ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.39/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

   ದಿನಾಂಕ:-28/07/2021 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ. ವಿ.ಶ್ರೀರಾಮ ಬಿನ್ ವೆಂಕಟರೋಣಪ್ಪ 60 ವರ್ಷ, ಕುರುಬರು, ಜಿರಾಯ್ತಿ, ಅಣಕನಗೊಂದಿ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೆನೆಂದರೆ ಗಾಯಾಳು ಶ್ರೀ. ವಿ.ಶ್ರೀರಾಮ ರವರು  ದಿನಾಂಕ:-28/07/2021 ರಂದು ಕೆಲಸದ ನಿಮಿತ್ತ ತಮ್ಮ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಬರಲು ತನ್ನ KA-40-Q-1261 ರ ಟಿವಿಎಸ್ ಎಕ್ಸ್ಎಲ್  ಹೆವಿ ಡ್ಯೂಟಿ  ದ್ವಿಚಕ್ರ ವಾಹನವನ್ನು ಮಧ್ಯಾಹ್ನ 1-15 ಗಂಟೆಯ ಸಮಯದಲ್ಲಿ ಗೌರಿಬಿದನೊರು - ಚಿಕ್ಕಬಳ್ಳಾಪು ಎಮ್.ಜಿ ರಸ್ತೆಯ ಎಪಿಎಮ್.ಸಿ ಮಾರುಕಟ್ಟೆಯ ಬಳಿಯ ವೇಬ್ರಿಡ್ಜ್  ಮುಂಬಾಗದ ಠಾರ್ ರಸ್ತೆಯಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ  ಹಿಂದಿನಿಂದ ಗೌರಿಬಿದನೂರು ಕಡೆಯಿಂದ ಬಂದ  KA-02-B-4398 ರ ಆಟೋ ಚಾಲಕ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ತನಗೆ ಎಡಕಾಲಿಗೆ, ಕೈಗೆ ರಕ್ತ ಗಾಯಗಳಾಗಿದ್ದು ತಕ್ಷಣ ಅಲ್ಲಿನ ಸ್ಥಳಿಯರು ಗಾಯಾಳುವನ್ನು ಉಪಚರಿಸಿ ಅಪಘಾತ ಪಡಿಸಿದ ಆಟೋದಲ್ಲಿಯೇ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಸದರಿ ಅಪಘಾತ ಪಡಿಸಿದ ಆಟೋ ಚಾಲಕ ಗಾಯಾಳುವನ್ನು ಆಸ್ಪತ್ರೆ ಬಳಿ ಇಳಿಸಿ ಅಲ್ಲಿಂದ ವಾಹನ ಸಮೇತ ಹೊರಟು ಹೋಗಿದ್ದು ಸದರಿ ಅಪಘಾತಕ್ಕೆ ಕಾರಣನಾದ KA-02-B-4398 ರ ಆಟೋ ಚಾಲಕನ ಮೇಲೆ  ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ  ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.333/2021 ಕಲಂ. 143,144,147,148,323,324,504,506,149 ಐ.ಪಿ.ಸಿ :-

  ದಿನಾಂಕ: 27/07/2021 ರಂದು ಮದ್ಯಾಹ್ನ 3.00 ಗಂಟೆಗೆ ಖಲಂದರ್ ಖಾನ್ ಬಿನ್ ಮೆಹಮೂದ್ ಖಾನ್, 30 ವರ್ಷ, ಮುಸ್ಲಿಮರು, ವ್ಯವಸಾಯ, ವಾಸ: ಚಿನ್ನಸಂದ್ರ ಗ್ರಾಮ ವಾಟರ್ ಟ್ಯಾಂಕ್ ರಸ್ತೆ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 26/07/2021 ರಂದು ರಾತ್ರಿ ಸುಮಾರು 10.30 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದ ಏಜಾಜ್ ಪಾಷಾರವರ  ಮನೆಯ ಬಳಿಯಿರುವ  ಆತನ ಲಾರಿ ಆಪೀಸ್ ಬಳಿಗೆ ಹೋಗಿ ಆಪೀಸ್ ನಲ್ಲಿದ್ದ ಏಜಾಜ್ ಪಾಷಾರವರನ್ನು  ನನ್ನ ಬಾಬತ್ತು ಆಲಂಬಗಿರಿ ಗ್ರಾಮದ ಸರ್ವೇ ನಂಬರ್ 173/7 ರ ಜಮೀನಿನಲ್ಲಿ ನೀಲಗಿರಿ ಸೊಪ್ಪನ್ನು ಹಾಕಿರುವುದು ಏಕೆ ಇನ್ನು ಮುಂದೆ ನನ್ನ ಬಾಬತ್ತು ಜಮೀನಿನಲ್ಲಿ ಹಾಕ ಬೇಡಿ ಎಂದು ಹೇಳಿದ್ದಕ್ಕೆ, ಅಲ್ಲಿಯೇ ಇದ್ದ ಏಜಾಜ್ ಪಾಷಾ, ಏಜಾಜ್ ರವರ ಅಣ್ಣ ಇಮ್ತಿಯಾಜ್ ಪಾಷಾ, 45 ವರ್ಷ, ಏಜಾಜ್ ಪಾಷಾರವರ ತಮ್ಮ ಯೂನಸ್ ಪಾಷಾ, 33 ವರ್ಷ,  ಮತ್ತೊಬ್ಬ ತಮ್ಮ ಇಮ್ರಾನ್ ಪಾಷಾ, 30 ವರ್ಷ, ಇಮ್ತಿಯಾಜ್ ರವರ ಮಗ ರಿಹಾನ್, 20 ವರ್ಷ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಏಜಾಜ್ ಪಾಷಾ ತನ್ನನ್ನು ಕುರಿತು ತೇರಿ ಮಾಕಿ ಚೋದು, ನೀನು ಯಾರೋ ಕೇಳುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನ್ನ ಮೈಮೇಲೆ ಹೊಡೆದು ನೋವುಂಟು ಮಾಡಿ ಕಾಲಿನಿಂದ ಒದ್ದು ತನ್ನ ಕೆಳಗೆ ಬೀಳಿಸಿ ರಾಡ್ ನಿಂದ ತನ್ನ ಬಲಕಾಲಿಗೆ, ಎಡ ಕಾಲಿಗೆ, ಬೆನ್ನಿಗೆ, ಬಲ ಕೈಗೆ ಹೊಡೆದು ಮೂಗೇಟುಗಳುಂಟು ಮಾಡಿರುತ್ತಾನೆ. ಅಲ್ಲಿಯೇ ಇದ್ದ ಏಜಾಜ್ ರವರ ಅಣ್ಣ ಇಮ್ತಿಯಾಜ್ ಪಾಷಾ ರವರು ಮಚ್ಚಿನಿಂದ ತನ್ನ ಹಣೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಏಜಾಜ್ ಪಾಷಾರವರ ತಮ್ಮ ಯೂನಸ್ ಪಾಷಾ  ರವರು  ಬಲ ಕೈಯಿಂದ  ತನ್ನ ಮುಖಕ್ಕೆ ಗುದ್ದಿ ಊತ ಗಾಯವನ್ನುಂಟು ಮಾಡಿರುತ್ತಾನೆ. ಮತ್ತೊಬ್ಬ ತಮ್ಮ ಇಮ್ರಾನ್ ಪಾಷಾ ಕಾಲಿನಿಂದ ತನ್ನ ಸೊಂಟಕ್ಕೆ ಒದ್ದು ಮೂಗೇಟುಂಟು ಮಾಡಿರುತ್ತಾನೆ. ಇಮ್ತಿಯಾಜ್ ರವರ ಮಗ ರಿಹಾನ್ ರವರು ಕೈಗಳಿಂದ ತನ್ನ ಮೈಮೇಲೆ ಗುದ್ದಿ ನೋವುಂಟು ಮಾಡಿರುತ್ತಾನೆ. ಎಲ್ಲರೂ ಸೇರಿಕೊಂಡು ಈ ನನ್ನ ಮಗನನ್ನು ಇಲ್ಲಿಯೇ ಸಾಯಿಸಿ ಬಿಡೋಣವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ತಾನು ನೋವಿನಿಂದ ಕಿರುಚಿಕೊಂಡಾಗ ತಮ್ಮ ಗ್ರಾಮದ ಮೆಹಬೂಬ್ ಪಾಷಾ ಬಿನ್ ಬಾಷಾಸಾಬ್, 42 ವರ್ಷ, ಮೆಕಾನಿಕ್ ಮತ್ತು ಇಕ್ಬಾಲ್ ಪಾಷಾ ಬಿನ್ ಬಶೀರ್, 30 ವರ್ಷ, ಕೂಲಿಕೆಲಸ ಹಾಗೂ ತನ್ನ ಅಣ್ಣ ಸಾಬೀರ್ ಖಾನ್, 33 ವರ್ಷ ರವರುಗಳು ಬಂದು ತನ್ನನ್ನು ಮೇಲ್ಕಂಡವರಿಂದ ಪಾರು ಮಾಡಿ ತನ್ನನ್ನು ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ತಾನು ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ತಾನು ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.334/2021 ಕಲಂ. 341,323,324,448,504,506 ಐ.ಪಿ.ಸಿ :-

  ದಿನಾಂಕ: 27/07/2021 ರಂದು ಸಂಜೆ 4.00 ಗಂಟೆಗೆ ಏಜಾಸ್ ಪಾಷಾ ಬಿನ್ ಎಸ್ ಸರ್ದಾರ್, 39 ವರ್ಷ, ಮುಸ್ಲಿಮರು, ಲಾರಿ ಮಾಲೀಕರು, ವಾಸ: ಕನಾರ್ಟಕ ಎ.ಟಿಎಂ ಹತ್ತಿರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 26/07/2021 ರಂದು ರಾತ್ರಿ ಸುಮಾರು 11.00 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮದಲ್ಲಿ ತಮ್ಮ ಮನೆಯ ಪಕ್ಕದಲ್ಲಿರುವ ತಮ್ಮ ಬಾಬತ್ತು ಲಾರಿ ಆಫೀಸ್ ನಲ್ಲಿ  ತಾನು ಮತ್ತು ತನ್ನ ಸ್ನೇಹಿತ ಅಬ್ದುಲ್ ಖದೀರ್ ಬಿನ್ ಅಬ್ದುಲ್ ಬಾಶಿದ್, 39 ವರ್ಷ, ಟೆಂಪೋ ಮಾಲೀಕರವರು, ಕುಳಿತು ಮಾತನಾಡುತ್ತಿದ್ದಾಗ ತಮ್ಮ ಗ್ರಾಮದ ಖಲಂದರ್ ಖಾನ್ ಬಿನ್ ಮೆಹಮೂದ್ ಖಾನ್, 31 ವರ್ಷ, ಮುಸ್ಲಿಮರು, ರವರು ತಮ್ಮ ಲಾರಿ ಆಫೀಸ್ ನೊಳಗೆ ಅಕ್ರಮ ಪ್ರವೇಶ ಮಾಡಿ ಒಳಗೆ ಬಂದು ತನ್ನನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ವಿನಾಕಾರಣ ತನ್ನನ್ನು ಕುರಿತು ಏಕಾಏಕಿ ತೇರಿ ಮಾಕಿ, ತೇರಿ ಜೋರುಕಿ ಎಂದು ಅವಾಚ್ಯ ಶಬ್ದಗಳಿಂದ ಬೈದುನು, ತಾನು ಏಕೆ ಬೈಯುತ್ತಿರುವುದು ಎಂದು ಕೇಳಿದ್ದಕ್ಕೆ ತನ್ನ ಜಮೀನಿನಲ್ಲಿ ನೀಲಗಿರಿ ಸೊಪ್ಪು ಹಾಕಿದ್ದೀರಾ ಬೋಳಿ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ  ತನ್ನ ಮೈಮೇಲೆ ಹೊಡೆದು, ಆತನ ಬಲ ಕಾಲಿನಿಂದ ತನ್ನ ಸೊಂಟಕ್ಕೆ ಒದ್ದು, ತನ್ನ ಕೆಳಗಡೆ ಬೀಳಿಸಿ ನೋವುಂಟು  ಮಾಡಿ ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ತನ್ನ ಬಲ ಕೈಗೆ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ತಾನು ಆತನಿಗೆ ತನ್ನ ತಂದೆಯ ಬಾಬತ್ತು ಆಲಂಬಗಿರಿ ಗ್ರಾಮದ ಸರ್ವೇ ನಂಬರ್ 284/1 ರ  ಜಮೀನಿನಲ್ಲಿ ನೀಲಗಿರಿ ಸೊಪ್ಪು ಹಾಕಿರುತ್ತೇವೆ. ನಿನ್ನ ಜಮೀನಿನಲ್ಲಿ ಹಾಕಿರುವುದಿಲ್ಲವೆಂದು ಹೇಳಿದಕ್ಕೆ ಇನ್ನೊಮ್ಮೆ ನೀಲಗಿರಿ ಸೊಪ್ಪು ನನ್ನ ಜಮೀನಿನಲ್ಲಿ ಹಾಕಿದರೆ ನಿನ್ನನ್ನು ಇಲ್ಲಿಯೇ ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ತನ್ನ ಮೈಮೇಲೆ ಕಾಲುಗಳಿಂದ ಒದ್ದಿರುತ್ತಾನೆ. ತಾನು ನೋವಿನಿಂದ ಕಿರುಚಿಕೊಂಡಾಗ ಸ್ಥಳದಲ್ಲಿದ್ದ ತನ್ನ ಸ್ನೇಹಿತ ಅಬ್ದುಲ್ ಖದೀರ್ ಮತ್ತು ಶಮೀ ಬಿನ್ ಮೊಹಮದ್ ರಫೀ, 28 ವರ್ಷ, ಲಾರಿ ಆಪೀಸ್ ನಲ್ಲಿ ರೈಟರ್ ಕೆಲಸ ರವರು ಹಾಗೂ ತನ್ನ ಅಣ್ಣ ಇಮ್ತಿಯಾಜ್ @ ಬಾಬನ್ ಬಿನ್ ಸರ್ದಾರ್.ಎಸ್  ರವರು  ಬಂದು ತನ್ನನ್ನು ಪಾರು ಮಾಡಿ ತನ್ನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು ತಾನು ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ರಾಧಾ ಕೃಷ್ಣ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದು ತಾನು ರಾಧಾ ಕೃಷ್ಣ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಆದ್ದರಿಂದ ಮೇಲ್ಕಂಡ ಖಲಂದರ್ ಖಾನ್ ಬಿನ್ ಮೆಹಮೂದ್ ಖಾನ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.335/2021 ಕಲಂ. 395 ಐ.ಪಿ.ಸಿ :-

