ಅಭಿಪ್ರಾಯ / ಸಲಹೆಗಳು

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.166/2021 ಕಲಂ. 15(A),32 ಕೆ.ಇ ಆಕ್ಟ್:-

     ದಿನಾಂಕ: 28-09-2021 ರಂದು  ಮದ್ಯಾಹ್ನ 14-45 ಗಂಟೆಯ ಸಮಯದಲ್ಲಿ  ಪಿರ್ಯಾದಿ  ಶ್ರೀ.ಹೆಚ್. ಮುರಳಿಧರ ಹೆಚ್.ಸಿ. 195  ಡಿಸಿಬಿ / ಸಿಇಎನ್  ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ  ಸಾರಾಂಶವೇನೆಂದರೆ, ದಿನಾಂಕ: 28-09-2021 ರಂದು ಡಿಸಿಬಿ / ಸಿಇಎನ್  ಪೊಲೀಸ್  ಇನ್ಸಪೆಕ್ಟರ್ ರವರು  ತನಗೆ ಮತ್ತು ಅಶೋಕ ಸಿಪಿಸಿ 142 ರವರಿಗೆ  ಚಿಕ್ಕಬಳ್ಳಾಪುರ  ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ  ಮಾಹಿತಿ ಸಂಗ್ರಹಣೆಗಾಗಿ ನೇಮಕ ಮಾಡಿದ್ದು  ಅದರಂತೆ ತಾವುಗಳು ಚಿಕ್ಕಬಳ್ಳಾಪುರ  ತಾಲ್ಲೂಕಿನ  ತಿಪ್ಪೇನಹಳ್ಳಿ  ಕಣಿವೆ.  ರಂಗಸ್ಥಳ .  ಕಡೆ ಗಸ್ತು ಮಾಡಿಕೊಂಡು   ಮದ್ಯಾಹ್ನ 1-00  ಗಂಟೆಗೆ ಬಾದಗಾನಹಳ್ಳಿ  ಗ್ರಾಮದಲ್ಲಿ ಗಸ್ತು  ನಿರ್ವಹಿಸುತ್ತಿದ್ದಾಗ ಬಾತ್ಮೀದಾರರಿಂದ ಬಾದಗಾನಹಳ್ಳಿ ಗ್ರಾಮದ ವೆಂಕಟೇಶಪ್ಪ ಬಿನ್ ಲೇಟ್ ದೊಡ್ಡ ಮುನಿಯಪ್ಪ 60ವರ್ಷ ಆದಿ ದ್ರಾವಿಡ ಜನಾಂಗ ರವರ ಬಾಬತ್ತು ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿಯ ಮೇರೆಗೆ  ಗ್ರಾಮದಲ್ಲಿ  ಪಂಚರನ್ನು  ಬರಮಾಡಿಕೊಂಡು ಮದ್ಯಾಹ್ನ 1-15 ಗಂಟೆಯ ಸಮಯಕ್ಕೆ ಗ್ರಾಮದ ವೆಂಕಟೇಶಪ್ಪ ಬಿನ್  ಲೇಟ್ ದೊಡ್ಡ ಮುನಿಯಪ್ಪ ರವರ  ಮನೆಯ ಬಳಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ  ಸ್ಥಳದಲ್ಲಿ ಮದ್ಯಪಾನ,ಮಾಡುತ್ತಿದ್ದು ಆತನನ್ನು ವಶಕ್ಕೆ  ಪಡೆದುಕೊಂಡು  ಹೆಸರು ವಿಳಾಸ ಕೇಳಲಾಗಿ  ವೆಂಕಟೇಶಪ್ಪ ಬಿನ್ ಲೇಟ್ ದೊಡ್ಡ ಮುನಿಯಪ್ಪ 60ವರ್ಷ ಆದಿ ದ್ರಾವಿಡ  ಜನಾಂಗ  ಕೂಲಿ  ಕೆಲಸ ವಾಸ: ಬಾದಗಾನಹಳ್ಳಿ ಗ್ರಾಮ  ಎಂತ ತಿಳಿಸಿದನು.  ಸದರಿ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ(1) 90  ML Haywards cheers whisky 15 Tetra Pockets  (2) 90  ML Haywards cheers whisky 01 Empty  Tetra Pocket. (3) One Empty water Bottle  ದೊರೆತಿರುತ್ತದೆ. ಸದರಿ  ಪಾಕಟ್ ಗಳ ಬೆಲೆ 527/-ರೂಪಾಯಿಗಳಾಗಿದ್ದು  ಒಟ್ಟು 01 ಲೀಟರ್ 350 ಎಂ.ಎಲ್. ಮದ್ಯ ಇರುತ್ತದೆ.  ಸದರಿ ಸ್ಥಳದಲ್ಲಿ ಪಂಚನಾಮೆಯ ಕ್ರಮವನ್ನು ಜರುಗಿಸಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುವುದಾಗಿ ಆರೋಪಿಯ  ವಿರುದ್ದ ಸೂಕ್ತ  ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ  ದೂರಿನ ಮೇರೆಗೆ ಈ ಪ್ರ.ವ.ವರದಿ.

