ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 169/2021 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:27/06/2021 ರಂದು ಸಂಜೆ 6:30 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಗೋಪಾಲರೆಡ್ಡಿ ರವರು ಮಾಲು, ಅಸಲು ಪಂಚನಾಮೆ  ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ  ವರದಿಯ ದೂರು  ಏನೆಂದರೆ ಈ ದಿನ ದಿನಾಂಕ; 27-06-2021 ರಂದು ಸಂಜೆ 4-00 ಗಂಟೆಯಲ್ಲಿ ನಾನು ಪೋತೇಪಲ್ಲಿ ಗ್ರಾಮದ ಬಳಿ ಗ್ರಾಮಗಸ್ತು ಕರ್ತವ್ಯದಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ,  ಪಾರ್ವತಿಪುರ ತಾಂಡ ಗ್ರಾಮದ ವೆಂಕಟರಾಮನಾಯ್ಕ ಬಿನ್ ಪೀರೇನಾಯ್ಕ, 40 ವರ್ಷ ಎಂಬುವವರು  ಅಕ್ರಮವಾಗಿ  ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಠಾಣಾ ಜೀಪ್ ಸಂಖ್ಯೆ ಕೆ.ಎ-40-ಜಿ-537 ರ ಜೀಪ್ ನಲ್ಲಿ ಜೀಪ್ ಚಾಲಕ ಪಿಸಿ-134 ಧನಂಜಯ್ ನಾನು ಮತ್ತು ಹೆಚ್.ಸಿ-103 ಶಂಕರರೆಡ್ಡಿ  ರವರು ಹೊರಟು ಗೂಳೂರು ಬಸ್ ನಿಲ್ದಾಣದ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದಾಳಿ ವಿಚಾರವನ್ನು ತಿಳಿಸಿ,  ಜೀಪಿನಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಹೊರಟು ಸಂಜೆ 4-30 ಗಂಟೆಗೆ ಪಾರ್ವತಿಪುರ ತಾಂಡ ಗ್ರಾಮದ ವೆಂಕಟರಾಮನಾಯ್ಕ ಬಿನ್ ಪಿರೇ ನಾಯ್ಕ ರವರು ತಮ್ಮ ಮನೆಯ  ಮುಂದೆ ಹೋದಾಗ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ  ಆಸಾಮಿಯು ಪೊಲೀಸ್ ಜೀಪನ್ನು ಕಂಡು  ಓಡಿ ಹೋದಾಗ ಹೆಚ್.ಸಿ-103 ಶಂಕರರೆಡ್ಡಿ ರವರು ಹಿಂಬಾಲಿಸಿ ಹಿಡಿದುಕೊಳ್ಳಲು ಹೋದಾಗ ಕೈಯಿಗೆ ಸಿಗದೇ ಓಡಿ ಹೋಗಿರುತ್ತಾನೆ. ನಂತರ  ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ 4 ಬಾಕ್ಸ್ ಗಳಿದ್ದು 1]  90 ML  ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೇಟ್ ಗಳಿರುತ್ತವೆ, 2] 90 ML ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೇಟ್ ಗಳಿರುತ್ತವೆ, 3]   90 ML ಸಾಮರ್ಥ್ಯದ HAYWARDS CHEERS WHISKY ಯ 58 ಟೆಟ್ರಾ ಪಾಕೇಟ್ ಗಳಿರುತ್ತವೆ, 4]  330ML ಸಾಮರ್ಥ್ಯದ KNOCK OUT HIGH PUNCH STRONGE BEER ನ 21 ಬಾಟಲ್  ಗಳಿರುತ್ತವೆ, ಇವುಗಳು ಒಟ್ಟು 29 ಲೀಟರ್ 430 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು ಮೌಲ್ಯ 10,462 /- ರೂ.ಗಳಾಗಿರುತ್ತದೆ. ಸದರಿ ಆಸಾಮಿಯ  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಮೇಲ್ಕಂಡ  ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ ಸಂಜೆ 6-30 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಮೇಲ್ಕಂಡ ವೆಂಕಟರಾಮೇನಾಯ್ಕ ಬಿನ್ ಪೀರೇನಾಯ್ಕ, ಸುಮಾರು 40 ವರ್ಷ, ಲಂಬಾಣಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ವಾಸ ಪಾರ್ವತಿಪುರ ತಾಂಡ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುವುದಾಗಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 170/2021 ಕಲಂ. 