  ದಿನಾಂಕ: 27/07/2021 ರಂದು ಕೋಲಾರ ನಗರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಗಾಯಾಳು ಲಕ್ಷ್ಮಪ್ಪ ಬಿನ್ ದೊಡ್ಡ ವೆಂಕಟೇಶಪ್ಪ, 40 ವರ್ಷ, ಬೋವಿ ಜನಾಂಗ, ಚಾಲಕ ವೃತ್ತಿ, ಹುಲುಗುಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 5.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ: 26/07/2021 ರಂದು ತಾನು ಮತ್ತು ತನ್ನ ವಾಹನಗಳ ಚಾಲಕನಾದ ಚೊಕ್ಕರೆಡ್ಡಿಹಳ್ಳಿ ಗ್ರಾಮದ ಕಾರ್ತಿಕ್ ಬಿನ್ ದೇವರಾಜ್ ವರೊಂದಿಗೆ ಚಿಂತಾಮಣಿ ಟೊಮೆಟೋ ಮಾರುಕಟ್ಟೆಗೆ ಕೊಂಗನಹಳ್ಳಿ ಗ್ರಾಮದ ಮುನಿಶಾಮಿರೆಡ್ಡಿ ರವರ ಟೊಮೆಟೋ ಬಾಕ್ಸ್ ಗಳನ್ನು ತನ್ನ ಬಾಬತ್ತು ನಂ ಕೆಎ-20 ಬಿ-1271 ನೊಂದಣಿ ಸಂಖ್ಯೆಯ 407 ಟೆಂಪೋ ಮತ್ತು ನಂ ಕೆಎ-20 ಡಿ-1948 ಟಾಟಾ ಏಸ್ ವಾಹನಗಳಲ್ಲಿ ತುಂಬಿಸಿಕೊಂಡು ಹೋಗಿ ಮಂಡಿಗೆ ಹಾಕಿದ್ದು, ಎರಡು ಮಂಡಿಯವರು ತನ್ನ ಕೈಗೆ 2 ಲಕ್ಷ ರೂಗಳನ್ನು ನೀಡಿರುತ್ತಾರೆ. ನಂತರ ತಾವು ತಮ್ಮ ಬಾಬತ್ತು ವಾಹನಗಳೊಂದಿಗೆ ತಮ್ಮ ಗ್ರಾಮಕ್ಕೆ ವಾಪಸ್ ಬಂದಿರುತ್ತೇವೆ. ನಂತರ ರಾತ್ರಿ 10.00 ಗಂಟೆಗೆ ತನ್ನ ಬಾಬತ್ತು ಕೆಎ-03 ಹೆಚ್.ಎಂ-1778 ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ತಾನು ಮತ್ತು ಕಾರ್ತಿಕ್ ರವರು 2 ಲಕ್ಷ ಹಣದೊಂದಿಗೆ ಮುನಿಶಾಮಿರೆಡ್ಡಿ ಮತ್ತು ಗಂಗಾಧರ ರವರಿಗೆ ಟೊಮೆಟೋ ಮಾರಾಟದ ಹಣವನ್ನು ನೀಡಲು ಹೋಗಿರುತ್ತೇವೆ. ಮುನಿಶಾಮಿರೆಡ್ಡಿ ರವರು ಅಲಸೂರು ಗ್ರಾಮದ ಬಳಿ ಇದ್ದು ತಾವು ಅಲ್ಲಿಗೆ ಹೋಗಿ ಆತನಿಗೆ ಹಣ ಮತ್ತು ರಶಿದಿಗಳನ್ನು ತೋರಿಸಿ ಅವರಿಗೆ ಒಂದು ಲಕ್ಷ ಹಣವನ್ನು ನೀಡಿ ಉಳಿದ ಒಂದು ಲಕ್ಷ ಹಣವನ್ನು ತಮ್ಮ ಗ್ರಾಮದ ಗಂಗಾಧರ ರವರಿಗೆ ಕೊಡಬೇಕಾಗಿದ್ದು, ಆತನಿಗೆ ನೀಡುವ ಸಲುವಾಗಿ ರಾತ್ರಿ ಸುಮಾರು 12.00 ಗಂಟೆ ಸಮಯದಲ್ಲಿ ಹುಲುಗುಮ್ಮನಹಳ್ಳಿ ಅರಣ್ಯದ ಬಳಿ ಬರುತ್ತಿದ್ದಾಗ ಯಾರೋ ಮೂರು ಜನ ಅಪರಿಚಿತರು ಇದ್ದು ಅವರನ್ನು ಯಾರು, ಏನು ಮಾಡಿದ್ದಾರೆಂದು ವಿಚಾರಲು ಮಾಡಲು ಮುಂದಾದಾಗ ಮೂವರಲ್ಲಿ ಒಬ್ಬ ತನ್ನ ಬಳಿ ಇದ್ದ ಯಾವುದೋ ಬಂದೂಕಿನಿಂದ  ತನ್ನ ತಲೆಗೆ ಹೊಡೆದನು. ತಾನು ಮತ್ತು ಕಾರ್ತಿಕ್ ರವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದೆವು. ಆ ಮೂವರು ತಮ್ಮ ಮೇಲೆ ಅಲ್ಲಿಯೇ ಇದ್ದ ಟೊಮೆಟೋ ಕಡ್ಡಿಗಳಿಂದ ಹೊಡೆದರು. ನಂತರ ಯಾರಿಗೋ ಪೋನ್ ಮಾಡಿದ್ದು, ನಂತರ ಸುಮಾರು 30 ನಿಮಿಷಗಳಲ್ಲಿ ಇನ್ನೂ ಮೂವರು ನೀಲಿ ಬಣ್ಣದ ಪ್ಯಾಷನ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬಂದರು. ಎಲ್ಲರೂ ಕೆಳಗೆ ಬಿದ್ದಿದ್ದ ತಮ್ಮಿಬ್ಬರನ್ನು ಕೈಗಳಿಂದ ಹೊಡೆದು, ಟೊಮೆಟೋ ಕಡ್ಡಿಗಳಿಂದ ಗಾಯಗಳು ಮಾಡಿ ತನ್ನ ಜೋಬಿನಲ್ಲಿದ್ದ ಒಂದು ಲಕ್ಷ ರೂ ಹಣವನ್ನು ಕಿತ್ತುಕೊಂಡು ಕಾರ್ತಿಕ್ ಬಳಿ ಇದ್ದ ಮೊಬೈಲ್ ಅನ್ನು ಹೊಡೆದು ಹಾಕಿ ಓಡಿ ಹೋಗಿರುತ್ತಾರೆ. ಅವರ ಬಳಿ ಒಂದು ಬಂದೂಕು ಇದ್ದು, ನಂತರ ಬಂದವರ ಬಳಿ ಒಂದು ಇತ್ತು. ದ್ವಿಚಕ್ರ ವಾಹನ ಪಲ್ಸರ್-150 ಕಪ್ಪು, ಕೆಂಪು ಬಣ್ಣದ್ದಾಗಿರುತ್ತೆ. ನಂತರ ತಾನು ತಮ್ಮ ಮನೆಯವರಿಗೆ ಪೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ. ತನಗೆ ತಲೆಗೆ, ಮೇಲೆ ಮತ್ತು ಹಿಂಬದಿ ರಕ್ತಗಾಯವಾಗಿರುತ್ತೆ. ಎಡಬುಜಕ್ಕೆ, ಬೆನ್ನಿಗೆ ಮತ್ತು ಎರಡೂ ಕಾಲುಗಳಿಗೆ ಊತದ ಗಾಯಗಳಾಗಿ ಅಲ್ಲಲ್ಲಿ ತರಚಿರುತ್ತೆ. ತನ್ನ ಜೊತೆ ಇದ್ದ ಕಾರ್ತಿಕ್ ಗೆ ಕಾಲುಗಳಿಗೆ ಊತ ಗಾಯಗಳಾಗಿರುತ್ತೆ. ಆದ್ದರಿಂದ ತನ್ನ ಬಳಿ ಹಣವನ್ನು ಕಿತ್ತುಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.169/2021 ಕಲಂ. 32,34 ಕೆ.ಇ ಆಕ್ಟ್ :-

