ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.252/2021 ಕಲಂ. 114,143,323,324,504,506,149 ಐ.ಪಿ.ಸಿ:-

    ದಿನಾಂಕ: 27/08/2021 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಾಳು ರಾಜಕುಮಾರ ಬಿನ್ ರಾಮಕೃಷ್ಣಪ್ಪ, 28 ವರ್ಷ, ಭೋವಿ ಜನಾಂಗ, ಖಾಸಗಿ ದೈಹಿಕ ಶಿಕ್ಷಣ ಶಿಕ್ಷಕರು, ವಾಸ: ಮಾಮಿಡಿಕಾಯಲಪಲ್ಲಿ ಗ್ರಾಮ, ಗೂಳುರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಾನು ಬಾಗೇಪಲ್ಲಿ ಪುರದ ನ್ಯೂ ಹೊರೈಜೆನ್ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ಪ್ರತಿದಿನವೂ ನಮ್ಮ ಗ್ರಾಮದಿಂದ ಬಾಗೇಪಲ್ಲಿ ಶಾಲೆಗೆ ಬಂದು ಕೆಲಸ ಮುಗಿಸಿಕೊಂಡು ಎಂದಿನಂತೆ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ನಮ್ಮ ಗ್ರಾಮಕ್ಕೆ ಹೋಗಿ ಬರುತ್ತಿದ್ದೆನು. ದಿನಾಂಕ: 26/08/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಮ್ಮ ಊರಿಗೆ ಹೋಗಲು  ಬಸ್ ನಿಲ್ದಾಣದಲ್ಲಿ ಹೋಗಿ ನಮ್ಮ ಗ್ರಾಮಕ್ಕೆ ಬಸ್ ಇದೆಯೇ ಎಂದು ಟಿಸಿ ರವರಿಗೆ ಕೇಳಲಾಗಿ ಜಿಲ್ಲಾಲಪಲ್ಲಿ ಗ್ರಾಮಕ್ಕೆ ಹೋಗುವ ಬಸ್ ನಿಮ್ಮ ಮಾಮಿಡಿಕಾಯಲಪಲ್ಲಿ ಗ್ರಾಮಕ್ಕೆ ಹೋಗುವುದಾಗಿ ತಿಳಿಸಿರುತ್ತಾರೆ. ನಾವುಗಳು ಬಸ್ ಹತ್ತಿರುತ್ತೇವೆ, ಚಾಲಕರಾದ ಮಂಜುನಾಥರವರು ಈ ಬಸ್ ನಿಮ್ಮ ಊರಿಗೆ ಹೋಗುವುದಿಲ್ಲ ಎಂದಾಗ ನಾವು ಸುಮಾರು 10-15 ಜನರು ಹೋಗಿ ಟಿಸಿ ರವರ ಬಳಿ ಕೇಳಿ ಬರುವಷ್ಟರಲ್ಲಿ ಚಾಲಕನು ಬಸ್ಸಿನಲ್ಲಿಟ್ಟಿದ್ದ ನಮ್ಮ ಬ್ಯಾಗ್ ಗಳ ಸಮೇತ ಬಸ್ಸನ್ನು ಚಲಾಯಿಸಿಕೊಂಡು ಗೂಳೂರು ವೃತ್ತಕ್ಕೆ ಹೋಗಿರುತ್ತಾರೆ. ಚಾಲಕನಿಗೆ ಟಿಸಿ ರವರು ಕರೆಮಾಡಿ ಬಸ್ಸನ್ನು ನಿಲ್ಲಿಸು ಎಂದು ನಮ್ಮ ಮುಂದೆ ಹೇಳಿದರು ನಾವುಗಳೆಲ್ಲರೂ ಯಾವುದೋ ಆಟೋದಲ್ಲಿ ಹೋಗಿ ಬಸ್ಸಿಗೆ ಹತ್ತಿಕೊಂಡೆವು ಬಸ್ಸು ನಮ್ಮ ಗ್ರಾಮದ ಕಡೆ ಹೋಗುತ್ತಿರುವಾಗ ಚಾಲಕ ಮಂಜುನಾಥರವರು ಮಾಡಪ್ಪಲ್ಲಿ, ವರ್ಣಂಪಲ್ಲಿ, ಗ್ರಾಮಗಳ ಹುಡುಗರಿಗೆ ನಿಮಗೆ ತೊಂದರೆ ಆಗುತ್ತದೆ. ಎಂದು ಕೇಳುವಂತೆ ಹೇಳಿರುತ್ತಾರೆ.  