11,32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 27/06/2021 ರಂದು ರಾತ್ರಿ 10-00 ಗಂಟೆಗೆ ಶ್ರೀ ಗೋಪಾಲರೆಡ್ಡಿ, ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ  ರವರು ಕಾರು, ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ  ವರದಿಯ ದೂರು ಏನೆಂದರೆ ಈ ದಿನ ದಿನಾಂಕ; 27-06-2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಠಾಣೆಯಲ್ಲಿರುವಾಗ ಗೂಳೂರು ರಸ್ತೆ ಕಡೆಯಿಂದ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು  ಕಾರಿನಲ್ಲಿ  ಸಾಗಾಣಿಕೆ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸರ್ಕಾರಿ ಜೀಪಿನಲ್ಲಿ ಹೆಚ್.ಸಿ-103 ಶಂಕರ್ ರೆಡ್ಡಿ, ಪಿಸಿ-214 ಅಶೋಕ ರವರೊಂದಿಗೆ ಹೊರಟು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದಾಳಿಯ ವಿಚಾರವನ್ನು ತಿಳಿಸಿ, ಜೀಪಿನಲ್ಲಿ ಪಂಚರನ್ನು ಕರೆದುಕೊಂಡು ಹೊರಟು ಗೂಳೂರು ಸರ್ಕಲ್  ಬಳಿ ಹೋದಾಗ ಗೂಳೂರು ರಸ್ತೆ ಕಡೆಯಿಂದ ಬಂದ ಕಪ್ಪು  ಬಣ್ಣ TN 23 AF 8199 ನೊಂದಣಿ ಸಂಖ್ಯೆಯ ಕಾರನ್ನು ಸುತ್ತುವರೆದು ನಿಲ್ಲಿಸಿ ನೋಡಲಾಗಿ ಕಾರಿನ ಹಿಂಬದಿಯಲ್ಲಿ ಸೀಟಿನಲ್ಲಿ ಮದ್ಯ ತುಂಬಿದ ಬಾಕ್ಸ್ ಗಳಿರುತ್ತದೆ. ನಂತರ ಕಾರಿನಲ್ಲಿದ್ದವ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರಮೇಶ ಬಿನ್ ಗೋಪಾಲ, 28 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕೊಟ್ಟಂಪಲ್ಲಿ ಗ್ರಾಮ, ಚೇಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತಲೂ ಕಾರಿನ ಚಾಲಕನ ಹೆಸರು ವಿಳಾಸವನ್ನು ಕೇಳಲಾಗಿ 2) ಪವನ್ ಕುಮಾರ್ ಬಿನ್ ವೆಂಕಟಪ್ಪ, 22 ವರ್ಷ, ಭೋವಿ ಜನಾಂಗ, ಡ್ರೈವರ್ ಕೆಲಸ, ವಾಸ ಬುದ್ದಲವಾರಪಲ್ಲಿ ಗ್ರಾಮ, ಚೇಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಕಾರಿನಲ್ಲಿದ್ದ ಮದ್ಯದ ಬಾಕ್ಸ್ ಗಳ ಬಗ್ಗೆ ಕೇಳಲಾಗಿ ತಮ್ಮ ಗ್ರಾಮಕ್ಕೆ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದು, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಸದರಿಯವರಿಗೆ ಮದ್ಯವನ್ನು ಸಾಗಾಣಿಕೆ ಮಾಡಿ ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ  ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ  ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ  ಕಾರಿನಲ್ಲಿ ಒಟ್ಟು 19 ಬಾಕ್ಸ್ ಮದ್ಯ ಬಾಕ್ಸಗಳಿದ್ದು 1]  90 ML  ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೇಟ್ ಗಳ,  6 ಬಾಕ್ಸ್ ಗಳಿರುತ್ತವೆ.  2] 180 ML ಸಾಮರ್ಥ್ಯದ OLD ADMIRAL ನ  96 ಟೆಟ್ರಾ ಪಾಕೇಟ್ ಗಳ,  8 ಬಾಕ್ಸ್ ಗಳಿರುತ್ತವೆ.  