  ದಿನಾಂಕ:27/07/2021 ರಂದು ಬೆಳಿಗ್ಗೆ 11-30  ಗಂಟೆಯಲ್ಲಿ ಪಿರ್ಯಾದಿದಾರರಾದ ಗುಡಿಬಂಡೆ ಪೊಲೀಸ್ ಠಾಣೆಯ ಎ,ಎಸ್,ಐ ಗಂಗಾಧರಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:27/07/2021 ರಂದು ಬೆಳಿಗ್ಗೆ 9-00 ಸಮಯದಲ್ಲಿ ಠಾಣೆಯಲ್ಲಿದ್ದಾಗ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಮತ್ತು 1 ನೇ ಪುರ ಗಸ್ತು ಸಿಬ್ಬಂದಿ ಶ್ರೀ. ಹನುಮಂತರಾಯಪ್ಪ  ಹೆಚ್,ಸಿ 73 ರವರು ಗುಡಿಬಂಡೆ ಟೌನಿನಲ್ಲಿ  ಗಸ್ತು ಮಾಡುತ್ತಿದ್ದಾಗ ಗುಡಿಬಂಡೆ ಟೌನಿನ ಮಾರುತಿ ವೃತ್ತದಲ್ಲಿ ಯಾರೋ ಒಬ್ಬ ಆಸಾಮಿಯು ಯಾವುದೋ ಒಂದು ದ್ವಿಚಕ್ರ ವಾಹನದಲ್ಲಿ  ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿರುವುದಾಗಿ ತಿಳಿಸಿದ್ದು ಸದರಿ ಮಾಹಿತಿಯ ಮೇರೆಗೆ ಸದರಿ ರವರ ಮೇಲೆ ದಾಳಿ ಮಾಡಲು ಪುರ ಗಸ್ತಿನಲ್ಲಿದ್ದ ಹೆಚ್,ಸಿ 73 ಹನುಮಂತರಾಯಪ್ಪ ರವರನ್ನು  ಕರೆದುಕೊಂಡು ಗುಡಿಬಂಡೆ ಟೌನಿನ  ಜಾಮೀಯಾ ಮಸೀದಿ ಹತ್ತಿರ ಮೋರಿ ಬಳಿ ಇದ್ದ   ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿಕೊಂಡರು ನಾವು ಬಂದಿದ್ದ ದ್ವಿ ಚಕ್ರವಾಹನವನ್ನು ಮರೆಯಲ್ಲಿ ನಿಲ್ಲಿಸಿ ಪಂಚರೊಂದಿಗೆ ಬೆಳಿಗ್ಗೆ 9-15 ಗಂಟೆಯಲ್ಲಿ ಗುಡಿಬಂಡೆ ಟೌನಿನ ಮಾರುತಿ ವೃತ್ತಕ್ಕೆ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದೂರದಲ್ಲಿಯೇ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅಕ್ರಮವಾಗಿ ಮದ್ಯವನ್ನು ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಆಸಾಮಿಯು  ಸ್ಥಳದಲ್ಲಿ ಮದ್ಯವನ್ನು ಮತ್ತು ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದು ನಾವುಗಳು ಹಿಡಿದುಕೊಳ್ಳಲು ಪ್ರಯತ್ನಿಸಲಾಗಿ ಸಿಕ್ಕಿರುವುದಿಲ್ಲ. ಸ್ಥಳದಲ್ಲಿ ಪರಿಶೀಲಿಸಿದಾಗ ಒಂದು ಬಿಳಿ ಪ್ಲಾಸ್ಟಿಕ್ ಚೀಲವಿದ್ದು ಚೀಲವನ್ನು ತೆರೆದು ನೋಡಿದಾಗ ಚೀಲದಲ್ಲಿ 1)ಓಲ್ಡ್ ಟವರಿನ್ ಚೀಯರ್ಸ ವೀಸ್ಕಿ 180 ಎಂ.ಎಲ್. ಸಾಮಥ್ರ್ಯದ  ಮದ್ಯವುಳ್ಳ  96 ಟೆಟ್ರಾ ಪಾಕೇಟ್ಗಳು, ಇದ್ದು ಇದರ ಒಟ್ಟು ಮದ್ಯ 17 ಲೀಟರ್ 280 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 86.75 ರೂಗಳಿದ್ದು ಇದರ ಒಟ್ಟು ಮೌಲ್ಯವು 86.75*96= 8328 ರೂಗಳಾಗಿದ್ದು. 2) ಹೈವಾಡ್ರ್ಸ ಚಿಯರ್  ವೀಸ್ಕಿ 90 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ 192 ಟೆಟ್ರಾ ಪಾಕೇಟ್ಗಳು, ಇದ್ದು ಇದರ ಒಟ್ಟು ಮದ್ಯ 17 ಲೀಟರ್ 280 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 35.13 ರೂಗಳಿದ್ದು ಇದರ ಒಟ್ಟು ಮೌಲ್ಯವು 35.13*192=6744.96 ರೂಗಳಾಗಿರುತ್ತೆ. 3) ಕೆ.ಎ-03-ಜೆಇ-9034 ನೊಂದಣಿ ಸಂಖ್ಯೆಯ   ACCESS-125 ಸುಜಕಿ ಸ್ಕೂಟಿ ದ್ವಿಚಕ್ರ ವಾಹನ ಆಗಿರುತ್ತೆ. ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಿ ತಿಳಿಯಲಾಗಿ ಆರ್. ಅಭಿಷೇಕ್ ರೆಡ್ಡಿ  ಎಂದು ತಿಳಿಯಿತು. ಸದರಿ ಅಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವುದು  ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಪ್ರತಿ ಐಟಂನಲ್ಲಿ ಒಂದೊಂದನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ P' ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್. ಗೆ ಪರೀಕ್ಷೆಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆ ಯೊಂದಿಗೆ ಬೆಳಿಗ್ಗೆ 11-15 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಬೆಳಿಗ್ಗೆ 11-30  ಗಂಟೆಗೆ ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ದೂರು.

 