ಚಾಲಕ ನಮ್ಮ ಗ್ರಾಮಕ್ಕೆ ಹೋಗುವ ದಾರಿ ಸರಿಯಿಲ್ಲವೆಂದು ಬೈದಾಡಿಕೊಂಡು ಬಸ್ಸನ್ನು ಚಾಲಾಸುತ್ತಿದ್ದ, ನಂತರ ನಾವುಗಳು ಬಸ್ ಇಳಿದು ನಮ್ಮ ಗ್ರಾಮಕ್ಕೆ ಹೋಗಿರುತ್ತೇವೆ. ನಂತರ ದಿನಾಂಕ: 27/08/2021 ರಂದು ನಮ್ಮ ಗ್ರಾಮದ ಸುಮಾರು 20 ಜನರು ಕೆಎಸ್ಆರ್ ಟಿಸಿ ಡಿಪೋ ಬಳಿ ಹೋಗಿ ಡಿಪೋ ಮೇನೇಜರ್ ಭೇಟಿ ಮಾಡಿ ನಮ್ಮ ಸಮಸ್ಯೆಗಳ ಮನವಿ ಪತ್ರವನ್ನು ನೀಡಿ ನಮ್ಮ ಗ್ರಾಮದ ರಸ್ತೆಗೆ ಬರುವ ಬಸ್ ಚಾಲಕ ಮಂಜುನಾಥ ರವರನ್ನು ಬದಲಾವಣೆ ಮಾಡಿ ಎಂದು ಮನವಿ ಮಾಡಿಕೊಂಡಂತೆ ಮಂಜುನಾಥ ರವರನ್ನು ಬದಲಾವಣೆ ಮಾಡಿರುತ್ತಾರೆ. ದಿನಾಂಕ: 27/08/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಗ್ರಾಮಸ್ಥರು ಕೆಲವರು  ಬಸ್ಸಿನಲ್ಲಿ ನಾರಾಯಣಸ್ವಾಮಿಕೋಟೆಯ ಬಳಿ ಹೋಗುತ್ತಿರುವಾಗ ಬಸ್ಸಿನಲ್ಲಿ ನನ್ನ ಹಿಂದೆ ನಿಂತು ಪ್ರಯಾಣಿಸುತ್ತಿದ್ದ ಬಸ್ ಮಾರ್ಗಾನುಕುಂಟೆ ಗ್ರಾಮದಲ್ಲಿ ಸಂಜೆ 5-15 ಗಂಟೆಯಲ್ಲಿ ನಿಂತಾಗ ಮಧು ಮಾರ್ಗಾನುಕುಂಟೆ. ನವೀನ್ ಚಿಂತಮಾಕಲದಿನ್ನೆ, ವೆಂಕಟೇಶ ಮಾರ್ಗಾನುಕುಂಟೆ. ಹಾಗೂ ಇತರರು ನನ್ನ ಮೇಲೆ ಗಲಾಟೆ ಮಾಡಿ ಎಲ್ಲರೂ ಕೈಗಳಿಂದ ನನ್ನ ಎದೆಗೆ ಗುದ್ದಿ ನಂತರ ಮಧು ಎಂಬುವವರು ನನ್ನ ಮುಖಕ್ಕೆ ಕೈಯಿಂದ ಹೊಡೆದಿರುತ್ತಾನೆ. ನವೀನ್ ರವರು ನನ್ನ ಕತ್ತನ್ನು ಹಿಡಿದು ಎಳೆದಾಡಿ ತಲೆಗೆ ಹಾಗೂ ಬೆನ್ನಿಗೆ ಹೊಡೆದು ಬಾಸುಂಡೆ ಉಂಟುಮಾಡಿರುತ್ತಾರೆ. ಅಷ್ಟರಲ್ಲಿ ಬಸ್ಸಿನಲ್ಲಿದ್ದ ನಮ್ಮ ತಂದೆ ಅಡ್ಡ ಬಂದು ಮಾತನಾಡಿದ್ದಕ್ಕೆ ಮಾರ್ಗಾನುಕುಂಟೆಯ ವೆಂಕಟೇಶ ರವರು ನಮ್ಮ ತಂದೆಯವರ ಬಲಗೈಯನ್ನು ತಿರುಗಿಸಿ ಬೆನ್ನಿಗೆ ಗುದ್ದಿರುತ್ತಾನೆ. ಅಷ್ಟರಲ್ಲಿ ಯಾರೋ ಗಲಾಟೆಯ ವಿಚಾರ ನಮ್ಮ ಅಣ್ಣನಿಗೆ ತಿಳಿಸಿದ್ದಕ್ಕೆ ಅಲ್ಲಿಗೆ ಬಂದು ಕೇಳಿದ್ದಕ್ಕೆ ಅವರಿಗೂ ಬೈದಿರುತ್ತಾರೆ. ಆಗ ಬಸ್ ನಿಲ್ದಾಣದಲ್ಲಿದ್ದ ಮಾಡಪ್ಪಲ್ಲಿ ಗ್ರಾಮದ ಶ್ರೀನಿವಾಸ ರವರು ಅಡ್ಡಬಂದು ಎಲ್ಲರಿಗೂ ಬುದ್ದಿ ಹೇಳಿ ಕಳುಹಿಸಿರುತ್ತಾರೆ. ಈ ಗಲಾಟೆ ಬಗ್ಗೆ ವಿಚಾರಿಸಲಾಗಿ ಬಸ್ ಚಾಲಕ ಮಂಜುನಾಥ ರವರೇ ಕುಮ್ಮಕ್ಕು ನೀಡಿ ಗಲಾಟೆ ಮಾಡಿಸಿರುವುದಾಗಿ ತಿಳಿದುಬಂದಿರುತ್ತದೆ. ನಂತರ ಬಸ್ ಮುಂದಕ್ಕೆ ಹೊರಟು ಹೋಗಿರುತ್ತದೆ. ನನ್ನನ್ನು ಮತ್ತು ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ನಮ್ಮ ಅಣ್ಣ ಶ್ರೀನಿವಾಸ ರವರು ಅವರ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರು.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:28.08.2021 ರಂದು ಬೆಳಿಗ್ಗೆ 11-10 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:28.08.2021 ರಂದು ಬೆಳಿಗ್ಗೆ 11-05 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಪೂಜನಹಳ್ಳಿ ಗ್ರಾಮದ ವಾಸಿ ವೆಂಕಟಸ್ವಾಮಿ ಬಿನ್ ಮುನಿರಾಮಯ್ಯ, 50 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ ವೃತ್ತಿ ವಾಸ: ಪೂಜನಹಳ್ಳಿ ಗ್ರಾಮ ರವರು ತಮ್ಮ ಚಿಲ್ಲರೆ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.60/2021 ಕಲಂ. 323,504,506 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