 

2. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.140/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 28/9/2021 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಠಾಣೆಗೆ ಹಾಜರಾಗಿ ದಾಖಲಿಸಿಕೊಂಡ ದೂರಿನ ಸಾರಾಂಶವೇನೆಂದರೆ, ದಿನಾಂಕ:28/09/2021 ರಂದು ಮದ್ಯಾಹ್ನ 13.30 ಗಂಟೆಯಲ್ಲಿ ತಾನು ಠಾಣಾ ಸರಹದ್ದಿನ ಗಸ್ತಿಗಾಗಿ  ಠಾಣಾ ಸಿಬ್ಬಂಧಿ ಹೆಚ್.ಸಿ-186 ನರಸಿಂಹಯ್ಯ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ಕೊಂಡಪ್ಪಗಾರಹಳ್ಳಿ, ಎಸ್.ಗೊಲಗಲಹಳ್ಳಿ, ಪೂಸಗಾನದೊಡ್ಡಿ ಗ್ರಾಮಗಳಿಗೆ ಬೇಟಿ ಮಾಡಿ ಮದ್ಯಾಹ್ನ 13.45 ಗಂಟೆಗೆ ಸಾದಲಿ ಗ್ರಾಮಕ್ಕೆ ಬೇಟಿ ಮಾಡಿದಾಗ ಯಾರೋ ಬಾತ್ಮಿದಾರರು ಸಾದಲಿ ಗ್ರಾಮದ ಶಂಕರ ಬಿನ್ ಲೇಟ್ ನಾರಾಯಣಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ್ದು, ಅವರು ಒಪ್ಪಿ ತಮ್ಮೊಂದಿಗೆ ಸಾದಲಿ  ಗ್ರಾಮದ ಶಂಕರ ಬಿನ್ ಲೇಟ್ ನಾರಾಯಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಮದ್ಯಾಹ್ನ 14.00 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ನಂತರ ಸದರಿ ಅಂಗಡಿಯಲ್ಲಿದ್ದ  ಆಸಾಮಿಯು ಸಹ ಸ್ಥಳದಿಂದ ಪರಾರಿಯಾಗಿದ್ದು, ತಾವುಗಳು ಹಿಂಬಾಲಿಸಿದರೂ ತಮ್ಮ ಕೈಗೆ ಸಿಕ್ಕಿರುವುದಿಲ್ಲ. ನಂತರ ಸ್ಥಳದಲ್ಲಿದ್ದವರನ್ನು ಸದರಿ ಚಿಲ್ಲರೆ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಶಂಕರ ಬಿನ್ ಲೇಟ್ ನಾರಾಯಣಪ್ಪ,  34 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಸಾದಿಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂ 8050381881 ಎಂದು ತಿಳಿದು ಬಂದಿರುತ್ತೆ. ನಂತರ  ಸದರಿ ಸ್ಥಳದಲ್ಲಿ ಪಂಚರ ಸಮಕ್ಷಮ  ಪಂಚನಾಮೆ ಕ್ರಮ ಕೈಗೊಂಡು, ಪಂಚನಾಮೆಯ ಕಾಲದಲ್ಲಿ ಒಟ್ಟು 1 ಲೀಟರ್ 080 ಎಂ.ಎಲ್ ಸಾಮರ್ಥ್ಯದ,  421.56/- ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಒರಿಜಿನಲ್ ಚಾಯ್ಸ್ ವಿಸ್ಕಿಯ 90 ಎಂ.ಎಲ್ ನ 12 ಟೆಟ್ರಾ ಪ್ಯಾಕೇಟ್ಗಳು ಇದ್ದು, ಇವುಗಳ ಒಂದರ ಬೆಲೆ 35.13/-ರೂಗಳಾಗಿರುತ್ತೆ. ಇವುಗಳನ್ನು ಹಾಗೂ ಒರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಮತ್ತು 1 ಖಾಲಿ ವಾಟರ್ ಬಾಟೆಲನ್ನು ಮದ್ಯಾಹ್ನ 14.15 ಗಂಟೆಯಿಂದ 15.00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆಸಾಮಿಯು ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೆ, ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದು,  ಈ ದಿನ ಮದ್ಯಾಹ್ನ 15.30 ಗಂಟೆಗೆ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಠಾಣಾ ಮೊ.ಸಂ 140/2021, ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ತಾನೇ ಸ್ವತಃ ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.265/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ : 28/09/2021 ರಂದು ಬೆಳಿಗ್ಗೆ   9.30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿಸಿ -205 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ  ಅನುಮತಿ ಪತ್ರದ ಸಾರಾಂಶವೆನೆಂದರೆ.  ದಿನಾಂಕ:15/09/20212 ರಂದು ಸಂಜೆ 6-15 ಗಂಟೆಗೆ ಫಿರ್ಯಾದುದಾರರಾದ ಶ್ರೀ ಕೆ.ಸಿ ವಿಜಯ್ ಕುಮಾರ್ ಪಿ.ಎಸ್.ಐ ಆದ ನಾನು ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 15/09/2021 ರಂದು ಸಂಜೆ 4-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಉಚ್ಚೂದನಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-10 ಶ್ರೀರಾಮಯ್ಯ ಪಿ.