ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 80/2021 ಕಲಂ. 506,34,120B,420,468,471 ಐ.ಪಿ.ಸಿ:-

          ದಿನಾಂಕ:28/05/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿ ವಂಶಿಕೃಷ್ಣ ನಿಮ್ಮಗಡ್ಡ ಬಿನ್ ವೆಂಕಟರಾಮರಾವ್, ನಂ:213, ಬಿಎಸ್ಆರ್ ಅಪಾರ್ಟ್ ಮೆಂಟ್, ಮಾರುತಿ ನಗರ ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಆರೋಪಿತರಾದ ಅರ್ಚನ, ಶಿವಕುಮಾರ್, ಶ್ರೀಹರಿ ಮತ್ತು ಶ್ರೀಪತಿ ರವರುಗಳು ಪಿರ್ಯಾದುದಾರರಿಗೆ ಅಮರನಾಥ ರೆಡ್ಡಿ ಮತ್ತು ಮಂಜುನಾಥರೆಡ್ಡಿ ರವರಿಂದ ಪರಿಚಯವಾಗಿ 2020ನೇ ಆಗಸ್ಟ್ ಮಾಹೆಯಲ್ಲಿ ಪಿರ್ಯಾದಿರವರ ಪ್ರಾಜೆಕ್ಟ್ ವಿಷಯದಲ್ಲಿ ಹತ್ತುಕೋಟಿ ಹಣವನ್ನು ನೀಡುವುದಾಗಿ ನಂಬಿಸಿರುತ್ತಾರೆ. ಮತ್ತು ಇಂಗ್ಲೆಂಡ್ ನ ಕಾಸ್ಮೋ ಮೆಡಲ್ಸ್, ಕಡೆಯಿಂದ 6 ಲಕ್ಷ 35 ಸಾವಿರ ಕೋಟಿ ಹಣವು ನನ್ನ ಖಾತೆಗೆ ಬಂದಿದ್ದು, ಆರ್.ಬಿ.ಐ ನಲ್ಲಿ ಈ ಬಗ್ಗೆ ತಡೆ ಹಿಡಿಯಲಾಗಿದೆ ಎಂಬ ವಿಚಾರವಾಗಿ ಆರ್.ಟಿ.ಐ ಬ್ಯಾಂಕ್ ಗಳನ್ನು ಸೃಷ್ಟಿ ಮಾಡಿ ಅದರಲ್ಲಿ ಪೋರ್ಜರಿ ಸಹಿ ಮಾಡಿ ನನಗೆ ಅವುಗಳ ಜೆರಾಕ್ಸ್ ಪ್ರತಿಯನ್ನು ಮಾತ್ರ ನೀಡಿ ನಮ್ಮ ಕಡೆಯಿಂದ 2 ಕೋಟಿ 2 ಲಕ್ಷ ಹಣವನ್ನು ಪಡೆದು ನನಗೆ ಮೇಲ್ಕಂಡವರು ವಂಚಿಸುವ ದೃಷ್ಟಿಯಿಂದ ಒಳಸಂಚು ಮಾಡಿ ಮೋಸ ಮಾಡಿರುತ್ತಾರೆ. ನನ್ನ ಹಣವನ್ನು ವಾಪಸ್ಸು ಕೇಳಿದರೆ ನನಗೆ ಪ್ರಾಣ ಬೆದರಿಕೆಯ ಹಾಕಿರುವುದಾಗಿ ಇತ್ಯಾದಿಯಾಗಿ ದೂರಿನ ಸಾರಾಂಶವಾಗಿರುತ್ತದೆ.

 

2. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 89/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:28/09/2021 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿ ರಾಮಾಂಜಿ ಬಿನ್ ಲೇಟ್ ನಾರಾಯಣಸ್ವಾಮಿ 32 ವರ್ಷ, ತಪೇಶ್ವರ ಕಾಲೋನಿ ಚಿಂತಾಮಣಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು 1 ನೇ ಕೋಮಲ ವಯಸ್ಸು 6 ವರ್ಷ, 2 ನೇ ಮಗಳಾದ  ಸೌಂದರ್ಯ ರವರು ಇರುತ್ತಾರೆ.ಈ ದಿನ ದಿನಾಂಕ: 23/05/2021  ರಂದು  ಸಂಜೆ 6:30 ಗಂಟೆ ಸಮಯದಲ್ಲಿ ನಾನು ಮನೆಯ ಬಳಿ ಇರುವಾಗ ನನ್ನ ಮಕ್ಕಳಾದ ಕೋಮಲ, ಸೌಂದರ್ಯ ರವರು ಮನೆಯ ಮುಂದೆ ಆಟ ಆಡಿಕೊಳ್ಳುತ್ತಿದ್ದರು. ಅದೇ ವೇಳೆಗೆ ತಪಥೇಶ್ವರ ಕಾಲೋನಿಗೆ ಹೋಗುವ ರಸ್ತೆಯ ಕಡೆಯಿಂದ  ಕೆಎ 43 ಎಲ್ 1479 ದ್ವಿ ಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ನನ್ನ ಮಗಳಾದ ಕೋಮಲ ರವರು ಮನೆಯ ಕಾಂಪೌಂಡ್ ನಲ್ಲಿ ಆಟ ಆಡುತ್ತಿದ್ದಾಗ ದ್ವಿಚಕ್ರ ವಾಹನದ ಸವಾರ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಮಗಳು ಅಲ್ಲಿಯೇ ಬಿದ್ದು ಹೋಗಿದ್ದು ನಾನು ಶಬ್ದ ಕೇಳಿ ಕೂಡಲೇ ಮನೆಯಿಂದ ಆಚೆ ಬಂದು ನೋಡಲಾಗಿ ನನ್ನ ಮಗಳು ಕಾಂಪೌಂಡ್ ನಲ್ಲಿ  ಬಿದ್ದಿದ್ದನ್ನು ಕಂಡು ಹತ್ತಿರ ಹೋದಾಗ ನನ್ನ ಮಗಳ ಬಲಕಾಲಿನ ಬಳಿ ದ್ವಿ ಚಕ್ರ ವಾಹನವನ್ನು ಹತ್ತಿಸಿಕೊಂಡು ಹೋಗಿ ಎದೆಯ ಮೇಲೆ ಸಹ ದ್ವಿಚಕ್ರ ವಾಹನದ ಬಿದ್ದು ಗಾಯಗಳಾಗಿರುತ್ತದೆ, ನಂತರ ಕೂಡಲೇ ನನ್ನ ಮಗಳನ್ನು ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಆಸ್ಪತ್ರೆಗ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಸದರಿ ಅಪಘಾತ ಪಡಿಸಿದ ದ್ವಿ ಚಕ್ರ ವಾಹನದ ಸವಾರ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾನೆ. ನನ್ನ ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಎಸ್. ಎನ್ .ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತೇನೆ, ಇದುವರೆಗೂ ನನ್ನ ಮಗಳಾದ ಕೋಮಲ ರವರಿಗೆ ಚಿಕಿತ್ಸೆ ಕೊಡಿಸಿಕೊಂಡು ಇದ್ದುದರಿಂದ ಈ ದಿನ ತಡವಾಗಿ ಬಂದು ದೂರುನ್ನು ನೀಡಿರುತ್ತೇನೆ. ಆದ್ದರಿಂದ ಸದರಿ ನನ್ನ ಮಗಳ ಮೇಲೆ ಅಪಘಾತ ಪಡಿಸಿದ ಓಡಿಹೋದ ದ್ವಿ ಚಕ್ರ ವಾಹನ ಮತ್ತು ಅದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 126/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 28/05/2021 ರಂದು ಬೆಳಗ್ಗೆ 9-00  ಗಂಟೆಗೆ ಶ್ರೀ ಎನ್. ಮೋಹನ್ , ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ   ನೀಡಿದ  ದೂರಿನ ಸಾರಾಂಶವೇನೆಂಧರೆ ದಿನಾಂಕ: 28/05/2021 ರಂದು ಬೆಳಿಗ್ಗೆ 6-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಗೊಡ್ಡಾವಲಹಳ್ಳಿ ಗ್ರಾಮದಲ್ಲಿ ಗ್ರಾಮದ  ಆಚೆ ರಸ್ತೆಯಲ್ಲಿ ಪಕ್ಕದಲ್ಲಿ ಇರುವ ಹುಣಸೇಮರದ ಕೆಳಗೆ   ಯಾರೋ ಆಸಾಮಿಗಳು  ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ  ದಾಸ್ತಾನು ಮಾಡಿಕೊಂಡು ಮಾರಾಟ  ಮಾಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ತಾನು ಮತ್ತು  ಸಿಬ್ಬಂದಿಯಾದ  ಪಿ.