    ದಿನಾಂಕ:-27/08/2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾಧಿಯಾದ ಶ್ರೀ ಎಸ್ ರಾಮ ಸಾಗರ್ ಬಿನ್ ಎಂ ಶಿವಯ್ಯ 36 ವರ್ಷ, ಪ.ಜಾತಿ (ಆದಿ ಕರ್ನಾಟಕ), ಇಟ್ಟಿಗೆ ವ್ಯಾಪಾರ,ವಾಸ: ನಂ-210, ಬಾಪೂಜಿ ನಗರ, ವಾರ್ಡ್ ನಂ-13, ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-27/08/2021 ರಂದು ತಾನು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ ಸುಧಾಕರ್ ರವರು ಮತ್ತು ಇತರರು ಆಗಮಿಸಿದ್ದು, ಸದರಿ ಕಾರ್ಯಕ್ರಮ ಮುಕ್ತಾಯವಾದ ನಂತರ ತಾನು, ಸ್ನೇಹಿತರಾದ ಶ್ರೀನಿವಾಸ ( ಡ್ಯಾನ್ಸ್) ಮತ್ತು ಮಂಜುನಾಥ ( ಜೆಸಿಬಿ) ರವರು ಮತ್ತಿತರು ಚಿಕ್ಕಬಳ್ಳಾಪುರ ನಗರಕ್ಕೆ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಹಿಂತಿರುಗಿ ಬರುವಾಗ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ರಸ್ತೆಯಲ್ಲಿ ಅನಿಲ್ ಬಿನ್ ಲೇಟ್ ಸುಬ್ರಮಣಿ ರವರು ನಿಂತುಕೊಂಡು ಸಾರ್ವಜನಿಕವಾಗಿ ಮಾನ್ಯ ಉಸ್ತುವಾರಿ ಸಚಿವರಾದ ಡಾ. ಕೆ ಸುಧಾಕರ್ ರವರನ್ನು ಮನಬಂದಂತೆ ಅವಾಚ್ಯವಾಗಿ ನಿಂದಿಸುತ್ತಿದ್ದು ಅದನ್ನು ಕಂಡ ತಾನು ಆತನಿಗೆ ಏಕೆ? ಈ ರೀತಿ ಮಾತನಾಡುತ್ತಿದ್ದೀಯಾ ಎಂದು ಹೇಳಿದಕ್ಕೆ ಏಕಾ-ಏಕಿಯಾಗಿ ತನ್ನನ್ನು ಕುರಿತು ಏನೋ ಮಾದಿಗ ನನ್ನ ಮಗನೇ ನೀನು ಯಾರು ಕೇಳುವುದಕ್ಕೆ ಎಂದು ಬೈದು ಇಲ್ಲಿಯೇ ಇದ್ದರೇ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದು ಅಷ್ಟರಲ್ಲಿ ತನ್ನ ಜೊತೆಯಲ್ಲಿದ್ದ ಸ್ನೇಹಿತರಾದ  ಶ್ರೀನಿವಾಸ ( ಡ್ಯಾನ್ಸ್) ಮತ್ತು ಮಂಜುನಾಥ ( ಜೆಸಿಬಿ) ರವರು ಆತನನ್ನುಸಮಾಧಾನ ಪಡಿಸಲು ಪ್ರಯತ್ನಿಸಿದರು ಕೇಳದೆ ರಸ್ತೆಯಲ್ಲಿ ನಿಂತುಕೊಂಡು ಸಾರ್ವಜನಿಕವಾಗಿ ಬಾಯಿಗೆ ಬಂದಂತೆ ಬೈಯುತ್ತಾ ಆತನ ಕೈಯಲ್ಲಿದ್ದ ಕೋಲಿನಿಂದ ಹೊಡೆಯಲು ಬಂದಿದ್ದು ತಾವುಗಳು ತಪ್ಪಿಸಿಕೊಂಡೆವು. ಮೇಲ್ಕಂಡಂತೆ ಅನೀಲ್ ರವರಿಗೆ ತನ್ನ ಜಾತಿಯ ಬಗ್ಗೆ ಗೊತ್ತಿದ್ದು ಆತನು ಸಚಿವರನ್ನು ನಿಂದಿಸಿ ಮಾಡುತ್ತಿರುವ ಬಗ್ಗೆ ಕೇಳಲು ಹೋದ ತನಗೆ ಕೋಲಿನಿಂದ ಹೊಡೆಯಲು ಬಂದಿದ್ದು ತಪ್ಪಿಸಿಕೊಂಡಾಗ ಮೇಲ್ಕಂಡಂತೆ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯವೆಸಗಿರುತ್ತಾನೆ ಆದ್ದರಿಂದ ಸದರಿ ಅನಿಲ್ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 32,34,36 (1) (B),38A ಕೆ,ಇ ಆಕ್ಟ್:-

