Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ: 29/04/2021 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎ. ನರಸಿಂಹರೆಡ್ಡಿ ಬಿನ್ ಲೇಟ್ ನಾರಾಯಣಸ್ವಾಮಿ,      55 ವರ್ಷ, ಗೊಲ್ಲ ಜನಾಂಗ, ಜಿರಾಯ್ತಿ, ವಾಸ ತಿಪ್ಪೇಪಲ್ಲಿ ಗ್ರಾಮ, ಓಡಿಸಿ ಮಂಡಲಂ, ಅನಂತಪುರ ಜಿಲ್ಲೆ, ಆಂದ್ರಪ್ರದೇಶ. ಮೊ.ಸಂ-9010512133 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಅನಂತರಪುರ ಜಿಲ್ಲೆಯ ಓಡಿಸಿ ಮಂಡಲಂನ ಗೌನಿಪಲ್ಲಿ ಗ್ರಾಮದ ಜಿ. ಆದಿನಾರಾಯಣಪ್ಪ ರವರ ಮಗಳಾದ ಸ್ವರ್ಣಲತ ರವರನ್ನು ವಿವಾಹ ಮಾಡಿಕೊಂಡಿರುತ್ತೇನೆ.  ದಿನಾಂಕ; 29.03.2021 ರಂದು ಮದ್ಯಾಹ್ನ ಸುಮಾರು 3-00 ಗಂಟೆಯ ಸಮಯದಲ್ಲಿ ನಾನು ಮತ್ತು ನಮ್ಮ ಮಾವನಾದ ಜಿ.ಆದಿನಾರಾಯಣಪ್ಪ ಬಿನ್ ಲೇಟ್ ರಾಮಪ್ಪ, 60 ವರ್ಷ, ಗೊಲ್ಲರು, ಜಿರಾಯ್ತಿ, ವಾಸ ಗೌನಿಪಲ್ಲಿ ಗ್ರಾಮ, ಓಡಿಸಿ ಮಂಡಲಂ, ಆನಂತಪುರ ಜಿಲ್ಲೆ ಆಂದ್ರಪ್ರದೇಶ ರವರು ನಮ್ಮ ಸಂಬಂಧಿಕರ ಊರಾದ ಶಿಡ್ಲಘಟ್ಟ ತಾಲ್ಲೂಕು ವೆಂಕಟಾಪುರ ಗ್ರಾಮಕ್ಕೆ ಹೋಗಲು ತಮ್ಮ ಬಾಬತ್ತು; ಎಪಿ.39.ಸಿ.ಇ.1529 ನೊಂದಣಿ ಸಂಖ್ಯೆಯ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು ಯಲ್ಲಂಪಲ್ಲಿ – ಗುಂಟಿಗಾನಪಲ್ಲಿ ಗ್ರಾಮದ ಮದ್ಯದ ರಸ್ತೆಯಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ನಮ್ಮ ಮಾವ ಆದಿನಾರಾಯಣಪ್ಪ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿಕೊಂಡು ಹೋದ ಪರಿಣಾಮ ಇಬ್ಬರು ರಸ್ತೆಯ ಎಡಭಾಗಕ್ಕೆ ದ್ವಿಚಕ್ರ ವಾಹನದ ಸಮೇತ ಬಿದ್ದು, ಹೋಗಿದ್ದು,  ಆದಿನಾರಾಯಣಪ್ಪ ರವರಿಗೆ ಎಡಕಣ್ಣಿನ ಬಳಿ ಮೂಗೇಟು ಆಗಿ,  ತಲೆಗೆ ಭಾರಿ ಮೂಗೇಟು ಆಗಿದ್ದು, ನಾನು ನಮ್ಮ ಮಾವನನ್ನು ಆಂಬುಲೈನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತೇನೆ. ನನಗೆ ತರಚಿದ ಗಾಯಗಳು ಆದ ಪರಿಣಾಮ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ನಮ್ಮ ಮಾವನಿಗೆ ತಲೆಗೆ ಬಾರಿ ಮೂಗೇಟು ಆಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಆಂದ್ರಪ್ರದೇಶದ ಅನಂತಪುರದ ಸವೇರಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತೇವೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಂದ್ರಪ್ರದೇಶದ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ; 28.04.2021 ರಂದು ರಾತ್ರಿ 8-16 ಗಂಟೆಯ ಸಮಯದಲ್ಲಿ ನಮ್ಮ ಮಾವ ಆದಿನಾರಾಯಣಪ್ಪ ರವರು ಮೃತಪಟ್ಟಿರುತ್ತಾರೆ.  ಅದ್ದರಿಂದ  ತಾವಂದಿರು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.64/2021 ಕಲಂ. 32,34,43(A) ಕೆ.ಇ ಆಕ್ಟ್:-

     ದಿನಾಂಕ:29/04/2021 ರಂದು ಬೆಳಿಗ್ಗೆ 7-20 ಗಂಟೆಯಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ,ಎಸ್,ಐ ಶ್ರೀ ಟಿ,ಎನ್.ಪಾಪಣ್ಣ, ಆದ ನಾನು ಠಾಣೆಯ ಜೀಪ್ ಚಾಲಕ  ಎಪಿಸಿ - 65 ವೆಂಕಟೇಶ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯ ಸರಹದ್ದಿನಲ್ಲಿರುವ ಗ್ರಾಮಗಳಾದ ಸೋಮಕಲಹಳ್ಳಿ, ಕಡದನಮರಿ ಗ್ರಾಮಗಳಲ್ಲಿ ಕರೋನ ಖಾಯಿಲೆಯ ಜನತಾ ಕರ್ಪ್ಯೂನ ಗ್ರಾಮಗಳ ಗಸ್ತು ಮಾಡಲು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಬಟ್ಲಹಳ್ಳಿ – ಸೋಮಕಲಹಳ್ಳಿ ಮದ್ಯೆ ಇರುವ ಸೋಮಕಲಹಳ್ಳಿ ಕ್ರಾಸ ಬಳಿ ಹೋಗುತ್ತಿದ್ದಾಗ   ಬಟ್ಲಹಳ್ಳಿ  ಕಡೆಯಿಂದ  ಚಿಂತಾಮಣಿ ಕಡೆಗೆ ಹೋಗುವ ರಸ್ತೆಯಲ್ಲಿ ಕೆಎ- 50 ಎ - 0382  ನೊಂದಣಿ ಸಂಖ್ಯೆಯ ಟಾಟಾ ಇಂಡಿಕಾ ಕಾರು ಬಂದಿದ್ದು, ಸದರಿ ಕಾರನ್ನು ನಿಲ್ಲಿಸಿ ಪರಿಶೀಲಿಸಲಾಗಿ ಸದರಿ ಕಾರಿನಲ್ಲಿ ಮದ್ಯದ ಬಾಕ್ಸ್ ಗಳು ಕಂಡು ಬಂದಿದ್ದು, ಕಾರಿನ ಚಾಲಕನನ್ನು ಮದ್ಯದ ಬಾಕ್ಸಗಳ ಬಗ್ಗೆ ಕೇಳಲಾಗಿ ಮದ್ಯದ ಬಾಕ್ಸ್ ಗಳನ್ನು ಬಟ್ಲಹಳ್ಳಿ ಪಲ್ಲವಿ ಬಾರನಲ್ಲಿ ಖರೀದಿಸಿದ್ದು, ಮದ್ಯವನ್ನು ನಮ್ಮ ಗ್ರಾಮದಲ್ಲಿ  ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಲಾಭಕ್ಕಾಗಿ ಮಾರಾಟ ಮಾಡಲು  ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದು, ಮದ್ಯವನ್ನು ಸಾಗಾಣಿಕೆ ಮಾಡಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸರ್ಕಾರದಿಂದ ಯಾವುದಾದರೂ ಅಧಿಕೃತ ಪರವಾನಿಗೆಯನ್ನು ಹೊಂದಿರುವಿರಾ ಎಂದು ಆಸಾಮಿಯನ್ನು ಕೇಳಲಾಗಿ ಯಾವುದೇ ಪರವಾನಿಗೆಯನ್ನು ಹೊಂದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಸದರಿ ಕಾರನ್ನು ಮತ್ತು ಕಾರಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮದ್ಯವನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಳ್ಳಲು ಪಂಚರನ್ನು ಬೆಳಿಗ್ಗೆ 7-45 ಗಂಟೆಗೆ ಸೋಮಕಲಹಳ್ಳಿ ಕ್ರಾಸಗೆ ಬರಮಾಡಿಕೊಂಡು ಪಂಚರ ಸಮಕ್ಷಮ ಆಸಾಮಿಯ  ಹೆಸರು ಮತ್ತು ವಿಳಾಸ ತಿಳಿಯಲಾಗಿ ರಾಜಾರೆಡ್ಡಿ ಬಿನ್ ಕೆ ಮುನಿಯಪ್ಪ 50 ವರ್ಷ, ವಕ್ಕಲಿಗರು , ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಬ್ರಾಹ್ಮಣರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಮೊ ನಂ: 9663468448.ಎಂದು ತಿಳಿಸಿದ್ದು  ಕಾರಿನಲ್ಲಿದ್ದ ಮದ್ಯದ  ಬಾಕ್ಸ್ ಗಳನ್ನು ಪರಿಶೀಲನೆ ಮಾಡಲಾಗಿ 1) 650 ML TUBORG PREMIUM BEER 10 ಬಾಟಲ್ ಗಳಿದ್ದು, ಒಂದರ ಬೆಲೆ 150. ರೂಗಳಾಗಿರುತ್ತೆ. 2) 650 ML KINGFISHER BEER 10 ಬಾಟಲ್ ಗಳಿದ್ದು, ಒಂದರ ಬೆಲೆ 150  ರೂಗಳಾಗಿರುತ್ತೆ.  3) 180 ML BAGPIPER DELUXE WHISKY 48 ಪಾಕೆಟ್ ಗಳಿದ್ದು, ಒಂದರ ಬೆಲೆ 106.23 ರೂಗಳಾಗಿರುತ್ತೆ.  .4) 180 ML OLD TAVERN WHISKY  48  ಪಾಕೆಟ್ ಗಳಿದ್ದು, ಒಂದರ ಬೆಲೆ 86.75  ರೂಗಳಾಗಿರುತ್ತೆ.  ಒಟ್ಟು ಮದ್ಯವು 29. ಲೀಟರ್ 200 ಎಂ, ಎಲ್ ಮದ್ಯವಿದ್ದು, ಇವುಗಳ ಒಟ್ಟು ಬೆಲೆ 12,263  /- ರೂಗಳಾಗಿರುತ್ತೆ. ಇವುಗಳಲ್ಲಿ ತಲಾ ಒಂದೊಂದು ಮದ್ಯದ ಪಾಕೆಟ್ ಹಾಗೂ ಬಾಟೆಲ್ ಗಳನ್ನು ಎಪ್ ಎಸ್ ಎಲ್ ತಜ್ಞರ ಪರೀಕ್ಷೆಗಾಗಿ ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಹೊಲಿದು BTL ಅಕ್ಷರದ ಸೀಲ್ ನಿಂದ ಸೀಲ್ ಮಾಡಿರುತ್ತೆ.  ಮೇಲ್ಕಂಡ ಮದ್ಯದ ಮಾಲುಗಳನ್ನು ಮತ್ತು ಮದ್ಯ ಸಾಗಾಣಿಕೆ ಮಾಡುತ್ತಿದ್ದ  ಕೆಎ 50 ಎ 0382  ನೊಂದಣಿ ಸಂಖ್ಯೆಯ ಬಿಳಿ  ಬಣ್ಣದ ಟಾಟಾ ಇಂಡಿಕಾ ಕಾರನ್ನು ಮತ್ತು ಆಸಾಮಿಯನ್ನು  ಪಂಚರ ಸಮಕ್ಷಮ ಬೆಳಿಗ್ಗೆ 7-45 ಗಂಟೆಯಿಂದ 8-45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ  ಮತ್ತು ಮದ್ಯದ  ಮಾಲುಗಳನ್ನು ಹಾಗೂ ಕಾರನ್ನು ಬೆಳಿಗ್ಗೆ  9-00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಆರೋಪಿ ಮತ್ತು ಮಾಲಿನ ಮೇಲೆ ಠಾಣಾ ಮೊ.ಸಂ 64/2021 ಕಲಂ:32,34,43(ಎ) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.38/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:29/04/2021 ರಂದು  ಬೆಳಗ್ಗೆ 11:30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.  ಈಗ್ಗೆ ಸುಮಾರು ವರ್ಷಗಳ ಹಿಂದೆ  ನನ್ನ ತಂಗಿಯಾದ ಕೆ ರತ್ನಮ್ಮ ಎಂಬುವರನ್ನು  ನಡುಮುಕುಂಟಪಲ್ಲಿ ಗ್ರಾಮದ ವಾಸಿಯಾದ ಕೆ ಮಸ್ತಾನ್ ರೆಡ್ಡಿ ರವರಿಗೆ ಕೊಟ್ಟು ವಿವಾಹ ಮಾಡಿರುತ್ತೇವೆ. ನನ್ನ ಭಾವನಾದ  ಕೆ ಮಸ್ತಾನ್ ರೆಡ್ಡಿ ಮತ್ತು ಅವರ  ತಂದೆ ಕೆ ವೆಂಕಟರವಣಾರೆಡ್ಡಿ ರವರು ಜಮೀನಿನಲ್ಲಿ ಟಮೋಟ ಬೆಳೆ ಹಾಕಿದ್ದು  ಸದರಿ ಟಮೋಟೋ ಗಿಡಗಳಿಗೆ ಔಷಧಿಯನ್ನು ತೆಗೆದುಕೊಂಡು ಬರಲು ದಿನಾಂಕ: 29/04/2021 ರಂದು ಬೆಳಗ್ಗೆ ಊರಿನಿಂದ  ಚೇಳೂರಿಗೆ ಹೋಗಲು ತನ್ನ ದ್ವಿ ಚಕ್ರ ವಾಹನ ಕೆಎ 03 ಹೆಚ್ ಎಮ್ 1340 ಹಿರೋ ಹೋಂಡಾ ಸ್ಪ್ಲೆಂಡರ್ ಪ್ರೋ  ಬೈಕಿನಲ್ಲಿ ನನ್ನ ಭಾವ ಮಸ್ತಾನ್ ರೆಡ್ಡಿ ಹಾಗೂ ಅವರ ತಂದೆ ವೆಂಕಟರವಣಾರೆಡ್ಡಿ ರವರು  ಚೇಳೂರಿಗೆ ಹೋಗುತ್ತಿದ್ದು,  ನಾನು ಸಹ ನನ್ನ ದ್ವಿಚಕ್ರ ವಾಹನ ಕೆಎ 40 ಇಬಿ 3526 ಡ್ರೀಮ್ ಯುಗಾ ಬೈಕಿನಲ್ಲಿ  ಅವರ ಜೊತೆಯಲ್ಲಿ ಹೋಗುತ್ತಿದ್ದು  ಬೆಳಗ್ಗೆ 9:00 ಗಂಟೆ ಸುಮಾರಿನಲ್ಲಿ ಚೇಳೂರಿನ ಬಾಲಾಜಿ ಮೆಸ್ ಹೋಟಲ್ ಬಳಿ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದಾಗ  ಚೇಳೂರು ಕಡೆಯಿಂದ ಎಪಿ 04 ಎಎಫ್ 7310 ಹಿರೋ ಹೊಂಡಾ ಪ್ಯಾಷನ್ ಪ್ರೋ ದ್ವಿಚಕ್ರ ವಾಹನದ ಚಾಲಕ  ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬಂದು ನನ್ನ ಭಾವ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿಯೇ  ಇಬ್ಬರು  ಗಾಯಗೊಂಡು ಬಿದ್ದು ಹೋದರು.  ನಾನು ಕೂಡಲೇ  ನನ್ನ ಬೈಕನ್ನು  ನಿಲ್ಲಿಸಿ ಏನಾಯಿತೆಂದು ನೋಡಲಾಗಿ ಮಸ್ತಾನ್ ರೆಡ್ಡಿ ರವರಿಗೆ  ತಲೆಗೆ, ಹಣೆಯ ಭಾಗದಲ್ಲಿ ಗಾಯವಾಗಿ ರಕ್ತ ಸೋರಿ ಸ್ಥಳದಲ್ಲಿಯೇ ಗಾಯಗೊಂಡು ಬಿದ್ದಿದ್ದು, ವೆಂಕಟರವಣಾರೆಡ್ಡಿಯವರಿಗೆ ಭುಜಕ್ಕೆ , ಹಣೆಗೆ ಏಟಾಗಿ ಬಿದ್ದುಹೋಗಿರುತ್ತಾರೆ.  