ಸಿ.518 ಆನಂದ್, ಪಿ.ಸಿ-512 ರಾಜಶೇಖರ , ಪಿ,ಸಿ-433 ಬಾಬಾಜಾನ್, ಪಿ,ಸಿ-520 ಶ್ರೀನಾಥ್, ಪಿ,ಸಿ-208 ತಿಪ್ಪೆಸ್ವಾಮಿ   ರವರೊಂದಿಗೆ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಗೌರಿಬಿದನೂರು ತಾಲ್ಲೂಕು ಗೊಡ್ಡಾವಲಹಳ್ಳಿ  ಗ್ರಾಮಕ್ಕೆ  ಬೆಳಿಗ್ಗೆ 7-15 ಗಂಟೆಗೆ  ಹೋಗಿ, ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ  ಆಸಾಮಿಯು  ಹುಣಸೇಮರದ ಕೆಳಗೆ  ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ  ದಾಸ್ತಾನು ಮಾಡಿಕೊಂಡಿದ್ದು  ಸಮವಸ್ತ್ರದಲ್ಲಿದ್ದ ತಮ್ಮನ್ನು ಮತ್ತು ಪೊಲೀಸ್ ವಾಹನವನ್ನು ಕಂಡು ಮದ್ಯವನ್ನು  ಸ್ಥಳದಲ್ಲಿ ಬಿಟ್ಟು  ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು   ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿ ಹಿಡಿದುಕೊಳ್ಳಲು  ಹೋದರೂ ಅವರು ಕೈಗೆ ಸಿಗದೇ ಪರಾರಿಯಾಗಿರುತ್ತಾರೆ.  ನಂತರ ಪ್ಲಾಸ್ಟಿಕ್ ಚೀಲದಲ್ಲಿ  ಮದ್ಯ ದಾಸ್ತಾನು ಮಾಡಿ  ಅದನ್ನು ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು  ಮಾರಾಟ ಮಾಡುತ್ತಿದ್ದವರ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ  ಶ್ರೀ. ಸುಬ್ಬರಾವ್ ಬಿನ್ ಜಟ್ಟೋಜಿ ರಾವ್,  55 ವರ್ಷ,  ಮರಾಠಿಗರು,  ವಾಸ ಮೈಲಗಾನಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದುಬಂದಿರುತ್ತೆ.  ನಂತರ ಪಂಚರ ಸಮಕ್ಷಮದಲ್ಲಿ  ಪ್ಲಾಸ್ಟಿಕ್ ಚೀಲ    ಪರಿಶೀಲಿಸಲಾಗಿ, ಅದರಲ್ಲಿ 90 ML ಸಾಮರ್ಥ್ಯದ HAY WARDS PUNCH FINE  WHISKY 90 ಟೆಟ್ರಾ ಪ್ಯಾಕೇಟ್ ಗಳು ಇರುತ್ತೆ. ಸದರಿ ಮದ್ಯ ಸುಮಾರು 8 ಲೀಟರ್  100   ML ಸಾಮರ್ಥ್ಯದ ಮದ್ಯವಾಗಿರುತ್ತದೆ. ಇದರ ಒಟ್ಟು ಮೌಲ್ಯ 3161.7 ರೂಗಳು ಆಗಿರುತ್ತೆ. ಇವುಗಳ ಪೈಕಿ ಪರೀಕ್ಷೆಗೆ ಕಳುಹಿಸುವ ಸಲುವಾಗಿ 90 ML ಸಾಮರ್ಥ್ಯದ HAY WARDS PUNCH FINE WHISKY ಎರಡು  ಟೆಟ್ರಾ ಪ್ಯಾಕೇಟ್ ಅನ್ನು  ಪ್ರತ್ಯೇಕವಾಗಿ ತೆಗೆದು ಬಿಳಿಬಟ್ಟೆಯಿಂದ ‘’K’’  ಎಂಬ ಅಕ್ಷರದಿಂದ  ಸುತ್ತಿ ಸೀಲು ಮಾಡಿರುತ್ತೆ. ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿರುತ್ತಾನೆ.  ನಂತರ   ಸ್ಥಳದಲ್ಲಿ  ಬೆಳಿಗ್ಗೆ 7-30  ಗಂಟೆಯಿಂದ 8-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  90 ML ಸಾಮರ್ಥ್ಯದ HAY WARDS PUNCH FINE WHISKY 90 ಟೆಟ್ರಾ ಪ್ಯಾಕೇಟ್ ಗಳ ಮದ್ಯವನ್ನು ವಶಪಡಿಸಿಕೊಂಡು, ಠಾಣೆಗೆ ಬೆಳಿಗ್ಗೆ 9-00  ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34 ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

4. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 77/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:28/05/2021 ರಂದು ಸಂಜೆ 4-30 ಗಂಟೆಗೆ ನ್ಯಾಯಾಲಯದ ಮ.ಪಿ.ಸಿ-364 ಎನ್ ಸಿ ಆರ್-106/2021 ರಲ್ಲಿ ಕೇಸು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲುದಲ್ಲಿ ಅನುಮತಿ ಪತ್ರವನ್ನು ತಂದು ಹಾಜರ್ ಪಡಿಸಿದ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ PSI ಸಾಹೇಬರು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಣೆ ಮಾಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ತನಗೆ ಮತ್ತು ಸಿಪಿಸಿ-282 ರಮೇಶ್ ರವರಿಗೆ  ನೇಮಿಸಿದ್ದು ಅದರಂತೆ ತಾವು ಬೆಳಿಗ್ಗೆ 10-00 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಸಾರ್ವಜನಿಕರು ರವರು ಪೊನ್ ಮಾಡಿ ಗಂಗಾನಗರ ತಿರುವಿನಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ತಾವು ನಾಗಪ್ಪ ಬ್ಲಾಕ್ ಬಳಿ ಪಂಚರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗಂಗಾನಗರ ತಿರುವಿನಲ್ಲಿ  ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಸದರಿ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತೀದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತೀದ್ದ ಅಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಅಶ್ವತ್ಥಪ್ಪ ಬಿನ್ ನಾರಾಯಣಪ್ಪ, 45 ವರ್ಷ, ನಾಯಕ ಜನಾಂಗ, ವಾಸ: ಮಣಿವಾಲ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು ಯಾವುದಾರರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 15 ಟೆಟ್ರಾ ಪ್ಯಾಕೇಟ್ ಗಳು ಮದ್ಯದ ಪ್ರಮಾಣವನ್ನು ಲೆಕ್ಕ ಮಾಡಲಾಗಿ 1 ಲೀ 350 ML ಇದರ ಮೌಲ್ಯವು 526-00/- ಆಗಿದ್ದು, 2) HAYWARDS CHEERS WHISKY 90 ML  ಖಾಲಿ 04 ಟೆಟ್ರಾ ಪಾಕೇಟ್ ಗಳು, 3) ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಿಗ್ಗೆ 10-30 ಗಂಟೆಯಿಂದ 11-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮದ್ಯಾಹ್ನ 12-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