6.  ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.170/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ:27/07/2021 ರಂದು ಎ,ಎಸ್,ಐ ಗಂಗಾಧರಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:27/07/2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಗುಡಿಬಂಡೆ  ಠಾಣೆಯಲ್ಲಿದ್ದಾಗ ಠಾಣಾ   ಸಿಬ್ಬಂದಿ ಆನಮದ್ ಸಿ.ಹೆಚ್.ಸಿ-102  ರವರು  ನನಗೆ ಪೋನ್ ಮಾಡಿ ಗುಡಿಬಂಡೆ    ತಾಲ್ಲೂಕು ಲಗುಮೇನಹಳ್ಳಿ    ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ಅಶ್ವತ್ಥಪ್ಪ   ರವರ  ಪೆಟ್ಟಿಗೆ ಅಂಗಡಿ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಮತ್ತು ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಹನುಮಂತರಾಯಪ್ಪ ಸಿ.ಹೆಚ್.ಸಿ-73 ರವರೊಂದಿಗೆ  ದ್ವಿಚಕ್ರವಾಹನದಲ್ಲಿ ಮದ್ಯಾಹ್ನ 12-30 ಗಂಟೆ ಸಮಯಕ್ಕೆ ಲಗುಮೇನಹಳ್ಳಿ    ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಅಶ್ವತ್ಥಪ್ಪ   ರವರ  ಪೆಟ್ಟಿಗೆ ಅಂಗಡಿ ಮನೆಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 12-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ಅಶ್ವತ್ಥಪ್ಪ ಬಿನ್ ಲೇಟ್ ಪೆದ್ದನ್ನ,  52 ವರ್ಷ, ಬಲಜಿಗರು, ಜಿರಾಯ್ತಿ,  ವಾಸ ಲಗುಮೇನಹಳ್ಳಿ  ಗ್ರಾಮ, ಗುಡಿಬಂಡೆ   ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 18 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 620 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*18=632.34/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬಮದ್ಯಾಹ್ನ 1-00 ಗಂಟೆಯಿಂದ 02-00   ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ ಮದ್ಯಾಹ್ನ 02-30  ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 3-00  ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ  ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

7. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ 27/07/2021 ರಂದು ಸಂಜೆ 6-30 ಗಂಟೆಗೆ ಪಿ.ಎಸ್.ಐ ರವರು ಮಾಲು, ಮಹಜರ್ ಮತ್ತು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ  ದಿನಾಂಕ:27/07/2021 ರಂದು ಸಾಯಂಕಾಲ:04-30 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಶೆಟ್ಟಿನಾಯಕನಹಳ್ಳಿ ಗ್ರಾಮದ ನಾಗರಾಜರೆಡ್ಡಿ ಬಿನ್ ಅಶ್ವತ್ಥರೆಡ್ಡಿ, ರವರು ತಮ್ಮ ಚಿಲ್ಲರೇ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ಪಿ.ಎಸ್.ಐ ಎಂ ನಾರಾಯಣಪ್ಪ, ಸಿಬ್ಬಂದಿಯಾದ ಸಿಹೆಚ್ಸಿ-161 ಕೃಷ್ಣಪ್ಪ, ಮತ್ತು ಶ್ರೀನಿವಾಸ ಸಿ.ಪಿ.