3]   90 ML ಸಾಮರ್ಥ್ಯದ DOUBLE KICK FINE WHISKY ಯ  96 ಟೆಟ್ರಾ ಪಾಕೇಟ್ ಗಳ,  5 ಬಾಕ್ಸ್ ಗಳಿರುತ್ತವೆ. ಇವುಗಳು ಒಟ್ಟು 232  ಲೀಟರ್ 280  ಎಂ.ಎಲ್ ಮದ್ಯವಿದ್ದು, ಇದರ ಒಟ್ಟು ಮೌಲ್ಯ 1,00,288/- ರೂ.ಗಳಾಗಿರುತ್ತದೆ. ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡು ಸದರಿ ಆಸಾಮಿಗಳು  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯವನ್ನುಮಾರಾಟ ಮಾಡಲು ಕಾರಿನಲ್ಲಿ  ಸಾಗಾಣಿಕೆ ಮಾಡುತ್ತಿದ್ದು, ಮೇಲ್ಕಂಡ  ಕಾರು, ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು,  ಕಾರು,ಮಾಲು,ಅಸಲು ಪಂಚನಾಮೆ ಹಾಗೂ ಆರೋಪಿಗಳೊಂದಿಗೆ ರಾತ್ರಿ  10-00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಮೇಲ್ಕಂಡ ಆಸಾಮಿಗಳ  ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 291/2021 ಕಲಂ. 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್‌:-

     ದಿನಾಂಕ: 27/06/2021 ರಂದು ಸಂಜೆ 6.15 ಗಂಟೆಗೆ ಶ್ರೀಮತಿ ಸಾವಿತ್ರಮ್ಮ ಕೋಂ ರಾಮಚಂದ್ರಪ್ಪ, 55 ವರ್ಷ, ಗೃಹಣಿ, ಆದಿ ದ್ರಾವಿಡ ಜನಾಂಗ, ವೈಜಕೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ರಾಮಚಂದ್ರಪ್ಪ ಬಿನ್ ಪೂಜಪ್ಪ ರವರು ದಿನಾಂಕ: 25/06/2021 ರಂದು ಮದ್ಯಾಹ್ನ 1.12 ಗಂಟೆ ಸಮಯದಲ್ಲಿ ಆತನ ಬಾಬತ್ತು KA-40 W-1325 TVS XL ದ್ವಿಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ಗೆ ಆಸ್ಪತ್ರೆಗೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಬರುವ ಸಲುವಾಗಿ ತಮ್ಮ ಗ್ರಾಮದ ಈಶ್ವರ ದೇವಸ್ಥಾನದ ಹಿಂದೆ ತನ್ನ ವಾಹನವನ್ನು ತಮ್ಮ ಗ್ರಾಮದ ಒಳಗಡೆ ತಿರುಗಿಸಿಕೊಳ್ಳುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ಕಾರಿನ ಚಾಲಕ ಆತನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ, ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ. ಆಗ ತನ್ನ ಗಂಡ ಕೆಳಕ್ಕೆ ಬಿದ್ದು ಹೋಗಿದ್ದು ಆತನಿಗೆ ತಲೆಗೆ ತೀವ್ರ ತರವಾದ ಗಾಯವಾಗಿ ಕೈ ಕಾಲುಗಳಿಗೆ ರಕ್ತಗಾಯವಾಗಿರುತ್ತೆ. ಸದರಿ ಅಪಘಾತವನ್ನು ತಮ್ಮ ಗ್ರಾಮದ ಮುಸ್ಲೀಂ ಹುಡುಗ ತನಗೆ ತಿಳಿಸಿದ್ದು ತಾನು ಕೂಡಲೇ ತಮ್ಮ ಗ್ರಾಮದ ಸಂತೋಷ ಮತ್ತು ಮೂರ್ತಿ ರವರ ಸಹಾಯದಿಂದ ತನ್ನ ಗಂಡನನ್ನು ಕಾರಿನಲ್ಲಿ ಹೆಚ್.ಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಹಾಲಿ ತನ್ನ ಗಂಡ ಆಸ್ಪತ್ರೆಯ ಐ.ಸಿ.ಯು ನಲ್ಲಿರುತ್ತಾನೆ. ತಾನು ಮತ್ತು ತನ್ನ ಮಗ ಲೋಕೇಶ್ ಇದುವರೆಗೂ ಆಸ್ಪತ್ರೆಯಲ್ಲಿ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಮೇಲ್ಕಂಡ ಅಪಘಾತ ಮಾಡಿದ ವಾಹನವನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 292/2021 ಕಲಂ. 323,324,504,506 ಐಪಿಸಿ :-