     ದಿನಾಂಕ:28/08/2021 ರಂದು ಬೆಳಗ್ಗೆ 8-45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ರವರು ಮಾಲು ಆಸಾಮಿ, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶನೆಂದರೆ, ಈ ದಿನ ದಿನಾಂಕ: 28-08-2021 ರಂದು ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರು ನನಗೆ ಮತ್ತು ಸಿಬ್ಬಂದಿಯವರಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ನೇಮಕ ಮಾಡಿದ್ದು, ಅದರಂತೆ ನಾನು ಮತ್ತು ಸಿಬ್ಬಂದಿಯವರುಗಳು ಕೆ.ಎ-40-ಜಿ-58 ಸರ್ಕಾರಿ ಜೀಪಿನಲ್ಲಿ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಈ ತಿಮ್ಮಸಂದ್ರ ಗ್ರಾಮಕ್ಕೆ ಬೆಳಿಗ್ಗೆ 06-00 ಗಂಟೆಗೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಈ ತಿಮ್ಮಸಂದ್ರ ಗ್ರಾಮದ ವಾಸಿ ಬಾಬು ರವರು ತನ್ನ ವಾಸದ ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಣೆ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ನಂತರ ನಾವು ಮತ್ತು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸ್ಥಳದಲ್ಲಿದ್ದ ಬಾಬು ಬಿನ್ ಲೇಟ್ ನಾರಾಯಣಪ್ಪ, 40 ವರ್ಷ, ಈಡಿಗರು, ಜಿರಾಯ್ತಿ, ವಾಸ ಈ ತಿಮ್ಮಸಂದ್ರ ಗ್ರಾಮ ರವರನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ದೊರೆತ 16,862/- ರೂ ಬೆಲೆ ಬಾಳುವ 43 ಲೀಟರ್ 200 ಎಂ.ಎಲ್ ಸಾಮರ್ಥ್ಯದ ಮದ್ಯವನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಪಂಚನಾಮೆ ಕ್ರಮವನ್ನು ಜರುಗಿಸಿರುತ್ತೆ. ಸಾದಲಿ ಗ್ರಾಮದಲ್ಲಿರುವ ಜಯಲಕ್ಷ್ಮೀ ವೈನ್ಸ್ ನ ಮಾಲೀಕರು ಮತ್ತು ಇದೇ ವೈನ್ಸ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿರುವ ವೆಂಕಟೇಶ್ ರವರುಗಳು ಈ ಅಕ್ರಮ ವ್ಯವಹಾರಕ್ಕೆ ಸಹಕರಿಸಿ ಕರ್ನಾಟಕ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:120/2021 ಕಲಂ:32,34,36,(1)(B),38(A) KE ACT ಪ್ರಕರಣ ದಾಖಲಿಸಿರುತ್ತೇನೆ.