ಸಿ-101 ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಶೆಟ್ಟಿನಾಯಕನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿದ್ದ ಇಬ್ಬರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿ ದಾರರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಶೆಟ್ಟಿನಾಯಕನಹಳ್ಳಿ ಗ್ರಾಮದ ನಾಗರಾಜರೆಡ್ಡಿ ಬಿನ್ ಅಶ್ವತ್ಥರೆಡ್ಡಿ ರವರ ಚಿಲ್ಲರೇ ಅಂಗಡಿಯ ಬಳಿ ಹೋಗಿ ನೋಡಲಾಗಿ ಅಂಗಡಿಯ ಮಾಲೀಕನಾದ ನಾಗರಾಜರೆಡ್ಡಿ ತಮ್ಮ ಚಿಲ್ಲರೇ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು, ಅಂಗಡಿ ಮಾಲೀಕನಾದ ನಾಗರಾಜರೆಡ್ಡಿ ರವರನ್ನು ವಶಕ್ಕೆ ಪಡೆದುಕೊಂಡು  ಆತನ ಹೆಸರು ಮತ್ತು ವಿಳಾಸ ಕೇಳಗಾಗಿ  ನಾಗರಾಜರೆಡ್ಡಿ ಬಿನ್ ಅಶ್ವತ್ಥರೆಡ್ಡಿ, 52 ವರ್ಷ, ಅಂಗಡಿ ವ್ಯಾಪಾರ, ಒಕ್ಕಲಿಗರು, ವಾಸ ಶೆಟ್ಟಿನಾಯಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 02 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ 90ಎಂ.ಎಲ್ ನ HAYWARDS CHEERS WHISKEY ಮಧ್ಯದ 14 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆೆ 35.13/- ರೂ  ಆಗಿದ್ದು, 14 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 492/-ರೂ ಆಗಿರುತ್ತೆ. ಮದ್ಯ ಒಟ್ಟು 1.260 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಅಂಗಡಿಯ ಮಾಲೀಕನಾದ ನಾಗರಾಜರೆಡ್ಡಿ ಬಿನ್ ಅಶ್ವತ್ಥರೆಡ್ಡಿ ರವರು ಇಲ್ಲವೆಂದು ತಿಳಿಸಿರುತ್ತಾನೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಸಂಜೆ:05-00 ರಿಂದ 06-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಆಸಾಮಿಯನ್ನು ನಿಮ್ಮ ಮುಂದೆ ಮಹಜರ್ & ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನಾಗರಾಜರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ವರದಿ ದೂರು.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.247/2021 ಕಲಂ. 279,304(A) ಐ.ಪಿ.ಸಿ:-

  ದಿನಾಂಕ:27.07.2021 ರಂದು ಪಿರ್ಯಾದಿದಾರರಾದ ರುಕ್ಮೀಣಿಯಮ್ಮ ಕೋಂ ಲೇಟ್ ಮದುಸೂಧನ್, 35 ವರ್ಷ, ವಕ್ಕಲಿಗರು, 5 ನೇ ವಾರ್ಡ್ ಕೆಕೆ ಪೇಟೆ ಶಿಡ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ಅತ್ತೆಯಾದ ಪದ್ಮಾವತಮ್ಮ ( 60 ವರ್ಷ) ರವರಿಗೆ 1 ನೇ ಮಂಜುಳ, 2 ನೇ ಮಧು, 3 ನೇ ಮುನಿರಾಜು, 4 ನೇ ರತ್ನಮ್ಮ ಎಂಬ ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿ ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ನಾನು ಸುಮಾರು 21 ವರ್ಷಗಳ ಹಿಂದೆ ಮದುಸೂಧನ್ ರವರನ್ನು ಮದುವೆಯಾಗಿದ್ದು ನನ್ನ ಗಂಡನಾದ ಮದುಸೂಧನ್ ರವರು ಒಂದು ವರ್ಷದ ಹಿಂದೆ ಮೃತಪಟ್ಟಿರುತ್ತಾರೆ. ತಮ್ಮ ಮನೆಯಲ್ಲಿ ನಾನು ತನ್ನ ಮಕ್ಕಳು ಹಾಗು ತನ್ನ ಅತ್ತೆ ಪದ್ಮಾವತಮ್ಮ ರವರೊಂದಿಗೆ ವಾಸವಾಗಿರುತೇವೆ. ತಮ್ಮ ಅತ್ತೆಯಾದ ಪದ್ಮಾವತಮ್ಮ ಕೂಲಿ ಕೆಲಸ ಮಾಡುತಿದ್ದು ಶಿಡ್ಲಘಟ್ಟ ನಗರ ಮತ್ತು ನಗರದ ಸುತ್ತ ಮುತ್ತ ಇರುವ ಗ್ರಾಮಗಳ ಕಡೆಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ಬರುತಿರುತ್ತಾರೆ. ಹೀಗಿರುವಾಗ ದಿನಾಂಕ:27.07.2021 ರಂದು ಹಂಡಿಗನಾಳ ಗ್ರಾಮದ ವಾಸಿ ರತ್ನಮ್ಮ ರವರ ತೋಟದಲ್ಲಿ ಕೂಲಿ ಕೆಲಸ ಇರುವುದಾಗಿ ಹೇಳಿ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹಂಡಿಗನಾಳ ಗ್ರಾಮಕ್ಕೆ ಹೋಗಿರುತ್ತಾರೆ. ನಂತರ ಮದ್ಯಾಹ್ನ 3.45 ಗಂಟೆಯಲ್ಲಿ ಯಾರೋ ಸಾರ್ವಜನಿಕರು ತನಗೆ ಪೋನ್ ಮಾಡಿ ನಿಮ್ಮ ಅತ್ತೆಯಾದ ಪದ್ಮಾವತಮ್ಮ ರವರಿಗೆ ಅಪಘಾತವಾಗಿರುವುದಾಗಿ ತಿಳಿಸಿದ್ದು ಕೂಡಲೇ ತಾನು ಮತ್ತು ತನ್ನ ಮಗ ಋತ್ವೀಕ್ ರವರು ಹೋಗಿ ನೋಡಿ ವಿಚಾರ ಮಾಡಲಾಗಿ ತಮ್ಮ ಅತ್ತೆಯಾದ ಪದ್ಮಾವತಮ್ಮ ರವರು ಕೂಲಿ ಕೆಲಸ ಮುಗಿಸಿಕೊಂಡು ಮದ್ಯಾಹ್ನ 3.45 ಗಂಟಯಲ್ಲಿ ಹಂಡಿಗನಾಳ ಗ್ರಾಮದಿಂದ ಮನೆಗೆ ವಾಪಸ್ಸು ಬರಲು ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಕಡೆಗೆ ಹೋಗುವ ಹಂಡಿಗನಾಳ ಕೆರೆ ಕಟ್ಟೆಯ ಮೇಲೆ ರಾಷ್ಟ್ರೀಯ ಹೆದ್ದಾರಿ 64 ಟಾರು ರಸ್ತೆಯ ಪಕ್ಕದಲ್ಲಿನ ಮಣ್ಣಿನ ಪುಟ್ಪಾತ್ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ವಾಪಸ್ಸು ಬರುತಿರುವಾಗ ಚಿಕ್ಕಬಳ್ಳಾಪರು ಕಡೆಯಿಂದ ಬಂದ ಕೆಎ.40.