     ದಿನಾಂಕ: 27/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ ಬಿನ್ ಲೇಟ್ ಸುಬ್ಬಣ್ಣ, 45 ವರ್ಷ, ನೇಯ್ಗ ಕೆಲಸ, ಆದಿ ಕರ್ನಾಟಕ ಜನಾಂಗ, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತಾನು ಕೆಳದ 10 ವರ್ಷದ ಹಿಂದೆ ತಮ್ಮ ಗ್ರಾಮದ ತಮ್ಮ ಜನಾಂಗದ ಮಂಜುಳ ಕೋಂ ಚಿಕ್ಕಕೃಷ್ಣಪ್ಪ ಎಂಬುವವರಿಗೆ ಸರ್ಕಾರದ ವತಿಯಿಂದ ನೇಯ್ಗೆ ಮಗ್ಗಗಳನ್ನು ಸಬ್ಸೀಡಿ ಧರದಲ್ಲಿ ಕೊಡಿಸಿರುತ್ತೇನೆ. ಸದರಿ ನೇಯ್ಗೆಗಳಿಗೆ ಸರ್ಕಾರ 90% ರಷ್ಟು ಹಣ ಹಾಗೂ ಗ್ರಾಹಕ 10% ರಷ್ಟು ಹಣ ನೀಡಬೇಕಾಗಿದ್ದು, ಆ ಸಮಯದಲ್ಲಿ ಮಂಜುಳ ರವರ ಬಳಿ ಹಣ ವಿಲ್ಲದ ಕಾರಣ ತಾನೇ 10% ರಷ್ಟು (10.000/- ರೂ) ಹಣವನ್ನು ಸರ್ಕಾರಕ್ಕೆ ಕಟ್ಟಿರುತ್ತೇನೆ. ಹೀಗಿರುವಾಗ ಈ ದಿನ ದಿನಾಂಕ: 27/06/2021 ರಂದು ಸಂಜೆ 6.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ಮಂಜುಳ ರವರ ಮಗನಾದ ಪ್ರತಾಪ್ ಬಿನ್ ಚಿಕ್ಕಕೃಷ್ಣಪ್ಪ ರವರು ತನ್ನ ಬಳಿ ಬಂದು ತಾನು ಕಟ್ಟಿರುವ 10% ರಷ್ಟು ಹಣ (10.000/-) ವಾಪಸ್ ಕೊಡಿ ಎಂದು ಕೇಳಿದ್ದು ಆಗ ತಾನು ಆ ಹಣವನ್ನು ಸರ್ಕಾರಕ್ಕೆ ಕಟ್ಟಿದ್ದೇನೆ, ಅದು ಸಬ್ಸೀಡಿ ಹಣ, ತಾನು ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದ್ದು, ಆಗ ಪ್ರತಾಪ್ ತನ್ನನ್ನು ಕುರಿತು “ಬೋಳಿ ಮಗನೇ ನನ್ನ ಹಣ ನನಗೆ ವಾಪಸ್ ಕೊಡು ಇಲ್ಲದಿದ್ದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದನು. ಅಷ್ಟರಲ್ಲಿ ತನ್ನ ಮಗ ಅಕ್ಷಯ್, 19 ವರ್ಷ ರವರು ಅಡ್ಡ ಬಂದಿದ್ದು, ಪ್ರತಾಪ್ ರವರು ಕೈಯಿಂದ ತನ್ನ ಮಗನ ಮುಖಕ್ಕೆ ಗುದ್ದಿ ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ತನ್ನ ಮಗನ ಮೈ ಮೇಲೆ ಹೊಡೆದು ಗಾಯಪಡಿಸಿದನು. ನಂತರ ಪ್ರತಾಪ್ ಅಲ್ಲಿಂದ ಹೋಗುವಾಗ “ಈ ದಿನ ಉಳಿದುಕೊಂಡಿದ್ದೀಯಾ, ನನ್ನ ಹಣ ವಾಪಸ್ ಕೊಡದಿದ್ದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾನೆ. ಆದ್ದರಿಂದ ಮೇಲ್ಕಂಡ ಪ್ರತಾಪ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 293/2021 ಕಲಂ. 20(a)(b) ARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ: 28/06/2021 ರಂದು ಬೆಳಿಗ್ಗೆ 11.15 ಗಂಟೆಗೆ ಠಾಣೆಯ ಸಿ.ಪಿ.ಸಿ-23 ರೋಷನ್ ಜಮೀರ್ ರವರ ಮುಖಾಂತರ ಠಾಣೆಯ ಪಿ.ಎಸ್.ಐ ಶ್ರೀ ನಾರಾಯಣಸ್ವಾಮಿ.ಕೆ ರವರು ಕಳುಹಿಸಿಕೊಟ್ಟ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 28/06/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಕಸಬಾ ಹೋಬಳಿ ಎ.ಹೊಸಹಳ್ಳಿ ಗ್ರಾಮದ ವಾಸಿಯಾದ ವೆಂಕಟರಾಮರೆಡ್ಡಿ ಬಿನ್ ಪೆದ್ದನ್ನ ರವರು ತನ್ನ ಮಾವನಾದ ಆವುಲರೆಡ್ಡಿ ರವರ ಬಾಬ್ತು ಜಮೀನಿನಲ್ಲಿ ಸರ್ಕಾರದ ಯಾವುದೇ ಆದೇಶ ಇಲ್ಲದೆ ಕಾನೂನು ಬಾಹಿರವಾಗಿ ಮಾದಕವಸ್ತು ಆದ ಗಾಂಜಾ ಗಿಡಗಳನ್ನು ಬೆಳೆದು ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಿತ್ತು ತನ್ನ ಜಮೀನಿನಲ್ಲಿರುವ ಶೆಡ್ ನಲ್ಲಿ ಬಚ್ಚಿಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಮಾಹಿತಿಯನ್ನು ತಾನು ಡೈರಿಯಲ್ಲಿ ನಮೂದಿಸಿಕೊಂಡು ಸದರಿ ಆಸಾಮಿಯು ಗಾಂಜಾ ಗಿಡಗಳನ್ನು ಯಾರಿಗಾದರೂ ಮಾರಾಟ ಮಾಡುವ ಸಂಶಯ ಇದ್ದು, ತಕ್ಷಣ ತಾನು ಮಾನ್ಯ ಡಿ.