ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ.406,420 ಐ.ಪಿ.ಸಿ:-

     ದಿನಾಂಕ: 29/03/2021 ರಂದು ಬೆಳಿಗ್ಗೆ 11-30 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು  ಶಾಖೆಯಲ್ಲಿ ಅನ್ವರ್ ಸಾಬ್ ಬಿನ್ ಯಾಕೂಬ್ ಸಾಬ್ ,ಮುಸ್ಲಿಮರು, ವ್ಯವಸಾಯ,ವಾಸ;  ಎಂ ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು,  ರವರು ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 26/02/2011 ರಂದು  90.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು,  ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು.ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ  ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ  ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.18/2021 ಕಲಂ.ಮನುಷ್ಯ ಕಾಣೆ:-

     ದಿನಾಂಕ; 28-03-2021 ರಂದು ರಾತ್ರಿ 11.30 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ಲಕ್ಷ್ಮಿಪ್ರಭಾವತಿ ಕೋಂ ಅಶ್ವತ್ಥನಾರಾಯಣ.ಎಲ್, 34 ವರ್ಷ, ಬಲಜಿಗರು, ಗೃಹಿಣಿ, ವಾಸ: ಮುನಿರಾಜು ರವರ ಬಾಡಿಗೆ ಮನೆಯಲ್ಲಿ ವಾಸ, ವಾರ್ಡ್ ನಂ: 06, ತಿಮ್ಮಕ್ಕ ಲೇಔಟ್, ಚಿಕ್ಕಬಳ್ಳಾಪುರ ನಗರ ಸ್ವಂತ ಸ್ಥಳ: ಕದಿರನ್ನಗಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಕದಿರನ್ನಗಾರಿಪಲ್ಲಿ ಗ್ರಾಮದ ವಾಸಿ ಲಕ್ಷ್ಮಯ್ಯ ರವರ ಮಗನಾದ ಅಶ್ವತ್ಥನಾರಾಯಣ, 40 ವರ್ಷ, ಎಂಬುವರನ್ನು ಮದುವೆಯಾಗಿದ್ದು, ನಮಗೆ ಇಬ್ಬರು ಮಕ್ಕಳಿದ್ದು 1 ನೇ ಶಾಲಿ ಹೋತ್ರ, 2 ನೇ ಮಯೂರ ವರ್ಮ, ಆಗಿರುತ್ತಾರೆ. ತನ್ನ ಗಂಡ ಪರ್ತಕರ್ತರಾಗಿದ್ದು, ಈಗ ಸ್ವ ಇಚ್ಚೆಯಿಂದ ಯಾವುದೇ ಕೆಲಸ ಮಾಡುತ್ತಿಲ್ಲ. ಇತ್ತೀಚಿಗೆ ಸುಮಾರು 4 ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತಿದ್ದು, ಸಂಸಾರದ ವಿಚಾರದಲ್ಲಿ ಗಲಾಟೆ ಮಾಡುವುದು, ಸಣ್ಣ ಪುಟ್ಟವಿಚಾರಗಳಿಗೆ ರೇಗಾಡುವುದು, ಹಾಗೂ ಕೆಲಸದ ವಿಚಾರದಲ್ಲಿ ತುಂಬಾ ಬೇಸರ ಮಾಡಿಕೊಂಡಿದ್ದರು ಈಗಿರುವಾಗ ಈ ದಿನ ದಿನಾಂಕ; 28-03-2021 ರಂದು ಬೆಳಗ್ಗೆಯಿಂದ ಸುಮ್ಮನೇ ಯಾವುದೋ ವಿಚಾರವನ್ನು ಯೋಚನೆ ಮಾಡಿಕೊಂಡು ಊಟ ಮಾಡದೇ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಇಂದು ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ ಏನು ವಿಚಾರವನ್ನು ಹೇಳದೇ ಮನೆಯನ್ನು ಬಿಟ್ಟು ಹೊರಟು ಹೋಗಿರುತ್ತಾರೆ. ನಂತರ ತಾನು ತನ್ನ ಗಂಡನಿಗೆ ಪೊನ್ ಮಾಡಿದಾಗ ಪೋನ್ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ. ಎಟಿಎಂ ನಲ್ಲಿ 5000/- ರೂಗಳು ನಗದು ಡ್ರಾ ಮಾಡಿದ್ದು, ಮೊಬೈಲ್ ಗೆ ಮೆಸೇಜ್ ಬಂದಿದ್ದು, ತನ್ನ ಗಂಡ ರಾತ್ರಿಯಾಗಿರುವುದರಿಂದ ಎಲ್ಲಿಗೆ ಹೋಗಿರುತ್ತಾನೆ. ಗೊತ್ತಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತನ್ನ ಗಂಡ ಅಶ್ವತ್ಥ ನಾರಾಯಣ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.78/2021 ಕಲಂ.32,34 ಕೆ.ಇ ಆಕ್ಟ್:-