ಸಿ.302 ಕುಮಾರ ನಾಯ್ಕ, ಪಿ.ಸಿ-281 ಗುರುಸ್ವಾಮಿ, ಪಿ.ಸಿ-317 ಮಧುಸೂಧನ್. ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-538 ರಲ್ಲಿ ಉಚ್ಚೂದನಹಳ್ಳಿ ಗ್ರಾಮದಲ್ಲಿ ಹೋಗಿ , ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಸಂಜೆ 4-30 ಗಂಟೆಗೆ ಹೋಗಿ ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಕೌಶಿಕ್ ಬಿನ್ ಗೋವಿಂದಪ್ಪ, 23 ವರ್ಷ, ನಾಯಕ ಜನಾಂಗ, ಅಂಗಡಿ ವ್ಯಾಪಾರ, ಉಚ್ಚೋದನಹಳ್ಳಿ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ 12 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 80 ಎಂ.ಎಲ್. ಆಗಿರುತ್ತೆ ಇವುಗಳ ಒಟ್ಟು ಬೆಲೆ 421.56 ರೂ.ಗಳಾಗಿರುತ್ತೆ ಹಾಗೂ 180 ಎಂ.ಎಲ್ ನ 3 OLD TAVERN WHISKY ಟೆಟ್ರಾ ಪಾಕೆಟ್ ಗಳಿದ್ದು ಇವುಗಳ ಒಟ್ಟು ಸಾಮರ್ಥ್ಯ 540 ಎಂ.ಎಲ್. ಆಗಿರುತ್ತೆ ಇವುಗಳ ಒಟ್ಟು ಬೆಲೆ 260.25/- ರೂ.ಗಳಾಗಿರುತ್ತೆ ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 4-45 ಗಂಟೆಯಿಂದ ಸಂಜೆ 5-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ 12 ಟೆಟ್ರಾ ಪಾಕೆಟ್ ಗಳು ಹಾಗೂ 180 ಎಂ.ಎಲ್ ನ 3 OLD TAVERN WHISKY ಟೆಟ್ರಾ ಪಾಕೆಟ್ ಗಳು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ 6-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ಈ ಮೆಮೋನೊಂದಿಗೆ ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ ವಿರುದ್ಧ 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.266/2021 ಕಲಂ. 78(I),78(III) ಕೆ.ಇ ಆಕ್ಟ್:-

     ದಿನಾಂಕ: 28/09/2021 ರಂದು ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿಸಿ-205 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೆನೆಂದರೆ ದಿನಾಂಕ:16/09/2021 ರಂದು ಶ್ರೀಮತಿ ಲಲಿತಮ್ಮ ಮ.ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:16/09/2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಕ್ರಾಸ್ ನಲ್ಲಿರುವ ಜಗುಲಿಕಟ್ಟೆ ಬಸ್ ನಿಲ್ದಾಣದ ಬಳಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ.460 ಷೇಖ್ ಸನಾವುಲ್ಲಾ, ಪಿ.ಸಿ-33 ಕೃಷ್ಣಪ್ಪ, ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40 ಜಿ.140 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 2-00 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ, ಯೋರೋ ಒಬ್ಬ ಆಸಾಮಿಯು ಡಿ.ಪಾಳ್ಯ ಕ್ರಾಸ್ ನಲ್ಲಿರುವ ಜಗುಲಿಕಟ್ಟೆ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ಸದರಿ ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ ಆಸಾಮಿ ಸಿಕ್ಕಿದ್ದು, ಆಸಾಮಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ವೆಂಕಟೇಶಪ್ಪ ಬಿನ್ ಗಂಗಪ್ಪ, 53 ವರ್ಷ, ಆದಿ ಕರ್ನಾಟಕ ಜನಾಂಗ, ಸಿವಿಲ್ ಬಸ್ ನಲ್ಲಿ ಕಂಡಕ್ಟರ್ ಕೆಲಸ, ಗುಂಡ್ಲಕೊತ್ತೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ವೆಂಕಟೇಶಪ್ಪ ಬಿನ್ ಗಂಗಪ್ಪ, ರವರ ಬಳಿ ನಗದು ಹಣ 720-00 ರೂಗಳು, ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ವೆಂಕಟೇಶಪ್ಪ ಬಿನ್ ಗಂಗಪ್ಪ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 720-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂಜೆ 4-00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಾಗಿರುತ್ತೆ.