ಎಸ್.ಪಿ ಸಾಹೇಬರ ಮಾರ್ಗದರ್ಶನ ಪಡೆದು ತಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.87-ಸಿ.ವಿ.ಚಂದ್ರಶೇಖರ್, ಸಿ.ಪಿ.ಸಿ-504 ಕೆ.ಎ.ಸತೀಶ, ಸಿ.ಪಿ.ಸಿ-23 ರೋಷನ್ ಜಮೀರ್ ಮತ್ತು ಸಿ.ಪಿ.ಸಿ-16 ಲೋಕೇಶ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಎ.ಹೊಸಹಳ್ಳಿ ಗ್ರಾಮದ ವೆಂಕಟರಾಮರೆಡ್ಡಿ ಬಿನ್ ಪೆದ್ದನ್ನ ರವರ ಜಮೀನಿನ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಶೆಡ್ ಬಳಿ ಹೋಗಿ ಶೆಡ್ ನ ಬಾಗಿಲನ್ನು ತೆಗೆದು ನೋಡಲಾಗಿ ವಿಷಯ ನಿಜವಾಗಿದ್ದು, ಶೆಡ್ ನಲ್ಲಿ ಸುಮಾರು 4 ಅಡಿ ಉದ್ದದ ಸುಮಾರು ಒಂದೂವರೆ ಕೆ.ಜಿ ತೂಕದ 4 ಗಾಂಜಾ ಗಿಡಗಳು ಇದ್ದು ನೋಡಲಾಗಿ ಇವುಗಳನ್ನು ಹೊಸದಾಗಿ ಕಿತ್ತಿರುವುಂತೆ ಕಂಡು ಬಂದಿದ್ದು, ಸದರಿ ಗಿಡಗಳನ್ನು ವೆಂಕಟರಾಮರೆಡ್ಡಿ ರವರು ತನ್ನ ಮಾವ ಆವುಲರೆಡ್ಡಿ ರವರ ಜಮೀನಿನಲ್ಲಿ ಬೆಳೆದಿರುವ ಆಗಲಕಾಯಿ ಫಸಲಿನ ಮಧ್ಯೆ ಬೆಳೆಸಿ ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಿತ್ತು ಇಟ್ಟಿರುವುದಾಗಿ ತಿಳಿದು ಬಂದಿದ್ದು, ಗ್ರಾಮದಲ್ಲಿ ಪತ್ತೆ ಮಾಡಲಾಗಿ ವೆಂಕಟರಾಮರೆಡ್ಡಿ ರವರು ತಲೆಮರೆಸಿಕೊಂಡಿದ್ದು, ನಂತರ ತಾನು ಸ್ಥಳದಲ್ಲಿಯೇ ಲ್ಯಾಪ್ ಟಾಪ್ ಮೂಲಕ ವರದಿ ತಯಾರಿಸಿ ಮೇಲ್ಕಂಡ ವೆಂಕಟರಾಮರೆಡ್ಡಿ ರವರ ವಿರುಧ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿ ವರದಿಯನ್ನು ಸಿ.ಪಿ.ಸಿ-23 ರೋಷನ್ ಜಮೀರ್ ರವರ ಮುಖಾಂತರ ಠಾಣೆಗೆ ಕಳುಹಿಸಿ ಕೊಟ್ಟಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 143/2021 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ 27-06-2021 ರಂದು 18-30 ಗಂಟೆಗೆ  ಶ್ರೀ ಕೆ.ಸಿ.ವಿಜಯಕುಮಾರ್ ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆರವರು ಹಾಜರಾಗಿ ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂಧರೆ ದಿನಾಂಕ: 27-06-2021 ರಂದು ಸಂಜೆ 04-30 ಗಂಟೆಯಲ್ಲಿ  ತಾನು  ಠಾಣೆಯಲ್ಲಿ  ಕರ್ತವ್ಯವನ್ನು  ನಿರ್ವಹಿಸುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಚಂದನದೂರು ಗ್ರಾಮದಲ್ಲಿ   ಯಾರೋ ಆಸಾಮಿಯು ಅಕ್ರಮವಾಗಿ ಯಾವುದೆ ಪರವಾನಿಗಿಯಿಲ್ಲದೇ ಮದ್ಯವನ್ನು  ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರಾದ ಹೆಚ್.ಸಿ. 10 ಶ್ರೀರಾಮಯ್ಯ, ಹೆಚ್.ಸಿ. 171 ಬಾಬು, ಪಿ.ಸಿ. 179 ಶಿವಶೇಖರ್, ಚಾಲಕ ಎ.ಪಿ.