರವರು ತನ್ನ ಮನೆಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಅದರಂತೆ ತಾನು ಠಾಣಾ ಸಿಬ್ಬಂಧಿಯಾದ ಹೆಚ್.ಸಿ-53 ಲೋಕೇಶ್ ಜಿ.ಎಂ ಮತ್ತು ಪಿ.ಸಿ-91 ಮಂಜುನಾಥರವರನ್ನು ಕರೆದುಕೊಂಡು ಠಾಣಾ ಪೊಲೀಸ್ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ತಿಮ್ಮನಾಯಕನಹಳ್ಳಿ ಗ್ರಾಮದ ಮಾರ್ಗವಾಗಿ ಗೊರ್ಲಗುಮ್ಮನಹಳ್ಳಿ ಗ್ರಾಮ ಬಿಟ್ಟು ದಢಂಘಟ್ಟ ಗ್ರಾಮಕ್ಕೆ ಬೇಟಿ ಮಾಡಿ ಸದರಿ ಗ್ರಾಮದಲ್ಲಿ ಪಂಚರನ್ನು ಬರ ಮಾಡಿಕೊಂಡು ವಿಚಾರ ತಿಳಿಸಿ, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದ್ದು, ಅವರು ಒಪ್ಪಿ ತಮ್ಮಗಳೊಂದಿಗೆ ಬರಲಾಗಿ, ತಾವು ಸಂಜೆ 4.15 ಗಂಟೆಗೆ ದಢಂಘಟ್ಟ ಗ್ರಾಮದ ನಾರಾಯಣಪ್ಪ ಬಿನ್ ಲೇಟ್ ಗಂಗಪ್ಪರವರ ಮನೆಯ ಬಳಿ ಹೋಗುತ್ತಿದ್ದಂತೆ ಮನೆಯ ಬಳಿ ಇದ್ದ  ಆಸಾಮಿಯು ಸ್ಥಳದಿಂದ ಪರಾರಿಯಾಗಿದ್ದು, ಹುಡುಕಲಾಗಿ ಸಿಗದೆ ಇದ್ದು, ನಂತರ  ಸ್ಥಳದಲ್ಲಿದ್ದವರನ್ನು ಪರಾರಿಯಾದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಾರಾಯಣಪ್ಪ ಬಿನ್ ಲೇಟ್ ಗಂಗಪ್ಪ, 55 ವರ್ಷ, ಆದಿ ಕರ್ನಾಟಕ ಜನಾಂಗ, ಅರಣ್ಯ ಕಾವಲುಗಾರ ಕೆಲಸ, ದಢಂಘಟ್ಟ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಪೋನ್ ನಂಬರ್ 8867799264 ಎಂದು ತಿಳಿದು ಬಂದಿರುತ್ತೆ. ನಂತರ ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಮನೆಯ ಮುಂಭಾಗ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯ ತುಂಬಿದ ಎರಡು ರಟ್ಟಿನ ಬಾಕ್ಸ್ ಗಳು ಕಂಡು ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗಿ ಒಂದು ರಟ್ಟಿನ ಬಾಕ್ಸ್ನಲ್ಲಿ 1) HAYWARDS CHEERS WHISKY ಯ 90 ML ನ 4 ಲೀಟರ್ 410 ML ಸಾಮರ್ಥ್ಯದ   49 ಟೆಟ್ರಾ ಪಾಕೆಟ್ ಗಳು, 2) ORIGINAL CHOICE DELUXE WHISKY ಯ 90 ML ನ 4 ಲೀಟರ್ 230 ML ಸಾಮರ್ಥ್ಯದ  49 ಟೆಟ್ರಾ ಪಾಕೆಟ್ ಗಳು ಮತ್ತು ಮತ್ತೊಂದು ಬಾಕ್ಸ್ ನಲ್ಲಿ ಪರಿಶೀಲಿಸಲಾಗಿ 3)  650 ML ನ 5 ಲೀಟರ್ 200 ML ಸಾಮರ್ಥ್ಯದ TUBORG STRONG BEER ನ 08 ಬಾಟಲ್ ಗಳು ಮತ್ತು 4) 650 ML ನ 2 ಲೀಟರ್ 600 ML ಸಾಮರ್ಥ್ಯದ  KINGFISHER STRONG BEER ನ 04 ಬಾಟಲ್ ಗಳು ಕಂಡು ಬಂದಿದ್ದು, ಸದರಿ ಮೇಲ್ಕಂಡ ಮದ್ಯದ ಪಾಕೆಟ್ ಮತ್ತು ಬಾಟಲ್ ಗಳಲ್ಲಿ ಎಫ್.