     ದಿನಾಂಕ: 28-03-2021 ರಂದು 17-30  ಗಂಟೆಯಲ್ಲಿ ಮಾನ್ಯ ಸಿ.ಪಿ.ಐ.ರವರಾದ  ಶ್ರೀ ಶಶಿಧರ ಎಸ್.ಡಿ. ರವರು ಠಾಣೆಗೆ ಹಾಜರಾಗಿ  ಆಸಾಮಿ, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂಧರೆ ದಿನಾಂಕ 28-03-2021 ರಂದು 15-30 ಗಂಟೆಯಲ್ಲಿ  ಕಛೇರಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು  ಗೆದರೆ ಗ್ರಾಮದಲ್ಲಿ ಅಲ್ಲಿಪುರ-ಹೊಸೂರು ರಸ್ತೆಯಲ್ಲಿ ಕೃಷ್ಣಾ ರೆಡ್ಡಿ ಬಿನ್ ನರಸೀಯಪ್ಪ ಎಂಬುವರ ಚಿಲ್ಲರೆ ಅಂಗಡಿಯ ಮುಂಭಾಗ  ಯಾರೋ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದಾನೆಂದು  ಬಂದ ಖಚಿತವಾದ ಮಾಹಿತಿಯ ಮೇರೆಗೆ  ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 512  ರಾಜಶೇಖರ, ಪಿ.ಸಿ. 518 ಆನಂದ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-1222 ರಲ್ಲಿ ಗೌರಿಬಿದನೂರು ತಾಲ್ಲೂಕು ಗೆದರೆ ಗ್ರಾಮಕ್ಕೆ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ  ಅಲ್ಲಿಪುರ- ಹೊಸೂರು ಮುಖ್ಯ ರಸ್ತೆಯಲ್ಲಿ  ರಸ್ತೆಯಿಂದ ದಕ್ಷಿಣಕ್ಕೆ ಇರುವ  ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ರಸ್ತೆಯಲ್ಲಿ  ಒಬ್ಬ ಆಸಾಮಿಯು ನಿಂತು ಕೊಂಡು ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ಹಿಡಿದುಕೊಂಡಿದ್ದು ಸದರಿ ಚೀಲದಿಂದ ಮದ್ಯದ ಪಾಕೇಟ್ ಅನ್ನು  ಸಾರ್ವಜನಿಕರಿಗೆ ಕೊಟ್ಟು ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದನು. ಸದರಿ ಅಸಾಮಿಯು  ಮದ್ಯವನ್ನು ಅಕ್ರಮವಾಗಿ ಮಾರಾಟವನ್ನು ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿಯನ್ನು ಮಾಡಲಾಗಿ ಆಸಾಮಿಯು ಚೀಲವನ್ನು ಬಿಸಾಡಿ ಓಡಿಹೋಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಯವರು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಕೃಷ್ಣಾ ರೆಡ್ಡಿ ಬಿನ್  ನರಸೀಯಪ್ಪ, 62 ವರ್ಷ, ಒಕ್ಕಲಿಗರು,  ಚಿಲ್ಲರೆ ಅಂಗಡಿ ವ್ಯಾಪಾರ, ವಾಸ  ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಬಿದ್ದಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ  90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 20 ಟೆಟ್ರಾ ಪಾಕೆಟ್ ಗಳು 1 ಲೀಟರ್.800 ಮಿಲಿ ಮತ್ತು 180 ಎಂ.