 

5. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.06/2021 ಕಲಂ. 379,307 ಐ.ಪಿ.ಸಿ & 25 IA,25 1B,A ARMS ACT, 1959:-

     ದಿನಾಂಕ : 28.09.2021 ರಂದು 1-45 ಗಂಟೆಗೆ  ಶ್ರೀ. ಬಾಬಾಜಾನ್.ಹೆಚ್.ಸಿ-253 ರವರು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು  ಎಂ,ಎಸ್ ಗಂಗಾಧರಪ್ಪ @ ಗಂಗರಾಜು ಬಿನ್ ಸತ್ಯನಾರಾಯಣಪ್ಪ, 32 ವರ್ಷ, ವಕ್ಕಲಿಗರು, ಜಿರಾಯ್ತಿ, ಮರವೇನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ  ಮೊ ನಂ : 7353910255 ರವರ ಹೇಳಿಕೆ ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದು ಹೇಳಿಕೆ  ಸಾರಾಂಶವೆನೆಂದರೆ  ತಾನು  ದಿನಾಂಕ : 27.09.2021 ರಂದು ಸಂಜೆ ಸುಮಾರು 07.-00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿದ್ದಾಗ ತಮ್ಮ ಸಂಬಂಧಿಕರಾದ ರಾಮಚಂದ್ರಪ್ಪ ಬಿನ್ ರಾಮಕೃಷ್ಣರೆಡ್ಡಿರವರು ಬಂದು ತಮ್ಮ ತೋಟದ ಬಳಿ ತನ್ನ ಬಾಬತ್ತು ಸ್ಪ್ಲಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ತಮ್ಮ ಗ್ರಾಮದ ಕೆರೆಯ ಕಡೆ ಹೋದರು ಎಂತ ನನಗೆ ತಿಳಿಸಿದರು.  ಆಗ ತಾನು ಮತ್ತು ತನ್ನ ಜೊತೆಯಲ್ಲಿದ್ದ ನಾಗರಾಜಪ್ಪ ಬಿನ್ ಚಿಕ್ಕವೆಂಕಟರಾಯಪ್ಪ, ಅಂಬರೀಶ ಬಿನ್ ಲೇಟ್ ವೆಂಕಟೇಶಪ್ಪ ಹಾಗೂ ವೆಂಕಟೇಶ ಎಂ.ಡಿ ಬಿನ್ ದ್ಯಾವಪ್ಪ ರವರುಗಳು ಕೂಡಲೆ ದ್ವಿಚಕ್ರ ವಾಹನಗಳಲ್ಲಿ ಕೆರೆಯ ಬಳಿ ಹೋಗಿ ಅಲ್ಲಿದ್ದ ಇಬ್ಬರೂ ಆಸಾಮಿಗಳು ಹೆಲ್ಮೆಟ್ ನ್ನು ಧರಿಸಿದ್ದು, ಇವರುಗಳನ್ನು ತಾವು ಸುತ್ತುವರೆದಾಗ ಇವರ ಪೈಕಿ ಒಬ್ಬ ಆಸಾಮಿ ಇದಕ್ಕಿಂದಂತೆ ತನ್ನ ಬಳಿ ಇದ್ದ ಒಂದು ಗನ್ ತೆಗೆದುಕೊಂಡು ರಾತ್ರಿ ಸುಮಾರು 07-.10 ಗಂಟೆಯ ಸಮಯದಲ್ಲಿ ತನಗೆ ಕೊಲೆ ಮಾಡುವ ಉದ್ದೇಶದಿಂದ ಗುರಿಯಿಟ್ಟು ತನ್ನ ಎದೆಯ ಬಲಭಾಗದ ಕೆಳಗೆ ಶೂಟ್ ಮಾಡಿ ರಕ್ತಗಾಯಪಡಿಸಿದನು. ಆಗ ತನ್ನ ಜೊತೆ ಬಂದಿದ್ದ ಮೇಲ್ಕಂಡವರು ತನ್ನನ್ನು ಉಪಚರಿಸುತ್ತಿದ್ದಾಗ ಆರೋಪಿತರು ಸ್ಥಳದಿಂದ ಪರಾರಿಯಾದರು. ಆಗ ಅಲ್ಲಿಗೆ ಬಂದ ತನ್ನ ಸಹೋದರ ಸಂಬಂಧಿ ಅನಿಲ್ ಕುಮಾರ್ ಬಿನ್ ತಿರುಮಲರೆಡ್ಡಿ ಹಾಗೂ ತಮ್ಮ ಗ್ರಾಮದ ರಾಜೇಂದ್ರಬಾಬು ಬಿನ್ ವೆಂಕಟರೆಡ್ಡಿ ರವರು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಅಂಬ್ಯುಲೇನ್ಸ್ ನಲ್ಲಿ ಸದರಿಯವರು ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದರು. ಈಗ ತಾನು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೀರುತ್ತೇನೆ. ತನಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಗನ್ ನಿಂದ ಶೂಟ್ ಮಾಡಿದ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಆರೋಪಿತರು ಗನ್ ಸಮೇತ ಪರಾರಿಯಾಗಿರುತ್ತಾರೆ ಎಂದು ಗಾಯಾಳು ನೀಡಿದ ಹೇಳಿಕೆ ದೂರಿನ  ಮೇರೆಗೆ ಠಾಣಾ ಮೊ ಸಂ : 06/2021 ಕಲಂ : 379,307 ಐ.ಪಿ.ಸಿ ಮತ್ತು ಕಲಂ 25(1ಎ)(1ಬಿ)(ಎ), 27  ಆಯುಧಗಳ ಅಧಿ ನಿಯಮ-1959     ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.303/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 27/09/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕುಂದಲಗುರ್ಕಿ ಗ್ರಾಮದಿಂದ ಜೋಡಿಕಾಚಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿರುವ ಸಮತಟ್ಟಾದ ಹಳ್ಳದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಪಂದ್ಯವನ್ನಾಡುತ್ತಿರುವುದಾಗಿ ಬಾತ್ಮಿ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ.ವ.ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿ ಪಿಸಿ-90 ರಾಜಕುಮಾರ್ ರವರ ಮುಖಾಂತರ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಸಂಜೆ 4-40 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಪ್ರತಿಯನ್ನು ಪಡೆದು ಆರೋಪಿಗಳ ವಿರುದ್ದ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.304/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:28.09.2021 ರಂದು ಬೆಳಿಗ್ಗೆ 7.30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಕೆ.ಎಂ ಬಿನ್ ಲೇಟ್ ಮುನಿಲಕ್ಷ್ಮಯ್ಯ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ಕುಂಬಿಗಾನಹಲ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಜಿರಾಯ್ತಿ ಮಾಡಿಕೊಂಡು ತಮ್ಮ ಗ್ರಾಮದಲ್ಲಿ ವಾಸವಾಗಿರುತ್ತೇನೆ. ತಾನು ಸುಮಾರು 11 ವರ್ಷಗಳ ಹಿಂದೆ ತಮ್ಮ ಗ್ರಾಮದ ರಾಜಣ್ಣ ರವರ ಮಗಳಾದ ಪ್ರತೀಮ ರವರನ್ನು ಮದುವೆಯಾಗಿರುತ್ತೇನೆ. ತಮ್ಮ ಮಾವನಾದ ರಾಜಣ್ಣ (51 ವರ್ಷ) ರವರು ಸೀಮೆ ಹಸುಗಳನ್ನು ಸಾಕಾಣೆ ಮಾಡಿಕೊಂಡು ಗ್ರಾಮದಲ್ಲಿ ವಾಸವಾಗಿರುತ್ತಾರೆ. ದಿನಾಂಕ:25.09.2021 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ಸೀಮೆ ಹಸುಗಳಿಗೆ ಮೆಕ್ಕೆ ಜೋಳವನ್ನು ತೆಗೆದುಕೊಂಡು ಬರಲು ಅವರ ಬಾಬತ್ತು ಕೆಎ.05.ಇಯು.2919 ಆಕ್ಟೀವಾ ಹೊಂಡಾ ದ್ವಿ ಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ಗೆ ಹೋಗಿರುತ್ತಾರೆ. ನಂತರ ಇದೇ ದಿನ ಬೆಳಿಗ್ಗೆ 10.00 ಗಂಟೆಯ ಸಮಯದಲ್ಲಿ ತಾನು ಮನೆಯಲ್ಲಿದ್ದಾಗ ತಮ್ಮ ಗ್ರಾಮದವರು ತನಗೆ ಪೋನ್ ಮಾಡಿ ನಿಮ್ಮ ಮಾವನಾದ ರಾಜಣ್ಣ ರವರಿಗೆ ಹೆಚ್.ಕ್ರಾಸ್ ನ ವಿಜಯಪುರ ಕಡೆಗೆ ಹೋಗುವ ರಸ್ತೆಯಲ್ಲಿ ಅಪಘಾತವಾಗಿರುವುದಾಗಿ ತಿಳಿಸಿದ್ದು ತಾನು ಕೂಡಲೇ ಅಪಘಾತದ ಸ್ಥಳಕ್ಕೆ ಹೋಗಿ ನೋಡಿ ತಮ್ಮ ಮಾವನಾದ ರಾಜಣ್ಣ ರವರನ್ನು ಅಪಘಾತದ ಬಗ್ಗೆ ವಿಚಾರ ಮಾಡಿ ತಿಳಿಯಲಾಗಿ ತಮ್ಮ ಮಾವನಾದ ರಾಜಣ್ಣ ರವರು ಸೀಮೆ ಹಸುಗಳಿಗೆ ಹೆಚ್.ಕ್ರಾಸ್ ನಲ್ಲಿ ಮೆಕ್ಕೆ ಜೋಳುವನ್ನು ತೆಗೆದುಕೊಂಡು ಅವರ ಬಾಬತ್ತು ಕೆಎ.05.