ಎಸ್.ಎಲ್ ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ತಲಾ ಒಂದೊಂದನ್ನು ಅಲಾಯಿದೆಯಾಗಿ ತೆಗೆದು ಬಿಳಿ ಬಟ್ಟೆಗಳಲ್ಲಿ ಹಾಕಿ ದಾರದಿಂದ ಹೊಲೆದು “ D “ ಎಂಬ ಅಕ್ಷರದಿಂದ ಸೀಲು ಮಾಡಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಸಂಜೆ 4.30 ಗಂಟೆಯಿಂದ 5.30 ಗಂಟೆಯವರೆಗೆ ಮೇಲ್ಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಮೇಲ್ಕಂಡ ಆಸಾಮಿಯು ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾಡುತ್ತಿರುವುದಾಗಿದ್ದು. ಮಾಲು ಮತ್ತು ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

8. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 66/2021 ಕಲಂ. 143,144,147,148,279,323,324,307,149 ಐ.ಪಿ.ಸಿ:-

  ದಿನಾಂಕ 28/06/2021 ರಂದು ಸಂಜೆ 16-00  ಗಂಟೆ ಸಮಯದಲ್ಲಿ ಗಾಯಾಳುವಾದ ಶ್ರೀ ಅಶೋಕ ಬಿನ್ ಶ್ರೀನಿವಾಸ, 26 ವರ್ಷ, ನಾಯಕರು, ಜಿರಾಯ್ತಿ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ದಿನಾಂಕ 27/06/2021 ರಂದು ಸಾಯಂಕಾಲ ತಮ್ಮ ಗ್ರಾಮದಲ್ಲಿ ಶ್ರೀನಿವಾಸ ಬಿನ್ ವೆಂಕಟರವಣಪ್ಪ ಹಾಗೂ ಪ್ರಕಾಶ ಬಿನ್ ರವಣಪ್ಪ ರವರ ನಡುವೆ ಜಗಳ ನಡೆದು ಶ್ರೀನಿವಾಸ ರವರಿಗೆ ತಲೆಗೆ ಗಾಯವಾದ್ದರಿಂದ ತಾನು, ತಮ್ಮ ಗ್ರಾಮದ ಮಸಿಲಪಲ್ಲಿ ಶ್ರೀನಿವಾಸ ಬಿನ್ ಲೇಟ್ ನಾರಾಯಣಸ್ವಾಮಿ, ವಿಜಿಕುಮಾರ್, ನಾಗರಾಜು ಬಿನ್ ಲೇಟ್ ಪೆದ್ದ ನಾರೆಪ್ಪ , ಶಿವ ಬಿನ್ ಲೇಟ್ ಕೋಡಿಗಿಂಟಿ ನಾರೆಪ್ಪ, ಮಂಜುನಾಥ ಬಿನ್ ರಾಮಪ್ಪ ರವರು ಶ್ರೀನಿವಾಸರವರನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡಿಸಿ ನಂತರ ಚಿಂತಾಮಣಿ ಬಿಟ್ಟ  ತಾವೆಲ್ಲರೂ ತಮ್ಮ ಗ್ರಾಮಕ್ಕೆ ಹೋಗಲು ಕೆಂಚಾರ್ಲಹಳ್ಳಿ ಗ್ರಾಮದ ಬಳಿಯ ಕೆ.ಇ.ಬಿ ಬಳಿ ಬರುವಷ್ಠರಲ್ಲಿ ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಅಲ್ಲಿ ತಮ್ಮ ಗ್ರಾಮದ 1. ಬಸವರಾಜು ಬಿನ್ ವೆಂಕಟರವಣಪ್ಪ, 2. ಮಂಜುನಾಥ ಬಿನ್ ಆಂಧ್ರ ರೆಡ್ಡೆಪ್ಪ, 3. ಸುರೇಶ ಬಿನ್ ವೆಂಕಟರವಣಪ್ಪ, 4. ಅಶೋಕ ಬಿನ್ ರವಣಪ್ಪ 5. ಪ್ರಕಾಶ್ ಬಿನ್ ರವಣಪ್ಪ 6.