ಎಲ್. ಸಾಮರ್ಥ್ಯದ  BAGPIPER  ಹೆಸರಿನ 24 ಟೆಟ್ರಾಪಾಕೇಟ್ ಗಳು 4 ಲೀಟರ್.200 ಮಿಲಿ ಇರುತ್ತೆ.  ಇವುಗಳ ಒಟ್ಟು ಸಾಮರ್ಥ್ಯ 6.ಲೀಟರ್ 120  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 3524/- ರೂ.ಗಳಾಗಿರುತ್ತೆ. ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ   ಮದ್ಯವನ್ನು ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ. ನಂತರ ಸ್ಥಳದಲ್ಲಿ 16-00 ಗಂಟೆಯಿಂದ 17-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, 2) 180 ಎಂ.ಎಲ್. ಸಾಮರ್ಥ್ಯದ BAGPIPER ಹೆಸರಿನ 24 ಟೆಟ್ರಾಪಾಕೇಟ್ ಗಳು, 3)ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮದ್ಯದ ಪಾಕೇಟ್ ಗಳಲ್ಲಿ 90 ಎಂ.ಎಲ್. ನ  HAY WARDS CHEERS  WHISKY ಯ 1 ಪಾಕೇಟ್  ಮತ್ತು 180 ಎಂ.ಎಲ್. ಸಾಮರ್ಥ್ಯದ  BAGPIPER ನ  ಪಾಕೇಟ್ ಅನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಎ.ಬಿ. ಎಂಬ ಅಕ್ಷರಗಳಿಂದ ಸೀಲು ಮಾಡಿದ್ದು ಉಳಿದ ಮದ್ಯದ  ಟೆಟ್ರಾ ಪಾಕೇಟ್ ಗಳನ್ನು ಪ್ಲಾಸ್ಟೀಕ್ ಚೀಲದಲ್ಲಿಟ್ಟಿದ್ದು  ಮಾಲುಗಳನ್ನು  ವಶಪಡಿಸಿಕೊಂಡು, ಠಾಣೆಗೆ 17-30 ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆಸಾಮಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿ ನೀಡಿದ ದೂರಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.79/2021 ಕಲಂ.32,34 ಕೆ.ಇ ಆಕ್ಟ್:-

     ದಿನಾಂಕ: 28-03-2021 ರಂದು 17-30  ಗಂಟೆಯಲ್ಲಿ ಮಾನ್ಯ ಸಿ.ಪಿ.ಐ.ರವರಾದ  ಶ್ರೀ ಶಶಿಧರ ಎಸ್.ಡಿ. ರವರು ಠಾಣೆಗೆ ಹಾಜರಾಗಿ  ಆಸಾಮಿ, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂಧರೆ ದಿನಾಂಕ: 28-03-2021 ರಂದು 18-30  ಗಂಟೆಯಲ್ಲಿ ನಾನು ಕಛೇರಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು  ಗೆದರೆ ಗ್ರಾಮದಲ್ಲಿ ಅಲ್ಲಿಪುರ-ಹೊಸೂರು ರಸ್ತೆಯಲ್ಲಿ ನಾಗರಾಜ ಬಿನ್ ಲೇಟ್ ಚನ್ನರಾಯಪ್ಪ, ಎಂಬುವರ ಚಿಲ್ಲರೆ ಅಂಗಡಿಯ ಮುಂಭಾಗ  ಯಾರೋ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದಾನೆಂದು  ಬಂದ ಖಚಿತವಾದ ಮಾಹಿತಿಯ ಮೇರೆಗೆ  ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 512  ರಾಜಶೇಖರ, ಪಿ.ಸಿ. 