 

5. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 78/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:28/05/2021 ರಂದು ಸಂಜೆ 4-30 ಗಂಟೆಗೆ ನ್ಯಾಯಾಲಯದ ಮ.ಪಿ.ಸಿ-364 ಎನ್ ಸಿ ಆರ್-106/2021 ರಲ್ಲಿ ಕೇಸು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲುದಲ್ಲಿ ಅನುಮತಿ ಪತ್ರವನ್ನು ತಂದು ಹಾಜರ್ ಪಡಿಸಿದ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಮದ್ಯಾಹ್ನ 1-45 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ PSI ಸಾಹೇಬರು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಣೆ ಮಾಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ತನಗೆ ಮತ್ತು ಸಿಪಿಸಿ-318 ದೇವರಾಜ್ ರವರಿಗೆ  ನೇಮಿಸಿದ್ದು ಅದರಂತೆ ತಾವು ಮದ್ಯಾಹ್ನ 12-15 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಸಾರ್ವಜನಿಕರು ರವರು ಪೊನ್ ಮಾಡಿ ಸಿ.ಎಸ್.ಎಂ ಚರ್ಚ್ ಮುಂಭಾಗದಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ತಾವು ನಾಗಪ್ಪ ಬ್ಲಾಕ್ ಬಳಿ ಪಂಚರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಿ.ಎಸ್.ಎಂ ಚರ್ಚ್ ಮುಂಭಾಗದಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಸದರಿ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತೀದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತೀದ್ದ ಅಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶಂಕರ ಬಿನ್ ಗಂಗುಪಲ್ಲ, 28 ವರ್ಷ, ನಾಯಕ ಜನಾಂಗ, ಸಿಎಸ್.ಎಂ ಚರ್ಚ್ ಬಳಿ ವಿದ್ಯಾನಿಧಿ ಶಾಲೆ ಹತ್ತಿರ ಗೌರಿಬಿದನೂರು ಟೌನ್ ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು ಯಾವುದಾರರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 14 ಟೆಟ್ರಾ ಪ್ಯಾಕೇಟ್ ಗಳು ಮದ್ಯದ ಪ್ರಮಾಣವನ್ನು ಲೆಕ್ಕ ಮಾಡಲಾಗಿ 1 ಲೀ 260ML ಇದರ ಮೌಲ್ಯವು 491-00/- ಆಗಿದ್ದು, 2) HAYWARDS CHEERS WHISKY 90 ML  ಖಾಲಿ 03 ಟೆಟ್ರಾ ಪಾಕೇಟ್ ಗಳು, 3) ಖಾಲಿ 03 ಪ್ಲಾಸ್ಟಿಕ್ ಗ್ಲಾಸ್ ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಮದ್ಯಾಹ್ನ 12-30 ಗಂಟೆಯಿಂದ 1-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮದ್ಯಾಹ್ನ 1-45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

 

6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 79/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:08/05/2021 ರಂದು ಸಂಜೆ 4-00 ಗಂಟೆಯಲ್ಲಿ ನಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ಮರಿಯಪ್ಪನ ಪಾಳ್ಯ ಬ್ರಡ್ಜ್ ಬಳಿ ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ 282 ರಮೇಶ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ  ಮರಿಯಪ್ಪನ ಪಾಳ್ಯ ಬ್ರಡ್ಜ್ ಕ್ಕಿಂತ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಮರಿಯಪ್ಪನ ಪಾಳ್ಯ ಬ್ರಡ್ಜ್  ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಸಂದೀಪ್ ಕುಮಾರ್ ಬಿನ್ ನಾಗರಾಜರೆಡ್ಡಿ .32 ವರ್ಷ,ವಕ್ಕಲಿಗರು.ತೊಂಡೇಭಾವಿ,ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಇದರ ಒಟ್ಟು ಮದ್ಯೆ ಪ್ರಮಾಣ 1440 ಎಮ್,ಎಲ್,ಆಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ಸೂಚಿಸಿದೆ.

 

7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 54/2021 ಕಲಂ. 143,147,148,114,323,324,307,504,149 ಐ.ಪಿ.ಸಿ:-