 

5. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.124/2021 ಕಲಂ. 78(3) ಕೆ,ಪಿ ಆಕ್ಟ್:-

     ದಿನಾಂಕ 28/08/2021 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ಪಡೆದ ನ್ಯಾಯಾಲಯದ ಅನುಮತಿಯ ಸಾರಾಂಶವೇನೆಂದರೆ, ದಿನಾಂಕ: 17/08/2021 ರಂದು ಸಂಜೆ 05-00  ಗಂಟೆಯಲ್ಲಿ  ಲೋಕೇಶ್ HC-214 ರವರಿಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ನಗರದ ಬಸ್ಸ್ ನಿಲ್ದಾಣದ ಬಳಿ ಟಿಪ್ಪು ನಗರಕ್ಕೆ ಹೋಗುವ ಸಾರ್ವಜನಿಕರು ಓಡಾಡುವ ಸಂದಿಯಲ್ಲಿ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ, ಕೂಡಲೇ ತಾನು ಪಿ.ಎಸ್.ಐ. ಸಾಹೇಬರಿಗೆ ಮಾಹಿತಿಯನ್ನು ತಿಳಿಸಿ   ಬಸ್ಸ್ ನಿಲ್ದಾಣದಲ್ಲಿದ್ದ  ಪಂಚರಿಗೆ ವಿಚಾರ ತಿಳಿಸಿದ್ದು,  ಅವರು ಒಪ್ಪಿಕೊಂಡ ನಂತರ ಪಂಚರು ಹಾಗೂ ತಾನು ಮತ್ತು  244 ಗೋಪಾಲ  ರವರೊಂದಿಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಿದಾಗ  ಟಿಪ್ಪುನಗರಕ್ಕೆ ಹೋಗುವ ಸಂದಿಯಲ್ಲಿ  ಯಾರೋ ಒಬ್ಬ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು. ಪಂಚರ ಸಮ್ಮುಖದಲ್ಲಿ ಆತನನ್ನು  ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ತನ್ನ ಹೆಸರು ಗಂಗಾಧರ ಬಿನ್ ಲೇಟ್ ಕೂರ್ಲಲಪ್ಪ, 31 ವರ್ಷ, ಬಸ್ಸ್ ನಿಲ್ದಾಣದಲ್ಲಿ ಕಸ ಗುಡಿಸುವ ಕೆಲಸ, ಪ.ಜಾತಿ, ವಾಸ: ಕಡಬೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಆರೋಪಿಯ ಬಳಿ ಒಂದು ಮಟ್ಕಾ ಚೀಟಿ ಹಾಗೂ ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 210 ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ನ್ನು ದಾಖಲು ಮಾಡಿರುತ್ತೆ. ಈ ದಿನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

6. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.125/2021 ಕಲಂ. 78(3) ಕೆ,ಪಿ ಆಕ್ಟ್:-

     ದಿನಾಂಕ 28/08/2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಪಡೆದ ನ್ಯಾಯಾಲಯದ ಅನುಮತಿಯ ಸಾರಾಂಶವೇನೆಂದರೆ, ದಿನಾಂಕ 24/08/2021 ರಂದು ಮದ್ಯಾಹ್ನ 2:30 ಗಂಟೆಯಲ್ಲಿ ಡಿ.ಸಿ.ಬಿ-ಸಿ.ಇ.ಎನ್ ಪೊಲೀಸ್ ಠಾಣೆಯ ಹೆಚ್.ಸಿ 80 ಕೃಷ್ಣಪ್ಪ ರವರನ್ನು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪಿ.ಐ ಶ್ರೀ ಎನ್ ರಾಜಣ್ಣ ರವರು ನೇಮಿಸಿದ್ದು ಅದರಂತೆ ತಾನು ಮತ್ತು ತಮ್ಮ ಠಾಣೆಯ ಪಿ.