ಅಪ್ಪಯ್ಯ@ವೆಂಕಟರವಣಪ್ಪ ಬಿನ್ ಹೈದ್ರಾಬಾದ್ ವೆಂಕರವಣಪ್ಪ 7. ಶ್ರೀನಿವಾಸ ಬಿನ್ ಆಂಧ್ರ ರೆಡ್ಡೆಪ್ಪ, 8. ರೆಡ್ಡೆಪ್ಪ ಬಿನ್ ಕುಂಟಿ ಗೌರಮ್ಮ ಮತ್ತು ಇತರೇ ಇಬ್ಬರು ಅಪರಿಚಿತರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಮಾರಕಾಯುಧಗಳಾದ ಕಬ್ಬಿಣದ ರಾಡು, ಕಬ್ಬಿಣದ ಮಚ್ಚು, ಕಬ್ಬಿಣದ ಸುತ್ತಿ, ಕಲ್ಲು ಮೊದಲಾದವುಗಳನ್ನು ಹಿಡಿದುಕೊಂಡು ಶ್ರೀನಿವಾಸ ಬಿನ್ ವೆಂಕಟರವಣಪ್ಪ ಹಾಗೂ ಅವರಿಗೆ ಬೆಂಬಲವಾಗಿರುವ ತಮ್ಮನ್ನು ಸಾಯಿಸುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದು, ತಮ್ಮನ್ನು ನೋಡಿದ ಕೂಡಲೇ ದಾಳಿ ಮಾಡಲು ಮುಂದಾದಾಗ ಒಂದು ದ್ವಿಚಕ್ರವಾಹನದಲ್ಲಿದ್ದ ಶಿವ, ನಾಗರಾಜು ರವರು ದ್ವಿಚಕ್ರವಾಹನವನ್ನು ದೊಡ್ಡಿಪಲ್ಲಿ ರಸ್ತೆಗೆ ತಿರುಗಿಸಿ ಪ್ರಾಣಭಯದಿಂದ ಓಡಿಹೋದರು. ಅದರಲ್ಲಿಯೇ ಇದ್ದ ಶ್ರೀನಿವಾಸ ಭಯದಿಂದ ದ್ವಿಚಕ್ರವಾಹನದಿಂದ ಇಳಿದು ಗೌಡನಹಳ್ಳಿ ಕಡೆಗೆ ಓಡಿದಾಗ ಅತನನ್ನು ಅಪ್ಪಯ್ಯ@ವೆಂಕಟರವಣಪ್ಪ, ಪ್ರಕಾಶ್,  ಸುರೇಶ ಹಿಂಬಾಲಿಸಿಕೊಂಡು ಹೋಗಿ ಆತನನ್ನು ಹಿಡಿದುಕೊಂಡು ಕಬ್ಬಿಣದ ರಾಡ್ ನಿಂದ ಬಲಕಾಲಿಗೆ ಹೊಡೆದು ಕಾಲು ಮುರಿದಿರುತ್ತಾರೆ. ಅದನ್ನು ನೋಡಿ ಕೆಎ-40-ಡಬ್ಲೂ-2464 ನೋಂದಣಿ ಸಂಖ್ಯೆಯ  ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತಾನು  ಹಿಂಬದಿಯಲ್ಲಿದ್ದ ಮಸಿಲಪಲ್ಲಿ ಶ್ರೀನಿವಾಸ, ವಿಜಿಕುಮಾರ್ ರವರೊಂದಿಗೆ ತಮ್ಮ ಊರು ಕಡೆ ಹೋಗಲು ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ತಮ್ಮನ್ನು ಹಿಂಭಾಲಿಸಿಕೊಂಡು ಕಾರನ್ನು ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದ ಬಸವರಾಜು, ಅಶೋಕ, ರೆಡ್ಡೆಪ್ಪ, ಮಂಜುನಾಥ, ಶ್ರೀನಿವಾಸ ರವರು ಕೆಂಚಾರ್ಲಹಳ್ಳಿ ನರಸಿಂಹಪ್ಪ ರವರ ಜಮೀನು ಬಳಿ ತಮ್ಮನ್ನ ಸಾಯಿಸುವ ಸಲುವಾಗಿ ಹಿಂಬದಿಯಿಂದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ತಾವು ಮೂವರು ದ್ವಿಚಕ್ರವಾಹನದೊಂದಿಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿ 10 ಅಡಿ ದೂರದ ರಸ್ತೆ ಅಂಚಿನ ಚರಂಡಿಗೆ ಬಿದ್ದಾಗ ಕಾರನ್ನು ಇಳಿದು ಬಂದ ಬಸವರಾಜು ಕಬ್ಬಿಣದ ಮಚ್ಚಿನಿಂದ ವಿಜಿಕುಮಾರ್ ಗೆ ಬೀಸಿದಾಗ ಆತನ ಬಲಕಿವಿಯ ಕೆಳಗೆ ರಕ್ತಗಾಯವಾಗಿರುತ್ತದೆ. ರೆಡ್ಡೆಪ್ಪ ಕಬ್ಬಿಣದ ರಾಡ್ ನಿಂದ ಆತನ ಬಲಕೈಗೆ ಹೊಡೆದಿರುತ್ತಾನೆ. ಉಳಿದವರು ಕೈಗಳಿಂದ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲು ತೆಗೆದುಕೊಂಡು ಹಾಕಿ  ಗಾಯವನ್ನುಂಟುಮಾಡಿದರು. ಆಗ ತಾನು ಮತ್ತು ಮಸಿಲಪಲ್ಲಿ ಶ್ರೀನಿವಾಸ ರವರು ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ಕೆಂಚಾರ್ಲಹಳ್ಳಿ ಚಿನ್ನಪ್ಪರೆಡ್ಡಿ ಬಾಬತ್ತು ಜಮೀನಿನಲ್ಲಿ   ಮಸಿಲಪಲ್ಲಿ ಶ್ರೀನಿವಾಸ ರವರನ್ನು ಕೆಳಗೆ ತಳ್ಳಿ ಬಸವರಾಜು ಕಬ್ಬಿಣದ ಮಚ್ಚಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ರೆಡ್ಡೆಪ್ಪ ಕಬ್ಬಿಣದ ರಾಡ್ ನಿಂದ ಕಾಲುಗಳಿಗೆ ಹೊಡೆದಿದ್ದು, ಉಳಿದವರು ಕಲ್ಲುಗಳಿಂದ ಮೈಮೇಲೆ ಹೊಡೆದು ಗಾಯಪಡಿಸಿದರು. ತನಗೆ ಅಶೋಕ ಕಬ್ಬಿಣದ ರಾಡ್ ನಿಂದ ಎಡಕಾಲಿಗೆ ಹೊಡೆದು ಗಾಯಪಡಿಸಿದನು. ಮಂಜುನಾಥ ಮತ್ತು ಶ್ರೀನಿವಾಸ ರವರು ಕಲ್ಲುಗಳಿಂದ ಮೈಮೇಲೆ ಗುದ್ದಿ ಮೂಗೇಟು ಉಂಟುಮಾಡಿದರು. ಅಷ್ಟರಲ್ಲಿ ವಿಚಾರ ತಿಳಿದ ತಮ್ಮ ಗ್ರಾಮದ ಶ್ರೀನಿವಾಸ ಬಿನ್ ಪೆದ್ದನಾರೆಪ್ಪ, ಪಿಳ್ಳವೆಂಕಟರವಣಪ್ಪ,ರಾಮಮೂರ್ತಿ ಮೊದಲಾದವರು ದ್ವಿಚಕ್ರವಾಹನಗಳಲ್ಲಿ ಬರುವಷ್ಠರಲ್ಲಿ ಅವರನ್ನು ನೋಡಿ ಸದರಿಯವರು ಅಲ್ಲಿಂದ ಕಾರಿನೊಂದಿಗೆ ಓಡಿಹೋದರು. ಕತ್ತಲಿನಲ್ಲಿ ಸದರಿ ಕಾರಿನ ನೋಂದಣೀ ಸಂಖ್ಯೆ ಗುರ್ತಿಸಲು ಸಾಧ್ಯವಾಗಿರುವುದಿಲ್ಲಾ.  ಸಾಯಿಸುವ ಉದ್ದೇಶದಿಂದ ಹೊಂಚು ಹಾಕಿ ತಮ್ಮಗಳ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ  ಪಿರ್ಯಾದು.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 68/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 29-06-2021 ರಂದು ಮಧ್ಯಾಹ್ನ 15.15 ಗಂಟೆಗೆ ಪಿ.ಎಸ್.ಐ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:29/06/2021 ರಂದು ಮಧ್ಯಾಹ್ನ 14-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ  ಮಿಟ್ಟಹಳ್ಳಿ ಗ್ರಾಮದ ಮುರಳಿ ಬಿನ್ ಪೆದ್ದ ವೆಂಕಟರಾಯಪ್ಪ ರವರು ತಮ್ಮ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-161 ಕೃಷ್ಣಪ್ಪ ರವರೊಂದಿಗೆ ಮಿಟ್ಟಹಳ್ಳಿ ಗ್ರಾಮಕ್ಕೆ ಹೋಗಿ  ಗ್ರಾಮದಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ನಡೆದುಕೊಂಡು