ಇಯು.2919 ನೊಂದಣಿ ಸಂಖ್ಯೆಯ ಆಕ್ಟೀವಾ ಹೊಂಡಾ ದ್ವಿ ಚಕ್ರ ವಾಹನದಲ್ಲಿ ವಾಪಸ್ಸು ಕುಂಬಿಗಾನಹಳ್ಳಿ ಗ್ರಾಮಕ್ಕೆ ಬರಲು ವಿಜಯಪುರ-ಕೋಲಾರ ರಸ್ತೆಯಲ್ಲಿ ಬೆಳಿಗ್ಗೆ 9.40 ಗಂಟೆ ಸಮಯದಲ್ಲಿ ಬರುತಿದ್ದಾಗ ರಸ್ತೆಯ ಪಕ್ಕದ ಪುಟ್ ಪಾತ್ ನಲ್ಲಿ ಬಸ್ ನಿಲ್ಲಿದ್ದು ತಾನು ರಸ್ತೆಯ ಎಡಬಾಗದಲ್ಲಿ ತನ್ನ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಗ್ರಾಮಕ್ಕೆ ಬರುತ್ತಿರುವಾಗ ತನ್ನ ದ್ವಿ ಚಕ್ರ ವಾಹನದ ಹಿಂಬಂದಿಯಲ್ಲಿ ಅಂದರೆ ಕೋಲಾರದ ಕಡೆಯಿಂದ ವಿಜಯಪುರ ಕಡೆಗೆ ಬರುತಿದ್ದ ಕೆಎ.01.ಎಜೆ.1100 ಕಾಂಟೇನರ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹಿಂಬದಿಯಿಂದ ಬಂದು ತಾನು ಚಾಲನೆ ಮಾಡಿಕೊಂಡು ಹೋಗುತಿದ್ದ ಕೆಎ.05.ಇಯು.2919 ನೊಂದಣಿ ಸಂಖ್ಯೆಯ ಆಕ್ಟೀವಾ ಹೊಂಡಾ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ನಾನು ದ್ವಿ ಚಕ್ರ ವಾಹನ ಸಮೇತ ರಸ್ತಯಲ್ಲಿ ಬಿದ್ದು ಹೋಗಿ ದ್ವಿ ಚಕ್ರ ವಾಹನ ಜಖಂಗೊಂಡು ನನಗೆ ಎಡಕೈ ಮತ್ತು ಎಡಕಾಲಿಗೆ ಗಾಯಗಳಾಗಿರುವುದಾಗಿ ತಿಳಿಸಿದ್ದು ನಂತರ ತಾನು ಕೂಡಲೇ ಹೆಚ್.ಕ್ರಾಸ್ನ ಶಿರುಷ್ಟಿ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ನಂತರ ಅಪಘಾತವನ್ನುಂಟು ಮಾಡಿದ ಕೆಎ.01.ಎಜೆ.1100 ಕಾಂಟೇನರ್ ಲಾರಿಯ ಚಾಲಕ ಸದರಿ ಅಪಘಾತದಿಂದ ಆದ ನಷ್ಟವನ್ನು ಬರಿಸುವುದಾಗಿ ಹೇಳಿ ಇಷ್ಟು ದಿನಗಳಾದರೂ ಸಹ ನಷ್ಟವನ್ನು ಬರಿಸದೇ ಇದ್ದ ಕಾರಣ ಈ ದಿನ ಬಂದು ದೂರು ನೀಡುತಿದ್ದು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಾವನಾದ ರಾಜಣ್ಣ ರವರು ಸವಾರಿ ಮಾಡಿಕೊಂಡು ಹೋಗುತಿದ್ದ ಕೆಎ.05.ಇಯು.2919 ನೊಂದಣಿ ಸಂಖ್ಯೆಯ ಆಕ್ಟೀವಾ ಹೊಂಡಾ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ ಕೆಎ.01.ಎಜೆ.1100 ಕಾಂಟೇನರ್ ಲಾರಿಯ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.305/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:28.09.2021 ರಂದು ಮದ್ಯಾಹ್ನ 3.15 ಗಂಟೆಗೆ ಪಿರ್ಯಾದಿದಾರರಾದ ಭರತ್ ಎ.ಎಸ್ ಬಿನ್ ಶ್ರೀರಾಮಯ್ಯ ಎ.ಬಿ, 26 ವರ್ಷ, ವಕ್ಕಲಿಗರು, ಮೇಲೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಗ್ರಾಮದಲ್ಲಿ ವಾಸವಾಗಿದ್ದು ತಮ್ಮ ತಂದೆ ತಾಯಿಗೆ 1 ನೇ ಭವ್ಯ ಎ.ಎಸ್ 2 ನೇ ನಾನು ಎಂಬ ಇಬ್ಬರು ಮಕ್ಕಳಿರುತ್ತೇವೆ. ತಮ್ಮ ತಂದೆಯವರು ಗ್ರಾಮದಲ್ಲಿ ಜಿರಾಯ್ತಿ ಮಾಡಿಕೊಂಡು ಇರುತ್ತಾರೆ. ತಮ್ಮ ಚಿಕ್ಕಮ್ಮಳಾದ ಉಷಾ ರವರ ತವರು ಮನೆ ಮಳ್ಳೂರು ಗ್ರಾಮವಾಗಿದ್ದು ತಮ್ಮ ತಂದೆಯಾದ ಶ್ರೀರಾಮಯ್ಯ ಎ.ಬಿ ರವರು ಆಗಾಗ ಅವರ ಮನೆಗೆ ನಮ್ಮ ಗ್ರಾಮದಿಂದ ನಡೆದುಕೊಂಡು ಹೋಗಿ ಬರುತಿದ್ದರು. ಹೀಗಿರುವಲ್ಲಿ ದಿನಾಂಕ:28/09/2021 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ನಾವುಗಳೆಲ್ಲರೂ ಮನೆಯಲ್ಲಿದ್ದಾಗ ತಮ್ಮ ತಂದೆಯಾದ ಶ್ರೀರಾಮಯ್ಯ ಎ.ಬಿ ರವರು ತಮ್ಮ ಚಿಕ್ಕಮ್ಮ ರವರ ತವರು ಮನೆಯಾದ ಮಳ್ಳೂರು ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ನಂತರ ಮದ್ಯಾಹ್ನ 2.10 ಗಂಟೆಯ ಸಮಯದಲ್ಲಿ ನಮ್ಮ ಮನೆಯ ಬಳಿ ಬಟ್ಟೆ ಅಂಗಡಿ ಇಟ್ಟುಕೊಂಡಿರುವ ಭಟ್ರೇನಹಳ್ಳಿ ಗ್ರಾಮದ ಪ್ರಮೋದ್ ರವರು ನಮ್ಮ ಮನೆಯ ಬಳಿಗೆ ಬಂದು ತಮ್ಮ ತಂದೆಯಾದ ಶ್ರೀರಾಮಯ್ಯ ಎ.