518 ಆನಂದ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-1222 ರಲ್ಲಿ ಗೌರಿಬಿದನೂರು ತಾಲ್ಲೂಕು ಗೆದರೆ ಗ್ರಾಮಕ್ಕೆ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ  ಅಲ್ಲಿಪುರ- ಹೊಸೂರು ಮುಖ್ಯ ರಸ್ತೆಯಲ್ಲಿ  ರಸ್ತೆಯಿಂದ ಉತ್ತರಕ್ಕೆಇರುವ  ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ರಸ್ತೆಯಲ್ಲಿ  ಒಬ್ಬ ಆಸಾಮಿಯು ನಿಂತು ಕೊಂಡು ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ಹಿಡಿದುಕೊಂಡಿದ್ದು ಸದರಿ ಚೀಲದಿಂದ ಮದ್ಯದ ಪಾಕೇಟ್ ಅನ್ನು  ಸಾರ್ವಜನಿಕರಿಗೆ ಕೊಟ್ಟು ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದನು. ಸದರಿ ಅಸಾಮಿಯು  ಮದ್ಯವನ್ನು ಅಕ್ರಮವಾಗಿ ಮಾರಾಟವನ್ನು ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿಯನ್ನು ಮಾಡಲಾಗಿ ಆಸಾಮಿಯು ಚೀಲವನ್ನು ಬಿಸಾಡಿ ಓಡಿಹೋಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಯವರು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ನಾಗರ಻ಜ ಬಿನ್ ಲೇಟ್ ಚನ್ನರಾಯಪ್ಪ, 65 ವರ್ಷ, ಸಾದರು ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ  ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಬಿದ್ದಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ  90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 20 ಟೆಟ್ರಾ ಪಾಕೆಟ್ ಗಳು 1 ಲೀಟರ್.800 ಮಿಲಿ ಮತ್ತು 180 ಎಂ.ಎಲ್. ಸಾಮರ್ಥ್ಯದ  OLD TAVERN  ಹೆಸರಿನ 27 ಟೆಟ್ರಾಪಾಕೇಟ್ ಗಳು 4 ಲೀಟರ್.860 ಮಿಲಿ ಇರುತ್ತೆ.  ಇವುಗಳ ಒಟ್ಟು ಸಾಮರ್ಥ್ಯ 6.ಲೀಟರ್ 660  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 2504/- ರೂ.ಗಳಾಗಿರುತ್ತೆ. ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ   ಮದ್ಯವನ್ನು ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ. ನಂತರ ಸ್ಥಳದಲ್ಲಿ 19-00 ಗಂಟೆಯಿಂದ 20-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, 2) 180 ಎಂ.ಎಲ್. ಸಾಮರ್ಥ್ಯದ OLD TAVERN  WHISKY ಹೆಸರಿನ 27 ಟೆಟ್ರಾಪಾಕೇಟ್ ಗಳು, 3)ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮದ್ಯದ ಪಾಕೇಟ್ ಗಳಲ್ಲಿ 90 ಎಂ.ಎಲ್. ನ  HAY WARDS CHEERS  WHISKY ಯ 1 ಪಾಕೇಟ್  ಮತ್ತು 180 ಎಂ.ಎಲ್. ಸಾಮರ್ಥ್ಯದ  OLD TAVERN  WHISKY ನ  ಪಾಕೇಟ್ ಅನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಎ.ಬಿ. ಎಂಬ ಅಕ್ಷರಗಳಿಂದ ಸೀಲು ಮಾಡಿದ್ದು ಉಳಿದ ಮದ್ಯದ  ಟೆಟ್ರಾ ಪಾಕೇಟ್ ಗಳನ್ನು ಪ್ಲಾಸ್ಟೀಕ್ ಚೀಲದಲ್ಲಿಟ್ಟಿದ್ದು ಮಾಲುಗಳನ್ನು  ವಶಪಡಿಸಿಕೊಂಡು, ಠಾಣೆಗೆ 20-30 ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆಸಾಮಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿ ನೀಡಿದ ದೂರಾಗಿರುತ್ತೆ.