ಸ್ಥಳದಲ್ಲಿದ್ದ ನಾನು ಮತ್ತು  ಸಾರ್ವಜನಿಕರು  ಗಾಯಗೊಂಡಿದ್ದ ಮೂರು ಜನರನ್ನು ಚೇಳೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ ದಾಖಲಿಸಿರುತ್ತೇವೆ. ಅಪಘಾತ ಉಂಟು ಮಾಡಿದ ದ್ವಿಚಕ್ರ ವಾಹನದ ಚಾಲಕನ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ನರಸಿಂಹಮೂರ್ತಿ ಬಿನ್ ಶ್ರೀರಾಮುಲು , ಸಜ್ಜಲವಾರಪಲ್ಲಿ ಗ್ರಾಮ ಎಂದು ತಿಳಿದುಬಂದಿರುತ್ತೆ. ನನ್ನ ಭಾವ ಮತ್ತು ಅವರ ತಂದೆ ವೆಂಕಟರವಣಾರೆಡ್ಡಿಯವರಿಗೆ  ಗಾಯಗಳು ಜಾಸ್ತಿಯಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಸಲುವಾಗಿ ಕರೆದುಕೊಂಡು ಬರುತ್ತಿದ್ದಾಗ ದಾರಿ ಮಧ್ಯದಲ್ಲಿಯೇ ನನ್ನ ಭಾವ ಮಸ್ತಾನ್ ರೆಡ್ಡಿಯವರು ಮೃತಪಟ್ಟಿರುತ್ತಾರೆ. ನನ್ನ ಭಾವ ನ ತಂದೆ ವೆಂಕಟರವಣಾರೆಡ್ಡಿ ಯವರನ್ನು ಚಿಕಿತ್ಸೆಯ ಸಲುವಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು,  ಅತೀ ವೇಗ ಮತ್ತು ಅಜಾಗರೂಕತೆಯಿಂದ  ವಾಹನ ಚಾಲನೆ ಮಾಡಿಕೊಂಡು ಬಂದು ನನ್ನ ಭಾವನವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ  ನನ್ನ ಭಾವ ಮಸ್ತಾನ್ ರೆಡ್ಡಿ ರವರ ಸಾವಿಗೆ ಕಾರಣರಾಗಿರುವ ಹಾಗೂ ವೆಂಕಟರವಣಾರೆಡ್ಡಿ ರವರಿಗೆ ಗಾಯಪಡಿಸಿರುವ ಎಪಿ 04 ಎಎಫ್ 7310 ಹಿರೋ ಹೊಂಡಾ ಪ್ಯಾಷನ್ ಪ್ರೋ ಬೈಕಿನ ಚಾಲಕ ನರಸಿಂಹಮೂರ್ತಿ ಬಿನ್ ಶ್ರೀರಾಮುಲು , ಸಜ್ಜಲವಾರಪಲ್ಲಿ ಗ್ರಾಮ ರವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:38/2021 ಕಲಂ 279,337, 304 (ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.32/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ-28/04/2021 ರಂದು ಮದ್ಯಾಹ್ನ 2:30 ಗಂಟೆಗೆ ಹೆಚ್,ಸಿ-84 ರವರು ಠಾಣೆಗೆ ಹಾಜರಾಗಿ ದಾಖಲು ಮಾಡಿಕೊಂಡಿರುವ ದೂರಿನ ಸಾರಾಂಶೆವೆನೆಂದರೆ ಈ ದಿನ ಮದ್ಯಾಹ್ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ವನ್ನು ಪಡೆದುಕೊಂಡು ನಂತರ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ತಾನು ಕೂಲಿ ಕೆಲಸ ಮಾಡಿಕೊಂಡು ತನ್ನ ಕುಟುಂಬವನ್ನು ಪೋಷಣೆ ಮಾಡಿಕೊಂಡಿರುತ್ತೇನೆ. ಈ ಹಿಂದೆ ತನ್ನ ಬಳಿ ತನ್ನ ಅಕ್ಕಂದಿರಾದ ಸರೋಜ ಮತ್ತು ಸ್ವಪ್ನ ರವರು ಹಣವನ್ನು ತೆಗೆದುಕೊಂಡು  ಇದುವರೆಗೂ ನೀಡಿರುವುದಿಲ್ಲ ಹೀಗಿರುವಾಗ ದಿನಾಂಕ-27/04/2021 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿರುವಾಗ ನಮ್ಮ ಮನೆಯ ಬಳಿ ನಮ್ಮ ಮನೆಯವರಾದ ಅಕ್ಕನಾದ ಸರೋಜ ಮತ್ತು ಸ್ವಪ್ನ,ಇಂದುಶ್ರೀ,ರಘು ಮತ್ತು ಕಿರಣ್ ರವರು ಏಕಾಏಕಿ ಮನೆಗೆ ಬಂದು ವಿನಾಕಾರಣ ಗಲಾಟೆ ಮಾಡಿ ಈ ಹಿಂದೆ ತಾನು ವಾಸವಾಗಿದ್ದ ಮನೆಯ ಹಿನ್ನೆಲೆಯಲ್ಲಿ ದ್ವೇಷ ಇಟ್ಟುಕೊಂಡು ನೀನು ಬದುಕುವುದು ಬೇಡ ಸಾಯಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು  ನಿನಗೆ ಹಣ ಯಾವುದು ಹಣ ಕೊಡುವುದಿಲ್ಲ ಎಂದು  ನಿಂದಿಸಿ ರಘು ಮತ್ತು ಕಿರಣ್ ರವರು ಅಲ್ಲೆ ಇದ್ದ ಕೋಲಿನಿಂದ ತನ್ನ ತಲೆಗೆ ಮತ್ತು ಬೆನ್ನಿಗೆ  ಹಾಗೂ ಹೊಟ್ಟೆ ಕೈ ಕಾಲುಗಳಿಗೆ ಹೊಡೆದು ರಕ್ತ ಗಾಯ ಮಾಡಿ ಸರೋಜ ರವರು ತನ್ನನ್ನು ಹಿಡಿದು ಕೈಗಳಿಂದ ಜಡೆಯನ್ನು ಹಿಡಿದು ಎಳೆದಾಡಿ ಸ್ವಪ್ನ ರವರು ಕೈಗಳಿಂದ ಮುಷ್ಠಿ ಬಿಗಿದು ತನ್ನ ಎದೆಗೆ ಗುದ್ದಿದರು ನಂತರ ತನ್ನನ್ನ ಬಿಡಿಸಲು ಬಂದ ತನ್ನ ಮಕ್ಕಳನ್ನು ಇಂದುಶ್ರೀ ರವರು ತಳ್ಳಾಡಿದ್ದು ನಂತರ ರಘು ಮತ್ತು ಕಿರಣ್ ರವರು ಕೋಲಿನಿಂದ ತಲೆಗೆ, ಎದೆಗೆ ಹಾಗೂ ಹೊಟ್ಟೆಯ ಭಾಗಕ್ಕೆ ಮತ್ತು ಕೈ ಕಾಲುಗಳಿಗೆ ಹೊಡೆದು ಗಾಯಪಡಿಸಿರುತ್ತಾರೆ. ನಂತರ ಗಲಾಟೆ ನಡೆಯುವಾಗ ನಮ್ಮ ಅಕ್ಕ-ಪಕ್ಕದ ಮನೆಯ ಚೈತ್ರ ಮತ್ತು ತನ್ನ ಗಂಡನಾದ ಕದಿರಪ್ಪ ರವರು ಬಿಡಿಸಲು ಬಂದಾಗ ಸದರಿ ರವರು ತನ್ನ ತಲೆಯಲ್ಲಿ ರಕ್ತಗಾಯವಾಗಿರುವುದನ್ನು ಗಮನಿಸಿ ಅಲ್ಲಿಂದ ಎಲ್ಲಾರು ಓಡಿ ಹೋಗಿರುತ್ತಾರೆ. ನಂತರ ತನ್ನ ಗಂಡನಾದ ಕದಿರಪ್ಪ ಮತ್ತು ಚೈತ್ರಾ ರವರು ಯಾವುದೋ ವಾಹನದಲ್ಲಿ ಬಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಗಾಗಿ  ದಾಖಲಿಸಿರುತ್ತಾರೆ.ತನ್ನ ವಿನಾಕಾರಣ ಗಲಾಟೆ ಮಾಡುತ್ತಿರುವ ತನ್ನ ಅಕ್ಕನಾದ ಸರೋಜ,ಸ್ವಪ್ನ,ಇಂದುಶ್ರಿ,ರಘು ಮತ್ತು ಕಿರಣ್ ರವರುಗಳು ತನಗೆ ಹೊಡೆದು ಬೈದು ಕೋಲಿನಿಂದ ಹೊಡೆದು ರಕ್ತ ಗಾಯ ಪಡಿಸಿದ ಇವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.33/2021 ಕಲಂ. 353  ಐ.ಪಿ.ಸಿ & 5,5(4) THE KARNATAKA EPIDEMIC DISEASES ACT, 2020:-