ಬಿ ರವರಿಗೆ ಮಳ್ಳೂರು ಗ್ರಾಮದ ರಾಮಾಂಜಿನಪ್ಪ ರವರ ಮನೆಯ ಬಳಿ ಶಿಡ್ಲಘಟ್ಟ-ವಿಜಯಪುರ ಕಡೆಗೆ ಹೋಗುವ ಟಾರು ರಸ್ತೆಯಲ್ಲಿ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ವಿಷಯ ತಿಳಿಸಿದ್ದು ನಂತರ ತಾನು ಮತ್ತು ತಮ್ಮ ತಾಯಿಯಾದ ಕಮಲಮ್ಮ ರವರು ಕೂಡಲೇ ಮಳ್ಳೂರು ಗ್ರಾಮದ ಬಳಿ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತಾನು ಪ್ರಮೋದ್ ರವರನ್ನು ವಿಚಾರ ಮಾಡಲಾಗಿ ತಮ್ಮ ತಂದೆಯಾದ ಶ್ರೀರಾಮಯ್ಯ ಎ.ಬಿ ರವರು ತಮ್ಮ ಚಿಕ್ಕಮ್ಮ ರವರ ಮನೆಯಾದ ಮಳ್ಳೂರು ಗ್ರಾಮಕ್ಕೆ ತಮ್ಮ ಗ್ರಾಮದಿಂದ ಹೋಗಲು ಮಳ್ಳೂರು ಗ್ರಾಮದ ರಾಮಂಜಿನಪ್ಪ ರವರ ಮನೆಯ ಸಮೀಪ ಶಿಡ್ಲಘಟ-ವಿಜಯಪುರ ಕಡೆಗೆ ಹೋಗುವ ಟಾರು ರಸ್ತೆಯಲ್ಲಿ ಮದ್ಯಾಹ್ನ 1.50 ಗಂಟೆಯ ಸಮಯದಲ್ಲಿ ನಡೆದುಕೊಂಡು ಹೋಗುವಾಗ ಎದರುಗಡೆಯಿಂದ ಅಂದರೆ ವಿಜಯಪುರ ಕಡೆಯಿಂದ ಬಂದ ಕೆಎ.40.ಎಫ್.899 ನೊಂದಣಿ ಸಂಖ್ಯೆಯ ಕ.ರಾ.ರ.ಸಾ ನಿಗಮದ ಬಸ್ಸಿನ ಚಾಲಕನು ತನ್ನ ಬಸ್ ಅನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ತಮ್ಮ ತಂದೆಯದ ಶ್ರೀರಾಮಯ್ಯ ಎ.ಬಿ ರವರಿಗೆ ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತಮ್ಮ ತಂದೆಯರಾದ ಶ್ರೀರಾಯಮಯ್ಯ ಎ.ಬಿ ರವರ ಮುಖಕ್ಕೆ, ಹೊಟ್ಟೆಗೆ, ಎಡಕೈಗೆ ತೀವ್ರತರವಾದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ವಿಚಾರ ತಿಳಿಸಿರುತ್ತಾರೆ. ನಂತರ ತಾನು ರಸ್ತೆಯಲ್ಲಿನ ಸಾರ್ವಜನಿಕರ ಸಹಾಯದಿಂದ ತಮ್ಮ ತಂದೆಯಾದ ಶ್ರೀರಾಮಯ್ಯ ಎ.ಬಿ ರವರ ಮೃತ ದೇಹವನ್ನು ಯಾವುದೋ ಒಂದು ಟಾಟಾ ಏಸ್ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು ತಾವುಗಳು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ತಮ್ಮ ತಂದೆಯಾದ ಶ್ರೀರಾಮಯ್ಯ ಎ.ಬಿ ರವರು ತಮ್ಮ ಗ್ರಾಮದಿಂದ ತಮ್ಮ ಚಿಕ್ಕಮ್ಮ ರವರ ಗ್ರಾಮವಾದ ಮಳ್ಳೂರು ಗ್ರಾಮಕ್ಕೆ ಹೋಗಲು ಮಳ್ಳೂರು ಗ್ರಾಮದ ರಾಮಾಂಜಿನಪ್ಪ ರವರ ಮನೆಯ ಬಳಿ ಶಿಡ್ಲಘಟ್ಟ-ವಿಜಯಪುರ ಕಡೆಗೆ ಹೋಗುವ ಟಾರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎದರುಗಡೆಯಿಂದ ಅಂದರೆ ವಿಜಯಪುರ ಕಡೆಯಿಂದ ಬಂದ ಕೆಎ.40.ಎಫ್.899 ನೊಂದಣಿ ಸಂಖ್ಯೆಯ ಕ.ರಾ.ರ.ಸಾ ನಿಗಮದ ಬಸ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಅಪಘಾತವನ್ನುಂಟು ಮಾಡಿದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ.28-09-2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಅ.ವಿ) ಪದ್ಮಾವತಮ್ಮ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಸಂತೋಷ ನಗರದಲ್ಲಿರುವ ಅಮೀರಿಯಾ ಮಸೀದಿಯ ಖಾಲಿ ಜಾಗದಲ್ಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ-97 ಸುಬ್ರಮಣಿ, ಪಿಸಿ-278 ನಾರಾಯಣ, ಪಿಸಿ-127 ವೆಂಕಟೇಶ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 2-45 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಪಿಳ್ಳಪ್ಪ ಬಿನ್ ನಾರಾಯಣಪ್ಪ 53 ವರ್ಷ, ಕುರುಬರು, ಕೂಲಿ ಕೆಲಸ, ವಾಸ: ಕುರುಬರಪೇಟೆ, ಶಿಡ್ಲಘಟ್ಟ ನಗರ, 2) ಭಸ್ಕರ್ ಬಿನ್ ಲೇಟ್ ಅಡವೀಶ್, 26 ವರ್ಷ, ಲಿಂಗಾಯ್ತರು, ಟೀ ಅಂಗಡಿ ವ್ಯಾಪಾರ, ಸಿ.