ಎ.6705 ನೊಂದಣಿ ಸಂಖ್ಯೆಯ ವೆಂಕಟೇಶ್ವರ ಖಾಸಗಿ ಬಸ್ಸಿನ ಚಾಲಕನು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಯಾವುದೋ ವಾಹವನ್ನು ಓವರ್ ಟೇಕ್ ಮಾಡಲು ಹೋಗಿ ಮಣ್ಣಿನ ಪುಟ್ ಪಾತ್ ರಸ್ತೆಯಲ್ಲಿ ನಡೆದುಕೊಂಡು ಬರುತಿದ್ದ ಪದ್ಮಾವತಮ್ಮ ರವರಿಗೆ ಅಪಘಾತವನ್ನುಂಟು ಮಾಡಿದ ಪರಿಣಾಮ ಪದ್ಮಾವತಮ್ಮ ರವರು ರಸ್ತೆಯಲ್ಲಿ ಬಿದ್ದು ಹೋಗಿ ಬಲಗೈ ಮೂಳೆ ಮುರಿತದ ಗಾಯವಾಗಿ, ತಲೆಯ ಹಿಂಬಾಗದಲ್ಲಿ ರಕ್ತಗಾಯವಾಗಿದ್ದು, ಕೈ ಕಾಲುಗಳಿಗೆ ತರರುಚಿದ ಗಾಯಗಳಾಗಿದ್ದು ಕೂಡಲೇ ತಾನು ತನ್ನ ಮಗ ಹಾಗೂ ರಸ್ತೆಯಲ್ಲಿ ಹೋಗುತಿದ್ದು ಸಾರ್ವಜನಿಕರ ಸಹಾಯದಿಂದ ಅಂಬ್ಯೂಲೇನ್ಸ್ ನಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕರಿ ಅಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಅಸ್ಪತ್ರೆಗೆ ಹೋಗುವಾಗ ಮಾರ್ಗ ಮದ್ಯೆ ಮೃತಪಟ್ಟಿದ್ದು ನಂತರ ತನ್ನ ಅತ್ತೆ ಪದ್ಮಾವತಮ್ಮ ರವರ ಶವವನ್ನು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆ ಶವಗಾರದಲ್ಲಿಟ್ಟಿರುತ್ತೆ. ಆದ್ದರಿಂದ ತಾವುಗಳು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯಾವುದೋ ವಾಹವನ್ನು ಓವರ್ ಟೇಕ್ ಮಾಡಲು ಹೋಗಿ ನಮ್ಮ ಅತ್ತೆ ಪದ್ಮಾವತಮ್ಮ ರವರಿಗೆ ಅಪಘಾತವನ್ನುಂಟು ಮಾಡಿದ ಕೆಎ.40.ಎ.6705 ನೊಂದಣಿ ಸಂಖ್ಯೆಯ ವೆಂಕಟೇಶ್ವರ ಖಾಸಗಿ ಬಸ್ಸಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.248/2021 ಕಲಂ. 457,380,511 ಐ.ಪಿ.ಸಿ:-

  ದಿನಾಂಕ: 28/07/2021 ರಂದು ಬೆಳಿಗ್ಗೆ 10.15 ಗಂಟೆಯಲ್ಲಿ ಪಿರ್ಯಾದಿದಾರರಾದ ದಿವಾಕರ್.ಕೆ ಬಿನ್ ಲೇಟ್ ಕುಮಾರಾಚಾರಿ ರವರು 03 ಆಸಾಮಿಗಳನ್ನುಠಾಣೆಯಲ್ಲಿ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾವು ತಮ್ಮ ಗ್ರಾಮದಲ್ಲಿ ಕುಂದಲಗುರ್ಕಿ ರಸ್ತೆಯಲ್ಲಿ ಮನೆ ಕಟ್ಟಿಕೊಂಡು ಅದೇ ಬಿಲ್ಡಿಂಗ್ ನಲ್ಲಿ ಮುಂಭಾಗ ಸುಮಾರು 02 ವರ್ಷಗಳಿಂದ ನಿಕಿತ ಮೊಬೈಲ್ಸ್ ಅಂಗಡಿ ಇಟ್ಟುಕೊಂಡು ತಾನು ಮತ್ತು ತಮ್ಮ ಅಣ್ಣ ಭರತ್ ವ್ಯಾಪಾರ ಮಾಡಿಕೊಂಡಿರುತ್ತೇವೆ. ತಾವು ಪ್ರತಿದಿನ ಅಂಗಡಿಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆವಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ರಾತ್ರಿ ಅಂಗಡಿಗೆ ಬಾಗಿಲು ಹಾಕಿಕೊಂಡು ಮನೆಗೆ ಹೋಗುತ್ತಿರುತ್ತೇವೆ. ತಮ್ಮ ಅಂಗಡಿಗೆ ಮುಂಭಾಗದಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿರುತ್ತೆ. ಎಂದಿನಂತೆ ದಿನಾಂಕ: 27-07-2021 ರಂದು ಮೊಬೈಲ್ ಅಂಗಡಿಯಲ್ಲಿ ಬೆಳಿಗ್ಗೆಯಿಂದ ರಾತ್ರಿ 8-30 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡಿದ್ದು, ನಂತರ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿರುತ್ತೇವೆ. ರಾತ್ರಿ ಸುಮಾರು 1.00 ಗಂಟೆಯ ಸಮಯದಲ್ಲಿ ತಾನು ಮನೆಯಲ್ಲಿ ಮಲಗಿಕೊಂಡಿದ್ದಾಗ ತಮ್ಮ ಮೊಬೈಲ್ ಅಂಗಡಿಯ ಬಳಿ ಏನೋ ಶಬ್ದ ಆಗುತ್ತಿದ್ದುದನ್ನು ಕೇಳಿಸಿಕೊಂಡು ಮನೆಯ ಮಹಡಿ ಮೇಲಿಂದ ನೋಡಲಾಗಿ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಲು ತಮ್ಮ ಮೊಬೈಲ್ ಅಂಗಡಿಗೆ ಮುಂಭಾಗ ಅಳವಡಿಸಿದ್ದ ಸಿ.