     ದಿನಾಂಕ; 28-04-2021 ರಂದು ರಾತ್ರಿ 8.30 ಗಂಟೆಗೆ ಪಿರ್ಯಾದಿದಾರರಾದ ಡಾ!! ರಮೇಶ್, 45 ವರ್ಷ,ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ಕಾರಿ ಆಸ್ಪತ್ರೆ ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ; 28-04-2021 ರಂದು ಕೋವಿಡ್ 2 ನೇ ಅಲೆಯ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದ ನ್ಯಾಯಾಲಯ ಪಕ್ಕದಲ್ಲಿರುವ ಹಳೇ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ, ಕೋವಿಡ್ ಆಸ್ಪತ್ರೆಯಲ್ಲಿ ಖಾಯಿಲೆಗೆ ಒಳಪಟ್ಟಿರುವ ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿರುತ್ತೆ. ಈ ದಿನ ಸಂಜೆ ಸುಮಾರು 4.00 ಗಂಟೆ ಸಮಯದಲ್ಲಿ ಯಾರೋ ಕೆಲವರು ಏಕಾಏಕಿ ಚಿಕ್ಕಬಳ್ಳಾಪುರ ನಗರದ ಕೋವಿಡ್ ಆಸ್ಪತ್ರೆಗೆ ಏಕಾಏಕಿ ನುಗ್ಗಿ ನಮ್ಮ ಸಂಬಂಧಿಕರಿಗೆ ಆಕ್ಸಿಜನ್ ಇಲ್ಲವಂತೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ನಾವು ಆಕ್ಸಿಜನ್ ಸಿಲಿಂಡರ್ ಅನ್ನು ತಂದಿದ್ದೇವೆ. ಇದನ್ನು ಹಾಕಿ  ಎಂದು ವಿನಾಕಾರಣ ಆಸ್ಪತ್ರೆಯ ಒಳಗೆ ನುಗ್ಗಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ತನಗೆ ಮತ್ತು ವೈದ್ಯರುಗಳಿಗೆ, ಸಿಬ್ಬಂದಿಯವರಿಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿ ಕೋವಿಡ್ ಎಂಬ ಮಾರಕ ಖಾಯಿಲೆ ಹರಡುತ್ತಿರುವ ಇಂತಹ ತುರ್ತು ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಗೆ ನುಗ್ಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿರುತ್ತಾರೆ. ಕೋವಿಡ್ ರೋಗಿ ಗಳಿಗೆ ಚಿಕಿತ್ಸೆ ಕೊಡುತ್ತಿದ್ದ ತನಗೆ ಮತ್ತು ನಮ್ಮ ಸಿಬ್ಬಂದಿಗೆ ಭಯ ಉಂಟಾಗುವ ವರ್ತಿಸಿ ಕರ್ತವ್ಯಕ್ಕೆ ಅಡ್ಡ ಪಡಿಸಿರುತ್ತಾರೆ. ನಂತರ ಅವರುಗಳ ಹೆಸರು ತಿಳಿಯಲಾಗಿ ಜಾತವಾರ ಹೊಸಹಳ್ಳಿ ಗ್ರಾಮದ ವಾಸಿ ಜಗದೀಶ್, ಪವನ್ ಎಂಬುದಾಗಿ ಹಾಗೂ ಇತರರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಆದರೆ ಮೇಲ್ಕಂಡವರು ಕೋವಿಡ್ ಕಾಯಿಲೆ ಹರಡಿಸುವ ಸಂಭವ ವಿದೆ ಎಂದು ತಿಳಿದಿದ್ದರು, ಸಹ ಅದನ್ನು ಹರಡಿಸುವ ಉದ್ದೇಶದಿಂದ ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿರುತ್ತಾರೆ. ಈ ಸಮಯದಲ್ಲಿ  ಆಸ್ಪತ್ರೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಾದ ಶ್ರೀ ನಂಜುಂಡಗೌಡರವರು ಹಾಗೂ ಇತರೆ ಸಿಬ್ಬಂದಿಯವರು ಬಂದು ಗಲಾಟೆ ಬಿಡಿಸಿ, ಕಳುಹಿಸಿಕೊಟ್ಟಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.171/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ: 29/04/2021 ರಂದು ಬೆಳಗ್ಗೆ 8-15 ಗಂಟೆಗೆ ಶ್ರೀ ಕೆ.ಎಂ.ಶ್ರೀನಿವಾಸಪ್ಪ, ಸಿ.ಪಿ.ಐ, ಚಿಂತಾಮಣಿ ಗ್ರಾಮಾಂತರ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 29/04/2021 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ 190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಗ್ಗೆ 6-00 ಗಂಟೆ ಸಮಯದಲ್ಲಿ ತಿಮ್ಮಸಂದ್ರ ಗ್ರಾಮದ ವಿಜಯಲಕ್ಷ್ಮಿ ಹ್ಯಾಂಡ್ ಲೂಮ್ಸ್ ಬಟ್ಟೆ ಅಂಗಡಿಯ ಮಾಲೀಕ ನಾಗರಾಜ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 8-9 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಾಗರಾಜ ಬಿನ್ ಮುನಿಯಪ್ಪ, 43 ವರ್ಷ, ನಾಯಕರು, ವಿಜಯಲಕ್ಷ್ಮಿ ಹ್ಯಾಂಡ್ ಲೂಮ್ಸ್  ಅಂಗಡಿ ಮಾಲೀಕರು, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು 2 ನೇ ಬಾರಿ ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 29/04/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ತಿಮ್ಮಯ್ಯ ಬಿನ್ ಕೊಮಣ್ಣ 50 ವರ್ಷ ಕುರುಬರು ಕೂಲಿ ಕೆಲಸ ಗೌಡಸಂದ್ರ ಗ್ರಾಮ ಗೈರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:10/04/2021 ರಂದು ಸಂಜೆ ಸುಮಾರು 4-15 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ  ತಮ್ಮ ಸಂಬಂದಿಯಾದ ಅನಂತನಾಗ ರವರು ನಮ್ಮ ಮನೆಯ ಬಳಿ ಬಂದು ರವಿಕುಮಾರ ರವರಿಗೆ ಅಪಘಾತವಾಗಿರುವುದಾಗಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ಪೋನ ಬಂದಿದೆ ಎಂದು ತಿಳಿಸಿದರು, ಆಗ ಕೂಡಲೆ ತಾನು ಮತ್ತು ಅನಂತನಾಗ ರವರು ದ್ವಿಚಕ್ರ ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ತನ್ನ ಮಗನಿಗೆ ಗಾಯಗಳಾಗಿದ್ದು ವಿಚಾರಿಸಲಾಗಿ ತನ್ನ ಮಗ ತನ್ನ ಬಾಬತ್ತು KA 52 H 8345 ನೋಂದನಿ ಸಂಖ್ಯೆಯ ಹೀರೊ ಹೊಂಡಾ ದ್ವಿಚಕ್ರವಾಹನದಲ್ಲಿ ಈ ದಿನ ಮದ್ಯಾಹ್ನ ತನ್ನ ತಂಗಿ ಮನೆ ಬೊಮ್ಮಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿ ನಂತರ ವಾಪಸ್ಸು ಊರಿಗೆ ಬರುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಕಾದಲವೇಣಿ ಗ್ರಾಮದ  ಇಟ್ಟಿಗೆ ಪ್ಯಾಕ್ಟರಿ ಬಳಿ ಮೋರಿ ಹತ್ತಿರ ರಾಷ್ಟ್ರೀಯ ಹೇದ್ದಾರಿಯಲ್ಲಿ ಬರುತ್ತಿದ್ದಾಗ ಸಂಜೆ ಸುಮಾರು 4-10 ಗಂಟೆ ಸಮದಲ್ಲಿ ಗೌರಿಬಿದನೂರು ಕಡೆಯಿಂದ ಬಂದ KA 42 A 9880 ಬಜಾಜ್ ಆಟೋ ಚಾಲಕ ತನ್ನ ಾಟೋವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲಣೆ ಮಾಡಿಕೊಂಡು ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದು, ತನ್ನ ಮಗನಿಗೆ ಎಡ ತೊಡೆಗೆ ಬಲವಾದ ಪೆಟ್ಟಾಗಿರುತ್ತೆ ಬಲ ಕೈ ಹೆಬ್ಬರಳು ಬಳಿ ಕುಯ್ದ ರೀತಿ ರಕ್ತವಾಗಿರುತ್ತೆ ಆಗ ಕೂಡಲೆ ರವಿಕುಮಾರನನ್ನು ಸಾರ್ವಜನಿಕರು ಉಪಚರಿಸಿ 108 ಅಂಬ್ಯುಲನ್ಸ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿರುವ ವಿಚಾರ ತಿಳಿಯಿತು, ನಂತರ ವೈದ್ಯರ ಸಲಹೆ ಮೇರೆಗೆ ನನ್ನ ಮಗನನ್ನು ಹೇಚ್ಚಿನ ಚಿಕಿತ್ಸೆಗಾಗಿ ಬೆಂಗಲೂರಿನ ಸಣಜಯ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಮತ್ತೆ ಈಗ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಸೆರಿಸಿ ಈಗ ತಡವಾಗಿ ದೂರು ನೀಡಿರುತ್ತೆನೆ , ನನ್ನ ಮಗನಾದ ರವಿಕುಮಾರ ರವರಿಗೆ ಅಪಘಾತವನ್ನುಂಟು ಮಾಡಿದ KA 42 A 9880 ಬಜಾಜ್ ಆಟೋ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:28/04/2021 ರಂದು ಸಂಜೆ 5-30 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ-364 ರವರು ಎನ್ ಸಿ ಆರ್ 91/2021 ರನ್ನು ಕ್ರಿಮಿನಲ್ ಪ್ರಕಣವನ್ನು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ತಮದು ಹಾಜರ್ ಪಡಿಸಿದರ ಸಾರಾಂಶವೆನೆಂದರೆ ದಿನಾಂಕ:18/04/2021 ರಂದು ಮದ್ಯಾಹ್ನ 1-45 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿ ದೂರಿನ ವರದಿಯ ಸಾರಾಂಶವೆನೆಂದರೆ ದಿನಾಂಕ: 18/04/2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಗೌರಿಬಿದನೂರು ವೃತ್ತ ಕಛೇರಿಯಲ್ಲಿದ್ದಾಗ ಸಾರ್ವಜನಿಕರು ಪೊನ್ ಮಾಡಿ ಗೌರಿಬಿದನೂರ ನಗರದ ಮರಿಗಮ್ಮ ದೇವಸ್ಥಾನದ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡು ಸ್ಥಳವಾಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ.-40 ಜಿ- 1222 ಜೀಪ್ನಲ್ಲಿ  ಕಛೇರಿ ಸಿಬ್ಬಂದಿಯನ್ನು ಸಿಹೆಚ್ ಸಿ-224 ವೆಂಕಟೇಶ್ ಮತ್ತು ಸಿಪಿಸಿ-310 ಮೈಲಾರಿ ರವರೊಂದಿಗೆ ಜೀಪ್ನ್ನು ಸಿ ಹೆಚ್ ಸಿ 224 ವೆಂಕಟೇಶ್ ರವರು ಚಾಲನೆ ಮಾಡಿಕೊಂಡು ಮಾನಸ ವೃತ್ತ ಬಿಳಿ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ತಮ್ಮ ಜೀಪ್ ನಲ್ಲಿ  ಕರೆದುಕೊಂಡು ಮದ್ಯಾಹ್ನ 12-15 ಗಂಟೆಯಲ್ಲಿ ಬೆಂಗಳೂರು ವೃತ್ತ ಬಳಿ ಬಂದು ಮರೆಯಲ್ಲಿ ಜೀಪ್ನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಮರಿಗಮ್ಮ ದೆವಸ್ಥಾನದ ಮುಂಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಸರಬರಾಜು ಮಾಡುತ್ತೀದ್ದವನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವಿನಾಯಕ ಬಿನ್ ನಾರಾಯಣರೆಡ್ಡಿ, 38 ವರ್ಷ, ವಕ್ಕಲಿಗರು,  ಪ್ಲೇಮಿಂಗ್ ಕೆಲಸ, ವಾಸ: ಜಿ.ಬೊಮ್ಮಸಂದ್ರ ಗ್ರಾಮ,  ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿಯವರನ್ನು ಇಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಬಗ್ಗೆ ಯಾವುದಾರರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) ಹೈವಾಡ್ಸ ಕಂಪನಿಯ ಚೀಯರ್ಸ್ ವಿಸ್ಕಿ  90 ಎಂ,ಎಲ್, ಸಾಮಥ್ರ್ಯದ ಮದ್ಯವಿರುವ 15 ಟೆಟ್ರಾ ಪಾಕೇಟ್ಗಳು,  2) ಹೈವಾಡ್ಸ ಕಂಪನಿಯ ಚೀಯರ್ಸ್ ವಿಸ್ಕಿ  90 ಎಂ,ಎಲ್, ಸಾಮಥ್ರ್ಯದ ಖಾಲಿ 04 ಟೆಟ್ರಾ ಪಾಕೇಟ್ಗಳು, 3) ಮದ್ಯವನ್ನು ಕುಡಿದು ಬಿಸಾಕಿದಂತಹ ಖಾಲಿ 03 ಪ್ಲಾಸ್ಟಿಕ್ ಗ್ಲಾಸ್ಗಳು, ಮತ್ತು 4) ಒಂದು ಲೀಟರ್ ಸಾಮಥ್ರ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಮದ್ಯಾಹ್ನ 12-30 ಗಂಟೆಯಿಂದ 1-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮದ್ಯಾಹ್ನ 1-45 ಗಂಟೆಗೆ ವರದಿಯನ್ನು ಸಿದ್ದಪಡಿಸಿ  ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಸೂಚಿರುತ್ತೆ.