ಆರ್ ಲೇಔಟ್, ಶಿಡ್ಲಘಟ್ಟ ನಗರ, 3] ನರಸಿಂಹಮೂರ್ತಿ ಬಿನ್ ಲೇಟ್ ವೆಂಕಟೇಶಪ್ಪ, 37 ವರ್ಷ, ಗೊಲ್ಲರು, ಜಿರಾಯ್ತಿ, ಕುರುಬರಪೇಟೆ, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 950/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮದ್ಯಾಹ್ನ 2-50 ಗಂಟೆಯಿಂದ 3-20 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 03 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ: 121/2021 ಕಲಂ: 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 78(A)(vi),87 ಕೆ.ಪಿ ಆಕ್ಟ್:-

     ದಿನಾಂಕ.28-09-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ(ಅ.ವಿ) ಶ್ರೀಮತಿ ಪದ್ಮಾವತಮ್ಮ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆ, ಡಿಗ್ರಿ ಕಾಲೇಜು ಹಿಂಭಾಗದ ಖಾಲಿ ಜಾಗದಲ್ಲಿ ಯಾರೋ ಇಬ್ಬರು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಚೌಕಾಬಾರ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಪಿ.ಸಿ- 278 ನಾರಾಯಣ, ಪಿ.ಸಿ-126 ವೆಂಕಟೇಶ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 3-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರೂ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ರಟ್ಟಿನ ಮೇಲೆ ಚೌಕಾಬಾರ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ತೌಸೀಪ್ ಬಿನ್ ನಯಿಂ, 26 ವರ್ಷ, ಆಟೋ  ಚಾಲಕ, ರಾಜೀವ್ ಗಾಂಧಿ ಬಡಾವಣೆ, ಶಿಡ್ಲಘಟ್ಟ ಟೌನ್ 2] ಶಬ್ಬೀರ್ ಬಿನ್ ರಹಮತ್ತುಲ್ಲಾ , 36 ವರ್ಷ, ಆಟೋ ಚಾಲಕ, 4ನೇ ವಾರ್ಡ್, ಕೋಟೆ, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಚೌಕಾಬಾರ ಅದೃಷ್ಠದ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 400/- ರೂ ನಗದು ಹಣ ಇರುತ್ತೆ. ಇವರು ಚೌಕಾಬಾರ ಆಡಲು ಬಳಸಿದ್ದ 4 ಹುಣಸೇ ಬೀಜಗಳು ಮತ್ತು ಚೌಕಾಬಾರ ಟೇಬಲ್ ಬರೆದಿರುವ ರಟ್ಟನ್ನು ಮದ್ಯಾಹ್ನ 3-35 ಗಂಟೆಯಿಂದ ಸಂಜೆ 4-10 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ ಇಬ್ಬರನ್ನು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಚೌಕಬಾರ ಅದೃಷ್ಟದ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ: 122/2021 ಕಲಂ: 78(ಎ) ಕ್ಲಾಸ್(6), 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 28-09-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080