ಮಿಟ್ಟಹಳ್ಳಿ ಗ್ರಾಮದ ಮುರಳಿ ಬಿನ್ ಪೆದ್ದ ವೆಂಕಟರಾಯಪ್ಪ ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿ ಮಾಲೀಕನಾದ ಮುರಳಿ ಬಿನ್ ಪೆದ್ದ ವೆಂಕಟರಾಯಪ್ಪ ರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಚಿಲ್ಲರೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಪಿ.ಮುರಳಿ ಬಿನ್ ಪೆದ್ದ ವೆಂಕಟರಾಯಪ್ಪ, 40 ವರ್ಷ, ಜಿರಾಯ್ತಿ, ನಾಯಕ ಜನಾಂಗ, ವಾಸ ಮಿಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 18 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 18 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 632/-ರೂ ಆಗಿರುತ್ತೆ. ಮದ್ಯ ಒಟ್ಟು 1620 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಆಸಾಮಿಯನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 14-15 ರಿಂದ 15-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲು, ಆಸಾಮಿ ಹಾಗೂ ಮಹಜರ್ ನ್ನು ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮುರಳಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 106/2021 ಕಲಂ. 324,504,34 ಐ.ಪಿ.ಸಿ:-

  ದಿನಾಂಕ: 28/06/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಗೋವಿಂದರಾಜು ಬಿನ್ ವೆಂಕಟರಮಣಪ್ಪ, 50 ವರ್ಷ, ಪರಿಶಿಷ್ಟ ಜಾತಿ[ಎ.ಕೆ], ವ್ಯವಸಾಯ, ಪುರ ಗ್ರಾಮ,  ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆಗೆ ನಾವು 4 ಜನ ಮಕ್ಕಳಿದ್ದು, ಇಬ್ಬರು ಹಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿರುತ್ತೇವೆ. ನಮ್ಮ ಗ್ರಾಮದಲ್ಲಿ ನಮ್ಮ ತಂದೆಯವರ ಬಾಬತ್ತು ಮನೆ, ಖಾಲಿ ಜಾಗ ಹಾಗೂ ಜಮೀನು ಇದ್ದು, ಸದರಿ ಆಸ್ತಿಯಲ್ಲಿ ತನಗೆ ಭಾಗ ಬರಬೇಕೆಂದು ನಮ್ಮ ಅಣ್ಣ ಬಾಲಕೃಷ್ಣರವರು ಈಗ್ಗೆ ಸುಮಾರು ಒಂದು ತಿಂಗಳ ಹಿಂದಿನಿಂದ ತಕರಾರು ಮಾಡುತ್ತಿದ್ದರು. ನಮ್ಮ ಅಣ್ಣ ಬಾಲಕೃಷ್ಣರವರು ಒಂದು ವಾರದ ಹಿಂದೆ ನಮ್ಮ ತಂದೆ ಮನೆಗೆ ಬಂದಿದ್ದರು. ದಿನಾಂಕ: 27/06/2021 ರಂದು ಸಾಯಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ ನಮ್ಮ ಅಣ್ಣ ಬಾಲಕೃಷ್ಣ, 52 ವರ್ಷ, ಅತ್ತಿಗೆ ಮಂಜುಳ, 45 ವರ್ಷ, ಅವರ ಮಗ ಅಭಿಷೇಕ್, 19 ವರ್ಷ ರವರು ಪುನಃ ನನ್ನೊಂದಿಗೆ ಭಾಗದ ವಿಚಾರದಲ್ಲಿ ಜಗಳ ತೆಗೆದು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈಯ್ದು, ಈಗಲೇ ನನಗೆ ಆಸ್ತಿ ಭಾಗವಾಗಬೇಕೆಂದು ಏಕಾಏಕಿ ನಮ್ಮ ಅಣ್ಣ ಬಾಲಕೃಷ್ಣರವರು ದೊಣ್ಣೆಯಿಂದ ನನ್ನ ಮೈಮೇಲೆ ಹೊಡೆದು ಬಾಸುಂಡೆ ಗಾಯಪಡಿಸಿದರು. ಬಿಡಿಸಲು ಅಡ್ಡ ಬಂದ ನನ್ನ ಮಗ ಸ್ವಾಮಿಯನ್ನು ಸಹಾ ತಳ್ಳಿರುತ್ತಾರೆ. ಆಗ ನಮ್ಮ ಗ್ರಾಮದ ಮೂರ್ತಿ ಬಿನ್ ಗಂಗಪ್ಪ ಮತ್ತು ಅನಿಲ್ ಬಿನ್ ನಾಗರಾಜು ರವರುಗಳು ಮದ್ಯ ಬಂದು ನನ್ನನ್ನು ಅವರುಗಳಿಂದ ಬಿಡಿಸಿದರು. ಆಸ್ತಿ ವಿಚಾರದಲ್ಲಿ ನನ್ನೊಂದಿಗೆ ಜಗಳ ತೆಗೆದು ಬಾಯಿಗೆ ಬಂದಂತೆ ಬೈಯ್ದು ದೊಣ್ಣೆಯಿಂದ ಹೊಡೆದಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 107/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:28/06/2021 ರಂದು ಸಾಯಂಕಾಲ 5-15 ಗಂಟೆಗೆ ಘನ ನ್ಯಾಯಾಲಯದಿಂಧ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:26/06/2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ದೊಡ್ಡಮಲ್ಲೇಕೆರೆ ಗ್ರಾಮದ ಬಳಿ ಇರುವ ಸಕರ್ಾರಿ ಹಳ್ಳದಲ್ಲಿ ಹೊಂಗೆಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-283 ಅರವಿಂದ, ಪಿ.ಸಿ-311 ಗೂಳಪ್ಪ, ಪಿ.ಸಿ-175 ನವೀನ್ ಕುಮಾರ್, ಪಿ.ಸಿ-483 ರಮೇಶ್ ಪಿ.ಸಿ-111 ಲೋಕೇಶ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 2-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಸೋಮಶೇಖರ್ ಬಿನ್ ವೆಂಕಟೇಶಪ್ಪ, 43 ವರ್ಷ, ನಾಯಕ ಜನಾಂಗ, ಚಾಲಕ ವೃತ್ತಿ, ಹೊಸಕೋಟೆ ಗ್ರಾಮ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, 2) ನಾರಾಯಣಸ್ವಾಮಿ ಬಿನ್ ಆದೆಪ್ಪ, 44 ವರ್ಷ, ಗೊಲ್ಲ ಜನಾಂಗ, ಜಿರಾಯ್ತಿ, ದೊಡ್ಡಮಲ್ಲೇಕೆರೆ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 3) ನಾರಾಯಣಪ್ಪ ಬಿನ್ ಭೀಮಯ್ಯ, 51 ವರ್ಷ, ನಾಯಕ ಜನಾಂಗ, ಕೂಲಿಕೆಲಸ, ದೊಡ್ಡಮಲ್ಲೇಕೆರೆ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 4) ಲೋಕೇಶ್ ಬಿನ್ ರಂಗಪ್ಪ, 31 ವರ್ಷ, ನಾಯಕ ಜನಾಂಗ, ಕೂಲಿಕೆಲಸ, ವಾಪಸಂದ್ರ ಗ್ರಾಮ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, 5) ಆರ್.