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.46/2021 ಕಲಂ. 279,337 ಐ.ಪಿ.ಸಿ & 187 INDIAN MOTOR VEHICLES ACT, 1988:-

     ದಿನಾಂಕ:29/04/2021 ರಂದು ಮದ್ಯಾಹ್ನ 13:00 ಗಂಟೆಗೆ ಪಿರ್ಯಾದಿದಾರರಾದ ಮಹೇಂದ್ರ ಬಿನ್ ನರಸಿಂಹಪ್ಪ, 28 ವರ್ಷ, ಮಡಿವಾಳ ಜನಾಂಗ, ಬಾಬು ತರಕಾರಿ ಅಂಗಡಿಯಲ್ಲಿ ಕೆಲಸ, ವಾಸ: ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:28/04/2021 ರಂದು ಶಿಡ್ಲಘಟ್ಟ ತಾಲ್ಲೂಕು ಗಂಬೀರ್ಲಹಳ್ಳಿ ಗ್ರಾಮದ ತಮ್ಮ ಸಂಬಂದಿ ಹೇಮಂತ್ ಬಿನ್ ಸುರೇಶ್ ರವರು ಮದ್ಯಾಹ್ನ 3:10 ಗಂಟೆಯಲ್ಲಿ ತನಗೆ ಪೋನ್ ಮಾಡಿ ನಂದಿ ಕ್ರಾಸ್ ಬಳಿ ತಮ್ಮ ಕಾರಿಗೆ ಅಪಘಾತವಾಗಿದೆ ಬೇಗ ಬರುವಂತೆ ಹೇಳಿದನು. ಕೂಡಲೆ ತಾನು ಮತ್ತು ನಮ್ಮ ಸಂಬಂದಿ ಸುರೇಶ್ ಬಿನ್ ತಿಮ್ಮಣ್ಣ ಇಬ್ಬರು ಲಾಕ್ಡೌನ್ ಇದ್ದರು ನಂದಿ ಕ್ರಾಸ್ ಬಳಿ ಹೆದ್ದಾರಿ-7 ಕ್ಕೆ ಬಂದಾಗ ಸರ್ವಿಸ್ ರಸ್ತೆಯಲ್ಲಿ ಸದರಿ ಹೇಮಂತನ ಚಿಕ್ಕಮ್ಮ ಆಶಾರಾಣಿ ಕೋಂ ಶ್ರೀನಿವಾಸ ಹಾಗೂ ಹೇಮಂತ ಇದ್ದು ಮುಖಕ್ಕೆ ಗಾಜಿನ ಚೂರುಗಳು ಬಿದ್ದು ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಬಲಬುಜಕ್ಕೆ ಮೂಗೇಟಾಗಿ ಊದಿಕೊಂಡು ಕೈ ಎತ್ತಲಾರದೇ ನೊವಿನಿಂದ ಆಳುತ್ತಿದ್ದಳು. ಹೇಮಂತನಿಗೆ ಹಣೆ ಮತ್ತು ಮುಖಕ್ಕೆ ಗಾಜಿನ ಚೂರುಗಳು ಚುಚ್ಚಿ ಸಣ್ಣಪುಟ್ಟ ಗಾಯಗಳಾಗಿದ್ದು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಗ್ರೇ ಬಣ್ಣದ ಮಾರುತಿ ಶಿಪ್ಟ್ ಡಿಸೈರ್ ಕಾರು  ನಿಂತಿದ್ದು ಅದು ಕೆ.ಎ-05 ಎಂ.ಟಿ-2319 ಕಾರು ಆಗಿರುತ್ತೆ. ಕಾರು ಮುಂಭಾಗ, ಡೋರುಗಳು, ವಿಂಡೋ ಗ್ಲಾಸ್, ಮುಂದಿನ ಹಿಂದಿನ ಗಾಜುಗಳು ಪುಡಿಪುಡಿಯಾಗಿ ಜಖಂಗೊಂಡು ನಿಂತಿತ್ತು. ವಿಚಾರಿಸಲಾಗಿ ತಾವು ಚಿಕ್ಕಬಳ್ಳಾಪುರಲ್ಲಿರುವ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಗಂಬಿರ್ಲಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಮದ್ಯಾಹ್ನ 3:00 ಗಂಟೆಯಲ್ಲಿ ಹಿಂದಿನಿಂದ ಬರುತ್ತಿದ್ದ ಯಾವುದೋ ಕಂಟೈನರ್ ಲಾರಿಯೊಂದು ಬಲಬದಿಯ ಕಡೆಯಿಂದ ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಕಾರಿನ ಬಲ ಬದಿಗೆ ಡಿಕ್ಕಿ ಹೊಡೆಸಿ ಉಜ್ಜಿಕೊಂಡು ಅಪಘಾತ ಮಾಡಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆಂದು ಅದರ ನೊಂದಣಿ ಸಂಖ್ಯೆಯನ್ನು ಅಪಘಾತದ ಗುಂಗಿನಲ್ಲಿ ನೋಡಲಾಗಲಿಲ್ಲವೆಂದು ಲಾಕ್ ಡೌನ್ ಇದ್ದುದ್ದರಿಂದ ಯಾವುದೋ ಆಟೋ, ಕಾರು ಇಲ್ಲದೆ ಇದ್ದು ಅವರನ್ನು ಉಪಚರಿಸಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ  ಸೇರಿಸಿ ಚಿಕಿತ್ಸೆ ಮಾಡಿಸಿ ಓಡಾಡಿಕೊಂಡಿದ್ದು ಈ ದಿನ ತಡವಾಗಿ ಬಂದು ದೂರು ಕೊಡುತ್ತಿದ್ದು ಅಪಘಾತ ಪಡಿಸಿ ನಿಲ್ಲಿಸದೇ ಪರಾರಿಯಾಗಿ ಹೋಗಿರುವ ಕಂಟೈನರ್ ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಿ ತಮಗೆ ನ್ಯಾಯ ಜರುಗಿಸಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

10. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.33/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 28-04-2021 ರಂದು ಸಂಜೆ 6-15 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರು ಅಸಲು ಪಂಚನಾಮೆ, ಆರೋಪಿ, ಮಾಲುಗಳೊಂದಿಗೆ ಠಾಣೆಗೆ ಬಂದು ನೀಡಿದ ವರದಿಯನ್ನು ಪಡೆದು ಪರಿಶೀಲಿಸಿ ದಾಖಲಿಸಿದ ವರದಿ ಸಾರಾಂಶವೇನೆಂದರೆ, ದಿನಾಂಕ:28-04-2021 ರಂದು ಮದ್ಯಾಹ್ನ ತಾವು ಸಿಬ್ಬಂದಿಯವರಾದ ಸಿಪಿಸಿ-148 ಧನಂಜಯ ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯ್ಕ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ರಲ್ಲಿ ಬಿಳ್ಳೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬೋಯಿಪಲ್ಲಿ ಗ್ರಾಮದ ರಾಮಾಂಜಿ ಬಿನ್ ಗೋವಿಂದಪ್ಪ ಎಂಬುವವರು ತಮ್ಮ ಶ್ರೀ..