 

5. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:28/03/2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ನರಸಿಂಹಮೂರ್ತಿ ಬಿನ್ ಲೇಟ್ ಹನುಮಂತಪ್ಪ, 50 ವರ್ಷ, ಉಪ್ಪಾರ ಜನಾಂಗ, ಜಿರಾಯ್ತಿ, ವಾಸ: ಚಿಗಟಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೆನೆ. ತನಗೆ ಸಾಗರ್ ಮತ್ತು ಸಂತೊಷ್ ಎಂಬ ಇಬ್ಬರು ಮಕ್ಕಳಿದ್ದು ದಿನಾಂಕ:28/03/2021 ರಮದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ತಾನು ತನ್ನ ಇಬ್ಬರು ಮಕ್ಕಳೊಂದಿಗೆ ಕೆ.ಎ-40 ಇಎ-2013 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಹಿಂದೂಪುರ ಹತ್ತಿರ ಇರುವ ಶಿರವಾರ ಗ್ರಾಮದಲ್ಲಿರುವ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ಹೋಗಿ ವಾಪಸ್ಸು ತಮ್ಮ ಗ್ರಾಮಕ್ಕೆ ಬಂದು ದ್ವಿ ವಾಹನವನ್ನು ತಮ್ಮ ಮನೆಯ ಬಳಿ ನಿಲ್ಲಿಸಿ ನಾವುಗಳು ನಮ್ಮ ಹೊಲದ ಬಳಿ ಹೋದೆವು. ತನ್ನ ಮಗ ಸಾಗರ್ ರವರು ನಮ್ಮ ಮನೆಯ ಬಳಿ ನಿಲ್ಲಿಸಿದ್ದ ಕೆ.ಎ-40 ಇಎ-2013 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ತನಗೆ ತಿಳಿಸದೇ ತೆಗೆದುಕೊಂಡು ಹೋಗಿರುತ್ತಾನೆ. ನಂತರ ಮದ್ಯಾಹ್ನ ಸುಮಾರು 12-45 ಗಂಟೆಯಲ್ಲಿ ಪ್ರಕಾಶ್ ಬಿನ್ ಗಂಗಪ್ಪ, 38 ವರ್ಷ, ಟೀ ಅಂಗಡಿ ವ್ಯಾಪಾರ ವಾಸ: ಅರವಿಂದ ನಗರ ಗೌರಿಬಿದನೂರು ನಗರ ರವರು ತನಗೆ ಪೊನ್ ಮಾಡಿ 12-30 ಗಂಟೆಯಲ್ಲಿ ಗೌರಿಬಿದನೂರು ನಗರ ಬೆಂಗಳೂರು ವೃತ್ತ ಬಳಿ ಬೆಂಗಳೂರು ಕಡೆಯಿಂದ ಬಂದ ಕೆ.ಎ.-40 ಎ- 8245 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಮ್ಮ ಮಗ ಚಾಲನೆ ಮಾಡುತ್ತೀದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ನಿಮ್ಮ ಮಗ ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋದಾಗ ತಲೆಯ ಮೇಲೆ ಕ್ಯಾಂಟರ್ನ ಹಿಂಬದಿಯ ಟೈರ್ ಗಳು ಹತ್ತಿದ್ದರಿಂದ ನಿಮ್ಮ ಮಗ ಸಾಗರ್ ರವರು ಸ್ಥಳದಲ್ಲಿ ಮೃತಪಟ್ಟಿದ್ದು ನಿಮ್ಮ ಮಗನ ಮೃತ ದೇಹವನ್ನು ಅಂಬುಲೇನ್ಸ್ನಲ್ಲಿ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಸಾಗಿಸಿರುವುದಾಗಿ ತಿಳಿಸಿದ್ದು ತಾನು, ತನ್ನ ಹೆಂಡತಿ ಗಂಗಮ್ಮ ಮತ್ತು ಸಂಬಂದಿಕರಾದ ಓಬಳೇಶ್ ರವರೊಂದೆಗೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಬಂದು ನೋಡಲಾಗಿ ತನ್ನ ಮಗನ ತಲೆಯ ಮೇಲೆ ಸದರಿ ಕ್ಯಾಂಟರ್ ವಾಹನವು ಹತ್ತಿದ್ದರಿಂದ ತಲೆಯು ಜಜ್ಜಿ ಹೋಗಿ ತಲೆಯಿಂದ ಮೆದಳು ಹೊರಬಂದಿರುತ್ತೇದೆ. ತನ್ನ ಮಗನಿಗೆ ರಸ್ತೆ ಅಪಘಾತವಾಗಿರುವುದು ನಿಜವಾಗಿರುತ್ತೆದೆ. ಆದ್ದರಿಂದ ತನ್ನ ಮಗನಿಗೆ ರಸ್ತೆ ಅಪಘಾತ ಮಾಡಿದ  ಕೆ.ಎ.-40 ಎ- 8245 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕ ಮತ್ತು ವಾಹನದ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿದೆ.