          ದಿನಾಂಕ 29/05/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಹೇಳಿಕೆಯನ್ನು ಪಡೆದ ಹೆಚ್ ಸಿ-216  ರವರು ಠಾಣೆಗೆ  ಬೆಳಿಗ್ಗೆ 7-00 ಗಂಟೆಗೆ ಬಂದು ಹಾಜರುಪಡಿಸಿದ ಹೇಳಿಕೆ ಸಾರಾಂಶವೇನೆಂದರೆ: ಮುರಗಮಲ್ಲಾ ಗ್ರಾಮದ ಬಳಿಯ ಕೊಲಿಮಿವಾರಹಳ್ಳಿ ಗ್ರಾಮದ ಸರ್ವೆ ನಂ 6 ರಲ್ಲಿನ 52 ಎಕರೆ ಜಮೀನು ನಿಮ್ಮಕಾಯಲಹಳ್ಳಿ ಗ್ರಾಮದ ಮೆಹಬೂಬ್ ಸಾಬಿ ರವರ ಹೆಸರಿನಲ್ಲಿದ್ದು, ತಾನು ಸ್ವಾಧೀನಾನುಭದಲ್ಲಿರುತ್ತೇನೆ, ದಿನಾಂಕ 28/05/2021 ರಂದು ಮಧ್ಯಾಹ್ನ 13-30 ಗಂಟೆ ಸಮಯದಲ್ಲಿ ಸದರಿ ಜಮೀನಿನ ಮಾವಿನ ತೋಪಿನಲ್ಲಿ ತಾನು, ತನ್ನ ಹೆಂಡತಿಯಾದ ಷಹಬಾಜ್, ಮಗನಾದ ಶೇಕ್ ಹಬೀಪ್ ರವರು ಕಾವಲು ಕಾಯುತ್ತಿದ್ದಾಗ ತಮ್ಮ ಅಣ್ಣನಾದ ಜಹಾಂಗೀರ್ @ಶಾಬುದ್ದೀನ್ ರವರ ಮಕ್ಕಳಾದ ನೂರಾನಿ, ಸುಬಾನಿ, ರೆಹಮಾನ್ ಪಾಷ, ರಬ್ಬಾನಿ,ಲತೀಪ್ ರವರು ಬಂದು ಮಾವಿನ ತೋಟದಲ್ಲಿ ಮಾವಿನ ಕಾಯಿಗಳನ್ನು ಕೀಳುತ್ತಿದ್ದಾಗ ತಾನು ಹೋಗಿ ಕೇಳಿದ್ದಕ್ಕೆ ಸದರಿಯವರು ಏಕೋದ್ದೇಶದಿಂದ ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಚಾಕು, ಕಲ್ಲು ಮೊದಲಾದ ಮಾರಕಾಯುಧಗಳನ್ನು ಹಿಡಿದುಕೊಂಡು ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಅಪೈಕಿ ನೂರಾನಿ ತನ್ನ ಬಳಿ ಇದ್ದ ಚಾಕುವಿನಿಂದ ತನ್ನ ತಲೆಯ ಎಡಭಾಗಕ್ಕೆ, ಸೊಂಟದ ಎಡಭಾಗಕ್ಕೆ ಚುಚ್ಚಿ ರಕ್ತಗಾಯಪಡಿಸಿದ್ದು,  ಆಗ ತನ್ನ ಮಗ ಜಗಳ ಬಿಡಿಸಲು ಬಂದಾಗ ಆತನಿಗೆ ನೂರಾನಿ ಚಾಕುವಿನಿಂದ ಚುಚ್ಚಲು ಬಂದಾಗ ತನ್ನ ಹೆಂಡತಿ ಅಡ್ಡ ಬಂದು ಕೈ ಅಡ್ಡ ಇಟ್ಟಾಗ ಆಕೆಯ ಬಲಗೈ ಮೂರು ಬೆರಳುಗಳಿಗೆ ರಕ್ತಗಾಯವಾಯಿತು. ಬಲಕೆನ್ನೆಗೆ ತರಚಿದ ಗಾಯ ಆಗಿರುತ್ತದೆ. ಸುಬಾನಿ ಕೈ ಮತ್ತು ಕಾಲುಗಳಿಂದ ತನ್ನನ್ನು ಹೊಡೆದು ಮೂಗೇಟು ಉಂಟುಮಾಡಿದನು. ರೆಹಮಾನ್ ಪಾಷ ಮತ್ತು ಕಲ್ಲುಗಳಿಂದ ತಮ್ಮಗಳ ಮೈಮೇಲೆ ಗುದ್ದಿ ಮೂಗೇಟು ಉಂಟುಮಾಡಿದನು. ರಬ್ಬಾನಿ & ಲತೀಫ್  ರವರು ತನ್ನ ಹೆಂಡತಿಯ ಜುಟ್ಟು ಹಿಡಿದು ಎಳೆದಾಡಿ ಕೆಳಗೆ ಹಾಕಿ ಕಾಲುಗಳಿಂದ ಒದ್ದು ಮೂಗೇಟು ಉಂಟುಮಾಡಿ ಬಿಡಿಸಲು ಹೋದ ತನ್ನ ಮಗನಿಗೆ ಕೈಗಳಿಂದ ಹೊಡೆದು ಹಲ್ಲೆ ಮಾಡಿ ತಮ್ಮನ್ನು ಉದ್ದೇಶಿಸಿ: ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲಾ ಸಾಯಿಸೇ ತೀರುತ್ತೇವೆ” ಎಂದು ಬೆದರಿಕೆ ಹಾಕಿದ್ದು, ಇದಕ್ಕೆ ಜಹಾಂಗೀರ್@ಶಾಬುದ್ದೀನ್, ಷೇಕ್ ಮೌಲಾ, ಷೇಕ್ ಮೆಹಬೂಬ್ ರವರ ಕುಮ್ಮಕ್ಕು ಇರುತ್ತದೆ. ಸಾಯಿಸುವ ಉದ್ದೇಶದಿಂದ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.