ಸಿ 152 ಜಯಣ್ಣ ರವರು ಮದ್ಯಾಹ್ನ 1:00 ಗಂಟೆಯಲ್ಲಿ ಗೌರಿಬಿದನೂರು ನಗರದ ಹಿಂದೂಪುರ ರಸ್ತೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮುಂಭಾಗದ ಮಂಜುನಾಥ ಮಿಲ್ಟ್ರಿ ಹೋಟೆಲ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಾ 1 ರೂಪಾಯಿಗೆ 70 ರೂಪಾಯಿಗಳನ್ನು ಕೊಡುವುದಾಗಿ ಕೂಗುತ್ತಿದ್ದನು. ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಬಿ ಬಾಸ್ಕರ್ ಬಿನ್ ಲೇಟ್ ಚಿಕ್ಕತಿಮ್ಮಯ್ಯ, 69 ವರ್ಷ, ನಾಯಕ ಜನಾಂಗ, ವೀರಮ್ಮನಹಳ್ಳಿ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಆಸಾಮಿಯ ಬಳಿ ಒಂದು ಬಾಲ್ ಪಾಯಿಂಟ್ ಪೆನ್ನು, ಮಟ್ಕಾ ಚೀಟಿ ಮತ್ತು ನಗದು ಹಣ 1690 ರೂಪಾಯಿಗಳಿದ್ದು ಮಾಲು ಮತ್ತು ಆರೋಪಿಯನ್ನು ಪಂಚನಾಮೆಯೊಂದಿಗೆ ಠಾಣೆಗೆ ಕರೆದುಕೊಂಡು ಬಂದು ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿರುತ್ತೆ ಈ ದಿನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.199/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:28/08/2021 ರಂದು ಮಧ್ಯಾನ್ಹ 02.30 ಗಂಟೆಯ ಸಮಯದಲ್ಲಿ ಅರ್ಜಿದಾರರಾದ ಸುಜಾತಮ್ಮ ಕೋಂ ಲೇಟ್ ಮುನಿಕೃಷ್ಣಪ್ಪ 40 ವರ್ಷ, ಗೃಹಿಣಿ, ಬಲಜಿಗರು, ರೆಡ್ಡಿಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. ಮೊ.ನಂ-8147560799 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಮಗನಾದ ರಾಜೇಶ್ ಆರ್.ಎಂ ಬಿನ್ ಲೇಟ್ ಮುನಿಕೃಷ್ಣಪ್ಪ  19 ವರ್ಷ (ಆದಾರ್ ಕಾರ್ಡ್ ನಲ್ಲಿರುವ ಜನ್ಮದಿನಾಂಕ:17/08/2002 )ರವರು ದಿನಾಂಕ:20/08/2021 ರಂದು ಸಂಜೆ  06.10 ಗಂಟೆಯ ಸಮಯದಲ್ಲಿ ತಮ್ಮ ದ್ವಿಚಕ್ರವಾಹನ ನಂಬರ್ - KA-40-EF-3952 ಗಾಡಿಯಲ್ಲಿ ತನಗೆ ಬೇರೆಯವರಿಂದ ಸ್ವಲ್ಪ ಹಣ ಬರಬೇಕಾಗಿದೆ ಅದ್ದರಿಂದ ತೆಗೆದುಕೊಂಡು ಬರುತ್ತೆನೆಂದು ಹೇಳಿ ಹೋದವನು ಇದುವರೆಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲಾ , ಎಲ್ಲಿ ಇದ್ದಾನೆಂದು ಬಂದು ಗಳ ಮನೆಗಳಲ್ಲಿ ಹುಡುಕಿ ಕೊಂಡು ಬಂದರು ಇವನ ಜಾಡು ಸಿಗಲಿಲ್ಲಾ ಇವನಿಗೆ ಆದಾರ್ ನಂಬರ್ ಪ್ರಕಾರ ದಿನಾಂಕ:17/08/2002 ಕ್ಕೆ 19 ವರ್ಷ ವಯಸ್ಸಾಗಿರುತ್ತದೆ, ಇವನು ಹೋಗುವಾಗ ಕರಿಬಣ್ಣದ ಜೀನ್ಸ್ ಪ್ಯಾಂಟ್ ,ಬಿಸ್ಕೇಟ್ ಕಲರ್ ಚುಕ್ಕೆಗಳು ಇರುವ ಷರ್ಟ್ ದರಿಸಿರುತ್ತಾನೆ, ಸಾಮಾನ್ಯ ಮೈಬಣ್ಣವನ್ನು ಹೊಂದಿರುತ್ತಾನೆ,  ಆದ್ದರಿಂದ ತಮಗೆ ತಮ್ಮ ಮಗನು ಎಲ್ಲಿದ್ದಾನೆ ತಿಳಿಯಲಿಲ್ಲಾದ ಕಾರಣ ಹುಡುಕಿಕೊಡಬೇಕಾಗಿ ನೀಡಿದ ದೂರಾಗಿದೆ, ಎಲ್ಲ ನೆಂಟರು ಮನೆಗಳಲ್ಲಿ ಹುಡುಕಾಡಲಾಗಿದ್ದು  ಸಿಗದ ಕಾರಣ ದೂರನ್ನು ತಡವಾಗಿ ನೀಡಿರುತ್ತೆವೆ,  ಇವನ ಮೊ.ನಂ-6366134831 ಆಗಿದ್ದು, ಬಿಸ್ಕೇಟ್ ಕಲರ್ ಚುಕ್ಕೆಗಳು ಇರುವ ಷರ್ಟ್, ಕರಿಬಣ್ಣದ ಜೀನ್ಸ್ ಪ್ಯಾಂಟ್ ನ್ನು ದರಿಸಿರುತ್ತನೆ, ಕನ್ನಡ ತೆಲಗು ಭಾಷೆಗಳನ್ನು ಮಾತನಾಡುತ್ತಾನೆ.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.149/2021 ಕಲಂ. 15(A),32(3) ಕೆ.ಇ ಆಕ್ಟ್:-

  ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ:28/08/2021 ರಂದು ಬೆಳಿಗ್ಗೆ 8-30 ಗಂಟೆಯ ಸಮಯದಲ್ಲಿ  ನಾನು ಮತ್ತು ಠಾಣಾ ಪಿ.ಸಿ.483 ರಮೇಶ್ ಬಾಬು ಹಾಗೂ  ಜೀಪ್ ಚಾಲಕನಾದ ಎ.ಪಿ.ಸಿ.120 ನಟೇಶ್ ರವರು ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-395 ರಲ್ಲಿ ಮಂಚೇನಹಳ್ಳಿ, ಗೌಡಗೆರೆ ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಅದ್ದೆಕೊಪ್ಪ ಗ್ರಾಮದಲ್ಲಿ ಇರುವಾಗ ನನಗೆ ಬಂದ ಮಾಹಿತಿ ಏನೇಂದರೆ ಕಾಮರೆಡ್ಡಿಹಳ್ಳಿ  ಗ್ರಾಮದ ರಮೇಶ್ ಬಿನ್ ಲೇಟ್ ಯಲ್ಲಪ್ಪ, ಎಂಬುವರು  ಅವರ ಮನೆಯ ಮುಂಭಾಗದಲ್ಲಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ನಾವು ಪಂಚಾಯ್ತಿದಾರರೊಂದಿಗೆ ಬೆಳಿಗ್ಗೆ 09-00 ಗಂಟೆಯ ಸಮಯಕ್ಕೆ ಕಾಮರೆಡ್ಡಿಹಳ್ಳಿ ಗ್ರಾಮದ ರಮೇಶ ಬಿನ್ ಲೇಟ್ ಯಲ್ಲಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ರಮೇಶ ಬಿನ್ ಲೇಟ್ ಯಲ್ಲಪ್ಪ, 40 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ ಕಾಮರೆಡ್ಡಿಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 16 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು  ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಬೆಳಿಗ್ಗೆ 09-15 ಗಂಟೆಯಿಂದ 10-00 ಗಂಟೆಯವರೆಗೆ ಪಂಚನಾಮೆಯ ಮೂಲಕ  ಅವುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 610/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ರಮೇಶ ಬಿನ್ ಲೇಟ್ ಯಲ್ಲಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ವಾಪಾಸ್ ಬಂದು ಠಾಣಾ ಮೊ.ಸಂ.149/2021 ಕಲಂ 15(ಎ), 32(3) ಕೆ.ಇ.ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 279,304(A) ಐ.ಪಿ.ಸಿ :-

    ದಿನಾಂಕ:27/08/2021 ರಂದು ಸಂಜೆ 5:45 ಗಂಟೆಗೆ ಪಿರ್ಯಾದಿ ಗಂಗಾಧರಪ್ಪ ಬಿನ್ ಲೇಟ್ ಕೃಷ್ಣಪ್ಪ, 55 ವರ್ಷ, ಭಜಂತ್ರಿ ಜನಾಂಗ, ಕುಲಕಸಬು ವಾಸ: ಸುಲ್ತಾನಪೇಟೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಸುಮಾರು 34 ವರ್ಷಗಳ ಹಿಂದೆ ದೇವನಹಳ್ಳಿ ತಾಲ್ಲೂಕು ಎಲಿಯೂರು ಗ್ರಾಮದ ಶ್ರೀಮತಿ ಲಲಿತಮ್ಮ ಬಿನ್ ಮುನಿನರಸಿಂಹಯ್ಯ, 40 ವರ್ಷ ಎಂಬುವರೊಂದಿಗೆ ಮದುವೆಯಾಗಿದ್ದು ತಮಗೆ 1 ನೇ ಹೇಮ, 2 ನೇ ಮನೋಜ್, 3 ನೇ ಮೌನಿಕ ಎಂಬ ಹೆಸರಿನ ಮಕ್ಕಳಿರುತ್ತಾರೆ. ದಿನಾಂಕ:26/08/2021 ರಂದು ತನ್ನ ಮಗನಾದ ಮನೋಜ್ ಕುಮಾರ್ ರವರು ತನ್ನ ಹಿರಿಯ ಮಗಳಾದ ಹೇಮ ರವರನ್ನು ನೋಡಿಕೊಂಡು ಬರಲು ತನ್ನ ಹೆಂಡತಿ ಶ್ರೀಮತಿ ಲಲಿತಮ್ಮ ರವರನ್ನು ತಮ್ಮ ಬಾಬತ್ತು ಕೆ.