 

6. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.30/2021 ಕಲಂ. 323,324,504,506,307,34 ಐ.ಪಿ.ಸಿ:-

     ದಿನಾಂಕ:28-03-21 ರಂದು ರಾತ್ರಿ 10.15 ಗಂಟೆಗ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಮೊಮೋ ಪಡೆದು ಹೆಚ್.ಸಿ-115 ರವರೊಂದಿಗೆ ಆಸ್ಪತ್ರೆಗೆ ಹೋಗಿ  ದಾಖಲಾಗಿದ್ದ ಗಾಯಾಳು ರವಿಚಂದ್ರ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ಈಗ್ಗೆ 02 ದಿನಗಳ ಹಿಂದೆ ನಮ್ಮ ಅಣ್ಣನಾದ ಬಾಬು ಬಿನ್ ವೆಂಕಟೇಶಪ್ಪ ರವರಿಗೆ ನಮ್ಮ ವಾರ್ಡ್ ಬಾಲಕೃಷ್ಣ ಬಿನ್ ಗೋಪಾಲಪ್ಪ ಎಂಬುವರು ನಿಮ್ಮ ಅಣ್ಣ ಯಾವ ಸೀಮೆ ಕೌನ್ಸಲರ್ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಕೆಟ್ಟ ಮಾತುಗಳಿಂದ ಬೈದು, ಈ ವಿಚಾರದಲ್ಲಿ ಮುಂದೆ ಸರಿಹೋಗಬಹುದೆಂದು ಸುಮ್ಮನೆ ಆಗಿದ್ದು ದಿನಾಂಕ:28-03-21 ರಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ಬಾಬು ರವರು ಪೂಜಮ್ಮ ದೇವಾಲಯದ ಬಳಿ ಕರಗ ನೋಡಲು ಹೋಗಿದ್ದಾಗ ಬಾಲಕೃಷ್ಣ ರವರ ತಮ್ಮನಾದ ಅಶೋಕ ರವರು ಏಕಾ ಏಕಿ ಬಂದು ಹಿಂದಿನಿಂದ ಬಾಬು ರವರಿಗೆ ಕೈಗಳಿಂದ ಗುದ್ದಿ ಕಾಲಿನಿಂದ ಒದ್ದು ಕೆಳಗೆ ಬೀಳಿಸಿ ನನ್ನ ಮಕ್ಕಳೇ ಬನ್ನಿ ನಿಮ್ಮನ್ನು ನೋಡಿಕೊಳ್ಳುತ್ತೇವೆಂದು ಬೈದು ಓಡಿಹೋಗಿದ್ದು ರಾತ್ರಿ ಸುಮಾರು 9-20 ಗಂಟೆಗೆ ತಾನು ನಮ್ಮ ದೊಡ್ಡಪ್ಪನ ಮಕ್ಕಳಾದ ಶಶಿಧರ ಬಿನ್ ಆನಂದ ರವರು ಬಾಲಕೃಷ್ಭ ರವರ ಮನೆಯ ಬಳಿ ಹೋಗಿ ಅಶೋಕ ರವರನ್ನು ಯಾಕೆ ನಮ್ಮ ಅಣ್ಣನನನ್ನು ಹೊಡೆದು ಬಂದಿರುವುದೆಂತ ಕೇಳುತ್ತಿದ್ದಾಗ ಅಶೋಕ ಬಾಲಕೃಷ್ಣ ಮತ್ತು ಇವರ ತಂದೆ ಗೋಪಾಲಪ್ಪ ರವರು ಕೊಲೆ ಮಾಡುವ ಉದ್ದೇಶದಿಂದ ಅಶೋಕ ಮಚ್ಚಿನಿಂದ ತನಗೆ ಎಡ ಭಾಗದ ತುಟಿಗೆ, ಬಲ ಕೈಗೆ ಹೊಡೆದು