ಸಿ.143 ಮಹೇಶ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ವಿದುರಾಶ್ವಥದಿಂದ ಚಂದನದೂರು ಗ್ರಾಮದಲ್ಲಿ ವಿದುರಾಶ್ವಥ –ಕೊಡಿಗೇನಹಳ್ಳಿ ರಸ್ತೆಯಲ್ಲಿ ಅರಳಿಕಟ್ಟೆಯ ಮುಂಭಾಗದಲ್ಲಿ ಯಾರೋ ಒಬ್ಬ  ಆಸಾಮಿಯು  ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದು  ಪೊಲೀಸ್ ವಾಹನ ಮತ್ತು ಪೊಲೀಸರನ್ನು ಕಂಡು  ರಸ್ತೆಯ ಪಕ್ಕದಲ್ಲಿ ಚೀಲವನ್ನು ಬಿಸಾಡಿ ಅಲ್ಲಿಂದ ಓಡಿಹೋದನು. ಸಿಬ್ಬಂದಿಯವರು ಬೆನ್ನಟ್ಟಿದರೂ ಸಹಾ ಸಿಗಲಿಲ್ಲ.  ಆಸಾಮಿಯು ಬಿಸಾಡಿದ್ದ  ಪ್ಲಾಸ್ಟೀಕ್ ಚೀಲವನ್ನು  ಪಂಚರ ಸಮಕ್ಷಮದಲ್ಲಿ  ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 288  ಟೆಟ್ರಾ ಪಾಕೆಟ್ ಗಳು, ಒಟ್ಟು ಸಾಮರ್ಥ್ಯ 25.ಲೀಟರ್ 920  ಎಂ.ಎಲ್. ಆಗಿರುತ್ತೆ ,ಬೆಲೆ 10,118/- ರೂಗಳು,  OLD TAVERN WHISKY  180 ಎಂ.ಎಲ್ .ನ 48  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 8.ಲೀಟರ್ 640  ಎಂ.ಎಲ್. ಆಗಿರುತ್ತೆ. ಬೆಲೆ 4164/- ರೂ. ಇವುಗಳ ಒಟ್ಟು ಲೀಟರ್. 34 ಲೀಟರ್ 560 ಎಂ.ಎಲ್. ಒಟ್ಟು ಬೆಲೆ 14,281/- ರೂ.ಗಳಾಗಿರುತ್ತೆ.  ಸದರಿ ಮದ್ಯವನ್ನು ಬಿಸಾಡಿ ಓಡಿಹೋದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ಲಕ್ಷ್ಮಣ ಬಿನ್ ಲೇಟ್ ಲಿಂಗಪ್ಪ, ಸುಮಾರು 42 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ಚಂದನದೂರು  ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು.  ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ ಮದ್ಯವನ್ನು ಕಾಳಸಂತೆಯಲ್ಲಿ ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ. ನಂತರ ಸ್ಥಳದಲ್ಲಿ  17-00 ಗಂಟೆಯಿಂದ 18-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY 90 ಎಂ.ಎಲ್. ನ  287  ಟೆಟ್ರಾ ಪಾಕೆಟ್, 2) OLD TAVERN WHISKY  180 ಎಂ.ಎಲ್ .ನ 48  ಟೆಟ್ರಾ ಪಾಕೆಟ್ ಗಳು , 3) ಒಂದು ಪ್ಲಾಸ್ಟಿಕ್ ಚೀಲ,4) HAY WARDS CHEERS  WHISKY 90 ಎಂ.ಎಲ್. ನ  1  ಟೆಟ್ರಾ ಪಾಕೆಟ್, 5) OLD TAVERN WHISKY  180 ಎಂ.ಎಲ್ .ನ ಟೆಟ್ರಾ ಪಾಕೆಟ್ ಅನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಎ.ಬಿ.. ಎಂಬ ಅಕ್ಷರಗಳಿಂದ ಸೀಲು ಮಾಡಿ ವಶಪಡಿಸಿಕೊಂಡು, ಠಾಣೆಗೆ 18-30  ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ  ಪ್ರಕರಣ ದಾಖಲಿಸಿರುವುದು.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 134/2021 ಕಲಂ. 143,147,323,448 ರೆ/ವಿ 149 ಐಪಿಸಿ :-

     ದಿನಾಂಕ27/06/2021 ರಂದು ರಾತ್ರಿ 8-15 ಗಂಟೆಯಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ರಾಮಕ್ಕ ಕೊಂ ರಾಮಕೃಷ್ಣಪ್ಪ 65 ವರ್ಷ, ಬಲಜಿಗರು, ಆದೆನ್ನಗಾರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ನೀಡಿರುವ ಹೇಳಿಕೆಯ ಸಾರಾಂಶವೇನೆಂದರೆ,  ನಮಗೂ  ಮತ್ತು  ವಸಂತರೆಡ್ಡಿ ರವರ ಕುಟುಂಬಕ್ಕೂ ಪಿತ್ರಾರ್ಜಿ ಆಸ್ತಿಯ ವಿಚಾರದಲ್ಲಿ ನಾನು ಮತ್ತು ನಮ್ಮ ಅಕ್ಕಂದಿಯರು ಆಸ್ತಿಯ ವಿಚಾರದಲ್ಲಿ ಗುಡಿಬಂಡೆ ನ್ಯಾಯಾಲಯದಲ್ಲಿ  ದಾವೆಯನ್ನು ಹೂಡಿರುತ್ತೇವೆ. ದಿನಾಂಕ:27/06/2021 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಮುತ್ತಕದಹಳ್ಳಿ ಗ್ರಾಮದ ನನ್ನ ಅಣ್ಣನಾದ ಲೇಟ್ ನಾರಾಯಣಸ್ವಾಮಿ ರವರ ಮಕ್ಕಳಾದ ದಯಾನಂದ, ಲಕ್ಷ್ಮೀಪತಿ, ಮಂಜುಳಾ ಕೊಂ ದಯಾನಂದ, ಸುವರ್ಣಮ್ಮ ಕೊಂ ಲಕ್ಷ್ಮೀಪತಿ, ಅಮರೇಶ ಬಿನ್ ವಸಂತರೆಡ್ಡಿ, ಜಯಂತಮ್ಮ ಕೊಂ ಅಮರೇಶ, ಹಾಗೂ ಸಂತೋಷ್ ಬಿನ್ ಅಮರೇಶ, ವಸಂತ ಬಿನ್ ಅಮರೇಶ, ನಾಗಮಣಿ ಕೊಂ ಸಂತೋಷ, ನಾಗರಾಜು ಬಿನ್ ಕೃಷ್ಣಪ್ಪ, ರವಿ ಬಿನ್ ಕೃಷ್ಣಪ್ಪ, ಗಾಯತ್ರಿ ಕೊಂ ರವಿ, ರೂಪ ಕೊಂ ನಾಗರಾಜು ರವರುಗಳು ತಾನು ಮನೆಯಲ್ಲಿದ್ದಾಗ ಇವರೆಲ್ಲಾರೂ ಮನೆಯ ಒಳಗೆ ಬಂದು ಈ ಪೈಕಿ ದಯಾನಂದ ರವರು ಯಾಕೇ ಕೊರ್ಟಿಗೆ ಹೋಗಿ ಕೇಸು ಹಾಕಿರುವುದು ಎಂದು ಕೇಳಿದಾಗ ವಸಂತ ತನ್ನ ಕೈ ಹಿಡಿದುಕೊಂಡು ತನ್ನನ್ನು ತಳ್ಳಿರುತ್ತಾನೆ ನನ್ನ ತಲೆ ಗೋಡೆಗೆ ಬಿದ್ದು ತಲೆಗೆ ಬಾಸೂಂಡೆ ಬಂದಿದ್ದು ಎಲ್ಲರೂ ಕೂಗಾಡಿ ನಿನ್ನಿಂದ ಏನಾಗುತ್ತೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾಗ ತನ್ನ ಮಗ ವಿಜಯ್ ಕುಮಾರ್ ರವರಿಗೆ ಕರೆ ಮಾಡಿ ಕರೆಯಿಸಿಕೊಂಡಾಗ ಎಲ್ಲಾರೂ ಕೂಗಾಡಿಕೊಂಡು ಹೋರಟು ಹೋಗಿರುತ್ತಾರೆ. ನನ್ನ ಮಗ ನನ್ನನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದರು ನನ್ನ ಮೇಲೆ ಜಗಳಕ್ಕೆ ಬಂದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 105/2021 ಕಲಂ. 324,504 ರೆ/ವಿ 34 ಐಪಿಸಿ :-

     ದಿನಾಂಕ: 28/06/2021 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಪಿ.ವಿ.ಬಾಲಕೃಷ್ಣ ಬಿನ್ ವೆಂಕಟರವಣಪ್ಪ, 51 ವರ್ಷ, ಪರಿಶಿಷ್ಟ ಜಾತಿ [ಎ.ಕೆ], ತರಕಾರಿ ವ್ಯಾಪಾರ, ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 23/06/2021 ರಂದು ನಮ್ಮ ತಂದೆಯವರು ವಾಸವಾಗಿರುವ ಮನೆಯು ಸೋರುತ್ತಿದ್ದರಿಂದ ನಾನು ಮನೆಯನ್ನು ರಿಪೇರಿ ಮಾಡಿಸಲು ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದೆನು. ನಮ್ಮ ಗ್ರಾಮದಲ್ಲಿ ಮನೆಯನ್ನು ರಿಪೇರಿ ಮಾಡಿಸುತ್ತಿದ್ದಕ್ಕೆ ನನ್ನ ತಮ್ಮ ಗೋವಿಂದರಾಜು ಮತ್ತು ಅವರ ಮಗ ಸ್ವಾಮಿ ಇಬ್ಬರೂ ಬಂದು ನನ್ನೊಂದಿಗೆ ಜಗಳ ಮಾಡಿ ತೊಂದರೆ ಮಾಡುತ್ತಿದ್ದರು. ಈ ವಿಚಾರ ತಿಳಿದ ನನ್ನ ಹೆಂಡತಿ  ದಿನಾಂಕ: 27/06/2021 ರಂದು ಬೆಂಗಳೂರಿನಿಂದ ಬಂದು ಮದ್ಯಾಹ್ನ ಸುಮಾರು 2-45 ಗಂಟೆ ಸಮಯದಲ್ಲಿ ಯಾಕಪ್ಪ ನಮ್ಮ ಜಾಗದಲ್ಲಿ ತಾನೇ ಮಾಡುತ್ತಿರುವುದು ನಿಮ್ಮ ಜಾಗಕ್ಕೆ ನಾವು ಬಂದಿಲ್ಲ ಅಲ್ವಾ ಇದು ನಮಗೂ ಸೇರಬೇಕು ಅಲ್ವಾ ಎಂದು ಕೇಳಿದ್ದಕ್ಕೆ ಗೋವಿಂದರಾಜು ನನ್ನ ಹೆಂಡತಿಗೆ ಕೆಟ್ಟ ಪದಗಳಿಂದ ಬೈಯುತ್ತಿದ್ದನು. ನನ್ನ ಮಗನಾದ ಅಭಿಷೇಕ್ ಯಾಕೆ ಹೀಗೆ ಕೆಟ್ಟ ಪದಗಳನ್ನು ಬಳಸುತ್ತೀರಿ ಏನು ತಪ್ಪು ಮಾತನಾಡಿದ್ದು, ಎಂದು ಹೇಳುತ್ತಿದ್ದಾಗ ಗೋವಿಂದರಾಜುರವರ ಮಗನಾದ ಸ್ವಾಮಿ ಸ್ಟೀಲ್ ಅಲ್ಯೂಮೀನಿಯಂ ರಾಡ್ ನಿಂದ ತಲೆಗೆ ಹೊಡೆದಿದ್ದರಿಂದ ಹಣೆಯ ಭಾಗದಲ್ಲಿ ರಕ್ತಗಾಯವಾಗಿರುತ್ತೆ. ನನ್ನ ಮಗನಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೆ. ಈ ದಿನ ಈ ಗಲಾಟೆಗೆ ಕಾರಣರಾದ ಗೋವಿಂದರಾಜು ಮತ್ತು ಅವರ ಮಗ ಸ್ವಾಮಿರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 212/2021 ಕಲಂ. 279,337 ಐಪಿಸಿ :-