ಎ-40 ಇಇ-3324 ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕುಳಿಸಿಕೊಂಡು ಚಿಂತಾಮಣಿ ತಾಲ್ಲೂಕು ಹಿರೇಕಟ್ಟಿಗೇನಹಳ್ಳಿ ಗ್ರಾಮಕ್ಕೆ ಹೋಗಿದ್ದು ನಂತರ ಈ ದಿನ ದಿನಾಂಕ:27/08/2021 ರಂದು ತನ್ನ ಮಗ ಮನೋಜ್ ಕುಮಾರ್ ರವರು ಕೆ.ಎ-40 ಇಇ-3324 ದ್ವಿಚಕ್ರ ವಾಹನದಲ್ಲಿ ತನ್ನ ಹೆಂಡತಿ ಲಲಿತಮ್ಮ ರವರನ್ನು ಹಿಂಬದಿಯಲ್ಲಿ ಕುಳಿಸಿಕೊಂಡು ಸುಮಾರು 2:45 ಗಂಟೆಯಲ್ಲಿ ಹಿರೇಕಟ್ಟಿಗೇನಹಳ್ಳಿ ಗ್ರಾಮದಿಂದ ತಮ್ಮ ಗ್ರಾಮಕ್ಕೆ ವಾಪಸ್ಸು ಬರುತ್ತಿದ್ದಾಗ ಗವಿಗಾನಹಳ್ಳಿ ಗ್ರಾಮದ ಶಾಲೆಯ ಬಳಿ ರಸ್ತೆಯ ಉಬ್ಬಿನ ಬಳಿ ದ್ವಿಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಲಲಿತಮ್ಮ ರವರು ದ್ವಿಚಕ್ರ ವಾಹನದಿಂದ ಠಾರು ರಸ್ತೆಯ ಮೇಲೆ ಹಿಂಭಾಗದ ತಲೆಯು ಬಿದ್ದು ತಲೆಗೆ ರಕ್ತಗಾಯವಾಗಿ ಪ್ರಜ್ಞೆ ತಪ್ಪಿದ್ದು ತಕ್ಷಣ ತನ್ನ ಮಗ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಸಹಾಯದಿಂದ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಹೋಗಿ ಅಲ್ಲಿಂದ ವೈದ್ಯರ ಸಲಹೆಯ ಮೇರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ತಾನು ವಿಚಾರ ತಿಳಿದುಕೊಂಡು ಆಸ್ಪತ್ರೆಗೆ ಹೋಗಿ ತನ್ನ ಹೆಂಡತಿ ಲಲಿತಮ್ಮ ರವರನ್ನು ನೋಡಿದಾಗ ಮೃತಪಟ್ಟಿರುವುದಾಗಿ ಅಲ್ಲಿಯೇ ಇದ್ದ ತನ್ನ ಮಗ ಮನೋಜ್ ಕುಮಾರ್ ರವರನ್ನು ಕೇಳಿ ವಿಚಾರ ತಿಳಿದುಕೊಳ್ಳಲಾಗಿ ಮೇಲ್ಕಂಡಂತೆ ತಿಳಿಸಿದ್ದು ನಂತರ ತಾನು ಗವಿಗಾನಹಳ್ಳಿ ಅಪಘಾತದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಅಜುಬಾಜುದಾರರನ್ನು ವಿಚಾರಿಸಿ ವಿಚಾರ ತಿಳಿದುಕೊಂಡಿದ್ದು ಮೇಲ್ಕಂಡಂತೆ ನಿಜವಾಗಿರುತ್ತದೆ. ನಂತರ ತಾನು ಠಾಣೆಗೆ ಬಂದು ದೂರು ನೀಡುತ್ತಿದ್ದು ಕೆ.ಎ-40 ಇಇ-3324 ದ್ವಿಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿ ಈ ಅಪಘಾತಕ್ಕೆ ಕಾರಣನಾದ ಮನೋಜ್ ಕುಮಾರ್ ರವರ ವಿರುದ್ದ ಕ್ರಮ ಕೈಗೊಂಡು ಮೃತ ತನ್ನ ಹೆಂಡತಿ ಶ್ರೀಮತಿ ಲಲಿತಮ್ಮ ರವರ ಮೃತದೇಹವು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿದ್ದು ಮುಂದಿನ ಕ್ರಮ ಜರುಗಿಸಿಕೊಡಬೇಕಾಗಿ ಕೋರುತ್ತೇನೆ.

 

ಇತ್ತೀಚಿನ ನವೀಕರಣ​ : 28-08-2021 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080