ರಕ್ತಗಾಯಪಡಿಸಿದ್ದು, ಬಿಡಿಸಲು ಬಂದ ಶಶಿಧರ ಮತ್ತು ಆನಂದ ರವರಿಗೆ ಅದೇ ಮಚ್ಚಿನಿಂದ ತಲೆಗಳಿಗೆ ಹೊಡೆದು ರಕ್ತಗಾಯಪಡಿಸಿದ್ದು ಬಾಲಕೃಷ್ಣ ಮತ್ತು ಗೋಪಾಲಪ್ಪ ಕೈಗಳಿಂದ ಹೊಡೆದು ಕಾಲಿ ನಿಂದ ಒದ್ದು ನಮ್ಮ ತಂಟೆಗೆ ಬಂದರೆ ಇದೇ ರೀತಿ ಹೊಡೆದು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆಂತ ಸದರಿ ರವರ ಮೇಲೆ ಕಾನೂನು  ರೀತ್ಯಾ ಪ್ರಕರಣ ದಾಖಲಿಸಲು ನೀಡಿದ ದೂರಿನ ಮೇರೆಗೆ ರಾತ್ರಿ 11-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಈ ಪ್ರಕರಣ ದಾಖಲಿಸಿರುತ್ತೆ.

 

7. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:28-03-21 ರಂದು ರಾತ್ರಿ 11-30 ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಮೊಮೋ ಪಡೆದು ಹೆಚ್.ಸಿ-16 ರವರೊಂದಿಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಬಾಲಕೃಷ್ಣ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,  ಇತ್ತೀಚೆಗೆ 6ನೇ ವಾರ್ಡ್ ನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಈ ಹಿಂದೆ ಇದ್ದ ಕೌನ್ಸಲರ್ ವೆಂಕಟಸ್ವಾಮಿ ರವರು ಚೆನ್ನಾಗಿ ನೀರು ಬಿಡಿಸುತ್ತಿದ್ದು ಈಗ ಇರುವ ಕೌನ್ಸಲರ್ ಮುನಿರಾಜು ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಸಾರ್ವಜನಿಕರು ನನ್ನ ಬಳಿ ಕೇಳಿದಾಗ ನಾನು ವೆಂಕಟಸ್ವಾಮಿ ರವರ ಬಳಿ ಕೇಳಿಕೊಳ್ಳಿ ಎಂದಾಗ ಇದನ್ನು ಕೇಳಿಸಿಕೊಂಡ ವೆಂಕಟಸ್ವಾಮಿ ಮಗ ವೇಣು ರವರು ಏಕಿ ನಮ್ಮ ತಂದೆಯ ಬಗ್ಗೆ ಮಾತನಾಡುತ್ತಿಯಾ ಎಂದಾಗ ನಮಗೆ ಬಾಯಿ ಮಾತಿನ ಜಗಳವಾಯಿತು ಆಗ ಅಲ್ಲಿಂದ ಸಾರ್ವಜನಿಕರು ನಮ್ಮನ್ನು ಸಮಾದಾನಪಡಿಸಿದರು.  