ಸಿ ಕ್ಯಾಮೆರಾಗಳನ್ನು ಪಕ್ಕಕ್ಕೆ ತಿರುಗಿಸಿ, ಆಯುಧಗಳಿಂದ ಅಂಗಡಿ ಬಾಗಿಲು ತೆಗೆಯಲು ಪ್ರಯತ್ನಿಸುತ್ತಿದ್ದಾಗ, ತಾನು ತಮ್ಮ ಮನೆಯವರು ಅಂಗಡಿ ಬಳಿ ಬಂದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮೂರು ಜನರನ್ನು ಹಿಡಿದುಕೊಳ್ಳಲು ಹೋದಾಗ ಆಸಾಮಿಗಳು ಓಡಿ ಹೋಗುವ ಪ್ರಯತ್ನದಲ್ಲಿ ಕೆಳಕ್ಕೆ ಬಿದ್ದು ಸ್ವಲ್ಪ ಗಾಯಗಳಾಗಿರುತ್ತವೆ. ಆಸಾಮಿಗಳನ್ನು ಹಿಡಿದುಕೊಂಡು ವಿಚಾರಿಸಲಾಗಿ  ತಾವು 1) ನಾಗಪ್ಪ @ ನಾಗರಾಜ ಬಿನ್ ಲೇಟ್ ಮುನಿಯಪ್ಪ, 45 ವರ್ಷ, ಪ.ಜಾತಿ, ಕೂಲಿ ಕೆಲಸ, ಬೈಚಾಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು, 2) ಮುನಿರಾಜು ಬಿನ್ ಗುಂಡಪ್ಪ, 40 ವರ್ಷ, ಪ.ಜಾತಿ, ಬೈಚಾಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು 3) ಮೂರ್ತಿ ಬಿನ್ ಮುನಿಶಾಮಪ್ಪ, 40 ವರ್ಷ, ನಾಯಕ, ಗುಂಡಮ್ಮನಹಳ್ಳಿ ಗ್ರಾಮ, ಮೆಳೇಕೋಟೆ ಬಳಿ, ದೊಡ್ಡಬಳ್ಳಾಪುರ  ತಾಲ್ಲೂಕು  ವಾಸಿಗಳು ಎಂದು ತಿಳಿಸಿರುತ್ತಾರೆ. ತಮ್ಮ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ ಮೇಲ್ಕಂಡ  ಮೂರು ಜನ ಕಳ್ಳರನ್ನು, ಕಳ್ಳತನ ಮಾಡಲು ಬಳಸಿದ ಆಯುಧಗಳೊಂದಿಗೆ ಕೆಲ ಗ್ರಾಮಸ್ಥರ ಸಹಾಯದಿಂದ ಹಿಡಿದುಕೊಂಡು ಮೂರು ಜನ ಆಸಾಮಿಗಳಿಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದು, ಮೇಲ್ಕಂಡ ಮೂರೂ ಜನ ಕಳ್ಳರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.249/2021 ಕಲಂ. 323,324,34 ಐ.ಪಿ.ಸಿ:-

  ದಿನಾಂಕ: 28/07/2021 ರಂದು ಮದ್ಯಾಹ್ನ 12.15 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಕೂಲಿ ಕೆಲಸ ಮಾಡಿಕೊಂಡು ತನ್ನ ಸಂಸಾರದೊಂದಿಗೆ ವಾಸವಾಗಿರುತ್ತೇನೆ. ತನಗೆ ದೇವನಹಳ್ಳಿ ತಾಲ್ಳೂಕು ಬೈಚಾಪುರ ಗ್ರಾಮದ ಮುನಿರಾಜು ಬಿನ್ ಗುಂಡಪ್ಪ, ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಮೂರ್ತಿ ಬಿನ್ ಮುನಿಶಾಮಪ್ಪ ರವರುಗಳು ಪರಿಚಯವಿದ್ದು ತಾವು ಮೂರು ಜನರು ಕೂಲಿ ಕೆಲಸ ಮಾಡಿಕೊಂಡಿದ್ದು ತಮಗೆ ಕೂಲಿ ಕೆಲಸದಿಂದ ಬರುತಿದ್ದ ಹಣ ಸಾಕಗಾದ ಕಾರಣ ತಾವು ಮೂರು ಜನರು ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕೆಂದು ಯೋಚಿಸಿ ತಾವುಗಳು ಕಳ್ಳತನ ಮಾಡಿದರೆ ಅದರಿಂದ ಹೆಚ್ಚು ಹಣ ಸಂಪಾದನೆ ಮಾಡುಬಹುದೆಂದು ಮಾತನಾಡಿಕೊಂಡು ದಿನಾಂಕ:27.07.2021 ರಂದು ಎಲ್ಲಿಯಾದರೂ ಕಳ್ಳತನ ಮಡೋಣವೆಂದು ಮಾತನಾಡಿಕೊಂಡು ಕಳ್ಳತನ ಮಾಡಲು ಇದೇ ದಿನ ರಾತ್ರಿ ಸುಮಾರು 1.00 ಗಂಟೆ ಸಮಯದಲ್ಲಿ ತಾನು ಹಾಗು ಮೇಲ್ಕಂಡ ತನ್ನ ಸ್ನೇಹಿರೊಂದಿಗೆ ಶಿಡ್ಲಘಟ್ಟ ತಾಲ್ಲುಕು ವೈ ಹುಣಸೇನಹಳ್ಳಿ ಗ್ರಾಮದ ರೈಲ್ವೇ ಸ್ಟೆಷನ್ ಬಳಿ ಕುಂದಲುಗುರ್ಕಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿರುವ ನಿಕಿತ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಲು ನಿರ್ದರಿಸಿಕೊಂಡು ನಿಕಿತ ಅಂಗಡಿಯ ಬಾಗಿಲನ್ನು ಮುರಿದು ಒಳಗಡೆ ಹೋಗಲು ಪ್ರಯತ್ನಿಸುತಿದ್ದಾಗ ಅಲ್ಲಿಗೆ ಬಂದು ಯಾರೋ ಸಾರ್ವಜನಿಕರು ತಮ್ಮ ಮೂರು ಜನರನ್ನು ಹಿಡಿದುಕೊಳ್ಳಲು ಪ್ರಯತ್ನಪಟ್ಟಾಗ ತಾವು ಮೂರು ಜನರು ತಪ್ಪಿಸಿಕೊಳ್ಳುವ ಸಲುವಾಗಿ ಓಡಿ ಹೋಗಲು ಪ್ರಯತ್ನ ಪಟ್ಟಾಗ ಮೂರು ಜನರು ಕೆಳಗಡೆ ಬಿದ್ದು ಹೋಗಿ ಗಾಯಗಳಾಗಿದ್ದು ಹಾಗು ಬಿದ್ದು ಹೋಗಿದ್ದು ತಮ್ಮನ್ನು ಯಾರೋ ಸಾರ್ವಜನಿಕರು ಕೈಗಳಿಂದ ಹಾಗೂ ಕಲ್ಲಿನಿಂದ ಹೊಡೆದು ತಮಗೆ ತಲೆಗೆ ಕೈ ಕಾಲುಗಳಿಗೆ ಗಾಯಗಳಾಗಿರುತ್ತೆ. ತಮಗೆ ಹೊಡೆದು ಗಾಯಗಳನ್ನುಂಟು ಮಾಡಿದ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 28-07-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080