     ದಿನಾಂಕ:-27/06/2021 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಕು.ನಾಗಮಣಿ ಬಿನ್ ಚಿಕ್ಕ ಬೇಟಪ್ಪ, 23 ವರ್ಷ, ಪದ್ಮಶಾಲಿ ಜನಾಂಗ, ವಾಸ-ಜೋಗುಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಗೆ ಇಬ್ಬರು ಮಕ್ಕಳಿದ್ದು 1 ನೇ ಚಂದ್ರಕಲಾ, 2 ನೇ ತಾನು ಆಗಿದ್ದು, ತನ್ನ ಅಕ್ಕ ಚಂದ್ರಕಲಾ ರವರಿಗೆ ಆಂದ್ರಪ್ರದೇಶದ ಬಿ.ಕೊತ್ತಕೋಟೆ ಗ್ರಾಮದ ವಾಸಿ ಮಂಜುನಾಥ ರವರಿಗೆ ಕೊಟ್ಟು ಮದುವೆ ಮಾಡಿದ್ದು, ತನ್ನ ಅಕ್ಕ ತನ್ನ ಗಂಡನೊಂದಿಗೆ ಅಲ್ಲಿಯೇ ವಾಸವಾಗಿದ್ದು, ತನ್ನ ಅಕ್ಕ ಚಂದ್ರಕಲಾ ರವರಿಗೆ ಶಶಾಂಕ್ ಮತ್ತು ತನು ಎಂಬ ಮಕ್ಕಳಿದ್ದು, ತನ್ನ ಅಕ್ಕನ ಮಗನಾದ ಶಶಾಂಕ್ (13 ವರ್ಷ) ರವರನ್ನು ಚಿಕ್ಕಿಂದಿನಿಂದಲೂ ತಾವೇ ಪೋಷಣೆ ಮಾಡಿಕೊಂಡಿರುತ್ತೇವೆ. ಹೀಗಿರುವಾಗ ಈ ದಿನ ದಿನಾಂಕ 27/06/2021 ರಂದು ಸಂಜೆ ತನ್ನ ಅಕ್ಕನ ಮಗನಾದ ಶಶಾಂಕ್ ರವರು ವೀರಾಪುರದ ಹಾಲಿನ ಡೈರಿಯಲ್ಲಿ ಹಾಲನ್ನು ಹಾಕಿ ಬರಲು ಸೈಕಲ್ ನಲ್ಲಿ ಹೋಗಿ, ಡೈರಿಯಲ್ಲಿ ಹಾಲನ್ನು ಹಾಕಿ, ವಾಪಸ್ಸು ಮನೆಗೆ ಬರಲು ಇದೇ ದಿನ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಭೂದಾಳ ಗ್ರಾಮದ ಗೇಟ್ ಬಳಿ ಸೈಕಲ್ ಅನ್ನು ತುಳಿದುಕೊಂಡು ರಸ್ತೆಯ ಬದಿಯಲ್ಲಿ ಬರುತ್ತಿದ್ದಾಗ ಈ ಸಮಯದಲ್ಲಿ ಶಿಡ್ಲಘಟ್ಟ ಕಡೆಯಿಂದ ಬಂದ ಕೆಎ-40-ವಿ-9019 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿಚಕ್ರ ವಾಹನವನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಅಕ್ಕನ ಮಗನ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಶಶಾಂಕ್ ರವರ ಎಡ ಕಿವಿಗೆ, ಬಲ ಕಾಲಿಗೆ, ತಲೆಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಸಾರ್ವಜನಿಕರು ಗಾಯಾಳುವಾಗಿದ್ದ ತನ್ನ ಅಕ್ಕನ ಮಗ ಶಶಾಂಕ್ ರವರನ್ನು ಯಾವುದೋ ಆಟೋದಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ನಂತರ ವಿಷಯ ತಿಳಿದು ತಾನು ಮತ್ತು ತನ್ನ ತಾಯಿ ಲಲಿತಮ್ಮ ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ಗಾಯಾಳುವಾಗಿರುವ ತನ್ನ ಅಕ್ಕನ ಮಗ ಶಶಾಂಕ್ ರವರನ್ನು ತನ್ನ ತಾಯಿ ಲಲಿತಮ್ಮ ರವರು ಇನ್ನು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದ ಕಾರಣ ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-40-ವಿ-9019 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 28-06-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080