 

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 56/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 28-05-2021 ರಂದು ರಾತ್ರಿ 19-20 ಗಂಟೆಗೆ ಆ ಉ ನಿ ಸಾಹೇಬರು ದಾಳಿಯಿಂದ  ಆರೋಫಿ.ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-28-05-2021  ರಂದು  ಸಂಜೆ 17-00 ಗಂಟೆ ಸಮಯದಲ್ಲಿ ಸಾಹೇಬರು  ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ನಾಗರಾಜ ಹಾಗೂ ಶೇಖರ್  ರವರೊಂದಿಗೆ  ಲಾಕ್ ಡೌನ್ ಪ್ರಯುಕ್ತ  ಕೊಂಡೇನಹಳ್ಳಿ   ಗ್ರಾಮದ ಕಡೆ ಹಗಲು  ಗಸ್ತಿನಲ್ಲಿದ್ದಾಗ  ನನಗೆ ಬಂದ  ಖಚಿತವಾದ ಮಾಹಿತಿ ಎನೆಂದರೆ  ಕೇಶವಾರ ಗ್ರಾಮದ ಶ್ರೀನಿವಾಸನು ಯಾವುದೇ  ಪರವಾನಗಿಯನ್ನು ಪಡೆಯದೇ ತನ್ನ ಅಂಗಡಿಯ  ಮುಂದೆ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು  ಎಲೆಹಳ್ಳಿ  ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ  ಸಂಜೆ 17-30 ಗಂಟೆಗೆ  ಕೇಶವಾರ ಗ್ರಾಮದ  ಶ್ರೀನಿವಾಸ ರವರ ಅಂಗಡಿಯ ಬಳಿ  ಹೋಗುವಷ್ಟರಲ್ಲಿ ಅಂಗಡಿ ಮುಚ್ಚಿದ್ದು  ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಅಂಗಡಿಯ  ಮಾಲೀಕನ   ಹೆಸರು ವಿಳಾಸವನ್ನು ಕೇಳಲಾಗಿ   ಶ್ರೀನಿವಾಸ   ಬಿನ್  ಲೇಟ್  ಕೃಷ್ಣಪ್ಪ 40  ವರ್ಷ   ಬಲಜಿಗರು  ಚಿಲ್ಲರೆ ಅಂಗಡಿ ಮಾಲೀಕ   ಕೇಶವಾರ ಎಂತ ತಿಳಿಸಿದ್ದು  ಇವನ  ಅಂಗಡಿಯ   ಮುಂದೆ  ಒಂದು  ಕವರಿದ್ದು  ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ   HAYWARDS CHEERS WHISKY  ಯ  20  TETRA  POCKET ಗಳಿದ್ದು ಪ್ರತಿ  ಪಾಕೇಟಿನ ಬೆಲೆ /- 35-13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1800 ML ಮದ್ಯವಿದ್ದು ಒಟ್ಟು ಬೆಲೆ 703/- ರೂ ಆಗುತ್ತದೆ. 2) 5 ಖಾಲಿ ಲೋಟಗಳು 3) 5 ಖಾಲಿ ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಇವುಗಳನ್ನು ತನ್ನ ಮುಚ್ಚಿರುವ ಅಂಗಡಿಯ  ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಅಂಗಡಿಯ  ಮಾಲೀಕ  ಶ್ರೀನಿವಾಸ ಬಿನ್ ಲೇಟ್ ಕೃಷ್ಣಪ್ಪ  ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ ಸಂಜೆ 17-40 ಗಂಟೆಯಿಂದ 18-40 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 20 ಟೆಟ್ರಾ ಪ್ಯಾಕೇಟುಗಳನ್ನು ಮತ್ತು ಲೋಟಗಳನ್ನು ಅಂಗಡಿಯ ಮಾಲೀಕ  ನಟರಾಜನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

ಇತ್ತೀಚಿನ ನವೀಕರಣ​ : 29-05-2021 05:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080