ಲಕ್ಷ್ಮೀಷ ಬಿನ್ ಲೇಟ್ ವೆಂಕಟಸ್ವಾಮಿ, 60 ವರ್ಷ, ಕಮ್ಮ ಜನಾಂಗ, ಜಿರಾಯ್ತಿ, ದಿನ್ನ ನೀರಡಹಳ್ಳಿ ಗ್ರಾಮ, ಕೆ.ವಿ.ಪಲ್ಲಿ ಮಂಡಲಂ, ಚಿತ್ತೂರು ತಾಲ್ಲೂಕು ಮತ್ತು ಜಿಲ್ಲೆ, ಹಾಲಿ ವಾಸ ದೊಡ್ಡಮಲ್ಲೇಕೆರೆ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಮತ್ತು 6) ಗಂಗಾಧರ ಬಿನ್ ಮುನಿರಾಮಪ್ಪ, 70 ವರ್ಷ, ನಾಯಕ ಜನಾಂಗ, ಜಿರಾಯ್ತಿ, ದೊಡ್ಡಮಲ್ಲೇಕೆರೆ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 4100/- ( ನಾಲ್ಕು ಸಾವಿರದ ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಹಳೆಯ ನ್ಯೂಸ್ ಪೇಪರ್ ಅನ್ನು ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 4-15 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ಠಾಣಾ ಎನ್.ಸಿ.ಆರ್ ನಂಬರ್ 170/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಸ್ವತಃ ಪ್ರಕರಣ ದಾಖಲಿಸಿರುತ್ತೆ.

 

12. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 108/2021 ಕಲಂ. 379 ಐ.ಪಿ.ಸಿ:-

  ದಿನಾಂಕ:28/06/2021 ರಂದು ಪಿರ್ಯಾದಿದಾರರಾದ ಶ್ರೀ ನೌಶಾದ್ ಬಿನ್ ಸಾಬ್ ಸಾಬಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:24/06/2021 ರಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ತನ್ನ ಬಾಬತ್ತು ಕೆ.ಎ-40, ಆರ್-0480, ಪಲ್ಸರ್ ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿ ದಿನಾಂಕ:25/06/2021 ರಂದು ಬೆಳಿಗ್ಗೆ 05-30 ಗಂಟೆಯಲ್ಲಿ ಎದ್ದು, ನೋಡಲಾಗಿ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು,ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು 22500/- ರೂಗಳಾಗಿದ್ದು,  ಅದ್ದರಿಂದ ತಾವುಗಳು ಸದರಿ ಕಳ್ಳತನವಾಗಿರುವ ದ್ವಿಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 29-06-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080