ವೆಂಕಟೇಶ್ವರ ಹೋಟೆಲ್ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಬಿಳ್ಳೂರು ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಹೋಟೇಲ್ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಾಂಜಿ ಬಿನ್ ಗೋವಿಂದಪ್ಪ, 33 ವರ್ಷ, ನಾಯಕರು, ಹೊಟೇಲ್ ವ್ಯಾಪಾರ, ಬೋಯಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾಡ್ಸ ಚಿಯರ್ಸ್ ವಿಸ್ಕಿಯ 15 ಟೆಟ್ರಾ ಪ್ಯಾಕೇಟ್ ಗಳು ಇದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 525/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್,  1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೇಟ್ ಇದ್ದು, ಸದರಿ ಆಸಾಮಿ ರಾಮಾಂಜಿ ರವರನ್ನು ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಿಗೆ ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುವುದಾಗಿ, ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ, ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿ ಸದರಿ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತದೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.128/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 28/04/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಪಿಸಿ 543 ಸುಧಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 28-04-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹಣೆಯ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6-15 ಗಂಟೆ ಸಮಯದಲ್ಲಿ ಭಕ್ತರಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಸದರಿ ಗ್ರಾಮದ ವಾಸಿ ಮುನಿಯಪ್ಪ ಬಿನ್ ಓಬಪ್ಪ ಎಂಬುವನು ತನ್ನ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಅಲ್ಲಿಯೇ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಬಾತ್ಮಿ ಬಂದಿದ್ದು ನಂತರ ತಾನು ಮೇಲ್ಕಂಡ ಆಸಾಮಿಯ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಅಸಾಮಿಯು ಸಾರ್ವಜನಿಕ ಸ್ಥಳವಾದ ಮನೆಯ ಮುಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿರುವುದು ಖಚಿತವಾದ ಮೇಲೆ ಸದರಿ ಸ್ಥಳದ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಮದ್ಯವನ್ನು ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಮುನಿಯಪ್ಪ ಬಿನ್ ಒಬಪ್ಪ, 45 ವರ್ಷ, ಪ ಜಾತಿ, ಪೈಂಟಿಂಗ್ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಮುನಿಯಪ್ಪ ರವರ ಬಳಿ ಇದ್ದ ಕವರ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್. ನ Original Choice Deluxe Whisky ಯ 10 ಟೆಟ್ರಾ ಪ್ಯಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಬೆಲೆ ನಮೂದಾಗಿದ್ದು ಇವುಗಳ ಒಟ್ಟು ಬೆಲೆ 353 ಆಗಿದ್ದು, ಸ್ಥಳದಲ್ಲಿ 5 ಖಾಲಿ ಪ್ಲಾಸ್ಟಿಕ್ ಲೋಟಗಳು, 5 ಖಾಲಿ Original Choice Deluxe Whisky ಟೆಟ್ರಾ ಪ್ಯಾಕೇಟ್ ಗಳು ಮತ್ತು 5 ಖಾಲಿ ವಾಟರ್ ಪಾಕೇಟ್ ಗಳಿದ್ದು, ಸದರಿ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಕಾರಣ ಸದರಿ ಮಾಲನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ತಮ್ಮ ಮುಂದೆ ಹಾಜರು ಪಡಿಸುತ್ತಿದ್ದ ಮೇಲ್ಕಂಡ ಮಾಲನ್ನು ಮತ್ತು ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.129/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 28/04/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿಸಿ 14 ಗೋವಿಂದಪ್ಪ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 28-04-2021 ರಂದು ಸಂಜೆ ಠಾಣಾಧಿಕಾರಿಗಳು ತನಗೆ ಸಂಜೆ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ಇದ್ಲೂಡು, ಪಲ್ಲಿಚೆರ್ಲು, ಅಬ್ಲೂಡು ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 7-00 ಗಂಟೆ ಸಮಯದಲ್ಲಿ ವರದನಾಯಕನಹಳ್ಳಿ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ನಗರದ ಮಾರುತಿ ನಗರದ ವಾಸಿ ನಾರಾಯಣಸ್ವಾಮಿ ಬಿನ್ ಸೊಣ್ಣಪ್ಪ ರವರು ವರದನಾಯಕನಹಳ್ಳಿ ಗ್ರಾಮದಲ್ಲಿರುವ ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಮದ್ಯವನ್ನು ಮಾರಾಟ ಮಾಡುತ್ತಾ ಅಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಬಾತ್ಮಿ ಬಂದಿದ್ದು ನಂತರ ತಾನು ಮೇಲ್ಕಂಡ ಆಸಾಮಿಯ ಚಿಲ್ಲರೆ ಅಂಗಡಿಯ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಅಸಾಮಿಯು ತನ್ನ ಅಂಗಡಿಯ ಮುಂಭಾಗದಲ್ಲಿ ಯಾರೋ 3 ಜನ ಸಾರ್ವಜನಿಕರನ್ನು ಕುಳಿತುಕೊಳ್ಳಲು ಟೇಬಲ್ ಗಳನ್ನು ಹಾಕಿ ತನ್ನ ಬಳಿ ಇರುವ ಮದ್ಯವನ್ನು ಅವರಿಗೆ ಕೊಟ್ಟು, ಅಂಗಡಿಯಲ್ಲಿನ ತಿನ್ನುವ ಪದಾರ್ಥಗಳನ್ನು ಕೊಟ್ಟು ಅಲ್ಲಿಯೇ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸಾರ್ವಜನಿಕರು ಕುಡಿಯುತ್ತಿರುವುದು ಖಚಿತವಾದ ಮೇಲೆ ಸದರಿ ಸ್ಥಳದ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಮದ್ಯವನ್ನು ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಸೊಣ್ಣಪ್ಪ, 65 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ-ಮಾರುತಿ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ನಂತರ ಆತನ ಬಳಿ ಇದ್ದ ಕವರ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್. ನ Original Choice Deluxe Whisky ಯ 10 ಟೆಟ್ರಾ ಪ್ಯಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಬೆಲೆ ನಮೂದಾಗಿದ್ದು ಇವುಗಳ ಒಟ್ಟು ಬೆಲೆ 353 ಆಗಿದ್ದು, ಸ್ಥಳದಲ್ಲಿ 5 ಖಾಲಿ ಪ್ಲಾಸ್ಟಿಕ್ ಲೋಟಗಳು, 5 ಖಾಲಿ Original Choice Deluxe Whisky ಟೆಟ್ರಾ ಪ್ಯಾಕೇಟ್ ಗಳು ಮತ್ತು 5 ಖಾಲಿ ವಾಟರ್ ಪಾಕೇಟ್ ಗಳಿದ್ದು, ಸದರಿ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಕಾರಣ ಸದರಿ ಮಾಲನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ತಮ್ಮ ಮುಂದೆ ಹಾಜರು ಪಡಿಸುತ್ತಿದ್ದ ಮೇಲ್ಕಂಡ ಮಾಲನ್ನು ಮತ್ತು ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ದೂರು.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.131/2021 ಕಲಂ. 324,504,506 ಐ.ಪಿ.ಸಿ:-

     ದಿನಾಂಕ:-29/04/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಾಮಲ ಕೋಂ ರಂಗನಾಥ, 52 ವರ್ಷ, ವಕ್ಕಲಿಗರು, ಗೃಹಿಣಿ, ನಂಬರ್ 404, ನಿವಾಹನ ಹೈ ಪೀಲ್ಡ್, 1 ನೇ ಮುಖ್ಯ ರಸ್ತೆ, 12 ನೇ ಕ್ರಾಸ್, ಪೈ ಲೇಔಟ್, ದೂರವಾಣಿ ನಗರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತನ್ನ ಹಿರಿಯ ಅಣ್ಣನಾದ ಕೇಂಪೇಗೌಡ ರವರ ಮಗನಾದ ಗಿರೀಶ್ ರವರು ದಿನಾಂಕ 27/04/2021 ರಂದು ಮೃತ ಪಟ್ಟಿದ್ದು, ಆ ದಿನ ತಾವು ಆತನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಅಪ್ಪೇಗೌಡನಹಳ್ಳಿ ಗ್ರಾಮಕ್ಕೆ ಬಂದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ತಾನು, ತನ್ನ ತಂದೆ ವೆಂಕಟನಾರಾಯಣಪ್ಪ, ತನ್ನ ತಾಯಿ ಗೌರಮ್ಮ, ತನ್ನ ತಮ್ಮನ ಹೆಂಡತಿ ಶೋಭಾ ರವರು ಮಾತನಾಡಿಕೊಂಡು ನಿಂತಿದ್ದಾಗ ಆ ಸಮಯದಲ್ಲಿ ತನ್ನ 3 ನೇ ಅಣ್ಣನಾದ ಶ್ರೀನಿವಾಸಮೂರ್ತಿ ರವರು ಏಕಾಏಕಿ ತನ್ನ ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ತನ್ನ ಬಳಿ ಬಂದು ತನ್ನನ್ನು ಕೆಟ್ಟ ಮಾತುಗಳಿಂದ ಬೈದು, ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಲೆಗೆ ಹೊಡೆದಾಗ ತಾನು ಅದರಿಂದ ತಪ್ಪಿಸಿಕೊಂಡು ತನ್ನ  ಬಲ ಕೈಯನ್ನು ಅಡ್ಡ ಇಟ್ಟಾಗ ತನ್ನ ಬಲ ಕೈನ ತೋರು ಬೆರಳಿಗೆ ರಕ್ತಗಾಯವಾಗಿದ್ದು, ಆ ಸಮಯದಲ್ಲಿ ಅಲ್ಲಿಯೇ ಇದ್ದ ತನ್ನ ತಂದೆ-ತಾಯಿ, ಶೋಭಾ ರವರ ಅಕ್ಕ ಮಂಜುಳಾ ಹಾಗು ಇತರೇ ಗ್ರಾಮಸ್ಥರು ಅಡ್ಡ ಬಂದು ಜಗಳವನ್ನು ಬಿಡಿಸಿದಾಗ ಶ್ರೀನಿವಾಸಮೂರ್ತಿ ರವರು ತನ್ನನ್ನು ಕುರಿತು ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ನಂತರ ತಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆಸಿಕೊಂಡು ವಾಪಸ್ಸು ಬೆಂಗಳೂರಿಗೆ ಹೋಗಿ, ತಮ್ಮ ಮನೆಯವರ ಜೊತೆ ಮಾತನಾಡಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ಶ್ರೀನಿವಾಸಮೂರ್ತಿ ರವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

Last Updated: 29-04-2021 06:05 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080