ಹೀಗಿರುವಾಗ ದಿನಾಂಕ:28-03-21 ರಂದು ರಾತ್ರಿ ಸುಮಾರು 9-15 ಗಂಟೆಯಲ್ಲಿ ನಾನು ನಮ್ಮ ತಮ್ಮ ಅಶೋಕ ಪೂಜಮ್ಮ ದೇವಾಲಯದ ಬಳಿ ಕರದ ಪ್ರಯುಕ್ತ ಪೂಜೆ ಮಾಡಿಸಿಕೊಂಡು ಮನೆಗೆ ವಾಪಸ್ಸು ಹೋಗುವಾಗ ದೇವಾಲಯದ ಬಳಿ ಇದ್ದ ಬಾಬು ಬಿನ್ ವೆಂಕಟೇಶಪ್ಪ ರವರು ನಮ್ಮನ್ನು ನೋಡಿ ಗುರಾಯಿಸುತ್ತಿದ್ದು ಆಗ ನನ್ನ ತಮ್ಮನಾದ ಅಶೋಕ ಯಾಕೆ ಗುರಾಯಿಸುತ್ತಿರುವುದ ಎಂದು ಕೇಳಿದ್ದಕ್ಕೆ ಬಾಬು ಅಶೋಕನ ಕುತ್ತಿನ ಪಟ್ಟಿ ಹಿಡಿದು ಬಾಯಿಗೆ ಬಂದಂತೆ ಬೈದಿದ್ದು, ಆಗ ಅಶೋಕನನ್ನು ಬಿಡಿಸಿಕೊಂಡು ಮನೆಗೆ ಹೋದಾಗ ರಾತ್ರಿ ಸುಮಾರು 9-30 ಗಂಟೆಯಲ್ಲಿ ವೆಂಕಟೇಶಪ್ಪನ ಮಕ್ಕಳಾದ ಶಶಿಕುಮಾರ್, ಬಾಬು, ರಮೇಶ ಹಾಗೂ ವೆಂಕಟಸ್ವಾಮಿ ರವರ ಮಗನಾದ ವೇಣು ರವರು ಮನಯ ಬಳಿ ಬಂದು ನಮ್ಮನ್ನು ಕುರಿತು ಏ ಲೋಪರ್ ನನ್ನ ಮಕ್ಕಳೇ ಈ ದಿನ ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಬೆದರಿಕೆ ಹಾಕುತ್ತ ಮನೆಯ ಮುಂಭಾಗದಲ್ಲಿದ್ದ ಹೂವಿನ ಕುಂಡಗಳನ್ನು ಹೊಡೆದು ಹಾಕುತ್ತಿದ್ದು, ಅಡ್ಡ ಹೋದಾಗ ಮೇಲ್ಕಂಡರವರು ಕೈಗಳಿಲಂದ ಗುದ್ದಿ, ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿದ್ದು ಆ ಪೈಕಿ ಹೂವಿನ ಕುಂಡವನ್ನು ತೆಗೆದುಕೊಂಡು ಎಡ ಬುಜಕ್ಕೆ, ಕತ್ತಿನ ಬಳಿ ಮತ್ತು ತಲೆಗೆ ಹೊಡೆದು ರಕ್ತ ಗಾಯಪಡಿಸಿದನು. ಜಗಳ ಬಿಡಿಸಲು ಅಡ್ಡ ಬಂದ ನನ್ನ ತಮ್ಮ ಅಶೋಕನಿಗೆ ರಮೇಶ ಹೂವಿನ ಕುಂಡದಿಂದ ಬಲ ಬುಜಕ್ಕೆ ಮತ್ತು ಎರಡೂ ಕೈಗಳಿಗೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆಂದು ಸದರಿಯವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ರಾತ್ರಿ 00.25 ಗಂಟೆಗ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 29-03-2021 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080